"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 31 March 2015

☀ಕುತುಬ್ ಮಿನಾರ್ : (Kutub Minar)

☀ಕುತುಬ್ ಮಿನಾರ್ :
(Kutub Minar)

━━━━━━━━━━━━━━━━━━━━━━━━━━━━━━━━━━━━━━━━━━━━━


●.ಪಿಸಾ ಗೋಪುರಕ್ಕಿಂತಲೂ ಎತ್ತರವಾದ ಅಪೂರ್ವ ಗೋಪುರ ಹದಿಮೂರನೆಯ ಶತಮಾನದಲ್ಲಿ ನಮ್ಮ ಭಾರತ ದೇಶದಲ್ಲಿ ನಿರ್ಮಾಣಗೊಂದಿದೆ. ಅದುವೇ ದಿಲ್ಲಿಯ ಹೆಗ್ಗುರುತಾಗಿರುವ ಕುತುಬ್ ಮಿನಾರ್!

●.ದಿಲ್ಲಿಯ ಸುಲ್ತಾನನಾಗಿದ್ದ ಕುತುಬ್-ಉದ್-ದೀನ್ ಕ್ರಿ.ಶ. 1199ರ ಸುಮಾರಿನಲ್ಲಿ ಇದರ ನಿರ್ಮಾಣಕಾರ್ಯವನ್ನು ಪ್ರಾರಂಭಿಸಿದ. ಆತನ ತರುವಾಯ ಆಡಳಿತ ವಹಿಸಿಕೊಂಡ ಸುಲ್ತಾನ್ ಇಲ್ತ್ ಮುಷ್ 1230 ರ ಸುಮಾರಿಗೆ ನಿರ್ಮಾಣವನ್ನು ಪೂರ್ತಿಗೊಳಿಸಿದ. ಆಗ ಅದು ನಾಲ್ಕು ಅಂತಸ್ತಿನದ್ದಾಗಿತ್ತು. ಫಿರೋಜ್ ಷಾ ತುಘಲಕ್ ನ ಕಾಲದಲ್ಲಿ ಸಿಡಿಲು ಬಡಿದು ನಾಲ್ಕನೆಯ ಅಂತಸ್ತು ನಾಶವಾಯಿತು. ಆಗ ಮೊದಲಿಗಿಂತ ಕಿರಿದಾದ ನಾಲ್ಕು ಮತ್ತು ಐದನೆಯ ಅಂತಸ್ತುಗಳನ್ನು ನಿರ್ಮಿಸಿದ.

●.ಹೀಗೆ ಒಟ್ಟು ಐದು ಅಂತಸ್ತುಗಳ ಈ ಗೋಪುರ 73ಮೀ. ಎತ್ತರವಿದೆ. ಇದರ ಬುಡದ ಸುತ್ತಳತೆ 15ಮೀ., ತುದಿಯ ಸುತ್ತಳತೆ 2.7ಮೀ., ಇದೆ. ಕೆಳಗಿನ ಮೂರು ಅಂತಸ್ತುಗಳು ಬೆಣಚು ಕಲ್ಲಿನಿಂದ ನಿರ್ಮಿತವಾಗಿದೆ. ಅವಕ್ಕೆ ಕೆಮ್ಮರಳು ಶಿಲೆಯ ಹೊದಿಕೆ ಇದೆ.

●.ನಾಲ್ಕು ಮತ್ತು ಐದನೆಯ ಅಂತಸ್ತುಗಳು ಕೆಂಪು ಶಿಲೆಯಿಂದ ನಿರ್ಮಿತವಾಗಿದೆ. ಅವಕ್ಕೆ ಅಮೃತ ಶಿಲೆಯ ಹೊದಿಕೆ ಇದೆ.ಹೊರಮೈ ಕುರಾನಿನ ಶ್ಲೋಕಗಳಿಂದಲೂ ಹೂವುಗಳ ಕೆತ್ತನೆಗಳಿಂದಲೂ ಅಲಂಕೃತವಾಗಿದೆ.

●.ದಿಲ್ಲಿಯ ಅತ್ಯಂತ ಮೋಹಕ ಪ್ರವಾಸಿ ಆಕರ್ಷಣೆಯಾದ ಈ ಗೋಪುರದ ತುದಿಗೇರಲು ಒಳಭಾಗದಲ್ಲಿ 376 ಮೆಟ್ಟಿಲುಗಳಿವೆ.ಒಂದು ಕೋನದಲ್ಲಿ ನಿಂತು ನೋಡಿದಾಗ ಕುತುಬ್ ಮಿನಾರ್ 25-30 ಸೆಂ.ಮೀ. ಅಷ್ಟು ವಾಲಿರುವಂತೆ ಕಾಣಿಸುತ್ತದೆ. ಯಾರಾದರೂ ಇದರ ಕಿವಿಗೆ ಪಿಸಾ ಗೋಪುರದ ಸುದ್ದಿ ಮುಟ್ಟಿಸಿರಬಹುದೇ? ಆದರೆ, ವಾಸ್ತವದಲ್ಲಿ ಅದು ವಾಲಿದ್ದಲ್ಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

●.ಕುತುಬ್ ಮಿನಾರಿನ ಆವರಣದಲ್ಲಿ ಲೋಹಶಾಸ್ತ್ರದಲ್ಲಿ ಭಾರತೀಯರಿಗಿದ್ದ ನೈಪುಣ್ಯದ ಸಂಕೇತವಾದ ಕಬ್ಬಿಣದ ಕಂಬ ಒಂದಿದೆ. ಅದು ನಾಲ್ಕನೆಯ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಸತತವಾದ ಗಾಳಿ ಮಳೆಗೆ ಮೈ ಒಡ್ಡಿಯೂ ತುಕ್ಕು ಹಿಡಿಯದೇ ನಿಂತಿರುವ ಇದರ ಮೇಲೆ ಚಂದ್ರಗುಪ್ತ ವಿಕ್ರಮಾದಿತ್ಯರ ವಿಜಯಗಳನ್ನು ಕೊಂಡಾಡುವ ಶಾಸನಗಳನ್ನು ಕೆತ್ತಲಾಗಿದೆ.

No comments:

Post a Comment