"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday 8 March 2015

☀ಜಗತ್ತಿನಾದ್ಯಂತ ಮಹಿಳೆಯರಿಂದಾದ ಪ್ರಮುಖ ಆವಿಷ್ಕಾರಗಳು (The great inventions of the women around the globe)

☀ಜಗತ್ತಿನಾದ್ಯಂತ ಮಹಿಳೆಯರಿಂದಾದ ಪ್ರಮುಖ ಆವಿಷ್ಕಾರಗಳು
(The great inventions of the Women around the globe)

━━━━━━━━━━━━━━━━━━━━━━━━━━━━━━━━━━━━━━━━━━━━━


1. ಕಾಗದದ ಚೀಲ

— 1868ರಲ್ಲಿ ಅಮೆರಿಕದ ಹತ್ತಿ ಮಿಲ್ ಕಾರ್ಮಿಕಳಾದ ಮಾರ್ಗರೆಟ್ ನೈಟ್ ಕಾಗದದ ಚೀಲ ಮಾಡುವ ಯಂತ್ರವನ್ನು ಕಂಡುಹಿಡಿದಳು. 1871ರಲ್ಲಿ ನೈಟ್ ಅದರ ಪೇಟೆಂಟ್ ಪಡೆದಳು.


2. ಕೆಲ್ವರ್

— 1966ರಲ್ಲಿ ಹಗುರವಾದ ಹಾಗೂ ಸ್ಟೀಲ್‌ಗಿಂತ ಐದು ಪಟ್ಟು ಶಕ್ತಿಶಾಲಿಯಾದ ಕೆಲ್ವರ್ ಅನ್ನು ಡುಪೋಟ್ ಕೆಮಿಸ್ಟ್ ಸ್ಟೆಫ್ನಿ ಕೌಲೆಂಕ್ ಕಂಡುಹಿಡಿದಳು. ಕಾರಿನ ಟೈರ್‌ಗಾಗಿ ಹಗುರವಾದ ಫೈಬರ್‌ವನ್ನು ಹುಡುಕುವ ಸಮಯದಲ್ಲಿ ಆಕಸ್ಮಿಕವಾಗಿ ಅವಳು ಇದನ್ನು ಕಂಡುಹಿಡಿದಳು.


3. ಭೂಮಾಲೀಕರ ಆಟವನ್ನು ರೂಪಿಸುವ ಮೂಲಕ ಆರ್ಥಿಕ ಸಿದ್ಧಾಂತವನ್ನು ಪಸರಿಸದವಳು ಎಲಿಜಬೆತ್ ಮ್ಯಾಗಿ.

— ಭೂ ಕಬಳಿಕೆ, ಭೂ ಮೌಲ್ಯದ ತೆರಿಗೆ ಮುಂತಾದವನ್ನು ಮಾಲೀಕರಿಗೆ ತಿಳಿಸುವ ಬೋರ್ಡ್ ಗೇಮನ್ನು 1904ರಲ್ಲಿ ಪೇಟೆಂಟ್ ಪಡೆದು, 1906ರಲ್ಲಿ ಸ್ವತಃ ಪ್ರಕಟಿಸಿದಳು. 30 ವರ್ಷಗಳ ನಂತರ ಚಾರ್ಲ್ಸ್ ಡ್ಯಾರೋ ಎಂಬಾತ ಅದರನ್ನು ಪ್ರತಿರೂಪಿಸಿ, ಅದರ ಸ್ವಾಮ್ಯತೆಯನ್ನು ಪಾರ್ಕರ್ ಬ್ರದರಸ್ ಕಂಪನಿಗೆ ಮಾರಿದ. ಕಂಪನಿಯೂ ಮ್ಯಾಗಿಯ ಮೂಲ ಆಟದ ಪೇಟೆಂಟನ್ನು 500 ಡಾಲರ್‌ಗೆ ಪಡೆಯಿತು.


4. ಗಾಳಿ ತಡೆ ವೈಪರ್ಸ್‌:

— ಮೇರಿ ಅಂಡರ್‌ಸನ್ ಮಾನವ ಚಾಲಿತ ಗಾಳಿ ತಡೆ ವೈಪರ್ಸ್‌ನ್ನು 1903ರಲ್ಲಿ ಕಂಡುಹಿಡಿದಳು. (1917ರಲ್ಲಿ ಮತ್ತೊಬ್ಬ ಮಹಿಳಾ ಸಂಶೋಧಕಿ ಚಾರ್ಲೆಟ್ ಬ್ರಿಡ್ಜ್‌ವುಡ್ ಅಟೋಮ್ಯಾಟಿಕ್ ಎಲೆಕ್ಟ್ರಿಕ್ ರೋಲರ್‌ನ್ನು ಕಂಡುಹಿಡಿದರೂ ಅದು ಬಳಕೆಯಾಗಲಿಲ್ಲ). ಅಂಡರ್‌ಸನ್‌ಳ ಪೇಟೆಂಡ್ 1920ರಲ್ಲಿ ಮುಗಿಯಿತು. ಕ್ಯಾಡಿಲಾಕ್ ಪ್ರಥಮ ಬಾರಿಗೆ ಕಾರಿನಲ್ಲಿ ಗಾಳಿತಡೆ ವೈಪರ್‌ಗಳನ್ನು ಅಳವಡಿಸಿದ, ನಂತರ ಇತರ ಕಂಪನಿಗಳೂ ಅನುಸರಿಸಿದವು.


5. ಬಳಸಿ ಎಸೆಯುವ ಕೂಸಿನ ಬಟ್ಟೆ:

— 1951ರಲ್ಲಿ ಮರಿಯಾನ್ ಡೊನೊವಾನ್ ಜಲನಿರೋಧಕ ಬೋಟರ್‌ಗೆ ಪೇಟೆಂಟ್ ಪಡೆದಳು. ಮಕ್ಕಳಿಗಾಗಿ ಬಳಸಿ ಎಸೆಯುವ ಬಟ್ಟೆಗಳ ಪೇಟೆಂಟ್‌ನ್ನು ಕೆಕೊ ಕಾರ್ಪೊರೇಷನ್‌ಗೆ 1ಮಿಲಿಯನ್ ಡಾಲರ್‌ಗೆ ಮಾರಿದಳು. ನಂತರ ಸಂಪೂರ್ಣವಾಗಿ ಬಳಸಿ ಎಸೆಯುವ ಮಾದರಿಯನ್ನು ಮುಂದಿನ 5 ವರ್ಷಗಳಲ್ಲಿ ರೂಪಿಸಿದಳು. 1961ರಲ್ಲಿ ಪ್ಯಾಂಪರಸ್ ರೂಪುಗೊಂಡಿತು.


6. ಪಾತ್ರೆ ತೊಳೆಯುವ ಸಾಧನ:

— ಜೋಸೆಫ್ ಕೊಕ್ರೇನ್ ಪಾತ್ರೆ ತೊಳೆಯುವ ಸಾಧನವನ್ನು ಕಂಡುಹಿಡಿದು 1886ರಲ್ಲಿ ಅದರ ಪೇಟೆಂಟ್ ಪಡೆದಳು. ಆದರೆ ಅದನ್ನು ಅವಳು ಸ್ವತಃ ಯಾವತ್ತೂ ಬಳಸಲಿಲ್ಲ, ಆದರೆ ಸೇವಕಿಯರಿಗೆ ಅದರ ಉಪಯೋಗ ದೊರೆಯಿತು.


7. ದ್ರವ ಕಾಗದ:

—  ಟೈಪಿಂಗ್ ತಪ್ಪುಗಳನ್ನು ಮುಚ್ಚಿಹಾಕಲು ಬೆಟ್ಟೆ ನೆಸ್‌ಮಿತ್ ಗ್ರಾಹಂ ತನ್ನ ಅಡುಗೆ ಕೋಣೆಯಲ್ಲಿ ಹಲವಾರು ವರುಷಗಳು ನಡೆಸಿದ ಪ್ರಯತ್ನದ ಫಲವಾಗಿ, ಟೈಪಿಂಗ್ ತಪ್ಪುಗಳನ್ನು ಅಳಸಿಹಾಕು ದ್ರವ ಕಾಗದಕ್ಕೆ 1958ರಲ್ಲಿ ಪೇಟೆಂಡ್ ಪಡೆದಳು.


8. ಅಕ್ಷರಾಭ್ಯಾಸ:

— ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಅನುಕೂಲವಾಗುವ ಅಲ್ಫಾಬೆಟ್ ಬ್ಲಾಕ್‌ಗಳನ್ನು ರೂಪಿಸಿದ ಬರಹಗಾರ್ತಿ ಅಡೇಲೈನ್ ಡಿ.ಟಿ. ವೈಟ್ನಿ 1882ರಲ್ಲಿ ಪೇಟೆಂಟ್ ಪಡೆದಳು


●.ಸಿಗ್ನಲ್ ಫ್ಲೇರ್ಸ್‌:    ಮಾರ್ಥಾ ಕೋಸ್ಟನ್

— ದಶಕಗಳ ಹಿಂದೆ ಹಡಗುಗಳ ನಡುವಿನ ಸಂವಹನ ಕೇವಲ ಬಣ್ಣಬಣ್ಣದ ಪತಾಕೆಗಳ ಮೂಲಕವಷ್ಟೇ ಸಾಂಕೇತಿಕವಾಗಿತ್ತು ಅಥವಾ ಜೋರಾಗಿ ಕೂಗಿಕೊಳ್ಳಬೇಕಿತ್ತು. ಆಗ, ಮಾರ್ಥಾ ಕೋಸ್ಟನ್ ಎಂಬಾಕೆ, ಸತ್ತ ತನ್ನ ಗಂಡನ ಡೈರಿಯಲ್ಲಿದ್ದ 'ಸಿಗ್ನಲ್ ಫ್ಲೇರ್ಸ್‌' ಯೋಜನೆಯನ್ನು ಕೈಗೆತ್ತಿಕೊಂಡು ಸತತ 10 ವರ್ಷಗಳ ಕಾಲ ಸಂಶೋಧನೆ ನಡೆಸಿದಳು. ರಸಾಯನಶಾಸ್ತ್ರಜ್ಞರು ಮತ್ತು ಪೈರೊಟೆಕ್ನಿಕ್ ತಜ್ಞರೊಂದಿಗೆ ಪ್ರಾಯೋಗಿಕವಾಗಿ ಅದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಶ್ರಮಿಸಿದರು. ಆದರೆ, ಅಂತಿಮವಾಗಿ 1859ರಲ್ಲಿ 'ಆಸ್ತಿಯ ಒಡತಿ' ಎಂದಷ್ಟೇ ಪರಿಗಣಿಸಿ, ಕೋಸ್ಟನ್ ಅವರ ಹೆಸರಿಗೇ ಪೇಟೆಂಟ್ ನೀಡಲಾಯಿತು.


●. ದಿ ಸರ್ಕ್ಯುಲರ್ ಸಾ:   ತಬಿತಾ ಬಬಿತ್

— ತಬಿತಾ ಬಬಿತ್ ಎಂಬ ನೇಕಾರಿಕೆ ಕುಟುಂಬದ ಹೆಣ್ಣು ಮಗಳು ಮೊದಲ ಬಾರಿಗೆ ವೃತ್ತಾಕಾರದ ಗರಗಸದ ಮೂಲಕ ಮರವನ್ನು ಕತ್ತರಿಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. 1813ರಲ್ಲಿ ಈ ಕುರಿತ ಮಾದರಿಯೊಂದನ್ನು ತಯಾರಿಸಿದ ತಬಿತಾ, ನೂಲುವ ರಾಟೆಗೆ ಅದನ್ನು ಜೋಡಿಸಿದರು. ಬಬಿತಾ ಅವರ ಷಾಕರ್ ಸಮುದಾಯ ಇದರ ಪೇಟೆಂಟ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿದ್ದರೂ, ಈ ಸಂಶೋಧನೆಯ ಸಮಗ್ರ ಪ್ರಯೋಜನವನ್ನು ಪಡೆದುಕೊಳ್ಳಲಾಯಿತು.


●. ರಿಟ್ರ್ಯಾಕ್ಟಬಲ್ ಡಾಗ್ ಲೀಶ್:   ಮೇರಿ ಎ.ಡೆಲೆನಿ

— ನ್ಯೂ ಯಾರ್ಕ್‌ನ ನಾಯಿಯೊಂದರ ಮಾಲೀಕರಾಗಿದ್ದ ಮೇರಿ ಎ.ಡೆಲೆನಿ 1908ರಲ್ಲಿ 'ನಾಯಿಯನ್ನು ನಿಯಂತ್ರಿಸುವ ಹಗ್ಗ ಅಥವಾ ಉಪಕರಣ'ದ ಪೇಟೆಂಟ್ ಪಡೆದಿದ್ದಾರೆ. ಅಚ್ಚರಿ ಎಂದರೆ, ಆರ್.ಸಿ.ಕಾನರ್ ಎಂಬುವವರು 11 ವರ್ಷಗಳ ನಂತರ 'ಮಕ್ಕಳ ತಳ್ಳುವ ಗಾಡಿ'ಗೆ ಪೇಟೆಂಟ್ ಪಡೆದುಕೊಂಡಿದ್ದಾರೆ.


●. ಜಲಾಂತರ್ಗಾಮಿ ದೂರದರ್ಶಕ ಮತ್ತು ದೀಪವನ್ನು ಸರಾ ಮಥರ್ ಎಂಬಾಕೆ ಕಂಡುಹಿಡಿದಿದ್ದು, 1845ರಲ್ಲಿ ಇದಕ್ಕೆ ಪೇಟೆಂಟ್ ಪಡೆದಿದ್ದಾರೆ.


●. ಫೋಲ್ಡಿಂಗ್ ಕ್ಯಾಬಿನೆಟ್ ಬೆಡ್:   ಸರಾ ಇ.ಗೋಡ್ಸ್

— ಸರಾ ಇ.ಗೋಡ್ಸ್ ಅವರ ಫೋಲ್ಡಿಂಗ್ ಕ್ಯಾಬಿನೆಟ್ ಸಣ್ಣ ಮನೆಗಳಲ್ಲಿ ಹೆಚ್ಚು ಸಾಮಾನು, ಸರಂಜಾಮುಗಳನ್ನು ಸೇರ್ಪಡೆಗೊಳಿಸಲು ನೆರವಾಯಿತು. ಈ ಉಪಕರಣಕ್ಕಾಗಿ 1885ರಲ್ಲಿ ಪೇಟೆಂಟ್ ಪಡೆದ ಈಕೆ, ಅಮೆರಿಕಾದ ಪೇಟೆಂಟ್ ಪಡೆದ ಮೊದಲ ಆಫ್ರಿಕನ್ - ಅಮೆರಿಕನ್ ಮಹಿಳೆ ಎನಿಸಿಕೊಂಡರು. ಡೆಸ್ಕ್ ಮಾದರಿಯ ಈ ಉಪಕರಣದಲ್ಲಿ ಇಡೀ ದಿನ ನಮಗೆ ಬೇಕಾದ ವಸ್ತುಗಳನ್ನು ಜೋಡಿಸಿಡಬಹುದಾಗಿದ್ದು, ರಾತ್ರಿ ವೇಳೆಗೆ ಮಡಚಿಟ್ಟು ಹಾಸಿಗೆ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. ಇದಾದ 15 ವರ್ಷಗಳ ನಂತರವಷ್ಟೇ ಮರ್ಫಿ ಬೆಡ್ ಪರಿಕಲ್ಪನೆ ಬೆಳಕಿಗೆ ಬಂದಿತು.


●. ಸೌರಶಕ್ತಿಯ ಮನೆ:   ಮರಿಯಾ ಟೆಲ್ಕ್ಸ್

— ಹಂಗೇರಿಯಾ ಮೂಲದ ಜೀವಭೌತವಿಜ್ಞಾನಿ ಮರಿಯಾ ಟೆಲ್ಕ್ಸ್‌ಮೊದಲ ಸೌರಶಕ್ತಿ ಮನೆ ಕಂಡುಹಿಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೂಪಾದ ರಚನೆಯುಳ್ಳ ಡೊವರ್ ಹೌಸ್‌ಗೆ ಶಾಖವನ್ನು ಒದಗಿಸಲು ವಾಸ್ತುಶಿಲ್ಪಿ ಎಲೀನರ್ ರೇಮಂಡ್‌ರೊಂದಿಗೆ 1947ರಲ್ಲಿ ಉಷ್ಣವಿದ್ಯುತ್ ಜನರೇಟರ್‌ಅನ್ನು ಈಕೆ ಆವಿಷ್ಕರಿಸಿದರು. ಈಕೆ ಛಳಿಗಾಲದ ದಿನಗಳಲ್ಲಿ ಶಾಖ ಉತ್ಪಾದಿಸಲು ಸಲ್ಫ್ಯೂರಿಕ್ ಆಮ್ಲದ ಸೋಡಿಯಂ ಲವಣವನ್ನು ಬಳಸುತ್ತಿದ್ದರು. ಡೊವರ್ ಹೌಸ್ ಎಂಬ ಪರಿಕಲ್ಪನೆ ಮುಂದಿನ ಹಲವು ವರ್ಷಗಳ ಕಾಲ ಚಾಲ್ತಿಯಲ್ಲಿತ್ತು.
(ಮೊದಲ ಸಂಪೂರ್ಣ ಸೌರಮನೆ)


●. ಸ್ಕಾಚ್‌ಗಾರ್ಡ್:   ಪ್ಯಾಟ್ಸಿ ಶೆರ್ಮನ್

— 1952ರಲ್ಲಿ ರಸಾಯನಶಾಸ್ತ್ರಜ್ಞ ಪ್ಯಾಟ್ಸಿ ಶೆರ್ಮನ್ ಎಂಬಾತ ತನ್ನ ಪ್ರಯೋಗಾಲಯದಲ್ಲಿ ಸಹಾಯಕನಾಗಿದ್ದವನ ಶೂ ಮೇಲೆ ಫ್ಲೋರೋಕೆಮಿಕಲ್ ರಬ್ಬರ್ ಬಿದ್ದು, ಗಟ್ಟಿಯಾಯಿತು. ಇದರಿಂದ ಗೊಂದಲಕ್ಕೊಳಗಾದ ಶೆರ್ಮನ್ ಶೂನ ಬಣ್ಣ ಹಾಳಾಗದಂತೆ, ಅದರ ಕಲೆಯನ್ನು ನೀರು, ಎಣ್ಣೆ ಮತ್ತಿತರ ದ್ರವಗಳ ಮೂಲಕ ಹೋಗಲಾಡಿಸಿದರು. ಇದನ್ನೇ ಆನಂತರ ಸ್ಕಾಚ್‌ಗಾರ್ಡ್ ಎಂದು ಕರೆಯಲಾಯಿತು.


●. ಅದೃಶ್ಯ ಗಾಜು :   ಕ್ಯಾಥರಿನ್ ಬ್ಲಾಡ್‌ಗೆಟ್

— ಮೊದಲ ಸಾಮಾನ್ಯ ವಿದ್ಯುತ್ ಉಪಕರಣಗಳ ವಿಜ್ಞಾನಿ ಕ್ಯಾಥರಿನ್ ಬ್ಲಾಡ್‌ಗೆಟ್ ತೆಳುವಾದ ಮೋನೊಮಾಲಿಕ್ಯುಲರ್ ಲೇಪನವನ್ನು ಗಾಜು ಮತ್ತು ಲೋಹವಾಗಿಸುವ ಬಗೆಯನ್ನು 1935ರಲ್ಲಿ ಕಂಡುಹಿಡಿದರು. ತೀಕ್ಷ್ಣ ಬೆಳಕು ಮತ್ತು ವಿರೂಪ ಅಥವಾ ಅಸ್ಪಷ್ಟತೆಯನ್ನು ಈ ಗಾಜು ತೊಡೆದುಹಾಕಿತು. ಈ ತಂತ್ರಜ್ಞಾನವು ಮುಂದೆ ಕ್ಯಾಮೆರಾ, ಮೈಕ್ರೊಸ್ಕೋಪ್, ಕನ್ನಡಕಗಳು ಮತ್ತಿತರ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿತು.


●. ಕಂಪ್ಯೂಟರ್:    ಗ್ರೇಸ್ ಹಾಪರ್

— 1944ರಲ್ಲಿ ಗ್ರೇಸ್ ಹಾಪರ್ ಮತ್ತು ಹೊವಾರ್ಡ್ ಏಕೆನ್ ಜತೆಗೂಡಿ ಐದು ಟನ್, ಕೊಠಡಿ ಗಾತ್ರದ ಹಾರ್ವರ್ಡ್‌ನ ಮಾರ್ಕ 1 ಕಂಪ್ಯೂಟರ್‌ಅನ್ನು ವಿನ್ಯಾಸಗೊಳಿಸಿದರು. ಬರವಣಿಗೆಯ ಭಾಷೆಯನ್ನು ಕಂಪ್ಯೂಟರ್ ಕೋಡ್ ರೂಪಕ್ಕೆ ರೂಪಾಂತರಿಸುವ ಜೋಡಕವನ್ನು(ಕಂಪೈಲರ್) ಕಂಡುಹಿಡಿದ ಹಾಪರ್, ಬಗ್ ಮತ್ತು ಡಿಬಗ್ಗಿಂಗ್ ಎಂಬ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಿದರು. 1959ರಲ್ಲಿ ಮೊದಲ ಆಧುನಿಕ ಪ್ರೋಗ್ರಾಮಿಂಗ್ ಭಾಷೆಯಾದ ಕೊಬೊಲ್‌ಅನ್ನು ಅಭಿವೃದ್ಧಿಪಡಿಸಿದ ತಂಡದಲ್ಲೊಬ್ಬರಾಗಿಯೂ ಹಾಪರ್ ಕಾರ್ಯನಿರ್ವಹಿಸಿದ್ದರು.

(Courtesy: Vijaya Karnataka)

No comments:

Post a Comment