"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 8 March 2015

☀ ರೂಪಕ ಸಾಮ್ರಾಜ್ಯ ಚಕ್ರವರ್ತಿ: ಕುಮಾರವ್ಯಾಸ

☀ ರೂಪಕ ಸಾಮ್ರಾಜ್ಯ ಚಕ್ರವರ್ತಿ: ಕುಮಾರವ್ಯಾಸ

━━━━━━━━━━━━━━━━━━━━━━━━━━━━━━━━━━━━━━━━━━━━━


●.ಕುಮಾರವ್ಯಾಸ

— ಕುಮಾರವ್ಯಾಸ ಪ್ರಾಯಶಃ ಕನ್ನಡದ ಅತ್ಯಂತ ಪ್ರಸಿದ್ಧ ಹಾಗೂ ಅತ್ಯಂತ ಪ್ರಭಾವಶಾಲಿ ಕವಿ ಎಂದರೂ ಸರಿ.

— ಅವನ ಜೀವನ ಕೃತಿ ಕರ್ನಾಟ ಭಾರತ ಕಥಾಮಂಜರಿ.ಇದು ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಅತ್ಯದ್ಭುತ ಶೈಲಿಯಲ್ಲಿ ಭಾಮಿನಿ ಷಟ್ಪ್ದಿದಿಯಲ್ಲಿ ರಚಿಸಿದ್ದಾನೆ.

— ಅದು ಕೇವಲ ರೂಪಾಂತರವಲ್ಲ ; ಅನೇಕ ಕವಿ ಸಮಯ ದಿಂದ ಕೂಡಿದ್ದು , ಸ್ವಂತ ಕೃತಿಯೆಂಬಂತೆ ರಚಿಸಿದ್ದಾನೆ .

— ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಅತಿ ಹೆಚ್ಚು ಮಾನ್ಯತೆ ಪಡೆದ ಕೃತಿಯಿದ್ದೀತು. ಇದರ ಪ್ರಸಿದ್ಧಿಗೆ ಪ್ರಮುಖ ಕಾರಣ ಇದು ಎಲ್ಲ ಕಾಲಗಳಲ್ಲಿಯೂ ಎಲ್ಲ ಬುದ್ಧಿಮತ್ತೆಯ ಜನರಿಗೂ ಸಹ ಅವರವರ ಶಕ್ತಿಗನುಸಾರವಾಗಿ ನಿಲುಕಿದೆ.

— ಇಡೀ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿಸಲ್ಪಟ್ಟಿದೆ.

— ಕುಮಾರವ್ಯಾಸ ಹುಡುಕಿ ನೋಡುವ ಮಾನವ ಭಾವಗಳ ವ್ಯಾಪ್ತಿ, ಆತನ ಕಾವ್ಯದ ವೈವಿಧ್ಯತೆ ಮತ್ತು ಶಬ್ದಭಂಡಾರ ಓದುಗರನ್ನು ಬೆರಗುಗೊಳಿಸುತ್ತವೆ.

—  ಕುಮಾರವ್ಯಾಸ ಎಲ್ಲಕ್ಕಿಂತ ಹೆಚ್ಚಾಗಿ ತನ್ನ ರೂಪಕಾಲಂಕಾರ ಚಮತ್ಕಾರಕ್ಕೆ ಪ್ರಸಿದ್ಧನಾಗಿದ್ದಾನೆ. ಇದರಿಂದಾಗಿಯೇ ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದಿಗೂ ಪಾತ್ರನಾಗಿದ್ದಾನೆ.

— ಕುಮಾರವ್ಯಾಸನು ಗದುಗಿನ ವೀರನಾರಾಯಣನ ಭಕ್ತ, ಅವನನ್ನು ಗದುಗಿನ ನಾರಣಪ್ಪ ಎಂದು ಕರೆಯುತ್ತಾರೆ.

— ಈತನ ಮೊದಲಿನ ಹೆಸರು ನಾರಯಣಪ್ಪ ಎಂದು (ಹೆಸರು).


1 comment:

  1. ಕುಮಾರವ್ಯಾಸನನ್ನು ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎಂದು ಕರೆದವರು?

    ReplyDelete