"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Monday, 23 March 2015

☀ಸೂಯೆಜ್ ಕಾಲುವೆಯ ಇತಿಹಾಸ:  (History of Suez Canal)

☀ಸೂಯೆಜ್ ಕಾಲುವೆಯ ಇತಿಹಾಸ:
(History of Suez Canal)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಪಂಚದ ಇತಿಹಾಸ
(World History)


●.ಕಳೆದ ಶತಮಾನದಲ್ಲಿ ಯುರೋಪಿನ ಮೆಡಿಟರೇನಿಯನ್ ಸಾಗರ ತೀರದ ದೇಶಗಳಿಂದ ಪೂರ್ವದ ಹಿಂದೂ ಮಹಾಸಾಗರ ತೀರದ ದೇಶಗಳಿಗೆ ಸಿದ್ದ ಸರಕುಗಳನ್ನು ಒಯ್ಯುತ್ತಿದ್ದ, ಅಲ್ಲಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಡಗುಗಳು ಆಫ್ರಿಕಾದ ತುದಿಯಲ್ಲಿರುವ ಗುಡ್ಹೋಪ್ ಭೂಶಿರವನ್ನು ಬಳಸಿಕೊಂಡು ಹೋಗಬೇಕಾಗುತ್ತಿತ್ತು.

●.ಹಾಗಾಗಿ ಸಾರಿಗೆ, ಸರಕು ಸಾಗಾಟ ತಿಂಗಳುಗಟ್ಟಲೆ ವಿಳಂಬವಾಗುತ್ತಿತ್ತು.ಈ ವಿಳಂಬವನ್ನು ಸಾಕಷ್ಟು ಕಡಿಮೆ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು, ಸಾಗರದ ಡೊಂಕು ತಿದ್ದುವ ಸೂಯೆಜ್ ಕಾಲುವೆಯೋಜನೆ.

●.ಆಗಿನ ಈಜಿಪ್ಟ್ ಇಂಥ ಬೃಹತ್ ಯೋಜನೆಯನ್ನು ನೆರವೇರಿಸುವಷ್ಟು ಬಲವಾಗಿರಲಿಲ್ಲ. ಅದಕ್ಕೆಂದೇ ’ಆಗ್ಲೋ-ಫೆಂಚ್ ಮಾರಿ ಟೈಮ್ ಕೆನಾಲ್ ಕಂಪೆನಿ’ಹುಟ್ಟಿಕೊಂಡಿತು.

●.ಉತ್ತರದಲ್ಲಿ ಮೆಡಿಟರೇನಿಯನ್ ಇಂದ ದಕ್ಷಿಣದಲ್ಲಿ ಕೆಂಪು ಸಮುದ್ರದೊಂದಿಗೆ ಸಂಪರ್ಕ ಕಲ್ಪಿಸುವ ಈ ಕಾಲುವೆ 173 ಕಿ.ಮೀ. ಅಷ್ಟು ಉದ್ದವಾಗಿದೆ.

●.ಈಜಿಪ್ಟಿನ ಉಗ್ರ ಬಿಸಿಲಿನ, ಮರಳುಗಾಡಿನ, ಅಲ್ಲಲ್ಲಿ ಗಸಿಮಣ್ಣಿನ, ನೊರಜುಗಲ್ಲಿನ ಪ್ರದೇಶಗಳ ಮೇಲೆ, ಮಾರ್ಗದಲ್ಲಿ ಹಲವು ಸರೋವರಗಳ ಮೂಲಕ ಕಾಲುವೆ ಹಾದುಹೋಗುತ್ತದೆ.

●.ಉತ್ತರದ ತುದಿಯಲ್ಲಿ ಸೈಯದ್ ಬಂದರು, ದಕ್ಷಿಣದ ತುದಿಯಲ್ಲಿ ಸೂಯೆಜ್ ಬಂದರುಗಳಿವೆ. ಕಾಲುವೆ ನಿರ್ಮಾಣದ ನಂತರ ಹಲವು ಹೊಸ ಊರುಗಳು ಹುಟ್ಟಿಕೊಂಡಿವೆ.

●.ಫ್ರೆಂಚ್ ಎಂಜಿನಿಯರ್ ಫರ್ಡಿನ್ಯಾಂಡ್ ಡಿ ಲೆಸೆಪ್ಸ್ ನೇತೃತ್ವದಲ್ಲಿ ಕಾಲುವೆ ನಿರ್ಮಾಣಗೊಂಡಿತು. ಬಲಾತ್ಕಾರದ ದುಡಿಮೆಗೆ ನೂಕಲ್ಪಟ್ಟ ಸಾವಿರಾರು ಬಡ ಕೂಲಿಯಾಳುಗಳು, ಕೈದಿಗಳು, ಬ್ರಿಟನಿನ ಹಾಗೂ ಫ್ರಾನ್ಸಿನ ತಂತ್ರಜ್ಞರು ನಿರ್ಮಾಣದಲ್ಲಿ ಭಾಗವಹಿಸಿದ್ದರು.

●.ಕೆಂಪು ಸಮುದ್ರದ ಮಟ್ಟ ಮೆಡಿಟರೇನಿಯನ್ ಸಾಗರದ ಮಟ್ಟಕ್ಕಿಂತ 30 ಅಡಿಗಳಷ್ಟು ಎತ್ತರದಲ್ಲಿರುವುದು ಎಂದು ತಿಳಿದಾಗ, ನೀರಿನ ಮಟ್ಟ ಬದಲಾವಣೆಯ ಕಟ್ಟೆಗಳನ್ನು ನಿರ್ಮಿಸಲಾಯಿತು.

●.ಪ್ರಾರಂಭದಲ್ಲಿ ಕಾಲುವೆ 8 ಮೀ. ಆಳ, 22 ಮೀ. ಅಗಲವಾಗಿತ್ತು. ಮುಂದೆ ಕಾಲುವೆಯಲ್ಲಿ ಭಾರಿ ಟ್ಯಾಂಕರ್ ಹಡಗುಗಳೂ ಸಂಚರಿಸುವಂತೆ ಆಳ, ಅಗಲಗಳನ್ನು ಹೆಚ್ಚಿಸಲಾಯಿತು.

●.1869ರಲ್ಲಿ ಕಾಲುವೆಯ ಉದ್ಘಾಟನೆಗಾಗಿ ಹಡಗು ಸಂಚಾರಕ್ಕೆ ತೆರೆಯಲಾಯಿತು. ಸೂಯೆಜ್ ಕಾಲುವೆಯ ನಿರ್ಮಾಣದಿಂದಾಗಿ ಹಡಗುಗಳ ಸಂಚಾರ ಮಾರ್ಗದಲ್ಲಿ ಸುಮಾರು 11,000 ಕಿ.ಮೀ., ಅಷ್ಟು ಕಡಿತವಾಯಿತು.

●.ಕಳೆದ ಶತಮಾನದ ಈ ಮನುಷ್ಯ ಪ್ರಯತ್ನ ಸಾಧಾರಣವಾದುದೇನಲ್ಲ. ಇದರಿಂದ ಭಾರತದಂಥ ದೊಡ್ಡ ದೇಶವನ್ನು ವಸಾಹತಾಗಿ ಮಾಡಿಕೊಂಡಿದ್ದ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಹೆಚ್ಚು ಪ್ರಯೋಜನವಾಯಿತು.

●.1950ರ ದಶಕದಲ್ಲಿ ಅಧ್ಯಕ್ಷ ಗಮಾಲ್ ಅಬ್ದುಲ್ ನಾಸೆರ್ ಸೂಯೆಜ್ ಕಾಲುವೆಯನ್ನು ರಾಷ್ಟ್ರೀಕರಣಗೊಳಿಸಿದಾಗ ಭಾರಿ ಕೋಲಾಹಲವುಂಟಾಯಿತು. ಆದರೆ ಸ್ವಲ್ಪ ಸಮಯದಲ್ಲಿಯೇ ಪರಿಸ್ಥಿತಿ ಹತೋಟಿಗೆ ಬಂದಿತು.

(ಕೃಪೆ: ಅನವರತ)

No comments:

Post a Comment