"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 7 March 2015

☀ಜಿ-20 ಸಮಾವೇಶ ನಡೆದು ಬಂದ ಹಾದಿ (History of G-20 Summit)

☀ಜಿ-20 ಸಮಾವೇಶ ನಡೆದು ಬಂದ ಹಾದಿ
(History of G-20 Summit)

━━━━━━━━━━━━━━━━━━━━━━━━━━━━━━━━━━━━━━━━━━━━━


●.2008. ನ. 14, 15: ವಾಷಿಂಗ್ಟನ್‌

—ಮೊದಲ ಜಿ. 20 ನಾಯಕರ ಸಮಾವೇಶ ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿ ನೆರವೇರಿತು. ಅಂದು ಉಂಟಾಗಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಆರ್ಥಿಕ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಲಾಯಿತು.


●.2009. ಏಪ್ರಿಲ್‌ 2: ಲಂಡನ್‌

—ಬ್ರಿಟನ್‌ನಲ್ಲಿ ಜಿ. 20 ನಾಯಕರು ಎರಡನೇ ಬಾರಿಗೆ ಬ್ರಿಟನ್‌ನ ಲಂಡನ್‌ನಲ್ಲಿ ಸಭೆ ಸೇರಿದರು. ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಹಕಾರ ಆರ್ಥಿಕ ಬಿಕ್ಕಟ್ಟನ್ನು ತಡೆಗಟ್ಟಲು ಉತ್ತೇಜಿತ ಕ್ರಮಗಳನ್ನು ತಡೆಯುವುದು ಇದರ ಉದ್ದೇಶವಾಗಿತ್ತು.


●.2009. ಸೆಪ್ಟೆಂಬರ್‌ 24, 25: ಪಿಟ್ಸ್‌ಬರ್ಗ್‌:

—ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದು ಆರ್ಥಿಕ ಸುಧಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಜಾಗತಿಕ ನಾಯಕರು ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಮಾತುಕತೆ ನಡೆಸಿದರು.


●.2010 ಜೂ.26, 27: ಟೊರೆಂಟೊ

—ನಾಲ್ಕನೇ ಜಿ.20 ಸಮಾವೇಶ ಕೆನಡಾದ ಟೊರೆಂಟೊದಲ್ಲಿ ನಡೆಯಿತು. ಜಾಗತಿಕ ಆರ್ಥಿಕ ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಒಂದು ಭದ್ರ ಚೌಕಟ್ಟನ್ನು ನಿರ್ಮಾಣ ಮಾಡುವುದು. ಆರ್ಥಿಕತೆಯ ಉತ್ತೇಜನಕ್ಕೆ ಹೊಸ ಆರಂಭ ಒದಗಿಸುವುದು ಮಾತುಕತೆಯ ಪ್ರಮುಖ ವಿಷಯವಾಗಿದ್ದವು.


●.2010: ನ.10- 11: ಸಿಯೋಲ್‌

—ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಮತ್ತೂಮ್ಮೆ ಜಿ- 20 ನಾಯಕರು ಸಮಾವೇಶಗೊಂಡರು. ಜಾಗತಿಕ ಆರ್ಥಿಕತೆಯನ್ನು ಕುಸಿತದಿಂದ ಪಾರು ಮಾಡುವುದು ಚರ್ಚೆ ಕೇಂದ್ರ ವಿಷಯವಾಗಿತ್ತು.


●.2011 ನ.3-4: ಕಾನ್ಸ್‌

—ಫ್ರಾನ್ಸ್‌ನ ಕಾನ್ಸ್‌ನಲ್ಲಿ ಒಟ್ಟು ಸೇರಿದ ಜಿ- 20 ರಾಷ್ಟಗಳ ನಾಯಕರು ಆರ್ಥಿಕ ಸ್ಥಿರತೆಗೆ ಮಾರಕವಾಗಬಲ್ಲ ವಿಷಯಗಳನ್ನು ಮಟ್ಟಹಾಕುವುದರ ಕುರಿತು ವಿಸ್ತೃತ ಚರ್ಚೆ ನಡೆಸಿದರು.


●.2012 ಜೂ.18- 19: ಕಾಬೋಸ್‌

—ಮೆಕ್ಸಿಕೊದ ಕಾಬೋಸ್‌ನಲ್ಲಿ ಏಳನೇ ಬಾರಿಗೆ ಜಿ- 20 ರಾಷ್ಟ್ರಗಳ ಸಮಾವೇಶವನ್ನು ಆಯೋಜಿಸಲಾಯಿತು. ಯುರೊಪಿನಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಸಮಾವೇಶದ ಉದ್ದೇಶವಾಗಿತ್ತು. ಉದ್ಯೋಗ ಸೃಷ್ಟಿ, ವ್ಯಾಪಾರ ಅಭಿವೃದ್ಧಿಯ ಕಡೆಗೂ ಗಮನ ನೀಡಲಾಯಿತು.


●.2013 ಸೆ.5- 6: ಪೀಟರ್ಸಬರ್ಗ್‌ (ರಷ್ಯಾ)

—ರಷ್ಯಾ ಅಧ್ಯಕ್ಷ ವ್ಯಾಡಿಮಿರ್‌ ಪುಟಿನ್‌ ಅವರ ನೇತೃತ್ವದಲ್ಲಿ ಈ ಸಮಾವೇಶವನ್ನು ಆಯೋಜಿಸಲಾಯಿತು. ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಸಮಾವೇಶ ಮಹತ್ವ ನೀಡಿತು.

(Courtesy: Udayawani) 

No comments:

Post a Comment