"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday 22 November 2013

ಸುಜಲ-3 ಯೋಜನೆ (SUJAL-3):

★ ಸುಜಲ-3 ಯೋಜನೆ (SUJAL-3): ಜಲಾನಯನ ಪ್ರದೇಶಗಳಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಉದ್ದೇಶದಿಂದ ವಿಶ್ವಬ್ಯಾಂಕ್ ನೆರವಿನಿಂದ ಕರ್ನಾಟಕ ರಾಜ್ಯದ 7 ಜಿಲ್ಲೆಗಳಲ್ಲಿ (ದಾವಣಗೆರೆ, ಗುಲ್ಬರ್ಗಾ, ಯಾದಗಿರಿ, ಕೊಪ್ಪಳ, ಗದಗ, ಬೀದರ್, ಚಾಮರಾಜನಗರ) ಜಾರಿ ಮಾಡಲಾಗಿದೆ. ತಂತ್ರಜ್ಞಾನಗಳಪರಿಣಾಮಕಾರಿ ಬಳಕೆಯತ್ತ ಬೆಳೆಗಾರರನ್ನು ಪ್ರೋತ್ಸಾಹಿಸುವ , ಮಾರ್ಗದರ್ಶನ ನೀಡುವ ಉದ್ದೇಶ ಈ ಯೋಜನೆ ಹೊಂದಿದೆ. ಈ ಯೋಜನೆಯ ಅನುಷ್ಠಾನಕ್ಕೆ 2013ನೇ ಸಾಲಿನಿಂದ 6 ವರ್ಷಗಳ ಕಾಲವನ್ನು ನಿಗದಿ ಪಡಿಸಲಾಗಿದೆ.

ಟಿಪ್ಪಣಿ: ಮೇಘ ಸ್ಫೋಟ (Cloud Burst) :

ಮೇಘ ಸ್ಫೋಟ (Cloud Burst) : ನೈಸರ್ಗಿಕ ವಿಕೋಪದ ಒಂದು ರೂಪ ಇದಾಗಿದ್ದು, ವಾತಾವರಣದಲ್ಲಿ ಮೋಡಕ್ಕೆ ಮೋಡವೇ ಸ್ಫೋಟಗೊಂಡು ಭೂಮಿಗೆ ಎರಗುವ ಜಲಧಾರೆ. ಚಂಡಮಾರುತ ಉಂಟಾದಾಗ ಸಾಕಷ್ಟು ಪ್ರಮಾಣದ ನೀರಿನ ಅಂಶವನ್ನು ಇರಿಸಿಕೊಂಡ ಗಾಳಿಯ ಅಲೆಗಳು ಬೆಟ್ಟ ಕಣಿವೆಯ ನಡುವೆ ಸಿಲುಕಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ಹಾಗೆ ಗಾಳಿ ಸ್ಥಗಿತಗೊಂಡಾಗ ಮೋಡಗಳ ಮೇಲೆ ವಿಪರೀತ ಒತ್ತಡ ಉಂಟಾಗಿ ಮೋಡ ಸ್ಫೋಟವಾಗುತ್ತದೆ. ಮಳೆಯ ರಭಸ ಪ್ರತಿ ಗಂಟೆಗೆ 10 cm ಗಿಂತ ಹೆಚ್ಚಾಗಿರುತ್ತದೆ. ಇದರ ಪ್ರಭಾವ ಸುಮಾರು 20-80 km ವ್ಯಾಪ್ತಿ ತನಕ ಇರುತ್ತದೆ.

ಭಾರತದಲ್ಲಿ ಹೆಚ್ಚಿದ ತೈಲ ಬಿಕ್ಕಟ್ಟು - ಪ್ರಗತಿಯ ಗತಿಯ ಮೇಲೆ ಅದರ ಪರಿಣಾಮ .

* ಭಾರತದಲ್ಲಿ ಹೆಚ್ಚಿದ ತೈಲ ಬಿಕ್ಕಟ್ಟು -

ಪ್ರಗತಿಯ ಗತಿಯ ಮೇಲೆ ಅದರ ಪರಿಣಾಮ . ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ಭಾರತವು ಇಂದು ತೈಲ ಬಿಕ್ಕಟ್ಟನ್ನು ಎದುರಿಸುತ್ತಿದೆ.ಇದು ದೇಶದ ಪ್ರಗತಿಪರ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

 ಇದಕ್ಕೆ ಹಲವಾರು ಕಾರಣಗಳನ್ನು ನಾವು ಗಮನಿಸಬಹುದು.

* ಯುರೋಪ್ ನ ಆರ್ಥಿಕ ಬಿಕ್ಕಟ್ಟು
*ಕುಸಿಯುತ್ತಿರುವ ರೂಪಾಯಿ ಮೌಲ್ಯ
,* ಹೆಚ್ಚುತ್ತಿರುವ ವಿತ್ತೀಯ ಕೊರತೆ ಮತ್ತು
* ಆಮದಿಗೆ ಬೇಕಾಗಿರುವ ಡಾಲರ್‌ನ ಅಭಾವ ದೇಶದಲ್ಲಿ ತೈಲ ಬಿಕ್ಕಟ್ಟನ್ನುಸೃಷ್ಟಿಸುತ್ತಿದೆ.

* ಯುರೋಪ್ ನ ಆರ್ಥಿಕ ಬಿಕ್ಕಟ್ಟಿನಿಂದ ಡಾಲರ್ ಹೆಚ್ಚು ಸದೃಢವಾಗಿದೆ. ಇದರಿಂದ ಭಾರತದ ಷೇರುಪೇಟೆ ಋಣಾತ್ಮಕ ಪ್ರಭಾವ ಬೀರಿದೆ.

* ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಕಚ್ಚಾ ತೈಲದ ಆಮದಿಗೆ ನೀಡಬೇಕಿರುವ ಡಾಲರ್‌ನಪ್ರಮಾಣವೂ ಹೆಚ್ಚಾಗುತ್ತಿದ್ದು, ಕೇಂದ್ರ ಸರಕಾರ ಅನಿವಾರ್ಯವಾಗಿ ತೈಲ ವೆಚ್ಚದ ಮೇಲೆ ನಿರ್ಬಂಧ ಹೇರಲು ಯೋಚಿಸುತ್ತಿದೆ. ಸಮಸ್ಯೆ ಮಾತ್ರ ಹಾಗೇ ಉಳಿದಿದೆ.ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ತೈಲ ಬಹುಮುಖ್ಯ ಚಾಲಕ ಶಕ್ತಿ. ಅದರ ಮೇಲಿನ ನಿರ್ಬಂಧ ಹೇರುವುದೆಂದರೆ, ಅಭಿವೃದ್ಧಿಗೆ ಹಾಕಿದ ಕಡಿವಾಣವೆಂದೇ ಅರ್ಥ.

* ಬೇಡಿಕೆ ಇದ್ದಷ್ಟು ಪ್ರಮಾಣದಲ್ಲಿ ದೇಶೀಯವಾಗಿ ತೈಲ ಉತ್ಪಾದನೆಯಾಗುತ್ತಿಲ್ಲ. ಬಹುಪಾಲು ತೈಲ ವಿದೇಶಗಳಿಂದ ಡಾಲರ್ ಕೊಟ್ಟು ಆಮದು ಮಾಡಿಕೊಳ್ಳಬೇಕು. ಬೇಕಾದಷ್ಟು ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳಲು ದೇಶದ ಬಳಿ ಅಗತ್ಯವಾದಷ್ಟು ಡಾಲರ್ ಸಂಗ್ರಹ ಇಲ್ಲ. ಹೀಗಾಗಿಯೇ ಬಿಕ್ಕಟ್ಟು.

* ತೈಲ ಬಳಕೆ ಕಡಿಮೆ ಮಾಡಿದರೆ ಸ್ವಲ್ಪವಾದರೂ ಒತ್ತಡ ಕಡಿಮೆ ಕಡಿಮೆಯಾಗುತ್ತದೆ ನಿಜ. ಆದರೆ, ಹಾಗೆ ಮಾಡಲು ಸಾಧ್ಯವಿಲ್ಲದಂಥ ಸ್ಥಿತಿ ದೇಶದಲ್ಲಿ ಇದೆ .

* ರಫ್ತು ಹೆಚ್ಚಿಸುವ ಮತ್ತು ವಿದೇಶಿ ಬಂಡವಾಳ ಆಕರ್ಷಿಸುವ ಮೂಲಕ ಅಧಿಕ ಡಾಲರ್ ಸಂಗ್ರಹ ಮಾಡುವಮೂಲಕ ಸಮಸ್ಯೆ ನಿಭಾಯಿಸಬಹುದು. ಆದರೆ, ಅದು ಶೀಘ್ರ ಆಗುವಂಥದ್ದಲ್ಲ. ಹೀಗಾಗಿ, ಸರಕಾರ ದಿಢೀರ್ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿ ಬಂದಿದೆ.

* ತೈಲ ಆಮದಿನ ವಿಚಾರದಲ್ಲಿ ಭಾರತ ಕಳೆದ ಎರಡು ದಶಕಗಳಿಂದ ಸಮಸ್ಯೆಯನ್ನು ಎದುರಿಸುತ್ತಾ ಬಂದಿದೆ. ಅಮೆರಿಕ ಮತ್ತು ತೈಲ ಉತ್ಪಾದನಾ ದೇಶಗಳ ನಡುವಣ ಸಂಬಂಧಗಳು ಭಾರತಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತಿವೆ.ಪರಮಾಣು ಅಸ್ತ್ರ ವಿವಾದದಿಂದಾಗಿ ಇರಾನ್ ಮತ್ತು ಅಮೆರಿಕ ನಡುವಣ ಸಂಬಂಧ ಕೆಟ್ಟಿದೆ. ಈ ಬೆಳವಣಿಗೆ ಭಾರತಕ್ಕೆ ಪೂರೈಸಲಾಗುತ್ತಿದ್ದ ತೈಲದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ

ಪರಿಹಾರ ಕ್ರಮಗಳು: .

* ಇದೀಗ, ಸಿರಿಯಾ ಮೇಲೆ ಅಮೆರಿಕ ದಾಳಿ ನಡೆಸಿದರೆ ಭಾರತ ಮತ್ತಷ್ಟು ತೈಲ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಭಾರತವು ಅಮೆರಿಕದ ಒತ್ತಡವನ್ನು ಕಡೆಗಣಿಸಿ, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದು ಅನಿವಾರ್ಯ. ಇದರಿಂದಾಗುವ ಅನುಕೂಲವೆಂದರೆ, ರೂಪಾಯಿ ನೀಡಿ ಇರಾನ್‌ನಿಂದ ತೈಲ ಕೊಳ್ಳಲು ಸಾಧ್ಯವಿರುವುದು. ಆದರೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಕಡೆಗಣಿಸಿ ಇರಾನ್‌ನಿಂದ ತೈಲ ಕೊಳ್ಳುವುದು ಸುಲಭವಲ್ಲ. ಆದರೆ, ಅಂಥ ಒಂದು ಧೈರ್ಯದ ಹೆಜ್ಜೆ ಇಡುವುದು ಈಗ ಅನಿವಾರ್ಯವಾಗಿದೆ. ಇದು ತೈಲ ಬಿಕ್ಕಟ್ಟನ್ನು ಎದುರಿಸಲು ಅನುಸರಿಸಬಹುದಾದ ಒಂದು ಕ್ರಮ ಅಷ್ಟೆ.

* ಭಾರತೀಯ ರಿಜರ್ವ್ ಬ್ಯಾಂಕ್ ದೇಶದ ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಸಟ್ಟಾ ವ್ಯವಹಾರದ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

* ಕಚ್ಚಾತೈಲ ಆಮದು ಪಾವತಿಗೆ ಅಗತ್ಯವಾದ ಡಾಲರ್ ಗಳನ್ನು ತೈಲ ಕಂಪನಿಗಳು ಸರ್ಕಾರಿ ಸ್ವಾಮ್ಯದ ಒಂದೇ ಬ್ಯಾಂಕಿನಿಂದ ಪಡೆದುಕೊಳ್ಳಬೇಕು. ಇದೇ ರೀತಿ ಇನ್ನೂ ಹಲವು ಕ್ರಮಗಳನ್ನು ಸರಕಾರ ತೆಗೆದುಕೊಂಡರೆ ಮಾತ್ರ ತೈಲ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯ.

Thursday 21 November 2013

★ ಸಂಪೂರ್ಣ ಕ್ರಾಂತಿ(Total Revolution):

★ ಸಂಪೂರ್ಣ ಕ್ರಾಂತಿ(Total Revolution): ಇಂದಿರಾಗಾಂಧಿರವರ ವಿರುದ್ದ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಬೇಕೆಂದು ಲೋಕನಾಯಕ ಜಯಪ್ರಕಾಶ ನಾರಾಯಣ ರವರು ಒತ್ತಾಯಿಸುವುದರೊಂದಿಗೆ ಈ ಕ್ರಾಂತಿಗೆ ಮುನ್ನುಡಿ ಹಾಕಿದರು. *. ಜಯಪ್ರಕಾಶ ನಾರಾಯಣ ರವರೊಂದಿಗೆ ವಿ.ಎಂ. ತಾರಕುಂಡೆರವರೂ ಕೂಡಾ ಕ್ರಾಂತಿಗೆ ಕರೆ ನೀಡಿದರು. *. ಈ ಕ್ರಾಂತಿಯ ಮುಖ್ಯ ಉದ್ದೇಶ ಸಾಮಾಜಿಕ ಪರಿವರ್ತನೆಗಾಗಿ ಕಾರ್ಯಕ್ರಮ ಕೈಗೊಳ್ಳುವುದಾಗಿತ್ತು, ಆ ಮೂಲಕ ಸಂಪೂರ್ಣ ಕ್ರಾಂತಿಯನ್ನು ಮಾಡಬೇಕೇಂದು ಜಯಪ್ರಕಾಶ ನಾರಾಯಣ ರವರು ಒತ್ತಾಯಿಸಿ ಸಂಪೂರ್ಣ ಕ್ರಾಂತಿಗೆ(Total Revolution) ಕರೆ ನೀಡಿದರು.

Wednesday 20 November 2013

* ಭಾರತದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳು:

* ಭಾರತದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳು:

 ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಬಡದೇಶವಾಗಿದ್ದ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ ಈಗ ಅಧಿಕ ವಾಗಿದ್ದು ಶ್ರೀಮಂತಿಕೆಯತ್ತ ದಾಪುಗಾಲಿರಿಸಿದೆ. ಆದರೆ ಭಾರತವನ್ನು ವಿದ್ಯುಚ್ಛಕ್ತಿ ಕೊರತೆ ಕಾಡುತ್ತಿದ್ದು ಪ್ರಗತಿಗೆ ಅಡಚಣೆಯಾಗಿ ಪರಿಣಮಿಸಿದೆ. ಭಾರತದ ತಲಾವಾರು ವಿದ್ಯುಚ್ಛಕ್ತಿ ಬಳಕೆಯ ಪ್ರಮಾಣ ಕೇವಲ 700 ಮೇಗಾವ್ಯಾಟ್ ಮಾತ್ರ. ದೇಶದ ಶೇ.20 ರಷ್ಟು ಮಂದಿಗೆ ವಿದ್ಯುತ್ ಲಭಿಸುತ್ತಿಲ್ಲ. ಜಗತ್ತಿನಲ್ಲೇ ಅತೀ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವವರು ಭಾರತದ ಪ್ರಜೆಗಳು. ಭಾರತದ ವಿದ್ಯುತ್ ಕೊರತೆಯನ್ನು ನಿವಾರಿಸಲು ವಷ೯ಕ್ಕೆ 30 ರಿಂದ 40 ಸಾವಿರ ಮೇಗಾವ್ಯಾಟ್ ನಷ್ಟು ವಿದ್ಯುತ್ ಅಧಿಕವಾಗಿ ಉತ್ಪಾದನೆಯಾಗಬೇಕು. ಆದರೆ ಕಳೆದ ನಾಲ್ಕೈದು ವಷ೯ಗಳಲ್ಲಿ ಭಾರತದಲ್ಲಿ ಉತ್ಪಾದನೆಯಾಗಿರುವ ವಿದ್ಯುತ್ 550000 ಮೆಗಾವಾಟ್ ಗಳು. ಅಂದರೆ ಸನ್ನಿವೇಶದ ಜಟಿಲತೆ ಅರಿವಾಗಬಹುದು.

ಅಮೇರಿಕದೊಂದಿಗೆ ಮಾಡಿಕೊಂಡ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಫಲಿತಾಂಶಗಳಿಗೆ 2020ನೇ ಇಸ್ವಿವರೆಗಿನ ಕಾಲಾವಧಿ ಬೇಕಾಗುತ್ತದೆ. ಹಾಗೆ ಪ್ರಯೋಜನ ದೊರೆತರೂ ಸಿಗುವ ಹೆಚ್ಚಿನ ವಿದ್ಯುತ್ ಪ್ರಸಕ್ತ ಶೇ3ಕ್ಕೆ ಮತ್ತೆ ಶೇ3 ರಷ್ಟು ಸೇರಿ ಶೇ6 ರಷ್ಟು ಮಾತ್ರವಾಗುತ್ತದೆ. ಆದರೆ ಜನಸಂಖ್ಯಾ ಸ್ಫೋಟ ಮತ್ತು ವಿದ್ಯುತ್ ಬೇಡಿಕೆಯ ಆಧಿಕ್ಯ ಗಮನಿಸಿದರೆ ಈ ಪ್ರಮಾಣ ಏನೇನೂ ಅಲ್ಲ. ಇದರೊಂದಿಗೆ ಪ್ರಸರಣ ತೊಂದರೆ ಮತ್ತು ಕೆಲವೊಮ್ಮೆ ಸಂಭವಿಸುವ ತಾಂತ್ರಿಕ ಅಡಚಣೆಗಳು ಮತ್ತು ಅವುಗಳ ದುರಸ್ತಿಗೆ ಬೇಕಾಗುವ ವಿದ್ಯುತ್ ವೆಚ್ಚ ಮತ್ತಷ್ಟು ಆತಂಕವನ್ನುಂಟುಮಾಡಿವೆ.

 2012ರ ಜುಲೈ 30 ಮತ್ತು 31 ರಂದು ಉತ್ತರ ಭಾರತದ 22 ರಾಜ್ಯಗಳಲ್ಲಿ ವಿದ್ಯುತ್ ನಿಲುಗಡೆಯಾಗಿ ಸುಮಾರು 70 ಕೋಟಿಯಷ್ಟು ಜನರು ಇದರ ಭಾಧೆಗೊಳಗಾದರು. ಭಾರತದ ಪವರ್ ಗ್ರೀಡ್ ಗಳಲ್ಲಿ ತಲೆದೂರಿದ ತಾಂತ್ರಿಕ ಅಡಚಣೆಯಿಂದಾಗಿ ಈ ಭಾರೀ ವಿದ್ಯುತ್ ವ್ಯತ್ಯಯವಾಗಿತ್ತು. ಭಾರತದಲ್ಲಿ ಸರ್ಕಾರಿ ಸೇವೆಗೆ ಸಹಸ್ರಾರು ಎಂಜಿನಿಯರ್ ಗಳು ಸೇರ್ಪಡೆಗೊಳ್ಳುತ್ತಾರೆ. ಆದರೆ ಇವರ ತಾಂತ್ರಿಕ ಪ್ರತಿಭೆಯ ಪ್ರಯೋಜನ ಸಾರ್ವಜನಿಕರಿಗೆ ಲಭಿಸುವುದಿಲ್ಲ. ಏಕೆಂದರೆ ಈ ಇಂಜನಿಯರ್ ಗಳಿಂದ ಗುಮಾಸ್ತರ ಇಲ್ಲವೇ ಅಡಳಿತಾತ್ಮಕ ಸೇವೆ ಪಡೆಯುವ ಸರ್ಕಾರ ತಾಂತ್ರಿಕ ಕರ್ತವ್ಯದ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸುತ್ತದೆ. ಎಂಜಿನಿಯರ್ ಗಳಿಗೆ ತಾಂತ್ರಿಕ ಹೊಣೆಗಾರಿಕೆಗಳನ್ನು ವಹಿಸಿದಾಗ ಮಾತ್ರ ಅವರ ಕೌಶಲ್ಯ ವ್ರದ್ದಿಗೊಂಡು ದೇಶವಾಸಿಗಳಿಗೆ ಅದರ ಪೂರ್ಣ ಪ್ರಯೋಜನ ಲಭಿಸುತ್ತದೆ.
 ಇದಲ್ಲದೆ ವಿದ್ಯುತ್ ಕೊರತೆ ನೀಗಲು ಮತ್ತಷ್ಟು ಮಾರ್ಗೋಪಾಯಗಳಿವೆ.

 * ಭಾರತವು ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ಸಮರ್ಥವಾಗಿದೆ. ಆ ನಿಟ್ಟಿನಲ್ಲಿ ಗಮನ ಹರಿಸುವುದು ಅಗತ್ಯ.

 * ಭಾರತ ದೇಶವು ನೈಸರ್ಗಿಕ ಸಂಪನ್ಮೂಲವಾದ ಕಲ್ಲಿದ್ದಲನ್ನು ಬಳಸಿ ಶಾಖೋತ್ಪನ್ನ ವಿದ್ಯುತ್ ತಯಾರಿಸುತ್ತಿದೆ. ಆದರೆ ಮುಂದೆ ಕಲ್ಲಿದ್ದಲು ನಿಕ್ಷೇಪ ಬರಿದಾಗುವ ಸಾಧ್ಯತೆಯಿದೆ. ಇದರ ಬದಲಾಗಿ ಪ್ರಾಕ್ರತೀಕವಾಗಿ ಲಭಿಸುವ ಸೌರಶಕ್ತಿಯ ಸದ್ಬಳಕೆ ಮಾಡಿಕೊಂಡರೆ ಅಗತ್ಯವಿರುವ ಪ್ರಮಾಣದ ವಿದ್ಯುಚ್ಛಕ್ತಿ ಪಡೆಯಲು ಸಾಧ್ಯವಾಗುತ್ತದೆ.

* ಸೌರಶಕ್ತಿಯ ಉತ್ಪಾದನೆಯ ವೆಚ್ಚವೂ ಕಡಿಮೆ ಎಂಬ ಅಂಶ ಗಮನಾರ್ಹ. ಇದಲ್ಲದೆ ಸಕಲ ಪ್ರಾದೇಶಿಕ ವಿದ್ಯುಚ್ಛಕ್ತಿ ಜಾಲವನ್ನು ಬೆಸೆಯುವ ರಾಷ್ಟೀಯ ಗ್ರೀಡ್ ಸ್ಥಾಪನೆಗೆ ಸರ್ಕಾರ ಆದ್ಯ ಗಮನ ನೀಡಬೇಕು.

 * ಸಮುದ್ರದ ಅಲೆಗಳಿಂದಲೂ ವಿದ್ಯುತ್ ಉತ್ಪಾದನೆ ಸಾಧ್ಯ. ಭಾರತವು 7000km ನಷ್ಟು ಉದ್ದದ ಕರಾವಳಿ ತೀರ ಹೊಂದಿದೆ. ಇಂಥಾ ಸಮ್ರದ್ದ ಸಂಪನ್ಮೂಲದ ಸದ್ಬಳಕೆ ಸರ್ಕಾರದ ಪ್ರಥಮಾದ್ಯತೆ ಆಗಬೇಕಾಗಿದೆ.