"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 22 June 2020

•► ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) (National Green Tribunal)

•► ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)
(National Green Tribunal)

━━━━━━━━━━━━━━━━━━━━━
★ ಪ್ರ್ರಾಕೃತಿಕ ಮತ್ತು ಪರಿಸರ ವ್ಯವಸ್ಥೆ
(Environment and Ecology)

★ ಭಾರತದ ಭೌಗೋಳಿಕ ವ್ಯವಸ್ಥೆ
(Indian Physical Geography)


— ಪರಿಸರವನ್ನು ರಕ್ಷಣೆಗೆ ಸಂಬಂಧಪಟ್ಟ, ಅರಣ್ಯ ಮತ್ತು ಪ್ರ್ರಾಕೃತಿಕ ಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಪಟ್ಟ, ಪರಿಸರದ ಬಗೆಗಿನ ಕಾನೂನಾತ್ಮಕ ಹಕ್ಕುಗಳ ಜಾರಿಗೆ ಸಂಬಂಧಪಟ್ಟ ಮತ್ತು ಪರಿಸರ ಹಾನಿಯಿಂದಾಗಿ ಅಲ್ಲಿ ವಾಸಿಸುವವರಿಗೆ, ಆಸ್ಥಿಪಾಸ್ತಿಗಳ ನಷ್ಟಕ್ಕೆ ಗುರಿಯಾದವರಿಗೆ ಪುನರ್‌ವಸತಿ ಮತ್ತು ಪರಿಹಾರವನ್ನು ಕೊಡುವುದಕ್ಕೆ ಸಂಬಂಧಪಟ್ಟ ಎಲ್ಲಾ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸುವ ಉದ್ದೇಶದಿದ ಈ ನ್ಯಾಯಮಂಡಳಿಯನ್ನು ರಚಿಸಲಾಗಿದೆ.

2010ರ ರಾಷ್ಟೀಯ ಹಸಿರು ನ್ಯಾಯಮಂಡಳಿ ಅಧಿನಿಯಮದ (National Green Tribunal Act[1]) ಅಡಿಯಲ್ಲಿ 18ನೇ ಅಕ್ಟೋಬರ್ 2010ರಂದು ರಾಷ್ಟೀಯ ಹಸಿರು ನ್ಯಾಯಮಂಡಳಿಯನ್ನು(NGT) ಆಗಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರದಿಂದ ಆರಂಭ. ಅದೇ ದಿನ ಜಸ್ಟಿಸ್ ಲೋಕೇಶ್ವರ ಸಿಂಗ್ ಪಂತಾ ನ್ಯಾಯಮಂಡಳಿಯ ಮೊದಲ ಅಧ್ಯಕ್ಷರಾಗಿ ಅಧಿಕಾರ.

ಎನ್‌ಜಿಟಿಯ ಪ್ರಧಾನ ಪೀಠ ನವದೆಹಲಿಯಲ್ಲಿದೆ , ಪುಣೆ, ಭೋಪಾಲ್, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಪ್ರಾದೇಶಿಕ ನ್ಯಾಯಪೀಠಗಳಿವೆ.

— ಎನ್‌ಜಿಟಿಯ ಅಧ್ಯಕ್ಷ & ಸದಸ್ಯರು :
• ಸುಪ್ರೀಂ ಕೋರ್ಟನ ನಿವೃತ್ತ ನ್ಯಾಯಾಧೀಶರು ರಾಷ್ಟೀಯ ಹಸಿರು ನ್ಯಾಯಮಂಡಳಿಯ ಅಧ್ಯಕ್ಷರಾಗಿರುತ್ತಾರೆ,

- ಸದಸ್ಯರು :
ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ನ್ಯಾಯಮಂಡಳಿಯ ಸದಸ್ಯರಾಗಿರುತ್ತಾರೆ. ಪ್ರತಿ ಪ್ರಾದೇಶಿಕ ಪೀಠವು ಓರ್ವ ನ್ಯಾಯಿಕ ಸದಸ್ಯ ಹಾಗೂ ಪರಿಸರ ವಿಷಯ ತಜ್ಞ ಸದಸ್ಯರನ್ನೊಳಗೊಂಡಿರುತ್ತದೆ.

ಪ್ರಸ್ತುತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯ ಅಧ್ಯಕ್ಷ — ನ್ಯಾಯಮೂರ್ತಿ ಆದರ್ಶ್‌ ಕುಮಾರ್‌ ಗೋಯೆಲ್

Friday 19 June 2020

•► ನಿಯರ್ ಅರ್ಥ್ ಆಬ್ಜೆಕ್ಟ್ (NEO) ಎಂದರೇನು? ಇವುಗಳನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ? (What do you mean by Near Earth Object and How these can be detected?)

•► ನಿಯರ್ ಅರ್ಥ್ ಆಬ್ಜೆಕ್ಟ್ (NEO) ಎಂದರೇನು? ಇವುಗಳನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ?
(What do you mean by Near Earth Object and How these can be detected?)
━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)


ಭೂಮಿಗೆ ಅತ್ಯಂತ ಸಮೀಪ ಬರುವ ಕ್ಷುದ್ರಗ್ರಹ ಅಥವಾ ಇನ್ಯಾವುದೇ ಗ್ರಹಕಾಯಗಳನ್ನು ನಿಯರ್ ಅರ್ಥ್ ಆಬ್ಜೆಕ್ಟ್ ಎಂದು ಕರೆಯಲಾಗುತ್ತದೆ. ಭೂಮಿಯಿಂದ 30 ಮಿಲಿಯನ್ ಮೈಲು ದೂರದಿಂದ ಹಾದು ಹೋಗುವ ಯಾವುದೇ ಗ್ರಹಕಾಯಗಳನ್ನು ನಿಯರ್ ಅರ್ಥ್ ಆಬ್ಜೆಕ್ಟ್ ಪಟ್ಟಿಗೆ ಸೇರಿಸಲಾಗುತ್ತದೆ.

ಆದರೆ ನಾಸಾ ಭೂಮಿಯಿಂದ ಕೇವಲ 5 ಮಿಲಿಯನ್ ಮೈಲು ದೂರದಲ್ಲಿರುವ ಗ್ರಹಕಾಯಗಳ ಕುರಿತು ವಿಸ್ತೃತವಾಗಿ ಅಧ್ಯಯನ ಮಾಡುತ್ತದೆ. ನಾಸಾದ ಕ್ಷುದ್ರಗ್ರಹ ಅಧ್ಯಯನ ಆಬ್ಸರ್‌ವೇಟರಿಗಳ ಕಣ್ಣಿಗೆ ಬೀಳುವ 5 ಮಿಲಿಯನ್ ಮೈಲು ದೂರದ ಗ್ರಹಕಾಯಗಳ ಚಲನವಲನದ ಮೇಲೆ ಖಗೋಳ ವಿಜ್ಞಾನಿಗಳು ಕಣ್ಣಿಟ್ಟಿರುತ್ತಾರೆ.

ಪತ್ತೆ ಹೇಗೆ?:

ನಾಸಾದ ಗ್ರಹ ರಕ್ಷಣಾ ಸಹಕಾರ ಕಚೇರಿ ಭೂಮಿಗೆ ಅತ್ಯಂತ ಸಮೀಪದಿಂದ ಹಾದು ಹೋಗುವ ಕ್ಷುದ್ರಗ್ರಹಗಳ ಕುರಿತು ಅಧ್ಯಯನ ನಡೆಸುತ್ತದೆ. ಯಾವುದೇ ಗ್ರಹಕಾಯಗಳು ಭೂಮಿಯ ಅತ್ಯಂತ ಸಮೀಪಕ್ಕೆ ಬಂದರೆ ಈ ಕುರಿತು ಎಚ್ಚರಿಕೆ ನೀಡುವ ಜವಾಬ್ದಾರಿ ಇದರ ಹೆಗಲ ಮೇಲಿದೆ.

ಅದರಂತೆ ಭೂಮಿಯ ಮೇಲೆ ಇರುವ ಗ್ರೌಂಡ್ ಟೆಲಿಸ್ಕೋಪ್‌ಗಳು ಆಕಾಶದ ಸಮೀಕ್ಷೆಯನ್ನು ನಡೆಸುತ್ತವೆ. ಸ್ತಬ್ಧ ಆಗಸದಲ್ಲಿ ಯಾವುದೇ ವಸ್ತುವಿನ ಚಲನೆ ಕಂಡುಬಂದರೆ ಕೂಡಲೇ ಅದರ ಚಲನೆಯನ್ನೂ ಈ ಟೆಲಿಸ್ಕೋಪ್‌ಗಳು ದಾಖಲಿಸುತ್ತವೆ. ಅಲ್ಲದೇ ಈ ಹಿಂದೆ ಪತ್ತೆಯಾದ ಯಾವುದೇ ಗ್ರಹಕಾಯದ ಅಂಕಿ ಸಂಖ್ಯೆಗಳನ್ನು ಪರಿಶೀಲನೆ ನಡೆಸಿ ಅದಕ್ಕೂ ಹೊಸದಾಗಿ ಪತ್ತೆಯಾದ ಗ್ರಹಕಾಯಕ್ಕೂ ಹೋಲಿಕೆ ಇದೆಯೇ ಎಂಬುದನ್ನು ಪತ್ತೆ ಮಾಡಲಾಗುತ್ತದೆ.

ಒಂದು ವೇಳೆ ಈ ಹಿಂದೆ ಪತ್ತೆಯಾದ ಗ್ರಹಕಾಯಗಳ ಮಾಹಿತಿಗೆ ಹೊಸದಾಗಿ ಪತ್ತೆಯಾದ ವಸ್ತು ಹೋಲಿಕೆಯಾಗದಿದ್ದರೆ ಅದನ್ನು ಹೊಸ ಬ್ರಹ್ಮಾಂಡೀಯ ವಸ್ತು ಎಂದು ಪರಿಗಣಿಸಿ ಅದರ ಅಧ್ಯಯನ ನಡೆಸಲಾಗುತ್ತದೆ.
ಹೀಗೆ ಮಾಡುವುದರಿಂದ ಭೂಮಿಯ ಸಮೀಪಕ್ಕೆ ಬರುವ ಯಾವುದೇ ಗ್ರಹಕಾಯದ ವಿವರವಾದ ಮಾಹಿತಿ ಹಾಗೂ ಭವಿಷ್ಯದಲ್ಲಿ ಅವು ಮತ್ತೆ ಭೂಮಿಯತ್ತ ಬರುವ ಸಾಧ್ಯತೆಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ.

ಒಟ್ಟಿನಲ್ಲಿ ಭೂಮಿಗೆ ಸದಾ ಗಂಡಾಂತರಕಾರಿ ಎಂದೇ ಪರಿಗಣಿಸಲಾಗಿರುವ ಕ್ಷುದ್ರಗ್ರಹಗಳ ಚಲನವಲನಗಳ ಮೇಲೆ ನಾಸಾ ಸದಾ ಕಣ್ಣಿಟ್ಟಿದ್ದು, ಭವಿಷ್ಯದಲ್ಲಿ ಸಂಭವಿಸಬಹುದಾದ ಭಾರೀ ಅನಾಹುತವನ್ನು ತಪ್ಪಿಸಿ ವಸುಧೆಯನ್ನು ರಕ್ಷಿಸುವ ಗುರುತರ ಜವಾಬ್ದಾರಿ ಹೊತ್ತಿರುವುದು ನಿಜಕ್ಕು ಶ್ಲಾಘನೀಯ. (Courtesy : ವಿಜಯ ಕರ್ನಾಟಕ)

Wednesday 17 June 2020

•► ಈ ದಿನದ (17 June 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : ( Important facts from the current events of this day (17 June 2020))

•► ಈ ದಿನದ (17 June 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
 ( Important facts from the current events of this day (17 June 2020)) ━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳು
(Current affairs)

★ ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಸಂಗತಿಗಳು
(Selected fact from current events)



• ರಾಜ್ಯದ ಜಿಡಿಪಿಗೆ ಪ್ರವಾಸೋದ್ಯಮದ ಕೊಡುಗೆ — ಶೇ 14 ರಷ್ಟು"

• ಪ್ರಸ್ತುತ ದೇಶದ ಸಾಲಿಸಿಟರ್‌ ಜನರಲ್‌ —  ತುಷಾರ್‌ ಮೆಹ್ತಾ

• ಗಲ್ವಾನ್‌ ಕಣಿವೆ ಇರುವುದು — ಪೂರ್ವ ಲಡಾಖ್‌ನಲ್ಲಿ

• ಗಾಲ್ವನ್‌ ನದಿಯು ಅಕ್ಷಾಯ್‌ ಚಿನ್‌ನಿಂದ ಲಡಾಖ್‌ಗೆ ಹರಿಯುತ್ತದೆ.
— ನದಿಯ ಪಶ್ಚಿಮ ಭಾಗವು ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ. ಆದರೆ, ಇಡೀ ಅಕ್ಷಾಯ್‌ ಚಿನ್‌ ತನ್ನದು ಎಂಬುದು ಭಾರತದ ಪ್ರತಿಪಾದನೆ.

• ಪಾಂಗಾಂಗ್ ತ್ಸೊ ಜಗತ್ತಿನಲ್ಲಿ ಅತಿ ಎತ್ತರದಲ್ಲಿರುವ ಉಪ್ಪು ನೀರಿನ ಸರೋವರ. — ಸಮುದ್ರ ಮಟ್ಟದಿಂದ ಇದು 4,350 ಮೀಟರ್‌ ಎತ್ತರದಲ್ಲಿದೆ.
— ಇದರ ವಿಸ್ತಾರ ಸುಮಾರು 600 ಚದರ ಕಿ.ಮೀ. ಪೂರ್ವ ಲಡಾಖ್‌ ಮತ್ತು ಟಿಬೆಟ್‌ಗೆ ಇದು ವ್ಯಾಪಿಸಿದೆ.

• ಪಾಂಗಾಂಗ್‌ ಸರೋವರದ ಬಿಕ್ಕಟ್ಟು :
ಭಾರತ ಮತ್ತು ಚೀನಾ ನಡುವೆ ಪರಸ್ಪರ ಒಪ್ಪಿತವಾದ ಗಡಿ ರೇಖೆ ಇಲ್ಲ. ಪಶ್ಚಿಮ ಭಾಗದಲ್ಲಿ ವಾಸ್ತವ ನಿಯಂತ್ರಣ ರೇಖೆಯನ್ನೇ (ಎಲ್‌ಎಸಿ) ಗಡಿ ರೇಖೆ ಎಂದು ಪರಿಗಣಿಸಲಾಗುತ್ತಿದೆ. ಆದರೆ, ಎಲ್‌ಎಸಿಯ ಬಗ್ಗೆಯೂ ಭಿನ್ನಾಭಿಪ್ರಾಯ ಇದೆ. ಎಲ್‌ಎಸಿ ಪ್ಯಾಂಗಾಂಗ್‌ ಸರೋವರದ ಮಧ್ಯೆ ಹಾದು ಹೋಗುತ್ತದೆ.

• ಬೆವರಿಯನ್ ಮೋಟರ್ ವರ್ಕ್ಸ್‌  (ಬಿಎಂಡಬ್ಲ್ಯು) ವಿಲಾಸಿ ಕಾರು ತಯಾರಿಕಾ ಕಂಪನಿ ಇರುವುದು — ಜರ್ಮನಿಯಲ್ಲಿ

• ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮುಖ್ಯಸ್ಥ — ಟೆಡ್ರಸ್ ಅಧಾನೊಮ್ ಗೆಬ್ರೆಯೆಸಸ್

• 2019–20ನೇ ಹಣಕಾಸು ವರ್ಷದಲ್ಲಿ ಭಾರತವು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಆಕರ್ಷಿಸುವಲ್ಲಿ ವಿಶ್ವದ 9ನೇ ಅತಿದೊಡ್ಡ ದೇಶವಾಗಿದೆ.

— ಅಭಿವೃದ್ಧಿ ಹೊಂದುತ್ತಿರುವ ಏಷ್ಯಾ ವಲಯದಲ್ಲಿ ‘ಎಫ್‌ಡಿಐ’ ಆಕರ್ಷಿಸುವಲ್ಲಿ ಭಾರತ 5ನೇ ಸ್ಥಾನದಲ್ಲಿ ಇದೆ ಎಂದು ವ್ಯಾಪಾರ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಮ್ಮೇಳನವು ಸಿದ್ಧಪಡಿಸಿದ ಜಾಗತಿಕ ಬಂಡವಾಳ ಹೂಡಿಕೆ ವರದಿಯಲ್ಲಿ ತಿಳಿಸಲಾಗಿದೆ.

• ಪ್ರತಿ ವರ್ಷ ಎರಡು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ ನಡೆಯುತ್ತದೆ.

10 ಸದಸ್ಯ ಸ್ಥಾನಗಳನ್ನು ವಿಭಾಗವಾರು ಹಂಚಿಕೆ ಮಾಡಲಾಗಿ, ಮೂರನೇ ಎರಡರಷ್ಟು ಬಹುಮತ ಪಡೆಯುವ ದೇಶಗಳು ಚುನಾವಣೆಯಲ್ಲಿ ಆಯ್ಕೆಮಾಡಲಾಗುತ್ತದೆ.

• ಪ್ರಸ್ತುತ ವಿಶ್ವದ ಅತಿದೊಡ್ಡ ತೈಲ ರಫ್ತುದಾರ —  ಸೌದಿ ಅರೆಬಿಯಾ

• ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ನೇಪಾಳದ ಅತಿದೊಡ್ಡ ದೇವಸ್ಥಾನಗಳಲ್ಲಿ ಒಂದು ಎನಿಸಿರುವ ಪಶುಪತಿನಾಥ ಮಂದಿರವು ಭಾಗಮತಿ ನದಿಯ ಎರಡೂ ದಡಗಳನ್ನು ವ್ಯಾಪಿಸಿದೆ. ನೇಪಾಳ ಹಾಗೂ ಭಾರತದ ಸಾವಿರಾರು ಜನರು ಇಲ್ಲಿಗೆ ನಿತ್ಯ ಭೇಟಿ ನೀಡುತ್ತಾರೆ.

• ವಾರ್ಷಿಕ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತವು 43ನೇ ಶ್ರೇಯಾಂಕವನ್ನು ಉಳಿಸಿಕೊಂಡಿದೆ.

• ವಾರ್ಷಿಕ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತವು 43ನೇ ಶ್ರೇಯಾಂಕವನ್ನು ಉಳಿಸಿಕೊಂಡಿದೆ.
- ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಡೆವಲಪ್‌ಮೆಂಟ್‌ (ಐಎಂಡಿ) ಸಿದ್ಧಪಡಿಸಿರುವ ವರದಿಯಲ್ಲಿ ಈ ಮಾಹಿತಿ ಇದೆ.
- ಕಳಪೆ ಮೂಲ ಸೌಕರ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆ ಮಾಡದಿರುವ ಕಾರಣಕ್ಕೆ ಭಾರತದ ಶ್ರೇಯಾಂಕ ಕೆಳಮಟ್ಟದಲ್ಲಿ ಇದೆ ಎಂದು ಇಂಟರ್‌ನ್ಯಾಷನಲ್‌ ಬಿಸಿನೆಸ್‌ ಸ್ಕೂಲ್‌ ತಿಳಿಸಿದೆ.
- 63 ದೇಶಗಳ ಪಟ್ಟಿಯಲ್ಲಿ ಸಿಂಗಪುರ ಮೊದಲ ಸ್ಥಾನದಲ್ಲಿ ಇದೆ. ಅಮೆರಿಕವು 3ನೇ ಸ್ಥಾನದಿಂದ 10ನೇ ಸ್ಥಾನಕ್ಕೆ ಮತ್ತು ಚೀನಾ 14 ರಿಂದ 20ನೇ ಸ್ಥಾನಕ್ಕೆ ಕುಸಿದಿದೆ.
- ಭಾರತದ ಸ್ಥಾನಮಾನ ಬದಲಾಗಿರದಿದ್ದರೂ, ದೀರ್ಘಾವಧಿ ಉದ್ಯೋಗಾವಕಾಶ ಪ್ರಗತಿ, ಚಾಲ್ತಿ ಖಾತೆ ಸಮತೋಲನ, ಅತ್ಯಾಧುನಿಕ ತಂತ್ರ‌ಜ್ಞಾನ ರಫ್ತು, ವಿದೇಶಿ ವಿನಿಮಯ ಸಂಗ್ರಹ, ರಾಜಕೀಯ ಸ್ಥಿರತೆ ಮತ್ತು ಒಟ್ಟಾರೆ ಉತ್ಪಾದನೆಯಲ್ಲಿ ಸುಧಾರಣೆ ಕಂಡಿದೆ ಎಂದು ’ಐಎಂಡಿ’ ತಿಳಿಸಿದೆ.

• HPCL, BPCL, IOCಗಳು ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು.

• ಎಟಿಎಫ್ (ATF) ಎಂದರೆ —  (Aviation Turbine Fuel) ವಿಮಾನಗಳಿಗೆ ಬಳಸುವ ವಾಯು ಇಂಧನ.

• ತೈಲ ಬೆಲೆ ಏರಿಕೆಯ ಪರಿಣಾಮ :
- ಗಮನಕ್ಕೆ ಬಾರದ ಹೊರೆ :
ಪ್ರತಿ ದಿನದ ಬೆಲೆ ಏರಿಕೆಯಿಂದಾಗಿ ಬಳಕೆದಾರರು ಇಂಧನಕ್ಕೆ ಮಾಡುವ ತಿಂಗಳ ವೆಚ್ಚವು ತಕ್ಷಣಕ್ಕೆ ಗಮನಕ್ಕೆ ಬರುವುದಿಲ್ಲ. ದಿನಗಳೆದಂತೆ ಪೆಟ್ರೋಲ್‌, ಡೀಸೆಲ್‌ ಖರೀದಿಗೆ ಮಾಡುವ ವೆಚ್ಚವು ಕಿಸೆಗೆ ಭಾರವಾಗುತ್ತದೆ. - ಅಗತ್ಯ ವಸ್ತುಗಳ ಬೆಲೆ ಹೆಚ್ಚಳಗೊಳ್ಳುತ್ತದೆ. ಕುಟುಂಬದ ತಿಂಗಳ ಬಜೆಟ್‌ ಏರುಪೇರಾಗಲಿದೆ.
- ಬೇಡಿಕೆಗೆ ಹೊಡೆತ:
ಇಂಧನಕ್ಕೆ ಮಾಡುವ ವೆಚ್ಚ ಹೆಚ್ಚುತ್ತಿದ್ದಂತೆ ಗ್ರಾಹಕರ ಉಳಿತಾಯ ಕಡಿಮೆಯಾಗಲಿದೆ ಇಲ್ಲವೇ ಇತರ ವೆಚ್ಚಗಳಿಗೆ ಕಡಿವಾಣ ಬೀಳಲಿದೆ. ಇದರಿಂದ ಸರಕು ಮತ್ತು ಸೇವೆಗಳ ಬೇಡಿಕೆ ಕುಸಿಯಲಿದೆ.
- ಕೋವಿಡ್‌ ಪಿಡುಗಿನ ಪ್ರಭಾವದಿಂದಾಗಿ ಸದ್ಯಕ್ಕೆ ಬೇಡಿಕೆ ಗಮನಾರ್ಹವಾಗಿ ಕುಸಿದಿದೆ. ಇಂಧನಗಳ ಬೆಲೆ ಏರಿಕೆಯು ಇತರ ಸರಕುಗಳ ಬೇಡಿಕೆಯನ್ನು ಇನ್ನಷ್ಟು ಕುಂದಿಸಲಿದೆ.
ಹಣದುಬ್ಬರಕ್ಕೆ ಹಾದಿ:
ದುಬಾರಿ ಡೀಸೆಲ್‌ನಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಲಿದೆ. ಇದರಿಂದ ತರಕಾರಿ, ಹಣ್ಣು ಮತ್ತು ದಿನಸಿ ಪದಾರ್ಥ ಮತ್ತಿತರ ಸರಕುಗಳ ಬೆಲೆಯೂ ಏರಿಕೆಯಾಗಲಿದೆ. ಇದು ಹಣದುಬ್ಬರಕ್ಕೆ ಹಾದಿ ಮಾಡಿಕೊಡಲಿದೆ.

• ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಇಕ್ರಾ) ಇರುವುದು - ನವ ದೆಹಲಿಯಲ್ಲಿ

• ಸಗಟು ಹಣದುಬ್ಬರ :
-ಸಗಟು ಮಾರುಕಟ್ಟೆಯಲ್ಲಿನ ಬೆಲೆಗಳು ಮೇನಲ್ಲಿ ನಾಲ್ಕೂವರೆ ವರ್ಷಗಳ ಹಿಂದಿನ ಮಟ್ಟವಾದ ಶೇ 3.21ಕ್ಕೆ ಕುಸಿದಿವೆ.
- ತಿಂಗಳ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ವಾರ್ಷಿಕ ಸಗಟು ಹಣದುಬ್ಬರವು, 2019ರ ಇದೇ ಅವಧಿಯಲ್ಲಿನ ಶೇ 2.79ಕ್ಕೆ ಹೋಲಿಸಿದರೆ (–) ಶೇ 3.21ಕ್ಕೆ ಕುಸಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ತಿಳಿಸಿದೆ. 2015ರ ನವೆಂಬರ್‌ನಲ್ಲಿ ಬೆಲೆ ಕುಸಿತವು ಶೇ 3.7ರಷ್ಟಿತ್ತು.

Tuesday 16 June 2020

•► ಉಷ್ಣ ಮಾರುತ (ಬಿಸಿಗಾಳಿ) (heat wave, tropical cyclone)

 •► ಉಷ್ಣ ಮಾರುತ (ಬಿಸಿಗಾಳಿ)
(heat wave, tropical cyclone )

━━━━━━━━━━━━━━
★ ಪ್ರಾಕೃತಿಕ ಭೂಗೋಳಶಾಸ್ತ್ರ
(Physical Geography)


ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಾದಾಗ ಮತ್ತು ಸಾಮಾನ್ಯ ಉಷ್ಣಾಂಶ ಸಾಮಾನ್ಯಕ್ಕಿಂತಲೂ 5 ರಿಂದ 6.4 ಡಿಗ್ರಿ ಸೆಲ್ಶಿಯಸ್‌ವೆಗೂ ಏರಿಕೆಯಾದಾಗ ಅದನ್ನು ಉಷ್ಣ ಮಾರುತ ಎಂದು ಪರಿಗಣಿಸಲಾಗುತ್ತದೆ.

ಇದು ಅಸಹಜವಾಗಿ ಹೆಚ್ಚಿನ ತಾಪಮಾನದ ಅವಧಿಯಾಗಿದೆ, ಇದು ಭಾರತದ ವಾಯುವ್ಯ ಮತ್ತು ದಕ್ಷಿಣ ಮಧ್ಯ ಭಾಗಗಳಲ್ಲಿ ಬೇಸಿಗೆಯಲ್ಲಿ ಸಂಭವಿಸುವ ಸಾಮಾನ್ಯ ಗರಿಷ್ಠ ತಾಪಮಾನಕ್ಕಿಂತ ಹೆಚ್ಚಾಗಿರುವುದು.


ಈ ಉಷ್ಣಗಾಳಿಯು (ಶಾಖದ ಅಲೆಗಳು) ಸಾಮಾನ್ಯವಾಗಿ ಭಾರತದಲ್ಲಿ ಮಾರ್ಚ್‌ನಿಂದ ಜೂನ್ ಅವಧಿಯಲ್ಲಿ ಗೋಚರಿಸುತ್ತದೆ.ಮತ್ತು ಕೆಲವು ಅಪರೂಪದ ಸಂದರ್ಭಗಳಲ್ಲಿ ಜುಲೈ ವರೆಗೆ ವಿಸ್ತರಿಸುತ್ತವೆ. ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲಿನದ್ದಾಗ ಬಿಸಿ ಗಾಳಿ ಬೀಸುತ್ತದೆ. ಆ ಸಂದರ್ಭದಲ್ಲಿ ಸಾಮಾನ್ಯ ಉಷ್ಣಾಂಶ 4-5 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾಗಲಿದೆ.

ಉದಾಹರಣೆಗೆ, ಆ ಪ್ರದೇಶದಲ್ಲಿ ಸಾಮಾನ್ಯ ಉಷ್ಣಾಂಶ 40 ಡಿಗ್ರಿ ಇದ್ದರೆ ಆ ದಿನಗಳಲ್ಲಿ 45 ಡಿಗ್ರಿಗೆ ಏರಿಕೆಯಾಗುತ್ತದೆ. ಉಷ್ಣಾಂಶ 45 ಡಿಗ್ರಿಗಿಂತ ಮೇಲಿದ್ದರೆ ಉಷ್ಣಗಾಳಿ ಬೀಸುತ್ತಿದೆ ಎಂದೇ ಅರ್ಥ.


ಉಷ್ಣ ಮಾರುತ ಅಪಾಯದ ಸನ್ನಿವೇಶ

- ಸಮತಟ್ಟಾದ ಪ್ರದೇಶಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಉಷ್ಣ ಮಾರುತ ಅಪಾಯ ಎದುರಾಗುತ್ತದೆ.

- ಕರಾವಳಿ ಪ್ರದೇಶದಲ್ಲಿ 37 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಉಷ್ಣಮಾರುತದ ಅಪಾಯ.

- ಗಿರಿಧಾಮಗಳಲ್ಲಿ 30 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಉಷ್ಣ ಮಾರುತದ ಅಪಾಯ.

- ಸತತ ಎರಡು ದಿನ 45 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಬಿಸಿ ಗಾಳಿಯ ವಾತಾವರಣ ಎಂತಲೂ, ಸತತ ಎರಡು ದಿನ 47 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಅತಿ ಬಿಸಿ ಗಾಳಿಯ ವಾತಾವರಣ ಎಂತಲೂ ಪರಿಗಣಿಸಲಾಗುತ್ತದೆ

•► ‘ಜಲ ಜೀವನ ಮಿಷನ್‌’ ಯೋಜನೆ : (Jal Jeevan Mission)

 •► ‘ಜಲ ಜೀವನ ಮಿಷನ್‌’ ಯೋಜನೆ :(Jal Jeevan Mission)
━━━━━━━━━━━━━━━━━━━━━
★ ಕೇಂದ್ರ ಸರ್ಕಾರದ ಯೋಜನೆಗಳು
(Central Government Programs)


ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯು ಪ್ರಸಕ್ತ ಸಾಲಿನಿಂದ ಜಲ್ ಜೀವನ್ ಮಿಷನ್ (ಎಎಒ) ಆಗಿ ಪರಿವರ್ತನೆ.

ದೇಶದ ಪ್ರತಿ ಮನೆ ಮನೆಗೂ ನಲ್ಲಿಯ ಮೂಲಕ ನೀರು ಪೂರೈಕೆ.

ಇದಕ್ಕಾಗಿ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ 45%, ರಾಜ್ಯ ಸರ್ಕಾರದಿಂದ 45% ಅನುದಾನ ನೀಡಲಾಗುತ್ತಿದ್ದು, ಉಳಿದ 10% ಸಮುದಾಯ ವಂತಿಕೆ ರೂಪದಲ್ಲಿ ಗ್ರಾಮಸ್ಥರು ನೀಡಬೇಕಾಗುತ್ತದೆ.

ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜು ಯೋಜನೆಯನ್ನು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಯಿಂದ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ತಾಂತ್ರಿಕ ಸಿಬ್ಬಂದಿಯವರ ಸಹಾಯದಿಂದ ರೂಪಿಸಲಾಗುತ್ತದೆ.

ಯೋಜನೆಯ ಕ್ರಿಯಾ ಯೋಜನೆಗೆ ಜಿಲ್ಲಾ ಮಟ್ಟದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಜಿಲ್ಲಾ ನೀರು ಮತ್ತು ಮಿಷನ್ ಸಮಿತಿಯಲ್ಲಿ ಅನುಮೋದಿಸಿ, ರಾಜ್ಯ ಮಟ್ಟದ ಅನುಮೋದನೆಗಾಗಿ ಕಳುಹಿಸಲಾಗುತ್ತದೆ.
ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿಯಿಂದ ಅನುಮೋದಿಸಲ್ಪಟ್ಟ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ, ಯೋಜನೆಯ ಮುಖ್ಯ ಉದ್ದೇಶವಾದ ಮನೆ ಮನೆಗೆ ನಳ ನೀರು ಸಂಪರ್ಕ ಒದಗಿಸಲಾಗುವುದು.

ಸರ್ಕಾರವು ಜಲ ಜೀವನ್ ಮಿಷನ್ ಅಡಿಯಲ್ಲಿ ಸನ್ 2020-21 ರಿಂದ 2023-24 ರವರೆಗೆ ಗ್ರಾಮೀಣ ಭಾಗದ ಎಲ್ಲ ಮನೆಗಳಿಗೆ ೧೦೦% ನಳ ನೀರು ಸಂಪರ್ಕ ಒದಗಿಸುವ ಗುರಿಯನ್ನು ಹೊಂದಿದೆ.

ಪ್ರತಿ ಕುಟುಂಬಕ್ಕೆ ನಿತ್ಯ 55 ಲೀಟರ್‌ ಶುದ್ಧ ನೀರು ಒದಗಿಸುವ ಈ ಯೋಜನೆಯ ಪ್ರಯೋಜನವನ್ನು ರಾಜ್ಯದ 89.61 ಲಕ್ಷ ಕುಟುಂಬಗಳು ಪಡೆಯಲಿವೆ. ಪೈಕಿ ಈ ಯೋಜನೆ ಅಡಿ 24.41 ಲಕ್ಷ ಕುಟುಂಬಗಳಿಗೆ ಈಗಾಗಲೇ ನೀರು ಪೂರೈಕೆ ಸಂಪರ್ಕ ಕಲ್ಪಿಸಲಾಗಿದೆ.

ಸ್ಥಳೀಯವಾಗಿ ಲಭ್ಯವಿರುವ ನೀರಿನ ಮೂಲಗಳನ್ನು ವೃದ್ಧಿಸುವುದು, ಈಗಿರುವ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸು
ವುದು ಮತ್ತು ಜಲ ಮರುಪೂರಣಗೊಳಿಸುವುದು ಈ ಯೋಜನೆಯ ಪ್ರಮುಖ ಅಂಶಗಳು.

ಹತ್ತು ಲಕ್ಷ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಈ ವರ್ಷದಿಂದಲೇ ಈ ಯೋಜನೆ ಜಾರಿ.

Sunday 14 June 2020

•► 'ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ'ದ ಕೆಲವು ಪ್ರಮುಖ ವೈಶಿಷ್ಟ್ಯಗಳು: (ಸಾಮಾನ್ಯ ಅಧ್ಯಯನ ಪತ್ರಿಕೆ — 1) (Some of Main features of Indo-Islamic Architecture)

•► 'ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪ'ದ ಕೆಲವು ಪ್ರಮುಖ  ವೈಶಿಷ್ಟ್ಯಗಳು: (ಸಾಮಾನ್ಯ ಅಧ್ಯಯನ ಪತ್ರಿಕೆ — 1)
(Some of Main features of Indo-Islamic Architecture)

━━━━━━━━━━━━━━━━━━━━━
★ ಮಧ್ಯಯುಗಿನ ಭಾರತದ ಇತಿಹಾಸ
(Medieval Indian History)

★ ಸಾಮಾನ್ಯ ಅಧ್ಯಯನ ಪತ್ರಿಕೆ — 1
(General Studies Paper — 1)

★ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ
(Indian Heritage & Culture)


— ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವು ಭಾರತೀಯ ಮತ್ತು ಪರ್ಷಿಯನ್ ಶೈಲಿಗಳ ಸಂಗಮವನ್ನು ಹೊಂದಿತ್ತು.

• ಕಮಾನು ಮತ್ತು ಗುಮ್ಮಟಗಳ ಬಳಕೆಯು ಈ ಅವಧಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.

• ಇಸ್ಲಾಮಿಕ್ ರಾಜರು ಮಸೀದಿಗಳು ಮತ್ತು ಸಮಾಧಿಗಳ ಸುತ್ತಲೂ ಮಿನಾರ್‌ (minars)ಗಳ ಬಳಕೆಯನ್ನು ಪರಿಚಯಿಸಿದರು.

• ಗಾರೆ (mortar)ಯನ್ನು ಅದರ ನಿರ್ಮಾಣದಲ್ಲಿ ಸಿಮೆಂಟಿಂಗ್ ಏಜೆಂಟ್ ಆಗಿ ಬಳಸಲ್ಪಟ್ಟಿತು.

• ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವು ಮಾನವ ಮತ್ತು ಪ್ರಾಣಿಗಳ ಕಲಾಕೃತಿಗಳ ಬಳಕೆಯನ್ನು ತಪ್ಪಿಸಿತು.

• ಹಿಂದೂ ವಾಸ್ತುಶಿಲ್ಪವು ತುಂಬಾ ಸಂಕೀರ್ಣಗೊಂಡಾಗ, ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವು ವಿಶಾಲತೆ, ಬೃಹತ್ತ್ವ ಮತ್ತು ವಿಸ್ತೃತ್ವವನ್ನು ಪರಿಚಯಿಸಿತು.

• ಹಿಂದಿನ ನಿರ್ಮಾಣಗಳು ಮೂರ್ತಿಶಿಲ್ಪಗಳನ್ನು ಅಲಂಕಾರದ ಸಾಧನವಾಗಿ ಬಳಸಿದರೆ, ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪವು ಕ್ಯಾಲಿಗ್ರಫಿ (calligraphy)ಯನ್ನು ಅಲಂಕಾರದ ಸಾಧನವಾಗಿ ಬಳಸಿಕೊಂಡಿತು.

• ಈ ಅವಧಿಯ ವಾಸ್ತುಶಿಲ್ಪದ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಕಾರಂಜಿ ಕೊಳಗಳು ಮತ್ತು ಸಣ್ಣ ನೀರಿನ ತೊಟ್ಟಿಗಳ ರೂಪದಲ್ಲಿ ನೀರನ್ನು ಕಟ್ಟಡದ ಆವರಣದಲ್ಲಿ ಬಳಸುವುದು.

• ಇಸ್ಲಾಮಿಕ್ ಆಡಳಿತಗಾರರು 'ಚಾರ್ ಬಾಗ್ ಶೈಲಿಯ ಉದ್ಯಾನ' (Charbagh style of gardening) ವನ್ನು ಪರಿಚಯಿಸಿದರು.

• ಈ ಕಾಲದ ವಾಸ್ತುಶಿಲ್ಪಗಳು ಅಮೂಲ್ಯವಾದ ಕಲ್ಲುಗಳು ಮತ್ತು ರತ್ನಗಳನ್ನು ಕಲ್ಲಿನ ಗೋಡೆಗಳಿಗೆ ಹಾಕಲು ಪಿಯೆಟ್ರಾ-ದುರಾ ತಂತ್ರ (pietra-dura technique) ವನ್ನು ಸಹ ಬಳಸಿದರು.

•► ರಾಜ್ಯದ ಕೃಷಿ ವಲಯದ ಸ್ಥೂಲ ಪರಿಚಯ (Overview of the state's agriculture sector)

•► ರಾಜ್ಯದ ಕೃಷಿ ವಲಯದ ಸ್ಥೂಲ ಪರಿಚಯ
(Overview of the state's agriculture sector)

━━━━━━━━━━━━━━━━━━━━━
★ ಕರ್ನಾಟಕದ ಆರ್ಥಿಕ ವ್ಯವಸ್ಥೆ
(The Karnataka Economic System)

★ ಕರ್ನಾಟಕದ ಕೃಷಿ ವಲಯ
(Karnataka Agriculture Sector


- ದೇಶದ ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಕರ್ನಾಟಕ ರಾಜ್ಯವು ಶೇ.5.83ರಷ್ಟು ಭೂಪ್ರದೇಶವನ್ನು ಹೊಂದಿದೆ.
ಈ ರಾಜ್ಯವು ಬಹು ಶತಮಾನಗಳಿಂದಲೂ ಕೃಷಿ ಪ್ರಧಾನ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಇಂದಿಗೂ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.23.6ರಷ್ಟು ಉಳಿಮೆಗಾರರು, ಶೇ 25.7 ರಷ್ಟು ಕೃಷಿ ಕಾರ್ಮಿಕರಿದ್ದು (2011) ಒಟ್ಟಾರೆ ಶೇ. 52.6 ರಷ್ಟು ಮಂದಿ ನೇರ ಕೃಷಿಯನ್ನೇ ಅವಲಂಬಿಸಿದ್ದಾರೆ.

- ಕೃಷಿ ಗ್ರಾಮೀಣ ಜನತೆಯ ಜೀವನಾಡಿ ಎಂದರೆ ತಪ್ಪಾಗದು. ಈ ವಲಯದೊಳಗೆ ಶೇ.56ರಷ್ಟು ಕೃಷಿ ಕಾರ್ಮಿಕರಿದ್ದಾರೆ. ರಾಜ್ಯದ ಒಟ್ಟು ಭೂಪ್ರದೇಶದಲ್ಲಿ ಶೇ.66ರಷ್ಟು ಅಂದರೆ 114 ಲಕ್ಷ ಹೆಕ್ಟೇರ್ ಉಳುಮೆ ಭೂಮಿಯಿದ್ದು, ಇದರಲ್ಲಿ ಶೇ.72ರಷ್ಟು ಮಳೆ ಆಶ್ರಿತವಾಗಿದೆ. ಇನ್ನುಳಿದದ್ದು ನೀರಾವರಿ ಆಧರಿತ.

ರಾಜ್ಯದ ಕೃಷಿ ಹವಾಮಾನವನ್ನು 10 ವಲಯಗಳನ್ನಾಗಿ ವಿಂಗಡಿಸಲಾಗಿದೆ. 
ಅವುಗಳೆಂದರೆ;
(1) ಈಶಾನ್ಯ ಮಲೆನಾಡು ವಲಯ-7 ತಾಲ್ಲೂಕುಗಳು.
(2) ಈಶಾನ್ಯ ಒಣವಲಯ-11 ತಾಲ್ಲೂಕುಗಳು
(3) ಉತ್ತರ ಒಣವಲಯ-35 ತಾಲ್ಲೂಕುಗಳು
(4) ಕೇಂದ್ರ ಒಣವಲಯ-17 ತಾಲ್ಲೂಕುಗಳು
(5) ಪೂರ್ವ ಒಣವಲಯ-24 ತಾಲ್ಲೂಕುಗಳು
(6) ದಕ್ಷಿಣ ಒಣವಲಯ-18 ತಾಲ್ಲೂಕುಗಳು
(7) ದಕ್ಷಿಣ ಅರೆಮಲೆನಾಡು ವಲಯ-14 ತಾಲ್ಲೂಕುಗಳು
(8) ಉತ್ತರ ಮಲೆನಾಡು ವಲಯ-14 ತಾಲ್ಲೂಕುಗಳು
(9) ಗುಡ್ಡಗಾಡು ವಲಯ-22 ತಾಲ್ಲೂಕುಗಳು ಹಾಗೂ
(10) ಕರಾವಳಿ ವಲಯ-13 ತಾಲ್ಲೂಕುಗಳು.

ಕರ್ನಾಟಕ ಹೊಂದಿರುವ  ತಾಲ್ಲೂಕುಗಳನ್ನು ಅವುಗಳ ಹವಾಮಾನವನ್ನು ಗಮನಿಸಿ ಹೀಗೆ ವಿಂಗಡಿಸಲಾಗಿದೆ. ಈ ಎಲ್ಲಾ ವಲಯಗಳಲ್ಲಿ ಸರ್ವೇಸಾಮಾನ್ಯವಾಗಿ ಕೆಂಪು ಮತ್ತು ಕಪ್ಪು ಮಣ್ಣಿನಿಂದ ಕೂಡಿದ ಭೂಪ್ರದೇಶ ಅತಿ ಹೆಚ್ಚಾಗಿದೆ.
(Courtesy : Yojana Magazine)

•► ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ -(NIIF) (National Investment and Infrastructure Fund‌)

•► ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ -(NIIF)
(National Investment and Infrastructure Fund‌)

━━━━━━━━━━━━━━━━━━━━━
★ ಭಾರತದ ಆರ್ಥಿಕ ವ್ಯವಸ್ಥೆ
(The Indian Economy)

★ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ
(National Investment and Infrastructure Fund‌)





— ಎನ್ಐಐಎಫ್ ವು ಭಾರತದ ಮೊದಲ ಸಾರ್ವಭೌಮ ಸಂಪತ್ತು ನಿಧಿ(sovereign wealth fund)ಯಾಗಿದ್ದು, ಕೇಂದ್ರ ಸರ್ಕಾರವು ಇದನ್ನು ಫೆಬ್ರವರಿ 2015 ರಲ್ಲಿ ಸ್ಥಾಪಿಸಿತು.

ದೇಶದ ಮೂಲ ಸೌಕರ್ಯ ಯೋಜನೆಗಳಿಗೆ ಹಣಕಾಸು ನೆರವು ಕಲ್ಪಿಸಲು, ಕೇಂದ್ರ ಸರ್ಕಾರವು ₹ 40 ಸಾವಿರ ಕೋಟಿಗಳ ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್‌ಐಐಎಫ್‌) ಸ್ಥಾಪಿಸಿದೆ.

ಈ ನಿಧಿಯಲ್ಲಿನ ಸರ್ಕಾರದ ಪಾಲು ಬಂಡವಾಳವು ಶೇ 49.ರಷ್ಟು.
ಕೇಂದ್ರ ಸಚಿವ ಸಂಪುಟವು 2019 ರ ಜುಲೈನಲ್ಲಿ ಈ ನಿಧಿ ಸ್ಥಾಪಿಸಲು ಅನುಮೋದನೆ ನೀಡಿತ್ತು. ಜೊತೆಗೆ  ಭಾರತೀಯ ಷೇರು ನಿಯಂತ್ರಣ ಮಂಡಳಿ ಕೂಡ, ‘ಎನ್‌ಐಐ ಎಫ್‌’ಗೆ ಅನುಮೋದನೆ ನೀಡಿದೆ.

ಪ್ರಸ್ತುತ ಇದು 4 ಬಿಲಿಯನ್ ಬಂಡವಾಳದೊಂದಿಗೆ ಮೂರು ನಿಧಿಗಳನ್ನು ನಿರ್ವಹಿಸುತ್ತಿದೆ: ಅವುಗಳೆಂದರೆ ಮಾಸ್ಟರ್ ಫಂಡ್, ಫಂಡ್ ಆಫ್ ಫಂಡ್ ಮತ್ತು ಸ್ಟ್ರಾಟೆಜಿಕ್ ಫಂಡ್. ಆ ಮೂಲಕ ಹೊಸ ಯೋಜನೆಗಳ ಆರಂಭ, ಕೈಗಾರಿಕೆ ಉದ್ದೇಶಕ್ಕೆ ಬಳಸಿದ ಭೂಮಿಯನ್ನು ನಗರ ನಿರ್ಮಾಣ ಯೋಜನೆಗಳಿಗೆ ಬಳಸುವ ಮತ್ತು ಸ್ಥಗಿತಗೊಂಡ ಯೋಜನೆಗಳ ಪುನರಾರಂಭಕ್ಕೆ ಈ ನಿಧಿಯನ್ನು ಬಳಸಿಕೊಳ್ಳಲಾಗುವುದು.


‘ಎನ್‌ಐಐಎಫ್‌’ ನಿಧಿಯ ಬಂಡವಾಳ ಹೂಡಿಕೆಯ ನಿರ್ಧಾರಗಳಿಗೆ ಹೂಡಿಕೆ ನಿರ್ವಹಣಾ ಸಮಿತಿಯು ಹೊಣೆಯಾಗಿರುತ್ತದೆ.
ಭಾರತದ ಮೂಲಸೌಕರ್ಯ ಹಣಕಾಸು ಸಂಸ್ಥೆಯನ್ನು (ಐಐಎಫ್‌ಸಿಎಲ್‌) ನಿಧಿಯ ಹೂಡಿಕೆ ಸಲಹೆಗಾರ ಸಂಸ್ಥೆಯನ್ನಾಗಿ ಮತ್ತು ಐಡಿಬಿಐ ಕ್ಯಾಪಿಟಲ್‌ ಮಾರ್ಕೆಟ್‌ ಸರ್ವಿಸಸ್‌ ಲಿಮಿಟೆಡ್‌ ಅನ್ನು, ಎನ್‌ಐಐಎಫ್‌ ಟ್ರಸ್ಟ್‌ನ ಸಲಹೆಗಾರ ಸಂಸ್ಥೆಯಾಗಿ ಆಯ್ಕೆ ಮಾಡಲಾಗಿದೆ.



ಎನ್‌ಐಐಎಫ್ ಈಗಾಗಲೇ CPPIB, ಅಬುಧಾಬಿ ಇನ್ವೆಸ್ಟ್‌ಮೆಂಟ್ ಅಥಾರಿಟಿ, ಆಸ್ಟ್ರೇಲಿಯನ್ ಸೂಪರ್, ಒಂಟಾರಿಯೊ ಶಿಕ್ಷಕ (Ontario Teachers)ರ ಪಿಂಚಣಿ ಯೋಜನೆ, ತೆಮಾಸೆಕ್(Temasek), ಆಕ್ಸಿಸ್ ಬ್ಯಾಂಕ್, HDFC ಗ್ರೂಪ್, ICICI ಬ್ಯಾಂಕ್ ಮತ್ತು ಕೊಟಕ್ ಮಹೀಂದ್ರಾ ಲೈಫ್ ಇನ್ಶುರೆನ್ಸ್ ನಂತಹ ಸಂಸ್ಥೆಗಳು ಸೇರಿ ಎನ್‌ಐಐಎಫ್ ನ ಮಾಸ್ಟರ್ ಫಂಡ್‌ನಲ್ಲಿ ಹೂಡಿಕೆ ಮಾಡಿವೆ.



—• ರಾಷ್ಟ್ರೀಯ ಹೂಡಿಕೆ ಮತ್ತು ಮೂಲಸೌಕರ್ಯ ನಿಧಿ (ಎನ್‌ಐಐಎಫ್)
• ಸ್ಥಾಪನೆ—
ಫೆಬ್ರವರಿ 2015 ರಲ್ಲಿ
• ಪ್ರಧಾನ ಕಚೇರಿ — ಮುಂಬೈ, ಭಾರತ
ಸರ್ಕಾರಿ ಸಚಿವಾಲಯ — ಹಣಕಾಸು ಸಚಿವಾಲಯ
• ಪ್ರಸ್ತುತ CEO (ಮುಖ್ಯ ಕಾರ್ಯನಿರ್ವಾಹಕ) — ಸುಜಾಯ್ ಬೋಸ್


—• ಎನ್‌ಐಐಎಫ್ ನಿಧಿಯ ಆಡಳಿತ ಮಂಡಳಿಯ ರಚನೆ :
• ಅಧ್ಯಕ್ಷರು — ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು.
• ಸದಸ್ಯರು —
> ಆರ್ಥಿಕ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ,‌
> ಹಣಕಾಸು ಸೇವೆಗಳ ಕಾರ್ಯದರ್ಶಿ
> ಎಸ್‌ಬಿಐ ನ ಅಧ್ಯಕ್ಷರು ಇರುವರು.
ಈ ಆಡಳಿತ ಮಂಡಳಿಯು ಸಭೆ ಸೇರಿ ಹೂಡಿಕೆ ಮಾಡಲು ಮುಂದೆ ಬಂದಿರುವ ಸಂಸ್ಥೆಗಳ  ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಪ್ರಗತಿ ಪರಿಶೀಲಿಸುವುದು.

Saturday 13 June 2020

•► ನೇರ ತೆರಿಗೆ (ಡೈರೆಕ್ಟ್‌ ಟ್ಯಕ್ಸ್‌) ಎಂದರೇನು, ಹಾಗೂ ನೇರ ತೆರಿಗೆಯ ವಿವಿಧ ಪ್ರಕಾರಗಳು? ಯಾರಿಗೆಲ್ಲ ಅನ್ವಯಿಸುತ್ತದೆ? (what is Direct Tax and What Are The Different Types Of Direct Taxes?)

•► ನೇರ ತೆರಿಗೆ (ಡೈರೆಕ್ಟ್‌ ಟ್ಯಕ್ಸ್‌) ಎಂದರೇನು, ಹಾಗೂ ನೇರ ತೆರಿಗೆಯ ವಿವಿಧ ಪ್ರಕಾರಗಳು? ಯಾರಿಗೆಲ್ಲ ಅನ್ವಯಿಸುತ್ತದೆ?
(what is Direct Tax and What Are The Different Types Of Direct Taxes?)

━━━━━━━━━━━━━━━━━━━━━
★ ಭಾರತದ ಆರ್ಥಿಕ ವ್ಯವಸ್ಥೆ
(The Indian Economy)

★ಭಾರತದಲ್ಲಿನ ನೇರ ತೆರಿಗೆಯ ವಿವಿಧ ಪ್ರಕಾರಗಳು
(Types Of Direct Taxes in India)



ಭಾರತದಲ್ಲಿ ನೇರ ತೆರಿಗೆಯ ಆಡಳಿತದ ಜವಾಬ್ದಾರಿಯನ್ನು ನೇರ ತೆರಿಗೆಗಳ ಕೇಂದ್ರೀಯ  ಮಂಡಳಿ (CBDT) ಹೊಂದಿದೆ. ಇದು ಕೇಂದ್ರೀಯ ಕಂದಾಯ ಮಂಡಳಿ ಕಾಯ್ದೆ 1924 ರ ಅಡಿಯಲ್ಲಿ ರೂಪುಗೊಂಡ ಶಾಸನಬದ್ಧ ಸಂಸ್ಥೆ (statutory body) ಯಾಗಿದ್ದು, ಇದು ಕಂದಾಯ ಇಲಾಖೆಯ ಒಂದು ಭಾಗವಾಗಿದೆ.

ಸರ್ಕಾರ ವಿತ್ತೀಯ ಕೊರತೆಯಿಂದ ತಪ್ಪಿಸಿಕೊಳ್ಳಲು ಇರುವ ಪ್ರಮುಖ ಮಾರ್ಗವೂ ತೆರಿಗೆ ಸಂಗ್ರಹ.

• ನೇರ ತೆರಿಗೆ (Direct Tax) :
ಹೆಸರೇ ಸೂಚಿಸುವಂತೆ ಈ ತೆರಿಗೆಗಳನ್ನು ತೆರಿಗೆದಾರರು ನೇರವಾಗಿ ಸರ್ಕಾರಕ್ಕೆ ಪಾವತಿಸುತ್ತಾರೆ. ಸರ್ಕಾರ ನೇರವಾಗಿ ತೆರಿಗೆದಾರರಿಂದ ಮತ್ತು ಸ್ವತ್ತುಗಳ ಮೇಲೆ ಮೂಲದಲ್ಲಿಯೇ ಕಡಿತಗೊಳಿಸುವ ತೆರಿಗೆಯನ್ನು ನೇರ ತೆರಿಗೆ ಎನ್ನಬಹುದು. ಇದರೊಂದಿಗೆ ಪರೋಕ್ಷ ತೆರಿಗೆಯನ್ನೂ ದೇಶದ ತೆರಿಗೆ ವ್ಯವಸ್ಥೆ ಒಳಗೊಂಡಿರುತ್ತದೆ.

ಈ ತೆರಿಗೆಗಳನ್ನು ಇನ್ನೊಬ್ಬ ತೆರಿಗೆದಾರರ ಪರವಾಗಿ ಪಾವತಿಸಲಾಗುವುದಿಲ್ಲ. ಇದನ್ನು  ನಿಯಂತ್ರಕ(regulator)ರಿಂದ ನೇರವಾಗಿ ವಿಧಿಸಲಾಗುತ್ತದೆ. ಇದಲ್ಲದೆ ಈ ಹೊಣೆಗಾರಿಕೆ ಮತ್ತೊಬ್ಬ ತೆರಿಗೆ ಪಾವತಿದಾರರಿಗೆ ವರ್ಗಾಯಿಸಲಾಗುವುದಿಲ್ಲ.

ವ್ಯಕ್ತಿಯ ಒಟ್ಟು ಆದಾಯ ಅಥವಾ ಸಂಪತ್ತಿನ ಮೇಲೆ ವಿಧಿಸುವ ತೆರಿಗೆಗಳು ನೇರ ತೆರಿಗೆ ಅಡಿಯಲ್ಲಿ ಬರುತ್ತವೆ.


* ಆದಾಯ ತೆರಿಗೆ (Income Tax):  ವಾರ್ಷಿಕ ₹ 5 ಲಕ್ಷ ಮತ್ತು ಅದಕ್ಕಿಂತಲೂ ಹೆಚ್ಚು ವೇತನ ಪಡೆಯುವ ಉದ್ಯೋಗಿಗಳಿಗೆ ಟಿಡಿಎಸ್‌ (ಮೂಲದಲ್ಲಿಯೇ ತೆರಿಗೆ ಕಡಿತ) ಮಾಡಲಾಗುತ್ತದೆ.

* ಆಸ್ತಿ ತೆರಿಗೆ (Wealth tax):
ಆಸ್ತಿ ಯಾವುದೇ ಆದಾಯವನ್ನು ಗಳಿಸುತ್ತದೆಯೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಆಸ್ತಿ ಮಾಲೀಕರು ಈ ತೆರಿಗೆಯನ್ನು ಪಾವತಿಸಬೇಕು. ತೆರಿಗೆದಾರರ ವಸತಿ ಸ್ಥಿತಿಯನ್ನು ಅವಲಂಬಿಸಿ, ಸಂಪತ್ತು ತೆರಿಗೆಯನ್ನು ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬ (HUF) ಮತ್ತು ಕಾರ್ಪೊರೇಟ್ ತೆರಿಗೆದಾರರು ಪಾವತಿಸುತ್ತಾರೆ.

- ಸ್ಟಾಕ್ ಹೋಲ್ಡಿಂಗ್ಸ್, ಚಿನ್ನದ ಠೇವಣಿ ಬಾಂಡ್‌ಗಳು, ವಾಣಿಜ್ಯ ಸಂಕೀರ್ಣ ಆಸ್ತಿ-ಸ್ವತ್ತು, ಒಂದು ವರ್ಷದಲ್ಲಿ 300 ದಿನಗಳಿಗಿಂತ ಹೆಚ್ಚು ಕಾಲ ಬಾಡಿಗೆಗೆ ಪಡೆದ ಮನೆ ಆಸ್ತಿ, ಮತ್ತು ವೃತ್ತಿಪರ ಅಥವಾ ವ್ಯವಹಾರ ಬಳಕೆಗಾಗಿ ಹೊಂದಿರುವ ಮನೆ ಆಸ್ತಿಯನ್ನು ಸಂಪತ್ತು ತೆರಿಗೆ ಪಾವತಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ.

ಪುರಸಭೆ, ಪಟ್ಟಣ ಅಥವಾ ಗ್ರಾಮ ಪಂಚಾಯಿತಿ, ಕಾರ್ಪೊರೇಷನ್‌ಗಳು ವ್ಯಕ್ತಿ ಹೊಂದಿರುವ ಕಟ್ಟಡ, ಭೂಮಿ ಅಥವಾ ಖರೀದಿಸುವ ಆಸ್ತಿಗೆ ತೆರಿಗೆ ಸಂಗ್ರಹಿಸಲಾಗುತ್ತದೆ. ರಾಜ್ಯವಾರು ತೆರಿಗೆ ದರದಲ್ಲಿ ವ್ಯತ್ಯಾಸವಾಗುತ್ತದೆ.


* ಕಾರ್ಪೊರೇಟ್‌ ತೆರಿಗೆ (Corporate tax) :
ನೇರ ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಟ್‌ ತೆರಿಗೆ ಪ್ರಮುಖ ಭಾಗವಾಗಿದೆ. ಈ ತೆರಿಗೆಯನ್ನು ಷೇರುದಾರರಿಗಿಂತ ಭಿನ್ನವಾಗಿರುವ ದೇಶೀಯ ಕಂಪನಿಗಳ ಮೇಲೆ ವಿಧಿಸಲಾಗುತ್ತದೆ. ತಮ್ಮ ಆದಾಯವನ್ನು ಭಾರತದಲ್ಲಿ ಪಡೆಯುವಂತಹ ಅಥವಾ ಪಡೆಯಲು  ಪರಿಗಣಿಸಲಾಗುವ ವಿದೇಶಿ ನಿಗಮಗಳು (foreign corporations) ಸಹ ಪಾವತಿಸುತ್ತವೆ. ದೇಶದಲ್ಲಿರುವ ಸ್ವತ್ತು(assets)ಗಳ ಮಾರಾಟದ ಮೂಲಕ ಬಡ್ಡಿ, ರಾಯಲ್ಟಿ, ಲಾಭಾಂಶ(dividends), ತಾಂತ್ರಿಕ ಸೇವೆಗಳ ಶುಲ್ಕ ಅಥವಾ ಗಳಿಕೆಯಾಗಿ ಗಳಿಸಿದ ಆದಾಯವು ಕೂಡ ತೆರಿಗೆಗೊಳಪಡುತ್ತವೆ.

ಕಾರ್ಪೊರೇಟ್ ತೆರಿಗೆಯೂ ಈ ಕೆಳಗಿನ ಹಲವು ರೀತಿಯ ತೆರಿಗೆಗಳು ಒಳಗೊಂಡಿದೆ;

(Minimum Alternate Tax (MAT))
– ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಶೂನ್ಯ ಅಥವಾ ಅತ್ಯಂತ ಕಡಿಮೆ ಆದಾಯ ತೋರಿಸುವ ಕಂಪನಿಗಳಿಗೆ ನಿರ್ದಿಷ್ಟ ತೆರಿಗೆ ವಿಧಿಸುವುದು ಕನಿಷ್ಠ ಪರ್ಯಾಯ ತೆರಿಗೆಯಿಂದ (ಮ್ಯಾಟ್‌) ಸಾಧ್ಯವಾಗಿದೆ

(Fringe Benefits Tax)
– ಸಂಸ್ಥೆಗಳು ಉದ್ಯೋಗಿಗಳಿಗೆ ನೀಡುವ ಸವತ್ತುಗಳಿಗೆ ಪಾವತಿಸಬೇಕಾದುದು ಹೆಚ್ಚುವರಿ ಸೌಲಭ್ಯ ತೆರಿಗೆ (ಎಫ್‌ಬಿಟಿ)

– ಷೇರುಗಳ ಖರೀದಿ ಮತ್ತು ಮಾರಾಟದ ಮೇಲೆ ವಿಧಿಸಲಾಗುವ ಷೇರು ವರ್ಗಾವಣೆ ತೆರಿಗೆ (Securities Transaction Tax (STT)) ಹಾಗೂ ಷೇರುದಾರರಿಗೆ ಕಂಪನಿಗಳು ನೀಡುವ ಲಾಭಾಂಶದ ಮೇಲೆ ವಿಧಿಸಲಾಗುವ ತೆರಿಗೆ ಲಾಭಾಂಶ ವಿತರಣಾ ತೆರಿಗೆ (ಡಿಡಿಟಿ) (Dividend Distribution Tax (DDT))

* ಬಂಡವಾಳ ವೃದ್ಧಿ ತೆರಿಗೆ (Capital gains tax) : 
ಸಂಸ್ಥೆಗಳು ಅಥವಾ ವ್ಯಕ್ತಿಗೆ ಆಸ್ತಿ ಮಾರಾಟದಿಂದ ಬರುವ ಹಣದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಆಸ್ತಿಯ ಮೂಲ ಬೆಲೆ ಮತ್ತು ಮಾರಾಟ ಮಾಡಿದ ಬೆಲೆಯ ವ್ಯತ್ಯಾಸಕ್ಕೆ ಬಂಡವಾಳ ವೃದ್ಧಿ ತೆರಿಗೆ (ಕ್ಯಾಪಿಟಲ್‌ ಗೇಯ್ಸ್‌ ಟ್ಯಾಕ್ಸ್‌) ವಿಧಿಸಲಾಗುತ್ತದೆ. ದೀರ್ಘಾವಧಿ ಮತ್ತು ಅಲ್ಪಾವಧಿ ಎರಡು ವಿಧಗಳಾಗಿ ಇದನ್ನು ವಿಂಗಡಿಸಲಾಗಿದೆ.

Saturday 6 June 2020

KAS ಮುಖ್ಯಪರೀಕ್ಷೆ 1250 ಅಂಕ, ವ್ಯಕ್ತಿತ್ವ ಪರೀಕ್ಷೆ 50 ಅಂಕಕ್ಕೆ ಇಳಿಕೆ

 ಕೆಪಿಎಸ್ಸಿ: ಮುಖ್ಯಪರೀಕ್ಷೆ 1250 ಅಂಕ, ವ್ಯಕ್ತಿತ್ವ ಪರೀಕ್ಷೆ 50 ಅಂಕಕ್ಕೆ ಇಳಿಕೆ
ಪ್ರಜಾವಾಣಿ ವಾರ್ತೆ Updated: 06 ಜೂನ್ 2020, 13:22 IST

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ (ಗ್ರೂಪ್‌ ‘ಎ’ ಮತ್ತು ‘ಬಿ’) ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಮುಖ್ಯಪರೀಕ್ಷೆಯಲ್ಲಿ ಅಂಕವನ್ನು 1,250ಕ್ಕೆ ಇಳಿಸಿ ರಾಜ್ಯ ಸರ್ಕಾರ ಗೆಜೆಟ್‌ ಪ್ರಕಟಣೆ ಹೊರಡಿಸಿದೆ.

ಈವರೆಗೆ 200 ಅಂಕಗಳಿಗೆ ನಡೆಯುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು (ಸಂದರ್ಶನ) 50 ಅಂಕಗಳಿಗೆ ಇಳಿಸಲಾಗಿದೆ. ಅಲ್ಲದೆ, ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕ ಶೇ 80 ದಾಟಿದರೆ ಅಥವಾ ಶೇ 40ಕ್ಕಿಂತ ಕಡಿಮೆಯಾದರೆ ಸಂದರ್ಶನ ಮಂಡಳಿ ಸದಸ್ಯರು ಕಾರಣ ದಾಖಲಿಸಬೇಕು ಎಂದೂ ನಿಯಮ ಬದಲಿಸಲಾಗಿದೆ.

ಆ ಮೂಲಕ, ‘ಕರ್ನಾಟಕ ಗೆಜೆಟೆಡ್ ಪ್ರೊಬೇಷನರಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ತಿದ್ದುಪಡಿ ನಿಯಮಗಳು – 2020’ನ್ನು ಮಾಡಿ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.

ಐದು ವಿಷಯಗಳಲ್ಲಿ ಮುಖ್ಯ ಪರೀಕ್ಷೆ: ಈವರೆಗೆ ಎರಡು ಐಚ್ಚಿಕ ವಿಷಯಗಳೂ (ಪತ್ರಿಕೆ 6 ಮತ್ತು ಪತ್ರಿಕೆ 7) ಸೇರಿ ಏಳು ವಿಷಯಗಳಲ್ಲಿ ಮುಖ್ಯ ಪರೀಕ್ಷೆ ನಡೆಯುತ್ತಿತ್ತು. ಇನ್ನು ಐದು ವಿಷಯಗಳಿಗೆ ಪರೀಕ್ಷೆ ನಡೆಯಲಿದ್ದು, ಐಚ್ಚಿಕ ವಿಷಯಗಳನ್ನು (ತಲಾ 250 ಅಂಕಗಳ 2 ಪತ್ರಿಕೆ) ಕೈಬಿಡಲು ನಿರ್ಧರಿಸಲಾಗಿದೆ. ಹೀಗಾಗಿ, ಒಟ್ಟು 1,750 ಅಂಕಗಳಿಗೆ (ಒಟ್ಟು ಏಳು ಪತ್ರಿಕೆಗಳು) ನಡೆಯುತ್ತಿದ್ದ ಮುಖ್ಯಪರೀಕ್ಷೆಯಲ್ಲಿ 500 ಅಂಕ ಕಡಿತಗೊಂಡು, 1,250 ಅಂಕಗಳಿಗೆ ನಿಗದಿ ಆಗಲಿದೆ.