☀ಅಕ್ಟೋಬರ್ 2014 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of October 2014)
★ಅಕ್ಟೋಬರ್ 2014
(October 2014)
━━━━━━━━━━━━━━━━━━━━━━━━━━━━━━━━━━━━━━━━━━━━━
♦.* ಅ.1:ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಏಷ್ಯಾನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಮೇರಿ ಕೋಮ್ ಏಷ್ಯಾನ್ ಗೇಮ್ಸ್‌ನಲ್ಲಿ ಪಡೆದ ಮೊದಲ ಚಿನ್ನದ ಪದಕ ಇದಾಗಿದೆ.
♦.* ಅ. 2:ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗಾಂಧಿ ಜಯಂತಿ ದಿನ ದೇಶದಾದ್ಯಂತ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಚಾಲನೆ ನೀಡಿದರು. ದೆಹಲಿಯ ಕೊಳೆಗೇರಿ ಪ್ರದೇಶದಲ್ಲಿ ಕಸ ಗುಡಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
♦.* ಅ. 3:ಬಿಹಾರದ ರಾಜಧಾನಿ ಪಟ್ನಾದ ಗಾಂಧಿ ಮೈದಾನದಲ್ಲಿ ದಸರಾ ಪ್ರಯುಕ್ತ ಏರ್ಪಡಿಸುವ ದೇವತೆಗಳ ಉತ್ಸವ ಸಂದರ್ಭದಲ್ಲಿ ಕಾಲ್ತುಳಿತದಿಂದ 32 ಜನರು ಮೃತಪಟ್ಟು 15 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
♦.* ಅ. 4: ಗೂಗಲ್‌ನ ಸಾಮಾಜಿಕ ಜಾಲತಾಣವಾಗಿದ್ದ ‘ಆರ್ಕುಟ್’ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ಕಂಪೆನಿ ಘೋಷಿಸಿತು. ಫೇಸ್‌ಬುಕ್ ಮತ್ತು ಟ್ವಿಟ್ಟರ್ ಜನಪ್ರಿಯವಾದ ಹಿನ್ನೆಲೆಯಲ್ಲಿ ‘ಆರ್ಕುಟ್’ ಬಳಸುವವರ ಸಂಖ್ಯೆ ಕಡಿಮೆಯಾದ್ದರಿಂದ ಸ್ಥಗಿತಗೊಳಿಸಲಾಯಿತು ಎಂದು ಕಂಪೆನಿ ತಿಳಿಸಿತು.
♦.* ಅ. 5:ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 2014 ರ ಚಾಂಪಿಯನ್ ಲೀಗ್ ಕ್ರಿಕೆಟ್ ಟ್ರೋಪಿಯನ್ನು ಗೆದ್ದುಕೊಂಡಿತು. ಬೆಂಗಳೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮಣಿಸಿತು.
♦.* ಅ.5:ರಾಜಸ್ತಾನದ ಬಿಕನೇರ್ ಸಮೀಪದಲ್ಲಿ ‘ಆಲಿವ್’ ಮರದ ಎಣ್ಣೆ ತಯಾರಕ ಘಟಕವನ್ನು ರಾಜಸ್ತಾನ ಸರ್ಕಾರ ಆರಂಭಿಸಿತು. ಆ ಮೂಲಕ ಭಾರತದಲ್ಲೇ ಆಲಿವ್ ಮರದ ಎಣ್ಣೆ ಘಟಕ ಆರಂಭಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
♦.* ಅ. 6:ಸೈಕಲಾಜಿ ಅಥವಾ ಔಷಧಿ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಮೂವರು ವಿಜ್ಞಾನಿಗಳಿಗೆ 2014 ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಜಾನ್ ಓ ಕೀಫೆ, ಬ್ರಿಟ್ ಮೋಸರ್ ಮತ್ತು ಎಡ್ವರ್ಡ್ ಐ ಈ ಪ್ರಶಸ್ತಿ ಪಡೆದಿದ್ದಾರೆ.
♦.* ಅ.6: ಭಾರತದ ಯಶಸ್ವಿ ಮಂಗಳಯಾನ ಯೋಜನೆ ಕುರಿತಂತೆ ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಆಕ್ಷೇಪಾರ್ಹ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಪತ್ರಿಕೆ ಭಾರತದ ಕ್ಷಮೆಯಾಚಿಸಿತು.
♦.* ಅ.9:ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಲೀಲಾ ಸ್ಯಾಮ್ಸನ್ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯನ್ನು ಕೇಂದ್ರ ಸಂಸ್ಕೃತಿ ಸಚಿವಾಲಯ ಅಂಗೀಕರಿಸಿತು.
♦.* ಅ.9:ಫ್ರಾನ್ಸ್‌ನ ಹಿರಿಯ ಲೇಖಕ ಹಾಗೂ ಜನಪ್ರಿಯ ಕಾದಂಬರಿಕಾರರಾದ ಪ್ಯಾಟ್ರಿಕ್ ಮೊಡಿಯಾನೊ 2014 ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಅವರ ಒಟ್ಟು ಸಾಹಿತ್ಯ ಸೇವೆಗೆ ಈ ಪ್ರಶಸ್ತಿ ಸಂದಿದೆ.
♦.* ಅ,10: 2014 ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ಭಾರತದ ಕೈಲಾಶ್ ಸತ್ಯಾರ್ಥಿ ಮತ್ತು ಪಾಕಿಸ್ತಾನದ ಅತಿಕಿರಿಯ ಸಮಾಜ ಸೇವಕಿ ಮಲಾಲಗೆ ಜಂಟಿಯಾಗಿ ಈ ಪ್ರಶಸ್ತಿ ನೀಡಲಾಯಿತು.
♦.* ಅ 11: ಅಮೆರಿಕದ ವೈದ್ಯಕೀಯ ವಿಜ್ಞಾನಿಗಳ ತಂಡವು ಎಚ್‌ಐವಿ ವೈರಾಣುವನ್ನು ನೋಡಬಹದಾದ ಅತಿ ಸೂಕ್ಷ್ಮ ಸಾಧನವನ್ನು ಅಭಿವೃದ್ಧಿಪಡಿಸಿರುವುದಾಗಿ ಪ್ರಕಟಿಸಿದೆ.
♦.* ಅ. 13:ಅರ್ಥಶಾಸ್ತ್ರ ವಿಭಾಗಕ್ಕೆ ನೀಡುವ 2014 ಸಾಲಿನ ನೊಬೆಲ್ ಪ್ರಶಸ್ತಿ ಫ್ರಾನ್ಸ್ ದೇಶದ ಆರ್ಥಿಕ ತಜ್ಞ ಜಿನ್ ಟಿರೋಲ್ ಅವರಿಗೆ ಸಂದಿದೆ.
♦.* ಅ. 14 :ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ’ಸಮೀರ್’ ಅವರಿಗೆ 2013ನೇ ಸಾಲಿನ ರಾಷ್ಟ್ರೀಯ ಕಿಶೋರ್ ಕುಮಾರ್ ಪ್ರಶಸ್ತಿ ಲಭಿಸಿತು.
♦.* ಅ.14 :ಯಮನ್ ದೇಶದ ಪ್ರಧಾನಿಯಾಗಿ ಖಲೇದ ಬ್ಹಾ ಅವರನ್ನು ನೇಮಕ ಮಾಡಲಾಯಿತು.
♦.* ಅ.15:ಆಸ್ಟ್ರೇಲಿಯಾದ ಲೇಖಕ ರಿಚರ್ಡ್ ಪ್ಲಾನಗನ್ ಅವರಿಗೆ 2014 ನೇ ಸಾಲಿನ ಮ್ಯಾನ್ ಆಫ್ ದಿ ಬೂಕರ್ ಪ್ರಶಸ್ತಿ ಲಭಿಸಿದೆ. ಅವರ ಯುದ್ಧಕಾಲಿನ ಕಾದಂಬರಿ ‘ ದಿ ನ್ಯಾರೊ ರೋಡ್ ಟು ದಿ ಡೀಪ್ ನಾರ್ತ್’ ಕೃತಿಗೆ ಈ ಪುರಸ್ಕಾರ ಸಂದಿದೆ.
♦.* ಅ. 15:ತೆಲುಗಿನ ಖ್ಯಾತ ಬರಹಗಾರ್ತಿ ತುರಗ ಜಾನಕಿ ರಾಣಿ ನಿಧನರಾದರು. ಇವರು ಆಂಧ್ರಪ್ರದೇಶದ ಬಾನುಲಿಯಲ್ಲಿ ಸುದ್ದಿ ನಿರೂಪಕಿಯಾಗಿ ಭಾರೀ ಜನಪ್ರಿಯತೆ ಪಡೆದಿದ್ದರು.
♦.* ಅ. 17:ಕರ್ನಾಟಕ ರಾಜ್ಯದ 12 ನಗರಗಳ ಮರು ನಾಮಕರಣಕ್ಕೆ ಕೇಂದ್ರ ಗೃಹ ಸಚಿವಾಲಯ ಅನುಮೋದನೆ ನೀಡಿತು. ನಗರಗಳ ಹೆಸರು ಬದಲಾವಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ ಮಾಡಿದ್ದರು.
♦.* ಅ. 18:ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕಾಗಿ ವಿಶೇಷ ಆರೋಗ್ಯ ಯೋಜನೆಯನ್ನು ಪ್ರಕಟಿಸಿತು. ಅದನ್ನು ಜಮ್ಮು ಕಾಶ್ಮೀರ ಆರೋಗ್ಯ ಗ್ರಾಮ ಯೋಜನೆ ಎಂದು ಕರೆಯಲಾಗುವುದು. ಇದನ್ನು ಕೇಂದ್ರ ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಲೋಕಾರ್ಪಣೆ ಮಾಡಿದರು.
♦.* ಅ. 22:ತಿಹರ್ ಜೈಲಿನಲ್ಲಿ ಮಹಿಳಾ ಕೈದಿಗಳಿಗಾಗಿ ಇ–ಗ್ರಂಥಾಲಯವನ್ನು ಆರಂಭಿಸಲಾಯಿತು.
♦.* ಅ. 27:ಹರಿಯಾಣ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಹರಿಯಾಣದಲ್ಲಿ ಮೊದಲ ಸಲ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ.
♦.* ಅ. 29:ಪ್ರಸಾರ ಭಾರತೀಯ ಮುಖ್ಯಸ್ಥರಾಗಿ ಸೂರ್ಯ ಪ್ರಕಾಶ್ ಅಧಿಕಾರ ಸ್ವೀಕರಿಸಿದರು. ಇವರ ಅಧಿಕಾರ ಅವಧಿ ಮೂರು ವರ್ಷಗಳವರೆಗೆ ಇರಲಿದೆ.
♦.* ಅ. 30:ಕೇಂದ್ರ ಸರ್ಕಾರ ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವ 615 ಜನರ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತು.
♦.* ಅ. 31:ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನಾ ಪಕ್ಷಗಳ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದೆ.
(Courtesy: PRAJAWANI)

No comments:
Post a Comment