"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 28 September 2017

☀ ಐಎಎಸ್ (ಯುಪಿಎಸ್ಸಿ) 2018ರ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ ಪ್ರಕಟ : (UPSC Released date for Civil Services Preliminary Exam 2018.)

☀ ಐಎಎಸ್ (ಯುಪಿಎಸ್ಸಿ) 2018ರ ಪ್ರಿಲಿಮ್ಸ್ ಪರೀಕ್ಷೆ ದಿನಾಂಕ ಪ್ರಕಟ :
(UPSC Released date for Civil Services Preliminary Exam 2018.) ━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಯುಪಿಎಸ್ಸಿ / ಐಎಎಸ್ ಪರೀಕ್ಷಾ ತಯಾರಿ
(IAS Examination preparation)

★ ಐಎಎಸ್ ಪ್ರಿಲಿಮ್ಸ್ ಪರೀಕ್ಷಾ ತಯಾರಿ
(IAS Prelims Exam Preparation)



ಕೇಂದ್ರ ಲೋಕಸೇವಾ ಆಯೋಗದ (Union Public Service Commission (UPSC)) 2018 ರ ನಾಗರಿಕ ಸೇವೆಗಳ ಪ್ರಾಥಮಿಕ ಪರೀಕ್ಷೆ ಜೂನ್ 03 ರದು ನಡೆಯಲಿದೆ.

2014 ರಿಂದ 2016 ರವರೆಗೆ ಆಗಸ್ಟ್ ನಲ್ಲಿ ಪ್ರಾಥಮಿಕ ಪರೀಕ್ಷೆಗಳು ನಡೆದಿದ್ದವು. ಆದರೆ 2018 ರಲ್ಲಿ ಜೂನ್ 03 ರಂದು ನಡೆಸಲು ನಿರ್ಧರಿಸಿರುವುದಾಗಿ ಯುಪಿಎಸ್ಸಿ ತಿಳಿಸಿದೆ.

ಪರೀಕ್ಷೆಯ ಅಧಿಸೂಚನೆಯನ್ನು ಫೆಬ್ರವರಿ 7 ರಂದು ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಸಲು ಮಾರ್ಚ್ 6 ಕೊನೆಯ ದಿನವಾಗಿರುತ್ತದೆ. 2017ರ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶವು ಜುಲೈ 27 ರಂದು ಪ್ರಕಟಿಸಲಾಗಿದೆ.



●.ಪ್ರಿಲಿಮ್ಸ್ ಪರೀಕ್ಷೆ ದಿನಾಂಕ ಪ್ರಕಟ
━━━━━━━━━━━━━━━━━━━

ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಸೇರಿದಂತೆ ಉನ್ನತ ಹುದ್ದೆಗಳಿಗಾಗಿ ಪ್ರತಿವರ್ಷ ಯುಪಿಎಸ್‌‌ಸಿ ಪರೀಕ್ಷೆ ನಡೆಸುತ್ತದೆ. ಮೂರು ಹಂತಗಳಲ್ಲಿ ಈ ಪರೀಕ್ಷೆ ಇದೆ.

ಪ್ರಿಲಿಮ್ಸ್, ಮೇನ್ಸ್‌ ಹಾಗೂ ಇಂಟರ್‌ವ್ಯೂ ಸೇರಿ ಮೂರು ಹಂತಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.



●.ಪರೀಕ್ಷೆ ತೆಗೆದುಕೊಳ್ಳಲು ಬೇಕಾದ ಶೈಕ್ಷಣಿಕ ಮತ್ತು ಇತರೆ ಅರ್ಹತೆ
━━━━━━━━━━━━━━━━━━━━━━━━━━━━━━━━━━━━
ಪದವಿ ಪರೀಕ್ಷೆಯ ಅಂತಿಮ ಹಂತದಲ್ಲಿರುವವರೂ ಕೂಡ ಪ್ರಿಲಿಮ್ಸ್‌ ಬರೆಯಬಹುದು.ಪ್ರಿಲಿಮ್ಸ್‌ನಲ್ಲಿ ತೇರ್ಗಡೆಯಾಗಿ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದರೆ ಆಗ ಪದವಿ ತೇರ್ಗಡೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಬೇಕು.

ಯುಪಿಎಸ್‌ಸಿಯ ದೃಷ್ಟಿಯಲ್ಲಿ ವಿ.ವಿ.ಗಳ ಪರೀಕ್ಷೆಗೆ ತತ್ಸಮಾನ ಎನಿಸುವ ಬೇರೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳೂ ಐಎಎಸ್‌ ಪರೀಕ್ಷೆಗೆ ಅರ್ಹರಾಗುತ್ತಾರೆ.

ತಾಂತ್ರಿಕ ಪದವೀಧರರು: ಬಿಇ., ಎಂ.ಬಿ.ಬಿಎಸ್‌ ಪದವೀಧರರು ಐಎಎಸ್‌ ಬರೆಯಲು ಅರ್ಹರು. ಯಾವುದೇ ಒಂದು ವಿಷಯದಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿರುವುದು ಕಡ್ಡಾಯ. ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರೆ ಅಂತಿಮ ವರ್ಷದ ಪರೀಕ್ಷೆ ಪಾಸಾಗಿರಬೇಕು, ಇಂಟರ್ನ್‌ಶಿಪ್‌ ಮುಗಿಸಿರದಿದ್ದರೂ ಪರೀಕ್ಷೆ ತೆಗೆದುಕೊಳ್ಳಬಹುದು.

ಸಂದರ್ಶನದ ವೇಳೆಗೆ ಅವರು ಅಂತಿಮ ಪರೀಕ್ಷೆಯೊಂದಿಗೆ ಇಂಟರ್ನ್‌ಶಿಪ್‌ ಕೂಡ ತೇರ್ಗಡೆಯಾಗಿದ್ದು ಸಂಬಂಧಿಸಿದ ಪ್ರಮಾಣಪತ್ರ ಹೊಂದಿರಬೇಕು.

ಕರ್ನಾಟಕದಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ಮೂಲಕ ಡಿಗ್ರಿ ಮಾಡಿರುವವರು ಈ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳು.



●.ಶಿಕ್ಷಣದ ನಂತರ/ಜತೆಗೆ ಹೊಂದಿರಬೇಕಾದ ಇತರೆ ಅರ್ಹತೆಗಳು
━━━━━━━━━━━━━━━━━━━━━━━━━━━━━━━━━━

ಐಎಎಸ್‌ ಮತ್ತು ಐಪಿಎಸ್‌ ಹುದ್ದೆಗಳಿಗೆ ಭಾರತದ ನಾಗರಿಕರಿಗೆ ಮಾತ್ರ ಪ್ರವೇಶಾವಕಾಶ.
ಯುಪಿಎಸ್‌ಸಿ ನಡೆಸುವ ಬೇರೆ ಪರೀಕ್ಷೆಗಳಿಗೆ ಭಾರತದ ನಾಗರಿಕರೊಡನೆ ನೇಪಾಳ, ಭೂತಾನ್‌ ಪ್ರಜೆಗಳೂ ಭಾಗ ವಹಿಸಬಹುದು.

ಜನವರಿ 1, 1962ಕ್ಕಿಂತ ಮೊದಲೇ ಭಾರತದಲ್ಲಿ ನೆಲೆಸಲು ಆಶ್ರಯ ಕೋರಿಬಂದಿರುವ ಟಿಬೆಟ್ಟಿನವರು ಸಹ ಇದೇ ರೀತಿ ಅರ್ಹರಾಗಿರುತ್ತಾರೆ.



●.ವಯೋಮಿತಿ
━━━━━━━━━
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ಆರು ಬಾರಿ ಹಾಗೂ ಒಬಿಸಿ ಅಭ್ಯರ್ಥಿಗಳಿಗಾಗಿ ಗರಿಷ್ಠ ಒಂಬತ್ತು ಬಾರಿ ಪರೀಕ್ಷೆ ಬರೆಯಲು ಅನುಮತಿಯಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಎಷ್ಟು ಬಾರಿಯಾದರೂ ಪರೀಕ್ಷೆಗೆ ಹಾಜರಾಗಬಹುದು.

ಪರೀಕ್ಷೆಗೆ ಹಾಜರಾಗಲು ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ/ಪಂಗಡದವರಿಗೆ 37, ಒಬಿಸಿಗಾಗಿ 35 ಹಾಗೂ ಇತರೆ ವರ್ಗದವರಿಗೆ 32. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯು ಆ ವರ್ಷ ಆಗಸ್ಟ್‌ 1ರಂದು 32ರ ವಯಸ್ಸು ದಾಟಿರಬಾರದು. ಕನಿಷ್ಠ ವಯೋಮಿತಿ 21 ವರ್ಷ

(Courtesy : careerindia)

Wednesday 27 September 2017

☀ ಕೆಎಎಸ್ ಮುಖ್ಯ ಪರೀಕ್ಷೆ: ಲಿಖಿತ ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ವಿವರಗಳು : (KAS Mains Exam: Details of Question Papers and Written Exam )

☀ ಕೆಎಎಸ್ ಮುಖ್ಯ ಪರೀಕ್ಷೆ: ಲಿಖಿತ ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ವಿವರಗಳು :
(KAS Mains Exam: Details of Question Papers and Written Exam )
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷೆ ವಿವರ
(Kas Mains Exam Details)


ಇತ್ತೀಚೆಗೆ 2015 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಅಧಿಸೂಚನೆ ಹೊರಡಿಸಿದೆ.

ಪ್ರಿಲಿಮ್ಸ್ ನಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹರಾಗಿದ್ದು, ಅಕ್ಟೋಬರ್ 16 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಸೂಚಿಸಲಾಗಿದೆ.

ಮುಖ್ಯ ಪರೀಕ್ಷೆಯು 2017 ರ ನವೆಂಬರ್ ತಿಂಗಳ ಕೊನೆಯ ವಾರ ಹಾಗೂ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ವೇಳಾ ಪಟ್ಟಿಯನ್ನು ಶೀಘ್ರದಲ್ಲೇ ಕೆಪಿಎಸ್ಸಿ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.



●.ಕೆಎಎಸ್ ಮುಖ್ಯ ಪರೀಕ್ಷೆ
━━━━━━━━━━━━━━━

✧.ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಗೆ ನಡೆಯುವ ಮುಖ್ಯ ಪರೀಕ್ಷೆಯು ವಿವರಣಾತ್ಮಕ ಮಾದರಿಯಲ್ಲಿದ್ದು, ಎಲ್ಲಾ ಪತ್ರಿಕೆಗಳು ಕಡ್ಡಾಯವಾಗಿರುತ್ತದೆ.

✧.ಮುಖ್ಯ ಪರೀಕ್ಷೆಯು ಅರ್ಹತಾದಾಯಕ ಮತ್ತು ಕಡ್ಡಾಯ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. 300 ಅಂಕಗಳ ಅರ್ಹತಾದಾಯಕ ಪತ್ರಿಕೆಗಳು ಮತ್ತು 1750 ಅಂಕಗಳ ಕಡ್ಡಾಯ ಪತ್ರಿಕೆಗಳಿಗೆ ಅಭ್ಯರ್ಥಿಯು ಉತ್ತರಿಸಬೇಕಾಗುತ್ತದೆ.


✧.ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆಗಳಲ್ಲಿ ಪಡೆಎದ ಅಂಕಗಳು ಅರ್ಹತಾದಾಯಕ ಸ್ವರೂಪದ್ದಾಗಿರುತ್ತದೆ. ಅರ್ಹತೆ ಪಡೆಯಲು ಈ ಪತ್ರಿಯೊಂದು ಪತ್ರಿಕೆಯಲ್ಲಿ ಕನಿಷ್ಠ ಶೇ.35 ಅಂಕಗಳು, ಅಂದರೆ 52.5 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ.

✧.ಈ ಎರಡೂ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಅಭ್ಯರ್ಥಿಗಳ ಆಯ್ಕೆಯ ಅರ್ಹತೆಯನ್ನು ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ.


●.ಕೆಎಎಸ್ ಮುಖ್ಯ ಪರೀಕ್ಷೆಯ ವಿವರಗಳು
━━━━━━━━━━━━━━━━━━━━━━━

✧.ಈ ಎರಡೂ ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಇತರೆ ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗುವುದಿಲ್ಲ ಹಾಗೂ ಇಂತಹ ಅಭ್ಯರ್ಥಿಗಳ ಇತರೆ ವಿಷಯಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ.

✧.ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಪತ್ರಿಕೆ ಮತ್ತು ಕಡ್ಡಾಯ ಇಂಗ್ಲಿಷ್ ಪತ್ರಿಕೆ ಎಸ್ ಎಸ್ ಎಲ್ ಸಿ ಯ ಪ್ರಥಮ ಭಾಷೆಯ ಮಟ್ಟದ್ದಾಗಿರುತ್ತದೆ.

✧.ಮುಖ್ಯ ಪತ್ರಿಕೆಯ ಇನ್ನಿತರ ವಿಷಯಗಳ ಪತ್ರಿಕೆಗಳು ಪದವಿ ಮಟ್ಟದ್ದಾಗಿರುತ್ತದೆ.

✧.ಪ್ರಶ್ನೆಪತ್ರಿಕೆಗಳು ಕನ್ನಡ ಮತ್ತು ಆಂಗ್ಲ ಭಾಷೆಗಳೆರಡರಲ್ಲೂ ಮುದ್ರಿಸಲಾಗಿರುತ್ತದೆ. ಅಭ್ಯರ್ಥಿಗಳು ಪತ್ರಿಕೆಯ ಉತ್ತರಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಆಂಗ್ಲಭಾಷಾ ಮಾಧ್ಯಮದಲ್ಲಿ ಉತ್ತರಿಸತಕ್ಕದ್ದು. (ಅರ್ಜಿಯಲ್ಲಿ ಆಯ್ಕೆ ಮಾಡಿಕೊಂಡ ಭಾಷೆಯಲ್ಲೇ ಉತ್ತರಿಸತಕ್ಕದ್ದು)

✧.ಕನ್ನಡ ಭಾಷೆಯಲ್ಲಿರುವ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರು ಅಸ್ಪಷ್ಟತೆ ಇದ್ದಲ್ಲಿ ಆಂಗ್ಲ ಭಾಷೆಯಲ್ಲಿರುವ ಪ್ರಶ್ನೆಗಳನ್ನು ನೋಡುವುದು. ಎಲ್ಲಾ ವಿಷಯಗಳಲ್ಲಿ ಆಂಗ್ಲ ಭಾಷೆಯ ಪ್ರಶ್ನೆಗಳು ಅಂತಿಮವಾಗಿರುತ್ತದೆ.

✧.ಆಯ್ಕೆ ಮಾಡಿಕೊಂಡ ಮಾಧ್ಯಮವನ್ನು ಬದಲಾಯಿಸಿದಲ್ಲಿ ಅಥವಾ ಅರ್ಧ ಕನ್ನಡ ಹಾಗೂ ಅರ್ಧ ಆಂಗ್ಲ ಮಾಧ್ಯಮದಲ್ಲಿ ಉತ್ತರಿಸಿದಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಗೊಳಿಸುವುದಿಲ್ಲ.
ಮುಖ್ಯ ಪರೀಕ್ಷೆಯನ್ನು ಬೆಂಗಳೂರು ಮತ್ತು ಧಾರವಾಡ ಕೇಂದ್ರಗಳಲ್ಲಿ ಮಾತ್ರ ನಡೆಸಲಾಗುತ್ತದೆ.

(Courtesy : careerindia)

ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು: (ಸಾಮಾನ್ಯ ಅಧ್ಯಯನ : II ಸಂವಿಧಾನ) Part-1. (KAS Mains Exam Module Questions for General Studies)

☀️ ಕೆಎಎಸ್ ಮುಖ್ಯ ಪರೀಕ್ಷೆ ತಯಾರಿಗಾಗಿ ಮಾದರಿ ಪ್ರಶ್ನೆಗಳು:  (ಸಾಮಾನ್ಯ ಅಧ್ಯಯನ : II ಸಂವಿಧಾನ) Part-1.
(KAS Mains Exam Module Questions for General Studies)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷಾ ಮಾದರಿ  ಪ್ರಶ್ನೆಗಳು
(kas Mains Exam Module Questions)

 ★ ಸಾಮಾನ್ಯ ಅಧ್ಯಯನ : ಪತ್ರಿಕೆ II (ಸಂವಿಧಾನ)
(General Studies :Paper II (Indian Constitution))


 ಗೆಳೆಯರೇ... ಮುಂಬರುವ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ನನ್ನ ಜ್ಞಾನದ ಪರಿಮಿತಿಯಲ್ಲಿ ಮುಖ್ಯ ಪರೀಕ್ಷೆಗಾಗಿ ಕೆಲವು ಮಾದರಿ ಪ್ರಶ್ನೆಗಳನ್ನು ತಯಾರಿಸಿ ನಿಮ್ಮ ಸ್ಪರ್ಧಾಲೋಕದಲ್ಲಿ ಮುಂದಿಟ್ಟಿರುವೆನು. ಇವು ಸಾಧ್ಯವಾದಷ್ಟು ನಂಬಲರ್ಹವಾದ ಮೂಲಗಳಿಂದ ಕಲೆಹಾಕಿರುವಂಥವು. ಇವೇ ಕೊನೆಯಲ್ಲ. ಏನಾದರೂ ತಪ್ಪು-ತಡೆಗಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿ.
(G-Mail : yaseen7ash@gmail.com)



1. "ಲೋಕಸ್ ಸ್ಟಾಂಡಿ ತತ್ವ" ಎಂದರೇನು? ಭಾರತದ ನ್ಯಾಯಾಂಗ ವ್ಯವಸ್ಥೆಯ ಕ್ರಿಯಾಶೀಲತೆಯ ವ್ಯಾಪ್ತಿಯನ್ನು ನಿರ್ಧರಿಸುವಲ್ಲಿ ಇದರ ಪಾತ್ರವೇನು?
(250 ಶಬ್ದಗಳಲ್ಲಿ)


2. ಅಮೇರಿಕ ಸಂಯುಕ್ತ ಸಂಸ್ಥಾನದ ನ್ಯಾಯಾಲಯಗಳಿಗೆ ಇರುವಷ್ಟು 'ನ್ಯಾಯಿಕ ವಿಮರ್ಶೆ'ಯ ವ್ಯಾಪ್ತಿಯನ್ನು ಭಾರತದ ಸಂವಿಧಾನವು ನಮ್ಮ ನ್ಯಾಯಾಲಯಗಳಿಗೆ ನೀಡಿಲ್ಲ ಎಂಬ ಅಭಿಪ್ರಾಯವನ್ನು ನೀವು ಒಪ್ಪುವಿರಾ? ಭಾರತದಲ್ಲಿ ಪ್ರಸ್ತುತ ನ್ಯಾಯಿಕ ವಿಮರ್ಶೆಯ ಕ್ರಿಯಾಶೀಲತೆಯ ವ್ಯಾಪ್ತಿಯೊಂದಿಗೆ ಚರ್ಚಿಸಿ.
(250 ಶಬ್ದಗಳಲ್ಲಿ)


3. ಸಂವಿಧಾನಾತ್ಮಕವಾದ 'ರಾಜ್ಯಪಾಲರ ಹುದ್ದೆ'ಯು ಇಂದಿಗೂ ಹಲವು ವಿವಾದಗಳ ಗೂಡಾಗಿದ್ದು, ಈ ಎಲ್ಲಾ ವಿವಾದಗಳಿಂದ ಮುಕ್ತಗೊಳಿಸಿ ಅದರ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ಕೇಂದ್ರ ಸರ್ಕಾರವು ರಾಜ್ಯಪಾಲರ ನೇಮಕಾತಿಗೆ ಸಂಬಂಧಿಸಿದ ಸರ್ಕಾರಿಯಾ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವುದು ಇಂದಿನ ಅಗತ್ಯವಾಗಿದೆ ಎನ್ನಬಹುದೇ? ರಾಜ್ಯಪಾಲರ ನೇಮಕಾತಿಗೆ ಸಂಬಂಧಿಸಿದ ಸರ್ಕಾರಿಯಾ ಆಯೋಗದ ಶಿಫಾರಸ್ಸುಗಳೊಂದಿಗೆ ವಿಮರ್ಶಿಸಿ.  
(250 ಶಬ್ದಗಳಲ್ಲಿ)


4. 'ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳು ಮತ್ತು ರಾಜ್ಯನಿರ್ದೇಶಕ ತತ್ವಗಳ ನಡುವಣ ಸಮತೋಲನದ ಮೇಲೆ ನಿಂತಿದೆ'.. ಎಂಬ ಅಭಿಪ್ರಾಯವನ್ನು ಮಿನರ್ವ್ ಮಿಲ್ಸ್ ಪ್ರಕರಣದ ಉದಾಹರಣೆಯೊಂದಿಗೆ ವಿಶದಪಡಿಸಿ.
(250 ಶಬ್ದಗಳಲ್ಲಿ)


5. ಸಂವಿಧಾನದ ತಿದ್ದುಪಡಿಗಳು ನ್ಯಾಯಿಕ ವಿಮರ್ಶೆಗೊಳಪಟ್ಟಿವೆಯೇ? ಸ್ಪಷ್ಟೀಕರಿಸಿ.
(250 ಶಬ್ದಗಳಲ್ಲಿ)


6. ಕೆಲವು ರಾಜಕೀಯ ತಜ್ಞರು ರಾಷ್ಟ್ರಾಧ್ಯಕ್ಷರನ್ನು 'ರಬ್ಬರ್ ಸ್ಟಾಂಪ್' ಗೆ ಹೋಲಿಸಿದ್ದಾರೆ. ಈ ಹೋಲಿಕೆ ಸಮಂಜಸವಾದುದದೇ? ರಾಷ್ಟ್ರಾಧ್ಯಕ್ಷರ ವಿಶೇಷ ಅಧಿಕಾರಗಳೊಂದಿಗೆ ಚರ್ಚಿಸಿ.
(250 ಶಬ್ದಗಳಲ್ಲಿ)


7. ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯ ನಡುವಣ ಸಂವಿಧಾನಿಕ ಸಂಬಂಧದ ಕುರಿತು ಚರ್ಚಿಸಿ.
To be Continued...



☀️ ಕೆಎಎಸ್ ಮುಖ್ಯ ಪರೀಕ್ಷೆ : ಸ್ಪರ್ಧಾರ್ಥಿಗಳು ಗಮನಿಸಬೇಕಾದ ಅಂಶಗಳು : (KAS Mains Exam : Aspirants Should Know)

☀️ ಕೆಎಎಸ್ ಮುಖ್ಯ ಪರೀಕ್ಷೆ : ಸ್ಪರ್ಧಾರ್ಥಿಗಳು ಗಮನಿಸಬೇಕಾದ ಅಂಶಗಳು :
(KAS Mains Exam : Aspirants Should Know)
━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ಮುಖ್ಯ ಪರೀಕ್ಷೆ ತಯಾರಿ
(Kas mains exam preparation)


1. ಕಡ್ಡಾಯ ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳಲ್ಲಿ ಪಡೆದ ಅಂಕಗಳು ಅರ್ಹತಾದಾಯಕ ಸ್ವರೂಪದ್ದಾಗಿರುತ್ತವೆ. ಅರ್ಹತೆ ಪಡೆಯಲು ಈ ಪ್ರತಿಯೊಂದು ಪತ್ರಿಕೆಯಲ್ಲಿ ಕನಿಷ್ಠ ಶೇಕಡ 35 (52.5) ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಎರಡೂ ಪತ್ರಿಕೆಗಳಲ್ಲಿ ಗಳಿಸಿದ ಅಂಕಗಳನ್ನು ಅಭ್ಯರ್ಥಿಗಳ ಆಯ್ಕೆಯ ಅರ್ಹತೆಯನ್ನು ನಿಗದಿಪಡಿಸುವಲ್ಲಿ ಪರಿಗಣಿಸಲಾಗುವುದಿಲ್ಲ. ಈ ಎರಡು ಪತ್ರಿಕೆಗಳಲ್ಲಿ ನಿಗದಿತ ಅಂಕಗಳನ್ನು ಗಳಿಸದ ಅಭ್ಯರ್ಥಿಗಳು ಇತರೆ ಪತ್ರಿಕೆಗಳಲ್ಲಿ ಎಷ್ಟೇ ಹೆಚ್ಚು ಅಂಕಗಳನ್ನು ಗಳಿಸಿದ್ದರೂ ವ್ಯಕ್ತಿತ್ವ ಪರೀಕ್ಷೆಗೆ ಮತ್ತು ಆಯ್ಕೆಗೆ ಅರ್ಹರಾಗುವುದಿಲ್ಲ ಹಾಗೂ ಇಂತಹ ಅಭ್ಯರ್ಥಿಗಳ ಇತರೆ ವಿಷಯಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸುವುದಿಲ್ಲ.

2.ಮುಖ್ಯ ಪರೀಕ್ಷೆಯು ವಿವರಣಾತ್ಮಕ ಮಾದರಿಯಲ್ಲಿರುತ್ತದೆ ಮತ್ತು ಎಲ್ಲಾ ಪತ್ರಿಕೆಗಳು ಕಡ್ಡಾಯವಾಗಿರುತ್ತವೆ.

3.ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಮುದ್ರಿಸಲಾಗಿರುತ್ತದೆ. ಅಭ್ಯರ್ಥಿಗಳು ಪತ್ರಿಕೆಯ ಉತ್ತರಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಆಂಗ್ಲಭಾಷಾ ಮಾಧ್ಯಮದಲ್ಲಿಯೇ ಉತ್ತರಿಸತಕ್ಕದ್ದು.

4.ಮುಖ್ಯ ಪರೀಕ್ಷೆಯ ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಆಂಗ್ಲಭಾಷೆ ಪತ್ರಿಕೆಗಳನ್ನು ಹೊರತುಪಡಿಸಿ ಉಳಿದ ಪತ್ರಿಕೆಗಳು ಪದವಿ ಮಟ್ಟದ್ದಾಗಿರುತ್ತದೆ. ಕಡ್ಡಾಯ ಕನ್ನಡ ಹಾಗೂ ಕಡ್ಡಾಯ ಆಂಗ್ಲಭಾಷೆ ಪತ್ರಿಕೆಗಳು ಎಸ್.ಎಸ್.ಎಲ್.ಸಿಯ ಪ್ರಥಮ ಭಾಷೆಯ ಮಟ್ಟದ್ದಾಗಿರುತ್ತದೆ.

5.ಎಲ್ಲಾ 07 ಪತ್ರಿಕೆಗಳು ಕಡ್ಡಾಯ ಪತ್ರಿಕೆಗಳಾಗಿರುತ್ತವೆ. ಪತ್ರಿಕೆ- (02) ರಿಂದ (05)ರವರೆಗಿನ ಪತ್ರಿಕೆಗಳು ಮೂರು ಭಾಗಗಳನ್ನು ಒಳಗೊಂಡಿರುತ್ತದೆ. ಪ್ರತಿ ಪತ್ರಿಕೆಯು ಗರಿಷ್ಠ 250 ಅಂಕಗಳನ್ನು ಒಳಗೊಂಡಿರುತ್ತದೆ ಮತ್ತು 03 ಗಂಟೆಗಳ ಅವಧಿಯದ್ದಾಗಿರುತ್ತದೆ.
ಲಿಖಿತ ಮತ್ತು ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು ಅಂತಿಮ ಆಯ್ಕೆಪಟ್ಟಿಯೊಂದಿಗೆ ಪ್ರಕಟಿಸಲಾಗುವುದು. @spardhaloka