"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 26 August 2023

ಬುರ್ಜಾಹೋಮ್ / ಬುರ್ಜ ಹೋಂ (Burzahom)

 ಬುರ್ಜಾಹೋಮ್ / ಬುರ್ಜ ಹೋಂ (Burzahom) :

- ಈ ತಾಣವು ಕಾಶ್ಮೀರ ಕಣಿವೆಯಲ್ಲಿರುವ ಪುರಾತತ್ವ ಸ್ಥಳ(archaeological  site)ಕ್ಕೆ ಸೇರಿದ ನಲೆಯಾಗಿದೆ.
- ಈ ತಾಣವು ನವಶಿಲಾಯುಗ, ಬೃಹತ್ ಶಿಲಾ ಸಂಸ್ಕೃತಿ(ಮೆಗಾಲಿಥಿಕ್) ಮತ್ತು ಆರಂಭಿಕ ಐತಿಹಾಸಿಕ ಅವಧಿಗಳಂತೆ ಮೂರು ಕಾಲಘಟ್ಟಗಳಿಗೆ ಸೇರಿದೆ.
- ಮೂಳೆಗಳಿಂದ ಮಾಡಲ್ಪಟ್ಟ ಪರಿಕರಗಳು ಮತ್ತು ಆಯುಧಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿವೆ.
- ಸಾಕು ನಾಯಿಗಳನ್ನು ಅವುಗಳ ಯಜಮಾನನೊಂದಿಗೆ ಸಮಾಧಿಯಲ್ಲಿ ಹೂಳುವ ಅಭ್ಯಾಸವು ಈ ತಾಣದ ವಿಶಿಷ್ಟ ಲಕ್ಷಣವಾಗಿದೆ. 

- ಬುರ್ಜ ಹೋಂ ತಾಣದ ಜನರು ಒರಟಾದ ಬೂದು ಕುಂಬಾರಿಕೆ(Coarse grey pottery)ಯನ್ನು ಬಳಸಿದ್ದರು.

Monday 7 August 2023

ಎಕೋಟೋನ್ (Ecotone)

 - ಎಕೋಟೋನ್ (Ecotone) :

ಎರಡು ಪರಿಸರ ವ್ಯವಸ್ಥೆಗಳ ಸಮ್ಮಿಲನ ಕೊಂಡಿಯಾಗಿ ಅಥವಾ ಅವುಗಳ ನಡುವಿನ ಗಡಿಯಾಗಿ  ಕಾರ್ಯನಿರ್ವಹಿಸುವ ಪ್ರದೇಶವಾಗಿದೆ.
ಉದಾಹರಣೆಗೆ ನದಿ ಮತ್ತು ಅದರ ನದಿ ತೀರದ ನಡುವಿನ ಜವುಗು ಪ್ರದೇಶ.

- ಇಕೋಟೋನ್‌ಗಳು ಹೆಚ್ಚಿನ ಪರಿಸರ ಪ್ರಾಮುಖ್ಯತೆಯನ್ನು ಹೊಂದಿದ್ದು  ಎರಡು ಜೈವಿಕ ಸಮುದಾಯಗಳ ನಡುವಿನ ಪರಿವರ್ತನೆಯ ಪ್ರದೇಶವಾಗಿದೆ, ಅಲ್ಲಿ ಎರಡು ಸಮುದಾಯಗಳು ಸಂಧಿಸುತ್ತವೆ ಮತ್ತು ಸಂಯೋಜಿಸುತ್ತವೆ. ಈ ಪ್ರದೇಶವು ಎರಡು ಪರಿಸರ ವ್ಯವಸ್ಥೆಗಳು ಅಥವಾ ಬಯೋಮ್‌ಗಳ ನಡುವಿನ ಸ್ಥಿತ್ಯಂತರವಾಗಿರುವುದರಿಂದ, ಗಡಿ ಪರಿಸರ ವ್ಯವಸ್ಥೆಗಳೆರಡರಿಂದಲೂ ಈ ಪ್ರದೇಶವು ಪ್ರಭಾವಿತವಾಗಿರುವ ಕಾರಣ ಇದು ಹಲವಾರು ರೀತಿಯ ಪ್ರಾಣಿ ಮತ್ತು ಸಸ್ಯವರ್ಗಗಳನ್ನು ಒಳಗೊಂಡಿರುವುದು ಸ್ವಾಭಾವಿಕವಾಗಿದೆ.

– ಇಕೋಟೋನ್‌ಗೆ ಉದಾಹರಣೆಗಳು :
ಜವುಗು ಪ್ರದೇಶಗಳು (ಒಣ ಮತ್ತು ಆರ್ದ್ರ ಪರಿಸರ ವ್ಯವಸ್ಥೆಗಳ ನಡುವೆ), ಮ್ಯಾಂಗ್ರೋವ್ ಕಾಡುಗಳು (ಭೂಮಿಯ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳ ನಡುವೆ), ಹುಲ್ಲುಗಾವಲುಗಳು (ಮರುಭೂಮಿ ಮತ್ತು ಕಾಡಿನ ನಡುವೆ), ಮತ್ತು ನದೀಮುಖಜಭೂಮಿಗಳು (ಉಪ್ಪು ನೀರು ಮತ್ತು ಸಿಹಿನೀರಿನ ನಡುವೆ).

- ಇಳಿಜಾರುಗಳಲ್ಲಿನ ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದಾಗಿ ಪರ್ವತ ಶ್ರೇಣಿಗಳು ಇಕೋಟೋನ್ ಗಳನ್ನು ಸಹ ರಚಿಸಬಹುದು.