"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 25 September 2016

☀ ಪಿ.ಎಸ್.ಐ (ಪೊಲೀಸ್ ಸಬ್ ಇನ್ಸ್ಪೆಕ್ಟರ್) ಪರೀಕ್ಷೆಯಲ್ಲಿ ಪ್ರಬಂಧ ಬರೆಯುವುದು ಹೇಗೆ? (How to Write PSI Essay Paper?)

 ☀ ಪಿ.ಎಸ್.ಐ (ಪೊಲೀಸ್ ಸಬ್ ಇನ್ಸ್ಪೆಕ್ಟರ್) ಪರೀಕ್ಷೆಯಲ್ಲಿ ಪ್ರಬಂಧ ಬರೆಯುವುದು ಹೇಗೆ?
(How to Write PSI Essay Paper?)
•─━━━━━═══════════━━━━━─••─━━━━━═══════════━━━━━─•

★ ಪೊಲೀಸ್ ಸಬ್ ಇನ್ಸ್‌ಪೆಕ್ಟರ್  ಪರೀಕ್ಷೆ ಸಿದ್ಧತೆ
(PSI Exam preparation)



ರಾಜ್ಯ ಪೊಲೀಸ್ ಇಲಾಖೆ ನಾಗರಿಕ, ಕೆಎಸ್ಆರ್ಪಿ ಮತ್ತು ವೈರ್ಲೆಸ್ ವಿಭಾಗದಲ್ಲಿ ಖಾಲಿ ಸಬ್-ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರುತ್ತವೆ. ಪರೀಕ್ಷೆಯಲ್ಲಿನ ಪತ್ರಿಕೆ-1ಕ್ಕೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಉತ್ತರಿಸಬಹುದುದಾಗಿದೆ.

ಪ್ರಬಂಧ ಎಂದರೆ 'ಚೆನ್ನಾಗಿ ಕಟ್ಟುವುದು' ಎಂದರ್ಥ. ಪ್ರಸ್ತುತ ಪಿ.ಎಸ್.ಐ. ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಪಿ.ಎಸ್.ಐ. ಪರೀಕ್ಷೆಯಲ್ಲಿ 20 ಅಂಕಗಳಿಗೆ ಪ್ರಬಂಧ ಬರೆಯಬೇಕಿದ್ದು ಒಟ್ಟು 600 ಪದಗಳ ಮಿತಿಯನ್ನು ನಿಗದಿಗೊಳಿಸಲಾಗಿದೆ. ಕೆ.ಎ.ಎಸ್. ಪರೀಕ್ಷೆಗೆ 1000 ಪದಗಳು ಹಾಗೂ ಐ.ಎ.ಎಸ್. ಪರೀಕ್ಷೆಗೆ 1200 ಪದಗಳಲ್ಲಿ ಪ್ರಬಂಧ ಬರೆಯಬೇಕಿರುತ್ತದೆ.

 ಪಿ.ಎಸ್.ಐ. ಪರೀಕ್ಷೆ ಬರೆಯುವವರಲ್ಲಿ ಬಹಳಷ್ಟು ಜನ ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಅದನ್ನೇ ಪರೀಕ್ಷೆಯಲ್ಲಿ ಬರೆಯುತ್ತಾರೆ. ಇದು ಅಷ್ಟೇನೂ ಸೂಕ್ತವಲ್ಲ. ಯಾವುದೇ ರೀತಿಯ ಅಧ್ಯಯನವನ್ನು ನಡೆಸಿದಾಗ ವಿಷಯದ `ಥೀಮ್' ಏನು ಎಂಬುದನ್ನು ಅರ್ಥ ಮಾಡಿಕೊಂಡು ಆ ಥೀಮ್^ನ್ನು ಆಧಾರವಾಗಿಟ್ಟುಕೊಂಡು ನಮ್ಮದೇ ಆದ ಸ್ವಂತ ಆಲೋಚನಾ ಕ್ರಮದಲ್ಲಿ ಬರೆಯುವುದೇ ಸೂಕ್ತ. ಈ ರೀತಿ ಬರೆಯುವವರೇ ಪರೀಕ್ಷೆಯಲ್ಲಿ ಗೆಲ್ಲುತ್ತಿದ್ದಾರೆ.

●.ಮಾದರಿ ಪ್ರಬಂಧಗಳನ್ನು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಿ. ಇವು ನಮ್ಮಲ್ಲಿ ಆಲೋಚನಾ ಕ್ರಮವನ್ನು ಹುಟ್ಟು ಹಾಕಿ ವಿಮರ್ಶಾತ್ಮಕವಾಗಿ ಬರೆಯುವ ಸಾಮರ್ಥ್ಯ ಬೆಳೆಸುತ್ತವೆ. ವಿಮರ್ಶೆ ಎಂಬುದು ವಿರೋಧವಲ್ಲ. ಕೊಟ್ಟಂತಹ ವಿಷಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ವಿಮರ್ಶಿಸಬೇಕು.

●.ಸಿ.ಇ.ಟಿ. ಅಭ್ಯರ್ಥಿಗಳು ಯವುದೇ ಪಕ್ಷ, ವ್ಯಕ್ತಿ ಬಗ್ಗೆ ನಿರ್ಲಕ್ಷ್ಯ, ಉಡಾಫೆ ಅಥವಾ ಪೂರ್ವಗ್ರಹ ಇಟ್ಟುಕೊಳ್ಳಬಾರದು. ಹಾಗೇನಾದರೂ ಇಟ್ಟುಕೊಂಡರೆ, ವಿಮರ್ಶೆಗೆ ವೈಚಾರಿಕ ಸಮರ್ಥನೆ ಇಲ್ಲದಂತಾಗುತ್ತದೆ. ಭಾವನಾತ್ಮಕ ಉದ್ವೇಗದಿಂದ ಪ್ರಬಂಧ ಬರೆಯುವಂತಾಗುತ್ತದೆ.

ಉದಾ: ಟಿಪ್ಪುವಿನ ಸಾಧನೆಗಳು.  ಪರ ವಿರೋಧವನ್ನು ಸಮಾನದೃಷ್ಟಿಯಿಂದ ನೋಡಿ ವಿಚಾರ ಕೇಂದ್ರಿತವಾಗಿ ವಿಷಯ ನಿರೂಪಿಸಬೇಕು.

●.ಮಾದರಿ ಪ್ರಬಂಧಗಳನ್ನು ಓದುವಾಗ ಯಾವುದಾದರೂ ಪರಿಕಲ್ಪನೆ ಅರ್ಥವಾಗದಿದ್ದರೆ, ಅದನ್ನು ಬಿಟ್ಟು ಮುಂದಕ್ಕೆ ಹೋಗಬಾರದು, ಅರ್ಥ ಮಾಡಿಕೊಂಡೇ ಮುಂದಕ್ಕೆ ಹೋಗಬೇಕು. ಒಂದು ವೇಳೆ ಆಗದಿದ್ದರೆ, ಅದರ ಹಿಂದಿನ ಮತ್ತು ಮುಂದಿನ ವಿಷಯಗಳ ತನಕ ಓದಬೇಕು.

●.ಅಂಕಿ-ಅಂಶಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅವು ಸೂಚಿಸುವ ಅರ್ಥ ಏನು ಎಂದು ತಿಳಿದುಕೊಂಡರೆ ಸಾಕು.

ಉದಾ: ಈ ಹಿಂದೆ ಜನಸಂಖ್ಯೆ 100 ಕೋಟಿ ಇತ್ತು. 2011 ರ ಪ್ರಕಾರ 120ಕೋಟಿ ಆಗಿದೆ ಎಂದು ಅರ್ಥೈಸಿಕೊಂಡರೆ ಸಾಕು. ಅದನ್ನು ಬಿಟ್ಟು 120,84,63,700 ಅಂತ ಚಿಂತಿಸುತ್ತಾ ಸಮಯ ಹಾಳುಮಾಡಬಾರದು.

●. ಪ್ರಬಂಧಗಳನ್ನು ಅಧ್ಯಯನ ಮಾಡುವಾಗ ಒಂದು ಪ್ಯಾರಾದಿಂದ ಮತ್ತೊಂದು ಪ್ಯಾರಾಗೆ ಹೇಗೆ ಸಂಬಂಧ ಕಲ್ಪಿಸಲಾಗಿದೆ ಎಂಬುದನ್ನು ಗಮನಿಸಬೇಕು.

●.ಶಾಲಾ-ಕಾಲೇಜುಗಳಲ್ಲಿ ಬರೆದ ಹಾಗೆ ಪ್ರಬಂಧ ಬರೆಯಬಾರದು. ಶಾಲೆಯಲ್ಲಿನ ಪ್ರಬಂಧಗಳು ವಿವರಣಾತ್ಮಕ ರೀತಿಯದ್ದಾಗಿರುತ್ತವೆ. ಆದರೆ ನಾವು ಬರೆಯುವ ಪ್ರಬಂಧಗಳು ವಿಷಯ/ವಿಚಾರದ ಬಗ್ಗೆ ನಮ್ಮ ಧೋರಣೆ ಏನು ಎಂಬುದನ್ನು ನಿರೀಕ್ಷಿಸುತ್ತವೆ. ಆದ್ದರಿಂದ ಪದಗಳು ವಿಮರ್ಶಾತ್ಮಕ ರೀತಿಯಲ್ಲಿ ಇರಬೇಕಾಗುತ್ತದೆ.

●. ವಿಷಯವೊಂದರ ಕುರಿತಾಗಿ ಎಲ್ಲರೂ ಯೋಚಿಸುವಂತೆ ಯೋಚಿಸಿ ಬರೆಯುವುದು ಜಾಣತನವಲ್ಲ. ಬದಲಾಗಿ ವಿಷಯವೊಂದನ್ನು ವಿಭಿನ್ನವಾಗಿ, ಬಹುಮುಖವಾಗಿ ಚಿಂತಿಸಿ ಬರೆಯುವುದು ಸೂಕ್ತ.

  ಉದಾ: `ಪ್ರತಿಭಾ ಪಲಾಯನ'ದ ಬಗ್ಗೆ ಬರೆಯುವಾಗ ಅದಕ್ಕೆ ಸಮರ್ಥನೀಯ ಕಾರಣಗಳನ್ನು ನೀಡಲು ಪ್ರಯತ್ನಿಸಬೇಕು ಆದರೆ ಸಂಪೂರ್ಣವಾಗಿ ಪೋಷಿಸಿ ಬರೆಯಬಾರದು.

●.ಪ್ರಬಂಧವು ವ್ಯಕ್ತಿನಿಷ್ಠವಾಗಿರಬಾರದು, ವಸ್ತುನಿಷ್ಠವಾಗಿರಬೇಕು.

●. ವಿಶ್ಲೇಷಣೆ ಒಳಗೊಂಡಿರಬೇಕು. ಅಂದರೆ ಒಂದು ವಿಚಾರವನ್ನು ವಿಮರ್ಶಿಸುವಾಗ ಲಭ್ಯವಾಗುವ ಸಣ್ಣಪುಟ್ಟ ವಿವರಗಳನ್ನು ಬಿಡಿಸಿ ಅರ್ಥೈಸಬೇಕು.

●.ವಿಷಯವನ್ನು ಸಂಕುಚಿತ ಮತ್ತು ಸ್ವಾರ್ಥ ಮನೋಭಾವದಿಂದ ಮಂಡಿಸದೇ ವ್ಯಾಪಕ ಪರಿಣಾಮಗಳ ಹಿನ್ನೆಲೆಯಲ್ಲಿ ಮಂಡಿಸಬೇಕು.

●. ಪ್ರಬಂಧದಲ್ಲಿ ಬರೆಯುವ ಪೀಠಿಕೆಯು ಶೀರ್ಷಿಕೆಯ ಹಿನ್ನೆಲೆಯನ್ನು ಬಳಸಿ, ಶೀರ್ಷಿಕೆಯ ಬಗ್ಗೆ ಏನು, ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಂತಿರಬೇಕು.

●.ಪ್ರಬಂಧ ನಿರೂಪಿಸುವಾಗ ಕೊಡುವ ಹೇಳಿಕೆಗಳು ವೈಚಾರಿಕ ಸ್ಪಷ್ಟತೆಯಿಂದ ಕೂಡಿರಬೇಕು ಮತ್ತು ಸರಿಯಾದ ಆಧಾರಗಳನ್ನು ಹೊಂದಿರಬೇಕು.

ಉದಾ: ದೇಶದಲ್ಲಿ ವರದಕ್ಷಿಣೆ ಸಮಸ್ಯೆ ಇದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿರುವಂಥದ್ದು. ಆದರೆ ನಿರ್ದಿಷ್ಟ ವ್ಯಕ್ತಿ/ಸಮುದಾಯದ ಬಗ್ಗೆ ಹೇಳುವಾಗ ಆಧಾರವಿರಲೇಬೇಕು.

●. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಗಾದೆಮಾತು, ನಾಣ್ಣುಡಿ, ಹೇಳಿಕೆಗಳನ್ನು ಬರೆಯುವುದು ಅಷ್ಟೇನೂ ಪರಿಣಾಮಕಾರಿಯಲ್ಲ. ಒಂದು ವೇಳೆ ಬರೆಯಬೇಕಿದ್ದರೆ ಏನಾದರೂ ವಿಶೇಷ ಅರ್ಥ ನಿರೂಪಿಸಬೇಕು. ಸಾಧ್ಯವಾದಷ್ಟು ಗಮನ ಸೆಳೆಯುವ, ವಿಭಿನ್ನ ಹಾಗೂ ಸಾಕಷ್ಟು ಪ್ರಚಾರದಲ್ಲಿ ಇಲ್ಲದ ಗಾದೆ ಮಾತು, ನಾಣ್ಣುಡಿಗಳನ್ನು ಬರೆಯುವುದೊಳಿತು.

●.ಒಂದು ಪ್ಯಾರಾ ಆದ ಮೇಲೆ ಮತ್ತೊಂದು ಪ್ಯಾರಾ ಆರಂಭಿಸುವಾಗ ಅಲ್ಲಲ್ಲಿ ಉಪಶೀರ್ಷಿಕೆಗಳನ್ನು ಬರೆಯಬೇಕು.

●. ಪ್ರಬಂಧದಲ್ಲಿ ಮುಖ್ಯಾಂಶಗಳಿಗೆ ಅಂಡರ್^^ಲೈನ್ ಅಥವಾ ಬೋಲ್ಡ್ ಮಾಡಬಹುದು. ಆದರೆ ಅಂಡರ್^^ಲೈನ್ ಮಾಡಲು ಬೇರೆ ಯಾವುದೇ ಪೆನ್ ಅಥವಾ ಹೈಲೈಟರ್ ಬಳಸಬಾರದು.

●.ಬರವಣಿಗೆ ಸ್ಪಷ್ಟವಾಗಿರಬೇಕು, ಲೇಖನ ಚಿಹ್ನೆಗಳನ್ನು ಬಳಸಬೇಕು.

●. ವಾಕ್ಯರಚನೆ ಉತ್ತಮವಾಗಿರಬೇಕು ಹಾಗೂ ಜೋಡಣೆ ಕ್ರಮವಾಗಿರಬೇಕು.

●.ಪ್ರಬಂಧ ವಿಷಯದ ಎಲ್ಲೆಯನ್ನು ಮೀರಬಾರದು, ಅನಾವಶ್ಯಕವಾಗಿ ಅಪ್ರಸ್ತುತ ವಾಕ್ಯಗಳನ್ನು ಪ್ರಬಂಧಕ್ಕೆ ಎಳೆದು ತರಬಾರದು.

●. ವಾಕ್ಯಗಳು ಮತ್ತು ಅಂಶಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು.

●.ನಿಗದಿತ ವೇಳೆಯೊಳಗೆ ಪ್ರಬಂಧ ಬರೆದು ಮುಗಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಿ.


☀.ಪ್ರಬಂಧ ಬರೆಯುವ ಹಂತಗಳು :

     ಪ್ರಬಂಧ ಬರೆಯುವ ಕಲೆ ಒಂದೇ ದಿನದಲ್ಲಿ ಸಿದ್ಧಿಸುವಂತಹದಲ್ಲ. ಅದಕ್ಕಾಗಿ ದಿನನಿತ್ಯದ ಅಭ್ಯಾಸ ಅಗತ್ಯ.

1) ಪ್ರಬಂಧದ ವಿಷಯ ಆಯ್ಕೆ ಮಾಡಿಕೊಳ್ಳಿ.

2) ಆಯ್ಕೆ ಮಾಡಿಕೊಂಡ ವಿಷಯದ ಬಗ್ಗೆ ಏನೆಲ್ಲ ಬರೆಯಬಹುದು ಎಂಬುದನ್ನು ಚಿಂತಿಸಿ.

3) ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಮತ್ತು ವಿವರವನ್ನು ಸಂಗ್ರಹಿಸಿ.

4) ಪ್ರಬಂಧ ಬರೆಯುವ ನಿಯಮಗಳನ್ನು ಅನುಸರಿಸಿ, ವಿಷಯವನ್ನು ನಿರೂಪಿಸಿ, ವಿಶ್ಲೇಷಿಸಿ, ವಿಮರ್ಶಿಸಿ ವ್ಯವಸ್ಥಿತವಾಗಿ ಬರೆಯಿರಿ.

5) ಪ್ರಬಂಧ ಬರೆದು ಮುಗಿಸಿದ ಮೇಲೆ ಕೆಲಹೊತ್ತು ಬಿಟ್ಟು ಮತ್ತೆ ಅದನ್ನು ಆಮೂಲಾಗ್ರವಾಗಿ ಪರಿಶೀಲಿಸಬೇಕು.

 ಯಾವುದಾದರೂ ವಾಕ್ಯಗಳು, ಶಬ್ದಗಳು ಇಲ್ಲದಿದ್ದರೂ ಪ್ರಬಂಧದ ಅರ್ಥಕ್ಕೆ ಅಥವಾ ತೂಕಕ್ಕೆ ತೊಂದರೆಯಾಗುವುದಿಲ್ಲ ಎನಿಸಿದರೆ ತೆಗೆದು ಹಾಕಿ. ಬಳಸಿದ ಶಬ್ದ/ವಾಕ್ಯಕ್ಕೆ ಬದಲಾಗಿ ಮತ್ತೆ ಯಾವ ಶಬ್ದ/ವಾಕ್ಯ ಬಳಸಿದರೆ, ಇನ್ನೂ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂಬುದನ್ನು ಚಿಂತಿಸಿ ಸೇರ್ಪಡೆಗೊಳಿಸಿ. ಹೀಗೆ ಒಂದು ಪ್ರಬಂಧವನ್ನು 2-3 ಬಾರಿ ಮತ್ತೆ ಮತ್ತೆ ಬರೆಯಿರಿ.

6) ಪ್ರಬಂಧದಲ್ಲಿ ಬಳಸುವ ಭಾಷೆಗ ಬಹಳ ಪ್ರಾಮುಖ್ಯತೆ ಇದೆ. ಕೆಳಮಟ್ಟದ ಪದಗಳು, ಅಶ್ಲೀಲ ಪದಗಳು, ದ್ವಂದಾರ್ಥ ಪದಗಳು, ಅಸಾಂವಿಧಾನಿಕ ಪದಗಳನ್ನು ಬಳಸುವಂತಿಲ್ಲ. ಭಾವತೀವ್ರತೆಯಿಂದ ಬರೆಯಬಾರದು. ಟೀಕೆ ಮಾಡುವುದಾದರೆ ಮೃದುವಾಗಿ ಮಾಡಬೇಕು.

       ಮಾದರಿ ಪ್ರಬಂಧಗಳ ಅಧ್ಯಯನಕ್ಕಾಗಿ ಗುಣಮಟ್ಟದ ಪುಸ್ತಕಗಳನ್ನು ಓದಿ. ಉದಾ: ಚಾಣಕ್ಯ ಪ್ರಕಾಶನದ ಅರವಿಂದ ಚೊಕ್ಕಾಡಿಯವರ ಪಿ.ಎಸ್.ಐ. ಪ್ರಬಂಧಗಳು, ಕ್ಲಾಸಿಕ್ ಸ್ಟಡಿ ಸರ್ಕಲ್^ನ ಪ್ರಬಂಧಗಳ ಪುಸ್ತಕ, ಸ್ಪರ್ಧಾ ವಿಜೇತ, ಸ್ಪರ್ಧಾ ಚೈತ್ರ ಹಾಗೂ ಇನ್ನಿತರ ಸಂಸ್ಥೆಗಳ ಪುಸ್ತಕಗಳನ್ನು ಪರಾಮರ್ಶಿಸಬಹುದು.

         ಎಲ್ಲಕ್ಕಿಂತ ಮುಖ್ಯವಾಗಿ ಉಳಿದವರೆಲ್ಲರಿಗಿಂತ ಪರಿಣಾಮಕಾರಿಯಾಗಿ ಪ್ರಬಂಧ ಬರೆಯಬಲ್ಲೆ, ವಿಷಯ ನಿರೂಪಿಸಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ಇಂಥ ಆತ್ಮವಿಶ್ವಾಸಕ್ಕಾಗಿ ಗಳಿಸುವುದಕ್ಕಾಗಿ ಸತತ ವಿಷಯ ಸಂಗ್ರಹ, ಅಧ್ಯಯನ ಅವಶ್ಯ ಹಾಗೂ ನಿರಂತರವಾಗಿ ಜ್ಞಾನಮುಖಿಯಾಗಿರಬೇಕು.

(Courtesy :Jnanamukhi)

☀.(PART-VIII) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳು : (PDO Examination Multiple Choice Model Question and Answers)

☀.(PART-VIII) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ  ಪ್ರಶ್ನೋತ್ತರಗಳು :
(PDO Examination Multiple Choice Model Question and Answers)
•─━━━━━═══════════━━━━━─••─━━━━━═══════════━━━━━─•

★ ಬಹು ಆಯ್ಕೆಯ ಪ್ರಶ್ನೋತ್ತರಗಳು
(Multiple Choice Question and Answers)




1) ಗ್ರಾಮ ಪಂಚಾಯತಿಗಳ ಲೆಕ್ಕ ಪತ್ರಗಳ ಪರಿಶೋಧನೆ ನಡೆಸುವವರಾರು?

ಎ. ರಾಜ್ಯ ಲೆಕ್ಕ ಪತ್ರಗಳ ನಿಯಂತ್ರಕರು
ಬಿ. ಸ್ಥಳೀಯ ಲೆಕ್ಕ ಪರಿಶೋಧನೆಗಳ ಸಹಾಯಕ ನಿಯಂತ್ರಕರು
ಸಿ. ಮುಖ್ಯ ಲೆಕ್ಕಾಧಿಕಾರಿಗಳು ಜಿ.ಪಂ            
ಡಿ. ಸಹಾಯಕ ಲೆಕ್ಕಾಧಿಕಾರಿಗಳು ತಾ.ಪಂ

ಉ: ಬಿ



2) ಹಣಕಾಸು ಆಯೋಗದ ಅಧ್ಯಕ್ಷರನ್ನು ಹೊಂದಾಣಿಸಿ

A. 2 ನೇ ಆಯೋಗ      1. ಮಹಾವೀರ ತ್ಯಾಗಿ

B. 4 ನೇ ಆಯೋಗ      2. ಪಿ.ವಿ.ರಾಜಮನ್ನಾರ

C. 5 ನೇ ಆಯೋಗ      3. ಕೆ. ಸಂತಾನಂ

D. 13 ನೇ ಆಯೋಗ     4. ವಿಜಯ್ ಎಲ್ ಕೇಳ್ಕರ್

ಎ. A-3 B-2 C-1 D- 4
ಬಿ. A-1 B-3 C-2 D- 4
ಸಿ. A-4 B-2 C-3 D- 1
ಡಿ. A-2 B-3 C-4 D- 1

ಉ: ಎ



3) ಇದು ಉತ್ಪಾದನಾ ಸಮಿತಿಯ ಒಂದು ಕಾರ್ಯ

ಎ. ಕೈಗಾರಿಕೆಗಳು
ಬಿ. ಸಾರ್ವಜನಿಕ ಆರೋಗ್ಯ
ಸಿ. ಶಿಕ್ಷಣ
ಡಿ. ಮೇಲಿನ ಎಲ್ಲವೂ

ಉ: ಎ



4) ಪ್ರಸ್ತುತ ಗ್ರಾಮ ಪಂಚಾಯತಿಯ ಮಹಿಳಾ ಸದಸ್ಯರ ಸಂಖ್ಯೆ ಎಷ್ಟು?

ಎ. 95000
ಬಿ. 35000
ಸಿ. 45000
ಡಿ. 49000

ಉ: ಸಿ



5) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?

ಎ. 1952
ಬಿ. 1962
ಸಿ. 1956
ಡಿ. 1887

ಉ: ಎ



6) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ ಯಾವುದು?

ಎ. ಜಿಲ್ಲಾ ಪಂಚಾಯತಿ
ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ
ಸಿ. ಜಿಲ್ಲಾ ಸಮಿತಿ
ಡಿ. ಜಿಲ್ಲಾ ಸ್ಥಾಯಿ ಸಮಿತಿ

ಉ: ಎ



7) ಗ್ರಾಮ ಪಂಚಾಯತಿಯ ನೌಕರರ ವಾರ್ಷಿಕ ವಿವರಣ ಪಟ್ಟಿಯನ್ನು ಮಹಾಲೇಖಪಾಲರಿಗೆ ಪ್ರತಿ ವರ್ಷ ಯಾವ ತಿಂಗಳಲ್ಲಿ ಸಲ್ಲಿಸಲಾಗುತ್ತದೆ.

ಎ. ಮಾರ್ಚ್ 31 ರೊಳಗೆ
ಬಿ. ಜೂನ್ 1 ರೊಳಗೆ
ಸಿ. ಮೇ 15 ರೊಳಗೆ
ಡಿ. ಏಪ್ರಿಲ್ 1 ರೊಳಗೆ

ಉ: ಸಿ



8) ಕ.ಪಂ.ರಾ.ಅ.1993ರ ಪ್ರಕರಣ 32 ಇದು ಈ ವಿಷಯಕ್ಕೆ ಸಂಬಂದಿಸಿದೆ

ಎ. ಸದಸ್ಯತ್ವ ಅನರ್ಹತೆಗೆ    
ಬಿ. ಮತದಾನಕ್ಕೆ      
ಸಿ. ಸದಸ್ಯನಾಗಲು ಅರ್ಹತೆ ಕುರಿತು      
ಡಿ. ಮತದಾನ ಕೇಂದ್ರಗಳಿಂದ ಮತ ಪತ್ರಗಳನ್ನು ತೆಗೆದುಕೊಂಡು ಹೋಗುವ ಅಪರಾಧ        

ಉ: ಡಿ



9) EFT ಇದು...

ಎ. Emergency Fund Tranceper  
ಬಿ.  Electronic Fund Tranceper  
ಸಿ. Electronic Fund Transaction
ಡಿ. None of the Above

ಉ: ಬಿ



10) GSK ಇದು...

ಎ.ಗ್ರಾಮೀಣ ಸಹಕಾರಿ ಕೇಂದ್ರ
ಬಿ. ಗ್ರಾಮೀಣ ಸ್ತ್ರೀಶಕ್ತಿ ಕೇಂದ್ರ
ಸಿ. ಗಾಂಧಿ ಸಾಕ್ಷಿ ಕಾಯಕ
ಡಿ ಯಾವುದು ಅಲ್ಲ

ಉ: ಸಿ

...ಮುಂದುವರೆಯುವುದು. 

Saturday 24 September 2016

☀.ಪಿಡಿಓ ಪರೀಕ್ಷೆ ವಿಶೇಷಾಂಕ - ಗ್ರಾಮ ವಿಕಾಸ ಯೋಜನೆ (Gram Vikas Yojana / Rural Development Scheme )

☀.ಪಿಡಿಓ ಪರೀಕ್ಷೆ ವಿಶೇಷಾಂಕ - ಗ್ರಾಮ ವಿಕಾಸ ಯೋಜನೆ
(Gram Vikas Yojana / Rural Development Scheme )
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 
(Rural Development & Panchayat Raj)


ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದ ಸುವರ್ಣ ಗ್ರಾಮೋದಯ ಯೋಜನೆಗೆ ಕೊಕ್ ನೀಡಿರುವ ರಾಜ್ಯ ಸರ್ಕಾರ, ಪರ್ಯಾಯವಾಗಿ ಸಮಗ್ರ ಗ್ರಾಮಾಭಿವೃದ್ಧಿಯ ಜತೆಗೆ ಗ್ರಾಮದ ಯುವಜನತೆಗೆ ಕೌಶಲ ತರಬೇತಿಯ ಮೂಲಕ ಅವರ ಜೀವನಮಟ್ಟ ಸುಧಾರಿಸುವ ಹೊಸ ‘ಗ್ರಾಮ ವಿಕಾಸ’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಾರಿಗೊಳಿಸಲಿರುವ ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ 3 ವರ್ಷಗಳ ಕಾಲಮಿತಿ ಹಾಕಿಕೊಂಡಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರತಿ ಗ್ರಾಮಕ್ಕೆ 75 ಲಕ್ಷ ರೂ.ನಂತೆ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು75 ಕೋಟಿ ರೂ.ಗಳನ್ನು ಯೋಜನೆಯಡಿ ವೆಚ್ಚ ಮಾಡಲಾಗುತ್ತದೆ.

ಅನುದಾನವನ್ನು ಬಳಕೆ ಮಾಡಿಕೊಳ್ಳುವ ಅಧಿಕಾರವನ್ನು ಗ್ರಾಪಂಗಳಿಗೆ ನೀಡಲಾಗಿದೆ. ಯಾವ ಯೋಜನೆಗಳಿಗೆ ಈ ಹಣ ಖರ್ಚು ಮಾಡಬೇಕು ಮತ್ತು ಯಾವುದಕ್ಕೆ ಖರ್ಚು ಮಾಡಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಾವಳಿ ರೂಪಿಸಲಾಗಿದೆ.

ಪ್ರತಿ 3 ತಿಂಗಳಿಗೊಮ್ಮೆ ಅನುದಾನವನ್ನು ಜಿಪಂಗಳ ಮೂಲಕ ಗ್ರಾಪಂಗಳ ಖಾತೆಗೆ ನೇರವಾಗಿ ಸಂದಾಯ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಪ್ರಗತಿಯನ್ನು ಪ್ರತಿ 2 ತಿಂಗಳಿಗೊಮ್ಮೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.


★ ನಿರುದ್ಯೋಗಳಿಗಾಗಿ ತರಬೇತಿ: 

ಗ್ರಾಮೀಣ ಭಾಗದ ಜನ ಕೃಷಿಯನ್ನಷ್ಟೇ ನೆಚ್ಚಿಕೊಳ್ಳಬಾರದೆಂಬ ಕಾರಣಕ್ಕೆ ಗ್ರಾಮ ವಿಕಾಸ ಯೋಜನೆಯಲ್ಲಿ ಯುವಕ-ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು.

ತರಬೇತಿ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು, ಸ್ವಸಹಾಯ ಗುಂಪುಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಸಂಘಗಳ ಒಕ್ಕೂಟ ಸ್ಥಾಪಿಸುವ ಅವಕಾಶ ಕಲ್ಪಿಸಲಾಗಿದೆ.

★ ಸುವರ್ಣ ಗ್ರಾಮೋದಯ ಸಮಾಪ್ತಿ ಏಕೆ?

ಬಿಜೆಪಿ-ಜೆಡಿಎಸ್ ಸಮಿಶ್ರ ಸರ್ಕಾರ ಸುವರ್ಣ ಗ್ರಾಮೋದಯ ಯೋಜನೆ ಜಾರಿಗೊಳಿಸಿತ್ತು. ಒಂದು ಗ್ರಾಮದ ಸಮಗ್ರ ಅಭಿವೃದ್ಧಿಗೆ 1 ಕೋಟಿ ರೂ. ಆರ್ಥಿಕ ನೆರವು ನೀಡಲಾಗುತ್ತಿತ್ತು. ಆದರೆ ನಂತರದ ಹಂತಗಳಲ್ಲಿ 1 ಕೋಟಿ ರೂಪಾಯಿಗಳನ್ನು 2 ಅಥವಾ 3 ಗ್ರಾಮಗಳಿಗೆ ಹಂಚಿಕೆ ಮಾಡಲಾಯಿತು. ಅಭಿವೃದ್ಧಿಗೆ ಅನುಗುಣವಾಗಿ ಅನುದಾನ ಹಂಚಿಕೆಯಾಗಲಿಲ್ಲ. ಮಹಾಲೇಖಪಾಲರು ಈ ರೀತಿಯ ಅನುದಾನ ಹಂಚಿಕೆಯ ಕುರಿತು ತಮ್ಮ ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಗ್ರಾಮ ವಿಕಾಸ ಯೋಜನೆ ಜಾರಿಗೊಳಿಸಲಾಗಿದೆ.

Friday 23 September 2016

☀.ಪಿಡಿಓ ಪರೀಕ್ಷೆ ವಿಶೇಷಾಂಕ - ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015 ರ ಪ್ರಮುಖ ಅಂಶಗಳು : (Karnataka Gram Swaraj and Panchayat Raj Act - 2015)

☀.ಪಿಡಿಓ ಪರೀಕ್ಷೆ ವಿಶೇಷಾಂಕ - ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015 ರ ಪ್ರಮುಖ ಅಂಶಗಳು :
(Karnataka Gram Swaraj and Panchayat Raj Act - 2015)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಮಸೂದೆ–2015 
(Karnataka Gram Swaraj and Panchayat Raj Act - 2015)



- ಪಂಚಾಯತ್ ರಾಜ್ ವ್ಯವಸ್ಥೆಗೆ ಬದಲಾವಣೆ.
- ಇತ್ತೀಚಿನ ವರ್ಷಗಳಲ್ಲೇ ಇದು ಅತ್ಯಂತ ಸುದೀರ್ಘ ಮಸೂದೆ.
- ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನಮಾನ, ಅದಕ್ಕೆ ತಕ್ಕ ಸಂಬಳ ಮತ್ತು ಇತರ ಸವಲತ್ತುಗಳು ಸಿಗಲಿವೆ.


●.ಮಸೂದೆಯಲ್ಲಿನ ಪ್ರಮುಖ ಅಂಶಗಳು :
━━━━━━━━━━━━━━━━━━━━━━━

ಗ್ರಾಮಮಟ್ಟದಿಂದ ರಾಜ್ಯ ಮಟ್ಟದ ವರೆಗಿನ ಎಲ್ಲ ಯೋಜನೆಗಳನ್ನು ತಾಲ್ಲೂಕು ಹಾಗೂ ಜಿಲ್ಲಾ ಯೋಜನಾ ಸಮಿತಿಗಳ ಮೂಲಕವೇ ಅನುಷ್ಠಾನಕ್ಕೆ ತರಲಾಗುತ್ತದೆ.

ಜಿಲ್ಲಾ ಸಮಿತಿಗಳಿಂದ ಬಂದ ಪ್ರಸ್ತಾವಗಳಿಗೆ ಅನುಮೋದನೆ ನೀಡಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸ್ಥಾಪಿಸಲಾಗುತ್ತದೆ.

ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಸಾಮಾನ್ಯ, ಸಾಮಾಜಿಕ ನ್ಯಾಯ ಹಾಗೂ ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಗಳನ್ನು ಹೊಂದಲು ಅವಕಾಶ ಕಲ್ಪಿಸಲಾಗುತ್ತದೆ.

ಚುನಾಯಿತ ಸದಸ್ಯರು ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆ ಮಾಡುವುದು ಕಡ್ಡಾಯವಾಗಿದೆ.


●.ಜನವಸತಿ ಸಭಾ :
━━━━━━━━━━━━━

ಗ್ರಾಮದ ಅಗತ್ಯಗಳಿಗೆ ತಕ್ಕಂತೆ ಯೋಜನೆ ರೂಪಿಸಲು ಜನವಸತಿ ಸಭಾ ಪರಿಕಲ್ಪನೆ ಪರಿಚಯ. ನಿರ್ಣಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

ಜನವಸತಿ ಸಭಾಗಳು ಆರು ತಿಂಗಳಿಗೆ ಕನಿಷ್ಠ ಒಂದು ಸಲ ಸಭೆ ಸೇರಬೇಕು.

ಆಯಾ ಜನವಸತಿ ಪ್ರದೇಶವನ್ನು ಪ್ರತಿನಿಧಿಸುವ ವಾರ್ಡಿನ ಚುನಾಯಿತ ಸದಸ್ಯ ಆ ಸಭೆಯ ಅಧ್ಯಕ್ಷತೆಯನ್ನು ವಹಿಸಬೇಕು.

ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಇಲ್ಲವೆ 20 ಸದಸ್ಯರು ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ಸಂಖ್ಯೆಯಲ್ಲಿ ಕೋರಂ ಇರಬೇಕು’

ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುದು, ನೈರ್ಮಲ್ಯ ಕಾಪಾಡಲು ಸಲಹೆ ನೀಡುವುದು, ವಸತಿ ಪ್ರದೇಶಕ್ಕೆ ಅಗತ್ಯವಾದ ಯೋಜನೆ ರೂಪಿಸುವುದು, ಬೀದಿದೀಪಗಳ ನಿರ್ವಹಣೆ, ನೀರಿನ ಪೂರೈಕೆ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವುದು ಜನವಸತಿ ಸಭಾದ ಕರ್ತವ್ಯಗಳಾಗಿವೆ’ .



●.ಗ್ರಾಮ ಪಂಚಾಯಿತಿ ಕರ್ತವ್ಯಗಳು :
━━━━━━━━━━━━━━━━━━━━━━

ಪಂಚಾಯಿತಿ ಪ್ರದೇಶದ ವಾರ್ಷಿಕ ಯೋಜನೆ ಸಿದ್ಧಪಡಿಸುವುದು.

ವಾರ್ಷಿಕ ಬಜೆಟ್‌ ಸಿದ್ಧಪಡಿಸುವುದು.

ಪ್ರಕೃತಿ ವಿಕೋಪಗಳಿಗೆ ಪರಿಹಾರ ಒದಗಿಸುವುದು.

ಸಾರ್ವಜನಿಕ ಸ್ವತ್ತುಗಳಲ್ಲಿನ ಅತಿಕ್ರಮಣ ತಡೆಯುವುದು.

ಸಮುದಾಯ ಕಾರ್ಯಗಳಿಗೆ ವಂತಿಗೆ ನೀಡುವುದು.

ಗ್ರಾಮಗಳ ಅತ್ಯಾವಶ್ಯಕ ಅಂಕಿಅಂಶ ಇಟ್ಟುಕೊಳ್ಳುವುದು.

ಸಮಗ್ರ ಗ್ರಾಮ ಕೃಷಿ ಯೋಜನೆ ಸಿದ್ಧಪಡಿಸಿ, ಮೇಲ್ವಿಚಾರಣೆ ನಡೆಸುವುದು

ನರ್ಸರಿ ಸ್ಥಾಪಿಸುವುದು

ಮಣ್ಣು, ನೀರು ಮತ್ತು ಬೀಜಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು

ಮಾರುಕಟ್ಟೆ ಧಾರಣೆ ಪ್ರದರ್ಶಿಸುವುದು

ಕೃಷಿವಿಮಾ ಯೋಜನೆಗಳ ಮೇಲ್ವಿಚಾರಣೆ ಮಾಡುವುದು

ಸಾಂಕ್ರಾಮಿಕ ರೋಗ ತಡೆಗಟ್ಟುವುದು

ಗ್ರಾಮೀಣ ಮೀನು ಮತ್ತು ಮಾಂಸದ ಮಾರುಕಟ್ಟೆ ಸ್ಥಾಪಿಸುವುದು

ಹುಲ್ಲುಗಾವಲು ಅಭಿವೃದ್ಧಿ ಮಾಡುವುದು

ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ ನೀಡುವುದು

ಆಹಾರ ಸಂಸ್ಕರಣೆಗೆ ಸಂಬಂಧಿಸಿದ ಚಟುವಟಿಕೆಗೆ ಉತ್ತೇಜನ ನೀಡುವುದು

ಗ್ರಾಮೀಣ ವಸತಿ ಸಹಕಾರ ಸಂಘಗಳ ಸ್ಥಾಪನೆ

ನೀರು ಸರಬರಾಜು ಯೋಜನೆ ನಿರ್ವಹಣೆ

ಸ್ಮಶಾನಗಳ ವ್ಯವಸ್ಥೆ

ಭೂ, ಜಲ ಮಾರ್ಗ ನಿರ್ವಹಣೆ

ಪ್ರಾಥಮಿಕ ಶಾಲೆಗಳ ಮೇಲುಸ್ತುವಾರಿ ನೋಡುವುದು

ವಾಚನಾಲಯಗಳ ನಿರ್ವಹಣೆ

ಆಟದ ಮೈದಾನ ನಿರ್ಮಾಣ

ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದು ಮತ್ತು ಜಾತ್ರೆಗಳನ್ನು ನಡೆಸುವುದು

ಎಸ್‌ಸಿ, ಎಸ್‌ಟಿ ಕಾಲೊನಿಗಳಿಗೆ ಸೌಲಭ್ಯ ಒದಗಿಸುವುದು

ಗ್ರಾಮದ ಇತಿಹಾಸ, ಸಂಸ್ಕೃತಿ, ಪರಂಪರೆಗಳ ದತ್ತಾಂಶ ಸಂಗ್ರಹ

ಒಟ್ಟು 30 ಇಲಾಖೆಗಳ ಹೊಣೆ ನಿರ್ವಹಣೆ



●.ತಾಲ್ಲೂಕು ಪಂಚಾಯಿತಿ ಕರ್ತವ್ಯಗಳು :
━━━━━━━━━━━━━━━━━━━━━━━

ಎಲ್ಲ ಗ್ರಾಮಗಳ ವಾರ್ಷಿಕ ಯೋಜನೆ ಪರಿಶೀಲನೆ

ತಾಲ್ಲೂಕು ಬಜೆಟ್‌ ಸಿದ್ಧಪಡಿಸುವುದು

ಜಿಲ್ಲಾ ಪಂಚಾಯಿತಿ ವಹಿಸಿದ ಕಾರ್ಯ ಮಾಡುವುದು

ಕೀಟನಾಶಕ ಸಂಗ್ರಹ ಮಾಡುವುದು

ಉಗ್ರಾಣ ಹಾಗೂ ಶೈತ್ಯಾಗಾರದ ವ್ಯವಸ್ಥೆ

ಸಂಚಾರಿ ಪಶುವೈದ್ಯಕೀಯ ಚಿಕಿತ್ಸಾಲಯಗಳ ನಿರ್ವಹಣೆ

ತಾಲ್ಲೂಕಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಗಳ ದತ್ತಾಂಶ ಸಂಗ್ರಹ



●.ಜಿಲ್ಲಾ  ಪಂಚಾಯಿತಿ :
━━━━━━━━━━━━━━

ಜಿಲ್ಲಾಮಟ್ಟದ ಯೋಜನೆಗಳ ಉಸ್ತುವಾರಿ

ಗೋದಾಮುಗಳ ಸ್ಥಾಪನೆ

ಅಂತರ್ಜಲ ಹೆಚ್ಚಿಸಲು ಯೋಜನೆ ರೂಪಿಸುವುದು

ಉದ್ಯೋಗ ಮೇಳ ನಡೆಸುವುದು

ಯುವಜನ ಮೇಳ ಏರ್ಪಡಿಸುವುದು

ದನಗಳ ಪರಿಷೆ ನಡೆಸುವುದು

ಜಿಲ್ಲಾ ಅಂಕಿ–ಸಂಖ್ಯೆಗಳ ಸಂಗ್ರಹ ಮಾಡುವುದು.

(Telegram App ನಲ್ಲಿ "ಸ್ಪರ್ಧಾಲೋಕ Channel ನ್ನು ಸೇರಲು ಈ ಕೆಳಗಿನ ಲಿಂಕ್ ನ್ನು ಕ್ಲಿಕ್ಕಿಸಿ.. https://telegram.me/spardhaloka

☀.(PART-VII) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳು : (PDO Examination Multiple Choice Model Question and Answers)

☀.(PART-VII) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ  ಪ್ರಶ್ನೋತ್ತರಗಳು :
(PDO Examination Multiple Choice Model Question and Answers)
•─━━━━━═══════════━━━━━─••─━━━━━═══════════━━━━━─•

★ ಬಹು ಆಯ್ಕೆಯ ಪ್ರಶ್ನೋತ್ತರಗಳು
(Multiple Choice Question and Answers)


1).ಜನವಸತಿ ಸಭಾದ ಅಧ್ಯಕ್ಷರು ಯಾರಾಗಿರುತ್ತಾರೆ?

A). ಊರಿನ ಹಿರಿಯ ವ್ಯಕ್ತಿ
B). ವಾರ್ಡಿನ ಚುನಾಯಿತನಾದ ಸದಸ್ಯ
C). ಗ್ರಾಮ ಪಂಚಾಯಿತಿಯ ಅಧ್ಯಕ್ಷ
D). ಗ್ರಾಮ ಸಭೆಯ ಅಧ್ಯಕ್ಷ

Correct Ans: (B)

Description:
ಉ: ವಾರ್ಡಿನ ಚುನಾಯಿತನಾದ ಸದಸ್ಯ
# ಆಯಾ ಜನವಸತಿ ಪ್ರದೇಶವನ್ನು ಪ್ರತಿನಿಧಿಸುವ ವಾರ್ಡಿನ ಚುನಾಯಿತನಾದ ಸದಸ್ಯನು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು.
# ವಾರ್ಡನ್ನು ಪ್ರತಿನಿಧಿಸುವ ಚುನಾಯಿತ ಸದಸ್ಯರ ಸಂಖ್ಯೆಯು ಒಂದಕ್ಕಿಂತ ಹೆಚ್ಚಾಗಿರುವ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿಯಲ್ಲಿ ತಮ್ಮ ಪೈಕಿಯೇ ಚುನಾಯಿತನಾದ ಸದಸ್ಯನೊಬ್ಬನು ಸಭೆಯನ್ನು ಕರೆದು ಅಧ್ಯಕ್ಷತೆಯನ್ನು ವಹಿಸತಕ್ಕದ್ದು.



2.)ವಾರ್ಡಿನ ಚುನಾಯಿತನಾದ ಸದಸ್ಯನ ಅನುಪಸ್ಥಿತಿಯಲ್ಲಿ ಯಾರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ?

A). ಜನವಸತಿ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಯಾವೊಬ್ಬ ಇತರೆ ಮತದಾರನು
B). ಗ್ರಾಮ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಅಧ್ಯಕ್ಷ
C). ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ
D). ಮೇಲಿನ ಯಾವುದೂ ಅಲ್ಲ

Correct Ans: (A)

Description:
ಉ: ಜನವಸತಿ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಯಾವೊಬ್ಬ ಇತರೆ ಮತದಾರನು
ವಾರ್ಡಿನ ಚುನಾಯಿತನಾದ ಸದಸ್ಯನು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು ಮತ್ತು ಆತನ / ಆಕೆಯ ಅನುಪಸ್ಥಿತಿಯಲ್ಲಿ ಸದರಿ ಜನವಸತಿ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಯಾವೊಬ್ಬ ಇತರೆ ಮತದಾರನು ಅಧ್ಯಕ್ಷತೆ ವಹಿಸತಕ್ಕದ್ದು.



3.)ಜನವಸತಿ ಸಭೆಯ ಅಧ್ಯಕ್ಷರು ಅವಶ್ಯಕವಾದ ಸಮಯದಲ್ಲಿ ಸಭೆ ಕರೆಯುವುದು ತಪ್ಪಿದರೆ ಯಾರು ಸಭೆಯನ್ನು ಕರೆಯುತ್ತಾರೆ?

A). ಜಿಲ್ಲಾ ಪಂಚಾಯತ್ ಅಧಿಕಾರಿಗಳು
B). ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
C). ಗ್ರಾಮ ಸಭೆಯ ಅಧ್ಯಕ್ಷ
D). ಗ್ರಾಮ ಪಂಚಾಯತ್‌ನ ಅಧ್ಯಕ್ಷ

Correct Ans: (B)

Description:
ಉ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
# ವಾರ್ಡ್‌ಗೆ ಚುನಾಯಿತನಾದ, ಜನವಸತಿ ಪ್ರದೇಶದಲ್ಲಿರುವ ಸದಸ್ಯನು ಜನವಸತಿ ಪ್ರದೇಶ ಸಭಾದ ಸಭೆಯನ್ನು ಯಾವಾಗ ಕರೆಯಬೇಕಾಗಿತ್ತೋ ಅಥವಾ ಕರೆಯುವುದು ಅವಶ್ಯಕವಾಗಿತ್ತೋ ಆಗ ಸಭೆಯನ್ನು ಕರೆಯಲು ಮತ್ತು ಸಭೆಯ ಅಧ್ಯಕ್ಷತೆಯನ್ನು ವಹಿಸಲು ತಪ್ಪಿದರೆ,
# ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಸಂದರ್ಭಾನುಸಾರವಾಗಿ ಕಾರ್ಯದರ್ಶಿಯವರು ಅಂಥ ಸಭೆಯನ್ನು ಕರೆಯತಕ್ಕದ್ದು.



4.)ಜನವಸತಿ ಪ್ರದೇಶ ಸಭಾದ ಸಭೆಗೆ ಎಷ್ಟು ಸದಸ್ಯರ ಸಂಖ್ಯೆಯು ಕೋರಂ ಆಗಿರತಕ್ಕದ್ದು?

A). ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಸದಸ್ಯರು ಅಥವಾ ಇಪ್ಪತ್ತು ಸದಸ್ಯರು
B). ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ನಾಲ್ಕರಷ್ಟು ಸದಸ್ಯರು ಅಥವಾ ಐವತ್ತು ಸದಸ್ಯರು
C). ಹತ್ತು ಜನ
D). ಮೇಲಿನ ಎಲ್ಲವೂ ತಪ್ಪು

Correct Ans: (A)

Description:
ಉ: ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಸದಸ್ಯರು ಅಥವಾ ಇಪ್ಪತ್ತು ಸದಸ್ಯರು
ಒಟ್ಟು ಮತದಾರರ ಪೈಕಿ ಕನಿಷ್ಠ ಐದನೇ ಒಂದರಷ್ಟು ಸದಸ್ಯರು ಅಥವಾ ಇಪ್ಪತ್ತು ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸದಸ್ಯರ ಸಂಖ್ಯೆಯು ಜನವಸತಿ ಪ್ರದೇಶ ಸಭಾದ ಸಭೆಗೆ ಕೋರಂ ಆಗಿರತಕ್ಕದ್ದು.



5.)ಜನವಸತಿ ಸಭೆಗೆ ಹಾಜರಾಗುವ ಮತದಾರರಲ್ಲಿ ಎಷ್ಟು ಕಡಿಮೆಯಿಲ್ಲದಷ್ಟು ಮಹಿಳೆಯರು ಇರಬೇಕು?

A). ಶೇ.25
B). ಶೇ.19
C). ಶೇ.30
D). ಶೇ.10

Correct Ans: (C)

Description:
ಉ: ಶೇ.30
ಜನವಸತಿ ಸಭೆಗೆ ಹಾಜರಾಗುವಂತಹ ಮತದಾರರ ಸಂಖ್ಯೆಯಲ್ಲಿ ಶೇ. 30 ಕ್ಕೆ ಕಡಿಮೆ ಇಲ್ಲದಷ್ಟು ಸಂಖ್ಯೆಯ ಮಹಿಳೆಯರಿರಬೇಕು.



6.)ಜನವಸತಿ ಸಭೆಯ ಎರಡು ವಿಶೇ‍ಷ ಸಭೆಗಳ ನಡುವೆ ಇರಬೇಕಾದ ಅಂತರ ಎಷ್ಟು?

A). ಒಂದು ತಿಂಗಳು
B). ಆರು ತಿಂಗಳು
C). ಒಂದು ವರ್ಷ
D). ಮೂರು ತಿಂಗಳು

Correct Ans: (D)

Description:
ಉ: ಮೂರು ತಿಂಗಳು
# ಜನವಸತಿ ಪ್ರದೇಶದ ವಿಶೇಷ ಸಭೆಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಥವಾ ಸಂಧರ್ಭಾನುಸಾರವಾಗಿ ಕಾರ್ಯದರ್ಶಿಯು, ಜನವಸತಿ ಪ್ರದೇಶದ ಮತದಾರರ ಕೊನೆಯ ಪಕ್ಷ ಶೇ. 10ರಷ್ಟು ಕಡಿಮೆಯಲ್ಲದ ಮತದಾರರು ಸಭೆಯಲ್ಲಿ ಚರ್ಚಿಸಬೇಕಾದ ವಿಷಯವನ್ನು ನಿರ್ದಿಷ್ಟಪಡಿಸಿ, ಲಿಖಿತ ಮನವಿಯನ್ನು ಸಲ್ಲಿಸಿದಾಗ ಕರೆಯತಕ್ಕದ್ದು.
# ಷರತ್ತು : ಮೂರು ತಿಂಗಳ ಅವಧಿಯೊಳಗೆ ಎರಡು ಸಲ ವಿಶೇಷ ಸಭೆಗಳನ್ನು ಕರೆಯತಕ್ಕದಲ್ಲ.



7.)ಮುಂದೂಡಿದ ಜನವಸತಿ ಸಭೆಗೆ ಕೋರಂ ಅಗತ್ಯ?

A). ಹೌದು
B). ಇಲ್ಲ
C). ಗರಿಷ್ಟ ಪ್ರಮಾಣ ಅವಶ್ಯಕ
D). ಮೇಲಿನ ಎಲ್ಲವೂ ತಪ್ಪು

Correct Ans: (B)

Description:
ಉ: ಇಲ್ಲ
ಮುಂದೂಡಿದ ಜನವಸತಿ ಸಭೆಗೆ ಯಾವುದೇ ಕೋರಂ ಅಗತ್ಯ ಇರತಕ್ಕದ್ದಲ್ಲ.



8.)ಕೆಳಗಿನವರಲ್ಲಿ ಜನವಸತಿ ಪ್ರದೇಶದ ತುರ್ತು ಸಭೆಯನ್ನು ಯಾರು ಕರೆಯಬಹುದು?

A). ಜನವಸತಿ ಪ್ರದೇಶದ ಚುನಾಯಿತ ಸದಸ್ಯರು
B). ಗ್ರಾಮ ಸಭೆಯ ಅಧ್ಯಕ್ಷರು
C). ಜಿಲ್ಲಾ ಪಂಚಾಯತ್ ಕಾರ್ಯದರ್ಶಿ
D). ಮೇಲಿನ ಎಲ್ಲವೂ ತಪ್ಪು

Correct Ans: (A)

Description:

ಉ: ಜನವಸತಿ ಪ್ರದೇಶದ ಚುನಾಯಿತ ಸದಸ್ಯರು
#1ನೇ ಅಥವಾ 2ನೇ ಉಪಪ್ರಕರಣದಲ್ಲಿ ಏನೇ ಒಳಗೊಂಡಿದ್ದರೂ, ಪ್ರಕೃತಿ ವಿಕೋಪ ಉಂಟಾದಾಗ ಅಥವಾ ಸಾರ್ವಜನಿಕ ಮಹತ್ವದ ತುರ್ತು ವಿಷಯದ ಸಂದರ್ಭದಲ್ಲಿ ಜನವಸತಿ ಪ್ರದೇಶದ ತುರ್ತು ಸಭೆಯನ್ನು ಸಂಬಂಧಪಟ್ಟ ಜನವಸತಿ ಪ್ರದೇಶದ ಚುನಾಯಿತ ಸದಸ್ಯರು ಕರೆಯಬಹುದು.



9.)ಜನವಸತಿ ಪ್ರದೇಶದ ತುರ್ತು ಸಭೆಯಲ್ಲಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಯಾರು ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುತ್ತಾರೆ?

A). ಉಪಾಧ್ಯಕ್ಷ
B). ಸದಸ್ಯ
C). ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ
D). ಮೇಲಿನ ಎಲ್ಲರೂ

Correct Ans: (A)
Description:

ಉ: ಉಪಾಧ್ಯಕ್ಷ
#ಜನವಸತಿ ಪ್ರದೇಶದ ತುರ್ತು ಸಭೆಯನ್ನು ಸಂಬಂಧಪಟ್ಟ ಜನವಸತಿ ಪ್ರದೇಶದ ಚುನಾಯಿತ ಸದಸ್ಯರು ಕರೆಯಬಹುದು ಮತ್ತು ಸದರಿ ಜನವಸತಿ ಪ್ರದೇಶದ ಚುನಾಯಿತ ಸದಸ್ಯರು ಮತ್ತು ಅಧ್ಯಕ್ಷನು ಅಥವಾ ಉಪಾಧ್ಯಕ್ಷನು ಅಥವಾ ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗೆ ಚುನಾಯಿತರಾಗಿರುವ ಯಾವೊಬ್ಬ ಸದಸ್ಯರು ಅಂಥ ತುರ್ತು ಸಭೆಗೆ ಹಾಜರಾಗತಕ್ಕದ್ದು. ಅಧ್ಯಕ್ಷರು ಅಂಥ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು ಮತ್ತು ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು.



10.)ಜನವಸತಿ ಸಭಾದ ಸಭೆಯಲ್ಲಿ ಚರ್ಚಿಸಿ ಸದ್ಯಸರ ಬಹುಮತದಿಂದ ಅಂಗೀಕರಿಸಿದ ನಿರ್ಣಯಗಳನ್ನು ಎಲ್ಲಿ ಮಂಡಿಸಲಾಗುತ್ತದೆ?

A). ಗ್ರಾಮ ಪಂಚಾಯಿತಿ
B). ಗ್ರಾಮ ಸಭೆ
C). ತಾಲ್ಲೂಕು ಪಂಚಾಯಿತಿ
D). ಜಿಲ್ಲಾ ಪಂಚಾಯಿತಿ

Correct Ans: (B)

Description:
ಉ: ಗ್ರಾಮ ಸಭೆ
# ಸಭೆಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಎಲ್ಲಾ ನಿರ್ಣಯಗಳನ್ನು ಹಾಜರಿದ್ದು ಮತ ಚಲಾಯಿಸುವ ಸದ್ಯಸರ ಬಹುಮತದಿಂದ ಅಂಗೀಕರಿಸತಕ್ಕದ್ದು.
# ಷರತ್ತು : ಆಸಕ್ತ ಗುಂಪು ಒತ್ತು ನೀಡಿದ ಅಗತ್ಯತೆಗಳನ್ನು ಜನವಸತಿ ಸಭಾದ ಸಭೆಯಲ್ಲಿ ಚರ್ಚಿಸತಕ್ಕದ್ದು ಮತ್ತು ಅದನ್ನು ತನ್ನದೆಂಬಂತೆಯೆ ದಾಖಲಿಸತಕ್ಕದ್ದು ಹಾಗೂ ಗ್ರಾಮಸಭೆಯ ಸಭೆಯಲ್ಲಿ ಮಂಡಿಸಲು ಗ್ರಾಮ ಸಭೆಗೆ ಅದನ್ನು ಕಳುಹಿಸತಕ್ಕದ್ದು.

(Courtesy : WhatsApp Friends)
... ಮುಂದುವರೆಯುವುದು. 

Thursday 22 September 2016

☀.(PART-VI) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳು : (PDO Examination Multiple Choice Model Question and Answers)

☀.(PART-VI) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ  ಪ್ರಶ್ನೋತ್ತರಗಳು :
(PDO Examination Multiple Choice Model Question and Answers)
•─━━━━━═══════════━━━━━─••─━━━━━═══════════━━━━━─•

★ ಬಹು ಆಯ್ಕೆಯ ಪ್ರಶ್ನೋತ್ತರಗಳು
(Multiple Choice Question and Answers)


1) ನಮೂನೆ ನಂ 20 ಪುಸ್ತಕ ಯಾವುದು?
ಎ. ಸಾಮಾನ್ಯ ಪಾವತಿ ಪುಸ್ತಕ
ಬಿ. ತೆರಿಗೆ ಪುಸ್ತಕ    
ಸಿ. ವೇತನ ಪುಸ್ತಕ    
ಡಿ. ಯಾವೂದು ಅಲ್ಲ

ಉ: ಎ


2) 1927ರ ಹೊತ್ತಿಗೆ ಹಿಂದಿನ ಮೈಸೂರು ಸಂಸ್ಥಾನದ ಎಷ್ಟು ಜಿಲ್ಲೆಗಳಲ್ಲಿ ಸರಕಾರೇತರ ಚುನಾಯಿತ ವ್ಯಕ್ತಿಗಳು ಜಿಲ್ಲಾ ಮಂಡಳಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು?

ಎ. 19
ಬಿ. 13
ಸಿ. 08
ಡಿ. 09

ಉ:ಸಿ


3)  ಸಂವಿಧಾನದ 73ನೇ ತಿದ್ದುಪಡಿಯ 243 1ನೇ ಅನುಚ್ಛೇದ ಯಾವುದಕ್ಕೆ ಸಂಬಂಧಿಸಿದೆ?

ಎ. ಜಿಲ್ಲಾ ಯೋಜನಾ ಸಮಿತಿ ರಚೆನೆಗೆ
ಬಿ. ಹಣಕಾಸು ಆಯೋಗ ರಚೆನೆಗೆ
ಸಿ. ಚುನಾವಣಾ ಆಯೋಗ ರಚೆನೆಗೆ
ಡಿ. ಯಾವೂದು ಅಲ್ಲ

ಉ: ಬಿ


4) ಪ್ರಸ್ತುತವಾಗಿ ಶಾಸಕರ/ವಿಧಾನ ಪರಿಷತ್ತ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುಧಾನವನ್ನು ____ ಯೋಜನೆಯೊಂದಿಗೆ ವಿಲಿನಗೊಳಿಸಲಾಗಿದೆ

ಎ. ಗ್ರಾಮ.ವಿಕಾಸ
ಬಿ. MGNREGA
ಸಿ. ಆದರ್ಶ ಗ್ರಾಮ
ಡಿ.ಜಲ ನಿರ್ಮಲ

ಉ: ಬಿ


5) ಜಲ ನಿರ್ಮಲ ಯೋಜನೆಗೆ ನೆರವು ನೀಡುವವರು ಯಾರು?

ಎ. ವಿಶ್ವ ಬ್ಯಾಕ
ಬಿ. ಕೇಂದ್ರ ಸರಕಾರ
ಸಿ. ರಾಜ್ಯ ಸರಕಾರ
ಡಿ. ಬಿ&ಸಿ

ಉ: ಎ


6) ಮಾಹಿತಿ ಹಕ್ಕು ಅಧಿನಿಯ 2005ರಡಿ ಗ್ರಾಮ ಪಂಚಾಯತಿ ಮೊದಲನೇ ಮೇಲ್ಮನವಿ ಪ್ರಾಧಿಕಾರಿ ಯಾರು?

ಎ. ಪಿ.ಡಿ.ಓ
ಬಿ. ಕಾರ್ಯದರ್ಶಿ
ಸಿ. ಕಾರ್ಯನಿರ್ವಾಹಕ ಅಧಿಕಾರಿ
ಡಿ. ಅಧ್ಯಕ್ಷರು

ಉ: ಎ


7) ಮಾಹಿತಿ ಹಕ್ಕು ಅಧಿನಿಯ 2005ರಡಿ ಫ್ಲಾಪಿ/ಡಿಸ್ಕೆಟ್ ನಲ್ಲಿ ಮಾಹಿತಿ ಪಡೆಯಲು ರೂ____ ಹಣ ಸಂಧಾಯ ಮಾಡಬೇಕಾಗುತ್ತದೆ.

ಎ. 100 ರೂ
ಬಿ. 50 ರೂ
ಸಿ. 30 ರೂ
ಡಿ. 20 ರೂ

ಉ: ಬಿ


8) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?

ಎ. 195
ಬಿ. 1962
ಸಿ. 1956
ಡಿ. 1887

ಉ: ಎ


9) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ ಯಾವುದು?

ಎ. ಜಿಲ್ಲಾ ಪಂಚಾಯತಿ
ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ
ಸಿ. ಜಿಲ್ಲಾ ಸಮಿತಿ
ಡಿ. ಜಿಲ್ಲಾ ಸ್ಥಾಯಿ ಸಮಿತಿ

ಉ: ಎ


10) ಭೂಮಿ,ಬಾಲಾಶ್ರಮ & ಮುಖ್ಯ ವಾಹಿನಿ ಇವುಗಳೆಲ್ಲಾ……….

ಎ. ಕರ್ನಾಟಕ ಗ್ರಾಮೀಣಾಭೀವೃದ್ಧಿ ಯೋಜನೆಗಳು
ಬಿ. ಇ-ಕಾರುಬಾರು ಯೋಜನೆಗಳು(ಕರ್ನಾಟಕ)
ಸಿ. ವಿಶ್ವ ಬ್ಯಾಂಕಿನಿಂದ ಹಣಕಾಸು ಪಡೆದ ಯೋಜನೆಗಳು            
ಡಿ. ಮಕ್ಕಳ ಸಹಾಯವಾಣಿ          

ಉ: ಬಿ

...ಮುಂದುವರೆಯುವುದು. 

Wednesday 21 September 2016

☀.(PART-V) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ ಪ್ರಶ್ನೋತ್ತರಗಳು : (PDO Examination Multiple Choice Model Question and Answers)

☀.(PART-V) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ  ಪ್ರಶ್ನೋತ್ತರಗಳು :
(PDO Examination Multiple Choice Model Question and Answers)
•─━━━━━═══════════━━━━━─••─━━━━━═══════════━━━━━─•

★ ಬಹು ಆಯ್ಕೆಯ ಪ್ರಶ್ನೋತ್ತರಗಳು
(Multiple Choice Question and Answers)



1. " ಸಮಾಜದ ಸುರಕ್ಷಿತವಲ್ಲದ ವರ್ಗಗಳು " ಎಂದರೆ ?

A. ರೋಗಗ್ರಸ್ಥರು ಮತ್ತು ಅಶಕ್ತರು
B. ಬುಡಕಟ್ಟು ಸಮೂಹಗಳ ಮತ್ತು ವಲಸೆ ಕಾರ್ಮಿಕರು
C.ಸಮಾಜದ ದಾರ್ಮಿಕ ˌ ಭಾಷಾ ಮತ್ತು ಲೆೃಂಗಿಕ ಅಲ್ಪಸಂಖ್ಯಾತರು✔
D.ಮೇಲಿನ ಎಲ್ಲವು


2. ಈ ಕೆಳಗಿನ ಯಾವ ಸಮಿತಿಯು ಎಸ್ . ಸಿ. ಮತ್ತು ಮಹಿಳೆಯರಿಗೆ ಸೂಕ್ತ ಮಿಸಲಾತಿ ಒದಗಿಸಿತು ?

A. ಅಶೋಕ ಮೇಹ್ತಾ ಸಮಿತಿ
B. ಎಲ್ . ಎಮ್ . ಸಿಂಘ್ವಿ ಸಮಿತಿ✔
C. ಜಿ. ವಿ. ಕೆ. ರಾವ್ ಸಮಿತಿ
D. ಬಲವಂತರಾಯ ಮೇಹ್ತಾ ಸಮಿತಿ


3. ಕರ್ನಾಟಕ ಪಂಚಾಯತ ರಾಜ್ ಅಧಿನಿಯಮದ ಪ್ರಕರಣ 2ಅ ಈ ಕೆಳಗಿನ ಯಾವುದನ್ನು ಸೂಚಿಸುತ್ತದೆ ?

A. ಗ್ರಾಮ ಸಭೆ
B. ವಾರ್ಡ ಸಭೆ
C.ಜನವಸತಿ ಸಭೆ
D. ಪಂಚಾಯತ ನೀತಿ ನಿರ್ದೇಶಕ ತತ್ವಗಳು✔


4. ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಯು ?

A.ಪಂಚಾಯತ ಅಭಿೃವೃಧ್ಧಿ ಅಧಿಕಾರಿ
B. ಕಾರ್ಯದರ್ಶಿ✔
C. ಪಂಚಾಯತ ಅಧ್ಯಕ್ಷರು
D.ದ್ವೀತಿಯ ದರ್ಜೆ ಲೆಕ್ಕ ಸಹಾಯಕರು


5. ಜನವಸತಿ ಸಭೆಯು ಕಾರ್ಯಕಲಾಪಗಳನ್ನು ನಿರ್ಧರಿಸಲು ನಡೆಸುವ ಸಭೆಯನ್ನು ಯಾರು ಆಯೋಜಿಸುವವರು ?

A. ಪಂಚಾಯತ ಅಭಿವೃಧ್ಧಿ ಅಧಿಕಾರಿ
B. ಅಧ್ಯಕ್ಷರು
C. ಆಯಾ ವಾರ್ಡಿನ ಸದಸ್ಯರು✔
D. ಅಧ್ಯಕ್ಷರು ಅಪ್ಪಣೆಯ ಮೇರೆಗೆ ಪಂಚಾಯತ ಅಭಿವೃಧ್ಧಿ ಅಧಿಕಾರಿಗಳು


6. ಗ್ರಾಮ ಸಭೆಯ ಕೋರಂ ?

A.1/10✔
B. 1/2
C.2/3
D. 1/12


7. ಗ್ರಾಮ ಸಭೆಗಳ ವಿಶೇಷ ಆಯವ್ಯಯ್ ಸಭೆಯನ್ನು ಈ ತಿಂಗಳಲ್ಲಿ ಕರೆಯಲಾಗುವುದು ?

A. ಜನೇವರಿ ಮತ್ತು ಜೂನ್
B. ಜುಲೆೃ ಮತ್ತು ಡಿಸೆಂಬರ್
C. ಮಾರ್ಚ ಮತ್ತು ನವ್ಹೆಂಬರ
D. ಏಪ್ರೀಲ್ ಮತ್ತು ಅಕ್ಟೋಂಬರ✔


8. ಕರ್ನಾಟಕ ಸರ್ಕಾರವು ————  ಆ ದೇಶದಲ್ಲಿ ರಾಜ್ಯದ ಪ್ರತಿ ಪಂಚಾಯತಿಗೆ ಪಿ.ಡಿ.ಓ. ಹುದ್ದೆಯನ್ನು ಸೃಷಿಸಿದೆ ?

A. 31. 03. 2008✔
B. 31. 03. 2010
C. 31. 03. 2007
D. 31. 03. 2013


9. ಗ್ರಾ.ಪಂ. ಯಲ್ಲಿ ಸ್ಥಾಯಿ ಸಮಿತಿಗಳ ಕುರಿತು ವಿವರಿಸುವ ಪ್ರಕರಣ

A. 61✔
B. 62 A
C. 61 C
D. 60


10. ಗ್ರಾ.ಪಂ. ವ್ಯಾಪ್ತಿಯಲ್ಲಿ ಸೌರದೀಪ ಅಳವಡಿಸುವ ಸೌರ ಬೆಳಕು ಎಂಬ ಯೋಜನೆಯನ್ನು ಅನುಷ್ಟಾನಗೋಳಿಸಿದ ವರ್ಷ ?

A. 2009—10✔
B. 2011—12
C. 2008— 09
D. 2010— 11

Monday 19 September 2016

☀(PSI) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ - 2016 ಗೆ ಅರ್ಜಿ ಸಲ್ಲಿಸುವ ಮುನ್ನ. ( Procedure of Applying for PSI posts - How to Apply for PSI)

☀(PSI) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ - 2016 ಗೆ ಅರ್ಜಿ ಸಲ್ಲಿಸುವ ಮುನ್ನ.
( Procedure of Applying for PSI posts - How to Apply for PSI)
•─━━━━━═══════════━━━━━─••─━━━━━═══════════━━━━━─•

★ ಪೊಲೀಸ್ ಸಬ್ ಇನ್ಸ್‌ಪೆಕ್ಟರ್  ಪರೀಕ್ಷೆ ಸಿದ್ಧತೆ
(PSI Exam preparation)
     

ರಾಜ್ಯ ಪೊಲೀಸ್ ಇಲಾಖೆ ನಾಗರಿಕ, ಕೆಎಸ್ಆರ್ಪಿ ಮತ್ತು ವೈರ್ಲೆಸ್ ವಿಭಾಗದಲ್ಲಿ ಖಾಲಿ ಸಬ್-ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗಮನಿಸಬೇಕಾದ ಮಾಹಿತಿಯನ್ನು ಪ್ರಶ್ನೋತ್ತರ ಮಾದರಿಯಲ್ಲಿ ಇಲ್ಲಿ ನೀಡಲಾಗಿದೆ.


●.ಅರ್ಜಿ ಶುಲ್ಕವನ್ನು ಪಾವತಿಸುವುದು ಹೇಗೆ?

ಆನ್ಲೈನ್ ಮೂಲಕ ಸೃಜಿಸಿರುವ ಬ್ಯಾಂಕ್ ಚಲನ್ನ್ನು ಮುದ್ರಿಸಿ, ಸ್ಟೇಟ್ ಬ್ಯಾಂಕ್ ಅಫ್ ಮೈಸೂರು ಅಥವಾ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ್ ಅಧಿಕೃತ ಶಾಖೆಗಳಲ್ಲಿ ಬ್ಯಾಂಕಿನ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಬಹುದು. ಬೇರಾವುದೇ ಬ್ಯಾಂಕಿನಲ್ಲಿ ಪಾವತಿಸಲು ಅವಕಾಶವಿರುವುದಿಲ್ಲ. ಪೋಸ್ಟಲ್ ಆರ್ಡರ್, ಮನಿ ಆರ್ಡರ್ ಅಥವಾ ಇನ್ಯಾವುದೇ ಸ್ವರೂಪದಲ್ಲಿ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗಿಲ್ಲ. ಶುಲ್ಕವನ್ನು ಪಾವತಿಸದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.



●.ಒಮ್ಮೆ ಪಾವತಿಸಿದ ಶುಲ್ಕವನ್ನು ಹಿಂಪಡೆಯಬಹುದೇ?

ಒಮ್ಮೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ, ಸೃಜಿಸಿರುವ ಚಲನ್ನಿಂದ ಸಂಬಂಧಪಟ್ಟ ಬ್ಯಾಂಕಿನಲ್ಲಿ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಕಾರಣಕ್ಕೂ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಹಾಗೂ
ಈ ನೇಮಕಾತಿ ಸಮಿತಿಯು ನೆಡಸುವ ಬೇರೆ ಯಾವುದೇ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.



●.ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳು ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು?

ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿರುವ ಹುದ್ದೆಗಳಿಗೆ ಮಹಿಳಾ ಆಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದಾಗಿದೆ. ವೈರ್ಲೆಸ್ ಮತ್ತು ನಾಗರಿಕ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.



●.ಆನ್ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ ಮಾಡಲು ಅವಕಾಶವಿದೆಯೇ?

ಒಮ್ಮೆ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ನಂತರ ನೀಡಿರುವ ಮಾಹಿತಿಯನ್ನು ಯಾವುದೇ ಹಂತದಲ್ಲಿ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.



●.ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ತಾಂತ್ರಿಕ ದೋಷಗಳು ಉಂಟಾದಲ್ಲಿ ಯಾರನ್ನು ಸಂರ್ಪಕಿಸಬೇಕು?

*ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ಅಥವಾ ಬೇರೆ ಸಮಸ್ಯೆಗಳು ಎದುರಾದಲ್ಲಿ ನೇಮಕಾತಿ ಸಮಿತಿಯ ಸಹಾಯವಾಣಿ ಸಂಖ್ಯೆ:

 080-22943346ಗೆ ಕರೆ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದಾಗಿದೆ. ಸಮಸ್ಯೆ ಸರಿಯಾದ ಪಕ್ಷದಲ್ಲಿ ಆನ್ಲೈನ್ನಲ್ಲಿ ಭರ್ತಿ ಮಾಡಿರುವ ಮಾಹಿತಿಯು ಲಭ್ಯವಿದ್ದಲ್ಲಿ ಸದರಿ ಅರ್ಜಿಯನ್ನೇ ಮುಂದುವರೆಸಬಹುದು ಅಥವಾ ಹೊಸ ಅರ್ಜಿಯನ್ನು ತೆರೆದು ಮಾಹಿತಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಬಹುದು.



●.ಒಂದಕ್ಕಿಂತ ಹೆಚ್ಚಿನ ಅರ್ಜಿಯನ್ನು ಸಲ್ಲಿಸಬಹುದೇ?

ಇಲ್ಲ, ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚಿನ ಅರ್ಜಿಯನ್ನು ಸಲ್ಲಿಸಿದಲ್ಲಿ ಅಂತಿಮವಾಗಿ / ಕೊನೆಯಾದಾಗಿ ಸಲ್ಲಿಸಲಾಗುವ ಅರ್ಜಿಯನ್ನು ಮಾತ್ರ ಪರಿಗಣಿಸಿಸಲಾಗುತ್ತದೆ. ಉಳಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.



●.ಈ ಹುದ್ದೆಗೆ ನಾನು ಅರ್ಹನಿರುವ ಬಗ್ಗೆ ಹೇಗೆ ತಿಳಿದುಕೊಳ್ಳುವುದು?

ಪೊಲೀಸ್ ಇಲಾಖೆಯ ವೆಬ್ನಲ್ಲಿ ಪ್ರಕಟಸಿರುವ ಅಧಿಸೂಚನೆಯನ್ನು ಮೊದಲು ಸಂಪೂರ್ಣವಾಗಿ ಓದಿಕೊಳ್ಳಿ. ಇಲ್ಲಿ ವಿದ್ಯಾರ್ಹತೆ, ದೇಹದಾಢ್ರ್ಯತೆ, ಸಹಿಷ್ಣುತೆ ಬಗ್ಗೆ ಮತ್ತು ವಯೋಮಿತಿಯ ಬಗ್ಗೆ ನೀಡಿರುವ ಮಾಹಿತಿಯನ್ನು ಓದಿಕೊಂಡು ಈ ಹುದ್ದೆಗೆ ನೀವು ಅರ್ಹರೇ ಎಂಬುದನ್ನು ನೀವೇ ಪರಿಶೀಲಿಸಿಕೊಳ್ಳಿ.ಅರ್ಹರಿದ್ದಲ್ಲಿ ಮಾತ್ರ ಆನ್ಲೈನ್ ಮೂಲಕ ಅರ್ಜಿಸಲ್ಲಿಸಿ.



●.ದೇಹದಾಢ್ರ್ಯತೆ / ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಇತರೆ ವೈದ್ಯರಿಂದ ಪ್ರಮಾಣ ಪತ್ರ ಪಡೆದು ನೀಡಬಹುದೇ?

ಇಲ್ಲ. ಇತರೆ ಯಾವುದೇ ವೈದ್ಯರಿಂದ ಪಡೆದ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ. ನೇಮಕಾತಿ ಸಮಿತಿಯಿಂದ ನಿರ್ದೇಶಿಸಲ್ಪಟ್ಟಿರುವ ಅಧಿಕಾರಿಗಳು ತಪಾಸಣೆಯ ನಂತರ ನೀಡಲಾಗುವ ಪ್ರಮಾಣ ಪತ್ರವನ್ನು
ಮಾತ್ರ ಪರಿಗಣಿಸಲಾಗುತ್ತದೆ ಹಾಗೂ ವೈದ್ಯಕೀಯ ಮಂಡಳಿಯ ಮುಂದೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರದಲ್ಲಿನ ಫಲಿತಾಂಶವೇ ಅಂತಿಮವಾಗಿರುತ್ತದೆ.



●.BMI ಎಂದರೇನು ?
 ಎಂದರೆ body mass index ಎಂದು. ಬಿಎಮ್ಐ ಯಂತ್ರದಿಂದ ದೇಹದಾಢ್ರ್ಯತೆ ಪರೀಕ್ಷೆಯ ಎತ್ತರ ಹಾಗೂ ತೂಕವನ್ನು ಅಳತೆ ಮಾಡಲಾಗುವುದು.



●. ಲಿಖಿತ ಪರೀಕ್ಷೆಗೆ ತರಬೇಕಾದ ದಾಖಲೆಗಳೇನು?

ಲಿಖಿತ ಪರೀಕ್ಷೆಗೆ ಹಾಜರಾಗಲು ಲಿಖಿತ ಪರೀಕ್ಷೆಯ ಕರೆಪತ್ರ ಮತ್ತು ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು, ತಪ್ಪಿದಲ್ಲಿ ಲಿಖಿತ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗುವುದಿಲ್ಲ.



●.ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಯಾವ ಭಾಷೆಯಲ್ಲಿರುತ್ತದೆ, ಯಾವ ಭಾಷೆಯಲ್ಲಿ ಉತ್ತರಿಸಬಹುದು?

ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿರುತ್ತವೆ. ಪರೀಕ್ಷೆಯಲ್ಲಿನ ಪತ್ರಿಕೆ-1ಕ್ಕೆ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಉತ್ತರಿಸಬಹುದುದಾಗಿದೆ. ಪತ್ರಿಕೆ-2 ವಸ್ತುನಿಷ್ಠ ಮಾದರಿಯದ್ದಾಗಿದ್ದು, ಒಎಂಆರ್ ಶೀಟ್ನಲ್ಲಿ ಉತ್ತರವನ್ನು ಗುರುತಿಸಬೇಕಾಗಿರುತ್ತದೆ.



●.ಮೌಖಿಕ ಪರೀಕ್ಷೆ ಎಂದರೇನು ಹಾಗೂ ಮೌಖಿಕ ಪರೀಕ್ಷೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?

*ಮೌಖಿಕ ಪರೀಕ್ಷೆ ಎಂದರೆ ಸಂದರ್ಶನ* ಅಭ್ಯರ್ಥಿಗಳು ಲಿಖಿತ ಪರೀಕ್ಷೆಯ ಪತ್ರಿಕೆ-1 ಮತ್ತು 2ರಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೀಸಲಾತಿ ಅರ್ಹತೆಯನುಸಾರ 1:2ರ ಪ್ರಮಾಣದಲ್ಲಿ ಪ್ರತಿ ಗುಂಪು/ಜಾತಿ/ಪಂಗಡಗಳ ಅಭ್ಯರ್ಥಿಗಳನ್ನು ಈ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಮೌಖಿಕ ಪರೀಕ್ಷೆಯಲ್ಲಿ ಅಂದರೆ ಸಂದರ್ಶನದಲ್ಲಿ ನೇಮಕಾತಿ ಸಮಿತಿಯ ಆಯ್ಕೆ ಪ್ರಾಧಿಕಾರವು ಕೆಳಲಾಗುವ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿರುತ್ತದೆ.



●.ಮೌಖಿಕ ಪರೀಕ್ಷೆಯನ್ನು ಯಾರು ನಡೆಸುತ್ತಾರೆ ?
ಮೌಖಿಕ ಪರೀಕ್ಷೆಯನ್ನು ನೇಮಕಾತಿ ಸಮಿತಿಯ ಆಯ್ಕೆ ಪ್ರಾಧಿಕಾರವು ನಡೆಸುತ್ತದೆ.



●.ಮೌಖಿಕ ಪರೀಕ್ಷೆಗೆ ಎಷ್ಟು ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ?
ಮೌಖಿಕ ಪರೀಕ್ಷೆಗೆ 10 (ಹತ್ತು) ಅಂಕಗಳನ್ನು ನಿಗದಿಪಡಿಸಲಾಗಿದೆ.



●.ಸಬ್ಇನ್ಸ್ಪೆಕ್ಟರ್ ಗೆ ಎಷ್ಟು ವೇತನ ನೀಡಲಾಗುತ್ತದೆ?

ಎಲ್ಲ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ವೇತನ ಶ್ರೇಣಿ:

 20000-500-21000-600-24600-700-
28800-800-33600-900-36300



●.ಮೀಸಲಾತಿ ಇರುತ್ತದೆಯೇ?

ಸರಕಾರದ ನೀತಿಯ ಪ್ರಕಾರ ಎಲ್ಲ ಹುದ್ದೆಗಳೂ ಮೀಸಲಾತಿಯನ್ವಯ ಹಂಚಿಕೆಯಾಗಿರುತ್ತದೆ. ಹೈ-ಕ ಭಾಗದ ಅಭ್ಯರ್ಥಿಗಳಿಗೆ ವಿಶೇಷ ಮೀಸಲಾತಿ ನೀಡಲಾಗಿರುತ್ತದೆ. ಮೀಸಲಾತಿಯನ್ವಯ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಹೊಂದಿರಬೇಕು.

(Courtesy : GOWDRU BENAKANAL*GKPOINTS)

Sunday 18 September 2016

☀ ಪಿಡಿಒ: ಅರ್ಜಿ ಸಲ್ಲಿಸುವ ವಿಧಾನ - ಅರ್ಜಿ ಸಲ್ಲಿಸುವುದು ಹೇಗೆ? ( Procedure of Applying for PDO posts - How to Apply for PDO)

☀ ಪಿಡಿಒ: ಅರ್ಜಿ ಸಲ್ಲಿಸುವ ವಿಧಾನ - ಅರ್ಜಿ ಸಲ್ಲಿಸುವುದು ಹೇಗೆ?
( Procedure of Applying for PDO posts - How to Apply for PDO) 
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷೆ ಸಿದ್ಧತೆ
(PDO Exam preparation)


ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಜಿಪಿಎಸ್) ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಗಮನಿಸಬೇಕಾದ ಮಾಹಿತಿ ಇಲ್ಲಿದೆ.

*ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮಪಂಚಾಯಿತಿ ಕಾರ್ಯದರ್ಶಿ ಹುದ್ದೆಗಳಿಗೆ ಆನ್ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅಭ್ಯರ್ಥಿಗಳು ಒಂದೇ ಅರ್ಜಿಯಲ್ಲಿ ಎರಡೂ ಹುದ್ದೆಗಳಿಗೂ ಅರ್ಜಿಯನ್ನು ಸಲ್ಲಿಸಬಹುದು. ಆದರೆ ಪ್ರತ್ಯೇಕವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಒಂದು ಜಿಲ್ಲೆಗೆ ಅರ್ಜಿ ಸಲ್ಲಿಸಿ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗೆ ಮತ್ತೊಂದು ಜಿಲ್ಲೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

* ಅಭ್ಯರ್ಥಿಗಳು ಈ ಪರೀಕ್ಷೆ ನಡೆಸುವ ಹೊಣೆ ಹೊತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್ಸೈಟಿನಲ್ಲಿ ನೀಡಿರುವ ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ತಪ್ಪದೇ ಪಾಲಿಸಬೇಕು. ಸೂಚನೆಗಳನ್ನು ಪಾಲಿಸದಿರುವ ಅಭ್ಯರ್ಥಿಗಳು ಅನರ್ಹಗೊಳಿಸಲಾಗುತ್ತದೆ.


 * ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಇಟ್ಟುಕೊಂಡಿರಬೇಕಾಗುತ್ತದೆ. ಅಗತ್ಯ ಬಿದ್ದಾಗ ಈ ದಾಖಲೆಗಳನ್ನು ಹಾಜರು ಪಡಿಸಬೇಕು. 
1.ಅಂತಿಮವಾಗಿ ಸಲ್ಲಿಸಿದ ಅರ್ಜಿಯ ಮೂರು ಪ್ರತಿ.
2. ಶುಲ್ಕವನ್ನು ಪಾವತಿಸಿರುವುದಕ್ಕೆ ಚಲನ್ ಪ್ರತಿ.
3.ಸ್ಕ್ಯಾನ್ ಮಾಡಿ ಸಲ್ಲಿಸಿರುವ ಅಭ್ಯರ್ಥಿಯ ಭಾವಚಿತ್ರದ 2-3 ಪ್ರತಿಗಳು.
4. ಪ್ರವೇಶ ಪತ್ರದ ಪ್ರತಿಗಳು.

 * ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಾಧಿಕಾರವು ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ / ಇ-ಮೇಲ್ ವಿಳಾಸಕ್ಕೆ ರವಾನಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ ನೇಮಕ ಪ್ರಕ್ರಿಯೆ ಪೂರ್ಣವಾಗುವವರೆಗೂ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಿ.

* ಒಂದು ವೇಳೆ ನೀವು ತಪ್ಪಾಗಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ್ದರೆ, ಈ ಕಾರಣದಿಂದ ಸಕಾಲದಲ್ಲಿ ಸಂದೇಶಗಳು ನಿಮಗೆ ತಲುಪದಿದ್ದಲ್ಲಿ ಅಂತಹ ಪ್ರPರಣಗಳಿಗೆ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. GKPOINTS

 * ನೇಮಕಾತಿಯ ಮಾಹಿತಿ/ ಸೂಚನೆಗಳ ವಿವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಎಲ್ಲಾ ಅಭ್ಯರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ಅನ್ನು ಆಗಾಗ ನೋಡುವಂತೆ ಸೂಚಿಸಲಾಗಿದೆ.

* ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳಿಗೆ ನಿಗದಿಪಡಿಸಿರುವ ಅರ್ಹತೆಗಳನ್ನು ಮತ್ತು ಇತರ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮುಂದುವರೆಯಬೇಕು.
* ಅಭ್ಯರ್ಥಿಗಳು, ಆನ್ಲೈನ್ ಅರ್ಜಿ ನಮೂನೆಯಲ್ಲಿ ಒದಗಿಸಿರುವ ಮಾಹಿತಿ ಅಥವಾ ಅಭ್ಯರ್ಥಿಗಳು ಸಲ್ಲಿಸಿರುವ ಇನ್ನಿತರ ಯಾವುದೇ ದಾಖಲೆಗಳು ನಕಲಿ ದಾಖಲೆಗಳೆಂದು ಕಂಡುಬಂದ ಪಕ್ಷದಲ್ಲಿ ಅಭ್ಯರ್ಥಿಯ ಅಭ್ಯರ್ಥಿತನವನ್ನು, ರದ್ದು ಪಡಿಸಿ, ನೇಮಕಾತಿಯಿಂದ ಯಾವುದೇ ಹಂತದಲ್ಲಿ ಕೈ ಬಿಡಲಾಗುತ್ತದೆ ಮತ್ತು ಅಂತಹ ಅಭ್ಯರ್ಥಿಯ ವಿರುದ್ಧ ಸರಕಾರದಿಂದ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುತ್ತದೆ.

 * ಎಲ್ಲಾ ಸಂಬಂಧಿಸಿದ ದಾಖಲೆಗಳು / ಅಂಕ ಪಟ್ಟಿಗಳು / ಪದವಿಯ ಪ್ರಮಾಣಪತ್ರಗಳು-ಅಂಕಪಟ್ಟಿಗಳು /ಮೀಸಲಾತಿಯ ಪ್ರಮಾಣಪತ್ರಗಳು ಹಾಗು ಇನ್ನಿತರ ಅವಶ್ಯ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಅಥವಾ ಅದಕ್ಕೂ ಮೊದಲಿನ ದಿನಾಂಕದೊಳಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಪಡೆದಿರಬೇಕು.

* ಕೇವಲ ಅರ್ಜಿಯನ್ನು ಸಲ್ಲಿಸದ ಮಾತ್ರಕ್ಕೆ ಅಭ್ಯರ್ಥಿಯು ನೇಮಕಾತಿಗೆ ಅರ್ಹತೆಯನ್ನು ಪಡೆದಿರುವ ಹಕ್ಕನ್ನು ಹೊಂದಿರುವೆನೆಂದು ಭಾವಿಸಬಾರದು ದಾಖಲೆಗಳ ಪರಿಶೀಲನೆಯ ನಂತರವೇ ಅಭ್ಯರ್ಥಿಗಳು ಸಲ್ಲಿಸುವ ಮಾಹಿತಿಗಳನ್ನು ಪರಿಗಣಿಸಲಾಗುವುದು.

 * ಸಂಪೂರ್ಣವಾಗಿ ಎಲ್ಲಾ ಮಾಹಿತಿಗಳನ್ನು ಓದಿ ಅರ್ಥ ಮಾಡಿಕೊಂಡಿದ್ದೇನೆಂದು ಅಭ್ಯರ್ಥಿಗಳು ಒಪ್ಪಿಗೆಯನ್ನು ಸೂಚಿಸಿದ ನಂತರವೇ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅಭ್ಯರ್ಥಿಯ ವಿವರಗಳನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗುವುದು.


 ★ ಅರ್ಜಿ ಸಲ್ಲಿಸುವ ವಿಧಾನ*
━━━━━━━━━━━━━━━━━
 * ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ದಾಖಲೆಗಳನ್ನು ಸಿದ್ದವಾಗಿ ಇಟ್ಟುಕೊಂಡು ನಂತರ ಅರ್ಜಿಯಲ್ಲಿನ ವಿವರಗಳನ್ನು ದಾಖಲಿಸಬೇಕು.

 1. JPG Format ನಲ್ಲಿ ಸ್ಕ್ಯಾನ್ ಮಾಡಿದ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ.

2. JPG Format ನಲ್ಲಿ ಸ್ಕ್ಯಾನ್ ಮಾಡಿದ ಅಭ್ಯರ್ಥಿಯ ಸಹಿ.

3. JPG Formatನಲ್ಲಿ ಸ್ಕ್ಯಾನ್ ಮಾಡಿದ ಅಭ್ಯರ್ಥಿಯ ಎಡಗೈ ಹೆಬ್ಬೆರಳ ಗುರುತು.

4. ಹೆಸರು, ಜನ್ಮ ದಿನಾಂಕ, ನೊಂದಣಿ ಸಂಖ್ಯೆ ಮತ್ತು ತೇರ್ಗಡೆಯಾದ ವರ್ಷವನ್ನು ದಾಖಲಿಸಲು ಎಸ್ಎಸ್ಎಲ್ಸಿ / 10ನೇ ತರಗತಿಯ ಅಂಕಪಟ್ಟಿ.

 5. ಅಂಕಗಳನ್ನು / ತೇರ್ಗಡೆಯಾದ ವರ್ಷವನ್ನು ದಾಖಲಿಸಲು ಪದವಿ ಕೋರ್ಸಿನ ಎಲ್ಲಾ ವರ್ಷದ ಸೆಮಿಸ್ಟರ್ನ ಅಂಕಪಟ್ಟಿಗಳು.

 * ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಖಾಲಿ ಇರುವ ಅರ್ಜಿ ನಮೂನೆಯನ್ನು ಪ್ರಾಧಿಕಾರದ ವೆಬ್ಸೈಟಿನಿಂದ ಡೌನ್ಲೋಡ್ ಮಾಡಿ ಅರ್ಜಿ ತುಂಬುವ ವಿಧಾನವನ್ನು ಅಭ್ಯಾಸ ಮಾಡಿಕೊಳ್ಳಬಹುದು.

* ಅಭ್ಯರ್ಥಿಗಳು ಅಂತಿಮವಾಗಿ ಸಲ್ಲಿಸುವ ಅರ್ಜಿಯಲ್ಲಿನ ಮಾಹಿತಿ /ವಿವರಗಳನ್ನು ಮುಂದಿನ ನೇಮಕಾತಿ ಪ್ರಕ್ರಿಯೆಗೆ ಪರಿಗಣಿಸಲಾಗುವುದರಿಂದ ಮಾಹಿತಿಗಳನ್ನು ದಾಖಲಿಸುವ ಸಂದರ್ಭದಲ್ಲಿ ಯಾವುದೇ ತಪ್ಪುಗಳನ್ನು ಮಾಡಬಾರದು ಮತ್ತು ಅಭ್ಯರ್ಥಿಯ ಭಾವಚಿತ್ರ, ಸಹಿ ಮತ್ತು ಎಡಗೈ ಹೆಬ್ಬರಿಳಿನ ಗುರುತು ಹೊರತುಪಡಿಸಿ ಬೇರೆ ಯಾವುದೇ ದಾಖಲೆಗಳನ್ನು / ಪ್ರಮಾಣಪತ್ರಗಳನ್ನು ಅಪ್ ಲೋಡ್ ಮಾಡುವಂತಿಲ್ಲ.


★ ಹೀಗೆ ಅರ್ಜಿ ಸಲ್ಲಿಸಿ*
━━━━━━━━━━━━━
* ಪ್ರಾಧಿಕಾರದ ವೆಬ್ನಲ್ಲಿ ಅರ್ಜಿ ಸಲ್ಲಿಸಲು ನೀಡಿರುವ ಲಿಂಕ್ ಅನ್ನು ಒತ್ತಿ. ಅಲ್ಲಿ ಕಾಣಿಸುವ ಅರ್ಜಿಯಲ್ಲಿನ ವಿವರಗಳನ್ನು ದಾಖಲಿಸಲು ಪ್ರಾರಂಭಿಸಿ.

 * ಅರ್ಜಿಯಲ್ಲಿನ ವಿವರಗಳನ್ನು ದಾಖಲಿಸಿ ಮುಕ್ತಾಯವಾದ ನಂತರ Preview
ಅನ್ನು ಆಯ್ಕೆ ಮಾಡಿ.

* ನೀವು ದಾಖಲಿಸಿರುವ ಎಲ್ಲಾ ವಿವರಗಳು ಪರದೆಯ ಮೇಲೆ ಕಾಣಿಸುತ್ತದೆ. ಸರಿಯಾಗಿದೆಯೇ ಎಂದು ಪರೀಕ್ಷಿಸಿ, ಏನಾದರು ಬದಲಾವಣೆ ಮಾಡಬೇಕಿದ್ದಲ್ಲಿ declaration ಮಾಡುವ ಮೊದಲು ಬದಲಾಯಿಸಿ. ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಖಚಿತಪಡಿಸಿಕೊಂಡು save ಬಟನ್ ಅನ್ನು ಒತ್ತಿ.

 * ಭಾವಚಿತ್ರ, ಸಹಿ ಮತ್ತು ಎಡಗೈ ಹೆಬ್ಬರಿಳಿನ ಗುರುತನ್ನು ಅಪ್ಲೋಡ್ ಮಾಡಿ.

* ಅರ್ಜಿಯಲ್ಲಿನ ವಿವರಗಳನ್ನು ದಾಖಲಿಸುವ ಪ್ರಕ್ರಿಯೆ ಮುಗಿದ ನಂತರ ಅಭ್ಯರ್ಥಿಗಳು ದಾಖಲಿಸಿದ ಮೊಬೈಲ್ ಸಂಖ್ಯೆಗೆ ಅರ್ಜಿ ಐಡಿ ಯನ್ನು ಕಳುಹಿಸಲಾಗುತ್ತದೆ ಹಾಗು ಅದೇ ಅರ್ಜಿ ಐಡಿಯನ್ನು ಪರದೆಯ ಮೇಲೆ ತೋರಿಸಲಾಗುತ್ತದೆ.

 * ಅಭ್ಯರ್ಥಿಗಳು ಚಲನ್ನ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು.

* ಅಭ್ಯರ್ಥಿಗಳು ಕರ್ನಾಟಕದಲ್ಲಿನ ಯಾವುದೇ ಇ-ಅಂಚೆ ಕಚೇರಿಯಲ್ಲಿ ನಿಗದಿತ ಶುಲ್ಕವನ್ನು ಪಾವತಿಸಬೇಕು. ಇ-ಅಂಚೆ ಕಚೇರಿಯವರು ಒಂದು ಪ್ರತಿಯನ್ನು ಇಟ್ಟುಕೊಂಡು ಉಳಿದ ಪ್ರತಿಯನ್ನು ಅಭ್ಯರ್ಥಿಗೆ ಹಿಂದಿರುಗಿಸುತ್ತಾರೆ.

* ಅಭ್ಯರ್ಥಿಗಳು ಶುಲ್ಕವನ್ನು ಪಾವತಿಸಿದ ನಂತರ ಅರ್ಜಿಯ ಪ್ರಿಂಟ್ ಅನ್ನು ತೆಗೆದುಕೊಳ್ಳಬೇಕು ಮತ್ತು ಅದನ್ನು ಅಗತ್ಯವಿದ್ದಾಗ ಹಾಜರು ಪಡಿಸಬೇಕು.

(Courtesy : Vijaya Karnataka) 

Saturday 17 September 2016

☀544 ಪಿಎಸ್‌ಐ ಹುದ್ದೆ ನೇಮಕಾತಿಗೆ ಅಧಿಸೂಚನೆ - 2016 ಪ್ರಕಟ (Notification for Karnataka State Police PSI recruitment)

☀544 ಪಿಎಸ್‌ಐ ಹುದ್ದೆ ನೇಮಕಾತಿಗೆ ಅಧಿಸೂಚನೆ - 2016 ಪ್ರಕಟ
(Notification for Karnataka State Police PSI Recruitment)
•─━━━━━═══════════━━━━━─••─━━━━━═══════════━━━━━─•  
   
 ★ ಪಿಎಸ್‌ಐ ನೇಮಕಾತಿ ಅಧಿಸೂಚನೆ
(Notification for PSI Recruitment)


ಬೆಂಗಳೂರು: ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ 544 ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. ‘ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ (ಡಿಎಆರ್‌,ಸಿಎಆರ್‌) 90, ವೈರ್‌ಲೆಸ್‌ ವಿಭಾಗದ 28, ಸಿವಿಲ್‌ ವಿಭಾಗದ 398 ಹಾಗೂ ಕೆಎಸ್‌ಆರ್‌ಪಿಯ 28 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

*ಸೆಪ್ಟೆಂಬರ್‌ 19ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

* ಅರ್ಜಿ ಸಲ್ಲಿಕೆ ವಿಧಾನ, ವಯೋಮಿತಿ, ವಿದ್ಯಾರ್ಹತೆ, ದೇಹದಾರ್ಢ್ಯತೆ ಹಾಗೂ ಲಿಖಿತ ಪರೀಕ್ಷೆ ಸೇರಿದಂತೆ ನೇಮಕಾತಿಗೆ ಸಂಬಂಧಪಟ್ಟ ಮಾಹಿತಿಗಾಗಿ www.ksp.gov.in ವೆಬ್‌ಸೈಟ್‌ ನೋಡಬಹುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

‘ನೇಮಕಾತಿ ಪ್ರಕ್ರಿಯೆಯು ಪಾರದರ್ಶಕ, ಗಣಕೀಕೃತ, ವಸ್ತುನಿಷ್ಠ, ಅರ್ಹತೆ ಹಾಗೂ ಮೀಸಲಾತಿ ಆಧಾರದಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಪ್ರಭಾವಿಗಳ ಮೂಲಕ ಒತ್ತಡ ತಂದರೆ ಇಲಾಖೆಯ ಕಾರ್ಯನಿರ್ವಹಣೆ ಅಡಚಣೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು.

ನೇಮಕಾತಿ ಮಾಹಿತಿಗೆ 080–22943346 ಸಂಪರ್ಕಿಸಬಹುದು’ ಎಂದು ನೇಮಕಾತಿ ಮತ್ತು ತರಬೇತಿ ವಿಭಾಗದ ಎಡಿಜಿಪಿ ತಿಳಿಸಿದ್ದಾರೆ.

(Courtesy : Prajawani) 

☀ ಯುಪಿಎಸ್‌ಸಿ ಪ್ರಿಲಿಮ್ಸ್‌ - 2016 ಫಲಿತಾಂಶ ಪ್ರಕಟ : (UPSC Civil Service Exams Prelims 2016 Results)

☀ ಯುಪಿಎಸ್‌ಸಿ ಪ್ರಿಲಿಮ್ಸ್‌ - 2016 ಫಲಿತಾಂಶ ಪ್ರಕಟ :
(UPSC Civil Service Exams Prelims 2016  Results)
•─━━━━━═══════════━━━━━─••─━━━━━═══════════━━━━━─•

★ ಯುಪಿಎಸ್‌ಸಿ ಪ್ರಿಲಿಮ್ಸ್‌ ಫಲಿತಾಂಶ
(UPSC prelims result)


ಕೇಂದ್ರ ಲೋಕಸೇವಾ ಆಯೋಗ ನಡೆಸಿ ನಾಗರಿಕ ಸೇವೆಗಳ ಪ್ರಾಥಮಿಕ ಸುತ್ತಿನ ಪರೀಕ್ಷೆಯ ಫಲಿತಾಂಶ ಗುರುವಾರ (15-Sept -2016) ಪ್ರಕಟವಾಗಿದೆ.

ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್‌), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ಮತ್ತು ಭಾರತೀಯ ಪೊಲೀಸ್‌ ಸೇವೆ (ಐಪಿಎಸ್‌) ಅಧಿಕಾರಿ ಹುದ್ದೆಗೆ ಆಯ್ಕೆಯಾಗಲು ಯುಪಿಎಸ್‌ಸಿ, ಪ್ರಾಥಮಿಕ ಸುತ್ತು, ಪ್ರಧಾನ ಮತ್ತು ಸಂದರ್ಶನ ಎಂಬ ಮೂರು ಹಂತದ ಪರೀಕ್ಷೆಗಳನ್ನು ನಡೆಸುತ್ತಿದ್ದು, ಆಗಸ್ಟ್‌ 7ರಂದು ನಡೆದ ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಸಾವಿರಾರು ಅಭ್ಯರ್ಥಿಗಳು ಭಾಗವಹಿಸಿದ್ದರು.

ಪ್ರಿಲಿಮ್ಸ್‌ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ ಮುಂದಿನ ಹಂತಕ್ಕೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಯುಪಿಎಸ್‌ಸಿ ಹೇಳಿದೆ. ಪ್ರಧಾನ ಪರೀಕ್ಷೆ ಯ ವೇಳಾಪಟ್ಟಿ ಮತ್ತು ಪ್ರವೇಶ ಪತ್ರವನ್ನು ಪರೀಕ್ಷೆಗೆ ಎರಡು ವಾರಗಳ ಮೊದಲು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಅಭ್ಯರ್ಥಿಗಳು ಅಕ್ಟೋಬರ್‌ 7ರಿಂದ 20ರವರೆಗೆ ಪ್ರಧಾನ ಪರೀಕ್ಷೆಯ ಅರ್ಜಿಯನ್ನು ಆನ್‌ಲೈನ್‌ನಲ್ಲೇ ತುಂಬಲು ಅವಕಾಶವಿದೆ.

ಯುಪಿಎಸ್‌ಸಿ ಮುಖ್ಯ (Mains) ಪರೀಕ್ಷೆಗಳು ಶನಿವಾರ, 3 ಡಿಸೆಂಬರ್ 2016 ರಂದು ನಡೆಸಲಾಗುವುದು. (By Other source) 

ಹೆಚ್ಚಿನ ಮಾಹಿತಿಗಳಿಗೆ ಯುಪಿಎಸ್‌ಸಿ ವೆಬ್‌ಸೈಟ್‌ www.upsc.gov.in ನೋಡಬಹುದು.

(Courtesy : VK)

Friday 16 September 2016

☀ ಪಿಡಿಒ: ಇಂದಿನಿಂದ ಅರ್ಜಿ ಸಲ್ಲಿಕೆ ಹಾಗೂ ಹುದ್ದೆಗಳ ಜಿಲ್ಲಾವಾರು ಹಂಚಿಕೆ: : (PDO Application Starts and districtwise vacancy Allotment)

☀ ಪಿಡಿಒ: ಇಂದಿನಿಂದ ಅರ್ಜಿ ಸಲ್ಲಿಕೆ ಹಾಗೂ ಹುದ್ದೆಗಳ ಜಿಲ್ಲಾವಾರು ಹಂಚಿಕೆ: :
(PDO Application Starts and districtwise vacancy Allotment) 
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷೆ ತಯಾರಿ
(PDO Exam preparation)



ಒಟ್ಟು 1624 ಹುದ್ದೆಗಳಿಗೆ ನೇಮಕ; ಪದವೀಧರರಿಗೆ ಅವಕಾಶ ಬಹು ನಿರೀಕ್ಷಿತ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್‌-1 (ಜಿಪಿಎಸ್‌) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಆರಂಭಗೊಳ್ಳಲಿದೆ. ಅಕ್ಟೋಬರ್‌ 15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ನೇಮಕಾತಿಯ ಜವಾಬ್ದಾರಿ ಹೊತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಳೆದ ವಾರವೇ ಈ ಕುರಿತು ವಿವರವಾದ ಅಧಿಸೂಚನೆಯನ್ನು ಪ್ರಕಟಿಸಿತ್ತು. ಈ ಬಾರಿ ಕರ್ನಾಟಕ ಲೋಕಸೇವಾ ಆಯೋಗದ ಬದಲು ಕೆಇಎ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ನೇಮಕಾತಿ ನಡೆಸಲಿದೆ.ಒಟ್ಟು 815 ಪಂಚಾಧಿಯಿತಿ ಅಭಿವೃದ್ಧಿ ಅಧಿಧಿಕಾರಿ (ಪಿಧಿಡಿಒ) ಮತ್ತು 809 ಗ್ರಾ.ಪಂ. ಕಾರ್ಯಧಿದರ್ಶಿ ಗ್ರೇಡ್‌-1 ಹುದ್ದೆ ಸೇರಿ ಒಟ್ಟು 1624 ಹುದ್ದೆಗಳನ್ನು ಸ್ಪರ್ಧಾಧಿತ್ಮಕ ಪರೀಕ್ಷೆ ಮೂಲಕ ನೇರ ನೇಮಧಿಕ ಮಾಡಿಕೊಳ್ಳಲಾಗುತ್ತಿದೆ.

 ಪದವಿ ವಿದ್ಯಾರ್ಹತೆ ಹೊಂದಿರುವ 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

 ಒಟ್ಟು 815 ಪಿಡಿಒ ಹುದ್ದೆಗಳ ಪೈಕಿ 177 ಹುದ್ದೆಗಳನ್ನು ಹೈದರಬಾದ್‌ ಕರ್ನಾಟಕ ವಿಭಾಗಕ್ಕೆ ಮೀಸಲಿಡಲಾಗಿದೆ. ಅಂತೆಯೇ 809 ಗ್ರಾ.ಪಂ. ಕಾರ್ಯದರ್ಶಿ ಹುದ್ದೆಗಳಲ್ಲಿ 171ಹುದ್ದೆಗಳನ್ನುಹೈದರಬಾದ್‌ -ಕರ್ನಾಟಕ ವಿಭಾಗಕ್ಕೆ ಮೀಸಲಿಡಲಾಗಿದೆ.


●.ಪಿಡಿಒ ಹುದ್ದೆಗಳ ಜಿಲ್ಲಾವಾರು ಹಂಚಿಕೆ:

ಚಿಕ್ಕಮಗಳೂರು-71,
ಬೆಳಗಾವಿ-26,
ಚಿತ್ರದುರ್ಗ-11,
ದಕ್ಷಿಣ ಕನ್ನಡ-44,
ಧಾರವಾಡ-10, ಹಾಸನ-46,
ಕೊಡಗು-18,
ಕೋಲಾರ-20,
ಮಂಡ್ಯ -37,
ಮೈಸೂರು -47,
ಶಿವಮೊಗ್ಗ-39,
ತುಮಕೂರು-54,
ಉತ್ತರ ಕನ್ನಡ-41,
ಚಾಮರಾಜನಗರ-31,
ದಾವಣಗೆರೆ-15,
ಬಾಗಲಕೋಟೆ-15,
ಗದಗ-6,
ಹಾವೇರಿ-62,
ಉಡುಪಿ-22 ಮತ್ತುಚಿಕ್ಕಬಳ್ಳಾಪುರ-19
ಹೈ-ಕ ವಿಭಾಗ:
ಬಳ್ಳಾರಿ-34,
ಬೀದರ್‌-19,
ಕಲಬುರಗಿ-51,
ಕೊಪ್ಪಳ-23,
ರಾಯಚೂರು-27 ಮತ್ತುಯಾದಗಿರಿ-23
ಜಿಪಿಎಸ್‌ ಹುದ್ದೆಗಳ ಜಿಲ್ಲಾವಾರು ಹಂಚಿಕೆ:
ಬೆಂಗಳೂರು ನಗರ-12,
ಬೆಂಗಳೂರು ಗ್ರಾಮಾಂತರ-18,
ಚಿಕ್ಕಮಗಳೂರು-31,
ಬೆಳಗಾವಿ-75,
ವಿಜಯಪುರ-39,
ಚಿತ್ರದುರ್ಗ-37,
ದಕ್ಷಿಣ ಕನ್ನಡ-10,
ಹಾಸನ-23,
ಕೊಡಗು-14,
ಮಂಡ್ಯ -49,
ಮೈಸೂರು -60,
ಶಿವಮೊಗ್ಗ-22,
ತುಮಕೂರು-72,
ಉತ್ತರ ಕನ್ನಡ-30,
ಚಾಮರಾಜನಗರ-30,
ದಾವಣಗೆರೆ-3,
ಬಾಗಲಕೋಟೆ-21,
ಗದಗ-8,
ಹಾವೇರಿ-1,
ಉಡುಪಿ-23,
ರಾಮನಗರ-23 ಮತ್ತುಚಿಕ್ಕಬಳ್ಳಾಪುರ-16
ಹೈ-ಕ ವಿಭಾಗ:
ಬಳ್ಳಾರಿ-33,
ಬೀದರ್‌-24,
ಕಲಬುರಗಿ-41,
ಕೊಪ್ಪಳ-20,
ರಾಯಚೂರು-35 ಮತ್ತು ಯಾದಗಿರಿ-18


●.ಕ್ವಿಕ್‌ ಲುಕ್‌ -ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್‌ 15,2016 -

●.ಶುಲ್ಕ ಪಾವತಿಸಲು ಕೊನೆ ದಿನ: ಅಕ್ಟೋಬರ್‌ 18,2016.

●.-ಸಹಾಯವಾಣಿ: 080-23460460

●.ಮೀಸಲಾತಿ ಮತ್ತಿತರ ಮಾಹಿತಿಗೆ :http://kea.kar.nic.in 


●.ಇತ್ತ ಗಮನಿಸಿ 

*ಅರ್ಜಿ ಸಲ್ಲಿಸಲು ಕೊನೆಯ ದಿನದವರೆಗೆ ಕಾಯಬೇಡಿ. ಹೆಚ್ಚು ಅಭ್ಯರ್ಥಿಗಳು ಒಂದೇ ಬಾರಿಗೆ ಅರ್ಜಿ ಸಲ್ಲಿಸಲು ಮುಂದಾದಲ್ಲಿ ಸರ್ವರ್‌ ಡೌನ್‌ ಆಗಿ, ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರಬಹುದು.

* ಪ್ರಾಧಿಕಾರದ ವೆಬ್‌ನಲ್ಲಿ ವಿವರವಾದ ಅಧಿಸೂಚನೆ ಲಭ್ಯವಿದೆ. ಅಲ್ಲದೆ, ಯಾವ ಯಾವ ಜಾತಿಯವರು ಯಾವ ಮೀಸಲಾತಿಗೆ ಅರ್ಹರು ಎಂಬುದನ್ನು ವಿವರಿಸುವ ದಾಖಲೆಗಳನ್ನು ನೀಡಲಾಗಿದೆ. ಜತೆಗೆ ಮೀಸಲಾತಿ ಹಂಚಿಕೆಯ ಸಂಪೂರ್ಣವಾದ ಮಾಹಿತಿಯೂ ಲಭ್ಯವಿದೆ. ಇದನ್ನು ನೋಡಿಕೊಂಡೇ ಅರ್ಜಿ ಸಲ್ಲಿಸಿ.

* ಸಲ್ಲಿಸಬೇಕಾಗಿರುವ ದಾಖಲೆಗಳ ಫಾಮ್ರ್ಯಾಟ್‌ ನೀಡಲಾಗಿದೆ. ಇದನ್ನೂ ಒಮ್ಮೆ ನೋಡಿಕೊಳ್ಳಿ.

 * ನೇಮಕಾತಿ ಸಂದರ್ಭದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ಸಿಲಬಸ್‌ಅನ್ನು ವೆಬ್‌ನಲ್ಲಿ ನೀಡಲಾಗಿದ್ದು,ಅದನ್ನು ನೋಡಿಕೊಂಡು ಪರೀಕ್ಷೆಗೆ ಸಿದ್ಧತೆ ಆರಂಭಿಸಿ.

 * ಯಾವುದೇ ಕಾರಣಕ್ಕೂ ವದಂತಿಗಳಿಗೆಕಿವಿ ಕೊಟ್ಟು, ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ.

 * ಈ ಬಾರಿಯ ಸ್ಪರ್ಧಾತ್ಮಕ ಪರೀಕ್ಷೆ ಹೆಚ್ಚು ಕಠಿಣವಾಗಿರುವ ಸಾಧ್ಯತೆಗಳಿವೆ. ಹೀಗಾಗಿ ಇಂದಿನಿಂದಲೇ ಅಭ್ಯಾಸ ಆರಂಭಿಸಿ.

 * ಪರೀಕ್ಷಾ ಸಿದ್ಧತೆಯ ಕುರಿತು ವಿಜಯ ಕರ್ನಾಟಕ-ಮಿನಿಯು ಉಪಯುಕ್ತ ಮಾಹಿತಿ, ಟಿಫ್ಸ್‌ ಮತ್ತು ಅಧ್ಯಯನ ಸಾಮಗ್ರಿಗಳನ್ನು ಪ್ರಕಟಿಸಲಿದೆ.
(Courtesy : GKPOONTS)

Friday 9 September 2016

☀ ಪೊಲೀಸ್ ನೇಮಕ ವಯೋಮಿತಿ ಏರಿಕೆ - 2016 ಸಿಹಿ ಸುದ್ದಿ! (Age Relaxation in Karnataka State Police Recruitment)

☀ ಪೊಲೀಸ್ ನೇಮಕ ವಯೋಮಿತಿ ಏರಿಕೆ - 2016 ಸಿಹಿ ಸುದ್ದಿ!
(Age Relaxation in Karnataka State Police Recruitment)
•─━━━━━═══════════━━━━━─••─━━━━━═══════════━━━━━─•

★ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ
(Karnataka State Police Recruitment)

★ ಪೊಲೀಸ್ ಕಾನ್ಸ್‌ಟೇಬಲ್‌ಗಳ ಹಾಗೂ ಎಸ್‌ಐಗಳ ವಯೋಮಿತಿ ಹೆಚ್ಚಳ!



(ವಿಜಯ ಕರ್ನಾಟಕ  » ರಾಜ್ಯ » ಕರ್ನಾಟಕ » | Sep 9, 2016, 04.00 AM IST)

ಬೆಂಗಳೂರು: ಪೊಲೀಸ್ ಇಲಾಖೆ ಸೇರಬೇಕೆಂಬ ಕನಸು ಹೊತ್ತವರಿಗೆ ಸಿಹಿ ಸುದ್ದಿ ಇಲ್ಲಿದೆ. ರಾಜ್ಯ ಸರಕಾರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ವಿಸ್ತರಣೆ ಮಾಡಲು ನಿರ್ಧರಿಸಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಹಾಗೂ ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 26 ವರ್ಷಗಳಿಂದ 28 ವರ್ಷಗಳಿಗೆ ಏರಿಕೆ ಮಾಡಲಾಗಿದ್ದು, ಪರಿಶಿಷ್ಟ ಅಭ್ಯರ್ಥಿಗಳಿಗೆ 30 ವರ್ಷದ ವರೆಗೂ ವಯೋಮಿತಿ ಹೆಚ್ಚಳ ಮಾಡಲಾಗಿದೆ.

ನೆರೆಯ ತಮಿಳುನಾಡು ಹಾಗೂ ಮಹಾರಾಷ್ಟ್ರದ ಮಾದರಿಯಲ್ಲಿ ವಯೋಮಿತಿ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯಂತೆ ಸಂಪುಟ ಈ ತೀರ್ಮಾನ ಕೈಗೊಂಡಿದ್ದು, ಅದಕ್ಕಾಗಿ 'ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ನೇಮಕಾತಿ) ತಿದ್ದುಪಡಿ ನಿಯಮಗಳು 2016' ಕ್ಕೆ ಸಂಪುಟ ಅನುಮೋದನೆ ನೀಡಿತು ಎಂದು ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

★ 21 ಸಾವಿರ ಸಿಬ್ಬಂದಿ ನೇಮಕ

ಹಲವು ವರ್ಷಗಳ ಬಳಿಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನೇಮಕಾತಿ ಪರ್ವ ನಡೆದಿದೆ. ಒಟ್ಟು 21,047 ಸಬ್ ಇನ್ಸ್‌ಪೆಕ್ಟರ್ ಹಾಗೂ ಪೊಲೀಸ್ ಕಾನ್ಸ್‌ಟೇಬಲ್‌ಗಳ ಹುದ್ದೆಗಳ ಭರ್ತಿ ಪ್ರಕ್ರಿಯೆ ಚಾಲನೆ ಪಡೆದುಕೊಂಡಿದೆ. ಈಗಾಗಲೇ 6 ಸಾವಿರ ಕಾನ್ಸ್‌ಟೇಬಲ್‌ಗಳ ನೇಮಕಾತಿ ನಡೆದಿದ್ದು, ತರಬೇತಿ ಮುಗಿಸಿ ಕೆಲಸಕ್ಕೆ ಸೇರ್ಪಡೆಯಾಗುವ ಹಂತದಲ್ಲಿದ್ದಾರೆ. ಹೊಸದಾಗಿ 7,548 ಕಾನ್ಸ್‌ಟೇಬಲ್‌ಗಳ ನೇಮಕಕ್ಕೆ ಅಧಿಸೂಚನೆ ಹೊರಬೀಳುತ್ತಿದೆ. 2ನೇ ಹಂತದಲ್ಲಿ 6,610 ಕಾನ್ಸ್‌ಟೇಬಲ್‌ಗಳ ನೇಮಕಾತಿಗೆ ಹಣಕಾಸು ಇಲಾಖೆ ಅನುಮೋದನೆ ಸಿಕ್ಕಿದ್ದು, ಈ ಸಂಬಂಧವೂ ಸದ್ಯದಲ್ಲೇ ಅಧಿಸೂಚನೆ ಹೊರಡಲಿದೆ. ಈ ಆರ್ಥಿಕ ವರ್ಷಾಂತ್ಯದೊಳಗೆ ಎಲ್ಲ 20,158 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿ ಪೂರ್ಣಗೊಳ್ಳಲಿದೆ ಎಂದು ಗೃಹ ಸಚಿವರು ಪ್ರಕಟಿಸಿದ್ದಾರೆ.


★ ಮೊದಲು ಲಿಖಿತ ಪರೀಕ್ಷೆ

ನೇಮಕಾತಿಯಲ್ಲಿ ಮೊದಲು ದೈಹಿಕ ಪರೀಕ್ಷೆ ನಡೆಸಿ, ಅರ್ಹರಿಗೆ ಲಿಖಿತ ಪರೀಕ್ಷೆ ನಡೆಸುವ ವ್ಯವಸ್ಥೆ ಇತ್ತು. ಎಲ್ಲರಿಗೂ ದೈಹಿಕ ಪರೀಕ್ಷೆ ನಡೆಸಬೇಕಿದ್ದ ಕಾರಣ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಅದನ್ನು ತಪ್ಪಿಸಲು ಈಗ ಮೊದಲು ಲಿಖಿತ ಪರೀಕ್ಷೆ ನಡೆಸಿ, ಅರ್ಹರಿಗೆ ದೈಹಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ, ನೇಮಕಾತಿ ಪ್ರಕ್ರಿಯೆ ಶೀಘ್ರ ನಡೆಯಲಿದೆ ಎಂದು ಪರಮೇಶ್ವರ್ ತಿಳಿಸಿದರು.

889 ಎಸ್‌ಐಗಳ ನೇಮಕ: ಈಗಾಗಲೇ ತರಬೇತಿಯಲ್ಲಿರುವ 260 ಎಸ್ಸೈಗಳು ಮುಂದಿನ ತಿಂಗಳು ಸೇವೆಗೆ ಸೇರ್ಪಡೆಯಾಗಲಿದ್ದು, 2016 -17ನೇ ಸಾಲಿಗೆ ಹೊಸದಾಗಿ 629 ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿಗೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಪರಮೇಶ್ವರ್ ಹೇಳಿದರು.

ಈ ಪೈಕಿ 398 ಸಿವಿಲ್, 51 ಸಿಎಆರ್, 28 ಕೆಎರ್ಸ್ಸಾಪಿ, 9 ಫಿಂಗರ್‌ಪ್ರಿಂಟ್ ಹಾಗೂ 19 ಮಂದಿಯನ್ನು ವೈರ್‌ಲೆಸ್ ವಿಭಾಗಕ್ಕೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದೇ ಮೊದಲ ಬಾರಿಗೆ ಗುಪ್ತದಳ ಹಾಗೂ ಸಿಐಡಿಗೆ ಪ್ರತ್ಯೇಕವಾಗಿ ಎಸ್‌ಐಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈವರೆಗೆ ಸಿವಿಲ್ ಪೊಲೀಸರನ್ನೇ ಈ ವಿಭಾಗಗಳಿಗೆ ನಿಯೋಜನೆ ಮಾಡಲಾಗುತ್ತಿತ್ತು ಎಂದು ತಿಳಿಸಿದರು.

☀ ಪಿಡಿಓ ನೇಮಕ ಪರೀಕ್ಷೆಯ ಮತ್ತು ಪಠ್ಯಕ್ರಮದ ಸಂಪೂರ್ಣ ಮಾಹಿತಿ: (PDO Exam Pattern and PDO Exam Syllabus)

☀ ಪಿಡಿಓ ನೇಮಕ ಪರೀಕ್ಷೆಯ ಮತ್ತು ಪಠ್ಯಕ್ರಮದ ಸಂಪೂರ್ಣ ಮಾಹಿತಿ:
(PDO Exam Pattern and PDO Exam Syllabus)  
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷೆ ಪದ್ಧತಿ
(PDO Exam Pattern)

★ ಪಿಡಿಓ ಪರೀಕ್ಷೆ ಪಠ್ಯಕ್ರಮ
(PDO Exam Syllabus)



ರಾಜ್ಯ ಸರಕಾರ ಸುಮಾರು ಆರು ವರ್ಷಗಳ ನಂತರ 'ಪಂಚಾಯಿತಿ ಅಭಿವೃದ್ಧಿ ಅಧಿಕಾರಿ' (ಪಿಡಿಓ) ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಈ ನೇಮಕಾತಿ ನಡೆಯಲಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.


●.ಪರೀಕ್ಷೆ ಹೇಗಿರುತ್ತದೆ?:

ವಸ್ತುನಿಷ್ಠ ಮಾದರಿಯಲ್ಲಿ ಈ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿರಲಿದ್ದು,

★ ಪ್ರಶ್ನೆಪತ್ರಿಕೆ -1:
ಸಾಮಾನ್ಯ ಜ್ಞಾನ, ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್‌ ಭಾಷೆಗೆ ಸಂಬಂಧಿಸಿದ್ದಾಗಿರುತ್ತದೆ. ಒಟ್ಟು ನೂರು ಪ್ರಶ್ನೆಗಳಿರಲಿದ್ದು, ಒಂದು ಪ್ರಶ್ನೆಗೆ 2ಅಂಗಳಂತೆ ಒಟ್ಟು 200 ಅಂಕ ನಿಗದಿಪಡಿಸಲಾಗಿರುತ್ತದೆ. ಅಭ್ಯರ್ಥಿಗಳು 2 ಗಂಟೆಗಳ ಕಾಲಾವಕಾಶದಲ್ಲಿ ಈ ನೂರು ಪ್ರಶ್ನೆಗಳಿಗೆ ಒತ್ತರ ಗುರುತಿಸಬೇಕಾಗಿರುತ್ತದೆ.

★ ಪ್ರಶ್ನೆ ಪತ್ರಿಕೆ-2:
ನಿರ್ದಿಷ್ಟ ಪತ್ರಿಕೆಯಾಗಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪತ್ರಿಕೆಯಲ್ಲಿಯೂ ಕೂಡ ನೂರು ಪ್ರಶ್ನೆಗಳಿರಲಿದ್ದು, ಒಟ್ಟು 200 ಅಂಕ ನಿಗದಿಯಾಗಿರುತ್ತದೆ. ಈ ಪತ್ರಿಕೆಯೂ ಬಹು ಆಯ್ಕೆಯ ಪತ್ರಿಕೆಯಾಗಿದ್ದು, ಉತ್ತರ ಗುರುತಿಸಲು 2 ಗಂಟೆ ಕಾಲಾವಕಾಶ ನೀಡಲಾಗುತ್ತದೆ.


●.ಗಮನಿಸಿರಿ:

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗೆ ಒಂದೇ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರೆ, ಒಂದೇ ಪರೀಕ್ಷೆ ಬರೆದರೆ ಸಾಕು. ಎರಡೂ ಹುದ್ದೆಗಳಿಗೆ ಪರಿಗಣಿಸಬೇಕಾದರೆ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಎರಡೂ ಹುದ್ದೆಗೆ ಪಾವತಿಸಿರಬೇಕಾಗುತ್ತದೆ.

●.ಏನೇನು ಓದಬೇಕು?:


●.ಪ್ರಶ್ನೆಪತ್ರಿಕೆ -1:

★ ಸಾಮಾನ್ಯ ಜ್ಞಾನ:
ಹಾಲಿ ಘಟನಾವಳಿಗಳ ಮಾಹಿತಿ, ಸಮಾಜ ವಿಜ್ಞಾನ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕ, ಸಾಮಾನ್ಯ ವಿಜ್ಞಾನ, ಪ್ರಚಲಿತ ವಿದ್ಯಮಾನ, ಪ್ರಾಕ್ಟಿಕಲ್‌ ನಾಲೆಡ್ಜ್‌ ಮತ್ತು ಸಾಮಾನ್ಯ ಮನೋಸಾಮರ್ಥ್ಯ‌ದ ಕುರಿತು ಈ ವಿಭಾಗದಲ್ಲಿ ಪ್ರಶ್ನೆಗಳಿರಲಿವೆ.

★ಸಾಮಾನ್ಯ ಕನ್ನಡ:
ವ್ಯಾಕರಣ, ಸಾಹಿತ್ಯ, ಸಾಹಿತಿಗಳ ಪರಿಚಯ, ಭಾಷಾ ಗ್ರಹಿಕೆ, ಪದಬಳಕೆ, ಪತ್ರ ಲೇಖನ, ಪ್ರಬಂಧ, ಟಿಪ್ಪಣಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಮುಖ್ಯವಾಗಿ ಎಸ್‌ಎಸ್‌ಎಲ್‌ಸಿ ಕನ್ನಡ ಪ್ರಥಮ ಭಾಷೆಯ ಮಟ್ಟದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳಿರಲಿವೆ.

★ ಸಾಮಾನ್ಯ ಇಂಗ್ಲಿಷ್‌ :
English grammar, vocabulary, spelling, synonyms, antonyms, power to understand and comprehend English language and ability to Discriminate between correct and incorrect usage ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.


●.ನಿರ್ದಿಷ್ಟ ಪತ್ರಿಕೆ (ಪಶ್ನೆ ಪತ್ರಿಕೆ -2):

ಈ ಹಿಂದೆಯೇ ಹೇಳಿದಂತೆ ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಯಾಗಿದ್ದು, ಇದರಲ್ಲಿ, ಕರ್ನಾಟಕ ಮತ್ತು ಭಾರತದ ಗ್ರಾಮಗಳ ಸ್ಥಿತಿ-ಗತಿ, ಕರ್ನಾಟಕ ಪಂಚಾಯತ್‌ ರಾಜ್‌ ಕಾಯ್ದೆ ಮತ್ತು ವ್ಯವಸ್ಥೆ, ಗ್ರಾಮೀಣಾಭಿವೃದ್ಧಿಯ ಕೇಂದ್ರ ಮತ್ತು ರಾಜ್ಯ ಕಾರ್ಯಕ್ರಮಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ, ಕರ್ನಾಟಕ ಪಂಚಾಯತ್‌ ರಾಜ್‌ನ ಇತಿಹಾಸ, ಗ್ರಾಮ ಪಂಚಾಯತ್‌ಗಳ ಸಂವಿಧಾನ ಮತ್ತು ಅವುಗಳಿಗೆ ಅಧಿಕಾರ, ಗ್ರಾ.ಪಂ.ಗಳ ಕರ್ತವ್ಯ ಮತ್ತು ಜವಾಬ್ದಾರಿ, ಪಂಚಾಯತ್‌ ರಾಜ್‌ ವ್ಯವಸ್ಥೆಯ ಹಣದ ಮೂಲ, ಗ್ರಾಮ ಪಂಚಾಯತ್‌ಗಳಿಗೆ ಬರುವ ಅನುದಾನ ಮತ್ತು ಜಾರಿಗೆ ತರುವ ಯೋಜನೆಗಳ ಮಾಹಿತಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.


●.ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕು?:

ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ತಾವು ಯಾವ ಭಾಷೆಯಲ್ಲಿ ಪರೀಕ್ಷೆ ಬರೆಯುತ್ತೇವೆ ಎಂಬುದನ್ನು ಸ್ಪಷ್ಟಪಡಿಸಬೇಕು. ಮತ್ತು ಅದೇ ಭಾಷೆಯಲ್ಲಿಯೇ ಪರೀಕ್ಷೆ ಬರೆಯಬೇಕು. ಪರೀಕ್ಷೆಯಲ್ಲಿ ಒಂದಿಷ್ಟು ಭಾಷೆಗಳಿಗೆ ಕನ್ನಡದಲ್ಲಿ ಮತ್ತು ಮತ್ತೊಂದಿಷ್ಟು ಪ್ರಶ್ನೆಗಳಿಗೆ ಇಂಗ್ಲಿಷ್‌ನಲ್ಲಿ ಉತ್ತರ ಬರೆಯಲು ಅವಕಾಶವಿರುವುದಿಲ್ಲ.


●.ಪರೀಕ್ಷಾ ಕೇಂದ್ರ ಎಲ್ಲಿ?:

ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿಯೂ ಪರೀಕ್ಷೆ ನಡೆಸಲಾಗುತ್ತದೆ.
ಅಭ್ಯರ್ಥಿಯು ಯಾವುದೇ ಜಿಲ್ಲಾ ಕೇಂದ್ರವನ್ನು ಪರೀಕ್ಷೆ ಬರೆಯಲು ಆಯ್ದುಕೊಳ್ಳಬಹುದಾಗಿದೆ.
ಆದರೆ ನೇಮಕ ಮಾಡಿಕೊಳ್ಳುವಾಗ ಅವರು ಅರ್ಜಿಯಲ್ಲಿ ಯಾವ ಜಿಲ್ಲೆಯನ್ನು ನಮೂದಿಸಿರುತ್ತಾರೆಯೋ ಅದೇ ಜಿಲ್ಲೆಗೆ ನೇಮಕ ಮಾಡಲು ಪರಿಗಣಿಸಲಾಗುತ್ತದೆ.


●.ಕಂಪ್ಯೂಟರ್‌ ನಾಲೆಜ್‌ ಪರೀಕ್ಷೆ ಇರುತ್ತದೆಯೇ?:

ಈಗ ಹೊರಡಿಸಿರುವ ಅಧಿಸೂಚನೆ ಪ್ರಕಾರ ಕಂಪ್ಯೂಟರ್‌ ನಾಲೆಜ್‌ಗೆ ಸಂಬಂಧಿಸಿದಂತೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುವುದಿಲ್ಲ.
ಆದರೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಯಲ್ಲಿ ಕಂಪ್ಯೂಟರ್‌ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳಿರುವ ಸಾಧ್ಯತೆಗಳಿವೆ.
ಪಿಡಿಓ ಹುದ್ದೆಗೆ ಕಂಪ್ಯೂಟರ್‌ ಜ್ಞಾನ ಅವಶ್ಯಕವೆಂದು ಸರಕಾರವೇ ತೀರ್ಮಾನಿಸಿತ್ತು. ಹೀಗಾಗಿ ಕಂಪ್ಯೂಟರ್‌ ಜ್ಞಾನವನ್ನು ಈ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಕಂಪ್ಯೂಟರ್‌ ಜ್ಞಾನದ ಕುರಿತು ಪರೀಕ್ಷೆ ನಡೆಸದೇ ಇರುವ ತೀರ್ಮಾನವನ್ನು ಈಗ ತೆಗೆದುಕೊಳ್ಳಲಾಗಿದೆ.


●.ಆಯ್ಕೆ ಹೇಗೆ?:

ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಯು ಪಡೆದ ಒಟ್ಟಾರೆ ಅಂಕಗಳನ್ನು ಆಧರಿಸಿ ಅರ್ಹತಾ ಕ್ರಮಾನುಸಾರ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ ಒಟ್ಟಾರೆ ಶೇಕಡಾವಾರು ಅಂಕಗಳಲ್ಲಿ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಸಮನಾದ ಅಂಕಗಳನ್ನು ಪಡೆದುಕೊಂಡಲ್ಲಿ ಅಂತಹ ಅಭ್ಯರ್ಥಿಗಳ ಅರ್ಹತೆಯನ್ನು ಅಭ್ಯರ್ಥಿಗಳ ವಯಸ್ಸನ್ನಾಧರಿಸಿ, ವಯಸ್ಸಿನಲ್ಲಿ ಹಿರಿಯರಾದ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಮೊದಲಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತದೆ. ಆಕ್ಷೇಪಣೆಗಳ ಪರಿಶೀಲನೆಯ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಳ್ಳಲಿದೆ.


●.ಸಂದರ್ಶನ ನಡೆಸಲಾಗುತ್ತದೆಯೇ?:

ಇಲ್ಲ, ಈ ಬಾರಿಯ ನೇಮಕದ ಸಂದರ್ಭದಲ್ಲಿ ಸಂದರ್ಶನ ನಡೆಸದೇ ಇರಲು ತೀರ್ಮಾನಿಸಲಾಗಿದೆ.
ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕವೇ ಅವರ ಭವಿಷ್ಯವನ್ನು ತೀರ್ಮಾನಿಸಲಿದೆ. ಆದ್ದರಿಂದ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು ಒಳಿತು.


●.ಸಂಬಳ ಎಷ್ಟಿರುತ್ತದೆ?:

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಹುದ್ದೆಗೆ : ರೂ.20,000-36,300 ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್‌-1 ಹುದ್ದೆಗೆ : 14,550-26,700 ರೂ. ವೇತನ ನೀಡಲಾಗುತ್ತದೆ.

●.ಸಲಹೆ:

ಅರ್ಜಿ ಸಲ್ಲಿಸಲು ಕೊನೆಯ ದಿನದ ವರೆಗೆ ಕಾಯಬೇಡಿ. ನಂತರ ಸರ್ವರ್‌ ಡೌನ್‌ ಆಗಿ ಸಮಸ್ಯೆಯಾಗಬಹುದು. ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಆರಂಭಿಸಿ. ಅಧಿಸೂಚನೆಯಲ್ಲಿನ ಸಿಲಬಸ್‌ ಅನ್ನು ಗಮನಿಸಿಕೊಂಡು ಅಗತ್ಯ ಪುಸ್ತಕಗಳನ್ನು ಕೊಂಡು ಓದಿ. ತರಬೇತಿ ನೀಡುತ್ತೇವೆ ಎಂದು ಹೇಳಿಕೊಳ್ಳುವ ಹತ್ತಾರು ಸಂಸ್ಥೆಗಳು ಹುಟ್ಟಿಕೊಂಡು ದುಡ್ಡು ಮಾಡಿಕೊಳ್ಳುತ್ತಿರುತ್ತವೆ. ಇವುಗಳಿಗೆ ಸೇರ್ಪಡೆಯಾಗುವ ಮುನ್ನ ಹತ್ತು ಬಾರಿ ಯೋಚಿಸಿ. ವದಂತಿಗಳಿಗೆ ಕಿವಿಕೊಡಬೇಡಿ. ಅಧ್ಯಯನದ ಕಡೆಗೆ ಹೆಚ್ಚಿನ ಗಮನ ನೀಡಿ.
(Courtesy : S.R.WORLD) 
***Wish U All the Best***

Thursday 8 September 2016

☀️ PDO ನೇಮಕಾತಿ -2016 ಅಧಿಸೂಚನೆ ಪ್ರಕಟನೆ (PDO Recruitment - 2016 Notification)


☀️ PDO ನೇಮಕಾತಿ -2016 ಅಧಿಸೂಚನೆ ಪ್ರಕಟನೆ
(PDO Recruitment - 2016 Notification) 
•─━━━━━═══════════━━━━━─••─━━━━━═══════════━━━━━─•

ನಿಮ್ಮೆಲ್ಲರಿಗೂ ಒಂದು ಸಂತೋಷದ ಸುದ್ದಿ. ಇಷ್ಟು ದಿವಸ ನೀವೆಲ್ಲರೂ ಕಾತರದಿಂದ PDO ನೇಮಕಾತಿಗಾಗಿ ಕಾಯುತ್ತಿದ್ದಿರಿ. ಈಗ ಸರ್ಕಾರವು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮತ್ತು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ -1 (GPS) ಹುದ್ದೆಗಳ ನೇಮಕಾತಿ ಅಧಿಸೂಚನೆ :

ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.


💥ಒಟ್ಟು ಹುದ್ದೆಗಳು : 815 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ + 809 ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್ 1 

💥ಅರ್ಜಿ ಸಲ್ಲಿಸುವಿಕೆ ಪ್ರಾರಂಭ ದಿನಾಂಕ : 16-Sept-2016

💥ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-Oct-2016. 


ಅದರ ಬಗ್ಗೆ ತಿಳಿಯಲು http://kea.kar.nic.in/ ವೆಬ್ ಸೈಟ್ ಗೆ ಭೇಟಿ ಕೊಡಬಹುದು.

ಅಥವಾ ಕೆಳಗಿನ ಲಿಂಕ್ ನ್ನು ಒತ್ತಿರಿ.
http://kea.kar.nic.in/rdpr/notification_kann.pdf

Monday 5 September 2016

☀ PART-3)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು : (Model Questions for IAS / KAS Mains Exam in Kannada medium)

☀ PART-3)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು :
(Model Questions for IAS / KAS Mains Exam in Kannada medium)
•─━━━━━═══════════━━━━━─••─━━━━━═══════════━━━━━─•

★ ಐಎಎಸ್ / ಕೆಎಎಸ್ ಪರೀಕ್ಷೆ :  ಮೇನ್ಸ್ ತಯಾರಿ.
(IAS/KAS Exams - Mains Preparation)

★ ಮುಂದುವರೆದ ಭಾಗ..


•► ನಮ್ಮದೇ ಆದ ಮಾತ್ರಭಾಷೆಯಲ್ಲಿ (ಕನ್ನಡ) ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಗಾಗಿ (ಮೇನ್ಸ್ ಎಕ್ಸಾಂ ಗೆ) direct ಆಗಿ ಸಹಾಯವಾಗುವ ರೀತಿಯಲ್ಲಿ  GS-1,GS-2,GS-3,GS-4 exams ಗೆ ಸಂಬಂಧಪಟ್ಟಂತೆ ಮಾದರಿ ಪರೀಕ್ಷಾ ಪ್ರಶ್ನೆಗಳನ್ನು ನನ್ನ ಜ್ಞಾನ ಪರಿಮಿತಿಯಲ್ಲಿ ತಯಾರಿಸಿ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನ ಮಾಡಿದ್ದು, ತಾವುಗಳು ಆಯಾ ಪ್ರಶ್ನೆಯನ್ನು (150, 200, 250 ಶಬ್ಧಗಳ ಮಿತಿಯಲ್ಲಿ)  ಸೂಕ್ತ ಉತ್ತರ ಬರೆಯಲು ಪ್ರಯತ್ನಿಸಿ. ಸಾಧ್ಯವಾದಲ್ಲಿ ನನಗೆ Mail ಮೂಲಕ  ಉತ್ತರಗಳನ್ನು ಕಳುಹಿಸಿ. (My Email-- yaseen7ash@gmail.com)



☀ ಐಎಎಸ್ / ಕೆಎಎಸ್ ಮಾದರಿ ಪರೀಕ್ಷಾ ಪ್ರಶ್ನೆಗಳು : (150, 200, 250 ಶಬ್ಧಗಳ ಮಿತಿಯಲ್ಲಿ) 



21. ‘ಸ್ವಚ್ಛ ಭಾರತ’ ಅಭಿಯಾನದ ಪರಿಣಾಮಕಾರಿ ಅನುಷ್ಠಾನಗೊಳಿಸುವಲ್ಲಿ ಹಾಗೂ  ಬೆಂಗಳೂರಿನಂತಹ ಬೃಹತ್ ನಗರಗಳಲ್ಲಿರುವ ಎಲ್ಲ ಪ್ರದೇಶಗಳ ಗಂಭೀರ ಸಮಸ್ಯೆಯಾಗಿರುವ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವಲ್ಲಿ ‘ಕಡಿಮೆ ಬಳಕೆ- ಮರುಬಳಕೆ- ಮರುಸಂಸ್ಕರಣೆ’ಗಳೆಂಬ ಪರಿಸರ ಸ್ನೇಹಿ ಸೂತ್ರಗಳ ಅಳವಡಿಕೆಯ ಮಹತ್ವವನ್ನು ಬರೆಯಿರಿ.



22.ಇತ್ತೀಚಿನ 14ನೇ ಹಣಕಾಸು ಆಯೋಗದ ಅನುದಾನದಡಿ ವಿವಿಧ ಯೋಜನೆಗಳಿಗಾಗಿ ಒದಗಿಸಲ್ಪಟ್ಟ ಮುಕ್ತ ನಿಧಿ ಇದ್ದರೂ ಪಟ್ಟಣ, ನಗರಗಳಲ್ಲಿನ ಮೂಲಭೂತ ಸೌಕರ್ಯಗಳ ಸಮರ್ಪಕ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಇಲ್ಲಿನ ನಗರ ಸ್ಥಳೀಯ ಸಂಸ್ಥೆಗಳ, ಪೌರ ಸಂಸ್ಥೆಗಳ ಸಂಬಂಧಪಟ್ಟ ಇಲಾಖೆಗಳು ತೋರುತ್ತಿರುವ ಉದಾಸೀನ, ವಿಳಂಬ ಧೋರಣೆಗಳಿಗೆ ಹಾಗೂ ಅವುಗಳ ಸಮರ್ಪಕ ಅನುಷ್ಠಾನದಲ್ಲಾಗುತ್ತಿರುವ ವೈಫಲಕ್ಕೆ ಪ್ರಮುಖ ಕಾರಣಗಳನ್ನು ಚರ್ಚಿಸಿ.



23. ಭಾರತದ ಜೊತೆ ಉದ್ವಿಗ್ನತೆ ಹೆಚ್ಚಿಸುವುದರ ಮೂಲಕ ತನ್ನ ಪ್ರಭಾವ ಅಥವಾ ಶಾಂತಿ ಪ್ರಕ್ರಿಯೆಗೆ ಅಡ್ಡಗಾಲಾಗಲು ಪ್ರಯತ್ನಿಸುವ ಹತಾಶ ಸ್ಥಿತಿಯನ್ನು  ಪ್ರತಿಪಾದಿಸುವಂತಹ ಪಾಕಿಸ್ತಾನ ಮಿಲಿಟರಿಯ ಕಾರ್ಯತಂತ್ರವು ಇತ್ತೀಚೆಗೆ  ಪಠಾಣ್‌ಕೋಟ್ ದಾಳಿಯಲ್ಲಿ ಮತ್ತೆ ಸ್ಪಷ್ಟಪಡಿಸಿದೆ. ಇಂತಹ ಹಿನ್ನಡೆಗಳ ಮಧ್ಯೆಯೂ ಉಭಯ ದೇಶಗಳ ನಡುವೆ ಪರಸ್ಪರ ವಿಶ್ವಾಸವರ್ಧನೆಯ ಬಾಂಧವ್ಯ ವೃದ್ಧಿಗೆ ಹಾಗೆಯೇ ಭಯೋತ್ಪಾದನೆ ಮಟ್ಟ ಹಾಕುವ ಪ್ರಯತ್ನಗಳಿಗೆ ತಾವು ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ.



24. ಅನೇಕ ಕ್ಷೇತ್ರಗಳಲ್ಲಿ ರಾಷ್ಟ್ರ ಪ್ರಗತಿ ಸಾಧಿಸುತ್ತಿದ್ದರೂ ಸಾಮಾಜಿಕ ನೆಲೆಯಲ್ಲಿ ಲಿಂಗ ತಾರತಮ್ಯ ಮುಂದುವರಿದಿದೆ ಎಂಬುದನ್ನು ಇತ್ತೀಚಿನ ಆರು ವರ್ಷದೊಳಗಿನ ಮಕ್ಕಳ ಲಿಂಗಾನುಪಾತದಲ್ಲಿ ಮತ್ತಷ್ಟು ಕುಸಿತ ಕಂಡಿರುವುದರ ಕುರಿತು ಅಂಕಿಅಂಶಗಳು ಎತ್ತಿ ಹೇಳುತ್ತಿವೆ. ಇದರ ಹಿಂದಿರುವ ಪ್ರಮುಖ ಕಾರಣಗಳಾವವು ? ಕೇಂದ್ರ ಸರ್ಕಾರದ ‘ಬೇಟಿ ಬಚಾವೊ, ಬೇಟಿ ಪಢಾವೊ ’ಎಂಬ ಅಭಿಯಾನವು ಜನಸಮುದಾಯದಲ್ಲಿ ಅರಿವು ಮೂಡಿಸುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗುವುದು?



25.ಯಾವುದೇ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಅಲ್ಲಿನ ಜೀವವೈವಿಧ್ಯವೂ ಪ್ರಮುಖ ಪಾತ್ರ ವಹಿಸುತ್ತದೆ. ಆದಾಗ್ಯೂ ಭಾರತದಲ್ಲಿನ ಜೀವ ವೈವಿಧ್ಯ ಹಾಗು ಅದರ ತಾಣಗಳನ್ನು ರಕ್ಷಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂಬುದನ್ನು ನೀವು ಒಪ್ಪುವಿರಾ? ವಿಶ್ಲೇಷಿಸಿ.



26. ಧಾರ್ಮಿಕ ಆಚರಣೆಯ ಹೆಸರಿನಲ್ಲಿ ಮಹಿಳೆಯರನ್ನು ದೇವದಾಸಿಯರಾಗಿ ಮಾಡುವುದು ಅತ್ಯಂತ ಅಸಹ್ಯ, ಅನಾಗರಿಕ ಪಿಡುಗು. ಇದು ಮಾನವತೆಗೊಂದು ಕಳಂಕ. ಈ ಪಿಡುಗನ್ನು ದೇಶದಾದ್ಯಂತ ನಿಷೇಧಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಸೇರಿ ಅನೇಕ ರಾಜ್ಯಗಳು ಪ್ರತ್ಯೇಕ ಕಾಯ್ದೆಯನ್ನೇ ಮಾಡಿವೆ. ಆದಾಗ್ಯೂ ಇದನ್ನು ಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ ಯಾಕೆ? ಮಹಿಳೆಯರ ಘನತೆ- ಗೌರವಕ್ಕೆ ಧಕ್ಕೆ ತರುವ ಈ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಲ್ಲಿ ತಾವು ಯಾವ್ಯಾವ ಕ್ರಮಗಳನ್ನು ಕೈಗೊಳ್ಳುವಿರಿ? ವಿವರಿಸಿ.



27. ಇತ್ತೀಚೆಗೆ ರಾಷ್ಟ್ರಾದ್ಯಂತ ಭುಗಿಳೇಳುತ್ತಿರುವ ಮೀಸಲಾತಿ ಚಳವಳಿಗಳು ರಾಷ್ಟ್ರವ್ಯಾಪಿಯಾಗಿರುವ ಅಸಮಾನತೆ, ಅಸಮಾಧಾನ, ದ್ವೇಷಗಳನ್ನೊಳಗೊಂಡ ರಾಜಕೀಯ ಆಯಾಮ ಪಡೆಯುತ್ತಿರುವ ಮೀಸಲಾತಿಗೆ ಸೂಕ್ತ ಉದಾಹರಣೆಗಳಾಗಿವೆ. ಇಂತಹ ಪ್ರಚಲಿತ ಮೀಸಲಾತಿ ವ್ಯವಸ್ಥೆಯ ಬದಲಾಗಿ ಸಮಾನತೆ, ದಕ್ಷತೆ, ಸನ್ನಡತೆಯಿಂದ ಕೂಡಿದ ರಾಷ್ಟ್ರೀಕೃತ ಏಕರೂಪದ ಮೀಸಲಾತಿಯನ್ನು ಅನ್ವಯಿಸುವಲ್ಲಿ ತಾವು ಕೈಗೊಳ್ಳಬಹುದಾದ ರಚನಾತ್ಮಕ ಕ್ರಮಗಳಾವವು?



28. ‘ಕೃಷಿ ಕ್ಷೇತ್ರದ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಈ ರಂಗದ ಲೋಪಗಳನ್ನು ಪರಿಹರಿಸಲು ಕೈಗೊಳ್ಳಬಹುದಾದ ದೂರಗಾಮಿ ಪರಿಣಾಮ ಬೀರುವ ಸುಧಾರಣಾ ಕ್ರಮಗಳನ್ನೊಳಗೊಂಡ ಪ್ರೊ. ಸ್ವಾಮಿನಾಥನ್ ಸಮಿತಿಯ ಸಮಗ್ರ ಸ್ವರೂಪದ ಪ್ರಮುಖ ಶಿಫಾರಸುಗಳನ್ನು ಚರ್ಚಿಸಿ.



29. ಭಾರತದ ಆರ್ಥಿಕ ಬೆಳವಣಿಗೆಗೆ ಮತ್ತು ಅಭಿವೃದ್ಧಿ ಹೊಂದಿದ ಆಧುನಿಕ ಸಮಾಜಕ್ಕೆ ಸೇರ್ಪಡೆಯಾಗಲು ‘ಸ್ವಚ್ಛ ಭಾರತ್’ ಘೋಷಣೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಒಂದು ವರ್ಷ ಕಳೆದು ಹೋದರೂ ಭಾರಿ ಬದಲಾವಣೆ ಏನೂ ಕಂಡುಬಂದಿಲ್ಲ. ಮೂಲಭೂತವಾಗಿ ನಮ್ಮ ಸಂಸ್ಕೃತಿ, ಮತ್ತು  ಆಡಳಿತ ವ್ಯವಸ್ಥೆಯಲ್ಲಿಯೇ ಲೋಪವೇ ಈ ಘೋಷಣೆಯ ಹಿನ್ನಡೆಗೆ ಕಾರಣ ಎನ್ನಬಹುದೇ? ನಿಮ್ಮ ಪ್ರಕಾರ ‘ಸ್ವಚ್ಛ ಭಾರತ್’ ಘೋಷಣೆಯ ಹಿನ್ನಡೆಗೆ ಕಾರಣೀಭೂತವಾದ ಪ್ರಮುಖ ಅಂಶಗಳು ಯಾವವು?



30. ಇತ್ತೀಚೆಗೆ ನಿರ್ಭಯಾ ಘಟನೆಯ ಬಳಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನುಗಳು ಬಿಗಿಯಾಗಿದ್ದರೂ ದೇಶದಾದ್ಯಂತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನನಿತ್ಯ ಸುದ್ದಿಯಾಗುತ್ತಲೇ ಇವೆ.ಇಂತಹ ದೌರ್ಜನ್ಯಗಳ ಹೆಚ್ಚಳ ಹಿಂದಿರುವ ನೈಜ ಕಾರಣಗಳು ಯಾವುವು?  ಅತ್ಯಾಚಾರ, ಲೈಂಗಿಕ ದೌರ್ಜನ್ಯ ತಡೆಯುವ ವಿಚಾರದಲ್ಲಿ ನ್ಯಾಯಮೂರ್ತಿ ಜೆ.ಎಸ್.ವರ್ಮ ಸಮಿತಿ ನೀಡಿದ ವರದಿಯು ಇಂತಹ ದೌರ್ಜನ್ಯ ನಿಯಂತ್ರಿಸುವಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?

...ಮುಂದುವರೆಯುವುದು. 

Saturday 3 September 2016

☀ PART-2)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು : (Model Questions for IAS / KAS Mains Exam in Kannada medium)

☀ PART-2)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು :
(Model Questions for IAS / KAS Mains Exam in Kannada medium)
•─━━━━━═══════════━━━━━─••─━━━━━═══════════━━━━━─•

★ ಐಎಎಸ್ / ಕೆಎಎಸ್ ಪರೀಕ್ಷೆ :  ಮೇನ್ಸ್ ತಯಾರಿ.
(IAS/KAS Exams - Mains Preparation)


★ PART -II

•► ನಮ್ಮದೇ ಆದ ಮಾತ್ರಭಾಷೆಯಲ್ಲಿ (ಕನ್ನಡ) ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಗಾಗಿ (ಮೇನ್ಸ್ ಎಕ್ಸಾಂ ಗೆ) direct ಆಗಿ ಸಹಾಯವಾಗುವ ರೀತಿಯಲ್ಲಿ  GS-1,GS-2,GS-3,GS-4 exams ಗೆ ಸಂಬಂಧಪಟ್ಟಂತೆ ಮಾದರಿ ಪರೀಕ್ಷಾ ಪ್ರಶ್ನೆಗಳನ್ನು ನನ್ನ ಜ್ಞಾನ ಪರಿಮಿತಿಯಲ್ಲಿ ತಯಾರಿಸಿ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನ ಮಾಡಿದ್ದು, ತಾವುಗಳು ಆಯಾ ಪ್ರಶ್ನೆಯನ್ನು (150, 200, 250 ಶಬ್ಧಗಳ ಮಿತಿಯಲ್ಲಿ)  ಸೂಕ್ತ ಉತ್ತರ ಬರೆಯಲು ಪ್ರಯತ್ನಿಸಿ. ಸಾಧ್ಯವಾದಲ್ಲಿ ನನಗೆ Mail ಮೂಲಕ  ಉತ್ತರಗಳನ್ನು ಕಳುಹಿಸಿ.
(My Email-- yaseen7ash@gmail.com)



ಐಎಎಸ್ / ಕೆಎಎಸ್ ಮಾದರಿ ಪರೀಕ್ಷಾ ಪ್ರಶ್ನೆಗಳು : (150, 200, 250 ಶಬ್ಧಗಳ ಮಿತಿಯಲ್ಲಿ) 


11.  ಅಂತರರಾಷ್ಟ್ರೀಯ ಮಟ್ಟದ ವಾಣಿಜ್ಯ - ವ್ಯಾಪಾರ ಮತ್ತು ಆರ್ಥಿಕ ಬೆಳವಣಿಗೆಗೆ ಹೆಚ್ಚು ಪೂರಕವಾದ ತೆರಿಗೆ ಸರಳೀಕರಣಗೊಳಿಸುವುದರೊಂದಿಗೆ ದೇಶಿ ವಾಣಿಜ್ಯೋದ್ಯಮ ರಂಗಕ್ಕೆ ಉತ್ತೇಜನ ಹಾಗೂ ಮಾರುಕಟ್ಟೆಗೆ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯು ವಹಿಸಬಹುದಾದ ಪರಿಣಾಮಕಾರಿಯಾದ ಪಾತ್ರವನ್ನು ಕುರಿತು ಚರ್ಚಿಸಿ.



12.ಭಾರತದಲ್ಲಿ ಬುಡಕಟ್ಟು ಜನರ ಅಭಿವೃದ್ಧಿಗಾಗಿ 65 ವರ್ಷಗಳಿಂದ ಸರ್ಕಾರಗಳು ನೂರಾರು ಯೋಜನೆಗಳನ್ನು ಜಾರಿಗೆ ತಂದಿವೆ. ಆದಾಗ್ಯೂ ಈ ಸಮುದಾಯಗಳು ಅಭಿವೃದ್ಧಿ ಯೋಜನೆಗಳ ಲಾಭವನ್ನು ಪಡೆಯಲು ಇಂದಿಗೂ ಸಾಧ್ಯವಾಗಿಲ್ಲ.  ಹಲವಾರು ಗೊಂದಲಗಳ ಮಧ್ಯೆ ಬುಡಕಟ್ಟೇತರ ಜನರು ರೂಪಿಸುವ ಬುಡಕಟ್ಟು ಜನರ ಅಭಿವೃದ್ಧಿ ಎಂಬ ಪರಿಕಲ್ಪನೆ ಒಂದು ದುರಂತಮಯ ಅಂತ್ಯದತ್ತ ಸಾಗುತ್ತಿದೆಯೇ?  ಇತ್ತೀಚಿನ ಭಾರತ ಸರ್ಕಾರ ಕೈಗೊಂಡ ಅಭಿವೃದ್ಧಿ ಯೋಜನೆಗಳ ಅವಲೋಕನದೊಂದಿಗೆ ವಿಶ್ಲೇಷಿಸಿ.



13:—  ಈಶಾನ್ಯ ರಾಜ್ಯಗಳು ಹಾಗು ಕಾಶ್ಮೀರ ಕಣಿವೆಯಲ್ಲಿ ಸಶಸ್ತ್ರ ದಂಗೆಕೋರರನ್ನು ಹತ್ತಿಕ್ಕಲು, ಭಾರತೀಯ ಸೇನೆಗೆ ನೀಡಿರುವ ವಿಶೇಷ ಅಧಿಕಾರ AFSPA ಕಾಯಿದೆಯನ್ನು ಪ್ರಸ್ತುತ ದಿನಗಳಲ್ಲಿ ಈಗಲೂ ಮುಂದುವರೆಸುವುದು ಔಚಿತ್ಯವೇ? AFSPA ಕಾಯಿದೆಯ ವಿಶೇಷ ಅಧಿಕಾರದ ಪರಿಣಾಮಗಳ ವ್ಯಾಪಿಯನ್ನು  ಗಮನದಲ್ಲಿಟ್ಟುಕೊಂಡು ಚರ್ಚಿಸಿ.



14. 21ನೇ ಶತಮಾನದ ಅಗತ್ಯತೆಗಳಿಗೆ ಅನುಗುಣವಾಗಿ 'ಭಾರತೀಯ ದಂಡ ಸಂಹಿತೆ'ಯ ಸಮಗ್ರ ಪರಿಷ್ಕರಣೆ ಅಗತ್ಯವಾಗಿದೇಯೇ?  ಇತ್ತೀಚೆಗೆ ಜೆಎನ್‍ಯು (JNU) ವಿದ್ಯಾರ್ಥಿಗಳ ಮೇಲಾದ ದೇಶದ್ರೋಹದ ಆರೋಪ ಹಿನ್ನೆಲೆಯೊಂದಿಗೆ ವಿಶ್ಲೇಷಿಸಿ.



15.  ಕಳೆದ ಒಂದು ದಶಕದ ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಅವಲೋಕಿಸಿದಾಗ ಆಂತರಿಕ ಸಂಘರ್ಷ, ರಾಜಕೀಯ ಅಸ್ಥಿರತೆ ಅರಾಜಕತೆ ಮುಂತಾದ ಕಾರಣಗಳಿಂದ ಬಲತ್ಕಾರವಾಗಿ ದೇಶದಿಂದ ಹೊರದೂಡುಲ್ಪಡುತ್ತಿರುವ ಅಂತರರಾಷ್ಟ್ರೀಯ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂಥವರ ಸಮಸ್ಯೆಗಳನ್ನು ಆಲಿಸುವ, ನಿವಾರಿಸುವ, ಅವರ ಹಕ್ಕುಗಳನ್ನು ರಕ್ಷಿಸುವ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಲಸಿಗರಲ್ಲಿ ಒಗ್ಗಟ್ಟು ಮೂಡಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ ವಿಶ್ವಸಂಸ್ಥೆಯು ಕೈಗೊಂಡ ಕ್ರಮಗಳನ್ನು ವಿಶ್ಲೇಷಿಸಿ.



16. ದೇಶದ ಅರ್ಥವ್ಯವಸ್ಥೆಯಲ್ಲಿ ಹಣಕಾಸಿನ ಸೇರ್ಪಡೆಯ ಪ್ರಯತ್ನಗಳನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಹೆಚ್ಚು ವ್ಯಾಪಕವಾಗಿ ನಡೆಸುವ ಉದ್ದೇಶದಿಂದ ಬ್ಯಾಂಕಿಂಗ್‌ ಮತ್ತು ಹಣಕಾಸು ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವಲ್ಲಿ ಆರ್‌ಬಿಐ ಉದ್ದೇಶಿತ ಹೊಸ ಶ್ರೇಣಿಯ ಸಂಸ್ಥೆಗಳಾದ ಸಣ್ಣ ಹಣಕಾಸು ಬ್ಯಾಂಕುಗಳು (Small Finance Banks) ಅದರಲ್ಲೂ , ಮುಖ್ಯವಾಗಿ ಗ್ರಾಮೀಣ ಮತ್ತು ಬ್ಯಾಂಕ್‌ ಶಾಖಾರಹಿತ ಪ್ರದೇಶಗಳಲ್ಲಿ ವಹಿಸಬಲ್ಲ ಮಹತ್ವದ ಪೂರಕ ಪಾತ್ರಗಳನ್ನು ವಿವರಿಸಿ.



17. 'ಬಡತನದ ಅಗಾಧತೆ’ ಮತ್ತು ‘ಏಳಿಗೆಯ ಹಂಚಿಕೆಯಲ್ಲಿನ ಅಸಮತೆ’ ವಿಶ್ವ ಎದುರಿಸುತ್ತಿರುವ ಎರಡು ಅತಿ ದೊಡ್ಡ ಸವಾಲುಗಳು. ಇವುಗಳನ್ನು ನಿಗ್ರಹಿಸುವಲ್ಲಿ ಐಎಂಎಫ್ ಮತ್ತು ವಿಶ್ವಬ್ಯಾಂಕಗಳು ಗುರಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳು’(ಎಸ್‍ಡಿಜಿ) ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲವು?



18.ಜನರ ಬದುಕು ಹಸನಾಗಿಸಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಮರ್ಪಕ ಮಾಹಿತಿ ಇಲ್ಲದೆ ಆ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುತ್ತಲೇ ಇಲ್ಲ."— ಈ ನಿಟ್ಟಿನಲ್ಲಿ ಕೊರತೆ ನೀಗಿಸಿ ಯೋಜನೆಗಳ ಪ್ರಯೋಜನ ಎಲ್ಲರಿಗೂ ತಲುಪಿಸುವ, ಅರಿವು ಮೂಡಿಸುವ ಹಾಗೂ ಕಾನೂನು ನೆರವು ಒದಗಿಸುವ ಸಲುವಾಗಿ ಸ್ಥಾಪಿತವಾಗಿರುವ 'ರಾಜ್ಯ ಕಾನೂನು ಸೇವಾ ಪ್ರಾಧಿಕಾರ'ದ ಕಾರ್ಯವ್ಯಾಪ್ತಿಯ ಕುರಿತು ಚರ್ಚಿಸಿ.



19. ಬರ ಸಂಭಾವ್ಯ ಪ್ರದೇಶದಲ್ಲಿ ದೇಶದಲ್ಲೇ ಎರಡನೇ ಸ್ಥಾನ ಕರ್ನಾಟಕಕ್ಕಿದೆ. ಇಂಥ ನೈಸರ್ಗಿಕ ವಿಕೋಪದ ಪರಿಸ್ಥಿತಿಯಲ್ಲಿ ನೀವು ಕೈಗೊಳ್ಳಬಹುದಾದ ಬರ ನಿರ್ವಹಣೆಯ ಸೂಕ್ತ ಕ್ರಮಗಳು ಯಾವವು?



20.ನಕಲಿ ನೋಟುಗಳ (ಕಳ್ಳನೋಟುಗಳು) ಚಲಾವಣೆಯು ಇಂದು ಮುಂದುವರೆಯುತ್ತಿರುವ ಭಾರತದಂತಹ ದೇಶಗಳ ಸಾಮಾಜಿಕ, ಆರ್ಥಿಕ ವ್ಯವಸ್ಥೆಯ ಮೇಲೆ ಯಾವ ರೀತಿ ಪರಿಣಾಮ ಉಂಟುಮಾಡಬಲ್ಲದು? ವಿವರಿಸಿ.

...ಮುಂದುವರೆಯುವುದು.

☀ (PART-1)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು : (Model Questions for IAS / KAS Mains Exam in Kannada medium)

☀ (PART-1)️ ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು :
(Model Questions for IAS / KAS Mains Exam in Kannada medium)
•─━━━━━═══════════━━━━━─••─━━━━━═══════════━━━━━─•
★ ಐಎಎಸ್ / ಕೆಎಎಸ್ ಪರೀಕ್ಷೆ :  ಮೇನ್ಸ್ ತಯಾರಿ.
(IAS/KAS Exams - Mains Preparation)



•► ನಮ್ಮದೇ ಆದ ಮಾತ್ರಭಾಷೆಯಲ್ಲಿ (ಕನ್ನಡ) ಐಎಎಸ್ / ಕೆಎಎಸ್ ಮುಖ್ಯ ಪರೀಕ್ಷೆಗಾಗಿ (ಮೇನ್ಸ್ ಎಕ್ಸಾಂ ಗೆ) direct ಆಗಿ ಸಹಾಯವಾಗುವ ರೀತಿಯಲ್ಲಿ  GS-1,GS-2,GS-3,GS-4 exams ಗೆ ಸಂಬಂಧಪಟ್ಟಂತೆ ಮಾದರಿ ಪರೀಕ್ಷಾ ಪ್ರಶ್ನೆಗಳನ್ನು ಪ್ರಚಲಿತ ಘಟನೆಗಳ ಅವಲೋಕನದೊಂದಿಗೆ ನನ್ನ ಜ್ಞಾನ ಪರಿಮಿತಿಯಲ್ಲಿ ತಯಾರಿಸಿ 'ಸ್ಪರ್ಧಾಲೋಕ'ದಲ್ಲಿ ವಿವರಿಸಲು ಪ್ರಯತ್ನ ಮಾಡಿದ್ದು, ತಾವುಗಳು ಆಯಾ ಪ್ರಶ್ನೆಯನ್ನು (150, 200, 250 ಶಬ್ಧಗಳ ಮಿತಿಯಲ್ಲಿ)  ಸೂಕ್ತ ಉತ್ತರ ಬರೆಯಲು ಪ್ರಯತ್ನಿಸಿ. ಸಾಧ್ಯವಾದಲ್ಲಿ ನನಗೆ Mail ಮೂಲಕ  ಉತ್ತರಗಳನ್ನು ಕಳುಹಿಸಿ. (My Email-- yaseen7ash@gmail.com)



ಐಎಎಸ್ / ಕೆಎಎಸ್ ಮಾದರಿ ಪರೀಕ್ಷಾ ಪ್ರಶ್ನೆಗಳು :(150, 200, 250 ಶಬ್ಧಗಳ ಮಿತಿಯಲ್ಲಿ)


1. ಕಳೆದ ೨೦೦ ವರ್ಷಗಳಲ್ಲಿ ಜಗತ್ತಿನಾದ್ಯಂತ ಹಾನಿ ಎಸಗುತ್ತಾ ಬಂದ ದುರಾಶೆ ಮೂಲದ, ಜಿ.ಡಿ.ಪಿ. (ಒಟ್ಟು ಆಂತರಿಕ ಉತ್ಪಾದನೆ) ಕೇಂದ್ರಿತ ಮತ್ತು ಪರಿಸರಕ್ಕೆ ಹಾನಿಕರವಾದ ಅಭಿವೃದ್ಧಿಯ ಮಾದರಿಯು ಜಾಗತಿಕ ಜೀವವೈವಿಧ್ಯ ಮತ್ತು ಸಂಪನ್ಮೂಲಗಳ ಬಳಕೆಯಲ್ಲಿ ಉಂಟಾದ ವೈಪರೀತ್ಯಗಳಿಗೆ ಪ್ರತ್ಯಕ್ಷವಾಗಿ ಹೊಣೆಗಾರಿಕೆ ನಿಭಾಯಿಸುತ್ತಿದೆ ಎಂಬ ವಾದ ನಿಜವೇ? ಚರ್ಚಿಸಿ.



2. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಬಗೆಗಿನ ಇತ್ತೀಚಿನ ಹೊಸ ಬೆಳವಣಿಗೆಗಳೊಂದಿಗೆ ಹವಾಮಾನ ವ್ಯತ್ಯಾಸದ ಪರಿಣಾಮಗಳು ಈಗಾಗಲೇ ಗೋಚರಿಸಲು ಆರಂಭಿಸಿವೆ. ಈ ದಿವ್ಯ ನಿರ್ಲಕ್ಷ್ಯದ ಪರಿಣಾಮಗಳಲ್ಲಿ ಭಾರತದ ಕೊಡುಗೆ ಏನು?



3. ಕಳೆದ ಒಂದು ದಶಕದ ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಅವಲೋಕಿಸಿದಾಗ ಆಂತರಿಕ ಸಂಘರ್ಷ, ರಾಜಕೀಯ ಅಸ್ಥಿರತೆ ಅರಾಜಕತೆ ಮುಂತಾದ ಕಾರಣಗಳಿಂದ ಬಲತ್ಕಾರವಾಗಿ ದೇಶದಿಂದ ಹೊರದೂಡುಲ್ಪಡುತ್ತಿರುವ ಅಂತರರಾಷ್ಟ್ರೀಯ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದ್ದು, ಇಂಥವರ ಸಮಸ್ಯೆಗಳನ್ನು ಆಲಿಸುವ, ನಿವಾರಿಸುವ, ಅವರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಲ್ಲಿಯವರೆಗೆ ವಿಶ್ವಸಂಸ್ಥೆಯು ಕೈಗೊಂಡ ಕ್ರಮಗಳನ್ನು ವಿಶ್ಲೇಷಿಸಿ.



4.  ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿನೀತಿಯ ಮುಂಜಾಗ್ರತಾ ಕ್ರಮಗಳ ಮಾದರಿಯೊಂದಿಗೆ `ಭಾರತದಲ್ಲೇ ನಿರ್ಮಾಣ’ (`ಮೇಕ್ ಇನ್ ಇಂಡಿಯ’) ಚಳವಳಿಯು ಪರಿಸರಸಹ್ಯವಾದ ರೀತಿಯಲ್ಲಿ ದೇಶದ ಅಭಿವೃದ್ಧಿಯನ್ನು ಸಾಧಿಸವಲ್ಲಿ ಅದರ ಪ್ರಸ್ತುತತೆಯನ್ನು ವಿಮರ್ಶಿಸಿ.



5. ನಮ್ಮ ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಭಾಗವಾಗಿರುವ ಮಹಾತ್ಮ ಗಾಂಧಿಯವರು ಪ್ರತಿಪಾದಿಸಿದ ಹಲವು ಮಹತ್ವದ ಚಿಂತನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಆಧುನಿಕತೆಯ ನಾಗಾಲೋಟದಲ್ಲಿ ಬಹು ಮುಂದೆ ಸಾಗಿರುವ ಈ ದಿನಗಳಲ್ಲಿ, ಗಾಂಧಿ ಹುಟ್ಟಿದ ನಾಡಿನಲ್ಲಿಯೇ ಗಾಂಧಿ ಚಿಂತನೆಗಳಿಗೆ ಹಿನ್ನಡೆಯಾಗುತ್ತಿದೆ ಎಂಬ ಮಾತು ಸಮಂಜಸವೇ? ವಿಶ್ಲೇಷಿಸಿ.



6. ಇತ್ತೀಚೆಗೆ ನಡೆದ ಪಂಜಾಬ್‌ನ ಪಠಾಣ್‌ಕೋಟ್ ವಾಯು ನೆಲೆ ಮೇಲಿನ ದಾಳಿಯ ಅವಲೋಕನದೊಂದಿಗೆ ಪ್ರಸ್ತುತ ದೇಶದ ಗಡಿ ಭದ್ರತೆಯ ಸ್ಥಿತಿ ಹಾಗೂ ಭಯೋತ್ಪಾದನೆ ಪ್ರತಿರೋಧ ಕಾರ್ಯಾಚರಣೆಯ ಲೋಪದೋಷಗಳನ್ನು ವಿಮರ್ಶಿಸಿ ಹಾಗೂ ಭದ್ರತೆಯ ಸನ್ನದ್ಧತೆಯನ್ನು ಬಲಪಡಿಸಲು ಕೈಗೊಳ್ಳಬಹುದಾದ ಕ್ರಮಗಳನ್ನು ಸ್ಪಷ್ಟೀಕರಿಸಿ.



7. ಬಹುಮತದಿಂದ ಅಂಗೀಕೃತಗೊಂಡ ಸಂವಿಧಾನ ಆಧಾರಿತ ಹೊಸ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ನೇಪಾಳದಲ್ಲಿ ಇತ್ತೀಚೆಗೆ ಉಲ್ಬಣಗೊಂಡ ರಾಜತಾಂತ್ರಿಕ ಸಂದಿಗ್ಧತೆಗೆ ಪ್ರಮುಖ ಕಾರಣಗಳಾವುವು? ಅವರ ಹೊಸ ಸಂವಿಧಾನದ ಕುರಿತು ಭಾರತವು ತಳೆದಿರುವ ನೀತಿಯು ಪರಸ್ಪರ ರಾಜತಾಂತ್ರಿಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಬಲ್ಲದು?



8. ಅಭ್ಯುದಯ ರಾಜಕೀಯ ನೀತಿಯಿಂದ ಪ್ರಾರಂಭಿಸಿ ಇಂದಿನ ನವ-ಉದಾರವಾದಿ ರಾಜಕೀಯ ಚೌಕಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಮುಂದುವರಿದ ಮೀಸಲಾತಿಯು, ಅದರ ಮೂಲ ಉದ್ದೇಶವಾದ ಸಮಾನತೆಯನ್ನು ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಹೊಂದಿರುವ ಭಾರತದಲ್ಲಿ ಸಮಾನ ಅವಕಾಶದ ಸಾಮಾನ್ಯ ತತ್ವದಡಿಯಲ್ಲಿ ಪ್ರಸ್ತುತ ವರ್ತಮಾನದ ಸನ್ನಿವೇಶದಲ್ಲಿ ಅವಲೋಕಿಸಿ.



9. ಭಾರತದ ಸಂದರ್ಭದಲ್ಲಿ ಜಾತಿ ಮತ್ತು ಬಡತನದ ಮಧ್ಯೆ ನಿಕಟ ಸಂಬಂಧವಿದೆ. ಸಾಪೇಕ್ಷ ಬಡತನ ಮತ್ತು ಸಾಮಾಜಿಕ ಹಿಂದುಳಿಯುವಿಕೆಯನ್ನು ಸೃಷ್ಟಿಸಿದ ಜಾತಿಯನ್ನೇ ಮೊದಲಿನಿಂದಲೂ ದೇಶದಲ್ಲಿ ಮೀಸಲಾತಿಯ ಹೆಸರಿನಲ್ಲಿ ಅವಕಾಶಗಳ ಹಂಚಿಕೆ ಮತ್ತು ಬಳಕೆಗೆ ಮಾನದಂಡವಾಗಿರಿಸಿರುವುದರ ಪ್ರಸ್ತುತತೆ ಕುರಿತು ಚರ್ಚಿಸಿ.



10. ಸಂಕಷ್ಟಗಳ ಸರಮಾಲೆಯಲ್ಲಿ ಸಿಲುಕಿರುವ ರೈತರು ಎದುರಿಸುತ್ತಿರುವ ಸಮಸ್ಯೆಗಳ ಮೂಲ ಕಾರಣಗಳನ್ನು ಪರಿಹರಿಸಲು ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ನೀವು ಕೈಗೊಳ್ಳಬಹುದಾದ ಸ್ವರೂಪಾತ್ಮಕ ಬದಲಾವಣೆಯ ಕ್ರಮಗಳನ್ನು ಸ್ಪಷ್ಟೀಕರಿಸಿ.

— ಮುಂದುವರೆಯುವುದು.