☀ನವೆಂಬರ್ 2014 ತಿಂಗಳ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of November 2014)
★ ನವೆಂಬರ್ 2014
(November 2014)
━━━━━━━━━━━━━━━━━━━━━━━━━━━━━━━━━━━━━━━━━━━━━
♦.* ನ.1: 1984 ರಲ್ಲಿ ಭೋಪಾಲ್ (ಮಧ್ಯಪ್ರದೇಶದ ರಾಜಧಾನಿ) ಅನಿಲ ದುರಂತಕ್ಕೆ ಕಾರಣವಾಗಿದ್ದ ಯೂನಿಯನ್ ಕಾರ್ಬೈಡ್ ಕಂಪೆನಿಯ ಮುಖ್ಯಸ್ಥರಾಗಿದ್ದ ವಾರನ್ ಆ್ಯಂಡರ್‌ಸನ್‌ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು. ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದವು. ಭಾರತೀಯ ನ್ಯಾಯಾಲಯದಲ್ಲಿ ಆ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ.
♦.* ನ. 2: ವಿಶ್ವದ ಖ್ಯಾತ ಕ್ಲಾರಿಯೋನೆಟ್ ವಾದಕ ಅಕರ್ ಬಿಕ್ ಲಂಡನ್‌ನಲ್ಲಿ ನಿಧನರಾದರು. ಅವರ ‘ಜಾಜ್’ ಆಲ್ಬಂ ಭಾರೀ ಜನಪ್ರಿಯ ಪಡೆದಿತ್ತು.
♦.* ನ.3: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಪಾನ್ ದೇಶದ ಪ್ರತಿಷ್ಠಿತ ಗೌರವ ಪ್ರಶಸ್ತಿ ‘ದಿ ಗ್ರ್ಯಾಂಡ್ ಕಾರ್ಡನ್ ಆಫ್ ದಿ ಆರ್ಡರ್ ಆಫ್ ದಿ ಪೌಲೊವಿನಾ ಫ್ಲವರ್–2014’(The Grand Cordon of the Order of the Paulownia Flowers 2014)ಗೆ ಆಯ್ಕೆಯಾಗಿದ್ದಾರೆ.
♦.* ನ. 4: ಭಾರತ ಮತ್ತು ಶ್ರೀಲಂಕಾ ದೇಶಗಳ ವಿಶೇಷ ಸೇನಾ ಪಡೆಗಳ ಜಂಟಿ ಸಮರ ಅಭ್ಯಾಸಕ್ಕೆ ಚಾಲನೆ ನೀಡಲಾಯಿತು. ಇದಕ್ಕೆ ‘ಮಿತ್ರ ಶಕ್ತಿ’ ಎಂದು ಹೆಸರಿಡಲಾಗಿದೆ. ಇದು ಮೂರು ವಾರ ನಡೆಯಲಿದೆ.
♦.* ನ 5: ರಾಜ್ಯದ ಹಂಪಿ ಸಮೀಪದಲ್ಲಿ ಹರಪ್ಪ ಕಾಲದ (ಸಿಂಧೂ ನಾಗರಿಕತೆ) ಚಿತ್ರಗಳು ಮತ್ತು ಲಿಪಿಗಳು (ಕಲ್ಲಿನ ಮೇಲೆ ಕೆತ್ತನೆ ಮಾಡಿರುವ) ಪತ್ತೆಯಾಗಿವೆ ಎಂದು ಇತಿಹಾಸ ಮತ್ತು ಪ್ರಾಕ್ತಾನಶಾಸ್ತ್ರ ಇಲಾಖೆಯ ಅಧಿಕಾರಿಗಳು ಪ್ರಕಟಿಸಿದರು.
♦.* ನ 6: ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥೆ ‘ಪ್ಲೇಯಿಂಗ್ ಇಟ್ ಮೈ ವೇ’ ಪುಸ್ತಕ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಸಚಿನ್ ಕುಟುಂಬದವರು ಮತ್ತು ಗೆಳೆಯರು ಉಪಸ್ಥಿತರಿದ್ದರು.
♦.* ನ, 07 : ಯೂರೋಪ್ ಮತ್ತು ಅಮೆರಿಕದ ಔಷಧಿ ವಿಜ್ಞಾನಿಗಳ ತಂಡ ಆ್ಯಂಟಿಬಯೊಟಿಕ್ ಔಷಧಿಗೆ ಪರ್ಯಾಯವಾಗಿ‘ ಸ್ಟಪೆಫ್’ ಎಂಬ ಔಷಧಿಯನ್ನು ಸಿದ್ಧಪಡಿಸಿರುವುದಾಗಿ ಪ್ರಕಟಿಸಿತು.
♦.* ನ 8: ಗೋವಾ ಮುಖ್ಯಮಂತ್ರಿ ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್ ರಾಜಿನಾಮೆ ನೀಡಿದರು. ಕೇಂದ್ರ ಸಚಿವ ಸಂಪುಟಕ್ಕೆ ಸೆರ್ಪಡೆಯಾಗಲಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದರು.
♦.* ನ 9: ಕ್ರಿಕೆಟಿಗ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ಆರು ಸಾವಿರ ರನ್ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದರು. ವೆಸ್ಟ್‌ಇಂಡಿಸ್‌ನ ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಕೊಹ್ಲಿ ಮುರಿದರು.
♦.* ನ, 10: ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದರು. ಈ ಸಂದರ್ಭದಲ್ಲಿ 21 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
♦.* ನ, 11: ಹಿಂದಿ ಕವಿ ಕೇದಾರನಾಥ್ ಸಿಂಗ್ ಅವರಿಗೆ 2013ನೇ ಸಾಲಿನ ‘ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಯಿತು. ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
♦.* ನ, 12: ಕೇರಳ ರಾಜ್ಯ ಶೇ.100% ರಷ್ಟು ಬ್ಯಾಂಕ್ ಖಾತೆ ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
♦.* ನ, 13: ಕ್ರಿಕೆಟಿಗ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 264 ರನ್ ಗಳಿಸುವ ಮೂಲಕ ನೂತನ ದಾಖಲೆ ಬರೆದರು. ರೋಹಿತ್ ಶರ್ಮಾ ಎರಡು ಸಲ ದ್ವಿಶತಕ ಬಾರಿಸಿದ್ದಾರೆ.
♦.* ನ, 14: 2014ನೇ ಸಾಲಿನ ಗಾಂಧಿ ಫಿಲಾಸಫಿ ಮತ್ತು ಪಬ್ಲಿಕ್ ಸರ್ವಿಸ್ ಬ್ರಾಡ್‌ಕಾಸ್ಟಿಂಗ್ ಪ್ರಶಸ್ತಿಯನ್ನು ಜಮ್ಮು ಕಾಶ್ಮೀರ ರೇಡಿಯೋ ಪಡೆಯಿತು.
♦.* ನ, 15: ಅಲ್ಪಸಂಖ್ಯಾತ ಯುವಕರಿಗೆ ಕೌಶಲ ತರಬೇತಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮೌಲಾನಾ ಆಜಾದ್ ರಾಷ್ಟ್ರೀಯ ಕೌಶಲಾಭಿವೃದ್ಧಿ ಅಕಾಡೆಮಿಯನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿತು.
♦.* ನ, 16: ಸೈನಾ ನೆಹ್ವಾಲ್ ಮತ್ತು ಕೆ. ಶ್ರೀಕಾಂತ್ ಅವರು ಕ್ರಮವಾಗಿ ಮಹಿಳೆ ಮತ್ತು ಪುರುಷರ ಚೀನಾ ಓಪನ್ ಬ್ಯಾಡ್ಮಿಂಟನ್ ಸಿಂಗಲ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.
♦.* ನ, 17: 2014ನೇ ಸಾಲಿನ ಜಿ–20 ಶೃಂಗಸಭೆಯು ಬ್ರಿಸ್‌ಬೇನ್‌ನಲ್ಲಿ ನಡೆಯಿತು. ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಸಂಸತ್‌ನಲ್ಲಿ ಮೋದಿ ಹಿಂದಿಯಲ್ಲಿ ಭಾಷಣ ಮಾಡಿದರು.
♦.* ನ, 18: ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಚರ್ಚ್ ಆಫ್ ಇಂಗ್ಲೆಂಡ್ ಸಂಪ್ರದಾಯವನ್ನು ಮುರಿದು ಮಹಿಳಾ ಬಿಷಪ್ ನೇಮಕ ಮಾಡಿತು. ಇದನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನೂತನ ಕ್ರಾಂತಿ ಎಂದು ಬಣ್ಣಿಸಲಾಗಿದೆ.
♦.* ನ, 19: ಭಾರತೀಯ ಮೂಲದ ನೇಹಾ ಗುಪ್ತ ಅವರು 2014ನೇ ಸಾಲಿನ ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಗೆ ಆಯ್ಕೆಯಾದರು.
♦.* ನ, 20: ಭಾರತೀಯ ಮೂಲದ ಹೊಟೇಲ್ ಕಾವಲುಗಾರ ಕೊಟ್ಟರಪಟ್ಟು ಚಟ್ಟು ಅವರು ಶ್ರೀಲಂಕಾದಲ್ಲಿ ನಿಧನರಾದರು. ಅವರು ಗಾಂಧೀಜಿ, ಮೌಂಟ್‌ಬ್ಯಾಟನ್ ಅವರು ತಂಗಿದ್ದ ಕೋಣೆಗಳಿಗೆ ಕಾವಲುಗಾರನಾಗಿ ಕೆಲಸ ಮಾಡಿದ್ದರು.
♦.* ನ, 21: ಅಂತರರಾಷ್ಟ್ರೀಯ ಖ್ಯಾತಿಯ ಗಣಿತ ತಜ್ಞ ಅಲೆಕ್ಸಾಂಡರ್ ಗ್ರೋಂಥೆಡಿಕ್ ಅವರು ಫ್ರಾನ್ಸ್‌ನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
♦.* ನ, 22: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಜನವರಿ 26ರಂದು ಗಣರಾಜ್ಯೋತ್ಸವ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಅಧಿಕೃತವಾಗಿ ಪ್ರಕಟಿಸಿತು.
♦.* ನ, 23: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮುರುಳಿ ದೇವ್ರಾ ಮುಂಬೈನಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.
♦.* ನ, 24: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ದೀಪಕ್ ಗುಪ್ತ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.
♦.* ನ, 25: ಹಿರಿಯ ಕಥಕ್ ನೃತ್ಯಗಾರ್ತಿ ಸಿತಾರ ದೇವಿ ಮುಂಬೈನಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.
♦.* ನ, 28: ಲೋಕಸಭೆಯ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಅನೂಪ್ ಮಿಶ್ರಾಅವರನ್ನು ನೇಮಕ ಮಾಡಲಾಯಿತು. ಅವರು ಈ ಹಿಂದೆ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು.
♦.* ನ, 30: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಚೀನಾ ಸರ್ಕಾರದ ಜೊತೆ ‘ಪಾಕ್–ಚೀನಾ ಆರ್ಥಿಕ ಕಾರಿಡಾರ್’ ಯೋಜನೆಗೆ ಸಹಿ ಹಾಕಿದರು. ಈ ಯೋಜನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಒಳಗೊಂಡಿದೆ ಎಂದು ಷರೀಫ್ ಪ್ರಕಟಿಸಿದರು.
(ಕೃಪೆ: ಪ್ರಜಾವಾಣಿ)

No comments:
Post a Comment