"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 16 May 2017

☀️' ರಾನ್ಸಮ್ ವೇರ್ 'ಎಂದರೇನು ? ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ? (What is Ransomware,? How the Ransomware does Cyber-attack?)

☀️' ರಾನ್ಸಮ್ ವೇರ್ 'ಎಂದರೇನು ? ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ?
(What is Ransomware,? How the Ransomware does Cyber-attack?)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಪ್ರಚಲಿತ ಘಟನೆಗಳು
:Current Affairs)


●. ರಾನ್ಸಮ್ ವೇರ್

 ರಾನ್ಸಮ್ ವೇರ್ ಎಂಬ ದುರುದ್ದೇಶಪೂರಿತ ಸಾಫ್ಟ್ ವೇರ್ ವಿಶ್ವದಾದ್ಯಂತ ಹಲವಾರು ಕಂಪೆನಿಗಳಿಗೆ ತೊಂದರೆಯಂಟು ಮಾಡಿದೆಯಲ್ಲದೆ ಸಾವಿರಾರು ಕಂಪ್ಯೂಟರುಗಳು ಬಾಧಿತವಾಗಿವೆ. ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ಹಾಗೂ ಜನರು ಅದಕ್ಕೆ ಹೇಗೆ ಬಲಿ ಬೀಳುತ್ತಾರೆಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡು ಹಣಕ್ಕಾಗಿ ಪೀಡಿಸುವ ದುರುಳರ ಬಗ್ಗೆ ನಾವು ಕೇಳಿದ್ದೇವಲ್ಲ, ಅಂತಹ ದುಷ್ಕರ್ಮಿಗಳು ಸೈಬರ್ ಲೋಕದಲ್ಲೂ ಇದ್ದಾರೆ. ಅವರು ಒತ್ತೆಯಾಳುಗಳಾಗಿ ಇರಿಸಿಕೊಳ್ಳುವುದು ಜನರನ್ನಲ್ಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳನ್ನು!

ಈ ಕೆಟ್ಟ ಉದ್ದೇಶಕ್ಕಾಗಿ ಬಳಕೆಯಾಗುವ ತಂತ್ರಾಂಶಗಳನ್ನು 'ರಾನ್ಸಮ್‌ವೇರ್' (Ransomware) ಎಂದು ಗುರುತಿಸಲಾಗುತ್ತದೆ ('ರಾನ್ಸಮ್‌' ಎಂದರೆ ಸುಲಿಗೆಯ ಹಣ). ಸೈಬರ್ ಲೋಕವನ್ನು ಕಾಡುವ ಹಲವು ಬಗೆಯ ಕುತಂತ್ರಾಂಶಗಳಲ್ಲಿ ಇದೂ ಒಂದು.

ತಂತ್ರಾಂಶಗಳನ್ನು - ಕಡತಗಳನ್ನು ಗೂಢಲಿಪೀಕರಣಗೊಳಿಸಿ (ಎನ್‌ಕ್ರಿಪ್ಟ್ ಮಾಡಿ) ಬಳಸಲಾಗದಂತೆ ಮಾಡುವುದು ರಾನ್ಸಮ್‌ವೇರ್ ಕಾರ್ಯವೈಖರಿ. ಕೆಡಿಸಿದ ಕಡತಗಳನ್ನು ಮತ್ತೆ ಸರಿಪಡಿಸಬೇಕಾದರೆ ನಾವು ಕೇಳಿದಷ್ಟು ದುಡ್ಡುಕೊಡಿ ಎಂದು ಈ ಕುತಂತ್ರಾಂಶ ರೂಪಿಸಿದವರು ಬೇಡಿಕೆಯಿಡುತ್ತಾರೆ. ಕಂಪ್ಯೂಟರಿಗೆ - ಅದರಲ್ಲಿನ ಕಡತಗಳಿಗೆ ಪಾಸ್‌ವರ್ಡ್ ಹಾಕಿ ಲಾಕ್ ಮಾಡಿಟ್ಟು ಅದೇನೆಂದು ಹೇಳಲು ಹಣಕೇಳುವ ಉದಾಹರಣೆಗಳೂ ಇವೆ. ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನುಗಳ ಜೊತೆಗೆ ಸ್ಮಾರ್ಟ್ ಟೀವಿಗಳಲ್ಲೂ ರಾನ್ಸಮ್‌ವೇರ್ ಹಾವಳಿ ಕಂಡುಬಂದಿದೆಯಂತೆ.


●. ವಾನ್ನಕ್ರೈ ಎಂದರೇನು ?

ವಾನಾಕ್ರಿಪ್ಟ್0ಆರ್ 2.0, ವಾನ್ನಕ್ರೈ ಅಥವಾ ಡಬ್ಲ್ಯುಕ್ರೈ ಎಂಬುದು ಒಂದು ವಿಧದ ರಾನ್ಸಮ್ ವೇರ್ ಆಗಿದ್ದು ನಿಮ್ಮ ಕಂಪ್ಯೂಟರಿನ ಫೈಲ್ ಗಳನ್ನು ಲಾಕ್ ಮಾಡಿ ಎನ್ಕ್ರಿಪ್ಟ್ ಮಾಡುವುದರಿಂದ ನೀವು ಮತ್ತೆ ಆ ಫೈಲ್ ಉಪಯೋಗಿಸುವುದು ಅಸಾಧ್ಯವಾಗುತ್ತದೆ.

ತಪ್ಪಾದುದನ್ನು ಕ್ಲಿಕ್ ಮಾಡಿ ಅಥವಾ ತಪ್ಪಾದುದನ್ನು ಡೌನ್ ಲೋಡ್ ಮಾಡಿದಾಗ ನಿಮ್ಮ ಕಂಪ್ಯೂಟರ್ ಪ್ರವೇಶಿಸುವ ಈ ರ್ಯಾನ್ಸಮ್ ವೇರ್ ನಿಮಗೆ ಬೇಕಿದ್ದುದನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ.


●. ಈ ರಾನ್ಸಮ್ ವೇರ್ ಹೇಗೆ ಕೆಲಸ ಮಾಡುತ್ತದೆ ?

ಈ ವಾನ್ನಾಕ್ರೈ ಪ್ರೊಗ್ರಾಂ ನಿಮ್ಮ ಫೈಲ್ ಗಳನ್ನು ಎನ್ಕ್ರಿಪ್ಟ್ ಮಾಡಿ ನಿಮಗೆ ಆ ಫೈಲ್ ಮತ್ತೆ ಬೇಕಿದ್ದರೆ ಬಿಟ್ ಕಾಯಿನ್ ಮುಖಾಂತರ ಹಣ ಪಾವತಿಗೆ ಬೇಡಿಕೆ ಸಲ್ಲಿಸಬೇಕೆಂದು ಹೇಳುತ್ತದೆ. ಹಣ ಪಾವತಿಯ ನಂತರವೂ ಬಳಕೆದಾರರೊಬ್ಬರಿಗೆ ಅವರ ಎನ್ಕ್ರಿಪ್ಟ್ ಮಾಡಲಾದ ಫೈಲ್ ಮತ್ತೆ ದೊರೆಯುವುದೆಂಬ ಖಾತರಿಯೇನಿಲ್ಲ. ಕೆಲ ರಾನ್ಸಮ್ ವೇರ್ ಗಳಂತೂ ಫೈಲ್ ಗಳನ್ನು ತಮ್ಮ ಹಿಡಿತದಲ್ಲಿರಿಸಿಕೊಂಡು ಕೆಲ ದಿನಗಳ ನಂತರ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಡುತ್ತವೆಯಲ್ಲದೆ ಆ ಫೈಲ್ ಗಳನ್ನು ಡಿಲೀಟ್ ಮಾಡುವ ಬೆದರಿಕೆಯನ್ನೂ ಒಡ್ಡುತ್ತವೆ.

ಕೆಲ ರಾನ್ಸಮ್ ವೇರ್ ಪ್ರೋಗ್ರಾಂಗಳು ಕಂಪ್ಯೂಟರನ್ನು ಸಂಪೂರ್ಣವಾಗಿ ಲಾಕ್ ಮಾಡಿಬಿಟ್ಟರೆ ಇನ್ನು ಕೆಲವು ಹಣ ಪಾವತಿ ಮಾಡಬೇಕೆನ್ನುವ ಮೆಸೇಜ್ ತೋರಿಸುತ್ತವೆ. ಮತ್ತೂ ಕೆಲವು ಮುಚ್ಚಲು ಸಾಧ್ಯವಾಗದಂತಹ ಪಾಪ್ ಅಪ್ ಗಳನ್ನು ಕಂಪ್ಯೂಟರ್ ಸ್ಕ್ರೀನುಗಳಲ್ಲಿ ಮೂಡಿಸುತ್ತವೆ.

ಈ ರಾನ್ಸಮ್ ವೇರ್ ಹಲವು ದೇಶಗಳಲ್ಲಿ ಹರಡಿದ್ದು ಆರಂಭಿಕ ವರದಿಗಳ ಪ್ರಕಾರ ಕನಿಷ್ಠ ಎರಡು ಡಜನ್ ದೇಶಗಳು ಬಾಧಿತವಾಗಿವೆ. ಎಂಟು ಏಷ್ಯನ್ ದೇಶಗಳು, ಎಂಟು ಯುರೋಪಿಯನ್ ದೇಶಗಳು, ಟರ್ಕಿ, ಆರ್ಜೆಂಟಿನಾ ಹಾಗೂ ಯುಎಇ ಕೂಡ ಈ ರಾನ್ಸಮ್ ವೇರ್ ನಿಂದ ತೊಂದರೆಗೊಳಗಾಗಿವೆ.

ರಾನ್ಸಮ್ ವೇರ್ ಕೇವಲ ಒಂದು ಪ್ರೊಗ್ರಾಂ ಆಗಿರದೆ ಒಂದು ಹುಳದಂತಿದ್ದು ಒಂದು ಕಂಪ್ಯೂಟರ್ ಪ್ರವೇಶಿಸಿದ ನಂತರ ಸಾಧ್ಯವಾದಷ್ಟು ಇತರ ಕಂಪ್ಯೂಟರುಗಳಿಗೆ ಹರಡಲು ಯತ್ನಿಸುತ್ತದೆ.


●. ಇದರ ಹಿಂದೆ ಯಾರಿದ್ದಾರೆ ?

ಶ್ಯಾಡೋ ಬ್ರೋಕರ್ಸ್ ಎಂಬ ಗುಂಪು ಈ ರಾನ್ಸಮ್ ವೇರ್ ಹಿಂದೆ ಇದೆಯೆನ್ನಲಾಗಿದೆ. ಈ ಹ್ಯಾಕಿಂಗ್ ಸಾಧನವನ್ನು ಅದು ಎನ್‌ಎಸ್‌ಎ ರಹಸ್ಯ ಸರ್ವರ್ ನಿಂದ ಪಡೆದಿದೆಯೆಂದು ಹೇಳಿಕೊಂಡಿದೆ.

2016ರಲ್ಲಿ ಮೊದಲು ಕಾಣಿಸಿಕೊಂಡ ಈ ಹ್ಯಾಕರ್ಸ್ ಗುಂಪಿಗೆ ರಷ್ಯಾ ಸರಕಾರದೊಂದಿಗೆ ನಂಟು ಇದೆಯೆಂದೂ ಹೇಳಲಾಗುತ್ತಿದೆ.

☀ ಇತ್ತೀಚೆಗೆ ಉದ್ಘಾಟನೆಗೊಂಡ ದೇಶದ ಅತಿ ಉದ್ದದ ರಸ್ತೆ ಸುರಂಗದ ವಿಶೇಷತೆ: (Specialities of India's Longest Tunnel Road Inaugurated recently)


☀ ಇತ್ತೀಚೆಗೆ ಉದ್ಘಾಟನೆಗೊಂಡ ದೇಶದ ಅತಿ ಉದ್ದದ ರಸ್ತೆ ಸುರಂಗದ ವಿಶೇಷತೆ:
(Specialities of India's Longest Tunnel Road Inaugurated recently)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(general studies)

★ ಪ್ರಚಲಿತ ಘಟನೆಗಳು.
(Current Affairs)


●.ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರವನ್ನು ಜಮ್ಮುವಿಗೆ ಸಂರ್ಪಸುವ ಚೆನಾನಿ ಮತ್ತು ನಶ್ರಿ ನಡುವಿನ ರಸ್ತೆ ಸುರಂಗ ಮಾರ್ಗವನ್ನು 02.04.2017 ರಂದು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

●.ಒಂಬತ್ತು ಕಿ.ಮೀ. ಉದ್ದದ ಸುರಂಗ ಮಾರ್ಗ ದೇಶದ ಅತಿ ಉದ್ದದ ರಸ್ತೆ ಸುರಂಗ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಸಮುದ್ರ ಮಟ್ಟದಿಂದ 1200 ಮೀಟರ್ ಎತ್ತರದಲ್ಲಿ ದ್ವಿಮುಖ ಮಾರ್ಗದಲ್ಲಿ ನಿರ್ವಿುಸಲಾಗಿರುವ ಈ ಸುರಂಗವು ಸರ್ವಋತು ಬಾಳಿಕೆಯ ರಸ್ತೆ ಹೊಂದಿದ್ದು, ಇದರ ನಿರ್ವಣಕ್ಕೆ 2,500 ಕೋಟಿ ರೂ. ವೆಚ್ಚವಾಗಿದೆ. ಐದೂವರೆ ವರ್ಷಗಳ ಅವಧಿಯ ಈ ಕಾಮಗಾರಿಯಲ್ಲಿ 1500 ತಂತ್ರಜ್ಞರು ಶ್ರಮಿಸಿದ್ದಾರೆ.

●.ಪರ್ವತ ಪ್ರದೇಶದಲ್ಲಿ ಈ ದಾರಿ ಹಾದು ಹೋಗುತ್ತಿತ್ತು. ಈ ಸುರಂಗ ಮಾರ್ಗ ನಿರ್ವಣದಿಂದ ಶ್ರೀನಗರ ಮತ್ತು ಜಮ್ಮು ನಡುವಣ ಪ್ರಯಾಣ 31 ಕಿ.ಮೀ. (ಚೆನಾನಿ ಮತ್ತು ನಶ್ರಿ ಮಧ್ಯೆಯ 44 ಕಿ.ಮಿ. ಅಂತರ 9 ಕಿ.ಮೀ.ಗೆ ಇಳಿಕೆ) ಕಡಿಮೆಯಾಗಲಿದ್ದು, ಸುಮಾರು ಎರಡು ತಾಸು ಪ್ರಯಣದ ಅವಧಿ ತಗ್ಗಲಿದೆ. ಪ್ರತಿದಿನ ಅಂದಾಜು 27 ಲಕ್ಷ ರೂ. ಮೌಲ್ಯದ ಇಂಧನವೂ ಉಳಿತಾಯ ಆಗಲಿದೆ.

●.ಈ ಸುರಂಗ ಮಾರ್ಗ ನಿರ್ವಣದಿಂದ ಪ್ರಯಾಣಿಕರಿಗೆ ಸಾಕಷ್ಟು ಭದ್ರತೆ ದೊರೆಯಲಿದೆ. ಜಮ್ಮುದ ಹಲವು ಭಾಗ ಉಗ್ರರ ಹಾವಳಿಗೆ ತುತ್ತಾಗಿದೆ. ರಸ್ತೆಯ ಮೇಲೆ ಸಂಚರಿಸುವ ವಾಹನಗಳ ಮೇಲೆ ಉಗ್ರರು ದಾಳಿ ನಡೆಸಿದ ಉದಾಹರಣೆ ಸಾಕಷ್ಟಿದೆ. ಸುರಂಗ ಮಾರ್ಗ ನಿರ್ವಣವಾಗಿದ್ದರಿಂದ ಉಗ್ರರ ದಾಳಿ ಸಾಧ್ಯತೆ ಕಡಿಮೆಯಾಗಿದೆ.

●.ಇದು ಸರ್ವಋತು ಮಾರ್ಗವಾಗಿದ್ದು, ಚಳಿಗಾಲದಲ್ಲಿ ಭಾರಿ ಹಿಮ ಸುರಿಯುತ್ತಿದ್ದರೂ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ.


●.ಪ್ರಮುಖ ಅಂಶಗಳು :

- 1200 ಮೀಟರ್ ಎತ್ತರದ ಪರ್ವತ ಶ್ರೇಣಿಯಲ್ಲಿನ ರಸ್ತೆ ಸುರಂಗ

- ದ್ವಿಮುಖ ಮಾರ್ಗದ ಸುರಂಗಕ್ಕೆ 2,500 ಕೋಟಿ ರೂ. ವೆಚ್ಚ- ಐದೂವರೆ ವರ್ಷಗಳಲ್ಲಿ ನಿರ್ಮಾಣ

- ಸುರಂಗದಲ್ಲಿ 9.35 ಮೀಟರ್ ಅಗಲದ ರಸ್ತೆ- ಸುರಂಗದ ಎತ್ತರ 5 ಮೀಟರ್

- 31 ಕಿ.ಮೀ. ಪ್ರಯಾಣ ಇಳಿಕೆ

- ತುರ್ತ ನಿರ್ಗಮನದ ಮಾರ್ಗಗಳು- ಮಾಹಿತಿ ಘೊಷಣಾ ವ್ಯವಸ್ಥೆ

- ಪ್ರತಿ 300 ಮೀಟರ್ ಅಂತರಕ್ಕೆ ಒಂದರಂತೆ ಅಡ್ಡರಸ್ತೆಗಳ ನಿರ್ಮಾಣ

- ಪ್ರತಿ 150 ಮೀಟರ್​ಗೆ ಒಂದು ತುರ್ತಕರೆಯ ದೂರವಾಣಿ ಪೆಟ್ಟಿಗೆ

- ಸಮಗ್ರ ಸಂಚಾರ ನಿಯಂತ್ರಣ ವ್ಯವಸ್ಥೆ ಮತ್ತು 124 ಸಿಸಿಟಿವಿ ಕ್ಯಾಮೆರಾ ಅಳವಡಿಕೆ

- ಗಾಳಿಯಾಡಲು ಸಮರ್ಪಕ ವಾತಾನುಕೂಲ- ಬೆಂಕಿ ಅವಘಡ ನಿಯಂತ್ರಣದ ವ್ಯವಸ್ಥೆ

-ಉಗ್ರರಿಂದ ರಕ್ಷಣೆ

(Courtesy : Vijayavani) 

Wednesday 10 May 2017

☀️ ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ : (️ From Aryabhata to GSAT-9 Satellite: Glance on ISRO achievement)

☀️ ಆರ್ಯಭಟದಿಂದ ಜಿಸ್ಯಾಟ್-9 ಉಪಗ್ರಹದವರೆಗೆ: ಇಸ್ರೊ ಸಾಧನೆಯ ಇಣುಕು ನೋಟ :
(️ From Aryabhata to GSAT-9 Satellite:  Glance on ISRO achievement)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ವಿಜ್ಞಾನ
(General Science)



ಭಾರತದ ಏಕೈಕ ಬಾಹ್ಯಾಕಾಶ ಕೇಂದ್ರ ಶ್ರೀಹರಿ ಕೋಟಾದಿಂದ ಜಿಎಸ್ಎಲ್ ವಿ-09 ಉಪಗ್ರಹ ಮೇ 5ರಂದು ಉಡಾವಣೆಗೊಳ್ಳುವ ಮೂಲಕ ಇಸ್ರೋದ ಮತ್ತೊಂದು ಬಾಹ್ಯಾಕಾಶ ಯಾನಕ್ಕೆ ಸಾಕ್ಷಿಯಾಯಿತು.

ಕಳೆದ ಫೆಬ್ರವರಿ 15ರಂದು ಭಾರತ 104 ಸ್ಯಾಟಲೈಟ್ ಗಳನ್ನು ಒಂದು ರಾಕೆಟ್ ನಲ್ಲಿ ಉಡಾಯಿಸುವ ಮೂಲಕ ಇತಿಹಾಸ ಸೃಷ್ಟಿಸಿತು. ಮಾಮ್ನಿಂದ ಜಿಎಸ್ಎಲ್ ವಿ-9 ವರೆಗೆ ಆರ್ಯಭಟದಿಂದ ಇಲ್ಲಿಯವರೆಗೆ ಭಾರತ ಉಪಗ್ರಹ ಉಡಾವಣೆಯಲ್ಲಿ ಬಹುದೂರ ಸಾಗಿ ಬಂದಿದೆ.


ಹಳೆಯ ನೆನಪಿನ ಬುತ್ತಿಯನ್ನು ಕೆದಕಿದಾಗ ಇಸ್ರೋದ ಮಹತ್ವದ ಹೆಜ್ಜೆ ಗುರುತುಗಳನ್ನು ನೋಡಬಹುದು.

1975, ಆರ್ಯಭಟ
-------------
ಭಾರತದ ಮೊದಲ ಸ್ವದೇಶಿ ನಿರ್ಮಿತ ಉಪಗ್ರಹ ಆರ್ಯಭಟವನ್ನು ಸೋವಿಯತ್ ಒಕ್ಕೂಟ ಉಡಾಯಿಸಿತು. ಅಂತರಿಕ್ಷದಲ್ಲಿ 19 ವರ್ಷಗಳ ಕಾಲ ಪ್ರಯಾಣ ಮಾಡಿ ಭೂ ಕಕ್ಷೆಯನ್ನು ಮರು ಪ್ರವೇಶಿಸಿತು. ಖಗೋಳಶಾಸ್ತ್ರ ಮತ್ತು ಸೌರ ಭೌತಶಾಸ್ತ್ರಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸಲು ಆರ್ಯಭಟ ಉಪಗ್ರಹವನ್ನು ಬಳಸಲಾಯಿತು.

1979, ಭಾಸ್ಕರ್
------------
ಅರಣ್ಯ, ಜಲ ವಿಜ್ಞಾನ, ಭೂ ವಿಜ್ಞಾನಕ್ಕೆಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸಲು ಈ ಉಪಗ್ರಹವನ್ನು ಬಳಸಿಕೊಳ್ಳಲಾಗುತ್ತಿದ್ದು ಕಾಪುಸ್ತಿನ್ ಯಾರ್ ನಲ್ಲಿ ಉಡಾಯಿಸಲಾಯಿತು. ಭಾಸ್ಕರ್ ಮೂಲಕವೇ ಟಿ ವಿ ಮತ್ತು ಕ್ಯಾಮರಾಗಳ ಆರಂಭವಾಯಿತು.

1980, ರೋಹಿಣಿ
------------
ಎಸ್ಎಲ್ ವಿ-3 ಹಾಗೂ ರೋಹಿಣಿಯನ್ನು ಒಟ್ಟಿಗೆ ಎರಡನೇ ಪ್ರಯೋಗಾತ್ಮಕ ಉಪಗ್ರಹವಾಗಿ ಉಡಾಯಿಸಲಾಯಿತು.ಕಾರ್ಯಾಚರಣೆ ಯಶಸ್ವಿಯಾಯಿತು.

1981,ಭಾಸ್ಕರ 2
-------------
ಭೂ ಕಕ್ಷೆಗೆ 1991ರಲ್ಲಿ ಮರು ಪ್ರವೇಶಿಸಿತು ಹಾಗೂ ಭೂಮಿ ಮತ್ತು ನೀರಿನ ವಲಯಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿತು. ಅಸಮರ್ಪಕವಾಗಿ ಕೆಲಸ ಮಾಡಿದಎರಡು ಕ್ಯಾಮರಾಗಳಲ್ಲಿ ಒಂದನ್ನು ಸುಮಾರು 2,000 ಚಿತ್ರಗಳನ್ನು ವಾಪಸ್ಸು ಕಳುಹಿಸಲಾಯಿತು.

1982, ಇನ್ಸಾಟ್-1 ಎ
----------------
ಅಮೆರಿಕಾ ರಾಕೆಟ್ ಮೂಲಕ ಉಡಾಯಿಸಲಾದ ಸಂವಹನ ಉಪಗ್ರಹ. ಇದು ನಮ್ಮ ದೇಶದ ಮೊದಲ ಹವಾಮಾನಶಾಸ್ತ್ರ ಉಪಗ್ರಹವಾಗಿದೆ.1983, ಇನ್ಸಾಟ್-2ಬಿ: ಇನ್ಸಾಟ್-1ಎಯ ಪ್ರತಿಬಿಂಬವಾಗಿದ್ದು 7 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದೆ.

1988, ಐಆರ್ಎಸ್-1ಎ
-----------------
ರಷ್ಯಾ ರಾಕೆಟ್ ಮೂಲಕ ಉಡಾವಣೆಗೊಂಡ ಭಾರತೀಯ ರಿಮೋಟ್ ಸೆನ್ಸಿಂಗ್(ಐಆರ್ಎಸ್) ಉಪಗ್ರಹವಾಗಿದೆ. ಆದರೆ ಈ ಕಾರ್ಯಾಚರಣೆ ವಿಫಲವಾಯಿತು.

1992, ಇನ್ಸಾಟ್-2ಡಿಟಿ
-----------------
*1,360 ಕೆಜಿ ತೂಕದ ಈ ಉಪಗ್ರಹವನ್ನು ಆರಂಭದಲ್ಲಿ ಅರಬ್ ಮತ್ತು ನಂತರ ಭಾರತೀಯ ಸಂವಹನ ಉಪಗ್ರಹವಾಗಿ ಉಡಾಯಿಸಲಾಯಿತು. ಉದನ್ನು ಫ್ರಾನ್ಸ್ ನ ಗಯಾನಾದಲ್ಲಿ ಉಡಾಯಿಸಲಾಯಿತು.*

1994,ವಿಸ್ತರಿಸಿದೆ.
ರೋಹಿಣಿ ಉಪಗ್ರಹ ಸರಣಿ
---------------------------
ಅಂತರಿಕ್ಷಕ್ಕೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಪೇ ಲೋಡ್ಸ್ ಗಳನ್ನು ಹೊತ್ತೊಯ್ದ ಗುಂಪು ಉಪಗ್ರಹಗಳು ಗಾಮಾ ಕಿರಣ ಸ್ಫೋಟಗಳನ್ನು ಕಂಡು ಹಿಡಿಯುವಲ್ಲಿ ಇದು ಸಹಾಯ ಮಾಡಿದೆ.

1997, ಐಆರ್ಎಸ್ 1-ಡಿ
-----------------
ದೂರಸ್ಥಸಂವೇದನಾ ಉಪಗ್ರಹಗಳಲ್ಲಿ ಇದು ಏಳನೆಯದಾಗಿದೆ. ಇದನ್ನುಇಸ್ರೋ ನಿರ್ಮಿಸಿ ಉಡಾಯಿಸಿ,ಕಾರ್ಯನಿರ್ವಹಿಸಿದ ಉಪಗ್ರಹವಾಗಿದೆ. 12 ವರ್ಷಗಳ ಸೇವೆ ನಂತರ 2010ರಲ್ಲಿ ಪೂರ್ಣಗೊಂಡಿತು.

2001, ಜಿಸ್ಯಾಟ್-1
--------------
ಜಿಎಸ್ಎಲ್ ವಿ ಅಧಿಕ ಭಾರದ ರಾಕೆಟ್ ನ್ನು ಜಿಸ್ಯಾಟ್-1 ಮೂಲಕ ಯಶಸ್ವಿಯಾಗಿ ಉಡಾಯಿಸಿತು.

2002, ಕಲ್ಪನ-1
-------------
ಮೆಟ್ ಸಾಟ್ ದೇಶದ ಮೊದಲ ಮೀಸಲಾದ ಹವಾಮಾನ ಉಪಗ್ರಹವಾಗಿದ್ದು ಅದಕ್ಕೆ ಕಲ್ಪನ ಎಂದು ಮರು ನಾಮಕರಣ ಮಾಡಲಾಯಿತು.

ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಡಲಾಯಿತು. ಏಳು ವರ್ಷಗಳವರೆಗೆ ಸೇವೆ ಸಲ್ಲಿಸಿದ್ದು ಹವಾಮಾನ ಮತ್ತು ಪರಿಸರದ ಸಂಬಂಧಿತ ಮಾಹಿತಿಯನ್ನು ಒಟ್ಟುಗೂಡಿಸಲು ಬಳಸಲಾಗಿದೆ.

2004, ಎಜುಸ್ಯಾಟ್
--------------
ದೇಶದ ಮೊದಲ ಶಿಕ್ಷಣ ಆಧಾರಿತ ಉಪಗ್ರಹವಾಗಿದ್ದು, ಸ್ಮಾರ್ಟ್ ತರಗತಿಗಳ ಪರಿಕಲ್ಪನೆ ಇದರಿಂದ ಹುಟ್ಟಿಕೊಂಡಿತು. ಎರಡು ಮಾರ್ಗಗಳ ಮೂಲಕ ಸಂವಹನ ಇದರಲ್ಲಿ ಸಾಧ್ಯವಿದ್ದು ತರಗತಿಗಳಿಗೆ ಶಿಕ್ಷಣದ ಸಾಮಗ್ರಿಗಳನ್ನು ಪೂರೈಸುತ್ತದೆ.

2005, ಕಾರ್ಟೊಸ್ಯಾಟ್-1
------------------
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಇದನ್ನು ಉಡಾಯಿಸಲಾಯಿತು. ಪ್ರಾದೇಶಿಕ, ಸ್ಪೆಕ್ಟ್ರಲ್ ಮತ್ತು ರೇಡಿಯೊಮೆಟ್ರಿಕ್ ನಿರ್ಣಯಗಳನ್ನು ಸುಧಾರಿಸುವ ಕಾರ್ಯಾಚರಣೆ ಮತ್ತು ಅಂಕಿಅಂಶಗಳ ಸಂಗ್ರಹವನ್ನು ಹೊಂದಿದೆ.

2007, ಕಾರ್ಟೊಸ್ಯಾಟ್-2
-----------------
ಸ್ಪೇಸ್ ಕ್ಯಾಪ್ಸುಲ್ ರಿಕವರಿ ಪ್ರಯೋಗ ಮತ್ತು ಎರಡು ವಿದೇಶಿ ಸ್ಯಾಟಲೈಟ್ ಗಳ ಉಡಾವಣೆಯನ್ನು ಇದು ಹೊಂದಿದೆ.

2008, ಚಂದ್ರಯಾನ
--------------
ಶ್ರೀ ಹರಿಕೋಟಾದಿಂದ ಮೊದಲ ಚಂದ್ರಪರಿಶೋಧನೆ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಇದು ಎರಡು ವರ್ಷಗಳ ಜೀವಿತಾವಧಿ ಹೊಂದಿತ್ತು. ಗ್ರಹಗಳ ಮತ್ತು ದೂರಸ್ಥ ಸಂವೇದನಾ ಕ್ಷೇತ್ರಗಳನ್ನು ಒಳಗೊಂಡಿದೆ.

2011, ಯೂತ್ ಸ್ಯಾಟ್
---------------
ಭಾರತ-ರಷ್ಯಾ ಜಂಟಿಯಾಗಿ ಉಡಾಯಿಸಿದ ಉಪಗ್ರಹವಿದು. ಪದವಿ, ಸ್ನಾತಕ ಪದವಿ ಮತ್ತು ಸಂಶೋಧನಾ ತಜ್ಞರನ್ನು ಒಟ್ಟಿಗೆ ತರುತ್ತದೆ. ಭಾರತದಮಿನಿ ಸ್ಯಾಟಲೈಟ್ ಸರಣಿಯ ಭಾಗವಾಗಿದ್ದು ಎರಡನೆಯದಾಗಿದೆ.

2013, ಮಾಮ್
------------
ಮಂಗಳಯಾನ ಎಂದು ಕರೆಯಲ್ಪಡುವ ಮಾರ್ಸ್ ಆರ್ಬಿಟರ್ ಮಿಷನ್ ಅಂತರಗ್ರಹ ಸ್ಥಳಕ್ಕೆ ಭಾರತದ ಮೊದಲ ಬಾಹ್ಯಾಕಾಶ ಪ್ರಯಾಣವಾಗಿದೆ.

2014, ಜಿಸ್ಯಾಟ್ 16
---------------
ಸಂವಹನ ಉಪಗ್ರಹ. ತೆರೆದ-ಸಾಮರ್ಥ್ಯದ ಆಂಟೆನಾವನ್ನು ಜಿಸ್ಯಾಟ್ 16 ಒಳಗೊಂಡಿದೆ.

2015, ಜಿಸ್ಯಾಟ್ 15
---------------
ಕು ಬಾಂಡ್ ನಲ್ಲಿ ಹೊತ್ತೊಯ್ಯುವ ಸಂವಹನ ಟ್ರಾನ್ಸ್ಪೋರ್ಡರ್ಗಳನ್ನು ಒಳಗೊಂಡಿದೆ.

2016, ಸ್ಕ್ಯಾಟ್ ಸಾಟ್-1
-----------------
ಚಂಡಮಾರುತ, ಗಾಳಿ, ಹವಾಮಾನ ಮುನ್ಸೂಚನೆ ಕುರಿತು ಮಾಹಿತಿಗಳನ್ನು ಸಂಗ್ರಹಿಸುತ್ತದೆ. 5 ವರ್ಷಗಳ ಜೀವಿತಾವಧಿ ಹೊಂದಿದೆ.

2017, ಕಾರ್ಟೊಸ್ಯಾಟ್ 2 ಡಿ
-------------------
ಪಿಎಸ್ಎಲ್ ವಿ ಒಂದು ಉಡಾವಣಾ ವಾಹಕದ ಮೂಲಕ ಏಕಕಾಲಕ್ಕೆ 104 ಸ್ಯಾಟಲೈಟ್ಗಳನ್ನು ಉಡಾಯಿಸಿ ಇತಿಹಾಸ ನಿರ್ಮಿಸಿತು.

2017, ಜಿಸ್ಯಾಟ್-9
--------------
ದಕ್ಷಿಣ ಏಷ್ಯಾ ದೇಶಗಳಿಗೆ ನೆರೆಯ ರಾಷ್ಟ್ರಗಳಿಗೆ ಭಾರತ ನೀಡಿದ ಕೊಡುಗೆಯಿದು. ಸಂವಹನ ಉಪಗ್ರಹ.