"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 22 March 2015

☀ಗ್ರಾಮೀಣ ಪ್ರದೇಶದಲ್ಲಿನ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ 'ಆಶಾ' ಕಾರ್ಯಕರ್ತೆಯರ ಪಾತ್ರದ ಕುರಿತು ಚರ್ಚಿಸಿ. (250 ಶಬ್ಧಗಳಲ್ಲಿ)  (Discuss the role of the "Asha" workers in Maintaining Public Health in Rural Areas.)

☀ಗ್ರಾಮೀಣ ಪ್ರದೇಶದಲ್ಲಿನ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ 'ಆಶಾ' ಕಾರ್ಯಕರ್ತೆಯರ ಪಾತ್ರದ ಕುರಿತು ಚರ್ಚಿಸಿ. (250 ಶಬ್ಧಗಳಲ್ಲಿ)
(Discuss the role of the "Asha" workers in Maintaining Public Health in Rural Areas.)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪ್ರಶ್ನೋತ್ತರ :
(IAS / KAS SPECIAL)


●."ಆಶಾ" (ಅಂಗೀಕೃತ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ)
(ASHA)- Accredited Social Health Activist)


●.ಈ ಗ್ರಾಮೀಣ ಪ್ರದೇಶದಲ್ಲಿನ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಅದರಲ್ಲೂ ವಿಶೇಷವಾಗಿ ಕಡುಬಡವರ ಅವಶ್ಯಕತೆಗಳನ್ನು ಪೂರೈಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿತು.

●.ಸಾರ್ವಜನಿಕ ಆರೋಗ್ಯ ಮೂಲ ಸೌಕರ್ಯಗಳಲ್ಲಿ ಕಲ್ಪಿಸಿರುವಂತೆ ಉಪ ಕೇಂದ್ರವು ಪ್ರಮುಖ ಸಂಪರ್ಕ ಕೇಂದ್ರವಾಗಿದೆ.

 ●.5,000 ಜನಸಂಖ್ಯೆಗೆ ಒಂದರಂತೆ ಉಪ ಕೇಂದ್ರವು ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದಕಡೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಉಪ ಕೇಂದ್ರದ ಹಂತದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಕಾರ್ಯದ ಒತ್ತಡ ಹೆಚ್ಚಾಗಿದ್ದು ಗ್ರಾಮೀಣ ಪ್ರದೇಶಗಳಿಗೆ ಪೂರ್ಣ ಪ್ರಮಾಣದ ಸೇವೆ ಒದಗಿಸಲು ಸಾಧ್ಯವಾಗಿರುವುದಿಲ್ಲ. ಆದಕಾರಣ ಗ್ರಾಮೀಣ ಜನರ ಆರೋಗ್ಯ ಸಮಸ್ಯೆಗಳನ್ನು ಅದರಲ್ಲೂ ಪ್ರಮುಖವಾಗಿ ಸ್ತ್ರೀಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ತಿಳಿದುಕೊಂಡು ಅದಕ್ಕನುಗುಣವಾಗಿ ಸೂಕ್ತ ಆರೋಗ್ಯ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಸಲುವಾಗಿ ‘ಆಶಾ’ ಕಾರ್ಯಕರ್ತೆಯರನ್ನು ಸಮುದಾಯದಲ್ಲಿ ತೊಡಗಿಸಿಕೊಳ್ಳುವ ಹೊಸ ಯೋಜನೆಯನ್ನು ಪ್ರಾರಂಭಿಸಲಾಯಿತು.


●.ಆಶಾ ಕಾರ್ಯಕರ್ತೆಯರ ಪ್ರಮುಖ ಕಾರ್ಯಗಳು:

✧.ಇದರ ಉದ್ದೇಶವೆಂದರೆ ಸಮಾಜ ಹಾಗೂ ಎಎನ್‍ಎಂಗಳ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸುವುದು.

✧.ಶಿಶು ಮರಣ ಹಾಗೂ ತಾಯಿ ಮರಣ ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುವುದು.

✧.1,000 ಜನಸಂಖ್ಯೆಗೆ ಆರೋಗ್ಯ ಸೇವೆ ಸಲ್ಲಿಸುವುದು ಹಾಗೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಉಪಚರಿಸುವುದು.

✧.ಸಾಂಸ್ಥಿಕ ಹೆರಿಗೆಗಳನ್ನು ಪ್ರೋತ್ಸಾಹಿಸುವುದು.

✧.ಸಾಂಕ್ರಾಮಿಕ ಹಾಗೂ ಇತರ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯದಲ್ಲಿ ತೊಡಗುವುದು.

✧.ಆರೋಗ್ಯಕರ ಜೀವನ ಶೈಲಿಯನ್ನು ಪ್ರೋತ್ಸಾಹಿಸುವುದೇ ಆಗಿದೆ.


●.ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಸರ್ಕಾರೇತರ ಸಂಸ್ಥೆಗಳಿಗೆ ವಹಿಸಲಾಗಿದ್ದು, ಫೆಬ್ರವರಿ 2008 ರಲ್ಲಿ ಈ ಕಾರ್ಯಕ್ರಮ ಪ್ರಾರಂಭವಾಯಿತು.

●.ಮೊದಲ ಹಂತದಲ್ಲಿ ಒಂಭತ್ತು ಜಿಲ್ಲೆಗಳನ್ನು ಗುರುತಿಸಿದ್ದು (ಮೈಸೂರು, ಚಾಮರಾಜನಗರ, ಕೊಡಗು, ಬಿಜಾಪುರ, ಬಾಗಲಕೋಟೆ, ರಾಯಚೂರು, ಗುಲಬರ್ಗಾ, ಕೊಪ್ಪಳ ಮತ್ತು ಬೀದರ್) ತರಬೇತಿಯಲ್ಲಿ ಭಾಗವಹಿಸುವವರಿಗೆ ಅರ್ಥವಾಗುವ ರೀತಿಯಲ್ಲಿ ಒತ್ತುಕೊಟ್ಟು ಸಂವಹನ ಕೌಶಲವನ್ನು ವೃದ್ಧಿಗೊಳಿಸುವುದರ ಜೊತೆಗೆ ಮೂಲ ಆರೋಗ್ಯ ಸೇವೆ ಹಾಗೂ ರೆಫರಲ್ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ.

●.ಶುಶ್ರೂಶಕಿಯರನ್ನು ಆಶಾ ತರಬೇತಿದಾರರಿಗೆ ತರಬೇತಿ ನೀಡಲು ನೇಮಿಸಲಾಗಿದೆ.

●.ಕಾರ್ಯಕರ್ತೆಯರಿಗೆ ತರಬೇತಿಯಲ್ಲಿ ಸಣ್ಣ ಖಾಯಿಲೆಗಳಿಗೆ ಚಿಕಿತ್ಸೆ, ಗರ್ಭಿಣಿ ಸ್ತ್ರೀಯರ ನೋಂದಣಿ, ಕುಟುಂಬ ಕಲ್ಯಾಣ ಯೋಜನೆಗಳಿಗೆ ಸಲಹೆ, ಮಕ್ಕಳ ಆರೋಗ್ಯ ಸೇವೆಗಳು, ಮನೆಮನೆಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುವುದು.

●.ಒಟ್ಟಾರೆ ತರಬೇತಿ ಅವಧಿ 30 ದಿನಗಳದ್ದಾಗಿರುತ್ತದೆ. ಇವರುಗಳಿಗೆ ನಿಗದಿತ ವೇತನವನ್ನಾಗಲಿ ಅಥವಾ ಗೌರವ ಧನವನ್ನಾಗಲೀ ನೀಡುವುದಿಲ್ಲ. ಬದಲಿಗೆ ಅವರು ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಸಾಧಿಸುವ ಪ್ರಗತಿಗಳನ್ನು ಆಧರಿಸಿ ಪ್ರೋತ್ಸಾಹ ಧನ ನೀಡಲಾಗುತ್ತದೆ.  

No comments:

Post a Comment