"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 18 March 2015

☀‘ಸೋಲಾರ್‌ ಇಂಪಲ್ಸ್ 2’ (ಎಸ್‌ಐ2): ಜಗತ್ತಿನ ಮೊತ್ತಮೊದಲ ಸೌರ ವಿಮಾನ:  (Solar Impulse: World's first solar-powered aircraft)

☀‘ಸೋಲಾರ್‌ ಇಂಪಲ್ಸ್ 2’ (ಎಸ್‌ಐ2): ಜಗತ್ತಿನ ಮೊತ್ತಮೊದಲ ಸೌರ ವಿಮಾನ:
(Solar Impulse: World's first solar-powered aircraft)

━━━━━━━━━━━━━━━━━━━━━━━━━━━━━━━━━━━━━━━━━━━━━

♦. ಟಿಪ್ಪಣಿ ಬರಹ.

●.‘ಸೋಲಾರ್‌ ಇಂಪಲ್ಸ್ 2’ (ಎಸ್‌ ಐ 2):
— ಇದು ಒಂದು ಹನಿ ಪೆಟ್ರೋಲನ್ನೂ (ಪಳೆಯು­ಳಿಕೆ ಇಂಧನ) ಬಳಸದೆ ಪ್ರಪಂಚ ಪರ್ಯಟನೆಯ ಗುರಿ ಹೊಂದಿರುವ ಜಗತ್ತಿನ ಮೊತ್ತಮೊದಲ ಸೌರವಿಮಾನ.

●.ಸಂಪೂರ್ಣವಾಗಿ ಸೂರ್ಯ ಶಕ್ತಿಯ ನೆರವಿನಿಂದಲೇ ಯಾನ ನಡೆಸುವ ಉದ್ದೇಶ ಹೊಂದಿರುವ ಈ ವಿಮಾನವು ಜಗತ್ತಿನೆಲ್ಲೆಡೆ ಶುದ್ಧ ಇಂಧನ ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯ ಸಂದೇಶ ಸಾರುವ ಆಶಯ ಹೊಂದಿದೆ.

●.ಮಸ್ಕತ್‌ನಿಂದ March 2015 ಸೋಮವಾರ ರಂದು ಹೊರಟ ಈ ವಿಮಾನವು ಪಾಕಿಸ್ತಾನದ ಮೇಲೆ ಹಾಯ್ದು, ಅರಬ್ಬೀ ಸಮುದ್ರದ ಮೇಲೆ ಭಾರತದ ವಾಯುಸೀಮೆಯನ್ನು ಪ್ರವೇಶಿಸಿ ಮಂಗಳವಾರ ರಾತ್ರಿ 11.45­ಕ್ಕೆ ಅಹಮದಾಬಾದ್‌ ನಿಲ್ದಾಣಕ್ಕೆ ಬಂದಿಳಿಯಿತು.  ಈ ಚಾರಿತ್ರಿಕ ಕ್ಷಣಕ್ಕೆ ಸಾಕ್ಷಿಯಾಗಲು ನಿಲ್ದಾಣದಲ್ಲಿ ನೆರೆದಿದ್ದ ದೊಡ್ಡ ಗುಂಪು ಹರ್ಷೋದ್ಗಾರ­ದೊಂದಿಗೆ ವಿಮಾನ­ವನ್ನು ಸ್ವಾಗತಿಸಿತು.

●.ಈ ವಿಮಾನವು 1999ರಲ್ಲಿ ಬಿಸಿ­ಗಾಳಿ ಬಲೂನಿನಲ್ಲಿ ಪ್ರಪಂಚ ಪರ್ಯ­ಟನೆ ನಡೆಸಿದ್ದ ಮನೋರೋಗ ಚಿಕಿತ್ಸಕ ಬರ್ಟ್‌ರ್‍ಯಾಂಡ್‌ ಪಿಕಾರ್ಡ್‌ ಮತ್ತು ಮಾಜಿ ಯುದ್ಧ ವಿಮಾನ ಪೈಲಟ್‌ ಆ್ಯಂಡ್ರೆ ಬೋರ್ಶ್ಚ್ ಬರ್ಗ್‌ ಅವರ ಪರಿಕಲ್ಪನೆಯ ಕೂಸು. ಇವರಿಬ್ಬರೂ ಸ್ವಿಟ್ಜರ್‌ಲೆಂಡ್‌ನವರು.

●.‘ಮಾಲಿನ್ಯ ಮುಕ್ತ ಭವಿಷ್ಯ’ (ಫ್ಯೂಚರ್‌ ಈಸ್‌ ಕ್ಲೀನ್‌) ಅಭಿಯಾನದ ಭಾಗವಾಗಿ ಈ ಯಾನ ನಡೆಯುತ್ತಿದೆ. ಈ ಅಭಿಯಾನಕ್ಕೆ ಭಾರತದ 120 ಕೋಟಿ ಜನರ ಬೆಂಬಲವನ್ನು ನಿರೀಕ್ಷಿಸು­ತ್ತೇವೆ’ ಎಂದು ಪೈಲಟ್‌ ಪಿಕಾರ್ಡ್‌ ಕೋರಿದರು.

●.ಒಟ್ಟು 35,000 ಕಿ.ಮೀ. ಪ್ರಯಾಣಿಸಲಿರುವ ವಿಮಾನ 12 ಕಡೆ ಇಳಿಯಲಿದೆ. ಸೌರವಿಮಾನದ ಭಾರತದ ಸಂಚಾರವನ್ನು ಆದಿತ್ಯ ಬಿರ್ಲಾ ಸಮೂಹ ಪ್ರಾಯೋಜಿಸಿದೆ.

●.ಪಯಣದ ಹಾದಿ
— ‘ಎಸ್‌ಐ 2’  ಸೌರವಿಮಾನವು ಅರಬ್‌ ಸಂಯುಕ್ತ ಒಕ್ಕೂಟದ ಅಬುಧಾಬಿಯಿಂದ ಕಳೆದ ವಾರ ಹೊರಟಿತು. ಮುಂದಿನ ಪ್ರಯಾಣ ಮ್ಯಾನ್ಮಾರ್‌, ಚೀನಾಗಳಿಗೆ. ಅಲ್ಲಿಂದ ಮುಂದಕ್ಕೆ ಹವಾಯಿ ದ್ವೀಪಗಳ ಮೂಲಕ ಪೆಸಿಫಿಕ್‌ ಸಾಗರ ದಾಟಿ ಅಮೆರಿಕದಲ್ಲಿ ಸಂಚರಿಸಲಿದೆ. ಆಮೇಲೆ ಅಟ್ಲಾಂಟಿಕ್ ಸಾಗರ ದಾಟಿ ದಕ್ಷಿಣ ಯೂರೋಪ್‌ ಅಥವಾ ಉತ್ತರ ಆಫ್ರಿಕಾದಲ್ಲಿ ಕೊನೆಯ ಹಂತದ ಪ್ರಯಾಣ ಮಾಡಿ ಜುಲೈ ಕೊನೆಯ ವೇಳೆಗೆ ಅಬುಧಾಬಿಗೆ.


●.ತಾಂತ್ರಿಕ ವಿವರಗಳು:—

✧.ಒಂದು ಸೀಟಿನ ವಿಮಾನ

✧.ಇಂಗಾಲದ ನಾರು (ಕಾರ್ಬನ್‌ ಫೈಬರ್‌) ಬಳಸಿ ನಿರ್ಮಾಣ

✧.ವಿಮಾನದ ವೇಗ ಗಂಟೆಗೆ 45 ಕಿ.ಮೀ

✧.ರೆಕ್ಕೆಯ ಉದ್ದ 72 ಮೀಟರ್‌ (ಬೋಯಿಂಗ್‌ 747 ರೆಕ್ಕೆಗಿಂತ ಉದ್ದ)

✧.2300 ಕೆ.ಜಿ ತೂಕ (ಒಂದು ಸಾಮಾನ್ಯ ಕಾರಿನಷ್ಟು)

✧.ಅಳವಡಿಸಲಾಗಿರುವ ಸೌರ ಕೋಶಗಳ ಸಂಖ್ಯೆ 17,248

✧.ಒಟ್ಟು 633 ಕೆ.ಜಿ. ತೂಕದ ನಾಲ್ಕು ಲೀಥಿಯಂ ಬ್ಯಾಟರಿಗಳು

✧.ವಿಮಾನದ ಗರಿಷ್ಠ ಹಾರಾಟ ಎತ್ತರ 8500 ಮೀಟರ್‌ (8848 ಮೀಟರ್‌ ಎತ್ತರವಿರುವ ಮೌಂಟ್‌ ಎವರೆಸ್ಟ್‌ ಎತ್ತರಕ್ಕಿಂತ ತುಸು ಕಡಿಮೆ)

✧.80ಕ್ಕೂ ತಜ್ಞರು, 100ಕ್ಕೂ ಹೆಚ್ಚು ಪಾಲುದಾರರು ಮತ್ತು ಸಮಾಲೋಚಕರು ನಿರ್ಮಾಣದಲ್ಲಿ ಭಾಗಿ

✧.ವಿಶ್ವದ ಮೊಟ್ಟದ ಮೊದಲ ಸೌರ ವಿಮಾನಕ್ಕೆ ನಿರ್ಮಾತೃಗಳೂ ಆಗಿರುವ ಬಟ್ರಾìಂಡ್‌ ಪಿಕ್ಕಾರ್ಡ್‌ ಮತ್ತು ಆ್ಯಂಡ್ರೆ ಬೋರ್ಶ್‌ಬಗ್‌ ಪೈಲಟ್‌ಗಳಾಗಿದ್ದಾರೆ.ಇವರ ಉದ್ದೇಶ ಕಡಿಮೆ ಇಂಧನದಲ್ಲಿ ಹೆಚ್ಚು ಪ್ರಯಾಣಿಕರನ್ನು ಸುರಕ್ಷಿತ ಹಾಗೂ ಅಲ್ಪ ಸಮಯದಲ್ಲಿ ಕೊಂಡೊಯ್ಯುವುದಾಗಿದೆ.

✧.ಈ ಗುರಿಯನ್ನು ಹೊಂದಿರುವ ಹತ್ತಾರು ಸಂಶೋಧಕರು ಮತ್ತು ತಾಂತ್ರಿಕ ತಜ್ಞರನ್ನು ಒಂದೇ ವೇದಿಕೆ ಅಡಿ ತಂದು, ಈ ವಿನೂತನ ಮಾದರಿಯ ವಿಮಾನವನ್ನು ಸಿದ್ಧಪಡಿಸಲಾಗಿದೆ. ಭವಿಷ್ಯದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಎದುರಾಗಬಹುದಾದ ಇಂಧನ ಕೊರತೆಗೆ ಇದು ಪರಿಹಾರ ಒದಗಿಸಬಲ್ಲದು.


●.ಇನ್ನೊಮ್ಮೆ ಪುನರಾವಲೋಕನ....

✧. ಆಂಟೋನಿ ಪರೋಕರನ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಿಂಡ್ಲರ್‌ ಇಂಡಿಯಾ (ವಿಮಾನ ನಿರ್ಮಾತೃ ಕಂಪನಿ)

✧.17248 ಸೌರಕೋಶ: ಹನಿ ಇಂಧನವನ್ನೂ ಬಳಸದೆ ಹಾರುವ ಈ ವಿಮಾನದಲ್ಲಿರುವ ಸೌರಕೋಶಗಳು

✧.72 ಮೀಟರ್‌: ಈ ವಿಮಾನದ ರೆಕ್ಕೆಗಳ ವಿಸ್ತಾರ, ಬೋಯಿಂಗ್‌ 747 ವಿಮಾನಕ್ಕಿಂತಲೂ ಅಗಲ

✧.35000 ಕಿ.ಮೀ.: ವಿಶ್ವ ಪರ್ಯಟನೆ ವೇಳೆ ಕ್ರಮಿಸಲಿರುವ ಸೌರವಿಮಾನ ಕ್ರಮಿಸಲಿರುವ ದೂರ

✧.5 ತಿಂಗಳು: ಒಟ್ಟು 25 ದಿನ ಹಾರಲಿರುವ ವಿಮಾನಕ್ಕೆ ಈ ಯಾನ ಮುಗಿಸಲು ತಗಲುವ ಅವಧಿ

✧.2.3 ಟನ್‌: ಸೌರವಿಮಾನದ ಒಟ್ಟು ತೂಕ. ಇದು ಒಂದು ದೊಡ್ಡ ಕಾರಿನಷ್ಟು ಭಾರ ಮಾತ್ರ ಇದೆ

✧.2 ಪೈಲಟ್‌: ಒಮ್ಮೆಗೆ ಒಬ್ಬರಿಗೆ ಮಾತ್ರ ಅವಕಾಶ, 5-6 ದಿನಗಳಿಗೊಮ್ಮೆ ಬದಲಾವಣೆ.

(ಕೃಪೆ: ಉದಯವಾಣಿ & ಪ್ರಜಾವಾಣಿ)

No comments:

Post a Comment