"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 2 October 2017

☀️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ ಮಾದರಿ ಪ್ರಶ್ನೆಗಳು: Part-2. ಸಾಮಾನ್ಯ ಅಧ್ಯಯನ : I (ರಾಷ್ಟ್ರೀಯ & ಅಂತರರಾಷ್ಟ್ರೀಯ) (KAS Mains Exam Module Questions for General Studies)

☀️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ ಮಾದರಿ ಪ್ರಶ್ನೆಗಳು: Part-2.  ಸಾಮಾನ್ಯ ಅಧ್ಯಯನ : I (ರಾಷ್ಟ್ರೀಯ & ಅಂತರರಾಷ್ಟ್ರೀಯ)
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ : ಪತ್ರಿಕೆ I
(General Studies :Paper I)


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ ಸ್ಪರ್ಧಾಲೋಕದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)


ಮುಂದುವರೆದ ಭಾಗ...


8. ಭಾರತದ ಪ್ರಾಥಮಿಕ ವಲಯವಾರು ಕೃಷಿ ಮತ್ತು ತತ್ಸಂಬಂಧಿತ ಕಸುಬುಗಳ ಮೇಲೆ ಅವಲಂಬಿತರ ಸಂಖ್ಯೆ ಇತರೇ ಆರ್ಥಿಕವಲಯ (ದ್ವಿತೀಯ & ತೃತೀಯ) ಗಳಿಗೆ ಹೋಲಿಸಿದ್ದಲ್ಲಿ ಅತೀ ಹೆಚ್ಚಾಗಿದ್ದರೂ, ಈ ವಲಯದಿಂದ ದೇಶದ GDP ಗೆ ನೀಡುವ ಕೊಡುಗೆ ಮಾತ್ರ ಗಣನೀಯವಾಗಿ ಕಡಿಮೆಯಾಗುತ್ತಿದೆ . ಏಕೆ? ಚರ್ಚಿಸಿ.
(250 ಶಬ್ದಗಳಲ್ಲಿ)



9. ದೇಶದೊಳಗೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಬಯಸುತ್ತಿರುವ ಭಾರತವು ಚೀನಾದ ಉತ್ಪನ್ನಗಳ ಆಮದಿನ ಮೇಲೆ ವಿಧಿಸಲಾಗಿರುವ ಹಾಗೂ ವಿಧಿಸಲಾಗುತ್ತಿರುವ ನಿರ್ಬಂಧಗಳಿಂದ ದೇಶದ ಆರ್ಥಿಕತೆಯ ಮೇಲೆ ಯಾವ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಲ್ಲುದು? ದೇಶದ ಭದ್ರತಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅವಲೋಕಿಸಿ. (250 ಶಬ್ದಗಳಲ್ಲಿ)



10. ಭಾರತಕ್ಕೆ ಎನ್‍ಎಸ್‍ಜಿ ಸದಸ್ಯತ್ವ ದೊರೆಯುವುದರಲ್ಲಿ ಹಿನ್ನಡೆಯುಂಟಾಗಲು ಕಾರಣಗಳೇನು?  ಹಾಗೂ  ಎನ್‍ಎಸ್‍ಜಿ ಸದಸ್ಯತ್ವದಿಂದ ಭಾರತಕ್ಕೇನು ಲಾಭ? ಚರ್ಚಿಸಿ.(250 ಶಬ್ದಗಳಲ್ಲಿ)



11. ಇತ್ತೀಚೆಗೆ ಹೊಸದಾಗಿ ರಚನೆಗೊಂಡ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಯ ಕಾರ್ಯವೈಖರಿ ಬಗ್ಗೆ ಬರೆಯಿರಿ. (250 ಶಬ್ದಗಳಲ್ಲಿ)



12. ರಾಜ್ಯದ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿಯೂ ಭೀಕರ ಬರಗಾಲದ ಕರಾಳ ಛಾಯೆ ಕವಿದಿದೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕರ್ನಾಟಕವನ್ನು ಕಾಡುತ್ತಿರುವ ಬರಗಾಲ ಸನ್ನಿವೇಶಕ್ಕೆ ಕಾರಣಗಳೇನು? ಇಂತಹ ಅನೈಚ್ಛಿಕ ಬರಗಾಲವನ್ನು ಹೋಗಲಾಡಿಸಲು ನೀವು ಕೈಗೊಳ್ಳಬಹುದಾದ ಶಾಶ್ವತ ಕ್ರಮಗಳೇನು? (250 ಶಬ್ದಗಳಲ್ಲಿ)



13. ದೇಶದ ಪ್ರಸ್ತುತ ಜಿಡಿಪಿ ದರದ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯ ಜಾರಿ ಮತ್ತು ನೋಟುಗಳ ರದ್ದತಿಯ ಪ್ರಭಾವ ಕುರಿತು ವಿಶ್ಲೇಷಿಸಿ. (250 ಶಬ್ದಗಳಲ್ಲಿ)



14. ಪ್ರಸ್ತುತ ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೃಷಿಸಾಲ ಮನ್ನಾದಂತಹ ಸೌಲಭ್ಯ ಅಗತ್ಯವಿದೆ. ಆದಾಗ್ಯೂ, ಒಂದು ಸಲ ಮಂಜೂರು ಮಾಡಿದಾಕ್ಷಣ ಅದನ್ನು ಭವಿಷ್ಯದಲ್ಲೂ ಮುಂದುವರಿಸಲಾಗದು. ಹಾಗಿದ್ದಲ್ಲಿ ನೀವು ಕೃಷಿಕರ ದುರವಸ್ಥೆಯನ್ನು ನಿವಾರಿಸಬಲ್ಲ ಯಾವ್ಯಾವ ಮಾರ್ಗೋಪಾಯಗಳನ್ನು ಸೂಚಿಸಬಲ್ಲಿರಿ? (250 ಶಬ್ದಗಳಲ್ಲಿ)



15. ಇತ್ತೀಚೆಗೆ ರೋಹಿಂಗ್ಯಾ ಸಮುದಾಯದ ಜನರನ್ನು ಅಕ್ರಮ ವಲಸಿಗರು ಎಂದು ಭಾರತ ಪರಿಗಣಿಸಿ ಗಡಿಪಾರು ಮಾಡುವ ಭಾರತ ಸರ್ಕಾರದ ಯೋಜನೆಯನ್ನು ವಿಶ್ವಸಂಸ್ಥೆ ಟೀಕಿಸಿದೆ. ಆದರೆ ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ರೋಹಿಂಗ್ಯಾ ಸಮುದಾಯಕ್ಕೆ ಸೇರಿದ ನಿರಾಶ್ರಿತರಿಗೆ ಆಶ್ರಯ ನೀಡುವ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಪರಿಗಣಿಸುತ್ತಾ ನೀವು ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ ? (250 ಶಬ್ದಗಳಲ್ಲಿ)



16. ಇತ್ತೀಚೆಗೆ ಕೃಷಿಕರು ಕೃಷಿಕಾರ್ಯವನ್ನು ಕೈಬಿಟ್ಟು, ಕೃಷಿಯೇತರ ಗೌಣ ವಲಯಗಳಲ್ಲಿ ಉದ್ಯೋಗ ಅರಸಲು ತೆರಳುತ್ತಿರುವುದಕ್ಕೆ ಕಾರಣಗಳೇನು? ಕೃಷಿ ವಲಯದಲ್ಲೇ ಕೃಷಿಕರು ಮುಂದುವರೆಸಲು ಕೈಗೊಳ್ಳಬಹುದಾದ ಕ್ರಮಗಳನ್ನು ಸೂಚಿಸಿ. (250 ಶಬ್ದಗಳಲ್ಲಿ)



17. ಯಾವಾಗಲೂ ಜಾಗತಿಕ ಸಮಸ್ಯೆಗಳು ಎದುರಾದಾಗ ಮುಂಚೂಣಿಯಲ್ಲಿರುವ ರಾಷ್ಟ್ರವಾದ  ಅಮೆರಿಕವು ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿಯುವ ಘೋಷಣೆ ಮಾಡಿದ್ದು, ತಾಪಮಾನ ಏರಿಕೆ ಸಂಬಂಧ ಜಗತ್ತಿನ ರಾಷ್ಟ್ರಗಳ ಜಂಟಿ ಪ್ರಯತ್ನಕ್ಕೆ ಹಿನ್ನೆಡೆಯಾಗಬಹುದೇ? ಇದಕ್ಕೆ ಪರಿಹಾರಗಳನ್ನು ಸೂಚಿಸಿ. (250 ಶಬ್ದಗಳಲ್ಲಿ)



18. ಭಾರತದ ಆರ್ಥಿಕತೆಯ ಮೇಲೆ ನೋಟು ರದ್ದತಿಯ ಪರಿಣಾಮ . (250 ಶಬ್ದಗಳಲ್ಲಿ)


19.  ನೋಟು ರದ್ದತಿಯಿಂದ ಜನಸಾಮಾನ್ಯರ ಮೇಲೆ ಪರಿಣಾಮ. (250 ಶಬ್ದಗಳಲ್ಲಿ)



20.  ಇಂದು ಕೃಷಿ ಪ್ರಧಾನ ರಾಷ್ಟ್ರವಾಗಿ ಬೆಳೆಯಬೇಕಿದ್ದ ಭಾರತವು ಬದಲಾಗಿ ಸೇವಾ ಕ್ಷೇತ್ರದ ಬೆಳವಣಿಗೆಯಿಂದ ಅಭಿವೃದ್ಧಿಯನ್ನು ಸಾಧಿಸುತ್ತಿದೆ ಎನ್ನಬಹುದೆ ? ಇಂತಹ ಬದಲಾವಣೆಗೆ ಕಾರಣೀಭೂತವಾದ ಅಂಶಗಳಾವವು? ಚರ್ಚಿಸಿ.
(200 ಶಬ್ದಗಳಲ್ಲಿ)

..ಮುಂದುವರೆಯುವುದು.