"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 29 December 2017

☀️ ಕೆಎಎಸ್ ಮುಖ್ಯ ಪರೀಕ್ಷೆ 2017 ರ ಐಚ್ಛಿಕ ಪತ್ರಿಕೆ -ಭೌಗೋಳ ಶಾಸ್ತ್ರ ಪತ್ರಿಕೆ -1 ಮತ್ತು 2 ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) 2017 OPTIONAL PAPER GEOGRAPHY)

☀️ ಕೆಎಎಸ್ ಮುಖ್ಯ ಪರೀಕ್ಷೆ 2017 ರ ಐಚ್ಛಿಕ ಪತ್ರಿಕೆ -ಭೌಗೋಳ ಶಾಸ್ತ್ರ ಪತ್ರಿಕೆ -1 ಮತ್ತು 2 ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) 2017 OPTIONAL PAPER GEOGRAPHY)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com



●. ಐಚ್ಛಿಕ ಪತ್ರಿಕೆ : ಭೌಗೋಳ ಶಾಸ್ತ್ರ ಪತ್ರಿಕೆ - 1
(OPTIONAL PAPER : GEOGRAPHY - 1)

1ಭೂ ಫಲಕಗಳ ಹರಿವಿನಲಿ ಭೂಕಂಪ, ಮಡಿಕೆಗಳು, ಜಾಲಾಮುಖಿಗಳ ವಿಂಗಡನೆ.

2.ಜೈವಿಕ ಮಣ್ಣು ಮತ್ತು ಮಣ್ಣಿನ ವಿಧಗಳು.

3.ಒತ್ತಡ ಪಟ್ಟಿಗಳು ಮತ್ತು ಮಾರುತಗಳು ಗೋಳದ ನಡುವೆ ಇರುವ ವ್ಯತ್ಯಾಸ ಬರೆಯಿರಿ.

4.ಭೌಗೋಳ ಶಾಸ್ತ್ರಕ್ಕೆ ಅರಬ್ಬಿ ಯರ ಕೊಡುಗೆ ಬರೆಯಿರಿ.

 5.ಮಾನ್ ಸೂನ್ ಮಾರುತಗಳಲಿ ಎಲ್ ನೀನೋ ಪಾತ್ರ.

6.ಸಾಗರದ ಲವಣತೆಗೆ ಕಂಡು ಬರುವ ಅಂಶಗಳು.

7. ವಿಶ್ವದ ಕೃಷಿ ಕ್ಷೇತ್ರಗಳು ಯಾವುವು ವಿವರಿಸಿ.

8.ವಸತಿಗೆ ಸಂಬಂಧಿಸಿದ ಸಿದ್ದಾಂತ ವಿವರಿಸಿ.

8.ಮಣ್ಣಿನ ವಿಧಗಳ ಬಗ್ಗೆ ಬರೆಯಿರಿ.



●. ಐಚ್ಛಿಕ ಪತ್ರಿಕೆ : ಭೌಗೋಳ ಶಾಸ್ತ್ರ ಪತ್ರಿಕೆ - 2
(OPTIONAL PAPER : GEOGRAPHY - 2)

1. ರೈಲು ಸಾರಿಗೆ ಮಹತ್ವ ಮತ್ತು ಹಂಚಿಕೆ ತಿಳಿಸಿರಿ.

2.ಭಾರತದ ಅಂತರ ರಾಷ್ಟ್ರೀಯ ಗಡಿ ಸಮಸ್ಯೆಗಳ ಬಗ್ಗೆ ಬರೆಯಿರಿ.

 3.ಭಾರತದ ಮಾನವ ಜನಾಂಗದ ಲಕ್ಷಣಗಳು ಮತ್ತು ಹಂಚಿಕೆ ವಿವರಿಸಿ.

4.ಕರ್ನಾಟಕದ ಸ್ವಾಭಾವಿಕವಾದ ಅರಣ್ಯ ದ ಬಗ್ಗೆ ಬರೆಯಿರಿ.

5.ಕರ್ನಾಟಕ ನಗರೀಕರಣದ ಬಗ್ಗೆ ಬರೆಯಿರಿ.

6.ಭಾರತದ ಹಿಮಾಲಯ ದ ಸಂಕೀರ್ಣ ನದಿ ಹರಿಯುವಿನ ಬಗ್ಗೆ ಬರೆಯಿರಿ.

7.ಕಲಿದಲು ಮತ್ತು ಪೆಟ್ರೋಲಿಯಂ ಶಕ್ತಿ ಸಂಪನ್ಮೂಲಗಳ ಬಗ್ಗೆ ಬರೆಯಿರಿ.

8.ಭಾರತದ ಪೆನ್ಸ್ ಸುಲಾರ ಭೂ  ಲಕ್ಷಣಗಳನ್ನು ಬರೆಯಿರಿ.

☀️ ಕೆಎಎಸ್ ಮುಖ್ಯ ಪರೀಕ್ಷೆ 2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 4 ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) 2017 GENERAL STUDIES PAPER - 4)

☀️ ಕೆಎಎಸ್ ಮುಖ್ಯ ಪರೀಕ್ಷೆ 2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 4 ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) 2017 GENERAL STUDIES PAPER -  4)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com


●. ಸಾಮಾನ್ಯ ಅಧ್ಯಯನ ಪತ್ರಿಕೆ - 4
(GENERAL STUDIES PAPER - 4)

1. ನೈತಿಕಯಲಿ ಜೆ ಎಸ್ ಮಿಲ್ ಮತ್ತು ಚಾವಾಕ ರವರ ಕುರಿತು ಬರೆಯಿರಿ.

2. ಆಡಳಿತದ ಅಧಿಕಾರಿಗಳಿಗೆ ಇರಬೇಕಾದ ನೈತಿಕವಾದ ಅಂಶಗಳು ಯಾವುವು.

3.ಮಾಹಿತಿ ಹಕ್ಕು ಕಾಯ್ದೆ ಧೇಯ ಮತ್ತು ನೈತಿಕತೆ ಅಂಶಗಳನ್ನು ವಿವರಿಸಿ.

4. ಸರ್ಕಾರದ ನೈತಿಕತೆ ಅಂಶಗಳು ವಿವರಿಸಿ.

5.ಸಮಾಜದ ಸಂವಹನದ ಮಾಧ್ಯಮದ ಬಗ್ಗೆ ಬರೆಯಿರಿ.

6.ಅಂತರ ರಾಷ್ಟ್ರೀಯ ಸಂಬಂಧದಲಿ ನೈತಿಕತೆ ವಿಫಲತೆ ವಿವರಿಸಿ. 

Thursday 28 December 2017

☀️ ಕೆಎಎಸ್ ಮುಖ್ಯ ಪರೀಕ್ಷೆ-2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 3 ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) - 2017 GENERAL STUDIES PAPER - 3)

☀️ ಕೆಎಎಸ್ ಮುಖ್ಯ ಪರೀಕ್ಷೆ-2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 3 ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) - 2017 GENERAL STUDIES PAPER - 3)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com


●. ಸಾಮಾನ್ಯ ಅಧ್ಯಯನ ಪತ್ರಿಕೆ- 3
(GENERAL STUDIES PAPER-3)

1.ಪರಿಸರಕ್ಕೆ ಸಂಬಂಧಿಸಿದ ಕೆಂಪು ಪುಸ್ತಕದ ಬಗ್ಗೆ ಬರೆಯಿರಿ.

2.ವನ್ಯಜೀವಿಗಳ ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಜೀವಿಧಾಮಕೆ ಸಂಬಂಧಿಸಿದಂತೆ 5 , ನು ಕುರಿತು ವಿವರಿಸಿ.

3.CFC ಮತ್ತು HFC ನಡುವಿನ ವ್ಯತ್ಯಾಸ ಬರೆಯಿರಿ.

4.ಘನ ಮಾಲಿನ್ಯ ಮತ್ತು ಬೆಂಗಳೂರು ಮಹಾನಗರದ ಮಾಲಿನ್ಯದ ಬಗ್ಗೆ ಬರೆಯಿರಿ.

5. INSAT ಉಪಗ್ರಹದಿಂದ ಸರ್ಕಾರವು ಅಳವಡಿಸಿ ಕೊಂಡಿರುವ ಬಗೆಗಳು.

6.ಎರೆಹುಳು ಮತ್ತು ಸಾವಯವ ಎರೆ ಗೊಬ್ಬರ ಬಗ್ಗೆ ಬರೆಯಿರಿ.

7.ರೇಷ್ಮೆ ಕೃಷಿ ಮತ್ತು ಅದರ ವಿಧಗಳು.

8.ಕುರಿ ಮತ್ತು ಮೇಕೆ ಸಾಗಾಣಿಕೆ ವಾಣಿಜ್ಯ ಉಪಯುಕ್ತ, ವಿವರಿಸಿ.

9.ಮಳೆ ನೀರಿನ ಕೊಯ್ಲು ಪದ್ಧತಿ ಹಾಗೂ ಅದರ ವಿಧಗಳು  ವಿವರಿಸಿ.

10. ರಾಜ್ಯದಲ್ಲಿ ಶಕ್ತಿ ಸಂಪನ್ಮೂಲಗಳು ಕೊರತೆಯಿಂದ, ಅಸಂಸಂಪನ್ಮೂಲಗಳ ಉಪಯೋಗದಲಿ ಪರಿಸರ ಮಾಲಿನ್ಯ ತಡೆಯಲು ಪಾತ್ರ ಕುರಿತು ವಿವರಿಸಿ.

☀️ ಕೆಎಎಸ್ ಮುಖ್ಯ ಪರೀಕ್ಷೆ -2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 2 ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS)-2017 GENERAL STUDIES PAPER - 2)

☀️ ಕೆಎಎಸ್ ಮುಖ್ಯ ಪರೀಕ್ಷೆ -2017 ರ ಸಾಮಾನ್ಯ ಅಧ್ಯಯನ ಪತ್ರಿಕೆ - 2 ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS)-2017 GENERAL STUDIES PAPER -  2)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)


ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com



●. ಸಾಮಾನ್ಯ ಅಧ್ಯಯನ ಪತ್ರಿಕೆ -2.
(General Studies Paper -2)

1.ನದಿಯ ಹರಿವಿನ ಬಗ್ಗೆ ಬರೆಯಿರಿ.

2.ಮಾನವನ ಜನಾಂಗದ ಕುರಿತು ಬರೆಯಿರಿ.

3. ರಾಜ್ಯ ನೀತಿ ನಿರ್ದೇಶಕ ತತ್ವ ದ Wellfersate ಕುರಿತು ಬರೆಯಿರಿ.

4. ಕಂಟ್ರೋಲ್ರ್ ಮತ್ತು ಆಡಿಟರ್ ಜನರಲ್ ಅಧಿಕಾರಗಳ ಬಗ್ಗೆ ಬರೆಯಿರಿ.

5.ರಾಷ್ಟ್ರಪತಿ ಮತ್ತು ರಾಜ್ಯಪಾಲರ ನಡುವಿನ ಅಧಿಕಾರದ ಹೋಲಿಕೆ ಬಗ್ಗೆ ಬರೆಯಿರಿ.

6.ಮೂಲಭೂತ ಹಕ್ಕುಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಹಕ್ಕನ್ನು ವಿವರಿಸಿ.

7.ಗೃಹ ಇಲಾಖೆಯ ಜವಾಬ್ದಾರಿ ಕುರಿತು ಬರೆಯಿರಿ.

8.ಬಲವಂತರಾಯ್ ಮೆಹ್ತಾ ಸಮಿತಿ ವಿವರಿಸಿ.

9.ಕರ್ನಾಟಕದ ಬೆಳೆಗಳ ಹಂಚಿಕೆಯು ಭೌಗೋಳಿಕ ಮಾದರಿಯಲ್ಲಿ ತಿಳಿಸಿರಿ.

Wednesday 27 December 2017

☀️ ಕೆಎಎಸ್ ಮುಖ್ಯ ಪರೀಕ್ಷೆ - 2017 ರ ಸಾಮಾನ್ಯ ಅಧ್ಯಯನ ಪತ್ರಿಕೆ : I ರಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) GENERAL STUDIES PAPER - I 2017)

☀️ ಕೆಎಎಸ್ ಮುಖ್ಯ ಪರೀಕ್ಷೆ-2017 ರ ಸಾಮಾನ್ಯ ಅಧ್ಯಯನ ಪತ್ರಿಕೆ : I  ರಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) GENERAL STUDIES PAPER - I 2017)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

★ ಕೆಎಎಸ್ ಮುಖ್ಯ ಪರೀಕ್ಷೆ ಪ್ರಶ್ನೆಗಳು
(KAS Mains Questions)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com


●. ಸಾಮಾನ್ಯ ಅಧ್ಯಯನ ಪೇಪರ್ -1.
(General Studies Paper : I)

1ಸಿಂಧೂ ಮತ್ತು ಹರಪ ನಾಗರಿಕತೆ ನಡುವಿನ ವ್ಯತ್ಯಾಸ.
2. ರಾಷ್ಟ್ರಕೂಟರ, ಕಲೆ ಮತ್ತು ವಾಸ್ತು ಶಿಲ್ಪಿ.
3.ಅಳಿಯ ರಾಮಯನ, ರಾಜ ನೀತಿ.
4.ಬೆಳಗಾವಿ 1924 ಕಾಂಗ್ರೆಸ್ ಅಧಿವೇಶನ.
5.ಸರ್ ಸೈಯದ್ ಅಹಮದ್ ಖಾನ್ ಆಲೀಗಢ್ ಚಳುವಳಿ.
5. 1946ರ ಕನ್ನಡ ಏಕೀಕರಣ ಚಳುವಳಿ.
6. ಸಾಮಾಜಿಕ ಚಳುವಳಿ ಎಂದರೇನು?. ಅದರ ಲಕ್ಷಣಗಳು.
7. ಪಾತ್ರ ಎಂದರೇನು?. ಅದರಲ್ಲಿ ಮಹಿಳೆಯರ ದುಡಿಮೆ ಕೆಲಸದ ಕ್ಷೇತ್ರದ ಕುರಿತು ಬರೆಯಿರಿ.
8.ರಾಜ್ಯ ಶಾಸಕಾಂಗ ಮಿತಿಗಳ ಬಗ್ಗೆ ಬರೆಯಿರಿ.
9.ಕರ್ನಾಟಕದ EXPORT ನೀತಿಯ ಕುರಿತು ಬರೆಯಿರಿ.
10.ಜೀತಗಾರಿಕೆ  ಎಂದರೇನು?.ಸರ್ಕಾರ ಇದನ್ನು ಹೋಗಲಾಡಿಸಲು ತಗೆದು ಸಂವಿಧಾನದ ಬದ್ಧ ಕಾಯ್ದೆಗಳು ಯಾವುವು.
11. ವಿಕೇಂದೀಕರಣ ಬಗ್ಗೆ ಬರೆಯಿರಿ.
12.ನಂಜುಂಡಪ ವರದಿ ಕುರಿತು  ಬರೆಯಿರಿ.
13.ದಿವಾನ್ ಇಸ್ಮಾಯಿಲ್ ರವರು, ಮೈಸೂರಿಗೆ ನೀಡಿದ ಕೊಡುಗೆ ಬಗ್ಗೆ ಬರೆಯಿರಿ.
14.ಗ್ರಾಮೀಣ ಪ್ರದೇಶಗಳಲ್ಲಿ ನೈಮಲೀಕರಣದ ಬಗ್ಗೆ ಬರೆಯಿರಿ.

☀️ ಕೆಎಎಸ್ ಮುಖ್ಯ ಪರೀಕ್ಷೆ ಪ್ರಬಂಧ ಪತ್ರಿಕೆ - 2017 ಯಲ್ಲಿ ಕೆಳಲಾದ ಪ್ರಶ್ನೆಗಳು : (GAZETTED PROBATIONERS (MAINS) ESSAY PAPER - 2017

☀️ ಕೆಎಎಸ್ ಮುಖ್ಯ ಪರೀಕ್ಷೆ ಪ್ರಬಂಧ ಪತ್ರಿಕೆ - 2017 ಯಲ್ಲಿ ಕೆಳಲಾದ ಪ್ರಶ್ನೆಗಳು :
(GAZETTED PROBATIONERS (MAINS) ESSAY PAPER -  2017
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)

ಇತ್ತೀಚೆಗೆ ನಡೆದ ಕೆಎಎಸ್ ಮುಖ್ಯ ಪರೀಕ್ಷೆ (GAZETTED PROBATIONERS (MAINS) -  2017 ಯಲ್ಲಿ ಕೆಳಲಾದ ಪ್ರಶ್ನೆಗಳನ್ನು ನಂಬಲರ್ಹವಾದ ಮೂಲಗಳಿಂದ ಹೆಕ್ಕಿ ತೆಗೆದಿದ್ದು..ಮುಂಬರುವ ಪರೀಕ್ಷಾ ತಯಾರಿ ದೃಷ್ಠಿಯಿಂದ ಸ್ಪರ್ಧಾರ್ಥಿಗಳಿಗೆ ಸಹಾಯವಾಗಲೆಂದು ಎಲ್ಲಾ ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳ ಭಾಗಶಃ ಪ್ರಶ್ನೆಗಳನ್ನು ನಿಮ್ಮ 'ಸ್ಪರ್ಧಾಲೋಕ'ದಲ್ಲಿ ಮುಂದಿಡಲು ಪ್ರಯತ್ನಿಸಿರುವೆನು.

ಬಿಟ್ಟು ಹೋದ ಪ್ರಶ್ನೆಗಳು ನಿಮಗೆ ಗೊತ್ತಿದ್ದಲ್ಲಿ ಖಂಡಿತ ನನ್ನೊಂದಿಗೆ ಹಂಚಿಕೊಳ್ಳಿ ಎಂದು ನಿಮ್ಮಲ್ಲಿ ವಿನಂತಿ
gmail - yaseen7ash@gmail.com


●. ಪ್ರಬಂಧ ಪತ್ರಿಕೆ - 2017

— ಪ್ರಬಂಧಗಳು ಈ ರೀತಿ ಇದೆ.
1.ಭಾರತದ ಗಡಿ ಸಮಸ್ಯೆಗಳು.
2.ಲಿಂಗಾಯತ ಧರ್ಮದ ಹೋರಾಟಗಳು.
3.ಅಂತರ್ ನದಿ ಜಲಾನಯನದ ಸಮಸ್ಯೆಗಳು.
4.I M F . BANK ಜಾಗತಿಕ ಸಾಧನೆಗಳನ್ನು ವಿವರಿಸಿ.
5. ಭಾರತದ ಬಡತನಕ್ಕೆ ಕಾರಣ, ಮತ್ತು ಸಮಸ್ಯೆಗಳು.
6. ಬೆಂಗಳೂರು ನಗರದ ಭೌಗೋಳಿಕ ನೆಲೆ,  ಐಟಿ ಉದ್ಯಮದಲ್ಲಿ ಸಾಧನೆ ಬರೆಯಿರಿ.
ಇಷ್ಟು 250 ಅಂಕಗಳು.

Monday 25 December 2017

☀️ ಅಂತಾರಾಷ್ಟ್ರೀಯ ನ್ಯಾಯಾಲಯ : ಅದರ ಕಾರ್ಯಗಳು & ಕೋರ್ಟ್‌ನ ಅಧಿಕಾರ ವ್ಯಾಪ್ತಿ. (International Court of Justice: its functions & jurisdiction of the Court)

☀️ ಅಂತಾರಾಷ್ಟ್ರೀಯ ನ್ಯಾಯಾಲಯ : ಅದರ ಕಾರ್ಯಗಳು & ಕೋರ್ಟ್‌ನ ಅಧಿಕಾರ ವ್ಯಾಪ್ತಿ.
(International Court of Justice: its functions & jurisdiction of the Court)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)


ವಿಶ್ವಸಂಸ್ಥೆಯ ನಿರ್ಣಯವೊಂದರ ಅನ್ವಯ ಈ ಅಂತಾರಾಷ್ಟ್ರೀಯ ನ್ಯಾಯಾಲಯ 1945ರಲ್ಲಿ ರಚಿತವಾಗಿದೆ. ನೆದರ್ಲೆಂಡ್‌ನಲ್ಲಿರುವ ಈ ಕೋರ್ಟ್‌ನಲ್ಲಿ 15 ಮಂದಿ ನ್ಯಾಯಾಧೀಶರು ಇರುತ್ತಾರೆ. ವಿಶ್ವಸಂಸ್ಥೆಯ ಸದಸ್ಯ ದೇಶಗಳು ಸೂಚಿಸಿದ ನ್ಯಾಯತಜ್ಞರನ್ನು ಈ ಕೋರ್ಟ್‌ಗೆ ಆಯ್ಕೆ ಮಾಡಲಾಗುತ್ತದೆ. ವಿಶ್ವಸಂಸ್ಥೆ ಮತ್ತು ಭದ್ರತಾ ಮಂಡಳಿಯ ಸದಸ್ಯ ದೇಶಗಳು ಚುನಾವಣೆ ಮೂಲಕ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತವೆ. ನ್ಯಾಯಾಧೀಶರ ಅವಧಿ ಒಂಬತ್ತು ವರ್ಷ. ಮೂರು ವರ್ಷಕ್ಕೊಮ್ಮೆ ಐವರು ನ್ಯಾಯಾಧೀಶರ ನೇಮಕಗಳು ನಡೆಯುತ್ತವೆ.





●.ಕಾರ್ಯಗಳು :

ಸುಮಾರು ಎಪ್ಪತ್ತು ವರ್ಷಗಳಿಂದಲೂ ಈ ಕೋರ್ಟ್ ಕಾರ್ಯನಿರ್ವಹಿಸುತ್ತಿದೆಯಾದರೂ ಜಗತ್ತಿನ ವಿದ್ಯಮಾನಗಳ ಮೇಲೆ ಅದು ಪರಿಣಾಮ ಬೀರಿದ್ದು ಕಡಿಮೆಯೇ.
ದೇಶ-ದೇಶಗಳ ನಡುವಣ ವಿವಾದಗಳನ್ನು ಬಗೆಹರಿಸುವ ದಿಸೆಯಲ್ಲಿ ಅಗತ್ಯ ಸಲಹೆ ನೀಡುವುದು, ಅಷ್ಟೇ ಏಕೆ ನ್ಯಾಯದಾನ ಮಾಡುವುದು ಈ ಕೋರ್ಟ್‌ನ ಕೆಲಸ. ಈ ಕೋರ್ಟ್‌ನ ಮುಂದೆ ನೂರಾರು ಪ್ರಕರಣಗಳು ವಿಚಾರಣೆಗೆ ಬಂದಿವೆ. ಮುಖ್ಯವಾಗಿ ಗಡಿ ವಿವಾದಗಳು, ಒಂದು ದೇಶ ಮತ್ತೊಂದು ದೇಶದಲ್ಲಿ ಹಸ್ತಕ್ಷೇಪ ಮುಂತಾದ ಹತ್ತಾರು ರೀತಿಯ ಪ್ರಕರಣಗಳು ದಾಖಲಾಗಿವೆ.






●.ಕೋರ್ಟ್‌ನ ಅಧಿಕಾರ ವ್ಯಾಪ್ತಿ :

ಬಹಳ ಪ್ರಕರಣಗಳಲ್ಲಿ ಈ ಕೋರ್ಟ್‌ನ ಅಧಿಕಾರ ವ್ಯಾಪ್ತಿ ಕುರಿತಂತೆಯೇ ವಿವಾದ ಆರಂಭವಾಗಿ, ವಿಚಾರಣೆ ಏಕಪಕ್ಷೀಯವಾಗಿ ನಡೆದದ್ದು ಮತ್ತು ಅಂತಿಮ ತೀರ್ಪನ್ನು ಒಪ್ಪಲು ನಿರಾಕರಿಸಿರುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ತೀರ್ಪನ್ನು ಜಾರಿಗೊಳಿಸುವ ಬಗ್ಗೆ ಕ್ರಮ ತೆಗೆದುಕೊಳ್ಳುವ ಪ್ರಸ್ತಾಪವನ್ನು ಕೋರ್ಟ್ ಭದ್ರತಾ ಮಂಡಳಿಗೆ ಒಪ್ಪಿಸಿತ್ತು. ಭದ್ರತಾ ಮಂಡಳಿಯ ಮುಂದೆ ಬಂದಾಗ ಅದನ್ನು ಮತಕ್ಕೆ ಹಾಕಲಾಯಿತು. ಸಹಜವಾಗಿ ಒಂದು ದೇಶ ವಿಟೋ ಚಲಾಯಿಸಿ ತೀರ್ಪು ಜಾರಿಯಾಗದಂತೆ ಮಾಡಿತು.

ನಿಕಾರಗುವಾದಲ್ಲಿನ ಬಂಡುಕೊರರಿಗೆ ಅಮೆರಿಕ ರಹಸ್ಯವಾಗಿ ಶಸ್ತ್ರಾಸ್ತ್ರ ಸರಬರಾಜು ಮಾಡಿ ಸರ್ಕಾರವನ್ನು ಪದಚ್ಯುತಗೊಳಿಸಲು ಯತ್ನಿಸಿದ್ದು ಶೀತಲ ಸಮರದ ಕಾಲದ ಒಂದು ಘಟನೆ. ಆಗ ನಿಕಾರಗುವಾ ಈ ಕುರಿತಂತೆ ಅಂತಾರಾಷ್ಟ್ರೀಯ ಕೋರ್ಟ್‌ನಲ್ಲಿ ದೂರು ಸಲ್ಲಿಸಿತ್ತು (1986). ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಅಧಿಕಾರ ಕೋರ್ಟ್‌ಗೆ ಇಲ್ಲ ಎಂದು ಅಮೆರಿಕ ವಾದ ಮಾಡಿತು. ಅಂತಿಮವಾಗಿ ಏಕಪಕ್ಷೀಯವಾಗಿಯೇ ವಿಚಾರಣೆ ನಡೆದು, ಅಮೆರಿಕದ ಹಸ್ತಕ್ಷೇಪ ಕಾನೂನುಬಾಹಿರವಾದುದು ಎಂದು ತೀರ್ಪು ನೀಡಿತು. ಅಮೆರಿಕ ತೀರ್ಪಿಗೆ ಮಾನ್ಯತೆಯನ್ನೇ ನೀಡಲಿಲ್ಲ. ಅಮೆರಿಕ ಅಷ್ಟೇ ಏಕೆ, ಬಹುಪಾಲು ದೇಶಗಳು ಅನೇಕ ಪ್ರಕರಣಗಳಲ್ಲಿ ಇಂಥದ್ದೇ ಧೋರಣೆ ತಳೆದದ್ದುಂಟು.

ಭಾರತಕ್ಕೆ ಸಂಬಂಧಿಸಿದ ಆರು ಪ್ರಕರಣಗಳು ಈ ಕೋರ್ಟ್ ಮುಂದಿವೆ. ಕುಲಭೂಷಣ್ ಜಾದವ್ ಪ್ರಕರಣ ಇತ್ತೀಚಿನದ್ದು.

Saturday 23 December 2017

☀️ ರೋಲ್-ಆನ್-ರೋಲ್ ಆಫ್ (ಆರ್‍ಒಆರ್‍ಒ) :ರೋರೋ ಸಮುದ್ರಯಾನ ಸೇವೆ : (Roll On Roll Off) : RORO Naval (Marine) Shipping Service

☀️ ರೋಲ್-ಆನ್-ರೋಲ್ ಆಫ್ (ಆರ್‍ಒಆರ್‍ಒ) :ರೋರೋ ಸಮುದ್ರಯಾನ ಸೇವೆ :
(Roll On Roll Off) : RORO Naval (Marine) Shipping Service
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Paper)


●.ರೋಲ್ ಆಫ್ ರೋಲ್ ಆಫ್ ಸಾಗರ ಸೇವೆಯಾಗಿದ್ದು ಈ ಯೋಜನೆಯನ್ನು ಗುಜರಾತ್ ಸಮುದ್ರ ನಿಗಮ ಅನುಷ್ಟಾನಗೊಳಿಸಲಾಗಿದೆ. ಇದು 615 ಕೋಟಿ ಮೊತ್ತದ ಯೋಜನೆಯಾಗಿದೆ. ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ರಾಷ್ಟ್ರದ ಎಲ್ಲ ಬಂದರುಗಳನ್ನು ಅತ್ಯಾಧುನಿಕ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಇಂಗಿತದೊಂದಿಗೆ ಈ ಸೇವೆಯನ್ನು ಪ್ರಾರಂಭಿಸಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಇಂತಹ
ಯೋಜನೆಯನ್ನು ಆರಂಭಿಸಲಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಹಡಗನ್ನು ನಿರ್ಮಾಣ ಮಾಡಲಾಗಿದೆ.

●.ಒಳನಾಡು ಜಲಸಾರಿಗೆ ಒತ್ತು ನೀಡುವ ಕೇಂದ್ರಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯ ಮೊದಲ ಭಾಗ ಎಂದೇ ವಿಶ್ಲೇಷಿಸಲಾಗಿರುವ ಸೌರಾಷ್ಟ್ರದ ಘೋಘಾ ಹಾಗೂ ದಕ್ಷಿಣ ಗುಜರಾತ್ ದಹೇಜ್ ನಡುವಿನ ದೇಶದ ಪ್ರಪ್ರಥಮ ರೋರೋ ಒಳನಾಡು ಸಮುದ್ರಯಾನಕ್ಕೆ (October 2017 ರಲ್ಲಿ ) ಚಾಲನೆ ನೀಡಿದ್ದಾರೆ. ಸಾಗರ ಮಾಲಾ ಯೋಜನೆಯಡಿ ಹಳೆಯ ಬಂದರುಗಳನ್ನು ಪರಿಪೂರ್ಣವಾಗಿ ಅಭಿವೃದ್ಧಪಡಿಸಲಾಗುತ್ತಿದೆ.

●.ರೋಲ್-ಆನ್-ರೋಲ್ ಆಫ್ (ಆರ್‍ಒಆರ್‍ಒ) ನೌಕಾ ಸೇವೆಯಲ್ಲಿ ಜನರ ಜತೆಗೆ ಸರಕು ಹೊತ್ತ ಲಾರಿಗಳು ಮತ್ತಿತ್ತರ ಸರಕು ಹೊತ್ತ ಲಾರಿಗಳು ಮತ್ತಿತ್ತರ ವಾಹನಗಳನ್ನು ಬಾರ್ಜ್ ಮಾದರಿಯಲ್ಲಿ ಫೆರಿಯಲ್ಲಿ(ನೌಕೆ) ಸಾಗಿಸಲಾಗುತ್ತದೆ. ಸದ್ಯ ಚಾಲನೆ ಪಡೆದಿರುವ ಮೊದಲ ಹಂತದ ಯೋಜನೆಯಲ್ಲಿ 250 ಜನರನ್ನಷ್ಟೇ
ಸಾಗಿಸಲು ಅವಕಾಶವಿದೆ. ಇದಕ್ಕಾಗಿ ಘೋಘಾ ಮತ್ತು ದಹೇಜ್ ಬಳಿ ವಿಶ್ವ ಗುಣಮಟ್ಟದ ಟರ್ಮಿನಲ್‍ಗಳನ್ನು ನಿರ್ಮಿಸಲಾಗಿದೆ.

●.ಪೋರಾಬಂದರ್, ಘೋಘಾ, ದಹೇಜ್, ಹಾಜಿರಾ-ಪಿಪಾವಾವ್, ಪಿಪಾವಾವ್-ಪೋರಾಬಂದರ್, ಪೋರಾಬಂದ್ರರ-ಓಕಾ ಮತ್ತು ಓಕಾ-ಮುಂದ್ರಾ ಅಲ್ಲದೆ, ದಕ್ಷಿಣ
ಭಾರತದ ನಾನಾ ಸ್ಥಳಿಗಳಿಗೆ ಆರ್‍ಒಆರ್‍ಒ ನೌಕಾ ಸೇವೆ ವಿಸ್ತರಿಸುವ ಚಿಂತನೆ ಇದೆ.

●.ಸಿಂಧು ನದಿ ನಾಗರಿಕತೆಯ ಸಂದರ್ಭದಲ್ಲಿ ಗುಜರಾತ್‍ನ ಅಹಮದಾಬಾದ್ ಜಿಲ್ಲೆಯ ಢೋಲ್ಕಾ ತಾಲೂಕಿನ ಸಾರಾಗ್‍ವಾಲಾ ಗ್ರಾಮದ ಬಳಿ ಇರುವ ಲೋತಲ್ ಎಂಬ ಗ್ರಾಮದಲ್ಲಿ ಸಮುದ್ರ ಮಾರ್ಗದಲ್ಲಿನ ವಾಣಿಜ್ಯ ವಹಿವಾಟು ನಡೆಯುತ್ತಿತ್ತು. ಇದಕ್ಕಾಗಿ ಅಲ್ಲಿ ಹಡಗುಗಟ್ಟೆ ನಿರ್ಮಿಸಿ ಸರಕು ಇಳಿಸಲು ಮತ್ತು ತುಂಬುವ ವ್ಯವಸ್ಥೆ ರೂಪಿಸಲಾಗುತ್ತಿತ್ತು. 1950ರ ದಶಕದಲ್ಲಿ ಭಾರತೀಯ ಪುರಾತತ್ವ ಇಲಾಖೆ ನಡೆಸಿದ್ದ ಉತ್ಖನನದಲ್ಲಿ ಹಡಗುಗಟ್ಟೆ ಮತ್ತಿತ್ತರ ನಿರ್ವಣಗಳ ಪಳೆಯುಳಿಕೆಗಳು ಲಭಿಸಿದ್ದವು. ಲೋತಲ್‍ನ ಗತವೈಭವವನ್ನು ನೆನಪಿಸುವಂತೆ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ನಡುವೆ ಆರ್‍ಒಆರ್‍ಒ ನೌಕಾ ಸೇವೆಯನ್ನು ಆರಂಭಿಸಲಾಗಿದೆ.

Thursday 14 December 2017

☀️ Part-8.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-8.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


56. ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತಿದ್ದು ದೇಶದ ನ್ಯಾಯಾಂಗ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಸಮಸ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿರುವುದಕ್ಕೆ ಕಾರಣೀಭೂತವಾದ ಅಂಶಗಳನ್ನು ಚರ್ಚಿಸಿ. ಪ್ರಕರಣಗಳ ವಿಲೇವಾರಿಯನ್ನು ತ್ವರಿತಗೊಳಿಸಲು ಯಾವ ಸಲಹೆಗಳನ್ನು ಸೂಚಿಸುವಿರಿ?
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)


57. ಭಾರತೀಯ ಸಂಸ್ಕೃತಿಯಲ್ಲಿ ಪರಿಸರ ಸಂಬಂಧಿ ಮೌಲ್ಯಗಳಿಗೆ ನೀಡಲಾಗಿರುವ ಒತ್ತನ್ನು ಬಹುಶಃ ಬೇರಾವ ಸಂಸ್ಕೃತಿಯಲ್ಲಿ ನೀಡಲಾಗಿಲ್ಲ. ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


58. ಭೂಮಿ ಪ್ರತಿಯೊಬ್ಬರ ಅವಶ್ಯಕತೆಯನ್ನು ಪೂರೈಸಬಲ್ಲದು. ಆದರೆ ಮಾನವನ ದುರಾಸೆಯನ್ನಲ್ಲ. — ಗಾಂಧೀಜಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


59. 'ಬ್ಯಾಂಕುಗಳ ಕ್ರೋಡೀಕರಣ' ನಮ್ಮ ದೇಶದ ಆರ್ಥಿಕ ಸುಧಾರಣೆಗೆ ನಿಜವಾಗಿಯೂ ಸಹಾಯ ಮಾಡುವುದೇ? ಇಂತಹ ಪ್ರಕ್ರಿಯೆಯನ್ನು ನಡೆಸಿದ ಇತರ ದೇಶಗಳ ಅನುಭವಗಳನ್ನು ಗಮನದಲ್ಲಿಟ್ಟುಕೊಂಡು ಅದರಿಂದ ಆಗುವ ತೊಂದರೆ ಮತ್ತು ಉಪಯೋಗಗಳನ್ನು ಪ್ರಸ್ತುತಪಡಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


60. ತ್ಯಾಜ್ಯದ ವಿಲೇವಾರಿಯಲ್ಲಿ ದೊಡ್ಡ ಸಮಸ್ಯೆ ಸೃಷ್ಟಿಸಿರುವುದು ಪ್ಲಾಸ್ಟಿಕ್‌. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ  ಪರ್ಯಾಯ ಮಾರ್ಗಗಳನ್ನು ಸೂಚಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)
 

61. 1909 ರ ಭಾರತದ (ಮಿಂಟೋ ಮತ್ತು ಮಾರ್ಲೆ) ಶಾಸನವು "ಭಾರತದಲ್ಲಿ ಪ್ರತಿನಿಧಿಗಳ ಸರ್ಕಾರವನ್ನು ಆರಂಭಿಸುವಲ್ಲಿ ಇಟ್ಟ ದಿಟ್ಟ ಹೆಜ್ಜೆ" - ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


62. ಒಳನಾಡು ಜಲಸಾರಿಗೆ ಒತ್ತು ನೀಡುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸಾಗರಮಾಲಾ ಯೋಜನೆಯ ಮಹತ್ವವನ್ನು ಚರ್ಚಿಸಿ.
(ಪತ್ರಿಕೆ  — ಸಾಮಾನ್ಯ ಅಧ್ಯಯನ 1)

...ಮುಂದುವರೆಸುವುದು. 

Wednesday 13 December 2017

☀ ಈ ದಿನದ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ ಪ್ರಶ್ನೆ : •► ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿಂದ ತಿರಸ್ಕೃತಗೊಂಡ 'ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ'ದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಪ್ರಸ್ತುತ ಕೊಲಿ­ಜಿಯಂ ಪದ್ಧತಿ ಸೂಕ್ತವೇ? (What is your opinion about the 'National Judicial Appointment Commission' which was recently repealed by the Supreme Court? The Current Collegium System is appropriate? ) (200 ಶಬ್ದಗಳಲ್ಲಿ)

☀ ಈ ದಿನದ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ ಪ್ರಶ್ನೆ :
•►  ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿಂದ ತಿರಸ್ಕೃತಗೊಂಡ 'ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ'ದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಪ್ರಸ್ತುತ ಕೊಲಿ­ಜಿಯಂ ಪದ್ಧತಿ ಸೂಕ್ತವೇ?
(What is your opinion about the 'National Judicial Appointment Commission' which was recently repealed by the Supreme Court? The Current Collegium System is appropriate? )
(200 ಶಬ್ದಗಳಲ್ಲಿ)

━━━━━━━━━━━━━━━━━━━━━━━━━━━━━━━━━━━━━━━━━━
★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


(ಗೆಳೆಯರೇ... ನನ್ನ ಜ್ಞಾನ ಪರಿಮಿತಿಯಲ್ಲಿ ಹಲವು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿ ಈ ಮೇಲಿನ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು, ಇದೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)



ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ  ನ್ಯಾಯಾಂ­ಗದ ಅಸಮಾಧಾನದ ನಡುವೆಯೂ ಉನ್ನತ ನ್ಯಾಯಮೂರ್ತಿಗಳ ನೇಮ­ಕಕ್ಕೆ ಈವರೆಗೆ ಚಾಲ್ತಿಯಲ್ಲಿರುವ ಕೊಲಿ­ಜಿಯಂ ಪದ್ಧತಿ ರದ್ದತಿ ಮಾಡಿ, ಸಂವಿಧಾನಕ್ಕೆ 124ನೇ ತಿದ್ದುಪಡಿಯನ್ನು ತಂದು ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಮಸೂದೆ 2014ರಲ್ಲಿ ಜಾರಿಯಲ್ಲಿ ತಂದಿತ್ತು. ನ್ಯಾಯಮೂರ್ತಿಗಳನ್ನು ನೇಮಿಸುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು.

ದೇಶದ ಪ್ರಧಾನಮಂತ್ರಿಯನ್ನು ಆತನ ಪಕ್ಷದ ಸಂಸತ್‌ ಸದಸ್ಯರು ಆಯ್ಕೆ ಮಾಡುತ್ತಾರೆ. ಅಂದರೆ ಕಾರ್ಯಾಂಗವೇ ಪ್ರಧಾನಿಯನ್ನು ನೇಮಿಸುತ್ತದೆ. ಹಾಗಿರುವಾಗ ನ್ಯಾಯಾಂಗವು ನ್ಯಾಯಾಧೀಶರನ್ನು ನೇಮಿಸುವುದು ಹೇಗೆ ತಪ್ಪಾಗುತ್ತದೆ? ಸಂವಿಧಾನ ನ್ಯಾಯಾಂಗಕ್ಕೆ ವಹಿಸಿಕೊಟ್ಟಿರುವ ಜವಾಬ್ದಾರಿಯನ್ನು ಸುಪ್ರೀಂಕೋರ್ಟು ಪ್ರಾಮಾಣಿಕವಾಗಿ ಪೂರೈಸಿದೆ.

ಸಂವಿಧಾನದ ಅನುಚ್ಛೇದ 124ರ ಅಡಿಯಲ್ಲಿ ರಾಷ್ಟ್ರಾಧ್ಯಕ್ಷರು, ಸುಪ್ರೀಂಕೋರ್ಟು ಹಾಗೂ ರಾಜ್ಯಗಳ ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು ನೇಮಿಸತಕ್ಕದ್ದು. ಸುಪ್ರೀಂಕೋರ್ಟು ಹಾಗೂ ರಾಜ್ಯಗಳ ಉಚ್ಚ ನ್ಯಾಯಾಧೀಶರುಗಳೊಂದಿಗೆ ಸಮಾಲೋಚಿಸಿದ ಅನಂತರವೇ ಈ ನೇಮಕ ಮಾಡಬೇಕು. ಇಂತಹ ಸಮಾಲೋಚನೆ ನಡೆಸದೆ ನ್ಯಾಯಾಧೀಶರ ನೇಮಕಾತಿ ಸರಿಯಲ್ಲ. ನ್ಯಾಯಾಧೀಶರ ನೇಮಕಾತಿಯಲ್ಲಿ ಕಾರ್ಯಾಂಗದ ಹಸ್ತಕ್ಷೇಪ ಸಲ್ಲದು.

ನ್ಯಾ.ನೇ.ಆ. ಕಾಯಿದೆ, ನ್ಯಾಯಾಧೀಶರ ನೇಮಕಾತಿ ಸಮುಚ್ಚಯದೊಳಗೆ ಕೇಂದ್ರದ ಕಾನೂನು ಸಚಿವರು ಮತ್ತು ದೇಶದ ಇಬ್ಬರು ಗಣ್ಯ ಪ್ರಭಾವಿ ವ್ಯಕ್ತಿಗಳನ್ನು ತೂರುವ ಪ್ರಯತ್ನ ಮಾಡುತ್ತದೆ. ಗಣ್ಯ ಪ್ರಭಾವಿಗಳ ಆಯ್ಕೆಯನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು, ದೇಶದ ಪ್ರಧಾನಿ ಮತ್ತು ಕೇಂದ್ರ ಸರಕಾರದ ಕಾಯಿದೆ ಸಚಿವರು ಮಾಡತಕ್ಕದ್ದು. ಗಣ್ಯ ಪ್ರಭಾವಿಗಳ ಆಯ್ಕೆಯಲ್ಲಿಯೇ ನ್ಯಾಯಾಂಗದ ಆದ್ಯತೆ ನಷ್ಟವಾಗುತ್ತದೆ.  ಅಷ್ಟು ಮಾತ್ರವಲ್ಲದೆ 3 ನ್ಯಾಯಾಧೀಶರು ಮಾಡುವ ಆಯ್ಕೆಯನ್ನು ಕಾಯಿದೆ ಮಂತ್ರಿ ಮತ್ತು 2 ಗಣ್ಯ ಪ್ರಭಾವಿಗಳು ವಿಟೋ ನೀಡಿ ತಡೆಯಬಹುದು. ಇದು ಸಂವಿಧಾನದ ಆಶಯಕ್ಕೆ ಮತ್ತು ಮೂಲ ಸಂರಚನೆಗೆ ಹಾಗೂ ತಳಹದಿ ತತ್ವಗಳಿಗೆ ವ್ಯತಿರಿಕ್ತ. ಈ ಕಾರಣಕ್ಕಾಗಿ ಸುಪ್ರೀಂಕೋರ್ಟು ನ್ಯಾ.ನೇ.ಆ. ಕಾಯಿದೆಯನ್ನು ಅಸಿಂಧುಗೊಳಿಸಿದೆ.

ರಾಷ್ಟ್ರೀಯ ನ್ಯಾಯಾಧೀಶರ ನೇಮಕಾತಿ ಆಯೋಗದ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಬಹಳ ಸಕಾಲಿಕವಾದದ್ದು, ದೂರದರ್ಶಿತ್ವವುಳ್ಳದ್ದು. ಹಾಗೂ ಇದು ಸಂವಿಧಾನದ ಹೃದಯ ಭಾಗವಾಗಿರುವ ನ್ಯಾಯಾಂಗದ ಸ್ವಾತಂತ್ರ್ಯ, ಅಧಿಕಾರ, ಹಕ್ಕು ಮತ್ತು ಕರ್ತವ್ಯಗಳನ್ನು ರಕ್ಷಿಸುವಂತಿದೆ. ನ್ಯಾ.ನೇ.ಆ. ಕಾಯಿದೆ ಮತ್ತು ಸಂವಿಧಾನದ ತಿದ್ದುಪಡಿ ಕಾಯಿದೆಗಳನ್ನು ಅಸಿಂಧುಗೊಳಿಸಿ, ಹಾಲಿ ಇದ್ದ ಕೊಲೀಜಿಯಮ್‌ ವ್ಯವಸ್ಥೆಯನ್ನು ಈ ತೀರ್ಪು ಪುನರುತ್ಥಾನಗೊಳಿಸಿದೆ. ಅಲ್ಲದೆ  ಲೋಪ ಹೋಗಲಾಡಿಸಿ ಸುಧಾರಿಸುವ ಬಗ್ಗೆ ಸಲಹೆ ಸೂಚನೆಗಳನ್ನೂ ಆಹ್ವಾನಿಸಿದೆ. ಈ ತೀರ್ಪು ನಮ್ಮ ಸಂವಿಧಾನದ ಬೆಳವಣಿಗೆಯ ಚರಿತ್ರಾರ್ಹ ಮುನ್ನಡೆಯ ಹೆಜ್ಜೆ.
➖➖End➖➖
━━━━━━━━━━━━━━━━━━━━━━━━━━━━━━━━━━━━━━━━━━

•••Extra Tips :
ನ್ಯಾ.ನೇ.ಆ. ಕಾಯಿದೆ ಪ್ರಕಾರ ರಚಿಸುವ ಸಮುಚ್ಚಯದಲ್ಲಿ ಒಟ್ಟು 6 ಮಂದಿ ಸದಸ್ಯರಿರುತ್ತಾರೆ. ಅವರ ಪೈಕಿ ಸುಪ್ರೀಂಕೋರ್ಟಿನ ಉಚ್ಚ ನ್ಯಾಯಾಧೀಶರು, 2 ಮಂದಿ ಹಿರಿಯ ನ್ಯಾಯಾಧೀಶರ, ಕಾಯಿದೆ ಮಂತ್ರಿ ಮತ್ತು 2 ಗಣ್ಯ ಪ್ರಭಾವಿಗಳು ಇರತಕ್ಕದ್ದು. ಅಂದರೆ ನ್ಯಾಯಾಂಗದ ಪರ 3 ಸದಸ್ಯರು ಮತ್ತು ಕಾರ್ಯಾಂಗದ ಪರ 3 ಸದಸ್ಯರು. ಇಲ್ಲಿಯೂ ನ್ಯಾಯಾಂಗದ ಆದ್ಯತೆ ನಷ್ಟವಾಗುತ್ತದೆ.

ಸಂವಿಧಾನ ಮತ್ತು ಸುಪ್ರೀಂಕೋರ್ಟಿನ ತೀರ್ಪುಗಳಲ್ಲಿ ವ್ಯಾಖ್ಯಾನಿಸಿರುವಂತೆ, ನ್ಯಾಯಾಂಗಕ್ಕೆ ಆದ್ಯತೆ ಇರತಕ್ಕದ್ದು. ಆದರೆ ನ್ಯಾ.ನೇ.ಆ. ಕಾಯಿದೆಯಂತೆ ನ್ಯಾಯಾಂಗದ ಆದ್ಯತೆ ಸಂಪೂರ್ಣ ನಷ್ಟವಾಗುತ್ತದೆ.

☀️ Part-7.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-7.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


49. "ಭಾರತದಲ್ಲಿ ಅಂಗ್ಲರ ಅಧಿಪತ್ಯದ ಆಸ್ತಿಭಾರವನ್ನು ಹಾಕಿದ ಶ್ರೇಯಸ್ಸು ರಾಬರ್ಟ್ ಕ್ಲೈವ್ ನದ್ದಾದರೆ, ಆಂಗ್ಲರ ಅಧಿಕಾರವನ್ನು ಸಂಘಟಿಸಿ ಸುಭದ್ರಗೊಳಿಸಿದ ಶ್ರೇಯಸ್ಸು ವಾರನ್ ಹೇಸ್ಟಿಂಗ್ಸನದಾಗಿದೆ"—ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


50. 'ಡಿಜಿಟಲ್ ಕ್ರಾಂತಿ' ಎಂದರೇನು? 'ಡಿಜಿಟಲ್ ಕ್ರಾಂತಿ'ಯ ಬಗ್ಗೆ ಸಾರ್ವಜನಿಕರಲ್ಲಿ, ಇರುವ ಹಿಂಜರಿಕೆ, ಸಂಶಯಗಳನ್ನು ನಿವಾರಿಸುವಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು ಉಲ್ಲೇಖಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


51. 'ಭಾರತೀಯ ಉತ್ಪಾದನಾ ವ್ಯವಸ್ಥೆ'ಯು ನಮ್ಮ ನೆರೆಯ ದೇಶ ಚೀನದ ಗಾತ್ರ ಮತ್ತು ಮೊತ್ತವನ್ನು ಮುಟ್ಟಿಲ್ಲವಾದರೂ ಉನ್ನತ ಮಟ್ಟವನ್ನು ತಲುಪಲು ತಾಂತ್ರಿಕವಾಗಿ ಸಿದ್ಧವಾಗಿದೆ ಎಂದೆನ್ನಬಹುದೆ?  ಇತ್ತೀಚಿನ ದೇಶದ ಸರಿಯಾದ ಉತ್ಪಾದನೆ (ಜಸ್ಟ್ ಇನ್ ಟೈಮ್) ಮತ್ತು ವಿಕೇಂದ್ರೀಕೃತ ಉತ್ಪಾದನೆಗಳನ್ನು ಗಮನದಲ್ಲಿಟ್ಟುಕೊಂಡು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


52. 'ಮಿತವ್ಯಯೀ ಎಂಜಿನಿಯರಿಂಗ್' ಎಂದರೇನೆಂದು ಅರ್ಥೈಸುವಿರಿ? ಸರಕು ಮತ್ತು ಸೇವೆಗಳ ಉತ್ಪಾದನೆಯ ಮೇಲೆ ಇದರ ಪ್ರಭಾವವನ್ನು ಚರ್ಚಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


53. ವ್ಯಾಪಾರಿ ಸಂಸ್ಥೆಯಾಗಿದ್ದ ಕಂಪನಿಯನ್ನು ರಾಜಕೀಯ ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ರಾಬರ್ಟ್ ಕ್ಲೈವ್ ನ ಪಾತ್ರವನ್ನು ವಿಮರ್ಶಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


54.ಉತ್ತರ ಭಾರತದ ಬುಡಕಟ್ಟು ಸಮುದಾಯಗಳ ಸಮಸ್ಯೆಗಳು ದಕ್ಷಿಣ ಭಾರತದ ಬುಡಕಟ್ಟು ಸಮುದಾಯಗಳ  ಸಮಸ್ಯೆಗಳಿಗಿಂತ ಸಂಪೂರ್ಣವಾಗಿ ಭಿನ್ನ. ಅಂಥದರಲ್ಲಿ ಒಂದು ನಿರ್ದಿಷ್ಟ ಅಭಿವೃದ್ಧಿ ಯೋಜನೆ ದೇಶದ ಎಲ್ಲಾ ಬುಡಕಟ್ಟು ಸಮುುದಾಯಗಳಿಗೂ ಸಮಗ್ರವಾಗಿ ಏಕಕಾಲಕ್ಕೆ ಉಪಯುಕ್ತವಾಗುತ್ತದೆ ಎಂಬ ಕಲ್ಪನೆಯೇ ಅರ್ಥಹೀನ ಎನ್ನುವುದು ಮಾನವಶಾಸ್ತ್ರಜ್ಞರ ಅಭಿಪ್ರಾಯ. ಇದಕ್ಕೆ ವಿಮರ್ಶಾತ್ಮಕವಾಗಿ ನಿಮ್ಮ ವಿಚಾರಗಳನ್ನು ನೀಡಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


55. (ದೇಶ / ರಾಜ್ಯ)ದಲ್ಲಿರುವ ಚಾರಿತ್ರಿಕ, ಸಾಂಸ್ಕೃತಿಕ ಅಥವಾ ಪ್ರಾಕೃತಿಕ ವಿಶ್ವೋತ್ಕೃಷ್ಟ ಸ್ಥಳಗಳನ್ನು ಸಂರಕ್ಷಿಸಿ, ಅವುಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಸರ್ಕಾರವು ಯಾವ್ಯಾವ ಸಂರಕ್ಷಣಾ ಕ್ರಮಗಳನ್ನು ಕೈಗೊಂಡಿದೆ? ಇವು ಪರಿಣಾಮಕಾರಿಯಾಗಿವೆಯೇ?
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)

... ಮುಂದುವರೆಯುವುದು. 

Monday 11 December 2017

☀️ Part-6.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-6.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


42. ವಿಶ್ವ ವ್ಯಾಪಾರದಲ್ಲಿರುವ ಅಸಮತೋಲವನ್ನು ಸರಿಪಡಿಸುವಲ್ಲಿ ಉರುಗ್ವೇ ಸುತ್ತಿನ ಮಾತುಕತೆಯ ಅನುಕೂಲಗಳನ್ನು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

43. ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಷರತ್ತುಗಳಿಂದಾಗಿ ಪಡೆದುಕೊಂಡಿರುವ ನಕಾರಾತ್ಮಕ ಆಯಾಮಗಳನ್ನು ಪರಿಶೀಲಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

44. ಅಂತರರಾಷ್ಟ್ರೀಯ ಮಟ್ಟದ ವಾಣಿಜ್ಯ– ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚು ಪೂರಕವಾದ ತೆರಿಗೆ ಸರಳೀಕರಣಗೊಳಿಸುವುದರೊಂದಿಗೆ ದೇಶಿ  ವಾಣಿಜ್ಯೋದ್ಯಮ ರಂಗಕ್ಕೆ ಉತ್ತೇಜನ ಹಾಗೂ ಮಾರುಕಟ್ಟೆಗೆ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯು ವಹಿಸಬಹುದಾದ ಗಮನಾರ್ಹ ಪಾತ್ರವನ್ನು ಕುರಿತು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

45. ಮೌಢ್ಯಗಳನ್ನು ನಿವಾರಿಸುವ ಬದಲಿಗೆ ಮೌಢ್ಯಗಳನ್ನು ಬಿತ್ತುವುದೇ ಇಂದು ಒಂದು ದೊಡ್ಡ ಉದ್ಯಮವಾಗಿದೆ. ಈ ಹಿನ್ನೆಲೆಯಲ್ಲಿ ಮೂಢನಂಬುಗೆಗಳ ಹುಟ್ಟಿಗೆ ಕಾರಣಗಳು ಹಾಗು ಅವುಗಳ  ಪ್ರಸ್ತುತ ಆಚರಣೆಗಳ ಹಾಗು ಇತ್ತೀಚಿನ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ಚರ್ಚಿಸಿರಿ..
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

46. 1991ರಲ್ಲಿ ಹೊಸ ಆರ್ಥಿಕ ನೀತಿಯನ್ನು ನಾವು ಅಳವಡಿಸಿಕೊಂಡ ಬಳಿಕ ಬೆಳವಣಿಗೆ ಪ್ರಕ್ರಿಯೆಯು ವೇಗವನ್ನು ಪಡೆದುಕೊಂಡಿದ್ದರೂ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಬುಡಕಟ್ಟು ಜನರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ವ್ಯಾಪಕವಾದ ಅಂತರ ಏರ್ಪಟ್ಟಿದೆ. ಇದರ ಹಿಂದಿರುವ ಬಲವಾದ ಕಾರಣಗಳನ್ನು ಚರ್ಚಿಸಿ.

47. ನಗದುರಹಿತ ಗ್ರಾಮೀಣ ಅರ್ಥವ್ಯವಸ್ಥೆಯ ಸವಾಲುಗಳು.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)

48. ರಾಜ್ಯದಲ್ಲಿ ಸ್ಥಳೀಯರ ಸಹಭಾಗಿತ್ವದಲ್ಲಿ (Community Based Tourism)  ಪ್ರವಾಸೋದ್ಯಮವನ್ನು ಬೆಳೆಸುವಲ್ಲಿ ಸರ್ಕಾರವು ಇತ್ತೀಚೆಗೆ ಕೈಗೊಂಡ ಕ್ರಮಗಳನ್ನು ಅವಲೋಕಿಸಿ.
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)

...ಮುಂದುವರೆಯುವುದು. 

Thursday 7 December 2017

☀️ Part-5.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-5.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.



35. ಸಾಂಸ್ಕೃತಿಕವಾಗಿ ಮತ್ತು ಭೌಗೋಳಿಕವಾಗಿ ವಿಭಿನ್ನವಾಗಿರುವ ದೇಶದ ವಿವಿಧ ಬುಡಕಟ್ಟು ಸಮುದಾಯಗಳಿಗೆ ಒಂದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವುದು ನಾವು ಮಾಡುತ್ತಿರುವ ದೊಡ್ಡ ತಪ್ಪು ಎಂಬುದು ತಜ್ಞರ ಅಭಿಪ್ರಾಯ. ಈ ವಾದ ಎಷ್ಟರಮಟ್ಟಿಗೆ ಔಚಿತ್ಯ? ವಿವರಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


36. ನಗದುರಹಿತ ವ್ಯವಹಾರಗಳ ಅನುಕೂಲ ಮತ್ತು ಅನಾನುಕೂಲಗಳು.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)+
(ಪತ್ರಿಕೆ 1 — ಪ್ರಬಂಧ)


37. ಇತ್ತೀಚೆಗೆ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್‌ ಬ್ಯಾಂಕ್‌, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳ ಸಹಯೋಗದಲ್ಲಿ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸಲು ಕೈಗೊಂಡಿರುವ ಕ್ರಮ ಯೋಜನೆಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


38. " ಹಳ್ಳಿಗರಿಗೆ ಕೆಲಸ ಕೊಡಬೇಕಾಗಿರುವುದು ಯಂತ್ರಗಳ ಮೂಲಕವಲ್ಲ, ಅವರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಗುಡಿ ಕೈಗಾರಿಕೆಗಳ ಮೂಲಕ. - ಆಧುನಿಕ ಗ್ರಾಮೀಣ ಗುಡಿಕೈಗಾರಿಕೆಗಳ ಅಭಿವೃದ್ದಿ ಪ್ರಸ್ತುತತೆಯೊಂದಿಗೆ ಗಾಂಧೀಜಿಯವರ ಈ ಮಾತು ಇವತ್ತಿನ ಸನ್ನಿವೇಶಕ್ಕೆ ಎಷ್ಟರಮಟ್ಟಿಗೆ ಔಚಿತ್ಯ. ಚರ್ಚಿಸಿ.?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


39.  ಬುಡಕಟ್ಟು ಆರ್ಥಿಕತೆಯನ್ನು ಸಮಗ್ರ ಆರ್ಥಿಕತೆಗೆ ಒಳಪಡಿಸುವ ಬದಲು ತಾಂತ್ರಿಕ - ಪರಿಸರ ಆಧಾರಿತ ಕೌಶಲಗಳನ್ನು ಜನರಲ್ಲಿ ಬೆಳೆಸುವುದು ಉತ್ತಮ ಎನ್ನುವುದು ಇತ್ತೀಚೆಗೆ ಕೇಳಿಬರುತ್ತಿರುವ ಕೆಲವರ ವಾದ. ಇದಕ್ಕೆ ನಿಮ್ಮ ಅಭಿಪ್ರಾಯವೇನು?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

40. ಗರಿಷ್ಠ ಮುಖಬೆಲೆಯ ನೋಟು ರದ್ದತಿ ಮತ್ತು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೇಶದ ಅರ್ಥವ್ಯವಸ್ಥೆಯಲ್ಲಿ ಆದ ಬದಲಾವಣೆಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

41. ಸಾಂಪ್ರದಾಯಿಕ ವ್ಯವಸ್ಥೆಯಿಂದ ಡಿಜಿಟಲ್‌ ಯುಗಕ್ಕೆ ಬದಲಾಗುತ್ತಿರುವ ಇಂದಿನ ದಿನಮಾನಗಳಲ್ಲಿ  ಮಾಹಿತಿ ಕಳ್ಳತನ, ಸೈಬರ್‌ ದಾಳಿಯಂತಹ ಅನೇಕ ಡಿಜಿಟಲ್‌ ಯುಗದ ಸವಾಲುಗಳು ಎದುರಾಗಿವೆ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)

... ಮುಂದುವರೆಯುವುದು. 

Tuesday 5 December 2017

☀️ Part-4.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-4.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ (ಸಾಮಾನ್ಯ ಅಧ್ಯಯನ ಎಲ್ಲಾ ಪತ್ರಿಕೆಗಳನ್ನೊಳಗೊಂಡಂತೆ) ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ °ಸ್ಪರ್ಧಾಲೋಕ°ದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)


Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.



28. 'ಸೆಂಡೈ ಕಟ್ಟುಪಾಡು' ಅಥವಾ 'ಸೆಂಡೈ ಚೌಕಟ್ಟು'  ಎಂದರೇನು? ಅದರ ಧ್ಯೇಯೋದ್ದೇಶಗಳು ಮತ್ತು ಗುರಿಗಳನ್ನು ನಿರೂಪಿಸಿ. ಜೊತೆಗೆ ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸರ್ಕಾರವು ಕೈಗೊಂಡಿರುವ ಮಹತ್ವದ ಕ್ರಮಗಳನ್ನು ಚರ್ಚಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


29. ವಿಕೋಪ ನಿರ್ವಹಣೆ ಕ್ಷೇತ್ರದಲ್ಲಿ ಸಾಮರ್ಥ್ಯ ನಿರ್ಮಾಣ ಪ್ರಯತ್ನವನ್ನು ಹೆಚ್ಚಿಸುವಲ್ಲಿ ರಾಷ್ಟ್ರೀಯ ವಿಕೋಪ ನಿರ್ವಹಣಾ ಸಂಸ್ಥೆಯು ಅಳವಡಿಸಿಕೊಂಡಿರುವ ರಚನಾತ್ಮಕ ಕ್ರಮಗಳಾವುವು? ವಿವರಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


30. ಒಂದೇ ಅಕ್ಷಾಂಶದ ಮೇಲಿರುವ ದೇಶದ ಪೂರ್ವ - ಪಶ್ಚಿಮ ಭಾಗಗಳು ಪರಸ್ಪರ ವೈಪರೀತ್ಯದ ಮಳೆಯ ಹಂಚಿಕೆಯನ್ನು ಹೊಂದಿವೆ ಏಕೆ? ಕಾರಣಗಳೊಂದಿಗೆ ವಿವರಿಸಿ.
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)


31. 'ನವಭಾರತ ಪರಿಕಲ್ಪನೆ'ಗೆ ನೀವೇನೆಂದು ಅರ್ಥೈಸುವಿರಿ?  '2022ರ ವೇಳೆಗೆ ನವಭಾರತ ನಿರ್ಮಾಣ' ಕಾರ್ಯವನ್ನು ಸಾಕಾರಗೊಳಿಸಲು ಕೇಂದ್ರ ಸರ್ಕಾರವು ಇತ್ತೀಚೆಗೆ ಕೈಗೊಂಡ ಹಾಗೂ ಕೈಗೊಳ್ಳಬಹುದಾದ ಕ್ರಮಗಳನ್ನು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


32. ಆಧುನಿಕ ಕೃಷಿ ಮತ್ತು ರೈತ ಸಮುದಾಯದ ಸಮೃದ್ಧಿ, ಏಳ್ಗೆಗಾಗಿ ಇತ್ತೀಚೆಗೆ ಸರ್ಕಾರ (ಕೇಂದ್ರ / ರಾಜ್ಯ) ವು ಕೈಗೊಂಡ ಕ್ರಮಗಳನ್ನು ಅವಲೋಕಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


33. ನೈಸರ್ಗಿಕ ವಿಕೋಪ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳ ಮುಂದಿರುವ ಸವಾಲುಗಳು.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)


34. 'ಜೈವಿಕ ಭಯೋತ್ಪಾದನೆ' ಎಂದರೇನು? 'ಜೈವಿಕ ಭಯೋತ್ಪಾದನೆ'ಯಿಂದ ಉಂಟಾಗುವ ಜೈವಿಕ ಅಪಾಯಗಳನ್ನು ತಡೆಯುವಲ್ಲಿ  ಮತ್ತು ನಿಯಂತ್ರಿಸುವಲ್ಲಿ ಸರ್ಕಾರವು ಕೈಗೊಂಡ ಸುರಕ್ಷತಾ ಕ್ರಮಗಳನ್ನು ವಿವರಿಸಿ.
(ಪತ್ರಿಕೆ 4 — ಸಾಮಾನ್ಯ ಅಧ್ಯಯನ 3)

...ಮುಂದುವರೆಯುವುದು. 

☀️ Part-3.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು: (KAS Mains Exam Module Questions for General Studies)

☀️ Part-3.>> ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ (ಸಾಮಾನ್ಯ ಅಧ್ಯಯನ) ಮಾದರಿ ಪ್ರಶ್ನೆಗಳು:
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ ಪತ್ರಿಕೆ
(General Studies Papers


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ (ಸಾಮಾನ್ಯ ಅಧ್ಯಯನ ಎಲ್ಲಾ ಪತ್ರಿಕೆಗಳನ್ನೊಳಗೊಂಡಂತೆ) ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ °ಸ್ಪರ್ಧಾಲೋಕ°ದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)

Continued..(ಮುಂದುವರೆದ ಭಾಗ)


•••ಈ ಕೆಳಗಿನ ಪ್ರಶ್ನೆಗಳಿಗೆ 200 or 250 ಶಬ್ದಗಳಲ್ಲಿ ಉತ್ತರಿಸಲು ಪ್ರಯತ್ನಿಸಬೇಕು.


21.  ಜನರಿಗೆ ತಮ್ಮ ಪ್ರತಿನಿಧಿಯನ್ನು ಆಯ್ಕೆಮಾಡುವ ಹಕ್ಕು ಇರುವುದಾದರೆ, ಇಂಥ ಪ್ರತಿನಿಧಿಗಳು ದುಷ್ಕೃತ್ಯಗಳಲ್ಲಿ ತೊಡಗಿದಾಗ ಅಥವಾ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾದಾಗ, ಅವರನ್ನು ಕಿತ್ತುಹಾಕುವ ಅಧಿಕಾರವೂ ಜನರಿಗಿರಬೇಕು ಎಂಬ ಅಭಿಪ್ರಾಯ ತರ್ಕಸಮ್ಮತ ಮತ್ತು ನ್ಯಾಯಸಮ್ಮತವೇ? ವಿವರಿಸಿ.
(ಪತ್ರಿಕೆ 3 — ಸಾಮಾನ್ಯ ಅಧ್ಯಯನ 2)


22. ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡಿಸುವ ಕ್ರಮಗಳನ್ನು ಉಲ್ಲೇಖಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

     
23. ದೇಶಿ ಮತ್ತು ವಿದೇಶಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದರೊಂದಿಗೆ, ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ತ್ವರಿತಗೊಳಿಸಲು ಇತ್ತೀಚೆಗೆ ಸರ್ಕಾರ ಕೈಗೊಂಡ ಸುಧಾರಣಾ ಕ್ರಮಗಳನ್ನು ಚರ್ಚಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


24. ದೇಶದ ಆಂತರಿಕ ಭದ್ರತೆಗೆ ಬೆದರಿಕೆಯಾಗಿರುವ ಭಯೋತ್ಪಾದನೆ ಮತ್ತು ಮೂಲಭೂತವಾದೀಕರಣವನ್ನು ಹತ್ತಿಕ್ಕಲು ಮತ್ತು ಕನಿಷ್ಠ ಮಟ್ಟಕ್ಕಿಳಿಸಲು ಇತ್ತೀಚೆಗೆ ಸರ್ಕಾರ ಕೈಗೊಂಡ ಅಗತ್ಯ ಕ್ರಮಗಳನ್ನು ಅವಲೋಕಿಸಿ.
(ಪತ್ರಿಕೆ 1 — ಪ್ರಬಂಧ)


25. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ
(ಪತ್ರಿಕೆ 1 — ಪ್ರಬಂಧ)


26. ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ದೇಶಿ ರಫ್ತು ವಲಯವು ಎದುರಿಸುತ್ತಿರುವ ಪ್ರತಿಕೂಲ ಸಮಸ್ಯೆಗಳಿಗೆ ಕಾರಣೀಭೂತವಾದ ಅಂಶಗಳು ಯಾವವು? ರಫ್ತು ವಲಯದ ಉತ್ತೇಜನಕ್ಕಾಗಿ ತಾವು ಯಾವ್ಯಾವ ಕ್ರಮಗಳನ್ನು ಸೂಚಿಸುವಿರಿ?
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)


27. ದೇಶಿ ಉದ್ದಿಮೆ ಸಂಸ್ಥೆಗಳು ಜಾಗತಿಕ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ತ್ವರಿತಗೊಳಿಸಲು ಇತ್ತೀಚೆಗೆ ಸರ್ಕಾರವು ಕೈಗೊಂಡ ಕ್ರಮಗಳನ್ನು ವಿವರಿಸಿ.
(ಪತ್ರಿಕೆ 2 — ಸಾಮಾನ್ಯ ಅಧ್ಯಯನ 1)

... ಮುಂದುವರೆಯುವುದು. 

Friday 1 December 2017

☀ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆ : (THE BUREAU OF INDIAN STANDARDS ACT, 2016 ACT )

☀ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆ :
(THE BUREAU OF INDIAN STANDARDS ACT, 2016 ACT )
━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

• ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ, ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆಯನ್ನು ಜಾರಿಗೊಳಿಸಿದೆ.

• ಈ ಸಂಬಂಧ 2016ರ ಮಾರ್ಚ್ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.
• ಈ ಕಾಯ್ದೆಯು ಹಿಂದೆ ಜಾರಿಯಲ್ಲಿದ್ದ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-1986 ಕಾಯ್ದೆಯ ಸ್ಥಾನದಲ್ಲಿ ಜಾರಿಗೆ ಬಂದಿದೆ.

• ಇದು ದೇಶದಲ್ಲಿ ವಹಿವಾಟು ನಡೆಸಲು ಸುಗಮವಾದ ವಾತಾವರಣವನ್ನು ಕಲ್ಪಿಸಿಕೊಡುತ್ತದೆ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ವಿಸ್ತøತಗೊಳಿಸುವಲ್ಲಿ ಇದು ಕೊಡುಗೆ ನೀಡಲಿದೆ. ಜತೆಗೆ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನ ಹಾಗೂ ಸೇವೆಗಳು ಲಭ್ಯವಾಗುವಂತೆ ಮಾಡುವಲ್ಲಿ ಇದು ಮಹತ್ವದ್ದಾಗಲಿದೆ.


☀ ಪ್ರಮುಖ ಅಂಶಗಳು :

• ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಕಾಯ್ದೆ- 2016, ಯಾವುದೇ ವರ್ಗದ ಕೈಗಾರಿಕೆ, ಪ್ರಕ್ರಿಯೆ, ವ್ಯವಸ್ಥೆ ಅಥವಾ ಸೇವೆಗಳನ್ನು ಬಳಸುವ ಯಾವುದೇ ಸರಕು ಅಥವಾ ವಸ್ತುಗಳಿಗೆ ಕಡ್ಡಾಯ ಪ್ರಮಾಣಪಪತ್ರ ಪಡೆಯುವಂತೆ ಆದೇಶಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ.

• ಸಾರ್ವಜನಿಕ ಹಿತಾಸಕ್ತಿಯಿಂದ ಇಂಥ ಯಾವುದೇ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ. ಮಾನವನ ಸುರಕ್ಷತೆ, ಪ್ರಾಣಿ ಹಾಗೂ ಗಿಡಮರಗಳ ಆರೋಗ್ಯ ದೃಷ್ಟಿ ಇಲ್ಲವೇ ದೇಶದ ಭದ್ರತೆ ದೃಷ್ಟಿಯಿಂದ ಇಂಥ ನಿರ್ಧಾರ ಕೈಗೊಳ್ಳಬಹುದಾಗಿದೆ.

• ಇದು ಹಾಲ್ಮಾರ್ಕ್ಗಳನ್ನು ಅಮೂಲ್ಯ ಲೋಹಗಳ ವಸ್ತುಗಳಿಗೆ ಕಡ್ಡಾಯಪಡಿಸಲಿದೆ.


• ಖಾತ್ರಿಪಡಿಸುವ ಮೌಲ್ಯಮಾಪನ ಯೋಜನೆ:

# ಹೊಸ ಕಾಯ್ದೆಯು, ಬಹುವಿಧದ ಸರಳೀಕೃತ ದೃಢೀಕರಣ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತರಲಿದೆ. ಇದರಲ್ಲಿ ಗುಣಮಟ್ಟದ ಸ್ವಯಂಘೋಷಣೆ ಸೇರಿದೆ. ಇದರ ಅನ್ವಯ ಉತ್ಪಾದಕರು ಸರಳವಾಗಿ ಗುಣಮಟ್ಟಕ್ಕೆ ಬದ್ಧರಾಗಿರುವಂತೆ ನೋಡಿಕೊಳ್ಳಲು ಅವಕಾಶವಾಗಲಿದೆ.

# ಕಾಯ್ದೆಗೆ ಅನುಗುಣವಾಗಿ ಕೇಂದ್ರ ಸರ್ಕಾರ, ಉತ್ಪನ್ನ ಅಥವಾ ಸೇವೆಗಳ ಗುಣಮಟ್ಟ ದೃಢೀಕರಣಕ್ಕೆ ಯಾವುದೇ ಪ್ರಾಧಿಕಾರ, ಏಜೆನ್ಸಿಯನ್ನು ಹೊಸದಾಗಿ, ಬಿಐಎಸ್ಗೆ ಹೆಚ್ಚುವರಿಯಾಗಿ ಆರಂಭಿಸಬಹುದಾಗಿದೆ.


• ️ವಸ್ತು ಹಿಂದಕ್ಕೆ ಪಡೆಯುವುದು

# ನೂತನ ಕಾಯ್ದೆಯ ಅನ್ವಯ, ಬಿಐಎಸ್ ಯಾವುದೇ ಸರಕು ಅಥವಾ ವಸ್ತುಗಳನ್ನು ಮಾರಾಟಕ್ಕೆ ಸರಬರಾಜು ಆಗಿದ್ದರೂ, ಅಗತ್ಯ ಗುಣಮಟ್ಟವನ್ನು ಹೊಂದಿಲ್ಲದಿದ್ದರೆ ವಾಪಾಸು ಪಡೆಯುವಂತೆ ನಿರ್ದೆಶಿಸುವ ಅಧಿಕಾರ ಹೊಂದಿರುತ್ತದೆ.

# ಇದಲ್ಲದೇ ಉತ್ಪನ್ನದ ಹೊಣೆಗಾರಿಕೆಯ ಹಿನ್ನೆಲೆಯಲ್ಲಿ ಗುಣಮಟ್ಟದ ಮಾರ್ಕ್ ಹೊಂದಿರುವ ಯಾವುದೇ ಉತ್ಪನ್ನಗಳನ್ನು, ನಿರ್ದಿಷ್ಟ ಗುಣಮಟ್ಟ ಹೊಂದಿರದಿದ್ದರೆ ದುರಸ್ತಿ ಮಾಡಲು ಅಥವಾ ವಾಪಾಸು ಕರೆಸಿಕೊಳ್ಳಲು ಅಧಿಕಾರ ಇರುತ್ತದೆ.


• ಅಮೂಲ್ಯ ಲೋಹಗಳ ಪ್ರಮಾಣಪತ್ರ:

# ಎಲ್ಲ ದೃಢೀಕೃತ ಅಮೂಲ್ಯ ಲೋಹಗಳಿಗೆ ಹಾಲ್ಮಾರ್ಕ್ ಕಡ್ಡಾಯಪಡಿಸುವುದೂ ಇದರಲ್ಲಿ ಸೇರಿದೆ. ಬೆಳ್ಳಿ, ಚಿನ್ನ, ಪ್ಲಾಟಿನಂ ಹಾಗೂ ಪಲ್ಲಾಡಿಯಂ ಅಥವಾ ಮಿಶ್ರಲೋಹಗಳ ಆಭರಣಗಳು ಅಥವಾ ವಸ್ತುಗಳಿಗೆ ಹಾಲ್ಮಾರ್ಕ್ ಮಾಡುವುದು ಕಡ್ಡಾಯವಾಗಲಿದೆ.


• ️ಕಡ್ಡಾಯ ಪ್ರಮಾಣಪತ್ರ

# ಇದರ ಅನ್ವಯ ಕೇಂದ್ರ ಸರ್ಕಾರ ಕೆಲ ಸರಕು, ವಸ್ತುಗಳು ಅಥವಾ ಸೇವೆಗಳನ್ನು ಅಧಿಸೂಚಿತ ಸರಕುಗಳು ಎಂದು ಘೋಷಿಸಲು ಅಧಿಕಾರ ಹೊಂದಿರುತ್ತದೆ. ಇಂಥ ವಸ್ತುಗಳು ಕಡ್ಡಾಯವಾಗಿ ಗುಣಮಟ್ಟದ ಮುದ್ರೆ ಹೊಂದಿರಬೇಕಾಗುತ್ತದೆ.

# ಸಾರ್ವಜನಿಕ ಹಿತಾಸಕ್ತಿಯಿಂದ ಇಂಥ ಯಾವುದೇ ನಿರ್ಣಯವನ್ನು ಕೈಗೊಳ್ಳಬಹುದಾಗಿದೆ. ಮಾನವನ ಸುರಕ್ಷತೆ, ಪ್ರಾಣಿ ಹಾಗೂ ಗಿಡಮರಗಳ ಆರೋಗ್ಯ ದೃಷ್ಟಿ ಇಲ್ಲವೇ ದೇಶದ ಭದ್ರತೆ ದೃಷ್ಟಿಯಿಂದ ಇಂಥ ನಿರ್ಧಾರ ಕೈಗೊಳ್ಳಬಹುದಾಗಿದೆ.


• ಕಂಪನಿಗಳಿಂದ ಅಪರಾಧ:

# ಈ ಕಾಯ್ದೆಯ ಅನ್ವಯ ಅಪರಾಧ ಎಸಗುವ ಕಂಪನಿಗಳ, ಜವಾಬ್ದಾರಿಯುತ ವ್ಯಕ್ತಿಗಳನ್ನು ಹೊಣೆಗಾರರಾಗಿ ಮಾಡಲಾಗುವುದು. ಇಂಥ ಅಧಿಕಾರಿಗಳ ಗಮನಕ್ಕೆ ಬಂದು ಅಥವಾ ಬಾರದೇ, ಒಪ್ಪಿಗೆ ಪಡೆದು ಅಥವಾ ಪಡೆಯದೇ ಇಂಥ ಅಪರಾಧ ನಡೆದಿದ್ದರೂ ಅವರು ಹೊಣೆಗಾರರಾಗುತ್ತಾರೆ.


• ಮೇಲ್ಮನವಿ:

# ದೃಢೀಕೃಣದ ಪ್ರಮಾಣಪತ್ರವನ್ನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ, ಎಲ್ಲ ಅಪರಾಧಗಳನ್ನು ಬಿಐಎಸ್ ಮಹಾನಿರ್ದೇಶಕರಿಗೆ ವರದಿ ಮಾಡಬೇಕಾಗುತ್ತದೆ. ಬಿಐಎಸ್ ಡಿಜಿಯ ತೀರ್ಪಿನ ವಿರುದ್ಧದ ಮೇಲ್ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.

Thursday 30 November 2017

☀ನ್ಯಾಷನಲ್ ಸ್ಟ್ಯಾಂಡಡ್ರ್ಸ್ ಬಾಡಿ ಆಫ್ ಇಂಡಿಯಾ / ಬ್ಯುರೋ ಆಫ್ ಇಂಡಿಯನ್‌ ಸ್ಟಾಂಡರ್ಸ್ ( ಬಿಐಎಸ್‌) ( National Standards Body of India / Bureau of Indian Standards (BIS))

ನ್ಯಾಷನಲ್ ಸ್ಟ್ಯಾಂಡಡ್ರ್ಸ್ ಬಾಡಿ ಆಫ್ ಇಂಡಿಯಾ / ಬ್ಯುರೋ ಆಫ್ ಇಂಡಿಯನ್‌ ಸ್ಟಾಂಡರ್ಸ್ ( ಬಿಐಎಸ್‌)
( National Standards Body of India / Bureau of Indian Standards (BIS))
━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆಯು ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಅನ್ನು ನ್ಯಾಷನಲ್ ಸ್ಟ್ಯಾಂಡಡ್ರ್ಸ್ ಬಾಡಿ ಆಫ್ ಇಂಡಿಯಾ ಆಗಿ ಸ್ಥಾಪನೆಗೆ ಅನುವು ಮಾಡಿಕೊಟ್ಟಿದೆ.

ಇದು ವಸ್ತುಗಳು ಹಾಗೂ ಪ್ರಕ್ರಿಯೆಗಳಿಗೆ ಗುಣಮಟ್ಟ ನಿಗದಿ, ಸೂಕ್ತ ಮಾರ್ಕಿಂಗ್ ಹಾಗೂ ಪ್ರಮಾಣಪತ್ರವನ್ನು ನಿಡಲಿದೆ.

ಇದು ಬಿಐಎಸ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದು, ಅಧಿಸೂಚಿತ ಸರಕುಗಳಿಗೆ ಪ್ರಮಾಣಪತ್ರ ಹೊಂದುವುದನ್ನು ಇದು ಕಡ್ಡಾಯಪಡಿಸಲಿದೆ. ಜತೆಗೆ ಗುಣಮಟ್ಟದ ಮುದ್ರೆಯನ್ನು ಹೊಂದಿರುವುದು ಕಡ್ಡಾಯ.


••ಬ್ಯುರೋ ಆಫ್ ಇಂಡಿಯನ್‌ ಸ್ಟಾಂಡರ್ಸ್ ( ಬಿಐಎಸ್‌)
(Bureau of Indian Standards (BIS)
━━━━━━━━━━━━━━━━━━━━━━━━━━━━

ವಿದ್ಯುತ್‌ ಉಪಕರಣಗಳು, ಸಿಮೆಂಟ್‌, ಬಾಟಲ್‌ ನೀರು, ಕಾಗದ, ಪೇಂಟ್‌,ಶಿಶು ಆಹಾರ ಹಾಲಿನ ಪುಡಿ, ಅಡುಗೆ ಅನಿಲ, ಇತ್ಯಾದಿ ಖರೀದಿಸುವ ಮುನ್ನ, ಅದಕ್ಕೆ ಐಎಸ್‌ಐ ಗುರುತು ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಈ ಚಿಹ್ನೆ ಇರುವ ವಸ್ತುಗಳನ್ನು ಖರೀದಿಸಿದಾಗ  ಗುಣಮಟ್ಟದ ಖಾತರಿ ಇರುತ್ತದೆ. ಈ ಚಿಹ್ನೆಯನ್ನು ಭಾರತೀಯ ಮಾನಕ ಬ್ಯೂರೋ  ಬಿಐಎಸ್‌ ನೀಡುತ್ತದೆ. 

ಇದನ್ನು ಹಿಂದೆ ಇಂಡಿಯನ್‌ ಸ್ಟಾಂಡರ್ಡ್ಸ್‌ ಇನ್‌ಸ್ಟಿಟ್ಯೂಟ್‌ ಎಂದು ಕರೆಯಲಾಗಿತ್ತು. ಆದ್ದರಿಂದ ಐಎಸ್‌ಐ  ಚಿಹ್ನೆಯನ್ನು ಉಳಿಸಿಕೊಳ್ಳಲಾಗಿದೆ. ಐಎಸ್‌ಐ ಚಿಹ್ನೆ ಇರುವ ವಸ್ತುವಿನ ಗುಣಮಟ್ಟದಲ್ಲಿ ಏರುಪೇರಿದ್ದರೆ ನೇರವಾಗಿ ಕೆಲವೊಂದು ನಿಬಂಧನೆಗೆ ಒಳಪಟ್ಟು ಐಎಸ್‌ಐನಿಂದ ಪರಿಹಾರ ಪಡೆಯುವ ಸಾಧ್ಯತೆ ಇದೆ. 

ಬಳಕೆದಾರರು ಖರೀದಿಸುವ ಸರಕುಗಳು ಮತ್ತು ಸೇವೆಗಳಿಗೆ ಅಂತರರಾಷ್ಟ್ರೀಯ ಮಾನಕ ನೀಡುವ ಸಲುವಾಗಿ ಇಂಟರ್‌ನ್ಯಾಷನಲ್‌  ಆರ್ಗನೈಸೇಷನ್‌   ಫಾರ್‌ ಸ್ಟಾಂಡಡೈìಸೇಷನ್‌ ಐಎಸ್‌ಒ ಸ್ಥಾಪನೆಗೊಂಡಿದೆ. 

☀.ಇಂಗಾಲದ ಚಕ್ರ: (Carbon Cycle)

☀.ಇಂಗಾಲದ ಚಕ್ರ:
(Carbon Cycle)
━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)


 ಇದೊಂದು ಜೀವರಾಸಾಯನಿಕ ಚಕ್ರವಾಗಿದ್ದು, ಇಂಗಾಲವು (ಸಾಮಾನ್ಯವಾಗಿ ಇಂಗಾಲದ ಡೈಆಕ್ಸೈಡ್) ಭೂಮಿಯ ವಾತಾವರಣದಲ್ಲಿ ವಿವಿಧ ರೂಪದಲ್ಲಿ ಪರಿವರ್ತನೆಗೊಳ್ಳುವ ಸರಣಿ ಪ್ರಕ್ರಿಯೆ.

ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ ಅನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಸಸ್ಯಗಳು ಹೀರಿಕೊಳ್ಳುತ್ತವೆ. ಪ್ರಾಣಿಗಳು ಉಸಿರಾಟದ ಮೂಲಕ ಇಂಗಾಲದ ಡೈಆಕ್ಸೈಡ್‌ ಅನ್ನು ವಾತಾವರಣಕ್ಕೆ ಬಿಡುತ್ತವೆ. ಜೀವಕಳೆದುಕೊಂಡ ಪ್ರಾಣಿ ಮತ್ತು ಸಸ್ಯಗಳು ಇಂಗಾಲದ ರೂಪದಲ್ಲಿ ಪಳೆಯುಳಿಕೆ ಇಂಧನಗಳಾಗಿ ಮತ್ತೆ ವಾತಾವರಣ ಸೇರುತ್ತವೆ. ಈ ಇಂಧನಗಳನ್ನು ಉರಿಸುವುದರಿಂದ ಮತ್ತೆ ಇಂಗಾಲ ಉತ್ಪತ್ತಿಯಾಗಿ ವಾತಾವರಣ ಸೇರುತ್ತದೆ.... ಹೀಗೆ ಈ ಚಕ್ರ ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ.

Monday 2 October 2017

☀️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ ಮಾದರಿ ಪ್ರಶ್ನೆಗಳು: Part-2. ಸಾಮಾನ್ಯ ಅಧ್ಯಯನ : I (ರಾಷ್ಟ್ರೀಯ & ಅಂತರರಾಷ್ಟ್ರೀಯ) (KAS Mains Exam Module Questions for General Studies)

☀️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಯ ತಯಾರಿಗಾಗಿ ಮಾದರಿ ಪ್ರಶ್ನೆಗಳು: Part-2.  ಸಾಮಾನ್ಯ ಅಧ್ಯಯನ : I (ರಾಷ್ಟ್ರೀಯ & ಅಂತರರಾಷ್ಟ್ರೀಯ)
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ : ಪತ್ರಿಕೆ I
(General Studies :Paper I)


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ ಸ್ಪರ್ಧಾಲೋಕದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)


ಮುಂದುವರೆದ ಭಾಗ...


8. ಭಾರತದ ಪ್ರಾಥಮಿಕ ವಲಯವಾರು ಕೃಷಿ ಮತ್ತು ತತ್ಸಂಬಂಧಿತ ಕಸುಬುಗಳ ಮೇಲೆ ಅವಲಂಬಿತರ ಸಂಖ್ಯೆ ಇತರೇ ಆರ್ಥಿಕವಲಯ (ದ್ವಿತೀಯ & ತೃತೀಯ) ಗಳಿಗೆ ಹೋಲಿಸಿದ್ದಲ್ಲಿ ಅತೀ ಹೆಚ್ಚಾಗಿದ್ದರೂ, ಈ ವಲಯದಿಂದ ದೇಶದ GDP ಗೆ ನೀಡುವ ಕೊಡುಗೆ ಮಾತ್ರ ಗಣನೀಯವಾಗಿ ಕಡಿಮೆಯಾಗುತ್ತಿದೆ . ಏಕೆ? ಚರ್ಚಿಸಿ.
(250 ಶಬ್ದಗಳಲ್ಲಿ)



9. ದೇಶದೊಳಗೆ ದೊಡ್ಡ ಪ್ರಮಾಣದ ಹೂಡಿಕೆಯನ್ನು ಬಯಸುತ್ತಿರುವ ಭಾರತವು ಚೀನಾದ ಉತ್ಪನ್ನಗಳ ಆಮದಿನ ಮೇಲೆ ವಿಧಿಸಲಾಗಿರುವ ಹಾಗೂ ವಿಧಿಸಲಾಗುತ್ತಿರುವ ನಿರ್ಬಂಧಗಳಿಂದ ದೇಶದ ಆರ್ಥಿಕತೆಯ ಮೇಲೆ ಯಾವ ವ್ಯತಿರಿಕ್ತ ಪರಿಣಾಮಗಳನ್ನು ಬೀರಬಲ್ಲುದು? ದೇಶದ ಭದ್ರತಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅವಲೋಕಿಸಿ. (250 ಶಬ್ದಗಳಲ್ಲಿ)



10. ಭಾರತಕ್ಕೆ ಎನ್‍ಎಸ್‍ಜಿ ಸದಸ್ಯತ್ವ ದೊರೆಯುವುದರಲ್ಲಿ ಹಿನ್ನಡೆಯುಂಟಾಗಲು ಕಾರಣಗಳೇನು?  ಹಾಗೂ  ಎನ್‍ಎಸ್‍ಜಿ ಸದಸ್ಯತ್ವದಿಂದ ಭಾರತಕ್ಕೇನು ಲಾಭ? ಚರ್ಚಿಸಿ.(250 ಶಬ್ದಗಳಲ್ಲಿ)



11. ಇತ್ತೀಚೆಗೆ ಹೊಸದಾಗಿ ರಚನೆಗೊಂಡ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಯ ಕಾರ್ಯವೈಖರಿ ಬಗ್ಗೆ ಬರೆಯಿರಿ. (250 ಶಬ್ದಗಳಲ್ಲಿ)



12. ರಾಜ್ಯದ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿಯೂ ಭೀಕರ ಬರಗಾಲದ ಕರಾಳ ಛಾಯೆ ಕವಿದಿದೆ. ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಕರ್ನಾಟಕವನ್ನು ಕಾಡುತ್ತಿರುವ ಬರಗಾಲ ಸನ್ನಿವೇಶಕ್ಕೆ ಕಾರಣಗಳೇನು? ಇಂತಹ ಅನೈಚ್ಛಿಕ ಬರಗಾಲವನ್ನು ಹೋಗಲಾಡಿಸಲು ನೀವು ಕೈಗೊಳ್ಳಬಹುದಾದ ಶಾಶ್ವತ ಕ್ರಮಗಳೇನು? (250 ಶಬ್ದಗಳಲ್ಲಿ)



13. ದೇಶದ ಪ್ರಸ್ತುತ ಜಿಡಿಪಿ ದರದ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯ ಜಾರಿ ಮತ್ತು ನೋಟುಗಳ ರದ್ದತಿಯ ಪ್ರಭಾವ ಕುರಿತು ವಿಶ್ಲೇಷಿಸಿ. (250 ಶಬ್ದಗಳಲ್ಲಿ)



14. ಪ್ರಸ್ತುತ ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೃಷಿಸಾಲ ಮನ್ನಾದಂತಹ ಸೌಲಭ್ಯ ಅಗತ್ಯವಿದೆ. ಆದಾಗ್ಯೂ, ಒಂದು ಸಲ ಮಂಜೂರು ಮಾಡಿದಾಕ್ಷಣ ಅದನ್ನು ಭವಿಷ್ಯದಲ್ಲೂ ಮುಂದುವರಿಸಲಾಗದು. ಹಾಗಿದ್ದಲ್ಲಿ ನೀವು ಕೃಷಿಕರ ದುರವಸ್ಥೆಯನ್ನು ನಿವಾರಿಸಬಲ್ಲ ಯಾವ್ಯಾವ ಮಾರ್ಗೋಪಾಯಗಳನ್ನು ಸೂಚಿಸಬಲ್ಲಿರಿ? (250 ಶಬ್ದಗಳಲ್ಲಿ)



15. ಇತ್ತೀಚೆಗೆ ರೋಹಿಂಗ್ಯಾ ಸಮುದಾಯದ ಜನರನ್ನು ಅಕ್ರಮ ವಲಸಿಗರು ಎಂದು ಭಾರತ ಪರಿಗಣಿಸಿ ಗಡಿಪಾರು ಮಾಡುವ ಭಾರತ ಸರ್ಕಾರದ ಯೋಜನೆಯನ್ನು ವಿಶ್ವಸಂಸ್ಥೆ ಟೀಕಿಸಿದೆ. ಆದರೆ ದೇಶದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ರೋಹಿಂಗ್ಯಾ ಸಮುದಾಯಕ್ಕೆ ಸೇರಿದ ನಿರಾಶ್ರಿತರಿಗೆ ಆಶ್ರಯ ನೀಡುವ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಪರಿಗಣಿಸುತ್ತಾ ನೀವು ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ ? (250 ಶಬ್ದಗಳಲ್ಲಿ)



16. ಇತ್ತೀಚೆಗೆ ಕೃಷಿಕರು ಕೃಷಿಕಾರ್ಯವನ್ನು ಕೈಬಿಟ್ಟು, ಕೃಷಿಯೇತರ ಗೌಣ ವಲಯಗಳಲ್ಲಿ ಉದ್ಯೋಗ ಅರಸಲು ತೆರಳುತ್ತಿರುವುದಕ್ಕೆ ಕಾರಣಗಳೇನು? ಕೃಷಿ ವಲಯದಲ್ಲೇ ಕೃಷಿಕರು ಮುಂದುವರೆಸಲು ಕೈಗೊಳ್ಳಬಹುದಾದ ಕ್ರಮಗಳನ್ನು ಸೂಚಿಸಿ. (250 ಶಬ್ದಗಳಲ್ಲಿ)



17. ಯಾವಾಗಲೂ ಜಾಗತಿಕ ಸಮಸ್ಯೆಗಳು ಎದುರಾದಾಗ ಮುಂಚೂಣಿಯಲ್ಲಿರುವ ರಾಷ್ಟ್ರವಾದ  ಅಮೆರಿಕವು ಪ್ಯಾರಿಸ್‌ ಒಪ್ಪಂದದಿಂದ ಹಿಂದೆ ಸರಿಯುವ ಘೋಷಣೆ ಮಾಡಿದ್ದು, ತಾಪಮಾನ ಏರಿಕೆ ಸಂಬಂಧ ಜಗತ್ತಿನ ರಾಷ್ಟ್ರಗಳ ಜಂಟಿ ಪ್ರಯತ್ನಕ್ಕೆ ಹಿನ್ನೆಡೆಯಾಗಬಹುದೇ? ಇದಕ್ಕೆ ಪರಿಹಾರಗಳನ್ನು ಸೂಚಿಸಿ. (250 ಶಬ್ದಗಳಲ್ಲಿ)



18. ಭಾರತದ ಆರ್ಥಿಕತೆಯ ಮೇಲೆ ನೋಟು ರದ್ದತಿಯ ಪರಿಣಾಮ . (250 ಶಬ್ದಗಳಲ್ಲಿ)


19.  ನೋಟು ರದ್ದತಿಯಿಂದ ಜನಸಾಮಾನ್ಯರ ಮೇಲೆ ಪರಿಣಾಮ. (250 ಶಬ್ದಗಳಲ್ಲಿ)



20.  ಇಂದು ಕೃಷಿ ಪ್ರಧಾನ ರಾಷ್ಟ್ರವಾಗಿ ಬೆಳೆಯಬೇಕಿದ್ದ ಭಾರತವು ಬದಲಾಗಿ ಸೇವಾ ಕ್ಷೇತ್ರದ ಬೆಳವಣಿಗೆಯಿಂದ ಅಭಿವೃದ್ಧಿಯನ್ನು ಸಾಧಿಸುತ್ತಿದೆ ಎನ್ನಬಹುದೆ ? ಇಂತಹ ಬದಲಾವಣೆಗೆ ಕಾರಣೀಭೂತವಾದ ಅಂಶಗಳಾವವು? ಚರ್ಚಿಸಿ.
(200 ಶಬ್ದಗಳಲ್ಲಿ)

..ಮುಂದುವರೆಯುವುದು. 

Thursday 28 September 2017

☀ ಐಎಎಸ್ (ಯುಪಿಎಸ್ಸಿ) 2018ರ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ ಪ್ರಕಟ : (UPSC Released date for Civil Services Preliminary Exam 2018.)

☀ ಐಎಎಸ್ (ಯುಪಿಎಸ್ಸಿ) 2018ರ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ ಪ್ರಕಟ :
(UPSC Released date for Civil Services Preliminary Exam 2018.) ━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಯುಪಿಎಸ್ಸಿ / ಐಎಎಸ್ ಪರೀಕ್ಷಾ ತಯಾರಿ
(IAS Examination preparation)

★ ಐಎಎಸ್ ಪ್ರಿಲಿಮ್ಸ್ ಪರೀಕ್ಷಾ ತಯಾರಿ
(IAS Prelims Exam Preparation)



ಕೇಂದ್ರ ಲೋಕಸೇವಾ ಆಯೋಗದ (Union Public Service Commission (UPSC)) 2018 ರ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆ ಜೂನ್ 03 ರದು ನಡೆಯಲಿದೆ.

2014 ರಿಂದ 2016 ರವರೆಗೆ ಆಗಸ್ಟ್ ನಲ್ಲಿ ಪ್ರಾಥಮಿಕ ಪರೀಕ್ಷೆಗಳು ನಡೆದಿದ್ದವು. ಆದರೆ 2018 ರಲ್ಲಿ ಜೂನ್ 03 ರಂದು ನಡೆಸಲು ನಿರ್ಧರಿಸಿರುವುದಾಗಿ ಯುಪಿಎಸ್ಸಿ ತಿಳಿಸಿದೆ.

ಪರೀಕ್ಷೆಯ ಅಧಿಸೂಚನೆಯನ್ನು ಫೆಬ್ರವರಿ 7 ರಂದು ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಸಲು ಮಾರ್ಚ್ 6 ಕೊನೆಯ ದಿನವಾಗಿರುತ್ತದೆ. 2017ರ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶವು ಜುಲೈ 27 ರಂದು ಪ್ರಕಟಿಸಲಾಗಿದೆ.



●.ಪ್ರಿಲಿಮ್ಸ್ ಪರೀಕ್ಷೆ ದಿನಾಂಕ ಪ್ರಕಟ
━━━━━━━━━━━━━━━━━━━

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಸೇರಿದಂತೆ ಉನ್ನತ ಹುದ್ದೆಗಳಿಗಾಗಿ ಪ್ರತಿವರ್ಷ ಯುಪಿಎಸ್‌‌ಸಿ ಪರೀಕ್ಷೆ ನಡೆಸುತ್ತದೆ. ಮೂರು ಹಂತಗಳಲ್ಲಿ ಈ ಪರೀಕ್ಷೆ ಇದೆ.

ಪ್ರಿಲಿಮ್ಸ್, ಮೇನ್ಸ್‌ ಹಾಗೂ ಇಂಟರ್‌ವ್ಯೂ ಸೇರಿ ಮೂರು ಹಂತಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.



●.ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಶೈಕ್ಷಣಿಕ ಮತ್ತು ಇತರೆ ಅರ್ಹತೆ
━━━━━━━━━━━━━━━━━━━━━━━━━━━━━━━━━━━━
ಪದವಿ ಪರೀಕ್ಷೆಯ ಅಂತಿಮ ಹಂತದಲ್ಲಿರುವವರೂ ಕೂಡ ಪ್ರಿಲಿಮ್ಸ್‌ ಬರೆಯಬಹುದು.ಪ್ರಿಲಿಮ್ಸ್‌ನಲ್ಲಿ ತೇರ್ಗಡೆಯಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದರೆ ಆಗ ಪದವಿ ತೇರ್ಗಡೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು.

ಯುಪಿಎಸ್‌ಸಿಯ ದೃಷ್ಟಿಯಲ್ಲಿ ವಿ.ವಿ.ಗಳ ಪರೀಕ್ಷೆಗೆ ತತ್ಸಮಾನ ಎನಿಸುವ ಬೇರೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳೂ ಐಎಎಸ್‌ ಪರೀಕ್ಷೆಗೆ ಅರ್ಹರಾಗುತ್ತಾರೆ.

ತಾಂತ್ರಿಕ ಪದವೀಧರರು: ಬಿಇ., ಎಂ.ಬಿ.ಬಿಎಸ್‌ ಪದವೀಧರರು ಐಎಎಸ್‌ ಬರೆಯಲು ಅರ್ಹರು. ಯಾವುದೇ ಒಂದು ವಿಷಯದಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರುವುದು ಕಡ್ಡಾಯ. ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರೆ ಅಂತಿಮ ವರ್ಷದ ಪರೀಕ್ಷೆ ಪಾಸಾಗಿರಬೇಕು, ಇಂಟರ್ನ್‌ಶಿಪ್‌ ಮುಗಿಸಿರದಿದ್ದರೂ ಪರೀಕ್ಷೆ ತೆಗೆದುಕೊಳ್ಳಬಹುದು.

ಸಂದರ್ಶನದ ವೇಳೆಗೆ ಅವರು ಅಂತಿಮ ಪರೀಕ್ಷೆಯೊಂದಿಗೆ ಇಂಟರ್ನ್‌ಶಿಪ್‌ ಕೂಡ ತೇರ್ಗಡೆಯಾಗಿದ್ದು ಸಂಬಂಧಿಸಿದ ಪ್ರಮಾಣಪತ್ರ ಹೊಂದಿರಬೇಕು.

ಕರ್ನಾಟಕದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ಮೂಲಕ ಡಿಗ್ರಿ ಮಾಡಿರುವವರು ಈ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು.



●.ಶಿಕ್ಷಣದ ನಂತರ/ಜತೆಗೆ ಹೊಂದಿರಬೇಕಾದ ಇತರೆ ಅರ್ಹತೆಗಳು
━━━━━━━━━━━━━━━━━━━━━━━━━━━━━━━━━━

ಐಎಎಸ್‌ ಮತ್ತು ಐಪಿಎಸ್‌ ಹುದ್ದೆಗಳಿಗೆ ಭಾರತದ ನಾಗರಿಕರಿಗೆ ಮಾತ್ರ ಪ್ರವೇಶಾವಕಾಶ.
ಯುಪಿಎಸ್‌ಸಿ ನಡೆಸುವ ಬೇರೆ ಪರೀಕ್ಷೆಗಳಿಗೆ ಭಾರತದ ನಾಗರಿಕರೊಡನೆ ನೇಪಾಳ, ಭೂತಾನ್‌ ಪ್ರಜೆಗಳೂ ಭಾಗ ವಹಿಸಬಹುದು.

ಜನವರಿ 1, 1962ಕ್ಕಿಂತ ಮೊದಲೇ ಭಾರತದಲ್ಲಿ ನೆಲೆಸಲು ಆಶ್ರಯ ಕೋರಿಬಂದಿರುವ ಟಿಬೆಟ್ಟಿನವರು ಸಹ ಇದೇ ರೀತಿ ಅರ್ಹರಾಗಿರುತ್ತಾರೆ.



●.ವಯೋಮಿತಿ
━━━━━━━━━
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ಆರು ಬಾರಿ ಹಾಗೂ ಒಬಿಸಿ ಅಭ್ಯರ್ಥಿಗಳಿಗಾಗಿ ಗರಿಷ್ಠ ಒಂಬತ್ತು ಬಾರಿ ಪರೀಕ್ಷೆ ಬರೆಯಲು ಅನುಮತಿಯಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಎಷ್ಟು ಬಾರಿಯಾದರೂ ಪರೀಕ್ಷೆಗೆ ಹಾಜರಾಗಬಹುದು.

ಪರೀಕ್ಷೆಗೆ ಹಾಜರಾಗಲು ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ/ಪಂಗಡದವರಿಗೆ 37, ಒಬಿಸಿಗಾಗಿ 35 ಹಾಗೂ ಇತರೆ ವರ್ಗದವರಿಗೆ 32. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯು ಆ ವರ್ಷ ಆಗಸ್ಟ್‌ 1ರಂದು 32ರ ವಯಸ್ಸು ದಾಟಿರಬಾರದು. ಕನಿಷ್ಠ ವಯೋಮಿತಿ 21 ವರ್ಷ

(Courtesy : careerindia)

Wednesday 27 September 2017

☀ ಕೆಎಎಸ್ ಮುಖ್ಯ ಪರೀಕ್ಷೆ: ಲಿಖಿತ ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ವಿವರಗಳು : (KAS Mains Exam: Details of Question Papers and Written Exam )

☀ ಕೆಎಎಸ್ ಮುಖ್ಯ ಪರೀಕ್ಷೆ: ಲಿಖಿತ ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ವಿವರಗಳು :
(KAS Mains Exam: Details of Question Papers and Written Exam )
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷೆ ವಿವರ
(Kas Mains Exam Details)


ಇತ್ತೀಚೆಗೆ 2015 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಸೂಚನೆ ಹೊರಡಿಸಿದೆ.

ಪ್ರಿಲಿಮ್ಸ್ ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗಿದ್ದು, ಅಕ್ಟೋಬರ್ 16 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ಮುಖ್ಯ ಪರೀಕ್ಷೆಯು 2017 ರ ನವೆಂಬರ್ ತಿಂಗಳ ಕೊನೆಯ ವಾರ ಹಾಗೂ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ವೇಳಾ ಪಟ್ಟಿಯನ್ನು ಶೀಘ್ರದಲ್ಲೇ ಕೆಪಿಎಸ್ಸಿ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.



●.ಕೆಎಎಸ್ ಮುಖ್ಯ ಪರೀಕ್ಷೆ
━━━━━━━━━━━━━━━

✧.ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಗೆ ನಡೆಯುವ ಮುಖ್ಯ ಪರೀಕ್ಷೆಯು ವಿವರಣಾತ್ಮಕ ಮಾದರಿಯಲ್ಲಿದ್ದು, ಎಲ್ಲಾ ಪತ್ರಿಕೆಗಳು ಕಡ್ಡಾಯವಾಗಿರುತ್ತದೆ.

✧.ಮುಖ್ಯ ಪರೀಕ್ಷೆಯು ಅರ್ಹತಾದಾಯಕ ಮತ್ತು ಕಡ್ಡಾಯ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. 300 ಅಂಕಗಳ ಅರ್ಹತಾದಾಯಕ ಪತ್ರಿಕೆಗಳು ಮತ್ತು 1750 ಅಂಕಗಳ ಕಡ್ಡಾಯ ಪತ್ರಿಕೆಗಳಿಗೆ ಅಭ್ಯರ್ಥಿಯು ಉತ್ತರಿಸಬೇಕಾಗುತ್ತದೆ.


✧.ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳಲ್ಲಿ ಪಡೆಎದ ಅಂಕಗಳು ಅರ್ಹತಾದಾಯಕ ಸ್ವರೂಪದ್ದಾಗಿರುತ್ತದೆ. ಅರ್ಹತೆ ಪಡೆಯಲು ಈ ಪತ್ರಿಯೊಂದು ಪತ್ರಿಕೆಯಲ್ಲಿ ಕನಿಷ್ಠ ಶೇ.35 ಅಂಕಗಳು, ಅಂದರೆ 52.5 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

✧.ಈ ಎರಡೂ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಅಭ್ಯರ್ಥಿಗಳ ಆಯ್ಕೆಯ ಅರ್ಹತೆಯನ್ನು ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ.


●.ಕೆಎಎಸ್ ಮುಖ್ಯ ಪರೀಕ್ಷೆಯ ವಿವರಗಳು
━━━━━━━━━━━━━━━━━━━━━━━

✧.ಈ ಎರಡೂ ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಇತರೆ ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗುವುದಿಲ್ಲ ಹಾಗೂ ಇಂತಹ ಅಭ್ಯರ್ಥಿಗಳ ಇತರೆ ವಿಷಯಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ.

✧.ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಪತ್ರಿಕೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆ ಎಸ್ ಎಸ್ ಎಲ್ ಸಿ ಯ ಪ್ರಥಮ ಭಾಷೆಯ ಮಟ್ಟದ್ದಾಗಿರುತ್ತದೆ.

✧.ಮುಖ್ಯ ಪತ್ರಿಕೆಯ ಇನ್ನಿತರ ವಿಷಯಗಳ ಪತ್ರಿಕೆಗಳು ಪದವಿ ಮಟ್ಟದ್ದಾಗಿರುತ್ತದೆ.

✧.ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಮುದ್ರಿಸಲಾಗಿರುತ್ತದೆ. ಅಭ್ಯರ್ಥಿಗಳು ಪತ್ರಿಕೆಯ ಉತ್ತರಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಆಂಗ್ಲಭಾಷಾ ಮಾಧ್ಯಮದಲ್ಲಿ ಉತ್ತರಿಸತಕ್ಕದ್ದು. (ಅರ್ಜಿಯಲ್ಲಿ ಆಯ್ಕೆ ಮಾಡಿಕೊಂಡ ಭಾಷೆಯಲ್ಲೇ ಉತ್ತರಿಸತಕ್ಕದ್ದು)

✧.ಕನ್ನಡ ಭಾಷೆಯಲ್ಲಿರುವ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರು ಅಸ್ಪಷ್ಟತೆ ಇದ್ದಲ್ಲಿ ಆಂಗ್ಲ ಭಾಷೆಯಲ್ಲಿರುವ ಪ್ರಶ್ನೆಗಳನ್ನು ನೋಡುವುದು. ಎಲ್ಲಾ ವಿಷಯಗಳಲ್ಲಿ ಆಂಗ್ಲ ಭಾಷೆಯ ಪ್ರಶ್ನೆಗಳು ಅಂತಿಮವಾಗಿರುತ್ತದೆ.

✧.ಆಯ್ಕೆ ಮಾಡಿಕೊಂಡ ಮಾಧ್ಯಮವನ್ನು ಬದಲಾಯಿಸಿದಲ್ಲಿ ಅಥವಾ ಅರ್ಧ ಕನ್ನಡ ಹಾಗೂ ಅರ್ಧ ಆಂಗ್ಲ ಮಾಧ್ಯಮದಲ್ಲಿ ಉತ್ತರಿಸಿದಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಗೊಳಿಸುವುದಿಲ್ಲ.
ಮುಖ್ಯ ಪರೀಕ್ಷೆಯನ್ನು ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.

(Courtesy : careerindia)

ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು: (ಸಾಮಾನ್ಯ ಅಧ್ಯಯನ : II ಸಂವಿಧಾನ) Part-1. (KAS Mains Exam Module Questions for General Studies)

☀️ ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು:  (ಸಾಮಾನ್ಯ ಅಧ್ಯಯನ : II ಸಂವಿಧಾನ) Part-1.
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ : ಪತ್ರಿಕೆ II (ಸಂವಿಧಾನ)
(General Studies :Paper II (Indian Constitution))


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ ಸ್ಪರ್ಧಾಲೋಕದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)



1. "ಲೋಕಸ್ ಸ್ಟಾಂಡಿ ತತ್ವ" ಎಂದರೇನು? ಭಾರತದ ನ್ಯಾಯಾಂಗ ವ್ಯವಸ್ಥೆಯ ಕ್ರಿಯಾಶೀಲತೆಯ ವ್ಯಾಪ್ತಿಯನ್ನು ನಿರ್ಧರಿಸುವಲ್ಲಿ ಇದರ ಪಾತ್ರವೇನು?
(250 ಶಬ್ದಗಳಲ್ಲಿ)


2. ಅಮೇರಿಕ ಸಂಯುಕ್ತ ಸಂಸ್ಥಾನದ ನ್ಯಾಯಾಲಯಗಳಿಗೆ ಇರುವಷ್ಟು 'ನ್ಯಾಯಿಕ ವಿಮರ್ಶೆ'ಯ ವ್ಯಾಪ್ತಿಯನ್ನು ಭಾರತದ ಸಂವಿಧಾನವು ನಮ್ಮ ನ್ಯಾಯಾಲಯಗಳಿಗೆ ನೀಡಿಲ್ಲ ಎಂಬ ಅಭಿಪ್ರಾಯವನ್ನು ನೀವು ಒಪ್ಪುವಿರಾ? ಭಾರತದಲ್ಲಿ ಪ್ರಸ್ತುತ ನ್ಯಾಯಿಕ ವಿಮರ್ಶೆಯ ಕ್ರಿಯಾಶೀಲತೆಯ ವ್ಯಾಪ್ತಿಯೊಂದಿಗೆ ಚರ್ಚಿಸಿ.
(250 ಶಬ್ದಗಳಲ್ಲಿ)


3. ಸಂವಿಧಾನಾತ್ಮಕವಾದ 'ರಾಜ್ಯಪಾಲರ ಹುದ್ದೆ'ಯು ಇಂದಿಗೂ ಹಲವು ವಿವಾದಗಳ ಗೂಡಾಗಿದ್ದು, ಈ ಎಲ್ಲಾ ವಿವಾದಗಳಿಂದ ಮುಕ್ತಗೊಳಿಸಿ ಅದರ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯಪಾಲರ ನೇಮಕಾತಿಗೆ ಸಂಬಂಧಿಸಿದ ಸರ್ಕಾರಿಯಾ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದು ಇಂದಿನ ಅಗತ್ಯವಾಗಿದೆ ಎನ್ನಬಹುದೇ? ರಾಜ್ಯಪಾಲರ ನೇಮಕಾತಿಗೆ ಸಂಬಂಧಿಸಿದ ಸರ್ಕಾರಿಯಾ ಆಯೋಗದ ಶಿಫಾರಸ್ಸುಗಳೊಂದಿಗೆ ವಿಮರ್ಶಿಸಿ.  
(250 ಶಬ್ದಗಳಲ್ಲಿ)


4. 'ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ರಾಜ್ಯನಿರ್ದೇಶಕ ತತ್ವಗಳ ನಡುವಣ ಸಮತೋಲನದ ಮೇಲೆ ನಿಂತಿದೆ'.. ಎಂಬ ಅಭಿಪ್ರಾಯವನ್ನು ಮಿನರ್ವ್ ಮಿಲ್ಸ್ ಪ್ರಕರಣದ ಉದಾಹರಣೆಯೊಂದಿಗೆ ವಿಶದಪಡಿಸಿ.
(250 ಶಬ್ದಗಳಲ್ಲಿ)


5. ಸಂವಿಧಾನದ ತಿದ್ದುಪಡಿಗಳು ನ್ಯಾಯಿಕ ವಿಮರ್ಶೆಗೊಳಪಟ್ಟಿವೆಯೇ? ಸ್ಪಷ್ಟೀಕರಿಸಿ.
(250 ಶಬ್ದಗಳಲ್ಲಿ)


6. ಕೆಲವು ರಾಜಕೀಯ ತಜ್ಞರು ರಾಷ್ಟ್ರಾಧ್ಯಕ್ಷರನ್ನು 'ರಬ್ಬರ್ ಸ್ಟಾಂಪ್' ಗೆ ಹೋಲಿಸಿದ್ದಾರೆ. ಈ ಹೋಲಿಕೆ ಸಮಂಜಸವಾದುದದೇ? ರಾಷ್ಟ್ರಾಧ್ಯಕ್ಷರ ವಿಶೇಷ ಅಧಿಕಾರಗಳೊಂದಿಗೆ ಚರ್ಚಿಸಿ.
(250 ಶಬ್ದಗಳಲ್ಲಿ)


7. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯ ನಡುವಣ ಸಂವಿಧಾನಿಕ ಸಂಬಂಧದ ಕುರಿತು ಚರ್ಚಿಸಿ.
To be Continued...



☀️ ಕೆಎಎಸ್ ಮುಖ್ಯ ಪರೀಕ್ಷೆ : ಸ್ಪರ್ಧಾರ್ಥಿಗಳು ಗಮನಿಸಬೇಕಾದ ಅಂಶಗಳು : (KAS Mains Exam : Aspirants Should Know)

☀️ ಕೆಎಎಸ್ ಮುಖ್ಯ ಪರೀಕ್ಷೆ : ಸ್ಪರ್ಧಾರ್ಥಿಗಳು ಗಮನಿಸಬೇಕಾದ ಅಂಶಗಳು :
(KAS Mains Exam : Aspirants Should Know)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷೆ ತಯಾರಿ
(Kas mains exam preparation)


1. ಕಡ್ಡಾಯ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾದಾಯಕ ಸ್ವರೂಪದ್ದಾಗಿರುತ್ತವೆ. ಅರ್ಹತೆ ಪಡೆಯಲು ಈ ಪ್ರತಿಯೊಂದು ಪತ್ರಿಕೆಯಲ್ಲಿ ಕನಿಷ್ಠ ಶೇಕಡ 35 (52.5) ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಎರಡೂ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಅಭ್ಯರ್ಥಿಗಳ ಆಯ್ಕೆಯ ಅರ್ಹತೆಯನ್ನು ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ. ಈ ಎರಡು ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಇತರೆ ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗುವುದಿಲ್ಲ ಹಾಗೂ ಇಂತಹ ಅಭ್ಯರ್ಥಿಗಳ ಇತರೆ ವಿಷಯಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸುವುದಿಲ್ಲ.

2.ಮುಖ್ಯ ಪರೀಕ್ಷೆಯು ವಿವರಣಾತ್ಮಕ ಮಾದರಿಯಲ್ಲಿರುತ್ತದೆ ಮತ್ತು ಎಲ್ಲಾ ಪತ್ರಿಕೆಗಳು ಕಡ್ಡಾಯವಾಗಿರುತ್ತವೆ.

3.ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಮುದ್ರಿಸಲಾಗಿರುತ್ತದೆ. ಅಭ್ಯರ್ಥಿಗಳು ಪತ್ರಿಕೆಯ ಉತ್ತರಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಆಂಗ್ಲಭಾಷಾ ಮಾಧ್ಯಮದಲ್ಲಿಯೇ ಉತ್ತರಿಸತಕ್ಕದ್ದು.

4.ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಆಂಗ್ಲಭಾಷೆ ಪತ್ರಿಕೆಗಳನ್ನು ಹೊರತುಪಡಿಸಿ ಉಳಿದ ಪತ್ರಿಕೆಗಳು ಪದವಿ ಮಟ್ಟದ್ದಾಗಿರುತ್ತದೆ. ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಆಂಗ್ಲಭಾಷೆ ಪತ್ರಿಕೆಗಳು ಎಸ್.ಎಸ್.ಎಲ್.ಸಿಯ ಪ್ರಥಮ ಭಾಷೆಯ ಮಟ್ಟದ್ದಾಗಿರುತ್ತದೆ.

5.ಎಲ್ಲಾ 07 ಪತ್ರಿಕೆಗಳು ಕಡ್ಡಾಯ ಪತ್ರಿಕೆಗಳಾಗಿರುತ್ತವೆ. ಪತ್ರಿಕೆ- (02) ರಿಂದ (05)ರವರೆಗಿನ ಪತ್ರಿಕೆಗಳು ಮೂರು ಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿ ಪತ್ರಿಕೆಯು ಗರಿಷ್ಠ 250 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು 03 ಗಂಟೆಗಳ ಅವಧಿಯದ್ದಾಗಿರುತ್ತದೆ.
ಲಿಖಿತ ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಅಂತಿಮ ಆಯ್ಕೆಪಟ್ಟಿಯೊಂದಿಗೆ ಪ್ರಕಟಿಸಲಾಗುವುದು. @spardhaloka

Friday 11 August 2017

☀ ಕೆಎಎಸ್‌ ಪ್ರಿಲಿಮ್ಸ್‌-2015, ಬರೆಯುವ ಮುನ್ನ ತಿಳಿದಿರಬೇಕಾದ ಸಂಗತಿಗಳು: ( Before appearing KAS -2015 Prelims, should know)

☀ ಕೆಎಎಸ್‌ ಪ್ರಿಲಿಮ್ಸ್‌-2015, ಬರೆಯುವ ಮುನ್ನ ತಿಳಿದಿರಬೇಕಾದ ಸಂಗತಿಗಳು:
( Before appearing KAS -2015 Prelims, should know)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ಕೆಎಎಸ್‌ ಪ್ರಿಲಿಮ್ಸ್‌ (ಪೂರ್ವಭಾವಿ ಪರೀಕ್ಷೆ)-2015
(KAS -2015 Prelims)

★ ಕೆಎಎಸ್ ತಯಾರಿ
(Preparation for KAS Exams)


•►  ಕರ್ನಾಟಕ ಲೋಕಸೇವಾ ಆಯೋಗ ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ ನೇಮಕಕ್ಕೆ ಆಗಸ್ಟ್‌ 20 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆ ಬರೆಯುವವರಿಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಈಗಾಗಲೇ ನಿಮಗೆಲ್ಲಾ ತಿಳಿದಿರುವಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಯು 2015ನೇ ಸಾಲಿನ ಗ್ರೂಪ್‌ 'ಎ' ಹಾಗೂ ಗ್ರೂಪ್‌ 'ಬಿ'ಗೆ ಸೇರಿದ 426 ಗೆಜೆಟೆಡ್‌ ಪ್ರೊಬೆಷನರಿ ಅಧಿಕಾರಿಗಳ ನೇಮಕಕ್ಕಾಗಿ ಆಗಸ್ಟ್‌ 20 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.

•► 2011ರಲ್ಲಿ ಪರೀಕ್ಷೆ ನಡೆದಾಗ 1.25 ಲಕ್ಷ ಅಭ್ಯರ್ಥಿಗಳು ಅರ್ಜಿಸಲ್ಲಿಸಿದ್ದರು, 90 ಸಾವಿರ ಮಂದಿ ಪರೀಕ್ಷೆ ಬರೆದಿದ್ದರು. 2015ರಲ್ಲಿ ಒಟ್ಟು 3,07,272 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಸುಮಾರು 2.5 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಈ ಬಾರಿ ಎಷ್ಟು ಮಂದಿ ಅರ್ಜಿಸಲ್ಲಿಸಿದ್ದಾರೆ ಎಂಬುದನ್ನು ಇನ್ನೂ ಕೆಪಿಎಸ್‌ಸಿ ಬಹಿರಂಗ ಪಡಿಸಿಲ್ಲ. ಆದರೆ ಉದ್ಯೋಗ ಕ್ಷೇತ್ರದಲ್ಲಿನ ಬದಲಾವಣೆಗಳನ್ನು ಗಮನಿಸಿದರೆ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಈ ಪರೀಕ್ಷೆ ತೆಗೆದುಕೊಂಡಿರುವ ಸಾಧ್ಯತೆಗಳಿವೆ. ಹೀಗಾಗಿ ಸಹಜವಾಗಿಯೇ ಪೈಪೋಟಿ ಹೆಚ್ಚಿರಲಿದೆ. ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಲು ಪೂರ್ವಭಾವಿ ಪರೀಕ್ಷೆಯನ್ನು ಕಠಿಣಗೊಳಿಸುವ ಸಾಧ್ಯತೆಗಳಿವೆ.

•► ಈ ಹಿನ್ನೆಲೆಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಹೆಚ್ಚು ಪರಿಶ್ರಮ ಪಟ್ಟು ಅಭ್ಯಾಸ ನಡೆಸುವುದು ಅವಶ್ಯಕ. ಈ ಹಿಂದಿನ ಪೂರ್ವಭಾವಿ ಪರೀಕ್ಷೆಗಳನ್ನೇ ಗಮನದಲ್ಲಿಟ್ಟುಕೊಂಡು, 'ಹೀಗೇ ಪರೀಕ್ಷೆ ಇದ್ದರೆ, ಇಷ್ಟು ಓದಿದರೆ ಸಾಕು' ಎಂಬ ನಿರ್ಣಯಕ್ಕೆ ಬಾರದೆ, ಮುಖ್ಯ ಪರೀಕ್ಷೆಯನ್ನೂ ಗಮನದಲ್ಲಿಟ್ಟುಕೊಂಡು ಆಳವಾದ ಅಧ್ಯಯನ ಮಾಡುವುದು ಒಳ್ಳೆಯದು.

•► ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಬಹುತೇಕ ಅಭ್ಯರ್ಥಿಗಳು ಅಭ್ಯಾಸ ನಡೆಸುವಾಗ ಮತ್ತು ಪರೀಕ್ಷೆಯಲ್ಲಿ ಒತ್ತಡಕ್ಕೆ ಒಳಗಾಗಿ, ತಮಗೆ ಗೊತ್ತಿರುವ ವಿಷಯಗಳಲ್ಲಿಯೂ ತಪ್ಪು ಮಾಡಿ ಕೊನೆಗೆ ಪಶ್ಚಾತಾಪ ಪಡುತ್ತಿರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳು ಹೆಚ್ಚು ಮುತುವರ್ಜಿ ವಹಿಸಬೇಕಾದ ಕೆಲವು ವಿಷಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.

•► ಯಾವುದೇ ವಿಷಯವನ್ನು ಓದಿಕೊಳ್ಳುವ ಮೊದಲು ಇದು ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮದಲ್ಲಿ ಸೇರ್ಪಡೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ಬಗ್ಗೆ ಹೆಚ್ಚು ಸ್ಪಷ್ಟತೆ ಅವಶ್ಯವಿದ್ದಲ್ಲಿ ಈ ಹಿಂದೆ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಗಮನಿಸಿ.

•► ಪೂರ್ವಭಾವಿ ಪರೀಕ್ಷೆಯ ಪಠ್ಯಕ್ರಮವನ್ನು ಅಧಿಸೂಚನೆಯಲ್ಲಿಯೇ ನೀಡಲಾಗಿದೆ. ಇದನ್ನು ನೋಡಿಕೊಂಡು ಸೂಕ್ತ ಪುಸ್ತಕವನ್ನು ಆಯ್ಕೆ ಮಾಡಿಕೊಂಡು  ಪರೀಕ್ಷೆಗೆ ಓದಿ.

•► ಪರೀಕ್ಷೆ ವಸ್ತುನಿಷ್ಠ ಮಾದರಿಯಲ್ಲಿ ನಡೆಯುವುದರಿಂದ ವಿಷಯದ ಬಗ್ಗೆ ಸ್ಪಷ್ಟ ಗ್ರಹಿಕೆ ಅಗತ್ಯ. ಆದ್ದರಿಂದ ಓದುವಾಗಲೇ ಯಾವುದೇ ಗೊಂದಲವಿಲ್ಲದಂತೆ ವಿಷಯವನ್ನು ಮನದಟ್ಟು ಮಾಡಿಕೊಳ್ಳಿ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಭಿನ್ನ ರೀತಿಯಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುವ ಸಾಮರ್ಥ್ಯ‌ ನಿಮ್ಮದಾಗಿರಲಿ.

•► ನಿಮಗೆ ಈಗಾಗಲೇ ತಿಳಿದಿರುವಂತೆ ಪ್ರತಿಯೊಂದು ಪ್ರಶ್ನೆಗೂ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿರುತ್ತದೆ. ಇದರಲ್ಲಿ ನೀವು ಸ್ಪಷ್ಟವಾಗಿ ಒಂದು ಸರಿಯುತ್ತರವನ್ನು ಗುರುತಿಸಬೇಕು. ಒಂದು ವೇಳೆ ತಪ್ಪು ಉತ್ತರ ಗುರುತಿಸಿದಲ್ಲಿ ನಾಲ್ಕನೇ ಒಂದಂಶದಷ್ಟು (1/4)ಅಂಕವನ್ನು ಕಳೆಯಲಾಗುತ್ತದೆ. ಇದರ ಉದ್ದೇಶ ಏನೂ ತಯಾರಿ ನಡೆಸದೇ ಪರೀಕ್ಷೆಗೆ ಹಾಜರಾಗುವವರ ಸಂಖ್ಯೆಯನ್ನು ಮೊದಲ ಹಂತದಲ್ಲೇ ಕಡಿತಗೊಳಿಸುವುದು. ಋಣಾತ್ಮಕ ಮೌಲ್ಯಮಾಪನ ಸ್ಫರ್ಧಾತ್ಮಕ ಪರೀಕ್ಷೆಯ ಅವಿಭಾಜ್ಯ ಅಂಗವಾಗಿರುವುದರಿಂದ ಈ ಬಗ್ಗೆ ಆತಂಕ ಬೇಡ. ಆದರೆ ಎಚ್ಚರಿಕೆ ಇರಲಿ. ಉತ್ತರವನ್ನು ಬ್ಲೈಂಡ್‌ ಆಗಿ ಗೆಸ್‌ ಮಾಡುವ ಅನಿವಾರ್ಯತೆಯನ್ನು ನೀವೇ ಸೃಷ್ಟಿಸಿಕೊಳ್ಳಬೇಡಿ.

•► ಒಂದೇ ಪ್ರಶ್ನೆಗೆ ಒಂದಕ್ಕಿಂತ ಹೆಚ್ಚಿನ ಉತ್ತರಗಳನ್ನು ಗುರುತಿಸಿದ್ದಲ್ಲಿ , ಅದರಲ್ಲಿ ಒಂದು ಉತ್ತರವು ಸರಿಯಾಗಿದ್ದರೂ ಸಹ ಅದನ್ನು ತಪ್ಪು ಉತ್ತರವೆಂದು ಪರಿಗಣಿಸಿ, ಅಂಕವನ್ನು ಕಳೆಯಲಾಗುತ್ತದೆ ಎಂದು ಕೆಪಿಎಸ್‌ಸಿಯು ಈಗಾಗಲೇ ಪ್ರಕಟಿಸಿದೆ. ಹೀಗಾಗಿ ಉತ್ತರವನ್ನು ಖಚಿತಪಡಿಸಿಕೊಂಡೇ ಗುರುತಿಸಲು ಹೋಗಿ. ನೆನಪಿಡಿ, ಒಂದು ವೇಳೆ ಕೊಡಲಾಗಿರುವ ನಾಲ್ಕು ಉತ್ತರಗಳಲ್ಲಿ ಯಾವ ಉತ್ತರವನ್ನೂ ಗುರುತಿಸದಿದ್ದಲ್ಲಿ, ಅಂತಹ ಪ್ರಶ್ನೆಗೆ ಋಣಾತ್ಮಕ ಅಂಕಗಳನ್ನು ಕಳೆಯಲಾಗುವುದಿಲ್ಲ.

•► ಯಾವುದೇ ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಅತ್ಯಂತ ಮುಖ್ಯವಾದ ವಿಷಯ. ಪ್ರತಿ ಪತ್ರಿಕೆಯು 200 ಅಂಕಗಳನ್ನು ಒಳಗೊಂಡಿದ್ದು, 2ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಅಂದರೆ 200 ಅಂಕಗಳ ಪ್ರಶ್ನೆಗಳಿಗೆ ಉತ್ತರಿಸಲು ಕೇವಲ 120 ನಿಮಿಷ ಕಾಲಾವಕಾಶ ದೊರೆಯಲಿದೆ. ಹೀಗಾಗಿ ತೀರಾ ಕಷ್ಟವೆನಿಸುವ ಪ್ರಶ್ನೆಗಳನ್ನು ಮೊದಲೇ ಗುರುತಿಸಿಕೊಂಡು, ಅವುಗಳಿಗೆ ನೀಡುವ ಸಮಯವನ್ನು ಕಡಿಮೆ ಮಾಡಿ. (ಹೆಚ್ಚೆಂದರೆ 15ರಿಂದ 30 ಸೆಕೆಂಡ್‌ಗಳಲ್ಲಿ ತೀರ್ಮಾನ ತೆಗೆದುಕೊಂಡು, ಮುಂದಿನ ಪ್ರಶ್ನೆಗೆ ಉತ್ತರಿಸಲು ಹೋಗಿ)

•► ಸರಿಯಾದ ಉತ್ತರವನ್ನು ಗುರುತಿಸುವುದು ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯವಾದದು ಸರಿಯಾಗಿ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳುವುದು! ಪ್ರಶ್ನೆಯನ್ನು ಸರಿಯಾಗಿ ಓದಿ ಮನದಟ್ಟು ಮಾಡಿಕೊಂಡ ನಂತರವಷ್ಟೇ ಉತ್ತರ ಗುರುತಿಸಲು ಮುಂದಾಗಿ. ಕೆಲವೊಮ್ಮೆ, ನಿಮಗೆ ಗೊತ್ತಿರುವ ವಿಷಯವಾಗಿದ್ದರೆ, ಪ್ರಶ್ನೆಯನ್ನು ಯಾವ ರೀತಿಯಲ್ಲಿ ಕೇಳಲಾಗಿದೆ ಎಂದು ನೋಡದೇ ಉತ್ತರ ಗುರುತಿಸಿಬಿಟ್ಟಿರುತ್ತೀರಿ. ಇದರಿಂದ ಉತ್ತರ ತಪ್ಪಾಗಿರುವ ಸಾಧ್ಯತೆಯೂ ಇದೆ.

•► ಪರೀಕ್ಷೆಯ ಹಿಂದಿನ ದಿನ ಕೆಪಿಎಸ್‌ಸಿಯು ಅಭ್ಯರ್ಥಿಗಳಿಗೆ ನೀಡಿರುವ ಸೂಚನೆಯನ್ನು ಸರಿಯಾಗಿ ಓದಿಕೊಳ್ಳಿ. ಈ ಸೂಚನೆಯನ್ನು ಪ್ರವೇಶ ಪತ್ರದಲ್ಲಿ ನೀಡಲಾಗಿರುತ್ತದೆ. ಪರೀಕ್ಷೆಗೆ ಹೋಗುವಾಗ ಏನೆಲ್ಲಾ ತೆಗೆದುಕೊಂಡು ಹೋಗಬಹುದು, ಪರೀಕ್ಷಾ ನಿಯಮಗಳೇನು ಎಂಬುದನ್ನು ಗಮನಿಸಲು ಮರೆಯಬೇಡಿ.


•► ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್‌ 20ರಂದೇ ನಡೆಸಲಾಗುತ್ತದೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಪಿಎಸ್‌ಸಿ ಪ್ರಕಟಿಸಿದ್ದು, ಈಗಾಗಲೇ ವೇಳಾಪಟ್ಟಿಯನ್ನು ಒದಗಿಸಿದೆ. ಹೀಗಾಗಿ ಸದ್ಯವೇ ಪ್ರವೇಶ ಪತ್ರ ಪ್ರಕಟಿಸಲಿದೆ. ಪ್ರವೇಶ ಪತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಆದ್ದರಿಂದ ಅಭ್ಯರ್ಥಿಗಳು ಪ್ರತಿದಿನ ಆಯೋಗದ ವೆಬ್‌ ಅನ್ನು ನೋಡುತ್ತಿರುವುದು ಒಳ್ಳೆಯದು.

•► ಪರೀಕ್ಷೆ ಹತ್ತಿರವಾಗುತ್ತಿದ್ದಂತೆಯೇ ಪರೀಕ್ಷೆಗೆ ಸಂಬಂಧಿಸಿದ ವದಂತಿಗಳು, ಇಲ್ಲ ಸಲ್ಲದ ಸುದ್ದಿಗಳು ಹರಡುವುದು ಸಾಮಾನ್ಯ. ಈ ಬಗ್ಗೆ ಗಮನ ನೀಡಿ, ಅಮೂಲ್ಯ ಸಮಯ ಹಾಳುಮಾಡಿಕೊಳ್ಳಬೇಡಿ. ಪರೀಕ್ಷೆಗೆ ಸಿದ್ಧತೆ ನಡೆಸುವುದರತ್ತವೇ ಹೆಚ್ಚಿನ ಗಮನ ನೀಡಿ.

(ಕೃಪೆ: ವಿಜಯ ಕರ್ನಾಟಕ)

Sunday 6 August 2017

☀ ‘ಜೇಮ್ಸ್‌ ವೆಬ್‌’ ಬಾಹ್ಯಾಕಾಶ ದೂರದರ್ಶಕ (ಟೆಲಿಸ್ಕೋಪ್‌) : (James Webb Space Telescope (JWST))

☀ ‘ಜೇಮ್ಸ್‌ ವೆಬ್‌’ ಬಾಹ್ಯಾಕಾಶ  ದೂರದರ್ಶಕ (ಟೆಲಿಸ್ಕೋಪ್‌) :
(James Webb Space Telescope (JWST))
━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಸಾಮಾನ್ಯ ಅಧ್ಯಯನ
(Current Affairs for General Studies)

★ ಸಾಮಾನ್ಯ ವಿಜ್ಞಾನ
(General Science)


- ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ‘ನಾಸಾ’ ಇತ್ತೀಚೆಗೆ (2016ರಲ್ಲಿ) ನಿರ್ಮಿಸಿದ ಜಗತ್ತಿನ ಅತ್ಯಂತ  ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ  ದೂರದರ್ಶಕ (ಟೆಲಿಸ್ಕೋಪ್‌) ಕ್ಕೆ ಜೇಮ್ಸ್‌ವೆಬ್ ಎಂದು  ಹೆಸರಿಡಲಾಗಿದೆ.
- ಬ್ರಹ್ಮಾಂಡ ಉಗಮದ ನಂತರ ಸೃಷ್ಟಿಯಾದ ತಾರಾಗುಚ್ಛಗಳ (ಗೆಲಾಕ್ಸಿ) ಪತ್ತೆಗಾಗಿ ಈ ದೂರದರ್ಶಕವನ್ನು ವಿಜ್ಞಾನಿಗಳು ಬಳಸಿಕೊಳ್ಳಲಿದ್ದಾರೆ.  ಜತೆಗೆ ದೂರದಲ್ಲಿರುವ ನಕ್ಷತ್ರಗಳನ್ನು ಸುತ್ತುಹಾಕುತ್ತಿರುವ ಗ್ರಹಗಳ ಅನ್ವೇಷಣೆಗೂ ಇದನ್ನು ಬಳಸಿಕೊಳ್ಳಲಾಗುತ್ತದೆ.

- ಇದು ಅತ್ಯಾಧುನಿಕ ದೂರದರ್ಶಕವು ಅತಿ  ಸೂಕ್ಷ್ಮಗ್ರಾಹಿ ‘ಇನ್ಫ್ರಾರೆಡ್‌’ ಕ್ಯಾಮೆರಾಗಳನ್ನು ಹೊಂದಿದ್ದು,  ಇವುಗಳನ್ನು ಸೂರ್ಯನ ಕಿರಣಗಳಿಂದ ರಕ್ಷಿಸಲು ಚಿಪ್ಪಿನಂತೆ ವಿಶೇಷ ರಕ್ಷಾ ಕವಚ ನಿರ್ಮಿಸಲಾಗಿದೆ.

- ಟೆನಿಸ್‌ ಕೋರ್ಟ್‌ ಗಾತ್ರದಷ್ಟಿರುವ ಈ ರಕ್ಷಾ ಕವಚವು ಐದು ಅತಿ ತೆಳ್ಳನೆಯ (ತಲೆಕೂದಲಿನಷ್ಟು) ಪದರಗಳನ್ನು ಹೊಂದಿದೆ. ಕ್ಯಾಮೆರಾದಲ್ಲಿರುವ ‘ಇನ್ಫ್ರಾರೆಡ್‌ ಸೆನ್ಸರ್‌’ಗಳನ್ನು ಸೂರ್ಯನ ಅತಿಯಾದ ಶಾಖದಿಂದ ಇದು ರಕ್ಷಿಸುತ್ತದೆ.

- ದೂರದರ್ಶಕದ ಉಷ್ಣತೆಯನ್ನು ಕನಿಷ್ಠ –298 ಡಿಗ್ರಿ ಸೆಲ್ಸಿಯಸ್‌ ಮತ್ತು ಗರಿಷ್ಠ 298 ಡಿಗ್ರಿ ಸೆಲ್ಸಿಯಸ್‌ ನಡುವೆ ನಿಯಂತ್ರಿಸಲು ಈ ಐದು ಪದರಗಳ ಕವಚಗಳು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.

- ಪ್ರತಿ ಪದರವನ್ನು ‘ಕಪ್ಟಾನ್‌’  ಎಂಬ ವಸ್ತುವಿನಿಂದ ತಯಾರಿಸಲಾಗಿದೆ. ಅತ್ಯಂತ ಹೆಚ್ಚು ಉಷ್ಣತೆಯನ್ನು ನಿಗ್ರಹಿಸುವ ಸಾಮರ್ಥ್ಯ ಇದಕ್ಕಿದೆ.
ಉಡಾವಣೆ ಸಂದರ್ಭದಲ್ಲಿನ ವಾತಾವರಣವನ್ನು ತಾಳಿಕೊಳ್ಳುವ ರೀತಿಯಲ್ಲಿ ‘ಜೇಮ್ಸ್‌ ವೆಬ್‌’ ವಿನ್ಯಾಸ ಮಾಡಲಾಗಿದೆ.

☀ ಜೇಮ್ಸ್‌ ವೆಬ್‌ ವೈಶಿಷ್ಟ್ಯಗಳು :
━━━━━━━━━━━━━━━━━
* ಹಬಲ್‌ ದೂರದರ್ಶಕಕ್ಕಿಂತ 100 ಪಟ್ಟು ಹೆಚ್ಚು ಸಾಮರ್ಥ್ಯ
* 26 ವರ್ಷಗಳಷ್ಟು ಹಳೆಯ ಹಬಲ್‌ ದೂರದರ್ಶಕದ ಉತ್ತರಾಧಿಕಾರಿ
* ನಿರ್ಮಾಣ ಕಾರ್ಯದಲ್ಲಿ ಯುರೋಪ್‌ ಮತ್ತು ಕೆನಡಾದ ಬಾಹ್ಯಾಕಾಶ ಸಂಸ್ಥೆಗಳ ನೆರವು
* ಇನ್‌ಫ್ರಾರೆಡ್‌ ಕ್ಯಾಮೆರಾ ರಕ್ಷಣೆಗೆ ಐದು ಪದರಗಳ ಟೆನಿಸ್‌ ಕೋರ್ಟ್‌ ಗಾತ್ರದ ರಕ್ಷಾ ಕವಚ

☀ “ಮಿಷನ್ ಫಿಂಗರ್ಲಿಂಗ್” (Mission Fingerling)

☀ “ಮಿಷನ್ ಫಿಂಗರ್ಲಿಂಗ್”
(Mission Fingerling)
━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಪ್ರಚಲಿತ ಘಟನೆಗಳು.
(Current Affairs)

— ದೇಶದಲ್ಲಿ ಮೀನುಗಾರಿಕೆ ವಲಯದ ಸಮಗ್ರ ಅಭಿವೃದ್ದಿ ಮತ್ತು ನಿರ್ವಹಣೆಗಾಗಿ ಕೇಂದ್ರ ಕೃಷಿ ಸಚಿವಾಲಯ “ಮಿಷನ್ ಫಿಂಗರ್ಲಿಂಗ್ (Mission Fingerling)” ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದಕ್ಕಾಗಿ 52000 ಲಕ್ಷ ಹಣವನ್ನು ಮೀಸಲಿಡಲಾಗಿದೆ.
— ಈ ಯೋಜನೆಯ ಮುಖ್ಯ ಉದ್ದೇಶವೆಂದರೆ 2014-15ನೇ ಸಾಲಿನಲ್ಲಿ 10.79 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟಿರುವ ಮೀನು ಉತ್ಪಾದನೆಯನ್ನು 2020-21ನೇ ಅವಧಿಗೆ 15 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಹೆಚ್ಚಿಸುವುದಾಗಿದೆ.

☀ ಪ್ರಮುಖಾಂಶಗಳು:
━━━━━━━━━━━━
- ಮೀನು ಉತ್ಪಾದನೆಗೆ ಹೇರಳ ಅವಕಾಶವಿರುವ 20 ರಾಜ್ಯಗಳನ್ನು ಕೇಂದ್ರ ಸರ್ಕಾರ ಈ ಯೋಜನೆಯಡಿ ಗುರುತಿಸಿದ್ದು, ಮೀನು ಮರಿಗಳ ಉತ್ಪಾದನೆ ಹಾಗೂ ಮೀನು ಉತ್ಪಾದನೆ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುವುದು.
- ಮೀನು ಮರಿಗಳು, ಶ್ರಿಂಪ್ ಮತ್ತು ಕ್ರಾಬ್ ಗಳ ಉತ್ಪಾದನೆಗೆ ಹೊಂಡಗಳ ನಿರ್ಮಾಣಗಳನ್ನು ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು.
- ಇದರಿಂದ ಪ್ರತಿ ವರ್ಷ 20 ಲಕ್ಷ ಟನ್ ಮೀನು ಉತ್ಪಾದನೆ ಹಾಗೂ ಸುಮಾರು 4 ಮಿಲಿಯನ್ ಕುಟುಂಬಗಳಿಗೆ ಅನುಕೂಲವಾಗಲಿದೆ.

☀ ಇತ್ತೀಚಿನ ಎಸ್.ಎಸ್.ಸಿ. ಕಂಬೈನ್ಡ್ ಗ್ರಾಜುಯೇಶನ್ ಲೆವೆಲ್ ಎಕ್ಸಾಂ - 2017 ರಲ್ಲಿ ಹೆಚ್ಚೆಚ್ಚು ಕೇಳಲಾದ ಅಂಗ್ಲ ನುಡಿಗಟ್ಟುಗಳು (One word substitution) : (*50 most repeated One word substitution for SSC CGL 2017*)

☀ ಇತ್ತೀಚಿನ ಎಸ್.ಎಸ್.ಸಿ. ಕಂಬೈನ್ಡ್ ಗ್ರಾಜುಯೇಶನ್ ಲೆವೆಲ್ ಎಕ್ಸಾಂ - 2017 ರಲ್ಲಿ ಹೆಚ್ಚೆಚ್ಚು ಕೇಳಲಾದ ಅಂಗ್ಲ ನುಡಿಗಟ್ಟುಗಳು (One word substitution) :
(*50 most repeated One word substitution for SSC CGL 2017*)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಇಂಗ್ಲೀಷ್ ವ್ಯಾಕರಣ
(English Grammar)

★ ಅಂಗ್ಲ ನುಡಿಗಟ್ಟುಗಳು
(One word substitutions)



1. One who has become dependent on something or drugs — Addict

2. Fear of being enclosed in small closed space —Claustrophobia

3. Call upon God or any other power (like law) for help or protection — Invocation

4. Severely abusive writing in journals —Scurrilous

5. A person who opposes war or use of military force — Pacifist

6. One not concerned with right or wrong —Amoral

7. Something no longer in use — Obsolete
8. Stealthily done (something done in a quiet and secret way in order to avoid being noticed) —Surreptitious

9. Words written on a tomb — Epitaph

10. A person with a long experience of any occupation — Veteran

11. Something capable of being done — Feasible

12. A person coming to a foreign land to settle there — Immigrant

13. Anything which is no longer in use— Obsolete

14. A person who is unable to pay debts —Insolvent

15. Capable of being understood in either of two or more possible senses, and therefore not  definite— Ambiguous

16. A short poem or speech addressed to the spectators after the conclusion of drama —Epilogue

17. Act of deceiving somebody in order to make money — Fraud

18. Flat metal or Porcelain plate fixed on a wall as an ornament or memorial — Plaque

20. Succession of rulers belonging to one family —Dynasty

21. To seize control of a vehicle in order to force it to go to a new destination or demand something –Hijack

22. Lasting only for a moment – Momentary

23. One who is indifferent to pleasure or pain —Stoic

24. The practice or art of choosing, cooking, and eating good food — Gastronomy

25. Killing of a child— lnfanticide

26. One who believes in offering equal opportunities to women in all spheres — Feminist

27. One who studies election trend by means of opinion polls — Psephologist

28. A doctor who treats children — Paediatrician

29. One who can think about the future with imagination and wisdom — Visionary

30. Give and receive mutually – Reciprocate

31. A building where an audience sits —Auditorium

32. The first model of a new device — Prototype

33. Tough tissues in joints — Ligaments

34. The study of maps —  Cartography

35. A person who breaks into houses in order to steal — Burglar

36. The study of the origin and history of words —Etymology

37. One who can walk on ropes (tightrope walker)— Funambulist

38. Belonging to all parts of the world — .Cosmopolitan

39. One who hates mankind — .. Misanthrope

40. One who goes to settle in another country —Emigrant

41. Constant efforts to achieve something —Perseverance

42. A person who believes in total abolition of war— Pacifist

43. A four footed animal — ……. *Quadruped*

44. Ready to believe anything — .. .. *Credulous*

45. That which lasts for a short time — *Transitory*

46. Indifference to pleasure or pain — *Stoicism*

47. A body of persons appointed to hear evidence or judge and give their verdict (decision) – *Jury*

48. The essential or characteristic customs •habits and conventions of a society or comm – *Mores*

49. A system of Government in which only one political party is allowed to function — *Totalitarianism*

50. One who collects coins — *Numismatist* 

Thursday 3 August 2017

☀️ ‘ಕೌಶಲ ಅಭಿಯಾನ’ ಅಥವಾ ‘ಕೌಶಲ ಮಿಷನ್‌’ (Koushal Abhiyana or Koushal Mission)

☀️ ‘ಕೌಶಲ ಅಭಿಯಾನ’ ಅಥವಾ ‘ಕೌಶಲ ಮಿಷನ್‌’
(Koushal Abhiyana or Koushal Mission)
━━━━━━━━━━━━━━━━━━━━━━━━━━━━━━━━━━━

★ ರಾಜ್ಯ ಸರ್ಕಾರದ ಯೋಜನೆಗಳು
(State Government Programs)

★ ಸಾಮಾನ್ಯ ಅಧ್ಯಯನ
(General Studies)


ಕೇಂದ್ರ ಸರ್ಕಾರವು ಕಳೆದ ವರ್ಷ ಜಾರಿಗೆ ತಂದಿರುವ ‘ಕೌಶಲ ಭಾರತ’ ಯೋಜನೆಗೆ ಪರ್ಯಾಯವಾಗಿ ರಾಜ್ಯ ಸರ್ಕಾರವು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದಡಿ ಗ್ರಾಮೀಣ ಭಾಗದ ಯುವಜನರಿಗೆ ‘ಕೌಶಲ ಮಿಷನ್‌’ ಯೋಜನೆ ರೂಪಿಸಿದೆ.


*ನಿಗಮವನ್ನು ರಚಿಸಿರುವ ಉದ್ದೇಶ :
ಗ್ರಾಮೀಣ ಪ್ರದೇಶದ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಹಾಗೂ ಉದ್ದಿಮೆ ಆರಂಭಿಸುವವರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ನಿಗಮವನ್ನು ರಚಿಸಲಾಗಿದೆ. ಇತ್ತೀಚೆಗಷ್ಟೇ ನಿಗಮದ ಅಧ್ಯಕ್ಷರಾಗಿ ಮುರಳೀಧರ ಹಾಲಪ್ಪ ಅಧಿಕಾರ ಸ್ವೀಕರಿಸಿದ್ದಾರೆ.

*ಯಾರ್‍ಯಾರಿಗೆ ಕೌಶಲ ತರಬೇತಿ?
ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವಲ್ಲಿ ಅನೇಕ ಪದವೀಧರರು ಹಿಂದೆ ಬೀಳುತ್ತಿದ್ದಾರೆ. ಇದಕ್ಕೆ ಅವರಲ್ಲಿರುವ ಕೌಶಲ ಕೊರತೆಯೇ ಕಾರಣ. ಎಸ್ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಬಿ.ಎ, ಬಿ.ಕಾಂ ಹಾಗೂ ಬಿ.ಎಸ್ಸಿ ಪದವಿ ಪಡೆದ  ಅಭ್ಯರ್ಥಿಗಳಿಗೆ ಉತ್ಕೃಷ್ಟ ಕೌಶಲ ತರಬೇತಿ ನೀಡಲು ನಿರ್ಧರಿಸಲಾಗಿದೆ. ಹಳ್ಳಿಗಾಡಿನ ಯುವಕ, ಯುವತಿಯರಿಗೆ ಮೊದಲ ಆದ್ಯತೆ. ಈ ತರಬೇತಿಯು 3 ತಿಂಗಳು, 6 ತಿಂಗಳು ಹಾಗೂ ಒಂದು ವರ್ಷದ ಅವಧಿಯದ್ದಾಗಿದೆ. ‘ಕೌಶಲ ಅಭಿಯಾನ’ ಅಥವಾ ‘ಕೌಶಲ ಮಿಷನ್‌’ ಎನ್ನುವ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಇದಕ್ಕೆ ಚಾಲನೆ ನೀಡಲಾಗಿದೆ.

* ತರಬೇತಿ ಗುರಿ:
ಒಂದು ವರ್ಷದ ಅವಧಿಯಲ್ಲಿ ಸುಮಾರು 1 ಲಕ್ಷ ಮಂದಿಗೆ ಕೌಶಲ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಹೋಟೆಲ್‌ ಮ್ಯಾನೇಜ್‌ಮೆಂಟ್‌, ಪ್ರವಾಸೋದ್ಯಮ, ತಾಂತ್ರಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗವಕಾಶ ಪಡೆಯಲು ಅನುಕೂಲವಾಗುವಂತೆ ತರಬೇತಿಯನ್ನು ಆಯೋಜಿಸಲಾಗುವುದು.

☀ ಈ ದಿನದ ಐಎಎಸ್ / ಕೆಎಎಸ್ ಮೇನ್ಸ್ ಮಾದರಿ ಪರೀಕ್ಷಾ ಪ್ರಶ್ನೆ : — ಕ್ರೈಸ್ತರ ಒಂದು ಸಂಪ್ರದಾಯದ ಪ್ರಕಾರ ಸಂತ ಪದವಿಗೆ ಏರುವುದು ಎಂದರೇನು ? ಮದರ್ ತೆರೇಸಾ ಸಂತ ಪದವಿಗೇರಲು ಕಾರಣವಾದ ಅಂಶಗಳೇನು? (According to Christian Tradition what do you mean by Saint declaration? what are the main facts led Pope to declare, honor Mother Teresa as a Saint?)

☀ ಈ ದಿನದ ಐಎಎಸ್ / ಕೆಎಎಸ್ ಮೇನ್ಸ್ ಮಾದರಿ ಪರೀಕ್ಷಾ ಪ್ರಶ್ನೆ :

— ಕ್ರೈಸ್ತರ ಒಂದು ಸಂಪ್ರದಾಯದ ಪ್ರಕಾರ ಸಂತ ಪದವಿಗೆ ಏರುವುದು ಎಂದರೇನು ? ಮದರ್  ತೆರೇಸಾ ಸಂತ ಪದವಿಗೇರಲು ಕಾರಣವಾದ ಅಂಶಗಳೇನು?
(According to Christian Tradition what do you mean by Saint declaration? what are the main facts led Pope to declare, honor Mother Teresa as a Saint?)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(general Studies)

★ ಐಎಎಸ್ / ಕೆಎಎಸ್ ಮೇನ್ಸ್ ಪರೀಕ್ಷಾ ತಯಾರಿ
(IAS / KAS Mains Exam Preparation)


ಸಂತ ಪದವಿ ಎನ್ನುವುದು ಕ್ರೈಸ್ತರ ಒಂದು ಸಂಪ್ರದಾಯ. ಒಬ್ಬ ವ್ಯಕ್ತಿ ನಿಧನರಾದ ಐದು ವರ್ಷಗಳ ನಂತರ ಅವರ ಯಾವುದಾದರೂಒಂದು ಮಹತ್ತರ ಪವಾಡ ಸಾಬೀತಾದರೆ, ಅಂತಹ ವ್ಯಕ್ತಿ ಸ್ವರ್ಗ ಪ್ರಾಪ್ತರಾಗಿದ್ದಾರೆ (ಬೀಟಿಫಿಕೇಷನ್‌) ಎಂದು ಘೋಷಿಸಲಾಗುತ್ತದೆ.

ಈ ಪಟ್ಟ ದೊರೆತ ನಂತರ ಮತ್ತೂಂದು ಪವಾಡ ರುಜುವಾದರೆ ಸಿಗುವುದೇ ಸಂತ ಪದವಿ. ಸ್ವರ್ಗ ಪ್ರಾಪ್ತರಾದ ವ್ಯಕ್ತಿಗಳನ್ನು ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಮಾತ್ರವೇ ಆರಾಧಿಸುತ್ತಾರೆ. ಆದರೆ ಸಂತ ಪದವಿಗೇರಿದವರನ್ನು ವಿಶ್ವಾದ್ಯಂತ ಇರುವ ಕ್ಯಾಥೋಲಿಕ್‌ ಕ್ರೈಸ್ತರು ಪೂಜಿಸುತ್ತಾರೆ.

ಸಂತ ಪದವಿಗೆ ಏರುವುದು ಕೆಲ ವರ್ಷಗಳ ಪ್ರಕ್ರಿಯೆ. ವ್ಯಕ್ತಿಯೊಬ್ಬರು ಮೃತರಾದ ಬಳಿಕ ಅವರ ಪವಾಡ ಸಾಬೀತಾದಾಗ ಅವರನ್ನು ಸಂತ ಪದವಿಗೇರಿಸುವ ಪ್ರಕ್ರಿಯೆಯನ್ನು ಒಂದು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಆರಂಭಿಸುತ್ತಾರೆ. ಚರ್ಚ್‌ಗೆ ಸಂಬಂಧಪಟ್ಟವರು, ವ್ಯಕ್ತಿಯನ್ನು ಸಂಪರ್ಕಿಸಿ ಅವರಿಗಾದ ಪವಾಡದ ಅನುಭವ, ಅದರಿಂದೇನಾಯ್ತು? ಇತ್ಯಾದಿ ಮಾಹಿತಿಗಳನ್ನು, ಸಾಕ್ಷ್ಯಗಳನ್ನು ಸಂಪೂರ್ಣವಾಗಿ ಕಲೆ ಹಾಕುತ್ತಾರೆ. ಈ ಮಾಹಿತಿಗಳು ಸಮಾಧನ ತಂದಿದ್ದಲ್ಲಿ, ಅವುಗಳನ್ನು ಬಳಿಕ ವ್ಯಾಟಿಕನ್‌ಗೆ ಕಳಿಸಲಾಗುತ್ತದೆ. ಬಳಿಕ ಧರ್ಮಶಾಸ್ತ್ರಜ್ಞರು, ಮೃತರ ಪವಾಡ ಸದೃಶ, ದೈವಿಕವಾದ ಶಕ್ತಿಯನ್ನು ನಿಜವೆಂದು ಪುರಸ್ಕರಿಸುತ್ತಾರೆ. ಇದನ್ನು ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಅವರಿಗೆ ತಿಳಿಸಿ ವ್ಯಕ್ತಿಯು ಪೂಜ್ಯರಾದವರು ಎಂದು ಗುರುತಿಸಿ ಸಂತ ಪದವಿ ಅನುದಾನಿಸುವಂತೆ ಕೇಳಲಾಗುತ್ತದೆ.


★ತೆರೇಸಾ ಸಂತ ಪದವಿಗೇರಲು ಕಾರಣವಾದ (ಅಂಶಗಳು) ಪವಾಡಗಳು :

ಭಾರತೀಯರಾಗಿದ್ದು ಸಂತ ಪದವಿಗೇರುವವರಲ್ಲಿ ಮದರ್‌ ತೆರೇಸಾ ಅವರು ಮೂರನೆಯವರು.

ಮದರ್‌ ತೆರೇಸಾ. ನಿರ್ಗತಿಕರು ರೋಗಿಗಳ ಪಾಲಿಗೆ ದೇವರಾಗಿದ್ದವರು. ಶುಶ್ರೂಷೆ, ಸಾಂತ್ವನ ಪದಕ್ಕೆ ಅನ್ವರ್ಥ ನಾಮ. ಇದಕ್ಕಾಗಿಯೇ "ಮದರ್‌', ತಾಯಿ ಎಂಬ ಅಭಿದಾನ. ಸೇವೆಯಲ್ಲೇ ಜೀವನ ಸಾರ್ಥಕ್ಯ ಕಂಡ ಮದರ್‌ ತೆರೇಸಾಗೆ ಇದೀಗ ಸಂತ ಪದವಿಗೇರಲಿದ್ದಾರೆ. ಸೆ.5ರ ಅವರ ಜನ್ಮದಿನಕ್ಕೆ ಪೂರ್ವಭಾವಿಯಾಗಿ 2016ರ ಸೆ.4ರಂದು ಅವರಿಗೆ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಸಂತ ಪದವಿ ಪ್ರದಾನ ಮಾಡಿದ್ದಾರೆ.

ತೆರೇಸಾ ಅವರನ್ನು ಸಂತ ಪದವಿಗೇರಿಸಲು ಕಾರಣವಾದ ಪವಾಡಗಳು ಪ್ರಮುಖವಾಗಿ ಎರಡು. ಇವುಗಳನ್ನು ಮಾನ್ಯ
ಮಾಡಿಯೇ ವ್ಯಾಟಿಕನ್‌ ತೆರೇಸಾ ಅವರನ್ನು ಪೂಜ್ಯರು ಎಂದು ಗುರುತಿಸುತ್ತಿದೆ. ಮೊದಲನೆಯದ್ದು, ಕೋಲ್ಕತಾದ
ಮಹಿಳೆಯೊಬ್ಬರು ತೆರೇಸಾರನ್ನು ಪ್ರಾರ್ಥಿಸಿದಾಗ ಅವರ ದೇಹದಲ್ಲಿದ್ದ ಗೆಡ್ಡೆ ಅಳಿದದ್ದು. ಈ ಘಟನೆ 2003ರಲ್ಲಿ
ನಡೆದಿದ್ದು ಇದನ್ನು ವ್ಯಾಟಿಕನ್‌ ಮಾನ್ಯ ಮಾಡಿತ್ತು. ಬಳಿಕ ತೆರೇಸಾ ಅವರನ್ನು ಪ್ರಾರ್ಥಿಸಿದ್ದರಿಂದ ತನ್ನ ಮೆದುಳಿನ ಸೋಂಕು, ಮೂತ್ರಪಿಂಡ ಕಾಯಿಲೆ ವಾಸಿಯಾಗಿದೆ ಎಂದು ಬ್ರೆಜಿಲ್‌ನ ವ್ಯಕ್ತಿ 2008ರಲ್ಲಿ ಹೇಳಿದ್ದು, ಇದೂ ಅಧಿಕೃತ
ಎಂದು ವ್ಯಾಟಿಕನ್‌ ಮಾನ್ಯ ಮಾಡಿತ್ತು. ಬಳಿಕ 2015ರಲ್ಲಿ ತೆರೇಸಾ ಅವರಿಗೆ ಸಂತ ಪದವಿ ನೀಡುವುದಾಗಿ
ಪೋಪ್‌ ಘೋಷಿಸಿದ್ದರು.

Wednesday 2 August 2017

☀"ಪ್ರೊಜೆಕ್ಟ್ 75" ಯೋಜನೆ : (Project 75)


☀"ಪ್ರೊಜೆಕ್ಟ್ 75" ಯೋಜನೆ :
(Project 75)
━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)


— ಸ್ಕಾರ್ಪೀನ್  ಜಲಾಂತರ್ಗಾಮಿ ನಿರ್ಮಾಣ ಯೋಜನೆಗೆ ಭಾರತದಲ್ಲಿ "ಪ್ರೊಜೆಕ್ಟ್ 75' ಹೆಸರಿಡಲಾಗಿದೆ.

ಫ್ರಾನ್ಸ್ನಿಂದ ತಂತ್ರಜ್ಞಾನ ವರ್ಗಾವಣೆ ಒಪ್ಪಂದ ಅಡಿಯಲ್ಲಿ, ಫ್ರಾನ್ಸ್‌ ರಕ್ಷಣಾ ಇಲಾಖೆ, ಸ್ಪೇನ್‌ನ ಕಂಪನಿ ನವಾಂಟಿಯಾ ಮತ್ತು ಮಜಗಾಂವ್‌ ಡಾಕ್‌ ಲಿ. ಜಂಟಿಯಾಗಿ ಜಲಾಂತರ್ಗಾಮಿಗಳನ್ನು ನಿರ್ಮಿಸುತ್ತಿದೆ.

ಸುಮಾರು 53 ಸಾವಿರ ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಇದಕ್ಕಾಗಿ ಫ್ರಾನ್ಸ್‌ ಜೊತೆ ಭಾರತ 2005ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಭಾರತಕ್ಕಾಗಿ ಒಟ್ಟು 6 ಜಲಾಂತರ್ಗಾಮಿಗಳ ನಿರ್ಮಾಣಕ್ಕೆ ಯೋಜಿಸಲಾಗಿದೆ.ಅದ ರಲ್ಲಿ ಮೊದಲನೆಯದ್ದು 2015 ಏ.6ರಂದು ನೌಕಾಪಡೆಗೆ ಸೇರ್ಪಡೆಯಾಗಿದ್ದು, ಸದ್ಯ ಪರೀಕ್ಷಾರ್ಥ ಸಂಚಾರದಲ್ಲಿದೆ.

ಉಳಿದವು ನಿರ್ಮಾಣ ಹಂತದಲ್ಲಿದ್ದು 2020ರ ವೇಳೆಗೆ ದೇಶಕ್ಕೆ ಸಮರ್ಪಣೆಯಾಗಲಿದೆ.

ಇತ್ತೀಚೆಗೆ 2016 August ನಲ್ಲಿ ಫ್ರಾನ್ಸ್‌ ಸಹಯೋಗದಲ್ಲಿ ನಿರ್ಮಿಸಲಾಗುತ್ತಿರುವ ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ಕುರಿತ ಮಹತ್ವದ ಮಾಹಿತಿ ಸೋರಿಕೆಯಾಗಿತ್ತು.

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ : ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ. ( KAS Mains General Studies Paper V Syllabus)

☀.ಕೆಎಎಸ್ ಮುಖ್ಯ ಪರೀಕ್ಷೆಯ ಸಂಪೂರ್ಣ ಪಠ್ಯಕ್ರಮ :  ಪತ್ರಿಕೆ-5: ಸಾಮಾನ್ಯ ಅಧ್ಯಯನ-4 (PART -X)... ಮುಂದುವರೆದ ಭಾಗ.
( KAS Mains General Studies  Paper V  Syllabus)
•─━━━━━═══════════━━━━━─••─━━━━━═══════════━━━━━─•

★ ಕೆಎಎಸ್ ಪರಿಕ್ಷೆಯ ಪಠ್ಯಕ್ರಮ
(KAS Exam Syllabus)

... ಮುಂದುವರೆದ ಭಾಗ.



●. ಪತ್ರಿಕೆ-5:       ಸಾಮಾನ್ಯ ಅಧ್ಯಯನಗಳು-4


●. ವಿಭಾಗ-1:

ನೀತಿಶಾಸ್ತ್ರ:

ಮಾನವ ಕ್ರಿಯೆಗಳಲ್ಲಿ ನೀತಿಶಾಸ್ತ್ರದ ಸಾರ, ನಿರ್ಣಾಯಕಗಳು ಮತ್ತು ಪರಿಣಾಮಗಳು, ನೀತಿಶಾಸ್ತ್ರದ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೀತಿಶಾಸ್ತ್ರ.
ಸಾರ್ವಜನಿಕ ಆಡಳಿತದಲ್ಲಿ ನೀತಿಶಾಸ್ತ್ರ, ಸ್ಥಾನಮಾನ ಮತ್ತು ಸಮಸ್ಯೆಗಳು, ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೀತಿಯ ಬಿಕ್ಕಟ್ಟುಗಳು, ನೀತಿ ಮಾರ್ಗದರ್ಶನದ ಮೂಲವಾಗಿ ಕಾನೂನುಗಳು, ನಿಯಮಗಳು, ವಿಧಿನಿಯಮಗಳು ಮತ್ತು ಧರ್ಮಪ್ರಜ್ಞೆ.
ಹೊಣೆಗಾರಿಕೆ ಮತ್ತು ನೈತಿಕ ಆಡಳಿತ, ಆಡಳಿತದಲ್ಲಿನ ನೀತಿ ಮತ್ತು ನೈತಿಕ ಮೌಲ್ಯಗಳ ಬಲಪಡಿಸುವಿಕೆ. ಅಂತರಾಷ್ಟೀಯ ಸಂಬಂಧಗಳಲ್ಲಿ ಮತ್ತು ಹಣ ನೀಡಿಕೆಯಲ್ಲಿ ನೀತಿ ವಿಷಯಗಳು, ನಿಗಮಿತ ಆಡಳಿತ.
ಸಾರ್ವಜನಿಕ ಸೇವೆಯ ಪರಿಕಲ್ಪನೆ, ಆಡಳಿತದ ತಾತ್ವಿಕ ಮೂಲ, ಸರ್ಕಾರದಲ್ಲಿ ಮಾಹಿತಿ ಹಂಚಿಕೆ ಮತ್ತು ಸರ್ಕಾರದ ಪಾರದರ್ಶಕತೆ, ಮಾಹಿತಿ ಹಕ್ಕು, ನೀತಿಶಾಸ್ತ್ರದ ಸಂಹಿತೆಗಳು, ನೀತಿ ಸಂಹಿತೆಗಳು, ನಾಗರಿಕ ಸನ್ನದುಗಳು, ಕೆಲಸದ ಸಂಸ್ಕೃತಿ, ಸೇವೆ ಸಲ್ಲಿಕೆಯ ಗುಣಮಟ್ಟ, ಸಾರ್ವಜನಿಕ ನಿಧಿ ಬಳಕೆ, ಭ್ರಷ್ಟ್ರಾಚಾರದ ಸವಾಲುಗಳು.
ಮಾನವ ಮೌಲ್ಯಗಳು – ಮಹಾನ್ ನಾಯಕರು ಸುಧಾರಕರು, ಆಡಳಿತಗಾರರ ಜೀವನಗಳು ಮತ್ತು ಬೋಧನೆಗಳಿಂದ ಪಾಠಗಳು, ಕುಟುಂಬದ ಪಾತ್ರ, ಸಮಾಜ ಮತ್ತು ಮೌಲ್ಯಗಳನ್ನು ಬೋಧಿಸುವ ಶೈಕ್ಷಣಿಕ ಸಂಸ್ಥೆಗಳು.



●. ವಿಭಾಗ-2:

ನೀತಿನಿಷ್ಠೆ:

ನೀತಿನಿಷ್ಠೆ, ನಿಷ್ಪಕ್ಷಪಾತ ಮತ್ತು ಪಕ್ಷಪಾತ ಮಾಡದಿರುವುದು, ಉದ್ದೇಶ, ಸಾರ್ವಜನಿಕ ಸೇವೆಗೆ ಸಮರ್ಪಣೆ, ದುರ್ಬಲ ವರ್ಗಗಳಿಗಾಗಿ ಅನುಭೂತಿ, ತಾಳ್ಮೆ ಮತ್ತು ಅನುಕಂಪ.


●. ವಿಭಾಗ-3:

ಅಭಿರುಚಿ:

ನಾಗರಿಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಒಳಾಂಶ ರಚನೆ, ಪ್ರಕಾರ್ಯ, ಚಿಂತನೆಗಳು ಮತ್ತು ಕಾರ್ಯರೀತಿಯೊಂದಿಗೆ ಅದರ ಸಂಬಂಧ, ನೈತಿಕ ಮತ್ತು ರಾಜಕೀಯ ಮನೋಭವಗಳು, ಸಾಮಾಜಿಕ ಪ್ರಭಾವ ಮತ್ತು ಪ್ರೇರಣೆ. ನಾಗರೀಕ ಸೇವೆಗಾಗಿ ಅಭಿರುಚಿ ಮತ್ತು ಬುನಾದೀಯ ಮೌಲ್ಯಗಳು, ಭಾವನಾತ್ಮಕ ಬುದ್ಧಿವಂತಿಕೆ ಮತ್ತು ಅದರ ಉಪಯುಕ್ತತೆಗಳು ಹಾಗೂ ಆಡಳಿತ ಮತ್ತು ನಿರ್ವಹಣೆಯ ಅನ್ವಯತೆ, ಭಾರತ ಮತ್ತು ವಿಶ್ವದಿಂದ ನೈತಿಕ ಚಿಂತಕರ ಕೊಡುಗೆಗಳು. ಮೇಲಿನ ಅಂಶಗಳಿಗೆ ಸಂಬಂಧಿಸಿದಂತೆ ವಿಷಯಗಳ ವಾಸ್ತವಾಂಶ ಅಧ್ಯಯನಗಳು.

...ಮುಂದುವರೆಯುವುದು. 

(ಕೃಪೆ: ಯುಸಿಸಿ ಬೆಂಗಳೂರು) 

Friday 7 July 2017

☀ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) : ■. ವಿಶ್ವದ ದುಬಾರಿ ನಗರ - 2017: ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನ ವಿಶೇಷ ವರದಿ: (Special Reports on the world’s most expensive cities)

☀ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು) :
■. ವಿಶ್ವದ ದುಬಾರಿ ನಗರ - 2017: ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನ ವಿಶೇಷ ವರದಿ:
(Special Reports on the world’s most expensive cities)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


■. ವಿಶ್ವದ ದುಬಾರಿ ನಗರ- 2017: ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನ ವಿಶೇಷ ವರದಿ:
(Special Reports on the world’s most expensive cities)


✧. ಅಂಗೋಲಾದ ರಾಜಧಾನಿ ಲುವಾಂಡಾ  ಜಗತ್ತಿನಲ್ಲೇ ಅತ್ಯಂತ ದುಬಾರಿ ನಗರ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮೆರ್ಸೆರ್‌ ಕನ್ಸಲ್ಟಿಂಗ್‌ ಗ್ರೂಪ್‌ ನಡೆಸಿದ 23ನೇ ವಾರ್ಷಿಕ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.

- ಡಾಲರ್‌ ಎದುರು ಅಂಗೋಲಾದ ಸ್ಥಳೀಯ ಕರೆನ್ಸಿ ‘ಕ್ವಾಂಝಾ’ ಮೌಲ್ಯ  ಕುಸಿತವಾಗಿದ್ದರೂ ಲುವಾಂಡಾ  ದುಬಾರಿ ನಗರದ ಪಟ್ಟ ಪಡೆದುಕೊಂಡಿದೆ.
- ಜೀವನ ವೆಚ್ಚ ಕುರಿತ ವರದಿಯಲ್ಲೂ  ಸತತ ಮೂರು ವರ್ಷಗಳ ಕಾಲ ಲುವಾಂಡಾ  ನಗರ ಪ್ರಥಮ ಸ್ಥಾನ ಪಡೆದಿತ್ತು.

✧. ಮೊದಲ ಸ್ಥಾನದಲ್ಲಿದ್ದ ಹಾಂಗ್‌ಕಾಂಗ್‌ ನಗರ ಈಗ ಎರಡನೇ ಸ್ಥಾನ ಪಡೆದಿದೆ.  ಆದರೆ, ಏಷ್ಯಾದಲ್ಲೇ ಅತ್ಯಂತ ದುಬಾರಿ ನಗರವಾಗಿದೆ. ಈ ನಗರದಲ್ಲಿ ವಾಸಿಸುವ ಮನೆಗಳು ದುಬಾರಿಯಾಗಿವೆ ಎಂದು ಸಮೀಕ್ಷೆ ತಿಳಿಸಿದೆ.

✧. 200 ನಗರಗಳಲ್ಲಿ ಈ ಸಮೀಕ್ಷೆ ನಡೆಸಿದ್ದು,  ವಸತಿ, ಆಹಾರ, ಸಾರಿಗೆ ಮತ್ತು ಮನರಂಜನೆ ಸೇರಿದಂತೆ  200 ಅಂಶಗಳನ್ನು ಹೋಲಿಕೆ ಮಾಡಲಾಗಿದೆ.

- ಕಳೆದ ಬಾರಿ 5ನೇ ಸ್ಥಾನದಲ್ಲಿದ್ದ ಟೋಕಿಯೊ ಈ ಸಲ ಮೂರನೇ ಸ್ಥಾನ ಪಡೆದಿದೆ. ಯೆನ್‌ ಮೌಲ್ಯ ಮತ್ತು ವಸತಿ ವಹಿವಾಟಿನಲ್ಲಿ ಹೆಚ್ಚಳವಾಗಿರುವುದು  ಇದಕ್ಕೆ ಕಾರಣವಾಗಿದೆ.

- ಸಿಂಗಪುರ 5ನೇ ಸ್ಥಾನದಲ್ಲಿದ್ದರೆ, ನ್ಯೂಯಾರ್ಕ್‌ ಒಂಬತ್ತನೇ ಸ್ಥಾನ ಪಡೆದಿದೆ.

✧. ಸಮೀಕ್ಷೆಯನ್ನು ವಿವಿಧ ದೇಶಗಳು ಮತ್ತು ಉದ್ಯಮಗಳು ಗಂಭೀರವಾಗಿ ಪರಿಗಣಿಸಿವೆ. ವಿದೇಶಗಳಿಗೆ ತಮ್ಮ ನೌಕರರನ್ನು ಕಳುಹಿಸುವ ಸಂದರ್ಭದಲ್ಲಿ ಈ ಅಂಶಗಳನ್ನು ಪರಿಗಣಿಸುತ್ತವೆ ಎಂದು ವಿಶ್ಲೇಷಿಸಲಾಗಿದೆ.
ರಷ್ಯಾದ ಕೆಲವು ನಗರಗಳು ಮತ್ತಷ್ಟು ದುಬಾರಿಯಾಗಿವೆ. ಕಳೆದ ವರ್ಷ 53ನೇ ಸ್ಥಾನದಲ್ಲಿದ್ದ  ಮಾಸ್ಕೊ ನಗರ ಈ ಬಾರಿ 14ನೇ ಸ್ಥಾನದಲ್ಲಿದೆ. ಸೇಂಟ್‌ ಪೀಟರ್ಸ್‌ಬರ್ಗ್‌ 116ರಿಂದ 36ನೇ ಸ್ಥಾನಕ್ಕೇರಿದೆ.

✧. ದುಬಾರಿ ನಗರಗಳು
-  ಲುವಾಂಡಾ
- ಹಾಂಗ್‌ಕಾಂಗ್
- ಟೋಕಿಯೊ
- ಜ್ಯೂರಿಚ್‌
- ಸಿಂಗಪುರ

✧. ಬೆಂಗಳೂರಿಗೆ 166ನೇ ಸ್ಥಾನ

- ವಲಸಿಗರಿಗೆ ಮುಂಬೈ ದೇಶದಲ್ಲಿ ದುಬಾರಿ ನಗರವಾಗಿದ್ದು, ಜಗತ್ತಿನ ಪ್ರಮುಖ ನಗರಗಳ ಪಟ್ಟಿಯಲ್ಲಿ 57ನೇ ಸ್ಥಾನ ಪಡೆದಿದೆ.
- ಆರ್ಥಿಕ ಬೆಳವಣಿಗೆ, ಹಣದುಬ್ಬರ ಇದಕ್ಕೆ ಪ್ರಮುಖ ಕಾರಣಗಳಾಗಿವೆ.

✧. ಜಾಗತಿಕ ಪಟ್ಟಿಯಲ್ಲಿ ನವದೆಹಲಿ 99, ಚೆನ್ನೈ 135, ಬೆಂಗಳೂರು 166 ಹಾಗೂ ಕೋಲ್ಕತ್ತ 184ನೇ ಸ್ಥಾನದಲ್ಲಿವೆ.

Tuesday 4 July 2017

●. ‘ಸೊಲಿಬಸಿಲ್ಲಸ್ ಕಲಾಮಿ’ : (Solibacillus kalamii)

●. ‘ಸೊಲಿಬಸಿಲ್ಲಸ್ ಕಲಾಮಿ’ :
(Solibacillus kalamii)
━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


ಈ ಜೀವಿ ಒಂದು ರೀತಿಯ ಬ್ಯಾಕ್ಟೀರಿಯಾ ಆಗಿದ್ದು, ಸಂತಾನೋತ್ಪತ್ತಿ ಸಾಮರ್ಥ್ಯದ ಘಟಕ ಹೊಂದಿರುವ ಏಕಾಣು ಜೀವಿ. ಇದು ಭೂಮಿ ಮೇಲೆ ಅಸ್ತಿತ್ವದಲ್ಲಿಲ್ಲ. ಇದು ಪತ್ತೆಯಾಗಿರುವುದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್).

ಅಂತರ್‌ಗ್ರಹ ಪ್ರಯಾಣದ ಕುರಿತು ಸಂಶೋಧನೆ ನಡೆಸುವ ನಾಸಾದ ಅಗ್ರಗಣ್ಯ ಪ್ರಯೋಗಾಲಯ ‘ಜೆಟ್ ಪ್ರೊಪಲ್ಷನ್ ಪ್ರಯೋಗಾಲಯ’ದ  (ಜೆಪಿಎಲ್‌) ಸಂಶೋಧಕರು ಐಎಸ್‌ಎಸ್‌ನ ಫಿಲ್ಟರ್‌ಗಳ ಮೇಲೆ ಇದ್ದ ಹೊಸ ಜೀವಿಯನ್ನು ಪತ್ತೆಹಚ್ಚಿದ್ದು,  ಇದಕ್ಕೆ  ‘ಸೊಲಿಬಸಿಲ್ಲಸ್ ಕಲಾಮಿ’  ಎಂದು ಹೆಸರಿಟ್ಟಿದ್ದಾರೆ.

- ಇತ್ತೀಚೆಗೆ ಪತ್ತೆಯಾದ ಹೊಸ ಏಕಾಣು ಜೀವಿಗೆ ಖ್ಯಾತ ವಿಜ್ಞಾನಿ ಭಾರತದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರಿಡುವ ಮೂಲಕ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಗೌರವ ಸಲ್ಲಿಸಿದೆ. 

●.ತೀಸ್ತಾ ನದಿ (Tystha River) — ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಹುಟ್ಟಿಕೊಂಡಿದ್ದು ಹೇಗೆ?


●.ತೀಸ್ತಾ ನದಿ (Tystha River) — ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಹುಟ್ಟಿಕೊಂಡಿದ್ದು ಹೇಗೆ?
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(general studies)


- ಬಾಂಗ್ಲಾದೇಶ ಮತ್ತು ಭಾರತದ ನಡುವೆ ತೀಸ್ತಾ ನದಿ ನೀರು ಹಂಚಿಕೆ ವಿವಾದ ಕಳೆದ 34 ವರ್ಷಗಳಿಂದಲೂ ಬಗೆಹರಿಯದೆ ಉಳಿದಿದೆ. 2011ರಲ್ಲಿ ಡಾ.ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಎರಡೂ ರಾಷ್ಟ್ರಗಳು ಈ ಸಂಬಂಧ ಒಪ್ಪಂದವೊಂದಕ್ಕೆ ಸಹಿಹಾಕಲು ಮುಂದಾಗಿದ್ದವು. ಆದರೆ, ಕೊನೆಕ್ಷಣದಲ್ಲಿ ಮಮತಾ ಬ್ಯಾನರ್ಜಿ ವಿರೋಧದಿಂದ ಒಪ್ಪಂದ ಏರ್ಪಡಲಿಲ್ಲ. ಆದರೆ ಜಲವಿವಾದಕ್ಕೆ ತೆರೆಬೀಳುವ ಮುನ್ಸೂಚನೆಗಳು ಈಗ ಸಿಕ್ಕಿವೆ.


●.ತೀಸ್ತಾ ನದಿಯ ಹುಟ್ಟು :
━━━━━━━━━━━━━━━
ಸಿಕ್ಕಿಂನ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ತೀಸ್ತಾ ಹುಟ್ಟುತ್ತದೆ. ಖಾಂಗ್ಸೆ ಮತ್ತು ಝೆಮು ಹಿಮನದಿಗಳು ಕರಗಿ ಕಾಂಚನಗಂಗಾದ ಸಮೀಪದಲ್ಲಿರುವ ತ್ಸೋ ಲಾಮೋ ಸರೋವರಕ್ಕೆ ಸೇರುತ್ತವೆ. ಅಲ್ಲಿಂದ ತೀಸ್ತಾ ಹುಟ್ಟಿಕೊಳ್ಳುತ್ತದೆ. ಈ ನದಿಯು ಮುಂದೆ ಡಾರ್ಜಿಲಿಂಗ್​ನ ತೀಸ್ತಾಬಜಾರ್ ಸಮೀಪ ರಂಜೀತ್ ನದಿಯೊಂದಿಗೆ ಸಂಗಮವಾಗಿ ವಿಶಾಲ ರೂಪ ಪಡೆದುಕೊಳ್ಳುತ್ತದೆ. ಆ ಬಳಿಕ ಉತ್ತರ ಬಾಂಗ್ಲಾದ ಕೂಚ್​ಬೆಹಾರ್ ಜಿಲ್ಲೆಯ ಮೆಖ್ಸಿಗುಂಜ್​ನಲ್ಲಿ ಅಂತಾರಾಷ್ಟ್ರೀಯ ಗಡಿ ದಾಟಿ ಬಾಂಗ್ಲಾದೇಶಕ್ಕೆ ಪ್ರವೇಶಿಸಿ ಅಲ್ಲಿ ಬ್ರಹ್ಮಪುತ್ರಾ ನದಿಯೊಂದಿಗೆ ಸಂಗಮ ವಾಗುತ್ತದೆ. ಕೊನೆಗೆ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.


●.ಗಮನಿಸಬೇಕಾದ ಅಂಶಗಳು :
━━━━━━━━━━━━━━━━━━
- 414 ಕಿಲೋಮೀಟರ್ ತೀಸ್ತಾ ನದಿಯ ಒಟ್ಟು ಉದ್ದ
- ಸಿಕ್ಕಿಂನಲ್ಲಿ 150 ಕಿಮೀ, ಪಶ್ಚಿಮ ಬಂಗಾಳದಲ್ಲಿ 123 ಕಿಮೀ ಮತ್ತು ಬಾಂಗ್ಲಾದಲ್ಲಿ 140 ಕಿಮೀ ನದಿ ಹರಿಯುತ್ತದೆ.
- ಬಾಂಗ್ಲಾದೇಶದಲ್ಲಿ 1 ಕೋಟಿ ಜನರಿಗೆ ಜೀವನಾಧಾರ
- ಬಾಂಗ್ಲಾದ ಶೇ.14ರಷ್ಟು ಕೃಷಿಗೆ ತೀಸ್ತಾ ಅಗತ್ಯ
- ಬಾಂಗ್ಲಾದ 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ.
- ಪಶ್ಚಿಮ ಬಂಗಾಳದ ಜಲಪೈಗುರಿ ಮತ್ತು ದಕ್ಷಿಣ ದಿನಾಜಪುರಕ್ಕೆ ತೀಸ್ತಾ ನೀರಿನ ಮೂಲ.



●.ಬಾಂಗ್ಲಾ, ಪಶ್ಚಿಮಬಂಗಾಳಕ್ಕೆ ಜೀವನದಿ
━━━━━━━━━━━━━━━━━━━━━━━
ತೀಸ್ತಾ ನದಿ ಅಂದಾಜು 414 ಕಿಲೋಮೀಟರ್​ಗಳಷ್ಟು ದೂರ ಹರಿಯುತ್ತದೆ. ಇದರಲ್ಲಿ 150 ಕಿಲೋಮೀಟರ್ ಸಿಕ್ಕಿಂನಲ್ಲಿ, 123 ಕಿಲೋಮೀಟರ್ ಪಶ್ಚಿಮ ಬಂಗಾಳ ಮತ್ತು 140 ಕಿಲೋಮೀಟರ್​ಗಳಷ್ಟು ಬಾಂಗ್ಲಾದೇಶದಲ್ಲಿ ಹರಿಯುತ್ತದೆ. ತೀಸ್ತಾ ನದಿ ಬಾಂಗ್ಲಾದೇಶದ ಉತ್ತರ ಭಾಗಕ್ಕೆ ನೀರಿನ ಪ್ರಮುಖ ಮೂಲವಾಗಿದೆ. ಬಾಂಗ್ಲಾದ ನಾಲ್ಕನೇ ಅತಿದೊಡ್ಡ ನದಿ ಎಂಬ ಹೆಗ್ಗಳಿಕೆಯೂ ಇದರದ್ದು. ಬಾಂಗ್ಲಾದ 1 ಕೋಟಿ ಜನರಿಗೆ ಜೀವನಾಧಾರವೂ ಈ ತೀಸ್ತಾ. ಶೇ.14ರಷ್ಟು ಕೃಷಿ, ಐದು ಜಿಲ್ಲೆಗಳ 1 ಲಕ್ಷ ಹೆಕ್ಟೇರ್​ನಷ್ಟು ಪ್ರದೇಶಕ್ಕೆ ನೀರಿನ ಮೂಲಕೂಡ ಆಗಿದೆ ಈ ನದಿ. ಹೀಗಾಗಿಯೇ ಬಾಂಗ್ಲಾದೇಶವು ನದಿಯ ಶೇ.50ರಷ್ಟು ನೀರು ತನಗೆ ಸಲ್ಲಬೇಕು ಎಂದು ಪಟ್ಟು ಹಿಡಿದಿದೆ. ಪಶ್ಚಿಮ ಬಂಗಾಳಕ್ಕೂ ತೀಸ್ತಾ ಜೀವನದಿ ಆಗಿದೆ. ಅಲ್ಲಿನ ಜಲಪೈಗುರಿ, ದಕ್ಷಿಣ ದಿನಾಜಪುರ ಮತ್ತು ಡಾರ್ಜಿಲಿಂಗ್​ನಲ್ಲಿನ ಕೃಷಿಗೂ ತೀಸ್ತಾ ಆಧಾರವಾಗಿದೆ.


●.ವಿವಾದದ ಹುಟ್ಟಿಕೊಂಡಿದ್ದು ಹೇಗೆ?
━━━━━━━━━━━━━━━━━━━━━━━
ಪಶ್ಚಿಮ ಬಂಗಾಳದ ಕೃಷಿಕರ ನೀರಾವರಿ ಅಗತ್ಯಗಳನ್ನು ಪೂರೈಸುವ ಸಲುವಾಗಿ 1980ರ ದಶಕದಲ್ಲಿ ತೀಸ್ತಾಗೆ ಅಡ್ಡಲಾಗಿ ಎರಡು ಅಣೆಕಟ್ಟುಗಳನ್ನು ನಿರ್ವಿುಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಇದಕ್ಕೆ ಬಾಂಗ್ಲಾದೇಶ ತೀವ್ರ ವಿರೋಧ ವ್ಯಕ್ತಪಡಿಸಿತು. ಹೀಗಾಗಿ ಈ ವಿಚಾರದಲ್ಲಿ ಕೇಂದ್ರ ಮಧ್ಯಪ್ರವೇಶಿಸಿತು. ಆಗಿನ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಾಂಗ್ಲಾದೇಶದೊಡನೆ ಚರ್ಚೆ ನಡೆಸಿ 1983ರಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿತು. ಅದರಂತೆ ತೀಸ್ತಾ ನದಿಯ ಶೇ. 39ರಷ್ಟು ನೀರು ಭಾರತಕ್ಕೆ ಮತ್ತು ಶೇ.36ರಷ್ಟು ನೀರು ಬಾಂಗ್ಲಾದೇಶಕ್ಕೆ ಎಂದು ಹಂಚಿಕೆ ಮಾಡಲಾಗಿತ್ತು. ಉಳಿದ ಶೇ.25ರಷ್ಟು ನೀರನ್ನು ಹಂಚಿಕೆ ಮಾಡಿರಲಿಲ್ಲ. ಆದಾಗ್ಯೂ, ಈ ಸೂತ್ರ ಹೆಚ್ಚು ಕಾಲ ಉಳಿಯಲಿಲ್ಲ.


●.ಜಲವಿದ್ಯುತ್ ಉತ್ಪಾದನೆಗೆ ತಟ್ಟಲಿದೆ ಬಿಸಿ
━━━━━━━━━━━━━━━━━━━━━━━
ತೀಸ್ತಾ ನದಿ ಜಲವಿದ್ಯುತ್​ನ ಮೂಲವೂ ಹೌದು. ಭಾರತದಲ್ಲಿ ತೀಸ್ತಾ ನದಿಯನ್ನು ಆಧರಿಸಿ 26 ಜಲವಿದ್ಯುತ್ ಯೋಜನೆಗಳನ್ನು ಸಿದ್ಧಪಡಿಸಲಾಗಿದ್ದು, ಈ ಪೈಕಿ ಹೆಚ್ಚಿನ ಯೋಜನೆಗಳು ಸಿಕ್ಕಿಂನಲ್ಲಿ ಸ್ಥಾಪಿತವಾಗಿವೆ. ಇವುಗಳ ಮೂಲಕ 50,000 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಬಾಂಗ್ಲಾದೇಶಕ್ಕೆ ನೀರು ಹಂಚಿಕೆ ಮಾಡಬೇಕಾದದ್ದೇ ಆದಲ್ಲಿ ಈ ಯೋಜನೆಗಳಿಗೆ ಅಡ್ಡಿಯಾಗಲಿದೆ.

(courtesy :ವಿಜಯವಾಣಿ ಸುದ್ದಿಜಾಲ )

Wednesday 21 June 2017

☀ ಬೇನಾಮಿ ಆಸ್ತಿಯೆಂದರೇನು? ಅದರ ಲಕ್ಷಣಗಳೇನು? ಹಾಗೂ ಯಾವುದು ಬೇನಾಮಿ ಆಸ್ತಿಯಾಗುವುದಿಲ್ಲ? What is a Benami (Innominate) Property? What are its features? And what are not to be considered as Benami (Innominate) Property?

☀ ಬೇನಾಮಿ ಆಸ್ತಿಯೆಂದರೇನು? ಅದರ ಲಕ್ಷಣಗಳೇನು? ಹಾಗೂ ಯಾವುದು ಬೇನಾಮಿ ಆಸ್ತಿಯಾಗುವುದಿಲ್ಲ?
What is a Benami (Innominate) Property? What are its features? And what are not to be considered as Benami (Innominate) Property?
━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


■. ಬೇನಾಮಿ ಆಸ್ತಿಯೆಂದರೆ ಮತ್ತೊಬ್ಬರ ಹೆಸರಿನಲ್ಲಿ ಕೊಳ್ಳಲಾದ ಆಸ್ತಿ. ಅಂದರೆ, ಆಸ್ತಿಯನ್ನು ಕೊಂಡಿರುವುದು ಒಬ್ಬ, ಆದರೆ ಹೆಸರು ನಮೂದಾಗಿರುವುದು ಮತ್ತೊಬ್ಬರದು.

ಆ ಆಸ್ತಿ ಸ್ಥಿರಾಸ್ತಿಯಾಗಿರಬಹುದು, ಬ್ಯಾಂಕ್ ನಲ್ಲಿ ಇಟ್ಟಿರುವ ಫಿಕ್ಸಡ್ ಠೇವಣಿಯೂ ಆಗಿರಬಹುದು. ತಮ್ಮ ಹೆಸರು ಬೆಳಕಿಗೆ ಬರಬಾರದೆಂದು ಇಚ್ಛಿಸುವವರು ಬೇರೆಯವರ ಹೆಸರಿನಲ್ಲಿ ಆಸ್ತಿ ಕೊಂಡಿರುತ್ತಾರೆ.


ಬೇನಾಮಿ ಆಸ್ತಿ ಕೊಂಡು ಸಿಕ್ಕಿಬಿದ್ದವರನ್ನು 1 ವರ್ಷದಿಂದ 7 ವರ್ಷಗಳ ವರೆಗೆ ಜೈಲಿಗಟ್ಟಬಹುದು. ಆಸ್ತಿಯ ಈಗಿನ ಬೆಲೆಯ ಶೇ.25ರಷ್ಟು ದಂಡವನ್ನೂ ಕಟ್ಟಿಸಿಕೊಳ್ಳಬಹುದು.

ನಕಲಿ ಮಾಹಿತಿ ಅಥವಾ ದಾಖಲೆ ನೀಡುವವರನ್ನು 6 ತಿಂಗಳಿನಿಂದ 5 ವರ್ಷದವರೆಗೆ ಜೈಲಿಗೆ ಕಳಿಸುವ ಅವಕಾಶ ಈ ಕಾಯ್ದೆಯಲ್ಲಿದೆ. ಅವರಿಗೆ ಆಸ್ತಿಯ ಮೌಲ್ಯದ ಶೇ.10ರಷ್ಟು ದಂಡವನ್ನೂ ವಿಧಿಸುವ ಸಾಧ್ಯತೆ ಇರುತ್ತದೆ.


■. ಬೇನಾಮಿ ಆಸ್ತಿ ಲಕ್ಷಣಗಳು.

ಮಕ್ಕಳು ಅಥವಾ ಗಂಡ/ಹೆಂಡತಿ ಹೆಸರಲ್ಲಿ ಆಸ್ತಿ ಹೊಂದಿದ್ದು, ಅದಕ್ಕಾಗಿ ಘೋಷಿತ ಆದಾಯ ಮೂಲಗಳಿಂದ ಹೊರತಾದ ಹಣ ಅಥವಾ ಇತರ ಗುಪ್ತ ಆದಾಯದಿಂದ ಖರೀದಿಸಿದ್ದರೆ

*ಸಹೋದರ, ಸಹೋದರಿ ಅಥವಾ ಸಂಬಂಧಿಗಳೊಂದಿಗೆ ಜಂಟಿ ಖಾತೆಯಲ್ಲಿ ಆಸ್ತಿ ಹೊಂದಿ ದ್ದರೆ, ಅದನ್ನು ನಿರ್ದಿಷ್ಟ ಆದಾಯೇತರ ಮೂಲಗಳಿಂದ ಖರೀದಿಸಿದ್ದರೆ,

*ನಿರ್ದಿಷ್ಟ ವ್ಯಕ್ತಿಯೊಬ್ಬ ತನಗೆ ನಂಬಿಕೆ ಇರುವ ಮೂರನೇ ವ್ಯಕ್ತಿಯ ಹೆಸರಲ್ಲಿ ಆಸ್ತಿ ಹೊಂದಿ ದ್ದರೆ ಅದು ಬೇನಾಮಿ ಆಸ್ತಿ.

*ಕಾನೂನಿನ ಪ್ರಕಾರ, ನಿರ್ದಿಷ್ಟ ಆದಾಯೇತರ ಮೂಲಗಳಿಂದ ಆಸ್ತಿ ಖರೀದಿಸಿ, ತಂದೆ-ತಾಯಿ ಹೆಸರಲ್ಲಿ ಇಟ್ಟುಕೊಂಡಿದ್ದರೂ ಅದು ಬೇನಾಮಿ ಆಸ್ತಿ ಎಂದೇ ಪರಿಗಣಿತವಾಗುತ್ತದೆ.


■. ಯಾವುದು ಬೇನಾಮಿ ಆಸ್ತಿ ಅಲ್ಲ

*ಹೆಂಡತಿ, ಮಕ್ಕಳ ಹೆಸರಲ್ಲಿ ಆಸ್ತಿ ಹೊಂದಿರುವುದು ಮತ್ತು ಅದನ್ನು ಘೋಷಿತ ಆದಾಯ ದಿಂದಲೇ ಖರೀದಿಸಿರುವುದು.

* ಸಹೋದರ, ಸಹೋದರಿ, ಸಂಬಂಧಿಗಳೊಂದಿಗೆ ಜಂಟಿ ಖಾತೆಯ ಆಸ್ತಿ ಹೊಂದಿರುವುದು ಮತ್ತು ಅದನ್ನು ಘೋಷಿತ ಆದಾಯದಿಂದ ಖರೀದಿಸಿರುವುದು.

*ನಂಬಿಕೆಯುಳ್ಳ ವ್ಯಕ್ತಿ ಹೆಸರಲ್ಲಿ ಆಸ್ತಿ ಇದ್ದರೂ, ಅದರ ಖರೀದಿ ಪ್ರಕ್ರಿಯೆಯ ವೇಳೆ ಆತನನ್ನೂ ಭಾದ್ಯಸ್ಥನನ್ನಾಗಿ ಮಾಡಿಕೊಂಡಿದ್ದರೆ, ಅದು ಬೇನಾಮಿ ಆಸ್ತಿ ಅಲ್ಲ.


ಬೇನಾಮಿ ಆಸ್ತಿಗಳ ವಿರುದ್ಧ ಇತ್ತೀಚೆಗೆ ತಿದ್ದಪಡಿ ಮಾಡಿದ ಬೇನಾಮಿ ವ್ಯವಹಾರ ನಿಯಂತ್ರಣ ಕಾಯ್ದೆ (PBPT) 2016 ನ.1ರಿಂದ ಜಾರಿಗೆ ಬಂದಿದೆ

Tuesday 16 May 2017

☀️' ರಾನ್ಸಮ್ ವೇರ್ 'ಎಂದರೇನು ? ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ? (What is Ransomware,? How the Ransomware does Cyber-attack?)

☀️' ರಾನ್ಸಮ್ ವೇರ್ 'ಎಂದರೇನು ? ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ?
(What is Ransomware,? How the Ransomware does Cyber-attack?)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಪ್ರಚಲಿತ ಘಟನೆಗಳು
:Current Affairs)


●. ರಾನ್ಸಮ್ ವೇರ್

 ರಾನ್ಸಮ್ ವೇರ್ ಎಂಬ ದುರುದ್ದೇಶಪೂರಿತ ಸಾಫ್ಟ್ ವೇರ್ ವಿಶ್ವದಾದ್ಯಂತ ಹಲವಾರು ಕಂಪೆನಿಗಳಿಗೆ ತೊಂದರೆಯಂಟು ಮಾಡಿದೆಯಲ್ಲದೆ ಸಾವಿರಾರು ಕಂಪ್ಯೂಟರುಗಳು ಬಾಧಿತವಾಗಿವೆ. ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ಹಾಗೂ ಜನರು ಅದಕ್ಕೆ ಹೇಗೆ ಬಲಿ ಬೀಳುತ್ತಾರೆಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುವ ದುರುಳರ ಬಗ್ಗೆ ನಾವು ಕೇಳಿದ್ದೇವಲ್ಲ, ಅಂತಹ ದುಷ್ಕರ್ಮಿಗಳು ಸೈಬರ್ ಲೋಕದಲ್ಲೂ ಇದ್ದಾರೆ. ಅವರು ಒತ್ತೆಯಾಳುಗಳಾಗಿ ಇರಿಸಿಕೊಳ್ಳುವುದು ಜನರನ್ನಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳನ್ನು!

ಈ ಕೆಟ್ಟ ಉದ್ದೇಶಕ್ಕಾಗಿ ಬಳಕೆಯಾಗುವ ತಂತ್ರಾಂಶಗಳನ್ನು 'ರಾನ್ಸಮ್‌ವೇರ್' (Ransomware) ಎಂದು ಗುರುತಿಸಲಾಗುತ್ತದೆ ('ರಾನ್ಸಮ್‌' ಎಂದರೆ ಸುಲಿಗೆಯ ಹಣ). ಸೈಬರ್ ಲೋಕವನ್ನು ಕಾಡುವ ಹಲವು ಬಗೆಯ ಕುತಂತ್ರಾಂಶಗಳಲ್ಲಿ ಇದೂ ಒಂದು.

ತಂತ್ರಾಂಶಗಳನ್ನು - ಕಡತಗಳನ್ನು ಗೂಢಲಿಪೀಕರಣಗೊಳಿಸಿ (ಎನ್‌ಕ್ರಿಪ್ಟ್ ಮಾಡಿ) ಬಳಸಲಾಗದಂತೆ ಮಾಡುವುದು ರಾನ್ಸಮ್‌ವೇರ್ ಕಾರ್ಯವೈಖರಿ. ಕೆಡಿಸಿದ ಕಡತಗಳನ್ನು ಮತ್ತೆ ಸರಿಪಡಿಸಬೇಕಾದರೆ ನಾವು ಕೇಳಿದಷ್ಟು ದುಡ್ಡುಕೊಡಿ ಎಂದು ಈ ಕುತಂತ್ರಾಂಶ ರೂಪಿಸಿದವರು ಬೇಡಿಕೆಯಿಡುತ್ತಾರೆ. ಕಂಪ್ಯೂಟರಿಗೆ - ಅದರಲ್ಲಿನ ಕಡತಗಳಿಗೆ ಪಾಸ್‌ವರ್ಡ್ ಹಾಕಿ ಲಾಕ್ ಮಾಡಿಟ್ಟು ಅದೇನೆಂದು ಹೇಳಲು ಹಣಕೇಳುವ ಉದಾಹರಣೆಗಳೂ ಇವೆ. ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳ ಜೊತೆಗೆ ಸ್ಮಾರ್ಟ್ ಟೀವಿಗಳಲ್ಲೂ ರಾನ್ಸಮ್‌ವೇರ್ ಹಾವಳಿ ಕಂಡುಬಂದಿದೆಯಂತೆ.


●. ವಾನ್ನಕ್ರೈ ಎಂದರೇನು ?

ವಾನಾಕ್ರಿಪ್ಟ್0ಆರ್ 2.0, ವಾನ್ನಕ್ರೈ ಅಥವಾ ಡಬ್ಲ್ಯುಕ್ರೈ ಎಂಬುದು ಒಂದು ವಿಧದ ರಾನ್ಸಮ್ ವೇರ್ ಆಗಿದ್ದು ನಿಮ್ಮ ಕಂಪ್ಯೂಟರಿನ ಫೈಲ್ ಗಳನ್ನು ಲಾಕ್ ಮಾಡಿ ಎನ್ಕ್ರಿಪ್ಟ್ ಮಾಡುವುದರಿಂದ ನೀವು ಮತ್ತೆ ಆ ಫೈಲ್ ಉಪಯೋಗಿಸುವುದು ಅಸಾಧ್ಯವಾಗುತ್ತದೆ.

ತಪ್ಪಾದುದನ್ನು ಕ್ಲಿಕ್ ಮಾಡಿ ಅಥವಾ ತಪ್ಪಾದುದನ್ನು ಡೌನ್ ಲೋಡ್ ಮಾಡಿದಾಗ ನಿಮ್ಮ ಕಂಪ್ಯೂಟರ್ ಪ್ರವೇಶಿಸುವ ಈ ರ್ಯಾನ್ಸಮ್ ವೇರ್ ನಿಮಗೆ ಬೇಕಿದ್ದುದನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ.


●. ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ?

ಈ ವಾನ್ನಾಕ್ರೈ ಪ್ರೊಗ್ರಾಂ ನಿಮ್ಮ ಫೈಲ್ ಗಳನ್ನು ಎನ್ಕ್ರಿಪ್ಟ್ ಮಾಡಿ ನಿಮಗೆ ಆ ಫೈಲ್ ಮತ್ತೆ ಬೇಕಿದ್ದರೆ ಬಿಟ್ ಕಾಯಿನ್ ಮುಖಾಂತರ ಹಣ ಪಾವತಿಗೆ ಬೇಡಿಕೆ ಸಲ್ಲಿಸಬೇಕೆಂದು ಹೇಳುತ್ತದೆ. ಹಣ ಪಾವತಿಯ ನಂತರವೂ ಬಳಕೆದಾರರೊಬ್ಬರಿಗೆ ಅವರ ಎನ್ಕ್ರಿಪ್ಟ್ ಮಾಡಲಾದ ಫೈಲ್ ಮತ್ತೆ ದೊರೆಯುವುದೆಂಬ ಖಾತರಿಯೇನಿಲ್ಲ. ಕೆಲ ರಾನ್ಸಮ್ ವೇರ್ ಗಳಂತೂ ಫೈಲ್ ಗಳನ್ನು ತಮ್ಮ ಹಿಡಿತದಲ್ಲಿರಿಸಿಕೊಂಡು ಕೆಲ ದಿನಗಳ ನಂತರ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಡುತ್ತವೆಯಲ್ಲದೆ ಆ ಫೈಲ್ ಗಳನ್ನು ಡಿಲೀಟ್ ಮಾಡುವ ಬೆದರಿಕೆಯನ್ನೂ ಒಡ್ಡುತ್ತವೆ.

ಕೆಲ ರಾನ್ಸಮ್ ವೇರ್ ಪ್ರೋಗ್ರಾಂಗಳು ಕಂಪ್ಯೂಟರನ್ನು ಸಂಪೂರ್ಣವಾಗಿ ಲಾಕ್ ಮಾಡಿಬಿಟ್ಟರೆ ಇನ್ನು ಕೆಲವು ಹಣ ಪಾವತಿ ಮಾಡಬೇಕೆನ್ನುವ ಮೆಸೇಜ್ ತೋರಿಸುತ್ತವೆ. ಮತ್ತೂ ಕೆಲವು ಮುಚ್ಚಲು ಸಾಧ್ಯವಾಗದಂತಹ ಪಾಪ್ ಅಪ್ ಗಳನ್ನು ಕಂಪ್ಯೂಟರ್ ಸ್ಕ್ರೀನುಗಳಲ್ಲಿ ಮೂಡಿಸುತ್ತವೆ.

ಈ ರಾನ್ಸಮ್ ವೇರ್ ಹಲವು ದೇಶಗಳಲ್ಲಿ ಹರಡಿದ್ದು ಆರಂಭಿಕ ವರದಿಗಳ ಪ್ರಕಾರ ಕನಿಷ್ಠ ಎರಡು ಡಜನ್ ದೇಶಗಳು ಬಾಧಿತವಾಗಿವೆ. ಎಂಟು ಏಷ್ಯನ್ ದೇಶಗಳು, ಎಂಟು ಯುರೋಪಿಯನ್ ದೇಶಗಳು, ಟರ್ಕಿ, ಆರ್ಜೆಂಟಿನಾ ಹಾಗೂ ಯುಎಇ ಕೂಡ ಈ ರಾನ್ಸಮ್ ವೇರ್ ನಿಂದ ತೊಂದರೆಗೊಳಗಾಗಿವೆ.

ರಾನ್ಸಮ್ ವೇರ್ ಕೇವಲ ಒಂದು ಪ್ರೊಗ್ರಾಂ ಆಗಿರದೆ ಒಂದು ಹುಳದಂತಿದ್ದು ಒಂದು ಕಂಪ್ಯೂಟರ್ ಪ್ರವೇಶಿಸಿದ ನಂತರ ಸಾಧ್ಯವಾದಷ್ಟು ಇತರ ಕಂಪ್ಯೂಟರುಗಳಿಗೆ ಹರಡಲು ಯತ್ನಿಸುತ್ತದೆ.


●. ಇದರ ಹಿಂದೆ ಯಾರಿದ್ದಾರೆ ?

ಶ್ಯಾಡೋ ಬ್ರೋಕರ್ಸ್ ಎಂಬ ಗುಂಪು ಈ ರಾನ್ಸಮ್ ವೇರ್ ಹಿಂದೆ ಇದೆಯೆನ್ನಲಾಗಿದೆ. ಈ ಹ್ಯಾಕಿಂಗ್ ಸಾಧನವನ್ನು ಅದು ಎನ್‌ಎಸ್‌ಎ ರಹಸ್ಯ ಸರ್ವರ್ ನಿಂದ ಪಡೆದಿದೆಯೆಂದು ಹೇಳಿಕೊಂಡಿದೆ.

2016ರಲ್ಲಿ ಮೊದಲು ಕಾಣಿಸಿಕೊಂಡ ಈ ಹ್ಯಾಕರ್ಸ್ ಗುಂಪಿಗೆ ರಷ್ಯಾ ಸರಕಾರದೊಂದಿಗೆ ನಂಟು ಇದೆಯೆಂದೂ ಹೇಳಲಾಗುತ್ತಿದೆ.

☀ ಇತ್ತೀಚೆಗೆ ಉದ್ಘಾಟನೆಗೊಂಡ ದೇಶದ ಅತಿ ಉದ್ದದ ರಸ್ತೆ ಸುರಂಗದ ವಿಶೇಷತೆ: (Specialities of India's Longest Tunnel Road Inaugurated recently)


☀ ಇತ್ತೀಚೆಗೆ ಉದ್ಘಾಟನೆಗೊಂಡ ದೇಶದ ಅತಿ ಉದ್ದದ ರಸ್ತೆ ಸುರಂಗದ ವಿಶೇಷತೆ:
(Specialities of India's Longest Tunnel Road Inaugurated recently)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(general studies)

★ ಪ್ರಚಲಿತ ಘಟನೆಗಳು.
(Current Affairs)


●.ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರವನ್ನು ಜಮ್ಮುವಿಗೆ ಸಂರ್ಪಸುವ ಚೆನಾನಿ ಮತ್ತು ನಶ್ರಿ ನಡುವಿನ ರಸ್ತೆ ಸುರಂಗ ಮಾರ್ಗವನ್ನು 02.04.2017 ರಂದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

●.ಒಂಬತ್ತು ಕಿ.ಮೀ. ಉದ್ದದ ಸುರಂಗ ಮಾರ್ಗ ದೇಶದ ಅತಿ ಉದ್ದದ ರಸ್ತೆ ಸುರಂಗ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ 1200 ಮೀಟರ್ ಎತ್ತರದಲ್ಲಿ ದ್ವಿಮುಖ ಮಾರ್ಗದಲ್ಲಿ ನಿರ್ವಿುಸಲಾಗಿರುವ ಈ ಸುರಂಗವು ಸರ್ವಋತು ಬಾಳಿಕೆಯ ರಸ್ತೆ ಹೊಂದಿದ್ದು, ಇದರ ನಿರ್ವಣಕ್ಕೆ 2,500 ಕೋಟಿ ರೂ. ವೆಚ್ಚವಾಗಿದೆ. ಐದೂವರೆ ವರ್ಷಗಳ ಅವಧಿಯ ಈ ಕಾಮಗಾರಿಯಲ್ಲಿ 1500 ತಂತ್ರಜ್ಞರು ಶ್ರಮಿಸಿದ್ದಾರೆ.

●.ಪರ್ವತ ಪ್ರದೇಶದಲ್ಲಿ ಈ ದಾರಿ ಹಾದು ಹೋಗುತ್ತಿತ್ತು. ಈ ಸುರಂಗ ಮಾರ್ಗ ನಿರ್ವಣದಿಂದ ಶ್ರೀನಗರ ಮತ್ತು ಜಮ್ಮು ನಡುವಣ ಪ್ರಯಾಣ 31 ಕಿ.ಮೀ. (ಚೆನಾನಿ ಮತ್ತು ನಶ್ರಿ ಮಧ್ಯೆಯ 44 ಕಿ.ಮಿ. ಅಂತರ 9 ಕಿ.ಮೀ.ಗೆ ಇಳಿಕೆ) ಕಡಿಮೆಯಾಗಲಿದ್ದು, ಸುಮಾರು ಎರಡು ತಾಸು ಪ್ರಯಣದ ಅವಧಿ ತಗ್ಗಲಿದೆ. ಪ್ರತಿದಿನ ಅಂದಾಜು 27 ಲಕ್ಷ ರೂ. ಮೌಲ್ಯದ ಇಂಧನವೂ ಉಳಿತಾಯ ಆಗಲಿದೆ.

●.ಈ ಸುರಂಗ ಮಾರ್ಗ ನಿರ್ವಣದಿಂದ ಪ್ರಯಾಣಿಕರಿಗೆ ಸಾಕಷ್ಟು ಭದ್ರತೆ ದೊರೆಯಲಿದೆ. ಜಮ್ಮುದ ಹಲವು ಭಾಗ ಉಗ್ರರ ಹಾವಳಿಗೆ ತುತ್ತಾಗಿದೆ. ರಸ್ತೆಯ ಮೇಲೆ ಸಂಚರಿಸುವ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ ಉದಾಹರಣೆ ಸಾಕಷ್ಟಿದೆ. ಸುರಂಗ ಮಾರ್ಗ ನಿರ್ವಣವಾಗಿದ್ದರಿಂದ ಉಗ್ರರ ದಾಳಿ ಸಾಧ್ಯತೆ ಕಡಿಮೆಯಾಗಿದೆ.

●.ಇದು ಸರ್ವಋತು ಮಾರ್ಗವಾಗಿದ್ದು, ಚಳಿಗಾಲದಲ್ಲಿ ಭಾರಿ ಹಿಮ ಸುರಿಯುತ್ತಿದ್ದರೂ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.


●.ಪ್ರಮುಖ ಅಂಶಗಳು :

- 1200 ಮೀಟರ್ ಎತ್ತರದ ಪರ್ವತ ಶ್ರೇಣಿಯಲ್ಲಿನ ರಸ್ತೆ ಸುರಂಗ

- ದ್ವಿಮುಖ ಮಾರ್ಗದ ಸುರಂಗಕ್ಕೆ 2,500 ಕೋಟಿ ರೂ. ವೆಚ್ಚ- ಐದೂವರೆ ವರ್ಷಗಳಲ್ಲಿ ನಿರ್ಮಾಣ

- ಸುರಂಗದಲ್ಲಿ 9.35 ಮೀಟರ್ ಅಗಲದ ರಸ್ತೆ- ಸುರಂಗದ ಎತ್ತರ 5 ಮೀಟರ್

- 31 ಕಿ.ಮೀ. ಪ್ರಯಾಣ ಇಳಿಕೆ

- ತುರ್ತ ನಿರ್ಗಮನದ ಮಾರ್ಗಗಳು- ಮಾಹಿತಿ ಘೊಷಣಾ ವ್ಯವಸ್ಥೆ

- ಪ್ರತಿ 300 ಮೀಟರ್ ಅಂತರಕ್ಕೆ ಒಂದರಂತೆ ಅಡ್ಡರಸ್ತೆಗಳ ನಿರ್ಮಾಣ

- ಪ್ರತಿ 150 ಮೀಟರ್​ಗೆ ಒಂದು ತುರ್ತಕರೆಯ ದೂರವಾಣಿ ಪೆಟ್ಟಿಗೆ

- ಸಮಗ್ರ ಸಂಚಾರ ನಿಯಂತ್ರಣ ವ್ಯವಸ್ಥೆ ಮತ್ತು 124 ಸಿಸಿಟಿವಿ ಕ್ಯಾಮೆರಾ ಅಳವಡಿಕೆ

- ಗಾಳಿಯಾಡಲು ಸಮರ್ಪಕ ವಾತಾನುಕೂಲ- ಬೆಂಕಿ ಅವಘಡ ನಿಯಂತ್ರಣದ ವ್ಯವಸ್ಥೆ

-ಉಗ್ರರಿಂದ ರಕ್ಷಣೆ

(Courtesy : Vijayavani) 

Wednesday 10 May 2017

☀️ ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ : (️ From Aryabhata to GSAT-9 Satellite: Glance on ISRO achievement)

☀️ ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ :
(️ From Aryabhata to GSAT-9 Satellite:  Glance on ISRO achievement)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ವಿಜ್ಞಾನ
(General Science)



ಭಾರತದ ಏಕೈಕ ಬಾಹ್ಯಾಕಾಶ ಕೇಂದ್ರ ಶ್ರೀಹರಿ ಕೋಟಾದಿಂದ ಜಿಎಸ್ಎಲ್ ವಿ-09 ಉಪಗ್ರಹ ಮೇ 5ರಂದು ಉಡಾವಣೆಗೊಳ್ಳುವ ಮೂಲಕ ಇಸ್ರೋದ ಮತ್ತೊಂದು ಬಾಹ್ಯಾಕಾಶ ಯಾನಕ್ಕೆ ಸಾಕ್ಷಿಯಾಯಿತು.

ಕಳೆದ ಫೆಬ್ರವರಿ 15ರಂದು ಭಾರತ 104 ಸ್ಯಾಟಲೈಟ್ ಗಳನ್ನು ಒಂದು ರಾಕೆಟ್ ನಲ್ಲಿ ಉಡಾಯಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಮಾಮ್ನಿಂದ ಜಿಎಸ್ಎಲ್ ವಿ-9 ವರೆಗೆ ಆರ್ಯಭಟದಿಂದ ಇಲ್ಲಿಯವರೆಗೆ ಭಾರತ ಉಪಗ್ರಹ ಉಡಾವಣೆಯಲ್ಲಿ ಬಹುದೂರ ಸಾಗಿ ಬಂದಿದೆ.


ಹಳೆಯ ನೆನಪಿನ ಬುತ್ತಿಯನ್ನು ಕೆದಕಿದಾಗ ಇಸ್ರೋದ ಮಹತ್ವದ ಹೆಜ್ಜೆ ಗುರುತುಗಳನ್ನು ನೋಡಬಹುದು.

1975, ಆರ್ಯಭಟ
-------------
ಭಾರತದ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹ ಆರ್ಯಭಟವನ್ನು ಸೋವಿಯತ್ ಒಕ್ಕೂಟ ಉಡಾಯಿಸಿತು. ಅಂತರಿಕ್ಷದಲ್ಲಿ 19 ವರ್ಷಗಳ ಕಾಲ ಪ್ರಯಾಣ ಮಾಡಿ ಭೂ ಕಕ್ಷೆಯನ್ನು ಮರು ಪ್ರವೇಶಿಸಿತು. ಖಗೋಳಶಾಸ್ತ್ರ ಮತ್ತು ಸೌರ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಆರ್ಯಭಟ ಉಪಗ್ರಹವನ್ನು ಬಳಸಲಾಯಿತು.

1979, ಭಾಸ್ಕರ್
------------
ಅರಣ್ಯ, ಜಲ ವಿಜ್ಞಾನ, ಭೂ ವಿಜ್ಞಾನಕ್ಕೆಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸಲು ಈ ಉಪಗ್ರಹವನ್ನು ಬಳಸಿಕೊಳ್ಳಲಾಗುತ್ತಿದ್ದು ಕಾಪುಸ್ತಿನ್ ಯಾರ್ ನಲ್ಲಿ ಉಡಾಯಿಸಲಾಯಿತು. ಭಾಸ್ಕರ್ ಮೂಲಕವೇ ಟಿ ವಿ ಮತ್ತು ಕ್ಯಾಮರಾಗಳ ಆರಂಭವಾಯಿತು.

1980, ರೋಹಿಣಿ
------------
ಎಸ್ಎಲ್ ವಿ-3 ಹಾಗೂ ರೋಹಿಣಿಯನ್ನು ಒಟ್ಟಿಗೆ ಎರಡನೇ ಪ್ರಯೋಗಾತ್ಮಕ ಉಪಗ್ರಹವಾಗಿ ಉಡಾಯಿಸಲಾಯಿತು.ಕಾರ್ಯಾಚರಣೆ ಯಶಸ್ವಿಯಾಯಿತು.

1981,ಭಾಸ್ಕರ 2
-------------
ಭೂ ಕಕ್ಷೆಗೆ 1991ರಲ್ಲಿ ಮರು ಪ್ರವೇಶಿಸಿತು ಹಾಗೂ ಭೂಮಿ ಮತ್ತು ನೀರಿನ ವಲಯಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿತು. ಅಸಮರ್ಪಕವಾಗಿ ಕೆಲಸ ಮಾಡಿದಎರಡು ಕ್ಯಾಮರಾಗಳಲ್ಲಿ ಒಂದನ್ನು ಸುಮಾರು 2,000 ಚಿತ್ರಗಳನ್ನು ವಾಪಸ್ಸು ಕಳುಹಿಸಲಾಯಿತು.

1982, ಇನ್ಸಾಟ್-1 ಎ
----------------
ಅಮೆರಿಕಾ ರಾಕೆಟ್ ಮೂಲಕ ಉಡಾಯಿಸಲಾದ ಸಂವಹನ ಉಪಗ್ರಹ. ಇದು ನಮ್ಮ ದೇಶದ ಮೊದಲ ಹವಾಮಾನಶಾಸ್ತ್ರ ಉಪಗ್ರಹವಾಗಿದೆ.1983, ಇನ್ಸಾಟ್-2ಬಿ: ಇನ್ಸಾಟ್-1ಎಯ ಪ್ರತಿಬಿಂಬವಾಗಿದ್ದು 7 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದೆ.

1988, ಐಆರ್ಎಸ್-1ಎ
-----------------
ರಷ್ಯಾ ರಾಕೆಟ್ ಮೂಲಕ ಉಡಾವಣೆಗೊಂಡ ಭಾರತೀಯ ರಿಮೋಟ್ ಸೆನ್ಸಿಂಗ್(ಐಆರ್ಎಸ್) ಉಪಗ್ರಹವಾಗಿದೆ. ಆದರೆ ಈ ಕಾರ್ಯಾಚರಣೆ ವಿಫಲವಾಯಿತು.

1992, ಇನ್ಸಾಟ್-2ಡಿಟಿ
-----------------
*1,360 ಕೆಜಿ ತೂಕದ ಈ ಉಪಗ್ರಹವನ್ನು ಆರಂಭದಲ್ಲಿ ಅರಬ್ ಮತ್ತು ನಂತರ ಭಾರತೀಯ ಸಂವಹನ ಉಪಗ್ರಹವಾಗಿ ಉಡಾಯಿಸಲಾಯಿತು. ಉದನ್ನು ಫ್ರಾನ್ಸ್ ನ ಗಯಾನಾದಲ್ಲಿ ಉಡಾಯಿಸಲಾಯಿತು.*

1994,ವಿಸ್ತರಿಸಿದೆ.
ರೋಹಿಣಿ ಉಪಗ್ರಹ ಸರಣಿ
---------------------------
ಅಂತರಿಕ್ಷಕ್ಕೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪೇ ಲೋಡ್ಸ್ ಗಳನ್ನು ಹೊತ್ತೊಯ್ದ ಗುಂಪು ಉಪಗ್ರಹಗಳು ಗಾಮಾ ಕಿರಣ ಸ್ಫೋಟಗಳನ್ನು ಕಂಡು ಹಿಡಿಯುವಲ್ಲಿ ಇದು ಸಹಾಯ ಮಾಡಿದೆ.

1997, ಐಆರ್ಎಸ್ 1-ಡಿ
-----------------
ದೂರಸ್ಥಸಂವೇದನಾ ಉಪಗ್ರಹಗಳಲ್ಲಿ ಇದು ಏಳನೆಯದಾಗಿದೆ. ಇದನ್ನುಇಸ್ರೋ ನಿರ್ಮಿಸಿ ಉಡಾಯಿಸಿ,ಕಾರ್ಯನಿರ್ವಹಿಸಿದ ಉಪಗ್ರಹವಾಗಿದೆ. 12 ವರ್ಷಗಳ ಸೇವೆ ನಂತರ 2010ರಲ್ಲಿ ಪೂರ್ಣಗೊಂಡಿತು.

2001, ಜಿಸ್ಯಾಟ್-1
--------------
ಜಿಎಸ್ಎಲ್ ವಿ ಅಧಿಕ ಭಾರದ ರಾಕೆಟ್ ನ್ನು ಜಿಸ್ಯಾಟ್-1 ಮೂಲಕ ಯಶಸ್ವಿಯಾಗಿ ಉಡಾಯಿಸಿತು.

2002, ಕಲ್ಪನ-1
-------------
ಮೆಟ್ ಸಾಟ್ ದೇಶದ ಮೊದಲ ಮೀಸಲಾದ ಹವಾಮಾನ ಉಪಗ್ರಹವಾಗಿದ್ದು ಅದಕ್ಕೆ ಕಲ್ಪನ ಎಂದು ಮರು ನಾಮಕರಣ ಮಾಡಲಾಯಿತು.

ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಡಲಾಯಿತು. ಏಳು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು ಹವಾಮಾನ ಮತ್ತು ಪರಿಸರದ ಸಂಬಂಧಿತ ಮಾಹಿತಿಯನ್ನು ಒಟ್ಟುಗೂಡಿಸಲು ಬಳಸಲಾಗಿದೆ.

2004, ಎಜುಸ್ಯಾಟ್
--------------
ದೇಶದ ಮೊದಲ ಶಿಕ್ಷಣ ಆಧಾರಿತ ಉಪಗ್ರಹವಾಗಿದ್ದು, ಸ್ಮಾರ್ಟ್ ತರಗತಿಗಳ ಪರಿಕಲ್ಪನೆ ಇದರಿಂದ ಹುಟ್ಟಿಕೊಂಡಿತು. ಎರಡು ಮಾರ್ಗಗಳ ಮೂಲಕ ಸಂವಹನ ಇದರಲ್ಲಿ ಸಾಧ್ಯವಿದ್ದು ತರಗತಿಗಳಿಗೆ ಶಿಕ್ಷಣದ ಸಾಮಗ್ರಿಗಳನ್ನು ಪೂರೈಸುತ್ತದೆ.

2005, ಕಾರ್ಟೊಸ್ಯಾಟ್-1
------------------
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಇದನ್ನು ಉಡಾಯಿಸಲಾಯಿತು. ಪ್ರಾದೇಶಿಕ, ಸ್ಪೆಕ್ಟ್ರಲ್ ಮತ್ತು ರೇಡಿಯೊಮೆಟ್ರಿಕ್ ನಿರ್ಣಯಗಳನ್ನು ಸುಧಾರಿಸುವ ಕಾರ್ಯಾಚರಣೆ ಮತ್ತು ಅಂಕಿಅಂಶಗಳ ಸಂಗ್ರಹವನ್ನು ಹೊಂದಿದೆ.

2007, ಕಾರ್ಟೊಸ್ಯಾಟ್-2
-----------------
ಸ್ಪೇಸ್ ಕ್ಯಾಪ್ಸುಲ್ ರಿಕವರಿ ಪ್ರಯೋಗ ಮತ್ತು ಎರಡು ವಿದೇಶಿ ಸ್ಯಾಟಲೈಟ್ ಗಳ ಉಡಾವಣೆಯನ್ನು ಇದು ಹೊಂದಿದೆ.

2008, ಚಂದ್ರಯಾನ
--------------
ಶ್ರೀ ಹರಿಕೋಟಾದಿಂದ ಮೊದಲ ಚಂದ್ರಪರಿಶೋಧನೆ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಇದು ಎರಡು ವರ್ಷಗಳ ಜೀವಿತಾವಧಿ ಹೊಂದಿತ್ತು. ಗ್ರಹಗಳ ಮತ್ತು ದೂರಸ್ಥ ಸಂವೇದನಾ ಕ್ಷೇತ್ರಗಳನ್ನು ಒಳಗೊಂಡಿದೆ.

2011, ಯೂತ್ ಸ್ಯಾಟ್
---------------
ಭಾರತ-ರಷ್ಯಾ ಜಂಟಿಯಾಗಿ ಉಡಾಯಿಸಿದ ಉಪಗ್ರಹವಿದು. ಪದವಿ, ಸ್ನಾತಕ ಪದವಿ ಮತ್ತು ಸಂಶೋಧನಾ ತಜ್ಞರನ್ನು ಒಟ್ಟಿಗೆ ತರುತ್ತದೆ. ಭಾರತದಮಿನಿ ಸ್ಯಾಟಲೈಟ್ ಸರಣಿಯ ಭಾಗವಾಗಿದ್ದು ಎರಡನೆಯದಾಗಿದೆ.

2013, ಮಾಮ್
------------
ಮಂಗಳಯಾನ ಎಂದು ಕರೆಯಲ್ಪಡುವ ಮಾರ್ಸ್ ಆರ್ಬಿಟರ್ ಮಿಷನ್ ಅಂತರಗ್ರಹ ಸ್ಥಳಕ್ಕೆ ಭಾರತದ ಮೊದಲ ಬಾಹ್ಯಾಕಾಶ ಪ್ರಯಾಣವಾಗಿದೆ.

2014, ಜಿಸ್ಯಾಟ್ 16
---------------
ಸಂವಹನ ಉಪಗ್ರಹ. ತೆರೆದ-ಸಾಮರ್ಥ್ಯದ ಆಂಟೆನಾವನ್ನು ಜಿಸ್ಯಾಟ್ 16 ಒಳಗೊಂಡಿದೆ.

2015, ಜಿಸ್ಯಾಟ್ 15
---------------
ಕು ಬಾಂಡ್ ನಲ್ಲಿ ಹೊತ್ತೊಯ್ಯುವ ಸಂವಹನ ಟ್ರಾನ್ಸ್ಪೋರ್ಡರ್ಗಳನ್ನು ಒಳಗೊಂಡಿದೆ.

2016, ಸ್ಕ್ಯಾಟ್ ಸಾಟ್-1
-----------------
ಚಂಡಮಾರುತ, ಗಾಳಿ, ಹವಾಮಾನ ಮುನ್ಸೂಚನೆ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತದೆ. 5 ವರ್ಷಗಳ ಜೀವಿತಾವಧಿ ಹೊಂದಿದೆ.

2017, ಕಾರ್ಟೊಸ್ಯಾಟ್ 2 ಡಿ
-------------------
ಪಿಎಸ್ಎಲ್ ವಿ ಒಂದು ಉಡಾವಣಾ ವಾಹಕದ ಮೂಲಕ ಏಕಕಾಲಕ್ಕೆ 104 ಸ್ಯಾಟಲೈಟ್ಗಳನ್ನು ಉಡಾಯಿಸಿ ಇತಿಹಾಸ ನಿರ್ಮಿಸಿತು.

2017, ಜಿಸ್ಯಾಟ್-9
--------------
ದಕ್ಷಿಣ ಏಷ್ಯಾ ದೇಶಗಳಿಗೆ ನೆರೆಯ ರಾಷ್ಟ್ರಗಳಿಗೆ ಭಾರತ ನೀಡಿದ ಕೊಡುಗೆಯಿದು. ಸಂವಹನ ಉಪಗ್ರಹ.

Friday 21 April 2017

Updated***■."ಸ್ಪರ್ಧಾಲೋಕ" — ಈಗ WhatsApp, Telegram ಮತ್ತು Facebook ಗಳಲ್ಲಿ.

■."ಸ್ಪರ್ಧಾಲೋಕ" — ಈಗ WhatsApp, Telegram ಮತ್ತು Facebook ಗಳಲ್ಲಿ.
━━━━━━━━━━━━━━━━━━━━━━━━━━━━━━━━━━━━━━━━━━

ಹಲೋ ಗೆಳೆಯರೆ...

●. ಸ್ಪರ್ಧಾಲೋಕವನ್ನು ಸಾಧ್ಯವಾದಷ್ಟು ಮಟ್ಟಿಗೆ ಇನ್ನೂ ಪರಿಣಾಮಕಾರಿಯಾಗಿ ಜ್ಞಾನ ಹಂಚಿಕೊಳ್ಳುವಂತಾಗಲು... ಜ್ಞಾನದಾಹಿಗಳಿಗೆ, ಪ್ರತಿಭೆಗಳಿಗೆ ನಮ್ಮ ಮಾತೃಭಾಷೆಯಾದ  ಕನ್ನಡದಲ್ಲಿ  ತ್ವರಿತವಾಗಿ ಜ್ಞಾನ ಮಾಹಿತಿಗಳನ್ನು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಉಪಯುಕ್ತ ನೋಟ್ಸ್ ನ್ನು ಪಡೆಯಲು ಸಹಕಾರಿಯಾಗಲೆಂದು ನಾನು ಸಾಮಾಜಿಕ ಜಾಲತಾಣಗಳಾದ WhatsApp, Telegram ಮತ್ತು Facebook ಗಳನ್ನು  ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಒಂದು ಚಿಕ್ಕ ಪ್ರಯತ್ನ ಕೈಗೊಂಡಿದ್ದೇನೆ.

●. ಇದು ನಿರ್ದಿಷ್ಟ ಗುರಿಗಳನ್ನು ಹೊಂದಿದ ಸ್ಪರ್ಧಾರ್ಥಿಗಳನ್ನು ಒಂದೆಡೆಗೆ ಸಂಘಟಿಸಿ ಆ ಮೂಲಕ ಜ್ಞಾನದ ಸರ್ವ ಎಲ್ಲೆಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಲು ಸಹಕಾರಿಯಾಗುವುದೆಂದು ನನ್ನ ಅಭಿಪ್ರಾಯ.

●. ಈ ಗ್ರುಪ್ ಕೇವಲ ಜ್ಞಾನ ಹಂಚಿಕೆಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ರೀತಿಯ (Chatting) ಸಂಭಾಷಣೆಗೆ, ಯಾವುದೇ ವ್ಯಕ್ತಿಯ ಬಗ್ಗೆ, ರಾಜಕಾರಣಿಗಳ ಬಗ್ಗೆ, ರಾಜಕೀಯ ಪಕ್ಷಗಳ ಬಗ್ಗೆ, ಧರ್ಮಗುರುಗಳ ಬಗ್ಗೆ, ಧರ್ಮದ ಬಗ್ಗೆ, ಸಂಸ್ಥೆಗಳ ಬಗ್ಗೆ ಟೀಕೆ ಟಿಪ್ಪಣಿಗಳಿಗೆ ಇಲ್ಲಿ ಆಸ್ಪದವಿಲ್ಲ.

●.ವಿಶೇಷವಾಗಿ ಐಎಎಸ್ (IAS) ಮತ್ತು ಕೆಎಎಸ್ (KAS) ನಂಥ  ಮುಖ್ಯ ಪರೀಕ್ಷೆಗಳಿಗೆ (MAIN EXAMS) ಮುಖ್ಯವಾಗಿ ಕನ್ನಡ ಮಾತೃಭಾಷೆಯಲ್ಲಿ  ಸಿದ್ಧತೆ ನಡೆಯುತ್ತಿರುವ ಅಭ್ಯರ್ಥಿಗಳಿಗಾಗಿ  ವಿವರಣಾತ್ಮಕ ಟಿಪ್ಪಣಿ / ಬರಹಗಳನ್ನು ಪೂರೈಸುವ ನಿಟ್ಟಿನಲ್ಲಿ ಒಂದು ಚಿಕ್ಕ ಪ್ರಯತ್ನ ಇದಾಗಿದೆ.

●. ಗ್ರುಪ್ ನಲ್ಲಿ ಪ್ರತಿದಿನವೂ ಕ್ವಿಝ್ ಕಾರ್ಯಕ್ರಮ (PC, PSI, PDO, RDO, RRB, TET ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು) ಹಾಗೂ ಚರ್ಚಾಕೂಟ ಹಮ್ಮಿಕೊಳ್ಳಲಾಗುವುದು.

●. ಪ್ರತಿದಿನ ಒಂದು ವಿಷಯದ ಬಗ್ಗೆ ಚರ್ಚೆಯನ್ನು ನಡೆಸಲಾಗುವುದು. ಪ್ರತಿಯೊಬ್ಬರಿಗೂ ಅವರ ಸಲಹೆ comment ಕೊಡಲು ಅವಕಾಶವಿದ್ದು, ಇಲ್ಲಿ ಇನ್ನೊಬ್ಬರಿಗೆ ಮಾನಹಾನಿ,  ಮಾನಸಿಕ ಕಿರಿಕಿರಿ, ಗೊಂದಲವುಂಟಾಗದ ಹಾಗೆ ಸರ್ವರಿಗೂ ಅನ್ವಯವಾಗುವ, ಪರೀಕ್ಷೆಗಳಿಗೆ ಸಹಾಯವಾಗುವ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಎಲ್ಲರೂ ಹಂಚಿಕೊಳ್ಳಬಹುದು.

■. incase ತಮ್ಮಲ್ಲಿ ಏನಾದರೂ ಸಂದೇಹಗಳಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ. ಗ್ರುಪ್ ನಲ್ಲಿ ಯಾವುದೇ ವೈಯುಕ್ತಿಕ Chatting ಗೆ ಆಸ್ಪದವಿರುದಿಲ್ಲ.

●. Seriously. ಜೀವನದಲ್ಲಿ ಏನಾದರೊಂದು ಸಾಧಿಸಿ ತೋರಿಸಬೇಕೆಂದುಕೊಂಡವರಿಗೆ ಈ ಗ್ರುಪ್ ಗೆ ಸ್ವಾಗತ.

••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

1) Telegram :
☀'ಸ್ಪರ್ಧಾಲೋಕ'-'IAS/KAS..in ಕನ್ನಡದಲ್ಲಿ'. Telegram Channel :—
Add ಆಗಲು ಈ ಲಿಂಕ್ ಗೆ ಕ್ಲಿಕ್ ಮಾಡಿ.(Link to Join)...
"ಐಎಎಸ್ /ಕೆಎಎಸ್ ಪರೀಕ್ಷಾ ಸಂಬಂಧಪಟ್ಟಂತೆ ಕನ್ನಡದಲ್ಲಿ ವಿಸ್ತೃತ ನೋಟ್ಸ್ ಒದಗಿಸುವ ಒಂದು ಚಿಕ್ಕ ಪ್ರಯತ್ನ "(IAS/KAS Notes in Kannada)

👉Add ಆಗಲು ಈ ಲಿಂಕ್ ಗೆ ಕ್ಲಿಕ್ ಮಾಡಿ...👇

👉 ಸ್ಪರ್ಧಾಲೋಕ ಚರ್ಚಾಕೂಟ (Discussion) SUPERGROUP ಗೆ Add ಆಗಲು ಈ ಲಿಂಕ್ ಗೆ ಕ್ಲಿಕ್ ಮಾಡಿ...👇


🌍"ಸ್ಪರ್ಧಾಲೋಕ ಬ್ಲಾಗ್ ಲಿಂಕ್ "🌎
Blog link..👉 https://www.spardhaloka.blogspot.com


2) Facebook :
ಫೇಸಬುಕ್ ಪೇಜಿಗೆ Add ಆಗಲು ಈ ಲಿಂಕ್ ಗೆ ಕ್ಲಿಕ್ ಮಾಡಿ...


3) WhatsApp :


ಇಲ್ಲಿ ವೈಯುಕ್ತಿಕ ಮೋಬೈಲ್ ನಂ ಗಳು Misuse ಆಗಬಾರದೆಂಬ ಕಾರಣದಿಂದ Confidential ಕಾಪಾಡಿಕೊಳ್ಳಲು ಮೊದಲು Telegram ನಲ್ಲಿ join ಆಗಿ, ಚರ್ಚಿಸಿಯೇ ನಂತರ ಅಲ್ಲಿಂದ whatsApp ಗ್ರುಪ್ ಗೆ ಸೇರಿಸಿಕೊಳ್ಳಲಾಗುವುದು.