"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 28 March 2015

☀"ಕೃಷಿಯೇ ಪ್ರಧಾನ ಕಸುಬಾದ ನಮ್ಮ ರಾಷ್ಟ್ರದಲ್ಲಿ ಆಹಾರವಿದ್ದರೂ ಜನತೆಗೆ ಯಮಹಸಿವು!"— ಆಹಾರ ಭದ್ರತೆಯ ಸಮಸ್ಯೆಯೇ ಇದಕ್ಕೆ ಪ್ರಮುಖ ಕಾರಣವೇ? ಹೀಗಾದರೆ ಆಹಾರದ ಸಂರಕ್ಷಣೆ, ಭದ್ರತೆ, ವಿತರಣ ವ್ಯವಸ್ಥೆಗಳ ಸಂರಕ್ಷಣೆ ಸಾಧ್ಯವಾದರೂ ಹೇಗೆ? ವಿಶ್ಲೇಷಿಸಿ.  (Is it the Food security problem is a main reason? then how the food protection, security, distributed systems to be conserved ? Analyze.

☀"ಕೃಷಿಯೇ ಪ್ರಧಾನ ಕಸುಬಾದ ನಮ್ಮ ರಾಷ್ಟ್ರದಲ್ಲಿ ಆಹಾರವಿದ್ದರೂ ಜನತೆಗೆ ಯಮಹಸಿವು!"—
ಆಹಾರ ಭದ್ರತೆಯ ಸಮಸ್ಯೆಯೇ ಇದಕ್ಕೆ ಪ್ರಮುಖ ಕಾರಣವೇ? ಹೀಗಾದರೆ ಆಹಾರದ ಸಂರಕ್ಷಣೆ, ಭದ್ರತೆ, ವಿತರಣ ವ್ಯವಸ್ಥೆಗಳ ಸಂರಕ್ಷಣೆ ಸಾಧ್ಯವಾದರೂ ಹೇಗೆ? ವಿಶ್ಲೇಷಿಸಿ.

(Is it the Food security problem is a main reason? then how the food protection, security, distributed systems to be conserved ? Analyze.

━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ವಿಶೇಷಾಂಕ
(KAS special)

●.ಕೃಷಿಯೇ ಪ್ರಧಾನ ಕಸುಬಾದ ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರಾ ನಂತರ ಅದರಲ್ಲೂ ಹಸಿರು ಕ್ರಾಂತಿಯ ಅನಂತರದ ವರ್ಷಗಳಲ್ಲಿ ಆಹಾರದ ಉತ್ಪಾದನೆ 5 ಪಟ್ಟು ಹೆಚ್ಚಳವಾಗಿದೆ. ನಾವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನೇನೋ ಸಾಧಿಸಿದ್ದೇವೆ. ಆದರೆ, ಆಹಾರ ಭದ್ರತೆಯ ಸಮಸ್ಯೆ ಬಹು ದೊಡ್ಡ ಸಮಸ್ಯೆಯಾಗಿ ಇನ್ನೂ ನಮ್ಮನ್ನು ಕಾಡುತ್ತಿದೆ.

✧.ಆಹಾರದ ಅಭದ್ರತೆಯೆಂದರೆ ಆಹಾರ ಭದ್ರತೆ ಮಾತ್ರ ಅಲ್ಲ, ಈ ಸಮಸ್ಯೆಯಲ್ಲಿಹಲವು ಮುಖಗಳಿವೆ - ಗುಣಾತ್ಮಕ, ಪ್ರಮಾಣಾತ್ಮಕ, ಆಡಳಿತಾತ್ಮಕ ಮತ್ತು ಹಂಚಿಕೆಯಲ್ಲಿನ ಲೋಪದೋಷಗಳು ದೇಶದಲ್ಲಿ ಹಸಿರು ಮತ್ತು ಅಪೌಷ್ಟಿಕತೆಯ ಸಮಸ್ಯೆ ಆತಂಕ ಹುಟ್ಟಿಸುವಂಥದ್ದೇ.

✧.ಇದಕ್ಕೆ ಕಾರಣ ಪೂರೈಕೆಯಲ್ಲಿನ ಲೋಪದೋಷಗಳು. ಜಾಗತಿಕವಾಗಿ ಈ ಸಮಸ್ಯೆ ಎಲ್ಲ ದೇಶಗಳನ್ನೂ ಕಾಡುತ್ತಿದೆ.ವಾರ್ಷಿಕ 30-40% ಆಹಾರದ ವಸ್ತುಗಳು ನಷ್ಟವಾಗುತ್ತಿವೆ. ಎಲ್ಲರಿಗೂ ಆಹಾರ, ಆರೋಗ್ಯ ಧ್ಯೇಯವನ್ನು ಸಾಧಿಸಬೇಕಾದರೆ ದೇಶದ ಜನರಿಗೆ ಆಹಾರ ದೊರೆಯುವಂತಾಗಬೇಕು. ಆಹಾರದ ಸಂರಕ್ಷಣೆಯೇ ಆಹಾರದ ಭದ್ರತೆಗೆ ಭದ್ರ ಬುನಾದಿ.


●.ಆಹಾರದ ಭದ್ರತೆ ಏನು?

✧.ಆಹಾರ ಭದ್ರತೆ ಎಂದರೆ ದೇಶದ ಎಲ್ಲ ಜನರಿಗೆ ಬೇಕಾಗುವ ಆಹಾರ ಪದಾರ್ಥಗಳು ತಮ್ಮ ನಿತ್ಯ ಬಳಕೆಗೆ ಸಿಗುವಂತಾಗುವುದು. ಇದೇ ಆಹಾರ ಭದ್ರತೆ.

✧.ಆಹಾರ ವಸ್ತುಗಳ ಪೂರೈಕೆಯಿಂದಾದ ಗೊಂದಲ ಅಭದ್ರತೆ ಮತ್ತು ಆಹಾರ ವಸ್ತುಗಳ ಬೆಲೆಯೇರಿಕೆಗೆ ಕಾರಣ.
ಯಾವಾಗ ಆಹಾರ ವಸ್ತುಗಳ ಬೇಡಿಕೆಯು ಆಹಾರ ವಸ್ತುಗಳ ಪೂರೈಕೆಗಿಂತ ಜಾಸ್ತಿಯಾಗುತ್ತಾ ಹೋಗುತ್ತದೋ ಆವಾಗ ಆಹಾರ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಏರತೊಡಗುತ್ತದೆ.

✧.ನಮ್ಮ ದೇಶದಲ್ಲಿವರ್ಷದಿಂದ ವರ್ಷಕ್ಕೆ ಆಹಾರ ವಸ್ತುಗಳ ಉತ್ಪಾದನೆ ಏರುತ್ತಲೇ ಇದೆ. ದೇಶದಲ್ಲಿ ಆಹಾರ ವಸ್ತುಗಳ ಉತ್ಪಾದನೆ (2006-7ರಿಂದ 2013-14)ಯ ಅಂಕಿ ಅಂಶಗಳು ದೇಶ ಉತ್ಪಾದನೆ ಮಾಡಿದ ಆಹಾರ ವಸ್ತುಗಳ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ದೇಶವು 2006-07ರ ವರ್ಷ 217.28 ಮಿಲಿಯನ್‌ ಟನ್‌ ಗಳಷ್ಟು ಆಹಾರ ಉತ್ಪಾದನೆ ಮಾಡಿದೆ. 2013-14ರಲ್ಲಿ ಒಟ್ಟು ಆಹಾರ ವಸ್ತುಗಳ ಉತ್ಪಾದನೆ 264.3 ಮಿಲಿಯನ್‌ ಟನ್‌ಗಳು.

✧.ಹೊಲದಿಂದ ಉತ್ಪಾದನೆ ಆದ ಆಹಾರ ಊಟದ ತಟ್ಟೆಗೆ ಬರುವಲ್ಲಿಯವರೆಗೆ ಪೋಲಾಗುವುದೇ ಜನರಿಗೆ ಆಹಾರ ದೊರೆಯದೇ ಇರುವುದಕ್ಕೆ ಕಾರಣ. ಇದರ ಪರಿಣಾಮ ಆಹಾರದ ಅಭದ್ರತೆ.


●.ಆಹಾರದ ಅಭದ್ರತೆಗೆ ಕಾರಣ ಏನು?

✧.ಈ ಸಮಸ್ಯೆಗೆ ಮುಖ್ಯ ಕಾರಣ ಉತ್ಪಾದಿಸಿದ ಆಹಾರ ವಸ್ತುಗಳು ಹಾಳಾದ ಪರಿಣಾಮ ಅಥವಾ ನಷ್ಟದ ಪರಿಣಾಮ. ಎಷ್ಟೇ ಉತ್ಪಾದಿಸಿದರೂ, ಉತ್ಪಾದಿಸಿದ್ದನ್ನು ಸರಿಯಾಗಿ ಸಂರಕ್ಷಿಸದಿದ್ದರೆ ಆಪತ್ತು ಖಂಡಿತ.

✧.ಆಹಾರ ನಷ್ಟದ ಸಮಸ್ಯೆ ಬಹು ದೊಡ್ಡ ಸಮಸ್ಯೆಯಾದರೆ, ಜತೆಗೆ ನಷ್ಟವಾದ ಹಾಳಾದ ವಸ್ತುಗಳು ಸೃಷ್ಟಿಸುವ ಘನತ್ಯಾಜ್ಯವನ್ನು ವಿಲೇವಾರಿ ಮಾಡುವುದು ಮತ್ತು ಅವುಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗರುಜಿನಗಳನ್ನು ನಿವಾರಿಸಿಕೊಳ್ಳುವುದು ಬಹು ದೊಡ್ಡ ತಲೆನೋವು.

✧.ಭಾರತವು ಕಳೆದ ವರ್ಷಗಳಲ್ಲಿ ಸುಮಾರು 45 ಸಾವಿರ ಕೋಟಿ ರೂ.ನಷ್ಟು ಆಹಾರ ವಸ್ತುಗಳನ್ನು ಕಳೆದುಕೊಂಡಿದೆ.

✧.ಭಾರತವು ಜಗತ್ತಿನ ಇನ್ನೂ ಅತ್ಯಂತ ಹೆಚ್ಚು ಹಣ್ಣು ಹಂಪಲು ಮತ್ತು ತರಕಾರಿಗಳನ್ನು ಉತ್ಪಾದನೆ ಮಾಡುವ ರಾಷ್ಟ್ರವಾಗಿದೆ. ದೇಶದಲ್ಲಿ ಉತ್ಪಾದನೆಯಾದ ಹಣ್ಣು ಹಂಪಲು, ತರಕಾರಿಗಳು ಮತ್ತು ಆಹಾರ ವಸ್ತುಗಳ ನಷ್ಟದ ಪ್ರಮಾಣ ರೂ.44,000 ಕೋಟಿಗಳಷ್ಟು. ಅದರಲ್ಲಿ ಹಣ್ಣು ಹಂಪಲುಗಳು ಮತ್ತು ತರಕಾರಿಗಳ ನಷ್ಟದ ಪ್ರಮಾಣ ಒಟ್ಟು 13,300 ಕೋಟಿ ರೂ.ಗಳಷ್ಟು. ಅಂದರೆ ಒಟ್ಟು ವಾರ್ಷಿಕ ಉತ್ಪಾದನೆಯ 18%. ಆಹಾರ ವಸ್ತುಗಳ ನಷ್ಟದ ಪ್ರಮಾಣ 30,700 ಕೋಟಿ ರೂ.ಗಳು.

✧.ಭಾರತೀಯ ಆಹಾರ ನಿಗಮದ ವರದಿಯ ಪ್ರಕಾರ ಆಹಾರ ವಸ್ತುಗಳಲ್ಲಿ ಸುಮಾರು 120.21ಕೋಟಿ ರೂ. ಮೌಲ್ಯದಷ್ಟು ಸಂಗ್ರಹದ ಹಂತದಲ್ಲಿ ನಷ್ಟವಾಗುತ್ತದೆ. 106.18 ಮೌಲ್ಯದ ಆಹಾರವು ಸಾಗಾಣಿಕೆಯ ಹಂತದಲ್ಲಿ ನಷ್ಟವಾಗುತ್ತದೆ. ಉಳಿದ 9.85 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು ಬಳಕೆದಾರರ ದಿನನಿತ್ಯದ ಬಳಕೆಗೂ ಅಸಾಧ್ಯವಾದುದು.

✧.ಇನ್‌ಸ್ಟಿಟ್ಯೂಷನ್‌ ಆಫ್ ಮೆಕ್ಯಾನಿಕಲ್‌ ಎಂಜಿನಿಯರ್ಸ್‌ನ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 21 ಮಿಲಿಯನ್‌ ಟನ್‌ಗಳಷ್ಟು ಗೋಧಿ ನಷ್ಟವಾಗುತ್ತಿದೆ. ಈ ಪ್ರಮಾಣ ಆಸ್ಟ್ರೇಲಿಯಾ ದೇಶವು ವಾರ್ಷಿಕವಾಗಿ ಉತ್ಪಾದಿಸುವ ಗೋಧಿಯ ಪ್ರಮಾಣಕ್ಕೆ ಸಮ.

 ✧.ಫಾರಿನ್‌ ಡೈರೆಕ್ಟ್ ಇನ್ವೆಸ್ಟ್‌ಮೆಂಟ್‌ ಇನ್‌ ರಿಟೇಲ್‌ನ ವರದಿಯ ಪ್ರಕಾರ ದೇಶವು 180 ಮಿಲಿಯನ್‌ ಮೆಟ್ರಿಕ್‌ ಟನ್‌ನಷ್ಟು ಹಣ್ಣು ಹಂಪಲು ತರಕಾರಿಗಳನ್ನು ಉತ್ಪಾದಿಸುತ್ತದೆ, ದೇಶದಲ್ಲಿ 23.6 ಮಿಲಿಯನ್‌ ಮೆಟ್ರಿಕ್‌ ಟನ್‌ ನಷ್ಟು ಹಣ್ಣು ಹಂಪಲು ತರಕಾರಿಗಳನ್ನು ಸಂರಕ್ಷಿಸಲು 5,386 ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆ ಇದೆ.

✧.ಸೌಮಿತ್ರ ಚೌಧುರಿ ಕಮಿಟಿಯ ಪ್ರಕಾರ 2012ರಲ್ಲಿ 61.3 ಮಿಲಿಯನ್‌ ಟನ್‌ ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆ ನಮ್ಮ ದೇಶಕ್ಕೆ ಅಗತ್ಯವಿತ್ತು. ಆದರೆ ನಮಲ್ಲಿ 29 ಮಿಲಿಯನ್‌ ಟನ್‌ನಷ್ಟು ಹಾಳಾಗಬಹುದಾದ ಆಹಾರ ವಸ್ತುಗಳನ್ನು ಸಂಗ್ರಹಿಸಿಡಲು ಕೋಲ್ಡ್‌ ಸ್ಟೋರೇಜ್‌ ಹಂಚಿಕೆಯಲ್ಲಿನ ಲೋಪದೋಷ ವ್ಯವಸ್ಥೆ ಇದೆ.ಈ ಎಲ್ಲ ಅಂಶಗಳು ದೇಶದಲ್ಲಿ ಆಹಾರ ವಸ್ತುಗಳನ್ನು ಕಾಪಾಡಲು ಇರುವ ಅವ್ಯವಸ್ಥೆಯ ಕಪ್ಪು ಮುಖವನ್ನು ತೋರಿಸುತ್ತವೆ.


●.ಹೀಗಾದರೆ ಸಂರಕ್ಷಣೆ ಸಾಧ್ಯವಾದರೂ ಹೇಗೆ?

✧.ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಮತ್ತು ಆರ್ಥಿಕ ನೀತಿ ರೂಪಿಸಲು ಆಹಾರದ ಸಂರಕ್ಷಣೆ, ಭದ್ರತೆ, ವಿತರಣ ವ್ಯವಸ್ಥೆಗಳ ದುರಾವಸ್ಥೆಗಳನ್ನು ಸರಿಪಡಿಸಿಕೊಳ್ಳಬೇಕಾದ ಮಾರ್ಗೋಪಾಯಗಳಿಗೆ ಎಲ್ಲಿಲ್ಲದ ಪ್ರಾಮುಖ್ಯ.

✧.ಆಹಾರ ವಸ್ತುಗಳ ಬೆಲೆಯಲ್ಲಿನ ಏರಿಕೆ, ರೈತರು ತಾವು ಬೆಳೆಸಿದ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಬರದೆ ಆತ್ಮಹತ್ಯೆಗೆ ಶರಣು ಹೋಗುವುದು, ಕೃಷಿಯನ್ನು ತ್ಯಜಿಸಿಹೋಗುವ ಬಗ್ಗೆ ಇವತ್ತು ಮುಖ್ಯ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆಗೆ ಪರಿಹಾರವಂತೂ ಇನ್ನೂ ಸಿಕ್ಕಿಲ್ಲ.


●.ಪರಿಹಾರ ಏನು?

✧.ಆಹಾರ ವಸ್ತುಗಳ ನಷ್ಟದ ಬಗ್ಗೆ ನಾವು ಅರಿತುಕೊಂಡರೆ ಆಹಾರ ಅಭದ್ರತೆಗೆ ಉತ್ಪಾದಿಸಿದ ಆಹಾರವನ್ನು ಸಂರಕ್ಷಣೆ ಮಾಡದಿರುವುದೇ ಮುಖ್ಯ ಕಾರಣವೆಂದು ತಿಳಿಯುತ್ತದೆ.

✧.ಕೃಷಿಯನ್ನು ಸಂರಕ್ಷಿಸುವುದೊಂದೇ ಆಹಾರ ಭದ್ರತೆಯನ್ನು ಸಾಧಿಸಲು ಉಳಿದಿರುವ ಮಾರ್ಗ.

✧.ಕೃಷಿಕರಿಗೆ ಮೂಲ ಸೌಕರ್ಯ, ಉತ್ತಮ ಬೀಜ, ಸಾಗಾಣಿಕೆ ಸೌಕರ್ಯ, ಉತ್ಪಾದಿಸಿದ ವಸ್ತುಗಳಿಗೆ ಯೋಗ್ಯ ಬೆಲೆ, ಸಂರಕ್ಷಣಾ ಘಟಕಗಳ ಸ್ಥಾಪನೆ,ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ಶೇಖರಿಸಿಡಲು ಉಗ್ರಾಣ, ಶೈತ್ಯಾಗಾರದ ವ್ಯವಸ್ಥೆಗಳು ಉತ್ಪಾದನೆಯಾದ ಆಹಾರವನ್ನು ಸಂರಕ್ಷಿಸುವುದರಲ್ಲಿ ಸಂಶಯವಿಲ್ಲ.

✧.ಸಾರ್ವಜನಿಕ ವಿತರಣ ವ್ಯವಸ್ಥೆಯಲ್ಲಿನ ಲೋಪದೋಷಗಳು ನಿವಾರಣೆಯಾಗಬೇಕಾಗಿದೆ. ಈ ಪರಿಹಾರೋಪಾಯಗಳು ಕಳೆದ ಹಲವಾರು ವರ್ಷಗಳಿಂದ ಬಾಯಿಮಾತಿನಲ್ಲಿ ಇವೆಯೇ ಹೊರತು ಅವು ಕಾರ್ಯ ರೂಪಕ್ಕೆ ಇನ್ನೂ ಬಂದಿಲ್ಲ.

✧.ನಾವು ಆಹಾರ ವಸ್ತುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದರೂ ಆಹಾರ ಭದ್ರತೆಯನ್ನು ಇನ್ನೂ ಸಾಧಿಸಲಾಗಲಿಲ್ಲ. ಇದಕ್ಕೆ ನಿಜವಾದ ಕಾರಣ ಜನರಲ್ಲಿ ಆಹಾರವನ್ನು ಕೊಂಡುಕೊಳ್ಳುವಷ್ಟು ಹಣ ಇರದೇ ಇರುವುದು. ಪ್ರಾಯಶಃ ಜನರಿಗೆ ತಮ್ಮ ರೂಪಾಯಿಗಳನ್ನು ತಾವೇ ಪಡೆದುಕೊಳ್ಳಲು ಸರಿಯಾದ ಉದ್ಯೋಗವಿದ್ದಲ್ಲಿ ಆಹಾರ ಭದ್ರತೆ ಕಾಯಿದೆಯೂ ಬೇಕಿಲ್ಲ.

✧.ದುಡಿಯಲು ಕೆಲಸವಿದೆಯೆಂದಾದರೆ ಆಹಾರ ಭದ್ರತೆಯ ಸಮಸ್ಯೆ ನಿವಾರಣೆಯಾದಂತೆ.

✧.ಗ್ಲೋಬಲ್‌ ಹಂಗರ್‌ ಇಂಡೆಕ್ಸ್‌ 2013ರ ಪ್ರಕಾರ ಭಾರತ 120 ರಾಷ್ಟ್ರಗಳ ಪಟ್ಟಿಯಲ್ಲಿ 63ನೇ ಸ್ಥಾನದಲ್ಲಿದೆ. ಎಲ್ಲರಿಗೂ ಆಹಾರ ದೊರಕಿಸಿಕೊಡುವುದು ಅತ್ಯಂತ ಪವಿತ್ರವಾದ ಕೆಲಸ.

✧.ರಾಜಕೀಯ ಇಚ್ಛಾಶಕ್ತಿ ಮತ್ತು ಉತ್ತಮ ಆಡಳಿತವು ಒದಗಿದರೆ ದೇಶದ ಜನರೆಲ್ಲರಿಗೂ ದಿನನಿತ್ಯ ಬೇಕಾಗುವ ಆಹಾರವನ್ನು ಒದಗಿಸುವುದು ಅತೀ ಸುಲಭದ ಕೆಲಸ.

(ಕೃಪೆ: ಉದಯವಾಣಿ) 

No comments:

Post a Comment