"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 30 November 2017

☀ನ್ಯಾಷನಲ್ ಸ್ಟ್ಯಾಂಡಡ್ರ್ಸ್ ಬಾಡಿ ಆಫ್ ಇಂಡಿಯಾ / ಬ್ಯುರೋ ಆಫ್ ಇಂಡಿಯನ್‌ ಸ್ಟಾಂಡರ್ಸ್ ( ಬಿಐಎಸ್‌) ( National Standards Body of India / Bureau of Indian Standards (BIS))

ನ್ಯಾಷನಲ್ ಸ್ಟ್ಯಾಂಡಡ್ರ್ಸ್ ಬಾಡಿ ಆಫ್ ಇಂಡಿಯಾ / ಬ್ಯುರೋ ಆಫ್ ಇಂಡಿಯನ್‌ ಸ್ಟಾಂಡರ್ಸ್ ( ಬಿಐಎಸ್‌)
( National Standards Body of India / Bureau of Indian Standards (BIS))
━━━━━━━━━━━━━━━━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)

ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್-2016 ಕಾಯ್ದೆಯು ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಅನ್ನು ನ್ಯಾಷನಲ್ ಸ್ಟ್ಯಾಂಡಡ್ರ್ಸ್ ಬಾಡಿ ಆಫ್ ಇಂಡಿಯಾ ಆಗಿ ಸ್ಥಾಪನೆಗೆ ಅನುವು ಮಾಡಿಕೊಟ್ಟಿದೆ.

ಇದು ವಸ್ತುಗಳು ಹಾಗೂ ಪ್ರಕ್ರಿಯೆಗಳಿಗೆ ಗುಣಮಟ್ಟ ನಿಗದಿ, ಸೂಕ್ತ ಮಾರ್ಕಿಂಗ್ ಹಾಗೂ ಪ್ರಮಾಣಪತ್ರವನ್ನು ನಿಡಲಿದೆ.

ಇದು ಬಿಐಎಸ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದ್ದು, ಅಧಿಸೂಚಿತ ಸರಕುಗಳಿಗೆ ಪ್ರಮಾಣಪತ್ರ ಹೊಂದುವುದನ್ನು ಇದು ಕಡ್ಡಾಯಪಡಿಸಲಿದೆ. ಜತೆಗೆ ಗುಣಮಟ್ಟದ ಮುದ್ರೆಯನ್ನು ಹೊಂದಿರುವುದು ಕಡ್ಡಾಯ.


••ಬ್ಯುರೋ ಆಫ್ ಇಂಡಿಯನ್‌ ಸ್ಟಾಂಡರ್ಸ್ ( ಬಿಐಎಸ್‌)
(Bureau of Indian Standards (BIS)
━━━━━━━━━━━━━━━━━━━━━━━━━━━━

ವಿದ್ಯುತ್‌ ಉಪಕರಣಗಳು, ಸಿಮೆಂಟ್‌, ಬಾಟಲ್‌ ನೀರು, ಕಾಗದ, ಪೇಂಟ್‌,ಶಿಶು ಆಹಾರ ಹಾಲಿನ ಪುಡಿ, ಅಡುಗೆ ಅನಿಲ, ಇತ್ಯಾದಿ ಖರೀದಿಸುವ ಮುನ್ನ, ಅದಕ್ಕೆ ಐಎಸ್‌ಐ ಗುರುತು ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಈ ಚಿಹ್ನೆ ಇರುವ ವಸ್ತುಗಳನ್ನು ಖರೀದಿಸಿದಾಗ  ಗುಣಮಟ್ಟದ ಖಾತರಿ ಇರುತ್ತದೆ. ಈ ಚಿಹ್ನೆಯನ್ನು ಭಾರತೀಯ ಮಾನಕ ಬ್ಯೂರೋ  ಬಿಐಎಸ್‌ ನೀಡುತ್ತದೆ. 

ಇದನ್ನು ಹಿಂದೆ ಇಂಡಿಯನ್‌ ಸ್ಟಾಂಡರ್ಡ್ಸ್‌ ಇನ್‌ಸ್ಟಿಟ್ಯೂಟ್‌ ಎಂದು ಕರೆಯಲಾಗಿತ್ತು. ಆದ್ದರಿಂದ ಐಎಸ್‌ಐ  ಚಿಹ್ನೆಯನ್ನು ಉಳಿಸಿಕೊಳ್ಳಲಾಗಿದೆ. ಐಎಸ್‌ಐ ಚಿಹ್ನೆ ಇರುವ ವಸ್ತುವಿನ ಗುಣಮಟ್ಟದಲ್ಲಿ ಏರುಪೇರಿದ್ದರೆ ನೇರವಾಗಿ ಕೆಲವೊಂದು ನಿಬಂಧನೆಗೆ ಒಳಪಟ್ಟು ಐಎಸ್‌ಐನಿಂದ ಪರಿಹಾರ ಪಡೆಯುವ ಸಾಧ್ಯತೆ ಇದೆ. 

ಬಳಕೆದಾರರು ಖರೀದಿಸುವ ಸರಕುಗಳು ಮತ್ತು ಸೇವೆಗಳಿಗೆ ಅಂತರರಾಷ್ಟ್ರೀಯ ಮಾನಕ ನೀಡುವ ಸಲುವಾಗಿ ಇಂಟರ್‌ನ್ಯಾಷನಲ್‌  ಆರ್ಗನೈಸೇಷನ್‌   ಫಾರ್‌ ಸ್ಟಾಂಡಡೈìಸೇಷನ್‌ ಐಎಸ್‌ಒ ಸ್ಥಾಪನೆಗೊಂಡಿದೆ. 

☀.ಇಂಗಾಲದ ಚಕ್ರ: (Carbon Cycle)

☀.ಇಂಗಾಲದ ಚಕ್ರ:
(Carbon Cycle)
━━━━━━━━━━━━━

★ ಸಾಮಾನ್ಯ ಅಧ್ಯಯನ
(General Studies)


 ಇದೊಂದು ಜೀವರಾಸಾಯನಿಕ ಚಕ್ರವಾಗಿದ್ದು, ಇಂಗಾಲವು (ಸಾಮಾನ್ಯವಾಗಿ ಇಂಗಾಲದ ಡೈಆಕ್ಸೈಡ್) ಭೂಮಿಯ ವಾತಾವರಣದಲ್ಲಿ ವಿವಿಧ ರೂಪದಲ್ಲಿ ಪರಿವರ್ತನೆಗೊಳ್ಳುವ ಸರಣಿ ಪ್ರಕ್ರಿಯೆ.

ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ ಅನ್ನು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಸಸ್ಯಗಳು ಹೀರಿಕೊಳ್ಳುತ್ತವೆ. ಪ್ರಾಣಿಗಳು ಉಸಿರಾಟದ ಮೂಲಕ ಇಂಗಾಲದ ಡೈಆಕ್ಸೈಡ್‌ ಅನ್ನು ವಾತಾವರಣಕ್ಕೆ ಬಿಡುತ್ತವೆ. ಜೀವಕಳೆದುಕೊಂಡ ಪ್ರಾಣಿ ಮತ್ತು ಸಸ್ಯಗಳು ಇಂಗಾಲದ ರೂಪದಲ್ಲಿ ಪಳೆಯುಳಿಕೆ ಇಂಧನಗಳಾಗಿ ಮತ್ತೆ ವಾತಾವರಣ ಸೇರುತ್ತವೆ. ಈ ಇಂಧನಗಳನ್ನು ಉರಿಸುವುದರಿಂದ ಮತ್ತೆ ಇಂಗಾಲ ಉತ್ಪತ್ತಿಯಾಗಿ ವಾತಾವರಣ ಸೇರುತ್ತದೆ.... ಹೀಗೆ ಈ ಚಕ್ರ ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ.