"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 26 July 2015

☀ ಸಾಮಾನ್ಯ ಜ್ಞಾನ (ಭಾಗ - 17)  ( General Knowledge (Part-17))  ☆.. ಪ್ರಚಲಿತ ಘಟನೆಗಳೊಂದಿಗೆ ...

☀ ಸಾಮಾನ್ಯ ಜ್ಞಾನ (ಭಾಗ - 17)
( General Knowledge (Part-17))
☆.. ಪ್ರಚಲಿತ ಘಟನೆಗಳೊಂದಿಗೆ ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು-2015.
(Current Affairs-2015)

★ ಸಾಮಾನ್ಯ ಜ್ಞಾನ
(General Knowledge)


691) ಇತ್ತೀಚೆಗೆ ಏಷ್ಯಾದಲ್ಲೇ ದೊಡ್ಡದು ಎನ್ನಲಾದ 140 ಅಡಿ ಎತ್ತರದ ಗುಂಡು ನಿರೋಧಕ ಶಿಲುಬೆಯೊಂದನ್ನು ಯಾವ ದೇಶದಲ್ಲಿ ಸ್ಥಾಪಿಸಲಾಗಿದೆ?

●.ಪಾಕಿಸ್ತಾನ


692) ಇತ್ತೀಚೆಗೆ ಬ್ರಿಟನ್​ನ ಸಸ್ಯಶಾಸ್ತ್ರಜ್ಞ ಮತ್ತು ಇತಿಹಾಸಕಾರರೊಬ್ಬರು 16ನೇ ಶತಮಾನಕ್ಕೆ ಸೇರಿದ ಸಸ್ಯಶಾಸ್ತ್ರದ ಪುಸ್ತಕವೊಂದರಲ್ಲಿ ಶೇಕ್ಸ್​ಪಿಯರ್​ನ ನೈಜ್ಯ ಚಿತ್ರವನ್ನು ಪತ್ತೆ ಹಚ್ಚಿದ್ದಾರೆ. ಅವರ ಹೆಸರೇನು?

●.ಮಾರ್ಕ್ ಗ್ರಿಫಿತ್


693) ಇತ್ತೀಚೆಗೆ ಬ್ರಿಟನ್​ನ ಸಸ್ಯಶಾಸ್ತ್ರಜ್ಞ ಮತ್ತು ಇತಿಹಾಸಕಾರರಾದ ಮಾರ್ಕ್ ಗ್ರಿಫಿತ್ ರವರು ಪತ್ತೆ ಹಚ್ಚಿದ್ದ ಶೇಕ್ಸ್​ಪಿಯರ್​ನ ನೈಜ್ಯ ಚಿತ್ರವನ್ನೊಳಗೊಂಡಿದ್ದ 16ನೇ ಶತಮಾನಕ್ಕೆ ಸೇರಿದ ಸಸ್ಯಶಾಸ್ತ್ರದ ಪುಸ್ತಕದ ಹೆಸರೇನು? ಆ ಪುಸ್ತಕದ ರಚನಾಕಾರರು ಯಾರು?

●.ಜಾನ್ ಗೆರಾರ್ಡ್ ರಚಿಸಿದ್ದ ಹಾಗೂ 1598ರಲ್ಲಿ ಪ್ರಕಟವಾಗಿದ್ದ ‘ದಿ ಹರ್ಬಲ್ ಒರರ ಜನರಲ್ ಹಿಸ್ಟರಿ ಆಫ್ ಪ್ಲಾಂಟ್ಸ್’ ಎಂಬ ಪುಸ್ತಕದ ಪುಟ ಸಂಖ್ಯೆ 1,484ರಲ್ಲಿ


694) ವಿಶ್ವದಲ್ಲೇ ಅತ್ಯಂತ ದೀರ್ಘ ಕಾಲದ ದೊರೆ ಎನಿಸಿರುವ 87ರ ಹರೆಯದ ದೊರೆ ಭುಮಿಬೊಲ್ ಅಡುಲ್ಯಡೆಜ್ ಯಾವ ದೇಶಕ್ಕೆ ಸಂಬಂಧಿಸಿದ್ದಾರೆ?

●.ಥಾಯ್ಲೆಂಡ್


695) ಇತ್ತೀಚೆಗೆ ಜಪಾನ್​ ದೇಶದ ಪ್ರಶಸ್ತಿಯಾದ ‘ಆರ್ಡರ್ ಆಫ್ ದ ರೈಸಿಂಗ್ ಸನ್, ಗೋಲ್ಡ್ ಆಂಡ್ ಸಿಲ್ವರ್ ಸ್ಟಾರ್’ ಗೌರವಕ್ಕೆ ಭಾಜನರಾದ ಭಾರತೀಯ ಯಾರು?.

●.ಭಾರತರತ್ನ ಪ್ರೊ.ಸಿ.ಎನ್.ಆರ್.ರಾವ್


696) ಇತ್ತೀಚೆಗೆ ಭೂಕಂಪದಲ್ಲಿ ಧರೆಗುರುಳಿದ 'ಐತಿಹಾಸಿಕ ಧರಹರ ಟವರ್' ಯಾವ ದೇಶಕ್ಕೆ ಸಂಬಂಧಿಸಿದ್ದು?

●.ನೇಪಾಳ


697) ಪ್ರಸ್ತುತ ಕೆನಡಾ ದೇಶದ ಪ್ರಧಾನಿ ಯಾರು?

●.ಸ್ಟೀಫನ್ ಹಾರ್ಪರ್


698) ಇತ್ತೀಚೆಗೆ ಸುಮಾರು 900 ವರ್ಷಗಳಷ್ಟು ಹಳೆಯದಾದ, ಭಾರತದಿಂದ ಸಾಗಿಸಲ್ಪಟ್ಟ ಖಜುರಾಹೋ ದೇವಾಲಯದೊಳಗಿದ್ದ ’ಶುಕ ಕನ್ನಿಕಾ’ ಶಿಲ್ಪಕಲಾಕೃತಿಯನ್ನು, 1970ರ ಯುನೆಸ್ಕೊ ಸಮಾವೇಶದ ನಿರ್ಧಾರಕ್ಕೆ ಅನುಗುಣವಾಗಿ ಮತ್ತೆ ಭಾರತಕ್ಕೆ ಹಿಂತಿರುಗಿಸಿದ ದೇಶ ಯಾವುದು?

●.ಕೆನಡಾ


699) ಇತ್ತೀಚೆಗೆ ಸುಮಾರು 3500 ಎಕರೆಗಳಿಗೆ ವ್ಯಾಪಿಸಿ, ನೂರಾರು ವಾಹನಗಳು, ಮನೆಗಳನ್ನು ಭಸ್ಮ ಮಾಡಿದ ಭಾರಿ ಪ್ರಮಾಣದ ಕಾಳ್ಗಿಚ್ಚು ಕಂಡುಬಂದ ಕಾಜೋನ್ ಕಣಿವೆಯು ಯಾವ ದೇಶದಲ್ಲಿದೆ?

●.ಕ್ಯಾಲಿಫೋರ್ನಿಯಾ


700) ಇತ್ತೀಚೆಗೆ ಪ್ಲೂಟೊ ಗ್ರಹದಲ್ಲಿ ಸುಮಾರು ಹತ್ತು ಕೋಟಿ ವರ್ಷಗಳ ಹಿಂದೆಯೇ ಉದ್ಭವಿಸಿರಬಹುದೆಂದು ಅಂದಾಜಿಸಿರುವ, 11 ಸಾವಿರ ಅಡಿ ಎತ್ತರದ ಹಿಮ ಪರ್ವತವನ್ನು ಪತ್ತೆ ಹಚ್ಚಿದ ನಾಸಾದ ಗಗನನೌಕೆಯ ಹೆಸರೇನು?

●.ನ್ಯೂ ಹೊರೈಜನ್


701) ಇತ್ತೀಚೆಗೆ ’ಲಿಬರೇಶನ್ ವಾರ್’ ಎಂಬ ಪರಮೋಚ್ಛ ಗೌರವ ಪ್ರಶಸ್ತಿಯನ್ನು ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರದಾನ ಮಾಡಿದ ದೇಶ ಯಾವುದು?

●.ಬಾಂಗ್ಲಾದೇಶ.


702) ಬಾಂಗ್ಲಾದೇಶದ ಪ್ರಸ್ತುತ ಅಧ್ಯಕ್ಷರು ಯಾರು?

●.ಅಬ್ದುಲ್ ಹಮೀದ್.


703) ಇತ್ತೀಚಿನ ವಿಶ್ವಸಂಸ್ಥೆಯ ಹಸಿವಿಗೆ ಸಂಬಂಧಿಸಿದ ಆಹಾರ ಅಭದ್ರತೆಯ ಸ್ಥಿತಿಯ ವಾರ್ಷಿಕ ವರದಿಯ ಪ್ರಕಾರ, ಭಾರತದಲ್ಲೇ ಅತಿ ಹೆಚ್ಚು ಅಂದರೆ 11.64 ಕೋಟಿ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ನಂತರದ ಸ್ಥಾನದಲ್ಲಿ ಚೀನಾ ಇದೆ.


704) ಡೆನ್ಮಾರ್ಕ್ ದೇಶದ ರಾಷ್ಟ್ರೀಯ ಪಕ್ಷಿ ಯಾವುದು?

●.ಕೋಗಿಲೆ.


705) ರಾತ್ರಿಯ ವೇಳೆಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿರುವ ದೇಶ ಯಾವುದು?

●.ಬುರುಂಡಿ.


706) ಇಟಲಿ, ಬೆಲ್ಜಿಯಂ, ನ್ಯೂಝಿಲೆಂಡ್ ದೇಶಗಳಲ್ಲಿ 18 ವರ್ಷದೊಳಗಿನವರು ಪಟಾಕಿ ಹೊಡೆಯುವಂತಿಲ್ಲ.


707) ಇತ್ತೀಚೆಗೆ 'ವಿಶ್ವಸಂಸ್ಥೆ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ (ಯುನಿಟರ್)'ನ ಮುಖ್ಯಸ್ಥರಾಗಿ ನೇಮಕಗೊಂಡ ಭಾರತೀಯ ಯಾರು?

●.ನಿಖಿಲ್ ಸೇಥ್.


708) ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡವರು ಯಾರು?

●.ಓಂಪ್ರಕಾಶ್.


709) ಈ ವರ್ಷದ ಪ್ರತಿಷ್ಟಿತ ಸ್ಟಾಕ್ ಹೋಂ ಜಲಪ್ರಶಸ್ತಿ (ಜಲ ನೊಬೆಲ್) ಯಾರಿಗೆ ಲಭಿಸಿದೆ?

●.ರಾಜೇಂದ್ರ ಸಿಂಗ್


710) ಪ್ರಪಂಚದ ಪ್ರಥಮ ‘ಬುರುಡೆನೆತ್ತಿ ಕಸಿ’ ನಡೆಸಿದ ಕೀರ್ತಿಗೆ ಪಾತ್ರವಾದ ದೇಶ ಯಾವುದು?

●.ಅಮೆರಿಕ


711) ಇತ್ತೀಚೆಗೆ ಅಮೆರಿಕದ ಶ್ವೇತಭವನ ನೀಡುವ ‘ಬದಲಾವಣೆಯ ರೂವಾರಿ’ (ಚಾಂಪಿಯನ್‌ ಆಫ್‌ ಚೇಂಜ್‌) ಪ್ರಶಸ್ತಿಗೆ ಆಯ್ಕೆಯಾದವರು ಯಾರು?

●.ಭಾರತ ಮೂಲದ ಸುನೀತಾ ವಿಶ್ವನಾಥ್‌


712) ಪತ್ನಿಗೆ ಹೆರಿಗೆಯಾದಾಗ ಪತಿಗೆ ಹೆರಿಗೆ ರಜೆಯನ್ನು ನೀಡುವ ಏಕೈಕ ದೇಶ ಯಾವುದು?

●.ಆಸ್ಟ್ರೇಲಿಯಾ


713) ಬೋಹೆಡ್‌ ಜಾತಿಯ ತಿಮಿಂಗಿಲ 200ಕ್ಕೂ ಹೆಚ್ಚು ವರ್ಷಗಳ ಕಾಲ ಬದುಕುತ್ತವೆ. ಅವು ಜಗತ್ತಿನಲ್ಲಿ ಅತಿ ಹೆಚ್ಚು ವರ್ಷ ಬದುಕಬಲ್ಲ ಸಸ್ತನಿಗಳಾಗಿವೆ.


714) ಪ್ರಸ್ತುತ ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಧ್ಯಕ್ಷರು ಯಾರು?

 ●.ಟಕೆಹಿಕೊ ನಕಾವೊ


715) ಉದ್ದಿಮೆ ವಹಿವಾಟು ಆರಂಭಿಸಲು ಭಾರತವನ್ನು ಸುಲಲಿತ ತಾಣವನ್ನಾಗಿ ಪರಿವರ್ತಿಸುವುದೂ ಸೇರಿದೆ. ಉದ್ದಿಮೆಗಳಿಗೆ ಪೂರಕ ವಾತಾವರಣ ಕಲ್ಪಿಸುವಲ್ಲಿ ಸದ್ಯಕ್ಕೆ ಭಾರತವು ವಿಶ್ವದಲ್ಲಿ 149ನೇ ಸ್ಥಾನದಲ್ಲಿ ಇದೆ. ವಿಶ್ವದ ಅತ್ಯಂತ ಭ್ರಷ್ಟ ದೇಶಗಳ ಸಾಲಿನಲ್ಲಿಯೂ ಭಾರತ ಇದೇ ಸ್ಥಾನಮಾನ ಹೊಂದಿದೆ.


716) ನಿಂಬೆ ಹಣ್ಣಿನ ತವರೂರು ಯಾವುದು?

●.ಭಾರತ.


717) ಬೆಂಗಳೂರು ಅರಮನೆಯನ್ನು ಯಾವ ಕಟ್ಟಡದ ಪ್ರೇರಣೆಯಿಂದ ನಿರ್ಮಿಸಲಾಗಿದೆ?

●.ವಿಂಡ್ಸರ್ ಕ್ಯಾಸ್ಟಲ್


718) ಇತ್ತೀಚೆಗೆ 'ಕೈಟ್ ಆಫ್ ದ ಲಿಜನ್ ಆಫ್ ಆನರ್' ಗೌರವ ಪ್ರಶಸ್ತಿಯನ್ನು ಪಡೆದ ಭಾರತೀಯ ಯಾರು?

●.ಬಾಲಿವುಡ್ ನಟ ಶಾರುಖ್ ಖಾನ್


719) ಭಾರತದ ಯಾವ ರಾಜ್ಯದ ಹೆಸರು ಅಕ್ಷರಶಃ 'ದೇವರ ಸನ್ನಿಧಿ' ಎಂಬ ಅರ್ಥ ಕೊಡುತ್ತದೆ?

●.ಹರ್ಯಾಣ.


720) ನಾವು ವಾಸಿಸಿರುವ ಈ ಭೂಮಿ ಒಂದು ಆಯಸ್ಕಾಂತ ಎಂದು ಕಂಡು ಹಿಡಿದವರು ಯಾರು?

●.ವಿಲಿಯಂ ಗಿಲ್ಬರ್ಟ್

Saturday 25 July 2015

●.ಈ ದಿನದ (KAS/IAS) ಪ್ರಶ್ನೆ: ☀ಇತ್ತೀಚೆಗೆ ಜಾಗತಿಕ ಸಮುದಾಯದಲ್ಲಿ ಹೊಸದಾಗಿ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದ "ಮೆರ್ಸ್ ಕಾಯಿಲೆ" ಯು ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೆರ್ಸ್ ಕಾಯಿಲೆಯ ಹರಡುವಿಕೆ ಮತ್ತು ಅದರ ವಿಶಿಷ್ಟ ಲಕ್ಷಣಗಳ ಕುರಿತು ವಿಶ್ಲೇಷಿಸಿ.  (What is MERS? analyze the spread of the MERS with its features)

●.ಈ ದಿನದ (KAS/IAS) ಪ್ರಶ್ನೆ:

☀ಇತ್ತೀಚೆಗೆ ಜಾಗತಿಕ ಸಮುದಾಯದಲ್ಲಿ ಹೊಸದಾಗಿ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದ "ಮೆರ್ಸ್ ಕಾಯಿಲೆ" ಯು ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೆರ್ಸ್ ಕಾಯಿಲೆಯ ಹರಡುವಿಕೆ ಮತ್ತು ಅದರ ವಿಶಿಷ್ಟ ಲಕ್ಷಣಗಳ ಕುರಿತು ವಿಶ್ಲೇಷಿಸಿ.
(What is MERS? analyze the spread of the MERS with its features)

━━━━━━━━━━━━━━━━━━━━━━━━━━━━━━━━━━━━━━━━━━━━━

★ಸಿವಿಲ್ ಸರ್ವಿಸ್ (ಐಎಎಸ್) ಸಾಮಾನ್ಯ ಅಧ್ಯಯನ.
(IAS GENERAL STUDIES)

★ ಸಾಮಾನ್ಯ ವಿಜ್ಞಾನ
(General Science)


●.ಪ್ರಪಂಚದಾದ್ಯಂತ 2003ರಲ್ಲಿ ದೊಡ್ಡ ಮಟ್ಟದ ಆತಂಕ ಸೃಷ್ಟಿಸಿದ್ದ ಸಾರ್ಸ್ ವೈರಸ್ ಸುದ್ದಿ ತಣ್ಣಗಾದ ಬೆನ್ನಲ್ಲೇ, ಆಂಥ್ರಾಕ್ಸ್ ಕಾಯಿಲೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿತ್ತು. ಅದು ತಹಬಂದಿಗೆ ಬರುವಷ್ಟರಲ್ಲಿ ಕಳೆದೆರಡು ವರ್ಷದಿಂದ ಎಬೋಲಾ ಕಾಯಿಲೆ ಆಫ್ರಿಕಾ ಖಂಡದಲ್ಲೇ ಮರಣಮೃದಂಗ ಬಾರಿಸಿ ಆ ರಾಷ್ಟ್ರಗಳಿಗೆ ತೆರಳಲು ಜನರು ಅಂಜುವಂತಾಯಿತು. ಎಬೋಲಾ ನಿಯಂತ್ರಣಕ್ಕೆ ಬರುತ್ತಿದೆ ಅನ್ನುವಷ್ಟರಲ್ಲಿ ದಕ್ಷಿಣ ಕೊರಿಯಾದಲ್ಲಿ ಭೀಕರ ‘ಮೆರ್ಸ್’ ಕಾಯಿಲೆ ಕಾಣಿಸಿಕೊಂಡಿದ್ದು ಜಾಗತಿಕ ಸಮುದಾಯದಲ್ಲಿ ಮತ್ತೆ ಭಯ ಸೃಷ್ಟಿಸಿದೆ.

●.ಮಧ್ಯಪ್ರಾಚ್ಯ ಉಸಿರಾಟ ತೊಂದರೆ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್​ ಅಥವಾ ಮೆರ್ಸ್-Middle East respiratory syndrome ) ಎಂದು ಈ ರೋಗಕ್ಕೆ ಹೆಸರಿಡಲಾಗಿದೆ. ವೃದ್ಧರಲ್ಲೇ ಈ ಕಾಯಿಲೆ ಕಾಣಿಸಿಕೊಂಡಿರುವುದು ಹೆಚ್ಚು. ದಕ್ಷಿಣ ಕೊರಿಯಾದಲ್ಲಿ ಒಟ್ಟು 750 ಮಂದಿಯಲ್ಲಿ ರೋಗದ ಲಕ್ಷಣ ಕಂಡುಬಂದಿದ್ದು,ಅವರ ಮೇಲೆ ನಿಗಾವಹಿಸಲಾಗಿದೆ.


●.ವೈದ್ಯ ಲೋಕಕ್ಕೆ ಸವಾಲು :
━━━━━━━━━━━━━━━━

✧.ಹೃದಯಕ್ಕೆ ರಕ್ತ ಒದಗಿಸುವ ರಕ್ತನಾಳಗಳಲ್ಲಿ ವೈರಸ್​ಗಳು ಸೇರಿಕೊಂಡು ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ, ಕ್ರಮೇಣ ಮನುಷ್ಯನಲ್ಲಿ ತೀವ್ರವಾದ ಜ್ವರ, ಕಫ ಕಾಣಿಸಿಕೊಳ್ಳುತ್ತವೆ. ಬಳಿಕ ಮೂತ್ರಪಿಂಡಗಳು ವೈಫಲ್ಯಗೊಂಡು ಸಾವನ್ನಪ್ಪುತ್ತಾರೆ.
✧.ಎಬೋಲಾ, ಸಾರ್ಸ್​ಗೆ ಹೋಲಿಸಿದರೆ ಸೋಂಕು ಹರಡುವಿಕೆ ನಿಧಾನ. ಆದರೆ, ರೋಗ ಕಾಣಿಸಿಕೊಂಡರೆ ಬದುಕುಳಿಯುವ ಸಾಧ್ಯತೆ ಕಡಿಮೆ.
✧.ಇದುವರೆಗೆ ಕಾಯಿಲೆ ಉಪಶಮನಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ, ಡೆಡ್ಲೀ ಮೆರ್ಸ್ ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸಿದೆ.


●.ಮೆರ್ಸ್ ಹಿನ್ನೆಲೆ :
━━━━━━━━━━━

✧. ರೋಗದ ಮೂಲ: ಸೌದಿ ಅರೇಬಿಯಾ.
✧. ಬಾವಲಿ ಹಾಗೂ ಒಂಟೆಗಳ ಮುಖಾಂತರ ಸೋಂಕು ಹರಡುವಿಕೆ.

●.2012ರಲ್ಲಿ ಬೆಳಕಿಗೆ
✧.ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್​ವೈರಸ್ ಆರಂಭದಲ್ಲಿ ಬಾವಲಿಗಳಿಂದ ಒಂಟೆಗಳಿಗೆ ಹರಡಿತ್ತು. ಈ ಸೋಂಕು ಒಂಟೆಗಳ ಮುಖಾಂತರ ಮನುಷ್ಯನಿಗೆ ಹರಡಿದೆ. ✧.2012ರಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ತೆರಳಿದ್ದ ಬ್ರಿಟನ್ ಪ್ರವಾಸಿ ಈ ಕಾಯಿಲೆಗೆ ತುತ್ತಾದ ಬಳಿಕ ಮೊದಲ ಬಾರಿಗೆ ವಿಶ್ವವ್ಯಾಪಿ ಈ ರೋಗ ಪರಿಚಯಿಸಲ್ಪಟ್ಟಿತು.
✧.3 ವರ್ಷದಿಂದ ಈ ಕಾಯಿಲೆ ಅಷ್ಟೇನೂ ಸುದ್ದಿಮಾಡಿರಲಿಲ್ಲ.

●.436 ಮಂದಿ ಬಲಿ
✧.ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ) ಪ್ರಕಾರ ಜಗತ್ತಿನಲ್ಲಿ ಈ ತನಕ 1,161 ಮಂದಿ ಈ ಸೋಂಕಿನಿಂದ ಬಳಲಿದ್ದು, 436 ಮಂದಿ ಸಾವನ್ನಪ್ಪಿದ್ದಾರೆ.
✧.ವೈರಸ್​ನ ರೂಪಾಂತರ ಭೇದಿಸಲು ಈ ತನಕ ಸಾಧ್ಯವಾಗಿಲ್ಲ.
 ✧.ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಸೌದಿ ಅರೇಬಿಯಾ ಹೊರತುಪಡಿಸಿದರೆ, ದಕ್ಷಿಣ ಕೊರಿಯಾದಲ್ಲಿ ಹೆಚ್ಚು ಸೋಂಕುಪೀಡಿತರಿದ್ದಾರೆ.
✧.ಸಾರ್ಸ್​ಗಿಂತಲೂ ಡೇಂಜರಸ್ ಮೆರ್ಸ್ ವೈರಸ್​ಗಳು ಸಾರ್ಸ್ ವೈರಸ್ ಗುಣಲಕ್ಷಣವನ್ನೇ ಹೊಂದಿದೆ.
✧.ಸಾರ್ಸ್ ಸೋಂಕಿಗೆ ತುತ್ತಾದ ವ್ಯಕ್ತಿಗಳಲ್ಲಿ ಸಾವಿನ ಪ್ರಮಾಣ ಶೇ.9ರಿಂದ ಶೇ.12ರಷ್ಟಿದ್ದರೆ, ಮೆರ್ಸ್​ನಲ್ಲಿ ಶೇ.50ರಷ್ಟಿದೆ.
✧.ಈಗಾಗಲೇ ಮೂತ್ರಪಿಂಡ ಹಾಗೂ ಉಸಿರಾಟದ ತೊಂದರೆ ಹೊಂದಿರುವ ವ್ಯಕ್ತಿಗಳಿಗೆ ಈ ಸೋಂಕು ತಗಲಿದರೆ ಬದುಕುಳಿಯುವುದಿಲ್ಲ ಎಂದು ಡಬ್ಲ್ಯೂಎಚ್​ಒ ವಕ್ತಾರ ಕ್ರಿಶ್ಚಿಯನ್ ತಿಳಿಸಿದ್ದಾರೆ.
 ✧2012ರಲ್ಲಿ ಕಾಣಿಸಿಕೊಂಡ ಮೆರ್ಸ್ ವೈರಸ್​ನಿಂದ ಈವರೆಗೂ 25 ದೇಶಗಳಲ್ಲಿ 444 ಮಂದಿ ಪ್ರಾಣ ಕಳೆದುಕೊಂಡಿದ್ದು, ವಿಶ್ವದೆಲ್ಲೆಡೆ 1,190ಪ್ರಕರಣಗಳು ಪತ್ತೆಯಾಗಿವೆ.


●.ಮೆರ್ಸ್ ಲಕ್ಷಣಗಳೇನು?
━━━━━━━━━━━━━━

✧. ತೀವ್ರವಾದ ಜ್ವರ
✧. ಕಫ, ಆಗಾಗ್ಗೆ ಉಗುಳುವುದು
✧. ಉಸಿರಾಟದಲ್ಲಿ ತೊಂದರೆ
✧.ವಾಂತಿ, ಭೇದಿ
✧. ಮೂತ್ರಪಿಂಡ ವೈಫಲ್ಯಹರಡುವ ಸಾಧ್ಯತೆ.
✧.ಎಬೋಲಾ, ಅಂಥ್ರಾಕ್ಸ್​ನಂತೆ ಥಟ್ಟನೇ ಹರಡುವುದಿಲ್ಲ, ರೋಗಪೀಡಿತ ವ್ಯಕ್ತಿಗಳ ಜೊತೆ ನಿಕಟ ಸಂಬಂಧ ಹೊಂದಿದ್ದರೆ ಹರಡುವ ಸಾಧ್ಯತೆಯಿರುತ್ತದೆ.


●.ಮೆರ್ಸ್ ರೋಗದ ನಿಯಂತ್ರಣ ಕ್ರಮಗಳು :
━━━━━━━━━━━━━━━━━━━━━━

✧. ವೈದ್ಯಕೀಯ ಮಾಸ್ಕ್ ಧರಿಸಲು ಆದ್ಯತೆ ನೀಡಬೇಕು.
✧. ಕಣ್ಣಿನ ರಕ್ಷಣೆಗೆ ಗಾಗಲ್ ಬಳಕೆ
✧. ಸ್ವಚ್ಛ,ಉದ್ದನೆಯ ಗೌನ್ ಧರಿಸಲು ಆದ್ಯತೆ ನೀಡಬೇಕು.
✧. ಬಳಸಿ ಬಿಸಾಕುವ ಮಾಸ್ಕ್ ಬಳಸುವುದು ಉತ್ತಮ.
✧. ಇದುವರೆಗೆ ರೋಗ ಶಮನಕ್ಕೆ ಮದ್ದು ಕಂಡುಹಿಡಿದಿಲ್ಲ.ಹೈ ಅಲರ್ಟ್ಮೆರ್ಸ್ ಕಾಣಿಸಿಕೊಂಡ ಬೆನ್ನಲ್ಲೇ, ದಕ್ಷಿಣ ಕೊರಿಯಾ ಪ್ರವಾಸೋದ್ಯಮಕ್ಕೆ ಹೊಡೆತ ನೀಡಿದೆ.
✧.ಸಾಧ್ಯವಾದಷ್ಟೂ ದಕ್ಷಿಣ ಕೊರಿಯಾ ಪ್ರವಾಸ ಕೈಗೊಳ್ಳದಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ. ಮತ್ತೊಂದೆಡೆ ದಕ್ಷಿಣ ಕೊರಿಯಾ ಸರ್ಕಾರ ಗಡಿಭಾಗದಲ್ಲಿ ಆರೋಗ್ಯ ತಪಾಸಣೆಯನ್ನು ಬಿಗಿಗೊಳಿಸಿದೆ. ಅಲ್ಲದೆ, ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳದಂತೆ ಸೂಚಿಸಲಾಗಿದೆ.

(Courtesy :Vijayavani newspaper)

☀ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು :  (The Major Mountain Passes in India with their Elevations)

☀ಭಾರತದ ಪ್ರಮುಖ ಪರ್ವತ, ಕಣಿವೆಗಳ ಮೂಲಕ ಹಾದು ಹೋಗುವ ಮಾರ್ಗಗಳು :
(The Major Mountain Passes in India with their Elevations)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


●.ಹೆಸರು •┈┈┈┈┈┈┈┈┈┈• ●.ರಾಜ್ಯ•┈┈┈┈┈┈┈┈┈┈• ●.ಎತ್ತರ (ಅಡಿಗಳಲ್ಲಿ)
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

1.ಅಸಿರ್ ಘರ್ ಪಾಸ್ •┈┈┈┈┈┈┈┈┈┈• ಮಧ್ಯಪ್ರದೇಶ

2. ಬಾರಾ-ಲಾಚಾ-ಲಾ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈•16,400 (ft)

3. ಬನಿಹಾಲ್ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈• 9.291 (ft)

4.ಚಾಂಗ್ಲಾ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈•17.800 (ft)

5.ಫೋಟು ಲಾ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈• 13.451 (ft)

6.ಜಿಲೇಪ ಲಾ ಪಾಸ್ •┈┈┈┈┈┈┈┈┈┈• ಸಿಕ್ಕಿಂ •┈┈┈• 14,300 (ft)

7.ಢುಂಬಾರ್ ಕಂದಿ ಪಾಸ್, ಗೋಯೇಚಾ ಲಾ ಪಾಸ್ •┈┈┈┈┈┈┈┈┈┈•ಸಿಕ್ಕಿಂ •┈┈┈• 16.207(ft)

8.ಡೊಂಗ್ ಖಲಾ ಪಾಸ್ •┈┈┈┈┈┈┈┈┈┈• ಸಿಕ್ಕಿಂ •┈┈┈• 12,000 (ft)

 9.ಹಲ್ದಿಘಾಟಿ ಪಾಸ್ •┈┈┈┈┈┈┈┈┈┈• ರಾಜಸ್ಥಾನ

10. ಡೆಬಸಾ ಪಾಸ್ •┈┈┈┈┈┈┈┈┈┈• ಹಿಮಾಚಲ ಪ್ರದೇಶ •┈┈┈• 17.520 (ft)

11.ಇಂದ್ರಹಾರ ಪಾಸ್ •┈┈┈┈┈┈┈┈┈┈• ಹಿಮಾಚಲ ಪ್ರದೇಶ •┈┈┈• 14.473 (ft)

12.ಕುಂಜುಮ್ ಪಾಸ್ •┈┈┈┈┈┈┈┈┈┈• ಹಿಮಾಚಲ ಪ್ರದೇಶ •┈┈┈• 14.931 (ft)

13.ಖಾರ್ ದುಂಗ್ ಲಾ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈• 18.380 (ft)

14.ಲಾಮ್ ಖಂಗಾ ಪಾಸ್ •┈┈┈┈┈┈┈┈┈┈• ಹಿಮಾಚಲ ಪ್ರದೇಶ •┈┈┈• 17.336 (ft)

15.ಲುಂಗಾಲಾಚ್ ಲಾ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈• 16.600 (ft)

16.ಮಯಾಲಿ ಪಾಸ್, ಮರ್ಸಿಮಿಕ್ ಲಾ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈• 18.314 (ft)

17.ನಾಥು ಲಾ ಪಾಸ್ •┈┈┈┈┈┈┈┈┈┈• ಸಿಕ್ಕಿಂ •┈┈┈• 14.140 (ft)

18.ನಮಿಕಾ ಲಾ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈• 12.139 (ft)

19.ರೋಹ್ ಟಂಗ್ ಪಾಸ್ •┈┈┈┈┈┈┈┈┈┈• ಹಿಮಾಚಲ ಪ್ರದೇಶ •┈┈┈• 13.051 (ft)

20.ಪಲಕ್ಕಾಡ್ ಗ್ಯಾಪ್ ಪಾಸ್ •┈┈┈┈┈┈┈┈┈┈• ಕೇರಳ •┈┈┈• 1,000 (ft)

21.ಸೆಲಾ ಪಾಸ್ •┈┈┈┈┈┈┈┈┈┈• ಅರುಣಾಚಲ ಪ್ರದೇಶ •┈┈┈• 14,000 (ft)

22.ಸಸ್ಸೇರ್ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈• 17.753 (ft)

23.ಟಾಂಗ್ ಲಂಗ್ ಲಾ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈• 17.583 (ft)

24.ಸಿನ್ ಲಾ ಪಾಸ್ •┈┈┈┈┈┈┈┈┈┈• ಉತ್ತರಾಖಂಡ್ •┈┈┈• 18.028 (ft)

25.ಝೋಜಿಲಾ ಪಾಸ್ •┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ •┈┈┈• 12.400 (ft)

26.ಟ್ರೈಲ್ ಸ್ ಪಾಸ್ •┈┈┈┈┈┈┈┈┈┈• ಉತ್ತರಾಖಂಡ್ •┈┈┈• 17.100 (ft)

☀ ಭಾರತದಲ್ಲಿನ ಪ್ರಮುಖ ರೈಲ್ವೆ ವಲಯ ಕೇಂದ್ರ ಸ್ಥಾನಗಳು : (Indian Railway zones)

☀ ಭಾರತದಲ್ಲಿನ ಪ್ರಮುಖ ರೈಲ್ವೆ ವಲಯ ಕೇಂದ್ರ ಸ್ಥಾನಗಳು :
(Indian Railway zones)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)

ಭಾರತೀಯ ರೈಲ್ವೆಯನ್ನು 17 ವಲಯಗಳನ್ನಾಗಿ ಹಾಗೂ ವಿಭಾಗಗಳನ್ನು ಮತ್ತಷ್ಟು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ.



☀ರೈಲ್ವೆ ವಲಯಗಳು •┈┈┈┈┈┈┈┈┈┈┈┈┈┈•☀ಸ್ಥಳ

1. ಉತ್ತರ ರೈಲ್ವೆ •┈┈┈┈┈┈┈┈┈┈• ದೆಹಲಿ

2. ಈಶಾನ್ಯ ರೈಲ್ವೆ •┈┈┈┈┈┈┈┈┈┈• ಗೋರಕ್ ಪುರ

3. ಈಶಾನ್ಯ ಗಡಿನಾಡಿನ ರೈಲ್ವೆ •┈┈┈┈┈┈┈┈┈┈• ಮಾಲೆಗಾಂವ (ಗೌಹಾತಿ)

4. ಪೂರ್ವ ರೈಲ್ವೆ •┈┈┈┈┈┈┈┈┈┈• ಕೋಲ್ಕತಾ

5. ಆಗ್ನೇಯ ರೈಲ್ವೆ •┈┈┈┈┈┈┈┈┈┈• ಕೋಲ್ಕತಾ

6. ದಕ್ಷಿಣ ಕೇಂದ್ರೀಯ ರೈಲ್ವೆ •┈┈┈┈┈┈┈┈┈┈• ಸಿಕಂದರಾಬಾದ್

7 . ದಕ್ಷಿಣ ರೈಲ್ವೆ •┈┈┈┈┈┈┈┈┈┈• ಚೆನೈ

8. ಕೇಂದ್ರ ರೈಲ್ವೆ •┈┈┈┈┈┈┈┈┈┈• ಮುಂಬೈ (ನವೆಂಬರ್)

9 ಪಶ್ಚಿಮ ರೈಲ್ವೆ •┈┈┈┈┈┈┈┈┈┈• ಮುಂಬೈ (ನವೆಂಬರ್)

10. ನೈಋತ್ಯ ರೈಲ್ವೆ •┈┈┈┈┈┈┈┈┈┈• ಹುಬ್ಬಳ್ಳಿ

11. ವಾಯವ್ಯ ರೈಲ್ವೆ •┈┈┈┈┈┈┈┈┈┈• ಜೈಪುರ

12. ವೆಸ್ಟ್ ಕೇಂದ್ರ ರೈಲ್ವೆ •┈┈┈┈┈┈┈┈┈┈• ಜಬಲ್ ಪುರ

13. ಉತ್ತರ ಕೇಂದ್ರ ರೈಲ್ವೆ •┈┈┈┈┈┈┈┈┈┈• ಅಲಹಾಬಾದ್

14. ಆಗ್ನೇಯ ಕೇಂದ್ರ ರೈಲ್ವೆ •┈┈┈┈┈┈┈┈┈┈• ಬಿಲಾಸ್ ಪುರ

15 ಪೂರ್ವ ಕರಾವಳಿಯ ರೈಲ್ವೆ •┈┈┈┈┈┈┈┈┈┈• ಭುವನೇಶ್ವರ

16. ಪೂರ್ವ ಕೇಂದ್ರ ರೈಲ್ವೆ •┈┈┈┈┈┈┈┈┈┈• ಹಜಿಪುರ್

17. ಕೋಲ್ಕತಾ ಮೆಟ್ರೋ •┈┈┈┈┈┈┈┈┈┈• ಕೋಲ್ಕತಾ

Friday 24 July 2015

☀ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು : (Great Persons and their Nicknames)

☀ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಬಿರುದುಗಳು :
(Great Persons and their Nicknames)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


☀ವ್ಯಕ್ತಿಗಳು •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈• ☀ಬಿರುದುಗಳು

1. ಇಂದಿರಾ ಗಾಂಧಿ •┈┈┈┈┈┈┈┈┈┈• ಪ್ರೀಯದರ್ಶಿನಿ

2. ಬಾಲಗಂಗಾಧರ ತಿಲಕ್ •┈┈┈┈┈┈┈┈┈┈• ಲೋಕಮಾನ್ಯ

3. ಸುಭಾಸ್ ಚಂದ್ರ ಬೋಸ್ •┈┈┈┈┈┈┈┈┈┈• ನೇತಾಜಿ

4. ಲಾಲ ಬಹದ್ದೂರ್ ಶಾಸ್ತ್ರೀ •┈┈┈┈┈┈┈┈┈┈• ಶಾಂತಿದೂತ

5. ಸರದಾರ್ ವಲ್ಲಬಾಯಿ ಪಟೇಲ್ •┈┈┈┈┈┈┈┈┈┈• ಉಕ್ಕಿನ ಮನುಷ್ಯ, ಸರದಾರ್

6.  ಜವಾಹರಲಾಲ ನೆಹರು •┈┈┈┈┈┈┈┈┈┈• ಚಾಚಾ

7.  ರವೀಂದ್ರನಾಥ ಟ್ಯಾಗೋರ್ •┈┈┈┈┈┈┈┈┈┈• ಗುರುದೇವ

8.  ಎಂ. ಎಸ್. ಗೋಳಲ್ಕರ್ •┈┈┈┈┈┈┈┈┈┈•  ಗುರೂಜಿ

9.  ಮಹಾತ್ಮಾ ಗಾಂಧಿ •┈┈┈┈┈┈┈┈┈┈• ಬಾಪೂಜಿ, ರಾಷ್ಟ್ರಪಿತ

10.  ಸರೋಜಿನಿ ನಾಯ್ಡು •┈┈┈┈┈┈┈┈┈┈• ಭಾರತದ ಕೋಗಿಲೆ.

11.  ಪ್ಲಾರೆನ್ಸ್ ನೈಟಿಂಗೇಲ್ •┈┈┈┈┈┈┈┈┈┈• ದೀಪಧಾರಣಿ ಮಹಿಳೆ

12.  ಅಬ್ದುಲ್ ಗಫಾರ್ ಖಾನ್ •┈┈┈┈┈┈┈┈┈┈• ಗಡಿನಾಡ ಗಾಂಧಿ

13.  ಜಯಪ್ರಕಾಶ ನಾರಾಯಣ •┈┈┈┈┈┈┈┈┈┈• ಲೋಕನಾಯಕ

14.  ಪಿ.ಟಿ.ಉಷಾ •┈┈┈┈┈┈┈┈┈┈• ಚಿನ್ನದ ಹುಡುಗಿ

15.  ಸುನೀಲ್ ಗಾವಾಸ್ಕರ್ •┈┈┈┈┈┈┈┈┈┈• ಲಿಟಲ್ ಮಾಸ್ಷರ್

16.  ಲಾಲಾ ಲಜಪತರಾಯ •┈┈┈┈┈┈┈┈┈┈• ಪಂಜಾಬ ಕೇಸರಿ

17.  ಷೇಕ್ ಮಹ್ಮದ್ ಅಬ್ಧುಲ್ •┈┈┈┈┈┈┈┈┈┈• ಕಾಶ್ಮೀರ ಕೇಸರಿ

18.  ಸಿ. ರಾಜಗೋಪಾಲಾಚಾರಿ •┈┈┈┈┈┈┈┈┈┈• ರಾಜಾಜಿ

19.  ಸಿ. ಎಫ್. ಆಂಡ್ರೋಸ್ •┈┈┈┈┈┈┈┈┈┈• ದೀನಬಂಧು

20.  ಟಿಪ್ಪು ಸುಲ್ತಾನ •┈┈┈┈┈┈┈┈┈┈• ಮೈಸೂರ ಹುಲಿ

21.  ದಾದಾಬಾಯಿ ನವರೋಜಿ •┈┈┈┈┈┈┈┈┈┈• ರಾಷ್ಟ್ರಪಿತಾಮಹ

22.  ರವೀಂದ್ರನಾಥ ಟ್ಯಾಗೋರ್ •┈┈┈┈┈┈┈┈┈┈• ರಾಷ್ಟ್ರಕವಿ.

23. ಡಾ ಶ್ರೀಕೃಷ್ಣ ಸಿಂಗ್ •┈┈┈┈┈┈┈┈┈┈• ಬಿಹಾರ ಕೇಸರಿ

24. ಟಿ ಪ್ರಕಾಶಂ •┈┈┈┈┈┈┈┈┈┈• ಆಂಧ್ರ ಕೇಸರಿ

25. ಚಿತ್ತರಂಜನ್ ದಾಸ್ •┈┈┈┈┈┈┈┈┈┈• ದೇಶಬಂಧು

26. ಶೇಖ್ ಮುಜಿಬತ್ ರಹಮಾನ್ •┈┈┈┈┈┈┈┈┈┈• ಬಂಗಬಂಧು

27. ಕರ್ಪೂರಿ ಠಾಕೂರ್ •┈┈┈┈┈┈┈┈┈┈• ಜನ ನಾಯಕ

28. ಪುರುಷೋತ್ತಮ್ ದಾಸ್ ಟಂಡನ್ •┈┈┈┈┈┈┈┈┈┈• ರಾಜಶ್ರೀ

29. ಡಾ. ರಾಜೇಂದ್ರ ಪ್ರಸಾದ್ •┈┈┈┈┈┈┈┈┈┈• ದೇಶ ರತ್ನ ಮತ್ತು ಅಜಾತಶತ್ರು

30. ಮದನ ಮೋಹನ ಮಾಳವೀಯ •┈┈┈┈┈┈┈┈┈┈• ಮಹಾಮಾನ

31. ಮೇಜರ್ ಜನರಲ್ ರಾಜಿಂದರ್ ಸಿಂಗ್ •┈┈┈┈┈┈┈┈┈┈• ಗುಬ್ಬಚ್ಚಿ(Sparrow)

32. ಚಂದ್ರಶೇಖರ್ •┈┈┈┈┈┈┈┈┈┈• ಯುವ ಟರ್ಕ್ (Young Turk)

33. ಚೌಧರಿ ದೇವಿಲಾಲ್ •┈┈┈┈┈┈┈┈┈┈• ತೌ(Tau)

34. ಭಗತ್ ಸಿಂಗ್ •┈┈┈┈┈┈┈┈┈┈• ಶಹೀದ್ ಇ ಅಜಾಮ್

35. ಮದರ್ ತೆರೇಸಾ •┈┈┈┈┈┈┈┈┈┈• ತಾಯಿ

36. ಅಮೀರ್ ಖುಸ್ರೋ •┈┈┈┈┈┈┈┈┈┈• ಹಿಂದುಸ್ಥಾನದ ಗಿಳಿ

37. ಲಾಲಾ ಲಜಪತ ರಾಯ್, ಬಾಲಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ •┈┈┈┈┈┈┈┈┈┈• ಲಾಲ್, ಬಾಲ್, ಪಾಲ್

38. ಡಾ ಅನುಗ್ರಹ ನಾರಾಯಣ ಸಿಂಗ್ •┈┈┈┈┈┈┈┈┈┈• ಬಿಹಾರದ ವಿಭೂತಿ

39. ಜಗಜೀವನ್ ರಾಮ್ •┈┈┈┈┈┈┈┈┈┈• ಬಾಬುಜಿ

40. ಸಮುದ್ರ ಗುಪ್ತಾ •┈┈┈┈┈┈┈┈┈┈• ಭಾರತದ ನೆಪೋಲಿಯನ್

41. ಮಹಾಕವಿ ಕಾಳಿದಾಸ್ •┈┈┈┈┈┈┈┈┈┈• ಭಾರತದ ಶೇಕ್ಸ್ಪಿಯರ್

42. ಚಾಣಕ್ಯ •┈┈┈┈┈┈┈┈┈┈• ಭಾರತದ ಮ್ಯಾಕೆವೇಲಿ

43.ಜೈನುಲ್ ಅಬ್ದಿನ್ •┈┈┈┈┈┈┈┈┈┈• ಕಾಶ್ಮೀರದ ಅಕ್ಬರ್

44. ರವಿಶಂಕರ್ ಮಹಾರಾಜ್ •┈┈┈┈┈┈┈┈┈┈• ಗುಜರಾತದ ಪಿತಾಮಹ

45. ದುಂಡಿರಾಜ್ ಗೋವಿಂದ ಫಾಲ್ಕೆ •┈┈┈┈┈┈┈┈┈┈• ಭಾರತೀಯ ಚಲನಚಿತ್ರದ ಪಿತಾಮಹ

46. ರಾಜಾರಾಮ್ ಮೋಹನ್ ರಾಯ್ •┈┈┈┈┈┈┈┈┈┈• ಭಾರತದ ನವೋದಯದ ದೃವತಾರೆ

47. ಕಪಿಲ್ ದೇವ್ •┈┈┈┈┈┈┈┈┈┈• ಹರಿಯಾಣದ ಸುಂಟರಗಾಳಿ (ಹರಿಕೇನ್)

48. ಧ್ಯಾನ್ ಚಂದ್ •┈┈┈┈┈┈┈┈┈┈• ಹಾಕಿಯ ಜಾದೂಗಾರ (ಮಾಂತ್ರಿಕ)

49.ಕೆ.ವಿ. ಪುಟ್ಟಪ್ಪ •┈┈┈┈┈┈┈┈┈┈• ಕುವೆಂಪು

50. ದೇಶ ಪ್ರೀಯ •┈┈┈┈┈┈┈┈┈┈• ಯತೀಂದ್ರ ಮೋಹನ್ ಸೇನ್ ಗುಪ್ತ


Thursday 23 July 2015

☀ರಾಷ್ಟ್ರದ ನಾಯಕರು ಮತ್ತು ಅವರ ಸಮಾಧಿ ಸ್ಥಳ : (List of memorials of the Indian leaders)  

☀ರಾಷ್ಟ್ರದ ನಾಯಕರು ಮತ್ತು ಅವರ ಸಮಾಧಿ ಸ್ಥಳ :
(List of memorials of the Indian leaders)  
━━━━━━━━━━━━━━━━━━━━━━━━━━━━━━━━━━━━━━━━━━━━━

 ★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


☀ನಾಯಕರು •┈┈┈┈┈┈┈┈┈┈┈┈┈┈┈┈•☀ಸಮಾಧಿ ಸ್ಥಳ
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●. ಗಾಂಧೀಜಿ •┈┈┈┈┈┈┈┈┈┈• ರಾಜ್ ಘಾಟ್.

●. ಬಿ.ಆರ್.ಅಂಬೇಡ್ಕರ್ •┈┈┈┈┈┈┈┈┈┈• ಚೈತ್ರಭೂಮಿ.
                        
●. ಇಂದಿರಾಗಾಂಧಿ •┈┈┈┈┈┈┈┈┈┈• ಶಕ್ತಿಸ್ಥಳ.

●. ಚರಣ್ ಸಿಂಗ್ •┈┈┈┈┈┈┈┈┈┈• ಕಿಸಾನ್ ಘಾಟ್.
                              
●. ರಾಜೀವ್ ಗಾಂಧಿ •┈┈┈┈┈┈┈┈┈┈• ವೀರಭೂಮಿ.  
                 
●. ಮೊರಾರ್ಜಿ ದೇಸಾಯಿ •┈┈┈┈┈┈┈┈┈┈• ಅಭಯಘಾಟ್.  
                    
●. ಜಗಜೀವನ ರಾಂ •┈┈┈┈┈┈┈┈┈┈• ಸಮತಾಸ್ಥಳ.        
               
●. ಲಾಲ್ ಬಹದ್ದೂರ್ ಶಾಸ್ತ್ರಿ •┈┈┈┈┈┈┈┈┈┈• ವಿಜಯ್ ಘಾಟ್.        
      
●. ಜವಾಹರಲಾಲ ನೆಹರು •┈┈┈┈┈┈┈┈┈┈• ಶಾಂತಿವನ.        

●. ಜೇಲ್ ಸಿಂಗ್ •┈┈┈┈┈┈┈┈┈┈• ಏಕತಾಸ್ಥಳ.              
            
●. ಗುಲ್ಜಾರಿ ಲಾಲ್ ನಂದಾ •┈┈┈┈┈┈┈┈┈┈• ನಾರಾಯಣ್ ಘಾಟ್.

☀ಭಾರತದ ಪ್ರಸಿದ್ಧ ಅಣೆಕಟ್ಟುಗಳು ಮತ್ತು ಅವುಗಳಿರುವ ಸ್ಥಳಗಳು : The List of India’s Important Dams and its Location

☀ಭಾರತದ ಪ್ರಸಿದ್ಧ ಅಣೆಕಟ್ಟುಗಳು ಮತ್ತು ಅವುಗಳಿರುವ ಸ್ಥಳಗಳು :
The List of India’s Important Dams and its Location
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ ಭೌಗೋಳಿಕ ವ್ಯವಸ್ಥೆ.
(Indian Physical Geography)

★ ಭಾರತದ ಭೂಗೋಳ
(Indian Geography)


●.ಅಣೆಕಟ್ಟಿನ ಹೆಸರು •┈┈┈┈┈┈•●.ನದಿ •┈┈┈┈┈┈•●.ನಿರ್ಮಿತ ಸ್ಥಳ
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●.1. ತುಂಗಾ ಭದ್ರ ಅಣೆಕಟ್ಟು•┈┈┈┈┈┈• ತುಂಗಾಭದ್ರ •┈┈┈┈┈┈• ಕರ್ನಾಟಕ

●.2. ಮೆಟ್ಟೂರು ಜಲಾಶಯ •┈┈┈┈┈┈• ಕಾವೇರಿ •┈┈┈┈┈┈• ತಮಿಳುನಾಡು

●.3. ಕೃಷ್ಣರಾಜಸಾಗರ ಅಣೆಕಟ್ಟು •┈┈┈┈┈┈• ಕಾವೇರಿ •┈┈┈┈┈┈• ಕರ್ನಾಟಕ

●.4. ಮೈಥೋನ್ ಅಣೆಕಟ್ಟು •┈┈┈┈┈┈• ಬರಾಕರ್ ನದಿ •┈┈┈┈┈┈• ಜಾರ್ಖಂಡ್

●.5. ಉಕಾಯಿ ಅಣೆಕಟ್ಟು •┈┈┈┈┈┈• ತಾಪಿ ನದಿ •┈┈┈┈┈┈• ಗುಜರಾತ್

●.6. ಇಂದಿರಾ ಸಾಗರ್ ಅಣೆಕಟ್ಟು •┈┈┈┈┈┈• ನರ್ಮದಾ ನದಿ •┈┈┈┈┈┈• ಮಧ್ಯಪ್ರದೇಶ

●.7. ಹಿರಾಕುಡ್ ಅಣೆಕಟ್ಟು •┈┈┈┈┈┈• ಮಹಾನದಿ ನದಿ •┈┈┈┈┈┈• ಒರಿಸ್ಸಾ

●.8. ಚೆರುಥಾನಿ ಅಣೆಕಟ್ಟು •┈┈┈┈┈┈• ಚೆರುಥಾನಿ •┈┈┈┈┈┈• ಕೇರಳ

●.9. ಬಗ್ಲಿಹಾರ್ ಅಣೆಕಟ್ಟು •┈┈┈┈┈┈• ಚೆನಾಬ್ ನದಿ •┈┈┈┈┈┈• ಜಮ್ಮು ಮತ್ತು ಕಾಶ್ಮೀರ

●.10. ರಂಜಿತ್ ಸಾಗರ ಅಣೆಕಟ್ಟು •┈┈┈┈┈┈• ರಾವಿ ನದಿ •┈┈┈┈┈┈• ಪಂಜಾಬ್

●.11. ಶ್ರೀಶೈಲಂ ಅಣೆಕಟ್ಟು •┈┈┈┈┈┈• ಕೃಷ್ಣಾ ನದಿ •┈┈┈┈┈┈• ಆಂಧ್ರಪ್ರದೇಶ

●.12. ಸರ್ದಾರ್ ಸರೋವರ ಅಣೆಕಟ್ಟು •┈┈┈┈┈┈• ನರ್ಮದಾ ನದಿ •┈┈┈┈┈┈• ಗುಜರಾತ್

●.13. ಭಾಕ್ರಾ ನಂಗಲ್ ಅಣೆಕಟ್ಟು •┈┈┈┈┈┈• ಸಟ್ಲೆಜ್ ನದಿ •┈┈┈┈┈┈• ಪಂಜಾಬ್ ಮತ್ತು ಹಿಮಾಚಲ ಪ್ರದೇಶ

●.14. ಕೊಯ್ನಾ ಅಣೆಕಟ್ಟು •┈┈┈┈┈┈• ಕೊಯ್ನಾ ನದಿ •┈┈┈┈┈┈• ಮಹಾರಾಷ್ಟ್ರ

●.15. ಇಡುಕ್ಕಿ ಕಮಾನು ಅಣೆಕಟ್ಟು •┈┈┈┈┈┈• ಪೆರಿಯಾರ್ ನದಿ •┈┈┈┈┈┈• ಕೇರಳ

●.16. ಲಖ್ವಾರ್ ಅಣೆಕಟ್ಟು •┈┈┈┈┈┈• ಯಮುನಾ ನದಿ •┈┈┈┈┈┈• ಉತ್ತರಾಖಂಡ್

●.17. ತೆಹ್ರಿ ಅಣೆಕಟ್ಟು •┈┈┈┈┈┈• ಭಾಗೀರಥಿ ನದಿ •┈┈┈┈┈┈• ಉತ್ತರಾಖಂಡ್

Wednesday 22 July 2015

☀ಪ್ರಮುಖ ಅಂತರರಾಷ್ಟ್ರೀಯ ಗಡಿರೇಖೆಗಳು :  (Important International border Lines)

☀ಪ್ರಮುಖ ಅಂತರರಾಷ್ಟ್ರೀಯ ಗಡಿರೇಖೆಗಳು :
(Important International border Lines)
━━━━━━━━━━━━━━━━━━━━━━━━━━━━━━━━━━━━━━━━━━━━━‬

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


☀ಗಡಿರೇಖೆಗಳು •┈┈┈┈┈┈┈┈┈┈┈┈┈┈┈┈┈┈┈┈┈┈┈•☀ದೇಶಗಳು.
━━━━━━━━━━━━━━━━━━━━━━━━━━━━━━━━━━━━━━━━━━━━━

●.ರಾಡ್ ಕ್ಲಿಫ್ ಗಡಿರೇಖೆ:•┈┈┈┈┈┈• ಭಾರತ ಮತ್ತು ಪಾಕಿಸ್ತಾನ

●.ಮ್ಯಾಕ್ ಮೋಹನ್ ಗಡಿರೇಖೆ:•┈┈┈┈┈┈• ಭಾರತ ಮತ್ತು ಚೀನಾ

●.ಡ್ಯುರಾಂಡ್ ರೇಖೆ:•┈┈┈┈┈┈• ಪಾಕಿಸ್ತಾನ ಮತ್ತು ಅಫ್ಘಾನಿಸ್ಥಾನ

●.ಮ್ಯಾಗ್ನಿಕೋಟ್ ಗಡಿರೇಖೆ (ರಕ್ಷಣಾ ಪಂಕ್ತಿ):•┈┈┈┈┈┈• ಫ್ರಾನ್ಸ್ ಮತ್ತು ಜರ್ಮನಿ

●.38 ನೇ ಸಮಾಂತರ (ಪ್ಯಾರಾಲಲ್):•┈┈┈┈┈┈• ಉತ್ತರ ಮತ್ತು ದಕ್ಷಿಣ ಕೊರಿಯಾ

●.17 ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಉತ್ತರ ಮತ್ತು ದಕ್ಷಿಣ ವಿಯೆಟ್ನಾಂ

●.49 ನೇ ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಅಮೇರಿಕಾ ಮತ್ತು ಕೆನಡಾ

●.ಹಿಂಡೆನ್ ಬರ್ಗ್ ರೇಖೆ:•┈┈┈┈┈┈• ಜರ್ಮನಿ ಮತ್ತು ಪೋಲೆಂಡ್

●.ಓಡೆರ್ ನೀಸ್ ರೇಖೆ:•┈┈┈┈┈┈• ಪೂರ್ವ ಜರ್ಮನಿ ಮತ್ತು ಪೋಲೆಂಡ್

●.ಸಿಗ್ ಫ್ರೈಡ್ ರೇಖೆ:•┈┈┈┈┈┈• ಜರ್ಮನಿ ಮತ್ತು ಫ್ರಾನ್ಸ್.

●.24 ನೇ ಸಮಾನಾಂತರ (ಪ್ಯಾರಾಲಲ್):•┈┈┈┈┈┈• ಭಾರತ ಮತ್ತು ಮಯನ್ಮಾರ್ .

☀IAS-COMPULSORY KANNADA PAPER -2014 ಐಎಎಸ್ ಕಡ್ಡಾಯ ಕನ್ನಡ ಪತ್ರಿಕೆ -2014 (ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ..)

☀IAS-COMPULSORY KANNADA PAPER -2014
ಐಎಎಸ್ ಕಡ್ಡಾಯ ಕನ್ನಡ ಪತ್ರಿಕೆ -2014 (ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ..)
━━━━━━━━━━━━━━━━━━━━━━━━━━━━━━━━━━━━━━━━━━━━━

★ಸಿವಿಲ್ ಸರ್ವಿಸ್ (ಐಎಎಸ್) ಸಾಮಾನ್ಯ ಅಧ್ಯಯನ.
(IAS GENERAL STUDIES)

★ಸಿವಿಲ್ ಸರ್ವಿಸ್ (ಐಎಎಸ್) ಮುಖ್ಯ ಪರೀಕ್ಷೆಯಲ್ಲಿನ ಕಡ್ಡಾಯ ಕನ್ನಡ ಪತ್ರಿಕೆ
(CIVIL SERVICE MAINS KANNADA QUESTION PAPER)

 •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

★ 2014ರಲ್ಲಿ ಸಿವಿಲ್ ಸರ್ವಿಸ್ (ಐಎಎಸ್) ಮುಖ್ಯ ಪರೀಕ್ಷೆಯಲ್ಲಿನ ಕಡ್ಡಾಯ ಕನ್ನಡ ಪತ್ರಿಕೆಯಲ್ಲಿ ಕೇಳಲಾದ ಕೆಲವು ಕನ್ನಡ ವ್ಯಾಕರಣ ಪ್ರಶ್ನೆಗಳನ್ನು ಇಲ್ಲಿ ವಿವರಿಸಲಾಗಿದೆ.

★ ಕಡ್ಡಾಯ ಪತ್ರಿಕೆಯಾದ ಕನ್ನಡ ಪತ್ರಿಕೆ ಎಸೆಸೆಲ್ಸಿ ಮಟ್ಟದ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

★ ಕಡ್ಡಾಯ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪಡೆಯುವ ಅಂಕಗಳು ಅರ್ಹತಾದಾಯಕ ಸ್ವರೂಪದ್ದಾಗಿರುತ್ತವೆ. ಅರ್ಹತೆ ಪಡೆಯಲು ಪ್ರತಿಯೊಂದು ಪರೀಕ್ಷೆಯಲ್ಲಿ ಕನಿಷ್ಠ ಶೇ.30 ಮತ್ತು ಸರಾಸರಿ ಶೇ.35 ಅಂಕಗಳನ್ನು ನಿಗದಿಪಡಿಸಲಾಗಿದೆ.



●. ಕನ್ನಡ ವ್ಯಾಕರಣದ ಪ್ರಶ್ನೆಗಳು :
 •┈┈┈┈┈┈┈┈┈┈┈┈┈┈┈┈┈┈┈•

●.Q.6 (a) Find sandhi svarupa for the following [2X5 = 10 marks]

(i) ಸೊಗಯಿಸು

(ii) ಪಳಗನ್ನಡ

(iii) ಪೊನ್ನು ಳ್ಳಂ

(iv) ಮಾತೆಲ್ಲಂ

(v) ಈವೊಕ್ಕಲ್


●.Q.6 (b) Find samskruta origin for these kannada words [2X5 = 10 marks]

(i) ದಾಡೆ

(ii) ಸೆಜ್ಜೆ

(iii) ಆಣೆ

(iv) ಜೊನ್ನ

(v) ನೇಹ


●.Q.6(c) Explain the chandas used below [2X5 = 10 marks]

(i) ಲಲಿತರಗಳೆಯ ಮಾತ್ರಾಗಣದ ಸ್ವರೂಪ ಏನು?

(ii) ಶರಷಟ್ಪದಿಯ ಮಾತ್ರೆಗಳ ವಿವರ ಕೊಡಿ

(iii) ತ್ರಿಪದಿಯ ಲಕ್ಷಣವನ್ನು ವಿವರಿಸಿ

(iv) ಸಾಂಗತ್ಯದ ಲಕ್ಷಣವನ್ನು ತಿಳಿಸಿ

(v) ‘ಸಾನೆಟ್’ನ ಲಕ್ಷನವೇನು?


●.Q.6 (d) Identify the poet/grammarian/author who said the following [2*5 = 10 marks]

(i) ಯತಿ ವಿಲಂಘನದಿಂದರಿದಲ್ತೆ ಕನ್ನಡಂ

(ii) ನೋಡುವೊಡೊಂದಕ್ಕರಮದು, ಮಾಡುವೊಡೆ ಉಚ್ಚರಣೆಗೆ ಅರಿದು ಮೂರುಂ ತೆರನಂ.

(iii) ಒಪ್ಪುವ ಕನ್ನಡದೊಳ್ ಸ್ವಭಾವದಿಂ ಕೆಲವು ಮಹಾಪ್ರಾಣಂಗಳೊಳವು

(iv) ರೂಡಿವಶದಿಂ ಸಲೆ ಸಲ್ವುದು ಇದಲ್ತೆ, ಶಿಷ್ಟ ಸಂಭಾವಿತಮಪ್ಪ, ಕಾವ್ಯಸಮಯಂ

(v) ಶಬ್ದಾರ್ಥೌ ಸಹಿತೌ ಕಾವ್ಯಂ


(★ ಕೆಎಎಸ್ ಮುಖ್ಯ ಪರೀಕ್ಷೆ :
ಮುಖ್ಯ ಪರೀಕ್ಷೆ ವಿವರಣಾತ್ಮಕ (ಲಿಖಿತ) ಮಾದರಿಯಲ್ಲಿ ಇರುತ್ತದೆ. ಓಟ್ಟು ಮುಖ್ಯ ಪರೀಕ್ಷೆಗೆ ಆರು ಪ್ರಶ್ನೆ ಪತ್ರಿಕೆಗಳಿರುತ್ತವೆ. ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಆಂಗ್ಲಭಾಷೆಗಳೆರಡರಲ್ಲೂ ಇರುತ್ತವೆ. ಅಭ್ಯರ್ಥಿಗಳು ಪತ್ರಿಕೆಯನ್ನು ಪೂರ್ಣವಾಗಿ ಕನ್ನಡಲ್ಲಿ ಅಥವಾ ಆಂಗ್ಲ ಭಾಷೆಯಲ್ಲಿ ಉತ್ತರಿಸಬಹುದಾಗಿದೆ. ಮುಖ್ಯ ಪರೀಕ್ಷೆಯು ಪದವಿ ಮಟ್ಟದ್ದಾಗಿರುತ್ತದೆ.)

***..
ಧನ್ಯವಾದಗಳು.

☀ UNIT: Ⅱ) ಸಂಧಿಗಳು: (ಸಂಸ್ಕೃತ ಸಂಧಿಗಳು)...ಮುಂದುವರಿದ ಭಾಗ. (Kannada Grammar)

☀ UNIT: Ⅱ) ಸಂಧಿಗಳು: (ಸಂಸ್ಕೃತ ವ್ಯಂಜನ ಸಂಧಿಗಳು)...ಮುಂದುವರಿದ ಭಾಗ.
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


●.೨. ಸಂಸ್ಕೃತ ವ್ಯಂಜನ ಸಂಧಿಗಳು
━━━━━━━━━━━━━━━━━━━━━

●.(೧) ಜಶ್ತ್ವಸಂಧಿ
•┈┈┈┈┈┈┈┈┈┈┈┈┈┈┈┈•
— ಜಶ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಜಬಗಡದ ಈ ಐದು ವ್ಯಂಜನಗಳನ್ನು ತಿಳಿಸುವ ಒಂದು ಸಂಜ್ಞೆ.  ಜಶ್ತ್ವ ಎಂದರೆ ಈ ಐದು ವರ್ಣಗಳಾದ ಜಬಗಡದ ವ್ಯಂಜನಗಳು ಆದೇಶವಾಗಿ ಬರುವುದು ಎಂದು ಅರ್ಥ. 

— ಯಾವ ಅಕ್ಷರಕ್ಕೆ ಇವು ಆದೇಶವಾಗಿ ಬರುತ್ತವೆ? ಎಂಬ ಬಗೆಗೆ ತಿಳಿಯೋಣ.
(೧) ದಿಗಂತದಲ್ಲಿ ಪಸರಿಸಿತು.
(೨) ಅಜಂತ ಎಂದರೆ ಸ್ವರಾಂತ ಎಂದು ಸಂಜ್ಞೆ.
(೩) ಷಣ್ಮುಖನಿಗೆ ಷಡಾನನ ಎಂಬ ಹೆಸರೂ ಉಂಟು.
(೪) ಆ ಹುಡುಗನ ಹೆಸರು ಸದಾನಂದ ಎಂದು.
(೫) ಅಬ್ಧಿ ಎಂದರೆ ಸಾಗರಕ್ಕೆ ಹೆಸರು.

— ಈ ವಾಕ್ಯಗಳಲ್ಲಿ ಬಂದಿರುವ ದಿಗಂತ, ಅಜಂತ, ಷಡಾನನ, ಸದಾನಂದ, ಅಬ್ಧಿ ಈ ಶಬ್ದಗಳನ್ನು ಬಿಡಿಸಿ ಬರೆದರೆ__
ದಿಕ್ + ಅಂತ = ದಿಗ್ + ಅಂತ = ದಿಗಂತ (ಪೂರ್ವದ ಕಕಾರಕ್ಕೆ ಗಕಾರಾದೇಶ)
(ಕ್ + ಅ = ಗ್‌ಅ)
ಅಚ್ + ಅಂತ = ಅಜ್ + ಅಂತ = ಅಜಂತ (ಚಕಾರಕ್ಕೆ ಜಕಾರಾದೇಶ)
(ಚ್ + ಅ = ಜ್‌ಅ)
ಷಟ್ + ಆನನ = ಷಡ್ + ಆನನ = ಷಡಾನನ (ಟಕಾರಕ್ಕೆ ಡಕಾರಾದೇಶ)
(ಟ್ + ಅ = ಡ್‌ಅ)
ಸತ್ + ಆನಂದ = ಸದ್ + ಆನಂದ = ಸದಾನಂದ (ತಕಾರಕ್ಕೆ ದಕಾರಾದೇಶ)
(ತ್ + ಆ = ದ್‌ಆ)
ಅಪ್ + ಧಿ = ಅಬ್ + ಧಿ = ಅಬ್ಧಿ (ಪಕಾರಕ್ಕೆ ಬಕಾರಾದೇಶ)
(ಪ್ + ಧಿ = ಬ್‌ಧಿ)

— ಮೇಲಿನ ಈ ಐದೂ ಉದಾಹರಣೆಗಳನ್ನು ಲಕ್ಷ್ಯವಿಟ್ಟು ನೋಡಿದಾಗ, ಪೂರ್ವಶಬ್ದದ ಅಂತ್ಯದಲ್ಲಿರುವ  ಕ್, ಚ್, ಟ್, ತ್, ಪ್ ಗಳಿಗೆ ಕ್ರಮವಾಗಿ ಗ್, ಜ್, ಡ್, ದ್, ಬ್ ಗಳು ಆದೇಶಗಳಾಗಿ ಬಂದಿವೆ.  ಈ ಪೂರ್ವ ಶಬ್ದದಲ್ಲಿರುವ ವರ್ಗಪ್ರಥಮವರ್ಣಗಳಿಗೆ ಅದೇ ವರ್ಗದ ಮೂರನೆಯ ವರ್ಣಗಳು ಆದೇಶಗಳಾಗಿ ಬರುವ ಸಂಧಿಯು ಸಂಸ್ಕೃತ ಶಬ್ದಗಳೇ ಎರಡೂ ಆಗಿದ್ದಾಗ ಮಾತ್ರ ಬರುವುದು.

★ ಕನ್ನಡದಲ್ಲೂ ಕತಪ ಗಳಿಗೆ ಗದಬ ಗಳು ಆದೇಶವಾಗಿ ಬರುವುದುಂಟು.  ಆದರೆ ಕತಪ ಗಳು ಉತ್ತರಪದದ ಆದಿಯಲ್ಲಿರಬೇಕು.  ಇದು ಕೇವಲ ಕನ್ನಡದ ಆದೇಶಸಂಧಿಯೆಂದು ತಿಳಿಯಬೇಕು. 
— ಹೀಗೆ ಪೂರ್ವ ಶಬ್ದದ ಕೊನೆಯ ಕಚಟತಪ ಗಳಿಗೆ ಗಜಡದಬ ಗಳು ಆದೇಶವಾಗಿ ಬರುವುದೇ ಜಶ್ತ್ವಸಂಧಿಯೆನಿಸುವುದು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
— (೨೪) ಪೂರ್ವಶಬ್ದದ ಕೊನೆಯಲ್ಲಿರುವ ಕಚಟತಪ ವ್ಯಂಜನಗಳಿಗೆ ಯಾವ ವರ್ಣ ಪರವಾದರೂ (ಎದುರಿಗೆ ಬಂದರೂ) ಪ್ರಾಯಶಃ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು ಆದೇಶಗಳಾಗಿ ಬರುತ್ತವೆ. ಇದಕ್ಕೆ ಜಶ್ತ್ವಸಂಧಿಯೆನ್ನುವರು.

★ ಪ್ರಾಯಶಃ ಎಂದು ಹೇಳಿರುವುದರಿಂದ ಕಖ, ಚಛ, ಟಠ, ತಥ, ಪಫ, ಸ, ಷ, ಙ, ಞ, ಣ, ನ, ಮ ಅಕ್ಷರಗಳು ಪರವಾದರೆ (ಎದುರಿಗೆ ಬಂದರೆ) ಮೂರನೆಯ ಅಕ್ಷರಗಳು ಆದೇಶವಾಗಿ ಕೆಲವು ಕಡೆ ಬರುವುದಿಲ್ಲ. ಅಂದರೆ ಜಶ್ತ್ವಸಂಧಿಯಾಗುವುದಿಲ್ಲ.

ಉದಾಹರಣೆಗೆ:-
ವಾಕ್+ದೇವಿ=ವಾಗ್‌ದೇವಿ=ವಾಗ್ದೇವಿ(ಕಕಾರಕ್ಕೆ ಗಕಾರಾದೇಶ)

ವಾಕ್+ದಾನ=ವಾಗ್‌ದಾನ=ವಾಗ್ದಾನ(           ”            )

ವಾಕ್+ಅಧಿಪ=ವಾಗ್‌ಅಧಿಪ=ವಾಗಧಿಪ(           ”            )

ದಿಕ್+ದೇಶ=ದಿಗ್‌ದೇಶ=ದಿಗ್ದೇಶ(           ”            )

ದಿಕ್+ದಿಗಂತ=ದಿಗ್‌ದಿಗಂತ=ದಿಗ್ದಿಗಂತ(           ”            )

ದಿಕ್+ದೇವತೆ=ದಿಗ್‌ದೇವತೆ=ದಿಗ್ದೇವತೆ(           ”            )

ಅಚ್+ಅಂತ=ಅಜ್‌ಅಂತ=ಅಜಂತ(ಚಕಾರಕ್ಕೆ ಜಕಾರಾದೇಶ)

ಅಚ್+ಆದಿ=ಅಜ್‌ಆದಿ=ಅಜಾದಿ(           ”            )

ಷಟ್+ಆನನ=ಷಡ್‌ಆನನ=ಷಡಾನನ(ಟಕಾರಕ್ಕೆ ಡಕಾರಾದೇಶ)

ಷಟ್+ಅಂಗ=ಷಡ್‌ಅಂಗ=ಷಡಂಗ(           ”            )

ಷಟ್+ಅಂಗನೆ=ಷಡ್‌ಅಂಗನೆ=ಷಡಂಗನೆ(           ”            )

ವಿರಾಟ್+ರೂಪ=ವಿರಾಡ್‌ರೂಪ=ವಿರಾಡ್ರೂಪ(           ”            )

ಸತ್+ಉದ್ದೇಶ=ಸದ್‌ಉದ್ದೇಶ=ಸದುದ್ದೇಶ(ತಕಾರಕ್ಕೆ ದಕಾರಾದೇಶ)

ಸತ್+ಉತ್ತರ=ಸದ್‌ಉತ್ತರ=ಸದುತ್ತರ(           ”            )

ಚಿತ್+ಆನಂದ=ಚಿದ್‌ಆನಂದ=ಚಿದಾನಂದ(           ”            )

ಸತ್+ಭಾವ=ಸದ್‌ಭಾವ=ಸದ್ಭಾವ(           ”            )

ಸತ್+ಉದ್ಯೋಗ=ಸದ್‌ಉದ್ಯೋಗ=ಸದುದ್ಯೋಗ(           ”            )

ಅಪ್+ಆ=ಅಬ್‌ಜ=ಅಬ್ಜ(ಪಕಾರಕ್ಕೆ ಬಕಾರಾದೇಶ)

ಅಪ್+ಚ=ಅಬ್‌ದ=ಅಬ್ದ(ಪಕಾರಕ್ಕೆ ಬಕಾರಾದೇಶ)

ಅಪ್+ಅಂಶ=ಅಬ್‌ಅಂಶ=ಅಬಂಶ(ಪಕಾರಕ್ಕೆ ಬಕಾರಾದೇಶ)

ಅಪ್+ಧಿ=ಅಬ್‌ಧಿ=ಅಬ್ಧಿ(ಪಕಾರಕ್ಕೆ ಬಕಾರಾದೇಶ)


★ ಜಶ್ತ್ವಸಂಧಿಯಾಗದಿರುವುದಕ್ಕೆ ಉದಾಹರಣೆಗಳು
ದಿಕ್+ಚಕ್ರ=ದಿಕ್ಚಕ್ರಇಲ್ಲಿ ಎಲ್ಲಿಯೂ ಮೂರನೆಯ ವರ್ಣದ ಆದೇಶವಿಲ್ಲ
ದಿಕ್+ತಟ=ದಿಕ್ತಟ
ಸತ್+ಕವಿ=ಸತ್ಕವಿ
ದಿಕ್+ಸೂಚಿ=ದಿಕ್ಸೂಚಿ
ವಾಕ್+ಪತಿ=ವಾಕ್ಪತಿ


●.(೨) ಶ್ಚುತ್ವ ಸಂಧಿ
•┈┈┈┈┈┈┈┈┈┈┈┈┈┈┈┈•
ಶ್ಚು ಎಂದರೆ ಶಕಾರ ಚವರ್ಗಾಕ್ಷರಗಳು.  (ಶ್=ಶಕಾರ, ಚು=ಚ ಛ ಜ ಝ ಞ) ಈ ಆರು ಅಕ್ಷರಗಳೇ ಶ್ಚು ಎಂಬ ಸಂಜ್ಞೆಯಿಂದ ಸಂಸ್ಕೃತ ವ್ಯಾಕರಣದಲ್ಲಿ ಕರೆಯಿಸಿಕೊಳ್ಳುತ್ತವೆ.  ಇವುಗಳು ಆದೇಶವಾಗಿ ಬರುವುದೇ ಶ್ಚುತ್ವಸಂಧಿ ಎನಿಸುವುದು.

★ ಹಾಗಾದರೆ ಇವು ಯಾವ ಅಕ್ಷರಗಳಿಗೆ ಯಾವಾಗ ಅದೇಶವಾಗಿ ಬರುತ್ತವೆಂಬುದನ್ನು ಯೋಚಿಸೋಣ.

ಮನಸ್ + ಶುದ್ಧಿ = ಮನಶ್ + ಶುದ್ಧಿ = ಮನಶ್ಶುದ್ಧಿ
(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಯಶಸ್ + ಚಂದ್ರಿಕೆ = ಯಶಶ್ + ಚಂದ್ರಿಕೆ = ಯಶಶ್ಚಂದ್ರಿಕೆ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)

ಲಸತ್ + ಚಿತ್ರ = ಲಸಚ್ + ಚಿತ್ರ = ಲಸಚ್ಚಿತ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)

ಸತ್ + ಚಿತ್ರ = ಸಚ್ + ಚಿತ್ರ = ಸಚ್ಚಿತ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)

ಬೃಹತ್ + ಛತ್ರ = ಬೃಹಚ್ + ಛತ್ರ = ಬೃಹಚ್ಛತ್ರ
(ತಕಾರಕ್ಕೆ ಛಕಾರ ಪರವಾಗಿ, ತಕಾರಕ್ಕೆ ಚಕಾರಾದೇಶ)
ಮೇಲಿನ ಎಲ್ಲ ಉದಾಹರಣೆಗಳನ್ನು ಗಮನವಿಟ್ಟು ನೋಡಿರಿ.

★ಶಬ್ದದ ಅಂತ್ಯದಲ್ಲಿ ಸಕಾರ ಇಲ್ಲವೆ ತವರ್ಗದಲ್ಲಿನ ಐದು ಅಕ್ಷರಗಳಲ್ಲಿ ಯುವುದಾದರೊಂದು ಅಕ್ಷರವಿರುತ್ತದೆ.  ಪರದಲ್ಲಿ (ಎದುರಿನಲ್ಲಿ) ಶಕಾರ ಇಲ್ಲವೆ ಚವರ್ಗದಲ್ಲಿನ ಯಾವುದಾದರೊಂದು ಅಕ್ಷರವಿದೆ.

★ಹೀಗೆ ಇವು ಒಂದಕ್ಕೊಂದು ಸಂಧಿಸಿದಾಗ ಸ ಕಾರವಿದ್ದಲ್ಲೆಲ್ಲ ಶಕಾರವು, ತವರ್ಗದ ಅಕ್ಷರಗಳಿದ್ದಲ್ಲೆಲ್ಲ ಚವರ್ಗದ ಅಕ್ಷರಗಳು ಆದೇಶಗಳಾಗಿ ಬಂದಿವೆ.
ಅಂದರೆ_ಸ ತ ಥ ದ ಧ ನ  ಗಳಿಗೆ__ಶ ಚ ಛ ಜ ಝ ಞ ಅಕ್ಷರಗಳು ಆದೇಶವಾಗಿ ಬರುತ್ತವೆ ಎಂದ ಹಾಗಾಯಿತು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೫) ಸಕಾರತವರ್ಗಾಕ್ಷರಗಳಿಗೆ ಶಕಾರ ಚವರ್ಗಾಕ್ಷರಗಳು ಪರವಾದಾಗ (ಎದುರಿಗೆ ಬಂದಾಗ) ಸಕಾರಕ್ಕೆ ಶಕಾರವೂ, ತವರ್ಗಕ್ಕೆ ಚವರ್ಗವೂ ಆದೇಶಗಳಾಗಿ ಬರುತ್ತವೆ.
ಪಯಸ್ + ಶಯನ = ಪಯಶ್ + ಶಯನ = ಪಯಶ್ಶಯನ
(ಸಕಾರಕ್ಕೆ ಶಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಂಚಲ = ಮನಶ್ + ಚಂಚಲ = ಮನಶ್ಚಂಚಲ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಮನಸ್ + ಚಾಪಲ್ಯ = ಮನಶ್ + ಚಾಪಲ್ಯ = ಮನಶ್ಚಾಪಲ್ಯ
(ಸಕಾರಕ್ಕೆ ಚಕಾರ ಪರವಾಗಿ ಸಕಾರಕ್ಕೆ ಶಕಾರಾದೇಶ)
ಶರತ್ + ಚಂದ್ರ   = ಶರಚ್ + ಚಂದ್ರ = ಶರಚ್ಚಂದ್ರ
(ತಕಾರಕ್ಕೆ ಚಕಾರ ಪರವಾಗಿ ತಕಾರಕ್ಕೆ ಚಕಾರಾದೇಶ)
ಜಗತ್ + ಜ್ಯೋತಿ = ಜಗಚ್ + ಜ್ಯೋತಿ = ಜಗಜ್ಜ್ಯೋತಿ
(ತಕಾರಕ್ಕೆ ಜಕಾರ ಪರವಾಗಿ ತಕಾರಕ್ಕೆ ಚಕಾರಾದೇಶ, ಅನಂತರ ಜಕಾರಾದೇಶ)
ಯಶಸ್ + ಶರೀರಿ = ಯಶಶ್ + ಶರೀರಿ = ಯಶಶ್ಶರೀರಿ
ಇದರ ಹಾಗೆ-ಚಲಚ್ಚಿತ್ರ, ಚಲಚ್ಚಾಮರ, ಜ್ವಲಜ್ಜ್ಯೋತಿ, ಬೃಹಜ್ಜ್ಯೋತಿ, ಮನಶ್ಯಾಂತಿ, ಮನಶ್ಚಪಲ ಇತ್ಯಾದಿಗಳು.

●.(೩) ಅನುನಾಸಿಕ ಸಂಧಿ
•┈┈┈┈┈┈┈┈┈┈┈┈┈┈┈┈•
— ಙ, ಞ, ಣ, ನ, ಮ-ಈ ಐದು ಅಕ್ಷರಗಳು ಅನುನಾಸಿಕಾಕ್ಷರಗಳೆಂದು ಹಿಂದಿನ ಸಂಜ್ಞಾಪ್ರಕರಣದಲ್ಲಿ ತಿಳಿಸಿದೆ.  ಈ ಅನುನಾಸಿಕಾಕ್ಷರಗಳು ಆದೇಶವಾಗಿ ಬರುವ ಸಂಧಿಯೇ ಅನುನಾಸಿಕ ಸಂಧಿಯೆನಿಸುವುದು.

★ ಹಾಗಾದರೆ ಇವು ಯಾವ ಅಕ್ಷರಕ್ಕೆ ಯಾವಾಗ ಆದೇಶವಾಗಿ ಬರುತ್ತವೆ? ಯಾವ ಅಕ್ಷರ ಪರವಾಗಿರಬೇಕು? ಎಂಬ ಬಗೆಗೆ ತಿಳಿಯೋಣ.
(೧) ವಾಕ್ + ಮಯ = ವಾಙ್ + ಮಯ = ವಾಙ್ಮಯ
(ಇಲ್ಲಿ ಕಕಾರಕ್ಕೆ ಮಕಾರ ಪರವಾಗಿ ಕಕಾರಕ್ಕೆ ಙಕಾರಾದೇಶವಾಗಿದೆ)
(೨) ಷಟ್ + ಮುಖ = ಷಣ್ + ಮುಖ = ಷಣ್ಮುಖ
(ಇಲ್ಲಿ ಟಕಾರಕ್ಕೆ ಮಕಾರ ಪರವಾಗಿ ಟಕಾರಕ್ಕೆ ಣಕಾರಾದೇಶವಾಗಿದೆ)
(೩) ಸತ್ + ಮಾನ = ಸನ್ + ಮಾನ = ಸನ್ಮಾನ
(ಇಲ್ಲಿ ತಕಾರಕ್ಕೆ ಮಕಾರ ಪರವಾಗಿ ತಕಾರಕ್ಕೆ ನಕಾರಾದೇಶವಾಗಿದೆ)
(೪) ಅಪ್ + ಮಯ =  ಅಮ್ + ಮಯ = ಅಮ್ಮಯ
(ಇಲ್ಲಿ ಪಕಾರಕ್ಕೆ ಮಕಾರ ಪರವಾಗಿ ಪಕಾರಕ್ಕೆ ಮಕಾರಾದೇಶವಾಗಿದೆ)

ಮೇಲಿನ ಈ ಉದಾಹರಣೆಗಳನ್ನು ಅವಲೋಕಿಸಿದಾಗ ಪೂರ್ವಶಬ್ದದ ಕೊನೆಯಲ್ಲೆಲ್ಲ ವರ್ಗದ ಮೊದಲನೆಯ ಅಕ್ಷರಗಳಾದ ಕ್, ಟ್, ತ್, ಪ್ ಇತ್ಯಾದಿ ಅಕ್ಷರಗಳಿವೆ.  ಎದುರಿಗೆ ಅನುನಾಸಿಕಾಕ್ಷರ ಬಂದಿದೆ.  ಆದ ಕಾರಣದಿಂದ ಈ ವರ್ಗದ ಮೊದಲನೆಯ ಅಕ್ಷರಗಳಾದ     ಕ ಟ ತ ಪ ಇತ್ಯಾದಿ ವ್ಯಂಜನಗಳಿಗೆ ಅದೇ ವರ್ಗದ ಅನುನಾಸಿಕಾಕ್ಷರ (ಐದನೆಯ ವರ್ಣ) ಆದೇಶವಾಗಿ ಬಂದಿದೆಯೆಂದು ತಿಳಿಯಬೇಕು.  ಅಂದರೆ ವರ್ಗದ ಮೊದಲನೆಯ ವ್ಯಂಜನಕ್ಕೆ ಅದರದೇ ಆದ ಅನುನಾಸಿಕಾಕ್ಷರ ಬರುವಿಕೆಯೇ ಅನುನಾಸಿಕ ಸಂಧಿಯೆನಿಸುವುದು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೬) ವರ್ಗ ಪ್ರಥಮ ವರ್ಣಗಳಿಗೆ ಯಾವ ಅನುನಾಸಿಕಾಕ್ಷರ ಪರವಾದರೂ, ಅವುಗಳಿಗೆ ಅಂದರೆ ಕ ಚ ಟ ತ ಪ ವ್ಯಂಜನಗಳಿಗೆ ಕ್ರಮವಾಗಿ ಙ ಞ ಣ ನ ಮ ವ್ಯಂಜನಗಳು ಆದೇಶಗಳಾಗಿ ಬರುತ್ತವೆ.

ಉದಾಹರಣೆಗೆ:-
ದಿಕ್ + ನಾಗ = ದಿಙ್ + ನಾಗ = ದಿಙ್ನಾಗ
(ಕಕಾರಕ್ಕೆ ನಕಾರ ಪರವಾಗಿ ಙಕಾರಾದೇಶ)
ಷಟ್ + ಮಾಸ = ಷಣ್ + ಮಾಸ = ಷಣ್ಮಾಸ
(ಟಕಾರಕ್ಕೆ ಮಕಾರ ಪರವಾಗಿ ಣಕಾರಾದೇಶ)
ವಾಕ್ + ಮಾಧುರ‍್ಯ = ವಾಙ್ + ಮಾಧುರ‍್ಯ = ವಾಙ್ಮಾಧುರ‍್ಯ
(ಕಕಾರಕ್ಕೆ ಮಕಾರ ಪರವಾಗಿ ಙಕಾರಾದೇಶ)
ಚಿತ್ + ಮಯ = ಚಿನ್ + ಮಯ = ಚಿನ್ಮಯ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಚಿತ್ + ಮೂಲ = ಚಿನ್ + ಮೂಲ = ಚಿನ್ಮೂಲ
(ತಕಾರಕ್ಕೆ ಮಕಾರಪರವಾಗಿ ನಕಾರಾದೇಶ)
ಸತ್ + ಮಣಿ = ಸನ್ + ಮಣಿ = ಸನ್ಮಣಿ
(ತಕಾರಕ್ಕೆ ಮಕಾರ ಪರವಾಗಿ ನಕಾರಾದೇಶ)
ಇದರಂತೆ, ವಾಙ್ಮೂಲ, ವಾಙ್ಮಾನಸ, ಉನ್ಮಾದ, ತನ್ಮಯ ಇತ್ಯಾದಿ


★ ವಿವರಗಳು:-
[1] ಅಆ, ಇಈ, ಉಊ, ಋೠ ಈ ಸ್ವರಗಳು ಸವರ್ಣ ಸ್ವರಗಳು.  ಅಅ, ಅಆ, ಆಆ, ಆಅ-ಹೀಗೆ ಬಂದರೂ ಸವರ್ಣ ಸ್ವರಗಳು.  ಈಈ, ಇಇ, ಈಇ, ಇಈ-ಹೀಗೆ ಬಂದರೂ ಸವರ್ಣ ಸ್ವರಗಳು. ಇದರ ಹಾಗೆಯೇ ಉಊ, ಋೠ ಗಳ ಸವರ್ಣ ಸ್ವರಗಳ ವಿಚಾರ ಕೂಡ.

[2] ಅ ಆ ಕಾರಗಳಿಗೆ ಎಂದರೆ, ಅ ಅಥವಾ ಆ ಕಾರಗಳಲ್ಲಿ ಯಾವುದಾದರೊಂದು ಸ್ವರಕ್ಕೆ ಎಂದರ್ಥ.  ಏ ಐ ಕಾರಗಳು ಪರವಾದರೆ ಎಂದರೆ, ಏ ಅಥವಾ ಐ ಕಾರಗಳಲ್ಲಿ ಯಾವುದಾದರೂ ಒಂದು ಪರವಾದರೆ ಎಂದು ಅರ್ಥ.

[3] ಯಣ್ ಎಂದರೆ ಯ ವ ರ ಲ ಈ ನಾಲ್ಕು ಅಕ್ಷರಗಳೆಂದು ಹಿಂದೆ ತಿಳಿಸಿದೆಯಷ್ಟೆ.  ಲ ಕಾರವು ಆದೇಶವಾಗಿ ಬರುವ ಉದಾಹರಣೆಗಳು ಕನ್ನಡ ಭಾಷೆಯಲ್ಲಿ ಇಲ್ಲವಾದ್ದರಿಂದ ಸೂತ್ರದಲ್ಲಿ ಅದನ್ನು ಕೈಬಿಟ್ಟಿದೆ.

[4] ಅಚ್ ಎಂದರೆ ಸಂಸ್ಕೃತ ವ್ಯಾಕರಣದಲ್ಲಿ ಸ್ವರ ಎಂದು ಅರ್ಥ.
ಅಜಂತ ಎಂದರೆ ಸ್ವರಾಂತವೆಂದು ತಿಳಿಯಬೇಕು.

[5] ಅಬ್ಜ=ಕಮಲ
[6] ಅಬ್ದ=ಮೋಡ
[7] ಅಬಂಶ=ನೀರಿನ ಅಂಶ
[8] ಅಬ್ಧಿ=ಸಮುದ್ರ (ಅಪ್ ಅಂದರೆ ನೀರು)
[9] ಅಪ್‌ಮಯ=ನೀರಿನ ಮಯ, ಅಂದರೆ ಜಲಮಯ ಎಂದು ಅರ್ಥ.
[10] ಚಕಾರಕ್ಕೆ ಞ ಕಾರ ಆದೇಶವಾಗಿ ಬರುವ ಉದಾಹರಣೆಗಳು ಪ್ರಸಿದ್ಧವಲ್ಲವಾದ್ದರಿಂದ ಆ ಉದಾಹರಣೆ ಕೊಟ್ಟಿಲ್ಲ.
[11] ದಿಙ್ನಾಗ=ದಿಕ್ಕುಗಳಲ್ಲಿರುವ ಆನೆ (ಅಷ್ಟದಿಗ್ಗಜಗಳು)
[12] ವಾಙ್ಮಾಧುರ‍್ಯ=ಮಾತಿನ ಮಾಧುರ‍್ಯ
[13] ವಾಙ್ಮೂಲ=ಮಾತಿನ ಮೂಲ; ವಾಙ್ಮಾನಸ=ಮಾತು, ಮನಸ್ಸು; ಉನ್ಮಾದ=ವಿಶೇಷ ಮದದಿಂದ ಕೂಡಿದ; ತನ್ಮಯ=ಬೆರೆಯುವಿಕೆ.)


★ ಇದುವರೆಗೆ ಸಂಸ್ಕೃತ ಸ್ವರಸಂಧಿ ಮತ್ತು ವ್ಯಂಜನಸಂಧಿಗಳ ಬಗೆಗೆ ಹಲವಾರು ವಿಷಯಗಳನ್ನು ತಿಳಿದಿರುವಿರಿ.
ಅದರ ಸಾರಾಂಶವನ್ನು ಈ ಕೆಳಗಿನ ಪಟ್ಟಿಯಲ್ಲಿ ಮತ್ತೊಮ್ಮೆ  ಓದಿ  ನೆನಪಿನಲ್ಲಿಡಿರಿ.

●. ಸಂಸ್ಕೃತ ಸಂಧಿಗಳು
★ ಸ್ವರಸಂಧಿಗಳು
★ ವ್ಯಂಜನಸಂಧಿಗಳು
(i) ಸವರ್ಣದೀರ್ಘಸಂಧಿ
(ದೀರ್ಘಸ್ವರಾದೇಶ)(i) ಜಶ್ತ್ವಸಂಧಿ
(ಜಬಗಡದ ಆದೇಶ)
(ii) ಗುಣಸಂಧಿ
(ಏ, ಓ, ಅರ್ ಆದೇಶ)(ii) ಶ್ಚುತ್ವಸಂಧಿ
(ಶಕಾರ ಚವರ್ಗಾದೇಶ)
(iii) ವೃದ್ಧಿಸಂಧಿ
(ಐ, ಔ ಆದೇಶ)(iii) ಅನುನಾಸಿಕಸಂಧಿ
(ಙ,ಞ,ಣ,ನ,ಮ ಗಳ ಆದೇಶ)
(iv) ಯಣ್‌ಸಂಧಿ
(ಯ, ವ, ರ ಆದೇಶ)

(courtesy :Kannada divige) 

☀ UNIT: Ⅱ) ಸಂಧಿಗಳು: (ಸಂಸ್ಕೃತ ಸಂಧಿಗಳು) (Kannada Grammar)

☀ UNIT: Ⅱ) ಸಂಧಿಗಳು: (ಸಂಸ್ಕೃತ ಸಂಧಿಗಳು)
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


      - ಇದುವರೆಗೆ ಕನ್ನಡ ಭಾಷೆಯಲ್ಲಿ ಬರುವ ಲೋಪ, ಆಗಮ, ಆದೇಶ ಸಂಧಿಗಳ ಬಗೆಗೆ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮ ಸಂಧಿಗಳಾಗುತ್ತವೆ. ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದರೆ ಆಗುವ ಆದೇಶ ಸಂಧಿಗಳ ಸ್ಥೂಲಪರಿಚಯ ಮಾಡಿಕೊಂಡಿರಿ. ಅನಂತರ ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದೆ ಇರುವ ಪ್ರಕೃತಿಭಾವವನ್ನೂ ಅರಿತಿರಿ. ಇದನ್ನು ಕೆಳಗೆ ಸೂಚಿಸಿರುವ ರೇಖಾ ಚಿತ್ರಗಳ ಮೂಲಕ ಸ್ಥೂಲವಾಗಿ ನೆನಪಿನಲ್ಲಿ ಇಟ್ಟುಕೊಳ್ಳಿರಿ.


●.(೧) ಕನ್ನಡ ಸಂಧಿಗಳು:
•┈┈┈┈┈┈┈┈┈┈┈┈┈┈┈┈•
ಲೋಪ ಸ್ವರ+ಸ್ವರ-ಪೂರ್ವದ ಸ್ವರಕ್ಕೆ ಅರ್ಥಹಾನಿಯಾಗದಾಗ ಲೋಪಆಗಮ ಸ್ವರ+ಸ್ವರ-ಮಧ್ಯದಲ್ಲಿ ಯಕಾರ ಅಥವಾ ವಕಾರಾಗಮ  ಆದೇಶ
ಸ್ವರ+ವ್ಯಂಜನ, ವ್ಯಂಜನ+ವ್ಯಂಜನ.

★ ೧. ಉತ್ತರಪದದ ಆದಿಯ ಕ ತ ಪ ಗಳು ಗ ದ ಬ ಗಳಾಗುತ್ತವೆ.
೨.  ಪ ಬ ಮ ಗಳಿಗೆ ವಕಾರ ಆದೇಶವಾಗುತ್ತದೆ.
೩.  ಸ ಕಾರಕ್ಕೆ ಚ ಜ ಛ ಗಳು ಆದೇಶವಾಗುತ್ತವೆ.

★ (೨) ಸ್ವರದ ಮುಂದೆ ಸ್ವರ ಬಂದರೂ ಸಂಧಿಯಾಗದಿರುವುದು ಪ್ರಕೃತಿಭಾವ


●.ಸಂಸ್ಕೃತ ಸಂಧಿಗಳು
━━━━━━━━━━━━━━━

೧. ಸಂಸ್ಕೃತ ಸ್ವರ ಸಂಧಿಗಳು :
━━━━━━━━━━━━━━━━━
(೧) ರಾಮಾಯಣವು ಮಹೋನ್ನತ ಗ್ರಂಥ.
(೨) ಸೂರ್ಯೋದಯ ಸಮಯವು ಅತ್ಯಂತ ಮನೋಹರವಾದುದು.
ಮೇಲಿನ ಈ ಎರಡೂ ವಾಕ್ಯಗಳು ಕನ್ನಡ ವಾಕ್ಯಗಳೇ ಅಲ್ಲವೆ?  ಆದರೆ ಇದರಲ್ಲಿ ಸಂಸ್ಕೃತದಿಂದ ಬಂದ ಶಬ್ದಗಳೇ ಹೆಚ್ಚಾಗಿವೆ.

— ರಾಮಾಯಣ  ಮಹೋನ್ನತ  ಗ್ರಂಥ  ಸೂರ‍್ವೋದಯ ಸಮಯ ಅತ್ಯಂತ ಮನೋಹರ -ಹೀಗೆ ಈ ಏಳೂ ಶಬ್ದಗಳು ಸಂಸ್ಕೃತ ಶಬ್ದಗಳೇ ಆಗಿವೆ.  ಹೀಗೆ ನಮ್ಮ ಭಾಷೆಯಲ್ಲಿ ಸಾವಿರಾರು ವರ್ಷಗಳಿಂದ ಸಂಸ್ಕೃತದ ಅನೇಕ ಶಬ್ದಗಳು ಬಂದು ಸೇರಿವೆ.  ನಮ್ಮ ಕವಿಗಳು ತಮ್ಮ ಕಾವ್ಯಗಳಲ್ಲಿ ಲೆಕ್ಕವಿಲ್ಲದಷ್ಟು ಸಂಸ್ಕೃತ ಶಬ್ದಗಳನ್ನು ಸೇರಿಸಿ ಕಾವ್ಯ ಬರೆದಿದ್ದಾರೆ. ಆದ್ದರಿಂದ ಸಂಸ್ಕೃತದಿಂದ ಕನ್ನಡಕ್ಕೆ ಬಂದು ಬಳಸಲ್ಪಡುತ್ತಿರುವ ಶಬ್ದಗಳ ಸಂಧಿಕಾರ‍್ಯಗಳೇನೆಂಬುದನ್ನು ಕನ್ನಡ ಭಾಷಾಜ್ಞಾನದ ದೃಷ್ಟಿಯಿಂದ ತಿಳಿಯುವುದು ಉಪಯುಕ್ತವಾದುದು.

★ ಎರಡು ಸಂಸ್ಕೃತ ಶಬ್ದಗಳು ಸೇರಿ ಸಂಧಿಯಾದರೆ ಸಂಸ್ಕೃತ ಸಂಧಿಯೇ ಆಗುತ್ತದೆ. ಒಂದು ಸಂಸ್ಕೃತ ಶಬ್ದವು ಕನ್ನಡ ಶಬ್ದದೊಡನೆ ಸೇರಿ ಸಂಧಿಯಾದರೆ ಕನ್ನಡ ಸಂಧಿಯೇ ಆಗುತ್ತದೆ.

★ ಸಂಸ್ಕೃತದಲ್ಲಿ ಸ್ವರಕ್ಕೆ ಸ್ವರ ಪರವಾಗಿ ಸ್ವರಸಂಧಿಗಳೂ, ವ್ಯಂಜನಕ್ಕೆ ವ್ಯಂಜನ ಪರವಾಗಿ ವ್ಯಂಜನ ಸಂಧಿಗಳೂ ಆಗುವುವು.


★ ಮೊದಲು ಸ್ವರಸಂಧಿಗಳ ವಿಚಾರ ತಿಳಿಯೋಣ.

(೧) ಸವರ್ಣ ದೀರ್ಘ ಸಂಧಿ
•┈┈┈┈┈┈┈┈┈┈┈┈┈┈┈┈•
(ಅ) ವಿದ್ಯಾಭ್ಯಾಸ ಮಾಡಿದನು.
(ಆ) ರಾಮಾಯಣವನ್ನು ಓದು.
(ಇ) ಹರೀಶ್ವರನು ಕನ್ನಡ ಕವಿ.
(ಈ) ಗುರೂಪದೇಶವನ್ನು ಪಡೆ.

ಈ ವಾಕ್ಯಗಳಲ್ಲಿ ವಿದ್ಯಾಭ್ಯಾಸ ರಾಮಾಯಣ ಹರೀಶ್ವರ ಗುರೂಪದೇಶ ಈ ಶಬ್ದಗಳಲ್ಲಿ ಆಗಿರುವ ಸಂಧಿಕಾರರ್ಯಗಳನ್ನು ಗಮನಿಸಿರಿ.
ವಿದ್ಯಾ + ಅಭ್ಯಾಸ = ವಿದ್‌ಯ್ + ಆ + ಭ್ಯಾಸ = ವಿದ್ಯಾಭ್ಯಾಸ  (ಆ + ಅ)

★ ಇಲ್ಲಿ ಆ ಎಂಬ ಸ್ವರದ ಮುಂದೆ ಅ ಎಂಬ ಸ್ವರ ಬಂದಿದೆ.  ಈ ಎರಡೂ ಸ್ವರಗಳು ಸವರ್ಣಸ್ವರಗಳು, ಅಂದರೆ ಸಮಾನ ಸ್ಥಾನದಲ್ಲಿ ಹುಟ್ಟಿದವುಗಳು.  ಒಂದು ಹ್ರಸ್ವ, ಒಂದು ದೀರ್ಘ ಅಷ್ಟೆ.

— ಇವು ಹೀಗೆ ಒಂದರ ಮುಂದೆ ಒಂದು ಬಂದಾಗ ಅವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಅದರದೇ ಒಂದು ದೀರ್ಘಸ್ವರವು ಬರುವುದು.  ಹೀಗೆ ಬರುವುದು ಆದೇಶವೆಂದು ಹಿಂದೆ ತಿಳಿದಿದ್ದೀರಿ.
ಇದರ ಹಾಗೆಯೇ ಹರೀಶ್ವರ ಶಬ್ದವು-
ಹರಿ + ಈಶ್ವರ = ಹರ್ + ಈ + ಶ್ವರ = ಹರೀಶ್ವರ-ಎಂಬಲ್ಲಿ (ಇ + ಈ)
ಇ ಕಾರದ ಮುಂದೆ ಈ ಕಾರ ಬಂದಿದೆ.  ಇವೆರಡೂ ಹೋಗಿ ಅವುಗಳ ಸ್ಥಾನದಲ್ಲಿ ಈ ಎಂಬ ದೀರ್ಘಸ್ವರ ಆದೇಶವಾಗಿ ಬರುವುದು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು:-
(೨೦) ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

— ಉದಾಹರಣೆಗೆ:-
ದೇವ + ಅಸುರ = ದೇವಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(ಅ+ ಅ)
ಸುರ + ಅಸುರ = ಸುರಾಸುರ (ಅಕಾರಕ್ಕೆ ಅಕಾರ ಪರವಾಗಿ ಆಕಾರಾದೇಶ)
(ಅ+ ಅ)
ಮಹಾ + ಆತ್ಮಾ = ಮಹಾತ್ಮ (ಆಕಾರಕ್ಕೆ ಆಕಾರ ಪರವಾಗಿ ಒಂದು ದೀರ್ಘಸ್ವರ ಆದೇಶ)
(ಆ+ ಆ)
ಕವಿ + ಇಂದ್ರ = ಕವೀಂದ್ರ (ಇಕಾರಕ್ಕೆ ಇಕಾರ ಪರವಾಗಿ ಈಕಾರಾದೇಶ)
(ಇ+ ಇ)
ಗಿರಿ + ಈಶ = ಗಿರೀಶ (ಇಕಾರಕ್ಕೆ ಈಕಾರ ಪರವಾಗಿ ಈಕಾರಾದೇಶ)
(ಇ+ ಈ)
ಲಕ್ಷೀ + ಈಶ = ಲಕ್ಷೀಶ (ಈಕಾರಕ್ಕೆ ಈಕಾರಪರವಾಗಿ ಈಕಾರಾದೇಶ)
(ಈ+ ಈ)
ಗುರು + ಉಪದೇಶ = ಗರೂಪದೇಶ (ಉಕಾರಕ್ಕೆ ಉಕಾರ ಪರವಾಗಿ ಊಕಾರಾದೇಶ)
(ಉ+ ಉ)
ವಧೂ + ಉಪೇತ = ವಧೂಪೇತ (ಊಕಾರಕ್ಕೆ ಉಕಾರಪರವಾಗಿ ಊಕಾರಾದೇಶ)
(ಊ+ ಉ)


●.(೨) ಗುಣಸಂಧಿ
•┈┈┈┈┈┈┈┈┈┈┈┈•
(ಅ) ಸುರೇಶನು ಬಂದನು.
(ಆ) ದೇವೇಂದ್ರನ ಸಭೆ.
(ಇ) ಮಹೇಶನನ್ನು ನೋಡು.
(ಈ) ಸೂರ್ಯೋದಯವಾಯಿತು.
(ಉ) ವಾಲ್ಮೀಕಿ ಮಹರ್ಷಿಗಳು ಬಂದರು

— ಈ ವಾಕ್ಯಗಳಲ್ಲಿರುವ ಸುರೇಶ, ದೇವೇಂದ್ರ, ಮಹೇಶ, ಸುರ್ಯೋದಯ, ಮಹರ್ಷಿ

★ ಈ ಶಬ್ದಗಳನ್ನು ಬಿಡಿಸಿ ಬರೆದರೆ ಹೇಗಾಗುವುವು ನೋಡಿರಿ.
ಸುರ + ಈಶ = ಸುರೇಶ (ಅ + ಈ = ಏ)
(ಅ+ ಈ)
ದೇವ + ಇಂದ್ರ = ದೇವೇಂದ್ರ (ಅ + ಇ = ಏ)
(ಅ+ ಇ)
ಮಹಾ + ಈಶ = ಮಹೇಶ (ಆ + ಈ = ಏ)
(ಆ+ ಈ)
ಸೂರ‍್ಯ + ಉದಯ = ಸೂರ‍್ಯೋದಯ (ಅ + ಉ = ಓ)
(ಅ+ ಉ)
ಮಹಾ + ಋಷಿ = ಮಹರ್‌ಷಿ (ಆ + ಋ = ಆರ್)
(ಆ+ ಋ)
ಎಲ್ಲಾ ಉದಾಹರಣೆಗಳಲ್ಲೂ ಪೂರ್ವದ ಸ್ವರವು ಅ ಅಥವಾ ಆ ಆಗಿವೆ.

★ ಪರದಲ್ಲಿ (ಎದುರಿನಲ್ಲಿ) ಇ, ಈ, ಉ, ಋ ಇತ್ಯಾದಿ ಸ್ವರಗಳಿವೆ.  ಇ ಅಥವಾ ಈ ಪರವಾದಲ್ಲೆಲ್ಲಾ ಏ ಕಾರ ಬಂದಿದೆ.  ಉ ಪರವಾದಲ್ಲಿ ಓ ಕಾರ ಬಂದಿದೆ.  ಋ ಪರವಾದಲ್ಲಿ ಅರ್ ಕಾರ ಬಂದಿದೆ.  ಅಂದರೆ ಪೂರ್ವದ ಮತ್ತು ಪರದ ಎರಡೂ ಸ್ವರಗಳು ಹೋಗಿ ಅವುಗಳ ಸ್ಥಾನದಲ್ಲಿ ಏ ಓ ಅರ್ ಗಳು ಆದೇಶಗಳಾಗಿ ಬಂದಿವೆ ಎಂದ ಹಾಗಾಯಿತು.

●.ಇದಕ್ಕೆ ಸಾಮಾನ್ಯ ಸೂತ್ರವನ್ನು ಹೀಗೆ ಹೇಳಬಹುದು.
(೨೧) ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ, ಉ ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಓ ಕಾರವೂ, ಋ ಕಾರ ಪರವಾದರೆ ಅವೆರಡರ ಸ್ಥಾನದಲ್ಲಿ ಅರ್ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಗುಣಸಂಧಿ ಎಂದು ಹೆಸರು.

— ಉದಾಹರಣೆಗೆ:-
ಸುರ + ಇಂದ್ರ = ಸುರೇಂದ್ರ (ಅಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಅ+ ಇ)
ಧರಾ + ಇಂದ್ರ = ಧರೇಂದ್ರ (ಆಕಾರಕ್ಕೆ ಇಕಾರ ಪರವಾಗಿ ಏಕಾರಾದೇಶ)
(ಆ+ ಇ)
ಮಹಾ + ಈಶ್ವರ = ಮಹೇಶ್ವರ (ಆಕಾರಕ್ಕೆ ಈಕಾರ ಪರವಾಗಿ ಏಕಾರಾದೇಶ)
(ಆ+ ಈ)
ಚಂದ್ರ + ಉದಯ = ಚಂದ್ರೋದಯ (ಅಕಾರಕ್ಕೆ ಉಕಾರ ಪರವಾಗಿ ಓಕಾರಾದೇಶ)
(ಅ+ ಉ)
ಏಕ + ಊನ = ಏಕೋನ (ಅಕಾರಕ್ಕೆ ಊಕಾರ ಪರವಾಗಿ ಓಕಾರಾದೇಶ)
(ಅ+ ಊ)
ದೇವ + ಋಷಿ = ದೇವರ್ಷಿ (ಅಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(ಅ+ ಋ)
ಮಹಾ + ಋಷಿ = ಮಹರ್ಷಿ (ಆಕಾರಕ್ಕೆ ಋಕಾರ ಪರವಾಗಿ ಅರ್ ಆದೇಶ)
(ಆ+ ಋ)


●.(೩) ವೃದ್ಧಿ ಸಂಧಿ
•┈┈┈┈┈┈┈┈┈┈┈┈•
(೧) ಅವನು ಏಕೈಕ ವೀರನು.
(೨) ಕೃಷ್ಣದೇವರಾಯ ಅಷ್ಟೈಶ್ವರ‍್ಯದಿಂದ ಕೂಡಿದ್ದನು.
(೩) ಹಿಮಾಲಯದಲ್ಲಿ ವನೌಷಧಿಗಳುಂಟು.
(೪) ನಾರಣಪ್ಪ ಮಹೌನ್ನತ್ಯದಿಂದ ಕೂಡಿದ ಕವಿ.

★ ಈ ಮೇಲಿನ ವಾಕ್ಯಗಳಲ್ಲಿ ಬಂದಿರುವ ಏಕೈಕ, ಅಷ್ಟೈಶ್ವರ‍್ಯ, ವನೌಷದಿ, ಮಹೌನ್ನತ್ಯ ಪದಗಳನ್ನು ಬಿಡಿಸಿ ಬರೆದರೆ ಅವು ಈ ಕೆಳಗಿನಂತೆ ಆಗುವುವು:-
ಏಕ + ಏಕ = ಏಕ್ + ಐಕ (ಅ + ಏ + ಐ)
(ಅ+ ಏ)
ಅಷ್ಟ + ಐಶ್ವರ‍್ಯ = ಅಷ್ಟ್ + ಐಶ್ವರ‍್ಯ = ಅಷ್ಟೈಶ್ವರ‍್ಯ (ಅ + ಐ = ಐ)
(ಅ+ ಐ)
ವನ + ಓಷಧಿ = ವನ್ + ಔಷಧಿ = ವನೌಷಧಿ (ಅ + ಓ = ಔ)
(ಅ+ ಓ)
ಮಹಾ + ಔನ್ನತ್ಯ = ಮಹ್ + ಔನ್ನತ್ಯ = ಮಹೌನ್ನತ್ಯ (ಆ + ಔ = ಔ)
(ಆ+ ಔ)

★ ಪೂರ್ವದಲ್ಲಿ ಎಲ್ಲ ಕಡೆಗೂ ಅ ಅಥವಾ ಆ ಸ್ವರಗಳಿವೆ. ಎದುರಿಗೆ ಏ, ಐ, ಓ, ಔ ಪರವಾಗಿವೆ.  ಏ ಅಥವಾ ಐ ಪರವಾದಾಗ ಒಂದು ಐ ಕಾರವೂ, ಓ ಅಥವಾ ಔ ಪರವಾದಾಗ ಒಂದು ಔ ಕಾರವೂ ಆದೇಶಗಳಾಗಿ ಅಂದರೆ ಆ ಎರಡೂ ಸ್ವರಗಳ ಸ್ಥಾನದಲ್ಲಿ ಬಂದಿವೆ.

●.ಹಾಗಾದರೆ ಇದರ ಸೂತ್ರವನ್ನು ಹೀಗೆ ಹೇಳಬಹುದು:-
  — ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಔ ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿ ಯೆನ್ನುವರು.

ಉದಾಹರಣೆಗೆ:-
ಲೋಕ + ಏಕವೀರ = ಲೋಕೈಕವೀರ (ಅಕಾರಕ್ಕೆ ಏಕಾರ ಪರವಾಗಿ ಐಕಾರಾದೇಶ)
(ಅ+ ಏ)
ಜನ + ಐಕ್ಯ = ಜನೈಕ್ಯ (ಅಕಾರಾಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಅ+ ಐ)
ವಿದ್ಯಾ + ಐಶ್ವರ‍್ಯ = ವಿದ್ಯೈಶ್ವರ‍್ಯ (ಆಕಾರಕ್ಕೆ ಐಕಾರ ಪರವಾಗಿ ಐಕಾರಾದೇಶ)
(ಆ+ ಐ)
ಜಲ + ಓಘ = ಜಲೌಘ (ಅಕಾರಕ್ಕೆ ಓಕಾರ ಪರವಾಗಿ ಔಕಾರಾದೇಶ)
(ಅ+ ಓ)
ಘನ + ಔದಾರ‍್ಯ = ಘನೌದಾರ‍್ಯ (ಅಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(ಅ+ ಔ)
ಮಹಾ + ಔದಾರ‍್ಯ = ಮಹೌದಾರ‍್ಯ (ಆಕಾರಕ್ಕೆ ಔಕಾರ ಪರವಾಗಿ ಔಕಾರಾದೇಶ)
(ಆ+ ಔ)


●.(೪) ಯಣ್ ಸಂಧಿ
•┈┈┈┈┈┈┈┈┈┈┈┈┈•
— ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಂಡಿದ್ದಾರೆ.  ಅದರ ಪ್ರಕಾರ ಯಣ್ ಎಂದರೆ ಯ ವ ರ ಲ ಈ ನಾಲ್ಕು ವ್ಯಂಜನಗಳು. ಯಣ್ ಸಂಧಿಯೆಂದರೆ ಈ ನಾಲ್ಕು ಅಕ್ಷರಗಳು ಆದೇಶವಾಗಿ ಬರುವುದೇ ಆಗಿದೆ.

— ಈ ಅಕ್ಷರಗಳು ಯಾವ ಅಕ್ಷರಕ್ಕೆ ಆದೇಶವಾಗಿ ಬರುತ್ತವೆಂಬುದನ್ನು ನೋಡಿರಿ:-
(೧) ಅವನು ಅತ್ಯಂತ ಪರಾಕ್ರಮಿ.
(೨) ಈ ಮನ್ವಂತರದಲ್ಲಿ ನಡೆಯಿತು.
(೩) ನಮ್ಮದು ಪಿತ್ರಾರ್ಜಿತವಾದ ಆಸ್ತಿ.

★ ಈ ಮೂರು ವಾಕ್ಯಗಳಲ್ಲಿ ಬಂದಿರುವ ಅತ್ಯಂತ ಮನ್ವಂತರ ಪಿತ್ರಾರ್ಜಿತ ಈ ಶಬ್ದಗಳನ್ನು ಬಿಡಿಸಿ ಬರೆದರೆ:-
(೧) ಅತಿ + ಅಂತ = ಅತ್ + ಯ್ + ಅಂತ = ಅತ್ಯಂತ (ಇ + ಅ = ಯ್‌ಅ)
ಇಲ್ಲಿ ಇಕಾರದ ಸ್ಥಳದಲ್ಲಿ ಯ್ ಕಾರಾದೇಶವಾಗಿದೆ.

(೨) ಮನು + ಅಂತರ = ಮನ್‌ವ್ + ಅಂತರ = ಮನ್ವಂತರ (ಉ + ಅ =ವ್‌ಅ)
ಇಲ್ಲಿ ಉಕಾರದ ಸ್ಥಾನದಲ್ಲಿ ವ್ ಕಾರಾದೇಶವಾಗಿದೆ.

(೩) ಪಿತೃ + ಆರ್ಜಿತ = ಪಿತ್‌ರ್ + ಆರ್ಜಿತ = ಪಿತ್ರಾರ್ಜಿತ (ಋ + ಆ = ರ್‌ಆ)
ಇಲ್ಲಿ ಋಕಾರದ ಸ್ಥಾನದಲ್ಲಿ ರ್ ಕಾರಾದೇಶವಾಗಿದೆ.

— ಹಾಗಾದರೆ ಪೂರ್ವದಲ್ಲಿರುವ ಇ, ಉ, ಋ ಕಾರಗಳಿಗೆ, ಕ್ರಮವಾಗಿ ಯ್, ವ್, ರ್ ಗಳು ಆದೇಶವಾಗಿ ಬಂದಿವೆಯೆಂದ ಹಾಗಾಯಿತು.  ಎದುರಿಗೆ ಎಂಥ ಸ್ವರಗಳು ಇರಬೇಕೆಂಬುದಕ್ಕೂ ಒಂದು ನೇಮವಿದೆ.  ಅತಿ + ಇಚ್ಛಾ ಹೀಗೆ ಇಕಾರದ ಮುಂದೆ ಇಕಾರವೇ ಬಂದಿದ್ದರೆ ಅತೀಚ್ಛಾ ಎಂದು ಸವರ್ಣದೀರ್ಘ ಸಂಧಿಯಾಗುತ್ತಿತ್ತು.  ಆದ್ದರಿಂದ ಸವರ್ಣಸ್ವರ ಎದುರಿಗೆ ಬರಬಾರದೆಂದ ಹಾಗಾಯಿತು.

●.ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
— (೨೩) ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ ಈ ಕಾರಗಳಿಗೆ ಯ್ ಕಾರವೂ, ಉ ಊ ಕಾರಗಳಿಗೆ ವ್ ಕಾರವೂ, ಋ ಕಾರಕ್ಕೆ ರ್ (ರೇಫ)ವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.

— ಉದಾಹರಣೆಗೆ:-
ಅತಿ + ಅವಸರ = ಅತ್ಯವಸರ    (ಇಕಾರಕ್ಕೆ ಯ್ ಕಾರಾದೇಶ)
(ಇ+ ಅ)
ಜಾತಿ + ಅತೀತ = ಜಾತ್ಯಾತೀತ  (ಇಕಾರಕ್ಕೆ ಯ್ ಕಾರಾದೇಶ)
(ಇ+ ಅ)
ಕೋಟಿ + ಅಧೀಷ = ಕೋಟ್ಯಧೀಶ (ಇಕಾರಕ್ಕೆ ಯ್ ಕಾರಾದೇಶ)
(ಇ+ ಅ)
ಗತಿ + ಅಂತರ = ಗತ್ಯಂತರ       (         “          )
(ಇ+ ಅ)
ಪ್ರತಿ + ಉತ್ತರ = ಪ್ರತ್ಯುತ್ತರ       (         “          )
(ಇ+ ಉ)
ಪತಿ + ಅರ್ಥ = ಪತ್ಯರ್ಥ           (         “           )
(ಇ+ ಅ)
ಅತಿ + ಆಶೆ = ಅತ್ಯಾಶೆ            (         “           )
(ಇ+ ಆ)
ಅಧಿ + ಆತ್ಮ = ಅಧ್ಯಾತ್ಮ          (           “           )
(ಇ+ ಆ)
ಗುರು + ಆಜ್ಞೆ = ಗುರ‍್ವಾಜ್ಞೆ       (ಉಕಾರಕ್ಕೆ ವ್ ಕಾರಾದೇಶ)
(ಉ+ ಆ)
ಮನು + ಆದಿ = ಮನ್ವಾದಿ        (ಉಕಾರಕ್ಕೆ ವ್ ಕಾರಾದೇಶ)
(ಉ+ ಆ)
ವಧೂ + ಆಭರಣ = ವಧ್ವಾಭರಣ (ಊಕಾರಕ್ಕೆ ವ್ ಕಾರಾದೇಶ)
(ಊ+ ಆ)
ವಧೂ + ಅನ್ವೇಷಣ = ವಧ್ವನ್ವೇಷಣ (ಊಕಾರಕ್ಕೆ ವ್ ಕಾರಾದೇಶ)
(ಊ+ ಅ)
ಪಿತೃ + ಅರ್ಥ = ಪಿತ್ರರ್ಥ          (ಋ ಕಾರಕ್ಕೆ ರ್ ಕಾರಾದೇಶ)
(ಋ+ ಅ)
ಮಾತೃ + ಅಂಶ = ಮಾತ್ರಂಶ    (           “           )
(ಋ+ ಅ)
ಕರ್ತೃ + ಅರ್ಥ = ಕರ್ತ್ರರ್ಥ        (         “           )
(ಋ+ ಅ)

(Courtesy :
kannada divige)

Tuesday 21 July 2015

☀ ಭಾರತದ ಎಂಟು (8) ಶ್ರೇಷ್ಠ ಪರ್ವತ ಶ್ರೇಣಿಗಳು ಮತ್ತು ಶಿಖರಗಳು: (The 8 Magnificent Peaks of Indian Mountain Ranges)

☀ ಭಾರತದ ಎಂಟು (8) ಶ್ರೇಷ್ಠ ಪರ್ವತ ಶ್ರೇಣಿಗಳು ಮತ್ತು ಶಿಖರಗಳು:
(The 8 Magnificent Peaks of Indian Mountain Ranges)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ.
(Indian Physical Geography)

★ ಭಾರತದ ಭೂಗೋಳ
(Indian Geography)


— ಭಾರತದ ಈ ಎಂಟು (8) ಶ್ರೇಷ್ಠ ಪರ್ವತ ಶ್ರೇಣಿಗಳು ವಿಶ್ವದ ಅತೀ ಎತ್ತರದ ಹಲವು ಪರ್ವತ ಶಿಖರಗಳನ್ನೊಳಗೊಂಡಿವೆ. ಭಾರತದ ವ್ಯಾಪ್ತಿ ಪ್ರದೇಶಗಳಲ್ಲಿ ಬರುವ ಹಿಮಾಲಯ ಶ್ರೇಣಿಯ ಅಡಿಯಲ್ಲಿ ಕಾಂಚನ್ ಜುಂಗಾ ಮತ್ತು ನಂದಾದೇವಿ ಎರಡು ಪರ್ವತ ಶಿಖರಗಳು ಬರುತ್ತವೆ.

— ಈ ಶ್ರೇಷ್ಠ ಪರ್ವತ ಶ್ರೇಣಿಗಳು ದೇಶದ ತಾಪಮಾನ, ಗಾಳಿಯ ಒತ್ತಡ ಮತ್ತು ಮಳೆ ಹವಾಮಾನವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗೆಯೇ ಹಲವು (flora and fauna) ಸಸ್ಯ ಮತ್ತು ಪ್ರಾಣಿ ಸಂಕುಲ, ಪ್ರಾಕೃತಿಕ ವೈವಿಧ್ಯತೆಗಳಿಗೆ ಗೂಡಾಗಿವೆ.


☀Ⅰ.ಪರ್ವತ/ಶಿಖರ :•┈┈┈┈┈• ಕಾಂಚನ್ ಜುಂಗಾ

●.ಪರ್ವತ ಶ್ರೇಣಿ:•┈┈┈┈┈• ಹಿಮಾಲಯ ಶ್ರೇಣಿ

●.ಪರ್ವತ/ಶಿಖರದ ಎತ್ತರ:•┈┈┈┈┈• 8.586 ಮೀ (28,169 ಅಡಿ)

●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಸಿಕ್ಕಿಂ

•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

☀Ⅱ.ಪರ್ವತ/ಶಿಖರ :•┈┈┈┈┈• ಸಾಲ್ಟೋರೋ ಕಾಂಗ್ರಿ

●.ಪರ್ವತ ಶ್ರೇಣಿ:•┈┈┈┈┈• ಕಾರಕೋರಂ ಶ್ರೇಣಿ

●.ಪರ್ವತ/ಶಿಖರದ ಎತ್ತರ:•┈┈┈┈┈• 7.742 ಮೀ (25,400 ಅಡಿ)

●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಜಮ್ಮು ಮತ್ತು ಕಾಶ್ಮೀರ

•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

☀Ⅲ.ಪರ್ವತ/ಶಿಖರ :•┈┈┈┈┈• ಅನಾಮುಡಿ

●.ಪರ್ವತ ಶ್ರೇಣಿ:•┈┈┈┈┈• ಸಹ್ಯಾದ್ರಿ ಶ್ರೇಣಿ

●.ಪರ್ವತ/ಶಿಖರದ ಎತ್ತರ:•┈┈┈┈┈• 2,695 ಮೀ (8,842 ಅಡಿ)

●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಕೇರಳ

•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

☀Ⅳ.ಪರ್ವತ/ಶಿಖರ :•┈┈┈┈┈• ಧೂಪ್ ಘರ್ ಪರ್ವತ

●.ಪರ್ವತ ಶ್ರೇಣಿ:•┈┈┈┈┈• ಸಾತ್ಪುರ ಶ್ರೇಣಿ

●.ಪರ್ವತ/ಶಿಖರದ ಎತ್ತರ:•┈┈┈┈┈• 1,350 ಮೀ (4,429 ಅಡಿ)

●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಮಧ್ಯಪ್ರದೇಶ

•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

☀Ⅴ.ಪರ್ವತ/ಶಿಖರ:•┈┈┈┈┈• ಅಮರಕಂಟಕ್

●.ಪರ್ವತ ಶ್ರೇಣಿ:•┈┈┈┈┈• ವಿಂಧ್ಯ ಪರ್ವತ ಶ್ರೇಣಿ

●.ಪರ್ವತ/ಶಿಖರದ ಎತ್ತರ:•┈┈┈┈┈•1,048 ಮೀ (3,438 ಅಡಿ)

●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಮಧ್ಯಪ್ರದೇಶ

•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

☀Ⅵ.ಪರ್ವತ/ಶಿಖರ :•┈┈┈┈┈• ಗುರು ಶಿಖರ

●.ಪರ್ವತ ಶ್ರೇಣಿ:•┈┈┈┈┈• ಅರಾವಳಿ ಪರ್ವತ ಶ್ರೇಣಿ

●.ಪರ್ವತ/ಶಿಖರದ ಎತ್ತರ:•┈┈┈┈┈•1,722 ಮೀ (5,676 ಅಡಿ)

●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ರಾಜಸ್ಥಾನ

•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

☀Ⅶ.ಪರ್ವತ/ಶಿಖರ :•┈┈┈┈┈• ಜಿಂಧಾಗಡ ಶಿಖರ

●.ಪರ್ವತ ಶ್ರೇಣಿ:•┈┈┈┈┈• ಪೂರ್ವ ಘಟ್ಟ

●.ಪರ್ವತ/ಶಿಖರದ ಎತ್ತರ:•┈┈┈┈┈• 1.690 ಮೀ (5,540 ಅಡಿ)

●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಆಂಧ್ರಪ್ರದೇಶ

•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

☀Ⅷ.ಪರ್ವತ/ಶಿಖರದ ತುದಿ:•┈┈┈┈┈• ಫವಂಗ್ ಪೂಯಿ

●.ಪರ್ವತ ಶ್ರೇಣಿ:•┈┈┈┈┈• ಪೂರ್ವಾಂಚಲ ಶ್ರೇಣಿ

●.ಪರ್ವತ/ಶಿಖರದ ಎತ್ತರ:•┈┈┈┈┈• 2,157 ಮೀ (7,077 ಅಡಿ)

●.ಪರ್ವತ/ಶಿಖರ ಇರುವ ಸ್ಥಳ:•┈┈┈┈┈• ಮಿಜೋರಾಂ


☀ಮುಂಬರುವ / ಮುಂದೆ ನಡೆಯಲಿರುವ ಪ್ರಸಿದ್ಧ ಜಾಗತಿಕ ಕ್ರೀಡೆಗಳು ಮತ್ತು ಅವುಗಳು ನಡೆಯುವ ಸ್ಥಳಗಳು :   (Upcoming Sports Events and the fixed places)

☀ಮುಂಬರುವ / ಮುಂದೆ ನಡೆಯಲಿರುವ ಪ್ರಸಿದ್ಧ ಜಾಗತಿಕ ಕ್ರೀಡೆಗಳು ಮತ್ತು ಅವುಗಳು ನಡೆಯುವ ಸ್ಥಳಗಳು :
(Upcoming Sports Events and the fixed places)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


☀ಕ್ರಿಕೆಟ್ ( Cricket) :
━━━━━━━━━━━━━━

●. 2015 ರ ಪುರುಷರ ಕ್ರಿಕೆಟ್ ವಿಶ್ವಕಪ್ •┈┈┈┈┈• ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್

●. 2019 ರ ಪುರುಷರ ಕ್ರಿಕೆಟ್ ವಿಶ್ವಕಪ್ •┈┈┈┈┈• ಇಂಗ್ಲೆಂಡ್ ಮತ್ತು ವೇಲ್ಸ್

●. 2023 ರ ಪುರುಷರ ಕ್ರಿಕೆಟ್ ವಿಶ್ವಕಪ್ •┈┈┈┈┈• ಭಾರತ

●. 2017 ರ ಮಹಿಳೆಯರ ಕ್ರಿಕೆಟ್ ವಿಶ್ವಕಪ್ •┈┈┈┈┈• ಐರ್ಲೆಂಡ್

●. 2017 ರ ಪುರುಷರ ಐಸಿಸಿ (ICC) ಟೆಸ್ಟ್ ಚಾಂಪಿಯನ್ ಶಿಪ್ •┈┈┈┈┈• ಇಂಗ್ಲೆಂಡ್ ಮತ್ತು ವೇಲ್ಸ್

●. 2021ರ ಪುರುಷರ ಐಸಿಸಿ (ICC) ಟೆಸ್ಟ್ ಚಾಂಪಿಯನ್ ಶಿಪ್ •┈┈┈┈┈• ಭಾರತ

●. 2016 ರ ಐಸಿಸಿ (ICC) ಪುರುಷರ ವಿಶ್ವ ಟ್ವೆಂಟಿ 20 •┈┈┈┈┈• ಭಾರತ

●. 2020 ರ ಐಸಿಸಿ (ICC) ಪುರುಷರ ವಿಶ್ವ ಟ್ವೆಂಟಿ 20 •┈┈┈┈┈• ಆಸ್ಟ್ರೇಲಿಯಾ

●. 2016 ರ ಐಸಿಸಿ (ICC) ಮಹಿಳೆಯರ ಟ್ವೆಂಟಿ 20 ವಿಶ್ವಕಪ್ •┈┈┈┈┈• ಭಾರತ


☀ಒಲಿಂಪಿಕ್ಸ್ (Olympics) :
━━━━━━━━━━━━━━━━━━━

●. 2016 ರ ಬೇಸಿಗೆಯ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ •┈┈┈┈┈• ರಿಯೊ ಡಿ ಜನೈರೊ, ಬ್ರೆಜಿಲ್

●. 2020 ರ ಬೇಸಿಗೆಯ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ •┈┈┈┈┈• ಜಪಾನಿನ ಟೊಕಿಯೊದಲ್ಲಿ

●. 2018 ರ ಚಳಿಗಾಲದ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ •┈┈┈┈┈• ಪೆಯಾಂಗ್ ಚಾಂಗ್, ದಕ್ಷಿಣ ಕೊರಿಯಾ

●. 2015 ರ ವಿಶೇಷ ವಿಶ್ವ ಒಲಿಂಪಿಕ್ಸ್ ಬೇಸಿಗೆಯ ಆಟಗಳು •┈┈┈┈┈• ಲಾಸ್ ಏಂಜಲೀಸ್, ಯುಎಸ್ಎ

●. 2014 ರ ಬೇಸಿಗೆಯ ಯುವ ಒಲಿಂಪಿಕ್ಸ್ •┈┈┈┈┈• ನಾನ್ ಜಿಂಗ್, ಚೀನಾ

●. 2018 ರ ಬೇಸಿಗೆಯ ಯುವ ಒಲಿಂಪಿಕ್ಸ್ •┈┈┈┈┈• ಬ್ಯೂನಸ್, ಅರ್ಜೆಂಟೀನಾ

●. 2016 ರ ಚಳಿಗಾಲದ ಯುವ ಒಲಿಂಪಿಕ್ಸ್ •┈┈┈┈┈• ಲಿಲ್ಲೆ ಹ್ಯಾಮ್ಮರ್, ನಾರ್ವೆ


☀ಏಷ್ಯನ್ ಗೇಮ್ಸ್ (Asian Games‬) :
━━━━━━━━━━━━━━━━━━━━━━━━

●. 2018 ರ ಏಷ್ಯನ್ ಗೇಮ್ಸ್ •┈┈┈┈┈• ಜಕಾರ್ತಾ, ಇಂಡೋನೇಷ್ಯಾ

●. 2017 ರ ಏಷ್ಯನ್ ಚಳಿಗಾಲ ಗೇಮ್ಸ್ •┈┈┈┈┈• ಸಪೋರೊ, ಜಪಾನ್


☀ಕಾಮನ್ ವೆಲ್ತ್ ಕ್ರೀಡೆಗಳು (Commonwealth Games‬) :
━━━━━━━━━━━━━━━━━━━━━━━━━━━━━━━━━━━━━━

●. 2018 ರ ಕಾಮನ್ ವೆಲ್ತ್ ಕ್ರೀಡೆಗಳು •┈┈┈┈┈• ಗೋಲ್ಡ್ ಕಾಸ್ಟ್, ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡ್

●. 2022 ರ ಕಾಮನ್ ವೆಲ್ತ್ ಗೇಮ್ಸ್ •┈┈┈┈┈• ಡರ್ಬನ್, ದಕ್ಷಿಣ ಆಫ್ರಿಕಾ (ಇನ್ನೂ ದೃಢೀಕರಿಸಲಾಗುವುದು )


☀ಫುಟ್ಬಾಲ್ (Football) :
━━━━━━━━━━━━━━━━

●. 2018 ರ ಫೀಫಾ (FIFA) ವಿಶ್ವ ಕಪ್ •┈┈┈┈┈• ರಷ್ಯಾ

●. 2022 ರ ಫೀಫಾ (FIFA) ವರ್ಲ್ಡ್ ಕಪ್ •┈┈┈┈┈• ಕತಾರ್

●. 2015 ರ ಫೀಫಾ (FIFA) U-20 ವಿಶ್ವಕಪ್ •┈┈┈┈┈• ನ್ಯೂಜಿಲ್ಯಾಂಡ್

●. 2017 ರ ಫೀಫಾ (FIFA) U-20 ವಿಶ್ವಕಪ್ •┈┈┈┈┈• ದಕ್ಷಿಣ ಕೊರಿಯಾ

●. 2015 ರ ಫೀಫಾ (FIFA) U-17 ವಿಶ್ವಕಪ್ •┈┈┈┈┈• ಚಿಲಿ

●. 2017 ರ ಫಿಫಾ (FIFA) U-17 ವಿಶ್ವ ಕಪ್ •┈┈┈┈┈• ಭಾರತ

●. 2017 ರ ಫೀಫಾ (FIFA) ಕಾನ್ಫಡರೇಷನ್ ಕಪ್ •┈┈┈┈┈• ರಷ್ಯಾ

●. 2015 ರ ಫೀಫಾ (FIFA) ಮಹಿಳೆಯರ ವಿಶ್ವ ಕಪ್ •┈┈┈┈┈• ಕೆನಡಾ

●. 2015 ರ AFC ಏಷಿಯನ್ ಕಪ್ •┈┈┈┈┈• ಆಸ್ಟ್ರೇಲಿಯಾ

●. 2019 ರ AFC ಏಷಿಯನ್ ಕಪ್ •┈┈┈┈┈• ಯುಎಇ

●. 2015 ರ ಕೋಪಾ (Copa) ಅಮೆರಿಕ •┈┈┈┈┈• ಚಿಲಿ

●. 2019 ರ ಕೋಪಾ (Copa) ಅಮೆರಿಕ •┈┈┈┈┈• ಬ್ರೆಜಿಲ್

●. 2023 ರ ಕೋಪಾ (Copa) ಅಮೆರಿಕ •┈┈┈┈┈• ಈಕ್ವೆಡಾರ್

●. 2016 ರ ಕೋಪಾ (Copa) ಅಮೆರಿಕ ಶತಕ ಮೀರಿದ (100 ವರ್ಷ) •┈┈┈┈┈• ಯುಎಸ್ಎ

●. UEFA ಯುರೋ 2016 •┈┈┈┈┈• ಫ್ರಾನ್ಸ್

●. UEFA ಯುರೋ 2020 •┈┈┈┈┈• ಪ್ಯಾನ್ ಯುರೋಪ್


☀ಹಾಕಿ (Hockey) :
━━━━━━━━━━━━━━

●. 2018 ರ ಪುರುಷರ ಹಾಕಿ ವಿಶ್ವ ಕಪ್ •┈┈┈┈┈• ಭುವನೇಶ್ವರ, ಭಾರತ

●. 2018 ರ ಮಹಿಳೆಯರ ಹಾಕಿ ವಿಶ್ವಕಪ್ •┈┈┈┈┈• ಲಂಡನ್, ಇಂಗ್ಲೆಂಡ್

●. 2016 ರ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿ •┈┈┈┈┈• ಅರ್ಜೆಂಟೀನಾ

●. 2018 ರ ಪುರುಷರ ಹಾಕಿ ಚಾಂಪಿಯನ್ಸ್ ಟ್ರೋಫಿ •┈┈┈┈┈• ನೆದರ್ಲ್ಯಾಂಡ್ಸ್

●. 2016 ರ ಮಹಿಳೆಯರ ಹಾಕಿ ಚಾಂಪಿಯನ್ಸ್ ಟ್ರೋಫಿ •┈┈┈┈┈• ಯುನೈಟೆಡ್ ಕಿಂಗ್ಡಮ್

●. 2018 ರ ಮಹಿಳೆಯರ ಹಾಕಿ ಚಾಂಪಿಯನ್ಸ್ ಟ್ರೋಫಿ •┈┈┈┈┈• ಅರ್ಜೆಂಟೀನಾ.

Monday 20 July 2015

☀ಭಾರತದಲ್ಲಿನ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು : (The Famous, well-known museums in India)

☀ಭಾರತದಲ್ಲಿನ ಪ್ರಸಿದ್ಧ ವಸ್ತು ಸಂಗ್ರಹಾಲಯಗಳು :
(The Famous, well-known museums in India)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


☀ವಸ್ತು ಸಂಗ್ರಹಾಲಯಗಳು •┈┈┈┈┈┈┈┈┈┈┈┈┈┈┈┈┈┈• ☀ಸ್ಥಳಗಳು
━━━━━━━━━━━━━━━━━━━━━━━━━━━━━━━━━━━━━━━━━━━━━


●.ಚಾಮರಾಜೇಂದ್ರ ಕಲಾ ಮತ್ತು ವಸ್ತು ಸಂಗ್ರಹಾಲಯ •┈┈┈┈┈┈┈┈┈• ಮೈಸೂರು

●.ಸರ್ಕಾರಿ ವಸ್ತು ಸಂಗ್ರಹಾಲಯ •┈┈┈┈┈┈┈┈┈• ಬೆಂಗಳೂರು

●.ಸಾಲಾರ್ ಜಂಗ್ ಮ್ಯೂಸಿಯಂ •┈┈┈┈┈┈┈┈┈• ಹೈದರಾಬಾದ

●.ಆರ್ಕಿಯಲಾಜಿಕಲ್ ಮ್ಯೂಸಿಯಂ •┈┈┈┈┈┈┈┈┈• ಹೈದರಾಬಾದ

●.ನ್ಯಾಷನಲ್ ಮ್ಯೂಸಿಯಂ •┈┈┈┈┈┈┈┈┈• ದೆಹಲಿ

●.ದೆಹಲಿ ಪೋರ್ಟ್ ಮ್ಯೂಸಿಯಂ •┈┈┈┈┈┈┈┈┈• ದೆಹಲಿ

●.ವಾರ್ ಮೆಮೋರಿಯಲ್ ಮ್ಯೂಸಿಯಂ •┈┈┈┈┈┈┈┈┈• ದೆಹಲಿ

●.ಅಸ್ಸಾಂ ಸ್ಟೇಟ್ ಮ್ಯೂಸಿಯಂ •┈┈┈┈┈┈┈┈┈• ಗೌಹತಿ

●.ಸೆಂಟ್ರಲ್ ಮ್ಯೂಸಿಯಂ •┈┈┈┈┈┈┈┈┈• ಜಯಪುರ

●.ಅಜ್ಮೇರ್ ಮ್ಯೂಸಿಯಂ •┈┈┈┈┈┈┈┈┈• ಅಜ್ಮೇರ್

●.ವಿಕ್ಟೋರಿಯಾ ಹಾಲ್ ಮ್ಯೂಸಿಯಂ •┈┈┈┈┈┈┈┈┈• ಉದಯಪುರ

●.ಪ್ರತಾಪ್ ಸಿಂಗ್ ಮ್ಯೂಸಿಯಂ •┈┈┈┈┈┈┈┈┈• ಶ್ರೀನಗರ

●.ಮುನಿಸಿಪಲ್ ಮ್ಯೂಸಿಯಂ •┈┈┈┈┈┈┈┈┈• ಅಲಹಾಬಾದ್

●.ಸಾರಾನಾಥ ಮ್ಯೂಸಿಯಂ •┈┈┈┈┈┈┈┈┈• ಬನಾರಸ್

●.ಸರಸ್ವತಿ ಮಹಲ್ ಲೈಬ್ರರಿ •┈┈┈┈┈┈┈┈┈• ತಂಜಾವೂರು

●.ಇಂಡಿಯನ್ ಮ್ಯೂಸಿಯಂ •┈┈┈┈┈┈┈┈┈• ಕಲ್ಕತ್ತಾ

●.ಸೆಂಟ್ರಲ್ ಮ್ಯೂಸಿಯಂ •┈┈┈┈┈┈┈┈┈• ನಾಗಪುರ

●.ಅಶುತೋಷ್ ಮ್ಯೂಸಿಯಂ •┈┈┈┈┈┈┈┈┈• ಕಲ್ಕತ್ತಾ

●.ಒರಿಸ್ಸಾ ಸ್ಟೇಟ್ ಮ್ಯೂಸಿಯಂ •┈┈┈┈┈┈┈┈┈• ಭುವನೇಶ್ವರ

●.ಬೋಧಗಯ ಮ್ಯೂಸಿಯಂ •┈┈┈┈┈┈┈┈┈• ಬಿಹಾರ

●.ಗಾಂಧಿ ಮೆಮೋರಿಯಲ್ ಮ್ಯೂಸಿಯಂ •┈┈┈┈┈┈┈┈┈• ಮಧುರೈ

●.ಮಿಟ್ಸನ್ ಮ್ಯೂಸಿಯಂ •┈┈┈┈┈┈┈┈┈• ರಾಜ್ ಕೋಟ್

●.ಆರ್ಕಿಯಾಲಜಿಕಲ್ •┈┈┈┈┈┈┈┈┈• ಸಾಂಚಿ

●.ಆಳ್ವಾರ್ ಮ್ಯೂಸಿಯಂ •┈┈┈┈┈┈┈┈┈• ಆಳ್ವಾರ್

●.ಭರತ್ ಪುರ ಮ್ಯೂಸಿಯಂ •┈┈┈┈┈┈┈┈┈• ಭರತ್ ಪುರ

●.ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ •┈┈┈┈┈┈┈┈┈• ಮುಂಬಯಿ

●.ನ್ಯಾಷಿನಲ್ ಆರ್ಕೀಟ್ಸ್ ಆಫ್ ಇಂಡಿಯಾ •┈┈┈┈┈┈┈┈┈• ದೆಹಲಿ

●.ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ •┈┈┈┈┈┈┈┈┈• ದೆಹಲಿ

●.ಗಂಗಾ ಮ್ಯೂಸಿಯಂ •┈┈┈┈┈┈┈┈┈• ಬಿಕಾನಿರ್

☀ ಸಾಮಾನ್ಯ ಜ್ಞಾನ (ಭಾಗ - 16)  ( General Knowledge (Part-16))  ☆.. ಪ್ರಚಲಿತ ಘಟನೆಗಳೊಂದಿಗೆ ...

☀ ಸಾಮಾನ್ಯ ಜ್ಞಾನ (ಭಾಗ - 16)
( General Knowledge (Part-16))
☆.. ಪ್ರಚಲಿತ ಘಟನೆಗಳೊಂದಿಗೆ ...
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು-2015.
(Current Affairs-2015)

★ ಸಾಮಾನ್ಯ ಜ್ಞಾನ
(General Knowledge)


661) ಪ್ರಸ್ತುತ ಭಾರತದ ವಿದೇಶಿ ಹೂಡಿಕೆದಾರರಲ್ಲಿ ಜರ್ಮನಿಯು ಎಷ್ಟನೇಯ ದೊಡ್ಡ ದೇಶವಾಗಿದೆ?
●.8ನೇ


662) ಪ್ರಸ್ತುತ ಫ್ರಾನ್ಸ್ ರಾಷ್ಟ್ರದ ಅಧ್ಯಕ್ಷರು ಯಾರು?
●.ಫ್ರಾಂಗ್ವ ಹೊಲಾನ್ಡ್


663) ಅಂತಾರಾಷ್ಟ್ರೀಯ ಯೋಗ ದಿನ ಯಾವಾಗ ಆಚರಿಸಲಾಗುತ್ತದೆ?
●.ಜೂನ್ 21ರಂದು


664) ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ಯಾರು?  
●.ಎಸ್.ವಿ. ರಾಜೇಂದ್ರಸಿಂಗ್ ಬಾಬು


665) ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಇರುವ ಗ್ರಾಮ ಪಂಚಾಯ್ತಿಗಳು ಎಷ್ಟು?
●.5,844


666) ಪ್ರಸ್ತುತ ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಯಾರು?
●.ಪಿ.ಎನ್‌. ಶ್ರೀನಿವಾಸಾಚಾರಿ


667) ಸಮಗ್ರ ಪರಿಷ್ಕರಣೆ ಮಾಡಲು ರಚಿಸಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗಳ ಅಧ್ಯಕ್ಷರನ್ನಾಗಿ ಸರ್ಕಾರವು ಯಾರನ್ನು ನೇಮಕ ಮಾಡಿದೆ?
●.ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ

668) ಇತ್ತೀಚೆಗೆ (2nd May, 2015) ಗ್ರಾಮ ಪಂಚಾಯ್ತಿಗಳಲ್ಲಿ ಮೊಬೈಲ್‌ ಮೂಲಕ ತೆರಿಗೆ ಸಂಗ್ರಹಿಸುವ ಇ–ಪಾವತಿ ವ್ಯವಸ್ಥೆಯನ್ನು ರಾಜ್ಯದಲ್ಲೇ ಪ್ರಥಮವಾಗಿ ಯಾವ ಜಿಲ್ಲೆಯಲ್ಲಿ ಜಾರಿ ಮಾಡಲಾಗಿದೆ?
●.ಉತ್ತರ ಕನ್ನಡ.


669) ಇತ್ತೀಚೆಗೆ (6th May, 2015) ರಾಜ್ಯದಲ್ಲಿನ ಲೈಂಗಿಕ ವೃತ್ತಿನಿರತರ ಅಭ್ಯುದಯಕ್ಕಾಗಿ ಪ್ರತ್ಯೇಕ ನೀತಿ ರೂಪಿಸಲು ರಚಿಸಿರುವ ಸಮಿತಿಯ ಅಧ್ಯಕ್ಷರು ಯಾರು?
●.ವಿಧಾನ ಪರಿಷತ್‌ ಸದಸ್ಯೆ ಜಯಮಾಲಾ


670) ದಕ್ಷಿಣ ಆಫ್ರಿಕಾದ ಮೊದಲ ಚುನಾಯಿತ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಆತ್ಮಚರಿತ್ರೆಯ ಹೆಸರೇನು?
●.‘ಲಾಂಗ್ ವಾಕ್ ಟು ಫ್ರೀಡಂ’


671) ಇತ್ತೀಚೆಗೆ ಕರ್ನಾಟಕದಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ಯಾರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತಿದೆ?
●.ಮೋಹನ್‌ದಾಸ್‌ ಪೈ


672) ಪ್ರಸ್ತುತ ದಕ್ಷಿಣ ಕೊರಿಯಾ ರಾಷ್ಟ್ರದ ಅಧ್ಯಕ್ಷ ಯಾರು?
●.ಪಾರ್ಕ್‌ ಗ್ಯೂನ್‌ ಹೈ


673) ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ (ಪಿಎಸ್‌ಯು) ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನೇಮಿಸಿದ್ದ ಸಮಿತಿ ಯಾವುದು?
●.ಪಿ.ಜೆ.ನಾಯಕ್‌ ನೇತೃತ್ವದ ಸಮಿತಿ.


674) ಇತ್ತೀಚೆಗೆ ಕೇಂದ್ರ ಜಾಗೃತ ದಳದ ಆಯುಕ್ತರನ್ನಾಗಿ (ಸಿವಿಸಿ) ಯಾರನ್ನು ನೇಮಕ ಮಾಡಲಾಯಿತು?
●.ಕೆ.ವಿ.ಚೌಧರಿ


675) ದಿ ಇಮ್ಮಾರ್ಟಲ್ಸ್ ಕೃತಿಯನ್ನು ರಚಿಸಿದವರು ಯಾರು?
●.ಅಮಿತ್ ಚೌಧರಿ


676) 'ತಾನಸೇನ್ ಸಮ್ಮಾನ್ ಪ್ರಶಸ್ತಿ'ಯನ್ನು ಕೆಳಕಂಡ ಯಾವ ರಾಜ್ಯ ನೀಡುತ್ತದೆ?
●.ಮಧ್ಯಪ್ರದೇಶ


677) ’ಆಫಿಸರ್ ಆಫ್ ದಿ ಲೀಜನ್ ಆಫ್ ಹಾನರ್’ ಇದು ಫ್ರಾನ್ಸ್ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದ್ದು, ಇದನ್ನು 1802 ರಲ್ಲಿ ನೆಪೋಲಿಯನ್ ಬೋನಾಪಾರ್ಟ್ ಆರಂಭಿಸಿದ್ದನು. ಇತ್ತೀಚೆಗೆ ಈ ಪ್ರಶಸ್ತಿಯನ್ನು ಪಡೆದ ಭಾರತದ ಮಾಜಿ ವಿತ್ತ ಸಚಿವ ಯಾರು?
●.ಯಶವಂತ್ ಸಿನ್ಹಾ


678) ಇತ್ತೀಚೆಗೆ ಫೋರ್ಬ್ಸ್ ನಿಯತಕಾಲಿಕೆ ತನ್ನ 12ನೇ ವರ್ಷದ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಭಾರತದ ಎಷ್ಟು ಮಹಿಳೆಯರು ಸ್ಥಾನ ಪಡೆದಿದ್ದಾರೆ?
●.ನಾಲ್ವರು ಮಹಿಳೆಯರು
1.ಎಸ್​ಬಿಐನ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ,
2.ಐಸಿಐಸಿಐಬ್ಯಾಂಕ್​ನ ಮುಖ್ಯಸ್ಥೆ ಚಂದಾ ಕೊಚ್ಚಾರ್,
3.ಬಯೋಕಾನ್ ಸ್ಥಾಪಕಿ ಕಿರಣ್ ಮಜುಂಮ್ದಾರ್ ಷಾ,
4.ಎಚ್​ಟಿ ಮೀಡಿಯಾ ಮುಖ್ಯಸ್ಥೆ ಶೋಭಾನಾ ಭಾರ್ತಿಯಾ


679) ಭಾರತೀಯ ವಾಯುಸೇನೆಯ ಈಗಿನ 'ಏರ್ ಚೀಫ್ ಮಾರ್ಶಲ್' ಯಾರು?
●.ಅರೂಪ್ ರಾಹಾ


680) ಇತ್ತೀಚೆಗೆ ವಿಶ್ವಸಂಸ್ಥೆ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯ (ಯುನಿಟರ್) ಮುಖ್ಯಸ್ಥರಾಗಿ ನೇಮಕಗೊಂಡ ಭಾರತೀಯ ಯಾರು?
●.ನಿಖಿಲ್ ಸೇಥ್


681) ಇತ್ತೀಚೆಗೆ ಅಮೆರಿಕದ ಶ್ವೇತಭವನ ನೀಡುವ ‘ಬದಲಾವಣೆಯ ರೂವಾರಿ’ (ಚಾಂಪಿಯನ್‌ ಆಫ್‌ ಚೇಂಜ್‌) ಪ್ರಶಸ್ತಿಗೆ ಆಯ್ಕೆಯಾದ ಭಾರತ ಮೂಲದವರು ಯಾರು?
●.ಸುನೀತಾ ವಿಶ್ವನಾಥ್‌.
(‘ವುಮೆನ್‌ ಫಾರ್‌ ಆಫ್ಘನ್‌ ವುಮೆನ್‌’ ಹಾಗೂ ಪ್ರಗತಿಪರ ಹಿಂದೂಗಳ ಒಕ್ಕೂಟ ‘ಸಾಧನಾ’ ಸಂಘಟನೆಗಳ ಸಹ ಸಂಸ್ಥಾಪಕಿ ಹಾಗೂ ಮಂಡಳಿಯ ಸಕ್ರಿಯ ಸದಸ್ಯೆ)


682) ಇತ್ತೀಚೆಗೆ ‘ಫೆಮಿನಿಸ್ಟ್‌ ಮೆಜಾರಿಟಿ ಫೌಂಡೇಶನ್ಸ್‌’ನ 2011ನೇ ಸಾಲಿನ ಜಾಗತಿಕ ಮಹಿಳಾ ಹಕ್ಕುಗಳ ಪ್ರಶಸ್ತಿಗೆ ಪಾತ್ರರಾವರು ಯಾರು?
●.ಸುನೀತಾ ವಿಶ್ವನಾಥ್
(‘ವುಮೆನ್‌ ಫಾರ್‌ ಆಫ್ಘನ್‌ ವುಮೆನ್‌’ ಸಂಘಟನೆಯಲ್ಲಿ ಸಲ್ಲಿಸಿದ ಸೇವೆಗೆ)


683) ಇತ್ತೀಚೆಗೆ ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯ ’ಹ್ಯಾನೋವರ್ ಮೇಳ’ದಲ್ಲಿ ವ್ಯಕ್ತಪಡಿಸಿದ '3D'ಗಳ ಅರ್ಥವೇನು?
●.’ಡೆಮಾಗ್ರಫಿ, ಡೆಮಾಕ್ರಸಿ ಮತ್ತು ಡಿಮ್ಯಾಂಡ್ (ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ಬೇಡಿಕೆ)


684) 'ಮದೀಬಾ' ಎಂಬ ಹೆಸರಿನಿಂದ ಪ್ರಖ್ಯಾತರಾದವರು ಯಾರು ?
●.ನೆಲ್ಸನ್ ಮಂಡೇಲಾ


685) ದಕ್ಷಿಣ ಆಫ್ರಿಕಾದಲ್ಲಿನ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿ ಫ್ರಾನ್ಸ್‌ ಸರ್ಕಾರವು ಇತ್ತೀಚೆಗೆ ಭಾರತ ಮೂಲದ ವ್ಯಕ್ತಿಯೊಬ್ಬರಿಗೆ‌ ನೈಟ್‌ಹುಡ್‌ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಹೆಸರೇನು?
●.ಅಹ್ಮದ್


686) ಭಾರತೀಯ ಮಹಿಳಾ ಬ್ಯಾಂಕಿನ (BMB) ಪ್ರಸ್ತುತ ಅಧ್ಯಕ್ಷರು ಯಾರು?
●.ಉಷಾ ಅನಂತಸುಬ್ರಮಣ್ಯ


687) ಅಂಟಾರ್ಕ್ಟಿಕಾದಲ್ಲಿರುವ ಪರ್ವತವೊಂದಕ್ಕೆ ಭಾರತೀಯ ಮೂಲದವರೊಬ್ಬರ ಹೆಸರನ್ನು ಇಡಲಾಗಿದೆ. ಅವರ ಹೆಸರೇನು?
●.ಅಖೋರಿ ಸಿನ್


688) ಪ್ರಸ್ತುತ ದಕ್ಷಿಣ ಕೊರಿಯಾ ದೇಶದ ಅಧ್ಯಕ್ಷರು ಯಾರು?
●.ಪಾರ್ಕ್ ಗಿಯುನ್ ಹೆ


689) ಇತ್ತೀಚೆಗೆ ಫೋರ್ಬ್ಸ್ ನಿಯತಕಾಲಿಕೆ ತನ್ನ 12ನೇ ವರ್ಷದ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯಾಗಿ ಮೊದಲ ಸ್ಥಾನ ಪಡೆದವರು ಯಾರು?
●.ಜರ್ಮನ್ ಚಾನ್ಸೆಲರ್ ಏಂಜೆಲಾ ಮೆರ್ಕೆಲ್


690) ದೇಹದಲ್ಲಿ ವಯಸ್ಸನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ, ಬೇಗ ವಯಸ್ಸಾದಂತೆ ತೋರಲು, ದೇಹ ಸುಕ್ಕುಗಟ್ಟಲು ಕಾರಣವಾಗುವ ಕಿಣ್ವಗಳು ಯಾವವು?
●.11ಬೇಟಾ-ಎಚ್​ಎಸ್​ಡಿ1 ಕಿಣ್ವಗಳು.

Sunday 19 July 2015

☀ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರು ಮತ್ತು ಪ್ರಶಸ್ತಿ ಪಡೆದ ಕೃತಿ, ಕಾದಂಬರಿಗಳ ಪಟ್ಟಿ:  (Kendra Sahitya Akademi Award winning novels, books List)

☀ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡಿಗರು ಮತ್ತು ಪ್ರಶಸ್ತಿ ಪಡೆದ ಕೃತಿ, ಕಾದಂಬರಿಗಳ ಪಟ್ಟಿ:
(Kendra Sahitya Akademi Award winning novels, books List)
━━━━━━━━━━━━━━━━━━━━━━━━━━━━━━━━━━━━━━━━━━━━━

★ಕನ್ನಡ ಸಾಹಿತ್ಯ
(Kannada Literature)

★ಕನ್ನಡ ಸಾಮಾನ್ಯ ಅಧ್ಯಯನ
(Kannada General Knowledge)


●.ಲೇಖಕರು •┈┈┈┈┈┈┈┈┈┈┈┈┈┈┈┈┈┈┈┈┈┈• ●.ಪ್ರಸಿದ್ಧ ಕೃತಿಗಳು
━━━━━━━━━━━━━━━━━━━━━━━━━━━━━━━━━━━━━━━━━━━━━

●.ಕುವೆಂಪು:•┈┈┈┈┈┈┈┈•: ರಾಮಾಯಣ ದರ್ಶನಂ (ಮಹಾ ಕಾವ್ಯ)

●.ರಂ ಶ್ರೀ ಮುಗಳಿ:•┈┈┈┈┈┈┈┈•: ಕನ್ನಡ ಸಾಹಿತ್ಯ ಚರಿತ್ರೆ

●.ದ ರಾ ಬೇಂದ್ರೆ:•┈┈┈┈┈┈┈┈•: ಅರಳು ಮರಳು (ಕವನ ಸಂಕಲನ)

●.ಶಿವರಾಮ ಕಾರಂತ:•┈┈┈┈┈┈┈┈•(ಕಲಾ ಪ್ರಬಂದ) ಯಕ್ಷಗಾನ ಬಯಲಾಟ

●.ವಿ.ಕೃ.ಗೋಕಾಕ್:•┈┈┈┈┈┈┈┈•: ದ್ಯಾವಾ ಪೃಥ್ವಿ (ಕಾವ್ಯ)

●.ಎ ಆರ್ ಕೃಷ್ಣ ಶಾಸ್ತ್ರೀ:•┈┈┈┈┈┈┈┈•:ಬಂಗಾಳೀ ಕಾದಂಬರಿಕಾರ ಬಂಕಿಮ ಚಂದ್ರ(ವಿಮರ್ಶ‍)

●.ದೇವುಡು ನರಸಿಂಹ ಶಾಸ್ತ್ರೀ:•┈┈┈┈┈┈┈┈•: ಮಹಾ ಕ್ಷತ್ರಿಯ (ಕಾದಂಬರಿ)

●.ಬಿ ಪುಟ್ಟ ಸ್ವಾಮಯ್ಯ:•┈┈┈┈┈┈┈┈•: ಕ್ರಾಂತಿ ಕಲ್ಯಾಣ(ಕಾದಂಬರಿ)

●.ಎಸ್ ವಿ ರಂಗಣ್ಣ:•┈┈┈┈┈┈┈┈•:ರಂಗ ಬಿನ್ನಪ

●.ಪು.ತಿ.ನರಸಿಂಹಾಚಾರ್ :•┈┈┈┈┈┈┈┈•:ಹಂಸ ದಮಯಂತಿ ಮತ್ತು ಇತರ ರೂಪಕಗಳು (ಗೀತ ನಾಟಕ)

●.ಡಿ.ವಿ.ಗುಂಡಪ್ಪ:•┈┈┈┈┈┈┈┈•: ಶ್ರೀಮದ್ ಭಗವದ್ಗೀತಾ ತಾತ್ಪರ್ಯ ಅಥವಾ ಜೀವನ ಧರ್ಮಯೋಗ

●.ಮಾಸ್ತಿ ವೆಂಕಟೇಶ ಅಯ್ಯಂಗಾರ್ •┈┈┈┈┈┈┈┈• ಸಣ್ಣ ಕಥೆಗಳು

●.ಎಚ್ ತಿಪ್ಪೇರುದ್ರ ಸ್ವಾಮಿ:•┈┈┈┈┈┈┈┈•: ಕನ್ನಡ ಸಂಸ್ಕೃತಿ ಸಮೀಕ್ಷೆ

●.ಶಂ ಭಾ ಜೋಶಿ:•┈┈┈┈┈┈┈┈•: ಕನ್ನಡ ಸಾಂಸ್ಕೃತಿಕ ಪೂರ್ವ ಪೀಠಿಕೆ

●.ಆದ್ಯ ರಂಗಾಚಾರ್ಯ:•┈┈┈┈┈┈┈┈•: ಕಾಳಿದಾಸ (ಸಾಹಿತ್ಯಿಕ ವಿಮರ್ಶೆ)

●.ಎಸ್ ಎಸ್ ಭೂಸನುರುಮಠ:•┈┈┈┈┈┈┈┈•: ಶೂನ್ಯ ಸಂಪಾದನೆಯ ಪರಾಮರ್ಶೆ

●.ವಿ.ಸೀತಾರಾಮಯ್ಯ:•┈┈┈┈┈┈┈┈•: ಅರಳು ಬರಳು

●.ಗೋಪಾಲಕೃಷ್ಣ ಅಡಿಗ :•┈┈┈┈┈┈┈┈•: ವರ್ಧಮಾನ (ಕವನ)

●.ಎಸ್.ಎಲ್.ಭೈರಪ್ಪ:•┈┈┈┈┈┈┈┈•: ದಾಟು

●.ಎಂ ಶಿವರಾಂ:•┈┈┈┈┈┈┈┈•: ಮನ ಮಂಥನ

●.ಕೆ.ಎಸ್.ನರಸಿಂಹ ಸ್ವಾಮಿ •┈┈┈┈┈┈┈┈• ತೆರೆದ ಬಾಗಿಲು

●.ಬಿ.ಜಿ.ಎಲ್.ಸ್ವಾಮಿ:•┈┈┈┈┈┈┈┈•: ಹಸಿರು ಹೊನ್ನು

●.ಎ.ಎನ್.ಮೂರ್ತಿರಾವ್:•┈┈┈┈┈┈┈┈•:ಚಿತ್ರಗಳು ಪತ್ರಗಳು

●.ಗೊರೂರು ರಾಮಸ್ವಾಮಿ ಅಯ್ಯಂಗಾರ್:•┈┈┈┈┈┈┈┈•: ಅಮೇರಿಕದಲ್ಲಿ ಗೋರುರು

●.ಚೆನ್ನವೀರ ಕಣವಿ:•┈┈┈┈┈┈┈┈•: ಜೀವ ಧ್ವನಿ

●.ಚದುರಂಗ:•┈┈┈┈┈┈┈┈•: ವೈಶಾಖ

●.ಯಶವಂತ ಚಿತ್ತಾಲ:•┈┈┈┈┈┈┈┈•: ಕಥೆಯಾದಳು ಹುಡುಗಿ

●.ಜಿ.ಎಸ್.ಶಿವರುದ್ರಪ್ಪ:•┈┈┈┈┈┈┈┈•: ಕಾವ್ಯಾರ್ಥ ಚಿಂತನ

●.ತ.ರಾ.ಸುಬ್ಬರಾಯ:•┈┈┈┈┈┈┈┈•: ದುರ್ಗಾಸ್ಥಮಾನ

●.ವ್ಯಾಸರಾಯ ಬಲ್ಲಾಳ:•┈┈┈┈┈┈┈┈•: ಬಂಡಾಯ

●.ಪೂರ್ಣಚಂದ್ರ ತೇಜಸ್ವಿ :•┈┈┈┈┈┈┈┈•:ಚಿದಂಬರ ರಹಸ್ಯ

●.ಶಂಕರ ಮೋಕಾಶಿ ಪುಣೇಕರ:•┈┈┈┈┈┈┈┈•: ಅವಧೇಶ್ವರಿ

●.ಹಾ.ಮಾ.ನಾಯಕ:•┈┈┈┈┈┈┈┈•: ಸಂಪ್ರತಿ

●.ದೇವನೂರು ಮಹಾದೇವ:•┈┈┈┈┈┈┈┈•: ಕುಸುಮ ಬಾಲೆ

●.ಚಂದ್ರಶೇಖರ ಕಂಬಾರ:•┈┈┈┈┈┈┈┈•: ಸಿರಿ ಸಂಪಿಗೆ

●.ಸು.ರಂ.ಎಕ್ಕುಂಡಿಃ•┈┈┈┈┈┈┈┈• ಬಕುಳದ ಹೂವುಗಳು

●.ಪಿ.ಲಂಕೇಶ್ :•┈┈┈┈┈┈┈┈•:ಕಲ್ಲು ಕರಗುವ ಸಮಯ

●.ಗಿರೀಶ್ ಕಾರ್ನಾಡ್ :•┈┈┈┈┈┈┈┈•: ತಲೆದಂಡ

●.ಕೀರ್ತಿನಾಥ ಕುರ್ತುಕೋಟಿ :•┈┈┈┈┈┈┈┈•: ಉರಿಯ ನಾಲಿಗೆ

●.ಜಿ.ಎಸ್.ಆಮೂರ :•┈┈┈┈┈┈┈┈•: ಭುವನದ ಭಾಗ್ಯ

●.ಎಂ.ಚಿದಾನಂದಮೂರ್ತಿ:•┈┈┈┈┈┈┈┈•: ಹೊಸತು ಹೊಸತು

●.ಬಿ.ಸಿ.ರಾಮಚಂದ್ರ ಶರ್ಮ:•┈┈┈┈┈┈┈┈•: ಸಪ್ತಪದಿ

●.ಡಿ.ಆರ್‍. ನಾಗರಾಜ್ :•┈┈┈┈┈┈┈┈•: ಸಾಹಿತ್ಯ ಕಥನ

●.ಶಾಂತಿನಾಥ ದೇಸಾಯಿ:•┈┈┈┈┈┈┈┈•: ಓಂ ನಮೋ

●.ಎಲ್.ಎಸ್.ಶೇಷಗಿರಿ ರಾವ್ :•┈┈┈┈┈┈┈┈•: ಇಂಗ್ಲೀಷ್ ಸಾಹಿತ್ಯ ಚರಿತ್ರೆ

●.ಎಸ್.ನಾರಾಯಣ ಶೆಟ್ಟಿ:•┈┈┈┈┈┈┈┈•: ಯುಗಸಂಧ್ಯಾ

●.ಕೆ.ವಿ.ಸುಬ್ಬಣ್ಣ:•┈┈┈┈┈┈┈┈•: ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು

●.ಗೀತಾ ನಾಗಭೂಷಣ್:•┈┈┈┈┈┈┈┈• ಬದುಕು

●.ರಾಘವೇಂದ್ರ ಪಾಟೀಲ್ :•┈┈┈┈┈┈┈┈•: ತೇರು

●.ಎಂ.ಎಂ.ಕಲ್ಬುರ್ಗಿ:•┈┈┈┈┈┈┈┈•: ಮಾರ್ಗ 4

●.ಕುಂ. ವೀರಭದ್ರಪ್ಪ :•┈┈┈┈┈┈┈┈•: ಅರಮನೆ

●.ಶ್ರೀನಿವಾಸ್ ಬಿ.ವೈದ್ಯ :•┈┈┈┈┈┈┈┈•: ಹಳ್ಳ ಬಂತು ಹಳ್ಳ

●.ವೈದೇಹಿ (ಜಾನಕಿ ಶ್ರೀನಿವಾಸ್ ಮೂರ್ತಿ) :•┈┈┈┈┈┈┈┈•: ಕ್ರೌಂಚ ಪಕ್ಷಿಗಳು

●.ರಹಮತ್ ತರೀಕೆರೆ :•┈┈┈┈┈┈┈┈•: ಕತ್ತಿಯಂಚಿನ ದಾರಿ

●.ಗೋಪಾಲ ಕೃಷ್ಣ ಪೈ :•┈┈┈┈┈┈┈┈•: ಸ್ವಪ್ನ ಸಾರಸ್ವತ (ಕಾದಂಬರಿ)

●.ಎಚ್.ಎಸ್.ಶಿವಪ್ರಕಾಶ್ :•┈┈┈┈┈┈┈┈•: ಮಬ್ಬಿನ ಹಾಗೆ ಕಣಿವೆಯಾಸಿ (ಕವನ ಸಂಕಲನ)

●.ಸಿ.ಎನ್.ರಾಮಚಂದ್ರನ್ :•┈┈┈┈┈┈┈┈•:￿ಅಖ್ಯಾನ ವ್ಯಾಖ್ಯಾನ (ಪ್ರಭಂದ ಸಂಕಲನ)

●.ಜಿ.ಹೆಚ್.ನಾಯಕ್ :•┈┈┈┈┈┈┈┈•: ಉತ್ತರಾರ್ಧ (ಪ್ರಭಂದ ಸಂಕಲನ)


(ಕೃಪೆ: ರೋಷನ್ ಜಗಳೂರು)

☀ಕರ್ನಾಟಕದಲ್ಲಿ ರಕ್ಷಿತ ಹುಲಿ ಮೀಸಲು ಪ್ರದೇಶಗಳು: (Project Tiger Reserves in Karnataka) 

☀ಕರ್ನಾಟಕದಲ್ಲಿ ರಕ್ಷಿತ ಹುಲಿ ಮೀಸಲು ಪ್ರದೇಶಗಳು:
(Project Tiger Reserves in Karnataka)
━━━━━━━━━━━━━━━━━━━━━━━━━━━━━━━━━━━━━━━━━━━━━

★ಕರ್ನಾಟಕದ ಜೀವಿ ವೈವಿಧ್ಯತೆ.
(Karnataka Biodiversity)

★ ಕರ್ನಾಟಕದ ಭೂಗೋಳಶಾಸ್ತ್ರ.
(Karnataka Physical Geography)


●.ರಾಜ್ಯದ 5 ಹುಲಿ ಮೀಸಲುಗಳಲ್ಲಿ ರಾಷ್ಟ್ರದ ಅತಿ ಹೆಚ್ಚು ಹುಲಿಗಳಿವೆ ಹಾಗೂ ಹುಲಿ ಸಂತತಿಯಲ್ಲಿ ರಾಜ್ಯವು ಮೊದಲನೇ ಸ್ಥಾನದಲ್ಲಿದೆ. 2010ರ ಹುಲಿ ಗಣನೆಯಂತೆ ರಾಜ್ಯದಲ್ಲಿ 300 ಹುಲಿಗಳಿವೆ.

●.ಪ್ರಸ್ತುತ ಡಿಸೆಂಬರ್-2013ರಲ್ಲಿ ಹುಲಿ ಸಂತತಿಯ ಗಣತಿ ಆರಂಭವಾಗಿದೆ ಹಾಗೂ ಕೆಲಸ ಮುಕ್ತಾಯಗೊಂಡ ನಂತರ ನಿಖರವಾದ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲಾಗುವುದು.

●.ಕರ್ನಾಟಕವನ್ನು ಹುಲಿ ಸಂತತಿಯಲ್ಲಿ ದೇಶದಲ್ಲಿ 1ನೇ ಸ್ಥಾನದಲ್ಲಿರುವ ರಾಜ್ಯವೆಂದು ಘೋಷಿಸಲಾಗಿದೆ.

●.ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು 2010ರಲ್ಲಿ ನಡೆಸಿದ ಹುಲಿ ಗಣತಿಯಂತೆ ಪ್ರಸ್ತುತ ಸುಮಾರು 300 ಹುಲಿಗಳ ಸಂತತಿ ಇದೆ.


●.ರಾಜ್ಯದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಹುಲಿ ಯೋಜನೆ), ಮೈಸೂರು, ಶಿವಮೊಗ್ಗ ಇವರು ಮುಖ್ಯಸ್ಥರಾಗಿರುವ 5 ಹುಲಿ ಮೀಸಲು ಅರಣ್ಯಗಳಿದ್ದು ಅವುಗಳೆಂದರೆ :

✧.ಬಂಡೀಪುರ ರಾಷ್ಟ್ರೀಯ ಉದ್ಯಾನವನ:•┈┈┈┈┈┈┈┈• (1973ರಲ್ಲಿ)

✧.ಭದ್ರಾ ವನ್ಯಜೀವಿ ಅಭಯಾರಣ್ಯ:•┈┈┈┈┈┈┈┈• (1998ರಲ್ಲಿ)

✧.ನಾಗರಹೊಳೆ ರಾಷ್ಟ್ರೀಯ ಉದ್ಯಾನವನ:•┈┈┈┈┈┈┈┈• (2000ದಲ್ಲಿ)

✧.ಆನ್ಶಿ ರಾಷ್ಟ್ರೀಯ ಉದ್ಯಾನವನ – ದಾಂಡೇಲಿ ವನ್ಯಜೀವಿ ಅಭಯಾರಣ್ಯ:•┈┈┈┈┈• (2006ರಲ್ಲಿ)

✧.ಬಿಆರ್ಟಿ ವನ್ಯಜೀವಿ ಅಭಯಾರಣ್ಯ: •┈┈┈┈┈┈┈┈• (2011ರಲ್ಲಿ)


●.ಈ ಕೆಳಕೆಂಡ ವರ್ಷಗಳಲ್ಲಿ ಕರ್ನಾಟಕದಲ್ಲಿ ಕೆಳಕಂಡ ರಕ್ಷಿತ ಪ್ರದೇಶಗಳನ್ನು ಹುಲಿ ಮೀಸಲು ಎಂದು ಗುರುತಿಸಲಾಗಿದೆ :
━━━━━━━━━━━━━━━━━━━━━━━━━━━━━━━━━━━━━━━━━━━━━


●.ಹುಲಿ ಮೀಸಲು ಹೆಸರು:•┈┈┈┈• ಬಂಡೀಪುರ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 872.24 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ :•┈┈┈┈•1973ರಲ್ಲಿ


●.ಹುಲಿ ಮೀಸಲು ಹೆಸರು:•┈┈┈┈• ಭದ್ರಾ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 500.16 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ: •┈┈┈┈• 1998ರಲ್ಲಿ


●.ಹುಲಿ ಮೀಸಲು ಹೆಸರು:•┈┈┈┈• ನಾಗರಹೊಳೆ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 643.39 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ: •┈┈┈┈• 2000ರಲ್ಲಿ  


●.ಹುಲಿ ಮೀಸಲು ಹೆಸರು :•┈┈┈┈• ದಾಂಡೇಲಿ-ಆನ್ಶಿ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 475.00 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ: •┈┈┈┈• 2006ರಲ್ಲಿ  


●.ಹುಲಿ ಮೀಸಲು ಹೆಸರು:•┈┈┈┈• ಬಿಆರ್ಟಿ

✧.ವಿಸ್ತೀರ್ಣ (ಚದರ ಕಿ.ಮೀ.ಗಳಲ್ಲಿ) :•┈┈┈┈• 539.52 ಚದರ ಕಿ.ಮೀ.

✧.ಸ್ಥಾಪನೆಯಾದ ವರ್ಷ: •┈┈┈┈• 2011ರಲ್ಲಿ

☀(ಭಾಗ:II)- ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು :..ಮುಂದುವರಿದ ಭಾಗ. ( (PART:II)-The greatest 100 Books in Kannada Literature)

☀(ಭಾಗ:II)- ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು :..ಮುಂದುವರಿದ ಭಾಗ.
( (PART:II)-The greatest 100 Books in Kannada Literature)

━━━━━━━━━━━━━━━━━━━━━━━━━━━━━━━━━━━━━━━━━━━━━
★ ಕನ್ನಡ ಸಾಹಿತ್ಯ
(Kannada Literature)

★ ಸಾಮಾನ್ಯ ಅಧ್ಯಯನ
(General Studies)


51.ಚಿತ್ತಾಲರ ಕತೆಗಳು •┈┈┈┈┈┈┈┈┈• ಯಶವಂತ ಚಿತ್ತಾಲ

52.ದಜ್ಜಾಲ •┈┈┈┈┈┈┈┈┈• ಫಕೀರ್ ಮುಹಮ್ಮದ್ ಕಟ್ಪಾಡಿ

53.ಕನ್ನಂಬಾಡಿ •┈┈┈┈┈┈┈┈┈• ಡಾ. ಬೆಸಗರಹಳ್ಳಿ ರಾಮಣ್ಣ

54.ಅಮ್ಮಚ್ಚಿಯೆಂಬ ನೆನಪು •┈┈┈┈┈┈┈┈┈• ವೈದೇಹಿ

55.ಔದುಂಬರಗಾಥೆ •┈┈┈┈┈┈┈┈┈• ದ.ರಾ.ಬೇ೦ದ್ರೆ

56.ಸಮಗ್ರ ಕಾವ್ಯ •┈┈┈┈┈┈┈┈┈• ಗೋಪಾಲಕೃಷ್ಣ ಅಡಿಗ

57.ಹೊ೦ಬೆಳಕು •┈┈┈┈┈┈┈┈┈• ಚನ್ನವೀರ ಕಣವಿ

58.ಹಾಡು-ಹಸೆ •┈┈┈┈┈┈┈┈┈• ಕೆ.ಎಸ್.ನರಸಿಂಹಸ್ವಾಮಿ ಆಯ್ದ ಕವಿತೆಗಳು

59.ವರ್ಧಮಾನ •┈┈┈┈┈┈┈┈┈• ಗೋಪಾಲಕೃಷ್ಣ ಅಡಿಗ

60.ದಾಟು •┈┈┈┈┈┈┈┈┈• ಎಸ್.ಎಲ್.ಭೈರಪ್ಪ

61.ಮೂವತ್ತು ಮಳೆಗಾಲ •┈┈┈┈┈┈┈┈┈• ಎಚ್.ಎಸ್. ವೆಂಕಟೇಶಮೂರ್ತಿ

62.ಮೆರವಣಿಗೆ •┈┈┈┈┈┈┈┈┈• ಡಾ. ಸಿದ್ಧಲಿಂಗಯ್ಯ

63.ಬೆಳ್ಳಕ್ಕಿ ಹಿಂಡು •┈┈┈┈┈┈┈┈┈• ಸುಬ್ಬಣ ರಂಗನಾಥ ಎಕ್ಕುಂಡಿ

64.ತಟ್ಟು ಚಪ್ಪಾಳೆ ಪುಟ್ಟ ಮಗು •┈┈┈┈┈┈┈┈┈• ಬೊಳುವಾರು ಮಹಮದ್ ಕುಂಞಿ

65.ಕುವೆಂಪು ಸಮಗ್ರ ಕಾವ್ಯ •┈┈┈┈┈┈┈┈┈• ಕುವೆ೦ಪು

66.ಕ್ಯಾಮೆರಾ ಕಣ್ಣು •┈┈┈┈┈┈┈┈┈• ಬಿ.ಆರ್.ಲಕ್ಷ್ಮಣ ರಾವ್ ಸಮಗ್ರ ಕಾವ್ಯ

67.ರತ್ನನ ಪದಗಳು,ನಾಗನ ಪದಗಳು •┈┈┈┈┈┈┈┈┈• ಜಿ.ಪಿ. ರಾಜರತ್ನಂ

68.ಪಾಂಚಾಲಿ: ಆಯ್ದ ಕವನಗಳು •┈┈┈┈┈┈┈┈┈• ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

69.ಹೊಂಗನಸು •┈┈┈┈┈┈┈┈┈• ಬಿಎಂಶ್ರೀ

70.ನಾವು ಹುಡುಗಿಯರೇ ಹೀಗೆ •┈┈┈┈┈┈┈┈┈• ಪ್ರತಿಭಾ ನಂದಕುಮಾರ್

71.ಗಜಲ್ ಮತ್ತು ದ್ವಿಪದಿಗಳು •┈┈┈┈┈┈┈┈┈• ಶಾಂತರಸ

72.ಮನ ಮಂಥನ •┈┈┈┈┈┈┈┈┈• ಎಂ ಶಿವರಾಂ

73.ಮ೦ಕುತಿಮ್ಮನ ಕಗ್ಗ •┈┈┈┈┈┈┈┈┈• ಡಿ.ವಿ.ಗು೦ಡಪ್ಪ

74.ಈವರೆಗಿನ ಹೇಳತೇನ ಕೇಳ •┈┈┈┈┈┈┈┈┈• ಡಾ.ಚಂದ್ರಶೇಖರ ಕಂಬಾರನಾಟಕಗಳು

75.ಪುತಿನ ಸಮಗ್ರ ಗೇಯ ಕಾವ್ಯ ನಾಟಕಗಳು •┈┈┈┈┈┈┈┈┈• ಪು.ತಿ. ನರಸಿಂಹಾಚಾರ್

76.ಕೈಲಾಸಂ ಕನ್ನಡ ನಾಟಕಗಳು •┈┈┈┈┈┈┈┈┈• ಟಿ.ಪಿ.ಕೈಲಾಸ೦

77.ಶೋಕಚಕ್ರ •┈┈┈┈┈┈┈┈┈• ಶ್ರೀರ೦ಗ

78.ಕಾಕನಕೋಟೆ •┈┈┈┈┈┈┈┈┈• ಮಾಸ್ತಿ ವೆಂಕಟೇಶ ಅಯ್ಯಂಗಾರ್

79.ಸತ್ತವರ ನೆರಳು •┈┈┈┈┈┈┈┈┈• ಜಿ.ಬಿ. ಜೋಶಿ

80.ತುಘಲಕ್ •┈┈┈┈┈┈┈┈┈• ಗಿರೀಶ ಕಾರ್ನಾಡ

81.ಸಂಸ ನಾಟಕಗಳು •┈┈┈┈┈┈┈┈┈• ಸ೦ಸ

82.ಮಹಾಚೈತ್ರ •┈┈┈┈┈┈┈┈┈• ಎಚ್. ಎಸ್. ಶಿವಪ್ರಕಾಶ

83.ಸಿರಿಸ೦ಪಿಗೆ •┈┈┈┈┈┈┈┈┈• ಚ೦ದ್ರಶೇಖರ ಕ೦ಬಾರ

84.ಸಂಕ್ರಾಂತಿ •┈┈┈┈┈┈┈┈┈• ಪಿ. ಲ೦ಕೇಶ

85.ಜ್ಞಾಪಕ ಚಿತ್ರಶಾಲೆ •┈┈┈┈┈┈┈┈┈• ಡಿ. ವಿ. ಗು೦ಡಪ್ಪ

86.ಮೂರು ತಲೆಮಾರು •┈┈┈┈┈┈┈┈┈• ತ.ಸು. ಶಾಮರಾಯ

87.ಮರೆಯಲಾದೀತೆ? •┈┈┈┈┈┈┈┈┈• ಬೆಳಗೆರೆ ಕೃಷ್ಣಶಾಸ್ತ್ರಿ

88.ದೇವರು •┈┈┈┈┈┈┈┈┈• ಎ.ಎನ್. ಮೂರ್ತಿರಾವ್

89.ಇರುವುದೊಂದೇ ಭೂಮಿ •┈┈┈┈┈┈┈┈┈• ನಾಗೇಶ ಹೆಗಡೆ

90.ಅಣ್ಣನ ನೆನಪು •┈┈┈┈┈┈┈┈┈• ಕೆ.ಪಿ ಪೂರ್ಣಚ೦ದ್ರ ತೇಜಸ್ವಿ

91.ನಮ್ಮ ಊರಿನ ರಸಿಕರು •┈┈┈┈┈┈┈┈┈• ಗೊರೂರು ರಾಮಸ್ವಾಮಿ ಅಯ್ಯಂಗಾರ್

92.ಹಸುರು ಹೊನ್ನು •┈┈┈┈┈┈┈┈┈• ಬಿ.ಜಿ.ಎಲ್. ಸ್ವಾಮಿ

93.ಊರುಕೇರಿ •┈┈┈┈┈┈┈┈┈• ಡಾ. ಸಿದ್ದಲಿಂಗಯ್ಯ

94.ಯಂತ್ರಗಳನ್ನು ಕಳಚೋಣ ಬನ್ನಿ •┈┈┈┈┈┈┈┈┈• ಪ್ರಸನ್ನ

95.ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ •┈┈┈┈┈┈┈┈┈• ಕೆ.ಪಿ. ಪೂರ್ಣಚಂದ್ರ ತೇಜಸ್ವಿ

96.ಅರೆ ಶತಮಾನದ ಅಲೆ ಬರಹಗಳು •┈┈┈┈┈┈┈┈┈• ಕೆ.ವಿ. ಸುಬ್ಬಣ್ಣ

97.ಶಕ್ತಿಶಾರದೆಯ ಮೇಳ •┈┈┈┈┈┈┈┈┈• ಡಾ.ಡಿ.ಆರ್. ನಾಗರಾಜ

98.ಹುಳಿಮಾವಿನ ಮರ •┈┈┈┈┈┈┈┈┈• ಪಿ. ಲಂಕೇಶ

99.ವಚನ ಭಾರತ •┈┈┈┈┈┈┈┈┈• ಎ.ಆರ್. ಕೃಷ್ಣಶಾಸ್ತ್ರೀ

100.ಹುಚ್ಚು ಮನಸ್ಸಿನ ಹತ್ತು ಮುಖಗಳು •┈┈┈┈┈┈┈┈┈• ಶಿವರಾಮ ಕಾರಂತ

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—  ☀ಪ್ರಮುಖವಾಗಿ ದೇಶದ ರೈಲ್ವೆ ಸಾರಿಗೆ ಮತ್ತು ವಿಮಾನ ಯಾನ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಿರುವ ನ್ಯಾವಿಗೇಶನ್ ಅನುಕೂಲವನ್ನು ಒದಗಿಸುವ ‘ಗಗನ್’ ದಿಕ್ಸೂಚಿ ವ್ಯವಸ್ಥೆ'ಯು ಪಥದರ್ಶಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆಯಾಗಿದೆ. ವಿಶ್ಲೇಷಿಸಿ.  (The 'GPS and geo-augmented navigation system (GAGAN))

☀ಈ ದಿನದ ಪ್ರಚಲಿತ (KAS/IAS) ಪ್ರಶ್ನೆ:—

☀ಪ್ರಮುಖವಾಗಿ ದೇಶದ ರೈಲ್ವೆ ಸಾರಿಗೆ ಮತ್ತು ವಿಮಾನ ಯಾನ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಿರುವ ನ್ಯಾವಿಗೇಶನ್ ಅನುಕೂಲವನ್ನು ಒದಗಿಸುವ ‘ಗಗನ್’ ದಿಕ್ಸೂಚಿ ವ್ಯವಸ್ಥೆ'ಯು ಪಥದರ್ಶಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಕ ಹೆಜ್ಜೆಯಾಗಿದೆ. ವಿಶ್ಲೇಷಿಸಿ.
(The 'GPS and geo-augmented navigation system (GAGAN))
━━━━━━━━━━━━━━━━━━━━━━━━━━━━━━━━━━━━━━━━━━━━━

★ ವಿಜ್ಞಾನ ಹಾಗೂ ತಂತ್ರಜ್ಞಾನ
(Science and Technology)

★ ಭಾರತೀಯ ನ್ಯಾವಿಗೇಶನ್ ವ್ಯವಸ್ಥೆ :
(Indian Navigation System)


— ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಅಭಿವೃದ್ಧಿಪಡಿಸಿರುವ ಗಗನ್ ಸ್ವದೇಶಿ ತಂತ್ರಜ್ಞಾನದ ನ್ಯಾವಿಗೇಶನಲ್ ವ್ಯವಸ್ಥೆಯಾಗಿದ್ದು, ಜಿಪಿಎಸ್ ತಂತ್ರಜ್ಞಾನ ಆಧಾರಿತ ಗಗನ್ ನ್ಯಾವಿಗೇಶನ್ ವ್ಯವಸ್ಥೆ ಇದಾಗಿದೆ. ಪ್ರಮುಖವಾಗಿ ದೇಶದ ರೈಲ್ವೆ ಇಲಾಖೆ ಮತ್ತು ವಿಮಾನ ಯಾನ ಗಮನದಲ್ಲಿಟ್ಟುಕೊಂಡು ನ್ಯಾವಿಗೇಶನ್ ಅನುಕೂಲವನ್ನು ಒದಗಿಸಿಕೊಡಲಿದೆ.


☀ಮುಖ್ಯಾಂಶಗಳು :
━━━━━━━━━━━━━

●.ಇಸ್ರೊ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಮಾನದ ದಿಕ್ಸೂಚಿ ಅಥವಾ ಜಿಪಿಎಸ್ ವ್ಯವಸ್ಥೆಗೆ 'ಗಗನ್' (ಜಿಪಿಎಸ್ ಏಡೆಡ್ ಜಿಯೊ ಆಗ್ಮೆಂಟೆಡ್ ನ್ಯಾವಿಗೇಷನ್-ಜಿಎಜಿಎಎನ್) ಎಂದು ಹೆಸರಿಡಲಾಗಿದೆ.

●.ಸುಮಾರು 15 ವರ್ಷಗಳ ಅವಿರತ ಶ್ರಮದಿಂದ ಗಗನ್ ವ್ಯವಸ್ಥೆ ಭಾರತಕ್ಕೆ ಒಲಿದಿದ್ದು, ಇದಕ್ಕಾಗಿ ಸುಮಾರು 774 ಕೋಟಿ ರೂ. ವೆಚ್ಚ ಮಾಡಲಾಗಿದೆ.

●.ಸೇನೆ, ರಸ್ತೆ ಸಂಚಾರ, ಕೃಷಿ, ಪ್ರಕೃತಿ ವಿಕೋಪದಂಥ ಸಂದರ್ಭದಲ್ಲಿ ಗಗನ್‌ ನೆರವಿಗೆ ಬರಲಿದೆ.

●.ಈ ಮೂಲಕ 'ವಿಮಾನದ ಉಪಗ್ರಹ ಆಧಾರಿತ ಜಿಪಿಎಸ್ ವ್ಯವಸ್ಥೆ' ಹೊಂದಿರುವ ರಾಷ್ಟಗಳಾದ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಜಪಾನ್‌ನ ಗಣ್ಯ ರಾಷ್ಟ್ರಗಳ ಸಾಲಿಗೆ ಭಾರತ ಸೇರಿದೆ.

●.ವಿಶ್ವಕ್ಕೆ ಗಗನ ವಿಸ್ಮಯ ಗಗನ್ ವ್ಯವಸ್ಥೆಯು ಬಂಗಾಳ ಕೊಲ್ಲಿ, ಆಗ್ನೇಯ ಏಷ್ಯಾ, ಹಿಂದೂ ಮಹಾಸಾಗರ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಪ್ರಾಂತ್ಯಗಳಲ್ಲಿ ಕೆಲಸ ಮಾಡಲಿದೆ. ಹೀಗಾಗಿ ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸಿಯಾನ್ ರಾಷ್ಟ್ರಗಳು ಗಗನ್ ವ್ಯವಸ್ಥೆಯತ್ತ ಕಣ್ಣರಳಿಸಿ ನೋಡುತ್ತಿವೆ.

●.ಗಗನ್ ವ್ಯವಸ್ಥೆಯು ಭಾರತ, ಬಂಗಾಳ ಕೊಲ್ಲಿ, ಆಗ್ನೇಯ ಏಷ್ಯಾ ಭಾಗ, ಮಧ್ಯ ಪ್ರಾಚ್ಯ ಪ್ರದೇಶ ಮತ್ತು ಆಫ್ರಿಕಾದ ಸ್ವಲ್ಪ ಭಾಗಗಳನ್ನು ಒಳಗೊಳ್ಳಲಿದೆ.


☀ವಿಮಾನ ಯಾನಕ್ಕಾಗುವ ಪ್ರಯೋಜನಗಳು :
━━━━━━━━━━━━━━━━━━━━━━━━━

●.ದೇಶದ 50 ವಿಮಾನ ನಿಲ್ದಾಣಗಳು ಹೊಸ ವ್ಯವಸ್ಥೆಯ ಲಾಭ ಪಡೆಯಲಿದ್ದು, ಸುಗಮ ವಿಮಾನ ಸಂಚಾರ,  ಸುರಕ್ಷತೆ, ಇಂಧನ ಕ್ಷಮತೆ, ದರ ಕಡಿತಕ್ಕೆ ಈ ವ್ಯವಸ್ಥೆ ನೆರವಾಗಲಿದೆ.

●.ಪೈಲಟ್‌ ಸೇರಿದಂತೆ ವಿಮಾನದ ಸಿಬ್ಬಂದಿ ಹಾಗೂ ವಾಯು ಸಂಚಾರ ನಿಯಂತ್ರಣ ಕೇಂದ್ರದ ಸಿಬ್ಬಂದಿಯ ಕಾರ್ಯಭಾರ ಮತ್ತು ಒತ್ತಡವನ್ನು ಅರ್ಧದಷ್ಟು ಕಡಿಮೆ ಮಾಡಲಿದೆ.

●.ದೇಶೀಯ ಪಥನಿರ್ದೇಶಕ ವ್ಯವಸ್ಥೆಗಾಗಿ ಇಸ್ರೊ ಭೂ ಕಕ್ಷೆಗೆ ಸೇರಿಸಿರುವ ಮೂರು ಜಿಪಿಎಸ್ ಉಪಗ್ರಹಗಳು, ಭೂಮಿಯ ಮೇಲಿನ ಸಂದೇಶವಾಹಕ ನಿಲ್ದಾಣಗಳು ನೀಡುವ ಮಾಹಿತಿ ಆಧರಿಸಿ ಗಗನ್ ವ್ಯವಸ್ಥೆ ವಿಮಾನಗಳಿಗೆ ಮಾರ್ಗದರ್ಶನ ಮಾಡಲಿದೆ.

●.ಐರೋಪ್ಯ ಒಕ್ಕೂಟ ಮತ್ತು ಜಪಾನ್ ಹೊಂದಿರುವ ವಿಮಾನದಿಕ್ಸೂಚಿ ವ್ಯವಸ್ಥೆಯ ವ್ಯಾಪ್ತಿ ಮೀರಿದ ಪ್ರದೇಶಗಳಲ್ಲಿ ಗಗನ್ ಕೆಲಸ ಮಾಡಲಿದ್ದು, ಈ ಎರಡು ವ್ಯವಸ್ಥೆಗಳ ಕಂದರವನ್ನು ತುಂಬಲಿದೆ.

●.ದೇಶಕ್ಕೆ ವರವಾದ ವ್ಯವಸ್ಥೆ ಗಗನ್ ವ್ಯವಸ್ಥೆ ವಿಮಾನಗಳಿಗೆ ನಿಖರ ಮಾರ್ಗದರ್ಶನ ಮಾಡುವುದರಿಂದ ಅನಗತ್ಯ ದಾರಿ ಕ್ರಮಿಸುವುದು ತಪ್ಪಲಿದೆ.

●.ಗುಂಡು ಹೊಡೆದಂತೆ ನಿಶ್ಚಿತ ದಾರಿಯಲ್ಲಿ ಹಾರಾಟ ನಡೆಸಿ ಗುರಿ ಮುಟ್ಟಲಿವೆ.ಇದರಿಂದ ಪ್ರಯಾಣದ ಅವಧಿ ಕಡಿಮೆಯಾಗುವುದಷ್ಟೇ ಅಲ್ಲದೆ, ಇಂಧನ ವೆಚ್ಚವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.


☀ನಿಖರ ದಿಕ್ಸೂಚಿ ಹೇಗೆ?
━━━━━━━━━━━━━━━

●.ಈಗಲೂ ಎಲ್ಲ ವಿಮಾನಗಳು ಜಿಪಿಎಸ್ ಉಪಗ್ರಹಗಳಿಂದ ಮಾಹಿತಿ ಪಡೆದೇ ಹಾರಾಟ ನಡೆಸುತ್ತವೆ. ಭಾರತವೂ ಸೇರಿ ಸಾರ್ಕ್ ದೇಶಗಳ ಆಕಾಶದಲ್ಲಿ ಮೂರು ಜಿಪಿಎಸ್ ಉಪಗ್ರಹಗಳು ಪ್ರತಿ ವಿಮಾನದ ಜಾಡು ಹಿಡಿಯುತ್ತವೆ. ಆದರೆ, ಜಿಪಿಎಸ್ ಉಪಗ್ರಹಗಳು ನೀಡುವ ವಿಮಾನಗಳ ಹಾರಾಟ ಬಿಂದು 50 ಮೀಟರ್ ಆಚೀಚೆ ಇರುತ್ತದೆ. ಈ ಅಂತರವನ್ನು ಗಗನ್ ವ್ಯವಸ್ಥೆ ಬರೀ 3.5 ಮೀಟರ್‌ಗೆ ಇಳಿಸುತ್ತದೆ. ಹೀಗಾಗಿ ಪೈಲಟ್‌ಗಳಿಗೆ ನಿಖರವಾಗಿ ಏರ್ ಕಂಟ್ರೋಲರ್‌ಗಳು ಮಾರ್ಗದರ್ಶನ ಮಾಡಲು ಅನುವಾಗಲಿದೆ.


☀ಅಳವಡಿಕೆ ಕಡ್ಡಾಯವೇ?
━━━━━━━━━━━━━━━━

●.ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆ (ಎಸ್‌ಬಿಎಎಸ್) ಅಳವಡಿಸಿರುವ ವಿಮಾನಗಳಲ್ಲಿ ಮಾತ್ರ ಗಗನ್ ಕೆಲಸ ಮಾಡಲಿದೆ. ಈಗ ಇರುವ ವಿಮಾನಗಳಲ್ಲಿ ಎಸ್‌ಬಿಎಎಸ್ ಸಾಧನಾ ಅಳವಡಿಕೆಯಾಗಿಲ್ಲ. ಇವು ದುಬಾರಿಯಾಗಿರುವುದರಿಂದ ಹಾಗೂ ಈಗಾಗಲೇ ಭಾರತೀಯ ವಿಮಾನಯಾನ ಕ್ಷೇತ್ರ ಹಣದ ಮುಗ್ಗಟ್ಟಿನಿಂದ ನರಳುತ್ತಿರುವುದರಿಂದ ಎಸ್‌ಬಿಎಎಸ್ ಉಪಕರಣ ಅಳವಡಿಕೆ ಕಷ್ಟ ಸಾಧ್ಯ. ಹೀಗಾಗಿಯೇ, ಗಗನ್ ತಂತ್ರಜ್ಞಾನ ಬಳಸಿಕೊಳ್ಳುವುದನ್ನು ಎಲ್ಲ ವಿಮಾನ ಸಂಸ್ಥೆಗಳಿಗೆ ಕಡ್ಡಾಯ ಮಾಡುವುದಿಲ್ಲ; ಆದರೆ, ಹೊಸದಾಗಿ ಖರೀದಿಯಾಗುವ ವಿಮಾನಗಳಿಗೆ ಕಡ್ಡಾಯವಾಗಿ ಈ ಸಾಧನಾ ಅಳವಡಿಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಚಿವಾಲಯ ನಿರ್ಧರಿಸಿದೆ.


☀ರೈಲ್ವೆಗಾಗುವ ಪ್ರಯೋಜನಗಳು :
━━━━━━━━━━━━━━━━━━━━
— ರೈಲ್ವೆಗೆ ಗಗನ್‌ನಿಂದ ಹಲವಾರು ಪ್ರಯೋಜನಗಳು ಇವೆ.

●.ಉಪಗ್ರಹಗಳಿಂದ ದೊರೆಯುವ ಮಾಹಿತಿಯನ್ನು ಇಸ್ರೊ ತನ್ನ ಬಾಹ್ಯಾಕಾಶ ತಂತ್ರಜ್ಞಾನ ಸಾಧನಗಳ ನೆರವಿನಿಂದ ರೈಲ್ವೆಗೆ ನೀಡಲಿದೆ.

●.ಕಾವಲು ರಹಿತ ಲೆವೆಲ್ ಕ್ರಾಸಿಂಗ್ ಇರುವ ಸ್ಥಳಗಳ ಬಗ್ಗೆ ಮುಂಚಿತವಾಗಿ ರೈಲಿಗೆ ಗಗನ್ ಮಾಹಿತಿ ಕೊಡಬಲ್ಲುದು.

●.ಇಂತಹ ಕ್ರಾಸಿಂಗ್‌ನಲ್ಲಿ ಎಚ್ಚರಿಕೆಯ ಸಿಗ್ನಲ್ ತೋರಿಸುತ್ತದೆ. ಕೂಡಲೇ ರೈಲ್ವೆಯ ಹಾರ್ನ್ ಮೊಳಗುತ್ತದೆ. ಇದರಿಂದ ಸಂಭವನೀಯ ಅವಘಡಗಳನ್ನು ತಪ್ಪಿಸಬಹುದು.

●.ಕೆಲವು ಪ್ರದೇಶಗಳಲ್ಲಿ ರೈಲ್ವೆ ಹಳಿಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಗಗನ್ ಮೂಲಕ ಅಂತಹ ಹಳಿಗಳ ಬಗ್ಗೆ ಮಾಹಿತಿ ಪಡೆಯಬಹುದು.

●.ಸುರಂಗ ಮಾರ್ಗಗಳಲ್ಲಿ ಹೋಗುವಾಗ ಹೆಚ್ಚು ಸದೃಢವಾಗಿರುವ ಹಳಿಗಳನ್ನು ಗುರುತಿಸಬಹುದು.

Thursday 16 July 2015

☀(ಭಾಗ-Ⅳ) : ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು. (Part -Ⅳ): Multiple Choice Questions and Answers for IAS / KAS examinations. 

☀(ಭಾಗ-Ⅳ) : ಐಎಎಸ್ / ಕೆಎಎಸ್ ಪರೀಕ್ಷೆಗಳಿಗಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Part -Ⅳ): Multiple Choice Questions and Answers for IAS / KAS examinations.
━━━━━━━━━━━━━━━━━━━━━━━━━━━━━━━━━━━━━━━━━━━━━

★ಸಾಮಾನ್ಯ ಅಧ್ಯಯನಕ್ಕಾಗಿ ಬಹು ಆಯ್ಕೆಯ ಪ್ರಶ್ನೋತ್ತರಗಳು.
(Multiple Choice Questions for General studies)

★ ಸಾಮಾನ್ಯ ಅಧ್ಯಯನ
(General Studies)

— ಆತ್ಮೀಯ ಪರೀಕ್ಷಾರ್ಥಿಗಳೆ, ವಿಶೇಷವಾಗಿ ಐಎಎಸ್ / ಕೆಎಎಸ್ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿಮ್ಮ ಸ್ಪರ್ಧಾಲೋಕ ಬ್ಲಾಗ್ ನಲ್ಲಿ ಕನ್ನಡ ಮಾಧ್ಯಮದಲ್ಲಿ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನು ತಯಾರಿಸಿ ನಿಮ್ಮ ಮುಂದಿಡಲು ಒಂದು ಚಿಕ್ಕ ಪ್ರಯತ್ನ ಕೈಗೊಳ್ಳುತ್ತಿದ್ದೇನೆ. ಮರೀಚಿಕೆಯಾದ ಕನ್ನಡ ಮಾಧ್ಯಮ ಕರ್ನಾಟಕದ ಪರೀಕ್ಷೆಗಳಲ್ಲಷ್ಟೇ ಅಲ್ಲ, ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲೂ ತನ್ನ ಕೀರ್ತಿ ಪತಾಕೆ ಹರಾಡಿಸಬೇಕೆಂಬ ಧ್ಯೇಯ ಹೊಂದಿರುವ ಪರೀಕ್ಷಾರ್ಥಿಗಳಿಗಾಗಿ ಸಹಕಾರಿಯಾಗಲು ಈ ನನ್ನದೊಂದು ಚಿಕ್ಕ ಪ್ರಯತ್ನ.
— ದಯವಿಟ್ಟು ತಪ್ಪಿದ್ದಲ್ಲಿ ಕ್ಷಮೆ ಇರಲಿ.
— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.

●..... ಮುಂದುವರೆದ ಭಾಗ.


46) ಸೂರ್ಯನಿಂದ ಬರುವ ನೇರಳಾತೀತ ಕಿರಣಗಳ (ಯುವಿ) ಕುರಿತು ಈ ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ.
 (i) ಓಜೋನ್ ಪದರ ನೇರಳಾತೀತ ಕಿರಣಗಳನ್ನು (ಯುವಿ) ಭೂಮಿಗೆ ಬರದಂತೆ ಪೂರ್ಣವಾಗಿ ತಡೆದಿಟ್ಟುಕೊಳ್ಳುತ್ತದೆ.
 (ii) ಇವು ಮನುಷ್ಯನ ಚರ್ಮದ ಮೇಲೆ ಬಿದ್ದರೆ, ಅಲ್ಲಿನ ಜೀವಕೋಶ ಕಾರ್ಯ ನಿಲ್ಲಿಸಿಬಿಡುತ್ತದೆ ಅಥವಾ ಡಿಎನ್ಎ ಮಾಹಿತಿಯನ್ನು ಅಳಿಸಿಹಾಕಿಬಿಡುತ್ತದೆ.
 (iii) ನೇರಳಾತೀತ ಕಿರಣಗಳು ಜಲಚರ ಏಕ ಕೋಶ ಜೀವಿಗಳಿಗೂ ಮಾರಕ.
(iv) ನೇರಳಾತೀತ ಕಿರಣದಿಂದ ಅನಾಹುತಕ್ಕೆ ಒಳಗಾದ ದೇಹದಲ್ಲಿರುವ ಕೋಶಗಳು ಚರ್ಮ ಕ್ಯಾನ್ಸರ್ ಆಗಿ ಮಾರ್ಪಡುತ್ತದೆ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ) (ii) ಮಾತ್ರ.
(ಬಿ) (iii) ಮಾತ್ರ.
(ಸಿ) (ii) ಮತ್ತು (iii) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


47) ಜಾಗತಿಕ ಅರ್ಥ ವ್ಯವಸ್ಥೆಯು ಮತ್ತೊಮ್ಮೆ 1930ರಲ್ಲಿ ಕಂಡಂತಹ ಆರ್ಥಿಕ ಕುಸಿತ ಪುನರಾವರ್ತನೆಯಾಗುವ ಸಾಧ್ಯತೆ ಕುರಿತು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ರಘುರಾಂ ರಾಜನ್ ಎಚ್ಚರಿಕೆ ನೀಡಲು ಪ್ರಮುಖ ಕಾರಣಗಳೆಂದರೆ...
(i) ಜಗತ್ತಿನ ಪ್ರಬಲ ರಾಷ್ಟ್ರಗಳ ಕೇಂದ್ರ ಬ್ಯಾಂಕ್‌ಗಳು ತೆಗೆದುಕೊಳ್ಳುತ್ತಿರುವ ಸ್ಪರ್ಧಾತ್ಮಕ ಹಣಕಾಸು ನೀತಿ ಕ್ರಮಗಳು
(ii) ಅಂತಾರಾಷ್ಟ್ರೀಯ ಜಾಗತಿಕ ಅರ್ಥ ವ್ಯವಸ್ಥೆಯ ಬಾಹ್ಯ ಸವಾಲುಗಳನ್ನು ಎದುರಿಸಲು ಭಾರತದಂತಹ ರಾಷ್ಟ್ರಗಳು ಶಕ್ತವಾಗದಿರುವುದು.
(iii) ಐರೋಪ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಮೂಲ ಸೌಕರ್ಯಗಳಲ್ಲಿ ಅತಿಯಾದ ಹೂಡಿಕೆ ಮಾಡುತ್ತಿರುವುದು
(iv) ಉದಯೋನ್ಮುಖ ರಾಷ್ಟ್ರಗಳ ಮಾರುಕಟ್ಟೆ ಮೇಲೆ ಜಾಗತಿಕ ಪ್ರಬಲ ರಾಷ್ಟ್ರಗಳ ಹಣಕಾಸು ನೀತಿ ಕ್ರಮಗಳಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳು.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
ಎ) (i) ಮಾತ್ರ.
(ಬಿ) (ii) ಮತ್ತು (iii) ಮಾತ್ರ.
(ಸಿ) (iii) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಸಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


48) ಭೂಮಿಯ ರಕ್ಷಾಕವಚ ಓಜೋನ್ ಕುರಿತು ಈ ವಿವರಣೆಗಳನ್ನು ಪರಿಶೀಲಿಸಿ
(i) ಓಜೋನ್ ಮೂರು ಆಮ್ಲಜನಕ ಅಣುಗಳಿಂದ ಮಾಡಲ್ಪಟ್ಟಿದೆ. ಓಜೋನಿನ ಸಾಂದ್ರತೆ ಅತಿ ಹೆಚ್ಚಾಗಿರುತ್ತದೆ.
 (ii) ಬಣ್ಣರಹಿತ ಅನಿಲ. ಆದರೆ ಸಾಂದ್ರೀಕರಿಸಿದರೆ ತೆಳು ನೀಲ ಬರುತ್ತದೆ.
 (iii) ಸಿ.ಎಫ್.ಸಿ (ಕ್ಲೋರೋಫ್ಲೂರೋಕಾರ್ಬನ್) ಗಳ ಆಯಸ್ಸು 20 ರಿಂದ 100 ವರ್ಷಗಳು
 (iv) ಓಜೋನ್ ಪ್ರಮಾಣವನ್ನು ಅಳೆಯುವ ಏಕಮಾನಕ್ಕೆ ಡಬ್ಸನ್ ಎಂದು ಹೆಸರಿಟ್ಟಿದ್ದಾರೆ.

—ಈ ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
(ಎ) (i) ಮತ್ತು (ii) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


49) (i) ಲಂಡನ್ ನಗರವನ್ನು ' ಆಧುನಿಕ ಬ್ಯಾಬಿಲೋನ್' ಎಂದು ಕರೆಯುತ್ತಾರೆ.  
(ii) 'ಜಗತ್ತಿನ ಶ್ರೀಮಂತ ಕರಾವಳಿ' ಎಂದು ಕೋಸ್ಟರಿಕ ಗೆ ಕರೆಯುತ್ತಾರೆ.  

— ಸಂಕೇತಗಳು.
(ಎ)(i) ಮಾತ್ರ ಸರಿ.
(ಬಿ) (ii) ಮಾತ್ರ ಸರಿ.
 (ಸಿ) ಎರಡೂ ಸರಿ.
(ಡಿ) ಯಾವುದೂ ಅಲ್ಲ.

ಉತ್ತರ: (ಸಿ).

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


50) ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ.
(i). ಗೌತಮ್ ಬುದ್ಧನನ್ನು ಶಕ್ಯಮುನಿ ಎಂದು ಕರೆಯಲಾಗುತ್ತದೆ.
(ii). ಗೌತಮ್ ಬುದ್ಧನು ಕುಂದಗ್ರಾಮದಲ್ಲಿ ಜನಿಸಿದನು.

— ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿವೆ ?.
(ಎ)(i) ಮಾತ್ರ ಸರಿ.
(ಬಿ) (ii) ಮಾತ್ರ ಸರಿ.
(ಸಿ) ಎರಡೂ ಸರಿ.
(ಡಿ) ಯಾವುದೂ ಅಲ್ಲ.

ಉತ್ತರ: (i) ಮಾತ್ರ ಸರಿ.

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


51) ವಿಟಾಮಿನ್ (ಜೀವಸತ್ವಗಳು) ಕುರಿತು ಯಾವುದು ತಪ್ಪಾಗಿದೆ?
(i) ನೀರಿನಲ್ಲಿ ಕರಗುವ ವಿಟಮಿನಗಳು ಬಿ
(ii) ಕೊಬ್ಬಿನಲ್ಲಿ ಕರಗುವ ವಿಟಾಮಿನ್ ಗಳು ಎ.ಡಿ.ಇ.ಕೆ
(iii) ವಿಟಾಮಿನ್ ಡಿ ಯನ್ನು ನೇರಳಾತೀತ ಕಿರಣಗಳಿಂದ ತಯಾರಿಸುತ್ತಾರೆ.

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ)(ii) ಮತ್ತು (iii) ಮಾತ್ರ. .
(ಡಿ) ಯಾವುದೂ ಅಲ್ಲ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


52) ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ರೆಪೋ ರೇಟ್ (Repo Rate) ಎಂದರೆ..
(i) ಆರ್.ಬಿ.ಅಯ್.ನವರು ಬ್ಯಾಂಕುಗಳಿಗೆ ನೀಡುವ ಸಾಲದ ಬಡ್ಡಿ ದರ.
(ii) ಒಂದು ವೇಳೆ ರೆಪೋ ದರ ಕಡಿಮೆ ಇದ್ದಲ್ಲಿ ಬ್ಯಾಂಕ್ ಗಳು ಹೆಚ್ಚಿನ ದುಡ್ಡನ್ನು ಆರ್.ಬಿ.ಅಯ್.ನಿಂದ ಪಡೆದು ಜನರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ.
(iii) ರೆಪೋ ದರ ಹೆಚ್ಚಾದಲ್ಲಿ ನಾವು ಬ್ಯಾಂಕ್ ನಲ್ಲಿ ಇಡುವ ಹಣಕ್ಕೆ ಕೊಡುವ ಬಡ್ಡಿಯ ದರವೂ ಹೆಚ್ಚುತ್ತದೆ.
(iv) ರೆಪೋ ದರ ಕಡಿಮೆ ಸಮಯದ ಅಂತರದಲ್ಲಿ ಹೆಚ್ಚು ಕಡಿಮೆಯಾಗುವುದರಿಂದ ಬ್ಯಾಂಕ್ ಗಳು ಇಂತಹ ನಿರ್ದಾರಗಳನ್ನು ಸಾಲದ ಮೇಲಿನ ಬಡ್ಡಿಏರಿಸುವಷ್ಟು ಬೇಗ ತೆಗೆದುಕೊಳುವುದಿಲ್ಲ.

— ಸಂಕೇತಗಳು.
(ಎ) (i) ಮತ್ತು (ii) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಮೇಲಿನೆಲ್ಲವೂ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


53) ಜೀವ ವೈವಿದ್ಯ ( biological diversity) ದಿನಾಚರಣೆ ಯಾವಾಗ ಆಚರಿಸುತ್ತಾರೆ?
1. ಮಾರ್ಚ್ 25
2. ಮೇ 22
3. ಜೂನ್ 22
4. ಏಪ್ರಿಲ್ 22

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
(ಡಿ) (iv) ಮಾತ್ರ.

ಉತ್ತರ: (ಬಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


54) ಕರ್ನಾಟಕದ ವಿಶ್ವವಿದ್ಯಾನಿಲಯಗಳು ಹಾಗೂ ಅವುಗಳ ಧ್ಯೇಯವಾಕ್ಯಗಳ ಕುರಿತ ಈ ಕೆಳಕಂಡ ಹೇಳಿಕೆಗಳಲ್ಲಿ ಯಾವುದು ತಪ್ಪಾಗಿದೆ?
(i) ಮೈಸೂರು ವಿಶ್ವವಿದ್ಯಾನಿಲಯ -••••••(ಮೈಸೂರು) •••••••- ನ ಹಿ ಜ್ಞಾನೇನ ಸದೃಶ್ಯಂ
(ii) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ -•••••• (ಮೈಸೂರು) ••••••-ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ .
(iii) ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ -•••••• (ವಿಜಾಪುರ) ••••••-ಸ್ತೀ ಶಿಕ್ಷಣ ಸರ್ವಶಿಕ್ಷಣ
(iv) ಕನ್ನಡ ವಿಶ್ವವಿದ್ಯಾನಿಲಯ -••••••  (ಹಂಪಿ) ••••••-ಮಾತೆಂಬುದು ಜ್ಯೋತಿರ್ಲಿಂಗ

— ಸಂಕೇತಗಳು.
(ಎ) (i) ಮಾತ್ರ.
(ಬಿ) (i) ಮತ್ತು (iii) ಮಾತ್ರ.
 (ಸಿ) (i) ಮತ್ತು (iv) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧

55) ಮೋಟಾರು ವಾಹನದಲ್ಲಿ ರೇಡಿಯೇಟರ್ ನ್ನು ತಂಪಾಗಿಸಲು ನೀರು ತಂಪುಕಾರಿ ಎಂದು ಆದ್ಯತೆ ಕೊಡಲಾಗುತ್ತದೆ ಏಕೆಂದರೆ..
1.ಕಡಿಮೆ ಸಾಂದ್ರತೆ ಇರುವುದರಿಂದ.
2.ಹೆಚ್ಚು ಉಷ್ಣದಾರಕತೆ ಇರುವುದರಿಂದ.
3.ಕುದಿಯುವ ಬಿಂದು ಕಡಿಮೆ ಇರುವುದರಿಂದ.
4.ಸುಲಭವಾಗಿ ದೊರೆಯುವುದರಿಂದ.

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
 (ಡಿ) (iv) ಮಾತ್ರ.

ಉತ್ತರ: (ಬಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


56) ಸಂವಿಧಾನದ 20 ನೇ ವಿಧಿಯ ಪ್ರಾಮುಖ್ಯತೆ ಕುರಿತು ಈ ಕೆಳಗಿನ ವಿವರಣೆಗಳಲ್ಲಿ ಯಾವುದು ತಪ್ಪಾಗಿದೆ?.
(i) ಈ ವಿಧಿಯ ಪ್ರಕಾರ ಒಬ್ಬ ವ್ಯಕ್ತಿಗೆ ಒಂದೇ ಅಪರಾಧಕ್ಕಾಗಿ ಒಂದಕ್ಕಿಂತ ಹೆಚ್ಚು ಬಾರಿ ಶಿಕ್ಷೆ ವಿಧಿಸುವಂತಿಲ್ಲ.
(ii) ಒಂದು ಕೃತ್ಯವನ್ನು ಎಸಗುವ ಸಂದರ್ಭದಲ್ಲಿ ಜಾರಿಯಲ್ಲಿರುವ ಕಾನೂನನ್ನು ಉಲ್ಲಂಘಿಸಿದರೆ ಮಾತ್ರ ಶಿಕ್ಷೆ ನೀಡಬೇಕು. ಅಂದರೆ ಹಿಂದೆ ಜಾರಿಯಲ್ಲಿರುವ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಶಿಕ್ಷಿಸುವಂತಿಲ್ಲ
(iii) ಒಬ್ಬ ವ್ಯಕ್ತಿಯನ್ನು ತನ್ನ ವಿರುದ್ಧವೇ ಸಾಕ್ಷಿ ಹೇಳುವಂತೆ ಒತ್ತಾಯಿಸುವಂತಿಲ್ಲ.

— ಸಂಕೇತಗಳು.
(ಎ) (i) ಮಾತ್ರ.
(ಬಿ)(ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
 (ಡಿ) ಯಾವುದೂ ಅಲ್ಲ.

ಉತ್ತರ : (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


57) ಔಷಧಿ ಭಾಗ್ಯ' ದ ಕುರಿತು ಈ ಕೆಳಗಿನ ವಿವರಣೆಗಳಲ್ಲಿ ಯಾವುದು ತಪ್ಪಾಗಿದೆ?.
(i) ಸರ್ಕಾರಿ ಅಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಮಾರಣಾಂತಿಕ ಕಾಯಿಲೆಗಳಿಗೆ ಕಡಿಮೆ ವೆಚ್ಚದಲ್ಲಿ ಔಷಧಿಗಳನ್ನು ವಿತರಣೆ ಮಾಡುವುದು
 (ii) ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ರಷ್ಟು ಅನುಪಾತದಲ್ಲಿ ಅನುದಾನ ಒದಗಿಸಲಿವೆ
 (iii) ಸರ್ಕಾರಿ ಒಡೆತನದ ಎಂಎಸ್‌ಐಎಲ್ ಸಂಸ್ಥೆ ಇದರ ನಿರ್ವಾಹಣೆ ಮಾಡಲಿದೆ.
(iv) ಈ ಯೋಜನೆ ಪ್ರಕಾರ ಔಷಧಿಗಳನ್ನು ಖರೀದಿ ಮಾಡುವ ರೋಗಿಗಳು ಶೇ.25ರಷ್ಟು ಹಣವನ್ನು ಪಾವತಿ ಮಾಡಿದರೆ ಸಾಕು, ಉಳಿದ ಶೇ.75ರಷ್ಟು ಹಣವನ್ನು ಸರ್ಕಾರವೇ ಭರಿಸುತ್ತದೆ.

— ಸಂಕೇತಗಳು.
ಎ) (i) ಮತ್ತು (ii) ಮಾತ್ರ.
(ಬಿ) (i), (ii) ಮತ್ತು (iii) ಮಾತ್ರ.
(ಸಿ) (i), (iii) ಮತ್ತು (iv) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ: (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


58) 2011ರ ರಾಜ್ಯ ಜನಗಣತಿ ನಿರ್ದೇಶನಾಲಯದ ಪ್ರಾಥಮಿಕ ವರದಿ ಪ್ರಕಾರ ಈ ಕೆಳಗಿನ ವಿವರಣೆಗಳಲ್ಲಿ ಯಾವುದು ತಪ್ಪಾಗಿದೆ?.
(i) ಕಳೆದ ಒಂದು ದಶಕದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ, ಜನಸಂಖ್ಯೆ ಏರಿಕೆ ದರದಲ್ಲಿ ಕುಸಿತ ಕಂಡಿದೆ.
(ii) ಲಿಂಗಾನುಪಾತ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿದ್ದು, ಸಾಕ್ಷರತೆ ಗಣನೀಯ ಚೇತರಿಕೆ ಕಂಡಿದೆ.
(iii) ಕೊಡುಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊತರು ಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳು 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ.

— ಸಂಕೇತಗಳು.
(ಎ) (i) ಮಾತ್ರ.
(ಬಿ)(ii) ಮತ್ತು (iii) ಮಾತ್ರ.
(ಸಿ) (i) ಮತ್ತು (II) ಮಾತ್ರ.
(ಡಿ) ಯಾವುದೂ ಅಲ್ಲ.

ಉತ್ತರ : (ಡಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


59) ಪ್ರೌನ್ ಹೋಪರ್ (fraun hofer line) ರೇಖೆಗಳು ಎಲ್ಲಿ ಕಾಣಸಿಗುತ್ತವೆ?
(i). ಚಂದ್ರನ ಪರ್ವತಗಳಲ್ಲಿ
(ii). ಸೂರ್ಯನ ಕರೋನದಲ್ಲಿ.
(iii). ಭೂಮಿಯ ಧ್ರುವ ಪ್ರದೇಶದಲ್ಲಿ
(iv). ಗುರುಗ್ರಹದ ಬಳೆಗಳಲ್ಲಿ

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
(ಡಿ) (iv) ಮಾತ್ರ.

ಉತ್ತರ: (ಬಿ)

✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧•┈┈┈┈┈┈┈┈┈•✧


60) ಕೆಳಗಿನವುಗಳಲ್ಲಿ ಯಾವುದು ಗಾಂಧಾರ ಕಲೆಯೊಂದಿಗೆ ಸಂಬಂಧ ಹೊಂದಿದೆ?
(i) ಎಲ್ಲೋರ.
(ii) ಅಜಂತಾ.
(iii) ಖಜುರಾಹೊ.
(iv) ಎಲಿಫೆಂಟಾ.

— ಸಂಕೇತಗಳು.
ಎ) (i) ಮಾತ್ರ.
(ಬಿ) (ii) ಮಾತ್ರ.
(ಸಿ) (iii) ಮಾತ್ರ.
(ಡಿ) (iv) ಮಾತ್ರ.
 
ಉತ್ತರ: ಸಿ



....ಮುಂದುವರೆಯುವುದು.

☀ಹುಲಿ ಯೋಜನೆ: (ಪ್ರಾಜೆಕ್ಟ್ ಟೈಗರ್ )(ಟಿಪ್ಪಣಿ ಬರಹ) (Project Tiger in India) 

☀ಹಲಿ ಯೋಜನೆ: (ಪ್ರಾಜೆಕ್ಟ್ ಟೈಗರ್ )(ಟಿಪ್ಪಣಿ ಬರಹ)
(Project Tiger in India)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಭಾರತದ ಪ್ರಾಕೃತಿಕ ವೈವಿಧ್ಯತೆ.
(Indian Environmental Biodiversity)

★ ಜೀವಿ ವೈವಿಧ್ಯತೆ.
(Biodiversity)


●.ಪ್ರಾಜೆಕ್ಟ್ ಟೈಗರ್ ಯೋಜನೆಯನ್ನು ಭಾರತದಾದ್ಯಂತ 1973 ರಿಂದ 16.339 sq.km ವ್ಯಾಪ್ತಿ ಪ್ರದೇಶದಲ್ಲಿ ಒಂಬತ್ತು ಹುಲಿ ಮೀಸಲುಗಳೊಂದಿಗೆ ಅನುಷ್ಠಾನಗೊಳಿಸಲಾಗಿದೆ. ಪ್ರಸ್ತುತ 27 ಹುಲಿ ಮೀಸಲುಗಳಿದ್ದು, ಇದರ ವ್ಯಾಪ್ತಿ ಪ್ರದೇಶ 37.761 sq.km. ಗೆ ಹೆಚ್ಚಾಗಿದೆ.

●.ಭಾರತ ಸರ್ಕಾರವು ಶೇಕಡಾ 50%ರಷ್ಟು ಆವರ್ತನೀಯ ಬಾಬ್ತನ್ನು ಹಾಗೂ ಶೇಕಡಾ 100%ರಷ್ಟು ಆವರ್ತನೀಯವಲ್ಲದ ಬಾಬ್ತನ್ನು ಒದಗಿಸುತ್ತದೆ.

●.ವಿಶೇಷವಾಗಿ ಕರ್ನಾಟಕದಲ್ಲಿ ಬಂಡೀಪುರ ಹುಲಿ ಮೀಸಲು, ರಾಜೀವ್ ಗಾಂಧಿ (ನಾಗರಹೊಳೆ) ಹುಲಿ ಮೀಸಲು, ಭದ್ರಾ ಹುಲಿ ಮೀಸಲು ಮತ್ತು ಅನ್ಶಿ-ದಾಂಡೇಲಿ ಹುಲಿ ಮೀಸಲು, ಹುಲಿ ಯೋಜನೆ ಅಡಿಯಲ್ಲಿ ಬರುತ್ತವೆ.

●.ಈ ಯೋಜನೆಯ ಅಡಿಯಲ್ಲಿ ಕೈಗೊಳ್ಳುವ ಕಾರ್ಯಗಳು :
— ಹುಲಿ ಸಂರಕ್ಷಣಾ ಪಡೆ,
— ಮಳೆಗಾಲದ ಗಸ್ತು ದಳಗಳನ್ನು ಸ್ಥಾಪಿಸುವುದು,
— ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಮತ್ತು ನಿರ್ವಹಣೆ,
— ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಸಂಘಟಿಸುವುದರ ಮೂಲಕ ಕಳ್ಳಬೇಟೆಯನ್ನು ತಡೆಯುವುದು,
— ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ,
— ವೈರ್ಲೆಸ್ ಸೆಟ್ಗಳ, ವಾಹನಗಳ ನಿರ್ವಹಣೆ,
— ಬೆಂಕಿ ನಿಯಂತ್ರಣದ ಕೆಲಸ,
— ಪ್ರಾಣಿಗಳಿಗೆ ಕುಡಿಯುವ ನೀರು ಒದಗಿಸಲು ನೀರಿನ ಹೊಂಡಗಳನ್ನು ನಿರ್ಮಿಸುವುದು,
— ಪ್ರಚಾರ ಕಾರ್ಯಗಳು,
— ಆವಾಸಸ್ಥಾನ ಅಭಿವೃದ್ಧಿ ಕೆಲಸಗಳು ಹಾಗೂ ಜೈವಿಕ ಪರಿಸರ ಅಭಿವೃದ್ಧಿ ಕೆಲಸಗಳು ಇತ್ಯಾದಿ.

Wednesday 15 July 2015

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು )..ಮುಂದುವರಿದ ಭಾಗ. (Kannada Grammar)

☀ UNIT: Ⅰ) ಸಂಧಿಗಳು: (ಸಂಸ್ಕೃತ ಸಂಧಿಗಳು)..ಮುಂದುವರಿದ ಭಾಗ.
(Kannada Grammar)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಕನ್ನಡ ವ್ಯಾಕರಣ
(Kannada Grammar)


●.೩. ಆದೇಶ ಸಂಧಿ
•┈┈┈┈┈┈┈┈┈┈┈•

— ಇದುವರೆಗೆ ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿಯೋ, ಆಗಮಸಂಧಿಯೋ ಆಗುವ ವಿಚಾರ ನೋಡಿದೆವು.  ಈಗ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ್ಯ ನಡೆಯುವುದೆಂಬುದನ್ನು ತಿಳಿಯೋಣ.

ಮಳೆ + ಕಾಲ = ಮಳೆಗಾಲ (ಮಳೆ + ಗ್‌ಆಲ)
ಚಳಿ + ಕಾಲ = ಚಳಿಗಾಲ (ಚಳಿ +ಗ್‌ಆಲ)
ಬೆಟ್ಟ + ತಾವರೆ = ಬೆಟ್ಟದಾವರೆ (ಬೆಟ್ಟ + ದ್‌ಆವರೆ)
ಕಣ್ + ಕೆಟ್ಟು = ಕಂಗೆಟ್ಟು (ಕಂ + ಗ್‌ಎಟ್ಟು)
ಕಣ್ + ಪನಿ = ಕಂಬನಿ (ಕಂ + ಬ್‌ಅನಿ)
— ಮೇಲಿನ ಉದಾಹರಣೆಗಳಲ್ಲಿರುವ, ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ೨ ನೆಯ ಪದ [ಉತ್ತರಪದ] ದ ಮೊದಲನೆಯ ಕ ಕಾರಕ್ಕೆ ಗ ಕಾರ ಬಂದಿದೆ.

ಚಳಿಗಾಲ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ.
ಬೆಟ್ಟ+ ತಾವರೆ ಎಂಬೆರಡು ಪದಗಳಲ್ಲಿ ೨ ನೆಯ ಪದದ ಮೊದಲಕ್ಷರವಾದ ತ ಕಾರಕ್ಕೆದ ಕಾರ ಬಂದಿದೆ.  [ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ]
ಕಣ್ + ಪನಿ ಎಂಬಲ್ಲಿ ಪ ಕಾರಕ್ಕೆ ಬ ಕಾರ ಬಂದಿದೆ.

— ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು.
★ ಕನ್ನಡ ಸಂಧಿಗಳಲ್ಲಿ ಈ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.
(೧೮) ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು.

— ಹಾಗಾದರೆ ಎಲ್ಲೆಲ್ಲಿ ಈ ಆದೇಶಸಂಧಿಯಾಗುವುದು? ಯಾವ ಅಕ್ಷರಕ್ಕೆ ಯಾವ ಅಕ್ಷರ ಆದೇಶವಾಗಿ ಬರುವುದು? ಎಂಬುದನ್ನು ವಿವರವಾಗಿ ತಿಳಿಯೋಣ.

★ (i) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಕ ತ ಪ ವ್ಯಂಜನಗಳಿಗೆ ಕ್ರಮವಾಗಿ ಗ ದ ಬ ವ್ಯಂಜನಗಳು ಆದೇಶವಾಗಿ ಬರುವುವು.
ಉದಾಹರಣೆಗೆ:-
ಹುಲ್ಲು + ಕಾವಲು=*ಹುಲ್ಲು + ಗ್ ಆವಲು=ಹುಲ್ಲುಗಾವಲು
(ಕಕಾರಕ್ಕೆ ಗಕಾರಾದೇಶ)
ಹಳ + ಕನ್ನಡ=ಹಳ + ಗ್ ಅನ್ನಡ=ಹಳಗನ್ನಡ
(ಕಕಾರಕ್ಕೆ ಗಕಾರಾದೇಶ)
ಕಳೆ + ಕೂಡಿ=ಕಳೆ + ಗ್ ಊಡಿ=ಕಳೆಗೂಡಿ
(ಕಕಾರಕ್ಕೆ ಗಕಾರಾದೇಶ)
ಎಳೆ+ ಕರು=ಎಳೆ + ಗ್ ಅರು=ಎಳೆಗರು
(ಕಕಾರಕ್ಕೆ ಗಕಾರಾದೇಶ)
ಮನೆ + ಕೆಲಸ=ಮನೆ + ಗ್ ಎಲಸ=ಮನೆಗೆಲಸ
(ಕಕಾರಕ್ಕೆ ಗಕಾರಾದೇಶ)
ಮೈ+ ತೊಳೆ=ಮೈ + ದ್ ಒಳೆ=ಮೈದೊಳೆ
(ತಕಾರಕ್ಕೆ ದಕಾರಾದೇಶ)
ಮೇರೆ + ತಪ್ಪು=ಮೇರೆ + ದ್ ಅಪ್ಪು=ಮೇರೆದಪ್ಪು
(ತಕಾರಕ್ಕೆ ದಕಾರಾದೇಶ)
ಕಣ್+ ಪನಿ=ಕಣ್ + ಬ್ ಅನಿ=ಕಂಬನಿ
(ಪಕಾರಕ್ಕೆ ಬಕಾರಾದೇಶ)
ಬೆನ್ + ಪತ್ತು=ಬೆನ್ + ಬ್ ಅತ್ತು=(ಬೆಂಬತ್ತು)
(ಪಕಾರಕ್ಕೆ ಬಕಾರಾದೇಶ)
ಕೆಲವು ಕಡೆ ಈ ಆದೇಶಗಳು ಬಾರದೆ ಇರುವುದೂ ಉಂಟು
ಮನೆ + ಕಟ್ಟು     =        ಮನೆಕಟ್ಟು
ತಲೆ + ಕಟ್ಟು      =        ತಲೆಕಟ್ಟು

★ (ii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಪ ಬ ಮ ವ್ಯಂಜನಗಳಿಗೆ ವ ಕಾರವು ಆದೇಶವಾಗಿ ಬರುವುದು
ಉದಾಹರಣೆಗೆ:-
ನೀರ್ + ಪೊನಲ್=ನೀರ್ + ವ್ ಒನಲ್ = ನೀರ‍್ವೊನಲ್
(ಪಕಾರಕ್ಕೆ ವಕಾರಾದೇಶ)
ಎಳ+ ಪೆರೆ=ಎಳ + ವ್ ಎರೆ = ಎಳವರೆ
(ಪಕಾರಕ್ಕೆ ವಕಾರಾದೇಶ)
ಬೆಮರ್ + ಪನಿ=ಬೆಮರ್ + ವ್ ಅನಿ = ಬೆಮರ್ವನಿ
(ಪಕಾರಕ್ಕೆ ವಕಾರಾದೇಶ)
ಬೇರ್ + ಬೆರಸಿ=ಬೇರ್ + ವ್ ಎರಸಿ = ಬೇರ‍್ವೆರಸಿ
(ಬಕಾರಕ್ಕೆ ವಕಾರಾದೇಶ)
ಕಡು + ಬೆಳ್ಪು=ಕಡು + ವ್ ಎಳ್ಪು =  ಕಡುವೆಳ್ಪು
(ಬಕಾರಕ್ಕೆ ವಕಾರಾದೇಶ)
ಎಳ + ಬಳ್ಳಿ=ಎಳ + ವ್ ಅಳ್ಳಿ = ಎಳವಳ್ಳಿ
(ಬಕಾರಕ್ಕೆ ವಕಾರಾದೇಶ)
ಮೆಲ್ + ಮಾತು=ಮೆಲ್ + ವ್ ಆತು = ಮೆಲ್ವಾತು
(ಮಕಾರಕ್ಕೆ ವಕಾರಾದೇಶ)
ನೆಲೆ + ಮನೆ=ನೆಲೆ + ವ್ ಅನೆ = ನೆಲೆವನೆ
(ಮಕಾರಕ್ಕೆ ವಕಾರಾದೇಶ)

— ಇದರ ಹಾಗೆ…….ಕಿಸುವಣ್, ಎಸರ‍್ವೊಯ್ದು, ಚೆಲ್ವೆಳಕು, ಕೆನೆವಾಲ್, ಕೈವಿಡಿ, ನೆರೆವೀದಿ, ಪೊರೆವೀಡು ಇತ್ಯಾದಿಗಳಲ್ಲಿ ವಕಾರಾದೇಶ ಬಂದಿರುವುದನ್ನು ಗಮನಿಸಿರಿ.

ಈ ಆದೇಶವು ಕೆಲವು ಕಡೆ ಬರುವುದಿಲ್ಲ.
ಅದಕ್ಕೆ ಉದಾಹರಣೆ:-
ಕಣ್ + ಬೇಟ = ಕಣ್ಬೇಟ (ಕಣ್ವೇಟ ಆಗುವುದಿಲ್ಲ)
ಕಿಳ್ + ಪೊಡೆ = ಕಿಳ್ಪೊಡೆ (ಕಿಳ್ವೊಡೆ ಆಗುವುದಿಲ್ಲ)
ಪಾಳ್ + ಮನೆ = ಪಾಳ್ಮನೆ (ಪಾಳ್ವನೆ ಆಗುವುದಿಲ್ಲ)

★ (iii) ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ ಸಕಾರಕ್ಕೆ ಸಾಮಾನ್ಯವಾಗಿ ಕೆಲವು ಕಡೆ ಚಕಾರವೂ, ಕೆಲವು ಕಡೆ ಜಕಾರವೂ, ಕೆಲವು ಕಡೆ ಛಕಾರವೂ ಆದೇಶವಾಗಿ ಬರುವುದುಂಟು. ಆದರೆ ಪೂರ್ವಪದದ ಕೊನೆಯಲ್ಲಿ ಯ್, ಲ್ ಗಳು ಇರಬಾರದು.
ಉದಾಹರಣೆಗೆ:-
(೧) ಸಕಾರಕ್ಕೆ ಚಕಾರ ಬರುವುದಕ್ಕೆ__ಇನ್ + ಸರ = ಇನ್ + ಚ್ ಅರ = ಇಂಚರ
ನುಣ್ + ಸರ = ನುಣ್ + ಚ್ ಅರ = ನುಣ್ಚರ

(೨) ಸಕಾರಕ್ಕೆ ಜಕಾರ ಬರುವುದಕ್ಕೆ__ಮುನ್ + ಸೆರಂಗು = ಮುನ್ + ಜ್ ಎರಂಗು = ಮುಂಜೆರಂಗು
ಮುನ್ + ಸೊಡರ್ = ಮುನ್ + ಜ್ ಒಡರ್ = ಮುಂಜೊಡರ್
ತಣ್ + ಸೊಡರ್ = ತಣ್ + ಜ್ ಒಡರ್ = ತಣ್ಜೊಡರ್

(೩) ಸಕಾರಕ್ಕೆ ಛಕಾರ ಬರುವುದಕ್ಕೆ__
ಇರ್ + ಸಾಸಿರ = ಇರ್ + ಛ್ ಆಸಿರ = ಇರ್ಚ್ಛಾಸಿರ
ಪದಿನೆಣ್ + ಸಾಸಿರ = ಪದಿನೆಣ್ + ಛ್ ಆಸಿರ = ಪದಿನೆಣ್ಛಾಸಿರ
ನೂರ್ + ಸಾಸಿರ = ನೂರ್ + ಛ್ ಆಸಿರ = ನೂರ್ಛಾಸಿರ

— ಕೆಲವು ಕಡೆ ಈ ಸಕಾರಕ್ಕೆ ಯಾವ ಆದೇಶಗಳೂ ಬಾರದಿರುವುದುಂಟು.
ಬಾಯ್ + ಸವಿ = ಬಾಯ್ಸವಿ, ಬೆಳ್ಸರಿ, ಕಣ್ಸೋಲ, ಕಣ್ಸ್‌ವಿ, ಮೆಲ್ಸರ, ಮೆಯ್ಸವಿ, ಬಲ್ಸೋನೆ.

[1] ‘ಕಾ’ ಎಂಬುದು ‘ರಕ್ಷಣೆ ಮಾಡು’ ಎಂಬರ್ಥದಲ್ಲಿ ಏಕಾಕ್ಷರಧಾತು.  ಹೊಸಗನ್ನಡದಲ್ಲಿ ‘ಕಾ’ ಧಾತು ‘ಕಾಯ್’ ಆಗುವುದೆಂದು ಕೆಲವರು ಒಪ್ಪುತ್ತಾರೆ.

[2] ಮೀ ಎಂಬುದೂ ಕೂಡ ಸ್ನಾನಮಾಡು ಎಂಬರ್ಥದ ಕನ್ನಡ ಏಕಾಕ್ಷರ ಧಾತು.

[3] ಮೇ ಎಂಬುದೂ ಕೂಡ ಪಶುಗಳ ಆಹಾರ ಭಕ್ಷಣೆಯ ಅರ್ಥದಲ್ಲಿ ಏಕಾಕ್ಷರ ಧಾತುವಾಗಿದೆ.

[4] ಆ ಶಬ್ದವೆಂದರೆ, ಕೆಲವು ಕಡೆ ಅವನು, ಅವಳು, ಅದು ಎಂಬ ಸರ್ವನಾಮಗಳಿಗೆ ಆ ಎಂಬುದು ಆದೇಶವಾಗಿ ಬರುವುದು.  ಹಾಗೆ ಆದೇಶವಾಗಿ ಬಂದ ಆಕಾರವೇ ಆ ಶಬ್ದವೆನಿಸುವುದು.

ಉದಾ.:-ಅವನು+ಗಂಡಸು= ಆ ಗಂಡಸು; ಅವಳು+ಹೆಂಗಸು=ಆ ಹೆಂಗಸು; ಅದು+ಕಲ್ಲು= ಆ ಕಲ್ಲು ಇದರಂತೆ ಕೆಲವು ಕಡೆ – ಇವನು+ಗಂಡಸು=ಈ ಗಂಡಸು; ಇವಳು+ಹೆಂಗಸು=ಈ ಹೆಂಗಸು; ಇದು+ಕಲ್ಲು=ಈ ಕಲ್ಲು – ಇತ್ಯಾದಿ ಕಡೆಗಳಲ್ಲಿ ಇವನು, ಇವಳು, ಇದು ಎಂಬುದಕ್ಕೆ ಈ ಆದೇಶವಾಗಿ ಬಂದರೆ ಇದನ್ನು ಈ ಶಬ್ದವೆನ್ನುವರು.

[5] ಎರಡು ಪದಗಳಲ್ಲಿ ಮೊದಲನೆಯ ಪದ ಪೂರ್ವಪದ; ಎರಡನೆಯ ಪದ ಉತ್ತರಪದ.  ಸಮಾಸದಲ್ಲಿ ಹೀಗೆ ಹೇಳುವುದು ವಾಡಿಕೆ.  ಮಳೆಯ + ಕಾಲ-ಎಂಬೆರಡು ಪದಗಳಲ್ಲಿ ಮಳೆಯ ಎಂಬುದು ಪೂರ್ವಪದ; ಕಾಲ ಎಂಬುದು ಉತ್ತರ ಪದ ಹೀಗೆ ತಿಳಿಯಬೇಕು

[6] ಸಮಾಸ ಎಂದರೇನು? ಎಂಬುದನ್ನು ಮುಂದೆ ಸಮಾಸ ಪ್ರಕರಣ ಎಂಬ ಹೆಸರಿನ ಭಾಗದಲ್ಲಿ ವಿವರಿಸಿದೆ.  ಆಗ ಸ್ಪಷ್ಟವಾಗಿ ತಿಳಿದುಬರುವುದು.  ಈಗ ಸಂಧಿಕಾರ‍್ಯಗಳನ್ನಷ್ಟು ಗಮನಿಸಿದರೆ ಸಾಕು.
* ಇಲ್ಲಿ ಹುಲ್ಲು + ಕಾವಲು-ಎಂಬಲ್ಲಿ ಹುಲ್ಲು + ಕ್ + ಆವಲು = ಹುಲ್ಲುಗ್‌ಆವಲು = ಹುಲ್ಲುಗಾವಲು ಎಂದು ಕ್ ವ್ಯಂಜನಕ್ಕೆ ಗ್ ವ್ಯಂಜನ ಬಂದಿದೆ ಎಂದು ತಿಳಿಯಬೇಕು.  ಇದರಂತೆ ಉಳಿದವುಗಳನ್ನೂ ತಿಳಿಯಬೇಕು.

[7] ಪ ಬ ಮ ವ್ಯಂಜನಗಳಿಗೆ ಎಂದರೆ ಪ್, ಬ್, ಮ್‌ಗಳಿಗೆ ಎಂದೂ, ವಕಾರವೆಂದರೆ ವ್ ಎಂಬ ವ್ಯಂಜನವೆಂದೂ ತಿಳಿಯಬೇಕು.  ಉಚ್ಚಾರಣೆಯ ಸೌಲಭ್ಯ ದೃಷ್ಟಿಯಿಂದ ಪ ಬ ಮ ವ-ಇತ್ಯಾದಿ ಬರೆದಿದೆ.  ಆದೇಶ ಬರುವುದು ಕೇವಲ ವ್ಯಂಜನಾಕ್ಷರಕ್ಕೇ ಎಂದು ಎಲ್ಲ ಕಡೆಗೂ ತಿಳಿಯಬೇಕು.


●.ಪ್ರಕೃತಿ ಭಾವ
ಇದುವರೆಗೆ ಕನ್ನಡದ ಸಂಧಿಗಳಾದ ಲೋಪ, ಆಗಮ, ಆದೇಶ ಸಂಧಿಗಳ ವಿಚಾರವಾಗಿ ತಿಳಿದಿರಿ. ಸ್ವರದ ಮುಂದೆ ಸ್ವರ ಬಂದರೆ ಲೋಪ ಅಥವಾ ಆಗಮಗಳಲ್ಲಿ ಯಾವುದಾದ ರೊಂದು ಸಂಧಿಯಾಗಬೇಕು ಎಂದು ಹಿಂದೆ ಹೇಳಲಾಯಿತು.

— ಆದರೆ ಈ ಕೆಳಗಿನ ಕೆಲವು ಉದಾಹರಣೆ ನೋಡಿರಿ:-
ಅಹಹಾ+ ಎಷ್ಟು ಚೆನ್ನಾಗಿದೆ?
ಅಯ್ಯೋ+ ಇದೇನು?
ಓಹೋ+ ಇದೇನು?
ಓಹೋ+ ಅವನು ಬಂದನೇ?
ಅಕ್ಕಾ + ಇತ್ತ ಬಾ

— ಮೇಲಿನ ನಾಲ್ಕು ವಾಕ್ಯಗಳನ್ನು ನೋಡಿರಿ.

 ಅಹಹಾ + ಎಷ್ಟು ಚೆನ್ನಾಗಿದೆ, ಆ ಕಾರಕ್ಕೆ (ಹ್ ವ್ಯಂಜನದ ಮುಂದಿನ ಆಕಾರಕ್ಕೆ) ಎ ಕಾರ ಪರವಾಗಿದೆ (ಎದುರಿಗೆ ಬಂದಿದೆ).
— ಹಿಂದೆ ಹೇಳಿದ ನಿಯಮದ ಪ್ರಕಾರ ಇಲ್ಲಿ ಯಕಾರಾಗಮವಾಗಬೇಕಾಗಿತ್ತಲ್ಲವೆ? ಅದರಂತೆ, ಅಯ್ಯೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ.

ಓಹೋ + ಇದೇನು ಎಂಬಲ್ಲಿ ಓ ಕಾರದ ಮುಂದೆ ಇ ಕಾರ ಬಂದಿದೆ, ಅಕ್ಕಾ + ಇತ್ತ ಎಂಬಲ್ಲಿಯೂ ಆ ಕಾರದ ಮುಂದೆ ಇ ಕಾರ ಬಂದಿದೆ.
— ಈ ನಾಲ್ಕೂ ಕಡೆಯಲ್ಲೂ ಸ್ವರದ ಮುಂದೆ ಸ್ವರ ಬಂದಿದ್ದರೂ ಲೋಪವನ್ನಾಗಲಿ, ಆಗಮವನ್ನಾಗಲಿ ಮಾಡಲೇಬಾರದು.  ಅವು ಹೇಗಿವೆಯೋ ಹಾಗೇ ಬಿಡಬೇಕು.  ಹೀಗೆ ಇದ್ದ ರೀತಿಯಲ್ಲೇ ಇರುವುದಕ್ಕೆ ಪ್ರಕೃತಿಭಾವ ಎಂದು ವ್ಯಾಕರಣದಲ್ಲಿ ಹೇಳುತ್ತಾರೆ.

★ ಆದ್ದರಿಂದ ಪ್ರಕೃತಿ ಭಾವಕ್ಕೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು:-
(೧೯) ಸ್ವರದ ಮುಂದೆ ಸ್ವರವು ಬಂದರೂ, ಕೆಲವು ಕಡೆಗಳಲ್ಲಿ ಲೋಪ, ಆಗಮ ಮೊದಲಾದ ಸಂಧಿಕಾರ‍್ಯಗಳಾಗದೆ ಇದ್ದ ಹಾಗೆಯೇ ಇರುವುದಕ್ಕೆ ಪ್ರಕೃತಿ ಭಾವವೆನ್ನುವರು.

●.ಹಾಗಾದರೆ ಎಂಥ ಕಡೆ ಈ ಪ್ರಕೃತಿಭಾವ ಬರುವುದೆಂಬುದನ್ನು (ಸಂಧಿಕಾರ‍್ಯವಾಗದಿರು ವಿಕೆಯನ್ನು) ಗಮನಿಸಿರಿ:-

(i) ಪ್ಲುತಸ್ವರಗಳ ಮುಂದೆ ಸ್ವರಪರವಾದರೆ ಸಂಧಿಕಾರ‍್ಯ ಮಾಡಬಾರದು (ಪ್ರಕೃತಿಭಾವ ಬರುವುದು).
ಅಣ್ಣಾ(೩)+ಇತ್ತಬಾ=ಅಣ್ಣಾ, ಇತ್ತ ಬಾ
ದೇವರೇ(೩)+ಇನ್ನೇನು ಗತಿ=ದೇವರೇ, ಇನ್ನೇನು ಗತಿ
ಅಮ್ಮಾ(೩)+ಅದುಬೇಕು=ಅಮ್ಮಾ, ಅದು ಬೇಕು
ರಾಮಾ(೩)+ಅಲ್ಲಿ ನೋಡು=ರಾಮಾ, ಅಲ್ಲಿ ನೋಡು
ಗುರುವೇ(೩)+ಉದ್ಧರಿಸು=ಗುರುವೇ, ಉದ್ಧರಿಸು

(ii) ಭಾವಸೂಚಕಾವ್ಯಯಗಳಾದ ಅಹಹಾ! ಅಬ್ಬಾ! ಅಯ್ಯೋ! ಅಕ್ಕಟಾ! ಓಹೋ! ಛೇ! __ ಇತ್ಯಾದಿ ಶಬ್ದಗಳ ಮುಂದೆ ಸ್ವರ ಪರವಾದಾಗ ಸಂಧಿ ಕಾರ‍್ಯಗಳಾಗುವುದಿಲ್ಲ.
(ಬಹುಶಃ ಈ ಭಾವಸೂಚಕಾವ್ಯಯಗಳೆಲ್ಲ ಸ್ವರಾಂತಗಳಾಗಿರುತ್ತವೆ.  ಇವುಗಳ ಮುಂದೆ ಸ್ವರ ಬಂದರೆ ಪ್ರಕೃತಿಭಾವ ಬರುವುದು)
ಉದಾಹರಣೆಗೆ:-
ಅಯ್ಯೋ + ಅವನಿಗೇನಾಯಿತು?  = ಅಯ್ಯೋ! ಅವನಿಗೇನಾಯಿತು?
ಅಬ್ಬಾ + ಅದು ಹಾವೇ?  =  ಅಬ್ಬಾ! ಅದು ಹಾವೇ?
ಅಕ್ಕಟಾ + ಇಂದ್ರನಿಗೆ ಹಾನಿಯೇ?  = ಅಕ್ಕಟಾ! ಇಂದ್ರನಿಗೆ ಹಾನಿಯೇ?
ಓಹೋ + ಅವನೇನು?  =  ಓಹೋ! ಅವನೇನು?
ಎಲಾ + ಅಧಮನೇ?  =  ಎಲಾ! ಅಧಮನೇ
ಛೇ + ಅದೆಲ್ಲಿ  =  ಛೇ! ಅದೆಲ್ಲಿ.

(iii) ಆ ಎಂಬ ಶಬ್ದದ ಮುಂದೆ ಅ ಆ ಐ ಔ ಸ್ವರಗಳು ಬಂದರೆ ಸಂಧಿಕಾರ್ಯ ಮಾಡಬಾರದು (ಪ್ರಕೃತಿಭಾವ ಬರುವುದು).
ಆ + ಅಂಗಡಿ = ಆ ಅಂಗಡಿ
ಆ + ಅರಸು = ಆ ಅರಸು
ಆ + ಐಶ್ವರ್ಯ = ಆ ಐಶ್ವರ್ಯ
ಆ + ಆಡು = ಆ ಆಡು
ಆ + ಆಕಳು = ಆ ಆಕಳು
ಆ + ಔನ್ನತ್ಯ = ಆ ಔನ್ನತ್ಯ
ಆ + ಔದಾರ‍್ಯ = ಆ ಔದಾರ್ಯ
[1] ಪ್ಲುತಸ್ವರವೆಂದರೆ ಸಂಬೋಧನೆಯಲ್ಲಿ ಬರುವ ಸ್ವರ.  ಈ ಉದಾಹರಣೆಗಳಲ್ಲಿ(೩) ಈ ಗುರುತಿನಿಂದ ಸೂಚಿಸಿರುವ ಸ್ವರಗಳೆಲ್ಲ ಪ್ಲುತಗಳೆಂದು ತಿಳಿಯಬೇಕು.  ಹಿಂದೆ ಸ್ವರಗಳನ್ನು ಹೇಳಿದ ಕಡೆ ಅಂದರೆ ಸಂಜ್ಞಾಪ್ರಕರಣದಲ್ಲಿ ಈ ವಿಷಯ ತಿಳಿಸಿದೆ.

[2] ಈ ಭಾವಸೂಚಕಾವ್ಯಯಗಳನ್ನು ನಿಪಾತಾವ್ಯಯಗಳೆಂದೂ ಕರೆಯುವರು.


(Courtesy : Kannada Deevige)

☀(ಭಾಗ -I) :ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು : (PART-I) :The greatest 100 Books in Kannada Literature)

☀(ಭಾಗ -I) :ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು :
(PART-I) :The greatest 100 Books in Kannada Literature)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಕನ್ನಡ ಸಾಹಿತ್ಯ
(Kannada Literature)

★ ಸಾಮಾನ್ಯ ಅಧ್ಯಯನ
(General Studies)

●.ಕೃತಿಗಳು -----------------  ●.ಲೇಖಕರು

1.ಕಾನೂರು ಹೆಗ್ಗಡಿತಿ •┈┈┈┈┈┈┈┈┈• ಕುವೆ೦ಪು

2.ಮಲೆಗಳಲ್ಲಿ ಮದುಮಗಳು •┈┈┈┈┈┈┈┈┈• ಕುವೆ೦ಪು

3.ಮರಳಿ ಮಣ್ಣಿಗೆ •┈┈┈┈┈┈┈┈┈• ಡಾ. ಕೆ. ಶಿವರಾಮ ಕಾರಂತ

4.ಚೋಮನ ದುಡಿ •┈┈┈┈┈┈┈┈┈• ಡಾ. ಕೆ. ಶಿವರಾಮ ಕಾರಂತ

5.ಚಿಕವೀರ ರಾಜೇಂದ್ರ •┈┈┈┈┈┈┈┈┈• ಮಾಸ್ತಿ ವೆಂಕಟೇಶ ಅಯ್ಯಂಗಾರ್

6.ಮೂಕಜ್ಜಿಯ ಕನಸುಗಳು •┈┈┈┈┈┈┈┈┈• ಡಾ. ಕೆ. ಶಿವರಾಮ ಕಾರಂತ

7.ಬೆಟ್ಟದ ಜೀವ •┈┈┈┈┈┈┈┈┈• ಡಾ. ಕೆ. ಶಿವರಾಮ ಕಾರಂತ

8.ಮಹಾಬ್ರಾಹ್ಮಣ •┈┈┈┈┈┈┈┈┈• ದೇವುಡು ನರಸಿಂಹ ಶಾಸ್ತ್ರಿ

9.ಸಂಧ್ಯಾರಾಗ •┈┈┈┈┈┈┈┈┈• ಅ.ನ. ಕೃಷ್ಣರಾಯ

10.ದುರ್ಗಾಸ್ತಮಾನ •┈┈┈┈┈┈┈┈┈• ತ.ರಾ. ಸುಬ್ಬರಾವ್

11.ಗ್ರಾಮಾಯಣ •┈┈┈┈┈┈┈┈┈• ರಾವ್ ಬಹದ್ದೂರ್

12.ಶಾಂತಲಾ •┈┈┈┈┈┈┈┈┈• ಕೆ.ವಿ. ಅಯ್ಯರ್

13.ಸಂಸ್ಕಾರ •┈┈┈┈┈┈┈┈┈• ಯು.ಆರ್. ಅನಂತಮೂರ್ತಿ

14.ಗಂಗವ್ವ ಮತ್ತು ಗಂಗಾಮಾಯಿ •┈┈┈┈┈┈┈┈┈• ಶಂಕರ ಮೊಕಾಶಿ ಪುಣೇಕರ

15.ಗೃಹಭಂಗ •┈┈┈┈┈┈┈┈┈• ಎಸ್.ಎಲ್. ಭೈರಪ್ಪ

16.ಮುಕ್ತಿ •┈┈┈┈┈┈┈┈┈• ಶಾಂತಿನಾಥ ದೇಸಾಯಿ

17.ವೈಶಾಖ •┈┈┈┈┈┈┈┈┈• ಚದುರಂಗ

18.ಮೃತ್ಯುಂಜಯ •┈┈┈┈┈┈┈┈┈• ನಿರಂಜನ

19.ಚಿರಸ್ಮರಣೆ •┈┈┈┈┈┈┈┈┈• ನಿರಂಜನ

20.ಶಿಕಾರಿ •┈┈┈┈┈┈┈┈┈• ಯಶವಂತ ಚಿತ್ತಾಲ

21.ಮಾಡಿದ್ದುಣ್ಣೋ ಮಹಾರಾಯ •┈┈┈┈┈┈┈┈┈• ಎಂ.ಎಸ್. ಪುಟ್ಟಣ್ಣಯ್ಯ

22.ಕಾಡು •┈┈┈┈┈┈┈┈┈• ಶ್ರೀಕೃಷ್ಣ ಆಲನಹಳ್ಳಿ

23.ಕರ್ವಾಲೊ •┈┈┈┈┈┈┈┈┈• ಕೆ.ಪಿ. ಪೂರ್ಣಚಂದ್ರ ತೇಜಸ್ವಿ

24.ಬಂಡಾಯ •┈┈┈┈┈┈┈┈┈• ವ್ಯಾಸರಾಯ ಬಲ್ಲಾಳ

25.ತೇರು •┈┈┈┈┈┈┈┈┈• ರಾಘವೇಂದ್ರ ಪಾಟೀಲ

26.ದ್ಯಾವನೂರು •┈┈┈┈┈┈┈┈┈• ದೇವನೂರು ಮಹಾದೇವ

27.ಚಂದ್ರಗಿರಿಯ ತೀರದಲ್ಲಿ •┈┈┈┈┈┈┈┈┈• ಸಾರಾ ಅಬೂಬಕ್ಕರ್

28.ಇಜ್ಜೋಡು •┈┈┈┈┈┈┈┈┈• ವಿ.ಕೃ. ಗೋಕಾಕ್

29.ಬದುಕು •┈┈┈┈┈┈┈┈┈• ಗೀತಾ ನಾಗಭೂಷಣ

30.ಮಾಧವ ಕರುಣಾ ವಿಲಾಸ •┈┈┈┈┈┈┈┈┈• ಗಳಗನಾಥ

31.ಬೆಕ್ಕಿನ ಕಣ್ಣು •┈┈┈┈┈┈┈┈┈• ತ್ರಿವೇಣಿ

32.ಮುಸ್ಸಂಜೆಯ ಕಥಾ ಪ್ರಸಂಗ •┈┈┈┈┈┈┈┈┈• ಪಿ. ಲಂಕೇಶ

33.ಮಾಡಿ ಮಡಿದವರು •┈┈┈┈┈┈┈┈┈• ಬಸವರಾಜ ಕಟ್ಟೀಮನಿ

34.ಅನ್ನ •┈┈┈┈┈┈┈┈┈• ರ೦.ಶ್ರೀ.ಮುಗಳಿ

35.ಮೋಹಿನಿ •┈┈┈┈┈┈┈┈┈• ವಿ. ಎಂ. ಇನಾಂದಾರ್

36.ಚಿದಂಬರ ರಹಸ್ಯ •┈┈┈┈┈┈┈┈┈• ಕೆ.ಪಿ. ಪೂರ್ಣಚಂದ್ರ ತೇಜಸ್ವಿಕಥಾ ಸ೦ಕಲನಗಳು

37.ಮಾಸ್ತಿ ಅವರ ಸಮಗ್ರ ಕತೆಗಳು •┈┈┈┈┈┈┈┈┈• ಮಾಸ್ತಿ ವೆಂಕಟೇಶ ಅಯ್ಯಂಗಾರ್

38.ನೇಮಿಚಂದ್ರರ ಕಥೆಗಳು •┈┈┈┈┈┈┈┈┈• ನೇಮಿಚಂದ್ರ

39.ಕಲ್ಲು ಕರಗುವ ಸಮಯ •┈┈┈┈┈┈┈┈┈• ಪಿ. ಲ೦ಕೇಶ

40.ಅಮೃತಬಳ್ಳಿ ಕಷಾಯ •┈┈┈┈┈┈┈┈┈• ಜಯಂತ ಕಾಯ್ಕಿಣಿ

41.ಹುಲಿ ಸವಾರಿ •┈┈┈┈┈┈┈┈┈• ವಿವೇಕ ಶಾನುಭಾಗ

42.ಬುಗುರಿ •┈┈┈┈┈┈┈┈┈• ಮೊಗಳ್ಳಿ ಗಣೇಶ್

43.ತಮಂಧದ ಕೇಡು •┈┈┈┈┈┈┈┈┈• ಅಮರೇಶ ನುಗುಡೋಣಿ

44.ಅನಂತಮೂರ್ತಿ: ಐದು ದಶಕದ ಕಥೆಗಳು •┈┈┈┈┈┈┈┈┈• ಯು.ಆರ್. ಅನಂತಮೂರ್ತಿ

45.ಅರಳು ಬರಳು •┈┈┈┈┈┈┈┈┈• ವಿ.ಸೀತಾರಾಮಯ್ಯ

46.ತೆರೆದ ಬಾಗಿಲು •┈┈┈┈┈┈┈┈┈• ಕೆ.ಎಸ್.ನರಸಿಂಹ ಸ್ವಾಮಿ

47.ಕಾಳಿದಾಸ (ಸಾಹಿತ್ಯಿಕ ವಿಮರ್ಶೆ) •┈┈┈┈┈┈┈┈┈• ಆದ್ಯ ರಂಗಾಚಾರ್ಯ

48.ಭಳಾರೆ ವಿಚಿತ್ರಂ •┈┈┈┈┈┈┈┈┈• ಕುಂ.ವೀರಭದ್ರಪ್ಪ

49.ಪಾವೆಂ ಹೇಳಿದ ಕಥೆ •┈┈┈┈┈┈┈┈┈• ರವಿ ಬೆಳಗೆರೆ

50.ಮಾಯಿಯ ಮುಖಗಳು •┈┈┈┈┈┈┈┈┈• ರಾಘವೇಂದ್ರ ಪಾಟೀಲ

..... ಮುಂದುವರೆಯುವುದು.

☀ ಭಾರತದ ಪ್ರಮುಖ ಪರಮಾಣು ವಿದ್ಯುತ್ ಕೇಂದ್ರಗಳು   (The Major Atomic Power Stations of India) 

☀ ಭಾರತದ ಪ್ರಮುಖ ಪರಮಾಣು ವಿದ್ಯುತ್ ಕೇಂದ್ರಗಳು
(The Major Atomic Power Stations of India)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ ಭೂಗೋಳ
(Indian Geography)

★ ಸಾಮಾನ್ಯ ಅಧ್ಯಯನ
(General studies)


●.ಪರಮಾಣು ವಿದ್ಯುತ್ ಕೇಂದ್ರಗಳು •┈┈┈┈┈┈┈┈• ●.ಸ್ಥಳಗಳು
 •┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●. ತಾರಾಪುರ •┈┈┈┈┈┈┈┈┈┈┈┈• ಮಹಾರಾಷ್ಟ್ರ

●. ರಾವತ್ ಭಾಟಾ •┈┈┈┈┈┈┈┈┈┈┈┈• ರಾಜಸ್ತಾನ

●. ಕಲ್ಪಕಂ •┈┈┈┈┈┈┈┈┈┈┈┈• ತಮಿಳುನಾಡು

●. ನರೊರಾ •┈┈┈┈┈┈┈┈┈┈┈┈• ಉತ್ತರ ಪ್ರದೇಶ

●. ಕಕ್ರಪಾರ •┈┈┈┈┈┈┈┈┈┈┈┈• ಗುಜರಾತ್

●. ಕೈಗಾ •┈┈┈┈┈┈┈┈┈┈┈┈• ಕರ್ನಾಟಕ

●. ಕೂಡಂಕುಳಂ •┈┈┈┈┈┈┈┈┈┈┈┈• ತಮಿಳುನಾಡು (ಯುಸಿ)

●. 'ಬನ್ಸ್ ವಾರಾ •┈┈┈┈┈┈┈┈┈┈┈┈• ರಾಜಸ್ತಾನ (ಯುಸಿ)

Tuesday 14 July 2015

☀ ಭಾರತದಲ್ಲಿನ ಪ್ರಮುಖ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು : (The Main National parks and wildlife sanctuaries in India)

☀ ಭಾರತದಲ್ಲಿನ ಪ್ರಮುಖ ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು :
(The Main National parks and wildlife sanctuaries in India)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಭಾರತದ ಪ್ರಾಕೃತಿಕ ಭೌಗೋಳಿಕ ವ್ಯವಸ್ಥೆ.
(Indian Physical Environmental Geography)

★ ಭಾರತದ ಭೂಗೋಳ
( Indian Geography)

★ ಸಾಮಾನ್ಯ ಅಧ್ಯಯನ
(General Studies)



●.ರಾಷ್ಟ್ರೀಯ ಉದ್ಯಾನಗಳು ಮತ್ತು ಅಭಯಾರಣ್ಯಗಳು •┈┈┈┈┈┈┈┈• ●.ಸ್ಥಳಗಳು.
━━━━━━━━━━━━━━━━━━━━━━━━━━━━━━━━━━━━━━━━━━━━━

[1] ದಿಬ್ರೂ-ಸೈಖೋವ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಅಸ್ಸಾಂ

[2] ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ಅಸ್ಸಾಂ

[3] ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಕರ್ನಾಟಕ

[4] ಬಾಲ್ ಪಾಕ್ರಮ್ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಮೇಘಾಲಯ

[5] ಬಾಂಧವ್ ಗಡ್ ರಾಷ್ಟ್ರೀಯ ಉಧ್ಯಾನವನ •┈┈┈┈┈┈┈┈┈┈┈┈┈┈• ಮಧ್ಯಪ್ರದೇಶ

[6] ಬೆಟ್ಲಾ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಜಾರ್ಖಂಡ್

[7] ಭೀತರ್ ಕಾನಿಕಾ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಒಡಿಶಾ

[8] ಕೃಷ್ಣ ಮೃಗ ನ್ಯಾಷನಲ್ ಪಾರ್ಕ್, ವೆಲವದಾರ •┈┈┈┈┈┈┈┈┈┈┈┈┈┈• ಗುಜರಾತ್

[9] ಬುಕ್ಸಾ ಹುಲಿ ಧಾಮದಲ್ಲಿ ರಿಸರ್ವ್ •┈┈┈┈┈┈┈┈┈┈┈┈┈┈• ಪಶ್ಚಿಮ ಬಂಗಾಳ

[10] ಕ್ಯಾಂಪ್ ಬೆಲ್ ಬೇ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

[11] ಚಾಂದೋಲಿ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಮಹಾರಾಷ್ಟ್ರ

[12] ದಾಚಿಗಂ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ

[13] ದರ್ರಾ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ರಾಜಸ್ಥಾನ

[14] ಡಸರ್ಟ್ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ರಾಜಸ್ಥಾನ

[15] ಅಂಶಿ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ಕರ್ನಾಟಕ

[16] ದುಧ್ವಾ ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ಉತ್ತರ ಪ್ರದೇಶ

[17] ಇರ್ವಾಕುಲಂ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಕೇರಳ

[18] ಗಲಾತಿಯಾ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

[19] ಗಂಗೋತ್ರಿ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ಉತ್ತರಾಖಂಡ್

[20] ಗಿರ್ ಅರಣ್ಯ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ಗುಜರಾತ್

[21] ಗೋರುಮರ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಪಶ್ಚಿಮಬಂಗಾಳ

[22] ಗೋವಿಂದ ಪಾಶೂ ವಿಹಾರ್ ವನ್ಯಜೀವಿಧಾಮ •┈┈┈┈┈┈┈┈┈┈┈┈┈┈• ಉತ್ತರಾಖಂಡ್

[23] ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಹಿಮಾಚಲ ಪ್ರದೇಶ

[24] ಗುಗಾಮಾಲ್ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಮಹಾರಾಷ್ಟ್ರ

[25] ಗಿಂಡಿ ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ತಮಿಳುನಾಡು

[26] ಮನ್ನಾರ್ ಖಾರಿ ಸಾಗರ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ತಮಿಳುನಾಡು

[27] ಹೆಮಿಸ್ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ

[28] ಹರಿಕೆ ವೆಟ್ ಲ್ಯಾಂಡ್ •┈┈┈┈┈┈┈┈┈┈┈┈┈┈• ಪಂಜಾಬ್

[29] ಹಜರಿಬಾಗ್ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಜಾರ್ಖಂಡ್

[30] ಇಂದಿರಾ ಗಾಂಧಿ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ತಮಿಳುನಾಡು

[31] ಇಂದ್ರಾವತಿ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ಛತ್ತೀಸ್ ಗಢ

[32] ಜಲ್ದಾ ಪರಾ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಪಶ್ಚಿಮ ಬಂಗಾಳ

[33] ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಉತ್ತರಾಖಂಡ್

[34] ಕಲೆಸರ್ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಹರ್ಯಾಣ

[35] ಕನ್ಹಾ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ಮಧ್ಯಪ್ರದೇಶ

[36] ಕಂಜರ್ ಘಾಟಿ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ಛತ್ತೀಸ್ ಗಢ

[37] ಕಾಸು ಬ್ರಹ್ಮಾನಂದ ರೆಡ್ಡಿ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ತೆಲಂಗಾಣ

[38] ಬಂಡಿಪುರ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ಕರ್ನಾಟಕ

[39] ಕೆಯಿಬುಲ್ ಲಂಜಾವೊ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಮಣಿಪುರ

[40] ಕಿಯೋಲಾಡಿಯೋ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ರಾಜಸ್ಥಾನ

[41] ಕಾಂಚನ್ ಜುಂಗಾ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಸಿಕ್ಕಿಂ

[42] ಕಿಶ್ ತ್ವಾರ್ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಜಮ್ಮು ಮತ್ತು ಕಾಶ್ಮೀರ

[43] ಕುದುರೆಮುಖ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಕರ್ನಾಟಕ

[44] ಮಾಧವ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಮಧ್ಯಪ್ರದೇಶ

[45] ಮಹಾತ್ಮ ಗಾಂಧಿ ಸಾಗರ ರಾಷ್ಟ್ರೀಯ ಉದ್ಯಾನ •┈┈┈┈┈┈┈┈┈┈┈┈┈┈• ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

[46] ಮಹಾವೀರ ಹರಿನಾ ವನಸ್ಥಲಿ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ತೆಲಂಗಾಣ

[47] ಮಾನಸ ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ಅಸ್ಸಾಂ

[48] ಮಂಡ್ಲಾ ಪ್ಲಾಂಟ್ ಪಳೆಯುಳಿಕೆ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಮಧ್ಯಪ್ರದೇಶ

[49] ಸಾಗರ ರಾಷ್ಟ್ರೀಯ ಉದ್ಯಾನ, ಗಲ್ಫ್ ಆಪ್ ಕಚ್ •┈┈┈┈┈┈┈┈┈┈┈┈┈┈• ಗುಜರಾತ್

[50] ಮಥಿಕೆಟ್ಟನ್ ಶೋಲಾ ನ್ಯಾಷನಲ್ ಪಾರ್ಕ್ •┈┈┈┈┈┈┈┈┈┈┈┈┈┈• ಕೇರಳ

[51] ಪಾಲಮೋ ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ಜಾರ್ಖಂಡ

[52] ಸಿಮಲ್ ಪಾಲ ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ಒರಿಸ್ಸಾ

[53] ಮೆಲಘಾಟ್ ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ಮಹಾರಾಷ್ಟ್ರ

[54] ಭೋರಿವಿಲಿ ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ಮಹಾರಾಷ್ಟ್ರ

[55] ರಣತಂಬೂರ ರಾಷ್ಟ್ರೀಯ ಉದ್ಯಾನವನ •┈┈┈┈┈┈┈┈┈┈┈┈┈┈• ರಾಜಸ್ಥಾನ

[56] ಸಾರಿಸ್ಕ ಸಂರಕ್ಷಣೆಯ ವಲಯ •┈┈┈┈┈┈┈┈┈┈┈┈┈┈• ರಾಜಸ್ಥಾನ

[57] ಪೆರಿಯಾರ್ ಸಂರಕ್ಷಣಾವಲಯ •┈┈┈┈┈┈┈┈┈┈┈┈┈┈• ಕೇರಳ

[58] ಶಿವಪುರಿ ರಾಷ್ಟೀಯ ಉದ್ಯಾನವನ •┈┈┈┈┈┈┈┈┈┈┈• ಶಿವಪುರಿ , ಮಧ್ಯ ಪ್ರದೇಶ.

[59] ನಾವೆಗೋನ್ ರಾಷ್ಟೀಯ ಉದ್ಯಾನವನ •┈┈┈┈┈┈┈┈┈┈┈┈┈┈• ಭಂಡಾರ, ಮಹಾರಾಷ್ಟ್ರ.

[60] ನಾಗರಹೊಳೆ ರಾಷ್ಟೀಯ ಉದ್ಯಾನವನ •┈┈┈┈┈┈┈┈┈┈┈┈┈┈• ಕರ್ನಾಟಕ.