☀ ಆಧುನಿಕ ಕನ್ನಡ ಸಾಹಿತ್ಯ ಅಥವಾ ಕನ್ನಡದ ನವೋದಯ :
(Modern Kannada Literature or Renaissance of Kannada)
━━━━━━━━━━━━━━━━━━━━━━━━━━━━━━━━━━━━━━━━━━━━━
●.ನವೋದಯ ಎಂದರೆ ಹೊಸ ಹುಟ್ಟು.
— ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತಗಳಲ್ಲಿ ಹೆಚ್ಚು ಬೆಳಕು ಕಾಣದೆ ಇದ್ದ ಕನ್ನಡ ಸಾಹಿತ್ಯ, ೧೯ನೇ ಶತಮಾನದ ಕೊನೆಗೆ ಹಾಗು ಇಪ್ಪತ್ತನೆ ಶತಮಾನದ ಆರಂಭದಲ್ಲಿ ಹೊಸ ಹುಟ್ಟು ಪಡೆಯಿತು.ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ ಗೆ ಕಾರಣವಾಯಿತು.
●.ಈ ಹಂತದಲ್ಲಿ ಬಿ.ಎಂ.ಶ್ರೀ, ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಮೊದಲಾದ ಶ್ರೇಷ್ಠ ಲೇಖಕರು ಬೆಳಕಿಗೆ ಬಂದರು.
— ಈ ಕಾಲದ ಸಾಹಿತ್ಯ ಪ್ರಕಾರಗಳು ರೊಮ್ಯಾಂಟಿಕ್ ಇಂಗ್ಲಿಷ್ ಕಾವ್ಯ ಮತ್ತು ಗ್ರೀಕ್ ರುದ್ರನಾಟಕಗಳಿಂದ ಪ್ರಭಾವಿತವಾಯಿತು.
— ಈ ಘಟ್ಟದ ಬೆಳವಣಿಗೆಯನ್ನು ತಂದವರು ಬಿ.ಎಂ.ಶ್ರೀಕಂಠಯ್ಯ, ತಮ್ಮ ಇಂಗ್ಲಿಷ್ ಗೀತಗಳು ಪುಸ್ತಕದೊಂದಿಗೆ.
— ಅನೇಕ ಸುಶಿಕ್ಷಿತ ಕನ್ನಡಿಗರು, ಮುಖ್ಯವಾಗಿ ಶಿಕ್ಷಕ ವೃತ್ತಿಯಲ್ಲಿದ್ದವರು, ತಮ್ಮ ಮಾತೃಭಾಷೆಯಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಕನ್ನಡ ಸಾಹಿತ್ಯಕ್ಕೆ ಪ್ರೇರಣೆಯನ್ನೊದಗಿಸಿದರು.
— ಇದಕ್ಕೆ ಉದಾಹರಣೆಯಾಗಿ ಕುವೆಂಪು – ತಮ್ಮ ಒಬ್ಬ ಶಿಕ್ಷಕರಿಂದ (ಬ್ರಿಟಿಷ್ ಮೂಲದವರು) ಕನ್ನಡದಲ್ಲಿ ಬರೆಯುವುದರ ಮಹತ್ವವನ್ನು ಕಂಡುಕೊಂಡು ಮುಂದೆ ರಾಷ್ಟ್ರಕವಿ ಬಿರುದಿಗೆ ಪಾತ್ರರಾದರು.
— ಅವರ ಪ್ರಕೃತಿಪ್ರೇಮ, ಮಾನವನ ಉನ್ನತಿಯಲ್ಲಿ ನಂಬಿಕೆ ಮತ್ತು ಪ್ರಕೃತಿ ಮತ್ತು ದೇವರ ಸಮ್ಮಿಶ್ರಣವನ್ನು ಕಾಣುವ ಅವರ ಮನಸ್ಸು ಅವರನ್ನು ಕನ್ನಡದ ಉಚ್ಚ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿವೆ.
— ಅವರ ಅತಿ ಪ್ರಸಿದ್ಧ ಕೃತಿ ಶ್ರೀ ರಾಮಾಯಣ ದರ್ಶನಂ.
— ಇದಕ್ಕೆ ಉದಾಹರಣೆಯಾಗಿ ನಿಂತಿರುವ ಮತ್ತೊಬ್ಬ ಲೇಖಕರೆಂದರೆ ಶಿವರಾಮ ಕಾರಂತ – ಅತ್ಯಂತ ಬುದ್ಧಿಮತ್ತೆಯ, ಆಳವಾದ ಆದರ್ಶಗಳುಳ್ಳ ವ್ಯಕ್ತಿತ್ವ, ಹಾಗೂ ಅಷ್ಟೇ ಆಳವಾದ ಸಾಮಾಜಿಕ ಕಳಕಳಿಯಿದ್ದ ಲೇಖಕರು.
— ಅವರ ಶಕ್ತಿಶಾಲಿ ಸಾಮಾಜಿಕ ಕಾದಂಬರಿಗಳಲ್ಲಿ ಪ್ರಸಿದ್ಧವಾದವು ಮರಳಿ ಮಣ್ಣಿಗೆ ಮತ್ತು ಮೂಕಜ್ಜಿಯ ಕನಸುಗಳು.
●.ಈ ಕಾಲದ ಪ್ರಸಿದ್ಧ ಕವಿಗಳು:
— ಕುವೆಂಪು,
— ಬಿ.ಎಂ. ಶ್ರೀಕಂಠಯ್ಯ,
— ದ.ರಾ.ಬೇಂದ್ರೆ,
— ಪು ತಿ ನ,
— ಕೆ.ಎಸ್. ನರಸಿಂಹಸ್ವಾಮಿ,
— ಎಂ.ಗೋಪಾಲಕೃಷ್ಣ ಅಡಿಗ,
— ಪ್ರೊ.ನಿಸಾರ್ ಅಹಮದ್,
—ಚೆನ್ನವೀರ ಕಣವಿ...ಮೊದಲಾದವರು.
●.ಈ ಕಾಲದ ಪ್ರಸಿದ್ಧ ಕಾದಂಬರಿಕಾರರು:
— ಕುವೆಂಪು,
— ಶಿವರಾಮ ಕಾರಂತ,
— ಮಾಸ್ತಿ ವೆಂಕಟೇಶ ಐಯ್ಯಂಗಾರ್,
— ಅ.ನ.ಕೃ,
— ಯು.ಆರ್.ಅನಂತಮೂರ್ತಿ,
— ಡಾ.ಚಂದ್ರಶೇಖರ್ ಕಂಬಾರ,
— ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು...
●.ಈ ಕಾಲದ ಪ್ರಸಿದ್ಧ ನಾಟಕಕಾರರು:
— ಟಿ.ಪಿ. ಕೈಲಾಸಂ,
— ಶ್ರೀರಂಗ,
— ಕುವೆಂಪು,
— ಬಿ.ಎಂ. ಶ್ರೀಕಂಠಯ್ಯ,
— ಗಿರೀಶ್ ಕಾರ್ನಾಡ್,
— ಬಿ,ವಿ.ಕಾರಂತ ಮೊದಲಾದವರು...
(To be Continued...)
(Courtesy: sobagu)

No comments:
Post a Comment