"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 31 March 2015

☀"ರೊಸೆಟ್ಟಾ" ಶೋಧಕ ಉಪಗ್ರಹದ ಕುರಿತು ಪ್ರಮುಖ ಅಂಶಗಳು:  (Rosetta— 'Robotik Space Probe')

☀"ರೊಸೆಟ್ಟಾ" ಶೋಧಕ ಉಪಗ್ರಹದ ಕುರಿತು ಪ್ರಮುಖ ಅಂಶಗಳು:
(Rosetta— 'Robotik Space Probe')

━━━━━━━━━━━━━━━━━━━━━━━━━━━━━━━━━━━━━━━━━━━━━

♦.(General Science)
ಸಾಮಾನ್ಯ ವಿಜ್ಞಾನ


●.ರೊಸೆಟ್ಟಾ ಉಡಾವಣೆ ಆದದ್ದು ಯಾವಾಗ, ಯಾರಿಂದ?

✧.ರೊಸೆಟ್ಟಾ ‘ರೋಬೋಟಿಕ್ ಸ್ಪೇಸ್ ಪ್ರೋಬ್’ ಉಡಾವಣೆಯಾದದ್ದು ಮಾರ್ಚ್ 2, 2004ರಂದು.
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಅದನ್ನು ಉಡಾವಣೆ ಮಾಡಿತು. 67 ಪಿ/ಚುರ್ಯುಮೊವ್-ಗೆರಾಸಿಮೆಂಕೊ ಧೂಮಕೇತುವನ್ನು ಗುರಿಯಾಗಿಸಿಕೊಂಡು ಈ ಉಡಾವಣೆ ಮಾಡಲಾಯಿತು. 400 ಮೈಲಿಯಷ್ಟು ದೂರಕ್ಕೆ ರೋಬೋಟಿಕ್ ಸ್ಪೇಸ್ ಪ್ರೋಬ್ (ಬಾಹ್ಯಾಕಾಶ ಶೋಧಕ ರೋಬೊ) ಉಡಾವಣೆ ನಡೆದದ್ದು. ಆಗಸ್ಟ್ 2014ರಂದು ಅದು ಧೂಮಕೇತುವನ್ನು ತಲುಪಿತು. ಸೆಪ್ಟೆಂಬರ್ 10ರಂದು ಕಕ್ಷೆ ಸೇರಿತು.


●.ಈ ಉಡಾವಣೆಯ ಉದ್ದೇಶವೇನು?

✧.ರೊಸೆಟ್ಟಾ ಕಾರ್ಯಾಚರಣೆಯ ಉದ್ದೇಶ ಧೂಮಕೇತುಗಳ ಕುರಿತು ಮಾಹಿತಿ ಕಲೆಹಾಕುವುದು. ಅವುಗಳು ಹೇಗೆ ರೂಪುಗೊಳ್ಳುತ್ತವೆ ಎನ್ನುವುದನ್ನು ಅರಿಯುವ ಮೂಲಕ ಸೌರ ವ್ಯವಸ್ಥೆಯ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕುವುದು ಸಾಧ್ಯ ಎನ್ನುವುದು ವಿಜ್ಞಾನಿಗಳ ನಂಬಿಕೆ.


●.ಇದುವರೆಗಿನ ಸಾಧನೆಗಳು ಯಾವುವು?

✧.ನವೆಂಬರ್ 12ರಂದು ಧೂಮಕೇತುವಿನ ನ್ಯೂಕ್ಲಿಯಸ್ ಮೇಲೆ ಫಿಲೆ ಪ್ರೋಬ್ (ಶೋಧಕ) ತಲುಪುವಂತೆ ಮಾಡಿದ್ದು ‘ರೋಬೋಟಿಕ್ ಸ್ಪೇಸ್ ಪ್ರೋಬ್‌’ನ ದೊಡ್ಡ ಯಶಸ್ಸು. ಇಂಥದೊಂದು ಸಾಧನೆ ನಡೆದದ್ದು ಬಾಹ್ಯಾಕಾಶ ಇತಿಹಾಸದಲ್ಲಿ ಇದೇ ಮೊದಲು. ಕ್ಷುದ್ರಗ್ರಹ ಹಾಗೂ ಲ್ಯುಟೇಷಿಯಾದ ಚಿತ್ರಗಳನ್ನೂ ಅದು ತೆಗೆಯಿತು.


●.ಧೂಮಕೇತುವಿನ ನ್ಯೂಕ್ಲಿಯಸ್ ಮೇಲೆ ಫಿಲೆ ಪ್ರೋಬ್ ಇಳಿದ ಬಗೆ ಹೇಗೆ?

✧.ನಿರೀಕ್ಷಿತ ರೀತಿಯಲ್ಲಿ ಸಲೀಸಾಗಿ ಈ ಕಾರ್ಯ ನಡೆಯಲಿಲ್ಲ. ಧೂಮಕೇತುವಿನ ಗುರುತ್ವಾಕರ್ಷಣೆ ಶಕ್ತಿ ತುಂಬಾ ಕಡಿಮೆ. ಮೊದಲ ಬಾರಿಗೆ ಅದರ ಮೇಲೆ ಪ್ರೋಬ್ ಇಳಿದಾಗ ಎರಡು ಸಲ ಅದು ಪುಟಿಯಿತು. ಮೊದಲ ಸಲ ಪುಟಿದ ನಂತರ ಮತ್ತೆ ಆ ಸ್ಥಳ ತಲುಪಲು ಪ್ರೋಬ್‌ಗೆ ಎರಡು ತಾಸು ಬೇಕಾಯಿತು. ಪರ್ವತವೊಂದರ ನೆರಳಿನಲ್ಲಿ ಅದು ಕೊನೆಗೂ ಧೂಮಕೇತುವಿನ ನ್ಯೂಕ್ಲಿಯಸ್ ಮೇಲೆ ಕೂರುವಲ್ಲಿ ಯಶಸ್ವಿಯಾಯಿತು. ನೆರಳಿನಲ್ಲಿ ಅದು ಕಕ್ಷೆ ಸೇರಿದ್ದರಿಂದ ಸೋಲಾರ್ ಪ್ಯಾನೆಲ್‌ಗಳ ಮೇಲೆ ಹೆಚ್ಚು ಸೂರ್ಯನ ಶಾಖ ಬೀಳಲಿಲ್ಲ.


●.ಈಗ ಫಿಲೆ ಸ್ಥಿತಿ ಹೇಗಿದೆ?
✧.ಸೂರ್ಯನ ಬೆಳಕಿನಿಂದ ಅದರ ಬ್ಯಾಟರಿಗಳು ಸೂಕ್ತ ರೀತಿಯಲ್ಲಿ ಮರುಪೂರಣಗೊಳ್ಳದೇ ಇರುವುದರಿಂದ 57 ಗಂಟೆಗಳ ಕಾಲವಷ್ಟೆ ಅದು ಮಾಹಿತಿ ಕಲೆಹಾಕಿತು. ಮುಂದೆ ಸೂರ್ಯನ ಬೆಳಕು ಅದರ ಮೇಲೆ ಬಿದ್ದು, ಮತ್ತಷ್ಟು ಮಾಹಿತಿ ಹೆಕ್ಕುವುದು ಸಾಧ್ಯ ಎಂದು ವಿಜ್ಞಾನಿಗಳು ನಂಬಿದ್ದಾರೆ.

(ಕೃಪೆ: ಪ್ರಜಾವಾಣಿ) 

No comments:

Post a Comment