"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 22 March 2015

☀11) ನವ ಮಂಗಳೂರು ಬಂದರು: (New Mangaluru Ports):

☀11) ನವ ಮಂಗಳೂರು ಬಂದರು:
(New Mangaluru Ports):

━━━━━━━━━━━━━━━━━━━━━━━━━━━━━━━━━━━━━━━━━━━━━


★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.11) ನವ ಮಂಗಳೂರು ಬಂದರು: (New Mangaluru Ports):

✧.ಭಾರತ ಸರ್ಕಾರವು ಈ ಬಂದರನ್ನು ಸರ್ವಋತು ಬಂದರಾಗಿ ಅಭಿವೃದ್ಧಿಗೊಳಿಸಿದೆ.

✧.1974ರಲ್ಲಿ ಈ ಬಂದರನ್ನು ರಾಷ್ಟ್ರದ ಒಂಭತ್ತನೆಯ ಮುಖ್ಯ ಬಂದರಾಗಿ ಘೋಷಿಸಲಾಗಿದ್ದು, ಹಲವಾರು ವರ್ಷಗಳಿಂದ ಇದನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.

✧.ಎಂಟನೆಯ ಪಂಚವಾರ್ಷಿಕ ಯೋಜನೆಯಡಿ ಈ ಬಂದರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 60 ಕೋಟಿಗಳನ್ನು ಮಂಜೂರು ಮಾಡಿದೆ.

✧.ಇದಲ್ಲದೆ ಕಚ್ಛಾತೈಲ, ಕಲ್ಲಿದ್ದಲು, ಎಲ್.ಪಿ.ಜಿ ಇತ್ಯಾದಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಸೌಲಭ್ಯಗಳನ್ನು ಮಾಡಿದ್ದು, ಇದರ ವೆಚ್ಚವನ್ನು ಭರಿಸಲು ಸಂಬಂಧಪಟ್ಟ ಏಜೆನ್ಸಿಗಳು ಒಪ್ಪಿವೆ.

✧.ಈ ಬಂದರು ಭಾರತ ಸರ್ಕಾರದ ನವ ಮಂಗಳೂರು ಬಂದರು ಟ್ರಸ್ಟ್ ಬೋರ್ಡ್‍ನ ಆಡಳಿತದ ವ್ಯಾಪ್ತಿಯಲ್ಲಿದೆ.

✧.1974-75 ರಲ್ಲಿ ಇದು 77 ಹಡಗುಗಳ ಮೂಲಕ 0.09 ಮಿಲಿಯನ್ ಟನ್ ಸರಕು ಸಾಗಾಣಿಕೆಯನ್ನು ಮಾಡಿದ್ದು, 1984-85ರಲ್ಲಿ ಇದು 3.38 ಮಿಲಿಯನ್ ಟನ್ ಮತ್ತು 342 ಹಡಗುಗಳಿಗೆ ಏರಿತು.

✧.1994-95 ರಲ್ಲಿ ಎಂಟು ಮಿಲಿಯನ್ ಟನ್ ಸರಕು ಮತ್ತು 342 ಹಡಗುಗಳ ಸಂಚಾರಕ್ಕೆ ಅನುಕೂಲ ಒದಗಿಸಿದೆ.

✧.2004-05ರಲ್ಲಿ ಇದು 33.89 ಮಿಲಿಯನ್ ಟನ್‍ಗಳಿಗೆ ಏರಿದ್ದು, ಸರಕು ತುಂಬಿದ 1057 ಹಡಗುಗಳು ಇಲ್ಲಿಗೆ ಬಂದಿದ್ದವು.

✧.2006-07ರಲ್ಲಿ ಇದು 82.04 ಮಿಲಿಯನ್ ಟನ್ ಸಂಚಾರದೊಂದಿಗೆ 17.92 ಮಿಲಿಯನ್ ಟನ್ ಆಮದು ಮತ್ತು 14.12 ಮಿಲಿಯನ್ ಟನ್ ರಫ್ತು ಮಾಡಲಾಗಿತ್ತು.

✧.2006-07ರಲ್ಲಿ ಇಲ್ಲಿ 1,015 ಹಡಗುಗಳಿದ್ದು, ಇದು 18 ಜನ ಸಂಚಾರಿ ಹಡಗನ್ನು ಸಹಾ ಒಳಗೊಂಡಿತ್ತು.

✧.2007-08 ರಲ್ಲಿ ನವಮಂಗಳೂರು ಬಂದರು ಮತ್ತು ಕಾರವಾರ, ಮಲ್ಪೆ ಮತ್ತು ಹಳೆಯ ಮಂಗಳೂರು ಬಂದರುಗಳು ಹೊರತುಪಡಿಸಿದಂತೆ ಸಣ್ಣ ಬಂದರುಗಳು 6085 ಟನ್ ಸರಕು ಸಾಗಾಣಿಕೆ ಮಾಡಿದ್ದವು.

✧.2009-10ರ ಸಾಲಿನಲ್ಲಿ ನವಮಂಗಳೂರು ಬಂದರುಗೆ 363.18 ಕೋಟಿ ಆದಾಯ ಬಂದಿದ್ದು, 238.51 ಕೋಟಿ ವೆಚ್ಚ ಮಾಡಿ, 128.66 ಕೋಟಿ ನಿವ್ವಳ ಲಾಭಗಳಿಸಿತ್ತು. ಇದೇ ಸಾಲಿನಲ್ಲಿ ಒಟ್ಟು 215.68 ಲಕ್ಷ ಮೆ.ಟನ್ ಸರಕನ್ನು ಆಮದು ಮಾಡಿಕೊಂಡಿದ್ದು, 129.59 ಲಕ್ಷ ಮೆ.ಟನ್ ಸರಕನ್ನು ರಫ್ತು ಮಾಡಿತ್ತು.

✧.ಇದು 2011-12ರ ಸಾಲಿನಲ್ಲಿ ಕ್ರಮವಾಗಿ 210.66 ಹಾಗೂ 104.84 ಲಕ್ಷ ಮೆ.ಟನ್ನುಗಳಾಗಿದ್ದ ಅಂಶ ವರದಿಯಿಂದ ವೇದ್ಯವಾಗುತ್ತದೆ.

(ಕೃಪೆ: ಕರ್ನಾಟಕ ಕೈಪಿಡಿ)

No comments:

Post a Comment