"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 7 March 2015

☀ "ನಾಲಂದಾ ವಿಶ್ವವಿದ್ಯಾಲಯ" ದ ಕುರಿತು ವಿವರಿಸಿ.  (Explain about "Nalanda University")

☀ "ನಾಲಂದಾ ವಿಶ್ವವಿದ್ಯಾಲಯ" ದ ಕುರಿತು ವಿವರಿಸಿ.
(Explain about "Nalanda University")


●."ನಾಲಂದಾ ವಿಶ್ವವಿದ್ಯಾಲಯ":
"Nalanda University"

—ತಕ್ಷಶಿಲಾ ತರುವಾಯ ಪ್ರಖ್ಯಾತಿಗೆ ಬಂದ ನಾಲಂದಾ ವಿಶ್ವವಿದ್ಯಾಲಯವು ವಿಶ್ವದ ಜ್ಞಾನಪೀಠವಾಗಿದ್ದಿತು. ತತ್ಕಾಲೀಕ ವಿಶ್ವಕ್ಕೆ ಭಾರತೀಯ ಜ್ಞಾನ, ವಿಜ್ಞಾನ, ಧರ್ಮಶಾಸ್ತ್ರ, ಸಾಹಿತ್ಯ, ಕಲೆ, ದರ್ಶನಶಾಸ್ತ್ರ, ಶಿಲ್ಪಿ, ಸಂಸ್ಕೃತಿ ಮತ್ತು ನಾಗರೀಕತೆ ಮುಂತಾದುವುಗಳನ್ನು ದಾನ ಮಾಡಿದ ಧರ್ಮಕೀರ್ತಿಯು ನಾಲಂದಾ ವಿದ್ಯಾಲಯಕ್ಕೆ ಸಲ್ಲಬೇಕಾಗಿದೆ. ಬೌದ್ಧಧರ್ಮದ ವಿಜಯ ಪತಾಕೆಯು ಏಷಿಯಾ ಖಂಡದಲ್ಲೆಲ್ಲಾ ನಿರಾತಂಕವಾಗಿ ಹಾರಾಡುತ್ತಿದ್ದಾಗ, ಭಾರತೀಯ ಜ್ಞಾನ-ವಿಜ್ಞಾನದ ಜ್ಞಾನಗಂಗೆಯನ್ನು ಹರಿಸಿದ ಅಮಲ ಯಶಸ್ಸು ನಾಲಂದಾವಿಗೆ ಇದೆ.

●.“ನಾಲಂದಾನಲ್ಲಿ ಓದದಿದ್ದರೆ, ವಿದ್ಯಾಭ್ಯಾಸವು ಪೂರ್ಣವಾಗಲಿಲ್ಲ” ಎನ್ನುವಷ್ಟರ ಮಟ್ಟಿಗೆ, ವಿಶ್ವದಲ್ಲಿ ಮಾನ್ಯತೆ ಗಳಿಸಿದ್ದಿತ್ತು. ನಾಲಂದಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಜನೆಗಾಗಿ, ದೇಶ ವಿದೇಶಗಳಿಂದ ವಿದ್ಯಾರ್ಥಿಗಳು ಜಾತಿ-ಮತ-ಪಂಥಗಳ ಬೇಧಭಾವನೆಗಳಿಲ್ಲದೆ ಬಂದು ಸೇರಿದ್ದರು. ಚೀನ, ಜಪಾನ್, ತಾತಾರ, ಬರ್ಮಾ, ಮಲಯು ಮುಂತಾದ ಕಡೆಗಳಿಂದ ಜ್ಞಾನ ಪಿಪಾಸುಗಳು ಬಂದು ನಾಲಂದದಲ್ಲಿ ತಮ್ಮ ಜ್ಞಾನತೃಷೆಯನ್ನು ನಿವಾರಿಸಿಕೊಳ್ಳುತ್ತಿದ್ದರು. ಬೌದ್ಧ ನಿಕಾಯ ಗ್ರಂಥಗಳ ಜೊತೆಗೆ, ವೈದ್ಯ, ದರ್ಶನ, ಸಾಹಿತ್ಯ, ಕಲಾ, ಬ್ರಾಹ್ಮಣ, ಜೈನ ಮುಂತಾದುವುಗಳಲ್ಲಿಯೂ ಸಹಅ ಅತಿ ಉಚ್ಛ ಶಿಕ್ಷಣ ಇಲ್ಲಿ ದೊರೆಯುತ್ತಿದ್ದಿತು. ಕೇವಲ ಪುಸ್ತಕ ಪ್ರವಚನ ಮಾತ್ರವೇ ಅಲ್ಲ, ಹಸ್ತ ಕೌಶಲ್ಯಕ್ಕೂ ಇಲ್ಲಿ ಪ್ರಾಧಾನ್ಯವಿದ್ದಿತು.

●.ಆಗಿನ ಕಾಲದ ನಾಲಂದಾ ವಿಶ್ವವಿದ್ಯಾನಿಲಯವು 20ನೆ ಶತಮಾನದ ಆಧುನಿಕ ವಿಶ್ವವಿದ್ಯಾನಿಲಯಗಳಿಗೆ ಅನೇಕ ವಿಧಗಳಲ್ಲಿ ಮಾರ್ಗದರ್ಶಕವಾಗಿದೆ. ಅಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಕೇವಲ ಹತ್ತು ಸಾವಿರ ಮತ್ತು ಅಧ್ಯಾಪಕರು ಸಾವಿರದೈನೂರು ಮಂದಿ. ಇವರಿಗೆಲ್ಲಾ ಒಬ್ಬನೇ ಒಬ್ಬ ಪ್ರಧಾನಾಧ್ಯಾಪಕ, ಶೀಲಭದ್ರ. ಅಧ್ಯಾಪಕ ವರ್ಗದಲ್ಲಿ ಖ್ಯಾತಿವೆತ್ತ ಜಿನಮಿತ್ರ, ಶೀಘ್ರಬುದ್ಧ ಚಂದ್ರಪಾಲ ಜ್ಞಾನಚಂದ್ರ ಸ್ಥಿರಮಿತಿ, ಪ್ರಭಾಕರ ಮಿತ್ರ, ಧರ್ಮಪಾಲ, ಭದ್ರಸೇನ ಮತ್ತು ಶಾಂತಿ ರಕ್ಷಿತರಂತಹವರು ಇದ್ದರು.

●.ವಿದ್ಯಾರ್ಥಿ ವೃಂದವು ಎಂಟು ಕಕ್ಷಗಳಾಗಿಯೂ, ಮೂರುನೂರು ಪ್ರಕೋಷ್ಠಗಳಾಗಿಯೂ ವಿಂಗಡಿಸಲ್ಪಟ್ಟಿದ್ದಿತು. ಸಭಾಭವನವೇ ಬೇರೆ ಇದ್ದಿತು. ವಿದ್ಯಾರ್ಥಿಗಳ ವಾಸಗೃಹ (Residential Hestel)ಕ್ಕಾಗಿ ಬೇರೆ ಮುನ್ನೂರು ಛಾತ್ರವಾಸಗಳಿದ್ದವು.

●.ನಾಲಂದಾ ವಿಶ್ವವಿದ್ಯಾನಿಲಯದ ಪುಸ್ತಕಾಲಯವು ಲಕ್ಷಾಂತರ ಪುಸ್ತಕಗಳ, ಹಸ್ತಪ್ರತಿಗಳ ಆಗರವಾಗಿದ್ದಿತು. ರತ್ನಸಾಗರ, ರತ್ನೋದಧಿ ಮುತ್ತುರತ್ನ ರಂಜಕವೆಂಬ ಹೆಸರಿನ ನಾಲಂದಾ ವಿಶ್ವವಿದ್ಯಾಲಯದ ಪುಸ್ತಕಾಲಯಗಳು ಭಾರತದ ಸ್ವರ್ಣಿಮ ಇತಿಹಾಸದಲ್ಲಿ ಬರೆದಿಡಬೇಕಾಗಿವೆ.

●.ನಲಂದಾ ವಿದ್ಯಾಲಯದ ಕಾಲದಲ್ಲಿ ಬೌದ್ಧಮತವು ರಾಜಮನ್ನಣೆ ಪಡೆದಿದ್ದುದರಿಂದ ವಜ್ರಯಾನ, ಹೀನಾಯಾನ, ಮಹಾಯಾನಾದಿ ಸರ್ವಬೌದ್ಧ ಗ್ರಂಥಗಳಿಗೂ, ಬೌದ್ಧತತ್ವಗಳಿಗೂ ನಾಲಂದ ಕೇಂದ್ರವಾಗಿದ್ದಿತು. ಬೌದ್ಧಮತ ಜ್ಞಾನಕ್ಕಾಗಿ ಹುಯೆ‍ನ್‍ತ್ಸಾಂಗನು ಚೀನದಿಂದ ಇಲ್ಲಿಗೆ ಬಂದಿದ್ದನು. ಕೇವಲ ಬೌದ್ಧಮತದ ಪುಸ್ತಕಗಳನ್ನಷ್ಟೇ ಅಲ್ಲ. ಮಿಕ್ಕ ತತ್ಕಾಲೀನ ಗ್ರಂಥಗಳೆಲ್ಲವೂ ಇಲ್ಲಿ ದೊರೆಯುತ್ತಿದ್ದವು.

●.ನಾಲಂದಾ ವಿಶ್ವವಿದ್ಯಾಲಯವು ಕೇವಲ ಮಗಧದ ಜ್ಞಾನಭಂಡಾರ ಮಾತ್ರವಲ್ಲ, ಇಡೀ ವಿಶ್ವಕ್ಕೆ ಜ್ಞಾನ ವಿಜ್ಞಾನದ ಪಥ ಪ್ರದರ್ಶನವಾಗಿದ್ದಿತು. ನಾಲಂದವು ನಿಜವಾಗಿಯೂ ವಿಶ್ವವಿದ್ಯಾನಿಲಯವಾಗಿದ್ದಿತು. ಆದರೆ ಬರುಬರುತ್ತಾ ಜ್ಞಾನಮಾರ್ಗದಿಂದ ತಾಂತ್ರಿಕ ಮಾರ್ಗಕ್ಕೆ ಹೆಚ್ಚು ಪ್ರಾಶಸ್ತ್ಯ ದೊರೆತದ್ದರಿಂದಲೂ, ಯವನರ ಧಾಳಿಯಿಂದಲೂ ನಾಲಂದಾವು ಈಗ ಹೇಳ ಹೆಸರಿಲ್ಲದಂತಾಗಿದೆ.

●.ಭಾರತೀಯರು ತಮ್ಮ ಅತ್ಯಂತ ದುರ್ಬಲತೆಯಿಂದ ಭಾರತವನ್ನು ಜಯಿಸಲು ಯವನರಿಗೆ ಅವಕಾಶ ಕೊಟ್ಟಾಗ, ಭಾರತೀಯತೆಯ ಪ್ರತೀಕವಾದ ಈ ವಿಶ್ವವಿದ್ಯಾನಿಲಯವನ್ನು ಯವನರು ನುಚ್ಚುನೂರು ಮಾಡಿದರು.

●.ನಾಗರೀಕತೆಯ ಅತಿ ಉನ್ನತ ಮಟ್ಟದಲ್ಲಿದ್ದ ನಾಲಂದಾ ವಿಶ್ವವಿದ್ಯಾಲಯದ ಕಾಲದಲ್ಲಿ ಭಾರತೀಯರಿಗೆ, ಸುಟ್ಟ ಇಟ್ಟಿಗೆ, ಗಾರೆ ಮುಂತಾದ ಸಾಮಾನುಗಳು ಪರೆಜ್ಞಾನದಲ್ಲಿ ಭಾರತೀಯ …ಆದರೆ ಮುಷ್ಕರ ಹಾವಳಿಯಿಂದ ಈ ಉಚ್ಚಸ್ಥಾಪತ್ಯ ಕಲಾ ಸಾಮಾನುಗಳು ಹಾಳಾಗಿಹೋದವು. ವಿದೇಶೀ ಪಾಪಿಗಳ ಹಾವಳಿಯಿಂದ ನಾಲಂದಾವು ಹಾಳಾಗದಿದ್ದರೆ, ಭಾರತದ ಜ್ಞಾನಗಂಗಾ ಸ್ತೋತ್ರದ ಪ್ರವಾಹದ ಮುಂದೆ ಇಡೀ ವಿಶ್ವದ ಪಾಶವೀಶಕ್ತಿಯು ನತಮಸ್ತಕವಾಗುತ್ತದೆ ಎಂಬುದಕ್ಕೆ ಸಾಕ್ಷೀಭೂತವಾಗಿರುತ್ತಿತ್ತು.
(Courtesy: Vikrama) 

No comments:

Post a Comment