"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 11 March 2015

☀.ಕರ್ನಾಟಕ ರಾಜ್ಯದ ಜನಗಣತಿ-2011:  ಸೂಚನೆ:— (ಐಎಎಸ್ / ಕೆಎಎಸ್ ಪರೀಕ್ಷಾ ದೃಷ್ಟಿಯಿಂದ ತಂಬಾ ಉಪಯುಕ್ತ ಮಾಹಿತಿ) Karnataka State Census -2011:  Notice:— (very much useful, Important information for IAS / KAS Exam Preparation) 

☀.ಕರ್ನಾಟಕ ರಾಜ್ಯದ ಜನಗಣತಿ-2011:
ಸೂಚನೆ:— (ಐಎಎಸ್ / ಕೆಎಎಸ್ ಪರೀಕ್ಷಾ ದೃಷ್ಟಿಯಿಂದ ತಂಬಾ ಉಪಯುಕ್ತ ಮಾಹಿತಿ)
Karnataka State Census -2011:
Notice:— (very much useful, Important information for IAS / KAS Exam Preparation)


━━━━━━━━━━━━━━━━━━━━━━━━━━━━━━━━━━━━━━━━━━━━━


♦. ಕರ್ನಾಟಕ ರಾಜ್ಯದ ಜನಗಣತಿ 2011
( Karnataka State Census -2011):

✧.ಜನಸಂಖ್ಯೆ ಹೆಚ್ಚಳ; ಲಿಂಗಾನುಪಾತ ಸುಧಾರಣೆ; ಚೇತರಿಸಿದ ಸಾಕ್ಷರತೆ


♦. ರಾಜ್ಯ ಜನಗಣತಿ ನಿರ್ದೇಶನಾಲಯದ ಪ್ರಾಥಮಿಕ ವರದಿ ಪ್ರಕಾರ :

✧.2011ರ ಜನಗಣತಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಹೆಚ್ಚಾಗಿದ್ದು, ಕಳೆದ ಒಂದು ದಶಕದಲ್ಲಿ ಜನಸಂಖ್ಯೆ ಬೆಳವಣಿಗೆ ಪ್ರಮಾಣ ತೀವ್ರ ಕುಸಿತಗೊಂಡಿದೆ.

✧.ಅದೇ ರೀತಿ ಲಿಂಗಾ ನುಪಾತ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿದ್ದು, ಸಾಕ್ಷರತೆ ಗಣನೀಯ ಚೇತರಿಕೆ ಕಂಡಿದ್ದು ರಾಜ್ಯ ಜನಗಣತಿ ನಿರ್ದೇಶನಾಲಯ ಬಿಡುಗಡೆಗೊಳಿಸಿದ ಪ್ರಾಥಮಿಕವರದಿ ಸ್ಪಷ್ಟಪಡಿಸಿದೆ.


●. ರಾಜ್ಯ ಜನಗಣತಿ ಕಾರ್ಯದ ನೋಡಲ್ ಅಧಿಕಾರಿ ಕೆ.ಎಸ್. ಪ್ರಭಾಕರ್ ಹಾಗೂ ರಾಜ್ಯ ಜನಗಣತಿ ನಿರ್ದೇಶಕ ಟಿ.ಕೆ. ಅನಿಲ್‌ಕುಮಾರ್ (ಏಪ್ರಿಲ್ -ಬುಧವಾರ-2011) ವಿಕಾಸ ಸೌಧದಲ್ಲಿ ಪ್ರಾಥಮಿಕ ವರದಿ ಬಿಡುಗಡೆ ಗೊಳಿಸಿದರು, ಈ ವರದಿಯಲ್ಲಿ ಒಟ್ಟು ಜನ ಸಂಖ್ಯೆ, ಲಿಂಗಾನುಪಾತ, ಜನಸಾಂದ್ರತೆ ಮತ್ತು ಸಾಕ್ಷರತೆ ಪ್ರಮಾಣಕ್ಕೆ ಸಂಬಂಧ ಪಟ್ಟ ಅಂಕಿ-ಅಂಶಗಳಿವೆ.


●. 2011ರಲ್ಲಿ ರಾಜ್ಯದ ಒಟ್ಟು ಜನಸಂಖ್ಯೆ 6.11 ಕೋಟಿಗೆ ತಲುಪಿದ್ದು, 2001ರ 5.28ಕೋಟಿಗೆ ಹೋಲಿಸಿದರೆ ಒಂದು ದಶಕದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರೂ, ಜನಸಂಖ್ಯೆ ಏರಿಕೆ ದರದಲ್ಲಿ ಕುಸಿತ ಕಂಡಿದೆ.

✧. 1991-01ರಲ್ಲಿ ಜನಸಂಖ್ಯೆ ಬೆಳವಣಿಗೆ ದರ ಶೇ.17.51ರಷ್ಟಿದ್ದರೆ, 2001-2011ರಲ್ಲಿ ಆ ಪ್ರಮಾಣ ಶೇ. 15.7ಕ್ಕೆ ಕುಸಿದಿದೆ.

✧. ಪುರುಷರ ಬೆಳವಣಿಗೆ ಪ್ರಮಾಣ 15.46 ಇದ್ದರೆ, ಮಹಿಳೆಯರ ಪ್ರಮಾಣ ಶೇ.15.88ಕ್ಕೆ ಏರಿಕೆಯಾಗಿದೆ.

✧. ಕಳೆದ ಒಂದು ದಶಕದಲ್ಲಿ 8,280,142 ಜನಸಂಖ್ಯೆ ಹೆಚ್ಚಾಗಿದ್ದು, 1991-01ರಲ್ಲಿ ಇದು 7,873,361 ಆಗಿತ್ತು.


♦. ಜನಸಂಖ್ಯಾ ಪ್ರಮಾ ಣ :

✧. ಒಟ್ಟು ಜನಸಂಖ್ಯೆ ಪೈಕಿ ಶೇ.15.69ರಷ್ಟು ಜನಸಂಖ್ಯೆ ಹೊಂದಿರುವ ಬೆಂಗಳೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಬೆಳಗಾವಿ ಶೇ.7.82ರಂತೆ ದ್ವಿತೀಯ ಸ್ಥಾನದಲ್ಲಿದೆ.

✧. ನಂತರದ ಸ್ಥಾನದಲಿ ಮೈಸೂರು ಜಿಲ್ಲೆ ಶೇ. 4.90, ತುಮಕೂರು ಶೇ. 4.39, ಗುಲ್ಬರ್ಗಾ ಶೇ. 4.20 ಹಾಗೂ ಬಳ್ಳಾರಿ ಜಿಲ್ಲೆ ಶೇ.4.14ರಂತೆ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೊದಲ ಐದು ಜಿಲ್ಲೆಗಳಾಗಿವೆ.

✧. ಕೊಡುಗು ಕೇವಲ ಶೇ.0.91 ಜನಸಂಖ್ಯೆ ಹೊಂದಿ ಕೊನೆ ಸ್ಥಾನದಲ್ಲಿದ್ದರೆ ಶೇ.1.61ರಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಂತರದ ಸ್ಥಾನದಲ್ಲಿದೆ.

✧. ಕೊಡುಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊತರು ಪಡಿಸಿ ರಾಜ್ಯದ ಉಳಿದ ಎಲ್ಲ ಜಿಲ್ಲೆಗಳು 10 ಲಕ್ಷ ಮೇಲ್ಪಟ್ಟ ಜನಸಂಖ್ಯೆ ಹೊಂದಿದೆ.

✧. ದಕ್ಷಿಣ ಕನ್ನಡ-ಶೇ.88.62, ಬೆಂಗಳೂರು- ಶೇ.88.48 ಹಾಗೂ ಉಡುಪಿ ಜಿಲ್ಲೆ ಶೇ.86.29 ಸಾಕ್ಷರತೆ ಸಾಧಿಸಿ ಮೊದಲ ಮೂರು ಅಲಂಕರಿಸಿದ್ದರೆ, ಯಾದಗಿರಿ- ಶೆ.52.36, ರಾಯಚೂರು-ಶೇ.60.46 ಮತ್ತು ಚಾಮರಾಜನಗರ ಜಿಲ್ಲೆ ಶೇ.61.12 ರಂತೆ ಕೊನೆಯ 3 ಸ್ಥಾನ ಪಡೆದಿವೆ.


●. ಜನಸಂಖ್ಯೆ ಬೆಳವಣಿಗೆ, ಬೆಳವಣಿಗೆ ದರ:

✧.ರಾಜ್ಯದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಕುಸಿದಿದ್ದು, 2001ರಲ್ಲಿ ಶೇ.17.51ರಷ್ಟು ಇದ್ದದ್ದು, 2011ರಲ್ಲಿ ಶೇ.15.67ಗೆ ಕುಸಿದಿದೆ.

✧. ಒಟ್ಟು ಮೂವತ್ತು ಜಿಲ್ಲೆಗಳ ಪೈಕಿ 7 ಜಿಲ್ಲೆಗಳು ರಾಜ್ಯದ ಒಟ್ಟು ಜನಸಂಖ್ಯೆ ಬೆಳವಣಿಗೆ ದರ (ಶೇ.15.67)ಗಿಂತ ಹೆಚ್ಚಿನ ಬೆಳವಣಿಗೆ ದರ ದಾಖಲಿಸಿದರೆ ಉಳಿದ 23 ಜಿಲ್ಲೆಗಳು ಕಡಿಮೆ ಬೆಳವ ಣಿಗೆ ದರ ಕಂಡಿವೆ.

✧. ಬೆಂಗಳೂರು, ಬಳ್ಳಾರಿ, ಯಾದಗಿರಿ ಹಾಗೂ ಬಿಜಾಪುರ ಜಿಲ್ಲೆ 1991-01ರ ಬೆಳವಣಿಗೆ ದರಕ್ಕಿಂತ ಹೆಚ್ಚಳ ದಾಖಲಿಸಿದರೆ, ಬೆಂಗಳೂರು ಜಿಲ್ಲೆ ಶೇ.11.59 ರಷ್ಟು ಭಾರಿ ಬೆಳ ವಣಿಗೆ ದರ ಕಂಡಿದೆ.

✧.ಚಿಕ್ಕಮಗಳೂರು ಜಿಲ್ಲೆ ಶೇ.-0.28 ರಂತೆ ಅತ್ಯಂತ ಕಡಿಮೆ ಬೆಳವಣಿಗೆ ದರ ಕಂಡಿದೆ.


●. ಅಧಿಕ ಬೆಳವಣಿಗೆ ದರ ಹೊಂದಿರುವ ಮೊದಲ 3 ಜಿಲ್ಲೆಗಳು :
✧. ಬೆಂಗಳೂರು ಶೇ. 46.68,
✧. ಬಳ್ಳಾರಿ ಶೇ.24.92 ಹಾಗೂ
✧. ಯಾದಗಿರಿ ಶೇ.22.67ರಷ್ಟು .


●. ಅತ್ಯಂತ ಕಡಿಮೆ ಬೆಳವಣಿಗೆ ದರ ಹೊಂದಿರುವ ಕೊನೆಯ 3 ಜಿಲ್ಲೆಗಳು :
✧. ಚಿಕ್ಕಮಗಳೂರು ಶೇ.-028,
✧. ಕೊಡುಗು ಶೇ.1.13 ಹಾಗೂ
✧. ಮಂಡ್ಯ ಶೇ.2.55 ರಂತೆ .


♦. ಮಕ್ಕಳ ಸಂಖ್ಯೆ:
✧. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 0ರಿಂದ 6 ವರ್ಷದ ಮಕ್ಕಳ ಜನಸಂಖ್ಯೆ 68,55,801 ಲಕ್ಷ ಇದೆ.

✧. ಅದರಲ್ಲಿ 35,27,844 ಗಂಡು ಮಕ್ಕಳಿದ್ದರೆ, 33,27,957 ಹೆಣ್ಣು ಮಕ್ಕಳಿದ್ದಾರೆ.

✧. ಸರಾಸರಿ ಲಿಂಗಾನುಪಾತ 2001ರಲ್ಲಿ ಶೇ.13.59 ಇದ್ದಿದ್ದು 2011ರಲ್ಲಿ ಶೇ.11.21ಕ್ಕೆ ಕ್ಷೀಣಿಸಿದೆ.

✧. ಅದೇ ರೀತಿ ಪ್ರಸಕ್ತ ದಶಕದಲ್ಲಿ 0-6 ಮಕ್ಕಳ ಜನಸಂಖ್ಯೆಯ ಒಟ್ಟು ಬೆಳವಣಿಗೆಯಲ್ಲಿ ಶೇ 4.54 ಕುಸಿತ ಕಂಡಿದೆ.

✧. ವಿಶೇಷ ವಾಗಿ ಶೇ.4.67ರಂತೆ ಹೆಣ್ಣು ಮಕ್ಕಳ ಜನಸಂಖ್ಯೆ ಕಡಿಮೆಯಾಗಿದೆ.

✧. ಯಾದಗಿರಿ ಜಿಲ್ಲೆ ಅತಿ ಹೆಚ್ಚು ಶೇ.15.83 ಅನುಪಾತ ಹೊಂದಿದೆ,

✧. ಉಡುಪಿ ಜಿಲ್ಲೆ ಶೇ.8.54ರಂತೆ ಕಡಿಮೆ ಅನುಪಾತ ಹೊಂದಿದೆ.


●. ಹೆಚ್ಚು ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಮೊದಲ 3 ಜಿಲ್ಲೆಗಳು :
✧. ಯಾದಗಿರಿ ಶೇ. 15.83,
✧. ರಾಯಚೂರು ಶೇ.14.17 ಹಾಗೂ
✧. ಕೊಪ್ಪಳ ಶೇ.13.96.

●.ಕಡಿಮೆ ಮಕ್ಕಳ ಜನಸಂಖ್ಯೆ ಅನುಪಾತ ಹೊಂದಿದ ಕೊನೆಯ 3 ಜಿಲ್ಲೆಗಳು :
✧. ಉಡುಪಿ ಶೇ.8.54,
✧. ಹಾಸನ ಶೇ.8.76 ಮತ್ತು
✧. ಚಿಕ್ಕಮಗಳೂರು ಶೇ.8.86.


♦. ಜನ ಸಾಂದ್ರತೆ:

✧. ರಾಜ್ಯದಲ್ಲಿ ಜನ ಸಾಂದ್ರತೆ ಪ್ರಮಾಣ ಸಹ ಹೆಚ್ಚಾಗಿದ್ದು, 2001ರಲ್ಲಿ ಪ್ರತಿ ಚದುರ ಕಿ.ಮೀ. ನಲ್ಲಿ 276 ಜನ ವಾಸ ಮಾಡುತ್ತಿದ್ದರೆ, 2011ರಲ್ಲಿ ಈ ಸಂಖ್ಯೆ 319ಕ್ಕೆ ಏರಿದೆ.

✧. ಬೆಂಗಳೂರಿನಲ್ಲಿ ಪ್ರತಿ ಚ.ಕಿ.ಮಿ.ನಲ್ಲಿ ಅತಿ ಹೆಚ್ಚು 4,378 ಜನ ವಾಸ ಮಾಡುತ್ತಿರುವರು.

✧. ದಕ್ಷಿಣ ಕನ್ನಡ-457 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 441 ಜನ ವಾಸಿಸುತ್ತಿದ್ದಾರೆ.

✧.  ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿ ಚ.ಕಿ.ಮಿ.ನಲ್ಲಿ 158,

✧. ಉತ್ತರ ಕನ್ನಡದಲ್ಲಿ 140 ಹಾಗೂ

✧. ಕೊಡುಗು ಜಿಲ್ಲೆಯಲ್ಲಿ 135 ರಂತೆ ಕಡಿಮೆ ಜನ ವಾಸ ಮಾಡುತ್ತಿದ್ದಾರೆ.


♦. ಲಿಂಗಾನುಪಾತ ಪ್ರತಿ ಸಾವಿರ ಪುರುಷರಿಗೆ ಸರಾಸರಿ 968 ಮಹಿಳೆಯರು.

●. 2011ರ ಜನಗಣತಿ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ 3,10,57,742 ಪುರುಷರಿದ್ದು, 3.00.72,962 ಮಹಿಳೆಯರಿದ್ದಾರೆ.

✧. ಲಿಂಗಾನುಪಾತ ಪುರುಷ ಶೇ. 50.81 ಮತ್ತು ಮಹಿಳೆ ಶೇ. 49.19ರಷ್ಟಿದೆ.

✧. ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಸಾವಿರ ಪುರುಷರಿಗೆ 968 ಮಹಿಳೆಯರಿದ್ದಾರೆ. 965 ಇದ್ದ ಲಿಂಗಾನುಪಾತ ಪ್ರಸಕ್ತ ದಶಕದಲ್ಲಿ 968ರಂತೆ ಕೊಂಚ ಏರಿಕೆಯಾಗಿದೆ.

✧. ಸಾವಿರ ಪುರುಷರಿಗೆ 908 ಮಹಿಳೆಯರು ಹೊಂದಿರುವ ಬೆಂಗಳೂರು ಜಿಲ್ಲೆ ಕಡಿಮೆ ಲಿಂಗಾನುಪಾತ ಹೊಂದಿದೆ.

✧. ಕೊಡುಗು (+23) ಚಿಕ್ಕಮಗಳೂರು (+21) ಚಾಮರಾಜನಗರ, ಮೈಸೂರು ಹಾಗೂ ಧಾರವಾಡ ತಲಾ (+18) ಮತ್ತು ಶಿವಮೊಗ್ಗ (+17)ರಂತೆ ಸಂವೇದ್ಯ ಏರಿಕೆ ಕಂಡರೆ, ಉಡುಪಿ (-37) ದಕ್ಷಿಣ ಕನ್ನಡ (-4) ಮತ್ತು ಕೋಲಾರ ಜಿಲ್ಲೆ (-1)ರಂತೆ ಲಿಂಗಾನು ಪಾತದಲ್ಲಿ ತೀವ್ರ ಕುಸಿತ ಕಂಡಿವೆ.


●. ಹೆಚ್ಚು ಲಿಂಗಾನುಪಾತ ಹೊಂದಿದ ಮೊದಲ ಮೂರು ಜಿಲ್ಲೆಗಳು :
— ಪ್ರತಿ ಸಾವಿರ ಪುರುಷರಿಗೆ ಮಹಿಳೆಯರು
✧. ಉಡುಪಿ-1093,
✧. ಕೊಡುಗು-1019,
✧. ದಕ್ಷಿಣ ಕನ್ನಡ ಜಿಲ್ಲೆ-1018.

●. ಕಡಿಮೆ ಲಿಂಗಾನುಪಾತ ಹೊಂದಿದ ಮೊದಲ ಮೂರು ಜಿಲ್ಲೆಗಳು :
— ಪ್ರತಿ ಸಾವಿರ ಪುರುಷರಿಗೆ ಮಹಿಳೆಯರು
✧. ಬೆಂಗಳೂರು-908,
✧. ಬೆಂಗಳೂರು ಗ್ರಾಮಾಂತರ-845.
✧. ಹಾವೇರಿ ಜಿಲ್ಲೆಯಲ್ಲಿ 951.


●. 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಲಿಂಗಾನುಪಾತ ಸಹ ಕುಸಿದಿದ್ದು,
 ಪ್ರತಿ ಸಾವಿರ ಗಂಡು ಮಕ್ಕಳಿಗೆ ಪ್ರತಿಯಾಗಿ 943 ಹೆಣ್ಣು ಮಕ್ಕಳಿದ್ದಾರೆ.

●. 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಹೆಚ್ಚು ಲಿಂಗಾನುಪಾತ ಹೊಂದಿದ ಮೊದಲ ಮೂರು ಜಿಲ್ಲೆಗಳು :
✧. ಕೊಡುಗು- 977,
✧. ಹಾಸನ-964,
✧. ಚಿಕ್ಕಮಗಳೂರು ಜಿಲ್ಲೆ-963.

●. 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಕಡಿಮೆ ಲಿಂಗಾನುಪಾತ ಹೊಂದಿದ ಕೊನೆಯ ಮೂರು ಜಿಲ್ಲೆಗಳು :
✧. ಬಾಗಲಕೋಟೆ-929,
✧. ಬಿಜಾಪುರ-930,
✧. ದಾವಣಗೆರೆ ಜಿಲ್ಲೆ-931.



♦. ಸಾಕ್ಷರತೆ ಪ್ರಮಾಣ ಶೇ.75.60ಕ್ಕೆ ಏರಿಕೆ:

✧. 2011ರ ಜನಗಣತಿ ಪ್ರಾಥಮಿಕ ವರದಿ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ 4,10,29,323 ಮಂದಿ ಅಕ್ಷರಸ್ಥರಿದ್ದು ಅದರಲ್ಲಿ 2,28,08,468 ಪುರುಷರು ಮತ್ತು 1,82,20,855 ಮಹಿಳೆಯರು ಅಕ್ಷರಸ್ಥರಾಗಿದ್ದಾರೆ.

✧.2001ರಲ್ಲಿದ್ದ ಶೇ.66.64 ರಷ್ಟರ ಸಾಕ್ಷರತೆ ಪ್ರಮಾಣ 2011ರಲ್ಲಿ ಶೇ.75.60ಕ್ಕೆ ಏರಿಕೆಯಾಗಿದೆ.

✧. 2001 ರಲ್ಲಿ ಶೇ.76.10ರಷ್ಟಿದ್ದ ಪುರಷ ಸಾಕ್ಷರತೆ ಪ್ರಮಾಣ 2011ಕ್ಕೆ ಶೇ.82.85ಕ್ಕೆ ಏರಿದೆ.

✧. ಶೇ.56.87ರಷ್ಟಿದ್ದ ಮಹಿಳಾ ಸಾಕ್ಷರತೆ ಪ್ರಮಾಣ ಶೇ.68.13ರಷ್ಟು ಹೆಚ್ಚಾಗಿದೆ.

✧. 12 ಜಿಲ್ಲೆಗಳು ರಾಜ್ಯದ ಒಟ್ಟು ಸಾಕ್ಷರತೆ ಪ್ರಮಾಣಕ್ಕಿಂತ ಅಧಿಕ ಸರಾಸರಿ ದಾಖಲಿವೆ.

 ✧. ಶೇ.88.62ರಷ್ಟು ಸಾಕ್ಷರತೆ ಪ್ರಮಾಣ ಹೊಂದುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.

✧. ಶೇ.52.36 ರಷ್ಟು ಸಾಕ್ಷರತೆ ಹೊಂದಿರುವ ನೂತನ ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ.

✧. ಯಾದಗಿರಿ ಮತ್ತು ರಾಯಚೂರು ಜಿಲ್ಲೆ ಯಲ್ಲಿ ಮಹಿಳೆಯರಲ್ಲಿ ಅಕ್ಷರಸ್ಥರಿಗಿಂತ ಅನಕ್ಷರಸ್ಥರ ಸಂಖ್ಯೆ ಹೆಚ್ಚಾಗಿದೆ.

✧. 8 ಜಿಲ್ಲೆಗಳಲ್ಲಿ ಶೇ.60 ರಿಂದ ಶೇ.70ರಷ್ಟು ಮಹಿಳಾ ಸಾಕ್ಷರತೆ ಇದೆ.

✧. 7 ಜಿಲ್ಲೆಗಳಲ್ಲಿ ಶೇ.71ರಿಂದ ಶೇ.80ರಷ್ಟು ಅಕ್ಷರಸ್ಥರಿದ್ದಾರೆ.

✧. ಕೇವಲ 3 ಜಿಲ್ಲೆಗಳಲ್ಲಿ ಮಹಿಳಾ ಸಾಕ್ಷರತೆ ಪ್ರಮಾಣ ಶೇ.80ಕ್ಕೂ ಅಧಿಕವಿದೆ.


●. ಹೆಚ್ಚು ಸಾಕ್ಷರತೆ ಪ್ರಮಾಣ ಹೊಂದಿದ ಮೊದಲ ಮೂರು ಜಿಲ್ಲೆಗಳು :
✧. ಬೆಂಗಳೂರು-95,88,910 ಲಕ್ಷ ಜನಸಂಖ್ಯೆ.
✧. ಬೆಳಗಾವಿ-47,78,439 ಲಕ್ಷ ಜನಸಂಖ್ಯೆ.
✧. ಮೈಸೂರು-29,94,744 ಲಕ್ಷ ಜನಸಂಖ್ಯೆ.

●.ಕಡಿಮೆ ಸಾಕ್ಷರತೆ ಪ್ರಮಾಣ ಹೊಂದಿದ ಕೊನೆಯ ಮೂರು ಜಿಲ್ಲೆಗಳು :
✧. ಕೊಡುಗು-5,54,762 ಲಕ್ಷ ಜನಸಂಖ್ಯೆ.
✧. ಬೆಂಗಳೂರು ಗ್ರಾಂ.-9,87,257 ಲಕ್ಷ ಜನಸಂಖ್ಯೆ.
✧. ಚಾಮರಾಜನಗರ -10,20,962 ಲಕ್ಷ ಜನಸಂಖ್ಯೆ.

(ಕೃಪೆ: vartha bharati)

No comments:

Post a Comment