"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 11 March 2015

2011ರ ಕರ್ನಾಟಕ ರಾಜ್ಯದ ಜನಗಣತಿ: ಸಂಕ್ಷಿಪ್ತ ಮಾಹಿತಿ  ( 2011 Census of Karnataka: Brief Information)


☀. 2011ರ ಕರ್ನಾಟಕ ರಾಜ್ಯದ ಜನಗಣತಿ: ಸಂಕ್ಷಿಪ್ತ ಮಾಹಿತಿ
( 2011 Census of Karnataka: Brief Information)

━━━━━━━━━━━━━━━━━━━━━━━━━━━━━━━━━━━━━━━━━━━━━

♦. ಐಎಎಸ್ / ಕೆಎಎಸ್ ಪರೀಕ್ಷಾ ದೃಷ್ಟಿಯಿಂದ ತುಂಬಾ ಉಪಯುಕ್ತ.
***Very very important Notes for IAS / KAS Exams.


✧.2011ರ ಜನಗಣತಿ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇರುವ ಒಟ್ಟು ಜನಸಂಖ್ಯೆ 6,10,95,297.

✧. ದೇಶದ ಒಟ್ಟು ಜನಸಂಖ್ಯೆ 121 ಕೋಟಿ.

✧.ರಾಜ್ಯದ ಒಟ್ಟು ಆರು ಕೋಟಿ ಜನಸಂಖ್ಯೆ ಪೈಕಿ ಪುರುಷರ ಸಂಖ್ಯೆ 3,09,66,657, ಮಹಿಳೆಯರ ಜನಸಂಖ್ಯೆ 3,01,28,640.

✧. ರಾಜ್ಯದಲ್ಲಿರುವ (SC)  ಎಸ್ಸಿ ಜನಾಂಗ ಒಟ್ಟು ಜನಸಂಖ್ಯೆ ಒಂದು ಕೋಟಿ ನಲವತ್ತು ಲಕ್ಷ.  (ST)ಎಸ್ಟಿ ಜನಸಂಖ್ಯೆ 42,48,987.

✧. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಒಂಬತ್ತನೇ ಸ್ಥಾನ ಸಿಕ್ಕಿದೆ.

✧. ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿ ಇರುವ ಜನಸಂಖ್ಯೆ 96,27,551.

✧. ಅತಿ ಕಡಿಮೆ ಜನಸಂಖ್ಯೆ ಕೊಡಗು ಜಿಲ್ಲೆಯದು, ಇಲ್ಲಿನ ಜನಸಂಖ್ಯೆ 5,54,519.


●. ಮಹಾನಗರ ಪಾಲಿಕೆವಾರು ಜನಸಂಖ್ಯೆ ವಿವರ :

* ಬೆಂಗಳೂರು ಮಹಾನಗರ ಪಾಲಿಕೆ : •—————• 84,43,675
* ಬೆಳಗಾವಿ: •—————• 4,88,157
* ಹುಬ್ಬಳ್ಳಿ-ಧಾರವಾಡ : •—————• 9,43,788,
* ಬಳ್ಳಾರಿ: •—————• 4,10,445,
* ದಾವಣಗೆರೆ: •—————• 4,34,971,
* ಮಂಗಳೂರು: •—————• 4,85,968,
* ಮೈಸೂರು : •—————• 8,93,062
* ಗುಲ್ಬರ್ಗಾ : •—————• 5,33, 587.


●. 2011ರ ಜನಗಣತಿ ಪ್ರಕಾರ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ 3 ಜಿಲ್ಲೆಗಳು.

* ಬೆಂಗಳೂರು ನಗರ •—————• 96,21,551,
* ಬೆಳಗಾವಿ •—————• 47,79,661,
* ಮೈಸೂರು •—————• 30,01,127.


●. ಅತಿ ಕಡಿಮೆ ಜನಸಂಖ್ಯೆ ಹೊಂದಿರುವ 3 ಜಿಲ್ಲೆಗಳು.

* ಕೊಡಗು •—————• 5,56,519,
* ಬೆಂಗಳೂರು ಗ್ರಾಮಾಂತರ •—————• 9,90,923,
* ಚಾಮರಾಜನಗರ •—————• 10,20,179.


●. ಒಟ್ಟು ಸಾಕ್ಷರತೆಯ ಪ್ರಮಾಣ 2011 ರಲ್ಲಿ 75.04 .

✧. ಈ ಪ್ರಮಾಣ 2001ರಲ್ಲಿ ಶೇ.66.06ರಷ್ಟಿತ್ತು.
✧. ಈ ಹತ್ತು ವರ್ಷದ ಅವಧಿಯಲ್ಲಿ ಶೇ.8.8 ರಷ್ಟು ಸಾಕ್ಷರತೆ ಹೆಚ್ಚಳವಾಗಿದೆ.
✧. ಈಗ ರಾಜ್ಯದಲ್ಲಿ 4,6,47,322 ಮಂದಿ ಸಾಕ್ಷರರಿದ್ದಾರೆ.
✧. 2011ರ ಜನಗಣತಿ ವರದಿಯಲ್ಲಿ ಸಾಕ್ಷರರ ಸಂಖ್ಯೆ 3,04,34,962 ಇತ್ತು.


●. ಜಿಲ್ಲಾವಾರು ಸಾಕ್ಷರತೆ ಪ್ರಮಾಣ :

* ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು ಇಲ್ಲಿನ ಸಾಕ್ಷರತೆ ಪ್ರಮಾಣ ಶೇ.88.57.
* ಬೆಂಗಳೂರುನಗರ 2ನೇ ಸ್ಥಾನದಲ್ಲಿದ್ದು, 87.67,
* ಉಡುಪಿ •—————• 86.64,
* ಚಾಮರಾಜನಗರ •—————• ಶೇ.61.43,
* ಯಾದಗಿರಿ ಜಿಲ್ಲೆ ಸಾಕ್ಷರತೆಯಲ್ಲಿ ಕೊನೆಯ ಸ್ಥಾನದಲ್ಲಿದ್ದು, ಇಲ್ಲಿನ ಪ್ರಮಾಣ ಶೇ.51.83ರಷ್ಟಿದೆ.


●. ಇನ್ನು ಪ್ರತಿ ಸಾವಿರ ಜನಸಂಖ್ಯೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲೈಂಗಿಕ ಅನುಪಾತದ ಸಂಖ್ಯೆ :

* ಬೆಳಗಾವಿ •—————• 988,
* ಹುಬ್ಬಳ್ಳಿ-ಧಾರವಾಡ •—————• 989,
* ದಾವಣಗೆರೆ •—————• 971,
* ಬಳ್ಳಾರಿ •—————• 991,
* ಬಿಬಿಎಂಪಿ ಬೆಂಗಳೂರು •—————• 923,
* ಮಂಗಳೂರು •—————• 1006,
* ಮೈಸೂರು •—————• 999,
* ಗುಲ್ಬರ್ಗಾ •—————• 964.


●. ಸಾವಿರ ಪುರುಷ ಜನಸಂಖ್ಯೆಗೆ ಈಗ ಮಹಿಳಾ ಸಂಖ್ಯೆ 973.

✧. ಕಳೆದ 2001ರ ಜನಗಣತಿಯಲ್ಲಿ ಸಾವಿರ ಪುರುಷರಿಗೆ 965 ಮಹಿಳೆಯರ ಸಂಖ್ಯೆ ಇತ್ತು.

✧. ಈಗ ಪುರುಷರ ಸಂಖ್ಯೆಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಮಹಿಳಾ ಸಂಖ್ಯೆ ಹೆಚ್ಚಾಗಿರುವುದು ಜನಗಣತಿಯಲ್ಲಿ ಕಂಡು ಬಂದಿದೆ.


●. ಈಗ ದೇಶದ ಒಟ್ಟು ಜನಸಂಖ್ಯೆ 121 ಕೋಟಿ 05,69,573

✧. ಅತೀ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳ ಪೈಕಿ ಉತ್ತರಪ್ರದೇಶ ಅಗ್ರಸ್ಥಾನದಲ್ಲಿದೆ. ಇಲ್ಲಿನ ಜನಸಂಖ್ಯೆ 19 ಕೋಟಿ 98,12,341.

✧. ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶ ಎಂದರೆ ಲಕ್ಷದ್ವೀಪ. ಇಲ್ಲಿನ ಜನಸಂಖ್ಯೆ ಕೇವಲ 64,473.


(ಕೃಪೆ: ಒನ್ ಇಂಡಿಯಾ) 

No comments:

Post a Comment