"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Friday, 13 March 2015

☀ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿದ್ದ ಭಾರತ ಸರ್ಕಾರದ ಯೋಜನೆಗಳು:  (The Indian Government plans, implemented in the state of Karnataka)

☀ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿದ್ದ ಭಾರತ ಸರ್ಕಾರದ ಯೋಜನೆಗಳು:
(The Indian Government plans, implemented in the state of Karnataka)


━━━━━━━━━━━━━━━━━━━━━━━━━━━━━━━━━━━━━━━━━━━━━



●.ಸಂಜೀವಿನಿ -( ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ನಿಯೋಗ) :

✧. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಮಂತ್ರಾಲಯವು ಎಸ್ ಜಿಎಸ್ ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ  –ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್ ಆರ್ ಎಲ್ ಎಂ)2010-11ರಿಂದ ಜಾರಿಗೊಳಿಸಿದೆ.

✧. ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು “ಸಂಜೀವಿನಿ’’ ಹೆಸರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಮೂಲಕ ಹಂತ ಹಂತವಾಗಿ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ.


●.ಎನ್ ಆರ್ ಡಿ ಡಬ್ಲ್ಯೂ ಪಿ - (ಗ್ರಾ ನೀ  ಸ— ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ನೀರು ಸರಬರಾಜು ಕಾರ್ಯಕ್ರಮ) :

✧.ರಾಜ್ಯ 59,753 ಗ್ರಾಮೀಣ ಜನವಸತಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಮಹತ್ವನ್ನು ನೀಡಿದೆ.

✧.ಪ್ರತಿ ದಿನ ಪ್ರತಿ ವ್ಯಕ್ತಿಗೆ ತಲಾ 55 ಲೀಟರ್ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಸರ್ಕಾರ ತಳೆದಿದೆ. ಗ್ರಾಮೀಣ ಪ್ರದೇಶಗಳಿಗೆ ಕೆಳಕಂಡ ಕಾರ್ಯಕ್ರಮಗಳ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

 ✧.(ಎನ್.ಆರ್.ಡಿ.ಡಬ್ಲ್ಯೂ.ಪಿ ಮಾರ್ಗಸೂಚಿ -2013 ರಂತೆ)
  1. ಕೊಳವೆ ನೀರು ಸರಬರಾಜು ಯೋಜನೆ
  2. ಕಿರು ನೀರು ಸರಬರಾಜು ಯೋಜನೆ
  3. ಕೈಪಂಪು ಕೊಳವೆ ಬಾವಿ
  4. ಬಹುಗ್ರಾಮ ಪೂರೈಕೆ ಯೋಜನೆಗಳು


●.ಸ್ವಚ್ಛ ಭಾರತ ಮಿಷನ್ (ನಿರ್ಮಲ ಭಾರತ ಅಭಿಯಾನ) :

✧. ಗ್ರಾಮೀಣ ಪ್ರದೇಶಗಳಲ್ಲಿನ ಕೊಳಕು, ಗಲೀಜು, ವಾಸನೆ ಮುಂತಾದ ಅನೈರ್ಮಲ್ಯಗಳನ್ನು ತೊಡೆದುಹಾಕಿ,  ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮವೇ “ನಿರ್ಮಲ ಭಾರತ್ ಅಭಿಯಾನ’’.

✧. ಇದು  ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 2005 ರ  ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನದಿಂದ ಸಂಪೂರ್ಣ ಸ್ವಚ್ಛತಾ ಆಂದೋಲನ ಎಂಬ ಹೆಸರಿನಲ್ಲಿ  ಜಾರಿಯಲ್ಲಿದ್ದು, ದಿನಾಂಕ:01.04.2012 ರಿಂದ ನಿರ್ಮಲ ಭಾರತ್ ಅಭಿಯಾನ ಎಂದು ಪುನರ್ ನಾಮಕರಣ ಮಾಡಿ  ಜಾರಿಗೊಳಿಸಿದೆ.

✧. ಇದು ನಿರ್ದಿಷ್ಟ ಕಾಲಾವಧಿಯ ಯೋಜನೆಯಾಗಿದ್ದು, 2022 ರ ಅಂತ್ಯದ ವೇಳೆಗೆ ಶೇ.100 ರಷ್ಟು ಪ್ರಗತಿಯನ್ನು ಸಾಧಿಸುವ ಗುರಿ ಹೊಂದಲಾಗಿದೆ.          


●.(ಬಿ ಆರ್ ಜಿ ಎಫ್)  ಹಿಂದುಳಿದ ಪ್ರದೇಶಗಳ ಅಭಿವೃಧ್ದಿ ಅನುದಾನ :

✧. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಭಾರತ ಸರ್ಕಾರವು ಹಿಂದುಳಿದ ಪ್ರದೇಶಗಳ ಅನುದಾನ  ನಿಧಿಯನ್ನು(BRGF) ಸ್ಥಾಪಿಸಿದ್ದು, ಈ ಯೋಜನೆಯ ಉದ್ಧೇಶವು, ಗುರುತಿಸಲ್ಪಟ್ಟಿರುವ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣಕಾಸಿನ ನೆರವನ್ನು ನೀಡುವುದಾಗಿರುತ್ತದೆ.

✧.ಮೂಲಭೂತವಾಗಿ ಈ ಅನುದಾನವನ್ನು ಈ  ಕೆಳಕಂಡ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ.
 1. ಸ್ಥಳೀಯ ಮೂಲಭೂತ ಸೌಲಭ್ಯ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳ ನಡುವಿನ ಅಂತರವನ್ನು ತುಂಬುವುದು.
 2. ಪಂಚಾಯತ್ ರಾಜ್ ಸಂಸ್ಥೆಗಳು ಈ ಕಾರ್ಯವನ್ನು ನಿರ್ವಹಿಸಲು ಕ್ರಿಯಾತ್ಮಕವಾಗಿ ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸುವುದು ಹಾಗೂ ಅದಕ್ಕೆ ಪೂರಕವಾಗಿ ಅನುಷ್ಠಾನ ಮತ್ತು ನಿರ್ವಹಣೆಯ ಬಗ್ಗೆ ಪರಿಣತಿಯನ್ನು ನೀಡುವುದು.

✧. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕದಲ್ಲಿ ಗುಲ್ಬರ್ಗಾ, ಬೀದರ್, ಚಿತ್ರದುರ್ಗ, ದಾವಣಗೆರೆ ಮತ್ತು ರಾಯಚೂರು ಜಿಲ್ಲೆಗಳನ್ನು ಗುರುತಿಸಲಾಗಿದೆ.    


●.ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಅಭಿಯಾನ   :

✧. ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ಹಾಲಿ ರಾಷ್ಟ್ರದಾದ್ಯಂತ ಅನುಷ್ಠಾನಗೊಳಿಸುತ್ತಿರುವ  e-PANCHAYAT, ಪಂಚಾಯತ್ ಎಂಪರ್ ಮೆಂಟ್ ಅಂಡ್ ಅಕೌಂಟಬಿಲಿಟಿ ಇನ್ಸೆಂಟೀವ ಸ್ಕೀಮ್  (PEAIS), ಪಂಚಾಯತ್ ಮಹಿಳಾ ಏವಂ ಯುವಶಕ್ತಿ ಅಭಿಯಾನ(PMEYSA) ಹಾಗೂ ಬ್ಯಾಕ್ ವರ್ಡ್ ರೀಜನ್ಸ್ ಗ್ರಾಂಟ್ ಫಂಡ್ (BRGF ) ಯೋಜನೆಗಳಲ್ಲಿ ಅಳವಡಿಸಿಕೊಳ್ಳಲಾಗಿದ್ದ ಸಾಮರ್ಥ್ಯಾಭಿವೃದ್ಧಿ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಸಮ್ಮಿಳನಗೊಳಿಸಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹಾಗೂ ಅದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ  ಸಾಮರ್ಥ್ಯಾಭಿವೃದ್ಧಿಯನ್ನು ಬಲಪಡಿಸುವ ಉದ್ದೇಶದಿಂದ 2012-13ನೇ ಸಾಲಿನಿಂದ ನೂತನ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದೆ.

✧. ಸದರಿ ಯೋಜನೆಯನ್ನು “ರಾಜೀವ್ ಗಾಂಧಿ ಪಂಚಾಯತ್  ಸಶಕ್ತೀಕರಣ ಅಭಿಯಾನ’’ (RGPSA) ಎಂದು ಕರೆಯಲಾಗಿದೆ.

✧. ಈ ಯೋಜನೆಯನ್ನು 12ನೇ ಪಂಚವಾರ್ಷಿಕ  ಯೋಜನಾವಧಿಯಲ್ಲಿ ಅನುಷ್ಠಾನಗೊಳಿಸಲಾಗುವುದು.  
         

●.ಪಶ್ಚಿಮ ಘಟ್ಟ ಅಭಿವೃದ್ಧಿ ಕಾರ್ಯಕ್ರಮ (ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆ):

✧. ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯ ಅನುಷ್ಠಾನವನ್ನು ನಿರ್ದೇಶಕರು, ಸುವರ್ಣ ಗ್ರಾಮೋದಯ ರವರ ಉಸ್ತುವಾರಿಯಲ್ಲಿ ನಿರ್ವಹಿಸಲಾಗುತ್ತಿದೆ.

✧. ಯೋಜನೆಯ ದೂರದೃಷ್ಟಿ, ನಿರ್ದಿಷ್ಟಪಡಿಸಿದ ಗುರಿ ಮತ್ತು ಉದ್ದೇಶಗಳು :
 1. ಗುಡ್ಡಗಾಡು ಪ್ರದೇಶಗಳು ಅಭಿವೃದ್ಧಿ
 2. ಅರಣ್ಯ ಸಂರಕ್ಷಣೆ ಮತ್ತು ಪರಿಸರ ನಿರ್ವಹಣೆ
 3. ಗುಡ್ಡಗಾಡು ಪ್ರದೇಶಗಳಲ್ಲಿನ ಕೃಷಿಕರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು
 4. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಚಟುವಟಿಕೆಗಳನ್ನು ಒದಗಿಸುವುದು.
 5. ಈ ಪ್ರದೇಶಗಳಲ್ಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು.
 6. ಗುಡ್ಡಗಾಡು ಪ್ರದೇಶಗಳಲ್ಲಿ ಎರಡನೇ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟು ಮತ್ತು ಕಾಲುಸಂಕಗಳ ನಿರ್ಮಾಣವನ್ನು ಕೈಗೊಳ್ಳುವುದು.


●.ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆ (ಜೈವಿಕ ಇಂಧನ) :

✧. ರಾಜ್ಯದಲ್ಲಿ 2010-11ನೇ ಸಾಲಿನಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರಾಜ್ಯದಲ್ಲಿ ಜೈವಿಕ ಇಂಧನ ಕುರಿತು ಯೋಜನೆ ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿದೆ.

✧. ಜೈವಿಕ ಇಂಧನ ಅಭಿವೃದ್ಧಿಗಾಗಿ ಮಂಡಳಿ ಕೆಳಗಿನ ಧ್ಯೇಯೋದ್ದೇಶ ಹೊಂದಿದೆ.
 1. ಜೈವಿಕ ಇಂಧನ ಮೂಲಗಳ ಅಭಿವೃದ್ಧಿ ಹಾಗೂ ನಿರಂತರ ಪೂರೈಕೆಗೆ ಅಗತ್ಯವಿರುವ ಪರಿಸರ ನಿರ್ಮಾಣ ಮಾಡುವುದು.
 2. ರಾಜ್ಯ ಜೈವಿಕ ಇಂಧನ ನೀತಿಯ ಸಮರ್ಪಕ ಅನುಷ್ಠಾನ.
 3. ವಿವಿಧ ಪ್ರಾಂತ್ಯಗಳಿಗೆ ಸೂಕ್ತವಿರುವ ಜೈವಿಕ ಇಂಧನ ಬೆಳೆಗಳನ್ನು ಗುರುತಿಸಿ, ಭೂಮಿ ಪತ್ತೆ ಹಚ್ಚಿ ನೆಡುತೋಪುನ್ನು ಬೆಳೆಸುವುದು.
 4. ಜೈವಿಕ ಇಂಧನಕ್ಕೆ ಅಗತ್ಯವಿರುವ ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು.


●.ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ (ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ) :

✧.ಗ್ರಾಮೀಣ ರಸ್ತೆ ಸಂಪರ್ಕವು ಗ್ರಾಮೀಣ ಕ್ಷೇತ್ರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ ಅಂಶವೆಂಬುದು ಬಹಳ ಹಿಂದಿನಿಂದಲೂ ಗುರುತಿಸಲ್ಪಟ್ಟಿದ್ದರೂ ಸಹ ಅನೇಕ ವರ್ಷಗಳಿಂದ ಸಮರ್ಪಕವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರಾಶಸ್ತ್ಯ ದೊರಕಿಸಲು ಸಾಧ್ಯವಾಗಿರುವುದಿಲ್ಲ.

✧.ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ತುರ್ತಾಗಿ ಗಣನೀಯ ಪ್ರಮಾಣದ ಬಂಡವಾಳ ಹೂಡಬೇಕಾದ ಅಗತ್ಯತೆ ಇರುತ್ತದೆ.

✧. ಪ್ರಸ್ತುತ ಪ್ರಮುಖವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ/ನಿರ್ವಹಣೆ ಮಾಡಲಾಗುತ್ತಿದೆ.


(ಕೃಪೆ : ಕರ್ನಾಟಕ ಸರ್ಕಾರಿ ವೆಬ್ ಸೈಟ್ ಗಳು) 

No comments:

Post a Comment