"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 30 October 2014

★ ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಕೆಲವು ಮಹತ್ವದ ಅಂಶಗಳು:  


★ ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಕೆಲವು ಮಹತ್ವದ ಅಂಶಗಳು:


ಕೇಂದ್ರ ಬಜೆಟ್ ನ ಕುರಿತು ಸಂಕ್ಷಿಪ್ತ ವಿವರಣೆ:

*. ಬಜೆಟ್ ಎಂಬ ಶಬ್ದವು ಮಧ್ಯ ಫ್ರಾನ್ಸ್‌ನ bougette ಎಂಬ ಶಬ್ದದಿಂದ ಬಂದಿದೆ. ಇದರ ಅರ್ಥ 'ಚರ್ಮದ ಬ್ಯಾಗ್‌'.

*. ರಾಷ್ಟ್ರಪತಿ ನಿಗದಿಪಡಿಸಿದ ದಿನದಂದೇ ಭಾರತದಲ್ಲಿ ಬಜೆಟ್ ಮಂಡಿಸಲಾಗುತ್ತದೆ.

*. ವಿತ್ತ ಸಚಿವರ ಬಜೆಟ್ ಭಾಷಣವು 2 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ.
- ಒಂದನೇ ಭಾಗವು ದೇಶದ ಸಾಮಾನ್ಯ ಆರ್ಥಿಕ ಸಮೀಕ್ಷೆಯನ್ನೂ,
- ಎರಡನೇ ಭಾಗವು ತೆರಿಗೆ ಪ್ರಸ್ತಾಪವನ್ನು ಹೊಂದಿರುತ್ತದೆ.

*. ಬಜೆಟ್ ಪೇಪರ್‌ಗಳನ್ನು ಮುದ್ರಿಸುವ ನೌಕರರನ್ನು ಬಜೆಟ್ ಮಂಡನೆಗೆ ಒಂದು ವಾರ ಮುಂಚೆಯೇ ಸಂಪೂರ್ಣವಾಗಿ ಯಾರ ಜತೆಗೂ ಸಂಪರ್ಕವಿಲ್ಲದಂತೆ ಪ್ರತ್ಯೇಕವಾಗಿಡಲಾಗುತ್ತದೆ.

*. ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೇ ಕೆಲಸದ ದಿನದಂದು ಬಜೆಟ್ ಮಂಡನೆ ಆಗುತ್ತದೆ.

*. ಕೇಂದ್ರ ಬಜೆಟ್‌ನ ಘೋಷಣೆಯಲ್ಲಿ ಹಣಕಾಸು ಸಚಿವಾಲಯ, ಯೋಜನಾ ಆಯೋಗ, ಆಡಳಿತಾತ್ಮಕ ಸಚಿವಾಲಯಗಳು ಹಾಗೂ ಮಹಾಲೇಖಪಾಲರು ಪ್ರಮುಖ ಪಾತ್ರ ವಹಿಸುತ್ತಾರೆ

*. ಪ್ರಪ್ರಥಮ ಬಾರಿಗೆ ದೇಶದಲ್ಲಿ ಬಜೆಟ್ ಮಂಡನೆಯಾಗಿದ್ದು 1860ರ ಏಪ್ರಿಲ್ 7ರಂದು.ಈಸ್ಟ್ ಇಂಡಿಯಾ ಕಂಪನಿಯಿಂದ.

*. ಭಾರತದ ಮೊದಲ ಬಜೆಟ್ ಅನ್ನು ಮಂಡಿಸಿದವರು ಜೇಮ್ಸ್ ವಿಲ್ಸನ್.

*. ಸ್ವಾತಂತ್ರ್ಯಾನಂತರ, ಭಾರತದ ಪ್ರಥಮ ಹಣಕಾಸು ಸಚಿವ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು 1947ರ ನವೆಂಬರ್ 26ರಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಿದರು.

*. ಸಂಜೆ 5ಕ್ಕೆ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಆರಂಭಿಸಿದ್ದು ಸರ್ ಬೇಸಿಲ್ ಬ್ಲಾಕೆಟ್.

*. ಆಯವ್ಯಯ ರಚನೆ ವೇಳೆ ರಾತ್ರಿಯಿಡೀ ಕೆಲಸ ಮಾಡಿದ ಅಧಿಕಾರಿಗಳಿಗೆ ಸ್ವಲ್ಪ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕಾಗಿ ಸಂಜೆ ಬಜೆಟ್ ಮಂಡಿಸುವ ಪದ್ಧತಿ ಜಾರಿಗೆ ಬಂತು.

*. ಸ್ವತಂತ್ರ ಭಾರತದ ಮೊದಲ ಬಜೆಟ್‌ನ ಅವಧಿ ಕೇವಲ ಏಳೂವರೆ ತಿಂಗಳದ್ದಾಗಿತ್ತು. ಅಂದರೆ, ಆಗಸ್ಟ್ 15, 1947ರಿಂದ ಮಾರ್ಚ್ 31, 1948.

*. 'ಮಧ್ಯಂತರ ಬಜೆಟ್‌' ಎಂಬುದನ್ನು ಮೊದಲು ಆರಂಭಿಸಿದವರು ಆರ್.ಕೆ. ಷಣ್ಮುಗಂ ಚೆಟ್ಟಿ (1948-49).

*. ಗಣರಾಜ್ಯ ಭಾರತದ ಮೊದಲ ಬಜೆಟ್ ಮಂಡಿಸಿದ್ದು ಜಾನ್ ಮಥಾಯ್. (1950ರ ಫೆ.28)

*. 1950-51ರ ಬಜೆಟ್ ಮಂಡಿಸುವಾಗಲೇ ಯೋಜನಾ ಆಯೋಗ ಜಾರಿಗೆ ಬಂತು

*. 1955-56ರಿಂದ ಬಜೆಟ್ ಪೇಪರ್‌ಗಳನ್ನು ಹಿಂದಿಯಲ್ಲೂ ಮುದ್ರಿಸಲು ಆರಂಭಿಸಲಾಯಿತು

*. ಬಜೆಟ್ ಮಂಡಿಸಿದ ಮೊದಲ ಪ್ರಧಾನಿಯೆಂದರೆ ಜವಾಹರ್‌ಲಾಲ್ ನೆಹರೂ.1958-59ರಲ್ಲಿ ಅವರು ಕೇಂದ್ರವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

*. ಅತ್ಯಧಿಕ ಬಜೆಟ್‌ಗಳನ್ನು ಮಂಡಿಸಿದ ಏಕೈಕ ಸಚಿವರೆಂದರೆ ಮೊರಾರ್ಜಿ ದೇಸಾಯಿ. ಇವರು ಒಟ್ಟು 10 ಬಜೆಟ್ ಮಂಡಿಸಿದ್ದಾರೆ.

*. 1973-74ರ ಬಜೆಟ್ ಅನ್ನು 'ಬ್ಲ್ಯಾಕ್ ಬಜೆಟ್‌' ಎನ್ನಲಾಗುತ್ತದೆ. ಏಕೆಂದರೆ,ಈ ಅವಧಿಯಲ್ಲಿ ಬಜೆಟ್ ಕೊರತೆ 550 ಕೋಟಿ ಆಗಿತ್ತು

*. ತನ್ನ ಹುಟ್ಟುಹಬ್ಬದ ದಿನದಂದೇ 2 ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಅವೆಂದರೆ, 1964 ಮತ್ತು 1968 ಫೆ. 29.

*. 2000ನೇ ಇಸವಿವರೆಗೆ ಬಜೆಟ್ ಅನ್ನು ಸಂಜೆ 5ಕ್ಕೆ ಮಂಡಿಸಲಾಗುತ್ತಿತ್ತು.

*. 2001ರ ಬಳಿಕ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಯಶವಂತ್ ಸಿನ್ಹಾ ನಾಂದಿ ಹಾಡಿದರು.

Monday 27 October 2014

★ ಸಾರ್ವಜನಿಕ ಸಾಲ ನಿರ್ವಹಣೆ (Public debt management) ಎಂದರೇನು? ಅದರ ಪ್ರಮುಖ ಉದ್ದೇಶ ಹಾಗು ಮಹತ್ವದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿ. (150 ಶಬ್ದಗಳಲ್ಲಿ)



★ ಅರ್ಥಶಾಸ್ತ್ರ (Economics)

★ ಸಾರ್ವಜನಿಕ ಸಾಲ ನಿರ್ವಹಣೆ (Public debt management) ಎಂದರೇನು? ಅದರ ಪ್ರಮುಖ ಉದ್ದೇಶ ಹಾಗು ಮಹತ್ವದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿ.
(150 ಶಬ್ದಗಳಲ್ಲಿ)

ಸರ್ಕಾರಕ್ಕೆ ಅಗತ್ಯವಿರುವ ಸಾಲದ ಎತ್ತುವಳಿ ಮತ್ತು ನಿರ್ವಹಣೆಗೆ ಕಾರ್ಯತಂತ್ರ ರೂಪಿಸಿ, ಕಾರ್ಯನ್ವಯಗೊಳಿಸುವ ಪ್ರಕ್ರಿಯೆಗೆ ಸ್ಥೂಲವಾಗಿ ಸಾರ್ವಜನಿಕ ಸಾಲ ನಿರ್ವಹಣೆ ಎನ್ನಲಾಗುತ್ತದೆ.
ಸಾರ್ವಜನಿಕ ನೀತಿಯಂತೆ ಸರ್ಕಾರದ, ಸಾಲದ ಮಟ್ಟ ಹಾಗೂ ಬೆಳವಣಿಗೆ ದರ ಎರಡೂ ಸುಸ್ಥಿರವಾಗಿರುವಂತೆ ಕಾಯ್ದುಕೊಳ್ಳಬೇಕಾಗುತ್ತದೆ.


* ಸಾಲ ನಿರ್ವಹಣೆಯ ಉದ್ದೇಶಗಳು:

ಸರ್ಕಾರದ ಹಣಕಾಸು ಅಗತ್ಯಗಳನ್ನು ಖಾತರಿಪಡಿಸುವುದು ಹಾಗೂ ಸರ್ಕಾರದ ಮಧ್ಯಮಾವಧಿಯಿಂದ ಹಿಡಿದು ಧೀರ್ಘಾವಧಿವರೆಗಿನ ಸಾಲ ಅತ್ಯಂತ ಕಡಿಮೆ ವೆಚ್ಚದಲ್ಲಿ ಪಾವತಿಯಲ್ಲಿರುವಂತೆ ನೋಡಿಕೊಳ್ಳುವುದು ಹಾಗೂ ಸವಾಲಿನ ಸಂದರ್ಭಗಳಲ್ಲಿ ವಿವೇಕಯುತವಾಗಿರುವಂತೆ ನಿರ್ವಹಿಸುವುದು ಇದರ ಉದ್ದೇಶವಾಗಿದೆ.

* ಸಾರ್ವಜನಿಕ ಸಾಲ ನಿರ್ವಹಣೆಯ ಮಹತ್ವ:

ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಅನೇಕ ದೇಶಗಳಲ್ಲಿ ಆರ್ಥಿಕ ಸಂಕಷ್ಟಕ್ಕೆ, ವ್ಯವಸ್ಥಿತ ವಿನ್ಯಾಸವಿರದ ಸಾಲ ಸಂರಚನೆ ಬಡ್ಡಿದರ ನಿರೂಪಣೆ, ಸಂಗ್ರಹವಿರದ ತುರ್ತು ಹೊಣೆಗಾರಿಕೆಗಳೇ ಕಾರಣವೆಂದು ವ್ಯಕ್ತವಾಗಿದೆ.

ಉದಾಹರಣೆಗೆ ವಿನಿಮಯ ದರ ಅಥವಾ ದೇಶಿ ಅಥವಾ ವಿದೇಶಿ ಸಾಲ ವ್ಯವಸ್ಥೆಯ ಹೊರತಾಗಿಯೂ, ಸರ್ಕಾರ ಅಲ್ಪಾವಧಿ ಅಥವಾ ಸಂಚಲಿತ ಸಾಲ ದರದಿಂದಾಗಿ ಉಳಿತಾಯ ದರದೊಂದಿಗೆ ಸಾಧ್ಯ ವೆಚ್ಚ ಉಳಿತಾಯಕ್ಕೆ ಗಮನಹರಿಸುವುದರಿಂದ ಇಂತಹ ಬಿಕ್ಕಟ್ಟು ತಲೆದೋರಿವೆ.

ಇವುಗಳು ಆರ್ಥಿಕ ನಿರ್ವಹಣೆಯ ಕೊರತೆಯನ್ನು ತೋರಿಸುತ್ತವೆ. ಸರ್ಕಾರದ ವಿದೇಶಿ - ಕರೆನ್ಸಿ ಸಾಲ ವಿಷಯದಲ್ಲಿ ಬಂಡವಾಳ ಹೂಡಿಕೆದಾರರು ಹಿಂದೇಟು ಹಾಕಿದರೆ, ವಿದೇಶಿ ಸಾಲವನ್ನೇ ಅವಲಂಬಿಸುವುದು ಮಾರಕವೆನಿಸುತ್ತದೆ. ವಿವೇಚನಾಯುಕ್ತ ಸಾಲ ನಿರ್ವಹಣೆ ಇಲ್ಲಿ ಅತಿಮುಖ್ಯ.

Sunday 26 October 2014

★ ಐಜಿಎಲ್ ಸುರಕ್ಷಾ (IGL Suraksha) ಯೋಜನೆ ಕುರಿತು ಚರ್ಚಿಸಿ. ( (100 ಶಬ್ಧಗಳಲ್ಲಿ) 


★ ಐಜಿಎಲ್ ಸುರಕ್ಷಾ (IGL Suraksha) ಯೋಜನೆ ಕುರಿತು ಚರ್ಚಿಸಿ. ( (100 ಶಬ್ಧಗಳಲ್ಲಿ)


*. ಐಜಿಎಲ್ ಸುರಕ್ಷಾ (IGL Suraksha) ಯೋಜನೆ :
ಸಂಕುಚಿತ ನೈಸರ್ಗಿಕ ಅನಿಲ (Compressed Natural Gas) ಆಧಾರಿತ ದೆಹಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಚಾಲಕರಿಗಾಗಿ ಗುಂಪು ವಿಮೆ ಕಲ್ಪಿಸುವ ಐಜಿಎಲ್ ಸುರಕ್ಷಾ ಯೋಜನೆಗೆ 2013 ರಲ್ಲಿ ದೆಹಲಿಯಲ್ಲಿ ಚಾಲನೆ ನೀಡಲಾಯಿತು. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ಮತ್ತು ದೆಹಲಿ ಸಾರಿಗೆ ಸಂಸ್ಥೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.


★ ಯೋಜನೆಯ ಬಗ್ಗೆ:

*.ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ತನ್ನ ಸಿಎಸ್ಆರ್ ಕಾರ್ಯಕ್ರಮದಡಿ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.

*.ಅಪಘಾತ ದುರಂತದಲ್ಲಿ ಮಡಿದ ಚಾಲಕರ ಕುಟುಂಬಕ್ಕೆ ಈ ಯೋಜನೆಯಡಿ
1.5 ಲಕ್ಷ ರೂಗಳನ್ನು ನೀಡಲಾಗುತ್ತದೆ. ಜತೆಗೆ ಚಾಲಕನ ಮಕ್ಕಳ ವಿದ್ಯಾಭ್ಯಾಸಕ್ಕೆಂದು ರೂ 25, 000 ಗಳನ್ನು ನೀಡಲಾಗುತ್ತದೆ. ಗರಿಷ್ಠ ಎರಡು ಮಕ್ಕಳಿಗೆ ಈ ಯೋಜನೆಯಡಿ ಸಹಾಯ ದೊರೆಯಲಿದೆ. ಅಂದರೆ 50,000 ರೂಗಳು.

*.ಒಂದು ವೇಳೆ ಅಪಘಾತದಲ್ಲಿ ಮೂಳೆ ಮುರಿತಕ್ಕೊಳಗಾದರೆ ಅಥವಾ ತೀವ್ರ ತರನಾದ ಗಾಯಗಳಾದರೆ ಕನಿಷ್ಠ 10, 000 ರೂಗಳಿಂದ 75,000 ರೂಗಳ ವರೆಗೆ ಚಿಕಿತ್ಸೆ ಭತ್ಯೆಯನ್ನು ನೀಡಲಾಗುವುದು. ಅಪಘಾತದ ವೇಳೆ ಶಾಶ್ವತ ಊನ ಸ್ಥಿತಿಗೆ ಒಳಗಾಗಿ ಉದ್ಯೋಗ ಕಳೆದುಕೊಂಡರೆ ಗರಿಷ್ಠ ಮೊತ್ತವನ್ನು ಪರಿಹಾರ ಧನವನ್ನಾಗಿನೀಡಲಾಗುವುದು.

*.ವಿಮೆಯ ಪ್ರಿಮಿಯಂ ಖರ್ಚನ್ನು ಐಜಿಎಲ್ ಭರಿಸಲಿದೆ. ಯೋಜನೆಯ ಅನುಷ್ಟಾನವನ್ನು ಓರಿಯಂಟಲ್ ಇನ್ ಶ್ಯೂರೆನ್ಸ್ ಸಂಸ್ಥೆಗೆ ನೀಡಲಾಗಿದೆ. ಇದೊಂದು ಸಂಪೂರ್ಣ ಉಚಿತ ಮತ್ತು ಸರಳ ವಿಮಾ ವ್ಯವಸ್ಥೆ ಎನ್ನಲಾಗಿದೆ.

★ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕುರಿತು ಸಂಕ್ಷಿಪ್ತ ವಿವರಣೆ:


★ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕುರಿತು ಸಂಕ್ಷಿಪ್ತ ವಿವರಣೆ:


*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾದ ವರ್ಷ:
— 1885 ಡಿ 28.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾದ ಸ್ಥಳ:
— ಮುಂಬೈ.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾಗುವಾಗ ಇದ್ದ ವೈಸರಾಯ್:
— ಲಾರ್ಡ್ ಡಫರಿನ್.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಗೆ ಕಾರಣರಾದ ವ್ಯಕ್ತಿ:
— ಸ್ವಿಜರ್ಲೆಂಡ್ ನ ಎ.ಓ. ಹ್ಯೂಮ್.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಅಧ್ಯಕ್ಷ:
— W.C.ಬ್ಯಾನರ್ಜಿ.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಮುಸ್ಲಿಂ ಅಧ್ಯಕ್ಷ:
— ಬದ್ರುದ್ದೀನ್ ತ್ಯಾಬಜಿ.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಬ್ರಿಟೀಷ್ ಅಧ್ಯಕ್ಷ:
— ಜಾರ್ಜ್ ಎಲ್ಲೋ.

*. ಕ್ರಿ.ಶ.1906 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಸ್ವರಾಜ್ಯ' ಎನ್ನುವ ಪದದ ಬಳಕೆಯಾಯಿತು.

*. ಕ್ರಿ.ಶ.1916 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಮುಸ್ಲಿಂ ಲೀಗ್ ಮತ್ತು ಕಾಂಗ್ರೇಸ್' ಒಂದುಗೂಡಿದವು.

*. ಕ್ರಿ.ಶ.1917 ರ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಮಂದಗಾಮಿಗಳು ಮತ್ತು ತೀವ್ರಗಾಮಿಗಳು' ಒಂದುಗೂಡಿದರು.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಮಹಿಳಾ ಅಧ್ಯಕ್ಷೆ:
— ಆನಿಬೆಸೆಂಟ್.

*. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆ:
— ಸರೋಜಿನಿ ನಾಯ್ಡು.

*.  ಕ್ರಿ.ಶ.1929 ರ ಲಾಹೋರ್ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧಿವೇಶನದಲ್ಲಿ 'ಸಂಪೂರ್ಣ ಸ್ವರಾಜ್ಯ' ಘೋಷಿಸಲಾಯಿತು. ಮತ್ತು ಕಾನೂನು ಭಂಗ ಚಳುವಳಿಯ ನಿರ್ಣಯ ಕೈಗೊಳ್ಳಲಾಯಿತು.

*. 1938 ರ ಹರಿಪುರ ಮತ್ತು 1939 ರ ತ್ರಿಪುರ  ಕಾಂಗ್ರೇಸ್ ನ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದವರು:
— ಸುಭಾಸ್ ಚಂದ್ರ ಭೋಸ್.

*. ಸ್ವಾತಂತ್ರ್ಯ ಪಡೆದ ಸಂಧರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಅಧ್ಯಕ್ಷತೆಯನ್ನು ವಹಿಸಿದವರು:
— ಜೆ.ಬಿ. ಕೃಪಲಾನಿ.

*. ಇದರ ಧೀರ್ಘಾವಧಿಯ ಅಧ್ಯಕ್ಷರು:
— ಸೋನಿಯಾ ಗಾಂಧಿ.

Sunday 19 October 2014

★ ಗುಪ್ತರ ಕಾಲದ ಶ್ರೇಷ್ಟ ವಿಜ್ಞಾನಿಗಳ ಕುರಿತು ಚರ್ಚಿಸಿರಿ. (150 ಶಬ್ಧಗಳಲ್ಲಿ) ( Famous Scientists of Gupta Period)


★ ಗುಪ್ತರ ಕಾಲದ ಶ್ರೇಷ್ಟ ವಿಜ್ಞಾನಿಗಳ ಕುರಿತು ಚರ್ಚಿಸಿರಿ. (150 ಶಬ್ಧಗಳಲ್ಲಿ)


ಎರಡು ಶತಮಾನಗಳ ಕಾಲ ರಾಜ್ಯವನ್ನಾಳಿದ ಗುಪ್ತರ ಸಾಮ್ರಾಜ್ಯವು ಅನೇಕ ಶ್ರೇಷ್ಟ ವಿಜ್ಞಾನಿಗಳನ್ನು ಜಗತ್ತಿಗೆ ನೀಡಿತು.


1) ಆರ್ಯಭಟ:

ಆರ್ಯಭಟನು ಕ್ರಿ.ಶ 499 ರಲ್ಲಿ ಖಗೋಳ ವಿಜ್ಞಾನದ ಪ್ರಮುಖ ಮೂಲಭೂತ ಸಮಸ್ಯೆಗಳನ್ನು ಮುಂದಿಟ್ಟ ಪ್ರಥಮ ಖಗೋಳ ವಿಜ್ಞಾನಿ. ಇವನು ತನ್ನ ಗ್ರಂಥಗಳಾದ 'ಆರ್ಯಭಟೀಯಂ' ಮತ್ತು 'ಸೂರ್ಯ ಸಿದ್ಧಾಂತ' ಗಳಲ್ಲಿ ಬೀಜಗಣಿತ, ರೇಖಾಗಣಿತ ಮತ್ತು ಖಗೋಳ ಶಾಸ್ತ್ರಗಳ ಬಗ್ಗೆ ಬರೆದಿದ್ದಾನೆ.
'ಭೂಮಿಯು ಎಲ್ಲಾ ದಿಕ್ಕುಗಳಲ್ಲೂ ಗುಂಡಾಗಿಯೇ ಇದೆ ಎಂಬ ವೈಜ್ಞಾನಿಕ ಸತ್ಯವನ್ನು ಬಹುಶಃ ಪ್ರಪಂಚದಲ್ಲೇ ಮೊಟ್ಟಮೊದಲಿಗೆ ಸಾರಿದ ಕೀರ್ತಿ ಆರ್ಯಭಟನದು. ಇವನು ಸೊನ್ನೆಯನ್ನು ಕಂಡುಹಿಡಿದನೆಂದು ಅಭಿಪ್ರಾಯಪಡಲಾಗಿದೆ.


2) ವರಾಹಮಿಹಿರ:

ಆರ್ಯಭಟನ ಸಮಕಾಲೀನನಾದ ವರಾಹಮಿಹಿರನು ಖಗೋಳ ವಿಜ್ಞಾನವನ್ನು ಖಗೋಳ ವಿಜ್ಞಾನ, ಗಣಿತ ಶಾಸ್ತ್ರ, ಜಾತಕ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಎಂದು ವಿಭಜಿಸಿದನು. ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಪ್ರಮಾಣ ಗ್ರಂಥವಾದ ಈತನ 'ಬ್ರಹತ್ ಸಂಹಿತಾ' ಕೃತಿಯು ವಿಶ್ವಕೋಶವೆಂದು ಪರಿಗಣಿತವಾಗಿದೆ. ಅಲ್ಲದೇ ಈತನು ರಚಿಸಿದ ಇನ್ನೊಂದು 'ಪಂಚ ಸಿದ್ದಾಂತಿಕಾ' ಎಂಬ ಖಗೋಳ ಶಾಸ್ತ್ರ ಗ್ರಂಥವನ್ನು 'ಖಗೋಳ ಶಾಸ್ತ್ರದ ಬೈಬಲ್' ಎಂದು ಕರೆಯುವರು.


3) ಧನ್ವಂತರಿ:

ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ದ ವಿದ್ವಾಂಸನಾಗಿದ್ದನು. ಆಯುರ್ವೇದ ಶಾಸ್ತ್ರದ ತಜ್ಞನಾಗಿದ್ದನು. 'ಆಯುರ್ವೇದ ನಿಘಂಟನ್ನು' ರಚಿಸಿದ ಈತನನ್ನು 'ಭಾರತದ ಆಯುರ್ವೇದ ಶಾಸ್ತ್ರದ ಪಿತಾಮಹನೆಂದು ಕರೆಯುವರು.


4) ಬ್ರಹ್ಮಗುಪ್ತ:

ಖ್ಯಾತ ಗಣಿತ ಶಾಸ್ತ್ರಜ್ಞನಾದ ಈತನು 'ಶೂನ್ಯ ಸಿದ್ದಾಂತ' ವನ್ನು ಹಾಗೂ ಬಿಂದುವಿನ ಬಳಕೆಯನ್ನು ಜಾರಿಗೆ ತಂದನು. ಈತನ ಎರಡು ಪ್ರಮುಖ ಖಗೋಳ ಗ್ರಂಥಗಳೆಂದರೆ 'ಬ್ರಹ್ಮ ಸ್ಪುಟ ಸಿದ್ಧಾಂತ' ಮತ್ತು 'ಖಂಡ ಖಾದ್ಯಕ'


5) ವಾಗ್ಭಟ:

ಈತನು ಆಯುರ್ವೇದ ವೈದ್ಯಕೀಯ ಬಗ್ಗೆ 'ಅಷ್ಟಾಂಗ ಸಂಗ್ರಹ' ವೆಂಬ ಕೃತಿಯನ್ನು ರಚಿಸಿರುವನು.

Tuesday 14 October 2014

★ 'ಝಿರೊ ಗಿರಿಧಾಮ' ದ ಕುರಿತು ಟಿಪ್ಪಣಿ ಬರೆಯಿರಿ.(50 ಶಬ್ಧಗಳಲ್ಲಿ) 


★ 'ಝಿರೊ ಗಿರಿಧಾಮ' ದ ಕುರಿತು ಟಿಪ್ಪಣಿ ಬರೆಯಿರಿ.(50 ಶಬ್ಧಗಳಲ್ಲಿ)

★ ಝಿರೊ ಗಿರಿಧಾಮ : (ಟಿಪ್ಪಣಿ ಬರಹ)
ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ಲೋವರ್ ಸುಬಾನ್ಸಿರಿ ಜಿಲ್ಲೆಯಲ್ಲಿರುವ ಝಿರೊ ಒಂದು ಚಿಕ್ಕ ಹಾಗೂ ಅಷ್ಟೆ ಪ್ರಭಾವಿಯಾದ ಗಿರಿಧಾಮ ಪಟ್ಟಣ. ಕಳೆದ ಕೆಲ ವರ್ಷಗಳಿಂದ ವಿಶ್ವ ಪಾರಂಪರಿಕ ತಾಣದ ಸ್ಥಾನಕ್ಕೆ ಅತಿ ನೆಚ್ಚಿನ ಪಟ್ಟಣವಾಗಿ ತನ್ನ ಸ್ಥಾನ ಇದು ಕಾಯ್ದುಕೊಂಡಿದೆ. ರಾಜ್ಯದ ರಾಜಧಾನಿ ಇಟಾ ನಗರದಿಂದ ಸುಮಾರು 150 ಕಿ.ಮೀ ದೂರದಲ್ಲಿ ಈ ಗಿರಿಧಾಮವಿದೆ.

Monday 13 October 2014

★ ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ (100-120 ಶಬ್ಧಗಳಲ್ಲಿ)


★ ಭಾರತದ ಭೂಗೋಳ

★ ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ (100-120 ಶಬ್ಧಗಳಲ್ಲಿ)

ಮಣ್ಣಿನ ಸಂರಕ್ಷಣೆಯ ಉದ್ದೇಶವು ಮಣ್ಣಿನ ಸವೆತವನ್ನು ತಡೆಗಟ್ಟುವುದು, ತನ್ಮೂಲಕ ಮಣ್ಣಿನ ಫಲವತ್ತತೆಯನ್ನು ಹಾಗೂ ಬೆಳೆಗಳ ಇಳುವರಿಯನ್ನು ಕಾಪಾಡುವುದೇ ಆಗಿದೆ. ಭಾರತದಾದ್ಯಂತ ಮಣ್ಣಿನ ಗುಣಲಕ್ಷಣಗಳು, ಅವುಗಳ ಬಳಕೆಯ ವಿಧಾನ, ಹಾಗು ಮಣ್ಣಿನ ಸವೆತದ ಕಾರಣ ಮತ್ತು ತೀವ್ರತೆಗಳು ವಿವಿಧ ರೀತಿಯಲ್ಲಿರುವುದರಿಂದ ಮಣ್ಣಿನ ಸಂರಕ್ಷಣೆಯ ವಿಧಾನಗಳು, ಯೋಜನಾ ಕಾರ್ಯಕ್ರಮಗಳೂ ಕೂಡಾ ವಿವಿಧ ರೀತಿಯಲ್ಲಿವೆ.

ಇವುಗಳನ್ನು ಪ್ರಮುಖವಾಗಿ ಎರಡು ವಿಧಗಳಾಗಿ ವಿಂಗಡಿಸಬಹುದು.

ಅವುಗಳೆಂದರೆ ಸಣ್ಣ ಹಾಗು ದೊಡ್ಡ ಯೋಜನೆಗಳು.

*. ಸಣ್ಣ ಯೋಜನೆಗಳು ವ್ಯಕ್ತಿಗತ. ಚಿಕ್ಕ ಭೂಪ್ರದೇಶಗಳಲ್ಲಿ ಇಳಿಜಾರಿನ ಅಡ್ಡಲಾಗಿ ಬದು ಅಥವಾ ಅಡ್ಡಗಟ್ಟೆಗಳನ್ನು ನಿರ್ಮಿಸುವುದು, ಹಂತಹಂತವಾಗಿ ವ್ಯವಸಾಯ ಕ್ಷೇತ್ರಗಳನ್ನು ರೂಪಿಸುವುದು, ಭೂಪ್ರದೇಶಗಳನ್ನು ಮಟ್ಟಗೊಳಿಸುವುದು, ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದು, ಮರಗಿಡಗಳನ್ನು ಬೆಳೆಯುವುದು  ಮುಖ್ಯವಾದವುಗಳಾಗಿವೆ.

ಮಣ್ಣಿನ ಸವೆತಕ್ಕೀಡಾಗುವ ವಿಸ್ತಾರವಾದ ಪ್ರದೇಶಗಳಲ್ಲಿ ಸರ್ಕಾರವು ದೊಡ್ಡ ಪ್ರಮಾಣದ ಯೋಜನೆಗಳನ್ನು ಜಾರಿಯಲ್ಲಿ ತರುತ್ತದೆ. ಇದಕ್ಕಾಗಿ ಶಾಸನಬದ್ಧ ಕಾಯಿದೆಗಳನ್ನು ರೂಪಿಸಿದೆ.

ಈ ಶಾಸನಬದ್ಧ ಕಾರ್ಯಯೋಜನೆಗಳಲ್ಲಿ ಮುಖ್ಯವಾದವುಗಳೆಂದರೆ
*. ಎತ್ತರವಾದ ಪ್ರದೇಶಗಳಲ್ಲಿನ ಅರಣ್ಯನಾಶ ತಡೆಗಟ್ಟುವುದು.
*. ಅರಣ್ಯಗಳು ನಾಶವಾಗಿರುವ ಜಲಾನಯನ ಪ್ರದೇಶಗಳಲ್ಲಿ ಅರಣ್ಯಗಳನ್ನು ಪುನಃ ಬೆಳೆಸುವುದು.
*. ನೀರಾವರಿ ಪ್ರದೇಶಗಳಲ್ಲಿ ನೀರಿನ ಬಳಕೆಯನ್ನು ನಿಯಂತ್ರಿಸಿ ಜೌಗು ಪ್ರದೇಶಗಳ ನಿರ್ಮಾಣವನ್ನು ತಡೆಗಟ್ಟುವುದು.
*. ರಾಷ್ಟ್ರೀಯ ಭೂ ಬಳಕೆ ಮತ್ತು ಸಂರಕ್ಷಣಾ ಮಂಡಳಿಯು ರೂಪಿಸಿದ ವೈಜ್ಞಾನಿಕ ಮಾದರಿಯಲ್ಲಿ ಭೂಮಿಯನ್ನು ಬಳಸುವ ಯೋಜನೆಗಳನ್ನು ಅನುಷ್ಟಾನದಲ್ಲಿ ತರುವುದು.
*. ಸ್ಥಳಾಂತರ ಬೇಸಾಯ ನಿಯಂತ್ರಣ ಯೋಜನೆಯೊಂದಿಗೆ ಮಣ್ಣಿನ ಸವೆತದ ನಿಯಂತ್ರಣ ಹಾಗು ಆ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ 'ಜಲಾನಯನ ಪ್ರದೇಶ ಯೋಜನೆಯನ್ನು ಕೈಗೊಳ್ಳುವುದು.
*. ಸಮಗ್ರ ಬಂಜರು ಭೂಮಿ ಅಭಿವೃದ್ಧಿ ಯೋಜನೆ (IWDP) ಯನ್ನು 1990ರಲ್ಲಿ ಜಾರಿಗೆ ಬಂದಿದ್ದು ಬಂಜರು ಭೂಮಿಯ ಅಭಿವೃದ್ಧಿಯನ್ನು ಸಾಧಿಸುವುದು. ಆ ಮೂಲಕ ಅನುಪಯುಕ್ತವಾಗಿರುವ ಪ್ರದೇಶಗಳನ್ನು ಉಪಯೋಗಿಸಿಕೊಳ್ಳಲು ಸರ್ಕಾರವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ.

Thursday 9 October 2014

ಈ ಬಾರಿ (2015) ಯ ರಸಾಯನ­ಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆ­ಯಾದ ಮೂವರು ವಿಜ್ಞಾನಿಗಳು

★ ಈ ಬಾರಿ (2015) ಯ ರಸಾಯನ­ಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆ­ಯಾದ ಮೂವರು ವಿಜ್ಞಾನಿಗಳು

—‘ಸೂಕ್ಷ್ಮದರ್ಶಕದ ದೃಷ್ಟಿಯನ್ನು ತೀಕ್ಷ್ಣ’ಗೊಳಿಸಿದ ಮೂವರು ವಿಜ್ಞಾನಿ­ಗಳು ಈ ಬಾರಿಯ ರಸಾಯನ­ಶಾಸ್ತ್ರ ನೊಬೆಲ್‌ ಪ್ರಶಸ್ತಿಗೆ ಆಯ್ಕೆ­ಯಾಗಿದ್ದಾರೆ.ಅಮೆರಿಕದ ಎರಿಕ್‌ ಬೆಟ್ಜಿಗ್‌ ಮತ್ತು ವಿಲಿಯಂ ಮೊಯೆರ್ನರ್‌ ಹಾಗೂ ಜರ್ಮನಿಯ ಸ್ಟಿಫನ್‌ ಹೆಲ್‌ ಈ ಗೌರ­ವಕ್ಕೆ ಪಾತ್ರರಾದವರು.ಈ ವಿನಿಗಳು ಅಭಿವೃದ್ಧಿಪಡಿಸಿದ ಸೂಕ್ಷ್ಮ­­­ದರ್ಶಕವು ಸಾಂಪ್ರದಾಯಿಕ ದ್ಯುತಿ­ಸೂಕ್ಷ್ಮ­ದರ್ಶಕದ ದೃಷ್ಟಿ ಸಾಮರ್ಥ್ಯದ ಮಿತಿಯನ್ನು ವಿಸ್ತರಿಸಿದೆ ಎಂದು ದಿ ರಾಯಲ್‌ ಸ್ವೀಡಿಸ್‌ ಅಕಾ­ಡೆಮಿ ಹೇಳಿದೆ.

‘ಸಾಂಪ್ರದಾಯಿಕ ದ್ಯುತಿ ಸೂಕ್ಷ್ಮ­ದರ್ಶ­ಕ­ದಿಂದ ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವಿಜ್ಞಾನಿಗಳ ಆವಿಷ್ಕಾರದಿಂದಾಗಿ ಇದೇ ಸೂಕ್ಷ್ಮದರ್ಶಕಗಳನ್ನು ಬಳಸಿ ನ್ಯಾನೊ ಕಣಗಳನ್ನೂ ನೋಡಲು ಸಾಧ್ಯ­ವಾಗಿದೆ’ ಎಂದು ಸ್ವೀಡಿಸ್‌ ಅಕಾಡೆಮಿ ತಿಳಿಸಿದೆ.
(ಕೃಪೆ: ಪ್ರಜಾವಾಣಿ) 

Tuesday 7 October 2014

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

★ ನೋಟಾ (NOTA- None Of The Above) : ಚುನಾವಣೆ ಸುಧಾರಣೆಯ ಪ್ರಮುಖ ಅಸ್ತ್ರ? :

 ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ದೇಶದ ಆಡಳಿತ ವ್ಯವಸ್ಥೆ ಬದಲಿಸುವ ಸಾಮರ್ಥ್ಯ ಈ ಮತಕ್ಕಿದೆ. ಚುನಾವಣೆಗೆ ಸ್ಪರ್ಧಿಸಿರುವ ಯಾವೊಬ್ಬ ಅಭ್ಯರ್ಥಿ ತನಗೆ ಸೂಕ್ತ ಎನಿಸದಿದ್ದಲ್ಲಿ ಮತದಾರ ಈ 'ನೋಟಾ ' ಬಳಕೆ ಮಾಡಬಹುದು.


★ ನೋಟಾ (NOTA) ಎಂದರೇನು?
 -What do you mean by NOTA ?

 *. ನೋಟಾ ಅಂದರೆ ಮತದಾನ ಪಟ್ಟಿಯಲ್ಲಿರುವ ಯಾರೂ ನನ್ನ ಮತಕ್ಕೆ ಅರ್ಹರಲ್ಲ ಎಂದರ್ಥ.

*. (NOTA- None Of The Above) ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸುಧಾರಣೆಯ ಪ್ರಮುಖ ಅಂಗವಾಗಿ ನೋಟಾ ಜಾರಿಗೆ ನಿರ್ಧರಿಸಿ 2009 ರಲ್ಲಿ ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಇಂತಹದೊಂದು ಪ್ರಸ್ತಾವನೆಯನ್ನು ಸಲ್ಲಿಸಿತು. ಆದರೆ ಇದಕ್ಕೆ ಬಹುತೇಕ ರಾಜಕೀಯ ಪಕ್ಷಗಳು ಪ್ರತಿರೋಧ ವ್ಯಕ್ತಪಡಿಸಿದ್ದವು.


 ★ ಸಂಘಟನೆ ಒತ್ತಾ,ಸೆ:
*.  'Peoples Union for Civic Liberties' ಎಂಬ ಸರ್ಕಾರೇತರ ಸಂಸ್ಥೆ ನೋಟಾ ಜಾರಿಗೆ ಬೆಂಬಲಿಸಿ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು.

*. ಈ ಬಗ್ಗೆ ಸುಧೀರ್ಘವಾದ ಪ್ರತಿವಾದ ನಡೆದ ಬಳಿಕ ಅಂತಿಮವಾಗಿ 2013 ಸೆಪ್ಟಂಬರ್ 27 ರಂದು ಸುಪ್ರೀಂಕೋರ್ಟ್ 'ನೋಟಾ ' ಜಾರಿಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು.

*.  ಜೊತೆಗೆ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಕೆಲವು ಬದಲಾವಣೆ ಅನಿವಾರ್ಯ ಮತ್ತು ರಾಜಕೀಯ ಶುದ್ಧೀಕರಣಕ್ಕೆ ಸಚ್ಚಾರಿತ್ರ್ಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎಂಬ ಪರೋಕ್ಷ ಸೂಚನೆಯನ್ನು ಕೊಟ್ಟಿತು.

*.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಿಗೆ ಆಯ್ಕೆ ಸ್ವಾತಂತ್ರ್ಯವಿದೆ ಎಂದು ಪ್ರತಿಪಾದಿಸಿತ್ತು.



★ 'ನೋಟಾ'ದ ಮೊದಲ ಬಳಕೆ ಎಲ್ಲಿ?
- (Where the NOTA was used first time?)

 *. ಮುಂಬೈ ಮಹಾನಗರ ಪಾಲಿಕೆಯ 48ನೇ ವಾರ್ಡ್ ಗೆ (ವಿಶಾ) ನಡೆದ ಉಪಚುನಾವಣೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ನೋಟಾ ಬಳಸಲಾಯಿತು.

*. 2548 ಮತಗಳಲ್ಲಿ 48 ಮತಗಳು ನೋಟಾದಡಿ ದಾಖಲಾಗಿದ್ದವು. ಕೆಲವು ವಿದ್ಯಾವಂತ ಮತದಾರರು ತಾವು ಅಭ್ಯರ್ಥಿಗಳನ್ನು ತಿರಸ್ಕರಿಸಿ ನೋಟಾ ಬಳಸಿದ್ದಾಗಿ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಅಷ್ಟರಮಟ್ಟಿಗೆ ನೋಟಾಗೆ ಚೊಚ್ಚಲ ಚುನಾವಣೆಯಲ್ಲಿಯೇ ಉತ್ತಮ ಸ್ಪಂದನೆ ಸಿಕ್ಕಿತ್ತು.

 *. ಮತದಾನ ತಿರಸ್ಕರಿಸುವ ಹಕ್ಕು ಜಗತ್ತಿನ 13 ದೇಶಗಳಲ್ಲಿ ಜಾರಿಯಲ್ಲಿದೆ.



 ★ 'ನೋಟಾ'ದ ಬಳಕೆ ಹೇಗೆ?
- How NOTA to be Used?

 *. ವಿದ್ಯುನ್ಮಾನ ಮತಯಂತ್ರದಲ್ಲಿ (EVM - Electronic Voter Machine) ನಮೂದಾಗಿರುವ ಅಭ್ಯರ್ಥಿಗಳ ಸಾಲಿನಲ್ಲಿ ಅತ್ಯಂತ ಕೆಳಭಾಗದಲ್ಲಿ ಈ ನೋಟಾ ಬಟನ್ ಇರುತ್ತದೆ.

*. ಉದಾ: 15 ಮಂದಿ ಅಭ್ಯರ್ಥಿಗಳಿದ್ದಲ್ಲಿ 16ನೇ ಸಂಖ್ಯೆಯಲ್ಲಿ ನೋಟಾ ಇರುತ್ತದೆ. ಪಟ್ಟಿಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ತನ್ನ ಮತಕ್ಕೆ ಅನರ್ಹ ಎನಿಸಿದರೆ 'ನೋಟಾ'ಮೂಲಕವೇ ನಮ್ಮ ಮತದಾನದ ಹಕ್ಕು ಚಲಾಯಿಸಬಹುದು. ಇದು ಅಧಿಕೃತವಾಗಿ ದಾಖಲಾಗುತ್ತದೆ. ಜೊತೆಗೆ ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸಿದ ಸಂದೇಶ ರವಾನೆಯಾಗುತ್ತದೆ.



 ★ ಮತದಾನ ಪ್ರಕ್ರಿಯೆಯಲ್ಲಿ 'ನೋಟಾ' ಪರಿಣಾಮಕಾರಿ ಯಾಗಬಲ್ಲುದೇ?
 - Can NOTA be affected in Election Procedure?

 *. ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕುಮತದಾನ ಪ್ರಕ್ರಿಯೆಯ ಮೇಲೆ ಯಾವುದೇ ಗಾಢವಾದ ಪರಿಣಾಮ ವೇನೂ ಬೀರುವುದಿಲ್ಲ. ಏಕೆಂದರೆ ತಿರಸ್ಕೃತ ಮತಗಳನ್ನು ರದ್ದಾದ ಮತಗಳೆಂದು ಚುನಾವಣಾ ಆಯೋಗವು ಪರಿಗಣಿಸಲ್ಪಡುವುದರಿಂದ ಫಲಿತಾಂಶದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

 *. ಬಹುಮತದ ಜನರು ಇದನ್ನು ಬಳಸಿದರೂ ಅಥವಾ ಯಾವುದೇ ಒಬ್ಬ ವಿಜೇತ ಅಭ್ಯರ್ಥಿ ಗಳಿಸುವ ಮತಕ್ಕಿಂತಲೂ 'ನೋಟಾ'ದಡಿ ಹೆಚ್ಚು ದಾಖಲಾಗಿದ್ದರೂ ಒಟ್ಟಾರೆ ಅಭ್ಯರ್ಥಿಗಳನ್ನು ತಿರಸ್ಕರಿಸುವ ಅವಕಾಶ ಇದರಲ್ಲಿಲ್ಲ. ವಿಶೇಷವೆಂದರೆ ನೋಟಾ'ದಡಿ ದಾಖಲಾದ ಮತಗಳ ಸನಿಹದಲ್ಲಿರುವ ಅಭ್ಯರ್ಥಿಯು ಜಯಶಾಲಿ ಎಂದು ಘೋಷಿಸಲಾಗುತ್ತದೆ.

 *. ಈ ಮೂಲಕ ಕೇವಲ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡಿದಂತಾಗಿದೆ. * ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಮತದಾರನಿಂದ ಅಭ್ಯರ್ಥಿ ತಿರಸ್ಕರಗೊಳ್ಳುವ ಮೂಲಕ ಆತನ ನೈತಿಕ ಸ್ಥೈರ್ಯ ಕುಗ್ಗಿಸಿದ ತೃಪ್ತಿ ಮಾತ್ರ ಮತದಾರನದು.

Saturday 4 October 2014

★ ಭಾರತದ ಭೂಗೋಳ: UNIT: IV] ಭಾರತದ ದ್ವೀಪಗಳು: (Indian Islands)


★ ಭಾರತದ ಭೂಗೋಳ:
(Indian Geography)


UNIT: IV] ಭಾರತದ ದ್ವೀಪಗಳು:
(Indian Islands)

★ ಮುಖಜಭೂಮಿಯ ದ್ವೀಪಗಳು:

*. ಗಂಗಾ, ಕೃಷ್ಣಾ ಮತ್ತು ಮಹಾನದಿ ದ್ವೀಪಗಳು:

*. ಗಂಗಾ ನದಿಯ ಮುಖಜಭೂಮಿಯಲ್ಲಿರುವ ದ್ವೀಪಗಳು: 'ನ್ಯೂಮರ್ ದ್ವೀಪಗಳು'

*. ಮುಖಜಭೂಮಿಯ ದ್ವೀಪಗಳಲ್ಲಿಯೇ ಅತೀ ದೊಡ್ಡ ದ್ವೀಪ: ನರ್ಮದಾ ನದಿ ಅಳಿವೆಯಲ್ಲಿರುವ 'ಆಲಿಯಾಬೆಟ್' (16 ಕಿ.ಮೀ.)

*. ಜಗತ್ತಿನ ದೊಡ್ಡದಾದ ನದಿ ದ್ವೀಪ:  ಆಸ್ಸಾಂನಲ್ಲಿ ಹರಿಯುವ ಬ್ರಹ್ಮಪುತ್ರ ನದಿಯಲ್ಲಿರುವ 'ಮಂಜೂಲಿ ದ್ವೀಪ'


★ ಸಾಗರಿಕ ದ್ವೀಪಗಳು:
*. ಭಾರತದಲ್ಲಿ ಎರಡು ಪ್ರಮುಖ ಸಾಗರಿಕ ದ್ವೀಪಸ್ತೋಮಗಳಿವೆ.

1) ಬಂಗಾಳಕೊಲ್ಲಿಯಲ್ಲಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು.

2) ಅರಬ್ಬೀ ಸಮುದ್ರದಲ್ಲಿರುವ ಲಕ್ಷದ್ವೀಪಗಳು.

*. ಭಾರತದಲ್ಲಿ ಒಟ್ಟು 247 ದ್ವೀಪಗಳಿವೆ. ಅರಬ್ಬಿ ಸಮುದ್ರದಲ್ಲಿ 43 ಹಾಗೂ ಬಂಗಾಳಕೊಲ್ಲಿಯಲ್ಲಿ 204 ದ್ವೀಪಗಳಿವೆ.



★ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು:

*. ವಿಸ್ತೀರ್ಣ: 8,236,85 ಚ.ಕಿ.ಮೀ.

*. ಪೂರ್ವ-ಪಶ್ಚಿಮವಾಗಿ 58 ಕಿ.ಮೀ ಹಾಗೂ ಉತ್ತರ-ದಕ್ಷಿಣವಾಗಿ 590 ಕಿ.ಮೀ. ವಿಸ್ತರಿಸಿದೆ.

*. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 10⁰ ಕಾಲುವೆ (10⁰ Channel) ಯು ಪ್ರತ್ಯೇಕಿಸುವುದು.



★ ಅಂಡಮಾನ್ ದ್ವೀಪಗಳು:

*. ಈ ದ್ವೀಪಗಳು ಜ್ವಾಲಾಮುಖಿ ನಿರ್ಮಿತ ಗಟ್ಟಿಶಿಲೆಗಳಿಂದ ಕೂಡಿವೆ.

*. ನಾರ್ಕೊಂಡಂ ಮತ್ತು ಬ್ಯಾರನ್ ದ್ವೀಪಗಳು ಇಲ್ಲಿನ ಪ್ರಮುಖ ಜ್ವಾಲಾಮುಖಿ ದ್ವೀಪಗಳು.

*. ಬ್ಯಾರನ್ ದ್ವೀಪವು ಪೋರ್ಟ್ ಬ್ಲೇರ್ ನಿಂದ ಈಶಾನ್ಯದಲ್ಲಿದ್ದು 'ಭಾರತದ ಏಕಮೇವ ಸಜೀವ ಜ್ವಾಲಾಮುಖಿ ದ್ವೀಪ'ವಾಗಿದೆ.

*. ಅಂಡಮಾನ್ ದ್ವೀಪಗಳಲ್ಲಿನ 'ಮಧ್ಯ ಅಂಡಮಾನ್ ದ್ವೀಪವು 'ಭಾರತದಲ್ಲಿನ ಅತಿದೊಡ್ಡ ದ್ವೀಪವಾಗಿದೆ.

*. ದಕ್ಷಿಣ ಅಂಡಮಾನ್ ನಲ್ಲಿ ಪೋರ್ಟ್ ಬ್ಲೇರ್ ಇರುವುದರಿಂದ ದಕ್ಷಿಣ ಅಂಡಮಾನ್ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದ್ವೀಪವಾಗಿದೆ.

*. ದಕ್ಷಿಣ ಅಂಡಮಾನ್ ಮತ್ತು ಚಿಕ್ಕ ಅಂಡಮಾನ್ ಗಳನ್ನು ಪ್ರತ್ಯೇಕಿಸುವ ಕಾಲುವೆ: ಡಂಕನ್ ಕಾಲುವೆ(Duncan Channel).

*. ಅಂಡಮಾನ್ ದ್ವೀಪಗಳಲ್ಲಿ ಅತಿ ಎತ್ತರದ ಶಿಖರ: 'ಸ್ಯಾಡಲ್ ಶಿಖರ'(738 ಮೀ.)

*. ಅಂಡಮಾನ್ ದ್ವೀಪಗಳಲ್ಲಿನ ಪ್ರಮುಖ ನದಿ: 'ರಾಂಗೋ ನದಿ'.



★ ನಿಕೋಬಾರ್ ದ್ವೀಪಗಳು:

*. ನಿಕೋಬಾರ್ ದ್ವೀಪಗಳು ಅಂಡಮಾನ್ ದ ದಕ್ಷಿಣಭಾಗದಲ್ಲಿವೆ.

*. ನಿಕೋಬಾರ್ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: 'ಗ್ರೇಟ್ ನಿಕೋಬಾರ್' (862 ಚ.ಕಿ.ಮೀ).

*. ಭಾರತದ ಭೂಪ್ರದೇಶದ ಅತ್ಯ೦ತ ದಕ್ಷಿಣದ ತುತ್ತತುದಿ 'ಇಂದಿರಾ ಪಾಯಿಂಟ್' ಇರುವುದು: 'ಗ್ರೇಟ್ ನಿಕೋಬಾರ್' ದ್ವೀಪದ ದಕ್ಷಿಣದ ತುದಿಯಲ್ಲಿನ 6⁰.45¹ ಉ.ಅಕ್ಷಾಂಶದಲ್ಲಿ.

*. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ: ಪೋರ್ಟ್ ಬ್ಲೇರ್ ,ದಕ್ಷಿಣ ಅಂಡಮಾನ್ ನಲ್ಲಿದೆ.



★ ಲಕ್ಷ ದ್ವೀಪಗಳು:

*. ರಾಜಧಾನಿ: ಕವರತ್ತಿ, ಕಣ್ಣಾನೂರು ದ್ವೀಪದಲ್ಲಿದೆ.

*.  ಇವು ಅರಬ್ಬೀ ಸಮುದ್ರದಲ್ಲಿರುವ ಹವಳದ ದಿಬ್ಬಗಳಾಗಿವೆ.

*. ಇವು 25 ದ್ವೀಪಗಳ ಸಮೂಹವಾಗಿದೆ.

*. ಭೂ ಮೇಲ್ಮೈ ಸಂಪೂರ್ಣವಾಗಿ ಸಮತಟ್ಟಾಗಿದ್ದು ಯಾವುದೇ ಬಗೆಯ ಬೆಟ್ಟಗುಡ್ಡಗಳು, ಝರಿಗಳು ಕಂಡುಬರುವುದಿಲ್ಲ.

*. ಪ್ರಮುಖವಾಗಿ ಎರಡು ದ್ವೀಪಸಮೂಹಗಳಿದ್ದು 1) ಉತ್ತರಕ್ಕೆ ಅಮಿನ್ ಡಿವಿ ದ್ವೀಪಗಳು ಮತ್ತು ದಕ್ಷಿಣಕ್ಕೆ ಕಣ್ಣಾನೂರು ದ್ವೀಪಗಳು.

*. ಲಕ್ಷ ದ್ವೀಪಗಳಲ್ಲಿನ ಅತಿದೊಡ್ಡ ದ್ವೀಪ: ಮಿನಿಕಾಯ್ (4.53 ಚ.ಕಿ.ಮೀ).

*. ಮಿನಿಕಾಯ್ ದ್ವೀಪಸಮೂಹವನ್ನು ಇತರ ಲಕ್ಷ ದ್ವೀಪಗಳಿಂದ ಪ್ರತ್ಯೇಕಿಸುವ ಕಾಲುವೆ: 9⁰ ಕಡಲ್ಗಾಲುವೆ (9⁰ Channel).

*. ಲಕ್ಷ ದ್ವೀಪಕ್ಕೆ ಸಮೀಪವಿರುವ ದೇಶ: ಮಾಲ್ಡೀವ್ಸ್(140 ಕಿ.ಮೀ).

to be continued...

Friday 3 October 2014

★ ಸಾಮಾನ್ಯ ಜ್ಞಾನ (ಭಾಗ - 7) General Knowledge (Part-7):


 ★ ಸಾಮಾನ್ಯ ಜ್ಞಾನ (ಭಾಗ - 7) General Knowledge (Part-7):


201) 2014 ನೇ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರು:
*. ಪಾಕಿಸ್ತಾನದ 'ದಿ ಸಿಟಿಜನ್ ಫೌಂಡೇಷನ್'.
*. ಚೀನಾ ದೇಶದ 'ಹು ಷುಲಿ (Hu Shuli), ವಾಂಗ್ ಕಾನ್ಪಾ (Wang Canfa)'.
*. ಇಂಡೋನೇಷ್ಯಾದ 'ಸಾವುರ್ ಮರ್ಲಿನಾ' (Saur Marliana Manurung).
*. ಅಫಘಾನಿಸ್ತಾನದ 'ಒಮಾರ ಖಾನ್ ಮಸೂದಿ'.
*. ಫಿಲಿಫೈನ್ಸ್ ದೇಶದ 'ರಾಂಡಿ ಹಲ್ಸನ್'.


202) ಮಹಮ್ಮದ ಘಜನಿಯು 17ನೇ ದಂಡಯಾತ್ರೆ ಯಾರ ಮೇಲೆ ಕೈಗೊಂಡನು?
— ಪಂಜಾಬಿನ ಜಾಟರು.


203) ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮತ್ತು ಸಸ್ಯಗಳ ಉಲ್ಲೇಖವಿರುವ ಪುಸ್ತಕ ಯಾವುದು?
— ರೆಡ್ ಡಾಟಾ ಬುಕ್.


204) ತಮಿಳುನಾಡಿನ ಕುಡಂಕುಳಂ ಪರಮಾಣು ವಿಧ್ಯುತ್ ಸ್ಥಾವರ ವಿರುದ್ದದ ಹೋರಾಟ (1000 ದಿನಗಳು) ವು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ನಂತರ ಅತಿ ಧೀರ್ಘಾವಧಿಯ ಅಹಿಂಸಾ ಹೋರಾಟಗಳಲ್ಲಿ ಒಂದು.


205) 'ವೃದ್ಧ ಗಂಗೆ' ಎಂದು ಕರೆಯಲ್ಪಡುವ ನದಿ ಯಾವುದು?
— ಗೋದಾವರಿ ನದಿ.


206) ಕರ್ನಾಟಕ ರಾಜ್ಯ ಎಷ್ಟು ರಾಜ್ಯಸಭಾ ಸ್ಥಾನಗಳನ್ನು ಹೊಂದಿದೆ?
— 12 ಸ್ಥಾನಗಳು.


207) ಭೂಮಿಯ ಸಾರಜನಕ ಅಂಶ ವೃದ್ದಿಯಾಗುವಂತೆ ಮಾಡುವ ಬೆಳೆ ಯಾವುದು?
—ಆಲೂಗಡ್ಡೆ.


208) ಇತ್ತೀಚೆಗೆ (2014) ಫಿಲಿಫೈನ್ಸ್ ಹಾಗೂ ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದ ಮೇಲೆ ಅಪ್ಪಳಿಸಿದ ಚಂಡಮಾರುತ ಯಾವುದು?
— ರಮ್ಮಾಸನ್ ಚಂಡಮಾರುತ.


209) ಕಾಲುಗಳು ಇಲ್ಲದಿರುವ ಉಭಯವಾಸಿ ಜೀವಿ ಯಾವುದು?
— ಈಕ್ತಿಯೊಪಿಸ್.


210) ಅತಿ ಹೆಚ್ಚು ಪ್ರಸವ ಅವಧಿಯನ್ನು ಹೊಂದಿರುವ ಪ್ರಾಣಿ ಯಾವುದು?
— ಸಾಲಮಂಡರ್ (36 ತಿಂಗಳು)


211) ಅತ್ಯ೦ತ ಚಿಕ್ಕದಾದ ಸಸ್ತನಿ ಯಾವುದು?
— ಪಿಗ್ಮಿಶ್ರೋ.


212) ಶರೀರದ ಗಾಯಗಳು ಮಾಯುವಿಕೆಗೆ ಕಾರಣವಾದ ಜೀವಕೋಶ ಯಾವುದು?
— ಮೈಟಾಸಿಸ್.


213) ವೈರಸ್ ಗಳ ಗಾತ್ರ?
— 0.015 ರಿಂದ 0.2 ಮೈಕ್ರಾನ್.


214) ಬ್ಯಾಕ್ಟೀರಿಯಗಳ ಗಾತ್ರ?
— 0.2 ರಿಂದ 1.0 ಮೈಕ್ರಾನ್.


215) ಬ್ಯಾಕ್ಟೀರಿಯಗಳ ಬೆಳವಣಿಗೆಗೆ ಸೂಕ್ತವಾದ ಉಷ್ಣತೆ ಎಷ್ಟು?
— 30-35⁰ ಸೆಲ್ಸಿಯಸ್.


216) ಇತ್ತೀಚೆಗೆ ಆಗಸ್ಟ್ 15, 2014 ಕ್ಕೆ ಶತಮಾನೋತ್ಸವವನ್ನು ಆಚರಿಸಿಕೊಂಡ ಜಗತ್ತಿನ ಏಳು ಅಧ್ಬುತಗಳಲ್ಲಿ ಒಂದಾಗಿರುವ ಸ್ಥಳ ಯಾವುದು?
— ಪನಾಮಾ ಕಾಲುವೆ.


217) ಪನಾಮಾ ಕಾಲುವೆ ಯಾವ ಎರಡು ಸಾಗರಗಳನ್ನು ಸೇರಿಸುತ್ತದೆ?
— ಅಟ್ಲಾಂಟಿಕ್ ಸಾಗರ ಮತ್ತು ಫೆಸಿಫಿಕ್ ಸಾಗರ.


218) ಪಶ್ಚಿಮಘಟ್ಟಗಳು ಹರಡಿಕೊಂಡಿರುವ ರಾಜ್ಯಗಳು ಯಾವವು?
— ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು.


219) ಪಶ್ಚಿಮಘಟ್ಟಗಳ ಸುರಕ್ಷತೆಯ ಕುರಿತ ಯಾವ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ?
— ಮಾಧವ್ ಗಾಡ್ಗೀಳ್.


220) ಮೈಸೂರು ರಾಜ್ಯ (ನವೆಂಬರ್ 1, 1956) ದ ನಂತರ ಕರ್ನಾಟಕದ ಮೊದಲ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದವರು ಯಾರು?
— ಜಯಚಾಮರಾಜೇಂದ್ರ ಒಡೆಯರ್.


221) ಧೀರ್ಘಾವಧಿಯ ಆಳ್ವಿಕೆ ನಡೆಸಿದ ಕರ್ನಾಟಕದ ರಾಜ್ಯಪಾಲರು ಯಾರು?
— ಖುರ್ಷಿದ್ ಆಲಂ ಖಾನ್ (1991-99).


222) ಭಾರತದಲ್ಲಿ ಅತಿ ಹೆಚ್ಚು ಹುಲಿ ಸಂತತಿ ಹೊಂದಿರುವ ಹಾಗೂ ಬಿಳಿ ಹುಲಿಗೆ ಪ್ರಸಿದ್ಧವಾದ ರಾಷ್ಟೀಯ ಉದ್ಯಾನವನ ಯಾವುದು?
— ಬಂದ್ ವ್ಯಾಘ್ರ ರಾಷ್ಟೀಯ ಉದ್ಯಾನವನ (ಮಧ್ಯಪ್ರದೇಶ).


223) 2014ನೇ ಸಾಲಿನ ಮಾನವ ಅಭಿವೃದ್ದಿ ಸೂಚ್ಯಂಕ ವರದಿಯಲ್ಲಿ ಭಾರತದ ಸ್ಥಾನ ಎಷ್ಟು?
— 135 ನೇ ಸ್ಥಾನ.


224) 'ರಾಜ್ಯದ ಅಂಗಡಿ ಹಾಗೂ ವಾಣಿಜ್ಯ ಕಟ್ಟಡಗಳ ಮುಂದಿನ ನಾಮಫಲಕ ಕನ್ನಡದಲ್ಲಿರಬೇಕು' ಎಂದು ಸಾರುವ ನಿಯಮ ಯಾವುದು?
— ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ 1963.


225) ಭಾರತದ ಪೂರ್ವ ಮತ್ತು ಪಶ್ಚಿಮ ತುದಿಗಳ ಅಂತರ ಎಷ್ಟು?
— 2933 ಕಿ.ಮೀ.


226) 'Indian Premier League' ನಲ್ಲಿ ಮ್ಯಾಚ್ ಫಿಕ್ಸಿಂಗ್ ಹಗರಣವನ್ನು ತನಿಖೆ ನಡೆಸಲು ನೇಮಿಸಿದ ಸಮಿತಿ ಯಾವುದು?
— ಮುದ್ಗಲ್ ಸಮಿತಿ.


227) ಕ್ವಿನಿಲ್ ದ್ವೀಪಗಳ ವಿವಾದ ಯಾವ ಯಾವ ರಾಷ್ಟ್ರಗಳ ಮಧ್ಯೆ ಇದೆ?
— ಜಪಾನ್-ರಷ್ಯಾ.


228) 'ಹಲಾಯಿಬ್ ಟ್ಯಾಂಗಲ್' ಕ್ಷೇತ್ರವು ಯಾವ ರಾಷ್ಟ್ರಗಳ ಗಡಿ ಅಂಚಿನಲ್ಲಿದೆ?
— ಈಜಿಪ್ಟ್ ಮತ್ತು ಸೂಡಾನ್.


229) ಗಂಗಾನದಿಗೆ ಇರುವ ಇನ್ನೊ೦ದು ಹೆಸರೇನು?
— ಭಾಗೀರಥಿ.


230) ಸಿಂಧೂ ಲಿಪಿಯೊಂದಿಗೆ ಹೋಲಿಕೆಯಿರುವ ಭಾರತೀಯ ಲಿಪಿ ಯಾವುದು?
— ದ್ರಾವಿಡಿಯನ್.


231) 2013 ನೇ ಸಾಲಿನ (10 ನೇ) ಜ್ಞಾನಪೀಠ ಪ್ರಶಸ್ತಿಯನ್ನು ಪಡೆದವರು ಯಾರು?
— ಕೇದಾರನಾಥ ಸಿಂಗ್ (ಉತ್ತರಪ್ರದೇಶ) (ಹಿಂದಿ ಭಾಷೆಯ ಸಮಗ್ರ ಸಾಹಿತ್ಯ) .


232) ಯಾವ ನಾಗರೀಕತೆಯವರು ಸಿಂಧೂ ಪ್ರಾಂತ್ಯವನ್ನು 'ಮೆಲುಹಾ' ಎಂದು ವ್ಯವಹರಿಸಿದರು?
— ಮೆಸಪಟೋಮಿಯಾ.


233) ಹರಪ್ಪಾ ನಾಗರೀಕತೆಯವರು ಯಾವ ಪಕ್ಷಿಯನ್ನು ಪವಿತ್ರವಾದುದಾಗಿ ಪೂಜಿಸುತ್ತಿದ್ದರು?
— ಪಾರಿವಾಳ.


234) ಇತ್ತೀಚೆಗೆ (2014) 6ನೇ BRICS ಶೃಂಗ ಸಭೆ ಎಲ್ಲಿ ನಡೆಯಿತು?
— ಬ್ರೆಜಿಲ್ ನ ಫೋರ್ಟ್ ಲೆಜಾ.


235) ಮುಂದೆ 2015 ರ 7ನೇ BRICS ಶೃಂಗ ಸಭೆ ಎಲ್ಲಿ ನಡೆಸಲು ನಿಶ್ಚಯಿಸಲಾಗಿದೆ?
— ರಷ್ಯಾ.


236) ಅನುವಂಶಿಕತೆ ವಿಜ್ಞಾನದ ಜನಕ ಯಾರು?
— ಮೆಂಡಲ್.


237) ಭೂಗೋಳಶಾಸ್ತ್ರದ ಹಿನ್ನೆಲೆಯಲ್ಲಿ, 'ಡೋಲ್ ಡ್ರಮ್' ಗಳು ಎಲ್ಲಿ ಉಂಟಾಗುತ್ತವೆ?
— ಸಮಭಾಜಕ ವೃತ್ತ ಪ್ರದೇಶದಲ್ಲಿ.


238) ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತದ ನಡುವಿನ ಪ್ರದೇಶವನ್ನು ಏನೆಂದು ಕರೆಯಲಾಗುತ್ತದೆ?
— ಟ್ಯೂರಿಡ್ ವಲಯ.


239) ಯಾವ ನದಿಯು ಸಮಭಾಜಕ ವೃತ್ತವನ್ನು ಎರಡು ಸಲ ಹಾದುಹೋಗುತ್ತದೆ?
— ಕಾಂಗೋ ನದಿ.


240) ಭಾರತದ ಯಾವ ಸಂಸ್ಥೆಯು Topographical ಭೂಪಟಗಳನ್ನು ಸಿದ್ಧಪಡಿಸುತ್ತದೆ?
— ಸರ್ವೆ ಆಪ್ ಇಂಡಿಯಾ.


241) ಭಾರತದಲ್ಲಿ ಅತಿ ಹೆಚ್ಚು ನೆರೆಹಾವಳಿ ಇರುವ ನದಿ ಮುಖಜಭೂಮಿ ಯಾವುದು?
— ಬ್ರಹ್ಮಪುತ್ರ ನದಿ ಮುಖಜಭೂಮಿ.


242) ಚಳಿಗಾಲದಲ್ಲಿ ಯಾವ ಪ್ರದೇಶದಲ್ಲಿ 'ಗ್ಲೋಬಲ್ ವಾರ್ಮಿಂಗ್' ನ ಪ್ರಭಾವ ಹೆಚ್ಚುವುದು?
— ಮಕರ ಸಂಕ್ರಾಂತಿ ವೃತ.


243) ಭಾರತದಲ್ಲಿ ಹೆಚ್ಚು ಪ್ರಮಾಣದಲ್ಲಿ ಲಭ್ಯವಿರುವ ಮಣ್ಣು ಯಾವುದು?
— ಕಪ್ಪು ಮಣ್ಣು.



244) ಕಣ್ಣುಗಳ ಉರಿತಕ್ಕೆ ಕಾರಣವಾದ ಮಾಲಿನ್ಯಕಾರಕ ಯಾವುದು?
— SO2.


245) ಸಿ.ಯು.ಕಿ ಗ್ರಂಥ ಯಾವ ವಿಷಯವನ್ನು ಒಳಗೊಂಡಿದೆ?
— ಹರ್ಷನ ಆಡಳಿತ.


246) ಭಾರತದ ಹಣಕಾಸು ಇಲಾಖೆಯ ಪ್ರಥಮ ಮಹಿಳಾ ಕಾರ್ಯದರ್ಶಿ ಯಾರು?
— ಸುಷ್ಮಾ ನಾಥ್.


247) ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ ಯಾವುದು?
— UK.


248) ಭಾರತದ ಒಂದು ರುಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?
— ಕಾರ್ಯದರ್ಶಿ, ಆರ್ಥಿಕ ವಿಭಾಗ, ಭಾರತ ಸರ್ಕಾರ.


249) ಆಸ್ಪತ್ರೆಯಲ್ಲಿ ಕೃತಕ ಉಸಿರಾಟಕ್ಕೆ ಬಳಸುವ ಅನಿಲ ಯಾವುದು?
— ಆಮ್ಲಜನಕದೊಂದಿಗೆ ಹೀಲಿಯಂ.


250) ಹಿಮೋಗ್ಲೋಬಿನ್ ನಲ್ಲಿರುವ ಲೋಹ ಯಾವುದು?
— ಕಬ್ಬಿಣ.

...to be continued .

★ ಭಾರತದ ಭೂಗೋಳ: UNIT: III] ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು:


★ ಭಾರತದ ಭೂಗೋಳ:

UNIT: III] ಭಾರತದ ಅಂತರ್ರಾಷ್ಟ್ರೀಯ ಗಡಿರೇಖೆಗಳು:


★ ಭಾರತದ ಒಟ್ಟು ಗಡಿ 21,300 ಕಿ.ಮೀ.

— ಭೂ ಗಡಿ: 15,200 ಕಿ.ಮೀ.

— ಜಲ ಗಡಿ:  6,100 ಕಿ.ಮೀ.

— ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ:  7,516.6 ಕಿ.ಮೀ.



★ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳು: 7.

*.ವಾಯುವ್ಯದಲ್ಲಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನ.

*.ಉತ್ತರದಲ್ಲಿ ಚೀನಾ, ನೇಪಾಳ ಮತ್ತು ಭೂತಾನ್.

*.ಪೂರ್ವದಲ್ಲಿ ಮಯನ್ಮಾರ್ ಹಾಗು ಬಾಂಗ್ಲಾದೇಶ.



★ ಭಾರತ ಮತ್ತು ಪಾಕಿಸ್ತಾನ:

*. ಅಂತರ್ರಾಷ್ಟ್ರೀಯ ಗಡಿರೇಖೆ:
ರಾೄಡ್ ಕ್ಲಿಪ್ ರೇಖೆ.

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:
3310 ಕಿ.ಮೀ.

*. ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
ಗುಜರಾತ್, ರಾಜಸ್ಥಾನ,     ಪಂಜಾಬ್ ಮತ್ತು ಜಮ್ಮು ಕಾಶ್ಮೀರ.

*. ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು:
ಗುಜರಾತಿನ ಕಛ್ ಜೌಗು ವಲಯ, ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.



★ ಭಾರತ ಮತ್ತು ಚೀನಾ:

*. ಅಂತರ್ರಾಷ್ಟ್ರೀಯ ಗಡಿರೇಖೆ:
ಮ್ಯಾಕ್ ಮಹೋನ್ ರೇಖೆ.

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:
3917 ಕಿ.ಮೀ.

*. ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ.

*. ಚೀನಾದೊಂದಿಗಿನ ವಿವಾದಿತ ಪ್ರದೇಶಗಳು:
ಆಕ್ ಸಾಯ್ ಚಿನ್ (ಕಾಶ್ಮೀರದ ಪೂರ್ವ ಭಾಗ), ಅರುಣಾಚಲ ಪ್ರದೇಶ, ನತುಲಾ.



★ ಭಾರತ ಮತ್ತು ಅಫಘಾನಿಸ್ತಾನ:

*. ಅಂತರ್ರಾಷ್ಟ್ರೀಯ ಗಡಿರೇಖೆ:
ಡ್ಯೂರಾಂಡ್ ರೇಖೆ.

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:
 80 ಕಿ.ಮೀ.

*. ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
 ಜಮ್ಮು ಕಾಶ್ಮೀರ.



★ ಭಾರತ ಮತ್ತು ನೇಪಾಳ:

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:
1752 ಕಿ.ಮೀ.

*. ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ.

*. ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:
ಕಪಾಲಿನಿ, ಸುಸ್ತಾ.



★ ಭಾರತ ಮತ್ತು ಭೂತಾನ್:

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:
587 ಕಿ.ಮೀ.

*. ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.



★ ಭಾರತ ಮತ್ತು ಮಯನ್ಮಾರ್:

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:
1536 ಕಿ.ಮೀ.

*. ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ.

*. ಕೆಲವೆಡೆ 'ಇರವಾಡಿ ನದಿ'ಯು ಅಂತರಾಷ್ಟ್ರೀಯ ಗಡಿಯಾಗಿದೆ.



★ ಭಾರತ ಮತ್ತು ಬಾಂಗ್ಲಾದೇಶ:

*. ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:
4096 ಕಿ.ಮೀ. ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ.

*. ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:
ಆಸ್ಸಾಂ, ತ್ರಿಪುರಾ, ಮೇಘಾಲಯ, ಮಿಜೋರಾಂ, ಪಶ್ಚಿಮ ಬಂಗಾಳ.

*. ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು:
ಪರಕ್ಕಾ ಆಣೆಕಟ್ಟು, ಚಕ್ಮಾ ನಿರಾಶ್ರಿತರು, ನ್ಯೂಮರ್ ದ್ವೀಪ, ತಿನ್ಬಿಕ್ ಪ್ರದೇಶ.

*. ಭಾರತ - ಬಾಂಗ್ಲಾ ದೇಶಗಳ ನಡುವೆ ಒಟ್ಟು 162 ಎನ್ ಕ್ಲೇವ್ (Enclave) ಗಳಿವೆ. ಇವುಗಳಲ್ಲಿ 111 ಭಾರತದ ಭೂ ಭಾಗಗಳು ಬಾಂಗ್ಲಾದೇಶದೊಳಗೆ ಎಕ್ಸ್ ಕ್ಲೇವ್ (Exclave) ಗಳಾಗಿವೆ. ಬಾಂಗ್ಲಾದ 51 ಭೂ ಭಾಗಗಳು ಎನ್ ಕ್ಲೇವ್ (Enclave) ಆಗಿ ಭಾರತದಲ್ಲಿವೆ.



IV]  ಇತರೆ ನೆರೆಯ ರಾಷ್ಟ್ರಗಳು:

★ ಶ್ರೀಲಂಕಾ:

*. ಶ್ರೀಲಂಕಾ ಭಾರತದ ದಕ್ಷಿಣ ಭಾಗದಲ್ಲಿರುವ ದ್ವೀಪ ರಾಷ್ಟ್ರ.

*. ಇದರ ರಾಜಧಾನಿ ಕೊಲಂಬೊ.

*. ಭಾರತವನ್ನು ಆಗ್ನೇಯದಲ್ಲಿ ಶ್ರೀಲಂಕಾದಿಂದ ಬೇರ್ಪಡಿಸಿರುವ ಜಲಸಂಧಿಗಳು:
ಪಾಕ್ ಜಲಸಂಧಿ(Palk Striate)  ಮತ್ತು ಮನ್ನಾರ್ ಅಖಾತ (ಖಾರಿ) (Gulf of Mannar).

*. ಭಾರತ ಮತ್ತು ಶ್ರೀಲಂಕಾಗಳ ನಡುವೆ ಕೇವಲ 28 ಕಿ.ಮೀ. ಅಗಲವಾದ ಸಮುದ್ರವಿದ್ದು ಇದರಲ್ಲೇ 'ಆಡಂ ಬ್ರಿಜ್' ಇದೆ.



★ ಮಾಲ್ಡೀವ್ಸ್:
*. ಭಾರತದ ನೈರುತ್ಯ ಭಾಗದಲ್ಲಿರುವ ದ್ವೀಪ ಸಮೂಹ ರಾಷ್ಟ್ರ.

*. ಇದರ ರಾಜಧಾನಿ ಮಾಲೆ.

to be continued...

Wednesday 1 October 2014

★ ಕೆಎಎಸ್‌ ಪರೀಕ್ಷೆಯ ಕುರಿತು ಅವಲೋಕನ: (Having Glance on KAS Examination).


★ ಕೆಎಎಸ್‌ ಪರೀಕ್ಷೆಯ ಕುರಿತು ಅವಲೋಕನ:
Having Glance on KAS Examination.

ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 452 ಗೆಜೆಟೆಡ್ ಪ್ರೊಬೇಷನರ್‌್ಸ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸದ್ಯದಲ್ಲೇ ಅಧಿಸೂಚನೆ ಹೊರಡಿಸಲಿದೆ. ಮೂರು ವರ್ಷಗಳ ನಂತರ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗೆ ಚಾಲನೆ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಕೆಪಿಎಸ್‌ಸಿ  ಸದ್ಯದಲ್ಲೇ ಅರ್ಜಿಗಳನ್ನು ಆಹ್ವಾನಿಸಲಿದೆ.

ಪ್ರತಿ ವರ್ಷ ಕೆಎಎಸ್‌ ಪರೀಕ್ಷೆ ನಡೆಸಬೇಕು ಎಂಬ ನಿಯಮ ಇದೆ. ಆದರೆ, 2011ನೇ ಸಾಲಿನ ನೇಮಕಾತಿ ಗೊಂದಲ ಬಗೆಹರಿಯದ ಕಾರಣ, 2012, 2013ನೇ ಸಾಲಿನಲ್ಲಿ ನೇಮಕಾತಿ ನಡೆದಿರಲಿಲ್ಲ. ಹಿಂದಿನ ಎರಡು ವರ್ಷಗಳ ಹುದ್ದೆಗಳನ್ನೂ ಸೇರಿಸಿ ಈ ವರ್ಷ ಒಮ್ಮಲೇ 452 ಹುದ್ದೆಗಳನ್ನು ಭರ್ತಿಗೆ ಸರ್ಕಾರ ಕೊನೆಗೂ ಮನಸ್ಸು ಮಾಡಿದೆ.

ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿ ಪೂರ್ವಭಾವಿ, ಮುಖ್ಯಪರೀಕ್ಷೆ ಹಾಗೂ ಸಂದರ್ಶನ ಸೇರಿದಂತೆ ಒಟ್ಟು ಮೂರು ಹಂತಗಳಲ್ಲಿ ನಡೆಯಲಿದೆ. ಈ ಮೂರೂ ಹಂತಗಳಲ್ಲಿ ಯಶಸ್ವಿಯಾದವರು ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬಹುದು.

1998ರ ಸಾಲಿನಲ್ಲಿ 412 ಹುದ್ದೆಗಳನ್ನು ಭರ್ತಿ ಮಾಡಿದ್ದು ಬಿಟ್ಟರೆ ನಂತರದ ವರ್ಷಗಳಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆಎಎಸ್‌ ಹುದ್ದೆಗಳ ಭರ್ತಿ ನಡೆದಿರಲಿಲ್ಲ. ರಾಜ್ಯದ ಆಡಳಿತ ಸೇವೆಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಬಯಸುವವರಿಗೆ ಇದೊಂದು ಸದಾವಕಾಶ.

ಈ ಬಾರಿ ದೊಡ್ಡ ಪ್ರಮಾಣದಲ್ಲಿ ನೇಮಕಾತಿ ನಡೆಯುತ್ತಿದ್ದು,  ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌, ತಾಲ್ಲೂಕು ಪಂಚಾಯತ್‌ ಮುಖ್ಯಕಾರ್ಯನಿವರ್ಹಣಾಧಿಕಾರಿ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ.  ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಯ ಮಾದರಿಯನ್ನೇ ಕರ್ನಾಟಕ ಲೋಕಸೇವಾ ಆಯೋಗವು 2011ರಲ್ಲಿ ಪೂರ್ವಭಾವಿ ಪರೀಕ್ಷೆಗೆ ಅಳವಡಿಸಿಕೊಂಡಿದೆ. ಆ ಪ್ರಕಾರವೇ ಈ ಬಾರಿಯೂ ಪೂರ್ವಭಾವಿ ಪರೀಕ್ಷೆ ನಡೆಯಲಿದೆ.

★ ಯಾರು ಅರ್ಹರು?:
ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅಥವಾ ಪದವಿಯ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಕೆಎಎಸ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಆದರೆ, ಮುಖ್ಯಪರೀಕ್ಷೆಗೆ ಅರ್ಜಿ ಸಲ್ಲಿಸುವ ವೇಳೆಗೆ ಪದವಿಯ ಅಂಕಪಟ್ಟಿಗಳನ್ನು ಹೊಂದಿರಲೇಬೇಕು. ಅಲ್ಲದೆ ಆಯಾ ಪ್ರವರ್ಗಕ್ಕೆ ಅನುಗುಣವಾಗಿ ಸರ್ಕಾರವು  ನಿಗದಿಪಡಿಸುವ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.

★ ಪರೀಕ್ಷಾ ವಿಧಾನ
ಪೂರ್ವಭಾವಿ ಪರೀಕ್ಷೆ: ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಯು ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಎರಡು ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಇವೆರಡಕ್ಕೂ ತಲಾ 200 ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಪತ್ರಿಕೆಗಳು ಎಲ್ಲರಿಗೂ ಕಡ್ಡಾಯ. ಪ್ರತಿಯೊಂದು ಪ್ರಶ್ನೆಪತ್ರಿಕೆ ತಲಾ ಎರಡು ಅಂಕಗಳ 100 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ಸಾವರ್ಜನಿಕ ಆಡಳಿತ, ಕಲೆ, ಸಾಹಿತ್ಯ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂವಿಧಾನ, ಪ್ರಚಲಿತ ವಿದ್ಯಮಾನ, ಎಂಜಿನಿಯರಿಂಗ್, ವೈದ್ಯಕೀಯ, ಸಾಮಾನ್ಯ ಜ್ಞಾನ, ಬೌದ್ಧಿಕ ಸಾಮರ್ಥ್ಯ, ಪರಿಸರ ಇತ್ಯಾದಿ ವಿಷಯಗಳು ಪಠ್ಯಕ್ರಮದಲ್ಲಿ ಸೇರಿವೆ.

ಪೂರ್ವಭಾವಿ ಪರೀಕ್ಷೆಯಿಂದ ಮುಖ್ಯಪರೀಕ್ಷೆಗೆ 1:20ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಉದಾಹರಣೆಗೆ ಒಂದು ಹುದ್ದೆ ಇದ್ದರೆ 20 ಮಂದಿ ಮುಖ್ಯಪರೀಕ್ಷೆ ಬರೆಯಲು ಅರ್ಹರು.

★ ಮುಖ್ಯಪರೀಕ್ಷೆ:
ಎರಡನೇ ಹಂತದಲ್ಲಿ ನಡೆಯುವ ಮುಖ್ಯಪರೀಕ್ಷೆ 1,800 ಅಂಕಗಳನ್ನು ಒಳಗೊಂಡಿರುತ್ತದೆ. ಎರಡು ಐಚ್ಛಿಕ ವಿಷಯಗಳು ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ಒಟ್ಟು 6 ಪ್ರಶ್ನೆಪತ್ರಿಕೆಗಳನ್ನು ಮುಖ್ಯಪರೀಕ್ಷೆ ಒಳಗೊಂಡಿರುತ್ತದೆ. ಆಯೋಗ ಗುರುತಿಸಿರುವ 30 ಐಚ್ಛಿಕ ವಿಷಯಗಳ ಪೈಕಿ ಯಾವುದಾದರೂ ಎರಡು ವಿಷಯಗಳನ್ನು ಅಭ್ಯರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿ ವಿಷಯದಲ್ಲಿ ತಲಾ 300 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳು ಇರುತ್ತವೆ. ಸಾಮಾನ್ಯ ಜ್ಞಾನ ವಿಷಯದಲ್ಲೂ ತಲಾ 300 ಅಂಕಗಳ ಎರಡು ಪ್ರಶ್ನೆಪತ್ರಿಕೆಗಳು ಇರುತ್ತವೆ.

ಸಾಮಾನ್ಯ ಕನ್ನಡ ಮತ್ತು ಸಾಮಾನ್ಯ ಇಂಗ್ಲಿಷ್ ವಿಷಯದ ಪ್ರಶ್ನೆ ಪತ್ರಿಕೆಗಳು ಮುಖ್ಯಪರೀಕ್ಷೆಯಲ್ಲಿ ಇರುತ್ತವೆ. ಆದರೆ ಈ ವಿಷಯಗಳಲ್ಲಿ  ಕೇವಲ ತಲಾ 35 ಅಂಕಗಳನ್ನು ಗಳಿಸಿದರೆ ಸಾಕು. ಇದು ಕೇವಲ ಅರ್ಹತಾ ಪರೀಕ್ಷೆಯಾಗಿದ್ದು, ಈ ಅಂಕಗಳನ್ನು ಫಲಿತಾಂಶ ನಿರ್ಧರಿಸಲು ಪರಿಗಣಿಸುವುದಿಲ್ಲ. ಆದರೆ ಕನ್ನಡ ಮತ್ತು ಇಂಗ್ಲಿಷ್ ವಿಷಯದಲ್ಲಿ ಪಾಸಾದರೆ ಮಾತ್ರ ಉಳಿದ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.

★ ಆಯ್ಕೆ:
ಮುಖ್ಯಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಆಧರಿಸಿ 1:3ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನಕ್ಕೆ ಒಟ್ಟು  200 ಅಂಕಗಳನ್ನು ನಿಗದಿ ಮಾಡಲಾಗಿದೆ.  ರಹಸ್ಯ ಪಾಲನೆ: ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಪಿ.ಸಿ.ಹೋಟಾ ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ.

ಹೀಗಾಗಿ ಮುಖ್ಯಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸುವ ಅಂಕಗಳನ್ನು ಸಂದರ್ಶನಕ್ಕೂ ಮೊದಲೇ ಬಹಿರಂಗಪಡಿಸುವುದಿಲ್ಲ. ಇದರಿಂದಾಗಿ ಸಂದರ್ಶನ ಹಂತದಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಪಾರದರ್ಶಕವಾಗಿ ಸಂದರ್ಶನ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
(ಕೃಪೆ: ಪ್ರಜಾವಾಣಿ)

★ ಸಾಮಾನ್ಯ ಜ್ಞಾನ (ಭಾಗ - 6) General Knowledge (PART-6)


 ★ ಸಾಮಾನ್ಯ ಜ್ಞಾನ (ಭಾಗ - 6) General Knowledge (PART-6) :


134) ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?
—ಉತ್ತಂಗಿ ಚೆನ್ನಪ್ಪ.


135) ಸಂತಾನ ರಹಿತ ವ್ಯಕ್ತಿಯ ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ ಪದ್ಧತಿಯನ್ನು ತೊಡೆದು ಹಾಕಿದವನು ಯಾರು?
— ಗುಜರಾತಿನ ಕುಮಾರಪಾಲ.


136) ಕನ್ನಡದ ಮೊದಲ ಅಲಂಕಾರ ಗ್ರಂಥ ಯಾವುದು?
— ಕವಿರಾಜ ಮಾರ್ಗ.


137) ಹೊಸಗನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ ಯಾವುದು?
— ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.


138) 2014 ರ ವಿಂಬಲ್ಡನ್ ಪುರುಷರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು?
— ನೋವಾಕ್ ಜೊಕೊವಿಕ್(ಸರ್ಬಿಯಾ)- ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ವಿರುದ್ಧ.


139) ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
— ಬಾದಾಮಿ ಶಾಸನ.


140) 0 ಡಿಗ್ರಿ ಗ್ರೀನ್ ವಿಚ್ ರೇಖೆಯು ಪ್ರಪಂಚದಲ್ಲಿ ಸಮಭಾಜಕ ವೃತ್ತವನ್ನು ಸಂಧಿಸುವ ಸ್ಥಳ ಯಾವುದು?
— ಆಫ್ರಿಕಾ ಖಂಡದ ಗಿನಿಯಾಕಾರಿ.


141) ಕೋಬರ್ ಗಡೆ, ಗವಾಯ್ ಗುಂಪು ಎಂದು ವಿಂಗಡನೆಯಾದ ಪಕ್ಷ ಯಾವುದು?
— ರಿಪಬ್ಲಿಕನ್ ಪಕ್ಷ.


142) ಸಂಘಮಿತ್ರೆಯು ಶ್ರೀಲಂಕಾಕ್ಕೆ ಕೊಂಡೊಯ್ದ ಭೋಧಿವೃಕ್ಷದ ಕೊಂಬೆಯನ್ನು ಎಲ್ಲಿ ನೆಡಲಾಯಿತು?
— ಅನುರಾಧಪುರ.


143) ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ ಹಾಸ್ಯ ನಾಟಕಕಾರ ಯಾರು?
— ಸೋಪೋಕ್ಲಿಸ್.


144) ಭಾರತದ ಸುಪ್ರಿಂಕೋರ್ಟ್ ನ 42 ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡವರು?
— ನ್ಯಾ|| H.L. ದತ್ತು.


145) 'ಎಬೋಲಾ' ವೈರಸ್ ಮೊದಲು ಪತ್ತೆಯಾದದ್ದು ಎಲ್ಲಿ?
— ಡೆಮಾಕ್ರೆಟಿಕ್ ರಿಪಬ್ಲಿಕ್ ಆಪ್ ಕಾಂಗೋ (1976).


146) ಗಣಿತಶಾಸ್ತ್ರದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್ (ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ) ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ) ಪಡೆದ ಭಾರತೀಯ ಮೂಲದವರು ?
— ಮಂಜುಳಾ ಭಾರ್ಗವ.


147) ಭಾರತದ ಮೊದಲ ವಾಯುಸಾರಿಗೆ ಎಲ್ಲಿಂದ ಎಲ್ಲಿಯವರೆಗೆ ಪ್ರಾರಂಭಿಸಲಾಯಿತು?
— ಅಲಹಾಬಾದ್ ನಿಂದ ನೈನಿವರೆಗೆ (1911).


148) ಇತ್ತಿಚೆಗೆ (2014 Sept 1) ಕರ್ನಾಟಕ ರಾಜ್ಯದ 18 ನೇ ರಾಜ್ಯಪಾಲರಾಗಿ ನೇಮಕಗೊಂಡವರು?
— ವಾಜುಭಾಯಿ ವಾಲಾ (ಗುಜರಾತ).


149) ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ (ಕೇರಳ) ರಾಜ್ಯದ ರಾಜ್ಯಪಾಲರಾಗಿ ಇತ್ತಿಚೆಗೆ (2014, Sept, 5) ಅಧಿಕಾರ ವಹಿಸಿಕೊಂಡ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಯಾರು?
— ಪಿ. ಸದಾಶಿವಂ.


150) ದೇಶದಲ್ಲೇ ಅತಿ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ ರಾಜ್ಯ ಯಾವುದು?
— ತಮಿಳುನಾಡು.


151) ಕನ್ನಡದ ಮೊಟ್ಟಮೊದಲ ಪದ 'ಇಸಿಲ' ಅಶೋಕನ ಬ್ರಹ್ಮಗಿರಿ ಶಾಸನದಲ್ಲಿದೆ.


152) ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ?
— ಗುಜರಾತ.


153) ಪರಿಸರವನ್ನು ಕುರಿತ ಮೊದಲ ವಿಶ್ವ ಸಂಸ್ಥೆಯ ಸಮಾವೇಶವು ಜೂನ್ 1972 ರಲ್ಲಿ ಎಲ್ಲಿ ನಡೆಯಿತು?
— ಸ್ಟಾಕ್ ಹೋಮ್ .


154) ಏಷ್ಯಾ ಮತ್ತು ಯೂರೋಪ್ ಖಂಡಗಳನ್ನು ಬೇರ್ಪಡಿಸುವ ಪರ್ವತಗಳು ಯಾವವು?
— ಯೂರಲ್ ಪರ್ವತಗಳು.


155) ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ?
— ಚೌರಿಚೌರಾ ಘಟನೆ.


156) ಅಂತರ್ರಾಷ್ಟ್ರೀಯ ತಿಥಿರೇಖೆ ಎಂದರೇನು?
— ಇದು 180⁰ ರೇಖಾಂಶವಾಗಿದೆ.


157) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು?
— ಕೃಪಲಾನಿ.


158) ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ ಏಕೈಕ ವಿಧಾನಸಭೆ ಯಾವುದು?
— ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1 ಸಂಘಂ - ಬೌದ್ಧಧರ್ಮ ಕ್ಕೆ)


159) ದೇವದಾಸಿ ಪದ್ಧತಿಯ ಬಗ್ಗೆ ವಿವರವನ್ನು ನೀಡುವ ಮೊದಲ ಶಾಸನ ಯಾವುದು?
— ರಾಮಘರ ಶಾಸನ.


160) 'ಮಧ್ಯಪ್ರದೇಶದ ಜೀವನದಿ' ಎಂದು ಕರೆಯಲ್ಪಡುವ ನದಿ?
— ನರ್ಮದಾ ನದಿ.


161) ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ನಿಧನರಾದ ಭಾರತದ ಪ್ರಧಾನಿ?
— ಲಾಲ್ ಬಹದ್ದೂರ್ ಶಾಸ್ತ್ರಿ.


162) ಭೂದಾನ ಚಳುವಳಿಯನ್ನು ಎಲ್ಲಿ ಆರಂಭಿಸಲಾಯಿತು?
— 'ತೆಲಂಗಾಣದ ಪೊಚಂಪಲ್ಲಿ'


163) 'ಕಂಪನಿ ಅಕ್ಬರನ' ಎಂದು ಕರೆಯಲ್ಪಟ್ಟವರು?
— ಲಾರ್ಡ್ ವೆಲ್ಲೆಸ್ಲಿ.


164) ಕನ್ನಡ ಸಾಹಿತ್ಯ ಪರಿಷತ್ ನ ನೂತನ ಘೋಷವಾಕ್ಯ ಯಾವುದು?
— "ಮನುಷ್ಯ ಜಾತಿ ತಾನೊಂದೆವಲಂ".


165) ಇತ್ತಿಚೆಗೆ (2014 Aug) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು?
— ರಜ್ನಿ ರಜ್ದಾನ್ (Rajni Razdan)


166) ತೈಲೋತ್ಪಾದನೆಗಾಗಿ ಬಾಂಬೆ ಹೈನಲ್ಲಿ 1400 ಅಡಿ ಆಳದಿಂದ ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ ಪ್ಲಾಟ್ ಫಾರ್ಮ್ ಯಾವುದು?
— ಸಾಗರ್ ಸಾಮ್ರಾಟ್.


167) ಭಾರತದ 4 ನೇ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು?
— ಗೋಪಾಲ್ ಸ್ವರೂಪ್ ಪಾಠಕ್.


168) 'ಅಯ್ಯಂಗಾರ್ ಯೋಗ' ಎಂದೇ ಹೆಸರಾಗಿದ್ದ, ಆಧುನಿಕ ಯೋಗದ ಪಿತಾಮಹ (the Father of Modern Yoga) ಎಂದು ಕರೆಯಲ್ಪಟ್ಟವರು ಯಾರು?
— ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್.


169) ಮೊಟ್ಟೆ ಇಡುವ ಸಸ್ತನಿ ಪ್ರಾಣಿಗಳು?
— ಪ್ಲಾಟಿಪಸ್, ಯಕಿಡ್ನಾ.


170) ಸ್ತ್ರೀಯರಿಗೆ ಇದ್ದ ಆಸ್ತಿಯ ಹಕ್ಕನ್ನು ಸಂಪೂರ್ಣವಾಗಿ ಹೊರಟು ಹೋದದ್ದು ಯಾರ ಕಾಲದಲ್ಲಿ?
— ಗುಪ್ತರು.


171) "Not Just an Accountant" ಎಂಬ ಗ್ರಂಥವನ್ನು ಬರೆದವರು ಯಾರು?
— (ಭಾರತದ ಮಾಜಿ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್) ವಿನೋದ್ ರಾಯ್.


172) ಇತ್ತೀಚೆಗೆ (2014 Aug 13) ಭಾರತದ ಲೋಕಸಭೆಯ 15 ನೇ  ಉಪಸಭಾಪತಿಯಾಗಿ ಆಯ್ಕೆಗೊಂಡವರು ಯಾರು?
— A.I.A.D.M.K ಯ ಸಂಸದ M.ತಂಬಿದುರೈ


173) ಸ್ವತಂತ್ರ ಭಾರತದಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ವಿತ್ತ ಸಚಿವೆ ಯಾರು?
— ಇಂದಿರಾ ಗಾಂಧಿ (1970-71).


174) S.L.ಭೈರಪ್ಪನವರ ಇತ್ತೀಚೆಗೆ ಬಿಡುಗಡೆಯಾದ (ಜುಲೈ 29, 2014) ಕೃತಿ ಯಾವುದು?
— ಯಾನ (29 ನೇ ಕಾದಂಬರಿ).


175)  ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?
— ಇಂದಿರಾಬಾಯಿ.


176) 2014 ರ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು?
— ಪೆಟ್ರಾ ಕ್ವಿಟೋವಾ(ಜೆಕ್ ಗಣರಾಜ್ಯ) - ಕೆನಡಾದ ಯುಗಿನಾ ಬೌಚಾರ್ಡ್ ವಿರುದ್ಧ.



177) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಯಾವ ನಿರುದ್ಯೋಗವನ್ನು ಹೋಗಲಾಡಿಸಲು ಪ್ರಯತ್ನಿಸುತ್ತದೆ?
— ವಾಡಿಕೆಯ ಸ್ಥಿತಿಯ ನಿರುದ್ಯೋಗ.


178) ಭಾರತೀಯ ಕಾವ್ಯ ಮಿಮಾಂಸೆಯ ಅಧ್ಯ ಪ್ರವರ್ತಕ ಯಾರು?
— ಭರತ.


179)  'ತುಪ್ಪ' ಕನ್ನಡ ಶಬ್ಧದ ಮೊದಲ ಪ್ರಯೋಗವಿರುವ ಕೃತಿ ಯಾವುದು?
— ಗಾಥಾ ಸಪ್ತಸತಿ.


180) ಭಾರತದ ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಸಿನಿಮಾ ನಟ?
— ಎಂ.ಜಿ. ರಾಮಚಂದ್ರನ್ (ತಮಿಳುನಾಡು).


181) ಜಗತ್ತಿನ ಏಕೈಕ ತೇಲು ಉದ್ಯಾನವನವಿರುವುದು ಏಲ್ಲಿ ?
— ಮಣಿಪುರದ ಕಿಬುಲ್ ಲಮ್ ಜಯೋ ರಾಷ್ಟ್ರೀಯ ಉದ್ಯಾನವನ. (ಲೋಕ್ ಟಾಕ್ ಸರೋವರದ ಒಂದು ಭಾಗವಾಗಿದೆ)


182) ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು?
- V.V.ಗಿರಿ.


183) 'ಛಂದೋಂಬುಧಿ'ಯನ್ನು ಮೊಟ್ಟಮೊದಲು ಸಂಪಾದನೆಯನ್ನು ಮಾಡಿದವರು ಯಾರು?
— ಡಿ.ಪಿ.ರೈಸ್


184) ಸೋನ್ ಮತ್ತು ಗಂಗಾ ನದಿಗಳ ಸಂಗಮದ ಬಳಿ ಇರುವ ಐತಿಹಾಸಿಕ ನಗರ ಯಾವುದು?
— ಪಾಟಲೀಪುತ್ರ.


185) ಸಂಸತ್ತಿನ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗಲು ನಿಗದಿಪಡಿಸಿದ ಕೋರಂ ಏಷ್ಟು?
— ಒಟ್ಟು ಸದಸ್ಯತ್ವದ 1/10 ರಷ್ಟು.


186) ಅಂತರ್ರಾಷ್ಟ್ರೀಯ ಕಾರ್ಮಿಕರ ದಿನ?
— ಮೇ 01.


187) ಭಯೋತ್ಪಾದನಾ ವಿರೋಧಿ ದಿನ?
— ಮೇ 21.


188) ಓಝೋನ್ ಪದರವು ಭೂಮಿಯ ಯಾವ ಪದರದಲ್ಲಿದೆ?
— ಸ್ಟ್ರಾಟೋಸ್ಪಿಯರ್.


189) ಶಿಕ್ಷಣವು ಒಂದು ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿರುವುದು ಯಾವ ಮೊಕದ್ದಮೆಯಲ್ಲಿ?
— ಮೋಹಿನಿ ಜೈನ್ V/s ಕರ್ನಾಟಕ ಸರ್ಕಾರ.


190) 'ಮಹಾರಾಷ್ಟ್ರದ ಸಾಕ್ರೆಟಿಸ್' ಎಂದು ಯಾರನ್ನು ಕರೆಯಲಾಗುತ್ತದೆ
— M.G.ರಾನಡೆ.


191) ಯಾವ ಮಣ್ಣನ್ನು 'ರೂಪಾಂತರ ಮಣ್ಣು' ಎಂದು ಕರೆಯುತ್ತಾರೆ?
— ಕೆಂಪು ಮಣ್ಣು.


192) 'ಕಾರ್ನವಾಲಿಸ್ ಕಾಯ್ದೆ' ಎಂದು ಯಾವುದನ್ನು ಕರೆಯುತ್ತಾರೆ?
— ಕಾರ್ನವಾಲಿಸ್ ನ್ಯಾಯಾಂಗೀಯ ಸುಧಾರಣೆಗಳು.


193) ಒಂದು ರೇಖಾಂಶದಿಂದ ಮತ್ತೊಂದು ರೇಖಾಂಶಕ್ಕೆ ಸೂರ್ಯನ ಬೆಳಕು ಬೀಳುವ ಅವಧಿಯ ವ್ಯತ್ಯಾಸ ಎಷ್ಟು?
— 4 ನಿಮಿಷಗಳು.


194) ಕನ್ನಡದ ಮೊಟ್ಟಮೊದಲ ಸಾಂಗತ್ಯ ಕೃತಿ ಯಾವುದು?
— ಸೊಬಗಿನ ಸೋನೆ.


195) ಭಾರತದ ಸಂವಿಧಾನದ ಯಾವ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?
— 42 ನೇ ತಿದ್ದುಪಡಿ.


196) ಭಾರತದ ಇತಿಹಾಸದಲ್ಲಿ ತನ್ನ ಜೀವಿತದ ಅತೀ ಹೆಚ್ಚು ಅವಧಿಯನ್ನು ರಣಭೂಮಿಯಲ್ಲೇ ಕಳೆದ ಅರಸ ಯಾರು?
— ರಾಣಾ ಸಂಗ್ರಾಮ್.


197) ಮುಂದಿನ (2018 ರ) 21 ನೇ ಕಾಮನ್ ವೆಲ್ತ್ ಗೇಮ್ಸ್ ಎಲ್ಲಿ ಜರುಗಲಿವೆ?
— ಆಸ್ಟ್ರೇಲಿಯಾದ ಕ್ವಿನ್ಸ್ ಲ್ಯಾಂಡ್ ಗೋಲ್ಡ್ ಕೋಸ್ಟ್.


198) L.I.C ಯ ಘೋಷವಾಕ್ಯ ಯಾವುದು?
— "Your Welfare is our Responsibility".


199) ಭಾರತದ ಮೊಟ್ಟಮೊದಲ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದವರು ಯಾರು?
— ಗುಲ್ಜಾರಿಲಾಲ್ ನಂದಾ.


200)  0 ಡಿಗ್ರಿ ಗ್ರೀನ್ ವಿಚ್ ರೇಖೆಯು ಪ್ರಪಂಚದಲ್ಲಿ ಯಾವ ದೇಶದ ರಾಜಧಾನಿಯ ಮೇಲೆ ಹಾದುಹೋಗುತ್ತದೆ ?
— ಆಫ್ರಿಕಾ ಖಂಡದ ಘಾನಾ ದೇಶದ ಅಕ್ರಾ ರಾಜಧಾನಿ.

... to be continued

★ ಭಾರತದ ಭೂಗೋಳ: UNIT: II] ಭಾರತದ ಅಕ್ಷಾಂಶ ಮತ್ತು ರೇಖಾಂಶಗಳು:

★ ಭಾರತದ ಭೂಗೋಳ:  

UNIT: II] ಭಾರತದ ಅಕ್ಷಾಂಶ ಮತ್ತು ರೇಖಾಂಶಗಳು:

★ ಅಕ್ಷಾಂಶಗಳು: 
— 8.4 ಉತ್ತರ ಅಕ್ಷಾಂಶದಿಂದ 37.6 ಉತ್ತರ ಅಕ್ಷಾಂಶದವರೆಗೆ ಹರಡಿದೆ. ಈ ಎರಡರ ಮಧ್ಯದಲ್ಲಿ 23½ ಕರ್ಕಾಟಕ ಸಂಕ್ರಾಂತಿ ವೃತ್ತವಿದೆ. 

— 23½ ಕರ್ಕಾಟಕ ಸಂಕ್ರಾಂತಿ ವೃತ್ತವು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಛತ್ತಿಸಗಡ, ಜಾರ್ಖಂಡ್, ಪಶ್ಚಿಮ ಬಂಗಾಳ, ತ್ರಿಪುರಾ, ಮಿಜೋರಾಂ ರಾಜ್ಯಗಳ ಮೇಲೆ ಹಾದು ಹೋಗಿದೆ. 


★ ರೇಖಾಂಶಗಳು:
— 68.7 ಪೂರ್ವ ರೇಖಾಂಶದಿಂದ 97.25 ಪೂರ್ವ ರೇಖಾಂಶದವರೆಗೆ ಹರಡಿದೆ. ಈ ಎರಡರ ಮಧ್ಯದಲ್ಲಿ 82½ ಪೂರ್ವ ರೇಖಾಂಶವಿದೆ. ಇದು ಭಾರತದ ಸಮಯದ ರೇಖೆಯಾಗಿದೆ. 

— 82½ ಪೂರ್ವ ರೇಖಾಂಶವು ಅಲಹಾಬಾದ್ ಪಟ್ಟಣದ ಸಮೀಪದ ಹಾಯ್ದು ಹೋದ ಕಾರಣ ಇದಕ್ಕೆ 'ಅಲಹಾಬಾದ್ ರೇಖೆ' ಎಂತಲೂ ಕರೆಯುತ್ತಾರೆ. 

—  82½ ಪೂರ್ವ ರೇಖಾಂಶವು ಉತ್ತರಪ್ರದೇಶ, ಛತ್ತಿಸಗಡ, ಓರಿಸ್ಸಾ, ಆಂಧ್ರಪ್ರದೇಶ ರಾಜ್ಯಗಳ ಮೇಲೆ ಹಾದು ಹೋಗಿದೆ. 

— ಭಾರತದ ಸಮಯವು ಗ್ರೀನ್ ವಿಚ್ ಸಮಯಗಿಂತ 5½ ಗಂಟೆ ಮುಂದಿದೆ. 

—  23½ ಕರ್ಕಾಟಕ ಸಂಕ್ರಾಂತಿ ವೃತ್ತ ಹಾಗೂ 80⁰ ಪೂರ್ವ ರೇಖಾಂಶಗಳು ಮಧ್ಯಪ್ರದೇಶದ ಜಬ್ಬಲ್ ಪುರ್ ದಲ್ಲಿ ಸಂಧಿಸುತ್ತವೆ. ಇದು ಸರಿಸುಮಾರು ಭಾರತದ ಕೇಂದ್ರ ಭಾಗವಾಗಿದ್ದು ಇದನ್ನು 'ಭಾರತದ ಭೌಗೋಳಿಕ ಕೇಂದ್ರ'(Geographical Centre of India) ಎಂದು ಕರೆಯಲಾಗಿದೆ.

.....Continued

★ ಭಾರತದ ಭೂಗೋಳ: UNIT: I] ಭೌಗೋಳಿಕ ಪರಿಚಯ: ..Continued.


★ ಭಾರತದ ಭೂಗೋಳ ★


UNIT: I] ಭೌಗೋಳಿಕ ಪರಿಚಯ:

★ ಭಾರತವು ಹಿಂದೂಮಹಾಸಾಗರದಲ್ಲಿ ಚಾಚಿಕೊಂಡಿರುವ ಪರ್ಯಾಯ ದ್ವೀಪ.

*. ಇದು ಏಷ್ಯಾ ಖಂಡದ ದಕ್ಷಿಣ ಭಾಗದಲ್ಲಿ ನೆಲೆಗೊಂಡ ಅತೀ ದೊಡ್ಡ ಪರ್ಯಾಯ ದ್ವೀಪ.

*. ಭೂಖಂಡದ ಉತ್ತರಾರ್ಧ ಗೋಳದ ಪೂರ್ವಭಾಗದಲ್ಲಿದೆ.


★ ಭಾರತವು 32,87,263 ಚ.ಕಿ.ಮೀ. ವಿಸ್ತೀರ್ಣ (ಇದು ಕಾಶ್ಮೀರದ ಪಾಕ್ ಆಕ್ರಮಿತ ಪ್ರದೇಶ (Pok) ಹಾಗೂ ಚೀನಾದಿಂದ ಆಕ್ರಮಿತವಾಗಿರುವ ಅಕ್ ಸಾಯ್ ಚೀನ್ (Aksai Chin) ಪ್ರದೇಶಗಳನ್ನು ಸೇರಿ)  ಹೊಂದಿದೆ.

— ಜಗತ್ತಿನ 7ನೇ ದೊಡ್ಡ ರಾಷ್ಟ್ರವಾಗಿದೆ.

— ಒಟ್ಟು ಭೂಭಾಗದಲ್ಲಿ ಭಾರತದ ಪಾಲು 2.47ರಷ್ಟು.


★ ಇದು ಉತ್ತರ ದಕ್ಷಿಣವಾಗಿ 3214 ಕಿ.ಮೀ ಇದೆ.

— ಉತ್ತರದ ಕೊನೆಯ ತುದಿ: ಇಂದಿರಾ ಕೋಲ್ (ಜಮ್ಮು ಕಾಶ್ಮೀರ).

— ದಕ್ಷಿಣದ ಕೊನೆಯ ಭೂ ತುದಿ: ಕನ್ಯಾಕುಮಾರಿ (ತಮಿಳುನಾಡು).


★ ಪೂರ್ವ ಪಶ್ಚಿಮವಾಗಿ 2933 ಕಿ.ಮೀ ಇದೆ.

— ಪೂರ್ವದ ಕೊನೆಯ ತುದಿ:  ಕಿಬಟಿ (ಅರುಣಾಚಲ ಪ್ರದೇಶ).

— ಪಶ್ಚಿಮದ ಕೊನೆಯ ತುದಿ:  ಗುಹಾರಮೋತಿ (ಗುಜರಾತ್).


★ ಭಾರತದ ಅತ್ಯಂತ ಎತ್ತರವಾದ ಪ್ರದೇಶ: K2.

— ಭಾರತದ ಅತ್ಯಂತ ತಗ್ಗಾದ ಪ್ರದೇಶ: ಕೇರಳದ ಕುಟ್ಟನಾಡ.

— ಭಾರತದ ದೊಡ್ದ ಸರೋವರ: ಚಿಲ್ಕಾ ಸರೋವರ.


★ ಭಾರತವು ರಾಜಕೀಯವಾಗಿ 29 ರಾಜ್ಯಗಳು, 6 ಕೇಂದ್ರಾಡಳಿತ ಪ್ರದೇಶಗಳು, 1  ದೇಶದ ರಾಜಧಾನಿ ಪ್ರದೇಶಗಳನ್ನು ಹೊಂದಿದೆ.

*. ಭೌಗೋಳಿಕವಾಗಿ ಅತೀ ದೊಡ್ದ ರಾಜ್ಯಗಳು:
ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ.

*. ಭೌಗೋಳಿಕವಾಗಿ ಚಿಕ್ಕ ರಾಜ್ಯಗಳು:
ಗೋವಾ, ಸಿಕ್ಕಿಂ, ತ್ರಿಪುರಾ, ನಾಗಾಲ್ಯಾಂಡ್.

*. ಜನಸಂಖ್ಯೆಯಲ್ಲಿ ಅತೀ ದೊಡ್ದ ರಾಜ್ಯ:
ಉತ್ತರಪ್ರದೇಶ.

*. ಜನಸಂಖ್ಯೆಯಲ್ಲಿ ಅತೀ ಚಿಕ್ಕ ರಾಜ್ಯ:
ಸಿಕ್ಕಿಂ.

*. ಜನಸಾಂದ್ರತೆಯಲ್ಲಿ ದೊಡ್ದ ರಾಜ್ಯ:
ಬಿಹಾರ.

*. ಜನಸಾಂದ್ರತೆಯಲ್ಲಿ ಚಿಕ್ಕ ರಾಜ್ಯ:
ಅರುಣಾಚಲ ಪ್ರದೇಶ.

*. ಭೌಗೋಳಿಕವಾಗಿ ದೇಶದ ಅತೀ ದೊಡ್ದ ಕೇಂದ್ರಾಡಳಿತ ಪ್ರದೇಶ:
ಅಂಡಮಾನ್ ಮತ್ತು ನಿಕೋಬಾರ್.

*. ಭೌಗೋಳಿಕವಾಗಿ ದೇಶದ ಅತೀ ಚಿಕ್ಕ ಕೇಂದ್ರಾಡಳಿತ ಪ್ರದೇಶ:
ಲಕ್ಷದ್ವೀಪ.

*. ದೇಶದ 7 ಕೇಂದ್ರಾಡಳಿತ ಪ್ರದೇಶಗಳಲ್ಲಿ 'ರಾಜ್ಯದ ಸ್ಥಾನಮಾನ'(Statehood) ಪಡೆದ ಕೇವಲ ಎರಡು ಕೇಂದ್ರಾಡಳಿತ ಪ್ರದೇಶಗಳು:
 1) ದೆಹಲಿ 2) ಪಾಂಡಿಚೇರಿ.

*. ಪ್ರಸ್ತುತ ಭಾರತದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆ:
640 (2011 ರ ಜನಗಣತಿಯ ಪ್ರಕಾರ)

*. ಅತಿ ಹೆಚ್ಚು ಜಿಲ್ಲೆಗಳನ್ನು ಹೊಂದಿರುವ ರಾಜ್ಯ:
 ಉತ್ತರ ಪ್ರದೇಶ (71),

*. ಅತಿ ಕಡಿಮೆ ಜಿಲ್ಲೆಗಳನ್ನು ಹೊಂದಿರುವ ರಾಜ್ಯ:
 ಗೋವಾ (2).

*. ಭೌಗೋಳಿಕ ವಿಸ್ತಾರದಲ್ಲಿ ದೇಶದ ಅತೀ ದೊಡ್ದ ಜಿಲ್ಲೆ:
ಗುಜರಾತ್ ರಾಜ್ಯದ ಕಚ್ (Kachchh) ( 46,000 ಚ.ಕಿ.ಮೀ).

*. ಭೌಗೋಳಿಕ ವಿಸ್ತಾರದಲ್ಲಿ ದೇಶದ ಅತೀ ಚಿಕ್ಕ ಜಿಲ್ಲೆ:
ಪಾಂಡಿಚೇರಿಯ 'ಮಾಹೆ'(Mahe) (9 ಚ.ಕಿ.ಮೀ)

....Continued.