"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 14 August 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ XI: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ (PDO Study Materials : Panchayath Raj Act- 73ed Constitutional Amendment)

●.ಪಿಡಿಓ (PDO) ಅಧ್ಯಯನ ಸಾಮಗ್ರಿ XI: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(PDO Study Materials : Panchayath Raj Act- 73ed Constitutional Amendment)
•─━━━━━═══════════━━━━━─••─━━━━━═══════════━━━━━─•

★ ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(Panchayath Raj Act- 73ed Constitutional Amendment)

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)


81. 73 ನೇ ತಿದ್ದುಪಡಿಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಮೂರು ಹಂತದ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು.

82. 73 ನೇ ತಿದ್ದುಪಡಿಯನ್ವಯ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ವಿಶೇಷವಾಗಿ ಶೇ.33 ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಲಾಗಿದೆ. ಇದರಲ್ಲಿ ಅತ್ಯಂತ ಹಿಂದುಳಿದ ವರ್ಗಕ್ಕೆ ಶೇ.80 ಹಾಗೂ ಹಿಂದುಳಿದ ವರ್ಗಕ್ಕೆ ಶೇ.20 ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ.

83. ಕರ್ನಾಟಕ ಪಂಚಾಯಿತಿ ರಾಜ್ ಕಾಯಿದೆಗೆ 2002 ರಲ್ಲಿ ತಿದ್ದುಪಡಿಯನ್ನು ತರುವ ಮೂಲಕ ವಾರ್ಡ್ ಸಭೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

84. ಕರ್ನಾಟಕದಲ್ಲಿ ರಾಜ್ಯ ಮಟ್ಟದಲ್ಲಿ ಪಂಚಾಯಿತಿ ರಾಜ್ ಸಂಸ್ಥೆಗಳ ಅಭಿವೃದ್ದಿ ಕುರಿತು ಚರ್ಚಿಸಿ ಸಲಹೆ ನೀಡಲು ಪೂರಕವಾಗಿ ರಾಜ್ಯ ಪಂಚಾಯಿತಿ ಕೌನ್ಸಿಲ್ ರಚನೆಗೆ ಅವಕಾಶ ಕಲ್ಪಿಸಿದೆ.

85. ಸಂವಿಧಾನದ 73 ನೇ ತಿದ್ದುಪಡಿ ಗ್ರಾಮ ಸಭೆಗಳನ್ನು ಅಸ್ತಿತ್ವಕ್ಕೆ ತಂದಿತು. ಇದರಲ್ಲಿ ಕರ್ನಾಟಕವು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಳಮಟ್ಟದಲ್ಲಿ ವಾರ್ಡ್ ಸಭೆಗಳನ್ನು ಹುಟ್ಟು ಹಾಕಿದೆ.

86. 6 ತಿಂಗಳಿಗೊಮ್ಮೆ ವಾರ್ಡ್ ಸಭೆ ನಡೆಸುವುದು

87. ವರ್ಷಕ್ಕೆ ಎರಡು ಬಾರಿ ವಾರ್ಡ್ ಸಭೆ ನಡೆಸುವುದು.

88. ವಾರ್ಡಿನ ಮತದಾರರ ಶೇ.10 ರಷ್ಟು ಅಥವಾ 20 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅದು ವಾರ್ಡ್ ಸಭೆಯ ಕೋರಂ .

89. ವಾರ್ಡ್ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33 ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು . ಪರಿಶಿಷ್ಠ ಜಾತಿ / ಪಂಗಡಗಳ ಜನರ ಹಾಜಾರಾತಿ ಪ್ರಮಾಣ ಅವರ ಒಟ್ಟು ಜನಸಂಖ್ಯೆಗೆ ಅನುಗುಣವಾಗಿರಬೇಕು .

90. ವಾರ್ಡ್ ಸಭೆಯ ಅಧ್ಯಶ್ರತೆಯನ್ನು ಆ ವಾರ್ಡಿನ ಸದಸ್ಯರೇ ವಹಿಸಬೇಕು . ಒಂದು ವಾರ್ಡಿನಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಇರುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನಾಮ ನಿರ್ದೇಶ ಮಾಡಿದ ಅದೇ ವಾರ್ಡಿನ ಇತರ ಸದಸ್ಯ ಅಧ್ಯಕ್ಷತೆ ವಹಿಸಬೇಕು.

91. ವಾರ್ಡ್ ಸಭೆಯ ಕಾರ್ಯಸೂಚಿಯನ್ನು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಬೇಕು

92. ಕನಿಷ್ಠ ಒಂದು ವಾರಕ್ಕೆ ಮುಂಚಿತವಾಗಿ ವಾರ್ಡ್ ಸಭೆಗೆ ಸಾಕಷ್ಟು ಪ್ರಚಾರ ನೀಡಬೇಕು.

93. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ ಸಭೆಗಳನ್ನು ಮೊದಲು ನಡೆಸಬೇಕು . ನಂತರ ಒಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಗ್ರಾಮ ಸಭೆಯನ್ನು ನಡೆಸಬೇಕು.

94. ಗ್ರಾಮ ಸಭೆಯನ್ನು ಕನಿಷ್ಠ 6 ತಿಂಗಳಿಗೊಮ್ಮೆ ನಡೆಸಬೇಕು.

95. ಗ್ರಾಮ ಸಭೆಯ ಶೇ.10 ಕ್ಕಿಂತ ಕಡಿಮೆಯಿಲ್ಲದ ಸದಸ್ಯರ ಕೋರಿಕೆಯ ಮೇರೆಗೆ ವಿಶೇಷ ಗ್ರಾಮಸಭೆಯನ್ನು ಕರೆಯಲು ಕಾಯಿದೆಯಲ್ಲಿ ಅವಕಾಶ ಕಲ್ಪಿಸಿದೆ. ಇಂತಹ ಸಂದರ್ಭಗಳಲ್ಲಿ ಗ್ರಾಮ ಸಭೆಗಳನ್ನು ಕರೆಯುವುದು ಕಡ್ಡಾಯವಾಗಿದೆ. ಆದರೆ ವಿಶೇಷ ಗ್ರಾಮ ಸಭೆಗಳ ನಡುವೆ ಕನಿಷ್ಟ ಮೂರು ತಿಂಗಳ ಅಂತರವಿರಬೇಕು.

96. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರೇ ವಹಿಸಬೇಕು. ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಅಥವಾ ಗ್ರಾಮ ಪಂಚಾಯಿತಿ ನಾಮ ನಿರ್ದೇಶನ ಮಾಡಿದ ಸದಸ್ಯರು ವಹಿಸಬೇಕು.

97. ಗ್ರಾಮ ಸಭೆ ಸದಸ್ಯರ ಒಟ್ಟು ಸಂಖ್ಯೆಯ 1/10 ಕ್ಕೆ ಕಡಿಮೆಯಿಲ್ಲದಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೇಯೋ ಅದು ಗ್ರಾಮ ಸಭೆಯ ಕೋರಂ .

98. ಗ್ರಾಮ ಸಭೆಗೆ ಪ್ರತಿ ವಾರ್ಡಿನಿಂದ ಕನಿಷ್ಟ 10 ಜನರು ಗ್ರಾಮ ಸಭೆಯಲ್ಲಿ ಪಾಲ್ಗೋಳ್ಳುವಂತೆ ನೋಡಿಕೊಳ್ಳಬೇಕು.

99. ಗ್ರಾಮ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33 ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು. ಪರಿಶಿಷ್ಟ ಜಾತಿ / ಪಂಗಡ ಜನರ ಹಾಜರಾತಿ ಪ್ರಮಾಣ ಅವರ ಜನಸಂಖ್ಯೆಗೆ ಅನುಗುಣವಾಗಿರಬೇಕು.

100. ಪ್ರಕರಣ 4 ರಲ್ಲಿಲ ಗ್ರಾಮ ಪಂಚಾಯಿತಿ ರಚನೆ ಕುರಿತು ಸ್ಪಷ್ಟಪಡಿಸಲಾಗಿದೆ.

...ಮುಂದುವರೆಯುವುದು. 

●.PART :IV- ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು: (PDO Examination Question and Answers)

●.PART :IV- ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು:
(PDO Examination Question and Answers)
•─━━━━━═══════════━━━━━─••─━━━━━═══════════━━━━━─•



1) ಸಮುದಾಯ ಅಭಿವೃದ್ಧಿ ಯೋಜನೆ ಜಾರಿಗೆ ಬಂದ ವರ್ಷ?
1)1956
2)1952✅
3)1965
4)1974


2) ಸರ್ಕಾರವು ಜಿಲ್ಲಾ ಪಂಚಾಯತಿಗೆ ಎಷ್ಟು ವರ್ಷದ ಅವಧಿಗಾಗಿ ಕರ್ನಾಟಕ ಆಡಳಿತ ಸೇವೆಯ ಒಬ್ಬ ಅಧಿಕಾರಿಯನ್ನು ನೇಮಿಸಬಹುದು?
1)5
2)6
3)3✅
4)1


 3) ಇಂಜಿನಿಯರಿಂಗ್ ಅಥವಾ ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡುವ ಅಧಿಕಾರ ಯಾರಿಗಿದೆ?
1)ಗ್ರಾಮ ಪಂಚಯತ್
2)ತಾಲ್ಲೂಕು ಪಂಚಾಯತ್
3)ರಾಜ್ಯ ಸರ್ಕಾರ✅
4)ಜಿಲ್ಲಾ ಪಂಚಾಯತ್


4) ಗ್ರಾಮಪಂಚಾಯತ್ ಚುನಾವಣೆಯಲ್ಲಿ ಮಿಸಲಾತಿಯನ್ನು ನಿರ್ಧರಿಸುವವರು ಯಾರು?
1)ತಹಸಿಲ್ದಾರ
2)ಕಾರ್ಯದರ್ಶಿ
3)ಡೆಪ್ಯೂಟಿ ಕಮಿಷನರ್✅
4)ಅಧ್ಯಕ್ಷ


5)ಗ್ರಾಮ ಪಂಚಾಯತಿಯ ಸ್ಥಾಯಿಸಮಿತಿಗಳ ಅಧಿಕಾರವಧಿ ಎಷ್ಟು?
1)15ತಿಂಗಳು
2)20ತಿಂಗಳು
3)30ತಿಂಗಳು✅
4)25ತಿಂಗಳು


6) ಪ್ರತಿ ವಾರ್ಡ ಸಭೆಯಿಂದ ಕನಿಷ್ಠ ಎಷ್ಟು ಜನ ಸದಸ್ಯರು ಗ್ರಾಮ ಸಭೆಗೆ ಆಯ್ಕೆಯಾಗಬೇಕು?
1)20
2)15
3)10✅
4)12


7) ಯಾವ ಪ್ರಕರಣದ ಅನ್ವಯ ಗ್ರಾಮ ಪಂಚಾಯತಿಗಳಿಗೆ ವಾರ್ಷಿಕ ಅನುದಾನ ದೊರೆಯುತ್ತದೆ?
1)207
2)105
3)206✅
4)306

8) ಗ್ರಾಮ ಪಂಚಾಯತಿ ಅಧಿಕಾರಿಗಳ & ನೌಕರರ ಮೇಲ್ವಿಚಾರಣೆ ನಿಯಂತ್ರಿಸುವ ಅಧಿಕಾರವನ್ನು ಹೊಂದಿರುತ್ತಾರೆ?
1)ಕಾರ್ಯದರ್ಶಿ
2)ಪಿಡಿಒ
3)ಕಾರ್ಯನಿರ್ವಾಹಕ ಅಧಿಕಾರಿ✅
4)ಅಧ್ಯಕ್ಷ


9) ಗ್ರಾಮ ಪಂಚಾಯತಿಯ ಅಧ್ಯಕ್ಷನು ಯಾರಿಗೆ ರಾಜಿನಾಮೆ ಪತ್ರ ಸಲ್ಲಿಸಬೇಕು?
1)ತಹಸಿಲ್ದಾರ್
2)ಅಸಿಸ್ಟಂಟ್ ಕಮಿಷನರ್✅
3)ಜಿಲ್ಲಾ ಪಂಚಾಯತಿ
4)ತಾಲ್ಲೂಕು ಪಂಚಾಯತಿ


10) ಗ್ರಾಮ ಸಭೆಯನ್ನು ಒಂದು ವರ್ಷದಲ್ಲಿ ಎಷ್ಟು ಬಾರಿ ನೆಡಸಬೇಕು?
1)3
2)5
3)2✅
4)1

... ಮುಂದುವರೆಯುವುದು. 

Saturday 13 August 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ X: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ (PDO Study Materials : Panchayath Raj Act- 73ed Constitutional Amendment)

●.ಪಿಡಿಓ (PDO) ಅಧ್ಯಯನ ಸಾಮಗ್ರಿ X: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(PDO Study Materials : Panchayath Raj Act- 73ed Constitutional Amendment)
•─━━━━━═══════════━━━━━─••─━━━━━═══════════━━━━━─•

★ ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(Panchayath Raj Act- 73ed Constitutional Amendment)

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)


61. ಸಾಮಾಜಿಕವಾಗಿ , ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ವಂಶಪಾರಂಪರ್ಯವಾಗಿ “ ಪಂಚ” ರಾಗಿ ಅಧಿಕಾರಿ ನಡೆಸಲು ಅವಕಾಶವಿತ್ತು.

62. 1884 ರಲ್ಲಿ ಬ್ರಿಟಿಷರು ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದರು. ಒಂದು ಜಿಲ್ಲೆಯನ್ನು ಆಡಳಿತ ಘಟಕವಾಗಿ ರೂಪಿಸಿದರು. ಈ ವ್ಯವಸ್ಥೆಗೆ “ ಲೋಕಲ್ ಫಂಡ್ ಸಮಿತಿ ” ಎಂದು ಕರೆಯಲಾಯಿತು.

63. “ ಲೋಕಲ್ ಫಂಡ್ ಸಮಿತಿ ”ಯಲ್ಲಿ ಜಿಲ್ಲಾ ಕಮಿಷನರ್ ಅಧ್ಯಕ್ಷರಾಗಿದ್ದು ಇನಾಂದಾರರು ಮತ್ತು ಭೂಮಾಲಿಕರು ಸದಸ್ಯರಾಗಿದ್ದರು.

64. ಕರ್ನಾಟಕದಲ್ಲಿ 1903 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಕಾಯಿದೆಯನ್ನು ಜಾರಿಗೆ ತರಲಾಯಿತು.

65. “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಈ ಕಾಯಿದೆಯ ಪ್ರಕಾರ ಜಿಲ್ಲಾ ಮಂಡಳಿ , ತಾಲ್ಲೂಕು ಬೋರ್ಡ್ , ಪಂಚಾಯಿತಿ ಸಂಘಟನೆ ಎಂಬ ಮೂರು ಹಂತದಲ್ಲಿ ಜಾರಿಯಾಯಿತು.

66. 1919 ರಲ್ಲಿ ಅಂದಿನ ಮೈಸೂರು ಸರ್ಕಾರ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯನ್ನು ಜಾರಿಗೆ ತಂದಿತು.

67. 1926 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಒತ್ತು ನೀಡಲಾಯಿತು. ಆದರೆ 21 ವರ್ಷ ದಾಟಿದ ಪುರಷರಿಗೆ ಮಾತ್ರ ಮತದಾನದ ಅವಕಾಶ ಕಲ್ಪಿಸಲಾಗಿತ್ತು.

68. “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳ ನೇಮಕಕ್ಕೆ ಅವಕಾಶ ಮಾಡಿಕೊಡಲಾಯಿತು. ಚುನಾಯಿತ ಸದಸ್ಯರೊಬ್ಬರನ್ನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗುತ್ತಿತ್ತು.

69. 1949 ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರು ರಾಜ್ಯದ ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿನ ಕೊರತೆಗಳ ಅಧ್ಯಯನ ನಡೆಸಲು ವೆಂಕಟಪ್ಪ ನೇತೃತ್ವದ ಸಮಿತಿಯನ್ನು ರಚಿಸಲಾಯಿತು.

70. ವೆಂಕಟಪ್ಪ ಸಮಿತಿಯು 1950 ಜೂನ್ ತಿಂಗಳಲ್ಲಿ ಸಮಿತಿಯು ವರದಿಯನ್ನು ಒಪ್ಪಿಸಿತು.

71. ವೆಂಕಟಪ್ಪ ಸಮಿತಿಯು ಗ್ರಾಮ ಮಟ್ಟದಲ್ಲಿ ಗ್ರೂಪ್ ಪಂಚಾಯಿತಿ , ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಂಡಳಿ ಇರುವ ಎರಡು ಹಂತಗಳ ಸ್ಥಳೀಯಾಡಳಿತ ವ್ಯವಸ್ಥೆ ಮಾಡಬೇಕು .

72. 1959 ರಿಂದ ಎಲ್ಲಾ ರಾಜ್ಯಗಳಲ್ಲೂ ಪಂಚಾಯಿತಿ ರಾಜ್ ಅಧಿನಿಯಮವನ್ನು ಜಾರಿಗೆ ತಂದು ಗ್ರಾಮ ಪಂಚಾಯಿತಿ. ಬ್ಲಾಕ್ ಪಂಚಾಯಿತಿ ಸಮಿತಿ ( ತಾಲ್ಲೂಕು ಬೋರ್ಡ್ ) , ಜಿಲ್ಲಾ ಪರಿಷತ್ ಎಂಬ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತಂದಿತು.

73. ಅಶೋಕ್ ಮೆಹ್ತಾ ಸಮಿತಿಯು ಎರಡು ಹಂತದ ಪಂಚಾಯಿತಿಗಳಿಗೆ ಶಿಫಾರಸ್ಸು ಮಾಡಿತು. ( ಮಂಡಲ ಪಂಚಾಯಿತಿ , ಜಿಲ್ಲಾ ಪರಿಷತ್ ) .
74. ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸರ್ಕಾರಗಳು ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಹುಟ್ಟು ಹಾಕಿದವು.

75. ಪಂಚಾಯಿತಿ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ರವರ ಪ್ರಯತ್ನದಿಂದ 1987 – 1992 ರ ಅವಧಿಯಲ್ಲಿ 2 ಹಂತಗಳ ವ್ಯವಸ್ಥೆ ಜಾರಿಗೆ ಬಂದಿತು.

76. ಅಶೋಕ್ ಮೆಹ್ತಾ ಸಮಿತಿಯು ಮಹಿಳೆಯರಿಗೆ ಶೇ.25 ರಷ್ಟು ಪರಿಶಿಷ್ಟರಿಗೆ ಶೇ.15 ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಿದ ಹೆಗ್ಗಳಿಕೆ ಕೂಡ ನಜೀರ್ ಸಾಬ್ ಅವರಿಗೆ ಸಲ್ಲಬೇಕು.

77. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿನ ವ್ಯವಸ್ಥೆಯನ್ನು ಕಂಡು ಪ್ರೇರಿತರಾದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯನ್ನು ರಚಿಸಿದರು.

78. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯು ಇಡೀ ದೇಶಕ್ಕೆ ಏಕರೂಪದ ಪಂಚಾಯಿತಿ ರಾಜ್ ವ್ಯವಸ್ಥೆಯ ಮಾದರಿಯನ್ನು ಈ ಸಮಿತಿ ಶಿಫಾರಸ್ಸು ಮಾಡಿತು.

79. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯ ಫಲವಾಗಿಯೇ ಸಂವಿಧಾನದ 73 ನೇ ತಿದ್ದುಪಡಿಯನ್ನು ತರಲಾಗಿದೆ. 1993 ರ ಏಪ್ರಿಲ್ 24 ರಿಂದ ಸಂವಿಧಾನದ 73 ನೇ ತಿದ್ದುಪಡಿಯ ಆಧಾರದಲ್ಲಿ ಮೂರು ಹಂತಗಳ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

80. 73 ನೇ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಭಾಗ ಮೀಸಲಾತಿ ( ಮುಂದಿನ ಚುನಾವಣೆಯಿಂದ ಮಹಳಿಯೆರಿಗೆ ಶೇ.50 ರಷ್ಟು ಮೀಸಲಾತಿ ).

...ಮುಂದುವರೆಯುವುದು.

☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ : ಮಸಾಲಾ ಬಾಂಡ್‍ಗಳು : (IAS PRELIMS -2016) (Masala Bonds)

☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ :

ಮಸಾಲಾ ಬಾಂಡ್‍ಗಳು :  (IAS PRELIMS -2016)
(Masala Bonds)
━━━━━━━━━━━━━━━━━━━━━━━━━━━━━━━━━━

ಬಾಂಡ್ ಎನ್ನುವುದು ಸಾಲ ಸಾಧನವಾಗಿದೆ. ಹೂಡಿಕೆದಾರರಿಂದ ಬಂಡವಾಳವನ್ನು ಕ್ರೋಢೀಕರಿಸಲು ಕಾರ್ಪೊರೇಟ್ ಸಂಸ್ಥೆಗಳು ಈ ವಿಧಾನವನ್ನು ಬಳಸಿಕೊಳ್ಳುತ್ತವೆ.

 ಮಸಾಲಾ ಬಾಂಡ್ ಎಂದರೆ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳು ಸಾಗರೋತ್ತರ ದೇಶಗಳಲ್ಲಿ ಬಂಡವಾಳ ಕ್ರೋಢೀಕರಿಸಲು ಬಿಡುಗಡೆ ಮಾಡುವ ಬಾಂಡ್‍ಗಳಾಗಿವೆ.

 ಮಸಾಲಾ ಬಾಂಡ್‍ಗಳಿಗಿಂತ ಮುನ್ನ, ಭಾರತದ ಕಾರ್ಪೊರೇಟ್ ಸಂಸ್ಥೆಗಳು ವಿದೇಶಿ ವಾಣಿಜ್ಯ ಸಾಲ ಅಥವಾ ಇಸಿಬಿಗಳನ್ನು ಅವಲಂಬಿಸಬೇಕಿತ್ತು. ಇಸಿಬಿಯಂಥ ಸಾಧನಗಳ ಪ್ರಮಖ ಸವಾಲು ಎಂದರೆ, ಹೀಗೆ ಕ್ರೋಢೀಕರಿಸಿದ ಹಣಕ್ಕೆ ಕರೆನ್ಸಿ ದೊಡ್ಡ ತಡೆಯಾಗುತ್ತಿತ್ತು. ಅಂದರೆ ಇವು ಡಾಲರ್ ರೂಪದಲ್ಲೇ ಇವನ್ನು ಕ್ರೋಢೀಕರಿಸಿ, ಮರುಪಾವತಿಯನ್ನೂ ಡಾಲರ್ ರೂಪದಲ್ಲೇ ಮಾಡಬೇಕಿತ್ತು. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇಂಥ ಒಂದು ವರ್ಷದ ಅವಧಿ ಸುಧೀರ್ಘ ಅವಧಿಯಾಗಿರುತ್ತದೆ. ಏಕೆಂದರೆ ಕರೆನ್ಸಿಗಳ ದರಗಳು ನಿಯತವಾಗಿ ವ್ಯತ್ಯಯವಾಗುತ್ತಲೇ ಇರುತ್ತದೆ. ಆದ್ದರಿಂದ ಒಂದು ಈಕ್ವಿಟಿ ಬಿಡುಗಡೆ ಮಾಡುವ ಬಾಂಡ್‍ಗಳು, ಅದರಲ್ಲೂ ಮುಖ್ಯವಾಗಿ ರೂಪಾಯಿಯನ್ನು ಗಳಿಸುತ್ತಿರುವ ಕಂಪನಿಗಳು ಬಾಂಡ್ ಬಿಡುಗಡೆ ಮಾಡುವಲ್ಲಿ ದೊಡ್ಡ ಅಪಾಯ ಸಾಧ್ಯತೆ ಇತ್ತು.
ಆದರೆ ಮಸಾಲಾ ಬಾಂಡ್‍ಗಳು ರೂಪಾಯಿ ಪ್ರಾಬಲ್ಯದ ಬಾಂಡ್‍ಗಳಾಗಿವೆ.

ಇವುಗಳನ್ನು ವಿದೇಶಿ ಖರೀದಿದಾರರಿಗಾಗಿ ಬಿಡುಗಡೆ ಮಾಡಲಾಗುತ್ತದೆ. ಹೀಗೆ ಇದು ಇತರ ಸಾಧನಗಳಿಗಿಂತ ಭಿನ್ನವಾಗಿದೆ. ಮಸಾಲಾ ಬಾಂಡ್‍ಗಳನ್ನು ಬಿಡುಗಡೆ ಮಾಡುವ ಕಾರ್ಪೊರೇಟ್ ಸಂಸ್ಥೆ 10 ಶತಕೋಟಿ ರೂಪಾಯಿ ಮೌಲ್ಯದ ಬಾಂಡ್‍ಗಳನ್ನು ಬಿಡುಗಡೆ ಮಾಡಿ, 11 ಶತಕೋಟಿಯನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಭಾರತೀಯ ರೂಪಾಯಿಯ ಪರಿವರ್ತನೀಯತೆ ಸೀಮಿತವಾಗಿರುವುದರಿಂದ, ಹೂಡಿಕೆದಾರರು 10 ಶತಕೋಟಿ ರೂಪಾಯಿ ಮೌಲ್ಯದ ಡಾಲರ್‍ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಒಂದು ವರ್ಷದ ಬಳಿಕ, ಭಾರತದ ಕಾರ್ಪೊರೇಟ್ ಸಂಸ್ಥೆಗಳು, 11 ಶತಕೋಟಿ ರೂಪಾಯಿ ಮೌಲ್ಯದ ಡಾಲರ್‍ಗಳನ್ನು ಮರುಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ಕರೆನ್ಸಿ ಅಪಾಯ ಹೂಡಿಕೆದಾರರಿಗೇ ಇರುತ್ತದೆ.

ಇತ್ತೀಚೆಗೆ ಭಾರತದ ಖಾಸಗಿ ವಲಯದ ಅತಿದೊಡ್ಡ ಬ್ಯಾಂಕ್ ಆದ ಎಚ್‍ಡಿಎಫ್‍ಸಿ, ಜಗತ್ತಿನ ಪ್ರಪ್ರಥಮ ಮಸಾಲಾ ಬಾಂಡ್ ಬಿಡುಗಡೆ ಮಾಡಿ, 30 ಶತಕೋಟಿ ರೂಪಾಯಿಗಳನ್ನು ಕ್ರೋಢೀಕರಿಸಿದೆ. ರೂಪಾಯಿ ಪ್ರಾಬಲ್ಯದ ಈ ಬಾಂಡ್ ಅನ್ನು ಭಾರತದಿಂದ ಹೊರಗೆ ಅಂದರೆ ಲಂಡನ್ ಷೇರು ವಿನಿಮಯ ಕೇಂದ್ರದಲ್ಲಿ ಬಿಡುಗಡೆ ಮಾಡಿದ್ದು, ಈ ಐತಿಹಾಸಿಕ ಕ್ರಮವು, ಯೂರೋಪ್ ಒಕ್ಕೂಟದಿಂದ ಬ್ರಿಟನ್ ಹೊರಬರುವ ನಿರ್ಧಾರ ಕೈಗೊಂಡ ಬಳಿಕ ಉಭಯ ದೇಶಗಳ ನಡುವೆ ಆರ್ಥಿಕ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರ ಪರಿಪಕ್ವತಾ ಅವಧಿ ಮೂರು ವರ್ಷಗಳಾಗಿದ್ದು, ವಾರ್ಷಿಕ ಪ್ರತಿಫಲ ಶೇಕಡ 8.33ರಷ್ಟಿದೆ. ಇದು ನಿಗದಿತ ಗುರಿಯ ನಾಲ್ಕು ಪಟ್ಟು ಹೆಚ್ಚು ಖರೀದಿಯಾಗಿದೆ.

Friday 12 August 2016

☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ : ☀★ ಅಳಿವಿನಂಚಿನ "ಸಿಂಹಬಾಲದ ಕೋತಿ" — ಟಿಪ್ಪಣಿ ಬರಹ (Endangered Spices- Lion-tailed Macaque )

☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ :

☀★ ಅಳಿವಿನಂಚಿನ "ಸಿಂಹಬಾಲದ ಕೋತಿ" — ಟಿಪ್ಪಣಿ ಬರಹ
(Endangered Spices- Lion-tailed Macaque )
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪರಿಸರ ಅಧ್ಯಯನ
(Environmental Studies)


ಸಿಂಹಬಾಲದ ಕೋತಿಯನ್ನು ವಂಡೆರೂ ಎಂದೂ ಕರೆಯಲಾಗುತ್ತದೆ. ಇದು ದಕ್ಷಿಣ ಭಾರತದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಂಡುಬರುವ ಹಳೆಯ ತಲೆಮಾರಿನ ಕೋತಿ ಪ್ರಬೇಧವಾಗಿದೆ. ಇದು ಅಪರೂಪದ ಪ್ರಾಣಿ ಎಂದು ಎನಿಸಿಕೊಂಡಿದೆ.

ಸಿಂಹಬಾಲದ ಕೋತಿಯ ಕೂದಲುಗಳು ಕಡುಗಪ್ಪಾಗಿರುತ್ತವೆ. ಇದರ ಕೆನ್ನೆಯಿಂದ ಗಲ್ಲದವರೆಗೆ ಬೆಳ್ಳಿ ಬಿಳಿ ಬಣ್ಣ ಆವರಿಸಿರುವುದು ಈ ಕೋತಿಯ ವಿಶೇಷತೆಯಾಗಿದೆ. ಇದರಿಂದ ಜರ್ಮನಿಯಲ್ಲಿ ಇದನ್ನು ಬರ್ಟಾಫೆ ಅಂದರೆ ಗಡ್ಡದ ಆಪ್ ಎಂದು ಕರೆಯಲಾಗುತ್ತದೆ.

ಇದರ ಕೂದಲು ರಹಿತ ಮುಖ ಕಪ್ಪು ಬಣ್ಣದ್ದಾಗಿದೆ. ಇದರ ತಲೆ ಹಾಗೂ ದೇಹದ ಉದ್ದ ಸುಮಾರು 42 ರಿದ 61 ಸೆಂಟಿಮೀಟರ್ ಇರುತ್ತದೆ. ಈ ಕೋತಿ ಸಾಮಾನ್ಯವಾಗಿ 2 ರಿಂದ 10 ಕೆಜಿವರೆಗೂ ತೂಕವಿರುತ್ತದೆ. ಇದು ಚಿಕ್ಕ ಕಪಿಸಂತತಿಯ ಪ್ರಾಣಿ ಎನಿಸಿಕೊಂಡಿದೆ. ಇದರ ಬಾಲ ಮಧ್ಯಮ ಗಾತ್ರದ ಉದ್ದವನ್ನು ಹೊಂದಿದ್ದು, ಸುಮಾರು 25 ಸೆಂಟಿಮೀಟರ್ ಇರುತ್ತದೆ. ಕೊನೆಯಲ್ಲಿ ಕಪ್ಪು ಜವರಿಗಳನ್ನು ಹೊಂದಿದ್ದು, ಸಿಂಹದ ಬಾಲವನ್ನೇ ಹೋಲುತ್ತದೆ.

ಗಂಡು ಕೋತಿಯ ಬಾಲದ ಜವರಿಗಳು ಹೆಣ್ಣು ಕೋತಿಗಳ ಜವರಿಗಳಿಗಿಂತ ಹೆಚ್ಚು ನೀಳವಾಗಿರುತ್ತವೆ. ಇದರ ಗರ್ಭಧಾರಣೆ ಅವಧಿ ಸುಮಾರು ಆರು ತಿಂಗಳು. ಚಿಕ್ಕ ಮರಿಗಳನ್ನು ಒಂದು ವರ್ಷದ ವರೆಗೆ ಜತನದಿಂದ ಕಾಪಾಡಲಾಗುತ್ತದೆ. ಹೆಣ್ಣು ಕೋತಿಗಳು ನಾಲ್ಕನೇ ವರ್ಷದಲ್ಲಿ ಲೈಂಗಿಕ ಪ್ರಬುದ್ಧತೆ ಪಡೆಯುತ್ತವೆ. ಗಂಡುಕೋತಿಗಳು ಆರು ವರ್ಷದ ವೇಳೆಗೆ ಲೈಂಗಿಕ ಪ್ರಬುದ್ಧತೆ ಪಡೆಯುತ್ತವೆ. ಇದು ಸುಮಾರು 20 ವರ್ಷಗಳ ಕಾಲ ಬದುಕುತ್ತದೆ. ಆದರೆ ಪಂಜರದಲ್ಲಿ 30 ವರ್ಷ ವರೆಗೂ ಬದುಕಿದ ನಿದರ್ಶನಗಳಿವೆ.

ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಅನ್ವಯ ಸಿಂಹಬಾಲದ ಕೋತಿಯನ್ನು ಸಂರಕ್ಷಿತ ಪ್ರಬೇಧ ಎಂದು ವರ್ಗೀಕರಿಸಲಾಗಿದೆ.

ಭಾರತದ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ವಂದಲೂರು ಮೃಗಾಲಯವನ್ನು ಸಿಂಹಬಾಲದ ಕೋತಿ ವಂಶಾಭಿವೃದ್ಧಿಯ ಸಮನ್ವಯ ಕೇಂದ್ರವಾಗಿ ಘೋಷಿಸಿದೆ.

ಇತ್ತೀಚೆಗೆ ತಮಿಳುನಾಡಿನ ವಂದಲೂರು ಅರಿಗ್ನಾರ್ ಅನ್ನಾ ಉದ್ಯಾನವನದಲ್ಲಿ ಸಿಂಹಬಾಲದ ಕೋತಿ ತಳಿಯ ವಂಶಾಭಿವೃದ್ಧಿಪಡಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ : ★ ವನ್ಯಜೀವಿ ಸಂರಕ್ಷಣೆ ಕಾಯ್ದೆ- 1972 : ಟಿಪ್ಪಣಿ ಬರಹ (Wildlife (protection) Conservation Act - 1972)

☀ ಈ ದಿನದ ಐಎಎಸ್ /ಕೆಎಎಸ್ ಪರೀಕ್ಷಾ ಪ್ರಶ್ನೆ :

★ ವನ್ಯಜೀವಿ ಸಂರಕ್ಷಣೆ ಕಾಯ್ದೆ- 1972 :  ಟಿಪ್ಪಣಿ ಬರಹ
(Wildlife (protection) Conservation Act - 1972)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪರಿಸರ ಅಧ್ಯಯನ
(Environmental Studies)

ವನ್ಯಜೀವಿ ಸಂರಕ್ಷಣೆ ಕಾಯ್ದೆ- 1972, ಭಾರತದ ಸಂಸತ್ತು ಆಂಗೀಕರಿಸಿದ ಒಂದು ಕಾಯ್ದೆಯಾಗಿದ್ದು, ಇದರ ಮುಖ್ಯ ಉದ್ದೇಶ ಗಿಡಮರಗಳನ್ನು ಹಾಗೂ ಪ್ರಾಣಿ ಪ್ರಬೇದಗಳನ್ನು ಸಂರಕ್ಷಿಸುವುದು.

1972ಕ್ಕೆ ಮುನ್ನ, ಭಾರತದಲ್ಲಿ ಕೇವಲ 5 ರಾಷ್ಟ್ರೀಯ ಉದ್ಯಾನವಗಳಷ್ಟೇ ಇದ್ದವು. ಇತರ ಹಲವು ಸುಧಾರಣೆಗಳನ್ನು ತರುವ ಜತೆಗೆ ಈ ಕಾಯ್ದೆಯ ಅನ್ವಯ, ಸಂರಕ್ಷಿತ ಗಿಡಗಳು ಹಾಗೂ ಪ್ರಾಣಿ ಪ್ರಬೇಧಗಳ ಅನುಸೂಚಿಯನ್ನು ಬಿಡುಗಡೆ ಮಾಡಿತು. ಇಂಥ ಸಸ್ಯಗಳನ್ನು ಕಡಿಯುವುದು ಮತ್ತು ಪ್ರಾಣಿಗಳನ್ನು ಬೇಟೆ ಮಾಡುವುದು ನಿಷಿದ್ಧ.

ಈ ಕಾಯ್ದೆಯು ಕಾಡು ಪ್ರಾಣಿಗಳಿಗೆ, ಪಕ್ಷಿಗಲಿಗೆ ಹಾಗೂ ಸಸ್ಯಪ್ರಬೇಧಗಳಿಗೆ ಸುರಕ್ಷೆ ನೀಡುತ್ತವೆ. ಇದಕ್ಕೆ ಸಂಬಂಧಪಟ್ಟ ಇತರ ವಿಷಯಗಳೂ ಈ ಕಾಯ್ದೆಯಲ್ಲಿ ಒಳಗೊಂಡಿವೆ. ಇದು ಇಡೀ ಭಾರತಕ್ಕೆ ಅನ್ವಯವಾಗುವ ಕಾಯ್ದೆಯಾಗಿದ್ದು, ಜಮ್ಮು ಕಾಶ್ಮೀರಕ್ಕೆ ಮಾತ್ರ ಇದು ಅನ್ವಯಿಸುವುದಿಲ್ಲ. ಆ ರಾಜ್ಯಕ್ಕೆ ತನ್ನದೇ ಆದ ಪ್ರತ್ಯೇಕ ವನ್ಯಜೀವಿ ಕಾಯ್ದೆ ಇದೆ.

ವನ್ಯಮೃಗ ಹಾಗೂ ಸಸ್ಯಗಳನ್ನು ರಕ್ಷಿಸುವ ಸಂಬಂಧ ಆರು ಶೆಡ್ಯೂಲ್‍ಗಳಲ್ಲಿ ಇದರ ವಿವರಗಳಿವೆ. ಶೆಡ್ಯೂಲ್ 1 ಹಾಗೂ ಶೆಡ್ಯೂಲ್ 2ರ 2ನೇ ಭಾಗ, ಸಂಪೂರ್ಣ ಸುರಕ್ಷೆಯನ್ನು ನೀಡುತ್ತದೆ. ಇದರ ಅನ್ವಯ ಕಾಯ್ದೆ ಉಲ್ಲಂಘನೆಯಾಗಿ ಗರಿಷ್ಠ ದಂಡ ವಿಧಿಸಲಾಗಿದೆ.

ಶೆಡ್ಯೂಲ್ 3 ಹಾಗೂ ಶೆಡ್ಯೂಲ್ 4ರಲ್ಲಿ ಪಟ್ಟಿ ಮಾಡಿರುವ ಪ್ರಾಣಿ, ಪಕ್ಷಿ ಹಾಗೂ ಸಸ್ಯ ಪ್ರಬೇಧಗಳನ್ನು ಸಂರಕ್ಷಿಸುವುದು ಕಡ್ಡಾಯ. ಆದರೆ ಇವುಗಳ ಉಲ್ಲಂಘನೆಗೆ ದಂಡ ಕಡಿಮೆ. ಐದನೇ ಶೆಡ್ಯೂಲ್‍ನಲ್ಲಿ ಬೇಟೆಯಾಡಬಹುದಾದ ಪ್ರಾಣಿಗಳ ಪಟ್ಟಿ ಇದೆ. ಸಸ್ಯಗಳ ವಿವರಗಳು 6ನೇ ಶೆಡ್ಯೂಲ್‍ನಲ್ಲಿದ್ದು, ಇವುಗಳನ್ನು ಬೆಳೆಯುವುದು ಮತ್ತು ಕಟಾವು ಮಾಡುವುದು ನಿಷಿದ್ಧ.

●.ಪಿಡಿಓ (PDO) ಅಧ್ಯಯನ ಸಾಮಗ್ರಿ IX: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ (PDO Study Materials : Panchayath Raj Act- 73ed Constitutional Amendment)

●.ಪಿಡಿಓ (PDO) ಅಧ್ಯಯನ ಸಾಮಗ್ರಿ IX: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(PDO Study Materials : Panchayath Raj Act- 73ed Constitutional Amendment)
•─━━━━━═══════════━━━━━─••─━━━━━═══════════━━━━━─•

★ ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(Panchayath Raj Act- 73ed Constitutional Amendment)

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)


41. ಕಾರ್ಯದರ್ಶಿಗಳು ಜಿಲ್ಲಾ ಪಂಚಾಯಿತಿ ನಿಧಿಯಿಂದ ತಮ್ಮ ಸಂಬಳ ಭತ್ಯೆಗಳನ್ನು ಪಡೆಯುತ್ತಾರೆ.

42. ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವಿರಕ್ಕಿಂತ ಹೆಚ್ಚು ಇಲ್ಲದ ಜನಸಂಖ್ಯೆಯುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪುಗಳನ್ನು ಒಂದು ಪಂಚಾಯಿತಿ ಎಂದು ಪರಿಗಣಿಸಬಹುದು.

43. ಕೆಲವೊಂದು ಜಿಲ್ಲೆಗಳಲ್ಲಿ 2500 ಕ್ಕಿಂತ ಕಡಿಮೆಯಿಲ್ಲದ ಪ್ರದೇಶವನ್ನು ಕೆಲವು ಜಿಲ್ಲೆಗಳಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಪ್ರದೇಶವನ್ನು ಗ್ರಾಮ ಪಂಚಾಯಿತಿ ಕೇಂದ್ರಗಳಾಗಿ ಸರ್ಕಾರವು ನಿರ್ಧರಿಸಬಹುದು .

44. ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ 1985 ರಲ್ಲಿ ಪಂಚಾಯಿತಿ ರಾಜ್ ಕಾಯಿದೆಯಲ್ಲಿ ಮಹಿಳೆಯರಿಗೆ ಶೇ.25 ರಷ್ಟು ಸ್ಥಾನಗಳ ಮೀಸಲಾತಿಯನ್ನು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ನೀಡಲಾಯಿತು.

45. ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿನ ಒಟ್ಟು ಸ್ಥಾನಗಳಲ್ಲಿ ( ಸದಸ್ಯರ ಸ್ಥಾನಗಳಿಂದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳಿಗೆ ಸೇರಿ ) ಕನಿಷ್ಠ 1/3 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

46. 1913 ರಲ್ಲಿ ಮೈಸೂರು ಸಂಸ್ಥಾನವು ಗ್ರಾಮಗಳಲ್ಲಿ ಗ್ರಾಮಾಭಿವೃದ್ಧಿ ಸಂಸ್ಥೆಗಳನ್ನು ರಚಿಸುವ ವಿಷಯ ಕೈಗೆತ್ತಿಕೊಂಡಿತು.

47. 1957 ರಲ್ಲಿ ಬಲವಂತರಾಯ್ ಮೆಹತ್ ಸಮಿತಿ ವರದಿ ಪ್ರಜಾಸತ್ತಾತ್ಮಕ ವಿಕೇಂದ್ರಿಕರಣ ಸಿದ್ಧಾಂತವನ್ನು ಪ್ರತಿಪಾದಿಸಿ ಪ್ರಖ್ಯಾತವಾಯಿತು.

48. 73 ನೇ ತಿದ್ದು ಪಡಿಯಲ್ಲಿ ಮೂರು ಹಂತದ ಪಂಚಾಯಿತಿಗಳ ರಚನೆ ಬಗ್ಗೆ ಗ್ರಾಮ , ಮಧ್ಯಂತರ ಮತ್ತು ಜಿಲ್ಲಾ ಮಟ್ಟದಲ್ಲಿ .

49. 73 ನೇ ತಿದ್ದು ಪಡಿಯಲ್ಲಿ ಪಂಚಾಯಿತಿಯಲ್ಲಿ ಒಟ್ಟು ಸ್ಥಾನಗಳ 1/3 ಭಾಗಕ್ಕೆ ಕಡಿಮೆ ಇಲ್ಲದಂತೆ ಮಹಿಳೆಯರಿಗೆ ಮೀಸಲಿಡಬೇಕು.

50. 73 ನೇ ತಿದ್ದು ಪಡಿಯಲ್ಲಿ ಪ್ರತಿ ರಾಜ್ಯ ಸರ್ಕಾರವೂ ಪಂಚಾಯಿತಿಗಳ ಹಣಕಾಸು ಪರಿಸ್ಥಿತಿ ವಿಮರ್ಶೆ ಮಾಡಿ ಅವುಗಳಿಗೆ ಸರ್ಕಾರ ನೀಡಬೇಕಾದ ಹಣದ ಬಗ್ಗೆ ನಿರ್ಧರಿಸಲು ಹಣಕಾಸು ಆಯೋಗ ಒಂದನ್ನು ಪ್ರತಿ 5 ವರ್ಷಕ್ಕೊಮ್ಮೆ ರಚಿಸಬೇಕು.

51. ಮೂರು ಹಂತದ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ ಆಯೋಗ ರಚಿಸಲು ಕಲಂ 308 ರಲ್ಲಿ ಅವಕಾಶ ಕಲ್ಪಿಸಲಾಗಿದೆ.

52. 73 ನೇ ತಿದ್ದುಪಡಿಗೆ ಅನುಗುಣವಾಗಿ ಕರ್ನಾಟಕ ಪಂಚಾಯತ್ ರಾಜ್ 1993 ಅಧಿನಿಯವನ್ನು ಜಾರಿಗೆ ತರಲಾಯಿತು.

53. ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವರಕ್ಕಿಂತ ಹೆಚ್ಚು ಇಲ್ಲದ ಜನಸಂಖ್ಯೆಯನ್ನುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪನ್ನು ಒಂದು ಪಂಚಾಯಿತಿ ಎಂದು ಪರಿಗಣಿಸಿದೆ.

54. ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷನೂ ಮತ್ತು ಉಪಾಧ್ಯಕ್ಷನು ಇರುತ್ತಾರೆ . ಅಧ್ಯಕ್ಷನಿಗೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಅಧಿಕಾರವಿದೆ.

55. ಪಂಚಾಯಿತಿ ಸಮಿತಿ ಆಡಳಿತವು ಚುನಾಯಿತ ಅಧ್ಯಕ್ಷ ಮತ್ತು ಸರ್ಕಾರದಿಂದ ನೇಮಿಸಲ್ಪಟ್ಟ ಕಾರ್ಯನಿರ್ವಾಹಣಾಧಿಕಾರಿಯಿಂದ ನಡೆಸಲ್ಪಡುತ್ತದೆ.

56. ಕಾರ್ಯನಿರ್ವಹಣಾಧಿಕಾರಿಯು ರಾಜ್ಯ ಸರ್ಕಾರದ ಎ ದರ್ಜೆ ಅಧಿಕಾರಿ ಅಥವಾ ಅಸಿಸ್ಟೆಂಟ್ ಕಮಿಷನರ್ ರವರಿಗೆ ಸಮನಾ ಹುದ್ದೆಯವರಾಗಿದ್ದು , ಅಧ್ಯಕ್ಷರ ಮೇಲ್ವಿಚಾರಣೆಗೆ ಒಳಪಟ್ಟು ಪಂಚಾಯಿತಿ ಸಮಿತಿಯ ಎಲ್ಲ ಅಧಿಕಾರಗಳು ಹಾಗೂ ನೌಕರರ ಮೇಲೆ ಹತೋಟಿ ಹೊಂದಿದ್ದು ಕೆಲಸಗಳನ್ನು ನಿರ್ವಹಿಸುತ್ತಾರೆ.

57. ಜಿಲ್ಲಾ ಪಂಚಾಯತ್ ಪ್ರತಿ ನಲ್ವತ್ತು ಸಾವಿರ ಜನಸಂಖ್ಯೆಗೆ ಒಬ್ಬರಂತೆ ಹಾಗೂ ಚಿಕ್ಕಮಗಳೂರು , ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಮೂವತ್ತು ಸಾವಿರ ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಯಲ್ಲಿ ಹದಿನೆಂಟು ಸಾವರ ಜನಸಂಖ್ಯೆಗೆ ಒಬ್ಬರಂತೆ ಆರಿಸಿ ಬರುವ ಚುನಾಯಿತ ಸದಸ್ಯರಿರುತ್ತಾರೆ.

58. ತಾಲ್ಲೂಕ್ ಪಂಚಾಯಿತಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬರಂತೆ ಸದಸ್ಯರು ಚುನಾಯಿತರಾಗಿ ಬರುವರು .

59. ಜಿಲ್ಲಾಪಂಚಾಯತ್ ನಲ್ಲಿ ಜಿಲ್ಲೆಯ ವಿಧಾನಭಾ , ಲೋಕಸಭಾ , ತಾಲ್ಲೂಕ್ ಪಂಚಾಯಿತಿಯ ಅಧ್ಯಕ್ಷರುಗಳು ರಾಜ್ಯ ಸಭಾ ಮತ್ತು ವಿಧಾನಪರಿಷತ್ತಿನ ಸದಸ್ಯರುಗಳು ಜಿಲ್ಲಾ ಪಂಚಾಯಿತಿಯ ಸದಸ್ಯರುಗಳಾಗಿರುತ್ತಾರೆ.

60. ಬಹಳ ಹಿಂದೆ “ ಪಂಚರು ” ಪಂಚಾಯಿತಿಗಳ ಮುಖ್ಯಸ್ಥರಾಗಿರುತ್ತಿದ್ದರು.

...ಮುಂದುವರೆಯುವುದು. 

Wednesday 3 August 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ VIII: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ (PDO Study Materials : Panchayath Raj Act- 73ed Constitutional Amendment)

●.ಪಿಡಿಓ (PDO) ಅಧ್ಯಯನ ಸಾಮಗ್ರಿ VIII: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(PDO Study Materials : Panchayath Raj Act- 73ed Constitutional Amendment)
•─━━━━━═══════════━━━━━─••─━━━━━═══════════━━━━━─•

★ ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(Panchayath Raj Act- 73ed Constitutional Amendment)


★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



21. 74 ನೇ ತಿದ್ದು ಪಡಿಯಲ್ಲಿ 243 ಕ್ಯೂ ಇದು ಮುನಿಸಿಪಲಿಟಿಗಳ ರಚನೆಯ ಬಗ್ಗೆ ಹೇಳುತ್ತದೆ.

22. 74 ನೇ ತಿದ್ದು ಪಡಿಯಲ್ಲಿ 243 ಆರ್ ನಗರ ಸಭೆಗಳ ರಚನೆ ಬಗ್ಗೆ ವಿವರಿಸುತ್ತದೆ.

23. 74 ನೇ ತಿದ್ದು ಪಡಿಯಲ್ಲಿ 243 ಎಸ್ ವಾರ್ಡ್ ಕಮಿಟಿಗಳ ರಚನೆ

24. 74 ನೇ ತಿದ್ದು ಪಡಿಯಲ್ಲಿ 243 ಟಿ ಸ್ಥಾನಗಳ ಮೀಸಲಾತಿ ಅಂದರೇ ದುರ್ಬಲ ವರ್ಗ ಹಾಗೂ ಮಹಿಳೆಯರಿಗೆ ಸ್ಥಾನಗಳಲ್ಲಿ ಮೀಸಲಾತಿ ಬಗ್ಗೆ ಹೇಳುತ್ತದೆ.

25. 74 ನೇ ತಿದ್ದು ಪಡಿಯಲ್ಲಿ 243 ಯು ನಗರ ಸಭೆಗಳ ಅವಧಿಯ ಬಗ್ಗೆ ಹೇಳುತ್ತದೆ.5 ವರ್ಷಗಳ ಅವಧಿಯನ್ನು ನಿಗದಿಪಡಿಸಿದೆ.

26. 74 ನೇ ತಿದ್ದು ಪಡಿಯಲ್ಲಿ 243 ವಿ ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ ವಿವರಿಸುತ್ತದೆ. ಇದು ಪಂಚಾಯಿತಿಗಳಿಗೆ ಇದ್ದಂತೆಯೇ ಇದೆ.

27. 74 ನೇ ತಿದ್ದು ಪಡಿಯಲ್ಲಿ 243 ಡಬ್ಲ್ಯೂ ಅಧಿಕಾರ ಹಾಗೂ ಜವಾಬ್ದಾರಿಗಳಉ ಇದೂ ಕೂಡ ನಗರಸಭೆ ಹಾಗೂ ಪಾಲಿಕೆಗಳು

28. 74 ನೇ ತಿದ್ದು ಪಡಿಯಲ್ಲಿ 243 ಎಕ್ಸ್ ತೆರಿಗೆ ವಿಧಿಸುವ ಅಧಿಕಾರದ ಬಗ್ಗೆ ಹೇಳುತ್ತದೆ. ಅಲ್ಲದೆ ರಾಜ್ಯ ಸರ್ಕಾರದೊಂದಿಗೆ ತೆರಿಗೆ ಹಂಚಿಕೆಯ ಬಗ್ಗೆಯೂ ಹೇಳುತ್ತದೆ.

29. 74 ನೇ ತಿದ್ದು ಪಡಿಯಲ್ಲಿ 243 ವೈ ಇದು ಹಣಕಾಸು ಆಯೋಗದ ಬಗ್ಗೆ ಹೇಳುತ್ತದೆ.

30. 74 ನೇ ತಿದ್ದು ಪಡಿಯಲ್ಲಿ 243 ಝಡ್ ಲೆಕ್ಕ ಪತ್ರವನ್ನು ನಗರಸಭೆಗಳು ಇಡುವ ಬಗ್ಗೆ ಹೇಳುತ್ತದೆ.

31. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎ ನಗರಸಭೆಯ ಚುನಾವಣೆಗಳ ಬಗ್ಗೆ ಹೇಳುತ್ತದೆ.

32. 74 ನೇ ತಿದ್ದು ಪಡಿಯಲ್ಲಿ 243 ಝಡ್ ಬಿ ರಾಜ್ಯ ಕ್ಷೇತ್ರಗಳಿಗೆ ಇದು ಅನ್ವಯವಾಗುವ ಬಗ್ಗೆ ವಿವರಿಸುತ್ತದೆ.

33. 74 ನೇ ತಿದ್ದು ಪಡಿಯಲ್ಲಿ 243 ಝಡ್ ಸಿ ಪಂಚಾಯಿತಿಗಳಲ್ಲಿ ವಿವರಿಸಿದಂತೆ ಕೆಲವು ಪ್ರದೇಶಗಳಿಗೆ ಇದು ಅನ್ವಯವಾಗುವುದಿಲ್ಲ .

34. 74 ನೇ ತಿದ್ದು ಪಡಿಯಲ್ಲಿ 243 ಝಡ್ ಡಿ ಜಿಲ್ಲಾ ಯೋಜನಾ ಕಮಿಟಿ ಬಗ್ಗೆ ತಿಳಿಸುತ್ತದೆ.

35. 74 ನೇ ತಿದ್ದು ಪಡಿಯಲ್ಲಿ 243 ಝಡ್ ಇ ಮಹಾನಗರ ಪಾಲಿಕೆ ಯೋಜನೆ ಕಮಿಟಿ ಬಗ್ಗೆ ತಿಳಿಸುತ್ತದೆ.

36. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎಫ್ ನಗರಸಭೆಯ ಹಳೆಯ ಕಾಯ್ದೆಗಳ ಮುಂದುವರಿಯುವಿಕೆ ಬಗ್ಗೆ ತಿಳಿಸುತ್ತದೆ.

37. 74 ನೇ ತಿದ್ದು ಪಡಿಯಲ್ಲಿ 243 ಝಡ್ ಜಿ ನ್ಯಾಯಾಲಯಗಳನ್ನು ಚುನಾವಣೆ ವಿಷಯದಲ್ಲಿ ದೂರವಿಡುತ್ತದೆ.

38. ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇರುತ್ತಾನೆ.

39. ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ನಿಯಂತ್ರಣಾಧಿಕಾರಿವಿದೆ.

40. ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಬ್ಬ ಪೂರ್ಣಕಾಲಿಕ ಕಾರ್ಯದರ್ಶಿ ಇದ್ದು ಅವರು ಸರ್ಕಾರಿ ಅಧಿಕಾರಿಯಾಗಿರುತ್ತಾರೆ.
...ಮುಂದುವರೆಯುವುದು 

Tuesday 2 August 2016

●. ಪಿ.ಡಿ.ಓ (PDO) ನೇಮಕಾತಿ ಪರೀಕ್ಷೆಯ ಅಧ್ಯಯನ ತಯಾರಿಗಾಗಿ ಮಹತ್ವಪೂರ್ಣ ಜಾಲತಾಣಗಳು : (Important Websites for PDO study materials)

●. ಪಿ.ಡಿ.ಓ (PDO) ನೇಮಕಾತಿ ಪರೀಕ್ಷೆಯ ಅಧ್ಯಯನ ತಯಾರಿಗಾಗಿ ಮಹತ್ವಪೂರ್ಣ ಜಾಲತಾಣಗಳು :
(Important Websites for PDO study materials)
•─━━━━━═══════════━━━━━─••─━━━━━═══════════━━━━━─•

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಅಧ್ಯಯನ ತಯಾರಿಗಾಗಿ ಸಹಕಾರಿಯಾಗಬಹುದೆಂಬ ವಿಶ್ವಾಸದೊಂದಗೆ ಹಲವು ಗೆಳೆಯರ ಸಹಾಯದೊಂದಿಗೆ ನಾನು ಈ ಕೆಳಗಿನ ಕೆಲವು ಮಹತ್ವಪೂರ್ಣ ಜಾಲತಾಣಗಳನ್ನು ನಿಮ್ಮ "ಸ್ಪರ್ಧಾಲೋಕ" ದಲ್ಲಿ ಮುಂದಿಡಲು ಮಾಡುತ್ತಿರುವ ಒಂದು ಚಿಕ್ಕ ಪ್ರಯತ್ಯ

ಇಲ್ಲಿ ebook format ನಲ್ಲಿ Magazineಗಳು, Publicationಗಳು ವರದಿ, ಕಾರ್ಯ ಪ್ರಕಟನೆಗಳು ಇದ್ದು, ತಮ್ಮ ಅಧ್ಯಯನಕ್ಕೆ ಇವು ಸಹಕಾರಿ ಅಂತ ನನ್ನ ಅನಿಸಿಕೆ.

ಹಾಗೆಯೇ ತಮ್ಮ ಹತ್ರಾನೂ ಇಂತಹ ಮಹತ್ವಪೂರ್ಣ ಮಾಹಿತಿಗಳು ಇದ್ದಲ್ಲಿ ತಾವು ನನ್ನ ಗಮನಕ್ಕೆ  ತರಬೇಕೆಂದು ವಿನಂತಿ.


"ಜ್ಞಾನಕ್ಕಿಂತ ದೊಡ್ಡ ದಾನ ಈ ಜಗತ್ತಿನಲ್ಲಿ ಮತ್ತಿನ್ನೇನೂ ಇಲ್ಲ"


◾️http://www.sirdmysore.gov.in/ —    ಅನಸಾ ರಾಗ್ರಾಸಂಸ್ಥೆ

◾️http://rdpr.kar.nic.in/ — ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ

◾️http://rural.nic.in/netrural/rural — ministry of rural development

◾️http://rdpr.kar.nic.in/kvmag.asp - ಕರ್ನಾಟಕ ವಿಕಾಸ (ಮಾಸಿಕ ಪತ್ರಿಕೆ)—ಈ ಪತ್ರಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಕಟಿಸಲಾಗುತಿದೆ. ಇದು ಕನ್ನಡದಲ್ಲಿದೆ.

◾️http://karnatakavarthe.org/category/janapada/ 
ಜನಪದ (ಮಾಸಿಕ ಪತ್ರಿಕೆ)—ಈ ಪತ್ರಿಕೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗುತಿದೆ. ಇದು ಕನ್ನಡದಲ್ಲಿದೆ.

◾️http://karnatakavarthe.org/category/march-of-karnataka/
ಮಾರ್ಚ್ ಆಫ್ ಕರ್ನಾಟಕ (ಮಾಸಿಕ ಪತ್ರಿಕೆ)—ಈ ಪತ್ರಿಕೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗುತಿದೆ. ಇದು ಇಂಗ್ಲಿಷ್ ದಲ್ಲಿದೆ.


ಮೇಲೆ ನೀಡಲಾದ ಜಾಲತಾಣಗಳಲ್ಲಿ ವಿಶೇಷವಾಗಿ ಗ್ರಾಮ ಪಂಚಾಯತ್, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಹಾಗೂ ಇತರೇ ಮಹತ್ವಪೂರ್ಣ Additional ಸರಕಾರೀ ಜಾಲತಾಣಗಳು ಇದ್ದು ತಾವು ಅಲ್ಲಿ ಅಧ್ಯಯನಕ್ಕೆ ಉಪಯುಕ್ತವಾದ ಮಾಹಿತಿಯನ್ನು ಪಡೆಯಬಹುದು.

ನಿಮ್ಮ ಸಲಹೆ ನನಗೆ ಅತ್ಯಮೂಲ್ಯವಾದವು :

Monday 1 August 2016

●.ಪಿಡಿಓ (PDO) ಅಧ್ಯಯನ ಸಾಮಗ್ರಿ VII: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ (PDO Study Materials : Panchayath Raj Act- 73ed Constitutional Amendment)

●.ಪಿಡಿಓ (PDO) ಅಧ್ಯಯನ ಸಾಮಗ್ರಿ VII: ಪಂಚಾಯತ್ ರಾಜ್, 73 ನೇ ಸಂವಿಧಾನದ ತಿದ್ದುಪಡಿ
(PDO Study Materials : Panchayath Raj Act- 73ed Constitutional Amendment)
•─━━━━━═══════════━━━━━─••─━━━━━═══════════━━━━━─•


★ ಪಂಚಾಯತ್ ರಾಜ್ 73 ನೇ ತಿದ್ದುಪಡಿ 
( Panchayath Raj Act- 73 Amendment)

★ಪಿಡಿಓ (PDO) ಅಧ್ಯಯನ ಸಾಮಗ್ರಿ
(PDO Study Materials)



1. ಪಂಚಾಯಿತಿ ರಾಜ್ಯಗಳು ಅಥವಾ ಅವುಗಳ ಪರಿಕಲ್ಪನೆಗಳು ಭಾರತಕ್ಕೆ ಹೊಸದೇನಲ್ಲ . ಸಂವಿಧಾನದ 40 ನೇ ಪರಿಚ್ಛೇದದಲ್ಲಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳು ಭಾಗದಲ್ಲಿ ಅದರ ಬಗ್ಗೆ ಮೊದಲೇ ವಿವರಣೆಯನ್ನು ನೀಡಲಾಗಿದೆ.


2. 40 ನೇ ಪರಿಚ್ಛೇದದಲ್ಲಿ ಹೀಗೆ ಹೇಳಲಾಗಿದೆ ರಾಜ್ಯವು ಗ್ರಾಮಗಳಲ್ಲಿ ಪಂಚಾಯಿತಿ ಗಳನ್ನು ರಚಿಸುವತ್ತ ಹಾಗೂ ಅವುಗಳಿಗೆ ವಿಶೇಷ ಅಧಿಕಾರಗಳನ್ನು ನೀಡುವತ್ತ ಗಮನ ಹರಿಸಿ ಅವು ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವಂತೆ ನಿಯಮಗಳನ್ನು ರಚಿಸಬೇಕು .


3. 73 ನೇ ತಿದ್ದುಪಡಿ ಮೂಲಕ ಸಂವಿಧಾನಕ್ಕೆ ಭಾಗ 9 ನ್ನು ಸೇರಿಸಲಾಯಿತು. 243 ನೇ ಪರಿಚ್ಛೇದದ ಮೂಲಕ ಪಂಚಾಯಿತಿಗೆ ಸಂಬಂಧಿಸಿದ ಶಬ್ಧಗಳಾದ ಜಿಲ್ಲೆ, ಗ್ರಾಮಸಭೆ , ಮಧ್ಯಂತರ ಹಂತ , ಪಂಚಾಯಿತಿ , ಪಂಚಾಯಿತಿ ಪ್ರದೇಶ , ಜನಸಂಖ್ಯೆ ಮುಂತಾದ ಶಬ್ದಗಳ ವಿವರಣೆಯನ್ನು ನೀಡಲಾಯಿತು.


4. 243 ಎ ಇದು ಗ್ರಾಮ ಸಭೆಗಳ ಅಧಿಕಾರಗಳ ಬಗ್ಗೆ ವಿವರಿಸುತ್ತದೆ.


5. 243 ಬಿ ಇದು ಪ್ರತಿ ರಾಜ್ಯವೂ ಪಂಚಾಯಿತಿಗಳನ್ನು ಹೊಂದಿರಲೇಬೇಕು ಎಂಬುದರ ಬಗ್ಗೆ ಹೇಳುತ್ತದೆ.


6. 243 ಸಿ ಇದು ಪಂಚಾಯಿತಿ ಹೊಂದಬಹುದಾದ ಸದಸ್ಯರ ಸಂಖ್ಯೆಯ ಬಗ್ಗೆ ಹೇಳುತ್ತದೆ.


7. 243 ಡಿ ಇದು ಪ್ರತಿಯೊಂದು ಪಂಚಾಯಿತಿಗಳಲ್ಲೂ ಅದು ಹೊಂದಿರಬೇಕಾದ ಪ.ಜಾತಿ , ಪ.ಪಂಗಡಗಳ ಮೀಸಲಾತಿಯ ಬಗ್ಗೆ ಹೇಳುತ್ತದೆ. ಅಲ್ಲದೇ 1/3 ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ದೊರಯಬೇಕು ಎಂದು ಹೇಳುತ್ತದೆ.


8. 243 ಇ ಪಂಚಾಯಿತಿಗಳ ಕಾಲಾವಧಿಯನ್ನು ವಿವರಿಸುತ್ತದೆ. ಅದನ್ನು 5 ವರ್ಷಗಳಿಗೆ ನಿಗದಿ ಪಡಿಸುತ್ತದೆ.


9. 243 ಎಫ್ ಇದು ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ ವಿವರಣೆ ನೀಡುತ್ತದೆ.


10. 243 ಜಿ ಪಂಚಾಯಿತಿಗಳ ಅಧಿಕಾರ ಹಾಗೂ ಜವಾಬ್ದಾರಿಗಳು ಈ ಅಧಿಕಾರಗಳು ಪ್ರತಿಯೊಂದು ಪಂಚಾಯಿತಿಯಲ್ಲೂ ರಾಜ್ಯ ಸರ್ಕರಗಳ ಮೇಲ್ವಿಚಾರಣೆಯಲ್ಲಿ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೆಲಸಗಳನ್ನ ಕೈಗೊಂಡು ಅವುಗಳನ್ನು ಪೂರ್ಣಗೊಳಿಸಲು ಬೇಕಾದ ಧಿಕಾರಗಳನ್ನು ಒಳಗೊಂಡಿರುತ್ತದೆ.


11. 243 ಹೆಚ್ ತೆರಿಗೆಗಳನ್ನು ವಿಧಿಸುವ ಅಧಿಕಾರವನ್ನು ವಿವರಿಸುತ್ತದೆ.


12. 243 ಐ ಆರ್ಥಿಕ ಸ್ಥಿತಿಗಳನ್ನು ಅವಲೋಕಿಸಲು ಹಣಕಾಸು ಆಯೋಗಗಳ ರಚನೆಯನ್ನು ವಿವರಿಸುತ್ತದೆ.


13. 243 ಜೆ ಲೆಕ್ಕ ಪ್ತರ ವೀಕ್ಷಣೆಯನ್ನು ವಿವರಿಸುತ್ತದೆ.


14. 243 ಕೆ ಇದು ಪಂಚಾಯಿತಿಯ ಚುನಾವಣೆಯ ಬಗ್ಗೆ ಹೇಳುತ್ತದೆ. ಮತದಾರ ಪಟ್ಟಿ ತಯಾರಿಕೆಯಿಂದ ಹಿಡಿದು ಶಿಸ್ತುಬದ್ಧ ಪಂಚಾಯಿತಿ ರಚನೆಯವರೆಗಿನ ಪ್ರಕ್ರಿಯೆ ಒಳಗೊಂಡಿದೆ.


15. 243 ಎಲ್ ರಾಜ್ಯ ಕ್ಷೇತ್ರಗಳಿಗೆ ಈ ಕಾಯ್ದೆಯು ಅನ್ವಯವಾಗುವ ಬಗ್ಗೆ ವಿವರಣೆ ನೀಡುತ್ತದೆ.


16. 243 ಎಂ ಇದು ಸಂವಿಧಾನದ 244 ನೇ ಪರಿಚ್ಛೇದಗಳಲ್ಲಿ ವಿವರಿಸಿರುವ ಪ್ರಾಂತ್ಯಗಳಿಗೆ 73 ನೇ ತಿದ್ದುಪಡಿ ಕಾಯ್ದೆ ಅನ್ವಯಿಸುವುದಿಲ್ಲ ಎಂಬುದನ್ನು ಹೇಳುತ್ತದೆ.


17. 243 ಎನ್ 73 ನೇ ತಿದ್ದುಪಡಿಯ ಜೊತೆಗೆ ಅದಕ್ಕೆ ಪೂರ್ವದಲ್ಲಿ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾಯ್ದೆಗಳು ಮುಂದುವರಿಯುವ ಬಗ್ಗೆ ಹೇಳುತ್ತದೆ.


18. 243 ಒ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ಮಧ್ಯಪ್ರವೇಶವನ್ನು ನಿಷೇಧಿಸುತ್ತದೆ.


19. 74 ನೇ ತಿದ್ದು ಪಡಿಯಲ್ಲಿ 9 ಎ ಎಂಬ ಭಾಗವು ಸೇರಿಸಲಾಯಿತು. 243 ನೇ ಪರಿಚ್ಛೇದಕ್ಕೆ ಅನುಚ್ಛೇದಗಳನ್ನು ಸೇರಿಸಲಾಯಿತು. 243 ಪಿ ಯಿಂದ 243 ಝಡ್ ಜಿ ಯ ವರೆಗೆ


20. 74 ನೇ ತಿದ್ದು ಪಡಿಯಲ್ಲಿ 243 ಪಿ ಇದು ಕಮಿಟಿ , ಜಿಲ್ಲೆ ಮಹಾನಗರ ಪ್ರದೇಶ ಮುನಿಸಿಪಲ್ ಪ್ರದೇಶ , ನಗರಸಭೆ , ಪಂಚಾಯತ್ , ಜನಸಂಖ್ಯೆ ಮುಂತಾದ ಶಬ್ದಗಳಿಗೆ ವಿವರಣೆ ನೀಡುತ್ತದೆ.

... ಮುಂದುವರೆಯುವುದು. 

●.PART :III- ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು: (PDO Examination Question and Answers)

●.PART :III- ಪಿ.ಡಿ.ಓ ನೇಮಕಾತಿ ಪರೀಕ್ಷೆಯ ಬಹು ಆಯ್ಕೆಯ ಪ್ರಶ್ನೋತ್ತರಗಳು:
(PDO Examination Question and Answers)
•─━━━━━═══════════━━━━━─••─━━━━━═══════════━━━━━─•


೧) ಕರ್ನಾಟಕ ರಾಜ್ಯ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಬಂದ ವರ್ಷ?

೧) ೨೦೦೩
೨) ೨೦೦೪
೩) ೨೦೦೫★
೪) ೨೦೦೬
.
—————————————————
೨) ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎಷ್ಟು ದಿನಗಳು ಉದ್ಯೋಗ ನೀಡಬೇಕು?

೧) ೯೫
೨) ೧೦೦★
೩) ೧೦೧
೪) ೯೮
.
—————————————————
೩) ರಾಜ್ಯ ಉದ್ಯೋಗ ಖಾತ್ರಿ ಯೋಜನೆಗೆ ಯಾವ ನಿಧಿಯನ್ನು ಬಳಸುತ್ತಾರೆ?

೧) ಕೇಂದ್ರ ಉದ್ಯೋಗ ಖಾತ್ರಿ ನಿಧಿ
೨) ರಾಜ್ಯ ಉದ್ಯೋಗ ಖಾತ್ರಿ ನಿಧಿ★
೩) ವಿಶ್ವ ಹಣಕಾಸು ನಿಧಿ
೪) ಯಾವುದು ಅಲ್ಲ
.
—————————————————
೪) ಉದ್ಯೋಗ ಖಾತ್ರಿ ನಿಧಿಯ ಕೇಂದ್ರ ಮತ್ತು ರಾಜ್ಯ ದ ಕ್ರಮವಾಗಿ ಅನುದಾನವೆಷ್ಟು ?

೧) ೭೦:೩೦
೨) ೮೦:೨೦
೩) ೯೦:೧೦★
೪) ೧೦೦ ಕೇಂದ್ರ ಸರ್ಕಾರ
.
—————————————————
೫) ಕೂಲಿಯನ್ನು ಎಷ್ಟು ದಿನಗಳ ಒಳಗಾಗಿ ಪಾವತಿಸಬೇಕು?

೧) ೧೦
೨) ೧೬
೩) ೧೫★
೪) ೧೨
.
—————————————————
೬) ಉದ್ಯೋಗ ಖಾತ್ರಿ ಯೋಜನೆಯ ಪ್ರಕಾರ ೫ ಕಿ.ಮಿ ಒಳಗೆ ಉದ್ಯೋಗ ನೀಡಬೇಕು, ೫ ಕಿ.ಮಿ ದೂರದಲ್ಲಿ ನೀಡಿದರೆ

೧) ಕನಿಷ್ಟ ಕೂಲಿಯ ೧೦% ಹೆಚ್ಚುವರಿ ನೀಡಬೇಕು★
೨) ಕನಿಷ್ಟ ಕೂಲಿಯ ೧೫% ಹೆಚ್ಚುವರಿ ನೀಡಬೇಕು
೩) ಕನಿಷ್ಟ ಕೂಲಿಯ ೨೦% ನೀಡಬೇಕು
೪) ಯಾವುದು ಅಲ್ಲ
.
-------------------;--------
೭) ಯಾವ ರಾಜ್ಯ ದಲ್ಲಿ ಯಶಸ್ವಿಯಾದ ಕಾಯಕ ಸಂಘ ರಚನೆಗೆ ಪಂಚಾಯತ್ ರಾಜ್ ಇಲಾಖೆ ಅಡಿಪಾಯ ಹಾಕಿದೆ?
೧)ಕನಾ೯ಟಕ
೨) ಕೇರಳ
೩) ಆಂಧ್ರಪ್ರದೇಶ★
೪) ರಾಜಸ್ತಾನ
.
—————————————————
೮) ಸಮಾನ ವೇತನ ಅಧಿನಿಯಮ ಜಾರಿಗೆ ಬಂದ ವರ್ಷ

೧) ೧೯೭೫
೨) ೧೯೭೬★
೩) ೧೯೭೯
೪)೧೯೮೦
.
—————————————————
೯) ಉದ್ಯೋಗ ಖಾತ್ರಿ ಯೋಜನೆಯ ಲೆಕ್ಕಪರಿಶೋಧನೆ ಯಾರು ಮಾಡುತ್ತಾರೆ?

೧) CEO
೨) Auditor★
೩) EO
೪) PDO
.
—————————————————
೧೦) ಪಂಚಮಿತ್ರ ಯೋಜನೆ ಯಾವ ಇಲಾಖೆಗೆ ಸಂಬಂಧಿಸಿದೆ?

೧) ಕಂದಾಯ ಇಲಾಖೆ
೨) ಕೃಷಿ ಇಲಾಖೆ
೩) ಪಂಚಾಯತ್ ರಾಜ್★
೪) ನೀರಾವರಿ ಇಲಾಖೆ


...ಮುಂದುವರೆಯುವುದು.