"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 31 March 2015

☀Unit 2.—ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು: (Karnataka state physical, geographical Features) 

☀Unit 2.—ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:
(Karnataka state physical, geographical Features)

━━━━━━━━━━━━━━━━━━━━━━━━━━━━━━━━━━━━━━━━━━━━━

(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)


●.ಭಾರತ ಒಕ್ಕೂಟದ ಎರಡು ಬೃಹತ್ ಪ್ರಾಂತ್ಯಗಳ ಭಾಗವಾಗಿ ಕರ್ನಾಟಕ ರಾಜ್ಯದ ಭೂಭೌತಲಕ್ಷಣಗಳು ಕಂಡುಬರುತ್ತವೆ. ಆ ಎರಡು ಲಕ್ಷಣಗಳೆಂದರ ದಕ್ಷಿಣ ಪ್ರಸ್ಥಭೂಮಿ ಮತ್ತು ಕಡಲತೀರದ ಬಯಲು ಹಾಗೂ ದ್ವೀಪಗಳು.

●.ರಾಜ್ಯದಲ್ಲಿ ಪ್ರಮುಖವಾದ ನಾಲ್ಕು ಭೂಭೌತಲಕ್ಷಣಗಳನ್ನು ಕಾಣಬಹುದು.
1. ಉತ್ತರ ಕರ್ನಾಟಕ ಪ್ರಸ್ಥಭೂಮಿ.(North Karnataka plateau)
2. ಮಧ್ಯಕರ್ನಾಟಕ ಪ್ರಸ್ಥಭೂಮಿ.(Midst karnataka plateau)
3. ದಕ್ಷಿಣ ಕರ್ನಾಟಕ ಪ್ರಸ್ಥಭೂಮಿ.(Southern Karnataka Plateau)
4. ಕರ್ನಾಟಕದ ಕರಾವಳಿ ಪ್ರದೇಶ. (Karnataka coastal region)


1. ಉತ್ತರ ಕರ್ನಾಟಕ ಪ್ರಸ್ಥಭೂಮಿ:
(North Karnataka plateau)

✧.ಉತ್ತರ ಕರ್ನಾಟಕ ಪ್ರಸ್ಥಭೂಮಿಯು ಬೆಳಗಾವಿ, ಬೀದರ್, ಬಿಜಾಪುರ, ಬಾಗಲಕೋಟೆ ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿದೆ.
✧.ಇದು ಬಹುತೇಕ ದಖನ್ ಪ್ರಸ್ಥಭೂಮಿಯಿಂದಾಗಿದೆ.
✧.ಈ ಪ್ರಸ್ಥಭೂಮಿಯಲ್ಲಿ ಏಕತಾನತೆ ತರುವ ವೃಕ್ಷರಹಿತ ದೃಶ್ಯಾವಳಿ ಎದ್ದುಕಾಣುತ್ತದೆ.
✧.ಸರಾಸರಿ ಸಮುದ್ರ ಮಟ್ಟದಿಂದ ಸಾಮಾನ್ಯವಾಗಿ 300 ರಿಂದ 600 ಮೀಟರ್ ಎತ್ತರವಿದೆ. ಆದಾಗ್ಯೂ ಕೃಷ್ಣಾ, ಭೀಮಾ, ಘಟಪ್ರಭಾ, ಮಲಪ್ರಭಾ ನದಿಗಳ ಬಯಲು, ಅವುಗಳ ಮಧ್ಯೆ ಅಲ್ಲಲ್ಲೇ ಕಾಣಿಸುವ ಜಲಾನಯನ ಪ್ರದೇಶಗಳು, ಮೆಟ್ಟಿಲಿನಾಕಾರದ ದೃಶ್ಯಾವಳಿ, ಲ್ಯಾಟರೈಟ್‍ನಿಂದಾದ ಕಡಿದಾದ ಭಾಗಗಳು, ಶೇಷ ಗುಡ್ಡಗಳು ಮತ್ತು ಏಣುಗಳಿಂದಾಗಿ ವಿಶಾಲವಾದ ಪ್ರಸ್ಥಾಭೂಮಿಯ ಏಕತಾನತೆ ಭಂಗವಾಗುತ್ತದೆ.
✧.ಪೂರ್ವದೆಡೆಗೆ ಪ್ರಸ್ಥಭೂಮಿಯ ಸಾಮಾನ್ಯ ಇಳಿಜಾರಿದೆ. ಈ ಪ್ರಾಂತ್ಯದ ಬಲುಪಾಲು ಕಪ್ಪು ಹತ್ತಿ ಮಣ್ಣಿನಿಂದ ಆವೃತವಾಗಿವೆ.

(ಕೃಪೆ: ಕರ್ನಾಟಕ ಕೈಪಿಡಿ)

...ಮುಂದುವರೆಯುವುದು.

No comments:

Post a Comment