"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 12 March 2015

☀ಡಿಸೆಂಬರ್ 2014 ತಿಂಗಳ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of December 2014)

☀ಡಿಸೆಂಬರ್ 2014 ತಿಂಗಳ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of December 2014)


★ ಡಿಸೆಂಬರ್ 2014
(December 2014)

━━━━━━━━━━━━━━━━━━━━━━━━━━━━━━━━━━━━━━━━━━━━━



♦.* ಡಿ. 1: ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೆ. ಗ್ಯಾಂಬ್ಲಿನ್‌ ಗುರ್‌ಗಾಂವ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.


♦.* ಡಿ. 2: ಭಾರತೀಯ ರಫ್ತು ಕ್ಷೇತ್ರದಲ್ಲಿ 2011 ಮತ್ತು 2012ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಾಣಿಜ್ಯೋದ್ಯಮಿಗಳಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ‘ನಿರ್ಯಾತ ಶ್ರೀ’ ಮತ್ತು ‘ನಿರ್ಯಾತ ಬಂಧು’ ಪ್ರಶಸ್ತಿಗಳನ್ನು ನೀಡಿದರು.


♦.* ಡಿ. 2: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು (ಡಿಸೆಂಬರ್‌ 25) ‘ರಾಷ್ಟ್ರೀಯ ಉತ್ತಮ ಆಡಳಿತ ದಿನವನ್ನಾಗಿ’ ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿತು.


♦.* ಡಿ. 3: ಸಿಬಿಐನ ನೂತನ ನಿರ್ದೇಶಕರನ್ನಾಗಿ ಅನಿಲ್‌ ಕುಮಾರ್‌ ಸಿನ್ಹಾ ಅವರನ್ನು ನೇಮಕ ಮಾಡಲಾಯಿತು. ಅವರು ಬಿಹಾರದ 1979ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಈ ಹಿಂದೆ ರಂಜಿತ್‌ ಸಿನ್ಹಾ ಸಿಬಿಐ ನಿರ್ದೇಶಕರಾಗಿದ್ದರು.


♦.* ಡಿ. 4 : ಮೇಘಾಲಯ ಸರ್ಕಾರ ಸ್ಥಳೀಯ ‘ಖಾಸಿ’ ಭಾಷೆಗೆ ಸಂವಿಧಾನಿಕ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ಇದಕ್ಕಾಗಿ ಮೇಘಾಲಯ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ. ಸಂವಿಧಾನದ 8ನೇ ಅನುಚ್ಛೇಧದಲ್ಲಿ ಪ್ರಾದೇಶಿಕ ಭಾಷೆಗಳ ಬಗ್ಗೆ ಮಾಹಿತಿ ಇದೆ.


♦.* ಡಿ. 5: ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಅರಬ್ಬಿ ಸಮುದ್ರದಲ್ಲಿಛತ್ರಪತಿ ಶಿವಾಜಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಿತು. ಅರಬ್ಬಿ ಸಮುದ್ರದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಭಾರತದ ಮೊದಲಪ್ರತಿಮೆ ಇದಾಗಿದೆ.


♦.* ಡಿ. 6: ವಿಶ್ವಸಂಸ್ಥೆಯು 2015ನೇ ವರ್ಷವನ್ನು ‘ವಿಶ್ವ ಮಣ್ಣಿ’ನ ವರ್ಷವನ್ನಾಗಿ ಅಚರಿಸಲಾಗುವುದು ಎಂದು ಪ್ರಕಟಿಸಿತು. ಇದೇ ವೇಳೆ ಡಿಸೆಂಬರ್‌ 6ರಂದು ಪ್ರತಿವರ್ಷ ಮಣ್ಣಿನ ದಿನವನ್ನಾಗಿ ಅಚರಿಸಲಾಗುವುದು ಎಂದು ಸಹ ಘೋಷಿಸಲಾಯಿತು.


♦.* ಡಿ. 8: ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ಅಂಧರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತೀಯ ಅಂಧರ ತಂಡ ಪಾಕಿಸ್ತಾನವನ್ನು ಮಣಿಸಿ ವಿಶ್ವಕಪ್‌ ಗೆದ್ದುಕೊಂಡಿತು. ಇದು ನಾಲ್ಕನೇ ವಿಶ್ವಕಪ್‌ ಟೂರ್ನಿ ಆಗಿದೆ.


♦.* ಡಿ. 9: ಭಾರತೀಯ ಮಾಜಿ ಹಾಕಿ ಆಟಗಾರ ನಂದಿ ಸಿಂಗ್‌ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ನಂದಿ ಸಿಂಗ್‌ ಅವರು ಭಾರತ ಒಲಿಪಿಂಕ್ಸ್‌ನಲ್ಲಿ ಎರಡು ಬಾರೀ ಚಿನ್ನದ ಪದಕ ಗೆದ್ದ ತಂಡದಲ್ಲಿದ್ದರು.


♦.* ಡಿ. 10: ನೊಬೆಲ್‌ ಪುರಸ್ಕೃತ ವಿಜ್ಞಾನಿ ಜೇಮ್ಸ್‌ ಡಿ ವ್ಯಾಟ್ಸನ್‌ ಅವರು ತಮ್ಮ ನೊಬೆಲ್‌ ಪದಕವನ್ನು 40.8 ಲಕ್ಷ ಅಮೆರಿಕನ್‌ ಡಾಲರ್‌ಗೆ ಮಾರಾಟ ಮಾಡಿದರು. ಈ ಹಣದಿಂದ ಡಿಎನ್‌ಎ ಕುರಿತು ಸಂಶೋಧನೆ ನಡೆಸುವುದಾಗಿ ಅವರು ಪ್ರಕಟಿಸಿದರು.


♦.* ಡಿ. 11: ವಿಡಿಯೊ ಗೇಮ್ಸ್‌ ಜನಕ ಎಂದೇ ಖ್ಯಾತಿಯಾಗಿರುವ ರಾಲ್ಫ್‌ ಹೆನ್ರಿ ಬೇರ್‌ ಅವರು ಡಿಸೆಂಬರ್‌ 5ರಂದು ಲಂಡನ್‌ನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಮ್ಯಾಂಚೆಸ್ಟರ್‌ನಲ್ಲಿ ನೇರವೇರಿಸಲಾಯಿತು.


♦.* ಡಿ. 12: ಭಾರತದಲ್ಲಿ ಕ್ಸಿಯಾಮಿ ಮೊಬೈಲ್‌ ಫೋನ್‌ಗಳನ್ನು ಮಾರಾಟ ಮಾಡುವುದರ ಮೇಲೆ ದೆಹಲಿ ಹೈಕೋರ್ಟ್‌ ನಿಷೇಧ ಹಾಕಿತು. ಎರಿಕ್ಸ್‌ನ್‌ ಕಂಪೆನಿಯೊಂದಿಗಿನ ಪೇಟೆಂಟ್‌ ವಿಷಯವಾಗಿ ಈ ತೀರ್ಪು ನೀಡಿತು.


♦.* ಡಿ. 13: ಬಾಲಿವುಡ್‌ನ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಅವರಿಗೆ ದುಬೈ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಅಕಾಡೆಮಿ ‘ಜೀವಮಾನ ಶ್ರೇಷ್ಠ’ ಪ್ರಶಸ್ತಿ ನೀಡಿ ಗೌರವಿಸಿತು.


♦.* ಡಿ. 15: 2014 ನೇ ಸಾಲಿನ ವಿಶ್ವಸುಂದರಿ ಕಿರೀಟವನ್ನು ದಕ್ಷಿಣ ಆಫ್ರಿಕಾದ ರೊಲೆನ್‌ ಸ್ಟ್ರಾಸ್‌ ಮುಡಿಗೇರಿಸಿಕೊಂಡರು. ಈ ವಿಶ್ವಸುಂದರಿಸ್ಪರ್ಧೆ ಲಂಡನ್‌ನಲ್ಲಿ ನಡೆದಿತ್ತು.


♦.* ಡಿ. 17: ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳ ಸಂಗೀತ ನಿರ್ದೇಶಕ ‘ಚಕ್ರಿ’ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 48 ವರ್ಷ ವಯಸ್ಸಾಗಿತ್ತು. ಸುಮಾರು 15 ವರ್ಷಗಳಿಂದ ಸಿನಿಮಾರಂಗದಲ್ಲಿ ದುಡಿಯುತ್ತಿದ್ದರು.


♦.* ಡಿ. 16: ಭಾರತದ ವಿಶ್ವನಾಥನ್‌ ಆನಂದ್‌ ಇಂಗ್ಲೆಡ್‌ನಲ್ಲಿ ನಡೆದ ‘ಲಂಡನ್‌ ಕ್ಲಾಸಿಕ್‌’ ಚೆಸ್‌ ಟ್ರೋಫಿಯನ್ನು ಗೆದ್ದುಕೊಂಡರು. ಈ ಪಂದ್ಯದಲ್ಲಿ ಬ್ರಿಟಿಷ್‌ ಗ್ರ್ಯಾಂಡ್‌ ಮಾಸ್ಟರ್‌ ಮೈಕಲ್‌ ಆ್ಯಡಮ್ಸ್‌ ಪರಾಭವಗೊಂಡರು.


♦.* ಡಿ. 18: ತೆಲಂಗಾಣ ರಾಜ್ಯ ಲೋಕಸೇವಾ ಅಯೋಗದ (ಟಿಎಸ್‌ಪಿಎಸ್‌ಸಿ) ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ ಘಂಟಾ ಚಕ್ರಪಾಣಿ ಅವರನ್ನು ನೇಮಕ ಮಾಡಲಾಯಿತು. ಇವರು ಟಿಎಸ್‌ಪಿಎಸ್‌ಸಿಯ ಮೊದಲ ಅಧ್ಯಕ್ಷರು ಹೌದು.


♦.* ಡಿ.19: ಪಾಕಿಸ್ತಾನ ಮೂಲದ ಹಿರಿಯ ಕವಿ ಇಮ್ತಿಯಾಜ್‌ ಧರ್ಕರ್ ಅವರ ಇತ್ತೀಚಿನ ಕವನ ಸಂಕಲನ ‘ಓವರ್‌ ದಿ ಮೂನ್‌ ’ ಕೃತಿಗೆ ಬ್ರಿಟನ್‌ನ ‘ಕ್ವೀನ್ಸ್‌ ಗೊಲ್ಡ್‌ ಮೆಡಲ್‌’ ಪ್ರಸಸ್ತಿ ಲಭಿಸಿದೆ.


♦.* ಡಿ. 20: ಮಂಗಳ ಗ್ರಹದ ಮೇಲೆ ನೀರು ಇರುವುದಾಗಿ ನಾಸಾ ಪ್ರಕಟಿಸಿತು. ಇದಕ್ಕೆ ಪುರಾವೆಯಾಗಿ ಸಾರ್ಸ್‌ ಸೆರೆ ಹಿಡಿದಿರುವ ಹಿಮದ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿತು.


♦.* ಡಿ. 22: ವಿಶ್ವಕಪ್‌ ಕಬ್ಬಡಿ ಟೂರ್ನಿಯಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡ ಟ್ರೋಫಿಯನ್ನು ಗೆದ್ದಿತು. ಫೈನಲ್‌ ಪಂದ್ಯಗಳಲ್ಲಿ ಪುರುಷರ ತಂಡ ನ್ಯೂಜಿಲೆಂಡ್‌ ತಂಡವನ್ನು ಹಾಗೂ ಮಹಿಳಾ ತಂಡ ಪಾಕಿಸ್ತಾನ ತಂಡವನ್ನುಮಣಿಸಿತು.


♦.* ಡಿ. 23: ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಕೆ. ಬಾಲಚಂದರ್‌ ಹೃದಯಾಘಾತ ದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

(ಕೃಪೆ : ಪ್ರಜಾವಾಣಿ) 

No comments:

Post a Comment