"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 18 March 2015

☀ಭಾರತ ರತ್ನ ಪ್ರಶಸ್ತಿಯನ್ನು ಕುರಿತು.. (Know About the Bharat Ratna Award)

☀ಭಾರತ ರತ್ನ ಪ್ರಶಸ್ತಿಯನ್ನು ಕುರಿತು..
(Know About the Bharat Ratna Award)


━━━━━━━━━━━━━━━━━━━━━━━━━━━━━━━━━━━━━━━━━━━━━

●.ಭಾರತ ರತ್ನವನ್ನು ಇಂಗ್ಲೀಷಿನಲ್ಲಿ “ಜೆಮ್ ಆಫ್ ಇಂಡಿಯಾ” ಅಥವಾ “ಜ್ಯೂಯೆಲ್ ಆಫ್ ಇಂಡಿಯಾ” ಎಂದೂ ಕರೆಯಲಾಗುತ್ತದೆ. ಆದರೆ ಇದು ಬಿರುದಲ್ಲ ಮತ್ತು ಬಿರುದಿನಂತೆ ಬಳಸಿಕೊಳ್ಳುವಂತಿಲ್ಲ. ಆದರೆ ಈ ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರದಲ್ಲಿ ಅಗ್ರಸ್ಥಾನ ದೊರೆಯುವುದರಿಂದ ಅವರು ಆದರ್ಶ ವ್ಯಕ್ತಿಗಳೆಂದು, ಸಮಾಜದಿಂದ ಮಾನ್ಯತೆಯನ್ನು ಗಳಿಸಿಕೊಳ್ಳುತ್ತಾರೆ.

●.ಭಾರತ ರತ್ನ ಪ್ರಶಸ್ತಿಗೆ ಅರ್ಹರನ್ನು ಆಯ್ಕೆಮಾಡುವ ಜವಾಬ್ದಾರಿಯನ್ನು ಕೇಂದ್ರ ಗೃಹಇಲಾಖೆಯು ವಹಿಸಿಕೊಂಡಿದೆ. ಕೇಂದ್ರದ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ನೀಡುವ ಶಿಪಾರಸ್ಸುಗಳನ್ನು ಕ್ರೋಢಿಕರಿಸಿ ಆಯ್ಕೆಮಾಡಲು ಉನ್ನತ ಮಟ್ಟದ ಸಮಿತಿಯನ್ನು ಉಪರಾಷ್ಟ್ರಪತಿಯವರನ್ನೊಳಗೊಂಡಂತೆ ನೇಮಿಸುತ್ತಾರೆ.

●.ಸಮಿತಿಯಲ್ಲಿ ಸಂಪುಟ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಪ್ರಧಾನಿಯವರ ಕಾರ್ಯದರ್ಶಿಯವರಿರುತ್ತಾರೆ. ಸಮಿತಿಯು ಆಯ್ಕೆಮಾಡಿದ ಅರ್ಹರ ಪಟ್ಟಿಯನ್ನು ಪ್ರಧಾನಮಂತ್ರಿ ನೇತೃತ್ವದ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಿ ಪ್ರಕಟಿಸಲಾಗುತ್ತದೆ.


●.ಇತರೆ ವಿಶೇಷಗಳು:

✧.ಭಾರತ ರತ್ನ ಪ್ರಶಸ್ತಿಯು ಭಾರತದಲ್ಲಿ ಸರ್ವಶ್ರೇಷ್ಠ ಪ್ರಶಸ್ತಿಯಾಗಿದ್ದರೂ, ನಗದು/ಹಣವನ್ನು ನೀಡಲಾಗುವುದಿಲ್ಲ.

✧.ಪ್ರಶಸ್ತಿಗೆ ಅರ್ಹರೆಂದು ಗಣತಂತ್ರದ ಸಂದರ್ಭದಲ್ಲಿ ಘೋಷಣೆ ಮಾಡಲಾಗುತ್ತದೆ.

✧.ನಿಗದಿತ ದಿನದಂದು ಭಾರತದ ರಾಷ್ಟ್ರಪತಿಯವರು ಪದಕವನ್ನು ಪ್ರದಾನ ಮಾಡುತ್ತಾರೆ.

 ✧.ಪ್ರಶಸ್ತಿಯು ರಾಷ್ಟ್ರಪತಿಗಳು ಸಹಿಮಾಡಿದ ಪ್ರಶಸ್ತಿ ಪತ್ರ ಮತ್ತು ಪದಕವನ್ನೊಳಗೊಂಡಿರುತ್ತದೆ.

✧.ಕಂಚಿನ ಪದಕವು ಅಶ್ವತ್ಥ ಎಲೆಯ(ಅರಳಿ ಎಲೆ) ಆಕಾರದಲ್ಲಿದ್ದು, 25/16 ಇಂಚು * 17/8 ಇಂಚಿನಷ್ಟಿದ್ದು ಕೆಳಭಾಗ ತೊಟ್ಟಿನಂತಿರುತ್ತದೆ. ಮಧ್ಯದಲ್ಲಿ ಪ್ಲಾಟಿನಂನಲ್ಲಿ ಪ್ರಕಾಶಿಸುವ ಸೂರ್ಯನ(ಮೋಡದಿಂದ ಹೊರಬಂದಂತಿರುವ) ಚಿತ್ರವಿದ್ದು, ಬೆಳ್ಳಿಯ ಅಕ್ಷರಗಳಲ್ಲಿ ಸಂಸ್ಕೃತದಲ್ಲಿ ಭಾರತ ರತ್ನ ಎಂದು ಬರೆದಿರುತ್ತದೆ.

✧.ಪದಕದ ಮತ್ತೊಂದು ಪಾಶ್ವದ ಮಧ್ಯಭಾಗದಲ್ಲಿ ನಾಲ್ಕು ಮುಖವುಳ್ಳ ಸಿಂಹವಾದ ಭಾರತದ ಲಾಂಛನ ಮತ್ತು ಧ್ಯೇಯವಾಕ್ಯವಾದ “ಸತ್ಯಮೇವ ಜಯತೆ” ಎಂದಿರುತ್ತದೆ.

✧.ಪದಕವನ್ನು ಎರಡು ಇಂಚುಗಳಷ್ಟು ಅಗಲವಿರುವ ಹೊಳಪುಗಟ್ಟಿದ ಬಿಳಿಯ ರೇಷ್ಮೆ ರಿಬ್ಬನ್‍ನಲ್ಲಿರುತ್ತದೆ.

✧.ಅದನ್ನು ಪ್ರಶಸ್ತಿಗೆ ಭಾಜನರಾದವರ ಕುತ್ತಿಗೆಗೆ ಖುದ್ದು ರಾಷ್ಟ್ರಪತಿಗಳೇ ಹಾಕುತ್ತಾರೆ.

✧.ಭಾರತ ರತ್ನ ಪುರಸ್ಕಾರವು ನಗದನ್ನು ಒಳಗೊಂಡಿರುವುದಿಲ್ಲ, ಬಂಗಾರದಿಂದಲೂ ಮಾಡಿದ್ದಲ್ಲ ಆದರೆ ಭಾರತರತ್ನಕ್ಕೆ ಹಿಮಾಲಯದಷ್ಟು ಎತ್ತರದ ಸ್ಥಾನಮಾನವಿದೆ.

✧.ಅಲ್ಲದೆ ಭಾರತರತ್ನವನ್ನು ಪಡೆದವರ ಸ್ಥಾನಮಾನವು ಭಾರತದ ಅಧಿಕಾರ ಶ್ರೇಣಿ ವ್ಯವಸ್ಥೆಯಲ್ಲಿ ಏಳನೇ ಸ್ಥಾನಮಾನವನ್ನು ಅಲಂಕರಿಸಿರುತ್ತಾರೆ.

✧. ಈವರೆಗೆ ಭಾರತ ರತ್ನ ಪುರಸ್ಕಾರವನ್ನು ಪಡೆದ ಗಣ್ಯರು:
— ರಾಷ್ಟ್ರಪತಿ(1),
— ಉಪರಾಷ್ಟ್ರಪತಿ(2),
— ಪ್ರಧಾನಮಂತ್ರಿ(3),
— ರಾಜ್ಯಪಾಲರು(4),
— ಮಾಜಿ ರಾಷ್ಟ್ರಪತಿಗಳು(5),
— ಭಾರತದ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿಗಳು, ಮತ್ತು ಲೋಕಸಭಾ ಸಭಾಧ್ಯಕ್ಷರು(6),
— ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು(7)
ಭಾರತರತ್ನ ಸ್ಥಾನಮಾನವನ್ನು ಪಡೆದಿರುತ್ತಾರೆ.


(ಕೃಪೆ: ಜಾನಪದ ಮಾಸ ಪತ್ರಿಕೆ ) 

No comments:

Post a Comment