"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday 30 November 2015

■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು : (Famous Ancient Historical Inscriptions in India)

■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು ಮತ್ತು ಅವುಗಳ ನಿರ್ಮಾಪಕರು :
(Famous Ancient Historical Inscriptions in India)
━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಾಚೀನ ಕರ್ನಾಟಕದ ಇತಿಹಾಸ
(Ancient Indian History)



— ಶಾಸನಗಳು ಒಂದು ರಾಷ್ಟ್ರದ, ರಾಜ್ಯದ ರಾಜಕೀಯ,  ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಮೂಲ್ಯ ಮಾಹಿತಿಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮ ನಾಡಿನ ರಾಜಕೀಯ ಇತಿಹಾಸವು ಮುಖ್ಯವಾಗಿ ಶಾಸನಗಳನ್ನು ಆಧರಿಸಿ ರಚನೆಯಾಗಿದೆ. ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳಿಗೆ ಸಂಬಂಧಪಟ್ಟಂತೆ ಹಲವು ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯವಾಗಿದೆ. ಆ ನಿಟ್ಟಿನಲ್ಲಿ 'ಸ್ಪರ್ಧಾಲೋಕ'ದಲ್ಲಿ ಕೆಲವು ಮಹತ್ವದ ಶಾಸನಗಳ ಕುರಿತು ವಿವರಗಳನ್ನು ನಿಮ್ಮ ಮುಂದೆ ಇಡಲು ಪ್ರಯತ್ನಿಸಲಾಗಿದೆ.


■. ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ಶಾಸನಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●. ಸಮುದ್ರಗುಪ್ತನ ಅಲಹಾಬಾದ್ ಶಾಸನದ ಕರ್ತೃ ••┈┈┈┈• ಹರಿಷೇಣ

●. ಸಮುದ್ರಗುಪ್ತನನ್ನು ನೂರು ಕದನಗಳ ಸಿಂಹ ಎಂದು ಸಂಭೋದಿಸಿದ ಶಾಸನ ••┈┈┈┈• ಅಲಹಾ ಬಾದ್ ಸ್ತಂಭ ಶಾಸನ

●. ಅಲಹಾಬಾದ್ ಸ್ತಂಭ ಶಾಸನ ಮೊದಲು ಇದ್ದ ಪ್ರದೇಶ ••┈┈┈┈• ಕೌಸಂಬಿ

●. ಅಲಹಾಬಾದ್ ಸ್ತಂಭ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ಸಾಗಿಸಿದ ತುಘಲಕ್ ದೊರೆ ••┈┈┈┈• ಫೀರೋಜ್ ಷಾ ತುಘಲಕ್

●. ದೆಹಲಿಯಲ್ಲಿರುವ ಗುಪ್ತರ ಕಾಲದ ಸ್ತಂಭ ಶಾಸನ ••┈┈┈┈• ಮೆಹ್ರೋಲಿ ಕಂಬ್ಬಿಣದ ಸ್ತಂಭ ಶಾಸನ

●. ಫಿರೋಜ್ ಷಾ ತುಘಲಕ್, ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು ••┈┈┈┈• ಮಿರತ್ ಶಾಸನ ಹಾಗೂ ತೋಪ್ರ ಶಾಸನ

●. ಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ ••┈┈┈┈• ಕಂದಾಹಾರ್

●. ಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ ••┈┈┈┈• ರುದ್ರದಾಮನ್

●. ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು ••┈┈┈┈• ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳು

●. ತೆಲುಗಿನ ಪ್ರಥಮ ಶಾಸನ ••┈┈┈┈• ಕಲಿಮಲ್ಲ ಶಾಸನ

●. ತಮಿಳಿನ ಪ್ರಥಮ ಶಾಸನ ••┈┈┈┈• ಮಾಂಗುಳಂ ಶಾಸನ

●. ಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ ••┈┈┈┈• ಅಶೋಕ

●. ಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ ••┈┈┈┈• ಬ್ರಾಹ್ಮಿ ಹಾಗೂ ಖರೋಷ್ಠಿ

●. ಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ ••┈┈┈┈•13 ನೇ ಶಿಲಾ ಶಾಸನ

●. ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು ••┈┈┈┈•1837 ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಜೇಮ್ಸ್ ಪ್ರಿನ್ಸಸ್

●. ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ ••┈┈┈┈• ಮಸ್ಕಿ ಶಾಸನ

●. ಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ ••┈┈┈┈• ಕೊಪ್ಪಳ

●. ಅಶೋಕನನ್ನು ರಾಜ ಅಶೋಕ , ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ ••┈┈┈┈• ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನ

●. ನಿಟ್ಟೂರಿನ ಶಾಸನದ ರಚನಾಕಾರ ••┈┈┈┈• ಉಪಗುಪ್ತ

●. ನಿಟ್ಟೂರಿನ ಶಾಸನದ ಲಿಪಿಕಾರ ••┈┈┈┈• ಚಡಪ

●. ಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ ••┈┈┈┈• 1950ರಲ್ಲಿ

●. ಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ ••┈┈┈┈• ದೇವನಾಗರಿ

●. ಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ ••┈┈┈┈• ಬಬ್ರುಶಾಸನ

●. ಮೊಟ್ಟ ಮೊದಲ ಭಾರಿಗೆ ಸಂಸ್ಕೃತದಲ್ಲಿ ಶಾಸನ ಬರೆಸಿದ ರಾಜ ••┈┈┈┈• ಶಕರ ಪ್ರಸಿದ್ದ ಅರಸ ರುದ್ರಧಮನ

●. ಅಮೋಘವರ್ಷನು ಕೊಲ್ಲಾಪುರದ ಮಹಾಲಕ್ಷ್ಮೀಗೆ ತನ್ನ ಎಡಗೈ ಬೆರಳನ್ನು ಕತ್ತರಿಸಿ ಸಮರ್ಪಿಸಿದ ಬಗ್ಗೆ ತಿಳಿಸುವ ಶಾಸನ ••┈┈┈┈• ಸಂಜಾನ್ ದತ್ತಿ ಶಾಸನ

●. ದಂತಿದುರ್ಗ ••┈┈┈┈• ಸಮನ್ ಗಡ್ ಹಾಗೂ ಎಲ್ಲೋರದ ಗುಹಾ ಶಾಸನ

●. ಒಂದನೇ ಕೃಷ್ಣ ••┈┈┈┈• ಭಾಂಡ್ಕ ಮತ್ತು ತಾಳೇಗಾಂ ಶಾಸನ

●. ಧೃವ ••┈┈┈┈• ಜೆಟ್ಟಾಯಿ ಶಾಸನ

●. ಅಮೋಘವರ್ಷ ••┈┈┈┈• ಸಂಜಾನ್ ತಾಮ್ರ ಶಾಸನ

●. ಬಾದಾಮಿ ಶಾಸನದ ಕರ್ತೃ ••┈┈┈┈• 1 ನೇ ಪುಲಿಕೇಶಿ

●. ಮಹಾಕೂಟ ಸ್ತಂಭ ಶಾಸನದ ಕರ್ತೃ ••┈┈┈┈• ಮಂಗಳೇಶ

●. ಮಹಾಕೂಟ ಸ್ತಂಭ ಶಾಸನ ••┈┈┈┈• ಬಾದಾಮಿಯ ಮಹಾಕೂಟೇಶ್ವರ ದೇವಲಾಯದಲ್ಲಿದೆ

●.ರವಿ ಕೀರ್ತೀ ••┈┈┈┈• ಐಹೋಳೆ ಶಾಸನ

●. ಐಹೋಳೆ ಶಾಸನ ••┈┈┈┈• ಮೇಗುತಿ ಜಿನ ದೇವಾಲಯದಲ್ಲಿ ಕೆತ್ತಲಾಗಿದೆ

●. ಚಂದ್ರವಳ್ಳಿ ಶಾಸನದ ಕರ್ತೃ ••┈┈┈┈• ಮಯೂರವರ್ಮ (ಚಿತ್ರದುರ್ಗ)

●. ಬ್ರಾಹ್ಮಿಲಿಪಿಯಲ್ಲಿರುವ ಪ್ರಪ್ರಥಮ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ.

●. ಕರ್ನಾಟಕದ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನ ••┈┈┈┈• ಚಂದ್ರವಳ್ಳಿ ಶಾಸನ

●. ಕನ್ನಡದ ಮೊಟ್ಟ ಮೊದಲ ಶಾಸನ ••┈┈┈┈• ಹಲ್ಮಿಡಿ ಶಾಸನ.

●. ಹಲ್ಮಿಡಿ ಶಾಸನ ಇಲ್ಲಿ ಇರುವುದು ••┈┈┈┈• ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮ

●. ಹಲ್ಮಿಡಿ ಶಾಸನದ ಕರ್ತೃ ••┈┈┈┈• ಕಾಕುಸ್ಥವರ್ಮ

●. ತಾಳಗುಂದ ಶಾಸನದ ಕರ್ತೃ ••┈┈┈┈• ಕವಿ ಕುಬ್ಜ

●. ತಾಳಗುಂದ ಶಾಸನವನ್ನು ಬರೆಯಿಸಿದವರು ••┈┈┈┈• ಶಾಂತಿ ವರ್ಮ (ಶಿವಮೊಗ್ಗ ದಲ್ಲಿದೆ)

●. ಮಹಿಪವೊಲು ತಾಮ್ರ ಶಾಸನದ ಕರ್ತೃ ••┈┈┈┈• ಶಿವಸ್ಕಂದ ವರ್ಮ .

●. ವಾಯಲೂರು ಸ್ತಂಭ ಶಾಸನದ ಕರ್ತೃ ••┈┈┈┈• ರಾಜ ಸಿಂಹ .

●. ಕರ್ನಾಟಕದ ಸಂಗೀತವನ್ನು ತಿಳಿಸುವ ಮೊಟ್ಟ ಮೊದಲ ಶಾಸನ ••┈┈┈┈• 1ನೇ ಮಹೇಂದ್ರ ಮರ್ಮನ್ ನ “ಕುಡಿಮಿಯಾ ಮಲೈ ಶಾಸನ .”

●. ನಾನಾ ಘಾಟ್ ಶಾಸನದ ಕರ್ತೃ ••┈┈┈┈• ನಾಗನೀಕ .

●. ಗುಹಾಂತರ ನಾಸಿಕ್ ಶಾಸನದ ಕರ್ತೃ ••┈┈┈┈• ಗೌತಮೀ ಬಾಲಾಶ್ರೀ

●. ವೆಳ್ವಕುಡಿ ತಾಮ್ರ ಶಾಸನದ ಕರ್ತೃ ••┈┈┈┈• ಪರಾಂತಕ ಚೋಳ.
...ಮುಂದುವರಿಯುತ್ತದೆ.

(courtesy :Raghavendra S)

Saturday 28 November 2015

■. ಪ್ರಮುಖ ಜೀವಸತ್ವಗಳು / ವಿಟಾಮಿನ್ ಗಳು ಹಾಗೂ ಅವುಗಳ ಕೊರತೆಯಿಂದ ಬರುವ ರೋಗಗಳು : (important vitamins and diseases)

■. ಪ್ರಮುಖ ಜೀವಸತ್ವಗಳು / ವಿಟಾಮಿನ್ ಗಳು ಹಾಗೂ ಅವುಗಳ ಕೊರತೆಯಿಂದ ಬರುವ ರೋಗಗಳು :
(important vitamins and diseases)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)


■. ಜೀವಸತ್ವ :—  ಜೀವಸತ್ವ A
■. ಕೊರತೆಯ ರೋಗ :— ನಿಕ್ಟಾಲೋಪಿಯಾ
■. ರೋಗ ಲಕ್ಷಣಗಳು :— ರಾತ್ರಿ ಕುರುಡುತನ


■. ಜೀವಸತ್ವ :—  ಜೀವಸತ್ವ B1
■. ಕೊರತೆಯ ರೋಗ :— ಬೆರಿ ಬೆರಿ
■. ರೋಗ ಲಕ್ಷಣಗಳು :— ನರಗಳ ಅವ್ಯವಸ್ಥೆ


■. ಜೀವಸತ್ವ :—  ಜೀವಸತ್ವ B5
■. ಕೊರತೆಯ ರೋಗ :— ಪೆಲ್ಲಾಗ್ರ ಡಿಮೆನ್ಸಿಯಾ, ಡರ್ಮಟೈಟಿಸ್,
■. ರೋಗ ಲಕ್ಷಣಗಳು :— ಅತಿಬೇಧಿ


■. ಜೀವಸತ್ವ :—  ಜೀವಸತ್ವ B12
■. ಕೊರತೆಯ ರೋಗ :— ಪರ್ನಿಸಿಯಸ್
■. ರೋಗ ಲಕ್ಷಣಗಳು :— ರಕ್ತಹೀನತೆ, RBC ಯ ಹಾನಿ


■. ಜೀವಸತ್ವ :—  ಜೀವಸತ್ವ C
■. ಕೊರತೆಯ ರೋಗ :— ಸ್ಕರ್ವಿ
■. ರೋಗ ಲಕ್ಷಣಗಳು :— ವಸಡುಗಳ ಸ್ರವಿಕೆ ಮತ್ತು ಹಲ್ಲುಗಳ ಸಡಲಿಕೆ


■. ಜೀವಸತ್ವ :—  ಜೀವಸತ್ವ D
■. ಕೊರತೆಯ ರೋಗ :— ರಿಕೆಟ್ಸ್
■. ರೋಗ ಲಕ್ಷಣಗಳು :— ಮೂಳೆಗಳ ನ್ಯೂನ ಕ್ಯಾಲ್ಸೀಕರಣ


■. ಜೀವಸತ್ವ :—  ಜೀವಸತ್ವ E
■. ಕೊರತೆಯ ರೋಗ :— ಬಂಜೆತನ
■. ರೋಗ ಲಕ್ಷಣಗಳು :— ಪ್ರಜೋತ್ಪಾದನೆಗೆ ಅಸಾಮಥ್ರ್ಯತೆ


■. ಜೀವಸತ್ವ :—  ಜೀವಸತ್ವ K
■. ಕೊರತೆಯ ರೋಗ :— ರಕ್ತಸ್ರಾವ
■. ರೋಗ ಲಕ್ಷಣಗಳು :— ರಕ್ತಹೀನವಾಗುವುದು

■. 2014ರ ಕೆಎಎಸ್ ಪರೀಕ್ಷಾ ಪ್ರಶ್ನೆ : (ಸಾಮಾನ್ಯ ಅಧ್ಯಯನ -ಪತ್ರಿಕೆ -I) ☀.ಪ್ರಾದೇಶಿಕ ಅಸಮತೋಲನಗಳು ಕಡಿಮೆಯಾಗುವುದಕ್ಕಾಗಿ ಕರ್ನಾಟಕ ಸರ್ಕಾರವು ಜಾರಿಗೆ ತಂದ ವಿಶೇಷ ಅಭಿವೃದ್ಧಿ ಯೋಜನೆ (SDP) ಯ ಪ್ರಧಾನ ಧ್ಯೇಯಗಳೇನು? ಎಸ್.ಡಿ.ಪಿ.ಯ ಅನುಷ್ಠಾನ ಕುರಿತು ವಿಮರ್ಶಾತ್ಮಕವಾಗಿ ಪರಿಶೀಲಿಸಿ.(12½) (What are the major objectives of Special Development Plan (SDP) introduced by Government of Karnataka to reduce regional Imbalances? Critically examine the implementation is SDP.)

■. 2014ರ  ಕೆಎಎಸ್ ಪರೀಕ್ಷಾ ಪ್ರಶ್ನೆ : (ಸಾಮಾನ್ಯ ಅಧ್ಯಯನ -ಪತ್ರಿಕೆ -I)
☀.ಪ್ರಾದೇಶಿಕ ಅಸಮತೋಲನಗಳು ಕಡಿಮೆಯಾಗುವುದಕ್ಕಾಗಿ ಕರ್ನಾಟಕ ಸರ್ಕಾರವು ಜಾರಿಗೆ ತಂದ ವಿಶೇಷ ಅಭಿವೃದ್ಧಿ ಯೋಜನೆ (SDP) ಯ ಪ್ರಧಾನ ಧ್ಯೇಯಗಳೇನು? ಎಸ್.ಡಿ.ಪಿ.ಯ ಅನುಷ್ಠಾನ ಕುರಿತು ವಿಮರ್ಶಾತ್ಮಕವಾಗಿ ಪರಿಶೀಲಿಸಿ.(12½)

(What are the major objectives of Special Development Plan (SDP) introduced by Government of Karnataka to reduce regional Imbalances? Critically examine the implementation is SDP.)
━━━━━━━━━━━━━━━━━━━━━━━━━━━━━━━━━━━━━━━━━━
 ★2014 ರ ಕೆಎಎಸ್ ಪರೀಕ್ಷೆ ಪ್ರಶ್ನೋತ್ತರ
(2014 KAS question paper solutions)


— ಪ್ರಾದೇಶಿಕ ಅಸಮಾನತೆಯು 1956 ರಲ್ಲಿ ರಾಜ್ಯದ ಪುನರ್ವಿಂಗಡನೆಯಾದ ಕಾಲದಿಂದಲೂ ಇದೆ. ರಾಜ್ಯಕ್ಕೆ ಹೊಸದಾಗಿ ಸೇರಲ್ಪಟ್ಟ ಅಂದಿನ ಹೈದ್ರಾಬಾದ್ ಮತ್ತು ಬಾಂಬೆ ರಾಜ್ಯದ ಪ್ರದೇಶಗಳು, ಹಳೆಯ ಮೈಸೂರು ರಾಜ್ಯದ ಪ್ರದೇಶಕ್ಕಿಂತ ಕಡಿಮೆ ಅಭಿವೃದ್ಧಿ ಹೊಂದಿದ್ದವು.ಈ ಎರಡೂ ಪ್ರದೇಶಗಳಿಂದ ರಾಜ್ಯದ ಉತ್ತರದ ಭಾಗವು ರಚಿಸಲ್ಪಟ್ಟಿದೆ. ಈ ಮೊದಲಿನ ಗಮನಾರ್ಹ ಪ್ರಯತ್ನಗಳಲ್ಲಿನ ಅನುಪಸ್ಥಿತಿಯಿಂದಾಗಿ ಅಭಿವೃದ್ಧಿಯ ಅಂತರವು ಕಾಲಕ್ರಮೇಣ ಹೆಚ್ಚುತ್ತಾ ಸಾಗಿ ಈ ಪ್ರದೇಶದ ಜನರನ್ನು ಅಭಿವೃದ್ಧಿಯ ಮುಖ್ಯವಾಹಿನಿಯಿಂದ ಅಮುಖ್ಯೀಕರಣ  (Marginalization) ಮತ್ತು ಹೊರಗಿಡುವಿಕೆ (Exclusion)ಗೆ ಕಾರಣವಾಯಿತು. ಇದೆಲ್ಲದರ ನಡುವೆ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಕರ್ನಾಟಕ ಸರ್ಕಾರದಿಂದ ರಚಿಸಲ್ಪಟ್ಟ ಉನ್ನತಾಧಿಕಾರ ಸಮಿತಿಯ ಶಾಸ್ತ್ರೀಯ ಅಧ್ಯಯನದಿಂದ ಕಂಡುಕೊಂಡ ಅಭಿವೃದ್ಧಿ ನಡುವಿನ ಅಂತರವನ್ನು ಮುಕ್ತಾಯ ಮಾಡುವ ಪ್ರಕ್ರಿಯೆಯನ್ನು ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ತೀವ್ರಗೊಳಿಸಿದೆ.

■. ವಿಶೇಷ ಅಭಿವೃದ್ಧಿ ಯೋಜನೆ (SDP) ಯ ಪ್ರಧಾನ ಧ್ಯೇಯಗಳು:
━━━━━━━━━━━━━━━━━━━━━━━━━━━━━━━━━━━━━━

— ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನೆಯನ್ನು ಅಧ್ಯಯಿಸಿ ಅವುಗಳ ನಿವಾರಣೆಗೆ ಕಾರ್ಯತಂತ್ರವನ್ನು ಶಿಫಾರಸ್ಸು ಮಾಡಲು ಪ್ರೊ ನಂಜುಂಡಪ್ಪ ಅವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ಒಂದು ಉನ್ನತ ಅಧಿಕಾರ ಸಮಿತಿಯನ್ನು ರಚಿಸಿತು. ವಿಶೇಷ ಅಭಿವೃದ್ಧಿ ಯೋಜನೆಯು ಡಾ.ನಂಜುಂಡಪ್ಪ ಸಮಿತಿಯ ಮುಖ್ಯ ಶಿಫಾರಸ್ಸಾಗಿರುತ್ತದೆ. ಈ ಸಮಿತಿಯು ರಾಜ್ಯದಲ್ಲಿ ಹಿಂದುಳಿದ 114 ತಾಲ್ಲೂಕುಗಳ ಮಟ್ಟವನ್ನು ಇತರ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳ ಮಟ್ಟಕ್ಕೇರಿಸಲು ಬೇಕಾದ ಸಂಪನ್ಮೂಲಗಳನ್ನು ಅಂದಾಜಿಸಿದೆ.

●. ಒಟ್ಟಾರೆ ರಾಜ್ಯದಲ್ಲಿನ ಸಮತೋಲಿತ ಅಭಿವೃದ್ಧಿಯನ್ನು ಸಾಧಿಸುವ ದಿಸೆಯಲ್ಲಿ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳ ಮಟ್ಟಕ್ಕೆ ಹಿಂದುಳಿದ 114 ತಾಲೂಕುಗಳನ್ನು ತರುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುವುದು.

●. ವಿವಿಧ ವಲಯ ಮತ್ತು ಪ್ರದೇಶಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುವ ಮುಖಾಂತರ ಹಿಂದುಳಿದ ತಾಲ್ಲೂಕುಗಳನ್ನು ಅಭಿವೃದ್ಧಿ ಪಡಿಸುವುದು.

●. ಹಿಂದುಳಿದ ತಾಲ್ಲೂಕುಗಳಲ್ಲಿ ಗುರುತಿಸಲಾದ ವಲಯಗಳಲ್ಲಿ ಬಾಕಿ ಇರುವ ಮೂಲ ಸೌಲಭ್ಯಗಳನ್ನು ಒದಗಿಸುವುದು.

●. ಹಿಂದುಳಿದ ತಾಲ್ಲೂಕುಗಳಿಗೆ ಅಗತ್ಯ ವಲಯಗಳಲ್ಲಿ ಅವಶ್ಯವಾದ ಸಂಘ-ಸಂಸ್ಥೆಗಳ ಸ್ಥಾಪನೆ ಮೂಲಕ ಅಸಮತೋಲನಮನ್ನು ನಿವಾರಿಸುವುದು.

●. ಹಿಂದುಳಿದ ತಾಲ್ಲೂಕುಗಳಲ್ಲಿ ಸ್ಥಳೀಯ ಅಗತ್ಯತೆಗಳನ್ನು ಗುಣವಾಗಿ ಕಾರ್ಯಕ್ರಮವನ್ನು ರೂಪಿಸುವ ಮೂಲಕ ಸಂಬಂಧಿಸಿದ ವಲಯಗಳಲ್ಲಿ ಸೇವೆಗಳ ಪ್ರಮಾಣವನ್ನು ರಾಜ್ಯದ ಸರಾಸರಿ ಮಟ್ಟಕ್ಕೆ ತರುವುದು.

●. ಈ ಕೆಳಗಿನ ಮೂರು ಆದ್ಯತೆಗಳನ್ನು ಒಳಗೊಂಡಂತೆ ಕ್ರಿಯಾ ಯೋಜನೆಯನ್ನು ತಯಾರಿಸಲು ಯೋಜನಾ ಪ್ರಾಧಿಕಾರಕ್ಕೆ ಸಹಕಾರ ನೀಡುವುದು. ಮೊದಲನೇಯ ಆದ್ಯತೆಯೆಂದರೆ ಮೊದಲ ಎರಡು ವರ್ಷಗಳಲ್ಲಿ ಅತ್ಯಂತ ಹಿಂದುಳಿದ ತಾಲೂಕುಗಳನ್ನು ಅಭಿವೃದ್ಧಿಗೊಳಿಸುವುದು;


■. ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನ :
━━━━━━━━━━━━━━━━━━━━━━━━━━
— ವಿಶೇಷ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ತಾಲ್ಲೂಕುಗಳು ಸಲ್ಲಿಸಿದ ಬೇಡಿಕೆಯನ್ನಾಧರಿಸಿ ರೂಪಿಸಲಾಗುತ್ತದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳ ಪ್ರಗತಿಯನ್ನು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕೆ.ಡಿ.ಪಿ. ಸಭೆಗಳಲ್ಲಿ ಪರಿಶೀಲನೆ ಮಾಡಲಾಗುತ್ತದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೊಂಡ ಕಾರ್ಯಕ್ರಮಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ಮಾಹಿತಿಯನ್ನು ಆನ್ ಲೈನ್‍ನಲ್ಲಿ ದೊರಕಿಸುವ ಸಲುವಾಗಿ ಮಾಹಿತಿ ನಿರ್ವಹಣಾ ವ್ಯವಸ್ಥೆ (ಎಂಐಎಸ್) ಯನ್ನು ಅಭಿವೃದ್ಧಿ ಪಡಿಸಲಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯ ಅನುಷ್ಠಾನ ಮತ್ತು ಉಸ್ತುವಾರಿಗಾಗಿ ಯೋಜನಾ ಇಲಾಖೆಯಲ್ಲಿ ಒಂದು ವಿಶೇಷ ಕೋಶವನ್ನು ರಚಿಸಲಾಗಿದೆ.

●. ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ಪ್ರದೇಶಗಳ ಮಟ್ಟಕ್ಕೆ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲು ಹಲವಾರು ಯೋಜನೆಗಳನ್ನು ರೂಪಿಸಿಕೊಂಡಿದ್ದಾಗ್ಯೂ ಮಾನವ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಸೂಚಿಗಳಲ್ಲಿ ಅಂತರಗಳು ಇನ್ನೂ ಹಾಗೆಯೇ ಉಳಿದಿವೆ.

●. ಅಭಿವೃದ್ಧಿ ಪಥದಲ್ಲಿ ನೆಲೆಯೂರಿರುವ ಕಂಟಕಪ್ರಾಯಗಳು ಇನ್ನೂ ಕೂಡಾ ಬಲಶಾಲಿಯಾಗಿವೆ.

●. ತ್ವರಿತಗತಿಯ, ಅಧಿಕ ವ್ಯಾಪ್ತಿತ್ವ ಹಾಗೂ ಸುಸ್ಥಿರ ಅಭಿವೃದ್ಧಿ - ಇವುಗಳು ಬೆಳವಣಿಗೆಯ ಪ್ರಮುಖ ಅಂಶವಾಗಿದ್ದು ಈ ನಿಟ್ಟಿನಲ್ಲಿ ಅಭಿವೃದ್ಧಿಯಲ್ಲಿನ ಅಂತರಗಳನ್ನು ಕಡಿಮೆ ಮಾಡಲು ಹಾಗೂ ರಾಜ್ಯದ ಎಲ್ಲಾ ಪ್ರದೇಶದ ಜನರಿಗೆ ಅಭಿವೃದ್ಧಿಯ ಪ್ರಯೋಜನಗಳು ಸಮನಾಗಿ ತಲಪುವಂತೆ ಮಾಡುವ ತೀವ್ರ ಯತ್ನಗಳ ಅವಶ್ಯಕತೆಯಿರುತ್ತದೆ.

●. ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳೊಂದಿಗೆ ಶಿಕ್ಷಣ, ಆರೋಗ್ಯ, ಪೌಷ್ಟಿಕಆಹಾರ, ಕೌಶಲ್ಯ ಅಭಿವೃದ್ದಿ ಮುಂತಾದ ಚಟುವಟಿಕೆಗಳನ್ನೂ ಕೇಂದ್ರೀಕರಿಸುವ ಅವಶ್ಯಕತೆ ಇರುತ್ತದೆ. ಆದುದರಿಂದ ಪ್ರದೇಶದ ಸವಾಲುಗಳನ್ನು ಸ್ಪಂದಿಸಿ ಬೇಡಿಕೆಗಳಿಗನುಸಾರ ಯೋಜನೆಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಿಸಬೇಕಾಗುತ್ತದೆ.

Friday 27 November 2015

■. ವಿವಿಧ ಪ್ರಾಣಿಗಳು ಮತ್ತು ಅವುಗಳ ಚಲನಾಂಗಗಳು : (The movement limbs of different animals)

■. ವಿವಿಧ ಪ್ರಾಣಿಗಳು ಮತ್ತು ಅವುಗಳ ಚಲನಾಂಗಗಳು  :
(The movement limbs of different animals)
━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ವಿಜ್ಞಾನ
(General Science)


●.ಪ್ರಾಣಿಗಳು                    ●.ಚಲನಾಂಗಗಳು
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

●.ಅಮೀಬಾ ••┈┈┈┈┈┈•• ಮಿಥ್ಯಪಾದಿ

●.ಪ್ಯಾರಾಮೀಸಿಯಂ ••┈┈┈┈┈┈•• ಸಿಲಿಯ (ರೋಮಿಕ)

●.ಯೂಗ್ಲಿನಾ ••┈┈┈┈┈┈•• ಕಶಾಂಗ

●.ಎರೆಹುಳು ••┈┈┈┈┈┈•• ದೇಹ ಸೀಟ

●.ನಕ್ಷತ್ರ ಮೀನು ••┈┈┈┈┈┈•• ನಳಿಕಾ ಪಾದಿ

●.ಮೀನು ••┈┈┈┈┈┈•• ಕಿವಿರು

●.ಪಕ್ಷಿಗಳು ••┈┈┈┈┈┈•• ರೆಕ್ಕೆಗಳು

●.ಬಾವಲಿ ••┈┈┈┈┈┈•• ಪಟೇಜಿಯಂ

■.ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ■.ಬ್ರಿಟಿಷರ ಕೈಯಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದು 68 ವರುಷಗಳಾದರೂ, ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ರಾರಾಜಿಸುತ್ತಿದ್ದರೂ ಸಹ ಭಾರತ ಇನ್ನೂ ಯಾಕೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿಯೇ ಉಳಿದುಕೊಂಡಿದೆ. ನಿಮ್ಮ ಪ್ರಕಾರ ಇದರ ಹಿಂದಿರುವ ಪ್ರಬಲ ಕಾರಣಗಳು ಯಾವವು? (The Main reasons why India has not yet developed and still is in the list of Developing Countries)

■.ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
■.ಬ್ರಿಟಿಷರ ಕೈಯಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದು 68 ವರುಷಗಳಾದರೂ, ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ರಾರಾಜಿಸುತ್ತಿದ್ದರೂ ಸಹ ಭಾರತ ಇನ್ನೂ ಯಾಕೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿಯೇ ಉಳಿದುಕೊಂಡಿದೆ. ನಿಮ್ಮ ಪ್ರಕಾರ ಇದರ ಹಿಂದಿರುವ ಪ್ರಬಲ ಕಾರಣಗಳು ಯಾವವು?
(The Main reasons why India has not yet developed and still is in the list of Developing Countries)
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)


— 1939-1954ರ ವರೆಗೆ ನಡೆದ ಎರಡನೇ ಮಹಾಯುದ್ಧದಲ್ಲಿ ಜಪಾನ್, ಜರ್ಮನಿ ದೇಶಗಳು ನಿರ್ನಾಮವಾಗಿ ಹೋಗಿದ್ದವು. ಆದರೆ ಈ ಎರಡು ದೇಶಗಳೀಗ ಅಭಿವೃದ್ಧಿ ಹೊಂದಿ ನಾವು ಯಾವುದಕ್ಕೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿವೆ. 1947ರಲ್ಲಿ ಭಾರತ ಬ್ರಿಟಿಷರ ಕೈಯಿಂದ ಮುಕ್ತವಾಗಿ ಸ್ವತಂತ್ರಗೊಂಡಿತು. ನಮ್ಮಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂತು.  ಸ್ವಾತಂತ್ರ್ಯ ಸಿಕ್ಕಿ 68 ವರುಷಗಳಾದರೂ ಭಾರತ ಇನ್ನೂ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿದೆ. ಜಪಾನ್ ಮತ್ತು ಜರ್ಮನಿ ಈ ಎರಡೂ ದೇಶಗಳು ಮಹಾಯುದ್ಧ ಪರಿಣಾಮವನ್ನೆದುರಿಸಿ ಥಟ್ಟನೆ ಮೈಕೊಡವಿ ನಿಂತವು. ಆದರೆ ಭಾರತ ಇನ್ನೂ ಯಾಕೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿಯೇ ಉಳಿದುಕೊಂಡಿದೆ ಎಂಬುದಕ್ಕೆ ಇಲ್ಲಿ ಪ್ರಮುಖವಾಗಿ 10 ಕಾರಣಗಳನ್ನು ನೀಡಬಹುದು


●.ಭ್ರಷ್ಟಾಚಾರ :
••┈┈┈┈┈┈┈┈••
ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂದು ನಾವು ಹೆಮ್ಮೆ ಪಡುತ್ತೇವೆ. ಆದರೆ ನಮ್ಮನ್ನಾಳುವ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಲ್ಲಿ ನೋಡಿದರೂ ಲಂಚ ಬೇಡುವ ಕೈಗಳು ಕಾಣುತ್ತಿವೆ. ನಮ್ಮ ಕೆಲಸ ಬೇಗನೆ ಆಗಬೇಕೆಂದರೆ ಲಂಚ ನೀಡಲೇ ಬೇಕು, ಒಂದಷ್ಟು ಲಂಚ ಕೊಡುವುದರಲ್ಲಿ ತಪ್ಪೇನಿಲ್ಲ ಬಿಡಿ ಎಂದು ಹೇಳಿ ನಾವು ಲಂಚ ನೀಡಲು ತಯಾರಾಗುತ್ತೇವೆ. ಲಂಚ ಕೊಡುವ ಕೈಗಳು ಇರುವವರೆಗೆ ಲಂಚ ಪಡೆವ ಕೈಗಳು ಇದ್ದೇ ಇರುತ್ತವೆ. ಭ್ರಷ್ಟಾಚಾರ ನಿಯಂತ್ರಣ ಮಾಡುವಲ್ಲಿ ನಾವು ತೋರುವ ಉದಾಸೀನತೆ ಅಕ್ಷಮ್ಯ ಅಪರಾಧ.


●.ನ್ಯಾಯಾಂಗ ವ್ಯವಸ್ಥೆ
••┈┈┈┈┈┈┈┈┈┈┈┈••
ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾವು ಭರವಸೆ ಕಳೆದುಕೊಳ್ಳುತ್ತಿದ್ದೇವೆ. ಕಾನೂನು ಬರೀ ಕಾಗದದ ಹಾಳೆಯಲ್ಲಷ್ಟೇ ಪ್ರಬಲವಾಗಿದೆ. ಶಕ್ತಿಶಾಲಿಯಾದವನು ಯಾವುದೇ ತಪ್ಪು ಮಾಡಿದರೂ ಅವನು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾನೆ. ಅತ್ಯಾಚಾರಗಳು ಜಾಸ್ತಿಯಾಗುತ್ತಿದ್ದರೂ  ಅತ್ಯಾಚಾರಿಗಳನ್ನು ಸದೆ ಬಡಿಯಲು ಯಾವುದೇ ಪ್ರಬಲ ಕಾನೂನು ಇಲ್ಲ. ಉಗ್ರರನ್ನು ಬಂಧಿಸಿದರೆ ಆತನಿಗೆ ರಾಜೋಪಚಾರ ನೀಡಿ ಸಂರಕ್ಷಿಸಲಾಗುತ್ತದೆ. ರಾಜಕಾರಣಿಗಳ, ಹಣದ ಬಲವೊಂದಿದ್ದರೆ ಎಂಥಾ ದೊಡ್ಡ ತಪ್ಪು ಮಾಡಿದರೂ ಆತ ಸಲೀಸಾಗಿ ಹೊರಗೆ ಬರಬಹುದು.  ಹೀಗಿರುವಾಗ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾಮಾನ್ಯನಿಗೆ ನಂಬಿಕೆ ಬರುವುದು ಕನಸಿನ ಮಾತು.


●.ಜಾತಿ ಭೇದ, ಕೋಮುವಾದ
••┈┈┈┈┈┈┈┈┈┈┈┈┈┈••
ನಾವೆಲ್ಲರೂ ಒಂದೇ ಜಾತಿ ಒಂದೇ ಮತ ಒಂದೇ ಕುಲ ಎನ್ನುತ್ತೇವೆ. ಆದರೆ ನಿಜವಾಗಿಯೂ ಭಾರತದ ಸ್ಥಿತಿ ಹೀಗಿಲ್ಲ. ಪ್ರತಿಯೊಬ್ಬನಿಗೂ ಧರ್ಮ ಇದೆ, ಆ ಧರ್ಮದಲ್ಲಿ ಹಲವಾರು ಜಾತಿ, ಉಪಜಾತಿಗಳಿವೆ. ಮನುಷ್ಯನ ಭಾಷೆ, ಜಾತಿ, ತ್ವಚೆಯ ಬಣ್ಣವನ್ನು ನೋಡಿ ಭೇದ ಮಾಡಲಾಗುತ್ತದೆ. ಜಾತಿಗಳಲ್ಲಿ ಮೇಲು ಜಾತಿ ಕೀಳು ಜಾತಿ ಎಂಬ ವಿಂಗಡಣೆ ಬೇರೆ. ದೇವಾಲಯಗಳಲ್ಲಿಯೂ ಜಾತಿ ಬೇಧ, ಪಂಕ್ತಿ ಬೇಧ!! ಕೋಮವಾದದ ಬೆಂಕಿ ಅದೆಷ್ಟೋ ಜನರನ್ನು ಬಲಿ ತೆಗೆದುಕೊಂಡಿದೆ. ವೈವಿಧ್ಯತೆಯಲ್ಲಿ ಏಕತೆ ಎಂದು ಹೇಳುತ್ತಿದ್ದರೂ ಜಾತಿ ಬೇಧದ ಗೆರೆ ಇನ್ನೂ ಅಳಿಸಿ ಹೋಗಿಲ್ಲ. ಜಾತಿ ನೋಡಿ ಮಣೆ ಹಾಕುವ ಸಂಕುಚಿತ ಬುದ್ಧಿಯನ್ನು ಬಿಟ್ಟು ನಾವೆಲ್ಲರೂ ಮನುಷ್ಯ ಜಾತಿ, ಮಾನವೀಯತೆಯೇ ನಮ್ಮ ಧರ್ಮ ಎಂದು ಹೇಳುವುದು ಕೇವಲ ಆಡಿಕೆಯ ಮಾತಾಗಿದೆ.


●.ಜವಾಬ್ದಾರಿ ಮರೆತ ಮಾಧ್ಯಮಗಳು
••┈┈┈┈┈┈┈┈┈┈┈┈┈┈┈┈┈┈┈••
ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಮಾಧ್ಯಮಗಳು ಗುರುತಿಸಲ್ಪಡುತ್ತಿವೆ. ಆದರೆ ಇಂದು ಮಾಧ್ಯಮಗಳು ಮಾಡುತ್ತಿರುವುದಾದರೂ ಏನು? ಟಿಆರ್‌ಪಿ ಎಂಬ ಮಾಪಕದ ಹಿಂದೆ ಬಿದ್ದು, ಇದ್ದ ಬದ್ದ ಸುದ್ದಿಗಳೆಲ್ಲವೂ ಸ್ಫೋಟಕ ಸುದ್ದಿಗಳಾಗುತ್ತಿವೆ. ಕೆಲವೊಂದು ಮಾಧ್ಯಮಗಳು ಮೌಢ್ಯವನ್ನು ಬಿತ್ತರಿಸುವ ಕಾರ್ಯಕ್ರಮಗಳಿಗೆ ಇನ್ನು ಕೆಲವು ಮಾಧ್ಯಮಗಳು ಸಿನಿಮಾ, ಕ್ರಿಕೆಟ್, ಸೆಲೆಬ್ರಿಟಿಗಳ ಆಗು ಹೋಗುಗಳಿಗೆ ಮಾತ್ರ ಹೆಚ್ಚಿನ ಮಹತ್ವ ನೀಡುತ್ತವೆ. ಇದು ಒಂದು ಸುದ್ದಿನಾ? ಎಂದು ಜನ ಕೇಳಿದರೆ, ಇಂಥಾ ಸುದ್ದಿಗಳನ್ನೇ ಜನರು ಇಷ್ಟಪಡುತ್ತಾರೆ ಎಂಬ ಉತ್ತರವನ್ನು ಮಾಧ್ಯಮದವರು ನೀಡುತ್ತಾರೆ. ಅದರ ಮಧ್ಯೆಯೇ ಕಾಸಿಗಾಗಿ ಸುದ್ದಿ ಮಾಡಿದ ಮಾಧ್ಯಮಗಳನ್ನೂ ನಾವು ನೋಡಿದ್ದೇವೆ. ಇಲ್ಲಿ ಯಾರನ್ನು ನಂಬುವುದು? ಯಾರನ್ನು ಬಿಡುವುದು? ಎಲ್ಲವೂ ಬ್ರೇಕ್ ನಂತರ…


●.ಬಡವ-ಶ್ರೀಮಂತರ ನಡುವಿನ ಅಂತರ / ಆರ್ಥಿಕ ಅಸಮಾನತೆ :
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••
ಭಾರತದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 6- 8 ರವರೆಗೆ ಇದೆ. ಆದರೂ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಜಾಸ್ತಿ ಇದೆ.  ನಮ್ಮ ದೇಶದಲ್ಲಿ ಪ್ರತೀ 30 ನಿಮಿಷಕ್ಕೆ ಒಬ್ಬ ಆತ್ಮಹತ್ಯೆ ಮಾಡುತ್ತಿದ್ದಾನೆ. ಧನಿಕರು  ಧನಿಕರ ಪಟ್ಟಿಯಲ್ಲಿ ಮತ್ತೆ ಮತ್ತೆ ಅದೇ ಸ್ಥಾನವನ್ನು ಉಳಿಸಿಕೊಳ್ಳುತ್ತಾ ಬೀಗುತ್ತಿದ್ದರೆ, ಇತ್ತ ಕೃಷಿ ಮಾಡುವ ಕೃಷಿಕ ಸಾಲದ ಹೊರೆ ತಾಳಲಾರದೆ ನೇಣಿಗೆ ಶರಣಾಗುತ್ತಿದ್ದಾನೆ.


●.ರಾಜಕೀಯ ಕೆಸರೆರೆಚಾಟ, ರಾಜ್ಯಗಳಲ್ಲಿನ ಅಭದ್ರತೆ
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೊಬ್ಬ ನಾಯಕನನ್ನು ಆರಿಸಿ ಕಳುಹಿಸುತ್ತೇವೆ. ಅವರ ಮೇಲೆ ಪ್ರತಿಯೊಬ್ಬ ಪ್ರಜೆಯೂ ಭರವಸೆ ಇಟ್ಟುಕೊಂಡಿರುತ್ತಾನೆ. ಆದರೆ ಗದ್ದುಗೆಗೇರಿದ ಮೇಲೆ ನಾಯಕನಿಗೆ ಜನರ ಬಗ್ಗೆ ಮರೆತೇ ಹೋಗುತ್ತದೆ. ಐದು ವರುಷಕ್ಕೊಮ್ಮೆ ಚುನಾವಣೆ ಬಂದಾಗ ಅದೇ ರಾಜಕಾರಣಿಗಳು ಮೊಸಳೆ ಕಣ್ಣೀರು ಸುರಿಸಿ, ನಮ್ಮ ಮಾತುಗಳಿಗೆ ಕಿವಿಯಾಗುತ್ತಾರೆ.  ಗೆದ್ದ ಮೇಲೆ ಅವರು ಅಧಿಕಾರಕ್ಕಾಗಿ ಕಿತ್ತಾಡುತ್ತಾ ಹಣ ಗಳಿಸುವಲ್ಲಿ ತಲ್ಲೀನರಾಗಿ ಬಿಡುತ್ತಾರೆ . ನಮ್ಮನ್ನಾಳುವ ಜನರೇ ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು, ಪರಸ್ಪರ ಕೆಸರೆರೆಚಾಟ ಮಾಡುತ್ತಿದ್ದರೆ, ಅಂಥವರಿಂದ ದೇಶದ ಅಭಿವೃದ್ಧಿಯನ್ನು ಬಯಸಲು ಸಾಧ್ಯವೆ? ದೇಶದ ಪ್ರಗತಿಗಾಗಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವ ಸಂದರ್ಭ ಬಂದಾಗ ಸಂವಿಧಾನದ ಬಗ್ಗೆಯೂ ಕಿಂಚಿತ್ ಗೌರವ ತೋರಿಸದ ರಾಜಕಾರಣಿಗಳು ಸಂಸತ್ ಅಧಿವೇಶನಗಳಲ್ಲಿ ಮಾತು ಆಲಿಸಿದ್ದಕ್ಕಿಂತ ಗದ್ದಲವೆಬ್ಬಿಸಿ ಅಧಿವೇಶನಕ್ಕೆ ಧಕ್ಕೆ ತಂದಿರುವುದೇ ಹೆಚ್ಚು!.


●.ಈಶಾನ್ಯ ರಾಜ್ಯ ಮತ್ತು ಜಮ್ಮು ಕಾಶ್ಮೀರದಲ್ಲಿನ ಸಂಘರ್ಷ
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••
ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್,  ತ್ರಿಪುರ, ಸಿಕ್ಕಿ ಮೊದಲಾದ ಈಶಾನ್ಯ ರಾಜ್ಯಗಳು, ಜಮ್ಮು ಕಾಶ್ಮೀರದಲ್ಲಿ ರಾಜಕೀಯ ಸಂಘರ್ಷಗಳು, ಉಗ್ರರ ದಾಳಿಗಳು ನಡೆಯುತ್ತಲೇ ಇರುತ್ತವೆ. ಉಗ್ರರ ಭೀತಿಯಿಂದಿರುವ ಈ ರಾಜ್ಯಗಳಲ್ಲಿ ಅಭದ್ರತೆ ಕಾಡುತ್ತಲೇ ಇರುತ್ತದೆ.


●.ಪರಿಸರ ಮಾಲಿನ್ಯ
••┈┈┈┈┈┈┈┈┈┈••
ಭಾರತ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿರುವಾಗಲೇ ಇತ್ತ, ನಮ್ಮ  ಪ್ರಕೃತಿ ಸಂಪತ್ತು ನಾಶವಾಗುತ್ತಿದೆ. ಕೈಗಾರಿಕೋದ್ಯಮದಲ್ಲಿ ಪ್ರಗತಿ ಸಾಧಿಸುತ್ತಿದ್ದಂತೆ ಜಲ ಮಾಲಿನ್ಯ, ವಾಯು ಮಾಲಿನ್ಯ ಹೆಚ್ಚುತ್ತಿದ್ದೆ. ನಗರೀಕರಣದಿಂದಾಗಿ ಕೃಷಿ ಭೂಮಿ ನಾಶವಾಗುತ್ತಿದೆ. ನಮ್ಮ ದೇಶದ ದೊಡ್ಡ ಸಮಸ್ಯೆಯೆಂದರೆ ಕಸದ ಸಮಸ್ಯೆ. ಜನ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮಾಲಿನ್ಯವೂ ವಿಸ್ತರಿಸುತ್ತಿದೆ. ಅದನ್ನು  ನಿಯಂತ್ರಿಸುವುದು ಪ್ರತಿಯೊಬ್ಬ ಭಾರತೀಯನ ಹೊಣೆ ಎಂದು ಗೊತ್ತಿದ್ದರೂ, ನಾವ್ಯಾಕೆ ಮಾಡಬೇಕು? ಎಂಬ ಉಡಾಫೆಯಿಂದಲೇ ನಾವು ಬದುಕು ಸಾಗಿಸುತ್ತೇವೆ. ಸ್ವಚ್ಛ ಭಾರತ ಅಭಿಯಾನ ಆರಂಭವಾದಾಗ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಸಾಮಾಜಿಕ ತಾಣಗಳಲ್ಲಿ ಫೋಟೋಗಳ ರಾರಾಜಿಸಿದವು. ಆದರೆ ಅದೇ ಉತ್ಸಾಹ ನಮ್ಮಲ್ಲಿದೆಯೇ? ನಮ್ಮ ಮನೆಯ ಸುತ್ತಲೂ ಸ್ವಚ್ಛವಾಗಿಡುವ ನಾವು ಸಾರ್ವಜನಿಕ ಸ್ಥಳಗಳಲ್ಲಿಯೂ ಸ್ವಚ್ಛತೆಯನ್ನು ಕಾಪಾಡಬೇಕು ಎಂಬುದನ್ನು ಮರೆಯುತ್ತೇವೆ. ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ, ಕಸ ಬಿಸಾಡುತ್ತಾ ಬಿಂದಾಸ್ ಆಗಿ ಇರ್ತೀವಿ. ಕಸ ವಿಲೇವಾರಿ ಕೆಲಸ ಪೌರ ಕಾರ್ಮಿಕರದ್ದು ನಮಗ್ಯಾಕೆ ಅದರ ಉಸಾಬರಿ ಎಂಬ ಮನೋಭಾವವೇ ಇದಕ್ಕೆ ಕಾರಣ.


●.ನೆರೆಹೊರೆ ರಾಷ್ಟ್ರಗಳ ಕಿರಿಕಿರಿ, ಆತಂಕ
••┈┈┈┈┈┈┈┈┈┈┈┈┈┈┈┈┈┈┈••
ನಮ್ಮ ನೆರೆ ರಾಜ್ಯಗಳಾದ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದಿಂದ ಆಗ್ಗಾಗ್ಗೆ ಉಗ್ರರು ನುಸುಳುತ್ತಲೇ ಇರುತ್ತಾರೆ. ಪಾಕಿಸ್ತಾನವಂತೂ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಇರುತ್ತದೆ. ಈ ಎಲ್ಲ ರಾಷ್ಟ್ರಗಳಿಂದ ಭಾರತ ಬಲಿಷ್ಠ ಆಗಿದ್ದರೂ ಭಯೋತ್ಪಾದನೆಯ ಆತಂಕದ ಕರಿಛಾಯೆ ಯಾವತ್ತೂ ನಮ್ಮ ದೇಶದ ಮೇಲೆ ಇದ್ದೇ ಇರುತ್ತದೆ.


●.ಸಾಕ್ಷರತೆಯ ಕೊರತೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆ
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••
ಭಾರತದಲ್ಲಿ ಜನಸಂಖ್ಯೆ ಹೆಚ್ಚುತ್ತಿದ್ದಂತೆಯೇ ಮನುಷ್ಯನ ಬದುಕಿಗೆ ಅಗತ್ಯವಾದ ವಸ್ತುಗಳ ಪೂರೈಕೆಯೂ ಕಷ್ಟವಾಗುತ್ತಿದೆ. ಒಂದೆಡೆ ಬಡತನ, ಸಾಕ್ಷರತೆಯ ಕೊರತೆ ನಮ್ಮನ್ನು ಕಾಡುವಾಗ ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಾಶವಾಗುತ್ತಿದೆ. ದುಡಿಯಲು ಭೂಮಿಯಿಲ್ಲ, ಕಲಿತವನಿಗೆ ಉದ್ಯೋಗವಿಲ್ಲ. ಇಲ್ಲಿಂದ ಅನ್ಯ ರಾಷ್ಟ್ರಗಳಿಗೆ ಪ್ರತಿಭಾ ಪಲಾಯನವಾಗುತ್ತಿದೆ. ನಿರುದ್ಯೋಗದ ಸಮಸ್ಯೆ ದಿನೇ ದಿನೇ ವರ್ಧಿಸುತ್ತಿವೆ. ಕೃಷಿ, ಗುಡಿ ಕೈಗಾರಿಕೆ, ಜಾನಪದ ಕಲೆಗಳು ಮೂಲೆ ಗುಂಪಾಗುತ್ತಿವೆ. ಬದಲಾಗುವ ಕಾಲದೊಂದಿಗೆ ಭಾರತೀಯರು ಬದಲಾಗುತ್ತಿದ್ದಾರೆ. ನಮ್ಮ ನಾಡಿನ ಸೊಗಡನ್ನು ಉಳಿಸಿಕೊಂಡು ಅಭಿವೃದ್ಧಿಯ ದಾರಿಯನ್ನು ತುಳಿಯುವ ಜನತೆ ನಮ್ಮಲ್ಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಹೆಚ್ಚುತ್ತಿದ್ದಂತೆ ನಮ್ಮ ದೇಶದ ಸಂಸ್ಕೃತಿ ಆಚಾರ ವಿಚಾರಗಳಲ್ಲಿ ಬರುವ ಬದಲು ಇತಿಹಾಸದ ಪುಟಗಳಲ್ಲಿಯೇ ಉಳಿದುಕೊಂಡಿದೆ.

— ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗುವುದು ವಿನಹ ಅದಕ್ಕೆ ಕೊನೆ ಎಂಬುದೇ ಇಲ್ಲ. ಎಲ್ಲಿತನಕ ಈ ಮೇಲೆ ವಿವರಿಸಲಾದ ಸಮಸ್ಯೆಗಳಿಗೆ ಪ್ರಜೆಗಳು ಪರಿಹಾರ  ಕಂಡುಕೊಳ್ಳುವುದಿಲ್ಲವೋ ಅಲ್ಲಿತನಕ ಭಾರತ ಈಗ ಇದ್ದ ಜಾಗತಿಕ ಸ್ಥಾನದಿಂದ ಕಿಂಚಿತ್ತೂ ಕದಲುವುದಕ್ಕೆ ಸಾಧ್ಯವಿಲ್ಲ. ಜನತೆ ಜಾಗೃತರಾಗಿ, ನಮಗ್ಯಾಕೆ ಅದರ ಉಸಾಬರಿ ಎಂಬ ಮನೋಭಾವ ತೊರೆದು ತಮ್ಮಿಂದ ಸ್ವ ಬದಲಾವಣೆ ಮಾಡಿಕೊಂಡು ತಮ್ಮ ತಮ್ಮ ಹಂತಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರ್ವತೋಮುಖ ಬೆಳವಣಿಗೆಯಲ್ಲಿ ಸರ್ವರೂ ಭಾಗಿಯಾದಲ್ಲಿ ಭಾರತ ನಂ.1 ರಾಷ್ಟ್ರಗಳ ಪಟ್ಟಿಯಲ್ಲಿ ನಿಲ್ಲುವುದರಲ್ಲಿ ಸಂದೇಹವೇ ಇಲ್ಲ.

(Courtesy :Karnataka News Bureau)

■. ಅಂತರರಾಷ್ಟ್ರೀಯ ಪ್ರಮುಖ ಟ್ರೋಫಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕ್ರೀಡೆಗಳು : (International Trophies and Associated Games)

■. ಅಂತರರಾಷ್ಟ್ರೀಯ ಪ್ರಮುಖ ಟ್ರೋಫಿಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕ್ರೀಡೆಗಳು :
(International Trophies and Associated Games)
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


■. ಟ್ರೋಫಿಗಳು                        ■. ಸಂಬಂಧಿಸಿದ ಕ್ರೀಡೆಗಳು
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

●.ಆಶಸ್ ••┈┈┈┈┈•• ಕ್ರಿಕೆಟ್ (ಆಸ್ಟ್ರೇಲಿಯಾ-ಇಂಗ್ಲೆಂಡ್).

●.ಕೆನಡಾ ಕಪ್ ••┈┈┈┈┈•• ಗಾಲ್ಫ್ (ವಿಶ್ವ ಚಾಂಪಿಯನ್ಶಿಪ್).

●.ಕಾರ್ಬಿಲ್ಲೊನ್ (Corbillon) ಕಪ್ ••┈┈┈┈┈•• ವಿಶ್ವ ಟೇಬಲ್ ಟೆನಿಸ್ (ಮಹಿಳೆಯರು).

●.ಡೇವಿಸ್ ಕಪ್ ••┈┈┈┈┈•• ಲಾನ್ ಟೆನಿಸ್.

●.ಡರ್ಬಿ(Derby) ••┈┈┈┈┈•• ಕುದುರೆ ರೇಸ್ (ಇಂಗ್ಲೆಂಡ್).

●.ಮೆರ್ಡೆಕಾ(Merdeka) ಕಪ್ ••┈┈┈┈┈•• ಫುಟ್ಬಾಲ್ (ಏಷ್ಯನ್- ಮಲೇಷ್ಯಾದಲ್ಲಿ ಆಡಿದರು).

●.ಸ್ವೆಥ್ಲಿಂಗ್ (Swaythling) ಕಪ್ ••┈┈┈┈┈•• ವಿಶ್ವ ಟೇಬಲ್ ಟೆನಿಸ್ (ಪುರುಷರು).

●.ಥಾಮಸ್ ಕಪ್ ವಿಶ್ವ ••┈┈┈┈┈•• ಬ್ಯಾಡ್ಮಿಂಟನ್.

●.ಟ್ಯುಂಕು ಅಬ್ದುಲ್ ರೆಹಮಾನ್ ಕಪ್ ••┈┈┈┈┈•• ಬ್ಯಾಡ್ಮಿಂಟನ್ (ಏಷ್ಯನ್).

●.ಉಬೆರ್ ಕಪ್ ••┈┈┈┈┈•• ವಿಶ್ವ ಬ್ಯಾಡ್ಮಿಂಟನ್ (ಮಹಿಳೆಯರು).

●.ವಿಂಬಲ್ಡನ್ ಟ್ರೋಫಿ ••┈┈┈┈┈•• ಲಾನ್ ಟೆನಿಸ್ (ಇಂಗ್ಲೆಂಡ್).

●.ಜೂಲ್ಸ್ ರಿಮೆಟ್ ಟ್ರೋಫಿ ••┈┈┈┈┈•• ವಿಶ್ವ ಫುಟ್ಬಾಲ್ (ನಂತರ ಫಿಫಾ ಕರೆಯಲಾಗುತ್ತದೆ)

Thursday 26 November 2015

●.ಭಾರತದ ಪ್ರಸಿದ್ಧ ಕೈಗಾರಿಕಾ ಸ್ಥಳಗಳು : (Famous Industrial Places in India)

●.ಭಾರತದ ಪ್ರಸಿದ್ಧ ಕೈಗಾರಿಕಾ ಸ್ಥಳಗಳು :
(Famous Industrial Places in India)
━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಜ್ಞಾನ
(General Knowledge)

★ಭಾರತದ ಆರ್ಥಿಕ ವ್ಯವಸ್ಥೆ
(Indian Economic Development)


●.ಸ್ಥಳಗಳು                         ●.ಉತ್ಪಾದನಾ ವಸ್ತುಗಳು.
••┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈••

■. ಅಹಮದಾಬಾದ್ ••┈┈┈┈┈┈┈┈•• ಹತ್ತಿಯ ಉದ್ಯಮ

■. ಆಲಿಗಢ ••┈┈┈┈┈┈┈┈•• ಕೀಲಿಗಳು

■. ಅಲವೈ (ಕೇರಳ) ••┈┈┈┈┈┈┈┈•• ರೇರ್ ಅರ್ಥ್ ಫಾಕ್ಟರಿ, ಅಲ್ಯೂಮಿನಿಯಂ

■. ಅಂಬತ್ತೂರ್ (ಚೆನೈ) ••┈┈┈┈┈┈┈┈•• ಸೈಕಲ್, ಎನ್ಫೀಲ್ಡ್ ಮೋಟಾರ್ ಸೈಕಲ್ಸ್

■. ಅಂಬರನಾಥ್ ••┈┈┈┈┈┈┈┈•• ಯಂತ್ರೋಪಕರಣಗಳ ಮಾದರಿ

■. ಅಮೃತಸರ (ಪಂಜಾಬ್) ••┈┈┈┈┈┈┈┈•• ಮುದ್ರಣ ಯಂತ್ರಗಳು

■. ಆನಂದ್  ••┈┈┈┈┈┈┈┈•• ಅಮುಲ್ ಬೆಣ್ಣೆ

■. ಅಂಕ್ಲೇಶ್ವರ (ಗುಜರಾತ್) ••┈┈┈┈┈┈┈┈•• ತೈಲ

■. ಅವಡಿ (ಚೆನೈ) ••┈┈┈┈┈┈┈┈•• ಟ್ಯಾಂಕ್ ಕಾರ್ಖಾನೆ

■. ಬೆಂಗಳೂರು ••┈┈┈┈┈┈┈┈•• ವಿಮಾನ

■. ಭಿಲಾಯಿ ••┈┈┈┈┈┈┈┈•• ಉಕ್ಕು ಸ್ಥಾವರ (ಬೊಕಾರೊ)

■. ಭದ್ರಾವತಿ ••┈┈┈┈┈┈┈┈•• ಕಬ್ಬಿಣ ಮತ್ತು ಉಕ್ಕು

■. ಭೋಪಾಲ್ ••┈┈┈┈┈┈┈┈•• ಹೆವಿ ಎಲೆಕ್ಟ್ರಿಕಲ್ಸ್

■. ಬೊಕಾರೊ ••┈┈┈┈┈┈┈┈•• ಉಕ್ಕು ಸ್ಥಾವರ

■. ಚಿತ್ತರಂಜನ್ ••┈┈┈┈┈┈┈┈•• ಲೋಕೋಮೋಟಿವ್

■. ಕೊಚ್ಚಿನ್ ••┈┈┈┈┈┈┈┈•• ಹಡಗು ನಿರ್ಮಾಣ

■. ದುರ್ಗಾಪುರ್ ••┈┈┈┈┈┈┈┈•• ಉಕ್ಕು ಸ್ಥಾವರ

■. ಕೊಯಿಮತ್ತೂರು  ••┈┈┈┈┈┈┈┈•• ಜವಳಿ

■. ದಿಂಡಿಗಲ್  ••┈┈┈┈┈┈┈┈••  ಕೀಲಿಗಳು, ಲಾಕರ್ಸ್

■. ಎನ್ನೋರ್ ••┈┈┈┈┈┈┈┈•• ಥರ್ಮಲ್ ಪವರ್

■. ಗುಂಟೂರು ••┈┈┈┈┈┈┈┈•• ಹತ್ತಿ

■. ಹಲ್ದಿಯಾ ••┈┈┈┈┈┈┈┈•• ತೈಲ ಸಂಸ್ಕರಣೆ

■. ಝಾರಿಯ ••┈┈┈┈┈┈┈┈•• ಕಲ್ಲಿದ್ದಲು ಗಣಿ

■. ಕಾಗಿಥಾಪುರಂ (ತಮಿಳುನಾಡು) ••┈┈┈┈┈┈┈┈•• ಕಾಗದ

■. ಕಲ್ಪಕ್ಕಮ್ ••┈┈┈┈┈┈┈┈•• ಪರಮಾಣು ಶಕ್ತಿ

■. ಕಾನ್ಪುರ್ ••┈┈┈┈┈┈┈┈•• ಚರ್ಮ

■. ಕೊಳ್ಳೇಗಾಲ (ಕರ್ನಾಟಕ) ••┈┈┈┈┈┈┈┈•• ರೇಷ್ಮೆ

■. ಕೋಲಾರ (ಕರ್ನಾಟಕ ) ••┈┈┈┈┈┈┈┈•• ಚಿನ್ನದ ಗಣಿ,

■. ಲಕ್ನೋ ••┈┈┈┈┈┈┈┈•• ಸಕ್ಕರೆ

■. ಲುಧಿಯಾನ ••┈┈┈┈┈┈┈┈•• ಒಳ ಉಡುಪುಗಳು.

■. ಮೊರದಾಬಾದ್ ••┈┈┈┈┈┈┈┈•• ಕಂಚು ಪಾತ್ರೆಗಳು

■. ಮೈಸೂರು ••┈┈┈┈┈┈┈┈•• ರೇಷ್ಮೆ

■. ನೊಂಬಾ ಹೈ ••┈┈┈┈┈┈┈┈•• ತೈಲ

■. ನಂಗಲ್ ••┈┈┈┈┈┈┈┈•• ರಸಗೊಬ್ಬರಗಳು

■. ನಂದಂಬಕ್ಕಮ್ (ಚೆನೈ) ••┈┈┈┈┈┈┈┈•• ಶಸ್ತ್ರಚಿಕಿತ್ಸಕ ಸಲಕರಣೆಗಳು

■. ನೇಪಾನಗರ ••┈┈┈┈┈┈┈┈•• ವೃತ್ತಪತ್ರಿಕೆ ಕಾಗದ

■. ನೈವೇಲಿ ••┈┈┈┈┈┈┈┈•• (ಕಂದು ಕಲ್ಲಿದ್ದಲು) ಲಿಗ್ನೈಟ್

■. ಊಟಿ (ನೀಲಗಿರಿ), (ತಮಿಳುನಾಡು) ••┈┈┈┈┈┈┈┈•• ಚಲನಚಿತ್ರ ತಯಾರಿಕೆ.

■. ಪೆರಂಬೂರ್ (ಚೆನೈ) ••┈┈┈┈┈┈┈┈•• ಇಂಟಿಗ್ರಲ್ ಕೋಚ್ ಫ್ಯಾಕ್ಟರಿ

■. ಪಿಂಜೋರ್ (ಹರಿಯಾಣ) ••┈┈┈┈┈┈┈┈•• ಯಾಂತ್ರಿಕ ಸಲಕರಣೆಗಳು

■. ಪಿಂಪ್ರಿ (ಪೂನಾ) ••┈┈┈┈┈┈┈┈•• ಪೆನ್ಸಿಲಿನ್ ಫ್ಯಾಕ್ಟರಿ

■. ರಾಣಾ ಪ್ರತಾಪ್ ಸಾಗರ್ ••┈┈┈┈┈┈┈┈•• ಪರಮಾಣು ವಿದ್ಯುತ್ ಸ್ಥಾವರ

■. ರಾಣಿಗಂಜ್ ••┈┈┈┈┈┈┈┈•• ಕಲ್ಲಿದ್ದಲು ಗಣಿಗಾರಿಕೆ

■. ರೆನುಕೂಟ್ ••┈┈┈┈┈┈┈┈•• ಅಲ್ಯೂಮಿನಿಯಂ

■. ರೂಪ್ನಾ ರೈನಪುರ್  ••┈┈┈┈┈┈┈┈•• ಕೇಬಲ್ಸ್

■. ಸಿಂದ್ರಿ ••┈┈┈┈┈┈┈┈•• ರಾಸಾಯನಿಕ ಗೊಬ್ಬರ

■. ಸಿಂಗಭೂಮ್ ••┈┈┈┈┈┈┈┈•• ತಾಮ್ರ, ಕಬ್ಬಿಣ

■. ಸಿರ್ಪೂರ್  ••┈┈┈┈┈┈┈┈•• ಕಾಗದ

■. ಶ್ರೀಹರಿಕೋಟ ••┈┈┈┈┈┈┈┈•• ಉಪಗ್ರಹ ಕೇಂದ್ರ

■. ಸೂರತ್ ••┈┈┈┈┈┈┈┈•• ಗೋಲ್ಡ್ ಕಸೂತಿ

■. ತಾರಾಪುರ  ••┈┈┈┈┈┈┈┈•• ಪರಮಾಣುಶಕ್ತಿ

■. ತಿರುಚಿರಾಪಳ್ಳಿ ••┈┈┈┈┈┈┈┈•• ಸಿಗಾರ್

■. ತಿರುವೆರುಂಬುರ್ ••┈┈┈┈┈┈┈┈•• ಹೆವಿ ಎಲೆಕ್ಟ್ರಿಕಲ್ಸ್

■. ಟೂಟಿಕೋರಿನ್ ••┈┈┈┈┈┈┈┈•• ಥರ್ಮಲ್, ಮುತ್ತು, ಮೀನುಗಾರಿಕೆ

■. ತಿತಾಘರ್ ••┈┈┈┈┈┈┈┈•• ಕಾಗದ ಕಾರ್ಖಾನೆ

■. ವಂದಾಲೂರ್ ••┈┈┈┈┈┈┈┈•• ಆಟೋಮೊಬೈಲ್

■. ವಿಶಾಖಪಟ್ಟಣಂ ••┈┈┈┈┈┈┈┈•• ಹಡಗು , ಜಲಾಂತರ್ಗಾಮಿ

■. ವಡೋದರ ••┈┈┈┈┈┈┈┈•• ನೈಲಾನ್ ನಾರು, ನೂಲು

■. ಉದಯ್ಪುರ ••┈┈┈┈┈┈┈┈•• ಝಿಂಕ್ ಪ್ರಾಜೆಕ್ಟ್

■. ಉಧಾನಾ ••┈┈┈┈┈┈┈┈•• ರೇಯಾನ್

■. ಉರ್ಕುಂಟಾ ••┈┈┈┈┈┈┈┈•• ಸಿಮೆಂಟ್

■. ಉತ್ತಪಾರಾ ••┈┈┈┈┈┈┈┈•• ಅಂಬಾಸಿಡರ್ ಕಾರುಗಳು

■. ವರ್ಲಿ ••┈┈┈┈┈┈┈┈•• ಚಿಕ್ಕ ಮಕ್ಕಳ ಆಹಾರ

■. ಝೈನಾ ಕೋಟ್ ••┈┈┈┈┈┈┈┈•• HMT ಗಡಿಯಾರ ತಯಾರಿಕಾ ಕಾರ್ಖಾನೆ

●.ಜಗತ್ತಿನ ಪ್ರಮುಖ ಕ್ರೀಡೆಗಳು, ಆಟಗಳು ಹಾಗು ಅವುಗಳಲ್ಲಿ ಬಳಸುವ ಕ್ರೀಡಾ ಶಬ್ದಗಳು: (Soprts and the Using Terms )

●.ಜಗತ್ತಿನ ಪ್ರಮುಖ ಕ್ರೀಡೆಗಳು, ಆಟಗಳು ಹಾಗು ಅವುಗಳಲ್ಲಿ ಬಳಸುವ ಕ್ರೀಡಾ ಶಬ್ದಗಳು:
(Soprts and the Using Terms )
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


1. ಬ್ಯಾಡ್ಮಿಂಟನ್ (Badminton)
•┈┈┈┈┈┈┈┈┈┈┈┈┈┈┈┈┈┈┈┈•
» ಡ್ಯೂಸ್,
» ಡ್ರಾಪ್,
» ಸ್ಮ್ಯಾಶ್,
» ಲೆಟ್,
» ಲವ್.


2. ಬಿಲಿಯರ್ಡ್ಸ್ (Billiards)
•┈┈┈┈┈┈┈┈┈┈┈┈┈┈┈┈•
» ಕ್ಯೂ,
» ಜಿಗ್ಗರ್,
» ಪಾಟ್,
» ಸ್ಕ್ರಾಚ್,
» ಕ್ಯಾನನ್.


3. ಬಾಕ್ಸಿಂಗ್ (Boxing)
•┈┈┈┈┈┈┈┈┈┈┈┈┈┈•
» ಜಬ್,
» ಹುಕ್,
» ಕಿಡ್ನಿ ಪಂಚ್,
» ರಾಬಿಟ್ ಪಂಚ್,
» ಸ್ಲ್ಯಾಮ್,
» ಅಪ್ಪರ್ಕಟ್,
» ನಾಕ್ಔಟ್.


4. ಚೆಸ್ (Chess)
•┈┈┈┈┈┈┈┈┈┈┈•
» ಬಿಷಪ್ ಗ್ಯಾಂಬಿಟ್,
» ಚೆಕ್ ಮೆಟ್,
» ಸ್ಟೇಲ್ ಮೆಟ್.


5. ಕ್ರಿಕೆಟ್ (Cricket)
•┈┈┈┈┈┈┈┈┈┈┈┈•
» ಎಲ್ಬಿಡಬ್ಲ್ಯೂ,
» ಫಾಲೋ ಆನ್,
» ಸ್ಟಂಪ್ಡ್,
» ಬೈ,
» ಲೆಗ್ ಬೈ,
» ಗೂಗ್ಲಿ,
» ಹ್ಯಾಟ್ರಿಕ್,
» ಗಲ್ಲಿ,
» ಡ್ರೈವ್,
» ಡಕ್,
» ನೋ ಬಾಲ್,
» ಕವರ್ ಪಾಯಿಂಟ್,
» ಸಿಲ್ಲಿ ಪಾಯಿಂಟ್,
» ಪಿಚ್,
» ಲೆಗ್ ಬ್ರೇಕ್,
» ಕವರ್ ಪಾಯಿಂಟ್,
» ಹಿಟ್-ವಿಕೆಟ್ ,
» ಲೇಟ್-ಕಟ್,
» ಸ್ಲಿಪ್,
» ಸ್ಟೋನ್ ವಾಲ್ಲಿಂಗ್,
» ಚಿನಮಾನ್,
» ಲೆಗ್ ಸ್ಪಿನ್ನರ್,
» ದಿ ಆಶಸ್,
» ಬಾಡಿಲೈನ್ ಬೌಲಿಂಗ್,
» ಬಂಪರ್ ಬೌಲಿಂಗ್,
» ಚಕ್ಕರ್.


6. ಫುಟ್ಬಾಲ್ (Football)
•┈┈┈┈┈┈┈┈┈┈┈┈┈┈•
» ಆಫ್ ಸೈಡ್,
» ಡ್ರಿಬ್ಬಲ್,
» ಥ್ರೋವಿನ್,
» ಟಚ್ ಡೌನ್,
» ಸ್ಟಾಪರ್,
» ಪೆನಾಲ್ಟಿ,
» ಫೌಲ್,
» ಡ್ರಾಪ್ ಕಿಕ್.


7. ಗಾಲ್ಫ್ (Golf)
•┈┈┈┈┈┈┈┈┈┈•
» ಬಾಗೈ,
» ಹೋಲ್,
» ಟೈ,
» ಸ್ಟೈಮಿಕ್,
» ಕ್ಯಾಡಲ್


8. ಹಾಕಿ (Hockey)
•┈┈┈┈┈┈┈┈┈┈┈┈•
» ಸಡನ್ ಡೆತ್,
» ಟೈ-ಬ್ರೇಕರ್,
» ಬುಲ್ಲಿ,
» ಪೆನಾಲ್ಟಿ-ಕಾರ್ನರ್,
» ಸ್ಟಿಚ್, ಸ್ಕೂಪ್,
» ಸಿರ್ಲ್,
» ಸ್ಟ್ರಿಕ್ಕಿಂಗ್,
» ರೋಲ್ ಇನ್,
» ಕ್ಯಾರೀಡ್,
» ಅಂಡರ್ ಕಟ್ಟಿಂಗ್.


9. ರೈಫಲ್-ಶೂಟಿಂಗ್ (Rifle-Shooting)
•┈┈┈┈┈┈┈┈┈┈┈┈┈┈┈┈┈┈┈┈┈┈┈┈•
» ಬುಲ್ಲಿಸ್ ಐ,
» ಸೆಂಟರ್ ಆಪ್ ಟಾರ್ಗೆಟ್


10.ಲಾನ್ ಟೆನಿಸ್ (Lawn Tennis)
•┈┈┈┈┈┈┈┈┈┈┈┈┈┈┈┈┈┈┈┈•
» ವೊಲೈ,
» ಸ್ಮ್ಯಾಶ್ ಡ್ಯೂಸ್,
» ಸರ್ವಿಸ್,
» ಲೆಟ್  ಗ್ರ್ಯಾಂಡ್ ಸ್ಲ್ಯಾಮ್,
» ಡಬಲ್ ಫಾಲ್ಟ್,
» ಬ್ಯಾಕ್ ಹ್ಯಾಂಡ್ ಡ್ರೈವ್.


11. ವ್ರೆಸ್ಲಿಂಗ್ (Wrestling)
•┈┈┈┈┈┈┈┈┈┈┈┈┈┈┈┈•
» ಹಾಫ್ ನೆಲ್ಸನ್,
» ಹೀವ್


12. ವಾಲಿಬಾಲ್ (Volleyball)
•┈┈┈┈┈┈┈┈┈┈┈┈┈┈┈┈┈•
» ಡ್ಯೂಸ್,
» ಸ್ಪೈಕರ್,
» ಬೂಸ್ಟರ್


13. ಅಥ್ಲೆಟಿಕ್ಸ್ (Athletics)
•┈┈┈┈┈┈┈┈┈┈┈┈┈┈┈•
 » ಡೆಡ್ ಹೀಟ್,
 » ಸ್ಟೀಪಲ್ ಚೇಸ್,
 » ಫೋಟೋ ಫಿನಿಷ್.

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ■. 'ಆಸಿಯಾನ್‌ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. : (ASEAN Summit-The International Association)

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
■. 'ಆಸಿಯಾನ್‌ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. :
(ASEAN Summit-The International Association)  :
━━━━━━━━━━━━━━━━━━━━━━━━━━━━━━━━━━━━━━━━━━
★ಅಂತರರಾಷ್ಟ್ರೀಯ ಸಂಘಟನೆಗಳು.
(International Associations)

★ಅಂತರರಾಷ್ಟ್ರೀಯ ಅರ್ಥಶಾಸ್ತ್ರ
(International Economics)


●. ಆಸಿಯಾನ್ ಎಂಬುದು ಆಗ್ನೇಯ ಏಷ್ಯಾ ಭೂ ಭಾಗದ ಹತ್ತು ದೇಶಗಳ ಭೌಗೋಳಿಕ-ರಾಜಕೀಯ-ಆರ್ಥಿಕ ಸಂಘಟನೆ. ಇಂಡೋನೇಷ್ಯಾ, ಮಲೇಶಿಯಾ, ಫಿಲಿಪ್ಪೀನ್ಸ್, ಸಿಂಗಾಪುರ ಹಾಗೂ ಥಾಯ್ಲೆಂಡ್ ರಾಷ್ಟ್ರಗಳು ಸ್ಥಾಪಿಸಿದವು. ಆ ನಂತರ ಸದಸ್ಯತ್ವವನ್ನು ಬ್ರನೈ, ಮಯನ್ಮಾರ್, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಾಮ್ ದೇಶಗಳಿಗೆ ವಿಸ್ತರಿಸಲಾಯಿತು.


●. ಸ್ಥಾಪನೆ :
•┈┈┈┈┈┈•
✧. ಈ ಸಂಘಟನೆಯನ್ನು 1987ರಲ್ಲಿ ಸ್ಥಾಪಿಸಲಾಯಿತು.


●. ಸಂಘಟನೆಯಲ್ಲಿ ಇರುವ ರಾಷ್ಟ್ರಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧.ಹತ್ತು ರಾಷ್ಟ್ರಗಳ ಆಸಿಯಾನ್ ಕೂಟದಲ್ಲಿ ಬ್ರೂನಿ, ಕಾಂಬೋಡಿಯ, ಇಂಡೋನೇಶ್ಯ, ಲಾವೊಸ್, ಮಲೇಶ್ಯ, ಮ್ಯಾನ್ಮಾರ್, ಫಿಲಿಪ್ಪೀನ್ಸ್, ಸಿಂಗಾಪುರ,ಥಾಯ್ಲೆಂಡ್ ಹಾಗೂ ವಿಯೆಟ್ನಾಂ ಒಳಗೊಂಡಿವೆ.


●. ಕೇಂದ್ರ ಕಚೇರಿ :
•┈┈┈┈┈┈┈┈┈┈┈•
✧.ಜಕಾರ್ತ(ಇಂಡೋನೇಷ್ಯಾ) ದೇಶದಲ್ಲಿದೆ.


●. ಈ ಸಂಘಟನೆಯ ಉದ್ದೇಶ ಹಾಗೂ ವೈಶಿಷ್ಟ್ಯಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧.ಜಾಗತಿಕ ಜನಸಂಖ್ಯೆಯ ಶೇ 50ಕ್ಕಿಂತ ಹೆಚ್ಚಿನ ಪ್ರಮಾಣದ ಮಾರುಕಟ್ಟೆ ಪಾಲು ಹೊಂದಿರುವ ಈ ಸಮೂಹದ ಭೂಪ್ರದೇಶದಲ್ಲಿ ಶಾಂತಿ, ಸ್ಥಿರತೆಯ ರಕ್ಷಣೆ, ತನ್ನ ಸದಸ್ಯರಲ್ಲಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಸಾಧನೆ, ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸದಸ್ಯ ರಾಷ್ಟ್ರಗಳಿಗೆ ಅವಕಾಶಗಳನ್ನು ಕಲ್ಪಿಸುವುದು ಈ ಸಂಘಟನೆಯ ಗುರಿ.
✧.ಭಾರತ ಈ ಸಂಘಟನೆಯ ಸದಸ್ಯ ದೇಶ ಅಲ್ಲ. ಆದರೆ ಈ ಹತ್ತು ದೇಶಗಳ ಜೊತೆಗೆ ಪ್ಲಸ್ ಒನ್ ಸಂಬಂಧವನ್ನು ಭಾರತಕ್ಕೆ ಆಸಿಯಾನ್ ನೀಡಿದೆ.


●. ಇತ್ತೀಚಿನ ಶೃಂಗಸಭೆಗಳು:
•┈┈┈┈┈┈┈┈┈┈┈┈┈┈┈┈•
✧. 24 Dec, 2012 ನವದೆಹಲಿಯಲ್ಲಿ (ಆಸಿಯಾನ್) ಮತ್ತು ಭಾರತ ಶೃಂಗಸಭೆ ನಡೆಯಿತು.
✧. 2013ರಲ್ಲಿ ಬ್ರುನೈ ದರುಸ್ಸಲಾಂನಲ್ಲಿ (ಆಸಿಯಾನ್) ಮತ್ತು ಭಾರತ ಶೃಂಗಸಭೆ ನಡೆಯಿತು.
✧. ನವೆಂಬರ್ 12 ಹಾಗೂ 13 2014ರಲ್ಲಿ 12ನೇ ಆಸಿಯಾನ್-ಭಾರತ ಶೃಂಗಸಭೆಯು ಮ್ಯಾನ್ಮಾರ್‌ನ ನೆ ಪೈ ತಾವ್‌ನಲ್ಲಿ ನಡೆಯಿತು.
✧. ಆರ್ಥಿಕ ಅಭಿವೃದ್ಧಿ ಹಾಗೂ ಶಾಂತಿಯುತ ಜಗತ್ತಿನ ತನ್ನ ಮಹತ್ವಾಕಾಂಕ್ಷೆಗಳಿಗೆ ಪೂರಕ ಜಾಗತಿಕ ವಾತಾವರಣವನ್ನು ಭಾರತ ಕೋರಿತು.
✧. ಭಾರತದ ‘ಪೂರ್ವಾಭಿಮುಖ’ ನೀತಿಯ ಭಾಗ ವಾಗಿ ಆಗ್ನೇಯ ಏಶ್ಯ ರಾಷ್ಟ್ರಗಳ ಒಕ್ಕೂಟ (ಆಸಿಯಾನ್)ದ ಪ್ರತಿಯೊಂದು ದೇಶದ ಜೊತೆಗೂ ದ್ವಿಪಕ್ಷೀಯ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಆಸಿಯಾನ್ ಮುಖಂಡ ರೊಂದಿಗೆ ಚರ್ಚಿಸಲಾಯಿತು.
✧. ಭಾರತದಲ್ಲಿ ಬಂಡವಾಳ ಹೂಡಿ ‘ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಅವರು ಆಸಿಯಾನ್ ರಾಷ್ಟ್ರಗಳಿಗೆ ಕರೆ ನೀಡಿದರು.

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ●. ಜಿ–20 ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. (G-20 Summit-The International Association) :

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
●. ಜಿ–20 ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ.
(G-20 Summit-The International Association)  :
━━━━━━━━━━━━━━━━━━━━━━━━━━━━━━━━━━━━━━━━━━
ಅಂತರರಾಷ್ಟ್ರೀಯ ಸಂಘಟನೆಗಳು.
(International Associations)

ಅಂತರರಾಷ್ಟ್ರೀಯ ಅರ್ಥಶಾಸ್ತ್ರ
(International Economics)


●. ಜಿ-20 (G-20) ಸಮೂಹ ಎಂದರೆ :
•┈┈┈┈┈┈┈┈┈┈┈┈┈┈┈┈┈┈┈┈┈┈•
✧.ಜಿ-20ಯು ಅರ್ಜಂಟೀನ, ಆಸ್ಟ್ರೇಲಿಯ, ಬ್ರೆಝಿಲ್, ಕೆನಡ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಶ್ಯ, ಇಟಲಿ, ಜಪಾನ್, ದಕ್ಷಿಣ ಕೊರಿಯ, ಮೆಕ್ಸಿಕೊ, ರಶ್ಯ, ಸೌದಿ ಅರೇಬಿಯ, ದಕ್ಷಿಣ ಆಫ್ರಿಕ, ಟರ್ಕಿ, ಬ್ರಿಟನ್ ಹಾಗೂ ಅಮೆರಿಕ ಸೇರಿದಂತೆ 19 ಪ್ರತ್ಯೇಕ ರಾಷ್ಟ್ರಗಳು ಮತ್ತು ಐರೋಪ್ಯ ಒಕ್ಕೂಟ(ಇಯು) ಸೇರಿ ರಚಿತವಾದ ಒಂದು ಸಮೂಹ.


●. ಸ್ಥಾಪನೆ :
•┈┈┈┈┈┈•
✧. ಜಿ-20 ಸಮೂಹವನ್ನು 2008ರಲ್ಲಿ ಅಮೆರಿಕದಲ್ಲಿ ಪ್ರಾರಂಭಿಸಲಾಯಿತು.


■.ಜಿ-20 ಸಮೂಹದ ಇತ್ತೀಚಿನ ಶೃಂಗಸಭೆಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈•
✧.2008ರಲ್ಲಿ ಅಮೇರಿಕದ ವಾಷಿಂಗ್‌ಟನ್ ನಲ್ಲಿ ಪ್ರಥಮ ಶೃಂಗಸಭೆಯು ನಡೆಯಿತು.
✧.2014 ನವೆಂಬರ್ 15 ಹಾಗೂ 16ರಂದು ಆಸ್ಟ್ರೇಲಿಯದ ಬ್ರಿಸ್ಬೇನ್‌ನಲ್ಲಿ ಜಿ-20 ಶೃಂಗಸಭೆಯು ನಡೆಯಿತು.
✧.ಇತ್ತೀಚೆಗೆ ನ.15, 2015 ರಂದು ಟರ್ಕಿಯ ಅಂತಾಲ್ಯಾ ನಗರದಲ್ಲಿ 9ನೆ ಜಿ–20 ರಾಷ್ಟ್ರಗಳ ಶೃಂಗಸಭೆಯು ನಡೆಯಿತು.
✧.ಯುರೋಪ್ ರಾಷ್ಟ್ರಗಳ ವಲಸೆ ಸಮಸ್ಯೆ ಸೇರಿದಂತೆ ಭಯೋತ್ಪಾದನೆ, ಹವಾಮಾನ ವೈಪರೀತ್ಯ, ಕಪ್ಪು ಹಣ ವಾಪಸಿಗೆ ಜಾಗತಿಕ ಸಹಕಾರ ಇವೇ ಮೊದಲಾದ ವಿಷಯಗಳನ್ನು ಚರ್ಚಿಸಲಾಯಿತು. .
✧.ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ , ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಮತ್ತು ಚೀನಾ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.
✧.2015ರ ಡಿಸೆಂಬರ್‌ನಲ್ಲಿ ಜಿ-20 ಅಧ್ಯಕ್ಷತೆಯನ್ನು ಚೀನಾ ವಹಿಸಿಕೊಳ್ಳುತ್ತಿರುವುದು.
ಇಲ್ಲಿಯವರೆಗೆ 6 ಜಿ-20 ಶೃಂಗಸಭೆಗಳು ನಡೆದಿವೆ.

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ●.'ಬ್ರಿಕ್ಸ್ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. (BRICS Summit-The International Association) :

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
●.'ಬ್ರಿಕ್ಸ್ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ.
(BRICS Summit-The International Association)  :
━━━━━━━━━━━━━━━━━━━━━━━━━━━━━━━━━━━━━━━━━━
ಅಂತರರಾಷ್ಟ್ರೀಯ ಸಂಘಟನೆಗಳು.
(International Associations)

ಅಂತರರಾಷ್ಟ್ರೀಯ ಅರ್ಥಶಾಸ್ತ್ರ
(International Economics)


■.ಬ್ರಿಕ್ಸ್ (BRICS) ಎಂದರೆ :
•┈┈┈┈┈┈┈┈┈┈┈•
✧. ‘ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನು ಒಳಗೊಂಡ `ಬ್ರಿಕ್ಸ್ ಗುಂಪು,  ಈ ಹೊಸ ಆರ್ಥಿಕ ವ್ಯವಸ್ಥೆಯ ರೂಪದಲ್ಲಿ ವಿಶ್ವದ ಗಮನ ಸೆಳೆಯುತ್ತಿದೆ.ವಿಶ್ವದ ಅತಿದೊಡ್ಡ ಹಣಕಾಸು ಸೇವಾ ಸಂಸ್ಥೆ ಗೋಲ್ಡ್‌ಮನ್ಸ್ ಸ್ಯಾಕ್ಸ್ ಸಿದ್ಧಪಡಿಸಿರುವ ವರದಿಯಲ್ಲಿ,  ಈ ಸಮೂಹವು ಜಾಗತಿಕ ಮಹತ್ವ ಪಡೆಯುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

✧. ವಿಶ್ವದ ಐದು ಪ್ರಮುಖ ಅಭಿವೃದ್ಧಿ ಹೊಂದುತ್ತಿರುವ (ಬ್ರಿಕ್ಸ್) ದೇಶಗಳ ಪ್ರಮುಖ ನಗರಗಳು ಹಾಗೂ ಸ್ಥಳೀಯ ಸರ್ಕಾರಗಳ ನಡುವೆ ಸಂಪರ್ಕ ಹಾಗೂ ಸಹಕಾರದ ಒಪ್ಪಂದ ಏರ್ಪಡಿಸುವ ನಿಟ್ಟಿನಲ್ಲಿ ಈ ಸಮಾವೇಶ ಮಹತ್ವ ಪಡೆದುಕೊಂಡಿದೆ.


●. ಸ್ಥಾಪನೆ :
•┈┈┈┈┈┈•
✧. ಜಗತ್ತಿನಲ್ಲಿ ಉದಯಿಸುತ್ತಿರುವ ಹೊಸ ಆರ್ಥಿಕ ಶಕ್ತಿಗಳಾದ ಬ್ರಿಕ್ಸ್ ಗುಂಪನ್ನು 2009ರಲ್ಲಿ ಸ್ಥಾಪಿಸಲಾಯಿತು.
✧. `ಬ್ರಿಕ್ಸ್ ದೇಶಗಳ ಮೊದಲ ಶೃಂಗಸಭೆಯು ರಷ್ಯಾದ ಎಕಟೇರಿಯನ್‌ಬರ್ಗ್‌ನಲ್ಲಿ 2009ರಲ್ಲಿ ನಡೆದಿತ್ತು. ಸಮಾನ, ಪ್ರಜಾಸತ್ತಾತ್ಮಕ ಮತ್ತು ಬಹು ಉದ್ದೇಶದ ಜಾಗತಿಕ ವ್ಯವಸ್ಥೆಯಾಗಿ ಈ ಗುಂಪು ರೂಪು ತಳೆದು, ಬೆಳೆಯಬೇಕು ಎಂದು ಮೊದಲ ಸಭೆಯಲ್ಲಿಯೇ ನಿರ್ಧರಿಸಲಾಗಿತ್ತು.


●. ಬ್ರಿಕ್ಸ್ ಸಂಘಟನೆಯ ವೈಶಿಷ್ಟ್ಯಗಳು :
•┈┈┈┈┈┈┈┈┈┈┈┈┈┈┈┈┈┈┈┈┈•
✧.ಜಾಗತಿಕ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಈ ಐದೂ ದೇಶಗಳ ಸಾಮಾನ್ಯ ಕೊಡುಗೆ ಶೇ 22ರಷ್ಟಿದ್ದರೆ,ಸರ್ಕಾರಿ ಖಾಸಗಿ ಪಾಲುದಾರಿಕೆಯಡಿಯ (ಪಿಪಿಪಿ) ಕೊಡುಗೆ ಶೇ 35ರಷ್ಟಿದೆ.ಈ ದೇಶಗಳ ಒಟ್ಟು ಜನಸಂಖ್ಯೆ ವಿಶ್ವದ ಜನಸಂಖ್ಯೆಯಲ್ಲಿ ಶೇ 43ರಷ್ಟಿದೆ.
✧.ಎಲ್ಲ ಆರು ಖಂಡಗಳಲ್ಲಿ ವ್ಯಾಪಿಸಿರುವುದು ಈ ಗುಂಪಿನ ಇನ್ನೊಂದು ವೈಶಿಷ್ಟ್ಯವಾಗಿದೆ. ಹೀಗಾಗಿ ಈ ಗುಂಪು ಖಂಡಾಂತರದ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಂತಾಗಿದೆ. ಇತರ ಇಂತಹಗುಂಪುಗಳು ಈ ವಿಶೇಷ ವ್ಯಾಪಕತೆಯ ಸ್ವರೂಪ  ಹೊಂದಿಲ್ಲ.
✧.2040ರ ಹೊತ್ತಿಗೆ ಐದು ದೇಶಗಳ ಪೈಕಿ ನಾಲ್ಕು ದೇಶಗಳು ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ), ವಿಶ್ವದ 6 ಮುಂಚೂಣಿ ದೇಶಗಳಲ್ಲಿ ಸ್ಥಾನ ಗಿಟ್ಟಿಸಿರುತ್ತವೆ ಎಂದೂ `ಗೋಲ್ಡ್‌ಮನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.


●. ಬ್ರಿಕ್ಸ್ ಶೃಂಗಸಭೆಯ ಇತ್ತೀಚಿನ ಶೃಂಗಸಭೆಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧.2012 ರಲ್ಲಿ ನಡೆದಿರುವ ಬ್ರಿಕ್ಸ್ ಒಕ್ಕೂಟದ ನಾಲ್ಕನೇ ಶೃಂಗಸಭೆಯು ನವದೆಹಲಿಯಲ್ಲಿ ನಡೆದಿತ್ತು.  ಇದರಲ್ಲಿ ಅಂತರರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಡಾಲರ್ ಬದಲು ಸ್ಥಳೀಯ ಕರೆನ್ಸಿಯಲ್ಲಿಯೇ ವ್ಯಾಪಾರ, ವಹಿವಾಟು ನಡೆಸಲು ಅನುಕೂಲವಾಗುವ ನಿಟ್ಟಿನಲ್ಲಿ ಉದ್ಯಮಿಗಳಿಗೆ ಸಾಲ ನೀಡುವ ವ್ಯವಸ್ಥೆ ಮತ್ತು `ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್ ಸ್ಥಾಪನೆ ಪ್ರಸ್ತಾಪವನ್ನು ಈ ಶೃಂಗಸಭೆಯಲ್ಲಿ ಕೈಗೊಳ್ಳಲಾಯಿತು.
✧.ಬ್ರಿಕ್ಸ್​ನ ಏಳನೇ ಸಮಾವೇಶ ರಷ್ಯಾದ ಉಫದಲ್ಲಿ ಜು.8 ಮತ್ತು 9ರಂದು ನಡೆಯಿತು.
✧.2016ರಲ್ಲಿ ಫೆಬ್ರವರಿಯಲ್ಲಿ ಬ್ರಿಕ್ ರಾಷ್ಟ್ರಗಳ ಅಧ್ಯಕ್ಷತೆಯು ಸರದಿಯಂತೆ ರಷ್ಯಾದಿಂದ ಭಾರತಕ್ಕೆ ಹಸ್ತಾಂತರವಾಗಲಿದೆ
✧.ಬ್ರಿಕ್ಸ್ ಎಂದರೆ 'ಬಿಲ್ಡಿಂಗ್ ರೆಸ್ಪಾನ್ಸಿವ್, ಇನ್‌ಕ್ಲೂಸಿವ್ ಆ್ಯಂಡ್ ಕಲೆಕ್ಟೀವ್ ಸಲ್ಯೂಷನ್ಸ್'(ಸಂವೇದನಾಶೀಲ, ಎಲ್ಲರನ್ನೂ ಒಳಗೊಂಡ ಮತ್ತು ಸಾಮೂಹಿಕ ಪರಿಹಾರಗಳನ್ನು ಹುಡುಕಿಕೊಳ್ಳುವುದು) ಎಂದು ಪ್ರಧಾನಿ ವ್ಯಾಖ್ಯಾನಿಸಿದ್ದಾರೆ.
✧.'2016ರಲ್ಲಿ ಭಾರತ ಬ್ರಿಕ್ಸ್ ನೇತೃತ್ವ ವಹಿಸಿಕೊಳ್ಳಲಿರುವ ಭಾರತ, ಒಕ್ಕೂಟದ ವಿಷಯದಲ್ಲಿ ಇದನ್ನೇ ಮೂಲ ಧ್ಯೇಯವನ್ನಾಗಿಸಿಕೊಳ್ಳಲಿದೆ,' ಎಂದು ಪ್ರಧಾನಿ ಅವರು ವಿವರಿಸಿದ್ದಾರೆ.


●. ನ್ಯೂ ಡೆವಲಫ್‌ಮೆಂಟ್‌ ಬ್ಯಾಂಕ್ ‘‌ (ಎನ್‌ಡಿಬಿ) ಬ್ರಿಕ್ಸ್‌’ ಬ್ಯಾಂಕ್ ನ ಕಾರ್ಯಾರಂಭ :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧. ಬ್ರೆಜಿಲ್‌, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ (ಬ್ರಿಕ್ಸ್‌) ಅಭಿವೃದ್ಧಿ ಬ್ಯಾಂಕ್‌ (ಬ್ರಿಕ್ಸ್‌ ಬ್ಯಾಂಕ್‌) ( 07/21/2015 ) ಚೀನಾದಲ್ಲಿ ಕಾರ್ಯಾರಂಭ ಮಾಡಿದೆ.
✧. ಭಾರತವೂ ಸೇರಿದಂತೆ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸಿನ ನೆರವು ಒದಗಿಸಲಿರುವ ಈ ನ್ಯೂ ಡೆವಲಫ್‌ಮೆಂಟ್‌ ಬ್ಯಾಂಕ್‌ (ಎನ್‌ಡಿಬಿ) ಐದು ಸಾವಿರ ಕೋಟಿ ಡಾಲರ್‌ (ಅಂದಾಜು ರೂ3 ಲಕ್ಷ ಕೋಟಿ) ಮೂಲ ಬಂಡವಾಳದೊಂದಿಗೆ ಅಸ್ತಿತ್ವಕ್ಕೆ ಬಂದಿದೆ.
✧. ಕೆ.ವಿ.ಕಾಮತ್‌ (67) ಎಂದೇ ಪರಿಚಿತರಾಗಿರುವ, ಕನ್ನಡಿಗ, ಮಂಗಳೂರಿನ ಕುಂದಾಪುರದ ವಾಮನ ಕಾಮತ್‌ ಅವರು  ‘ಬ್ರಿಕ್ಸ್‌’ ಬ್ಯಾಂಕ್‌ನ ಮೊದಲ ಅಧ್ಯಕ್ಷರು. ಮುಂದಿನ 5 ವರ್ಷಗಳ ಕಾಲ ಅವರ ಅಧಿಕಾರ ಅವಧಿ ಇರಲಿದೆ.
✧. ಬ್ರಿಕ್ಸ್‌ ಅಭಿವೃದ್ಧಿ ಬ್ಯಾಂಕನ್ನು ವಿಶ್ವಬ್ಯಾಂಕ್‌ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್‌) ಪರ್ಯಾಯ ಎಂದೇ ವಿಶ್ಲೇಷಿಸಲಾಗುತ್ತಿದೆ.
✧. ಚೀನಾದ ಹಣಕಾಸು ರಾಜಧಾನಿ ಎಂದೇ ಕರೆಯುವ ಶಾಂಘೈನಲ್ಲಿ, ಕೆ.ವಿ ಕಾಮತ್‌ ಅವರ ಜತೆಗೂಡಿ ಚೀನಾದ ವಾಣಿಜ್ಯ ಸಚಿವ ಲೂ ಜಿವಿ ಅವರು ಬ್ರಿಕ್ಸ್‌ ಬ್ಯಾಂಕ್‌ ಉದ್ಘಾಟಿಸಿದರು.


●. ಈ ಹಿಂದಿನ ಬ್ರಿಕ್ಸ್ ಸಮಾವೇಶಗಳು.
•┈┈┈┈┈┈┈┈┈┈┈┈┈┈┈┈┈┈┈┈┈•
✧. ರಷ್ಯಾದ ಯೆಕಟೆರಿನ್​ಬರ್ಗ್ ಮೊದಲ ಬ್ರಿಕ್ ಸಮಾವೇಶ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ) ಸಭೆ (2009ರ ಜೂ.16)
✧. ಬ್ರೆಜಿಲ್​ನ ಬ್ರಸಿಲಿಯದಲ್ಲಿ 2ನೇ ಬ್ರಿಕ್ ಸಮಾವೇಶ (2010 ಏ.16)
✧. ಚೀನಾದ ಸನ್ಯಾದಲ್ಲಿ 3ನೇ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ದ.ಆಫ್ರಿಕಾ) ಸಭೆ (2011ರ ಏ.14).
✧. ನವದೆಹಲಿಯಲ್ಲಿ 4ನೇ ಸಮಾವೇಶ (2012ರ ಮಾ.29).
✧. ದ.ಆಫ್ರಿಕಾದ ಡರ್ಬನ್​ನಲ್ಲಿ 5ನೇ ಸಮಾವೇಶ (2013ರ ಮಾ.26-27).
✧. ಬ್ರೆಜಿಲ್​ನ ಫೋರ್ಟಾಲೆಜದಲ್ಲಿ 6ನೇ ಸಮಾವೇಶ (2014ರ ಜು.15-17).

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ■.'ಬಿಮ್‌ಸ್ಟೆಕ್ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ. (BIMSTEC-The International Association) :

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
■.'ಬಿಮ್‌ಸ್ಟೆಕ್ ಅಂತರರಾಷ್ಟ್ರೀಯ ಸಂಘಟನೆ'ಯ ಕುರಿತು ವಿವರಿಸಿ.
(BIMSTEC-The International Association)  :
━━━━━━━━━━━━━━━━━━━━━━━━━━━━━━━━━━━━━━━━━━
★ಅಂತರರಾಷ್ಟ್ರೀಯ ಸಂಘಟನೆಗಳು.
(International Associations)

★ಅಂತರರಾಷ್ಟ್ರೀಯ ಅರ್ಥಶಾಸ್ತ್ರ
(International Economics)


●.ಬಿಮ್‌ಸ್ಟೆಕ್ (BIMSTEC) ಎಂದರೆ :
•┈┈┈┈┈┈┈┈┈┈┈┈┈┈┈┈┈┈┈┈┈┈┈•
✧. ‘ದ ಬೇ ಆಫ್ ಬೆಂಗಾಲ್ ಇನಿಶಿಯೇಟಿವ್ ಫಾರ್ ಮಲ್ಟಿ-ಸೆಕ್ಟೋರಲ್ ಟೆಕ್ನಿಕಲ್ ಆ್ಯಂಡ್ ಇಕಾನಮಿಕ್ ಕೋ-ಆಪರೇಶನ್’ (ಬಹುಕ್ಷೇತ್ರ ತಾಂತ್ರಿಕ ಹಾಗೂ ಆರ್ಥಿಕ ಸಹಕಾರಕ್ಕಾಗಿ ಬಂಗಾಳ ತೀರ ಸುಧಾರಣಾ ಶೃಂಗಸಭೆ)


●. ಸ್ಥಾಪನೆ :
•┈┈┈┈┈┈•
✧. 1997ರಲ್ಲಿ ಬ್ಯಾಂಕಾಕ್‌ನಲ್ಲಿ ಸ್ಥಾಪಿಸಲಾಯಿತು.


●. ಬಿಮ್‌ಸ್ಟೆಕ್ ಸಂಘಟನೆಯಲ್ಲಿ ಇರುವ ರಾಷ್ಟ್ರಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧.ಏಳು ಸದಸ್ಯ ರಾಷ್ಟ್ರಗಳು- ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಹಾಗೂ ಥಾಯ್ಲೆಂಡ್ .


●. ಬಿಮ್‌ಸ್ಟೆಕ್ ಸಂಘಟನೆಯ ವೈಶಿಷ್ಟ್ಯಗಳು :
•┈┈┈┈┈┈┈┈┈┈┈┈┈┈┈┈┈┈┈┈┈┈•
✧.ಬಿಮ್‌ಸ್ಟೆಕ್ ಸಂಘಟನೆಯ ಏಳು ಸದಸ್ಯ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಥಾಯ್ಲೆಂಡ್, ಮ್ಯಾನ್ಮಾರ್, ಭೂತಾನ್ ಹಾಗೂ ನೇಪಾಳ ಜೊತೆಗೂಡಿದಲ್ಲಿ ಜಗತ್ತಿನ ಶೇಕಡ 20ರಷ್ಟು ಜನಸಂಖ್ಯೆಯನ್ನು ಹೊಂದಿದೆ
✧.ಏಳು ಸದಸ್ಯ ರಾಷ್ಟ್ರಗಳು ಸೇರಿದಂತೆ ದಕ್ಷಿಣ ಏಶ್ಯ ಹಾಗೂ ಆಗ್ನೇಯ ಏಶ್ಯ ರಾಷ್ಟ್ರಗಳ ನಡುವೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬಿಮ್‌ಸ್ಟೆಕ್ ಮಹತ್ವದ ಪಾತ್ರ ವಹಿಸಲಿದೆ.


●. ಬಿಮ್‌ಸ್ಟೆಕ್ ನ ಪ್ರಮುಖ ಆದ್ಯತಾ ವಲಯಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈•
✧. ಭಯೋತ್ಪಾದನೆ ಹಾಗೂ ಅಪರಾಧಗಳ ತಡೆ, ವ್ಯಾಪಾರ ಹಾಗೂ ಹೂಡಿಕೆ, ಸಾರಿಗೆ ಮತ್ತು ಸಂಪರ್ಕ ಹಾಗೂ ಬಡತನ ನಿರ್ಮೂಲನೆಯಂತಹ ಪ್ರಮುಖ ಆದ್ಯತಾ ವಲಯಗಳನ್ನು ಒಳಗೊಂಡಿದೆ.


●. ಬಿಮ್‌ಸ್ಟೆಕ್ ನ ಶಾಶ್ವತ ಕಾರ್ಯಾಲಯ:
•┈┈┈┈┈┈┈┈┈┈┈┈┈┈┈┈┈┈┈┈┈•
✧.ಸೆಪ್ಟೆಂಬರ್ 13, 2014 ರಲ್ಲಿ ಬಿಮ್‌ಸ್ಟೆಕ್‌ನ ಶಾಶ್ವತ ಕಾರ್ಯಾಲಯವನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಢಾಕಾದಲ್ಲಿ ಉದ್ಘಾಟಿಸಿದರು. ಬಿಮ್‌ಸ್ಟೆಕ್‌ನ ಶಾಶ್ವತ ಕಾರ್ಯಾಲಯವನ್ನು ಸ್ಥಾಪಿಸಲು 2011ರಲ್ಲಿ ಅದರ ಸದಸ್ಯರು ನಿರ್ಧರಿಸಿದ್ದು, ಢಾಕಾವನ್ನು ಕಚೇರಿ ತಾಣವಾಗಿ ಅಂತಿಮಗೊಳಿಸಿದ್ದರು.


●. ಬಿಮ್‌ಸ್ಟೆಕ್ ನ ಇತ್ತೀಚಿನ ಶೃಂಗಸಭೆಗಳು:
•┈┈┈┈┈┈┈┈┈┈┈┈┈┈┈┈┈┈┈┈┈┈┈•
✧.2014ರಲ್ಲಿ ಬಿಮ್‌ಸ್ಟೆಕ್ ನ ಮೂರನೇ ಶೃಂಗಸಭೆಯು ಮ್ಯಾನ್ಮಾರ್ ನ ನಯ್‌ ಪೈ ತಾವ್‌ ನಗರದಲ್ಲಿ ನಡೆಯಿತು.
✧.ಬೆಳೆಯುತ್ತಿರುವ ಭಯೋತ್ಪಾದನಾ ಆತಂಕ, ಸಾಗರಾತೀತ ಅಪರಾಧಗಳು ಹಾಗೂ ಮಾದಕ ವಸ್ತು ಕಳ್ಳಸಾಗಣೆಯ ವಿರುದ್ಧ ‘ಜಂಟಿ ಹೋರಾಟ’ ನಡೆಸುವ ತೀರ್ಮಾನ ಬಿಮ್‌ಸ್ಟೆಕ್‌ ಶೃಂಗ ಸಭೆಯಲ್ಲಿ ಏಳು ರಾಷ್ಟ್ರಗಳ ನಾಯಕರು ಕೈಗೊಂಡರು.
✧.ಎಲ್ಲಾ ವಿಧದ ಭಯೋತ್ಪಾದನೆ ಹಾಗೂ ರಾಷ್ಟ್ರಾತೀತ ಅಪರಾಧಗಳ ಕಾರ್ಯಾಚರಣೆಯಲ್ಲಿ ಸಂಪೂರ್ಣ ಸಹಕಾರ ನೀಡಲು ಪರಸ್ಪರ ಒಪ್ಪಿಕೊಂಡರು.

Sunday 22 November 2015

☀ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : — "ಚಂದ್ರಗ್ರಹಣವು ಹೆಚ್ಚಾಗಿ ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುವುದು. ಏಕೆ?" (Lunar Eclipse can occur most often during the full moon. Why is that?)

☀ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : —
"ಚಂದ್ರಗ್ರಹಣವು ಹೆಚ್ಚಾಗಿ ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುವುದು. ಏಕೆ?"
(Lunar Eclipse can occur most often during the full moon. Why is that?)
━━━━━━━━━━━━━━━━━━━━━━━━━━━━━━━━━━━━━━━━━━

■.ಭೂಗೋಳಶಾಸ್ತ್ರ
(Physical Geography)

■.ಸಾಮಾನ್ಯ ವಿಜ್ಞಾನ
(General Science)


■.ಚಂದ್ರಗ್ರಹಣವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ ಸಂಭವಿಸುವುದು ಸಾಧ್ಯ.  ಏಕೆಂದರೆ ಈ ದಿನದಂದು ಚಂದ್ರನು ಸೂರ್ಯನಿಗೆ ಎದುರಾಗಿ ಭೂಮಿಯ ಮತ್ತೊಂದು ಕಡೆ ಇರುವನು. ಇದರಿಂದ ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿರುತ್ತದೆ.ಇದರಿಂದ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಗ್ರಹಣವುಂಟಾಗುವುದು.

■.ಆದರೂ ಚಂದ್ರಗ್ರಹಣವು ಎಲ್ಲಾ ಹುಣ್ಣಿಮೆಯ ದಿನಗಳಂದು ಉಂಟಾಗುವುದಿಲ್ಲ.ಇದಕ್ಕೂ ಕಾರಣವೇನೆಂದರೆ... ಹುಣ್ಣಿಮೆಯ ದಿನಗಳಲ್ಲಿ ಭೂಮಿಯ ನೆರಳಿನಿಂದ ಮೇಲೆ ಅಥವಾ ಕೆಳಗೆ ಚಂದ್ರನು ಚಲಿಸುವ ಸಾಧ್ಯತೆಯಿದೆ. ಏಕೆಂದರೆ ಚಂದ್ರನು ಭೂಪಥದ ಕಕ್ಷಕ್ಕೆ 5°9' ಓರೆಯಾಗಿರುವದು. ಇದರಿಂದ ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ ಸರಳ ರೇಖೆಯಲ್ಲಿರುವುದು, ಕೇವಲ ಕೆಲವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ. ಆ ದಿನಗಳಲ್ಲಿ ಚಂದ್ರಗ್ರಹಣವುಂಟಾಗುವುದು. 

☀ ಇಂಗ್ಲಿಷ್ ಗ್ರಾಮರ್ ಹಾಗು ವ್ಯಕ್ತಿ ವಿಕಸನಕ್ಕಾಗಿ ಇಂಗ್ಲಿಷ್— ಭಾಗ-3. (English Grammar for Personality Development-Part 3) (ಸಂಕ್ಷಿಪ್ತವಾಗಿ ವಿವರಿಸಲಾಗಿದೆ)

☀ ಇಂಗ್ಲಿಷ್ ಗ್ರಾಮರ್ ಹಾಗು ವ್ಯಕ್ತಿ ವಿಕಸನಕ್ಕಾಗಿ ಇಂಗ್ಲಿಷ್—  ಭಾಗ-3.
(English Grammar for Personality Development-Part 3)
(ಸಂಕ್ಷಿಪ್ತವಾಗಿ ವಿವರಿಸಲಾಗಿದೆ)
 ━━━━━━━━━━━━━━━━━━━━━━━━━━━━━━━━━━━━━━━━━━━━━
★ಇಂಗ್ಲಿಷ್ ಗ್ರಾಮರ್ 
(English Grammar)


■. ಸಂಭಾಷಣೆಯಲ್ಲಾಗಲೀ ಬರವಣಿಗೆಯಲ್ಲಾಗಲೀ ಸತ್ವಯುತ ವಾಕ್ಯಗಳು ವಿಭಿನ್ನ ರೀತಿಯ ವಿನ್ಯಾಸಗಳನ್ನು (structures) ಹೊಂದಿರುತ್ತವೆ. ಸ್ಥೂಲವಾಗಿ, ಭಾಷೆ ವಿವಿಧ ಘಟಕಗಳನ್ನು (units) ಹೊಂದಿರುತ್ತವೆ.
ಅವುಗಳೆಂದರೆ,
●. sentencee (ವಾಕ್ಯ),
●. clausee (ವಾಕ್ಯಾಂಶ),
●. phrasee(ಪದಪುಂಜ),
●. phonemee (ಧ್ವನಿಕಣ).


■. ಈ ಘಟಕಗಳ ಅಂತರ್‌ ಸಂಬಂಧವನ್ನು ಅನುಸರಿಸಿ, ಇಂಗ್ಲಿಷ್ ವಾಕ್ಯಗಳನ್ನು simple sentence, complex sentence ಮತ್ತು compound sentence ಎಂದು ವಿಂಗಡಿಸಬಹುದು.

■. ಈ ವಿಂಗಡಣೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ನಾವು clause ಎಂದರೇನು ಎಂದು ತಿಳಿದುಕೊಳ್ಳಬೇಕು.
●. Main clause use ಮತ್ತು
●. sub-ordinate clause  ಎಂಬ ಎರಡು ವಿಧವಾದ ವಾಕ್ಯಾಂಶಗಳನ್ನು ಇಂಗ್ಲಿಷ್ ಭಾಷೆ ಗುರುತಿಸುತ್ತದೆ.
ಈ ಉದಾಹರಣೆಯನ್ನು ಗಮನಿಸಿ: When it started raining, she opened her umbrella.

■. ಈ ವಾಕ್ಯದಲ್ಲಿ, ‘she opened her umbrella’ ಎಂಬುದನ್ನು main clause ಎನ್ನುತ್ತೇವೆ. ಏಕೆಂದರೆ, ವಾಕ್ಯದ ಈ ಭಾಗ, ಸ್ವತಂತ್ರವಾಗಿ ಅರ್ಥಪೂರ್ಣವಾಗಿದೆ. ಅಂದರೆ, ತನ್ನ ಅರ್ಥವಂತಿಕೆಗೆ ಅದು ವಾಕ್ಯದ ಇತರ ಭಾಗಗಳ ಮೇಲೆ ಅವಲಂಬಿತವಾಗಿಲ್ಲ. ಇದೇ ಕಾರಣಕ್ಕಾಗಿ, ಈ main clause ಅನ್ನು independent clausese ಎಂದೂ ಕರೆಯುತ್ತೇವೆ.

■. ವಾಕ್ಯದ ಉಳಿದ ಭಾಗವನ್ನು  (when it started raining), sub-ordinate clause ಎಂದು ಕರೆಯುತ್ತೇವೆ. ಅದು ತನ್ನ ಅರ್ಥವಂತಿಕೆಗಾಗಿ main clause ಮೇಲೆ ಅವಲಂಬಿತವಾಗಿರುವುದರಿಂದ ಇದನ್ನು dependent clause ಎಂದೂ ಕರೆಯುತ್ತೇವೆ.
ಈ ಪರಿಕಲ್ಪನೆಗಳನ್ನು ಅನುಸರಿಸಿ, ಮೇಲೆ ಹೇಳಿದಂತೆ ಮೂರು ವಿಧವಾದ ವಾಕ್ಯ ವಿನ್ಯಾಸಗಳು ಕಾಣಸಿಗುತ್ತವೆ.


■. ಮೊದಲಿಗೆ simple sentence ಎಂದರೇನು ಎಂದು ತಿಳಿದುಕೊಳ್ಳೋಣ.
 ಈ ವಾಕ್ಯಗಳನ್ನು ಗಮನಿಸಿ:
1.She goes to college regularly.
2. The sun-set is beautiful.

■. ಒಂದೇ main clause ಇರುವಂತಹ ಈ ರೀತಿಯ ವಾಕ್ಯಗಳನ್ನು simple sentence ಎನ್ನುತ್ತೇವೆ.
ಈಗ complex sentence ಗಳನ್ನು ನೋಡಿ.
1. He continued walking, even though he was very tired.
2. You will succeed, if you work hard.

■. ಈ ವಾಕ್ಯಗಳಲ್ಲಿ ‘He continued walking’ ‘You will succeed’ ಎಂಬ ಒಂದೊಂದು mmain clause  ಹಾಗೂ ‘even though he was very tired’ ‘if you work hard’ ಎನ್ನುವಂತಹ sub-ordinate clause ಗಳು ಇರುತ್ತವೆ.

■. ಗಮನಿಸಬೇಕಾದ ವಿಷಯವೆಂದರೆ, complex sentence ನಲ್ಲಿ ಎಷ್ಟೇ sub-ordinate clause ಗಳಿದ್ದರೂ, main clause ಮಾತ್ರ ಒಂದೇ ಇರುತ್ತದೆ. ಹಾಗೂ ಈ clause ಗಳನ್ನು ಬೆಸೆಯುವಂತಹ conjunctionಗಳೆಂದರೆ,wh-words, if, that, though, although ಮುಂತಾದವುಗಳು.

■. ಎರಡು main clauseಗಳನ್ನು, and, or, but, yet ಮುಂತಾದ  conjunction ಗಳು ಬೆಸೆದಾಗ, ಅದು compound sentence e ಎನ್ನಿಸಿಕೊಳ್ಳುತ್ತದೆ.

ಉದಾ: She is a professional dancer and an amateur singer.
ನಾವು ಈ ವಿವಿಧ ವಾಕ್ಯ ವಿನ್ಯಾಸಗಳನ್ನು ಸರಿಯಾಗಿ ಅರ್ಥಮಾಡಿಕೊಂಡು, ನಮ್ಮ ಬರವಣಿಗೆಯಲ್ಲಿ ರೂಢಿಸಿಕೊಂಡಾಗ, ನಮ್ಮ ಭಾಷೆಗೆ ವೈವಿಧ್ಯಮಯ ಜೀವಂತಿಕೆ ಒದಗುತ್ತದೆ.

■. ಭಾಷೆ ನಿರಂತರವಾಗಿ ಚಲಿಸುತ್ತಿರುವ, ನಮ್ಮ ಅಗತ್ಯಗಳಿಗೆ ಸ್ಪಂದಿಸಿ ಮಾರ್ಪಾಟಾಗುತ್ತಿರುವ ಒಂದು ವಿದ್ಯಮಾನ. ನಮ್ಮ ದಿನನಿತ್ಯದ ಸಂಭಾಷಣೆಯೂ ಇದಕ್ಕೆ ಅಪವಾದವಲ್ಲ. ಆದ್ದರಿಂದ, ಹಲವು ವರ್ಷಗಳ ಹಿಂದೆ ಉಪಯೋಗಿಸುತ್ತಿದ್ದ ಇಂಗ್ಲಿಷ್‌ಗೂ, ಈಗ ಉಪಯೋಗಿಸುತ್ತಿರುವ ಇಂಗ್ಲಿಷ್‌ಗೂ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು.


■. ಈ ಬದಲಾವಣೆಗಳನ್ನು ನಾವು ಅರಿತು ಮೈಗೂಡಿಸಿಕೊಂಡಾಗ ಮಾತ್ರ ನಮ್ಮ ಭಾಷೆಗೆ ತಾಜಾತನವಿರುತ್ತದೆ. ಹಾಗಾಗಿ, ವಿವಿಧ ಸಂದರ್ಭಗಳಲ್ಲಿ ಉಪಯೋಗಿಸ ಬಹುದಾದ ಕೆಲವು ಉಪಯುಕ್ತ ಆಧುನಿಕ Englishh ಪದಗಳು/ವಾಕ್ಯಗಳನ್ನು ಇಲ್ಲಿ ನೋಡೋಣ.    
         
■. ಇನ್ನೊಬ್ಬರಿಂದ ಸಹಾಯ ಪಡೆದ ಮೇಲೆ, ಸಾಮಾನ್ಯವಾಗಿ thank you very much ಅಥವಾ thanks a lot  ಎನ್ನುತ್ತೇವೆ. ಅವುಗಳಿಗೆ ಬದಲಾಗಿ thanks a ton / thanks a million / thanks so much ಎಂದು ಕೂಡ ಹೇಳಬಹುದು.
ಇತರರು ನಮ್ಮ ssಸಹಾಯ ಪಡೆದ ಮೇಲೆ, ನಮಗೆ thank you ಹೇಳಿದಾಗ, ನಾವು mmention not / you are welcomee ಎಂದು ಹೇಳುವ ವಾಡಿಕೆ ಇದೆ. ಇವಕ್ಕೆ ಬದಲಾಗಿ mmy pleasure / its nothing at all  ಎಂಬುದನ್ನೂ ಹೇಳಬಹುದು.

■. ನಾವು ಯಾರನ್ನಾದರೂ ಸಂಧಿಸಬೇಕಾದ ಸಂದರ್ಭದಲ್ಲಿ, ’ನಿಮ್ಮನ್ನು ನಂತರ ಸಂಧಿಸುತ್ತೇನೆ’ ಎಂದು ಹೇಳುವಾಗ sI shall meet you latter  ಎಂದು ಹೇಳುವುದು ಸಾಮಾನ್ಯವಾದ ರೀತಿ. ಇದಕ್ಕೆ ಬದಲಾಗಿ so long / catch you later /  looking forward to meeting you again  ಎಂತಲೂ ಹೇಳಬಹುದು.

■. ಚೆನ್ನಾಗಿ ಕೆಲಸ ಮಾಡುವವರನ್ನು ನೋಡಿದಾಗ  vvery good / keep it up  ಎಂದು ಹೇಳುವ ಬದಲು good job / great job / that was amazingg ಎಂದು ನಮ್ಮ ಮೆಚ್ಚುಗೆ ಯನ್ನು ವ್ಯಕ್ತಪಡಿಸಬಹುದು. Coolಎನ್ನುವ ಪದವನ್ನು ತಾಪಮಾನಸೂಚಕವಾದ ಪದವನ್ನಾಗಿ ಮಾತ್ರವಲ್ಲದೆ ಇನ್ನೂ ಹಲವಾರು ಸಂದರ್ಭಗಳಲ್ಲಿ ಬಳಸಬಹುದು.

■. ಯಾರಾದರೂ  how are you?  ಎಂದು ಕೇಳಿದಾಗ finee ಎನ್ನುವ ಬದಲಾಗಿ cool ಎನ್ನಬಹುದು. ಎಲ್ಲೆಲ್ಲಿ good ಎಂದು ಬಳಸುತ್ತೇವೆಯೋ ಅಲ್ಲೆಲ್ಲಾ  cool ಎನ್ನುವ ಪದವನ್ನು ಸಾಮಾನ್ಯವಾಗಿ ಬಳಸಬಹುದು. ’ತುಂಬಾ ಚೆನ್ನಾಗಿದೆ’ ಎನ್ನುವುದನ್ನು that`s cool ಎಂದೂ ಸೂಚಿಸಬಹುದು.

■. ಅದೇ ರೀತಿ chill ಎನ್ನುವ ಪದಕ್ಕೆ ಚಳಿ ಎಂದಷ್ಟೇ ಅರ್ಥವಲ್ಲ. ಈ ಪದವನ್ನು    don’t worry /  enjoy / relax ಎನ್ನುವುದಕ್ಕೂ ಪರ್ಯಾಯವಾಗಿ ಬಳಸಬಹುದು.

■. ನಮ್ಮ ಸ್ನೇಹಿತರಿಗೆ ಅಥವಾ ನಮಗಿಂತ ಕಿರಿಯರಿಗೆ ನಮ್ಮ phone number  ಅನ್ನು ಕೊಟ್ಟು ’ನನ್ನನ್ನು contact ಮಾಡಬೇಕಾದರೆ ಈ ನಂಬರ್‌ಗೆ ಕರೆ ನೀಡಿ’ ಎಂದು ಹೇಳುವಾಗ ’‘contact me at this number’ ’ ಎಂದು ಹೇಳುವ ಬದಲು you can reach me at this number / give me a buzz / give me a tinkle    ಎಂಬುವುವು ಈಗ ಬಳಕೆಯಲ್ಲಿರುವ ವಾಕ್ಯಗಳು.  ಆದರೆ, ನಮಗಿಂತ ಹಿರಿಯರ ಬಳಿ ಮಾತನಾಡುವಾಗcontact  ಎನ್ನುವ ಪದವೇ ಅತ್ಯುತ್ತಮ ಆಯ್ಕೆ.

■. ಈ ಹೊಸ ರೀತಿಯ ವಾಕ್ಯಗಳನ್ನೂ, ಅವುಗಳ ಉಪಯೋಗ ಸಂದರ್ಭಗಳನ್ನೂ ನಾವು ಕರಗತ ಮಾಡಿಕೊಂಡಾಗ ಭಾಷೆಯ ಮೇಲಿನ ನಮ್ಮ ಹಿಡಿತ ಹೆಚ್ಚುತ್ತದೆ.
To be Continued....


(ಕೃಪೆ: ಪ್ರಜಾವಾಣಿ)

Saturday 21 November 2015

■. ಭಾರತದ ಪ್ರಮುಖ ರಾಷ್ಟ್ರೀಯ ಪ್ರಯೋಗಾಲಯಗಳು (Indian National Leboratories)

■. ಭಾರತದ ಪ್ರಮುಖ ರಾಷ್ಟ್ರೀಯ ಪ್ರಯೋಗಾಲಯಗಳು
(Indian National Leboratories)
━━━━━━━━━━━━━━━━━━━━━━━━━━━━━━━━━━━━━━━━━━
★ ಸಾಮಾನ್ಯ ಅಧ್ಯಯನ
(General Studies)

★ ಸಾಮಾನ್ಯ ಜ್ಞಾನ
(General Knowledge)


■.ಪ್ರಯೋಗಾಲಯಗಳು    ••┈┈┈┈┈┈┈┈┈┈┈┈┈┈┈••    ■.ಇರುವ ಸ್ಥಳ
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

01. ಸೆಂಟ್ರಲ್ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್ ••┈┈┈•• ಲಕ್ನೋ (ಉತ್ತರಪ್ರದೇಶ).

02. ಕೇಂದ್ರ ಇಂಧನ ಸಂಶೋಧನಾ ಸಂಸ್ಥೆ ••┈┈┈•• ಜಿಲ್ಗೋರಾ  (ಬಿಹಾರ).

03. ಸೆಂಟ್ರಲ್ ಗ್ಯಾಸ್ ಆಂಡ್ ಸೆರಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ ••┈┈┈•• ಜಾಧವಪೂರ್ (ಪಶ್ಚಿಮ ಬಂಗಾಳ).

04. ಸೆಂಟ್ರಲ್ ಮೈನಿಂಗ್ ರಿಸರ್ಚ್ ಸ್ಟೇಶನ್ ••┈┈┈•• ಧನ್ಬಾದ್ (ಬಿಹಾರ).

05. ನ್ಯಾಶನಲ್ ಎನ್ವಿರಾನಮೆಂಟಲ್ ಎಂಜಿನಿಯರಿಂಗ್ ಇನ್ಸ್ಟಿಟ್ಯೂಟ್ ••┈┈┈•• ನಾಗ್ಪುರ (ಮಹಾರಾಷ್ಟ್ರ).

06. ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಪೆಟ್ರೋಲಿಯಂ ••┈┈┈•• ಡೆಹ್ರಾಡೂನ್ (ಉತ್ತರಪ್ರದೇಶ).

07. ನ್ಯಾಶನಲ್ ಏರೊನಾಟಿಕಲ್ ಲ್ಯಾಬ್ ••┈┈┈•• ಬೆಂಗಳೂರು (ಕರ್ನಾಟಕ).

08. ನ್ಯಾಶನಲ್ ಬೊಟಿನಿಕಲ್ ಗಾರ್ಡನ್ ••┈┈┈•• ಲಕ್ನೋ (ಯುಪಿ).

09. ನ್ಯಾಶನಲ್ ಕೆಮಿಕಲ್ ಲಾಬೊರೊಟರಿ ••┈┈┈•• ಪುಣೆ (ಮಹಾರಾಷ್ಟ್ರ).  

10. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಪ್ ಓಷಿಯನೋಗ್ರಾಫಿ ••┈┈┈•• ಪಣಜಿ (ಗೋವಾ).

11. ನ್ಯಾಶನಲ್ ಮೆಟಲರ್ಜಿಕಲ್ ಲಾಬೊರೊಟರಿ ••┈┈┈•• ಜಮ್ಶೆಡ್ಪುರ (ಬಿಹಾರ).

12. ಸ್ಟ್ರಕ್ಚರಲ್ ಎಂಜಿನಿಯರಿಂಗ್ ರಿಸರ್ಚ್ ಸೆಂಟರ್ ••┈┈┈•• ರೂರ್ಕಿ (ಯುಪಿ).

13. ನ್ಯಾಶನಲ್ ಫಿಜಿಕಲ್ ಲಾಬೊರೊಟರಿ ••┈┈┈•• ಹೊಸ ದಹಲಿ.

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ●.ಪ್ರಸ್ತುತ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಹಾಗೂ ಇಲ್ಲಿರುವ ಬಹುಸಂಸ್ಕೃತಿಯ, ಬಹುಸಮುದಾಯಗಳ, ಬಹುಜನಾಂಗೀಯ ಮತ್ತು ಬಹುಭಾಷೀಯ ಸಮ್ಮಿಶ್ರ ರಾಜಕೀಯಕ್ಕೆ 'ಅನುಪಾತ ಆಧಾರಿತ ಚುನಾವಣಾ ಪದ್ಧತಿ' (ಪ್ರಪೋರ್ಷನಲ್ ರೆಪ್ರೆಸೆಂಟೇಷನ್- ಪಿಆರ್) ಹೆಚ್ಚು ಸಮರ್ಪಕ ಮತ್ತು ಅನುಕೂಲಕರ. ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. (Currently the Ratio Based Electoral System (Praportional Representation PR) is more efficient and convenient to the developing country like India. Critically analyze.) OR ●.ಪ್ರಸ್ತುತ ಭಾರತದ ಚುನಾವಣಾ ಪದ್ಧತಿ. ವಿಮರ್ಶಾತ್ಮಕವಾಗಿ ವಿವರಿಸಿ. Critically analyze the Present Election System of India

■. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :—
●.ಪ್ರಸ್ತುತ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಹಾಗೂ ಇಲ್ಲಿರುವ ಬಹುಸಂಸ್ಕೃತಿಯ, ಬಹುಸಮುದಾಯಗಳ, ಬಹುಜನಾಂಗೀಯ ಮತ್ತು ಬಹುಭಾಷೀಯ ಸಮ್ಮಿಶ್ರ ರಾಜಕೀಯಕ್ಕೆ 'ಅನುಪಾತ ಆಧಾರಿತ ಚುನಾವಣಾ ಪದ್ಧತಿ' (ಪ್ರಪೋರ್ಷನಲ್ ರೆಪ್ರೆಸೆಂಟೇಷನ್- ಪಿಆರ್) ಹೆಚ್ಚು ಸಮರ್ಪಕ ಮತ್ತು ಅನುಕೂಲಕರ. ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ.
(Currently the Ratio Based Electoral System (Praportional Representation PR) is more efficient and convenient to the developing country like India. Critically analyze.)

OR

●.ಪ್ರಸ್ತುತ ಭಾರತದ ಚುನಾವಣಾ ಪದ್ಧತಿ. ವಿಮರ್ಶಾತ್ಮಕವಾಗಿ ವಿವರಿಸಿ.
Critically analyze the Present Election System of India

━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

●.ಭಾರತದ ಸಂವಿಧಾನ.    
(Indian Constitution)

●.ಸಾಮಾನ್ಯ ಅಧ್ಯಯನ
(General Studies)


●.ಒಂದು ರಾಷ್ಟ್ರದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಚುನಾವಣೆಗಳು ವಹಿಸುವ ಪಾತ್ರ ಅತ್ಯಂತ ಮಹತ್ವಪೂರ್ಣವಾದದ್ದು. ಚುನಾವಣಾ ರಂಗದಲ್ಲೂ ಈ ಆರೂವರೆ ದಶಕಗಳ ಅವಧಿಯಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಸ್ವಾತಂತ್ರ್ಯ ಗಳಿಸಿದ ಅರವತ್ತೈದು ವರ್ಷಗಳ ಅವಧಿಯಲ್ಲಿ ನಮ್ಮ ರಾಷ್ಟ್ರದ ರಾಜಕಾರಣದಲ್ಲಿ ಅನೇಕ ಸ್ಥಿತ್ಯಂತರಗಳು ಜರುಗಿವೆ. ಇತ್ತೀಚಿನ ದಶಕಗಳಲ್ಲಿ, ಏಕಪಕ್ಷ ಪ್ರಾಬಲ್ಯದ ರಾಜಕಾರಣ ಕೊನೆಗೊಂಡು, ಬಹುಪಕ್ಷೀಯ ಮೈತ್ರಿ ರಾಜಕಾರಣದ ಪರ್ವ ಶುರುವಾಗಿದೆ. ಯಾವುದೇ ಬದಲಾವಣೆ ಒಂದು ವ್ಯವಸ್ಥೆಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿರಬೇಕು. ಆದರೆ ಪ್ರಸ್ತುತ ಚುನಾವಣಾ ಕ್ಷೇತ್ರದ ಅನೇಕ ಬೆಳವಣಿಗೆಗಳು ಒಂದರ್ಥದಲ್ಲಿ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ.

●.ಪ್ರಸ್ತುತ ನಮ್ಮ ರಾಜಕಾರಣದಲ್ಲಿ ಹಣದ ದೌಲತ್ತು, ಜಾತೀಯತೆ, ಧರ್ಮಾಂಧತೆ, ಅತಿ ಪ್ರಾದೇಶಿಕತೆ, ಗುಂಪುಗಾರಿಕೆ, ಸ್ವಜನ ಪಕ್ಷಪಾತ, ಮಹಿಳೆಯರ ಕಡಿಮೆ ಪ್ರಾತಿನಿಧ್ಯ, ಅಪರಾಧೀಕರಣ, ಕೋಮುವಾದ, ಮೌಲ್ಯ,ಸಿದ್ಧಾಂತರಹಿತ ರಾಜಕೀಯ ಇತ್ಯಾದಿ ನಕಾರಾತ್ಮಕ ಅಂಶಗಳು ತಾಂಡವವಾಡುತ್ತಿವೆ. ಇವೆಲ್ಲವೂ ಚುನಾವಣಾ ರಂಗದಲ್ಲೂ ಪ್ರತಿಫಲನಗೊಳ್ಳುತ್ತಿವೆ. ಎಲ್ಲ ರಂಗಗಳಲ್ಲೂ ಸುಧಾರಣೆಗಳನ್ನು ಬಯಸುವ ಮತ್ತು ಆಗ್ರಹಿಸುವ ರಾಜಕಾರಣಿಗಳು ಹೆಚ್ಚಿನ ಸಂದರ್ಭಗಳಲ್ಲಿ ಸ್ವಕ್ಷೇತ್ರದ ಬಗೆಗೆ ಜಾಣ ಮೌನ ವಹಿಸುತ್ತಾರೆ.

●.ಚುನಾವಣಾ ಕ್ಷೇತ್ರದ ಸುಧಾರಣೆಗಳ ಬಗೆಗೆ ವಿ.ಎಂ. ತಾರ್ಕುಂಡೆ ಸಮಿತಿ (1974-75), ದಿನೇಶ್ ಗೋಸ್ವಾಮಿ ಸಮಿತಿ (1990), ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಸಮಿತಿ (1994), ಇಂದ್ರಜಿತ್ ಗುಪ್ತ ಸಮಿತಿ (1998), ಕಾನೂನು ಆಯೋಗದ ಸಮಿತಿ (1998), ನ್ಯಾಯಮೂರ್ತಿ ಕುಲ್‌ದೀಪ್‌ಸಿಂಗ್ ಸಮಿತಿ (2002) ಇತ್ಯಾದಿ ಸಮಿತಿಗಳು ವರದಿಗಳನ್ನು ನೀಡಿವೆ; ಅನೇಕ ಶಿಫಾರಸ್ಸುಗಳನ್ನು ಮಾಡಿವೆ. ಆದರೆ ದುರಂತದ ಸಂಗತಿಯೆಂದರೆ, ಈ ಸಮಿತಿಗಳ ವರದಿಗಳು ದೂಳು ತಿನ್ನುತ್ತಿವೆ!

●.ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಅನುಸರಿಸುತ್ತ ಬಂದಿರುವುದು ಚುನಾವಣೆಯಲ್ಲಿ ಅತಿಹೆಚ್ಚು ಮತ ಪಡೆದವನಿಗೆ ಸ್ಥಾನ ನೀಡುವ ಪದ್ಧತಿ ಇದನ್ನುFirst Past the Post(ಎಫ್‌ಪಿಟಿಪಿ) ಎಂದು ಕರೆಯಲಾಗುತ್ತದೆ. ಅಂದರೆ, ಚುನಾವಣೆಯಲ್ಲಿ ವಿಜಯಶಾಲಿಯಾದ ಅಭ್ಯರ್ಥಿಗೆ ಸಂಖ್ಯಾತ್ಮಕವಾಗಿ ಹೆಚ್ಚು ಮತಗಳು ಬಂದಿರುತ್ತವೆ. ಆದರೆ ಅವರಿಗೆ ಒಟ್ಟು ಮತದಾರರ ಬಹುಮತ ದೊರಕದಿರಲೂಬಹುದು. ಪರಾಭವಗೊಂಡ ಅಭ್ಯರ್ಥಿಗಳು ಗಳಿಸಿದ ಮತಗಳು ಗೆದ್ದ ಅಭ್ಯರ್ಥಿಗಿಂತಲೂ ಜಾಸ್ತಿಯೇ ಇರಬಹುದು. ಅನೇಕ ಚುನಾವಣಾ ಕ್ಷೇತ್ರಗಳಲ್ಲಿ ಈ ಪರಿಸ್ಥಿತಿಯಿರುವುದು ನಿಜ. ಇದು ಈ ಪದ್ಧತಿಯ ಒಂದು ದೊಡ್ಡ ಮತ್ತು ಗಮನಾರ್ಹ ನ್ಯೂನತೆಯೇ ಸರಿ.

●.ಈ ಪದ್ಧತಿ, ಬ್ರಿಟನ್‌ನ ಮಾದರಿಯಿಂದ ಎರವಲು ಪಡೆದದ್ದು ಸಂವಿಧಾನ ಪೂರ್ವದ ಸಮಯದಲ್ಲಿ. ಸಂವಿಧಾನ ಸಭೆ ( ಕಾನ್‌ಸ್ಟಿಟ್ಯುಯೆಂಟ್ ಅಸೆಂಬ್ಲಿ) ಯಲ್ಲಿ ಜರುಗಿದ ಕಾರ್ಯಕಲಾಪಗಳಲ್ಲಿ ಎಫ್‌ಪಿಟಿಪಿ ಮತ್ತು ಅನುಪಾತ ಆಧಾರಿತ ಚುನಾವಣಾ ವ್ಯವಸ್ಥೆ (ಪ್ರಪೋರ್ಷನಲ್ ರೆಪ್ರೆಸೆಂಟೇಷನ್- ಪಿಆರ್) ಕುರಿತು ವ್ಯಾಪಕ ಚರ್ಚೆ, ವಾದವಿವಾದಗಳು ಜರುಗಿದವು. ಆದರೆ ಆಗ ನಮ್ಮ ರಾಷ್ಟ್ರದಲ್ಲಿ ಸಾಕ್ಷರತೆಯ ಪ್ರಮಾಣ ತುಂಬ ಕಡಿಮೆಯಿದ್ದುದರಿಂದ (ಸುಮಾರು ಶೇ 15), ಜನರು ಎಫ್‌ಪಿಟಿಪಿ ಪದ್ಧತಿಯನ್ನು ಸುಲಭವಾಗಿ ಗ್ರಹಿಸುತ್ತಾರೆ ಎಂಬ ನಿಲುವಿಗೆ ಪುಷ್ಟಿ ದೊರೆತು, ಈ ಪದ್ಧತಿ ಜಾರಿಯಾಯಿತು.

●.ಪ್ರಸ್ತುತ ಭಾರತದಲ್ಲಿ ಶಾಸನಸಭೆ ಮತ್ತು ಲೋಕಸಭೆಗಳಿಗೆ ಈ ಎಫ್‌ಪಿಟಿಪಿ ಮಾದರಿಯಲ್ಲೇ ಚುನಾವಣೆಗಳು ಜರಗುತ್ತಿವೆ. ನಮ್ಮಲ್ಲಿ ಪ್ರಜಾಪ್ರಭುತ್ವ ಭದ್ರವಾಗಿ ನೆಲೆಯೂರುವುದರಲ್ಲಿ ಈ ಮಾದರಿ ವಹಿಸಿದ ಐತಿಹಾಸಿಕ ಪಾತ್ರವನ್ನು ತಳ್ಳಿಹಾಕುವಂತಿಲ್ಲ. ಆದರೆ ವರ್ಷಗಳು ಉರುಳಿದಂತೆ, ಈ ಪದ್ಧತಿಯಲ್ಲಿ ಅನೇಕ ಬಗೆಯ ವಿರೋಧಾಭಾಸಗಳು ನುಸುಳಿವೆ. ಇವು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿಧ್ವಂಸಕಾತ್ಮಕವಾಗಿ ಕಾಡುತ್ತಿವೆ. ಕಡಿಮೆ ಮತಗಳನ್ನು ಪಡೆದರೂ, ಅತಿಹೆಚ್ಚು ಸ್ಥಾನಗಳನ್ನು ಗಳಿಸಿದ್ದಕ್ಕಾಗಿ, ಪಕ್ಷಗಳು ಅಧಿಕಾರದ ಗದ್ದುಗೆಯನ್ನೇರಿದ ನಿದರ್ಶನಗಳಿವೆ. ಈ ಪ್ರಕ್ರಿಯೆ ಕೇಂದ್ರದಲ್ಲಿ ಹಾಗೂ ರಾಜ್ಯಗಳಲ್ಲೂ ಜರುಗಿವೆ. ಅಂದರೆ, ಈ ಮಾದರಿಯಲ್ಲಿ, ಜನಾದೇಶದ ವಿರುದ್ಧ ಅಲ್ಪಸಂಖ್ಯಾತ ಸರ್ಕಾರ ಅಸ್ತಿತ್ವಕ್ಕೆ ಬಂದು ಅಧಿಕಾರವನ್ನು ಚಲಾಯಿಸುತ್ತದೆ. ಹೀಗಾಗಿ, ಬಹುಸಂಖ್ಯಾತ ಜನರ ಪ್ರಾತಿನಿಧ್ಯಕ್ಕೆ ಪ್ರಾಶಸ್ತ್ಯ ಸಿಗುತ್ತಿಲ್ಲ. ಇದರಡಿ, ದುಡಿಯುವ ವರ್ಗ, ಮಹಿಳೆಯರು, ದಲಿತರು,  ಆದಿವಾಸಿಗಳು, ಧಾರ್ಮಿಕ, ಜನಾಂಗೀಯ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಯಥಾರ್ಥ ಪ್ರಾತಿನಿಧ್ಯವೂ ದೊರಕುತ್ತಿಲ್ಲ; ಅಧಿಕಾರದಲ್ಲಿ ಸೂಕ್ತ ಪಾಲು ಸಿಗುತ್ತಿಲ್ಲ.

●.ಈಗ ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಸುಮಾರು ಶೇ 65ರಷ್ಟಿದೆ. ಆದುದರಿಂದ, ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವುದಕ್ಕೆ ಇದು ಸಕಾಲ. ಎಫ್‌ಪಿಟಿಪಿ ಮತ್ತು ಅನುಪಾತ ಆಧಾರಿತ ಪ್ರತಿನಿಧಿತ್ವದ (ಪಿಆರ್) ಸಂಯೋಜಿತ ಪದ್ಧತಿಯನ್ನು ಜಾರಿ ಮಾಡಿದರೆ, ಅದು ಆರೋಗ್ಯಕರವಾದ ಪ್ರಜಾಪ್ರಭುತ್ವದ ಪರಂಪರೆಗೆ ನಾಂದಿ ಹಾಡಬಹುದೆಂದು ಕೆಲವು ಚುನಾವಣಾ ಸುಧಾರಣಾವಾದಿಗಳ ನಿಲುವು. ಈ ಪಿಆರ್ ಪದ್ಧತಿಯಲ್ಲಿ ಸುಮಾರು 20 ಭಿನ್ನ ಮಾದರಿಗಳಿವೆ. ಚಲಾವಣೆಯಾದ ಮತಗಳ ಶೇಕಡಾವಾರು ಆಧಾರದ ಮೇಲೆ ಒಂದು ಪಕ್ಷಕ್ಕೆ ಸ್ಥಾನಗಳು ಲಭಿಸುವುದು ಈ ಪದ್ಧತಿಯ ವೈಶಿಷ್ಟ್ಯ. ಇದರಿಂದಾಗಿ, ಪಡೆದ ಮತಗಳು ಮತ್ತು ಶೇಕಡಾವಾರು ಗಳಿಸಿದ ಸ್ಥಾನಗಳ ನಡುವೆ ವ್ಯತ್ಯಾಸವಿರುವುದಿಲ್ಲ.

●.ಹಾಗಾಗಿ, ಅತಿಹೆಚ್ಚು ಮತದಾರರು ಬೆಂಬಲಿಸುವ ಪಕ್ಷಗಳು ಮಾತ್ರ ಅಧಿಕಾರದ ಚುಕ್ಕಾಣಿ ಹಿಡಿಯುತ್ತವೆ. ಇದರಡಿ ಶೇ 50ಕ್ಕಿಂತ ಹೆಚ್ಚಿಗೆ ಮತದಾರರ ಬೆಂಬಲವೇ ಬಹುಮತವಾಗುತ್ತದೆ. ಉಳಿದ ಮತಗಳು ಇತರ ಅಭ್ಯರ್ಥಿಗಳಿಗೆ ದೊರಕಿ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಎಲ್ಲ ಮತದಾರರಿಗೂ ಪ್ರಾತಿನಿಧ್ಯ ಸಿಗುವ ಅವಕಾಶದ ಸೃಷ್ಟಿ ಈ ಪದ್ಧತಿಯ ಹೈಲೈಟ್.

●.ಈ ಪಿಆರ್ ಪದ್ಧತಿಯಲ್ಲಿ ರಾಜಕೀಯ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವವನ್ನು ಪಾಲಿಸಲೇಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಅವು ಚುನಾವಣೆಯ ಮುನ್ನವೇ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ಅದನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುತ್ತವೆ. ನಂತರ, ಚುನಾವಣಾ ಆಯೋಗ ಅಭ್ಯರ್ಥಿಗಳು ಅನುಪಾತದ ಆಧಾರದಲ್ಲಿ ಪಡೆದಿರುವ ಮತಗಳ ಸಂಖ್ಯೆಯನ್ನು ಪರಿಗಣಿಸಿ, ವಿಜಯಶಾಲಿಗಳನ್ನು ಘೋಷಿಸುತ್ತದೆ. ಮೇಲೆ ಪ್ರಸ್ತಾಪಿಸಿರುವ ಪಟ್ಟಿಯಲ್ಲಿ, ರಾಜಕೀಯ ಪಕ್ಷಗಳು ಸ್ಪರ್ಧಿಯ ಹೆಸರು ಹಾಗೂ ಆತ/ಆಕೆ ಸ್ಪರ್ಧಿಸುವ ಚುನಾವಣಾ ಕ್ಷೇತ್ರದ ಮಾಹಿತಿಯನ್ನು ನೀಡುತ್ತವೆ. ಹೀಗಾಗಿ, ಆಯಾಯ ಕ್ಷೇತ್ರದ ಮತದಾರರು ತಾವು ಬಯಸಿದ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವ ಅವಕಾಶವಿರುತ್ತದೆ. ಅಲ್ಲದೆ ಒಂದು ರಾಜಕೀಯ ಪಕ್ಷ ತನ್ನ ಅಭ್ಯರ್ಥಿಗಳನ್ನು ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿ ತನ್ನ ಶೇಕಡಾವಾರು ಮತಗಳನ್ನು ವೃದ್ಧಿಸಿಕೊಳ್ಳಬಹುದು. ಈ ಪದ್ಧತಿಯಲ್ಲಿ, ಪಕ್ಷವು ತನ್ನ ಸಿದ್ಧಾಂತವನ್ನು ಮತ್ತು ಅಭ್ಯರ್ಥಿಯ ಜನಾನುರಾಗವನ್ನು ಮತದಾರರಿಗೆ ಸೂಕ್ತವಾಗಿ ತಿಳಿಸಬಹುದು.

●.ಈಗಾಗಲೇ, ಈ ಪದ್ಧತಿ ವಿಶ್ವದ 89 ಪ್ರಜಾಪ್ರಭುತ್ವವಾದಿ ದೇಶಗಳಲ್ಲಿ ಜಾರಿಯಲ್ಲಿದೆ. ಇಂತಹ ಅನೇಕ ದೇಶಗಳಲ್ಲಿ ಎಲ್ಲ ಚುನಾವಣೆಯ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಈ ಕಾರಣದಿಂದ, ಭ್ರಷ್ಟಾಚಾರ, ಹಿಂಸೆ, ಅಪರಾಧೀಕರಣ, ಹಣ ಮತ್ತು ತೋಳ್ಬಲ, ಜಾತಿವಾದ ಮತ್ತು ಕೋಮುವಾದ ಕಡಿಮೆಯಾಗುತ್ತದೆ. ಯಾವ ಕ್ಷೇತ್ರದಲ್ಲಿ, ಪ್ರದೇಶದಲ್ಲಿ ಸಣ್ಣ ಸಣ್ಣ ಸಮುದಾಯಗಳು ಅತಿ ಹೆಚ್ಚು ಮತಗಳನ್ನು ಪಡೆದು ಗೆಲ್ಲಲು ಅವಕಾಶವಿರುವುದಿಲ್ಲವೋ, ಅಲ್ಲಿ ಅವುಗಳಿಗೆ ಸಮ್ಮಿಶ್ರ ಪ್ರತಿನಿಧಿತ್ವ ಪಡೆಯುವ ಅವಕಾಶವಿರುತ್ತದೆ. ಹಾಗೆಯೇ, ಚಿಕ್ಕ ಪಕ್ಷಗಳು ಪ್ರತಿನಿಧಿತ್ವ ಇರದ ಸಮುದಾಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಶೇಕಡಾವಾರು ಹೆಚ್ಚಿನ ಮತಗಳನ್ನು ಗಳಿಸಿ ಅಧಿಕಾರಕ್ಕೆ ಬರಬಹುದು.

●.ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಕ್ಕೆ ಹಾಗೂ ಇಲ್ಲಿರುವ ಬಹುಸಂಸ್ಕೃತಿಯ, ಬಹುಸಮುದಾಯಗಳ, ಬಹುಜನಾಂಗೀಯ ಮತ್ತು ಬಹುಭಾಷೀಯ ಸಮ್ಮಿಶ್ರ ರಾಜಕೀಯಕ್ಕೆ ಅನುಪಾತ ಆಧಾರಿತ ಚುನಾವಣಾ ಪದ್ಧತಿ ಹೆಚ್ಚು ಸಮರ್ಪಕ ಮತ್ತು ಅನುಕೂಲಕರ. ಅನೇಕ ವರ್ಷಗಳಿಂದ ಎಡಪಕ್ಷಗಳು ಈ ಪದ್ಧತಿ ಜಾರಿಯಾಗಬೇಕೆಂದು ಸಾರುತ್ತ ಬಂದಿವೆ. ಇತ್ತೀಚಿನ ದಿನಗಳಲ್ಲಿ ಇನ್ನು ಕೆಲವು ಸಣ್ಣ ರಾಜಕೀಯ ಪಕ್ಷಗಳು ಈ ವಿಷಯದಲ್ಲಿ ಆಸ್ಥೆ ವಹಿಸುತ್ತಿವೆ.

●.ಚುನಾವಣಾ ಆಯೋಗವೂ ಈ ಪದ್ಧತಿಯ ಅನುಷ್ಠಾನಕ್ಕಾಗಿ ಹೋರಾಡುತ್ತಿರುವ ಸಂಘ-ಸಂಸ್ಥೆಗಳು ಮತ್ತು ಸಂಘಟನೆಗಳ ಜೊತೆ ಸಮಾಲೋಚನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಈ ಬೆಳವಣಿಗೆಗಳು ಆಶಾದಾಯಕ. ಇವೆಲ್ಲದರ ಫಲವಾಗಿ, ಒಂದು ಸೂಕ್ತ ಅನುಪಾತ ಆಧಾರಿತ ಚುನಾವಣಾ ವ್ಯವಸ್ಥೆ ಜಾರಿಯಾದರೆ, ನಮ್ಮಲ್ಲಿರುವ ಪ್ರಜಾಪ್ರಭುತ್ವನಿಜವಾದ ಅರ್ಥದಲ್ಲಿ ಗಟ್ಟಿಗೊಳ್ಳಬಹುದು.

(ಕೃಪೆ: ಪ್ರಜಾವಾಣಿ)

Sunday 15 November 2015

☀ಭಾರತದ ಸಾಂವಿಧಾನಿಕ ಮುಖ್ಯಸ್ಥರ ಪ್ರಮಾಣವಚನ ಭೋದನೆ ಮತ್ತು ರಾಜಿನಾಮೆ ಸಲ್ಲಿಕೆ. (Oaths of Constitutional Officers of India and Submission of Resignations)

☀ಭಾರತದ ಸಾಂವಿಧಾನಿಕ ಮುಖ್ಯಸ್ಥರ ಪ್ರಮಾಣವಚನ ಭೋದನೆ ಮತ್ತು ರಾಜಿನಾಮೆ ಸಲ್ಲಿಕೆ.
(Oaths of Constitutional Officers of India and Submission of Resignations)
━━━━━━━━━━━━━━━━━━━━━━━━━━━━━━━━━━━━━━━━━━━
■.ಭಾರತದ ಸಂವಿಧಾನ
(Indian. Constitution)

■.ಸಾಮಾನ್ಯ ಅಧ್ಯಯನ
(General Studies)


— ಭಾರತದ ಸಾಂವಿಧಾನಿಕ ಮುಖ್ಯಸ್ಥರಿಗೆ ಪ್ರಮಾಣವಚನ ಭೋದಿಸುವವರು ಯಾರು ಹಾಗು ಅವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸುವರು ಎಂಬುದನ್ನು ಪರೀಕ್ಷಾ ದೃಷ್ಟಿಯಿಂದ ಮಹತ್ವದೆನಿಸಿರುವದನ್ನು ಸಂಕ್ಷಿಪ್ತವಾಗಿ ಮಾತ್ರ ಇಲ್ಲಿ ಕೊಡಲಾಗಿದೆ.


●.ರಾಷ್ಟ್ರಪತಿ(The President) :
━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ಉಪರಾಷ್ಟ್ರಪತಿ


●.ಉಪರಾಷ್ಟ್ರಪತಿ(Vice-President):
━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ


●.ಪ್ರಧಾನಮಂತ್ರಿ(Prime Minister):
━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ


●.ಲೋಕಸಭಾ ಸ್ಪೀಕರ್(Lok Sabha Speaker).
━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ಲೋಕಸಭೆಯ ಉಪ ಸ್ಪೀಕರ್.


●.ಲೋಕಸಭೆಯ ಉಪ ಸ್ಪೀಕರ್(Deputy Speaker of Lok Sabha).
━━━━━━━━━━━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ಲೋಕಸಭಾ ಸ್ಪೀಕರ್


●.ಮುಖ್ಯ ಚುನಾವಣಾ ಆಯುಕ್ತ (Chief Election Commissioner).
━━━━━━━━━━━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.


●.ಅಟಾರ್ನಿ ಜನರಲ್(Attorney General).
━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ


●.ಮಹಾಲೇಖಪಾಲರು (CAG- Comptroller and Auditor General).
━━━━━━━━━━━━━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ. .
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ


●.ಸಾಲಿಸಿಟರ್ ಜನರಲ್(Solicitor-General).
━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.


●.ಲೋಕಸೇವಾ ಆಯೋಗದ ಛೇರ್ಮನ್
(Chairman, Public Service Commission).
━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.


●.ಯೋಜನಾ ಆಯೋಗದ ಛೇರ್ಮನ್
(Chairman, Planning Commission)
━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.


●.ಯೋಜನಾ ಆಯೋಗದ ಸದಸ್ಯರು
(Members, Planning Commission).
━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ಪ್ರಧಾನಮಂತ್ರಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ಪ್ರಧಾನಮಂತ್ರಿ.


●.ಆರ್ಬಿಐ ಗವರ್ನರ್ (Governor, RBI ).
━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಷ್ಟ್ರಪತಿ.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.


●.ಮುಖ್ಯಮಂತ್ರಿ(Chief Minister )
━━━━━━━━━━━━━━━━━━━━━━.
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಜ್ಯಪಾಲರು.


●.ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ
(Chief Justice of High Court).
━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.


●.ಹೈಕೋರ್ಟ್ ನ ಇತರ ನ್ಯಾಯಾಧೀಶರು
(Other Judges of High Court ).
━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಷ್ಟ್ರಪತಿ.


●.ಅಡ್ವೋಕೇಟ್ ಜನರಲ್(Advocate General )
━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಜ್ಯಪಾಲರು.


●.ಅಕೌಂಟೆಂಟ್ ಜನರಲ್(Accountant General ).
━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಜ್ಯಪಾಲರು.


●.ರಾಜ್ಯ ಲೋಕಸೇವಾ ಆಯೋಗದ ಅಧ್ಯಕ್ಷರು.
(Chairman, State Public Service Commission).
━━━━━━━━━━━━━━━━━━━━━━━━━━━━━━━━━━━━━
■.ಪ್ರಮಾಣವಚನ ಭೋದಿಸುವವರು •┈┈┈┈• ರಾಜ್ಯಪಾಲರು.
■.ರಾಜೀನಾಮೆ ಇವರಿಗೆ ಸಲ್ಲಿಸುವರು •┈┈┈┈• ರಾಜ್ಯಪಾಲರು

Saturday 14 November 2015

☀ಜಗತ್ತಿನ ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು : (World famous Newspapers and Magazines)

☀ಜಗತ್ತಿನ ಪ್ರಮುಖ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು :
(World famous Newspapers and Magazines)
━━━━━━━━━━━━━━━━━━━━━━━━━━━━━━━━━━━━━━━━━━━

■.ಸಾಮಾನ್ಯ ಜ್ಞಾನ
(General Knowledge)

■.ಸಾಮಾನ್ಯ ಅಧ್ಯಯನ
(General Studies)

●.ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು •┈┈┈┈┈┈┈┈• ದೇಶ
━━━━━━━━━━━━━━━━━━━━━━━━━━━━━━━━━━

1. ನೆವ್ ಸ್ಟ್ರೈಟ್ಸ್ ಟೈಮ್ಸ್ •┈┈┈┈┈┈┈┈• ಮಲೇಷ್ಯಾ.

2. ದಿ ಸ್ಟ್ರೈಟ್ಸ್ ಟೈಮ್ಸ್ •┈┈┈┈┈┈┈┈• ಸಿಂಗಪುರ್.

 3. ಸರವಾಕ್ ಟ್ರಿಬ್ಯೂನ್ •┈┈┈┈┈┈┈┈• ಮಲೇಷ್ಯಾ.

4. ಟಾಮಿಲ್ ಮುರಸು •┈┈┈┈┈┈┈┈• ಸಿಂಗಾಪುರ್ ^.

5. ಟುಡೆ •┈┈┈┈┈┈┈┈• ಸಿಂಗಪುರ್.

6. ಗ್ಲೋಬಲ್ ಟೈಮ್ಸ್ •┈┈┈┈┈┈┈┈• ಚೀನಾ.

7. ಲಿಗಾಲ್ ಡೈಲಿ •┈┈┈┈┈┈┈┈• ಚೀನಾ.

8. ಪೀಪಲ್ಸ್ ಡೈಲಿ •┈┈┈┈┈┈┈┈• ಚೀನಾ.

9.ಗೋರ್ಖಪತ್ರ •┈┈┈┈┈┈┈┈• ನೇಪಾಳ.

10. ಝಮನ್ •┈┈┈┈┈┈┈┈• ಟರ್ಕಿ.

11.ದಿ ಸನ್ •┈┈┈┈┈┈┈┈• ಯುನೈಟೆಡ್ ಕಿಂಗ್ಡಮ್.

12. ಡೈಲಿ ಮೇಲ್ •┈┈┈┈┈┈┈┈• ಯುನೈಟೆಡ್ ಕಿಂಗ್ಡಮ್.

13. ಡೈಲಿ ಮಿರರ್ •┈┈┈┈┈┈┈┈• ಯುನೈಟೆಡ್ ಕಿಂಗ್ಡಮ್.

14. ಗಾರ್ಡಿಯನ್ •┈┈┈┈┈┈┈┈• ಯುನೈಟೆಡ್ ಕಿಂಗ್ಡಮ್.

15. ದಿ ಇಂಡಿಪೆಂಡೆಂಟ್ •┈┈┈┈┈┈┈┈• ಯುನೈಟೆಡ್ ಕಿಂಗ್ಡಮ್.

16. ಚಾರ್ಲಿ ಹೆಬ್ಡೊ •┈┈┈┈┈┈┈┈• ಫ್ರಾನ್ಸ್.

17. ಲಾ ರಿಪಬ್ಲಿಕಾ •┈┈┈┈┈┈┈┈• ಇಟಲಿ.

18. ದಿ ವಾಲ್ ಸ್ಟ್ರೀಟ್ ಜರ್ನಲ್ •┈┈┈┈┈┈┈┈• ಅಮೇರಿಕಾ.

19. ದಿ ನ್ಯೂಯಾರ್ಕ್ ಟೈಮ್ಸ್ •┈┈┈┈┈┈┈┈• ಅಮೇರಿಕಾ.

20. ಯುಎಸ್ಎ ಟುಡೆ •┈┈┈┈┈┈┈┈• ಅಮೇರಿಕಾ.

21 ಲಾಸ್ ಏಂಜಲೀಸ್ ಟೈಮ್ಸ್ •┈┈┈┈┈┈┈┈• ಅಮೇರಿಕಾ.

22. ದಿ ಹೆರಾಲ್ಡ್ ಸನ್ •┈┈┈┈┈┈┈┈• ಆಸ್ಟ್ರೇಲಿಯಾ.

☀ಜೀವಸತ್ವಗಳು ಮತ್ತು ಅವುಗಳ ರಾಸಾಯನಿಕ ಹೆಸರುಗಳು : (Vitamin Names &their Chemical Names)

☀ಜೀವಸತ್ವಗಳು ಮತ್ತು ಅವುಗಳ ರಾಸಾಯನಿಕ ಹೆಸರುಗಳು :
(Vitamin Names &their Chemical Names)
━━━━━━━━━━━━━━━━━━━━━━━━━━━━━━━━━
●.ಸಾಮಾನ್ಯ ವಿಜ್ಞಾನ
General Science)


●.ಜೀವಸತ್ವ ಎ •┈┈┈┈┈┈• ರೆಟಿನಾಲ್

●.ಜೀವಸತ್ವ ಬಿ1 •┈┈┈┈┈┈• ಥಿಯಾಮೈನ್

●.ಜೀವಸತ್ವ ಬಿ2 •┈┈┈┈┈┈• ರಿಬೋಫ್ಲಾವಿನ್

●.ಜೀವಸತ್ವ ಬಿ3 •┈┈┈┈┈┈• ನಿಯಾಸಿನ್

●.ಜೀವಸತ್ವ ಬಿ5 •┈┈┈┈┈┈• ಪಾಂಟೊಥೆನಿಕ್ ಆಮ್ಲ

●.ಜೀವಸತ್ವ ಬಿ6 •┈┈┈┈┈┈• ಪೆರಿಡೊಕ್ಸೀನ್

●.ಜೀವಸತ್ವ ಬಿ7 •┈┈┈┈┈┈• ಬಯೋಟಿನ್

●.ಜೀವಸತ್ವ ಬಿ9 •┈┈┈┈┈┈• ಫೋಲಿಕ್ ಆಮ್ಲ

●.ಜೀವಸತ್ವ ಬಿ12 •┈┈┈┈┈┈• ಸೈಯಾನೊಕೊಬಾಲಮಿನ್

●.ಜೀವಸತ್ವ ಸಿ •┈┈┈┈┈┈• ಆಸ್ಕೋರ್ಬಿಕ್ ಆಮ್ಲ

●.ಜೀವಸತ್ವ ಡಿ •┈┈┈┈┈┈• ಕ್ಯಾಲ್ಷಿಫೆರಾಲ್

●.ಜೀವಸತ್ವ ಇ •┈┈┈┈┈┈• ಟೊಕೊಫೆರಾಲ್

●.ಜೀವಸತ್ವ ಕೆ •┈┈┈┈┈┈• ಫೈಲ್ಲೋಕ್ವಿನೊನ್ ಮತ್ತು ಮೆನಾಕ್ವಿನ್ನೋನ್ಸ್

Saturday 7 November 2015

●. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ : ☀.ಗ್ಲೋಬಲ್ ಪೊಜಿಶನಿಂಗ್ (GPS) ಸಿಸ್ಟಂ ಎಂದರೇನು? ಅದರ ಪ್ರಮುಖ ಉಪಯೋಗಗಳೊಂದಿಗೆ ಕಾರ್ಯನಿರ್ವಹಣೆಯ ಕುರಿತು ಬರೆಯಿರಿ. (Global Positioning System) :

●. ಈ ದಿನದ ಐಎಎಸ್ / ಕೆಎಎಸ್ ಪರೀಕ್ಷಾ ಪ್ರಶ್ನೆ :
☀.ಗ್ಲೋಬಲ್ ಪೊಜಿಶನಿಂಗ್ (GPS) ಸಿಸ್ಟಂ ಎಂದರೇನು?  ಅದರ ಪ್ರಮುಖ ಉಪಯೋಗಗಳೊಂದಿಗೆ ಕಾರ್ಯನಿರ್ವಹಣೆಯ ಕುರಿತು ಬರೆಯಿರಿ.
(Global Positioning System) :
━━━━━━━━━━━━━━━━━━━━━━━━━━━

●.ಮಾಹಿತಿ ಹಾಗೂ ತಂತ್ರಜ್ಞಾನ
(Information and Technology)

●.ಸಾಮಾನ್ಯ ಅಧ್ಯಯನ
(General Studies)


●.ಈ ವ್ಯವಸ್ಥೆಯು ಇಂದು ಅತಿ ಹೆಚ್ಚು ಉಪಯುಕ್ತತೆಯನ್ನು ಹೊಂದಿದ್ದು, ಹಲವಾರು ಕ್ಷೇತ್ರಗಳಲ್ಲಿ ಲಾಭದಾಯಕವಾಗಿ ಈ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ.

●.ಜಿ.ಪಿ.ಎಸ್. ತಂತ್ರಜ್ಞಾನವು ಕೃತಕ ಉಪಗ್ರಹಗಳು ಕಳುಹಿಸುವ ಮಾಹಿತಿ ಹಾಗೂ ಭೂ ಮೇಲ್ಮೈಯಲ್ಲಿ ಯಾವುದೇ ವ್ಯಕ್ತಿಯ ಬಳಿಯಿರುವ ರಿಸೀವರ್‍ಗಳಿಂದ ಕಾರ್ಯ ನಿರ್ವಹಿಸಲ್ಪಡುವುದು.

●.ಇದರ ಮುಖ್ಯ ಕಾರ್ಯ ಭೂ ಮೇಲ್ಮೈಯಲ್ಲಿನ ಯಾವುದೇ ಒಂದು ಸ್ಥಿರವಾಗಿರುವ ಅಥವಾ ಚಲಿಸುತ್ತಿರುವ ವಸ್ತು ಅಥವಾ ವ್ಯಕ್ತಿಯ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ನಿಖರವಾಗಿ ಸೂಚಿಸುವುದು ಹಾಗೂ ಆ ವಸ್ತುವಿನ ಸ್ಥಾನದ ಎತ್ತರವನ್ನು ಸಹ ಸೂಚಿಸುವುದು.


☀.ಕಾರ್ಯ ನಿರ್ವಹಣೆ :
━━━━━━━━━━━━━━

●.ಜಿ.ಪಿ.ಎಸ್ ವ್ಯವಸ್ಥೆಯು 24 ಕೃತಕ ಉಪಗ್ರಹಗಳ ವ್ಯವಸ್ಥೆಯನ್ನು ಒಳಗೊಂಡಿದ್ದು, ಇದನ್ನು ಅಮೆರಿಕಾ ಸಂಯುಕ್ತ ಸಂಸ್ಥಾನವು ಉಡಾಯಿಸಿ ನಿರ್ವಹಿಸುತ್ತಿದೆ. ಇವುಗಳು ಭೂಮಿಯನ್ನು ನಿರಂತರವಾಗಿ ಸುತ್ತುತ್ತಿವೆ.

●.ಪ್ರತಿಯೊಂದು ಉಪಗ್ರಹವು ಪ್ರಬಲವಾದ ಕ್ಯಾಮರಾ ಹಾಗೂ ಸೌರ ಶಾಖದಿಂದ ಚಲಿಸುವ ನಿಖರವಾದ ಗಡಿಯಾರ ಮತ್ತು ಮಾಹಿತಿ ರವಾನೆಯ ಆ್ಯಂಟೆನಾವನ್ನು ಒಳಗೊಂಡಿರುತ್ತದೆ. ಇವುಗಳಿಂದ ಕಳುಹಿಸುವ ಮಾಹಿತಿಯನ್ನು ಭೂಮಿಯಲ್ಲಿ ಯಾವುದೇ ವ್ಯಕ್ತಿಯ ಬಳಿಯಿರುವ ರಿಸ್ಸೀವರ್ ಪಡೆದು ವಿಶ್ಲೇಷಿಸಿ ಆ ವ್ಯಕ್ತಿಯು ಇರುವ ಸ್ಥಾನ ಹಾಗೂ ವ್ಯಕ್ತಿಯು ಇರುವ ಸ್ಥಳದ ಎತ್ತರವನ್ನು ಸೂಚಿಸುವುದು.

●.ಉಪಗ್ರಹಗಳಿಂದ ಪಡೆಯುವ ಮಾಹಿತಿಯ ಆಧಾರದ ಮೇಲೆ ಆ ವಸ್ತುವಿನಿಂದ ಆಯಾ ಉಪಗ್ರಹಗಳು ಎಷ್ಟು ದೂರದಲ್ಲಿವೆ ಎಂಬುದನ್ನು ಲೆಕ್ಕಾಚಾರ ಮಾಡಿ ಆ ವಸ್ತುವಿನ ಸ್ಥಾನವನ್ನು ಅಕ್ಷಾಂಶ ಮತ್ತು ರೇಖಾಂಶಗಳ ಮೂಲಕ ಸ್ಪಷ್ಟವಾಗಿ ತಿಳಿಯಪಡಿಸುವುದು. ಇದರಿಂದಾಗಿ ಜಿ.ಪಿ.ಎಸ್. ವ್ಯವಸ್ಥೆಯನ್ನು ‘ಮಾರ್ಗಸೂಚಿ’ ಅಥವಾ ಪಾತ್ ಫೈಂಡರ್ (Path finder) ಎಂದೂ ಕರೆಯುವರು.

●.ಇಂದು ಜಿಪಿಎಸ್ ವ್ಯವಸ್ಥೆಯು ರಕ್ಷಣಾ ದೃಷ್ಟಿಯಿಂದಲೂ ಅತಿಮುಖ್ಯ. ಇದರಿಂದಾಗಿ ಭಾರತವು ತನ್ನದೇ ಆದ ಪ್ರಾದೇಶಿಕ ಜಿಪಿಎಸ್ ವ್ಯವಸ್ಥೆಯನ್ನು ಹೊಂದಲು ಏಳು ಉಪಗ್ರಹಗಳನ್ನು ಉಡಾಯಿಸಿದೆ.


☀.ಉಪಯೋಗಗಳು :
━━━━━━━━━━━━━

●.ಪ್ರಾಕೃತಿಕ ವಿಕೋಪಗಳ ಸ್ಪಷ್ಟ ಭೌಗೋಳಿಕ ಸ್ಥಾನವನ್ನು ಗುರುತಿಸಿ ಪರಿಹಾರ ಕೈಗೊಳ್ಳಲು ಇವುಗಳು ಉಪಯುಕ್ತ.

●.ಅರಣ್ಯ ಹಾಗೂ ಪರ್ವತ ಚಾರಣ ಮಾಡುವವರಿಗೆ ಮಾರ್ಗ ತಿಳಿಯಲು ಉಪಯುಕ್ತವಾಗಿವೆ.

●.ಸೈನಿಕರು, ವೈಮಾನಿಕರು, ಮೀನುಗಾರರು ಹಾಗೂ ನಾವಿಕರು ಸರಿಯಾದ ಮಾರ್ಗವನ್ನು ಅನುಸರಿಸಲು ಜಿ.ಪಿ.ಎಸ್. ವ್ಯವಸ್ಥೆ ಅಗತ್ಯ ಮಾಹಿತಿಯನ್ನು ನೀಡುವುದು. ಇಂದು ಸಾರಿಗೆ ಸಿಬ್ಬಂದಿ ನಿರ್ವಹಣೆಯಲ್ಲಿಯೂ ಇದರ ಬಳಕೆ ಹೆಚ್ಚಾಗಿದೆ.

☀.ಭೌಗೋಳಿಕ ಮಾಹಿತಿ ವ್ಯವಸ್ಥೆ (GIS): (Geographical Information System) :

☀.ಭೌಗೋಳಿಕ ಮಾಹಿತಿ ವ್ಯವಸ್ಥೆ (GIS):
(Geographical Information System) :
━━━━━━━━━━━━━━━━━━━━━━━━━━━━━

●.ಮಾಹಿತಿ ಹಾಗೂ ತಂತ್ರಜ್ಞಾನ
(Information and Technology)

●.ಸಾಮಾನ್ಯ ಅಧ್ಯಯನ
(General Studies)


●.ಪೃಥ್ವಿಯ ಮೇಲ್ಮೈನ ಅಂಕಿ-ಅಂಶ ಅಥವಾ ಮಾಹಿತಿಯನ್ನು ಕಲೆಹಾಕುವ, ಸಂಗ್ರಹಿಸುವ, ಅಗತ್ಯವಿದ್ದಾಗ ಬಳಕೆ ಮಾಡುವ, ಮಾರ್ಪಡಿಸುವ ಹಾಗೂ ತೋರಿಸುವ ಪ್ರಬಲ ಸಲಕರಣೆಯ ಸಮೂಹವನ್ನು ಭೌಗೋಳಿಕ ಮಾಹಿತಿ (GIS) ವ್ಯವಸ್ಥೆ ಎಂದು ಕರೆಯಲಾಗಿದೆ.

●.1960 ರಲ್ಲಿ ಕೆನಡಾದಲ್ಲಿ ಆರಂಭಗೊಂಡು ಇಂದು ಇದರ ಬಳಕೆ ವಿಶ್ವವ್ಯಾಪಿಯಾಗಿದೆ.

●.ಭೂ ಮೇಲ್ಮೈ ವಿವಿಧ ಬಗೆಯ ಪ್ರಾಕೃತಿಕ ಹಾಗೂ ಸಾಂಸ್ಕ್ರತಿಕ ಲಕ್ಷಣಗಳೆರಡನ್ನು ಸಹ ಒಳಗೊಂಡಿರುವುದು. ಇದರಲ್ಲಿ ಜಿಲ್ಲೆಗಳು, ಭೂಸ್ವರೂಪಗಳು, ನದಿ ವ್ಯವಸ್ಥೆ, ವಸತಿಗಳ ಹಂಚಿಕೆ, ಭೂ ಸ್ವರೂಪ, ಭೂ ಬಳಕೆ, ಮಣ್ಣು-ಬೆಳೆಗಳ ಹಂಚಿಕೆ ಮೊದಲಾದವುಗಳನ್ನು ಒಂದರ ಮೇಲೊಂದರಂತೆ ಇರಿಸಿ ಅವುಗಳ ಸಂಬಂಧವನ್ನು ಸುಲಭವಾಗಿ ವಿಶ್ಲೇಷಿಸಬಹುದು. ಹೀಗೆ “ಜಿ.ಐ.ಎಸ್. ಕಂಪ್ಯೂಟರ್ ಆಧಾರಿತ ಭೂಮೇಲ್ಮೈನ ವೈವಿಧ್ಯಮಯ ಅಂಕಿ-ಅಂಶಗಳನ್ನು ಸಂಸ್ಕರಿಸುವ ಮತ್ತು ವಿಶ್ಲೇಷಿಸುವ ಒಂದು ವ್ಯವಸ್ಥೆ”ಯಾಗಿದೆ.


☀.ಉಪಯೋಗಗಳು :
━━━━━━━━━━━━━

●.ಜಿ.ಐ.ಎಸ್ ತಂತ್ರಜ್ಞಾನ ಆಧಾರಿತ ನಕ್ಷೆಗಳು ಹೆಚ್ಚು ಆಕರ್ಷಕ ಹಾಗೂ ಮಾಹಿತಿಯನ್ನು ಸ್ಪಷ್ಟವಾಗಿ ನೀಡುತ್ತವೆ.

●.ವಿವಿಧ ಬಗೆಯ ಭೌಗೋಳಿಕ ಸಾಮಾಜಿಕ, ಆರ್ಥಿಕ ಭೂಮೇಲ್ಮೈ ಮಾಹಿತಿಯನ್ನು ಸುಲಭವಾಗಿ ವಿಶ್ಲೇಷಿಸಬಹುದು ಹಾಗೂ ಅವುಗಳ ಮಾದರಿಯನ್ನು ರಚಿಸಬಹುದು.

●.ಪ್ರಾಕೃತಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಜಿಐಎಸ್ ತಂತ್ರಜ್ಞಾನದ ಪ್ರಾಮುಖ್ಯತೆ ಹೆಚ್ಚು ಕಂಡು ಬರುತ್ತದೆ.

●.ಇದು ಕಂಪ್ಯೂಟರ್ ಆಧಾರಿತ ವಿಶ್ಲೇಷಣೆಯಾಗಿದ್ದು, ನಕ್ಷೆಗಳನ್ನು ಅತಿ ಶೀಘ್ರವಾಗಿ, ಅಗತ್ಯಕ್ಕೆ ತಕ್ಕಂತೆ ನಕ್ಷಾ ಶಾಸ್ತ್ರಜ್ಞರ ನೆರವಿಲ್ಲದೆ ಅತಿ ಕಡಿಮೆ ಅವಧಿಯಲ್ಲಿ ಪಡೆಯಬಹುದು ಹಾಗೂ ನಕ್ಷೆಗಳನ್ನು ಮಾರ್ಪಡಿಸಬಹುದು.

— ಪ್ರಸ್ತುತ ಬಳಕೆಯಾಗುತ್ತಿರುವ ಭೌಗೋಳಿಕ ಮಾಹಿತಿ ವ್ಯವಸ್ಥೆ ಹಾಗೂ ನಕ್ಷೆಗಳ ರಚನೆಯ ತಂತ್ರಾಂಶದಲ್ಲಿ ಆ್ಯಪಲ್, ಆರ್ಕ್ ಇನ್ ಫೋ, ಆ್ಯಟೋಕ್ಯಾಡ್, ಮ್ಯಾಪ್ ಇನ್ ಫೋ, ಆಕ್‍ವ್ಯೂ ಮೊದಲಾದವುಗಳು ಅತಿ ಮುಖ್ಯವಾಗಿವೆ.

☀ಜಗತ್ತಿನ ಪ್ರಮುಖ ಕಾರ್ಪೋರೇಟ್ ಕಂಪನಿಗಳು ಮತ್ತು ಅವುಗಳ ಸ್ಥಾಪಕರು : (World Famous Corporate Companies & Founders)

☀ಜಗತ್ತಿನ ಪ್ರಮುಖ ಕಾರ್ಪೋರೇಟ್ ಕಂಪನಿಗಳು ಮತ್ತು ಅವುಗಳ ಸ್ಥಾಪಕರು :
(World Famous Corporate Companies & Founders)
━━━━━━━━━━━━━━━━━━━━━━━━━━━━━━━━━━━━━━━━━━━━━

●.ಸಾಮಾನ್ಯ ಜ್ಞಾನ
(General Knowledge)

●.ಸಾಮಾನ್ಯ ಅಧ್ಯಯನ
(General Studies)


1.ಗೂಗಲ್ (Google) ••┈┈┈┈••  ಲ್ಯಾರಿ ಪೇಜ್ ಮತ್ತು ಸರ್ಜೆ ಬ್ರಿನ್.

2.ಫೇಸ್ ಬುಕ್ (Facebook) ••┈┈┈┈••  ಮಾರ್ಕ್ ಜ್ಯೂಕರ್ಬರ್ಗ್.

3. ಯಾಹೂ (Yahoo) ••┈┈┈┈••  ಡೇವಿಡ್ ಪಾಸ್ಟಾ ಸನ್ ಮತ್ತು ಜೆರ್ರಿ ಯಾಂಗ್.

4. ಟ್ವಿಟ್ಟರ್ (Twitter) ••┈┈┈┈••  ಜ್ಯಾಕ್ ಡಾರ್ಸೆ ಮತ್ತು ಡಿಕ್ ಕೊಸ್ಟಲೊ.

5.ಇಂಟರ್ನೆಟ್ (Internet) ••┈┈┈┈••  ಟಿಮ್ ಬರ್ನರ್ಸ್ ಲೀ.

6. ಲಿಂಕಡ್ ಇನ್ (LinkedIn) ••┈┈┈┈••  ರೀಡ್ ಹಾಫ್ಮನ್, ಅಲೆನ್ ಬ್ಲೂ ಮತ್ತು ಕೂನ್ಸ್ಟಾಂಟೀನ್  ಗ್ಯೂರಿಕ್.

7.ಇ-ಮೇಲ್ (Email) ••┈┈┈┈••  ಶಿವ ಅಯ್ಯಾದುರೈ.

8.ಜಿ ಟಾಕ್ (Gtalk) ••┈┈┈┈••  ರಿಚರ್ಡ್ ವಾಹ್ ಕನ್.

9.ವ್ವಾಟ್ಸ್ ಅಪ್ (Whats up) ••┈┈┈┈•• ಲಾರೆಲ್ ಕಿರ್ಟ್ಜ್.

10.ಹೊಟ್ ಮೈಲ್ (Hotmail) ••┈┈┈┈•• ಸಬೀರ್ ಭಾಟಿಯಾ.

11.ವಿಕಿ ಪೆಡಿಯಾ (Wikipedia) ••┈┈┈┈•• ಜಿಮ್ಮಿ ವೇಲ್ಸ್.

12.ಯು ಟೂಬ್ (You tube) ••┈┈┈┈•• ಸ್ಟೀವ್ ಚೆನ್ ಚಾಡ್ ಹರ್ಲೆ ಮತ್ತು ಜಾವೆದ್ ಕರೀಮ್.

13.ರೆಢೀಪ್ (Rediff) ••┈┈┈┈•• ಅಜಿತ್ ಬಾಲಕೃಷ್ಣನ್.

14.ನಿಂಬುಜ್ (Nimbuzz) ••┈┈┈┈•• ಮಾರ್ಟಿನ್ ಸ್ಮಿಂಕ್ ಮತ್ತು ಎವರ್ಟ್ ಜಾಪ್ ಲುಪ್ಟ್.

15.ಮೈ ಸ್ಪೇಸ್ (Myspace) ••┈┈┈┈•• ಕ್ರಿಸ್ ಡೆವೂಲ್ಫ್ ಮತ್ತು ಟಾಮ್ ಆಂಡರ್ಸನ್.

16. ಇಬಿಬೋ (Ibibo) ••┈┈┈┈•• ಆಶಿಶ್ ಕಶ್ಯಪ್.

17. ಓಎಲ್ಎಕ್ಸ್ (OLX) ••┈┈┈┈•• ಅಲೆಕ್ ಓಕ್ಸೆನ್ ಫೋರ್ಡ್ ಮತ್ತು ಫ್ಯಾಬ್ರಿಸ್ ಗ್ರಿಂಡಾ.

18.ಸ್ಕೈಫೈ (Skype) ••┈┈┈┈•• ವಿದ್ ನಿಕ್ಲಾಸ್ ಜೆನ್ಸ್ಟ್ರಮ್, ಜಾನೂಸ್ ಪ್ರೀಸ್ ಮತ್ತು ರೀಡ್ ಹಾಫ್ಮನ್.

19.ಓಪೆರಾ (Opera) ••┈┈┈┈•• ಜಾನ್ ಸ್ಟೀಫನ್ ಸನ್ ವಾನ್ ಟಿಚ್ನೆರ್ ಮತ್ತು ಗೇರ್ ಇವರ್ಸೋಯ್.

20.ಮೊಜಿಲ್ಲಾ ಫೈರ್ ಬಾಕ್ಸ್ (Mozilla Firefox) ••┈┈┈┈•• ಡೇವ್ ಹ್ಯಾಟ್ ಮತ್ತು ಬ್ಲೇಕ್ ರೋಸ್.

21.ಬ್ಲಾಗರ್ (Blogger) ••┈┈┈┈•• ಇವಾನ್ ವಿಲಿಯಮ್ಸ್.

☀ಕರ್ನಾಟಕವನ್ನು ಆಳಿದ್ದ ಪ್ರಮುಖ ರಾಜಮನೆತನಗಳ ಸಂಕ್ಷಿಪ್ತ ವಿವರಣೆ: ( The most important Dynasties ruled Karnataka)

☀ಕರ್ನಾಟಕವನ್ನು ಆಳಿದ್ದ ಪ್ರಮುಖ ರಾಜಮನೆತನಗಳ ಸಂಕ್ಷಿಪ್ತ ವಿವರಣೆ:
( The most important Dynasties ruled Karnataka)
━━━━━━━━━━━━━━━━━━━━━━━━━━━━━━━━━━

●.ಪ್ರಾಚೀನ ಕರ್ನಾಟಕ ಇತಿಹಾಸ
(Ancient Karnataka History)

●.ಸಾಮಾನ್ಯ ಅಧ್ಯಯನ
(General Studies)


★ ರಾಜಮನೆತನಗಳು ಮತ್ತು ಪ್ರಮುಖ ರಾಜರು :
•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•

1. 3ನೆಯ ಶತಮಾನಕ್ಕಿಂತ ಮುಂಚೆ•┈┈┈┈┈• ಶಾತವಾಹನರು
●.ಪ್ರಮುಖ ರಾಜರು :•┈┈┈┈┈•-ಶ್ರೀಮುಖ, ಗೌತಮಿಪುತ್ರ


2. ಕ್ರಿ.ಶ. 325-540 •┈┈┈┈┈• ಕದಂಬರು
●.ಪ್ರಮುಖ ರಾಜರು :•┈┈┈┈┈•ಮಯೂರವರ್ಮ


3. 325-999  •┈┈┈┈┈• ಗಂಗರು
●.ಪ್ರಮುಖ ರಾಜರು :•┈┈┈┈┈•ಅವಿನೀತ, ದುರ್ವಿನೀತ, ರಾಚಮಲ್ಲ


4. 500-757 •┈┈┈┈┈• ಬಾದಾಮಿ ಚಾಲುಕ್ಯರು
●.ಪ್ರಮುಖ ರಾಜರು :•┈┈┈┈┈• ಮಂಗಳೇಶ, ಪುಲಿಕೇಶಿ


5. 757-973 •┈┈┈┈┈• ರಾಷ್ಟ್ರಕೂಟರು
●.ಪ್ರಮುಖ ರಾಜರು :•┈┈┈┈┈•ಕೃಷ್ಣ, ಗೋವಿಂದ, ನೃಪತುಂಗ


6. 973-1198 •┈┈┈┈┈• ಕಲ್ಯಾಣದ ಚಾಲುಕ್ಯರು
●.ಪ್ರಮುಖ ರಾಜರು :•┈┈┈┈┈•ವಿಕ್ರಮಾದಿತ್ಯ


7. 1198-1312 •┈┈┈┈┈• ದೇವಗಿರಿ ಯಾದವರು
●.ಪ್ರಮುಖ ರಾಜರು :•┈┈┈┈┈•ಸಿಂಗಾಹನ


8. 1000-1346 •┈┈┈┈┈• ಹೊಯ್ಸಳರು
●.ಪ್ರಮುಖ ರಾಜರು :•┈┈┈┈┈• ವಿಷ್ಣುವರ್ಧನ


9. 1336-1565 •┈┈┈┈┈• ವಿಜಯನಗರದ ಅರಸರು
●.ಪ್ರಮುಖ ರಾಜರು :•┈┈┈┈┈• ಕೃಷ್ೞದೇವರಾಯ


10. 1347-1527 •┈┈┈┈┈• ಬಹಮನಿ ಸುಲ್ತಾನರು
●.ಪ್ರಮುಖ ರಾಜರು :•┈┈┈┈┈• ಮಹಮದ್ ಷಾ ೧,೨


11. 1490-1696  •┈┈┈┈┈• ಬಿಜಾಪುರ ಸುಲ್ತಾನರು
●.ಪ್ರಮುಖ ರಾಜರು :•┈┈┈┈┈• ಯೂಸುಫ್ ಆದಿಲ್ ಷಾ, ಇಬ್ರಾಹಿಮ್ ಆದಿಲ್ ಷಾ


12. 1500-1763 •┈┈┈┈┈• ಕೆಳದಿಯ ಅರಸರು
●.ಪ್ರಮುಖ ರಾಜರು :•┈┈┈┈┈• ಚೌಡಪ್ಪನಾಯಕ, ರಾಣಿ ಚನ್ನಮ್ಮ, ಶಿವಪ್ಪನಾಯಕ


13. 1399-1761 •┈┈┈┈┈• ಮೈಸೂರು ಒಡೆಯರು
●.ಪ್ರಮುಖ ರಾಜರು :•┈┈┈┈┈• ರಣಧೀರ ಕಂಠೀರವ, ಚಿಕ್ಕದೇವರಾಯ


14. 1761-1799 •┈┈┈┈┈• ಹ್ಶೆದರ್ ಆಲಿ, ಟಿಪ್ಪುಸುಲ್ತಾನ್


15. 1800-1831 •┈┈┈┈┈• ಮೈಸೂರು ಒಡೆಯರು -ಕೃಷ್ೞರಾಜ ಒಡೆಯರ್


16. 1800 •┈┈┈┈┈• ಕರ್ಣಾಟಕದ ವಿಭಜನೆ: ಹಳೆ ಮೈಸೂರು ಭಾಗವನ್ನು ಹೊರತು ಪಡಿಸಿ ಕರ್ಣಾಟಕವನ್ನು ಬ್ರಿಟಿಷರ ಆಡಳಿತದಲ್ಲಿದ್ದ ಬಾಂಬೆ ಮತ್ತು ಮದರಾಸು ಪ್ರಾಂತಗಳು, ಮರಾಠರು ಮತ್ತು ಹ್ಶೆದರಾಬಾದ್ ನಿಜಾಮರುಗಳ ನಡುವೆ ಹರಿದು ಹಂಚಲಾಯಿತು.


17. 1831-1881 •┈┈┈┈┈• ಬ್ರಿಟಿಷರು -ಆಂಗ್ಲರ ಆಧಿಪತ್ಯ


18. 1881-1950 •┈┈┈┈┈• ಮೈಸೂರು ಒಡೆಯರು -ಕೃಷ್ೞರಾಜ ಒಡೆಯರ್, ಜಯಚಾಮರಾಜ ಒಡೆಯರ್


19. 1956 •┈┈┈┈┈• ಇಂದಿನ ಕರ್ನಾಟಕದ ರಚನೆ

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -22) (General knowledge on Current Affairs (Part-22)) ☆.(ಪ್ರಚಲಿತ ಘಟನೆಗಳ ಕ್ವಿಜ್)

☀ಪ್ರಚಲಿತ ಘಟನೆಗಳೊಂದಿಗೆ ಸಾಮಾನ್ಯ ಜ್ಞಾನ (ಭಾಗ -22)
(General knowledge on Current Affairs (Part-22))
☆.(ಪ್ರಚಲಿತ ಘಟನೆಗಳ ಕ್ವಿಜ್)
━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(Current Affairs)

★ ಸಾಮಾನ್ಯ ಜ್ಞಾನ
(General Knowledge)
 

831) ಕೇಂದ್ರ ಸರ್ಕಾರ ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತು. ಈ ಅಂಚೆ ಚೀಟಿ ಅನಾವರಣಗೊಂಡ ಹಿನ್ನೆಲೆ ಏನು?
a) 125ನೇ ಜನ್ಮ ದಿನಾಚರಣೆ ಅಂಗವಾಗಿ√
b) ಭಾರತ ರತ್ನ ಪುರಸ್ಕಾರ ನೀಡಿದ ಸವಿನೆನಪಿಗೆ
c)  ಅಂಬೇಡ್ಕರ್‌ ವರ್ಷಾಚರಣೆಗಾಗಿ
d)  ಸಂವಿಧಾನ ರಚನೆಗಾಗಿ


832) ಕಳೆದ ಸೆಪ್ಟೆಂಬರ್‌ 10 ರಂದು ಯಾವ ದೇಶದ ಧ್ವಜವನ್ನು ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮೇಲೆ ಹಾರಿಸಲಾಯಿತು?
a) ಇಸ್ರೇಲ್‌
b) ಪ್ಯಾಲೆಸ್ಟೈನ್√‌
c) ಸಿರಿಯಾ
d) ಈಜಿಪ್ಟ್‌


833) ಇತ್ತೀಚೆಗೆ ಭಾರತದೊಂದಿಗೆ ನಾಲ್ಕು ಅಂಶಗಳ ಶಾಂತಿ ಒಪ್ಪಂದಕ್ಕೆ ಕರೆ ನೀಡಿದ ದೇಶ ಯಾವುದು?
a) ಚೀನಾ        
b) ಶ್ರೀಲಂಕಾ
c) ಪಾಕಿಸ್ತಾನ √    
d) ನೇಪಾಳ


834) 2015ರ ಅಕ್ಟೋಬರ್‌ ತಿಂಗಳನ್ನು ಯಾವ ಅಂತರರಾಷ್ಟ್ರೀಯ ಮಾಸ ಎಂದು ಆಚರಣೆ ಮಾಡಲಾಗುತ್ತಿದೆ?
a) ವಿಶ್ವ ಮಾಂಸಾಹಾರ ತಿಂಗಳು
b) ವಿಶ್ವ ಆರೋಗ್ಯ ಮಾಸ
c) ವಿಶ್ವ ಕುರುಕಲು ತಿಂಡಿಗಳ ಮಾಸ
d) ವಿಶ್ವ ಸಸ್ಯಹಾರ ತಿಂಗಳು√


835) ಜಮೈಕಾದ ಲೇಖಕ ಮರ್ಲೊನ್‌ ಜೇಮ್ಸ್‌ ಅವರ ಯಾವ ಕಾದಂಬರಿಗೆ 2015ನೇ ಸಾಲಿನ ಮ್ಯಾನ್‌ ಬುಕರ್‌ ಪುರಸ್ಕಾರ ಸಂದಿದೆ?
a) ಎ ಬ್ರೀಫ್‌ ಹಿಸ್ಟರಿ ಆಫ್‌ ಸೆವೆನ್‌ ಕಿಲ್ಲಿಂಗ್ಸ್√‌
b) ದ ಇಯರ್‌ ಆಫ್‌ ರನ್‌ ಅವೇಸ್‌’
c)  ಸ್ಯಾಟಿನ್‌ ಐಲೆಂಡ್‌
d) ಎ ಲಿಟಲ್‌ ಲೈಫ್‌


836) ಜೋರ್ಡನ್‌ ದೇಶದ ರಾಜಧಾನಿ ಅಮ್ಮಾನ್‌ ನಗರದ ರಸ್ತೆಯೊಂದಕ್ಕೆ ಮಹಾತ್ಮ ಗಾಂಧಿ ಅವರ ಹೆಸರನ್ನು ಯಾರು ಇತ್ತೀಚೆಗೆ ನಾಮಕರಣ ಮಾಡಿದರು?
a) ನರೇಂದ್ರ ಮೋದಿ  
b) ಪ್ರಣವ್‌ ಮುಖರ್ಜಿ√
c) ಸುಷ್ಮಾ ಸ್ವರಾಜ್‌
d) ಹಮೀದ್‌ ಅನ್ಸಾರಿ


837)  2015ನೇ ಸಾಲಿನ ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪಡೆದ ಲೇಖಕಿ ಹಾಗೂ ಪತ್ರಕರ್ತೆ ಸ್ವೆಟ್ಲಾನಾ ಅಲೆಕ್ಸಿಯೆವಿಚ್‌ ಅವರು ಮೂಲತಹ ಯಾವ ದೇಶದವರು?
a)  ಉಕ್ರೆನ್‌
b) ರಷ್ಯಾ
c) ಬೆಲಾರಸ್√‌
d) ಜರ್ಮನಿ


838) ಖ್ಯಾತ ನಿರ್ಮಾಪಕ ಇ. ನಾಗೇಶ್ವರ ರಾವ್‌ ಇತ್ತೀಚೆಗೆ ನಿಧನರಾದರು. ಅವರು ನಿರ್ಮಾಣ ಮಾಡಿದ ಜನಪ್ರಿಯ ತೆಲುಗು ಚಿತ್ರಗಳಲ್ಲಿ ಇದು ಸೇರಿಲ್ಲ?
a) ಶಂಕರಾಭರಣಂ
b) ಸ್ವಾತಿಮುತ್ಯಂ
c) ಸಾಗರಸಂಗಮ
d) ಮನಂ√


839) ಭಾರತದ ಅಣುಶಕ್ತಿ ಆಯೋಗದ ಮುಖ್ಯಸ್ಥರಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ?
a)ಶೇಖರ್‌ ಬಸು√
b) ಅರವಿಂದ್‌ ಛಬ್ರಿಯಾ
c) ವಸುಮತಿ ಉಡುಪ
d) ನಾರಾಯಣ್‌ ಶಿಂಧೆ


840)  ಜಾಗತಿಕವಾಗಿ ವಿಶ್ವ ಮೊಟ್ಟೆ ದಿನವನ್ನು ಈ ಕೆಳಕಂಡ ಯಾವ ದಿನದಂದು ಆಚರಣೆ ಮಾಡಲಾಗುತ್ತದೆ?
a) 8 ಅಕ್ಟೋಬರ್‌
b) 9 ಅಕ್ಟೋಬರ್√‌
c) 10 ಅಕ್ಟೋಬರ್‌
d) 11 ಅಕ್ಟೋಬರ್‌


841) 30000 ಕೋಟಿ ರೂಪಾಯಿ ವೆಚ್ಚದ ನಾಗಪುರ–ಮುಂಬೈ ಎಕ್ಸ್‌ಪ್ರೆಸ್‌ಹೈವೆ ಯೋಜನೆಯನ್ನು ಯಾವ ಸರ್ಕಾರ ಘೋಷಣೆ ಮಾಡಿದೆ?
a) ಮಹಾರಾಷ್ಟ್ರ ಸರ್ಕಾರ√      
b) ಕೇಂದ್ರ ಸರ್ಕಾರ
c) ನಾಗಪುರ ಸರ್ಕಾರ          
d) ವಿಶ್ವಸಂಸ್ಥೆ


842) ಕೇಂದ್ರದ ಸ್ಮಾರ್ಟ್‌ಸಿಟಿ ಯೋಜನೆಗೆ ಈ ಕೆಳಕಂಡ ಯಾವ ನಗರ ಸ್ಮಾರ್ಟ್‌ ಸಿಟಿ ಯೋಜನೆಯ ಪಟ್ಟಿಯಲ್ಲಿ ಇಲ್ಲ?
a) ತುಮಕೂರು  
b)ದಾವಣಗೆರೆ
c) ಮೈಸೂರು√    
d) ಮಂಗಳೂರು


843) ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ದೇಶದ ಎಷ್ಟು ರಾಜ್ಯಗಳ ರಾಜಧಾನಿ ನಗರಗಳು ಸೇರ್ಪಡೆಗೊಂಡಿವೆ?
a) 48  
b) 24√    
c) 32      
d) 13


844) ಭಾರತೀಯ ಜಿಮ್ನಾಸ್ಟಿಕ್‌ ಫೆಡರೇಶನ್‌ನ ನೂತನ ಅಧ್ಯಕ್ಷರು ಯಾರು?
a) ಖಂದಹರಿ
b) ಸುಧಾಕರ್‌ ಶೆಟ್ಟಿ√
c) ಸೂರ್ಯನಾರಾಯಣ
d) ಪ್ರಮೀಳಾ ದೇವಿ


845)ಪ್ರಸಕ್ತ ಸಾಲಿನ ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿ ಯಾರಿಗೆ ನಿಡಲಾಗಿದೆ?
a) ಸೈನಾ ನೆಹ್ವಾಲ್‌  
b) ಅಶ್ವಿನಿ ನಾಚಪ್ಪ
c) ಸಾನಿಯಾ ಮಿರ್ಜಾ√
d) ಪಿ. ಟಿ. ಉಷಾ


846) ಭಾರತೀಯ ಚುನಾವಣಾ ಆಯುಕ್ತರನ್ನಾಗಿ ಈ ಕೆಳಕಂಡ ಯಾರನ್ನು ನೇಮಕ ಮಾಡಲಾಗಿದೆ?
a) ಓಂ ಪ್ರಕಾಶ್‌ ರಾವತ್‌ √    
b) ಜ್ಯೋತಿ ಪಿಳೈ
c) ಸ್ನೇಹಾ ಅಗರ್‌ವಾಲ್‌      
d) ಅರ್ಜುನ್‌ ಸಿನ್ಹಾ


847)ಇತ್ತೀಚೆಗೆ ನಿಧನರಾದ ಓಂ ಪ್ರಕಾಶ್‌ ಮುಂಜಲ್‌ ಅವರು ಯಾವ ಪ್ರಸಿದ್ಧ ಕಂಪೆನಿಯನ್ನು ಹುಟ್ಟು ಹಾಕಿದ್ದರು?
a) ಟಿವಿಎಸ್‌ ಕಂಪೆನಿ
b) ಅಶೋಕ್‌ ಲೈಲ್ಯಾಂಡ್‌
c) ಹಿರೋ ಸೈಕಲ್‌  √
d) ಬಜಾಜ್‌ ಕಂಪೆನಿ


848)ಪೊಲ್ಯಾಂಡ್‌ನಲ್ಲಿ ನಡೆದ ಅರ್ಚರಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಬಂಗಾರ ತಂದುಕೊಟ್ಟ ಆಟಗಾರ?
a) ಮಂಗಲ್‌ ಸಿಂಗ್‌
b) ಅಭಿಶೇಕ್‌ ವರ್ಮಾ
c) ಪ್ರೀತಮ್‌ ಚಂದ್‌ √
d) ಶೇಖರ್‌ ಖನ್ನಾ


849) ಶ್ರೀಲಂಕಾದ ನೂತನ ಪ್ರಧಾನಮಂತ್ರಿ ಯಾರು?
a) ಆರ್‌. ವಿಕ್ರಮಸಿಂಘೆ √
b) ಎಂ. ರಾಜಪಕ್ಸೆ
c) ಸಿ. ಕೆ. ತುಂಗಾ          
d) ಮೇಲಿನ ಯಾರು ಅಲ್ಲ


850) ಇತ್ತೀಚೆಗೆ ಏರ್‌ ಇಂಡಿಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ಯಾರನ್ನು ನೇಮಿಸಲಾಗಿದೆ.
a) ರೋಹಿತ್‌ ನಂದನ್‌      
b) ಸತೀಶ್‌ ಬಾದ್ರಾ
c) ಸುಖೇಶ್‌ ಮಿತ್ತಲ್‌  
d) ಅಶ್ವನಿ ಲೋಹನಿ√


851) ನೇಪಾಳದಲ್ಲಿ ಸಂಭವಿಸಿದ ಭೂಕಂಪನದಿಂದಾಗಿ ಹಾನಿಗೊಳಗಾದ ದೇವಾಲಯಗಳನ್ನು ಪುನರ್ನಿರ್ಮಾಣ ಮಾಡಲು ಏಷ್ಯಾದ ಯಾವ ದೇಶ ಮುಂದೆ ಬಂದಿದೆ?
a) ಭೂತಾನ್‌        
b) ಭಾರತ
c) ಶ್ರೀಲಂಕಾ √  
d) ಬಾಂಗ್ಲಾದೇಶ


852) ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಸ್ಮರಣಾರ್ಥ ‘ಅಬ್ದುಲ್‌ ಕಲಾಂ ಯುವ ಪ್ರಶಸ್ತಿ’ ನೀಡಲು ಯಾವ ರಾಜ್ಯ ನಿರ್ಧರಿಸಿದೆ.
a) ತಮಿಳುನಾಡು √
b)ಕರ್ನಾಟಕ
c) ಕೇರಳ          
d) ಆಂಧ್ರಪ್ರದೇಶ


853) ರಾಷ್ಟ್ರೀಯ ಹ್ಯಾಂಡ್‌ಲೂಮ್‌ ದಿನಾಚರಣೆಯನ್ನು ಯಾವ ವರ್ಷದಿಂದ ಆಚರಣೆ ಮಾಡಲಾಗುತ್ತಿದೆ?
a) 7, ಆಗಸ್ಟ್  1984        
b) 7, ಆಗಸ್ಟ್  2015√
c) 7, ಆಗಸ್ಟ್  1999        
d) 7, ಆಗಸ್ಟ್  1989


854) ಹಿಂದಿ ಸಾಹಿತ್ಯದ ಸಮಗ್ರ ಸೇವೆಗೆ ನೀಡುವ 2014ನೇ ಸಾಲಿನ ‘ಭಾರತ್‌ ಭಾರತಿ’ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಯಾರಿಗೆ ಸಂದಿದೆ.
a) ಖುಷ್ವಂತ್‌ ಸಿಂಗ್‌          
b) ಕಿಶನ್‌ ಸಿಂಗ್‌ ಅಮ್ರಪಾಲಿ
c) ಸೀತಾರಾಮ್‌ ಶಾಸ್ತ್ರಿ  
d) ಕಾಶಿನಾಥ್‌ ಸಿಂಗ್√‌


855) ಪಟ್ನಾ ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಯನ್ನಾಗಿ ಇತ್ತೀಚೆಗೆ ಯಾರನ್ನು ನೇಮಕ ಮಾಡಲಾಗಿದೆ.
a) ಇಕ್ಬಾಲ್‌ ಅಹಮ್ಮದ್‌ ಅನ್ಸಾರಿ √
b) ಎಲ್‌. ನರಸಿಂಹ ರೆಡ್ಡಿ
c) ಮಂಜುಳಾ ಚೆಲ್ಲೂರ್‌  
d) ಜಿತೇಂದ್ರ ಪ್ರಸಾದ್‌


856) ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಇತ್ತೀಚೆಗೆ ‘ಸಮನ್ವಯ್‌’ ಯೋಜನೆಯನ್ನು ಪ್ರಕಟಿಸಿತು. ಈ ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?
a) ತಾಲ್ಲೂಕು ಪಂಚಾಯ್ತಿ      
b) ಜಿಲ್ಲಾ ಪಂಚಾಯ್ತಿ
c) ಕಾಪ್‌ ಪಂಚಾಯ್ತಿ        
d) ಗ್ರಾಮ ಪಂಚಾಯ್ತಿ √


857) ವೈದ್ಯಕೀಯ ಅಧಿಕಾರಿಗಳು ಮತ್ತು ವೈದ್ಯರ ನಿವೃತ್ತಿ ವಯಸ್ಸನ್ನು ಮಹಾರಾಷ್ಟ್ರ ಸರ್ಕಾರ ಎಷ್ಟು ವರ್ಷಗಳವರೆಗೆ ವಿಸ್ತರಿಸಿತು?
a) 58 ರಿಂದ 62 ವರ್ಷ
b) 60 ರಿಂದ 62 ವರ್ಷ
c) 58 ರಿಂದ 60 ವರ್ಷ √
d) 58 ರಿಂದ 61 ವರ್ಷ


858) ಗಣಿತ ಶಾಸ್ತ್ರದಲ್ಲಿ ಸಾಧನೆಗೈದ ಸಾಧಕರಿಗೆ ನೀಡಲಾಗುವ ರಾಮಾನುಜಂ ರಾಷ್ಟ್ರೀಯ ಪ್ರಶಸ್ತಿ 2015ನೇ ಸಾಲಿನಲ್ಲಿ ಯಾರಿಗೆ ಬಂದಿದೆ.
a) ಸಚ್ಚಿದೇವಾ ಬನ್ಸಾಲಿ
b) ಮೊಹಮ್ಮದ್‌ ಫಕೀರ್‌ ಖಾನ್‌
c) ಅಲಮೆಂದು ಕೃಷ್ಣ √
d) ಕರಣ್‌ ಶಂಕರ ದೇವಾ


859) ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಫೋರ್ಬ್ಸ್‌ ನಿಯತಕಾಲಿಕೆ ಇತ್ತೀಚೆಗೆ ಪ್ರಕಟಿಸಿದೆ. ಈ ಪಟ್ಟಿಯಲ್ಲಿರುವ ಬಾಲಿವುಡ್‌ ನಟರನ್ನು ಗುರುತಿಸಿ.
a) ಅಮಿತಾಬ್‌  
b) ಶಾರೂಕ್‌ ಖಾನ್‌
c) ರಣಬೀರ್‌ ಕಪೂರ್
d) ಮೇಲಿನ ಎಲ್ಲರು√


860) ‘48ನೇ ಆಸೀನ್‌ ವಿದೇಶಾಂಗ ಸಚಿವರ ಶೃಂಗ ಸಮ್ಮೇಳನ’ ಈ ಕೆಳಕಂಡ ಯಾವ ಸ್ಥಳದಲ್ಲಿ ಜರುಗಿತು.
a) ನವದೆಹಲಿ                  
b) ಕೊಲಂಬೊ
c) ಕೌಲಲಾಂಪುರ √        
d) ಇಸ್ಲಾಮಾಬಾದ್

(ಕೃಪೆ : ಪ್ರಜಾವಾಣಿ)