"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday, 5 March 2015

☀ಜಿ.20 ಸಮಾವೇಶ (G-20 summit) ದ ಕುರಿತು ಮಹತ್ವದ ಅಂಶಗಳು:  (Important Factors that should know about G-20 summit)

☀ಜಿ.20 ಸಮಾವೇಶ (G-20 summit) ದ ಕುರಿತು ಮಹತ್ವದ ಅಂಶಗಳು:
(Important Factors that should know about G-20 summit)
━━━━━━━━━━━━━━━━━━━━━━━━━━━━━━━━━━━━━━━━━━━━━


●.ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ 2014 ನ.15 ಮತ್ತು 16ರಂದು 9ನೇ ಜಿ- 20 ಶೃಂಗ ಸಭೆ ನೆರವೇರಿದೆ. ಸಾರ್ಕ್‌, ಬ್ರಿಕ್ಸ್‌, ಯುರೋಪಿಯನ್‌ ಯೂನಿಯನ್‌, ನ್ಯಾಟೋ, ಆಸಿಯಾನ್‌, ಜಿ.7. ಡಬ್ಲ್ಯು ಟಿಒ ಸಮಾವೇಶಗಳಂತೆಯೇ ಜಿ- 20 ಶೃಂಗ ಸಭೆ ಕೂಡ ಜಾಗತಿಕ ಆರ್ಥಿಕ ಅಭಿವೃದ್ಧಿಯಲ್ಲಲಿ ಮಹತ್ವದ ಪಾತ್ರ ವಹಿಸುತ್ತಿದೆ.

●.ಪ್ರತಿ ವರ್ಷ ಒಂದೊಂದು ದೇಶ ಈ ಸಮಾವೇಶವನ್ನು ಆಯೋಜಿಸುತ್ತಾ ಬಂದಿವೆ.
ಶೃಂಗ ಆಯೋಜನೆ ಹಿಂದಿನ ಉದ್ದೇಶವೇನು? ಈ ವರೆಗೆ ಎಷ್ಟು ದೇಶಗಳು ಇದನ್ನು ಆಯೋಜಿಸಿವೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ.


♦.ಏನಿದು ಜಿ.20 ಸಮಾವೇಶ?
What is the G-20 summit ?.

●.ಜಾಗತಿಕ ಆರ್ಥಿಕ ಸಹಕಾರ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ರೂಪಗೊಂಡಿದ್ದೇ ಜಿ- 20 ಸಮಾವೇಶ.

●.ಇದು ಮುಂದುವರಿದ ದೇಶಗಳನ್ನು ಮತ್ತು ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳನ್ನು ಒಟ್ಟಿಗೆ ಸೇರಿಸುವ ಮೂಲಕ ಜಾಗತಿಕ ಸುಸ್ಥಿರ ಅಭಿವೃದ್ಧಿಗೆ ನೆರವು ನೀಡುತ್ತಿದೆ.

●.ಮೂಲತಃ ಜಿ-20 ಸಮಾವೇಶಕ್ಕೆ ಚಾಲನೆ ದೊರೆತಿದ್ದು 1999ರಲ್ಲಿ.

●.ಏಷ್ಯಾದ ಹಣಕಾಸು ಬಿಕ್ಕಟ್ಟಿಗೆ ಒಂದು ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜರ್ಮನ್‌ ಹಣಕಾಸು ಸಚಿವ ಹನ್ಸ್‌ ಇಚೆಲ್‌ ಮತ್ತು ಕೆನಡಾ ಪ್ರಧಾನಿ ಪೌಲ್‌ ಮಾರ್ಟಿನ್‌ ಅವರ ನೇತೃತ್ವದಲ್ಲಿ ಜಗತ್ತಿನ ಪ್ರಮುಖ 20 ರಾಷ್ಟ್ರಗಳ ಹಣಕಾಸು ಸಚಿವರ ಸಮಾವೇಶವನ್ನು ಆಯೋಜಿಸಲಾಯಿತು. ಆ ಬಳಿಕ 2008ರಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಿ- 20 ಸಮಾವೇಶವನ್ನು ಆಯೋಜಿಸಲಾಯಿತು. ಅಮೆರಿಕ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಅವರು ಸಮಾವೇಶದ ನೇತೃತ್ವ ವಹಿಸಿದರು.

●.ಆ ಬಳಿಕ ಇದನ್ನು ಪ್ರತಿ ವರ್ಷವೂ ಆಯೋಜಿಸಿಕೊಂಡು ಬರಲಾಗುತ್ತಿದೆ.


♦.ಆಗಿರುವ ಮಹತ್ವದ ಬದಲಾವಣೆ ಏನು?

ಜಾಗತಿಕ ಆರ್ಥಿಕತೆಯ ಕುರಿತು ಪ್ರಾಥಮಿಕ ನಿರ್ಧಾರವನ್ನು ಕೈಗೊಳ್ಳುತ್ತಿದ್ದ ಜಿ.7 ಗುಂಪನ್ನು ಬದಲಿಸಿ ನ ಜಿ.20ಯನ್ನು ನಿರ್ಧಾರ ಕೈಗೊಳ್ಳುವ ಶಾಶ್ವತ ಅಂಗವನ್ನಾಗಿಸುವ ಕುರಿತು ಪೀಟರ್ಸಬರ್ಗ್‌ ಸಮಾವೇಶದಲ್ಲಿ ಒಪ್ಪಂದಕ್ಕೆ ಬರಲಾಯಿತು. ಇದರಿಂದಾಗಿ ಭಾರತವೂ ನಿರ್ಧಾರ ಕೈಗೊಳ್ಳುವಲ್ಲಿ ಪಾತ್ರ ವಹಿಸಬಹುದಾಗಿದೆ.


♦.ಕೇವಲ 20 ರಾಷ್ಟ್ರಗಳೇ ಏಕೆ?

ವಿಶ್ವದ ಅಭಿವೃದ್ಧಿ ಹೊಂದಿದ ಮತ್ತು ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಮಾತ್ರ ಜಿ.20ಯಲ್ಲಿವೆ. ರಾಷ್ಟ್ರಗಳ ಗುಂಪು ಕಡಿಮೆ ಇದ್ದಷ್ಟೂ ನಿರ್ಧಾರ ಕೈಗೊಳ್ಳುವುದು ಸುಲಭವಾಗುತ್ತದೆ. ಈ ಕಾರಣಕ್ಕಾಗಿ 20 ರಾಷ್ಟ್ರಗಳಿಗೆ ಮಾತ್ರ ಇದನ್ನು ಸೀಮಿತಗೊಳಿಸಾಗಿದೆ. ಕೆಲವೊಮ್ಮೆ ಸಮಾವೇಶದಲ್ಲಿ ಪಾಲ್ಗೊಳ್ಳಲು ಇತರ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗುತ್ತದೆ.


♦.ಜಿ.20ಯಲ್ಲಿ ಭಾರತದ ಪಾತ್ರವೇನು?

ಭಾರತ ವಿಶ್ವದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅಲ್ಲದೆ, ಜಾಗತಿಕ ಅಸಮತೋಲನಕ್ಕೆ ಭಾರತ ಕೊಡುಗೆ ನಗಣ್ಯ. ಸುಸ್ಥಿರ ಅಭಿವೃದ್ಧಿಗೆ ಭಾರತ ಪೂರಕವಾಗಿ ನಡೆದುಕೊಳ್ಳುತ್ತಿರುವುದರಿಂದ ಜಿ.20 ರಾಷ್ಟ್ರಗಳ ಪ್ರಮುಖ ಸದಸ್ಯ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಅಲ್ಲದೆ, ಅಣ್ವಸ್ತ್ರ ಶಕ್ತಿಯನ್ನೂ ಭಾರತ ಹೊಂದಿದೆ. ಜಾಗತಿಕ ಆರ್ಥಿಕತೆಯ ಮರು ವಿನ್ಯಾಸದಲ್ಲೂ ಭಾರತ ಮಹತ್ವದ ಕೊಡುಗೆ ನೀಡುತ್ತಿದೆ. ಆರ್ಥಿಕ ತಜ್ಞರೂ ಆಗಿದ್ದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಈ ಹಿಂದಿನ ಜಿ-20 ಶೃಂಗದಲ್ಲಿ ಭಾಗವಹಿಸಿ ಆರ್ಥಿಕ ಸುಧಾರಣೆಗೆ ಸಲಹೆಗಳನ್ನು ನೀಡಿದ್ದರು.

To be Continued...

(ಕೃಪೆ: ಉದಯವಾಣಿ)

No comments:

Post a Comment