☀ಪನಾಮಾ ಕಾಲುವೆ ಮತ್ತು ಅದರ ಮಹತ್ವ:
(Panama Canal and it's Importance)
━━━━━━━━━━━━━━━━━━━━━━━━━━━━━━━━━━━━━━━━━━━━━
✧.ಪನಾಮಾ ಕಾಲುವೆ ಮಾನವನಿಂದ ನಿರ್ವಿುಸಲ್ಪಟ್ಟ ಜಗತ್ತಿನ ಬಹು ಮುಖ್ಯ ಕಾಲುವೆ ಪನಾಮಾ.
✧.ಅಟ್ಲಾಂಟಿಕ್ ಮತ್ತು ಶಾಂತ ಸಾಗರಗಳ ನಡುವೆ ಸಂಪರ್ಕ ಕಲ್ಪಿಸುವ ಈ ಕಾಲುವೆಯನ್ನು ಪನಾಮಾ ಜಲಸಂಧಿಯ ನಡುವೆ ನಿರ್ವಿುಸಲಾಗಿದೆ.
✧.ಇದರ ಉದ್ದ 82 ಕಿ.ಮೀ.
✧.ಸಮುದ್ರಮಟ್ಟದಿಂದ 26 ಮೀಟರ್ಗಳ ಮೇಲೆ ಹಡಗುಗಳನ್ನು ತರುವ ಮೂರು ಜೊತೆ ಲಾಕ್ಗಳಿವೆ.
✧.ಪನಾಮಾ ಕಾಲುವೆಯ ಲಾಕ್ ಚೇಂಬರ್ಗಳ ಉದ್ದ 100 ಅಡಿ, ಅಗಲ 110 ಅಡಿ ಮತ್ತು ಆಳ 41 ಅಡಿ.
✧.ಬಹುತೇಕ ವಾಣಿಜ್ಯ ನೌಕೆಗಳು ಮತ್ತು ನೌಕಾಬಲದ ನೌಕೆಗಳು ಈ ಕಾಲುವೆಯ ಮೂಲಕ ಸಂಚರಿಸುತ್ತವೆ.
✧.ಈ ಕಾಲುವೆಯ ಲಾಕ್ ಗೇಟ್ಗಳು 47ರಿಂದ 82 ಅಡಿಗಳಷ್ಟು ಎತ್ತರವಿದೆ.
✧.ಎರಡೂ ಕಡೆಯಿಂದಲೂ ಹಡಗುಗಳು ಏಕಕಾಲದಲ್ಲಿ ಸಂಚರಿಸಲು ಇವು ಅವಕಾಶ ಮಾಡಿಕೊಡುತ್ತವೆ. ಮೋಟಾರ್ಗಳು ಇವುಗಳ ಚಲನವಲನವನ್ನು ನಿಯಂತ್ರಿಸುತ್ತವೆ. ಇವುಗಳ ಕಾರ್ಯ ನಿರ್ವಹಣೆಗಾಗಿ ಕಂಟ್ರೋಲ್ ಟವರ್ ಇದೆ.
✧.ಕಾಯುವ ಸಮಯವೂ ಸೇರಿದಂತೆ ಈ ಕಾಲುವೆಯನ್ನು ಹಾದುಹೋಗಲು ಹಡಗುಗಳಿಗೆ 15 ಗಂಟೆಗಳ ಅವಧಿ ಬೇಕಾಗುತ್ತದೆ.
✧.ಸ್ಪೇನ್ 16ನೇ ಶತಮಾನದಲ್ಲಿ ಪನಾಮಾ ಕಾಲುವೆ ನಿರ್ವಿುಸುವ ಯೋಚನೆ ಮಾಡಿತು.
✧.1846ರಲ್ಲಿ ಇದರ ನಿರ್ವಣಕ್ಕೆ ಸಂಬಂಧಿಸಿದಂತೆ ಅಮೆರಿಕವು ಕೊಲಂಬಿಯಾದೊಡನೆ ಒಪ್ಪಂದ ಮಾಡಿಕೊಂಡಿತು.
✧.1855ರಲ್ಲಿ ಅಮೆರಿಕವು ಈ ಯೋಜನೆಗೆ ಬೇಕಾಗಿದ್ದ ಹಣಕಾಸು ನೆರವನ್ನು ಒದಗಿಸಿತು.
✧.ಪನಾಮಾ 1903ರಲ್ಲಿ ಕೊಲಂಬಿಯಾದಿಂದ ಸ್ವಾತಂತ್ರವಾಯಿತು. ಅದೇ ವರ್ಷ ಅಮೆರಿಕ ಮತ್ತು ಪನಾಮಾ ನಡುವೆ ಒಪ್ಪಂದ ಏರ್ಪಟ್ಟಿತು. ಈ ಒಪ್ಪಂದದ ಮೇರೆಗೆ ಕಾಲುವೆಯ ನಿರ್ವಣದ ಹಕ್ಕು ಅಮೆರಿಕಕ್ಕೆ ಸಿಕ್ಕಿತು.
✧.1904ರಲ್ಲಿ ಕಾಲುವೆಯ ನಿರ್ವಣ ಪ್ರಾರಂಭವಾಯಿತು.
✧.1914ರ ಆಗಸ್ಟ್ನಲ್ಲಿ ಕಾಲುವೆಯನ್ನು ಹಡಗುಗಳ ಸಂಚಾರಕ್ಕೆ ತೆರೆಯಲಾಯಿತು.
●.ವಿವರಣೆ (Explanation):
━━━━━━━━━━━━━━━━━
✧.ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರವನ್ನು ಬೆಸೆದ ಪನಾಮಾ ಕಾಲುವೆ ನಿರ್ಮಾಣವಾಗಿ ಒಂದು ಶತಮಾನ ಸಂದಿದೆ.
1914ರ ಆ.15ರಂದು ಕಾಲುವೆಯಲ್ಲಿ ಹಡಗು ಸಂಚಾರ ಆರಂಭವಾಗಿತ್ತು. ಇದರಿಂದ ಸರಕು ಸಾಗಣೆ ಹಡಗುಗಳು ದಕ್ಷಿಣ ಅಮೆರಿಕವನ್ನು ಸುತ್ತುಬಳಸಿ ಕ್ರಮಿಸ ಬೇಕಾದ ಪ್ರಯಾಸ ನಿವಾರಣೆಯಾಗಿತ್ತು. ಇದನ್ನು ಆಧುನಿಕ ಎಂಜಿನಿಯರಿಂಗ್ ಅದ್ಭುತ ಎಂತಲೇ ಬಣ್ಣಿಸಲಾಗಿದೆ.
●.ಆರಂಭವಾಗಿದ್ದು ಏಕೆ?:
— ಪನಾಮಾ ಕಾಲುವೆ ನಿರ್ಮಾಣಗೊಳ್ಳುವುದಕ್ಕೂ ಮುನ್ನ ಸರಕು ಸಾಗಣೆ ಹಡಗುಗಳು ಯುರೋಪ್ ಖಂಡವನ್ನು ತಲುಪಬೇಕಾದರೆ, ಅರ್ಜೆಂಟೀನಾ, ಚಿಲಿಯ ಮೂಲಕ ಸುತ್ತಿಕೊಂಡು 10 ಸಾವಿರ ಮೈಲಿಗಳನ್ನು ಕ್ರಮಿಸ ಬೇಕಾಗಿತ್ತು. ಇದಕ್ಕೆ ಎರಡು ತಿಂಗಳಿಗೂ ಅಧಿಕ ಸಮಯ ತಗುಲುತ್ತಿತ್ತು. ಹೀಗಾಗಿ ಪರ್ಯಾಯ ಮಾರ್ಗದತ್ತ ಹುಡುಕಾಟ ಆರಂಭವಾಯಿತು.
●.ಮೊದಲ ಸಂಚಾರ:
— ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರವನ್ನು ಬೆಸೆಯುವ 51 ಮೈಲಿ ಉದ್ದದ ಪನಾಮಾ ಕಾಲುವೆಯನ್ನು ಈ ಹಿನ್ನೆಲೆಯಲ್ಲಿ ನಿರ್ಮಿಸಲಾಯಿತು. ಎಸ್‌ಎಸ್ ಆಂಕನ್ ಎಂಬ ಸರಕು ಸಾಗಣೆ ಹಡಗು 9 ತಾಸುಗಳ ಪ್ರಯಾಣಿಸುವ ಮೂಲಕ 1914ರ ಆಗಸ್ಟ್ 15ರಂದು ವಿಧ್ಯುಕ್ತವಾಗಿ ಕಾಲುವೆಯಲ್ಲಿ ಸಂಚಾರ ಆರಂಭಗೊಂಡಿತು. ಕಾಲುವೆ ನಿರ್ಮಾಣಗೊಂಡ ಬಳಿಕ ಇದು ಜಲ ಸಾರಿಗೆಯಲ್ಲಿ ಕ್ರಾಂತಿಯನ್ನೇ ನಿರ್ಮಿಸಿತು.
●.10 ವರ್ಷಗಳ ನಿರ್ಮಾಣ ಕಾರ್ಯ:
— ಪನಾಮಾ ಕಾಲುವೆ ನಿರ್ಮಾಣಕ್ಕೆ 10 ವರ್ಷ ತಗುಲಿದೆ. ಕಾಲುವೆಯ ನಿರ್ಮಾಣಕ್ಕೆ ಈಗಿನ ದರದಲ್ಲಿ 28,200 ಕೋಟಿ ರೂ. ವೆಚ್ಚವಾಗಿದೆ. ಕಾಲುವೆ ಆರಂಭವಾದಾಗ ಈ ಮಾರ್ಗದಲ್ಲಿ ವರ್ಷಕ್ಕೆ 1 ಸಾವಿರ ಹಡಗುಗಳು ಸಂಚರಿಸುತ್ತಿದ್ದವು. ಇಂದು ಈ ಕಾಲುವೆಯಲ್ಲಿ ದಿನಕ್ಕೆ ಸರಾಸರಿ 35 ಹಡಗುಗಳು ಸಂಚರಿಸುತ್ತಿವೆ.
●.ಮೂರನೇ ಲಾಕ್ಸ್‌ಗಳ ನಿರ್ಮಾಣ:
— ಪನಾಮಾ ಕಾಲುವೆಗೆ 100 ವರ್ಷ ತುಂಬಿದ ಬೆನ್ನಲ್ಲೇ, ಪನಾಮಾ ಕಾಲುವೆಯಲ್ಲಿ ಮೂರನೇಲಾಕ್ಸ್‌ಗಳನ್ನು ನಿರ್ಮಿಸಲು ಯೋಜನೆಯನ್ನು ಸಿದ್ಧ ಪಡಿಸಲಾಗಿದೆ. 31,800 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, 15000 ಕಂಟೇನರ್ ಹಡಗುಗಳನ್ನು ನಿರ್ವಹಿಸಲಿವೆ. ಈಗಿರುವ ಲಾಕ್ಸ್‌ಗಳು 5000 ಕಂಟೇನರ್ ಹಡಗನ್ನು ನಿರ್ವಹಿಸಬಲ್ಲವು.
(source: Udayavani+Vijayavani)

No comments:
Post a Comment