"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 31 March 2015

☀4. ಕರ್ನಾಟಕದ ಕರಾವಳಿ ಪ್ರದೇಶ:  (Karnataka coastal region)

☀4. ಕರ್ನಾಟಕದ ಕರಾವಳಿ ಪ್ರದೇಶ:
(Karnataka coastal region)

━━━━━━━━━━━━━━━━━━━━━━━━━━━━━━━━━━━━━━━━━━━━━

♦.Unit 2.ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:.. ಮುಂದುವರೆದ ಭಾಗ...
(Karnataka state physical, geographical Features)

♦.(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)



✧.ಕರ್ನಾಟಕದ ಕರಾವಳಿ ಪ್ರದೇಶವು ಪೂರ್ವದಲ್ಲಿ ಕರ್ನಾಟಕ ಪ್ರಸ್ಥಭೂಮಿಯ ಪಶ್ಚಿಮಘಟ್ಟಗಳ ಅಂಚಿನ, ಪಶ್ಚಿಮದಲ್ಲಿ ಅರಬ್ಬೀ ಸಮುದ್ರದ ನಡುವೆ ಹರಡಿದೆ.

✧.ಈ ಭಾಗ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ.

✧.ಈ ಪ್ರದೇಶದಲ್ಲಿ ಪಶ್ಚಿಮಘಟ್ಟದ ಅನೇಕ ಏಣುಗಳು ಚಾಚಿದ ಭಾಗಗಳು ಅಡ್ಡಹಾಯ್ದಂತೆ ಕಂಡುಬರುತ್ತದೆ. ಈ ಪ್ರದೇಶವೇ ಅತ್ಯಂತ ಸಂಕೀರ್ಣವಾದುದು. ಇದರ ತುಂಬ ನದಿಗಳಿವೆ, ನದಿಚಾಚುಗಳಿವೆ, ಜಲಪಾತಗಳಿವೆ, ಗಿರಿಶೃಂಗಗಳಿವೆ, ಬೆಟ್ಟಸಾಲುಗಳಿವೆ.


●.ಕರಾವಳಿ ಪ್ರದೇಶವನ್ನು ಎರಡು ಪ್ರಮುಖ ಭೂಭೌತಘಟಕಗಳಾಗಿ ವಿಭಜಿಸಬಹುದು -
✧.ಬಯಲು ಮತ್ತು
✧.ಪಶ್ಚಿಮಘಟ್ಟಗಳು.

✧.ಕರಾವಳಿ ಬಯಲು ಅಳಿವೆಯ ಇಕ್ಕಟ್ಟಾದ ವಿಸ್ತರಣೆಯನ್ನೂ ಮತ್ತು ಕಡಲ ಬಯಲನ್ನು ಪ್ರತಿನಿಧಿಸುತ್ತದೆ.

✧.ಪೂರ್ವದೆಡೆ ದಿಢೀರೆಂದು ಎದ್ದಿರುವ ಭಾಗವೇ ಪಶ್ಚಿಮ ಘಟ್ಟಗಳನ್ನು ರೂಪಿಸಿದೆ.

 ✧.ದಕ್ಷಿಣ ಭಾಗಕ್ಕೆ ಹೋಲಿಸಿದರೆ (900 ರಿಂದ 1,500 ಮೀಟರ್) ಘಟ್ಟದ ಉತ್ತರ ಭಾಗದ ಔನ್ನತ್ಯ ಕೆಳಮಟ್ಟದ್ದು ಎಂದೇ ಹೇಳಬಹುದು (450 ರಿಂದ 600 ಮೀಟರ್).

✧.ಕರಾವಳಿ ಪಟ್ಟಿಯು ಸರಾಸರಿ 50ರಿಂದ 80 ಕಿಲೋ ಮೀಟರ್ ಅಗಲವಾಗಿದೆ.

✧.ಉದ್ದ ಉತ್ತರ ದಕ್ಷಿಣವಾಗಿ ಸುಮಾರು 267 ಕಿಲೋ ಮೀಟರ್. ಕೆಲವೆಡೆ ಪಕ್ಕದ ಪಶ್ಚಿಮಘಟ್ಟಗಳ ಶೃಂಗಗಳು ಕಾರವಾರದ ಬಳಿ ಕಾಣುವಂತೆ ಹದಿಮೂರು ಕಿಲೋ ಮೀಟರುಗಳಷ್ಟು ಸನಿಹದಲ್ಲಿದೆ.

✧.ಸರಾಸರಿ ಸಮುದ್ರ ಮಟ್ಟದಿಂದ ಈ ಭಾಗದ ಸರಾಸರಿ ಎತ್ತರ 75 ಮೀಟರುಗಳಷ್ಟು.

(ಕೃಪೆ: ಕರ್ನಾಟಕ ಕೈಪಿಡಿ)

—ಮುಕ್ತಾಯ. 

☀3. ದಕ್ಷಿಣ ಕರ್ನಾಟಕ ಪ್ರಸ್ಥಭೂಮಿ:  (Southern Karnataka Plateau)

☀3. ದಕ್ಷಿಣ ಕರ್ನಾಟಕ ಪ್ರಸ್ಥಭೂಮಿ:
(Southern Karnataka Plateau)

━━━━━━━━━━━━━━━━━━━━━━━━━━━━━━━━━━━━━━━━━━━━━

♦.Unit 2.ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:.. ಮುಂದುವರೆದ ಭಾಗ...
(Karnataka state physical, geographical Features)

♦.(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)


✧.ದಕ್ಷಿಣ ಕರ್ನಾಟಕ ಪ್ರಸ್ಥಭೂಮಿಯು ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳನ್ನು ಒಳಗೊಂಡಿದೆ.

✧.ಈ ಪ್ರಾಂತ್ಯವು ಬಹುತೇಕ ಕರ್ನಾಟಕ ಭಾಗದ ಕಾವೇರಿ ನದಿಯ ಕೊಳ್ಳವನ್ನು ಒಳಗೊಳ್ಳುತ್ತದೆ.

✧.ಇದು 600 ಮೀಟರ್ ಸಮೋನ್ನತ ರೇಖೆಯಿಂದ ಆವೃತವಾಗಿದ್ದು, ಕಡಿದಾದ ಇಳಿಜಾರಿರುವುದು ಇದರ ವಿಶೇಷ ಲಕ್ಷಣ.

✧.ಪಶ್ಚಿಮ ಮತ್ತು ದಕ್ಷಿಣದಲ್ಲಿ ಪಶ್ಚಿಮಘಟ್ಟಗಳ ಗಿರಿಗಳಿಂದ ಆವೃತವಾಗಿವೆ.

✧.ಇದರ ಉತ್ತರ ಭಾಗವು ಸ್ಪಷ್ಟವಾಗಿ ಗುರುತಿಸಬಹುದಾದ ಉನ್ನತ ಪ್ರಸ್ಥಭೂಮಿಯಿಂದ ಛೇದಗೊಂಡಿದೆ.

 ✧.ಪೂರ್ವದಲ್ಲಿ ಕಾವೇರಿ ನದಿಯ ಕಣಿವೆ ಮತ್ತು ಈ ನದಿಯ ಉಪನದಿಗಳು ಅನಾವರಣಗೊಂಡು ಅಸಮ ಬಯಲನ್ನು ಸೃಷ್ಟಿಸಿವೆ.

✧.ಈ ಪ್ರಾಂತ್ಯದ ಸಾಧಾರಣ ಎತ್ತರ 600 ರಿಂದ 900 ಮೀಟರುಗಳಷ್ಟು ವ್ಯತ್ಯಯವಾಗುತ್ತವೆ. ಆದಾಗ್ಗೂ ಶೇಷ ಔನ್ನತ್ಯ 1,500 ರಿಂದ 1,700 ಮೀಟರುಗಳಷ್ಟು ಇರುವುದನ್ನು ಮೈಸೂರು ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ಮತ್ತು ಕೊಡಗು ಜಿಲ್ಲೆಯ ಬ್ರಹ್ಮಗಿರಿ ಶ್ರೇಣಿಗಳಲ್ಲಿ ಕಾಣಬಹುದು.

(ಕೃಪೆ: ಕರ್ನಾಟಕ ಕೈಪಿಡಿ)

...ಮುಂದುವರೆಯುವುದು.

☀2. ಮಧ್ಯಕರ್ನಾಟಕ ಪ್ರಸ್ಥಭೂಮಿ: (Midst karnataka plateau)

☀2. ಮಧ್ಯಕರ್ನಾಟಕ ಪ್ರಸ್ಥಭೂಮಿ:
(Midst karnataka plateau)

━━━━━━━━━━━━━━━━━━━━━━━━━━━━━━━━━━━━━━━━━━━━━

♦.Unit 2.ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:.. ಮುಂದುವರೆದ ಭಾಗ...
(Karnataka state physical, geographical Features)

♦.(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)


✧.ಮಧ್ಯಕರ್ನಾಟಕ ಪ್ರಸ್ಥಭೂಮಿಯ ಬಳ್ಳಾರಿ,ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ರಾಯಚೂರು ಕೊಪ್ಪಳ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡಿದೆ.

✧.ಈ ಪ್ರಾಂತ್ಯವು ಒಂದೆಡೆ ದಖನ್ ಪ್ರಸ್ಥಭೂಮಿಯಿಂದಾದ ಉತ್ತರ ಕರ್ನಾಟಕ ಪ್ರಸ್ಥಭೂಮಿ, ಇನ್ನೊಂದೆಡೆ ಸಾಪೇಕ್ಷವಾಗಿ ಎತ್ತರಿಸಿರುವ ದಕ್ಷಿಣ ಕರ್ನಾಟಕ ಪ್ರಸ್ಥಭೂಮಿಯ ನಡುವಿನ ಪರಿವರ್ತನಾ ಹೊರಮೈಯ್ಯನ್ನು ಪ್ರತಿನಿಧಿಸುತ್ತದೆ.

✧.ಹೆಚ್ಚೂ ಕಡಿಮೆ ಈ ಪ್ರಾಂತ್ಯವು ತುಂಗಭದ್ರಾ ತಗ್ಗು ಪ್ರದೇಶವನ್ನು ಪ್ರತಿನಿಧಿಸುತ್ತದೆ. ಈ ಭಾಗದ ಸಾಧಾರಣ ಔನ್ನತ್ಯ 450 ರಿಂದ 700 ಮೀಟರ್‍ವರೆಗೆ ವ್ಯತ್ಯಯಗೊಳ್ಳುತ್ತದೆ. ಆದರೂ ಈ ಪರಿವರ್ತನಾ ವಲಯವನ್ನು ಛೇದಿಸಿದಂತೆ ಧಾರವಾಡ ಗುಂಪಿನ ಶಿಲೆಗಳು ಅನೇಕ ಸಮಾಂತರ ಏಣುಗಳಾಗಿ ಕಂಡುಬರುತ್ತವೆ.

✧.ಇಂಥ ಶೇಷ ಬೆಟ್ಟಗಳು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು 900 ಮೀಟರ್ ಎತ್ತರದಲ್ಲಿವೆ.

✧.ಪೂರ್ವದೆಡೆಗೆ ಈ ಪ್ರಾಂತ್ಯದ ಸಾಮಾನ್ಯ ಇಳಿಜಾರನ್ನು ಕಾಣಬಹುದು.

(ಕೃಪೆ: ಕರ್ನಾಟಕ ಕೈಪಿಡಿ)

...ಮುಂದುವರೆಯುವುದು.

☀Unit 2.—ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು: (Karnataka state physical, geographical Features) 

☀Unit 2.—ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:
(Karnataka state physical, geographical Features)

━━━━━━━━━━━━━━━━━━━━━━━━━━━━━━━━━━━━━━━━━━━━━

(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)


●.ಭಾರತ ಒಕ್ಕೂಟದ ಎರಡು ಬೃಹತ್ ಪ್ರಾಂತ್ಯಗಳ ಭಾಗವಾಗಿ ಕರ್ನಾಟಕ ರಾಜ್ಯದ ಭೂಭೌತಲಕ್ಷಣಗಳು ಕಂಡುಬರುತ್ತವೆ. ಆ ಎರಡು ಲಕ್ಷಣಗಳೆಂದರ ದಕ್ಷಿಣ ಪ್ರಸ್ಥಭೂಮಿ ಮತ್ತು ಕಡಲತೀರದ ಬಯಲು ಹಾಗೂ ದ್ವೀಪಗಳು.

●.ರಾಜ್ಯದಲ್ಲಿ ಪ್ರಮುಖವಾದ ನಾಲ್ಕು ಭೂಭೌತಲಕ್ಷಣಗಳನ್ನು ಕಾಣಬಹುದು.
1. ಉತ್ತರ ಕರ್ನಾಟಕ ಪ್ರಸ್ಥಭೂಮಿ.(North Karnataka plateau)
2. ಮಧ್ಯಕರ್ನಾಟಕ ಪ್ರಸ್ಥಭೂಮಿ.(Midst karnataka plateau)
3. ದಕ್ಷಿಣ ಕರ್ನಾಟಕ ಪ್ರಸ್ಥಭೂಮಿ.(Southern Karnataka Plateau)
4. ಕರ್ನಾಟಕದ ಕರಾವಳಿ ಪ್ರದೇಶ. (Karnataka coastal region)


1. ಉತ್ತರ ಕರ್ನಾಟಕ ಪ್ರಸ್ಥಭೂಮಿ:
(North Karnataka plateau)

✧.ಉತ್ತರ ಕರ್ನಾಟಕ ಪ್ರಸ್ಥಭೂಮಿಯು ಬೆಳಗಾವಿ, ಬೀದರ್, ಬಿಜಾಪುರ, ಬಾಗಲಕೋಟೆ ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿದೆ.
✧.ಇದು ಬಹುತೇಕ ದಖನ್ ಪ್ರಸ್ಥಭೂಮಿಯಿಂದಾಗಿದೆ.
✧.ಈ ಪ್ರಸ್ಥಭೂಮಿಯಲ್ಲಿ ಏಕತಾನತೆ ತರುವ ವೃಕ್ಷರಹಿತ ದೃಶ್ಯಾವಳಿ ಎದ್ದುಕಾಣುತ್ತದೆ.
✧.ಸರಾಸರಿ ಸಮುದ್ರ ಮಟ್ಟದಿಂದ ಸಾಮಾನ್ಯವಾಗಿ 300 ರಿಂದ 600 ಮೀಟರ್ ಎತ್ತರವಿದೆ. ಆದಾಗ್ಯೂ ಕೃಷ್ಣಾ, ಭೀಮಾ, ಘಟಪ್ರಭಾ, ಮಲಪ್ರಭಾ ನದಿಗಳ ಬಯಲು, ಅವುಗಳ ಮಧ್ಯೆ ಅಲ್ಲಲ್ಲೇ ಕಾಣಿಸುವ ಜಲಾನಯನ ಪ್ರದೇಶಗಳು, ಮೆಟ್ಟಿಲಿನಾಕಾರದ ದೃಶ್ಯಾವಳಿ, ಲ್ಯಾಟರೈಟ್‍ನಿಂದಾದ ಕಡಿದಾದ ಭಾಗಗಳು, ಶೇಷ ಗುಡ್ಡಗಳು ಮತ್ತು ಏಣುಗಳಿಂದಾಗಿ ವಿಶಾಲವಾದ ಪ್ರಸ್ಥಾಭೂಮಿಯ ಏಕತಾನತೆ ಭಂಗವಾಗುತ್ತದೆ.
✧.ಪೂರ್ವದೆಡೆಗೆ ಪ್ರಸ್ಥಭೂಮಿಯ ಸಾಮಾನ್ಯ ಇಳಿಜಾರಿದೆ. ಈ ಪ್ರಾಂತ್ಯದ ಬಲುಪಾಲು ಕಪ್ಪು ಹತ್ತಿ ಮಣ್ಣಿನಿಂದ ಆವೃತವಾಗಿವೆ.

(ಕೃಪೆ: ಕರ್ನಾಟಕ ಕೈಪಿಡಿ)

...ಮುಂದುವರೆಯುವುದು.

☀"ರೊಸೆಟ್ಟಾ" ಶೋಧಕ ಉಪಗ್ರಹದ ಕುರಿತು ಪ್ರಮುಖ ಅಂಶಗಳು:  (Rosetta— 'Robotik Space Probe')

☀"ರೊಸೆಟ್ಟಾ" ಶೋಧಕ ಉಪಗ್ರಹದ ಕುರಿತು ಪ್ರಮುಖ ಅಂಶಗಳು:
(Rosetta— 'Robotik Space Probe')

━━━━━━━━━━━━━━━━━━━━━━━━━━━━━━━━━━━━━━━━━━━━━

♦.(General Science)
ಸಾಮಾನ್ಯ ವಿಜ್ಞಾನ


●.ರೊಸೆಟ್ಟಾ ಉಡಾವಣೆ ಆದದ್ದು ಯಾವಾಗ, ಯಾರಿಂದ?

✧.ರೊಸೆಟ್ಟಾ ‘ರೋಬೋಟಿಕ್ ಸ್ಪೇಸ್ ಪ್ರೋಬ್’ ಉಡಾವಣೆಯಾದದ್ದು ಮಾರ್ಚ್ 2, 2004ರಂದು.
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಅದನ್ನು ಉಡಾವಣೆ ಮಾಡಿತು. 67 ಪಿ/ಚುರ್ಯುಮೊವ್-ಗೆರಾಸಿಮೆಂಕೊ ಧೂಮಕೇತುವನ್ನು ಗುರಿಯಾಗಿಸಿಕೊಂಡು ಈ ಉಡಾವಣೆ ಮಾಡಲಾಯಿತು. 400 ಮೈಲಿಯಷ್ಟು ದೂರಕ್ಕೆ ರೋಬೋಟಿಕ್ ಸ್ಪೇಸ್ ಪ್ರೋಬ್ (ಬಾಹ್ಯಾಕಾಶ ಶೋಧಕ ರೋಬೊ) ಉಡಾವಣೆ ನಡೆದದ್ದು. ಆಗಸ್ಟ್ 2014ರಂದು ಅದು ಧೂಮಕೇತುವನ್ನು ತಲುಪಿತು. ಸೆಪ್ಟೆಂಬರ್ 10ರಂದು ಕಕ್ಷೆ ಸೇರಿತು.


●.ಈ ಉಡಾವಣೆಯ ಉದ್ದೇಶವೇನು?

✧.ರೊಸೆಟ್ಟಾ ಕಾರ್ಯಾಚರಣೆಯ ಉದ್ದೇಶ ಧೂಮಕೇತುಗಳ ಕುರಿತು ಮಾಹಿತಿ ಕಲೆಹಾಕುವುದು. ಅವುಗಳು ಹೇಗೆ ರೂಪುಗೊಳ್ಳುತ್ತವೆ ಎನ್ನುವುದನ್ನು ಅರಿಯುವ ಮೂಲಕ ಸೌರ ವ್ಯವಸ್ಥೆಯ ಬಗೆಗೆ ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕುವುದು ಸಾಧ್ಯ ಎನ್ನುವುದು ವಿಜ್ಞಾನಿಗಳ ನಂಬಿಕೆ.


●.ಇದುವರೆಗಿನ ಸಾಧನೆಗಳು ಯಾವುವು?

✧.ನವೆಂಬರ್ 12ರಂದು ಧೂಮಕೇತುವಿನ ನ್ಯೂಕ್ಲಿಯಸ್ ಮೇಲೆ ಫಿಲೆ ಪ್ರೋಬ್ (ಶೋಧಕ) ತಲುಪುವಂತೆ ಮಾಡಿದ್ದು ‘ರೋಬೋಟಿಕ್ ಸ್ಪೇಸ್ ಪ್ರೋಬ್‌’ನ ದೊಡ್ಡ ಯಶಸ್ಸು. ಇಂಥದೊಂದು ಸಾಧನೆ ನಡೆದದ್ದು ಬಾಹ್ಯಾಕಾಶ ಇತಿಹಾಸದಲ್ಲಿ ಇದೇ ಮೊದಲು. ಕ್ಷುದ್ರಗ್ರಹ ಹಾಗೂ ಲ್ಯುಟೇಷಿಯಾದ ಚಿತ್ರಗಳನ್ನೂ ಅದು ತೆಗೆಯಿತು.


●.ಧೂಮಕೇತುವಿನ ನ್ಯೂಕ್ಲಿಯಸ್ ಮೇಲೆ ಫಿಲೆ ಪ್ರೋಬ್ ಇಳಿದ ಬಗೆ ಹೇಗೆ?

✧.ನಿರೀಕ್ಷಿತ ರೀತಿಯಲ್ಲಿ ಸಲೀಸಾಗಿ ಈ ಕಾರ್ಯ ನಡೆಯಲಿಲ್ಲ. ಧೂಮಕೇತುವಿನ ಗುರುತ್ವಾಕರ್ಷಣೆ ಶಕ್ತಿ ತುಂಬಾ ಕಡಿಮೆ. ಮೊದಲ ಬಾರಿಗೆ ಅದರ ಮೇಲೆ ಪ್ರೋಬ್ ಇಳಿದಾಗ ಎರಡು ಸಲ ಅದು ಪುಟಿಯಿತು. ಮೊದಲ ಸಲ ಪುಟಿದ ನಂತರ ಮತ್ತೆ ಆ ಸ್ಥಳ ತಲುಪಲು ಪ್ರೋಬ್‌ಗೆ ಎರಡು ತಾಸು ಬೇಕಾಯಿತು. ಪರ್ವತವೊಂದರ ನೆರಳಿನಲ್ಲಿ ಅದು ಕೊನೆಗೂ ಧೂಮಕೇತುವಿನ ನ್ಯೂಕ್ಲಿಯಸ್ ಮೇಲೆ ಕೂರುವಲ್ಲಿ ಯಶಸ್ವಿಯಾಯಿತು. ನೆರಳಿನಲ್ಲಿ ಅದು ಕಕ್ಷೆ ಸೇರಿದ್ದರಿಂದ ಸೋಲಾರ್ ಪ್ಯಾನೆಲ್‌ಗಳ ಮೇಲೆ ಹೆಚ್ಚು ಸೂರ್ಯನ ಶಾಖ ಬೀಳಲಿಲ್ಲ.


●.ಈಗ ಫಿಲೆ ಸ್ಥಿತಿ ಹೇಗಿದೆ?
✧.ಸೂರ್ಯನ ಬೆಳಕಿನಿಂದ ಅದರ ಬ್ಯಾಟರಿಗಳು ಸೂಕ್ತ ರೀತಿಯಲ್ಲಿ ಮರುಪೂರಣಗೊಳ್ಳದೇ ಇರುವುದರಿಂದ 57 ಗಂಟೆಗಳ ಕಾಲವಷ್ಟೆ ಅದು ಮಾಹಿತಿ ಕಲೆಹಾಕಿತು. ಮುಂದೆ ಸೂರ್ಯನ ಬೆಳಕು ಅದರ ಮೇಲೆ ಬಿದ್ದು, ಮತ್ತಷ್ಟು ಮಾಹಿತಿ ಹೆಕ್ಕುವುದು ಸಾಧ್ಯ ಎಂದು ವಿಜ್ಞಾನಿಗಳು ನಂಬಿದ್ದಾರೆ.

(ಕೃಪೆ: ಪ್ರಜಾವಾಣಿ) 

☀ಕುತುಬ್ ಮಿನಾರ್ : (Kutub Minar)

☀ಕುತುಬ್ ಮಿನಾರ್ :
(Kutub Minar)

━━━━━━━━━━━━━━━━━━━━━━━━━━━━━━━━━━━━━━━━━━━━━


●.ಪಿಸಾ ಗೋಪುರಕ್ಕಿಂತಲೂ ಎತ್ತರವಾದ ಅಪೂರ್ವ ಗೋಪುರ ಹದಿಮೂರನೆಯ ಶತಮಾನದಲ್ಲಿ ನಮ್ಮ ಭಾರತ ದೇಶದಲ್ಲಿ ನಿರ್ಮಾಣಗೊಂದಿದೆ. ಅದುವೇ ದಿಲ್ಲಿಯ ಹೆಗ್ಗುರುತಾಗಿರುವ ಕುತುಬ್ ಮಿನಾರ್!

●.ದಿಲ್ಲಿಯ ಸುಲ್ತಾನನಾಗಿದ್ದ ಕುತುಬ್-ಉದ್-ದೀನ್ ಕ್ರಿ.ಶ. 1199ರ ಸುಮಾರಿನಲ್ಲಿ ಇದರ ನಿರ್ಮಾಣಕಾರ್ಯವನ್ನು ಪ್ರಾರಂಭಿಸಿದ. ಆತನ ತರುವಾಯ ಆಡಳಿತ ವಹಿಸಿಕೊಂಡ ಸುಲ್ತಾನ್ ಇಲ್ತ್ ಮುಷ್ 1230 ರ ಸುಮಾರಿಗೆ ನಿರ್ಮಾಣವನ್ನು ಪೂರ್ತಿಗೊಳಿಸಿದ. ಆಗ ಅದು ನಾಲ್ಕು ಅಂತಸ್ತಿನದ್ದಾಗಿತ್ತು. ಫಿರೋಜ್ ಷಾ ತುಘಲಕ್ ನ ಕಾಲದಲ್ಲಿ ಸಿಡಿಲು ಬಡಿದು ನಾಲ್ಕನೆಯ ಅಂತಸ್ತು ನಾಶವಾಯಿತು. ಆಗ ಮೊದಲಿಗಿಂತ ಕಿರಿದಾದ ನಾಲ್ಕು ಮತ್ತು ಐದನೆಯ ಅಂತಸ್ತುಗಳನ್ನು ನಿರ್ಮಿಸಿದ.

●.ಹೀಗೆ ಒಟ್ಟು ಐದು ಅಂತಸ್ತುಗಳ ಈ ಗೋಪುರ 73ಮೀ. ಎತ್ತರವಿದೆ. ಇದರ ಬುಡದ ಸುತ್ತಳತೆ 15ಮೀ., ತುದಿಯ ಸುತ್ತಳತೆ 2.7ಮೀ., ಇದೆ. ಕೆಳಗಿನ ಮೂರು ಅಂತಸ್ತುಗಳು ಬೆಣಚು ಕಲ್ಲಿನಿಂದ ನಿರ್ಮಿತವಾಗಿದೆ. ಅವಕ್ಕೆ ಕೆಮ್ಮರಳು ಶಿಲೆಯ ಹೊದಿಕೆ ಇದೆ.

●.ನಾಲ್ಕು ಮತ್ತು ಐದನೆಯ ಅಂತಸ್ತುಗಳು ಕೆಂಪು ಶಿಲೆಯಿಂದ ನಿರ್ಮಿತವಾಗಿದೆ. ಅವಕ್ಕೆ ಅಮೃತ ಶಿಲೆಯ ಹೊದಿಕೆ ಇದೆ.ಹೊರಮೈ ಕುರಾನಿನ ಶ್ಲೋಕಗಳಿಂದಲೂ ಹೂವುಗಳ ಕೆತ್ತನೆಗಳಿಂದಲೂ ಅಲಂಕೃತವಾಗಿದೆ.

●.ದಿಲ್ಲಿಯ ಅತ್ಯಂತ ಮೋಹಕ ಪ್ರವಾಸಿ ಆಕರ್ಷಣೆಯಾದ ಈ ಗೋಪುರದ ತುದಿಗೇರಲು ಒಳಭಾಗದಲ್ಲಿ 376 ಮೆಟ್ಟಿಲುಗಳಿವೆ.ಒಂದು ಕೋನದಲ್ಲಿ ನಿಂತು ನೋಡಿದಾಗ ಕುತುಬ್ ಮಿನಾರ್ 25-30 ಸೆಂ.ಮೀ. ಅಷ್ಟು ವಾಲಿರುವಂತೆ ಕಾಣಿಸುತ್ತದೆ. ಯಾರಾದರೂ ಇದರ ಕಿವಿಗೆ ಪಿಸಾ ಗೋಪುರದ ಸುದ್ದಿ ಮುಟ್ಟಿಸಿರಬಹುದೇ? ಆದರೆ, ವಾಸ್ತವದಲ್ಲಿ ಅದು ವಾಲಿದ್ದಲ್ಲವೆಂದು ತಜ್ಞರು ಅಭಿಪ್ರಾಯಪಡುತ್ತಾರೆ.

●.ಕುತುಬ್ ಮಿನಾರಿನ ಆವರಣದಲ್ಲಿ ಲೋಹಶಾಸ್ತ್ರದಲ್ಲಿ ಭಾರತೀಯರಿಗಿದ್ದ ನೈಪುಣ್ಯದ ಸಂಕೇತವಾದ ಕಬ್ಬಿಣದ ಕಂಬ ಒಂದಿದೆ. ಅದು ನಾಲ್ಕನೆಯ ಶತಮಾನದಲ್ಲಿ ನಿರ್ಮಾಣಗೊಂಡಿದ್ದು. ಸತತವಾದ ಗಾಳಿ ಮಳೆಗೆ ಮೈ ಒಡ್ಡಿಯೂ ತುಕ್ಕು ಹಿಡಿಯದೇ ನಿಂತಿರುವ ಇದರ ಮೇಲೆ ಚಂದ್ರಗುಪ್ತ ವಿಕ್ರಮಾದಿತ್ಯರ ವಿಜಯಗಳನ್ನು ಕೊಂಡಾಡುವ ಶಾಸನಗಳನ್ನು ಕೆತ್ತಲಾಗಿದೆ.

Saturday, 28 March 2015

☀"ಕೃಷಿಯೇ ಪ್ರಧಾನ ಕಸುಬಾದ ನಮ್ಮ ರಾಷ್ಟ್ರದಲ್ಲಿ ಆಹಾರವಿದ್ದರೂ ಜನತೆಗೆ ಯಮಹಸಿವು!"— ಆಹಾರ ಭದ್ರತೆಯ ಸಮಸ್ಯೆಯೇ ಇದಕ್ಕೆ ಪ್ರಮುಖ ಕಾರಣವೇ? ಹೀಗಾದರೆ ಆಹಾರದ ಸಂರಕ್ಷಣೆ, ಭದ್ರತೆ, ವಿತರಣ ವ್ಯವಸ್ಥೆಗಳ ಸಂರಕ್ಷಣೆ ಸಾಧ್ಯವಾದರೂ ಹೇಗೆ? ವಿಶ್ಲೇಷಿಸಿ.  (Is it the Food security problem is a main reason? then how the food protection, security, distributed systems to be conserved ? Analyze.

☀"ಕೃಷಿಯೇ ಪ್ರಧಾನ ಕಸುಬಾದ ನಮ್ಮ ರಾಷ್ಟ್ರದಲ್ಲಿ ಆಹಾರವಿದ್ದರೂ ಜನತೆಗೆ ಯಮಹಸಿವು!"—
ಆಹಾರ ಭದ್ರತೆಯ ಸಮಸ್ಯೆಯೇ ಇದಕ್ಕೆ ಪ್ರಮುಖ ಕಾರಣವೇ? ಹೀಗಾದರೆ ಆಹಾರದ ಸಂರಕ್ಷಣೆ, ಭದ್ರತೆ, ವಿತರಣ ವ್ಯವಸ್ಥೆಗಳ ಸಂರಕ್ಷಣೆ ಸಾಧ್ಯವಾದರೂ ಹೇಗೆ? ವಿಶ್ಲೇಷಿಸಿ.

(Is it the Food security problem is a main reason? then how the food protection, security, distributed systems to be conserved ? Analyze.

━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ವಿಶೇಷಾಂಕ
(KAS special)

●.ಕೃಷಿಯೇ ಪ್ರಧಾನ ಕಸುಬಾದ ನಮ್ಮ ರಾಷ್ಟ್ರದಲ್ಲಿ ಸ್ವಾತಂತ್ರಾ ನಂತರ ಅದರಲ್ಲೂ ಹಸಿರು ಕ್ರಾಂತಿಯ ಅನಂತರದ ವರ್ಷಗಳಲ್ಲಿ ಆಹಾರದ ಉತ್ಪಾದನೆ 5 ಪಟ್ಟು ಹೆಚ್ಚಳವಾಗಿದೆ. ನಾವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನೇನೋ ಸಾಧಿಸಿದ್ದೇವೆ. ಆದರೆ, ಆಹಾರ ಭದ್ರತೆಯ ಸಮಸ್ಯೆ ಬಹು ದೊಡ್ಡ ಸಮಸ್ಯೆಯಾಗಿ ಇನ್ನೂ ನಮ್ಮನ್ನು ಕಾಡುತ್ತಿದೆ.

✧.ಆಹಾರದ ಅಭದ್ರತೆಯೆಂದರೆ ಆಹಾರ ಭದ್ರತೆ ಮಾತ್ರ ಅಲ್ಲ, ಈ ಸಮಸ್ಯೆಯಲ್ಲಿಹಲವು ಮುಖಗಳಿವೆ - ಗುಣಾತ್ಮಕ, ಪ್ರಮಾಣಾತ್ಮಕ, ಆಡಳಿತಾತ್ಮಕ ಮತ್ತು ಹಂಚಿಕೆಯಲ್ಲಿನ ಲೋಪದೋಷಗಳು ದೇಶದಲ್ಲಿ ಹಸಿರು ಮತ್ತು ಅಪೌಷ್ಟಿಕತೆಯ ಸಮಸ್ಯೆ ಆತಂಕ ಹುಟ್ಟಿಸುವಂಥದ್ದೇ.

✧.ಇದಕ್ಕೆ ಕಾರಣ ಪೂರೈಕೆಯಲ್ಲಿನ ಲೋಪದೋಷಗಳು. ಜಾಗತಿಕವಾಗಿ ಈ ಸಮಸ್ಯೆ ಎಲ್ಲ ದೇಶಗಳನ್ನೂ ಕಾಡುತ್ತಿದೆ.ವಾರ್ಷಿಕ 30-40% ಆಹಾರದ ವಸ್ತುಗಳು ನಷ್ಟವಾಗುತ್ತಿವೆ. ಎಲ್ಲರಿಗೂ ಆಹಾರ, ಆರೋಗ್ಯ ಧ್ಯೇಯವನ್ನು ಸಾಧಿಸಬೇಕಾದರೆ ದೇಶದ ಜನರಿಗೆ ಆಹಾರ ದೊರೆಯುವಂತಾಗಬೇಕು. ಆಹಾರದ ಸಂರಕ್ಷಣೆಯೇ ಆಹಾರದ ಭದ್ರತೆಗೆ ಭದ್ರ ಬುನಾದಿ.


●.ಆಹಾರದ ಭದ್ರತೆ ಏನು?

✧.ಆಹಾರ ಭದ್ರತೆ ಎಂದರೆ ದೇಶದ ಎಲ್ಲ ಜನರಿಗೆ ಬೇಕಾಗುವ ಆಹಾರ ಪದಾರ್ಥಗಳು ತಮ್ಮ ನಿತ್ಯ ಬಳಕೆಗೆ ಸಿಗುವಂತಾಗುವುದು. ಇದೇ ಆಹಾರ ಭದ್ರತೆ.

✧.ಆಹಾರ ವಸ್ತುಗಳ ಪೂರೈಕೆಯಿಂದಾದ ಗೊಂದಲ ಅಭದ್ರತೆ ಮತ್ತು ಆಹಾರ ವಸ್ತುಗಳ ಬೆಲೆಯೇರಿಕೆಗೆ ಕಾರಣ.
ಯಾವಾಗ ಆಹಾರ ವಸ್ತುಗಳ ಬೇಡಿಕೆಯು ಆಹಾರ ವಸ್ತುಗಳ ಪೂರೈಕೆಗಿಂತ ಜಾಸ್ತಿಯಾಗುತ್ತಾ ಹೋಗುತ್ತದೋ ಆವಾಗ ಆಹಾರ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಏರತೊಡಗುತ್ತದೆ.

✧.ನಮ್ಮ ದೇಶದಲ್ಲಿವರ್ಷದಿಂದ ವರ್ಷಕ್ಕೆ ಆಹಾರ ವಸ್ತುಗಳ ಉತ್ಪಾದನೆ ಏರುತ್ತಲೇ ಇದೆ. ದೇಶದಲ್ಲಿ ಆಹಾರ ವಸ್ತುಗಳ ಉತ್ಪಾದನೆ (2006-7ರಿಂದ 2013-14)ಯ ಅಂಕಿ ಅಂಶಗಳು ದೇಶ ಉತ್ಪಾದನೆ ಮಾಡಿದ ಆಹಾರ ವಸ್ತುಗಳ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ದೇಶವು 2006-07ರ ವರ್ಷ 217.28 ಮಿಲಿಯನ್‌ ಟನ್‌ ಗಳಷ್ಟು ಆಹಾರ ಉತ್ಪಾದನೆ ಮಾಡಿದೆ. 2013-14ರಲ್ಲಿ ಒಟ್ಟು ಆಹಾರ ವಸ್ತುಗಳ ಉತ್ಪಾದನೆ 264.3 ಮಿಲಿಯನ್‌ ಟನ್‌ಗಳು.

✧.ಹೊಲದಿಂದ ಉತ್ಪಾದನೆ ಆದ ಆಹಾರ ಊಟದ ತಟ್ಟೆಗೆ ಬರುವಲ್ಲಿಯವರೆಗೆ ಪೋಲಾಗುವುದೇ ಜನರಿಗೆ ಆಹಾರ ದೊರೆಯದೇ ಇರುವುದಕ್ಕೆ ಕಾರಣ. ಇದರ ಪರಿಣಾಮ ಆಹಾರದ ಅಭದ್ರತೆ.


●.ಆಹಾರದ ಅಭದ್ರತೆಗೆ ಕಾರಣ ಏನು?

✧.ಈ ಸಮಸ್ಯೆಗೆ ಮುಖ್ಯ ಕಾರಣ ಉತ್ಪಾದಿಸಿದ ಆಹಾರ ವಸ್ತುಗಳು ಹಾಳಾದ ಪರಿಣಾಮ ಅಥವಾ ನಷ್ಟದ ಪರಿಣಾಮ. ಎಷ್ಟೇ ಉತ್ಪಾದಿಸಿದರೂ, ಉತ್ಪಾದಿಸಿದ್ದನ್ನು ಸರಿಯಾಗಿ ಸಂರಕ್ಷಿಸದಿದ್ದರೆ ಆಪತ್ತು ಖಂಡಿತ.

✧.ಆಹಾರ ನಷ್ಟದ ಸಮಸ್ಯೆ ಬಹು ದೊಡ್ಡ ಸಮಸ್ಯೆಯಾದರೆ, ಜತೆಗೆ ನಷ್ಟವಾದ ಹಾಳಾದ ವಸ್ತುಗಳು ಸೃಷ್ಟಿಸುವ ಘನತ್ಯಾಜ್ಯವನ್ನು ವಿಲೇವಾರಿ ಮಾಡುವುದು ಮತ್ತು ಅವುಗಳಿಂದ ಉಂಟಾಗುವ ಸಾಂಕ್ರಾಮಿಕ ರೋಗರುಜಿನಗಳನ್ನು ನಿವಾರಿಸಿಕೊಳ್ಳುವುದು ಬಹು ದೊಡ್ಡ ತಲೆನೋವು.

✧.ಭಾರತವು ಕಳೆದ ವರ್ಷಗಳಲ್ಲಿ ಸುಮಾರು 45 ಸಾವಿರ ಕೋಟಿ ರೂ.ನಷ್ಟು ಆಹಾರ ವಸ್ತುಗಳನ್ನು ಕಳೆದುಕೊಂಡಿದೆ.

✧.ಭಾರತವು ಜಗತ್ತಿನ ಇನ್ನೂ ಅತ್ಯಂತ ಹೆಚ್ಚು ಹಣ್ಣು ಹಂಪಲು ಮತ್ತು ತರಕಾರಿಗಳನ್ನು ಉತ್ಪಾದನೆ ಮಾಡುವ ರಾಷ್ಟ್ರವಾಗಿದೆ. ದೇಶದಲ್ಲಿ ಉತ್ಪಾದನೆಯಾದ ಹಣ್ಣು ಹಂಪಲು, ತರಕಾರಿಗಳು ಮತ್ತು ಆಹಾರ ವಸ್ತುಗಳ ನಷ್ಟದ ಪ್ರಮಾಣ ರೂ.44,000 ಕೋಟಿಗಳಷ್ಟು. ಅದರಲ್ಲಿ ಹಣ್ಣು ಹಂಪಲುಗಳು ಮತ್ತು ತರಕಾರಿಗಳ ನಷ್ಟದ ಪ್ರಮಾಣ ಒಟ್ಟು 13,300 ಕೋಟಿ ರೂ.ಗಳಷ್ಟು. ಅಂದರೆ ಒಟ್ಟು ವಾರ್ಷಿಕ ಉತ್ಪಾದನೆಯ 18%. ಆಹಾರ ವಸ್ತುಗಳ ನಷ್ಟದ ಪ್ರಮಾಣ 30,700 ಕೋಟಿ ರೂ.ಗಳು.

✧.ಭಾರತೀಯ ಆಹಾರ ನಿಗಮದ ವರದಿಯ ಪ್ರಕಾರ ಆಹಾರ ವಸ್ತುಗಳಲ್ಲಿ ಸುಮಾರು 120.21ಕೋಟಿ ರೂ. ಮೌಲ್ಯದಷ್ಟು ಸಂಗ್ರಹದ ಹಂತದಲ್ಲಿ ನಷ್ಟವಾಗುತ್ತದೆ. 106.18 ಮೌಲ್ಯದ ಆಹಾರವು ಸಾಗಾಣಿಕೆಯ ಹಂತದಲ್ಲಿ ನಷ್ಟವಾಗುತ್ತದೆ. ಉಳಿದ 9.85 ಕೋಟಿ ರೂ. ಮೌಲ್ಯದ ಆಹಾರ ವಸ್ತುಗಳು ಬಳಕೆದಾರರ ದಿನನಿತ್ಯದ ಬಳಕೆಗೂ ಅಸಾಧ್ಯವಾದುದು.

✧.ಇನ್‌ಸ್ಟಿಟ್ಯೂಷನ್‌ ಆಫ್ ಮೆಕ್ಯಾನಿಕಲ್‌ ಎಂಜಿನಿಯರ್ಸ್‌ನ ವರದಿಯ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 21 ಮಿಲಿಯನ್‌ ಟನ್‌ಗಳಷ್ಟು ಗೋಧಿ ನಷ್ಟವಾಗುತ್ತಿದೆ. ಈ ಪ್ರಮಾಣ ಆಸ್ಟ್ರೇಲಿಯಾ ದೇಶವು ವಾರ್ಷಿಕವಾಗಿ ಉತ್ಪಾದಿಸುವ ಗೋಧಿಯ ಪ್ರಮಾಣಕ್ಕೆ ಸಮ.

 ✧.ಫಾರಿನ್‌ ಡೈರೆಕ್ಟ್ ಇನ್ವೆಸ್ಟ್‌ಮೆಂಟ್‌ ಇನ್‌ ರಿಟೇಲ್‌ನ ವರದಿಯ ಪ್ರಕಾರ ದೇಶವು 180 ಮಿಲಿಯನ್‌ ಮೆಟ್ರಿಕ್‌ ಟನ್‌ನಷ್ಟು ಹಣ್ಣು ಹಂಪಲು ತರಕಾರಿಗಳನ್ನು ಉತ್ಪಾದಿಸುತ್ತದೆ, ದೇಶದಲ್ಲಿ 23.6 ಮಿಲಿಯನ್‌ ಮೆಟ್ರಿಕ್‌ ಟನ್‌ ನಷ್ಟು ಹಣ್ಣು ಹಂಪಲು ತರಕಾರಿಗಳನ್ನು ಸಂರಕ್ಷಿಸಲು 5,386 ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆ ಇದೆ.

✧.ಸೌಮಿತ್ರ ಚೌಧುರಿ ಕಮಿಟಿಯ ಪ್ರಕಾರ 2012ರಲ್ಲಿ 61.3 ಮಿಲಿಯನ್‌ ಟನ್‌ ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆ ನಮ್ಮ ದೇಶಕ್ಕೆ ಅಗತ್ಯವಿತ್ತು. ಆದರೆ ನಮಲ್ಲಿ 29 ಮಿಲಿಯನ್‌ ಟನ್‌ನಷ್ಟು ಹಾಳಾಗಬಹುದಾದ ಆಹಾರ ವಸ್ತುಗಳನ್ನು ಸಂಗ್ರಹಿಸಿಡಲು ಕೋಲ್ಡ್‌ ಸ್ಟೋರೇಜ್‌ ಹಂಚಿಕೆಯಲ್ಲಿನ ಲೋಪದೋಷ ವ್ಯವಸ್ಥೆ ಇದೆ.ಈ ಎಲ್ಲ ಅಂಶಗಳು ದೇಶದಲ್ಲಿ ಆಹಾರ ವಸ್ತುಗಳನ್ನು ಕಾಪಾಡಲು ಇರುವ ಅವ್ಯವಸ್ಥೆಯ ಕಪ್ಪು ಮುಖವನ್ನು ತೋರಿಸುತ್ತವೆ.


●.ಹೀಗಾದರೆ ಸಂರಕ್ಷಣೆ ಸಾಧ್ಯವಾದರೂ ಹೇಗೆ?

✧.ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಮತ್ತು ಆರ್ಥಿಕ ನೀತಿ ರೂಪಿಸಲು ಆಹಾರದ ಸಂರಕ್ಷಣೆ, ಭದ್ರತೆ, ವಿತರಣ ವ್ಯವಸ್ಥೆಗಳ ದುರಾವಸ್ಥೆಗಳನ್ನು ಸರಿಪಡಿಸಿಕೊಳ್ಳಬೇಕಾದ ಮಾರ್ಗೋಪಾಯಗಳಿಗೆ ಎಲ್ಲಿಲ್ಲದ ಪ್ರಾಮುಖ್ಯ.

✧.ಆಹಾರ ವಸ್ತುಗಳ ಬೆಲೆಯಲ್ಲಿನ ಏರಿಕೆ, ರೈತರು ತಾವು ಬೆಳೆಸಿದ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಬರದೆ ಆತ್ಮಹತ್ಯೆಗೆ ಶರಣು ಹೋಗುವುದು, ಕೃಷಿಯನ್ನು ತ್ಯಜಿಸಿಹೋಗುವ ಬಗ್ಗೆ ಇವತ್ತು ಮುಖ್ಯ ಚರ್ಚೆ ನಡೆಯುತ್ತಿದೆ. ಈ ಸಮಸ್ಯೆಗೆ ಪರಿಹಾರವಂತೂ ಇನ್ನೂ ಸಿಕ್ಕಿಲ್ಲ.


●.ಪರಿಹಾರ ಏನು?

✧.ಆಹಾರ ವಸ್ತುಗಳ ನಷ್ಟದ ಬಗ್ಗೆ ನಾವು ಅರಿತುಕೊಂಡರೆ ಆಹಾರ ಅಭದ್ರತೆಗೆ ಉತ್ಪಾದಿಸಿದ ಆಹಾರವನ್ನು ಸಂರಕ್ಷಣೆ ಮಾಡದಿರುವುದೇ ಮುಖ್ಯ ಕಾರಣವೆಂದು ತಿಳಿಯುತ್ತದೆ.

✧.ಕೃಷಿಯನ್ನು ಸಂರಕ್ಷಿಸುವುದೊಂದೇ ಆಹಾರ ಭದ್ರತೆಯನ್ನು ಸಾಧಿಸಲು ಉಳಿದಿರುವ ಮಾರ್ಗ.

✧.ಕೃಷಿಕರಿಗೆ ಮೂಲ ಸೌಕರ್ಯ, ಉತ್ತಮ ಬೀಜ, ಸಾಗಾಣಿಕೆ ಸೌಕರ್ಯ, ಉತ್ಪಾದಿಸಿದ ವಸ್ತುಗಳಿಗೆ ಯೋಗ್ಯ ಬೆಲೆ, ಸಂರಕ್ಷಣಾ ಘಟಕಗಳ ಸ್ಥಾಪನೆ,ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ಶೇಖರಿಸಿಡಲು ಉಗ್ರಾಣ, ಶೈತ್ಯಾಗಾರದ ವ್ಯವಸ್ಥೆಗಳು ಉತ್ಪಾದನೆಯಾದ ಆಹಾರವನ್ನು ಸಂರಕ್ಷಿಸುವುದರಲ್ಲಿ ಸಂಶಯವಿಲ್ಲ.

✧.ಸಾರ್ವಜನಿಕ ವಿತರಣ ವ್ಯವಸ್ಥೆಯಲ್ಲಿನ ಲೋಪದೋಷಗಳು ನಿವಾರಣೆಯಾಗಬೇಕಾಗಿದೆ. ಈ ಪರಿಹಾರೋಪಾಯಗಳು ಕಳೆದ ಹಲವಾರು ವರ್ಷಗಳಿಂದ ಬಾಯಿಮಾತಿನಲ್ಲಿ ಇವೆಯೇ ಹೊರತು ಅವು ಕಾರ್ಯ ರೂಪಕ್ಕೆ ಇನ್ನೂ ಬಂದಿಲ್ಲ.

✧.ನಾವು ಆಹಾರ ವಸ್ತುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದರೂ ಆಹಾರ ಭದ್ರತೆಯನ್ನು ಇನ್ನೂ ಸಾಧಿಸಲಾಗಲಿಲ್ಲ. ಇದಕ್ಕೆ ನಿಜವಾದ ಕಾರಣ ಜನರಲ್ಲಿ ಆಹಾರವನ್ನು ಕೊಂಡುಕೊಳ್ಳುವಷ್ಟು ಹಣ ಇರದೇ ಇರುವುದು. ಪ್ರಾಯಶಃ ಜನರಿಗೆ ತಮ್ಮ ರೂಪಾಯಿಗಳನ್ನು ತಾವೇ ಪಡೆದುಕೊಳ್ಳಲು ಸರಿಯಾದ ಉದ್ಯೋಗವಿದ್ದಲ್ಲಿ ಆಹಾರ ಭದ್ರತೆ ಕಾಯಿದೆಯೂ ಬೇಕಿಲ್ಲ.

✧.ದುಡಿಯಲು ಕೆಲಸವಿದೆಯೆಂದಾದರೆ ಆಹಾರ ಭದ್ರತೆಯ ಸಮಸ್ಯೆ ನಿವಾರಣೆಯಾದಂತೆ.

✧.ಗ್ಲೋಬಲ್‌ ಹಂಗರ್‌ ಇಂಡೆಕ್ಸ್‌ 2013ರ ಪ್ರಕಾರ ಭಾರತ 120 ರಾಷ್ಟ್ರಗಳ ಪಟ್ಟಿಯಲ್ಲಿ 63ನೇ ಸ್ಥಾನದಲ್ಲಿದೆ. ಎಲ್ಲರಿಗೂ ಆಹಾರ ದೊರಕಿಸಿಕೊಡುವುದು ಅತ್ಯಂತ ಪವಿತ್ರವಾದ ಕೆಲಸ.

✧.ರಾಜಕೀಯ ಇಚ್ಛಾಶಕ್ತಿ ಮತ್ತು ಉತ್ತಮ ಆಡಳಿತವು ಒದಗಿದರೆ ದೇಶದ ಜನರೆಲ್ಲರಿಗೂ ದಿನನಿತ್ಯ ಬೇಕಾಗುವ ಆಹಾರವನ್ನು ಒದಗಿಸುವುದು ಅತೀ ಸುಲಭದ ಕೆಲಸ.

(ಕೃಪೆ: ಉದಯವಾಣಿ) 

Thursday, 26 March 2015

☀ ಸಾಮಾನ್ಯ ಜ್ಞಾನ (ಭಾಗ - 13) ☀ General Knowledge (Part-13): ☆.. ಪ್ರಚಲಿತ ಘಟನೆಗಳೊಂದಿಗೆ ...

☀ ಸಾಮಾನ್ಯ ಜ್ಞಾನ (ಭಾಗ - 13)
☀ General Knowledge (Part-13):

☆.. ಪ್ರಚಲಿತ ಘಟನೆಗಳೊಂದಿಗೆ ...

━━━━━━━━━━━━━━━━━━━━━━━━━━━━━━━━━━━━━━━━━━━━━


581) ಹರಗೋವಿಂದ ಖುರಾನ್ ಅವರಿಗೆ ನೊಬೆಲ್ ಪಾರಿತೋಷಕ ಯಾವ ವರ್ಷದಲ್ಲಿ ದೊರೆಯಿತು?
— 1968 ರಲ್ಲಿ.


582) ಜಾರ್ಖಂಡ್ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
—15/11/2000 ರಲ್ಲಿ.


583) ಪ್ರಸ್ತುತ ಬಾಂಗ್ಲಾದೇಶದ ಆಡಳಿತಾರೂಢ ಪಕ್ಷ ಮತ್ತು ಪ್ರಮುಖ ವಿರೋಧ ಪಕ್ಷಗಳು ಯಾವವು?

— ಆಡಳಿತಾರೂಢ ಪಕ್ಷ: -ಅವಾಮಿ ಲೀಗ್ ಪಕ್ಷ (ಎಎಲ್‌)

— ವಿರೋಧ ಪಕ್ಷ: -ಬಾಂಗ್ಲಾದೇಶ್‌ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ)


584) ಡೆನ್ಮಾರ್ಕ್ ದೇಶದ ರಾಷ್ಟ್ರೀಯ ಪಕ್ಷಿ ಯಾವುದು?
— ಕೋಗಿಲೆ.


585) ಭಾರತದಲ್ಲಿ ಜನಗಣತಿ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?
—10 ವರ್ಷಗಳಿಗೊಮ್ಮ


586) ಇತ್ತೀಚೆಗೆ (Fri, 9th Jan, 2015) ವಿಶ್ವ ಶಾಂತಿ ಪಾಲನಾ ಪಡೆಗಳಿಗೆ ಅತ್ಯಗತ್ಯ ನೆರವು ನೀಡುವ ವಿಭಾಗದ ಮುಖ್ಯಸ್ಥರನ್ನಾಗಿ ಯಾರನ್ನು ನೇಮಕ ಮಾಡಲಾಗಿದೆ?
— ಅತುಲ್‌ ಖರೆ (ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿ)


587) 2014ನೇ ಸಾಲಿನ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಕನ್ನಡದ 'ಉತ್ತರಾರ್ಧ' ಪ್ರಬಂಧ ಕೃತಿ ಆಯ್ಕೆಯಾಗಿದೆ. ಅಂದಹಾಗೆ ಇದರ ಲೇಖಕರು ಯಾರು?
—. ಡಾ. ಜಿ. ಎಚ್. ನಾಯಕ


588) MOM (ಮಾಮ್‌) ಎಂದರೆ "ಮಾರ್ಸ್‌ ಆರ್ಬಿಟರ್‌ ಮಿಷನ್" ಎಂದರ್ಥ.


589) ಜನಶ್ರೀ ವಿಮೆ ಯೋಜನೆಯ ರಾಜ್ಯ ಸರ್ಕಾರದ ಯಾವ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ?
— ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆ.


590) ಭಾರತದ ಮೊದಲ ಆಧುನಿಕ ಖಗೋಳ ಪರೀವಿಕ್ಷಣಾಲಯ ಎಲ್ಲಿ ನಿರ್ಮಾಣವಾಯಿತು?
— ಚೆನ್ನೈ.


591) ಟರ್ಕಿ ದೇಶದ ರಾಜಧಾನಿ ಯಾವುದು?
— ಇಸ್ತಾಂಬುಲ್.


592) ಇತ್ತೀಚೆಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಜೀವನ ಆಧಾರಿತ ‘ದ ರೆಡ್‌ ಸ್ಯಾರಿ: ಎ ಡ್ರಾಮಾಟೈಸ್ಡ್‌ ಬಯಾಗ್ರಫಿ ಆಫ್ ಸೋನಿಯಾ ಗಾಂಧಿ’ ವಿವಾದಾತ್ಮಕ ಜೀವನ ಚರಿತ್ರೆಯನ್ನು ಬರೆದವರು ಯಾರು?
— ಸ್ಪೇನ್‌ ಲೇಖಕ ಜೇವಿಯರ್‌ ಮೋರೊ.


593) ಇತ್ತೀಚೆಗೆ "ಶ್ರೀಲಂಕಾದ ಮೊದಲ ಸಂತ" ಎಂದು ಕ್ರೈಸ್ತ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ಯಾರನ್ನು ಘೋಷಿಸಿದರು.
— ಭಾರತ ಮೂಲದ ಜೋಸೆಫ್‌ ವಾಜ್‌.


594) ಇತ್ತೀಚೆಗೆ ಅಮೆರಿಕ ಮೂಲದ ನ್ಯಾಷನಲ್ ಸ್ಪೇಸ್ ಸೊಸೈಟಿ(ಎನ್‌ಎಸ್‌ಎಸ್)ಯು "2015 ಸ್ಪೇಸ್ ಪಯನಿಯರ್ ಅವಾರ್ಡ್" ಅನ್ನು ಯಾರಿಗೆ ಘೋಷಿಸಿದೆ?
— ಇಸ್ರೋಗೆ .


595) ಪ್ರಸ್ತುತ (2015) ಭೂತಾನ್ ದೇಶದ ಪ್ರಧಾನಿ ಯಾರು?
— ತ್ಸೆರಿಂಗ್‌ ತೊಗ್ಬೆ.


596) 'ಆಳ್ವಾಸ್ ವಿರಾಸತ್ - 2015'ರ ಪ್ರಶಸ್ತಿಗೆ ಆಯ್ಕೆಯಾದ ಉಸ್ತಾದ್ ಅಮ್ಜದ್ ಆಲಿಖಾನ್ ಅವರು ಯಾವ ವಾದ್ಯದಲ್ಲಿ ಹೆಸರುವಾಸಿಯಾಗಿದ್ದಾರೆ?
—ಸರೋದ್


597) ತುರ್ತು ಪರಿಸ್ಥತಿ ಹೇಳಿಕೆಯನ್ನು ವಿರೋಧಿಸಿ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಕನ್ನಡ ಲೇಖಕರು ಯಾರು ?
—ಶಿವರಾಮ್ ಕಾರಂತ


598) CBFC (ಸಿಬಿಎಫ್‌ಸಿ) ಎಂದರೆ:
— "ಕೇಂದ್ರ ಚಲನಚಿತ್ರ ಪ್ರಮಾಣಪತ್ರ ಮಂಡಳಿ" ಎಂದರ್ಥ.


599) ‘ಮಾಮ್’ ನೆರವಿನಿಂದ ಬಳಸಿಕೊಂಡು ಅಧ್ಯಯನ ಮಾಡಬೇಕೆಂದಿರುವ ಅಗಸ್ಟ್.19ರಂದು ಮಂಗಳನ ಕಕ್ಷೆಯನ್ನು ಹಾದು ಹೋಗಲಿರುವ ಧೂಮಕೇತುವು ಯಾವುದು?
— ಮಂಗಳನ ಸನಿಹದಲ್ಲಿರುವ ‘ಸೈಡಿಂಗ್‌ ಸ್ಪ್ರಿಂಗ್‌’ ಎಂಬ ಧೂಮಕೇತು.


600) ತಾಲಿಬಾನ್ ಉಗ್ರರಿಂದ ಮಕ್ಕಳ ಹತ್ಯಾಕಾಂಡದ ಸಾಮೂಹಿಕ ಘಟನೆ ಈಚೆಗೆ ಕೆಳಕಂಡ ಯಾವ ಸ್ಥಳದಲ್ಲಿ ನಡೆಯಿತು?
— ಪೇಶಾವರ್


To be continued...

Wednesday, 25 March 2015

☀ಪನಾಮಾ ಕಾಲುವೆ ಮತ್ತು ಅದರ ಮಹತ್ವ: (Panama Canal and it's Importance) 

☀ಪನಾಮಾ ಕಾಲುವೆ ಮತ್ತು ಅದರ ಮಹತ್ವ:
(Panama Canal and it's Importance)

━━━━━━━━━━━━━━━━━━━━━━━━━━━━━━━━━━━━━━━━━━━━━


✧.ಪನಾಮಾ ಕಾಲುವೆ ಮಾನವನಿಂದ ನಿರ್ವಿುಸಲ್ಪಟ್ಟ ಜಗತ್ತಿನ ಬಹು ಮುಖ್ಯ ಕಾಲುವೆ ಪನಾಮಾ.

✧.ಅಟ್ಲಾಂಟಿಕ್ ಮತ್ತು ಶಾಂತ ಸಾಗರಗಳ ನಡುವೆ ಸಂಪರ್ಕ ಕಲ್ಪಿಸುವ ಈ ಕಾಲುವೆಯನ್ನು ಪನಾಮಾ ಜಲಸಂಧಿಯ ನಡುವೆ ನಿರ್ವಿುಸಲಾಗಿದೆ.

✧.ಇದರ ಉದ್ದ 82 ಕಿ.ಮೀ.

✧.ಸಮುದ್ರಮಟ್ಟದಿಂದ 26 ಮೀಟರ್​ಗಳ ಮೇಲೆ ಹಡಗುಗಳನ್ನು ತರುವ ಮೂರು ಜೊತೆ ಲಾಕ್​ಗಳಿವೆ.

✧.ಪನಾಮಾ ಕಾಲುವೆಯ ಲಾಕ್ ಚೇಂಬರ್​ಗಳ ಉದ್ದ 100 ಅಡಿ, ಅಗಲ 110 ಅಡಿ ಮತ್ತು ಆಳ 41 ಅಡಿ.

✧.ಬಹುತೇಕ ವಾಣಿಜ್ಯ ನೌಕೆಗಳು ಮತ್ತು ನೌಕಾಬಲದ ನೌಕೆಗಳು ಈ ಕಾಲುವೆಯ ಮೂಲಕ ಸಂಚರಿಸುತ್ತವೆ.

✧.ಈ ಕಾಲುವೆಯ ಲಾಕ್ ಗೇಟ್​ಗಳು 47ರಿಂದ 82 ಅಡಿಗಳಷ್ಟು ಎತ್ತರವಿದೆ.

✧.ಎರಡೂ ಕಡೆಯಿಂದಲೂ ಹಡಗುಗಳು ಏಕಕಾಲದಲ್ಲಿ ಸಂಚರಿಸಲು ಇವು ಅವಕಾಶ ಮಾಡಿಕೊಡುತ್ತವೆ. ಮೋಟಾರ್​ಗಳು ಇವುಗಳ ಚಲನವಲನವನ್ನು ನಿಯಂತ್ರಿಸುತ್ತವೆ. ಇವುಗಳ ಕಾರ್ಯ ನಿರ್ವಹಣೆಗಾಗಿ ಕಂಟ್ರೋಲ್ ಟವರ್ ಇದೆ.

✧.ಕಾಯುವ ಸಮಯವೂ ಸೇರಿದಂತೆ ಈ ಕಾಲುವೆಯನ್ನು ಹಾದುಹೋಗಲು ಹಡಗುಗಳಿಗೆ 15 ಗಂಟೆಗಳ ಅವಧಿ ಬೇಕಾಗುತ್ತದೆ.

✧.ಸ್ಪೇನ್ 16ನೇ ಶತಮಾನದಲ್ಲಿ ಪನಾಮಾ ಕಾಲುವೆ ನಿರ್ವಿುಸುವ ಯೋಚನೆ ಮಾಡಿತು.

 ✧.1846ರಲ್ಲಿ ಇದರ ನಿರ್ವಣಕ್ಕೆ ಸಂಬಂಧಿಸಿದಂತೆ ಅಮೆರಿಕವು ಕೊಲಂಬಿಯಾದೊಡನೆ ಒಪ್ಪಂದ ಮಾಡಿಕೊಂಡಿತು.

✧.1855ರಲ್ಲಿ ಅಮೆರಿಕವು ಈ ಯೋಜನೆಗೆ ಬೇಕಾಗಿದ್ದ ಹಣಕಾಸು ನೆರವನ್ನು ಒದಗಿಸಿತು.

✧.ಪನಾಮಾ 1903ರಲ್ಲಿ ಕೊಲಂಬಿಯಾದಿಂದ ಸ್ವಾತಂತ್ರವಾಯಿತು. ಅದೇ ವರ್ಷ ಅಮೆರಿಕ ಮತ್ತು ಪನಾಮಾ ನಡುವೆ ಒಪ್ಪಂದ ಏರ್ಪಟ್ಟಿತು. ಈ ಒಪ್ಪಂದದ ಮೇರೆಗೆ ಕಾಲುವೆಯ ನಿರ್ವಣದ ಹಕ್ಕು ಅಮೆರಿಕಕ್ಕೆ ಸಿಕ್ಕಿತು.

✧.1904ರಲ್ಲಿ ಕಾಲುವೆಯ ನಿರ್ವಣ ಪ್ರಾರಂಭವಾಯಿತು.

✧.1914ರ ಆಗಸ್ಟ್​ನಲ್ಲಿ ಕಾಲುವೆಯನ್ನು ಹಡಗುಗಳ ಸಂಚಾರಕ್ಕೆ ತೆರೆಯಲಾಯಿತು.


●.ವಿವರಣೆ (Explanation):
━━━━━━━━━━━━━━━━━

✧.ಅಟ್ಲಾಂಟಿಕ್‌ ಮತ್ತು ಪೆಸಿಫಿಕ್‌ ಸಾಗರವನ್ನು ಬೆಸೆದ ಪನಾಮಾ ಕಾಲುವೆ ನಿರ್ಮಾಣವಾಗಿ ಒಂದು ಶತಮಾನ ಸಂದಿದೆ.
1914ರ ಆ.15ರಂದು ಕಾಲುವೆಯಲ್ಲಿ ಹಡಗು ಸಂಚಾರ ಆರಂಭವಾಗಿತ್ತು. ಇದರಿಂದ ಸರಕು ಸಾಗಣೆ ಹಡಗುಗಳು ದಕ್ಷಿಣ ಅಮೆರಿಕವನ್ನು ಸುತ್ತುಬಳಸಿ ಕ್ರಮಿಸ ಬೇಕಾದ ಪ್ರಯಾಸ ನಿವಾರಣೆಯಾಗಿತ್ತು. ಇದನ್ನು ಆಧುನಿಕ ಎಂಜಿನಿಯರಿಂಗ್‌ ಅದ್ಭುತ ಎಂತಲೇ ಬಣ್ಣಿಸಲಾಗಿದೆ.

●.ಆರಂಭವಾಗಿದ್ದು ಏಕೆ?:
— ಪನಾಮಾ ಕಾಲುವೆ ನಿರ್ಮಾಣಗೊಳ್ಳುವುದಕ್ಕೂ ಮುನ್ನ ಸರಕು ಸಾಗಣೆ ಹಡಗುಗಳು ಯುರೋಪ್‌ ಖಂಡವನ್ನು ತಲುಪಬೇಕಾದರೆ, ಅರ್ಜೆಂಟೀನಾ, ಚಿಲಿಯ ಮೂಲಕ ಸುತ್ತಿಕೊಂಡು 10 ಸಾವಿರ ಮೈಲಿಗಳನ್ನು ಕ್ರಮಿಸ ಬೇಕಾಗಿತ್ತು. ಇದಕ್ಕೆ ಎರಡು ತಿಂಗಳಿಗೂ ಅಧಿಕ ಸಮಯ ತಗುಲುತ್ತಿತ್ತು. ಹೀಗಾಗಿ ಪರ್ಯಾಯ ಮಾರ್ಗದತ್ತ ಹುಡುಕಾಟ ಆರಂಭವಾಯಿತು.

●.ಮೊದಲ ಸಂಚಾರ:
— ಅಟ್ಲಾಂಟಿಕ್‌ ಮತ್ತು ಪೆಸಿಫಿಕ್‌ ಸಾಗರವನ್ನು ಬೆಸೆಯುವ 51 ಮೈಲಿ ಉದ್ದದ ಪನಾಮಾ ಕಾಲುವೆಯನ್ನು ಈ ಹಿನ್ನೆಲೆಯಲ್ಲಿ ನಿರ್ಮಿಸಲಾಯಿತು. ಎಸ್‌ಎಸ್‌ ಆಂಕನ್‌ ಎಂಬ ಸರಕು ಸಾಗಣೆ ಹಡಗು 9 ತಾಸುಗಳ ಪ್ರಯಾಣಿಸುವ ಮೂಲಕ 1914ರ ಆಗಸ್ಟ್‌ 15ರಂದು ವಿಧ್ಯುಕ್ತವಾಗಿ ಕಾಲುವೆಯಲ್ಲಿ ಸಂಚಾರ ಆರಂಭಗೊಂಡಿತು. ಕಾಲುವೆ ನಿರ್ಮಾಣಗೊಂಡ ಬಳಿಕ ಇದು ಜಲ ಸಾರಿಗೆಯಲ್ಲಿ ಕ್ರಾಂತಿಯನ್ನೇ ನಿರ್ಮಿಸಿತು.

●.10 ವರ್ಷಗಳ ನಿರ್ಮಾಣ ಕಾರ್ಯ:
— ಪನಾಮಾ ಕಾಲುವೆ ನಿರ್ಮಾಣಕ್ಕೆ 10 ವರ್ಷ ತಗುಲಿದೆ. ಕಾಲುವೆಯ ನಿರ್ಮಾಣಕ್ಕೆ ಈಗಿನ ದರದಲ್ಲಿ 28,200 ಕೋಟಿ ರೂ. ವೆಚ್ಚವಾಗಿದೆ. ಕಾಲುವೆ ಆರಂಭವಾದಾಗ ಈ ಮಾರ್ಗದಲ್ಲಿ ವರ್ಷಕ್ಕೆ 1 ಸಾವಿರ ಹಡಗುಗಳು ಸಂಚರಿಸುತ್ತಿದ್ದವು. ಇಂದು ಈ ಕಾಲುವೆಯಲ್ಲಿ ದಿನಕ್ಕೆ ಸರಾಸರಿ 35 ಹಡಗುಗಳು ಸಂಚರಿಸುತ್ತಿವೆ.

●.ಮೂರನೇ ಲಾಕ್ಸ್‌ಗಳ ನಿರ್ಮಾಣ:
— ಪನಾಮಾ ಕಾಲುವೆಗೆ 100 ವರ್ಷ ತುಂಬಿದ ಬೆನ್ನಲ್ಲೇ, ಪನಾಮಾ ಕಾಲುವೆಯಲ್ಲಿ ಮೂರನೇಲಾಕ್ಸ್‌ಗಳನ್ನು ನಿರ್ಮಿಸಲು ಯೋಜನೆಯನ್ನು ಸಿದ್ಧ ಪಡಿಸಲಾಗಿದೆ. 31,800 ಕೋಟಿ ರೂ. ಮೊತ್ತದ ಯೋಜನೆ ಇದಾಗಿದ್ದು, 15000 ಕಂಟೇನರ್‌ ಹಡಗುಗಳನ್ನು ನಿರ್ವಹಿಸಲಿವೆ. ಈಗಿರುವ ಲಾಕ್ಸ್‌ಗಳು 5000 ಕಂಟೇನರ್‌ ಹಡಗನ್ನು ನಿರ್ವಹಿಸಬಲ್ಲವು.

(source: Udayavani+Vijayavani) 

Monday, 23 March 2015

☀ಸೂಯೆಜ್ ಕಾಲುವೆಯ ಇತಿಹಾಸ:  (History of Suez Canal)

☀ಸೂಯೆಜ್ ಕಾಲುವೆಯ ಇತಿಹಾಸ:
(History of Suez Canal)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಪಂಚದ ಇತಿಹಾಸ
(World History)


●.ಕಳೆದ ಶತಮಾನದಲ್ಲಿ ಯುರೋಪಿನ ಮೆಡಿಟರೇನಿಯನ್ ಸಾಗರ ತೀರದ ದೇಶಗಳಿಂದ ಪೂರ್ವದ ಹಿಂದೂ ಮಹಾಸಾಗರ ತೀರದ ದೇಶಗಳಿಗೆ ಸಿದ್ದ ಸರಕುಗಳನ್ನು ಒಯ್ಯುತ್ತಿದ್ದ, ಅಲ್ಲಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಡಗುಗಳು ಆಫ್ರಿಕಾದ ತುದಿಯಲ್ಲಿರುವ ಗುಡ್ಹೋಪ್ ಭೂಶಿರವನ್ನು ಬಳಸಿಕೊಂಡು ಹೋಗಬೇಕಾಗುತ್ತಿತ್ತು.

●.ಹಾಗಾಗಿ ಸಾರಿಗೆ, ಸರಕು ಸಾಗಾಟ ತಿಂಗಳುಗಟ್ಟಲೆ ವಿಳಂಬವಾಗುತ್ತಿತ್ತು.ಈ ವಿಳಂಬವನ್ನು ಸಾಕಷ್ಟು ಕಡಿಮೆ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು, ಸಾಗರದ ಡೊಂಕು ತಿದ್ದುವ ಸೂಯೆಜ್ ಕಾಲುವೆಯೋಜನೆ.

●.ಆಗಿನ ಈಜಿಪ್ಟ್ ಇಂಥ ಬೃಹತ್ ಯೋಜನೆಯನ್ನು ನೆರವೇರಿಸುವಷ್ಟು ಬಲವಾಗಿರಲಿಲ್ಲ. ಅದಕ್ಕೆಂದೇ ’ಆಗ್ಲೋ-ಫೆಂಚ್ ಮಾರಿ ಟೈಮ್ ಕೆನಾಲ್ ಕಂಪೆನಿ’ಹುಟ್ಟಿಕೊಂಡಿತು.

●.ಉತ್ತರದಲ್ಲಿ ಮೆಡಿಟರೇನಿಯನ್ ಇಂದ ದಕ್ಷಿಣದಲ್ಲಿ ಕೆಂಪು ಸಮುದ್ರದೊಂದಿಗೆ ಸಂಪರ್ಕ ಕಲ್ಪಿಸುವ ಈ ಕಾಲುವೆ 173 ಕಿ.ಮೀ. ಅಷ್ಟು ಉದ್ದವಾಗಿದೆ.

●.ಈಜಿಪ್ಟಿನ ಉಗ್ರ ಬಿಸಿಲಿನ, ಮರಳುಗಾಡಿನ, ಅಲ್ಲಲ್ಲಿ ಗಸಿಮಣ್ಣಿನ, ನೊರಜುಗಲ್ಲಿನ ಪ್ರದೇಶಗಳ ಮೇಲೆ, ಮಾರ್ಗದಲ್ಲಿ ಹಲವು ಸರೋವರಗಳ ಮೂಲಕ ಕಾಲುವೆ ಹಾದುಹೋಗುತ್ತದೆ.

●.ಉತ್ತರದ ತುದಿಯಲ್ಲಿ ಸೈಯದ್ ಬಂದರು, ದಕ್ಷಿಣದ ತುದಿಯಲ್ಲಿ ಸೂಯೆಜ್ ಬಂದರುಗಳಿವೆ. ಕಾಲುವೆ ನಿರ್ಮಾಣದ ನಂತರ ಹಲವು ಹೊಸ ಊರುಗಳು ಹುಟ್ಟಿಕೊಂಡಿವೆ.

●.ಫ್ರೆಂಚ್ ಎಂಜಿನಿಯರ್ ಫರ್ಡಿನ್ಯಾಂಡ್ ಡಿ ಲೆಸೆಪ್ಸ್ ನೇತೃತ್ವದಲ್ಲಿ ಕಾಲುವೆ ನಿರ್ಮಾಣಗೊಂಡಿತು. ಬಲಾತ್ಕಾರದ ದುಡಿಮೆಗೆ ನೂಕಲ್ಪಟ್ಟ ಸಾವಿರಾರು ಬಡ ಕೂಲಿಯಾಳುಗಳು, ಕೈದಿಗಳು, ಬ್ರಿಟನಿನ ಹಾಗೂ ಫ್ರಾನ್ಸಿನ ತಂತ್ರಜ್ಞರು ನಿರ್ಮಾಣದಲ್ಲಿ ಭಾಗವಹಿಸಿದ್ದರು.

●.ಕೆಂಪು ಸಮುದ್ರದ ಮಟ್ಟ ಮೆಡಿಟರೇನಿಯನ್ ಸಾಗರದ ಮಟ್ಟಕ್ಕಿಂತ 30 ಅಡಿಗಳಷ್ಟು ಎತ್ತರದಲ್ಲಿರುವುದು ಎಂದು ತಿಳಿದಾಗ, ನೀರಿನ ಮಟ್ಟ ಬದಲಾವಣೆಯ ಕಟ್ಟೆಗಳನ್ನು ನಿರ್ಮಿಸಲಾಯಿತು.

●.ಪ್ರಾರಂಭದಲ್ಲಿ ಕಾಲುವೆ 8 ಮೀ. ಆಳ, 22 ಮೀ. ಅಗಲವಾಗಿತ್ತು. ಮುಂದೆ ಕಾಲುವೆಯಲ್ಲಿ ಭಾರಿ ಟ್ಯಾಂಕರ್ ಹಡಗುಗಳೂ ಸಂಚರಿಸುವಂತೆ ಆಳ, ಅಗಲಗಳನ್ನು ಹೆಚ್ಚಿಸಲಾಯಿತು.

●.1869ರಲ್ಲಿ ಕಾಲುವೆಯ ಉದ್ಘಾಟನೆಗಾಗಿ ಹಡಗು ಸಂಚಾರಕ್ಕೆ ತೆರೆಯಲಾಯಿತು. ಸೂಯೆಜ್ ಕಾಲುವೆಯ ನಿರ್ಮಾಣದಿಂದಾಗಿ ಹಡಗುಗಳ ಸಂಚಾರ ಮಾರ್ಗದಲ್ಲಿ ಸುಮಾರು 11,000 ಕಿ.ಮೀ., ಅಷ್ಟು ಕಡಿತವಾಯಿತು.

●.ಕಳೆದ ಶತಮಾನದ ಈ ಮನುಷ್ಯ ಪ್ರಯತ್ನ ಸಾಧಾರಣವಾದುದೇನಲ್ಲ. ಇದರಿಂದ ಭಾರತದಂಥ ದೊಡ್ಡ ದೇಶವನ್ನು ವಸಾಹತಾಗಿ ಮಾಡಿಕೊಂಡಿದ್ದ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಹೆಚ್ಚು ಪ್ರಯೋಜನವಾಯಿತು.

●.1950ರ ದಶಕದಲ್ಲಿ ಅಧ್ಯಕ್ಷ ಗಮಾಲ್ ಅಬ್ದುಲ್ ನಾಸೆರ್ ಸೂಯೆಜ್ ಕಾಲುವೆಯನ್ನು ರಾಷ್ಟ್ರೀಕರಣಗೊಳಿಸಿದಾಗ ಭಾರಿ ಕೋಲಾಹಲವುಂಟಾಯಿತು. ಆದರೆ ಸ್ವಲ್ಪ ಸಮಯದಲ್ಲಿಯೇ ಪರಿಸ್ಥಿತಿ ಹತೋಟಿಗೆ ಬಂದಿತು.

(ಕೃಪೆ: ಅನವರತ)

☀`ಸೂಯೆಜ್' ಕಾಲುವೆ ಮತ್ತು ಅದರ ಮಹತ್ವ (Suez Canal and it's Importance) 

☀`ಸೂಯೆಜ್' ಕಾಲುವೆ ಮತ್ತು ಅದರ ಮಹತ್ವ
(Suez Canal and it's Importance)

━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಪಂಚದ ಭೂಗೋಳ
(World Geography)


●.ಸೂಯೆಜ್ ಕಾಲುವೆ ಎಂದರೇನು?
••>> ಈಜಿಪ್ಟ್‌ನ ಪೋರ್ಟ್ ಸೆಡ್ ಹಾಗೂ ಸೂಯೆಜ್ ನಗರಗಳ ನಡುವಿನ ಭಾಗವೇ ಸೂಯೆಜ್ ಕಾಲುವೆ.

●.ಅದರ ಉದ್ದವೆಷ್ಟು?
••>> 160 ಕಿ.ಮೀ.ನಷ್ಟು ಉದ್ದವಿರುವ ಸೂಯೆಜ್ ಕಾಲುವೆಯು ಮೆಡಿಟರೇನಿಯನ್ ಸಮುದ್ರ ಹಾಗೂ ಕೆಂಪು ಸಮುದ್ರವನ್ನು ಸೇರಿಸುತ್ತದೆ.

●.ಕಾಲುವೆಯನ್ನು ನಿರ್ಮಿಸಿದ್ದು ಯಾವಾಗ?
••>> ಫ್ರೆಂಚ್ ಎಂಜಿನಿಯರ್ ಫರ್ಡಿನಾಂಡ್ ಡಿಲೆಸೆಪ್ಸ್ ನೇತೃತ್ವದಲ್ಲಿ ಯೋಜಿತಗೊಂಡ ಕಾಲುವೆಯ ಕಾಮಗಾರಿಯು ಆಗಸ್ಟ್ 16, 1869ರಂದು ಮುಗಿಯಿತು.

●.ಈ ಕಾಲುವೆಯ ಪ್ರಾಮುಖ್ಯವೇನು?
••>> ಯೂರೋಪ್ ಹಾಗೂ ಏಷ್ಯಾ ನಡುವೆ ಇದು ಸಂಪರ್ಕ ಕಲ್ಪಿಸಿತು. ಎರಡೂ ಖಂಡಗಳ ನಡುವಿನ ಪ್ರಯಾಣದ ದೂರ ಸಾಕಷ್ಟು ಕಡಿಮೆಯಾದಂತಾಯಿತು.
ಈ ಕಾಲುವೆ ನಿರ್ಮಾಣಕ್ಕೆ ಮೊದಲು ಯೂರೋಪ್‌ನಿಂದ ಹಡಗುಗಳು ಆಫ್ರಿಕಾ ಬಳಸಿಕೊಂಡು ಏಷ್ಯಾ ತಲುಪಬೇಕಿತ್ತು.

●.1967ರ ನಂತರ ಕೆಲವು ವರ್ಷ ಸೂಯೆಜ್ ಕಾಲುವೆಯಲ್ಲಿ ಪ್ರಯಾಣ ನಿಷೇಧಿಸಿದ್ದು ಯಾಕೆ?
••>> 1967ರಲ್ಲಿ ಅರಬ್-ಇಸ್ರೇಲ್ ಯುದ್ಧದ ನಂತರ ಅಲ್ಲಿ ಹಡಗುಗಳ ಪ್ರಯಾಣವನ್ನು ನಿಷೇಧಿಸಲಾಯಿತು.
ಯುದ್ಧದ ಸಂದರ್ಭದಲ್ಲಿ ಅದರಲ್ಲಿ ಹಡಗುಗಳು ಮುಳುಗಿದ್ದವು. ಅಲ್ಲದೆ ಅಲ್ಲಿ ಅಪಾರ ಪ್ರಮಾಣದ ಅದಿರು ಇತ್ತು.
1975ರಲ್ಲಿ ಈಜಿಪ್ಟ್ ಸೂಯೆಜ್ ಕಾಲುವೆಯನ್ನು ಪ್ರಯಾಣಕ್ಕೆ ಮತ್ತೆ ಮುಕ್ತಗೊಳಿಸಿತು.

(ಕೃಪೆ: ಪ್ರಜಾವಾಣಿ) 

☀ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಸ್ತ್ರೀಯರು: (women fought for the integration of Karnataka)

☀ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಸ್ತ್ರೀಯರು:
(women fought for the integration of Karnataka)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಕರ್ನಾಟಕ ಪ್ರಾಚೀನ ಇತಿಹಾಸ
(Ancient Karnataka History)


●.ಕರ್ನಾಟಕದ ಕಳೆದ 300 ವರ್ಷಗಳ ಚರಿತ್ರೆಯಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಸ್ತ್ರೀಯರ ಪಾತ್ರವು ಮುಖ್ಯವಾಗಿತ್ತು ಎಂಬುದನ್ನು ಕಾಣಬಹುದು. ಯೂರೋಪಿಯನ್ನರ ವಿರುದ್ಧ ಹೋರಾಡಿದವರಲ್ಲಿ ಕಿತ್ತೂರು ಚೆನ್ನಮ್ಮ,ಅಬ್ಬಕ್ಕ ಮುಂತಾದವರು ನೆನಪಿಗೆ ಬರುತ್ತಾರೆ. ಇದೇ ರೀತಿಯಲ್ಲಿ ಕರ್ನಾಟಕದ ಒಗ್ಗೂಡಿಕೆಗೂ ಸ್ತ್ರೀಯರ ಪಾತ್ರ ಹಿರಿದಾಗಿಯೇ ಇದೆ.

●.ಕನ್ನಡ ರಾಜ್ಯೋತ್ಸವದ ಈ ಹೊತ್ತಿನಲ್ಲಿ ಅವರ ಹೆಸರುಗಳನ್ನು ನೆನಪಿಸಿಕೊಳ್ಳೋಣ.


●.ಜಯದೇವಿತಾಯಿ ಲಿಗಾಡೆ:
✧.ಇವರು ಹುಟ್ಟಿದ್ದು 1912 ರಲ್ಲಿ. ನಾಲ್ಕನೇ ತರಗತಿಯವರೆಗೆ ಕಲಿತಿದ್ದರು. ಕನ್ನಡ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಇವರು ಬರೆಯುತ್ತಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು.
✧.ಇಂದಿನ ಮುಂಬಯಿ-ಕರ್ನಾಟಕ ಮತ್ತು ಹೈದರಾಬಾದ-ಕರ್ನಾಟಕದಲ್ಲಿ ಕನ್ನಡದ ಕಿಚ್ಚನ್ನು ಹರಡುವಲ್ಲಿ ಇವರ ಪಾತ್ರ ಹಿರಿದಾಗಿತ್ತು. ✧.ಇವರು ಸೊಲ್ಲಾಪುರ, ಬೀದರ್, ಬೆಳಗಾವಿ, ಸಾಂಗ್ಲಿ ಮುಂತಾದ ಕಡೆಗಳಲ್ಲಿ ಕನ್ನಡ ಶಾಲೆಗಳನ್ನು ಆರಂಬಿಸಿದ್ದರು. ಕನ್ನಡ ಭೋಧಿಸುವವರು ದೊರಕುತ್ತಿಲ್ಲ ಎಂದಾದಾಗ ತಮ್ಮ ಸ್ವಂತ ಹಣದಲ್ಲಿಯೇ ಶಿಕ್ಶಕರನ್ನು ನೇಮಿಸಿದ್ದರು.


●.ಬಳ್ಳಾರಿ ಸಿದ್ದಮ್ಮ:
✧.ಉತ್ತರ ಕರ್ನಾಟಕದಲ್ಲಿ ಏಕೀಕರಣದ ಕಾವು ಹೆಚ್ಚಾಗಿದ್ದರೂ ಮೈಸೂರು ಪ್ರಾಂತ್ಯದ ಜನರು ಹೆಚ್ಚಾಗಿ ಒಲವು ತೋರಿರಲಿಲ್ಲ. ಮೈಸೂರು ಪ್ರದೇಶ ಕಾಂಗ್ರೆಸ್ ಉಪಸಮಿತಿಯು ಕಾರ್ಯಕಾರೀ ಸಮಿತಿಗೆ ರಾಜಕೀಯ ಪರಿಸ್ಥಿತಿ ತಿಳಿಯಾದ ಮೇಲೆ ಏಕೀಕರಣದ ಬಗ್ಗೆ ಚಿಂತಿಸೋಣ ಎಂದು ಕೈ ಬಿಟ್ಟಿತ್ತು. ಆದರೆ ಈ ವರದಿಯನ್ನು ಅರಸೀಕೆರೆಯಲ್ಲಿ ನಡೆದ ಎಲ್ಲಾ ಪಕ್ಶಗಳ ಸಭೆ ತಿರಸ್ಕರಿಸಿತ್ತು.
✧.ಇದರ ಅದ್ಯಕ್ಷತೆಯನ್ನು ಹೊತ್ತಿದ್ದವರೇ ಬಳ್ಳಾರಿಯ ಸಿದ್ದಮ್ಮನವರು.
✧.ರಾಜ್ಯ ಪುನರ್ವಿಂಗಡಣಾ ಆಯೋಗದ ಕರಡು ವರದಿಯ ಪ್ರಕಾರ ಬಳ್ಳಾರಿ ಜಿಲ್ಲೆಯು ಆಂದ್ರಕ್ಕೆ ಸೇರುವುದಿತ್ತು. ಇದನ್ನು ವಿರೋದಿಸಿದವರಲ್ಲಿ ಹೆಚ್ಚಾಗಿ ಸ್ತ್ರೀಯರೇ ಇದ್ದದ್ದು ವಿಶೇಶವಾಗಿದೆ.
✧.ಚಿತ್ರದುರ್ಗಕ್ಕೆ ಬಂದಿದ್ದ ರಾಷ್ಟ್ರೀಯ ಸಮಿತಿಯ ಪ್ರಮುಖರನ್ನು ಸುಮಾರು 40ಕ್ಕೂ ಹೆಚ್ಚು ಹೆಂಗಸರು ಬೇಟಿಯಾಗಿ ಬಳ್ಳಾರಿಯು ಕರ್ನಾಟಕಕ್ಕೇ ಸೇರಬೇಕೆಂದು ಒತ್ತಾಯಿಸಿದ್ದರು.


●.ಬೇರೆ ಬೇರೆ ಸ್ಥಳಗಳಲ್ಲಿ ಹೋರಾಡಿದ ಹೆಂಗಸರು:

●.ಗುಲಬರ್ಗ:
ವಿಮಾಲಾಬಾಯಿ ಮೇಲ್ಕೋಟೆ, ಮಲ್ಲವ್ವ

●.ಬಳ್ಳಾರಿ:
ಲಿಂಗಮ್ಮವ್ವ, ಸುಮಂಗಳಮ್ಮ, ತೊಗರಿ ಸರ್ವಮಂಗಳಮ್ಮ, ಗೊರ್ಲೆ ರುದ್ರಮ್ಮ

●.ಕಾಸರಗೋಡು:
ಸರಸ್ವತಿ ಬಾಯಿ, ಸುಹಾಸಿನಿ ಬಂಡಾರಿ, ಕಮಲಾ ಶೆಟ್ಟಿ, ರಾದಾ ಕಾಮತ.

●.ಬೆಳಗಾವಿ:
 ಆಶಾತಾಯಿ, ಡಾ. ಮಂದಾಕಿನೀ ಪಟ್ಟಣ.

●.ಇನ್ನೂ ಹಲವರು:
ಸಾವಿತ್ರಿದೇವಿ ಹಳ್ಳಿಕೇರಿ, ವೀರಮ್ಮ ಪಾಟೀಲ, ಬಾಗೀರತಿ ಪಾಟೀಲ, ಶಾಂತಾದೇವಿ ಜತ್ತಿ, ಬಸಮ್ಮ ಉಪ್ಪಿನ, ಚಂಪಾತಾಯಿ ಬೋಗಲೆ, ಡಾ. ಶಾಂತಾದೇವಿ ಮಾಳವಾಡ, ನಾಗಮ್ಮ ವೀರನಗವ್ಡ ಪಾಟೀಲ, ಲೀಲಾವತಿ ಮಾಗಡಿ, ಗಂಗಮ್ಮ ಗುದ್ಲೆಪ್ಪ ಹಳ್ಳಿಕೇರಿ, ಶಕುಂತಲಾ ಕುರ್ತುಕೋಟಿ, ಪ್ರಮೀಳಾತಾಯಿ ಕಾಮತ್, ಸರೋಜಿನಿ ಶಿಂತ್ರಿ,ಸರಸ್ವತೀ ಗವ್ಡರ, ದೇವಕ್ಕ ರಮಾನಂದ ಮನ್ನಂಗಿ, ಸಂಗಮ್ಮ, ಪದ್ಮಾವತಿ ದೇಸಾಯಿ, ಚಂದ್ರಾಬಾಯಿ ಚೆನ್ನಪ್ಪ ವಾಲಿ, ಚೆನ್ನಮ್ಮ ವೇದಮೂರ್ತಿ ಇಟಗಿ, ಗವ್ರವ್ವ ಸಾವಳಗಿ,ಶಾಂತಬಾಯಿ ವೆಂಕಟೇಶ ಮಟದ, ಪಾರ್ವತಿಬಾಯಿ ದೇಶಪಾಂಡೆ, ಅಂಬಕ್ಕ ಬಳಿಗಾರ, ಲಕ್ಶ್ಮಿದೇವಿ ಪಾಟೀಲ, ಉಮಾದೇವಿ ಟೋಪಣ್ಣವರ, ಉಮಾದೇವಿ ಕುಂದಾಪುರ, ಕಾಡಮ್ಮ, ಗದಿಗೆವ್ವ ಕುರುಹಟ್ಟಿ, ಕ್ರಿಶ್ಣಾಬಾಯಿ ಪಣಜೀಕರ, ಗವ್ರವ್ವ ವಾರದ, ಪಂಚವ್ವಬಾಯಿ ವಾರದ, ಬಸವ್ವಬಾಯಿ ವಾರದ, ಬಸಲಿಂಗಮ್ಮ ಬಾಳೆಕುಂದ್ರಿ ಮತ್ತು ಬಳ್ಳಾರಿ ಯಶೋದರಮ್ಮ.

(ಕೃಪೆ: ಹೊನಲು)

Sunday, 22 March 2015

☀ಗ್ರಾಮೀಣ ಪ್ರದೇಶದಲ್ಲಿನ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ 'ಆಶಾ' ಕಾರ್ಯಕರ್ತೆಯರ ಪಾತ್ರದ ಕುರಿತು ಚರ್ಚಿಸಿ. (250 ಶಬ್ಧಗಳಲ್ಲಿ)  (Discuss the role of the "Asha" workers in Maintaining Public Health in Rural Areas.)

☀ಗ್ರಾಮೀಣ ಪ್ರದೇಶದಲ್ಲಿನ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವಲ್ಲಿ 'ಆಶಾ' ಕಾರ್ಯಕರ್ತೆಯರ ಪಾತ್ರದ ಕುರಿತು ಚರ್ಚಿಸಿ. (250 ಶಬ್ಧಗಳಲ್ಲಿ)
(Discuss the role of the "Asha" workers in Maintaining Public Health in Rural Areas.)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಐಎಎಸ್ / ಕೆಎಎಸ್ ಪ್ರಶ್ನೋತ್ತರ :
(IAS / KAS SPECIAL)


●."ಆಶಾ" (ಅಂಗೀಕೃತ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ)
(ASHA)- Accredited Social Health Activist)


●.ಈ ಗ್ರಾಮೀಣ ಪ್ರದೇಶದಲ್ಲಿನ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಲು ಅದರಲ್ಲೂ ವಿಶೇಷವಾಗಿ ಕಡುಬಡವರ ಅವಶ್ಯಕತೆಗಳನ್ನು ಪೂರೈಸಲು ಕೇಂದ್ರ ಸರ್ಕಾರವು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನವನ್ನು ಪ್ರಾರಂಭಿಸಿತು.

●.ಸಾರ್ವಜನಿಕ ಆರೋಗ್ಯ ಮೂಲ ಸೌಕರ್ಯಗಳಲ್ಲಿ ಕಲ್ಪಿಸಿರುವಂತೆ ಉಪ ಕೇಂದ್ರವು ಪ್ರಮುಖ ಸಂಪರ್ಕ ಕೇಂದ್ರವಾಗಿದೆ.

 ●.5,000 ಜನಸಂಖ್ಯೆಗೆ ಒಂದರಂತೆ ಉಪ ಕೇಂದ್ರವು ಕಾರ್ಯ ನಿರ್ವಹಿಸುತ್ತಿದ್ದು, ಅದಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದಕಡೆಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಉಪ ಕೇಂದ್ರದ ಹಂತದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಕಾರ್ಯದ ಒತ್ತಡ ಹೆಚ್ಚಾಗಿದ್ದು ಗ್ರಾಮೀಣ ಪ್ರದೇಶಗಳಿಗೆ ಪೂರ್ಣ ಪ್ರಮಾಣದ ಸೇವೆ ಒದಗಿಸಲು ಸಾಧ್ಯವಾಗಿರುವುದಿಲ್ಲ. ಆದಕಾರಣ ಗ್ರಾಮೀಣ ಜನರ ಆರೋಗ್ಯ ಸಮಸ್ಯೆಗಳನ್ನು ಅದರಲ್ಲೂ ಪ್ರಮುಖವಾಗಿ ಸ್ತ್ರೀಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ತಿಳಿದುಕೊಂಡು ಅದಕ್ಕನುಗುಣವಾಗಿ ಸೂಕ್ತ ಆರೋಗ್ಯ ಸೇವೆಯನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಸಲುವಾಗಿ ‘ಆಶಾ’ ಕಾರ್ಯಕರ್ತೆಯರನ್ನು ಸಮುದಾಯದಲ್ಲಿ ತೊಡಗಿಸಿಕೊಳ್ಳುವ ಹೊಸ ಯೋಜನೆಯನ್ನು ಪ್ರಾರಂಭಿಸಲಾಯಿತು.


●.ಆಶಾ ಕಾರ್ಯಕರ್ತೆಯರ ಪ್ರಮುಖ ಕಾರ್ಯಗಳು:

✧.ಇದರ ಉದ್ದೇಶವೆಂದರೆ ಸಮಾಜ ಹಾಗೂ ಎಎನ್‍ಎಂಗಳ ಮಧ್ಯೆ ಕೊಂಡಿಯಾಗಿ ಕಾರ್ಯ ನಿರ್ವಹಿಸುವುದು.

✧.ಶಿಶು ಮರಣ ಹಾಗೂ ತಾಯಿ ಮರಣ ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುವುದು.

✧.1,000 ಜನಸಂಖ್ಯೆಗೆ ಆರೋಗ್ಯ ಸೇವೆ ಸಲ್ಲಿಸುವುದು ಹಾಗೂ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಉಪಚರಿಸುವುದು.

✧.ಸಾಂಸ್ಥಿಕ ಹೆರಿಗೆಗಳನ್ನು ಪ್ರೋತ್ಸಾಹಿಸುವುದು.

✧.ಸಾಂಕ್ರಾಮಿಕ ಹಾಗೂ ಇತರ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯದಲ್ಲಿ ತೊಡಗುವುದು.

✧.ಆರೋಗ್ಯಕರ ಜೀವನ ಶೈಲಿಯನ್ನು ಪ್ರೋತ್ಸಾಹಿಸುವುದೇ ಆಗಿದೆ.


●.ಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ಸರ್ಕಾರೇತರ ಸಂಸ್ಥೆಗಳಿಗೆ ವಹಿಸಲಾಗಿದ್ದು, ಫೆಬ್ರವರಿ 2008 ರಲ್ಲಿ ಈ ಕಾರ್ಯಕ್ರಮ ಪ್ರಾರಂಭವಾಯಿತು.

●.ಮೊದಲ ಹಂತದಲ್ಲಿ ಒಂಭತ್ತು ಜಿಲ್ಲೆಗಳನ್ನು ಗುರುತಿಸಿದ್ದು (ಮೈಸೂರು, ಚಾಮರಾಜನಗರ, ಕೊಡಗು, ಬಿಜಾಪುರ, ಬಾಗಲಕೋಟೆ, ರಾಯಚೂರು, ಗುಲಬರ್ಗಾ, ಕೊಪ್ಪಳ ಮತ್ತು ಬೀದರ್) ತರಬೇತಿಯಲ್ಲಿ ಭಾಗವಹಿಸುವವರಿಗೆ ಅರ್ಥವಾಗುವ ರೀತಿಯಲ್ಲಿ ಒತ್ತುಕೊಟ್ಟು ಸಂವಹನ ಕೌಶಲವನ್ನು ವೃದ್ಧಿಗೊಳಿಸುವುದರ ಜೊತೆಗೆ ಮೂಲ ಆರೋಗ್ಯ ಸೇವೆ ಹಾಗೂ ರೆಫರಲ್ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ತರಬೇತಿ ನೀಡಲಾಗಿದೆ.

●.ಶುಶ್ರೂಶಕಿಯರನ್ನು ಆಶಾ ತರಬೇತಿದಾರರಿಗೆ ತರಬೇತಿ ನೀಡಲು ನೇಮಿಸಲಾಗಿದೆ.

●.ಕಾರ್ಯಕರ್ತೆಯರಿಗೆ ತರಬೇತಿಯಲ್ಲಿ ಸಣ್ಣ ಖಾಯಿಲೆಗಳಿಗೆ ಚಿಕಿತ್ಸೆ, ಗರ್ಭಿಣಿ ಸ್ತ್ರೀಯರ ನೋಂದಣಿ, ಕುಟುಂಬ ಕಲ್ಯಾಣ ಯೋಜನೆಗಳಿಗೆ ಸಲಹೆ, ಮಕ್ಕಳ ಆರೋಗ್ಯ ಸೇವೆಗಳು, ಮನೆಮನೆಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ಮುಂತಾದ ವಿಷಯಗಳ ಬಗ್ಗೆ ತಿಳಿಸಿಕೊಡಲಾಗುವುದು.

●.ಒಟ್ಟಾರೆ ತರಬೇತಿ ಅವಧಿ 30 ದಿನಗಳದ್ದಾಗಿರುತ್ತದೆ. ಇವರುಗಳಿಗೆ ನಿಗದಿತ ವೇತನವನ್ನಾಗಲಿ ಅಥವಾ ಗೌರವ ಧನವನ್ನಾಗಲೀ ನೀಡುವುದಿಲ್ಲ. ಬದಲಿಗೆ ಅವರು ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಸಾಧಿಸುವ ಪ್ರಗತಿಗಳನ್ನು ಆಧರಿಸಿ ಪ್ರೋತ್ಸಾಹ ಧನ ನೀಡಲಾಗುತ್ತದೆ.  

☀11) ನವ ಮಂಗಳೂರು ಬಂದರು: (New Mangaluru Ports):

☀11) ನವ ಮಂಗಳೂರು ಬಂದರು:
(New Mangaluru Ports):

━━━━━━━━━━━━━━━━━━━━━━━━━━━━━━━━━━━━━━━━━━━━━


★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.11) ನವ ಮಂಗಳೂರು ಬಂದರು: (New Mangaluru Ports):

✧.ಭಾರತ ಸರ್ಕಾರವು ಈ ಬಂದರನ್ನು ಸರ್ವಋತು ಬಂದರಾಗಿ ಅಭಿವೃದ್ಧಿಗೊಳಿಸಿದೆ.

✧.1974ರಲ್ಲಿ ಈ ಬಂದರನ್ನು ರಾಷ್ಟ್ರದ ಒಂಭತ್ತನೆಯ ಮುಖ್ಯ ಬಂದರಾಗಿ ಘೋಷಿಸಲಾಗಿದ್ದು, ಹಲವಾರು ವರ್ಷಗಳಿಂದ ಇದನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.

✧.ಎಂಟನೆಯ ಪಂಚವಾರ್ಷಿಕ ಯೋಜನೆಯಡಿ ಈ ಬಂದರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರವು 60 ಕೋಟಿಗಳನ್ನು ಮಂಜೂರು ಮಾಡಿದೆ.

✧.ಇದಲ್ಲದೆ ಕಚ್ಛಾತೈಲ, ಕಲ್ಲಿದ್ದಲು, ಎಲ್.ಪಿ.ಜಿ ಇತ್ಯಾದಿಗಳನ್ನು ಸಾಗಿಸಲು ಅನುಕೂಲವಾಗುವಂತೆ ಸೌಲಭ್ಯಗಳನ್ನು ಮಾಡಿದ್ದು, ಇದರ ವೆಚ್ಚವನ್ನು ಭರಿಸಲು ಸಂಬಂಧಪಟ್ಟ ಏಜೆನ್ಸಿಗಳು ಒಪ್ಪಿವೆ.

✧.ಈ ಬಂದರು ಭಾರತ ಸರ್ಕಾರದ ನವ ಮಂಗಳೂರು ಬಂದರು ಟ್ರಸ್ಟ್ ಬೋರ್ಡ್‍ನ ಆಡಳಿತದ ವ್ಯಾಪ್ತಿಯಲ್ಲಿದೆ.

✧.1974-75 ರಲ್ಲಿ ಇದು 77 ಹಡಗುಗಳ ಮೂಲಕ 0.09 ಮಿಲಿಯನ್ ಟನ್ ಸರಕು ಸಾಗಾಣಿಕೆಯನ್ನು ಮಾಡಿದ್ದು, 1984-85ರಲ್ಲಿ ಇದು 3.38 ಮಿಲಿಯನ್ ಟನ್ ಮತ್ತು 342 ಹಡಗುಗಳಿಗೆ ಏರಿತು.

✧.1994-95 ರಲ್ಲಿ ಎಂಟು ಮಿಲಿಯನ್ ಟನ್ ಸರಕು ಮತ್ತು 342 ಹಡಗುಗಳ ಸಂಚಾರಕ್ಕೆ ಅನುಕೂಲ ಒದಗಿಸಿದೆ.

✧.2004-05ರಲ್ಲಿ ಇದು 33.89 ಮಿಲಿಯನ್ ಟನ್‍ಗಳಿಗೆ ಏರಿದ್ದು, ಸರಕು ತುಂಬಿದ 1057 ಹಡಗುಗಳು ಇಲ್ಲಿಗೆ ಬಂದಿದ್ದವು.

✧.2006-07ರಲ್ಲಿ ಇದು 82.04 ಮಿಲಿಯನ್ ಟನ್ ಸಂಚಾರದೊಂದಿಗೆ 17.92 ಮಿಲಿಯನ್ ಟನ್ ಆಮದು ಮತ್ತು 14.12 ಮಿಲಿಯನ್ ಟನ್ ರಫ್ತು ಮಾಡಲಾಗಿತ್ತು.

✧.2006-07ರಲ್ಲಿ ಇಲ್ಲಿ 1,015 ಹಡಗುಗಳಿದ್ದು, ಇದು 18 ಜನ ಸಂಚಾರಿ ಹಡಗನ್ನು ಸಹಾ ಒಳಗೊಂಡಿತ್ತು.

✧.2007-08 ರಲ್ಲಿ ನವಮಂಗಳೂರು ಬಂದರು ಮತ್ತು ಕಾರವಾರ, ಮಲ್ಪೆ ಮತ್ತು ಹಳೆಯ ಮಂಗಳೂರು ಬಂದರುಗಳು ಹೊರತುಪಡಿಸಿದಂತೆ ಸಣ್ಣ ಬಂದರುಗಳು 6085 ಟನ್ ಸರಕು ಸಾಗಾಣಿಕೆ ಮಾಡಿದ್ದವು.

✧.2009-10ರ ಸಾಲಿನಲ್ಲಿ ನವಮಂಗಳೂರು ಬಂದರುಗೆ 363.18 ಕೋಟಿ ಆದಾಯ ಬಂದಿದ್ದು, 238.51 ಕೋಟಿ ವೆಚ್ಚ ಮಾಡಿ, 128.66 ಕೋಟಿ ನಿವ್ವಳ ಲಾಭಗಳಿಸಿತ್ತು. ಇದೇ ಸಾಲಿನಲ್ಲಿ ಒಟ್ಟು 215.68 ಲಕ್ಷ ಮೆ.ಟನ್ ಸರಕನ್ನು ಆಮದು ಮಾಡಿಕೊಂಡಿದ್ದು, 129.59 ಲಕ್ಷ ಮೆ.ಟನ್ ಸರಕನ್ನು ರಫ್ತು ಮಾಡಿತ್ತು.

✧.ಇದು 2011-12ರ ಸಾಲಿನಲ್ಲಿ ಕ್ರಮವಾಗಿ 210.66 ಹಾಗೂ 104.84 ಲಕ್ಷ ಮೆ.ಟನ್ನುಗಳಾಗಿದ್ದ ಅಂಶ ವರದಿಯಿಂದ ವೇದ್ಯವಾಗುತ್ತದೆ.

(ಕೃಪೆ: ಕರ್ನಾಟಕ ಕೈಪಿಡಿ)

☀10) ಮಂಗಳೂರು ಹಳೆಯ ಬಂದರು: (Old Mangaluru Ports):

☀10) ಮಂಗಳೂರು ಹಳೆಯ ಬಂದರು:
 (Old Mangaluru Ports):

━━━━━━━━━━━━━━━━━━━━━━━━━━━━━━━━━━━━━━━━━━━━━


★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.10)ಮಂಗಳೂರು ಹಳೆಯ ಬಂದರು:
(Old Mangaluru Ports):

✧.ಹಿಂದಿನ ಆರು ಯೋಜನೆಗಳಲ್ಲಿ ಮಂಗಳೂರು ಹಳೆಯ ಬಂದರನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ಯಾವುದೇ ಮುಖ್ಯ ಕ್ರಮ ಕೈಗೊಂಡಿರುವುದಿಲ್ಲ.

✧.ಹಳೆಯ ಬಂದರು ಹೊಸ ಮಂಗಳೂರು ಬಂದರಿನಿಂದ ದಕ್ಷಿಣಕ್ಕೆ ಹತ್ತು ಕಿ.ಮೀ. ದೂರದಲ್ಲಿದ್ದು, ಗುರುಪುರ ನದಿಯ ದಡದಲ್ಲಿ ಮತ್ತು ಗುರುಪುರ, ನೇತ್ರಾವತಿ ನದಿಗಳು ಸಮುದ್ರ ಸೇರುವ ಸ್ಥಳದ ಹತ್ತಿರದಲ್ಲಿದೆ.

✧. ಇದು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದೆ.

✧.ಈ ಬಂದರಿನ ವಹಿವಾಟು ಹಾಗೂ ನೌಕಾ ಅಗತ್ಯಗಳಿಗನುಸಾರವಾಗಿ, ಈ ಬಂದರನ್ನು ಎಂಟನೆಯ ಯೋಜನೆಯಡಿಯಲ್ಲಿ 12.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿ, ಹಡಗು ಕಟ್ಟೆ ಮತ್ತು ಒಳ ಕಾಲುವೆಯ ಕಾರ್ಯ ಕೈಗೊಂಡು ಪೂರೈಸಲಾಗಿದೆ.

✧.1992-93ರಲ್ಲಿ ಈ ಬಂದರಿಂದ ಒಟ್ಟು 58,374 ಮೆಟ್ರಿಕ್‍ಟನ್ ರಫ್ತು ಮತ್ತು ಆಮದು ಮಾಡಿಕೊಳ್ಳಲಾಗಿದೆ.

✧.ಈ ಬಂದರು ಲಕ್ಷದ್ವೀಪಕ್ಕೆ ಸಮುದ್ರ ಸಾರಿಗೆ ವ್ಯವಸ್ಥೆ ಮಾಡಿ ಕೊಟ್ಟಿದೆ.

✧.2003-04ರಲ್ಲಿ ಇದರಿಂದ 12,025 ಟನ್ ಆಮದು ಮತ್ತು 94,808 ಟನ್ ರಫ್ತನ್ನು ಮಾಡಲಾಗಿದೆ.

✧.ಹತ್ತನೆಯ ಪಂಚವಾರ್ಷಿಕ ಯೋಜನಾ ಅವಧಿಯ ಮೊದಲ ಎರಡು ವರ್ಷಗಳಲ್ಲಿ 455.10 ಲಕ್ಷಗಳನ್ನು ಇದರ ಅಭಿವೃದ್ದಿಗೆ ಖರ್ಚು ಮಾಡಲಾಗಿದೆ. ಇದಲ್ಲದೆ ಹಳೆಯ ಮಂಗಳೂರು ಬಂದರನ್ನು ಅಭಿವೃದ್ಧಿ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

✧.ಕೇಂದ್ರ ಸರ್ಕಾರವು ಪೆಟ್ರೋಲಿಯಂ ಉತ್ಪನ್ನಗಳನ್ನು ಕಾರವಾರ ಬಂದರಿನಿಂದ ಸಾಗಾಣಿಕೆ ಮಾಡಲು ಅನುಮೋದನೆ ನೀಡಿದೆ.

✧.ಉತ್ತರ ಕರ್ನಾಟಕದ ಅಗತ್ಯಗಳಿಗಾಗಿ ಕಂಟೈನರ್ಸ್ ಸೇವೆಯನ್ನು ಪರಿಚಯಿಸಲಾಗಿದೆ.

✧.2010-11ರಲ್ಲಿ ಈ ಬಂದರಿನಿಂದ 1,35,883 ಮೆಟ್ರಿಕ್ ಟನ್ ಸರಕಿನ ವಹಿವಾಟು ನಡೆಸಿ 1,73,86,296/- ಒಟ್ಟು ಆದಾಯ ಸಂಗ್ರಹಿಸಲಾಗಿತ್ತು.

✧.1999-2000ದಲ್ಲಿ ಕಾರವಾರ, ಬೆಳಿಕೇರಿ, ತದ್ರಿ, ಮಲ್ಪೆ, ಹೊನ್ನಾವರ, ಭಟ್ಕಳ, ಹಂಗಾರಕಟ್ಟೆ ಮತ್ತು ಹಳೆಯ ಮಂಗಳೂರು ಬಂದರುಗಳು ಎಲ್ಲಾ ಸೇರಿ 3.12 ಲಕ್ಷ ಮೆಟ್ರಿಕ್ ಟನ್ ರಫ್ತು ಮತು 2.27 ಲಕ್ಷ ಮೆಟ್ರಿಕ್‍ಟನ್ ಆಮದನ್ನು ಮಾಡಲು ಕ್ರಮ ವಹಿಸಿವೆ.

✧.2003-04 ರಲ್ಲಿ ಇದು 8.28 ಲಕ್ಷ ಮೆಟ್ರಿಕ್ ಟನ್ ಮತ್ತು 3.39 ಲಕ್ಷ ಮೆಟ್ರಿಕ್ ಟನ್‍ನಷ್ಟು ಕ್ರಮವಾಗಿ ಹೆಚ್ಚಳವಾಯಿತು.

✧.2006-07 ರಲ್ಲಿ ಹಳೆಯ ಮಂಗಳೂರು ಬಂದರು 1.28 ಕೋಟಿ ಆದಾಯ ಗಳಿಸಿತು.

✧.18,233 ಪ್ರಯಾಣಿಕರು ಈ ಬಂದರಿನಿಂದ ಪ್ರಯಾಣಿಕ ಸೌಲಭ್ಯವನ್ನು ಪಡೆದಿದ್ದಾರೆ.

✧.2003-04ರಲ್ಲಿ ಪಡುಬಿದ್ರಿ ಬಂದರಿನ ಅಭಿವೃದ್ದಿಗಾಗಿ 99,000 ಗಳನ್ನು ಖರ್ಚು ಮಾಡಲಾಗಿದೆ.

✧.2007-08ರಲ್ಲಿ 76,000 ಟನ್ ಸರಕು ಸಾಗಾಣಿಕೆಯನ್ನು ಈ ಬಂದರಿನಿಂದ ಮಾಡಲಾಗಿದೆ. 200607ರಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗಾಗಿ 230 ಲಕ್ಷಗಳನ್ನು ಖರ್ಚು ಮಾಡಲಾಗಿದೆ. 200607ರಲ್ಲಿ ಪಡುಬಿದ್ರಿ ಬಂದರಿನ ಅಭಿವೃದ್ಧಿಗೆ ಯಾವುದೇ ಖರ್ಚು ಮಾಡಿರುವುದಿಲ್ಲ.

(ಕೃಪೆ: ಕರ್ನಾಟಕ ಕೈಪಿಡಿ) 

☀9) ಪಡುಬಿದ್ರಿ ಬಂದರು: (Padubidri Ports):

☀9) ಪಡುಬಿದ್ರಿ ಬಂದರು:
(Padubidri Ports):

━━━━━━━━━━━━━━━━━━━━━━━━━━━━━━━━━━━━━━━━━━━━━


★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.9) ಪಡುಬಿದ್ರಿ ಬಂದರು:
(Padubidri Ports):

✧.ಇದು ಹೊಸದಾಗಿ ಘೋಷಿತವಾದ ಬಂದರಾಗಿದ್ದು, ಇದು ಹಂಗಾರಕಟ್ಟೆ ಬಂದರಿನಿಂದ ದಕ್ಷಿಣಕ್ಕೆ ಇರುತ್ತದೆ.

✧.2010-11ರಲ್ಲಿ ಸಾಗರೋತ್ತರ ವಾಣಿಜ್ಯ ಚಟುವಟಿಕೆಗಳು ಇರುವುದಿಲ್ಲ.

(ಕೃಪೆ: ಕರ್ನಾಟಕ ಕೈಪಿಡಿ) 

☀8) ಹಂಗಾರಕಟ್ಟೆ ಬಂದರು:  (Hangarkatte Ports):

☀8) ಹಂಗಾರಕಟ್ಟೆ ಬಂದರು:
 (Hangarkatte Ports):

━━━━━━━━━━━━━━━━━━━━━━━━━━━━━━━━━━━━━━━━━━━━━


★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.8) ಹಂಗಾರಕಟ್ಟೆ ಬಂದರು:
(Hangarkatte Ports):

✧.ಈ ಬಂದರು ಉಡುಪಿ ತಾಲ್ಲೂಕಿನಲ್ಲಿದ್ದು ಸೀತಾನದಿಯ ಮುಖದಲ್ಲಿ ಕುಂದಾಪುರದಿಂದ ದಕ್ಷಿಣಕ್ಕೆ 22 ಕಿ.ಮೀ.ದೂರದಲ್ಲಿದೆ.

✧.1992-93ರಲ್ಲಿ 80 ಮೆಟ್ರಿಕ್ ಟನ್ ಸರಕನ್ನು ಈ ಬಂದರಿನಿಂದ ರಫ್ತು ಮಾಡಲಾಗಿತ್ತು.

✧.2003-04ರಲ್ಲಿ ಎರಡು ಲಕ್ಷಗಳನ್ನು ಇದರ ಅಭಿವೃದ್ದಿಗೆ ಖರ್ಚು ಮಾಡಲಾಗಿತ್ತು.

✧.2006-07ರಲ್ಲಿ ಬಂದರಿನ ಸುಧಾರಣೆಗೆ ಒಂದು ಲಕ್ಷ ಖರ್ಚು ಮಾಡಲಾಗಿತ್ತು.

✧.2010-11ರಲ್ಲಿ ಸಾಗರೋತ್ತರ ವಾಣಿಜ್ಯ ಚಟುವಟಿಕೆಗಳು ಇರುವುದಿಲ್ಲ.

(ಕೃಪೆ: ಕರ್ನಾಟಕ ಕೈಪಿಡಿ)

☀7) ಮಲ್ಪೆ ಬಂದರು:  (Malte Ports):

☀7) ಮಲ್ಪೆ ಬಂದರು:
(Malte Ports):

━━━━━━━━━━━━━━━━━━━━━━━━━━━━━━━━━━━━━━━━━━━━━


★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.7)ಮಲ್ಪೆ: (Malte Ports):

✧.ಮಲ್ಪೆ ಬಂದರು ಉದ್ಯಾವರ ನದಿಯ ಸಂಗಮದಲ್ಲಿದ್ದು, ಮಂಗಳೂರಿನಿಂದ ಉತ್ತರಕ್ಕೆ 64 ಕಿ.ಮೀ. ಮತ್ತು ಉಡುಪಿಯಿಂದ ಪಶ್ಚಿಮಕ್ಕೆ ಐದು ಕಿ.ಮೀ.ದೂರದಲ್ಲಿದೆ.

 ✧.1992-93ರಲ್ಲಿ 17,770 ಟನ್ ಸಿಲಿಕಾ ಮರಳನ್ನು ಇಲ್ಲಿಂದ ರಫ್ತು ಮಾಡಲಾಗಿತ್ತು. 2003-04ರಲ್ಲಿ ಇಲ್ಲಿಂದ 1,223 ಟನ್ ಸರಕನ್ನು ಆಮದು ಮತ್ತು 9,650 ಟನ್ ಸರಕನ್ನು ರಫ್ತು ಮಾಡಲಾಗಿತ್ತು.

✧.ಹತ್ತನೆಯ ಪಂಚವಾರ್ಷಿಕ ಯೋಜನಾ ಅವಧಿಯ ಮೊದಲ ಎರಡು ವರ್ಷದಲ್ಲಿ 148.67 ಲಕ್ಷಗಳನ್ನೇ ಇದರ ಅಭಿವೃದ್ಧಿಗೆ ಖರ್ಚು ಮಾಡಲಾಗಿತ್ತು.

✧.2006-07ರಲ್ಲಿ 66 ಲಕ್ಷಗಳನ್ನು ಬಂದರಿನ ಸುಧಾರಣೆಗೆ ಖರ್ಚು ಮಾಡಲಾಗಿತ್ತು.

✧.2007-08 ರಲ್ಲಿ ಇಲ್ಲಿಂದ 14 ಸಾವಿರ ಟನ್ ಸರಕು ಸಾಗಾಣಿಕೆ ಮಾಡಲಾಗಿತ್ತು.

✧.2010-11ರಲ್ಲಿ ಕಡಲು ವಾಣಿಜ್ಯ ಮಾತ್ರ ಈ ಬಂದರಿನಿಂದ ನಿರ್ವಹಿಸಲಾಗಿರುತ್ತದೆ.

(ಕೃಪೆ: ಕರ್ನಾಟಕ ಕೈಪಿಡಿ ) 

☀6) ಹೊನ್ನಾವರ ಬಂದರು:  (Honnavar Ports):

☀6) ಹೊನ್ನಾವರ ಬಂದರು:
(Honnavar Ports):


━━━━━━━━━━━━━━━━━━━━━━━━━━━━━━━━━━━━━━━━━━━━━

★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.6)ಹೊನ್ನಾವರ ಬಂದರು: (Honnavar Ports):

✧.ಇದು ಶರಾವತಿ ನದಿಮುಖಜ ಪ್ರದೇಶದಲ್ಲಿರುವ ಕಾರವಾರದ ನಂತರದ ಎರಡನೆಯ ಪ್ರಮುಖ ಬಂದರು.

✧.ವಿವಿಧ ಪಂಚವಾರ್ಷಿಕ ಯೋಜನೆಯಡಿ ಈ ಬಂದರನ್ನು ಅಭಿವೃದ್ಧಿ ಪಡಿಸಲಾಗಿದೆ.

 ✧.1992-93ರಲ್ಲಿ 1,609 ಮೆಟ್ರಿಕ್‍ಟನ್ ರಫ್ತನ್ನು ಮಾಡಲಾಗಿದೆ.

 ✧.ಹತ್ತನೆಯ ಪಂಚವಾರ್ಷಿಕ ಯೋಜನೆಯ ಅವಧಿಯ ಮೊದಲ ಎರಡು ವರ್ಷಗಳಲ್ಲಿ 12.85 ಲಕ್ಷಗಳನ್ನು ಇದರ ಅಭಿವೃದ್ಧಿಗೆ ಖರ್ಚು ಮಾಡಲಾಗಿದ್ದು, 2006-07ರ ಅವಧಿಯಲ್ಲಿ ಇದನ್ನು ಉನ್ನತೀಕರಿಸಲು ನಾಲ್ಕು ಲಕ್ಷಗಳನ್ನು ಖರ್ಚು ಮಾಡಲಾಗಿದೆ.

✧.2010-11ರಲ್ಲಿ ಸಾಗರೋತ್ತರ ವಾಣಿಜ್ಯ ಚಟುವಟಿಕೆಗಳು ಇರುವುದಿಲ್ಲ.

(ಕೃಪೆ: ಕರ್ನಾಟಕ ಕೈಪಿಡಿ) 

☀5) ಭಟ್ಕಲ್ ಬಂದರು:  (Bhatkal Ports):

☀5) ಭಟ್ಕಲ್ ಬಂದರು:
 (Bhatkal Ports):

━━━━━━━━━━━━━━━━━━━━━━━━━━━━━━━━━━━━━━━━━━━━━

★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.5) ಭಟ್ಕಲ್ ಬಂದರು: (Bhatkal Ports):

✧.ಹಿಂದಿನ ಕಾಲದಲ್ಲಿ ಇದು ವಿದೇಶಿ ವ್ಯಾಪಾರಕ್ಕೆ ಹೆಸರಾದ ಪ್ರಮುಖ ವ್ಯಾಪಾರಿ ಬಂದರಾಗಿತ್ತು.

✧.ಈ ನೈಸರ್ಗಿಕ ಬಂದರು, ವಿಜಯನಗರ ಕಾಲದಲ್ಲಿ ಪಶ್ಚಿಮ ಕರಾವಳಿಯ ಪ್ರಮುಖ ಬಂದರಾಗಿತ್ತು.

✧.ಭಟ್ಕಳವು ಹೊನ್ನಾವರದಿಂದ ದಕ್ಷಿಣಕ್ಕೆ 40 ಕಿ.ಮೀ. ದೂರದಲ್ಲಿ ಶರಾವತಿ ನದಿಮುಖದಲ್ಲಿದೆ. ಆದರೆ, ಈ ಬಂದರಿನ ಮೂಲಕ ಇತ್ತೀಚೆಗೆÀ ಅತೀ ಕಡಿಮೆ ವಾಣಿಜ್ಯ ಚಟುವಟಿಕೆ ನಡೆಯುತ್ತಿತ್ತು.

✧.ಹತ್ತನೆಯ ಪಂಚವಾರ್ಷಿಕ ಯೋಜನಾ ಅವಧಿಯ ಮೊದಲ ಎರಡು ವರ್ಷದಲ್ಲಿ ಎಂಟು ಲಕ್ಷವನ್ನು ಖರ್ಚು ಮಾಡಲಾಗಿದ್ದು, 2006-07ರಲ್ಲಿ ನಾಲ್ಕು ಲಕ್ಷವನ್ನು ಇದರ ಅಭಿವೃದ್ಧಿಗಾಗಿ ಖರ್ಚು ಮಾಡಲಾಗಿತ್ತು.

✧.2010-11ರಲ್ಲಿ ಸಾಗರೋತ್ತರ ವಾಣಿಜ್ಯ ಚಟುವಟಿಕೆಗಳು ಇರುವುದಿಲ್ಲ.

(ಕೃಪೆ: ಕರ್ನಾಟಕಕೈಪಿಡಿ ) 

☀4) ಕುಂದಾಪುರ ಬಂದರು: (Kundhapur Ports):


  1. ☀4) ಕುಂದಾಪುರ ಬಂದರು:(Kundhapur Ports):


━━━━━━━━━━━━━━━━━━━━━━━━━━━━━━━━━━━━━━━━━━━━━


★ ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.4) ಕುಂದಾಪುರ ಬಂದರು: (Kundhapur Ports):

✧.ಜಿಲ್ಲಾ ಕೇಂದ್ರ ಉಡುಪಿಯಿಂದ ಉತ್ತರಕ್ಕೆ 33 ಕಿ.ಮೀ. ದೂರದಲ್ಲಿ ಗಂಗೊಳ್ಳಿ ನದಿಯ ಸಂಗಮದಲ್ಲಿದೆ.

✧.ಕಾರವಾರ ಬಂದರು ಅಭಿವೃದ್ಧಿ ಗೊಳ್ಳುವ ಮುಂಚೆ ಈ ಬಂದರಿನಲ್ಲಿ ಸಾಕಷ್ಟು ಸಂಚಾರವಿತ್ತು.

 ✧.1992-93ರಲ್ಲಿ 5,538 ಮೆಟ್ರಿಕ್ ಟನ್ ಸರಕು ಇಲ್ಲಿಂದ ರಫ್ತು ಮಾಡಲಾಗಿತ್ತು.

✧.1999-2000ರಲ್ಲಿ 46,445 ಮೆಟ್ರಿಕ್ ಟನ್ ಸರಕು ಸಂಚಾರವಿತ್ತು.

 ✧.ಹತ್ತನೆಯ ಪಂಚವಾರ್ಷಿಕ ಯೋಜನಾ ಅವಧಿಯ ಮೊದಲ ಎರಡು ವರ್ಷದಲ್ಲಿ 13 ಲಕ್ಷಗಳನ್ನು ಇದರ ಅಭಿವೃದ್ದಿಗೆ ಖರ್ಚು ಮಾಡಲಾಗಿತ್ತು.

 ✧.2006-07ರಲ್ಲಿ ಯಾವುದೇ ಖರ್ಚು ಮಾಡಲಾಗಿರಲಿಲ್ಲ.

(ಕೃಪೆ: ಕರ್ನಾಟಕ ಕೈಪಿಡಿ)

Friday, 20 March 2015

☀3) ತದ್ರಿ ಬಂದರು (Tadhri Ports):

☀3) ತದ್ರಿ ಬಂದರು:
 (Tadhri Ports):


━━━━━━━━━━━━━━━━━━━━━━━━━━━━━━━━━━━━━━━━━━━━━

★ ಕೆಎಎಸ್ ವಿಶೇಷಾಂಕ: ಕರ್ನಾಟಕದ ಬಂದರುಗಳು:
(KAS SPECIAL: KARNATAKA'S MAJOR PORTS)


 ●.3) ತದ್ರಿ ಬಂದರು: (Tadhri Ports):

✧.ಈ ಬಂದರು ಕಮಟಾ ತಾಲೂಕಿನ ಅಘನಾಶಿನಿ ನದಿಮುಖಜ ಪ್ರದೇಶದಲ್ಲಿದ್ದು, ಹೊನ್ನಾವರದಿಂದ 54 ಕಿ.ಮೀ. ದೂರದಲ್ಲಿದೆ.

✧.1992-93ರಲ್ಲಿ 2,790 ಟನ್ ಸಿಲಿಕಾ ಮರಳನ್ನು ಈ ಬಂದರಿನಿಂದ ರಫ್ತು ಮಾಡಲಾಗಿತ್ತು. ಆದರೆ 1999-2000ರಲ್ಲಿ ಇದು 610 ಮೆಟ್ರಿಕ್ ಟನ್‍ಗಳಿಗೆ ಇಳಿಯಿತು.

 ✧.2003-04ರಲ್ಲಿ 815 ಟನ್ ರಫ್ತು ಮಾಡಲಾಗಿದೆ.

✧.ಹತ್ತನೆಯ ಯೋಜನಾ ಅವಧಿಯಲ್ಲಿ ` 13 ಲಕ್ಷಗಳನ್ನು ಇದರ ಅಭಿವೃದ್ಧಿಗಾಗಿ ಖರ್ಚು ಮಾಡಲಾಗಿದ್ದು,

✧.2006-07ರಲ್ಲಿ ` 10 ಲಕ್ಷಗಳನ್ನು ಖರ್ಚು ಮಾಡಲಾಗಿತ್ತು.

✧.2010-11ರಲ್ಲಿ ಹಡಗಿಗೆ ಸಂಬಂಧಿಸಿದ ವಾಣಿಜ್ಯ ಚಟುವಟಿಕೆಗಳು ಇರುವುದಿಲ್ಲ.

(ಕೃಪೆ: ಕರ್ನಾಟಕ ಕೈಪಿಡಿ)

☀2) ಬೆಳಿಕೇರಿ ಬಂದರು (Belikeri Ports):

☀2) ಬೆಳಿಕೇರಿ ಬಂದರು:
(Belikeri Ports):


━━━━━━━━━━━━━━━━━━━━━━━━━━━━━━━━━━━━━━━━━━━━━

 ●.ಕರ್ನಾಟಕದ ಬಂದರುಗಳು:
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


 ●.2) ಬೆಳಿಕೇರಿ ಬಂದರು (Belikeri Ports):

✧.1992-93ರಲ್ಲಿ ಈ ಬಂದರಿನಿಂದ 60,895 ಮೆಟ್ರಿಕ್ ಟನ್ ಕಬ್ಬಿಣ/ ಮ್ಯಾಂಗನೀಸ್ ಅದಿರನ್ನು ರಫ್ತು ಮಾಡಲಾಗಿತ್ತು.

✧. ಎಂಟನೆಯ ಯೋಜನೆಯಡಿಯಲ್ಲಿ ಬಂದರಿನ ಅಭಿವೃದ್ದಿಗೆ ` 90 ಲಕ್ಷಗಳನ್ನು ಒದಗಿಸಲಾಗಿತ್ತು.

✧.ಇದು ಕಾರವಾರದಿಂದ ದಕ್ಷಿಣಕ್ಕೆ 30 ಕಿಮೀ. ದೂರದಲ್ಲಿ ಅಂಕೋಲ ತಾಲ್ಲೂಕಿನಲ್ಲಿದೆ.

✧.2003-04ರಲ್ಲಿ ಇಲ್ಲಿಂದ 96,960 ಟನ್ ರಫ್ತು ಮಾಡಲಾಗಿದೆ.

✧.ಹತ್ತನೆಯ ಯೋಜನೆಯಡಿಯಲ್ಲಿ 2003-04ರಲ್ಲಿ ಇದರ ಅಭಿವೃದ್ಧಿಗಾಗಿ ` 6.58 ಲಕ್ಷಗಳನ್ನು ಖರ್ಚು ಮಾಡಲಾಗಿತ್ತು.

✧.2006-07 ರಲ್ಲಿ ಇದರ ಅಭಿವೃದ್ಧಿಗಾಗಿ ` ಒಂದು ಲಕ್ಷ ಖರ್ಚು ಮಾಡಲಾಗಿತ್ತು.

 ✧.2010-11ರಲ್ಲಿ ಇಲ್ಲಿಂದ 18,30,620 ಮೆಟ್ರಿಕ್ ಟನ್ ಕಬ್ಬಿಣ ಅದಿರು ರಫ್ತಾಗಿರುತ್ತದೆ.

(ಕೃಪೆ: ಕರ್ನಾಟಕ ಕೈಪಿಡಿ)

☀1) ಕಾರವಾರ ಬಂದರು:  (Karawar Port)

☀1) ಕಾರವಾರ ಬಂದರು:
(Karawar Port)


━━━━━━━━━━━━━━━━━━━━━━━━━━━━━━━━━━━━━━━━━━━━━

●.ಕರ್ನಾಟಕದ ಬಂದರುಗಳು
(KARNATAKA'S MAJOR PORTS)

★ ಕೆಎಎಸ್ ವಿಶೇಷಾಂಕ:
(KAS SPECIAL)


●.1) ಕಾರವಾರ ಬಂದರು:
(Karawar Port)

✧.ಕಾರವಾರ ಬಂದರು ವಿಶ್ವದಲ್ಲಿಯೇ ಉತ್ತಮ ನೈಸರ್ಗಿಕ ಬಂದರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

 ✧.1995-96ರ ವೇಳೆಗೆ ಈ ಬಂದರಿನಲ್ಲಿ ಸರಕು ಸಾಗಾಣಿಕೆ ಸಂಚಾರವು ಏಳು ಮಿಲಿಯನ್ ಟನ್‍ಗಳಾಗಬಹುದೆಂದು ಅಂದಾಜಿಸಲಾಗಿತ್ತು.

✧.ಇಲ್ಲಿಯ ಪ್ರಮುಖ ರಫ್ತು ಸಾಮಗ್ರಿಗಳೆಂದರೆ- ಕಬ್ಬಿಣ/ಮ್ಯಾಂಗನೀಸ್ ಅದಿರು, ಗ್ರಾನೈಟ್ ಬ್ಲಾಕ್‍ಗಳು, ಕೃಷಿ, ಅರಣ್ಯ ಮತ್ತು ಜಲಚರ ಸಾಮಗ್ರಿಗಳು.

✧.ಆನಂತರ ಇದನ್ನು ಸುಂಕ ಮತ್ತು ಸರ್ವಋತು ಬಂದರೆಂದು ಘೋಷಿಸಲಾಯಿತು.

✧.1999-2000ನೇ ಅವಧಿಯಲ್ಲಿ ರಫ್ತು ಮತ್ತು ಆಮದನ್ನು ಒಳಗೊಂಡಂತೆ 4,59,400 ಮೆಟ್ರಿಕ್ ಟನ್ ಸರಕಿನ ವಹಿವಾಟು ಮಾಡಲಾಗಿತ್ತು.

✧.2003-04ರಲ್ಲಿ ಇದರಿಂದ 3,25,845 ಟನ್ ಆಮದು ಮತ್ತು 6,26,352 ಟನ್ ರಫ್ತು ಮಾಡಲಾಗಿತ್ತು.

✧.ಹತ್ತನೆಯ ಪಂಚವಾರ್ಷಿಕ ಯೋಜನೆ(2006-07)ಯಲ್ಲಿ 2800 ಕೋಟಿಯನ್ನು ಕಾರವಾರ ಬಂದರು ಅಭಿವೃದ್ಧಿಗೆ ಮಂಜೂರು ಮಾಡಲಾಗಿತ್ತು. ಯೋಜನಾ ಅವಧಿಯ ಮೊದಲ ಎರಡು ವರ್ಷಗಳಲ್ಲಿ ` 781.11 ಲಕ್ಷಗಳನ್ನು ಅಭಿವೃದ್ಧಿಗೆ ವ್ಯಯ ಮಾಡಲಾಗಿದ್ದು, 200607ರಲ್ಲಿ ` 293 ಲಕ್ಷಗಳನ್ನು ಇದರ ಸುಧಾರಣೆಗೆ ಖರ್ಚು ಮಾಡಲಾಗಿದೆ.

✧.2006-07ರಲ್ಲಿ ಇದು ` 13.38 ಕೋಟಿ ಆದಾಯ ಗಳಿಸಿತ್ತು.

✧.2007-08 ರಲ್ಲಿ ಇದು 2,716 ಸಾವಿರ ಟನ್ ಸರಕು ಸಂಚಾರವನ್ನು ಕಲ್ಪಿಸಿತ್ತು.

 ✧.2010-11ರಲ್ಲಿ ಇಲ್ಲಿಂದ 9,58,416 ಮೆಟ್ರಿಕ್ ಟನ್ ಸರಕಿನ ರಫ್ತು 1,68,543 ಮೆಟ್ರಿಕ್ ಟನ್ ಸರಕಿನ ಆಮದು ಮಾಡಲಾಗಿದ್ದು, ` 9,72,39,325 ಗಳ ನೇರ ಆದಾಯ ಗಳಿಕೆಯಾಗಿತ್ತು.

(ಕೃಪೆ: ಕರ್ನಾಟಕ ಕೈಪಿಡಿ) 

Thursday, 19 March 2015

☀ಕರ್ನಾಟಕ ಬಜೆಟ್ -2015 ಮುಖ್ಯಾಂಶಗಳು (Highlights of the Karnataka Budget-2015)

☀ಕರ್ನಾಟಕ ಬಜೆಟ್ -2015 ಮುಖ್ಯಾಂಶಗಳು
(Highlights of the Karnataka Budget-2015)

━━━━━━━━━━━━━━━━━━━━━━━━━━━━━━━━━━━━━━━━━━━━━

●.ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಿದೆ.
— ಮುಖ್ಯಮಂತ್ರಿಗಳು ಬಜೆಟ್ ‍ನಲ್ಲಿ ಘೋಷಣೆ ಮಾಡಿದ ಪ್ರಮುಖ ಅಂಶಗಳು ಇಲ್ಲಿವೆ.

✧.2015-16ನೇ ಸಾಲಿನ ಬಜೆಟ್ ಗಾತ್ರ 1.42.534 ಕೋಟಿ
✧.2014-15ರ ಬಜೆಟ್ ಗಾತ್ರ 1.38.008 ಕೋಟಿ
✧.2015-16ನೇ ಸಾಲಿನ ಯೋಜನಾ ಗಾತ್ರ 72.597 ಕೋಟಿ
✧.2014-15ರ ಯೋಜನಾ ಗಾತ್ರ 65.600 ಕೋಟಿ
✧.ಕಳೆದ ವರ್ಷಕ್ಕಿಂತ 10.67ರಷ್ಟು ಏರಿಕೆ
✧.ಕೃಷಿ – 3883 ಕೋಟಿ
✧.ಮಣ್ಣಿನಿಂದ ಅನ್ನವ ತೆಗೆಯುವ ನಮ್ಮ ಕುಳಗಳು
✧.ಸಗ್ಗವನೆ ದಿನವೂ ತೆರೆವ ಕೀಲಿ ಕೈಗಳು
✧.ಕೃಷಿ ಸಮಗ್ರ ದೂರ ದೃಷ್ಟಿಗೆ ತಜ್ಞರ ವಿಷನ್ ಗ್ರೂಪ್ ರಚನೆ
✧.ಲಘು ನೀರಾವರಿ ನೀತಿ 2015-16 ಜಾರಿ
✧.ಉತೃಷ್ಟ ಜ್ಞಾನ ಕೇಂದ್ರ ರಚನೆ
✧.ಬೆಳೆ ಸಮಸ್ಯೆ ನಿವಾರಣೆಗೆ ಕೃಷಿ ಅಭಿಯಾನ
✧.ರೈತ ಸಂಪರ್ಕ ಕೇಂದ್ರದಲ್ಲಿ ಒಂದೇ ಸೂರಿನಲ್ಲಿ ಎಲ್ಲಾ ಸೇವೆ
✧.78 ಹೊಸ ಸೇವಾ ಕೇಂದ್ರ ಆರಂಭ
✧.ಭೂ ಸಮೃದ್ಧಿ ಕಾರ್ಯಕ್ರಮ – 4 ಜಿಲ್ಲೆಗಳಿಗೆ ವಿಸ್ತರಣೆ
✧.ಕೆ.ಕಿಸಾನ್ ವಿದ್ಯುನ್ಮಾನ ಕೇಂದ್ರ ಸ್ಥಾಪನೆ – ರೈತ ಮಿತ್ರ ಕಾರ್ಡ್, ಮಣ್ಣು ಆರೋಗ್ಯ ಕಾರ್ಡ್ ನೀಡಿಕೆ
✧.ಜಲಾನಯನ ನಿರ್ವಹಣೆಗೆ ಡಿಜಿಟಲ್ ಗ್ರಂಥಾಲಯ
✧.ಸೂಕ್ತ ತಳಿ ಉತ್ತೇಜನಕ್ಕಾಗಿ ಸಂಶೋಧನೆ ಯೋಜನೆ
✧.ಶಿವಮೊಗ್ಗ ಕೃಷಿ ವಿವಿಗೆ ಹೊಸ ಕ್ಯಾಂಪಸ್ ನಿರ್ಮಾಣ
✧.ಮುಧೋಳ, ಮಂಡ್ಯದಲ್ಲಿ ಬೆಲ್ಲದ ಪಾರ್ಕ್ ಅಭಿವೃದ್ಧಿ

•—————••—————••—————••—————••—————•


●.ತೋಟಗಾರಿಕೆ – 760 ಕೋಟಿ

✧.ಸಂಗ್ರಹಣಾ ಕೇಂದ್ರ, ಕೃಷಿ ಯಾಂತ್ರಿಕ ಸಲಕರಣೆಗಳಿಗೆ ಶೇಕಡ 90ರಷ್ಟು ಸಬ್ಸಿಡಿ
✧.ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ ಕೃಷಿ ಉತ್ಪಾದಕ ಸಂಘಗಳ ಬಲಪಡಿಸುವಿಕೆ
✧.ನೀರಾ ಇಳಿಸಲು ಅನುಮತಿ ನೀಡಲು ಅಬಕಾರಿ ನಿಯಮಕ್ಕೆ ತಿದ್ದುಪಡಿ
✧.ಹಾಪ್‍ಕಾಮ್ಸ್ ಅಭಿವೃದ್ಧಿಗೆ ಗಣಕೀಕರಣ
✧.ರೈತೋತ್ಪಾದಕ ಕೇಂದ್ರಗಳು, ಏಜೆನ್ಸಿಗಳು ಸಾವಯವ ಕೃಷಿಯಲ್ಲಿ ರಾಜ್ಯ ಸರ್ಕಾರದೊಂದಿಗೆ ಪಾಲುದಾರಿಕೆ
✧.ಹಾವೇರಿ ಕಾಲೇಜಿನ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು
✧.ಮೈಸೂರಿನ ಕುಪ್ಪಣ್ಣ ಪಾರ್ಕ್, ದಾವಣಗೆರೆ ಜಿಲ್ಲೆ ಶಾಮನೂರು ಗ್ರಾಮ, ಬಳ್ಳಾರಿಯಲ್ಲಿ ಗಾಜಿನ ಮನೆ

•—————••—————••—————••—————••—————•


●.ಪಶು ಸಂಗೋಪನೆ – 1882 ಕೋಟಿ

✧.ಪಶುಭಾಗ್ಯ
✧.ವಾಣಿಜ್ಯ ಬ್ಯಾಂಕ್‍ಗಳಿಂದ 1.2 ಲಕ್ಷದ ವರೆಗೆ ಸಾಲ
✧.ಎಸ್‍ಸಿಎಸ್‍ಟಿ ಶೇಕಡ 33 ರಷ್ಟು ಸಬ್ಸಿಡಿ, ಉಳಿದವರಿಗೆ ಶೇಕ 25ರಷ್ಟಿ ಸಬ್ಸಿಡಿ
✧.ಹಸು, ಕುರಿ, ಆಡು, ಹಂದಿ, ಕೋಳಿ ಸಾಕಣೆಗೆ ಪಶು ಭಾಗ್ಯ
✧.ಸಹಕಾರಿ ಬ್ಯಾಂಕ್‍ಗಳಲ್ಲಿ ಶೂನ್ಯದರದಲ್ಲಿ ಶೇಕಡ 50ರಷ್ಟು ಸಾಲ
✧.ಕುರಿಗಾಹಿ ಸುರಕ್ಷಾ ಯೋಜನೆ ಮುಂದುವರಿಕೆ
✧.ಕುರಿಗಾಹಿ ಸುರಕ್ಷಾ ಯೋಜನೆಗೆ ಹೆಚ್ಚುವರಿಯಾಗಿ 5 ಕೋಟಿ ಅನುದಾನ
✧.ಹಿತ್ತಲ ಕೋಳಿ ಸಾಕಾನೆಗೆ ಉತ್ತೇಜನ
✧.ಕರ್ನಾಟಕ ಕುರಿ, ಉಣ್ಣೆ ಅಭಿವೃದ್ಧಿ ನಿಗಮಕ್ಕೆ 4 ಪಟ್ಟು ಹೆಚ್ಚು ಅನುದಾನ – 25 ಕೋಟಿ ಅನುದಾನ
✧.ಗೋಶಾಲೆಗಳಿಗೆ 7 ಕೋಟಿ ಅನುದಾನ
✧.ಗೋಮಾಳ, ಕಾವಲ್ ಭೂಮಿಗಳಲ್ಲಿ ಮೇವು ಉತ್ಪಾದನೆಗೆ 10 ಕೋಟಿ
✧.ಉತ್ತರ ಕರ್ನಾಟಕದಲ್ಲಿ ಮುಂದಿನ 3 ವರ್ಷಗಳಲ್ಲಿ ಹೊಸದಾಗಿ 750 ಹಾಲು ಉತ್ಪಾದಕರ ಸಂಘಗಳ ಸ್ಥಾಪನೆ – 16 ಕೋಟಿ ಅನುದಾನ
✧.ದೇವಣಿ, ಮಲೆನಾಡು ಗಿಡ್ಡ ಹಸುಗಳ ಸಂರಕ್ಷಣೆಗಾಗಿ 10 ಕೋಟಿ ವೆಚ್ಚದಲ್ಲಿ ಗೋಕುಲ ಗ್ರಾಮ ಸ್ಥಾಪನೆ
✧.ಸಂಚಾರಿ ರೋಗ ನಿರ್ಧಾರ ಪ್ರಯೋಗಾಲಯ ಸ್ಥಾಪನೆ
✧.ಬೀದರ್ ಜಿಲ್ಲೆಯಲ್ಲಿ ಮಿಲ್ಕ್ ಶೆಡ್ ಪ್ರದೇಶಾಭಿವೃದ್ಧಿ – 8 ಲಕ್ಷ ಲೀಟರ್ ಹಾಲು ಉತ್ಪಾದನೆಗೆ ಕ್ರಮ
✧.ಸಂಕಷ್ಟದಲ್ಲಿರುವ ಕುರಿ, ಉಣ್ಣೆ ಉತ್ಪಾದನಾ ಸಹಕಾರ ಸಂಘಗಳಿಗೆ ಪ್ರೋತ್ಸಾಹ ಮುಂದುವರಿಕೆ – 20 ಕೋಟಿ

•—————••—————••—————••—————••—————•


●.ರೇಷ್ಮೆ – 186 ಕೋಟಿ

✧.ವಿಶಾಲ, ಜಿ-2, ಸುವರ್ಣ ಹಿಪ್ಪುನೇರಳೆ ತಳಿಗಳ ಅಭಿವೃದ್ಧಿ ಶೇಕಡ 75ರಷ್ಟು ಪ್ರೋತ್ಸಾಹ ಧನ
✧.1 ಎಕರೆಗೆ 14 ಸಾವಿರ ರೂ.
✧.ಉತ್ತರ ಕರ್ನಾಟಕದಲ್ಲಿ 2, ದಕ್ಷಿಣ ಕರ್ನಾಟಕದಲ್ಲಿ 3, ಒಟ್ಟು 5 ರೈತ ಉತ್ಪಾದಕ ಸಂಘಗಳ ಸ್ಥಾಪನೆ
✧.ರಾಮನಗರ, ಶಿಡ್ಲಘಟ್ಟ, ಕೊಳ್ಳೇಗಾಲ ರೀಲೀಂಗ್ ಪಾರ್ಕ್ ಸ್ಥಾಪನೆ10 ಕೋಟಿ
✧.ಉತ್ತರ ಕರ್ನಾಟಕದಲ್ಲಿ ರೀಲೀಂಗ್ ಯಂತ್ರ ಅಳವಡಿಕೆ
ಶೇಕಡ 90ರಷ್ಟು ಸಬ್ಸಿಡಿ

•—————••—————••—————••—————••—————•


●.ಸಹಕಾರ – 1323 ಕೋಟಿ

✧.ಶೂನ್ಯ ಬಡ್ಡಿದರದಲ್ಲಿ 3 ಲಕ್ಷದವರೆಗೆ ಅಲ್ಪಾವಧಿ ಕೃಷಿ ಸಾಲ
✧.ಶೇಕಡ 3ರಷ್ಟು ಬಡ್ಡಿದರದಲ್ಲಿ 10 ಲಕ್ಷದವರೆಗೆ ಕೃಷಿ ಸಾಲ
✧.23 ಲಕ್ಷ ರೈತರಿಗೆ 10 ಸಾವಿರ ಕೋಟಿ ಸಾಲ
✧.ಯಶಸ್ವಿನಿ ಆರೋಗ್ಯ ರಕ್ಷಣಾ ಕವಚ ಯೋಜನೆಗೆ 110 ಕೋಟಿ
✧.ಬಿಪಿಎಲ್ ಕುಟುಂಬದ ಸದಸ್ಯರು ಸಹಕಾರ ಸಂಘಗಳಿಗೆ ಸದಸ್ಯರಾದರೆ ಶೇರು ಧನದ ಮೊತ್ತ ಸರ್ಕಾರದಿಂದ ಭರಿಸುತ್ತೇ – 32 ಕೋಟಿ ಮೀಸಲು
✧.ಕೃಷಿ ಉದ್ದೇಶದ ವಿಫಲ ಕೊಳವೆ ಬಾವಿಗಳ ಸಾಲ ಮನ್ನಾ – 2 ಕೋಟಿ
✧.ಹಾವೇರಿ, ಚಾಮರಾಜನಗರದಲ್ಲಿ ಪ್ರತ್ಯೇಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸ್ಥಾಪನೆ
✧.ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ವಿಭಜನೆ
✧.ದಾವಣಗೆರೆ, ಚಿತ್ರದುರ್ಗಕ್ಕೆ ಪ್ರತ್ಯೇಕ ಸಹಕಾರ ಹಾಲು ಒಕ್ಕೂಟ
✧.650 ಕೋಟಿ ವೆಚ್ಚದಲ್ಲಿ 72 ಸ್ಥಳದಲ್ಲಿ ಹೊಸದಾಗಿ ಉಗ್ರಾಣ ಕೇಂದ್ರ ಸ್ಥಾಪನೆ
✧.ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಉಡುಪಿ, ಬಳ್ಳಾರಿ, ಕಲಬುರಗಿ, ದಾವಣಗೆರೆ ಭಾನುವಾರದ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ – 7 ಕೋಟಿ
✧.ನಿರ್ಮಲ ಮಾರುಕಟ್ಟೆ ಯೋಜನೆ ಆರಂಭ
✧.ಮೈಸೂರು, ಶಿವಮೊಗ್ಗ, ಬಿಜಾಪುರ, ಬೆಂಗಳೂರಿನ ಸಿಂಗೇನ ಅಗ್ರಹಾರ ಪ್ರಮುಖ ಮಾರುಕಟ್ಟೆಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ
✧.ರೈತರಿಗೆ ಶುದ್ಧ ಕುಡಿಯುವ ನೀರು ನೀಡಲು – ಶುದ್ಧ ಕುಡಿಯುವ ನೀರಿನ ಘಟಕ
✧.ಹುಬ್ಬಳ್ಳಿ, ತುಮಕೂರು, ಬೆಂಗಳೂರಿನ ದಾಸನಪುರ ಮಾರುಕಟ್ಟೆಯಲ್ಲಿ ಶೀತಲ ಗೃಹ ಘಟಕ
✧.ಆಯ್ದ ಎಪಿಎಂಸಿಗಳಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ಮಿನಿ ಸೈಲೋಸ್ ನಿರ್ಮಾಣ
✧.ಮೈಸೂರು, ತುಮಕೂರು, ಹುಬ್ಬಳ್ಳಿ, ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 3 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ವಿಶ್ಲೇಷಣಾ ಪ್ರಯೋಗಾಲಯ
✧.ಕೇಂದ್ರೀಕೃತ ಪರ್ಮಿಮ್ ಪರಿಶೀಲನೆ ವ್ಯವಸ್ಥೆಗೆ – ಇ-ಪರ್ಮಿಟ್ ಪದ್ಧತಿ

•—————••—————••—————••—————••—————•


●.ಜಲಸಂಪನ್ಮೂಲ -12.956 ಕೋಟಿ

✧. ಭಾರಿ ಮತ್ತು ಮಧ್ಯಮ ನೀರಾವರಿ
✧.ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಅನುಷ್ಠಾನ – ಈ ಯೋಜನೆಯ 9 ಉಪಯೋಜನೆಗಳಲ್ಲಿ 8 ಉಪಯೋಜನೆಗಳಾದ ಮುಳವಾಡ ಚಿಮ್ಮಲಗಿ, ಇಂಡಿ, ರಾಂಪುರ, ಮಲ್ಲಾಬಾದ್, ಕೊಪ್ಪಳ ಹಾಗೂ ಹೆರಕಲ್ ಏತ ನೀರಾವರಿ, ನಾರಾಯಣ ಬಲದಂಡೆ ಕಾಲುವೆ ವಿಸ್ತರಣೆ
✧.ಶಿಂಶಾ ಅಣೆಕಟ್ಟು ಬಲದಂಡೆ ನಾಲೆ ಆಧುನೀಕರಣ
✧.ವೃಷಭಾವತಿ ಕಣಿವೆಯಲ್ಲಿ ಹರಿಯುವ ನೀರನ್ನು ಸಂಸ್ಕರಿಸಿ ರಾಮನಗರ ಜಿಲ್ಲೆಯ ಬೈರಾಮಂಗಲ ಕೆರೆ ತುಂಬಿಸುವ ಯೋಜನೆ
✧.ಕೆ.ಆರ್.ಎಸ್. ಜಲಾಶಯದ ಬೃಂದಾವನ ಉದ್ಯಾನವನ ಆಧುನಿಕ ತಂತ್ರಜ್ಞಾನ ಬಳಸಿ ವಿಶ್ವದರ್ಜೆಗೆ ಕಬ್ಬು ಬೆಳೆಗೆ ಹನಿನೀರಾವರಿ ಪದ್ಧತಿ
✧.ಪ್ರಥಮ ಹಂತದಲ್ಲಿ ಆಯ್ದ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಯೋಜನೆ ಜಾರಿ
✧.ಮೇಕೆದಾಟು ಮೇಲ್ಭಾಗ ಸಮತೋಲನ ಜಲಾಶಯ ನಿರ್ಮಾಣಕ್ಕೆ ವಿವರವಾದ ವರದಿ ನೀಡಲು 25 ಕೋಟಿ
✧.ಬರಪೀಡಿತ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ, ಬಾಗಲಕೋಟೆ, ಗದಗದಲ್ಲಿ 12 ಪ್ರಮುಖ ಯೋಜನೆಗೆ ಸೂಕ್ಷ್ಮ ನೀರಾವರಿ ಪದ್ಧತಿ
✧.ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಮತ್ತು ವಾಲ್ಮಿ ಸಂಸ್ಥೆಗಳ ಬಲವರ್ಧನೆ
✧.ಟೀ. ನರಸೀಪುರ ತಾಲೂಕಿನ ತಲಕಾಡಿನಲ್ಲಿ ಮಾಧವ ಮಂತ್ರಿ ಅಣೆಕಟ್ಟು ಆಧುನೀಕರಣ
✧.ಹೇಮಾವತಿ, ಕಬಿನಿ ಅಣೆಕಟ್ಟೆ ಕೆಳಭಾಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಉದ್ಯಾನವನ ನಿರ್ಮಾಣ
✧.ಚನ್ನಗಿರಿ ತಾಲೂಕು ಸಂತೆಬೆನ್ನೂರು ಮತ್ತು ಕಸಬಾ ಹೋಬಳಿ ಏತನೀರಾವರಿ ಯೋಜನೆಗೆ 267 ಕೋಟಿ
✧.ಚನ್ನಗಿರಿ, ಮಾಯಕೊಂಡ, ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ 77 ಕೆರೆ ತುಂಗಭದ್ರಾ ನದಿ ನೀರಿನಿಂದ ತುಂಬಿಸಲು 50 ಕೋಟಿ

✧.ಸಣ್ಣ ನೀರಾವರಿ
✧.ನೈಸರ್ಗಿಕ ನದಿ ಕೊಳ್ಳಗಳಿಗೆ ಸರಣಿಯಲ್ಲಿ ಪಿಕಪ್ ನಿರ್ಮಾಣ – 100 ಕೋಟಿ
✧.ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ರಾಮನಗರ ಜಿಲ್ಲೆಯಲ್ಲಿ ಪಿಕಪ್ ನಿರ್ಮಾಣ
✧.ಕೆರೆ ಅಭಿವೃದ್ಧಿ ನಾಡಿನ ಶ್ರೇಯೋಭೀವೃದ್ಧಿ – 190 ಕೆರೆಗಳ ಸಮಗ್ರ ಅಭಿವೃದ್ಧಿ
✧.ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಒತ್ತುವರಿ ತೆರವು ಅಭಿಯಾನ, ಕೆರೆಗಳ ಪೋಷಕ ಕಾಲುವೆ/ರಾಜಾಕಾಲುವೆ ದುರಸ್ತಿಗೆ 100 ಕೋಟಿ
✧.ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಕೋರಮಂಗಲ ಚನ್ನಘಟ್ಟ ಕಣಿವೆಯಿಂದ ಹರಿಯುವ ಕೊಳಚೆ ನೀರು ಸಂಸ್ಕರಣೆ – ಈ ನೀರನ್ನು ಏತ ನೀರಾವರಿ ಮೂಲಕ ಕೈಗೊಳ್ಳಲು ಯೋಜನಾ ವರದಿ ಸಿದ್ಧ – ಶೀಘ್ರ ಯೋಜನೆ ಜಾರಿ
✧.ಆನೇಕಲ್ ತಾಲೂಕಿನ 60 ಕೆರೆಗಳಿಗೆ ದಕ್ಷಿಣ ಪಿನಾಕಿನಿ ನದಿಗೆ ಹರಿಯುವ ಸಂಸ್ಕರಿಸಿದ ಕೊಳಚೆ ನೀರು ತುಂಬಿಸಲು ಮುತ್ತಸಂದ್ರ ಗ್ರಾಮದ ಸಮೀಪ ಏತ ನೀರಾವರಿ ಯೋಜನೆ

•—————••—————••—————••—————••—————•


●.ಅರಣ್ಯ, ಪರಿಸರ, ಜೀವಿಶಾಸ್ತ್ರ – 1757 ಕೋಟಿ

✧.ತಾಲೂಕಿಗೊಂದು ಹಸಿರು ಗ್ರಾಮ – 3 ಕೋಟಿ
✧.ಪ್ರತಿ ತಾಲೂಕಿನ ಆಯ್ಕೆ ಗ್ರಾಮದಲ್ಲಿ ಅರಣ್ಯ ಪ್ರದೇಶಾಭಿವೃದ್ಧಿ, ಔಷಧಿ ಸಸ್ಯ ಬೆಳೆಸುವುದು
✧.ಪರ್ಯಾಯ ಇಂಧನ ಮೂಲದಿಂದ ಅಭಿವೃದ್ಧಿ ಪಡಿಸಿದ ವಿದ್ಯುತ್ ಒದಗಿಸುವುದು
✧.ಕಾಂಪೋಸ್ಟಿಂಗ್, ಎರೆಹುಳು ಗೊಬ್ಬರ ತಯಾರಿಕಾ ತರಬೇತಿ
✧.ವಿದ್ಯಾರ್ಥಿಗಳಿಗೆ ಅರಣ್ಯ, ಪರಿಸರದ ಅರಿವು ಮೂಡಿಸಲು 2 ಹೊಸ ಯೋಜನೆ
✧.ತಾಲೂಕಿಗೊಂದು ಹಸಿರು ಶಾಲಾವನ –ಚಿಣ್ಣರ ವನ ದರ್ಶನ ಯೋಜನೆ
✧.ತಾಲೂಕಿಗೊಂದು ಹಸಿರು ಶಾಲಾವನ – ಪ್ರತಿ ತಾಲೂಕಿನಲ್ಲಿ 3ರಿಂದ 5 ಎಕರೆ ಪ್ರದೇಶದಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನು ತೊಡಗಿಸಿ ಮರ, ಗಿಡ ಬೆಳೆಸಲು 2.25 ಕೋಟಿ – 5 ವರ್ಷಗಳ ಯೋಜನೆ
✧.ಚಿಣ್ಣರ ವನ ದರ್ಶನ ಯೋಜನೆ
✧.ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ 10 ಸಾವಿರ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು 5 ಕೋಟಿ ಯೋಜನೆ
✧.ಹುಲಿ ಸಂರಕ್ಷಿತ ಪ್ರದೇಶ, ವನ್ಯ ಜೀವಿ ಧಾಮ, ರಾಷ್ಟ್ರೀಯ ಉದ್ಯಾನವನದ ಅರಣ್ಯವಾಸಿಗಳ ಸ್ಥಳಾಂತರಕ್ಕೆ ಪುನರ್ವಸತಿ ಘಟಕ ಸ್ಥಾಪನೆ
✧.ಜೀವ ವೈವಿಧ್ಯ ಉದ್ಯಾನಗಳ ಅಭಿವೃದ್ಧಿ – ಮಡಿವಾಳ ಕೆರೆ ಜೀವ ವೈವಿಧ್ಯ ಉದ್ಯಾನ ಅಭಿವೃದ್ಧಿಗೆ 24.72 ಕೋಟಿ
✧.ಹವಾಮಾನ ಬದಲಾವಣೆಯ ರಾಜ್ಯದ ಕ್ರಿಯಾ ಯೋಜನೆಗೆ ಕೇಂದ್ರದ ಮಂಜೂರಾತಿ ಯೋಜನೆ ಅನುಷ್ಠಾನಕ್ಕೆ 2 ಕೋಟಿ
✧.ಮಹಾನಗರ ಪ್ರದೇಶಗಳ ಕೆರೆಗಳ ರಕ್ಷಣೆ, ಕೆರೆಗಳ ಅಭಿವೃದ್ಧಿ, ಕೆರೆಗಳ ಸೌಂದರ್ಯವೃದ್ಧಿಗೆ 5.56 ಕೋಟಿ

•—————••—————••—————••—————••—————•


●.ಪ್ರಾಥಮಿಕ-ಪ್ರೌಢಶಿಕ್ಷಣ – 16204 ಕೋಟಿ

✧.ಸರ್ಕಾರಿ ಶಾಲಾ,ಕಾಲೇಜುಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಹೊಸ ಕಟ್ಟಡ, ಹೆಚ್ಚುವರಿ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗೆ 110 ಕೋಟಿ
✧.ಟೆಲಿ ಶಿಕ್ಷಣ ಕಾರ್ಯಕ್ರಮ ಸಾವಿರ ಶಾಲೆಗಳಿಗೆ ವಿಸ್ತರಣೆ
✧.ಶಾಲೆಗಾಗಿ ನಾವು ನೀವು ಯೋಜನೆ – ಶಾಲಾ, ಕಾಲೇಜುಗಳ ಮೂಲಭೂತ ಸೌಕರ್ಯ, ಶೈಕ್ಷಣಿಕ ಅಭಿವೃದ್ಧಿಗೆ ಸಿಎಸ್‍ಆರ್ ಸಮಿತಿ(ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ)
54.54 ಲಕ್ಷ ಮಕ್ಕಳಿಗೆ 1 ಜೊತೆ ಶೂ, 1 ಜೊತೆ ಸಾಕ್ಸ್ ಒದಗಿಸಲು 120 ಕೋಟಿ
✧.ಡಿಎಸ್‍ಇಆರ್‍ಟಿ, ಸಿಟಿಇ, ಡಯಟ್ ಮೇಲ್ದರ್ಜೆಗೆ
✧.ಶಿಕ್ಷಣ ಸೇವಾ ಕೇಂದ್ರ ಸ್ಥಾಪನೆ
✧.ರಾಜ್ಯದಲ್ಲಿ ಗ್ರೀನ್ ಪವರ್ ಶಾಲೆ ಆರಂಭ
✧.ವಿದ್ಯುತ್ ಉಳಿಸಲು ಸೋಲಾರ್ ವಿದ್ಯುತ್ ಉಪಕರಣ ಅಳವಡಿಕೆ
✧.100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,
✧.100 ಸರ್ಕಾರಿ ಹಿರಿಯ ಪ್ರೌಢಶಾಲೆ,
✧.100 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೋಲಾರ್ ಎಜುಕೇಷನ್ ಕಿಟ್
✧.ಸ್ಪರ್ಧಾಕಲಿ ಕಾರ್ಯಕ್ರಮ ಜಾರಿ
✧.ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಲ್ಲಿ ಶೈಕ್ಷಣಿಕ ಕಲಿಕೆಯ ಅರಿವು ಮೂಡಿಸಲು ಯೋಜನೆ
✧.ಚಿಕ್ಕಬಳ್ಳಾಪುರ ಬಿಇಡಿ ಕಾಲೇಜು ಉನ್ನತೀಕರಣ
✧.ಮುದ್ರಣ ಲೇಖನ ಸಾಮಗ್ರಿ, ಪ್ರಕಟಣೆ ಇಲಾಖೆ ಗಣಕೀಕರಣ
✧.ಅಬಕಾರಿ ಇಲಾಖೆಯ ಭದ್ರತಾ ಚೀಟಿ ಸರ್ಕಾರಿ ಮುದ್ರಣಾಲಯದಲ್ಲೇ ಮುದ್ರಣ
✧.ಸ್ಟೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ತರಬೇತಿ, ಶಿಬಿರ ಕೇಂದ್ರಕ್ಕೆ 5 ಕೋಟಿ

•—————••—————••—————••—————••—————•


●.ಉನ್ನತ ಶಿಕ್ಷಣ – 3896 ಕೋಟಿ

✧.ಸಹಭಾಗಿತ್ವ ಯೋಜನೆ ಆರಂಭ
✧.ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಕಾಲೇಜುಗಳು, ವಿವಿಗಳಲ್ಲಿ ಸಹಭಾಗಿತ್ವದ ಯೋಜನೆ – 10 ಕೋಟಿ
✧.ಜ್ಞಾನಸಂಗಮ ಯೋಜನೆಯಡಿ ಹಂತ ಹಂತವಾಗಿ ಮೂಲಭೂತ ಸೌಕರ್ಯ ಒದಗಿಸಲು ಕ್ರಮ
✧.ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಐಪಿಆರ್ ಅರಿವಿಗೆ ಪ್ರೋತ್ಸಾಹ ನೀಡಲು ಸ್ವಾವಲಂಬನೆ ಯೋಜನೆ ಆರಂಭ
✧.ಜ್ಞಾನ ಪ್ರಸಾರ ಯೋಜನೆಯಡಿ ಅಧ್ಯಾಪಕರ ಕೊರತೆ ನೀಗಿಸಲು ಕ್ರಮ
✧.ವಿಜ್ಞಾನ-ಸುಜ್ಞಾನ ಯೋಜನೆ ಮೂಲಕ ಪದವಿ, ಸ್ನಾತಕ ಮಟ್ಟದಲ್ಲಿ ವಿಜ್ಞಾನ ಕೋರ್ಸ್ ಆರಂಭ – 10 ಕೋಟಿ ರೂ.
✧.ಹಿರಿಮೆ-ಗರಿಮೆ ಯೋಜನೆಯಡಿ 100, 75, 50 ವರ್ಷ ಪೂರ್ಣಗೊಳಿಸಿದ ಸರ್ಕಾರಿ ✧.ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯ ಪೂರೈಸಲು 10 ಕೋಟಿ ರೂ
✧.ಮೈಸೂರು ವಿವಿ ಶತಮಾನೋತ್ಸವ ಆಚರಣೆಗೆ 50 ಕೋಟಿ ರೂ.
✧.ಅಭ್ಯಾಸ ಯೋಜನೆ – ಹಿಂದುಳಿದ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕಾ ಪರಿಣಾಮ ಉಂಟುಮಾಡಲು ಪ್ರೋತ್ಸಾಹ – 40 ಕೋಟಿ
✧.ಮಂಗಳೂರು ವಿವಿಯಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪನೆಗೆ 1 ಕೋಟಿ ರೂ.
✧.ಬೆಂಗಳೂರು ವಿವಿಯಲ್ಲಿ ನೆಹರೂ ಚಿಂತನಾ ಕೇಂದ್ರಕ್ಕೆ 3 ಕೋಟಿ ರೂ.
✧.ಮೈಸೂರು ವಿವಯಲ್ಲಿ ಅನಂತಮೂರ್ತಿ ಪೀಠಕ್ಕೆ 1 ಕೋಟಿ ರೂ.
✧.ಕೆಂಗೇರಿಯ ಗಾಣಕಲ್ ಗ್ರಾಮದಲ್ಲಿ ಚಿತ್ರಕಲಾ ಪರಿಷತ್ ಹೊರಾವರಣ ಕೇಂದ್ರ ಸ್ಥಾಪನೆ – 20 ಕೋಟಿ ವಿಶೇಷ ಅನುದಾನ
✧.ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ ನಳಂದಾ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪನೆಗೆ 5 ಕೋಟಿ.

(ಕೃಪೆ: Public TV) 

☀ರಕ್ತದ ಕುರಿತು ಸಂಕ್ಷಿಪ್ತ ಮಾಹಿತಿ: (Brief Info abut Blood)

☀ರಕ್ತದ ಕುರಿತು ಸಂಕ್ಷಿಪ್ತ ಮಾಹಿತಿ:
(Brief Info abut Blood)

━━━━━━━━━━━━━━━━━━━━━━━━━━━━━━━━━━━━━━━━━━━━━

♦.ಸಾಮಾನ್ಯ ವಿಜ್ಞಾನ.
(General Science).


☆.ರಕ್ತ (Blood)

✧.ಇದು ಪ್ಲಾಸ್ಮ.ಕೆಂಪು ಮತ್ತು ಬಿಳಿ ರಕ್ತ ಕಣಗಳನ್ನು ಒಳಗೊಂಡಿದೆ.

✧.ಪ್ಲಾಸ್ಮ ಇದು ದೇಹದಲ್ಲಿರುವ ದ್ರವರೂಪದ ವಸ್ತು.

✧.ರಕ್ತ,ದುಗ್ದರಸ,ಬಿಳಿ ಮತ್ತು ಕೆಂಪು ರಕ್ತಕಣ.ಹಾಗೂ ಕಿರುತಟ್ಟೆ ಗಳು ಅಸ್ಥಿಮಜ್ಜೆಯಲ್ಲಿ ಉಂಟಾಗುತ್ತವೆ .


A) ಕೆಂಪು ರಕ್ತಕಣಗಳು.(Red Blood Cells)

✧.ಇದರ ಪ್ರಮುಖ ಕಾರ್ಯ ದೇಹದ ಪ್ರತಿಯೊಂದು ಕೋಶಕ್ಕೂ ಆಕ್ಸಿಜನ್ ಸರಬರಾಜು ಮಾಡುವುದು.

✧.ಅಲ್ಲಿರುವ ಇಂಗಾಲದ ಡೈ ಆಕ್ಸೈಡ ಅನ್ನು ಶ್ವಾಸಕೋಸ ಗಳಿಗೆ ಸಾಗಾಣಿಕೆ.

✧.ಇದರ ಆಯಸ್ಸು 120 ದಿನ.

✧.ಗಂಡಸರಲ್ಲಿ ಇರುವ ಅರ್ ಸಿ ಬಿ ಗಳ ಸಂಖ್ಯೆ 5.4 ಮಿಲಿಯನ್ ಎಮ್ ಎಮ್ 3 ಮತ್ತು ಸ್ತ್ರೀಯರಲ್ಲಿ 4.8 ಮಿಲಿಯನ್ ಎಮ್ ಎಮ್3


B) ಬಿಳಿರಕ್ತ ಕಣಗಳು.(Wight Blood Cells)

✧.ಪ್ರಮುಖ ಕಾರ್ಯ ರೋಗಾಣುಗಳನ್ನು ನಾಸಪದಿಸುತ್ತದೆ ಮತ್ತು ದೇಹವನ್ನು ಸೊಂಕು ರೋಗಗಳಿಂದ ರಕ್ಷಿಸುತ್ತದೆ.

✧.ಇದರ್ ಆಯಸ್ಸು 12ಗಂಟೆಯಿಂದ 300 ದಿನಗಳು.

✧.ಇವುಗಳ ಸಂಖ್ಯೆ 5000 -9000/ಎಮ್ ಎಮ್ 3

☀ಭಾರತ ರತ್ನ ಪುರಸ್ಕಾರವನ್ನು ಪಡೆದ ಗಣ್ಯರು: (The Great Personalities Awarded Bharata Ratna)

☀ಭಾರತ ರತ್ನ ಪುರಸ್ಕಾರವನ್ನು ಪಡೆದ ಗಣ್ಯರು:
(The Great Personalities Awarded Bharata Ratna)

━━━━━━━━━━━━━━━━━━━━━━━━━━━━━━━━━━━━━━━━━━━━━


●. ಭಾರತ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ, ಸಾಧಕರ ಸೇವೆಯನ್ನು ಗುರುತಿಸಿ ನೀಡುವ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳೇ ಅತ್ಯಂತ ಗೌರವಯುತವಾದವುಗಳು. ಇವುಗಳನ್ನು ಅವರುಗಳ ಸೇವೆಯ ಮಹತ್ವ ಮತ್ತು ಸಾಧನೆಯ ಶ್ರೇಣಿಯ ಆಧಾರದ ಮೇಲೇ ಶ್ರೇಣಿಕೃತವಾಗಿ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳನ್ನು ನೀಡಲಾಗುತ್ತದೆ. ಆದರೆ ಅವುಗಳೆಲ್ಲಕ್ಕೂ ಕಳಶವಿಟ್ಟಂತೆ ಪ್ರಶ್ನಾತೀತ, ಬೆಲೆಕಟ್ಟಲಾಗದ ಸೇವೆಗೆ ಅಂತಿಮವಾಗಿ ನೀಡುವ ಭಾರತದ ಸರ್ವಶ್ರೇಷ್ಠ ಗೌರವಸಮರ್ಪಣೆಯೇ ಈ ಭಾರತ ರತ್ನ.

●. ಭಾರತದ ಗಣತಂತ್ರದ 65 ವರ್ಷಗಳಲ್ಲಿ ಭಾರತರತ್ನವನ್ನು 45 ಭಾರತೀಯರಿಗೆ ಮಾತ್ರ ನೀಡಲಾಗಿದೆ.

●. ಭಾರತರತ್ನ ಪ್ರಶಸ್ತಿಯನ್ನು 1954 ರ ಜನವರಿ 2 ರಂದು ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ.ಬಾಬು ರಾಜೇಂದ್ರ ಪ್ರಸಾದ್‍ರವರು ಅಧಿಕೃತವಾಗಿ ಸ್ಥಾಪಿಸಿದರು.

●. ವಾರ್ಷಿಕವಾಗಿ ಗರಿಷ್ಠ ಮೂರು ಸಾಧಕರಿಗೆ ಮಾತ್ರ ಪ್ರಶಸ್ತಿಯನ್ನು ನೀಡಬಹುದಾಗಿದೆ, ಆದರೆ ಪ್ರತಿವರ್ಷ ಪ್ರಶಸ್ತಿಯನ್ನು ನೀಡಲೇಬೇಕೆಂಬ ನಿಯಮವಿಲ್ಲ.

●. 1955 ರ ಮುನ್ನ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲು ಅವಕಾಶವಿರಲಿಲ್ಲ, ಆದರೆ ನಂತರ ನಿಯಮಾವಳಿಗಳಿಗೆ ತಿದ್ದುಪಡಿಯನ್ನು ತರುವ ಮೂಲಕ 2014ರಲ್ಲಿ ಪ್ರಶಸ್ತಿಗೆ ಭಾಜನರಾದ ಪಂ. ಮದನ ಮೋಹನ ಮಾಳವೀಯರನ್ನು ಒಳಗೊಂಡಂತೆ 10 ಸಾಧಕರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲಾಗಿದೆ.

●. ಮಹಾತ್ಮಗಾಂಧೀಜಿಯವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿಲ್ಲ, ಈ ಬಗ್ಗೆ ಹಲವು ವಾದಗಳಿದ್ದು, ಭಾರತದಲ್ಲಿ ಮತ್ತೊಬ್ಬರಿಗೆ ನೀಡಲಾಗದ ಭಾರತದ ಪಿತಾಮಹ, ಮಹಾತ್ಮ ಗೌರವ ಸಂಪಾದಿಸಿದವರಿಗೆ ಭಾರತರತ್ನ ತುಂಬಾ ಕನಿಷ್ಠವಾಗುತ್ತದೆ ಎನ್ನಲಾಗಿದೆ.


●.1) ಸಿ.ರಾಜಗೋಪಾಲಚಾರಿ (ರಾಜಾಜಿ) (1878-1972)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1954
✧.ಸ್ಥಳ/ರಾಜ್ಯ:•—————• ತಮಿಳುನಾಡು
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ರಾಜಕೀಯ ಮುತ್ಸದ್ಧಿ, ಭಾರತದ ಎರಡನೇ ಗೌರ್ನರ್ ಜನರಲ್ ಹಾಗೂ ಸ್ವತಂತ್ರ ಹೋರಾಟಗಾರರು.


●.2) ಡಾ. ಸರ್ವಪಲ್ಲಿ ರಾಧಾಕೃಷ್ಣನ್ (1888-1975)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————•1954
✧.ಸ್ಥಳ/ರಾಜ್ಯ:•—————• ತಮಿಳುನಾಡು
✧.ಯಾವ ಸೇವೆಗೆ ಪ್ರಶಸ್ತಿ:•—————• ಶಿಕ್ಷಣ ತಜ್ಞ, ಖ್ಯಾತ ತತ್ವಜ್ಞಾನಿ ಹಾಗೂ ರಾಜಕೀಯ ಮುತ್ಸದ್ಧಿ, ಭಾರತದ ಎರಡನೇ ರಾಷ್ಟ್ರಪತಿ ಹಾಗೂ ಮೊದಲನೇ ಉಪ ರಾಷ್ಟ್ರಪತಿ.


●.3) ಸಿ.ವಿ ರಾಮನ್ (1888-1970)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————•1954
✧.ಸ್ಥಳ/ರಾಜ್ಯ:•—————• ಕರ್ನಾಟಕ
✧.ಯಾವ ಸೇವೆಗೆ ಪ್ರಶಸ್ತಿ:•—————• ಪ್ರಖ್ಯಾತ ಭೌತ ವಿಜ್ಞಾನಿ (ಬೆಳಕಿನ ಪರಿಣಾಮ)ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ.


●.4) ಭಗವಾನ್ ದಾಸ್ (1869-1958)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————•1955
✧.ಸ್ಥಳ/ರಾಜ್ಯ:•—————• ಉತ್ತರ ಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ಸಾಹಿತಿ ಹಾಗೂ ಸ್ವತಂತ್ರ ಹೋರಾಟಗಾರರು.


●.5) ಡಾ. ಸರ್ ಎಂ. ವಿಶ್ವೇಶ್ವರಯ್ಯ (1861-1962)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1955
✧.ಸ್ಥಳ/ರಾಜ್ಯ:•—————• ಕರ್ನಾಟಕ
✧.ಯಾವ ಸೇವೆಗೆ ಪ್ರಶಸ್ತಿ:•—————• ಪ್ರಖ್ಯಾತ ಇಂಜಿನಿಯರ್, ಜಲಾಶಯಗಳ ಪರಿಣಿತರು ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದ್ದರು.


●.6) ಜವಾಹರಲಾಲ್ ನೆಹರು (1889-1964)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1955
✧.ಸ್ಥಳ/ರಾಜ್ಯ:•—————• ಉತ್ತರ ಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ರಾಜಕೀಯ ಮುತ್ಸದ್ಧಿ, ಸ್ವತಂತ್ರ ಹೋರಾಟಗಾರ ಮತ್ತು ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ.


●.7) ಗೋವಿಂದ ವಲ್ಲಭ್ ಪಂತ್ (1887-1961)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1957
✧.ಸ್ಥಳ/ರಾಜ್ಯ:•—————• ಉತ್ತರ ಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ಸ್ವತಂತ್ರ ಹೋರಾಟಗಾರರು (ಉತ್ತರ ಖಂಡ) ಹಾಗೂ ರಾಜಕೀಯ ಕ್ಷೇತ್ರಕ್ಕೆ ಕೊಡುಗೆಗಾಗಿ. (ಕೇಂದ್ರ ಗೃಹ ಸಚಿವರು)


●.8) ಧೋಂಡೋ ಕೇಶವ ಕರ್ವೆ (1858-1962)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1958
✧.ಸ್ಥಳ/ರಾಜ್ಯ:•—————• ಮಹಾರಾಷ್ಟ್ರ
✧.ಯಾವ ಸೇವೆಗೆ ಪ್ರಶಸ್ತಿ:•—————• ಶಿಕ್ಷಣ ಕ್ಷೇತ್ರಕ್ಕೆ ನಿಡಿದ ಕಾಣಿಕೆಗಾಗಿ ಮತ್ತು ಸಮಾಜ ಸುಧಾರಣೆ.


●.9) ಬಿದನ್ ಚಂದ್ರ ರಾಯ್ (1882-1962)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1961
✧.ಸ್ಥಳ/ರಾಜ್ಯ:•—————• ಪಶ್ಚಿಮ ಬಂಗಾಳ
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ರಾಜಕೀಯ ಪಟು, ಮಾಜಿ (ಬಿ.ಸಿ ರಾಯ್)
ಮುಖ್ಯಮಂತ್ರಿ ಮತ್ತು ವೈದ್ಯಕೀಯ ಸೇವೆ.


●.10) ಪುರುಷೋತ್ತಮದಾಸ್ ಟಂಡನ್ (1882-1962)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1961
✧.ಸ್ಥಳ/ರಾಜ್ಯ:•—————• ಉತ್ತರ ಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ಶಿಕ್ಷಣ ತಜ್ಞರು ಮತ್ತು ಸ್ವಾತಂತ್ಯ್ರ ಹೋರಾಟಗಾರರು.


●.11) ಡಾ.ಬಾಬು ರಾಜೇಂದ್ರ ಪ್ರಸಾದ್ (1884-1963)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1962
✧.ಸ್ಥಳ/ರಾಜ್ಯ:•—————• ಬಿಹಾರ
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ರಾಜಕೀಯ ಮುತ್ಸದ್ಧಿ, ಸಂವಿಧಾನ ರಚನಾ ಸಭೆಯ ಅಧ್ಯಕ್ಷರು, ಭಾರತದ ಪ್ರಥಮ ರಾಷ್ಟ್ರಪತಿಗಳು ಮತ್ತು ಸ್ವತಂತ್ರ ಹೋರಾಟಗಾರರು,


●.12) ಜಾಕಿರ್ ಹುಸೇನ್ (1897-1969)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1963
✧.ಸ್ಥಳ/ರಾಜ್ಯ:•—————• ಆಂಧ್ರಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ಭಾರತದ ಮೂರನೇ ರಾಷ್ಟ್ರಪತಿಗಳು ಮತ್ತು ವಿದ್ವಾಂಸರು.


●.13) ಪಾಂಡುರಂಗ ವಾಮನ್ ಕಾಣೆ (1880-1972)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1963
✧.ಸ್ಥಳ/ರಾಜ್ಯ:•—————• ಮಹಾರಾಷ್ಟ್ರ
✧.ಯಾವ ಸೇವೆಗೆ ಪ್ರಶಸ್ತಿ:•—————• ಸಂಸ್ಕೃತ ವಿದ್ವಾಂಸರು, ಇತಿಹಾಸ ತಜ್ಞರು ಮತ್ತು ಖ್ಯಾತ ಸಂಶೋಧಕರು


●.14) ಲಾಲ್ ಬಹುದ್ದೂರ್ ಶಾಸ್ತ್ರಿ (1904-1966)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1966
✧.ಸ್ಥಳ/ರಾಜ್ಯ:•—————• ಉತ್ತರ ಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ಸರಳ ಸಜ್ಜನಿಕೆಯ ರಾಜಕೀಯ (ಮರಣೋತ್ತರ) ಮುತ್ಸದ್ಧಿ, ಸ್ವತಂತ್ರ ಹೋರಾಟಗಾರರು ಮತ್ತು ಎರಡನೇ ಪ್ರಧಾನಮಂತ್ರಿಗಳು.


●.15) ಶ್ರೀಮತಿ ಇಂದಿರಾ ಗಾಂಧಿ (1917-1984)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1971
✧.ಸ್ಥಳ/ರಾಜ್ಯ:•—————• ಉತ್ತರ ಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ರಾಜಕೀಯ ನಾಯಕಿ ಮತ್ತು ದಕ್ಷ ಆಡಳಿತಗಾರ್ತಿ ಮತ್ತು ಮಾಜಿ ಪ್ರಧಾನಮಂತ್ರಿಗಳು.


●.16) ವಿ.ವಿ ಗಿರಿ (1894-1980)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1975
✧.ಸ್ಥಳ/ರಾಜ್ಯ:•—————• ಒರಿಸ್ಸಾ
✧.ಯಾವ ಸೇವೆಗೆ ಪ್ರಶಸ್ತಿ:•—————• ರಾಜಕೀಯ ನಾಯಕತ್ವ, ಕಾರ್ಮಿಕ ಚಳುವಳಿಯ ನೇತಾರ ಮತ್ತು ಭಾರತದ ಮಾಜಿ ರಾಷ್ಟ್ರಪತಿಗಳು.


●.17) ಕೆ. ಕಾಮರಾಜ್ (1903-1975)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1976
✧.ಸ್ಥಳ/ರಾಜ್ಯ:•—————• ತಮಿಳುನಾಡು
✧.ಯಾವ ಸೇವೆಗೆ ಪ್ರಶಸ್ತಿ:•—————• ರಾಜಕೀಯ ಮುತ್ಸದ್ಧಿ ಮತ್ತು (ಮರಣೋತ್ತರ)ರಾಜಕೀಯ ತಂತ್ರಗಾರರು, ಸ್ವತಂತ್ರ ಹೋರಾಟಗಾರರು ಮತ್ತು ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ.


●.18) ಮದರ್ ಥೆರೆಸ್ಸಾ (1910-1997)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1980
✧.ಸ್ಥಳ/ರಾಜ್ಯ:•—————• ಪಶ್ಚಿಮ ಬಂಗಾಳ
✧.ಯಾವ ಸೇವೆಗೆ ಪ್ರಶಸ್ತಿ:•—————• ಸಮಾಜಸೇವೆ ಮತ್ತು ಜನಕಲ್ಯಾಣಕ್ಕಾಗಿ ಅವಿರತವಾಗಿ ದುಡಿದಿರುವುದು ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸೃತರು./ವಿದೇಶಿ /ಯುಗೋಸ್ಲಾ ವಿಯನ್.


●.19) ವಿನೋಭಾ ಭಾವೆ (1895-1982)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1983
✧.ಸ್ಥಳ/ರಾಜ್ಯ:•—————• ಮಹಾರಾಷ್ಟ್ರ
✧.ಯಾವ ಸೇವೆಗೆ ಪ್ರಶಸ್ತಿ:•—————• ಸಮಾಜ ಸುಧಾರಕರು, ಸಾಮಾಜಿಕ (ಮರಣೋತ್ತರ) ಚಳುವಳಿಯ ನಾಯಕ ಮತ್ತು ಸ್ವಾತಂತ್ರ ಹೋರಾಟಗಾರ.


●.20) ಖಾನ್ ಅಬ್ದುಲ್ ಗಫಾರ್ ಖಾನ್ (1890-1988)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1987
✧.ಯಾವ ಸೇವೆಗೆ ಪ್ರಶಸ್ತಿ:•—————• ವಿದೇಶಿ ಸ್ವತಂತ್ರ ಹೋರಾಟಗಾರರು, ಭಾರತ ಪಾಕಿಸ್ತಾನದ ಸಾಮರಸ್ಯಕ್ಕೆ ಸಲ್ಲಿಸಿದ ಅನುಪಮ ಸೇವೆ ಮತ್ತು ಗಡಿನಾಡ ಗಾಂಧಿ ಎಂದೇ ಪ್ರಖ್ಯಾತವಾಗಿದ್ದ ಗಾಂಧೀವಾದಿ.
✧.ಸ್ಥಳ/ರಾಜ್ಯ:•—————• ಮೂಲದವರು/ ಪಾಕಿಸ್ತಾನ


●.21) ಎಂ ಜಿ ರಾಮಚಂದ್ರನ್ (1917-1987)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1988
✧.ಸ್ಥಳ/ರಾಜ್ಯ:•—————• ತಮಿಳುನಾಡು
✧.ಯಾವ ಸೇವೆಗೆ ಪ್ರಶಸ್ತಿ:•—————• ರಾಜಕೀಯ ನಾಯಕ, (ಮರಣೋತ್ತರ) ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಹೆಚ್ಚಿನದಾಗಿ ಪ್ರಖ್ಯಾತ ಸಿನಿಮಾ ತಾರೆ.


●.22) ಡಾ.ಬಿ.ಆರ್ ಅಂಬೇಡ್ಕರ್ (1891-1956)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1990
✧.ಸ್ಥಳ/ರಾಜ್ಯ:•—————• ಮಹಾರಾಷ್ಟ್ರ
✧.ಯಾವ ಸೇವೆಗೆ ಪ್ರಶಸ್ತಿ:•—————• ದುರ್ಬಲರ ಸಬಲೀಕರಣಕ್ಕಾಗಿ (ಮರಣೋತ್ತರ) ಸಲ್ಲಿಸಿದ ಸೇವೆ, ಸಮಾಜ ಸುಧಾರಣೆ, ಮತ್ತು ಸಂವಿಧಾನ ಶಿಲ್ಪಿ ಹಾಗೂ ರಾಜಕೀಯ ನಾಯಕ.


●.23) ನೆಲ್ಸನ್ ಮಂಡೇಲಾ (1918-2013)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1990
✧.ಸ್ಥಳ/ರಾಜ್ಯ:•—————• ದಕ್ಷಿಣ ಆಫ್ರಿಕ
✧.ಯಾವ ಸೇವೆಗೆ ಪ್ರಶಸ್ತಿ:•—————• ದಕ್ಷಿಣ ಆಫ್ರಿಕಾದ ಜನನಾಯಕ, ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ನೇತಾರ ಹೆಚ್ಚಿನದಾಗಿ ಗಾಂಧೀಜಿಯ ಅನುಯಾಯಿ.


●.24) ರಾಜೀವ್ ಗಾಂಧಿ(1944-1991)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1991
✧.ಸ್ಥಳ/ರಾಜ್ಯ:•—————• ನವ ದೆಹಲಿ
✧.ಯಾವ ಸೇವೆಗೆ ಪ್ರಶಸ್ತಿ:•—————• ರಾಜಕೀಯ (ಮರಣೋತ್ತರ) ಮುತ್ಸದ್ಧಿ, ಭಾರತದ ಮಾಜಿ ಪ್ರಧಾನಮಂತ್ರಿ.


●.25) ಸರ್ದಾರ್ ವಲ್ಲಭಾಯ್ ಪಟೇಲ್ (1875-1950)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1991
✧.ಸ್ಥಳ/ರಾಜ್ಯ:•—————• ಗುಜರಾತ್
✧.ಯಾವ ಸೇವೆಗೆ ಪ್ರಶಸ್ತಿ:•—————• ದಕ್ಷ ರಾಜಕೀಯ ನಾಯಕ, ಭಾರತದ ಏಕೀಕರಣ ಮಾಡಿದ ಉಕ್ಕಿನ ಮನುಷ್ಯ ಮತ್ತು ಪ್ರಥಮ ಉಪ ಪ್ರಧಾನಮಂತ್ರಿ.


●.26) ಮೊರಾರ್ಜಿ ದೇಸಾಯಿ (1896-1995)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1991
✧.ಸ್ಥಳ/ರಾಜ್ಯ:•—————• ಗುಜರಾತ್
✧.ಯಾವ ಸೇವೆಗೆ ಪ್ರಶಸ್ತಿ:•—————• ರಾಜಕೀಯ ಧುರೀಣರು, ಭಾರತದ ಪ್ರಥಮ ಕಾಂಗ್ರಸ್ಸೇತರ ಪ್ರಧಾನ ಮಂತ್ರಿ ಹಾಗೂ ಸ್ವತಂತ್ರ ಹೋರಾಟಗಾರರು,(ಮರಣೋತ್ತರ)


●.27) ಅಬ್ದುಲ್ ಕಲಾಂ ಆಜಾದ್ (1888-1958)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1992
✧.ಸ್ಥಳ/ರಾಜ್ಯ:•—————• ಪಶ್ಚಿಮ ಬಂಗಾಳ
✧.ಯಾವ ಸೇವೆಗೆ ಪ್ರಶಸ್ತಿ:•—————• ಸ್ವತಂತ್ರ ಹೋರಾಟಗಾರರು, ಭಾರತದ ಪ್ರಥಮ ಶಿಕ್ಷಣ ಸಚಿವರು ಹಾಗೂ ಭಾರತದ ಏಕತೆಗಾಗಿ ಶ್ರಮಿಸಿದ ನಾಯಕ.(ಮರಣೋತ್ತರ)


●.28) ಜೆ.ಆರ್.ಡಿ ಟಾಟಾ (1904-1993)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1992
✧.ಸ್ಥಳ/ರಾಜ್ಯ:•—————• ಮಹಾರಾಷ್ಟ್ರ
✧.ಯಾವ ಸೇವೆಗೆ ಪ್ರಶಸ್ತಿ:•—————• ಪ್ರಖ್ಯಾತ ಉದ್ಯಮಿ


●.29) ಸತ್ಯಜಿತ್ ರಾಯ್ (1922-1992)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1992
✧.ಸ್ಥಳ/ರಾಜ್ಯ:•—————• ಪಶ್ಚಿಮ ಬಂಗಾಳ
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ಚಲನಚಿತ್ರ ನಿರ್ದೇಶಕರು.


●.30) ಎ.ಪಿ.ಜೆ ಅಬ್ದುಲ್ ಕಲಾಂ (1931)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1997
✧.ಸ್ಥಳ/ರಾಜ್ಯ:•—————• ತಮಿಳುನಾಡು
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ರಾಕೆಟ್ ತಂತ್ರಜ್ಞಾನಿ ಮತ್ತು ಭಾರತದ ಮಾಜಿ ರಾಷ್ಟ್ರಪತಿಗಳು.


●.31) ಗುಲ್ಜರಿಲಾಲ್ ನಂದಾ (1898-1998)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1997
✧.ಸ್ಥಳ/ರಾಜ್ಯ:•—————• ಪಂಜಾಬ್
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ರಾಜಕೀಯ ಮುತ್ಸದ್ಧಿ, ಮಾಜಿ ಪ್ರಧಾನಮಂತ್ರಿ(ಪ್ರಭಾರಿ) ಮತ್ತು ಸ್ವತಂತ್ರ ಹೋರಾಟಗಾರರು.


●.32) ಅರುಣಾ ಅಸಫ್ ಅಲಿ (1908-1996)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1997
✧.ಸ್ಥಳ/ರಾಜ್ಯ:•—————• ಪಶ್ಚಿಮ ಬಂಗಾಳ
✧.ಯಾವ ಸೇವೆಗೆ ಪ್ರಶಸ್ತಿ:•—————• ಸ್ವತಂತ್ರ ಹೋರಾಟಗಾರ್ತಿ.(ಮರಣೋತ್ತರ)


●.33) ಎಂ.ಎಸ್ ಸುಬ್ಬಲಕ್ಷ್ಮೀ (1916-2004)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1998
✧.ಸ್ಥಳ/ರಾಜ್ಯ:•—————• ತಮಿಳುನಾಡು
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ಗಾಯಕಿ


●.34) ಸಿ.ಸುಬ್ರಹ್ಮಣ್ಯಂ (1910-2000)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1998
✧.ಸ್ಥಳ/ರಾಜ್ಯ:•—————• ತಮಿಳುನಾಡು
✧.ಯಾವ ಸೇವೆಗೆ ಪ್ರಶಸ್ತಿ:•—————• ಸ್ವತಂತ್ರ ಹೋರಾಟಗಾರರು, ಕೃಷಿ ಸಚಿವರು ಮತ್ತು ಹಸಿರು ಕ್ರಾಂತಿಯ ಹರಿಕಾರ.


●.35) ಜಯಪ್ರಕಾಶ್ ನಾರಾಯಣ್ (1902-1979)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1998
✧.ಸ್ಥಳ/ರಾಜ್ಯ:•—————• ಬಿಹಾರ
✧.ಯಾವ ಸೇವೆಗೆ ಪ್ರಶಸ್ತಿ:•—————• ಸ್ವತಂತ್ರ ಹೋರಾಟಗಾರರು, ಸಮಾಜ ಸುಧಾರಕರು ಮತ್ತು ರಾಜಕೀಯ ಧೃವೀಕರಣದ ನೇತಾರರು.(ಮರಣೋತ್ತರ)


●.36) ಪಂ.ರವಿಶಂಕರ್ (1920-2012)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1999
✧.ಸ್ಥಳ/ರಾಜ್ಯ:•—————• ಉತ್ತರ ಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ಸಿತಾರ್ ವಾದಕ.


●.37) ಅಮತ್ರ್ಯ ಸೇನ್ (1933)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1999
✧.ಸ್ಥಳ/ರಾಜ್ಯ:•—————• ಪಶ್ವಿಮ ಬಂಗಾಳ
✧.ಯಾವ ಸೇವೆಗೆ ಪ್ರಶಸ್ತಿ:•—————• ಅರ್ಥಶಾಸ್ತ್ರಜ್ಞರು ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತರು.


●.38) ಗೋಪಿನಾಥ ಬೊರ್ಡೊಲೋಯ್.(1890-1950)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 1999
✧.ಸ್ಥಳ/ರಾಜ್ಯ:•—————• ಅಸ್ಸಾಂ
✧.ಯಾವ ಸೇವೆಗೆ ಪ್ರಶಸ್ತಿ:•—————• ಸ್ವತಂತ್ರ ಹೋರಾಟಗಾರರು, ಸಮಾಜ ಸುಧಾರಕರು ಮತ್ತು ಮಾಜಿ ಮುಖ್ಯಮಂತ್ರಿಗಳು.
(ಮರಣೋತ್ತರ)


●.39) ಲತಾ ಮಂಗೇಶ್ಕರ್ 1929
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 2001
✧.ಸ್ಥಳ/ರಾಜ್ಯ:•—————• ಮಹಾರಾಷ್ಟ್ರ
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ಗಾಯಕಿ.


●.40) ಬಿಸ್ಮಿಲ್ಲಾ ಖಾನ್ (1916-2006)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 2001
✧.ಸ್ಥಳ/ರಾಜ್ಯ:•—————• ಬಿಹಾರ
✧.ಯಾವ ಸೇವೆಗೆ ಪ್ರಶಸ್ತಿ:•—————• ಶೆಹನಾಯ್ ವಾದಕರು ಮತ್ತು ಶಾಸ್ತ್ರೀಯ ಸಂಗೀತಗಾರರು.


●.41) ಭೀಮಸೇನ್ ಜೋಶಿ (1922-2011)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 2008
✧.ಸ್ಥಳ/ರಾಜ್ಯ:•—————• ಕರ್ನಾಟಕ
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ಹಿಂದೂಸ್ತಾನಿ ಗಾಯಕರು.


●.42) ಸಚಿನ್ ತೆಂಡೂಲ್ಕರ್ (1973)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 2013
✧.ಸ್ಥಳ/ರಾಜ್ಯ:•—————• ಮಹಾರಾಷ್ಟ್ರ
✧.ಯಾವ ಸೇವೆಗೆ ಪ್ರಶಸ್ತಿ:•—————• ಖ್ಯಾತ ಕ್ರಿಕೆಟಿಗ


●.43) ಸಿ.ಎನ್.ಆರ್ ರಾವ್ (1934)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 2013
✧.ಸ್ಥಳ/ರಾಜ್ಯ:•—————• ಕರ್ನಾಟಕ
✧.ಯಾವ ಸೇವೆಗೆ ಪ್ರಶಸ್ತಿ:•—————• ಪ್ರಖ್ಯಾತ ಭೌತಶಾಸ್ತ್ರ ವಿಜ್ಞಾನಿ.


●.44) ಅಟಲ್ ಬಿಹಾರಿ ವಾಜಪೇಯಿ (1924)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 2014
✧.ಸ್ಥಳ/ರಾಜ್ಯ:•—————• ಉತ್ತರ ಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ರಾಜಕೀಯ ಮುತ್ಸದ್ಧಿ ಮತ್ತು ಮಾಜಿ ಪ್ರಧಾನ ಮಂತ್ರಿಗಳು.


●.45) ಪಂ.ಮದನಮೋಹನ ಮಾಳವೀಯ (1861-1946)
✧.ಪ್ರಶಸ್ತಿ ನೀಡಿದ ಮೂಲ ವರ್ಷ:•—————• 2014
✧.ಸ್ಥಳ/ರಾಜ್ಯ:•—————• ಉತ್ತರ ಪ್ರದೇಶ
✧.ಯಾವ ಸೇವೆಗೆ ಪ್ರಶಸ್ತಿ:•—————• ಸ್ವತಂತ್ರ ಹೋರಾಟಗಾರರು ಮತ್ತು ಶಿಕ್ಷಣ ತಜ್ಞ ಹಾಗೂ ಸಮಾಜ ಸುಧಾರಕ.

(ಕೃಪೆ: ಜಾನಪದ ಮಾಸಪತ್ರಿಕೆ)

Wednesday, 18 March 2015

☀ಭಾರತ ರತ್ನ ಪ್ರಶಸ್ತಿಯನ್ನು ಕುರಿತು.. (Know About the Bharat Ratna Award)

☀ಭಾರತ ರತ್ನ ಪ್ರಶಸ್ತಿಯನ್ನು ಕುರಿತು..
(Know About the Bharat Ratna Award)


━━━━━━━━━━━━━━━━━━━━━━━━━━━━━━━━━━━━━━━━━━━━━

●.ಭಾರತ ರತ್ನವನ್ನು ಇಂಗ್ಲೀಷಿನಲ್ಲಿ “ಜೆಮ್ ಆಫ್ ಇಂಡಿಯಾ” ಅಥವಾ “ಜ್ಯೂಯೆಲ್ ಆಫ್ ಇಂಡಿಯಾ” ಎಂದೂ ಕರೆಯಲಾಗುತ್ತದೆ. ಆದರೆ ಇದು ಬಿರುದಲ್ಲ ಮತ್ತು ಬಿರುದಿನಂತೆ ಬಳಸಿಕೊಳ್ಳುವಂತಿಲ್ಲ. ಆದರೆ ಈ ಪ್ರಶಸ್ತಿ ಪುರಸ್ಕೃತರಿಗೆ ರಾಷ್ಟ್ರದಲ್ಲಿ ಅಗ್ರಸ್ಥಾನ ದೊರೆಯುವುದರಿಂದ ಅವರು ಆದರ್ಶ ವ್ಯಕ್ತಿಗಳೆಂದು, ಸಮಾಜದಿಂದ ಮಾನ್ಯತೆಯನ್ನು ಗಳಿಸಿಕೊಳ್ಳುತ್ತಾರೆ.

●.ಭಾರತ ರತ್ನ ಪ್ರಶಸ್ತಿಗೆ ಅರ್ಹರನ್ನು ಆಯ್ಕೆಮಾಡುವ ಜವಾಬ್ದಾರಿಯನ್ನು ಕೇಂದ್ರ ಗೃಹಇಲಾಖೆಯು ವಹಿಸಿಕೊಂಡಿದೆ. ಕೇಂದ್ರದ ಇಲಾಖೆಗಳು ಮತ್ತು ರಾಜ್ಯ ಸರ್ಕಾರಗಳು ನೀಡುವ ಶಿಪಾರಸ್ಸುಗಳನ್ನು ಕ್ರೋಢಿಕರಿಸಿ ಆಯ್ಕೆಮಾಡಲು ಉನ್ನತ ಮಟ್ಟದ ಸಮಿತಿಯನ್ನು ಉಪರಾಷ್ಟ್ರಪತಿಯವರನ್ನೊಳಗೊಂಡಂತೆ ನೇಮಿಸುತ್ತಾರೆ.

●.ಸಮಿತಿಯಲ್ಲಿ ಸಂಪುಟ ಕಾರ್ಯದರ್ಶಿ, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಪ್ರಧಾನಿಯವರ ಕಾರ್ಯದರ್ಶಿಯವರಿರುತ್ತಾರೆ. ಸಮಿತಿಯು ಆಯ್ಕೆಮಾಡಿದ ಅರ್ಹರ ಪಟ್ಟಿಯನ್ನು ಪ್ರಧಾನಮಂತ್ರಿ ನೇತೃತ್ವದ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಿ ಪ್ರಕಟಿಸಲಾಗುತ್ತದೆ.


●.ಇತರೆ ವಿಶೇಷಗಳು:

✧.ಭಾರತ ರತ್ನ ಪ್ರಶಸ್ತಿಯು ಭಾರತದಲ್ಲಿ ಸರ್ವಶ್ರೇಷ್ಠ ಪ್ರಶಸ್ತಿಯಾಗಿದ್ದರೂ, ನಗದು/ಹಣವನ್ನು ನೀಡಲಾಗುವುದಿಲ್ಲ.

✧.ಪ್ರಶಸ್ತಿಗೆ ಅರ್ಹರೆಂದು ಗಣತಂತ್ರದ ಸಂದರ್ಭದಲ್ಲಿ ಘೋಷಣೆ ಮಾಡಲಾಗುತ್ತದೆ.

✧.ನಿಗದಿತ ದಿನದಂದು ಭಾರತದ ರಾಷ್ಟ್ರಪತಿಯವರು ಪದಕವನ್ನು ಪ್ರದಾನ ಮಾಡುತ್ತಾರೆ.

 ✧.ಪ್ರಶಸ್ತಿಯು ರಾಷ್ಟ್ರಪತಿಗಳು ಸಹಿಮಾಡಿದ ಪ್ರಶಸ್ತಿ ಪತ್ರ ಮತ್ತು ಪದಕವನ್ನೊಳಗೊಂಡಿರುತ್ತದೆ.

✧.ಕಂಚಿನ ಪದಕವು ಅಶ್ವತ್ಥ ಎಲೆಯ(ಅರಳಿ ಎಲೆ) ಆಕಾರದಲ್ಲಿದ್ದು, 25/16 ಇಂಚು * 17/8 ಇಂಚಿನಷ್ಟಿದ್ದು ಕೆಳಭಾಗ ತೊಟ್ಟಿನಂತಿರುತ್ತದೆ. ಮಧ್ಯದಲ್ಲಿ ಪ್ಲಾಟಿನಂನಲ್ಲಿ ಪ್ರಕಾಶಿಸುವ ಸೂರ್ಯನ(ಮೋಡದಿಂದ ಹೊರಬಂದಂತಿರುವ) ಚಿತ್ರವಿದ್ದು, ಬೆಳ್ಳಿಯ ಅಕ್ಷರಗಳಲ್ಲಿ ಸಂಸ್ಕೃತದಲ್ಲಿ ಭಾರತ ರತ್ನ ಎಂದು ಬರೆದಿರುತ್ತದೆ.

✧.ಪದಕದ ಮತ್ತೊಂದು ಪಾಶ್ವದ ಮಧ್ಯಭಾಗದಲ್ಲಿ ನಾಲ್ಕು ಮುಖವುಳ್ಳ ಸಿಂಹವಾದ ಭಾರತದ ಲಾಂಛನ ಮತ್ತು ಧ್ಯೇಯವಾಕ್ಯವಾದ “ಸತ್ಯಮೇವ ಜಯತೆ” ಎಂದಿರುತ್ತದೆ.

✧.ಪದಕವನ್ನು ಎರಡು ಇಂಚುಗಳಷ್ಟು ಅಗಲವಿರುವ ಹೊಳಪುಗಟ್ಟಿದ ಬಿಳಿಯ ರೇಷ್ಮೆ ರಿಬ್ಬನ್‍ನಲ್ಲಿರುತ್ತದೆ.

✧.ಅದನ್ನು ಪ್ರಶಸ್ತಿಗೆ ಭಾಜನರಾದವರ ಕುತ್ತಿಗೆಗೆ ಖುದ್ದು ರಾಷ್ಟ್ರಪತಿಗಳೇ ಹಾಕುತ್ತಾರೆ.

✧.ಭಾರತ ರತ್ನ ಪುರಸ್ಕಾರವು ನಗದನ್ನು ಒಳಗೊಂಡಿರುವುದಿಲ್ಲ, ಬಂಗಾರದಿಂದಲೂ ಮಾಡಿದ್ದಲ್ಲ ಆದರೆ ಭಾರತರತ್ನಕ್ಕೆ ಹಿಮಾಲಯದಷ್ಟು ಎತ್ತರದ ಸ್ಥಾನಮಾನವಿದೆ.

✧.ಅಲ್ಲದೆ ಭಾರತರತ್ನವನ್ನು ಪಡೆದವರ ಸ್ಥಾನಮಾನವು ಭಾರತದ ಅಧಿಕಾರ ಶ್ರೇಣಿ ವ್ಯವಸ್ಥೆಯಲ್ಲಿ ಏಳನೇ ಸ್ಥಾನಮಾನವನ್ನು ಅಲಂಕರಿಸಿರುತ್ತಾರೆ.

✧. ಈವರೆಗೆ ಭಾರತ ರತ್ನ ಪುರಸ್ಕಾರವನ್ನು ಪಡೆದ ಗಣ್ಯರು:
— ರಾಷ್ಟ್ರಪತಿ(1),
— ಉಪರಾಷ್ಟ್ರಪತಿ(2),
— ಪ್ರಧಾನಮಂತ್ರಿ(3),
— ರಾಜ್ಯಪಾಲರು(4),
— ಮಾಜಿ ರಾಷ್ಟ್ರಪತಿಗಳು(5),
— ಭಾರತದ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿಗಳು, ಮತ್ತು ಲೋಕಸಭಾ ಸಭಾಧ್ಯಕ್ಷರು(6),
— ಕೇಂದ್ರ ಸಚಿವರು, ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು(7)
ಭಾರತರತ್ನ ಸ್ಥಾನಮಾನವನ್ನು ಪಡೆದಿರುತ್ತಾರೆ.


(ಕೃಪೆ: ಜಾನಪದ ಮಾಸ ಪತ್ರಿಕೆ ) 

☀ಕೇಂದ್ರ ಸರಕಾರವು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ, ಕ್ಷೇಮಾಭಿವೃದ್ಧಿಗಾಗಿ ಜಾರಿಯಲ್ಲಿ ತಂದ ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತು ಅವಲೋಕನ:  (An overview on central government skim "Sukanya Samruddhi Yojana ( For the Welfare of a Girl child)")

☀ಕೇಂದ್ರ ಸರಕಾರವು ಹೆಣ್ಣುಮಕ್ಕಳ ಭವಿಷ್ಯಕ್ಕಾಗಿ, ಕ್ಷೇಮಾಭಿವೃದ್ಧಿಗಾಗಿ ಜಾರಿಯಲ್ಲಿ ತಂದ ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತು ಅವಲೋಕನ:
(An overview on central government skim "Sukanya Samruddhi Yojana ( For the Welfare of a Girl child)")

━━━━━━━━━━━━━━━━━━━━━━━━━━━━━━━━━━━━━━━━━━━━━


♦.ಸುಕನ್ಯಾ ಸಮೃದ್ಧಿ ಯೋಜನೆ:
(Sukanya Samruddhi Yojana)


●.ಮೋದಿ ಸರಕಾರದ ಆಶೋತ್ತರಗಳಲ್ಲಿ ಒಂದಾದ "ಬೇಟಿ ಬಚಾವೋ ಬೇಟಿ ಪಡಾವೋ' ಯೋಜನೆಯ ಅಂಗವಾಗಿ ಇದೀಗ ಕೇಂದ್ರ ಸರಕಾರವು ಮೈನರ್‌ ಹೆಣ್ಣುಮಕ್ಕಳಿಗಾಗಿಯೇ ವಿಶೇಷವಾಗಿ ಆಯೋಜಿಸಿದ "ಸುಕನ್ಯಾ ಸಮೃದ್ಧಿ' ಯೋಜನೆಯನ್ನು 2 ಡಿಸೆಂಬರ್‌ 2014ರಂದು ಬಿಡುಗಡೆ ಮಾಡಿದೆ.

●.ಇದರ ವಿದ್ಯುಕ್ತ ಅನಾವರಣ ಜ. 21ರಂದು ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ನಡೆಯಿತು.ಇದೊಂದು ಅಂಚೆ ಇಲಾಖೆ ಮಾದರಿಯ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಆಯ್ದ ಪೋಸ್ಟ್‌ ಆಫೀಸು ಮತ್ತು ಸರಕಾರಿ ಬ್ಯಾಂಕುಗಳಲ್ಲಿ ಇದರ ಖಾತೆಗಳನ್ನು ತೆರೆಯಬಹುದಾಗಿದೆ.

●.ಈ ಖಾತೆಯನ್ನು ಹೆತ್ತವರು ಅಥವಾ ರಕ್ಷಕರು ತೆರೆಯಬಹುದಾಗಿದೆ. ಹೆತ್ತವರು/ರಕ್ಷಕರು ಕೇವಲ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯಬಹುದಾಗಿದೆ. ಆದರೆ ಅವಳಿ/ತ್ರಿವಳಿ ಹೆರಿಗೆಯಾಗಿದ್ದಲ್ಲಿ ಮೂರನೆಯ ಹೆಣ್ಣು ಮಗುವಿಗೂ ಖಾತೆ ತೆರೆಯಬಹುದು. ಒಂದು ಹೆಣ್ಣು ಮಗುವಿನ ಮೇಲೆ ದೇಶದಾದ್ಯಂತ ಒಂದು ಖಾತೆಯನ್ನು ಮಾತ್ರ ತೆರೆಯಬಹುದಾಗಿದೆ.


●.ವಯೋ ಮಿತಿ:
— ಖಾತೆ ತೆರೆಯುವಾಗ ಹೆಣ್ಣು ಮಗುವಿಗೆ 10 ವರ್ಷ ವಯಸ್ಸು ಮೀರಿರಬಾರದು. ಆದರೆ ಸ್ಕೀಮು ಆರಂಭದ (2-12-2014) ಹಿಂದಿನ 1 ವರ್ಷದಲ್ಲಿ 10 ತುಂಬಿದವರಿಗೂ ಒಂದು ವಿಶೇಷ ರಿಯಾಯಿತಿಯಾಗಿ ಈ ಖಾತೆಯನ್ನು ತೆರೆಯುವ ಅನುಮತಿ ನೀಡಲಾಗಿದೆ (ಅಂದರೆ 2 ಡಿಸೆಂಬರ್‌ 2013ರಿಂದ 1 ಡಿಸೆಂಬರ್‌ 2014ರಲ್ಲಿ 10 ತುಂಬಿದವರು).

●.ಖಾತೆ ಚಲಾವಣೆ:
— ಈ ಖಾತೆಯನ್ನು ಹೆತ್ತವರು/ರಕ್ಷಕರು ಅಥವಾ 10 ವರ್ಷ ತುಂಬಿದ ಅನಂತರ ಹೆಣ್ಣು ಮಗು ಸ್ವತಃ ಚಲಾಯಿಸ ಬಹುದಾಗಿದೆ. ಇದಕ್ಕಾಗಿ ಒಂದು ಪಾಸ್‌ ಬುಕ್‌ ನೀಡಲಾಗುತ್ತದೆ.

●.ಖಾತೆಯ ಅವಧಿ:
— ಈ ಖಾತೆಯ ಒಟ್ಟು ಅವಧಿ 21 ವರ್ಷ, ಅಂದರೆ ಖಾತೆ ತೆರೆದ ದಿನಾಂಕದಿಂದ 21 ವರ್ಷಗಳವರೆಗೆ. ಆ ಮೊದಲೇ ಹೆಣ್ಣುಮಗುವಿಗೆ ಮದುವೆಯಾದರೆ ಖಾತೆ ಅಲ್ಲಿಗೇ ಅಂತ್ಯವಾಗುತ್ತದೆ. ಅವಧಿ 21 ವರ್ಷಗಳಾದರೂ ಕಂತು ಕಟ್ಟುವ ಅವಧಿ ಕೇವಲ 14 ವರ್ಷಗಳು ಮಾತ್ರ.

●.ಕಂತು:
— ಕನಿಷ್ಠ ರೂ. 1,000ದೊಂದಿಗೆ ಈ ಖಾತೆಯ ಆರಂಭ ಮಾಡಬಹುದು. ಆ ಬಳಿಕ ವಾರ್ಷಿಕ ಕನಿಷ್ಠ ರೂ. 100 ಅಥವಾ ಗರಿಷ್ಠ ರೂ. 1,50,000ವನ್ನು ಈ ಖಾತೆಗೆ ಕಟ್ಟಬಹುದು. ಕನಿಷ್ಠ ಪಾವತಿಯನ್ನು ಮಾಡದ ವರ್ಷ ರೂ. 50 ದಂಡ ತಗಲುತ್ತದೆ.

●.ಬಡ್ಡಿ ದರ:
— ಅಂಚೆಯ ಸಣ್ಣ ಉಳಿತಾಯದಲ್ಲಿ ಪ್ರತಿ ವರ್ಷವೂ ಬಡ್ಡಿ ದರಗಳನ್ನು ಪೂರ್ವಭಾವಿಯಾಗಿ ಘೋಷಿಸುವ ಕಾನೂನು ಬಂದಿದೆ. ಹಾಗೆಯೇ ಈ ಸ್ಕೀಮಿನ ಬಡ್ಡಿ ದರವೂ ಪ್ರತಿ ವರ್ಷ ಬದಲಾಗುತ್ತದೆ. ಸದ್ಯಕ್ಕೆ ಅನ್ವಯವಾಗುವಂತೆ (ವಿತ್ತೀಯ ವರ್ಷ 2014-15) ಘೋಷಿತವಾದ ಬಡಿª ದರ 9.1%. ಇದು ಪಿಪಿಎಫ್ (8.7%) 10-ವರ್ಷದ ಎನ್‌ಎಸ್‌ಸಿ (8.8%) ಹಾಗೂ ಎಮ್‌ಐಎಸ್‌ (8.4%) ಗಳಿಗಿಂತ ಜಾಸ್ತಿ.
ಸೀನಿಯರ್‌ ಸಿಟಿಜನ್‌ ಸ್ಕೀಮಿನಲ್ಲಿ ಮಾತ್ರ ಅಂಚೆ ಇಲಾಖೆ 9.2% ಬಡ್ಡಿ ದರ ನೀಡುತ್ತದೆ. 9.1% ಬಡ್ಡಿದರವು ಇಲ್ಲಿ ವಾರ್ಷಿಕವಾಗಿ ಚಕ್ರೀಕೃತಗೊಳ್ಳುತ್ತದೆ.
ಬಡ್ಡಿಯನ್ನು ಪಿಪಿಎಫ್ ಖಾತೆಯ ಮಾದರಿಯಲ್ಲಿಯೇ ಲೆಕ್ಕ ಹಾಕಲಾಗುತ್ತದೆ. ಪಕ್ಕದಲ್ಲಿ ನೀಡಲಾದ ಟೇಬಲ್‌ನಲ್ಲಿ ಮಾಸಿಕ ರೂ. 1,000 ಕಂತು ಕಟ್ಟುವಲ್ಲಿ 21 ವರ್ಷಗಳ ಬಡ್ಡಿ ಮತ್ತು ವರ್ಷಾಂತ್ಯದ ಮೊತ್ತಗಳನ್ನು ನೀಡಲಾಗಿದೆ.

●.ಅವಧಿಪೂರ್ವ ಹಿಂಪಡೆತ/ಸಾಲ:
— ಪಿಪಿಎಫ್ ಖಾತೆಯಂತೆಯೇ ಇಲ್ಲೂ ಅವಧಿಪೂರ್ವ ಹಿಂಪಡೆತ ಮಾಡಬಹುದಾಗಿದೆ. ಖಾತೆದಾರಳ ಉಚ್ಚ ಶಿಕ್ಷಣದ ಸಂದರ್ಭದಲ್ಲಿ ಅಥವಾ ಮದುವೆಯ ನಿಮಿತ್ತ ಖಾತೆಯಲ್ಲಿ ಹಿಂದಿನ ವರ್ಷಾಂತ್ಯದಲ್ಲಿದ್ದ ಮೊತ್ತದ 50% ಭಾಗವನ್ನು ಹಿಂಪಡೆಯಬಹುದಾಗಿದೆ.ಆದರೆ ಇದಕ್ಕಾಗಿ ಅವಳಿಗೆ 18 ತುಂಬಿರಬೇಕಾದುದು ಅವಶ್ಯ. ಇದರಲ್ಲಿ ಪಿಪಿಎಫ್ನಂತೆ ಸಾಲ ಸೌಲಭ್ಯ ಇಲ್ಲ.

●.ಕರ ವಿನಾಯಿತಿ:
— ಈ ಯೋಜನೆಗೆ ಸೆಕ್ಷನ್‌ 80 ಸಿ ಅಡಿಯಲ್ಲಿ ಕರವಿನಾಯಿತಿಯನ್ನು ಘೋಷಿಸಲಾಗಿದೆ. ಅಂದರೆ ಪಿಪಿಎಫ್, ವಿಮೆ, 5-ವರ್ಷದಬ್ಯಾಂಕ್‌ ಎಫ್ಡಿ, ಎನ್‌ಎಸ್‌ಸಿ ಇತ್ಯಾದಿ ಯೋಜನೆಗಳ ಒಟ್ಟಾರೆ ಮಿತಿ ರೂ. 1,50,000ದ ಒಳಗೆ ಇದನ್ನೂ ಸೇರಿಸಿಕೊಳ್ಳಲಾಗಿದೆ.ಆದರೆ ಇದರಿಂದ ಬರುವ ಬಡ್ಡಿಯ ಮೇಲೆ ಯಾವುದೇ ಕರ ವಿನಾಯಿತಿ ಇರುವುದಿಲ್ಲ. ಮೈನರ್‌ ಇರುವಷ್ಟು ಕಾಲ ಈ ಬಡ್ಡಿಯನ್ನು ಹೆತ್ತವರ/ರಕ್ಷಕರ ಆದಾಯಕ್ಕೆ ಸೇರಿಸಿ ಕರ ಕಟ್ಟ ಬೇಕು. ಆ ಬಳಿಕ ಅದು ಅವಳ ಪಾಲಿಗೆ ಬರುತ್ತದೆ.


●.ವಿಶ್ಲೇಷಣೆ:
— ಇದು ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸಲ್ಪಟ್ಟ ಒಂದು ವಿಶಿಷ್ಟ ಯೋಜನೆ. ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ನೆರವಾಗುವಂತಹ ಒಂದು ಯೋಜನೆ. ಅವಧಿಯ ದೃಷ್ಟಿಯಿಂದಲೂ ದೀರ್ಘ‌ಕಾಲಕ್ಕೆ ಧನ ಸಂಚಯ ಮಾಡುವಂತಹ ಯೋಜನೆ. ಬಡ್ಡಿ ದರವೂ ಉತ್ತಮವಾಗಿದೆ. ಪಿಪಿಎಫ್ ಖಾತೆಗಿಂತಲೂ ಜಾಸ್ತಿ ಬಡ್ಡಿ ನೀಡುವುದು ಇದರ ವಿಶೇಷತೆ.

—  ವಾರ್ಷಿಕ 9.1% ಬಡ್ಡಿ ಇನ್ನಾವ ಸಾಧಾರಣ ಖಾತೆಗಳಲ್ಲೂ ಲಭ್ಯವಿಲ್ಲ (ಸೀನಿಯರ್‌ ಸಿಟಿಜನ್‌ ಖಾತೆಯಲ್ಲಿ ಮಾತ್ರ 9.2% ದೊರಕುತ್ತದೆ). ಈ ನಿಟ್ಟಿನಲ್ಲಿ ಸರಕಾರ ಉತ್ತಮ ಯೋಜನೆಯನ್ನೇ ಹಾಕಿಕೊಂಡಿದೆ. ಆದರೆ ಕರವಿನಾಯಿತಿಯ ಕ್ಷೇತ್ರದಲ್ಲಿ ಈ ಯೋಜನೆ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ.

— ಕೇವಲ ಸೆಕ್ಷನ್‌ 80ಸಿ ಅಡಿಯಲ್ಲಿ ಮಾತ್ರ ಕರ ವಿನಾಯಿತಿ ಸೌಲಭ್ಯವನ್ನು ನೀಡಲಾಗಿದೆ- ಅಂದರೆ ವಾರ್ಷಿಕವಾಗಿ ಹೂಡುವ ಮೊತ್ತದಲ್ಲಿ ಮಾತ್ರ ರೂ. 1,50,000 ಮಿತಿಯೊಳಗೆಕರವಿನಾಯಿತಿ ದೊರಕುತ್ತದೆ. ಆದರೆ ಇದರ ಮೇಲೆ ಬರುವ ಬಡ್ಡಿಯ ಮೇಲೆ ಕರ ನೀಡಬೇಕಾಗುತ್ತದೆ. ಪಿಪಿಎಫ್ ಮತ್ತು ಇಎಲ್‌ಎಸ್‌ಎಸ್‌ ಸ್ಕೀಮುಗಳನ್ನು ನೋಡಿದರೆ ಅವುಗಳಲ್ಲಿ ಬರುವ ಬಡ್ಡಿಯ ಮೇಲೂ ಕರವಿನಾಯಿತಿ ಇರುತ್ತದೆ.

— ಕರ ಪಾವತಿ ಮಾಡುವವರಿಗೆ ಈ ನಿಟ್ಟಿನಲ್ಲಿ ಈ ಯೋಜನೆ ಪಿಪಿಎಫ್ ಮತ್ತು ಇಎಲ್‌ಎಸ್‌ಎಸ್‌ ಯೋಜನೆಗಳಿಗಿಂತ ಖಂಡಿತವಾಗಿಯೂ ಕಳಪೆಯಾಗಿ ಕಂಡೀತು. ಆದರೆ ಕರ ಅನ್ವಯವಾಗದವರಿಗೆ ಈ ಸ್ಕೀಮು ಅವುಗಳಿಗಿಂತ ಉತ್ತಮವಾದೀತು.ಈ ಬಜೆಟ್ಟಿನಲ್ಲಿ ಈ ಸ್ಕೀಮಿನ ಮೇಲೆ ಬಡ್ಡಿ ದರದಲ್ಲೂ ಕರ ವಿನಾಯಿತಿ ನೀಡಬಹುದು ಎಂಬ ಊಹಾಪೋಹ ಚಾಲ್ತಿಯಲ್ಲಿದೆ. ಹಾಗಾಗಲಿ ಎಂದು ಆಶಿಸೋಣ. ಆದರೆ ಅಂತಹ ಗಾಳಿಸುದ್ದಿಗಳು ಸಾಕಾರವಾದ ಬಳಿಕವಷ್ಟೆ ನಾವು ಹೂಡಿಕೆಯ ಬಗ್ಗೆ ಒಂದು ನಿರ್ಧಾರವನ್ನು ತೆಗೆದುಕೊಳ್ಳಬಹುದು.

●.ಪ್ರಚಾರ:
— ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಆರಂಭಗೊಂಡ ಈ ಯೋಜನೆಯ ಬಗ್ಗೆ ಈಗಿನ್ನೂ ಯಾವುದೇ ಪ್ರಚಾರ ಆರಂಭವಾಗಿಲ್ಲ. ಸ್ಕೀಮು ಅರಂಭಗೊಂಡ ಬಳಿಕ ಸಂಪೂರ್ಣ ಅನುಷ್ಠಾನಕ್ಕೆ ಸಮಯ ತಗಲುತ್ತದೆ. ನಿಮ್ಮ ಭಾರತೀಯ ಅಂಚೆ ಇಲಾಖೆಯ ಜಾಲತಾಣದಲ್ಲಿ ಇದರ ಬಗ್ಗೆ ಉಲ್ಲೇಖವೂ ಇಲ್ಲ. ಹಾಗಾಗಿ ನಿಮ್ಮ ಜಿಲ್ಲೆಯ ಅಂಚೆ ಕಚೇರಿ ಅಥವಾ ಸರಕಾರಿ ಬ್ಯಾಂಕುಗಳ ಶಾಖೆಯಲ್ಲಿ ಈ ಬಗ್ಗೆ ಮಾಹಿತಿ ಇನ್ನೂ ಬಂದಿರಲಾರದು. ತಾಳ್ಮೆ ಇರಲಿ.

(ಕೃಪೆ: ಉದಯವಾಣಿ)

☀‘ಸೋಲಾರ್‌ ಇಂಪಲ್ಸ್ 2’ (ಎಸ್‌ಐ2): ಜಗತ್ತಿನ ಮೊತ್ತಮೊದಲ ಸೌರ ವಿಮಾನ:  (Solar Impulse: World's first solar-powered aircraft)

☀‘ಸೋಲಾರ್‌ ಇಂಪಲ್ಸ್ 2’ (ಎಸ್‌ಐ2): ಜಗತ್ತಿನ ಮೊತ್ತಮೊದಲ ಸೌರ ವಿಮಾನ:
(Solar Impulse: World's first solar-powered aircraft)

━━━━━━━━━━━━━━━━━━━━━━━━━━━━━━━━━━━━━━━━━━━━━

♦. ಟಿಪ್ಪಣಿ ಬರಹ.

●.‘ಸೋಲಾರ್‌ ಇಂಪಲ್ಸ್ 2’ (ಎಸ್‌ ಐ 2):
— ಇದು ಒಂದು ಹನಿ ಪೆಟ್ರೋಲನ್ನೂ (ಪಳೆಯು­ಳಿಕೆ ಇಂಧನ) ಬಳಸದೆ ಪ್ರಪಂಚ ಪರ್ಯಟನೆಯ ಗುರಿ ಹೊಂದಿರುವ ಜಗತ್ತಿನ ಮೊತ್ತಮೊದಲ ಸೌರವಿಮಾನ.

●.ಸಂಪೂರ್ಣವಾಗಿ ಸೂರ್ಯ ಶಕ್ತಿಯ ನೆರವಿನಿಂದಲೇ ಯಾನ ನಡೆಸುವ ಉದ್ದೇಶ ಹೊಂದಿರುವ ಈ ವಿಮಾನವು ಜಗತ್ತಿನೆಲ್ಲೆಡೆ ಶುದ್ಧ ಇಂಧನ ತಂತ್ರಜ್ಞಾನ ಮತ್ತು ಸುಸ್ಥಿರ ಅಭಿವೃದ್ಧಿಯ ಸಂದೇಶ ಸಾರುವ ಆಶಯ ಹೊಂದಿದೆ.

●.ಮಸ್ಕತ್‌ನಿಂದ March 2015 ಸೋಮವಾರ ರಂದು ಹೊರಟ ಈ ವಿಮಾನವು ಪಾಕಿಸ್ತಾನದ ಮೇಲೆ ಹಾಯ್ದು, ಅರಬ್ಬೀ ಸಮುದ್ರದ ಮೇಲೆ ಭಾರತದ ವಾಯುಸೀಮೆಯನ್ನು ಪ್ರವೇಶಿಸಿ ಮಂಗಳವಾರ ರಾತ್ರಿ 11.45­ಕ್ಕೆ ಅಹಮದಾಬಾದ್‌ ನಿಲ್ದಾಣಕ್ಕೆ ಬಂದಿಳಿಯಿತು.  ಈ ಚಾರಿತ್ರಿಕ ಕ್ಷಣಕ್ಕೆ ಸಾಕ್ಷಿಯಾಗಲು ನಿಲ್ದಾಣದಲ್ಲಿ ನೆರೆದಿದ್ದ ದೊಡ್ಡ ಗುಂಪು ಹರ್ಷೋದ್ಗಾರ­ದೊಂದಿಗೆ ವಿಮಾನ­ವನ್ನು ಸ್ವಾಗತಿಸಿತು.

●.ಈ ವಿಮಾನವು 1999ರಲ್ಲಿ ಬಿಸಿ­ಗಾಳಿ ಬಲೂನಿನಲ್ಲಿ ಪ್ರಪಂಚ ಪರ್ಯ­ಟನೆ ನಡೆಸಿದ್ದ ಮನೋರೋಗ ಚಿಕಿತ್ಸಕ ಬರ್ಟ್‌ರ್‍ಯಾಂಡ್‌ ಪಿಕಾರ್ಡ್‌ ಮತ್ತು ಮಾಜಿ ಯುದ್ಧ ವಿಮಾನ ಪೈಲಟ್‌ ಆ್ಯಂಡ್ರೆ ಬೋರ್ಶ್ಚ್ ಬರ್ಗ್‌ ಅವರ ಪರಿಕಲ್ಪನೆಯ ಕೂಸು. ಇವರಿಬ್ಬರೂ ಸ್ವಿಟ್ಜರ್‌ಲೆಂಡ್‌ನವರು.

●.‘ಮಾಲಿನ್ಯ ಮುಕ್ತ ಭವಿಷ್ಯ’ (ಫ್ಯೂಚರ್‌ ಈಸ್‌ ಕ್ಲೀನ್‌) ಅಭಿಯಾನದ ಭಾಗವಾಗಿ ಈ ಯಾನ ನಡೆಯುತ್ತಿದೆ. ಈ ಅಭಿಯಾನಕ್ಕೆ ಭಾರತದ 120 ಕೋಟಿ ಜನರ ಬೆಂಬಲವನ್ನು ನಿರೀಕ್ಷಿಸು­ತ್ತೇವೆ’ ಎಂದು ಪೈಲಟ್‌ ಪಿಕಾರ್ಡ್‌ ಕೋರಿದರು.

●.ಒಟ್ಟು 35,000 ಕಿ.ಮೀ. ಪ್ರಯಾಣಿಸಲಿರುವ ವಿಮಾನ 12 ಕಡೆ ಇಳಿಯಲಿದೆ. ಸೌರವಿಮಾನದ ಭಾರತದ ಸಂಚಾರವನ್ನು ಆದಿತ್ಯ ಬಿರ್ಲಾ ಸಮೂಹ ಪ್ರಾಯೋಜಿಸಿದೆ.

●.ಪಯಣದ ಹಾದಿ
— ‘ಎಸ್‌ಐ 2’  ಸೌರವಿಮಾನವು ಅರಬ್‌ ಸಂಯುಕ್ತ ಒಕ್ಕೂಟದ ಅಬುಧಾಬಿಯಿಂದ ಕಳೆದ ವಾರ ಹೊರಟಿತು. ಮುಂದಿನ ಪ್ರಯಾಣ ಮ್ಯಾನ್ಮಾರ್‌, ಚೀನಾಗಳಿಗೆ. ಅಲ್ಲಿಂದ ಮುಂದಕ್ಕೆ ಹವಾಯಿ ದ್ವೀಪಗಳ ಮೂಲಕ ಪೆಸಿಫಿಕ್‌ ಸಾಗರ ದಾಟಿ ಅಮೆರಿಕದಲ್ಲಿ ಸಂಚರಿಸಲಿದೆ. ಆಮೇಲೆ ಅಟ್ಲಾಂಟಿಕ್ ಸಾಗರ ದಾಟಿ ದಕ್ಷಿಣ ಯೂರೋಪ್‌ ಅಥವಾ ಉತ್ತರ ಆಫ್ರಿಕಾದಲ್ಲಿ ಕೊನೆಯ ಹಂತದ ಪ್ರಯಾಣ ಮಾಡಿ ಜುಲೈ ಕೊನೆಯ ವೇಳೆಗೆ ಅಬುಧಾಬಿಗೆ.


●.ತಾಂತ್ರಿಕ ವಿವರಗಳು:—

✧.ಒಂದು ಸೀಟಿನ ವಿಮಾನ

✧.ಇಂಗಾಲದ ನಾರು (ಕಾರ್ಬನ್‌ ಫೈಬರ್‌) ಬಳಸಿ ನಿರ್ಮಾಣ

✧.ವಿಮಾನದ ವೇಗ ಗಂಟೆಗೆ 45 ಕಿ.ಮೀ

✧.ರೆಕ್ಕೆಯ ಉದ್ದ 72 ಮೀಟರ್‌ (ಬೋಯಿಂಗ್‌ 747 ರೆಕ್ಕೆಗಿಂತ ಉದ್ದ)

✧.2300 ಕೆ.ಜಿ ತೂಕ (ಒಂದು ಸಾಮಾನ್ಯ ಕಾರಿನಷ್ಟು)

✧.ಅಳವಡಿಸಲಾಗಿರುವ ಸೌರ ಕೋಶಗಳ ಸಂಖ್ಯೆ 17,248

✧.ಒಟ್ಟು 633 ಕೆ.ಜಿ. ತೂಕದ ನಾಲ್ಕು ಲೀಥಿಯಂ ಬ್ಯಾಟರಿಗಳು

✧.ವಿಮಾನದ ಗರಿಷ್ಠ ಹಾರಾಟ ಎತ್ತರ 8500 ಮೀಟರ್‌ (8848 ಮೀಟರ್‌ ಎತ್ತರವಿರುವ ಮೌಂಟ್‌ ಎವರೆಸ್ಟ್‌ ಎತ್ತರಕ್ಕಿಂತ ತುಸು ಕಡಿಮೆ)

✧.80ಕ್ಕೂ ತಜ್ಞರು, 100ಕ್ಕೂ ಹೆಚ್ಚು ಪಾಲುದಾರರು ಮತ್ತು ಸಮಾಲೋಚಕರು ನಿರ್ಮಾಣದಲ್ಲಿ ಭಾಗಿ

✧.ವಿಶ್ವದ ಮೊಟ್ಟದ ಮೊದಲ ಸೌರ ವಿಮಾನಕ್ಕೆ ನಿರ್ಮಾತೃಗಳೂ ಆಗಿರುವ ಬಟ್ರಾìಂಡ್‌ ಪಿಕ್ಕಾರ್ಡ್‌ ಮತ್ತು ಆ್ಯಂಡ್ರೆ ಬೋರ್ಶ್‌ಬಗ್‌ ಪೈಲಟ್‌ಗಳಾಗಿದ್ದಾರೆ.ಇವರ ಉದ್ದೇಶ ಕಡಿಮೆ ಇಂಧನದಲ್ಲಿ ಹೆಚ್ಚು ಪ್ರಯಾಣಿಕರನ್ನು ಸುರಕ್ಷಿತ ಹಾಗೂ ಅಲ್ಪ ಸಮಯದಲ್ಲಿ ಕೊಂಡೊಯ್ಯುವುದಾಗಿದೆ.

✧.ಈ ಗುರಿಯನ್ನು ಹೊಂದಿರುವ ಹತ್ತಾರು ಸಂಶೋಧಕರು ಮತ್ತು ತಾಂತ್ರಿಕ ತಜ್ಞರನ್ನು ಒಂದೇ ವೇದಿಕೆ ಅಡಿ ತಂದು, ಈ ವಿನೂತನ ಮಾದರಿಯ ವಿಮಾನವನ್ನು ಸಿದ್ಧಪಡಿಸಲಾಗಿದೆ. ಭವಿಷ್ಯದಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಎದುರಾಗಬಹುದಾದ ಇಂಧನ ಕೊರತೆಗೆ ಇದು ಪರಿಹಾರ ಒದಗಿಸಬಲ್ಲದು.


●.ಇನ್ನೊಮ್ಮೆ ಪುನರಾವಲೋಕನ....

✧. ಆಂಟೋನಿ ಪರೋಕರನ್‌, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಿಂಡ್ಲರ್‌ ಇಂಡಿಯಾ (ವಿಮಾನ ನಿರ್ಮಾತೃ ಕಂಪನಿ)

✧.17248 ಸೌರಕೋಶ: ಹನಿ ಇಂಧನವನ್ನೂ ಬಳಸದೆ ಹಾರುವ ಈ ವಿಮಾನದಲ್ಲಿರುವ ಸೌರಕೋಶಗಳು

✧.72 ಮೀಟರ್‌: ಈ ವಿಮಾನದ ರೆಕ್ಕೆಗಳ ವಿಸ್ತಾರ, ಬೋಯಿಂಗ್‌ 747 ವಿಮಾನಕ್ಕಿಂತಲೂ ಅಗಲ

✧.35000 ಕಿ.ಮೀ.: ವಿಶ್ವ ಪರ್ಯಟನೆ ವೇಳೆ ಕ್ರಮಿಸಲಿರುವ ಸೌರವಿಮಾನ ಕ್ರಮಿಸಲಿರುವ ದೂರ

✧.5 ತಿಂಗಳು: ಒಟ್ಟು 25 ದಿನ ಹಾರಲಿರುವ ವಿಮಾನಕ್ಕೆ ಈ ಯಾನ ಮುಗಿಸಲು ತಗಲುವ ಅವಧಿ

✧.2.3 ಟನ್‌: ಸೌರವಿಮಾನದ ಒಟ್ಟು ತೂಕ. ಇದು ಒಂದು ದೊಡ್ಡ ಕಾರಿನಷ್ಟು ಭಾರ ಮಾತ್ರ ಇದೆ

✧.2 ಪೈಲಟ್‌: ಒಮ್ಮೆಗೆ ಒಬ್ಬರಿಗೆ ಮಾತ್ರ ಅವಕಾಶ, 5-6 ದಿನಗಳಿಗೊಮ್ಮೆ ಬದಲಾವಣೆ.

(ಕೃಪೆ: ಉದಯವಾಣಿ & ಪ್ರಜಾವಾಣಿ)

Friday, 13 March 2015

☀ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳು:  (The Karnataka Government plans)

☀ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳು:
(The Karnataka Government plans)


━━━━━━━━━━━━━━━━━━━━━━━━━━━━━━━━━━━━━━━━━━━━━


●. ಸುವರ್ಣ ಗ್ರಾಮೋದಯ:

✧.  ಸುವರ್ಣ ಗ್ರಾಮೋದಯ ಯೋಜನೆಯು ಕರ್ನಾಟಕ ಸರ್ಕಾರದ ಒಂದು ವಿನೂತನ ಯೋಜನೆಯಾಗಿದ್ದು, ಗ್ರಾಮೀಣ ಅಭಿವೃದ್ಧಿಯಲ್ಲಿ ಆಳವಾದ ಮತ್ತು ಸಮಗ್ರ ದೂರದೃಷ್ಠಿತ್ವವನ್ನು ಹೊಂದುವ ಮೂಲಕ ಬಲಿಷ್ಠ ಗ್ರಾಮ ಸಮುದಾಯಗಳನ್ನು ಅಭಿವೃದ್ಧಿಪಡಿಸುವುದಾಗಿದೆ.

✧. ವಿಶಾಲ ಕರ್ನಾಟಕವು ರಚನೆಯಾದ ನಂತರ ರಾಜ್ಯವು ಸುವರ್ಣ ಮಹೋತ್ಸವ ಆಚರಣೆಯ ಸುಸಂದರ್ಭದ ನೆನಪಿಗಾಗಿ ಸುವರ್ಣ ಗ್ರಾಮೋದಯ ಯೋಜನೆಯನ್ನು ಜಾರಿಗೊಳಿಸಲಾಗಿದೆ.


●. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಯೋಜನೆ :

✧.  ಗ್ರಾಮೀಣ ರಸ್ತೆ ಸಂಪರ್ಕವು ಗ್ರಾಮೀಣ ಕ್ಷೇತ್ರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ ಅಂಶವೆಂಬುದು ಬಹಳ ಹಿಂದಿನಿಂದಲೂ ಗುರುತಿಸಲ್ಪಟ್ಟಿದ್ದರೂ ಸಹ ಅನೇಕ ವರ್ಷಗಳಿಂದ ಸಮರ್ಪಕವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರಾಶಸ್ತ್ಯ ದೊರಕಿಸಲು ಸಾಧ್ಯವಾಗಿರುವುದಿಲ್ಲ.

✧. ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ತುರ್ತಾಗಿ ಗಣನೀಯ ಪ್ರಮಾಣದ ಬಂಡವಾಳ ಹೂಡಬೇಕಾದ ಅಗತ್ಯತೆ ಇರುತ್ತದೆ.

✧. ಪ್ರಸ್ತುತ ಪ್ರಮುಖವಾಗಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ/ನಿರ್ವಹಣೆ ಮಾಡಲಾಗುತ್ತಿದೆ.


●.ಕೆರೆಗಳ ಪುನರುಜ್ಜೀವನ :

✧. ಜಿಲ್ಲಾ ಪಂಚಾಯತ್ ಕೆರೆಗಳ ಪೂರ್ವಸ್ಥಿತಿ ಹಾಗೂ ಪುನಶ್ಚೇತನಕ್ಕಾಗಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಆಯವ್ಯಯದಲ್ಲಿ ಅನುದಾನವನ್ನು ಒದಗಿಸಿದ್ದು, ಈ ಅನುದಾನವನ್ನು ಡಾ|| ನಂಜುಂಡಪ್ಪ ವರದಿಯಲ್ಲಿ ಗುರುತಿಸಿರುವ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಜಿಲ್ಲಾ ಪಂಚಾಯತ್ ಗಳಿಗೆ ಹಂಚಿಕೆ ಮಾಡಲಾಗಿದೆ.


●.ಸೌರ ಬೆಳಕು:

✧. ಸೌರ ಬೆಳಕು ಯೋಜನೆಯು ರಾಜ್ಯ ಯೋಜನೆಯಾಗಿರುತ್ತದೆ. 2009-10ನೇ ಸಾಲಿನಿಂದ ಗ್ರಾಮ ಪಂಚಾಯಿತಿಗಳಲ್ಲಿ ಸೌರ ಬೀದಿ ದೀಪಗಳ ಅಳವಡಿಕೆ ಕುರಿತ ಯೋಜನೆಗೆ ಸೌರ ಬೆಳಕು ಎಂಬ ಹೆಸರಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ.


●.ಅನಿಲ ಯೋಜನೆ (ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆ) :

✧. ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಕಾರ್ಯಕ್ರಮವು ಕೇಂದ್ರ ಪುರಸ್ಕೃತ ಕಾರ್ಯಕ್ರಮವಾಗಿದ್ದು, 1982-83ನೇ ಸಾಲಿನಿಂದ ಇದುವರೆವಿಗೂ ಅನುಷ್ಠಾನಗೊಳ್ಳಲಾಗುತ್ತಿದ್ದು, ಶೇ.100 ಮಹಿಳೆಯರಿಗಾಗಿಯೇ ಇರುವ    ಕಾರ್ಯಕ್ರಮವಾಗಿರುತ್ತದೆ.

✧. ಜೈವಾನಿಲವು ಸ್ವಚ್ಛ, ಮಾಲಿನ್ಯ ಹೊಗೆರಹಿತ ಹಾಗೂ ಸ್ಫೋಟಗೊಳ್ಳದ ಅಪಾಯರಹಿತ ಇಂಧನ ತ್ಯಾಜ್ಯ ವಸ್ತುಗಳಾದ ಸಗಣಿ, ಪ್ರಾಣಿ ಮತ್ತು ಮಾನವ ಮಲ ಮೂತ್ರ ಮತ್ತು ಇತರೆ ಸಸ್ಯಜನ್ಯ ಪದಾರ್ಥಗಳನ್ನು ಆಮ್ಲಜನಕ ರಹಿತ ವಾತಾವರಣದಲ್ಲಿನ ಜೈವಿಕ ಕ್ರಿಯೆಯಿಂದ ದೊರೆಯುವ ಸಂಯುಕ್ತ ಅನಿಲವೇ ಜೈವಿಕ ಅನಿಲ.

✧. ರಾಜ್ಯದಲ್ಲಿ ಗ್ರಾಮೀಣ ಇಂಧನ ಕಾರ್ಯಕ್ರಮಗಳು ನವೀಕರಿಸಬಹುದಾದ ಶಕ್ತಿ ಮೂಲಗಳ ಗುಣಾತ್ಮಕ ಮತ್ತು ಪರಿಣಾಮಕಾರಿ ಬಳಕೆಯ ಮೂಲ ಉದ್ದೇಶವನ್ನು ಹೊಂದಿದೆ.


●.ಅನ್ನ ಭಾಗ್ಯ :

✧. ಕಡು ಬಡವರ ಬಗ್ಗೆ ಈ ಸರ್ಕಾರ ಹೊಂದಿರುವ ಕಳಕಳಿಯಿಂದಾಗಿ ಒಂದು ರೂ. ಗೆ ಒಂದು ಕೆ.ಜಿ ಆಹಾರಧಾನ್ಯ ನೀಡುವ ‘ಅನ್ನಭಾಗ್ಯ’ಯೋಜನೆ 2013ರ ಜುಲೈತಿಂಗಳಿನಿಂದ ರಾಜ್ಯದಾದ್ಯಂತ ಜಾರಿಯಾಗಿದೆ.

✧. ಅಕ್ಕಿ ಜೊತೆಗೆ, ರಾಗಿ, ಜೋಳ, ಕುಸುಬಲು ಅಕ್ಕಿ ಹಾಗೂ ಗೋಧಿಯನ್ನು ಸಹ ನೀಡಲಾಗುತ್ತಿದೆ.

✧. ಇದರಿಂದ ರಾಜ್ಯದ 1 ಕೋಟಿಗೂ ಅಧಿಕ ಕಡುಬಡ ಕುಟುಂಬಗಳಿಗೆ ಪ್ರಯೋಜನವಾಗುತ್ತಿದೆ.


●.ವಿದ್ಯಾಸಿರಿ :

✧. ಹಿಂದುಳಿದ ವರ್ಗಗಳ ಮೆಟ್ರಿಕ್  ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅತೀ ಹೆಚ್ಚಿನ ಬೇಡಿಕೆ ಇರುವುದರಿಂದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ದೊರಕದ ಹಾಗೂ ಮೆರಿಟ್ ಹೊಂದಿರುವ ವಿದ್ಯಾರ್ಥಿಗಳಿಗೆ ‘ಊಟ ವಸತಿ ಸಹಾಯ ಯೋಜನೆ’ಯನ್ನು ‘ವಿದ್ಯಾಸಿರಿ’ ಹೆಸರಿನಲ್ಲಿ ಸರ್ಕಾರ ಜಾರಿಗೆ ತಂದಿದೆ.


●.ಭಾಗ್ಯಜ್ಯೋತಿ :

✧. ಭಾಗ್ಯಜ್ಯೋತಿ ಮತ್ತು ಕುಟೀರ ಯೋಜನೆಗಳಡಿ ಸಿ. 13.5.2013ರವರೆಗೆ ಬಾಕಿ ಇರುವ ದಂಡಸಹಿತ ವಿದ್ಯುತ್  ಬಿಲ್ನ ಬಾಕಿಯನ್ನು ಸರ್ಕಾರ ಮನ್ನಾ ಮಾಡಿದೆ.

✧. ಸಾಲ ಬಾಕಿ ಇದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಲ್ಲಿ ಮತ್ತೆ ವಿದ್ಯುತ್ ಸಂಪರ್ಕವನ್ನು ನೀಡಿದೆ.

✧. ಈ ಮೂಲಕ ಮತ್ತೆ ಬಡವರ ಮನೆಯಲ್ಲಿ ಬೆಳಕು ಮೂಡಿದೆ.


●.ಕ್ಷೀರ ಭಾಗ್ಯ :

✧. ಶಾಲಾ ಮಕ್ಕಳಿಗೆ ಬಿಸಿಹಾಲು ಪೂರೈಸುವ ಸರ್ಕಾರದ ಮಹಾತ್ವಾಕಾಂಕ್ಷೆಯ ‘ಕ್ಷೀರಭಾಗ್ಯ’ ಯೋಜನೆ 2013ರ ಆಗಸ್ಟ್ ತಿಂಗಳಿನಿಂದ ರಾಜ್ಯಾದಾದ್ಯಂತ ಅನುಷ್ಟಾನಗೊಂಡಿದೆ .

✧. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಸದುದ್ದೇಶದಿಂದ ಸರ್ಕಾರ ಜಾರಿಗೆ ತಂದಿದೆ, ಅಂಗನವಾಡಿ ಮಕ್ಕಳು ಸೇರಿದಂತೆ 1ರಿಂದ 10ನೇ ತರಗತಿವರೆಗಿನ ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಪ್ರಯೋಜನವಾಗುತ್ತಿದೆ.


●.ಋಣ ಮುಕ್ತ ಭಾಗ್ಯ :

✧. ಬಡಜನರು ತಮ್ಮ ಹಳೆಯ ಸಾಲಗಳಿಂದ ಮುಕ್ತರಾಗಿ ಹೊಸ ಸಾಲಗಳನ್ನು ಪಡೆಯಲು ಅರ್ಹತೆ ಗಳಿಸಿ ಹೊಸ ಆರ್ಥಿಕ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಜೀವನ ನಡೆಸಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.

✧. ಇದಕ್ಕಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಮುಖ್ಯಮಂತ್ರಿ ಸಿದ್ದರಾಮ್ಯಯ್ಯ ಅವರು ಮಾಡಿದ ಈ ಘೋಷಣೆ ಇಂದು ಲಕ್ಷಂತಾರ ಮಂದಿಗೆ ವರದಾನವಾಗಿದೆ .

✧. ಇದರಿಂದಾಗಿ ಪರಿಶಿಷ್ಟ ಜಾತಿ /ಪಂಗಡ ಮತ್ತು ಹಿಂದುಳಿದ ಜಾತಿ ಹಾಗೂ ಅಲ್ಪ ಸಂಖ್ಯಾಂತರ ಸಾಲಮನ್ನಾ ಯೋಜನೆಯಡಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಮಂದಿಗೆ ಪ್ರಯೋಜನವಾಗಿದೆ.

✧. ಸರ್ಕಾರದ ಈ ಕ್ರಮವನ್ನು ರಾಜ್ಯದ ಜನತೆ ಸಹ ಮುಕ್ತವಾಗಿ ಸ್ವಾಗತಿಸಿದ್ದಾರೆ.


●.‘ಮನಸ್ವಿನಿ ಮೈತ್ರಿ’ ಯೋಜನೆ :

✧. ನವಲತ್ತು ವರ್ಷದಾಟಿದ ಅವಿವಾಹಿತ/ ವಿಚ್ಚೇದಿತ/ ಪರಿತ್ಯಕ್ತ ಮಹಿಳೆಯರ ಬಾಳಿನಲ್ಲಿ ಬೆಳಕಿನ ಕಿರಣ ಮೂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013-14ರ ಬಜೆಟ್ ನಲ್ಲಿ ಘೋಷಿಸಿದ್ದ ‘ಮನಸ್ವಿನಿ’ ಯೋಜನೆ ಜಾರಿಯಾಗಿದೆ.

✧. ಹಾಗೆಯೇ, ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಲಿಂಗ ಅಲ್ಪಸಂಖ್ಯಾತರಿಗಾಗಿ ರೂಪಿಸಿರುವ ‘ಮೈತ್ರಿ’ ಯೋಜನೆಯೂ ಅನುಷ್ಠಾನಗೊಂಡಿದೆ.


●.ವಸತಿ ಭಾಗ್ಯ :

✧. ರಾಜ್ಯವನ್ನು ಗುಡಿಸಲು ಮುಕ್ತವನ್ನಾಗಿಸಲು ಸರ್ಕಾರ ಸಂಕಲ್ಪಿಸಿದ್ದು, ಮುಂದಿನ ಐದು ವರ್ಷಗಳ ಅವಧಿಯಲ್ಲಿ 12 ಲಕ್ಷಕ್ಕೂ ಹೆಚ್ಚು ಮನೆ ನಿರ್ಮಾಣ ಗುರಿ ಹಾಕಿಕೊಳ್ಳಲಾಗಿದೆ.

✧.ಇದಕ್ಕಾಗಿ ಪ್ರತಿ ವರ್ಷವೂ 3ಲಕ್ಷ ಮನೆ ನಿರ್ಮಿಸಲಾಗುತ್ತಿದೆ.

✧. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದವರಿಗೆ ವಸತಿ ಸೌಕರ್ಯ ಕಲ್ಪಿಸಲು ಸರ್ಕಾರ ಆದ್ಯತೆ ನೀಡಿದೆ.


●.ರೈತ ಸಂಪರ್ಕ ಕೇಂದ್ರ :

✧. ಬೇಡಿಕೆ ಆಧಾರಿತ ಹೊಸ ಕೃಷಿ ವಿಸ್ತರಣಾ ವ್ಯವಸ್ಥೆಯಾಗಿ "ರೈತ ಮಿತ್ರ ಯೋಜನೆ" ಯನ್ನು ರಾಜ್ಯದಲ್ಲಿ 2000-01ನೇ ಸಾಲಿನಿಂದ ಅನುಷ್ಟ್ಹಾನಗೊಳಿಸಲಾಗುತ್ತಿದೆ.

✧. ಈ ಹೊಸ ಯೋಜನೆಯಡಿಯಲ್ಲಿ ರಾಜ್ಯದ ಪ್ರತಿ ಹೋಬಳಿಗೆ ಒಂದರಂತೆ ಪ್ರಾರಂಭಿಸಿರುವ ಕೃಷಿ ವಿಸ್ತರಣಾ ಕೇಂದ್ರಗಳನ್ನು "ರೈತ ಸಂಪರ್ಕ ಕೇಂದ್ರಗಳು" ಎಂದು ಕರೆಯಲಾಗುತ್ತಿದೆ.

✧. ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ಪ್ರತಿ ಹೋಬಳಿಗೆ ಒಂದರಂತೆ 747 ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.


●.ಕೃಷಿ ಯಾಂತ್ರೀಕರಣ ಯೋಜನೆ :

✧. ಉತ್ಪಾದನಾ ವೆಚ್ಹ ಕಡಿಮೆ ಮಾಡುವುದು, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುವು ಮಾಡುವುದು, ಉತ್ಪಾದಕತೆ ಹೆಚ್ಚಿಸುವುದು ಮತ್ತು ಕೃಷಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಕೃಷಿ ಯಾಂತ್ರೀಕರಣ ಯೋಜನೆಯ ಮುಖ್ಯ ಉದ್ಧೇಶಗಳು.

✧. ಕೃಷಿ ಇಲಾಖೆಯಲ್ಲಿ ಭೂಮಿ ಸಿದ್ಧತೆಯಿಂದ ಕೊಯ್ಲಿನವರೆಗೂ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ಒದಗಿಸಲಾಗುತ್ತಿದೆ.

✧. ಸಾವಯವ ಕೃಷಿಗೆ ಹೆಚ್ಚಿನ ಒತ್ತು ಕೊಡಲು ಉದ್ದೇಶಿಸಿ ರಾಜ್ಯ ಸರ್ಕಾರವು 2004-05ನೇ ಸಾಲಿನಲ್ಲಿ ಸಾವಯವ ಕೃಷಿ ನೀತಿಯನ್ನು ಹೊರತರಲಾಗಿದ್ದು ನೀತಿಯಡಿ ಅನೇಕ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಅನುಷ್ಟ್ಹಾನಗೊಳಿಸಲಾಗುತ್ತಿದೆ.

 ✧. ಪ್ರಸ್ತುತ ಸಾಲಿನಲ್ಲಿ(2013-14) ಸಾವಯವ ಗ್ರಾಮ/ಸ್ಥಳ ಯೋಜನೆಯನ್ನು ಪರಿಷ್ಕರಣಿಯೊಂದಿಗೆ "ಸಾವಯವ ಭಾಗ್ಯ" ಯೋಜನೆ ಹೆಸರಿನಡಿಯಲ್ಲಿ ಹೋಬಳಿ ಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ .

(ಕೃಪೆ: ಕರ್ನಾಟಕ ಸರ್ಕಾರಿ ವೆಬ್ ಸೈಟ್ ಗಳು)

☀ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿದ್ದ ಭಾರತ ಸರ್ಕಾರದ ಯೋಜನೆಗಳು:  (The Indian Government plans, implemented in the state of Karnataka)

☀ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿದ್ದ ಭಾರತ ಸರ್ಕಾರದ ಯೋಜನೆಗಳು:
(The Indian Government plans, implemented in the state of Karnataka)


━━━━━━━━━━━━━━━━━━━━━━━━━━━━━━━━━━━━━━━━━━━━━



●.ಸಂಜೀವಿನಿ -( ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ನಿಯೋಗ) :

✧. ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಮಂತ್ರಾಲಯವು ಎಸ್ ಜಿಎಸ್ ವೈ ಯೋಜನೆಯನ್ನು ಪುನರ್ ರಚಿಸಿ ಆಜೀವಿಕ  –ನ್ಯಾಷನಲ್ ರೂರಲ್ ಲೈವ್ಲಿ ಹುಡ್ ಮಿಷನ್ (ಎನ್ ಆರ್ ಎಲ್ ಎಂ)2010-11ರಿಂದ ಜಾರಿಗೊಳಿಸಿದೆ.

✧. ಇದರನ್ವಯ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆಜೀವಿಕ ಯೋಜನೆಯನ್ನು “ಸಂಜೀವಿನಿ’’ ಹೆಸರಿನಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ (ಕೆ.ಎಸ್.ಆರ್.ಎಲ್.ಪಿ.ಎಸ್) ಮೂಲಕ ಹಂತ ಹಂತವಾಗಿ ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತಿದೆ.


●.ಎನ್ ಆರ್ ಡಿ ಡಬ್ಲ್ಯೂ ಪಿ - (ಗ್ರಾ ನೀ  ಸ— ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ನೀರು ಸರಬರಾಜು ಕಾರ್ಯಕ್ರಮ) :

✧.ರಾಜ್ಯ 59,753 ಗ್ರಾಮೀಣ ಜನವಸತಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸಲು ಸರ್ಕಾರ ಹೆಚ್ಚಿನ ಮಹತ್ವನ್ನು ನೀಡಿದೆ.

✧.ಪ್ರತಿ ದಿನ ಪ್ರತಿ ವ್ಯಕ್ತಿಗೆ ತಲಾ 55 ಲೀಟರ್ ಕುಡಿಯುವ ನೀರು ಒದಗಿಸುವ ಉದ್ದೇಶವನ್ನು ಸರ್ಕಾರ ತಳೆದಿದೆ. ಗ್ರಾಮೀಣ ಪ್ರದೇಶಗಳಿಗೆ ಕೆಳಕಂಡ ಕಾರ್ಯಕ್ರಮಗಳ ಮೂಲಕ ಸುರಕ್ಷಿತ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

 ✧.(ಎನ್.ಆರ್.ಡಿ.ಡಬ್ಲ್ಯೂ.ಪಿ ಮಾರ್ಗಸೂಚಿ -2013 ರಂತೆ)
  1. ಕೊಳವೆ ನೀರು ಸರಬರಾಜು ಯೋಜನೆ
  2. ಕಿರು ನೀರು ಸರಬರಾಜು ಯೋಜನೆ
  3. ಕೈಪಂಪು ಕೊಳವೆ ಬಾವಿ
  4. ಬಹುಗ್ರಾಮ ಪೂರೈಕೆ ಯೋಜನೆಗಳು


●.ಸ್ವಚ್ಛ ಭಾರತ ಮಿಷನ್ (ನಿರ್ಮಲ ಭಾರತ ಅಭಿಯಾನ) :

✧. ಗ್ರಾಮೀಣ ಪ್ರದೇಶಗಳಲ್ಲಿನ ಕೊಳಕು, ಗಲೀಜು, ವಾಸನೆ ಮುಂತಾದ ಅನೈರ್ಮಲ್ಯಗಳನ್ನು ತೊಡೆದುಹಾಕಿ,  ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಲು ಹಮ್ಮಿಕೊಂಡಿರುವ ಕಾರ್ಯಕ್ರಮವೇ “ನಿರ್ಮಲ ಭಾರತ್ ಅಭಿಯಾನ’’.

✧. ಇದು  ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ, ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 2005 ರ  ಅಕ್ಟೋಬರ್ 2 ರ ಗಾಂಧಿ ಜಯಂತಿಯ ದಿನದಿಂದ ಸಂಪೂರ್ಣ ಸ್ವಚ್ಛತಾ ಆಂದೋಲನ ಎಂಬ ಹೆಸರಿನಲ್ಲಿ  ಜಾರಿಯಲ್ಲಿದ್ದು, ದಿನಾಂಕ:01.04.2012 ರಿಂದ ನಿರ್ಮಲ ಭಾರತ್ ಅಭಿಯಾನ ಎಂದು ಪುನರ್ ನಾಮಕರಣ ಮಾಡಿ  ಜಾರಿಗೊಳಿಸಿದೆ.

✧. ಇದು ನಿರ್ದಿಷ್ಟ ಕಾಲಾವಧಿಯ ಯೋಜನೆಯಾಗಿದ್ದು, 2022 ರ ಅಂತ್ಯದ ವೇಳೆಗೆ ಶೇ.100 ರಷ್ಟು ಪ್ರಗತಿಯನ್ನು ಸಾಧಿಸುವ ಗುರಿ ಹೊಂದಲಾಗಿದೆ.          


●.(ಬಿ ಆರ್ ಜಿ ಎಫ್)  ಹಿಂದುಳಿದ ಪ್ರದೇಶಗಳ ಅಭಿವೃಧ್ದಿ ಅನುದಾನ :

✧. ಪ್ರಾದೇಶಿಕ ಅಸಮತೋಲನವನ್ನು ನಿವಾರಿಸಲು ಭಾರತ ಸರ್ಕಾರವು ಹಿಂದುಳಿದ ಪ್ರದೇಶಗಳ ಅನುದಾನ  ನಿಧಿಯನ್ನು(BRGF) ಸ್ಥಾಪಿಸಿದ್ದು, ಈ ಯೋಜನೆಯ ಉದ್ಧೇಶವು, ಗುರುತಿಸಲ್ಪಟ್ಟಿರುವ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣಕಾಸಿನ ನೆರವನ್ನು ನೀಡುವುದಾಗಿರುತ್ತದೆ.

✧.ಮೂಲಭೂತವಾಗಿ ಈ ಅನುದಾನವನ್ನು ಈ  ಕೆಳಕಂಡ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ.
 1. ಸ್ಥಳೀಯ ಮೂಲಭೂತ ಸೌಲಭ್ಯ ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ರಮಗಳ ನಡುವಿನ ಅಂತರವನ್ನು ತುಂಬುವುದು.
 2. ಪಂಚಾಯತ್ ರಾಜ್ ಸಂಸ್ಥೆಗಳು ಈ ಕಾರ್ಯವನ್ನು ನಿರ್ವಹಿಸಲು ಕ್ರಿಯಾತ್ಮಕವಾಗಿ ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸುವುದು ಹಾಗೂ ಅದಕ್ಕೆ ಪೂರಕವಾಗಿ ಅನುಷ್ಠಾನ ಮತ್ತು ನಿರ್ವಹಣೆಯ ಬಗ್ಗೆ ಪರಿಣತಿಯನ್ನು ನೀಡುವುದು.

✧. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕರ್ನಾಟಕದಲ್ಲಿ ಗುಲ್ಬರ್ಗಾ, ಬೀದರ್, ಚಿತ್ರದುರ್ಗ, ದಾವಣಗೆರೆ ಮತ್ತು ರಾಯಚೂರು ಜಿಲ್ಲೆಗಳನ್ನು ಗುರುತಿಸಲಾಗಿದೆ.    


●.ರಾಜೀವ್ ಗಾಂಧಿ ಪಂಚಾಯತ್ ಸಶಕ್ತಿಕರಣ ಅಭಿಯಾನ   :

✧. ಭಾರತ ಸರ್ಕಾರದ ಪಂಚಾಯತ್ ರಾಜ್ ಮಂತ್ರಾಲಯವು ಹಾಲಿ ರಾಷ್ಟ್ರದಾದ್ಯಂತ ಅನುಷ್ಠಾನಗೊಳಿಸುತ್ತಿರುವ  e-PANCHAYAT, ಪಂಚಾಯತ್ ಎಂಪರ್ ಮೆಂಟ್ ಅಂಡ್ ಅಕೌಂಟಬಿಲಿಟಿ ಇನ್ಸೆಂಟೀವ ಸ್ಕೀಮ್  (PEAIS), ಪಂಚಾಯತ್ ಮಹಿಳಾ ಏವಂ ಯುವಶಕ್ತಿ ಅಭಿಯಾನ(PMEYSA) ಹಾಗೂ ಬ್ಯಾಕ್ ವರ್ಡ್ ರೀಜನ್ಸ್ ಗ್ರಾಂಟ್ ಫಂಡ್ (BRGF ) ಯೋಜನೆಗಳಲ್ಲಿ ಅಳವಡಿಸಿಕೊಳ್ಳಲಾಗಿದ್ದ ಸಾಮರ್ಥ್ಯಾಭಿವೃದ್ಧಿ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಸಮ್ಮಿಳನಗೊಳಿಸಿ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹಾಗೂ ಅದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಂಚಾಯತ್ ರಾಜ್ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ  ಸಾಮರ್ಥ್ಯಾಭಿವೃದ್ಧಿಯನ್ನು ಬಲಪಡಿಸುವ ಉದ್ದೇಶದಿಂದ 2012-13ನೇ ಸಾಲಿನಿಂದ ನೂತನ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೊಳಿಸಿದೆ.

✧. ಸದರಿ ಯೋಜನೆಯನ್ನು “ರಾಜೀವ್ ಗಾಂಧಿ ಪಂಚಾಯತ್  ಸಶಕ್ತೀಕರಣ ಅಭಿಯಾನ’’ (RGPSA) ಎಂದು ಕರೆಯಲಾಗಿದೆ.

✧. ಈ ಯೋಜನೆಯನ್ನು 12ನೇ ಪಂಚವಾರ್ಷಿಕ  ಯೋಜನಾವಧಿಯಲ್ಲಿ ಅನುಷ್ಠಾನಗೊಳಿಸಲಾಗುವುದು.  
         

●.ಪಶ್ಚಿಮ ಘಟ್ಟ ಅಭಿವೃದ್ಧಿ ಕಾರ್ಯಕ್ರಮ (ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆ):

✧. ಪಶ್ಚಿಮ ಘಟ್ಟಗಳ ಅಭಿವೃದ್ಧಿ ಯೋಜನೆಯ ಅನುಷ್ಠಾನವನ್ನು ನಿರ್ದೇಶಕರು, ಸುವರ್ಣ ಗ್ರಾಮೋದಯ ರವರ ಉಸ್ತುವಾರಿಯಲ್ಲಿ ನಿರ್ವಹಿಸಲಾಗುತ್ತಿದೆ.

✧. ಯೋಜನೆಯ ದೂರದೃಷ್ಟಿ, ನಿರ್ದಿಷ್ಟಪಡಿಸಿದ ಗುರಿ ಮತ್ತು ಉದ್ದೇಶಗಳು :
 1. ಗುಡ್ಡಗಾಡು ಪ್ರದೇಶಗಳು ಅಭಿವೃದ್ಧಿ
 2. ಅರಣ್ಯ ಸಂರಕ್ಷಣೆ ಮತ್ತು ಪರಿಸರ ನಿರ್ವಹಣೆ
 3. ಗುಡ್ಡಗಾಡು ಪ್ರದೇಶಗಳಲ್ಲಿನ ಕೃಷಿಕರಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸುವುದು
 4. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವವರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಚಟುವಟಿಕೆಗಳನ್ನು ಒದಗಿಸುವುದು.
 5. ಈ ಪ್ರದೇಶಗಳಲ್ಲಿನ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು.
 6. ಗುಡ್ಡಗಾಡು ಪ್ರದೇಶಗಳಲ್ಲಿ ಎರಡನೇ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ ಕಿಂಡಿ ಅಣೆಕಟ್ಟು ಮತ್ತು ಕಾಲುಸಂಕಗಳ ನಿರ್ಮಾಣವನ್ನು ಕೈಗೊಳ್ಳುವುದು.


●.ರಾಷ್ಟ್ರೀಯ ಜೈವಾನಿಲ ಅಭಿವೃದ್ಧಿ ಯೋಜನೆ (ಜೈವಿಕ ಇಂಧನ) :

✧. ರಾಜ್ಯದಲ್ಲಿ 2010-11ನೇ ಸಾಲಿನಲ್ಲಿ ಆರಂಭಗೊಂಡ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರಾಜ್ಯದಲ್ಲಿ ಜೈವಿಕ ಇಂಧನ ಕುರಿತು ಯೋಜನೆ ರೂಪಿಸುವ ಹಾಗೂ ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿದೆ.

✧. ಜೈವಿಕ ಇಂಧನ ಅಭಿವೃದ್ಧಿಗಾಗಿ ಮಂಡಳಿ ಕೆಳಗಿನ ಧ್ಯೇಯೋದ್ದೇಶ ಹೊಂದಿದೆ.
 1. ಜೈವಿಕ ಇಂಧನ ಮೂಲಗಳ ಅಭಿವೃದ್ಧಿ ಹಾಗೂ ನಿರಂತರ ಪೂರೈಕೆಗೆ ಅಗತ್ಯವಿರುವ ಪರಿಸರ ನಿರ್ಮಾಣ ಮಾಡುವುದು.
 2. ರಾಜ್ಯ ಜೈವಿಕ ಇಂಧನ ನೀತಿಯ ಸಮರ್ಪಕ ಅನುಷ್ಠಾನ.
 3. ವಿವಿಧ ಪ್ರಾಂತ್ಯಗಳಿಗೆ ಸೂಕ್ತವಿರುವ ಜೈವಿಕ ಇಂಧನ ಬೆಳೆಗಳನ್ನು ಗುರುತಿಸಿ, ಭೂಮಿ ಪತ್ತೆ ಹಚ್ಚಿ ನೆಡುತೋಪುನ್ನು ಬೆಳೆಸುವುದು.
 4. ಜೈವಿಕ ಇಂಧನಕ್ಕೆ ಅಗತ್ಯವಿರುವ ಮಾರುಕಟ್ಟೆ ವ್ಯವಸ್ಥೆ ರೂಪಿಸುವುದು.


●.ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆ (ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ) :

✧.ಗ್ರಾಮೀಣ ರಸ್ತೆ ಸಂಪರ್ಕವು ಗ್ರಾಮೀಣ ಕ್ಷೇತ್ರದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ ಅಂಶವೆಂಬುದು ಬಹಳ ಹಿಂದಿನಿಂದಲೂ ಗುರುತಿಸಲ್ಪಟ್ಟಿದ್ದರೂ ಸಹ ಅನೇಕ ವರ್ಷಗಳಿಂದ ಸಮರ್ಪಕವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಪ್ರಾಶಸ್ತ್ಯ ದೊರಕಿಸಲು ಸಾಧ್ಯವಾಗಿರುವುದಿಲ್ಲ.

✧.ಗ್ರಾಮೀಣ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ತುರ್ತಾಗಿ ಗಣನೀಯ ಪ್ರಮಾಣದ ಬಂಡವಾಳ ಹೂಡಬೇಕಾದ ಅಗತ್ಯತೆ ಇರುತ್ತದೆ.

✧. ಪ್ರಸ್ತುತ ಪ್ರಮುಖವಾಗಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ/ನಿರ್ವಹಣೆ ಮಾಡಲಾಗುತ್ತಿದೆ.


(ಕೃಪೆ : ಕರ್ನಾಟಕ ಸರ್ಕಾರಿ ವೆಬ್ ಸೈಟ್ ಗಳು) 

Thursday, 12 March 2015

☀ಡಿಸೆಂಬರ್ 2014 ತಿಂಗಳ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of December 2014)

☀ಡಿಸೆಂಬರ್ 2014 ತಿಂಗಳ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of December 2014)


★ ಡಿಸೆಂಬರ್ 2014
(December 2014)

━━━━━━━━━━━━━━━━━━━━━━━━━━━━━━━━━━━━━━━━━━━━━



♦.* ಡಿ. 1: ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಜೆ. ಗ್ಯಾಂಬ್ಲಿನ್‌ ಗುರ್‌ಗಾಂವ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.


♦.* ಡಿ. 2: ಭಾರತೀಯ ರಫ್ತು ಕ್ಷೇತ್ರದಲ್ಲಿ 2011 ಮತ್ತು 2012ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ವಾಣಿಜ್ಯೋದ್ಯಮಿಗಳಿಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ‘ನಿರ್ಯಾತ ಶ್ರೀ’ ಮತ್ತು ‘ನಿರ್ಯಾತ ಬಂಧು’ ಪ್ರಶಸ್ತಿಗಳನ್ನು ನೀಡಿದರು.


♦.* ಡಿ. 2: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು (ಡಿಸೆಂಬರ್‌ 25) ‘ರಾಷ್ಟ್ರೀಯ ಉತ್ತಮ ಆಡಳಿತ ದಿನವನ್ನಾಗಿ’ ಆಚರಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿತು.


♦.* ಡಿ. 3: ಸಿಬಿಐನ ನೂತನ ನಿರ್ದೇಶಕರನ್ನಾಗಿ ಅನಿಲ್‌ ಕುಮಾರ್‌ ಸಿನ್ಹಾ ಅವರನ್ನು ನೇಮಕ ಮಾಡಲಾಯಿತು. ಅವರು ಬಿಹಾರದ 1979ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ. ಈ ಹಿಂದೆ ರಂಜಿತ್‌ ಸಿನ್ಹಾ ಸಿಬಿಐ ನಿರ್ದೇಶಕರಾಗಿದ್ದರು.


♦.* ಡಿ. 4 : ಮೇಘಾಲಯ ಸರ್ಕಾರ ಸ್ಥಳೀಯ ‘ಖಾಸಿ’ ಭಾಷೆಗೆ ಸಂವಿಧಾನಿಕ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ಇದಕ್ಕಾಗಿ ಮೇಘಾಲಯ ಸರ್ಕಾರ ಸಮಿತಿಯೊಂದನ್ನು ರಚನೆ ಮಾಡಿದೆ. ಸಂವಿಧಾನದ 8ನೇ ಅನುಚ್ಛೇಧದಲ್ಲಿ ಪ್ರಾದೇಶಿಕ ಭಾಷೆಗಳ ಬಗ್ಗೆ ಮಾಹಿತಿ ಇದೆ.


♦.* ಡಿ. 5: ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಅರಬ್ಬಿ ಸಮುದ್ರದಲ್ಲಿಛತ್ರಪತಿ ಶಿವಾಜಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಅನುಮತಿ ನೀಡಿತು. ಅರಬ್ಬಿ ಸಮುದ್ರದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಭಾರತದ ಮೊದಲಪ್ರತಿಮೆ ಇದಾಗಿದೆ.


♦.* ಡಿ. 6: ವಿಶ್ವಸಂಸ್ಥೆಯು 2015ನೇ ವರ್ಷವನ್ನು ‘ವಿಶ್ವ ಮಣ್ಣಿ’ನ ವರ್ಷವನ್ನಾಗಿ ಅಚರಿಸಲಾಗುವುದು ಎಂದು ಪ್ರಕಟಿಸಿತು. ಇದೇ ವೇಳೆ ಡಿಸೆಂಬರ್‌ 6ರಂದು ಪ್ರತಿವರ್ಷ ಮಣ್ಣಿನ ದಿನವನ್ನಾಗಿ ಅಚರಿಸಲಾಗುವುದು ಎಂದು ಸಹ ಘೋಷಿಸಲಾಯಿತು.


♦.* ಡಿ. 8: ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ಅಂಧರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತೀಯ ಅಂಧರ ತಂಡ ಪಾಕಿಸ್ತಾನವನ್ನು ಮಣಿಸಿ ವಿಶ್ವಕಪ್‌ ಗೆದ್ದುಕೊಂಡಿತು. ಇದು ನಾಲ್ಕನೇ ವಿಶ್ವಕಪ್‌ ಟೂರ್ನಿ ಆಗಿದೆ.


♦.* ಡಿ. 9: ಭಾರತೀಯ ಮಾಜಿ ಹಾಕಿ ಆಟಗಾರ ನಂದಿ ಸಿಂಗ್‌ ನವದೆಹಲಿಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ನಂದಿ ಸಿಂಗ್‌ ಅವರು ಭಾರತ ಒಲಿಪಿಂಕ್ಸ್‌ನಲ್ಲಿ ಎರಡು ಬಾರೀ ಚಿನ್ನದ ಪದಕ ಗೆದ್ದ ತಂಡದಲ್ಲಿದ್ದರು.


♦.* ಡಿ. 10: ನೊಬೆಲ್‌ ಪುರಸ್ಕೃತ ವಿಜ್ಞಾನಿ ಜೇಮ್ಸ್‌ ಡಿ ವ್ಯಾಟ್ಸನ್‌ ಅವರು ತಮ್ಮ ನೊಬೆಲ್‌ ಪದಕವನ್ನು 40.8 ಲಕ್ಷ ಅಮೆರಿಕನ್‌ ಡಾಲರ್‌ಗೆ ಮಾರಾಟ ಮಾಡಿದರು. ಈ ಹಣದಿಂದ ಡಿಎನ್‌ಎ ಕುರಿತು ಸಂಶೋಧನೆ ನಡೆಸುವುದಾಗಿ ಅವರು ಪ್ರಕಟಿಸಿದರು.


♦.* ಡಿ. 11: ವಿಡಿಯೊ ಗೇಮ್ಸ್‌ ಜನಕ ಎಂದೇ ಖ್ಯಾತಿಯಾಗಿರುವ ರಾಲ್ಫ್‌ ಹೆನ್ರಿ ಬೇರ್‌ ಅವರು ಡಿಸೆಂಬರ್‌ 5ರಂದು ಲಂಡನ್‌ನಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆಯನ್ನು ಮ್ಯಾಂಚೆಸ್ಟರ್‌ನಲ್ಲಿ ನೇರವೇರಿಸಲಾಯಿತು.


♦.* ಡಿ. 12: ಭಾರತದಲ್ಲಿ ಕ್ಸಿಯಾಮಿ ಮೊಬೈಲ್‌ ಫೋನ್‌ಗಳನ್ನು ಮಾರಾಟ ಮಾಡುವುದರ ಮೇಲೆ ದೆಹಲಿ ಹೈಕೋರ್ಟ್‌ ನಿಷೇಧ ಹಾಕಿತು. ಎರಿಕ್ಸ್‌ನ್‌ ಕಂಪೆನಿಯೊಂದಿಗಿನ ಪೇಟೆಂಟ್‌ ವಿಷಯವಾಗಿ ಈ ತೀರ್ಪು ನೀಡಿತು.


♦.* ಡಿ. 13: ಬಾಲಿವುಡ್‌ನ ಹಿನ್ನೆಲೆ ಗಾಯಕಿ ಆಶಾ ಭೋಂಸ್ಲೆ ಅವರಿಗೆ ದುಬೈ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಅಕಾಡೆಮಿ ‘ಜೀವಮಾನ ಶ್ರೇಷ್ಠ’ ಪ್ರಶಸ್ತಿ ನೀಡಿ ಗೌರವಿಸಿತು.


♦.* ಡಿ. 15: 2014 ನೇ ಸಾಲಿನ ವಿಶ್ವಸುಂದರಿ ಕಿರೀಟವನ್ನು ದಕ್ಷಿಣ ಆಫ್ರಿಕಾದ ರೊಲೆನ್‌ ಸ್ಟ್ರಾಸ್‌ ಮುಡಿಗೇರಿಸಿಕೊಂಡರು. ಈ ವಿಶ್ವಸುಂದರಿಸ್ಪರ್ಧೆ ಲಂಡನ್‌ನಲ್ಲಿ ನಡೆದಿತ್ತು.


♦.* ಡಿ. 17: ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳ ಸಂಗೀತ ನಿರ್ದೇಶಕ ‘ಚಕ್ರಿ’ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 48 ವರ್ಷ ವಯಸ್ಸಾಗಿತ್ತು. ಸುಮಾರು 15 ವರ್ಷಗಳಿಂದ ಸಿನಿಮಾರಂಗದಲ್ಲಿ ದುಡಿಯುತ್ತಿದ್ದರು.


♦.* ಡಿ. 16: ಭಾರತದ ವಿಶ್ವನಾಥನ್‌ ಆನಂದ್‌ ಇಂಗ್ಲೆಡ್‌ನಲ್ಲಿ ನಡೆದ ‘ಲಂಡನ್‌ ಕ್ಲಾಸಿಕ್‌’ ಚೆಸ್‌ ಟ್ರೋಫಿಯನ್ನು ಗೆದ್ದುಕೊಂಡರು. ಈ ಪಂದ್ಯದಲ್ಲಿ ಬ್ರಿಟಿಷ್‌ ಗ್ರ್ಯಾಂಡ್‌ ಮಾಸ್ಟರ್‌ ಮೈಕಲ್‌ ಆ್ಯಡಮ್ಸ್‌ ಪರಾಭವಗೊಂಡರು.


♦.* ಡಿ. 18: ತೆಲಂಗಾಣ ರಾಜ್ಯ ಲೋಕಸೇವಾ ಅಯೋಗದ (ಟಿಎಸ್‌ಪಿಎಸ್‌ಸಿ) ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತ ಘಂಟಾ ಚಕ್ರಪಾಣಿ ಅವರನ್ನು ನೇಮಕ ಮಾಡಲಾಯಿತು. ಇವರು ಟಿಎಸ್‌ಪಿಎಸ್‌ಸಿಯ ಮೊದಲ ಅಧ್ಯಕ್ಷರು ಹೌದು.


♦.* ಡಿ.19: ಪಾಕಿಸ್ತಾನ ಮೂಲದ ಹಿರಿಯ ಕವಿ ಇಮ್ತಿಯಾಜ್‌ ಧರ್ಕರ್ ಅವರ ಇತ್ತೀಚಿನ ಕವನ ಸಂಕಲನ ‘ಓವರ್‌ ದಿ ಮೂನ್‌ ’ ಕೃತಿಗೆ ಬ್ರಿಟನ್‌ನ ‘ಕ್ವೀನ್ಸ್‌ ಗೊಲ್ಡ್‌ ಮೆಡಲ್‌’ ಪ್ರಸಸ್ತಿ ಲಭಿಸಿದೆ.


♦.* ಡಿ. 20: ಮಂಗಳ ಗ್ರಹದ ಮೇಲೆ ನೀರು ಇರುವುದಾಗಿ ನಾಸಾ ಪ್ರಕಟಿಸಿತು. ಇದಕ್ಕೆ ಪುರಾವೆಯಾಗಿ ಸಾರ್ಸ್‌ ಸೆರೆ ಹಿಡಿದಿರುವ ಹಿಮದ ಚಿತ್ರಗಳನ್ನು ನಾಸಾ ಬಿಡುಗಡೆ ಮಾಡಿತು.


♦.* ಡಿ. 22: ವಿಶ್ವಕಪ್‌ ಕಬ್ಬಡಿ ಟೂರ್ನಿಯಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡ ಟ್ರೋಫಿಯನ್ನು ಗೆದ್ದಿತು. ಫೈನಲ್‌ ಪಂದ್ಯಗಳಲ್ಲಿ ಪುರುಷರ ತಂಡ ನ್ಯೂಜಿಲೆಂಡ್‌ ತಂಡವನ್ನು ಹಾಗೂ ಮಹಿಳಾ ತಂಡ ಪಾಕಿಸ್ತಾನ ತಂಡವನ್ನುಮಣಿಸಿತು.


♦.* ಡಿ. 23: ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಕೆ. ಬಾಲಚಂದರ್‌ ಹೃದಯಾಘಾತ ದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

(ಕೃಪೆ : ಪ್ರಜಾವಾಣಿ) 

Wednesday, 11 March 2015

☀ನವೆಂಬರ್ 2014 ತಿಂಗಳ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀ (Important Current Affairs of November 2014)

☀ನವೆಂಬರ್ 2014 ತಿಂಗಳ ಪ್ರಮುಖ ಪ್ರಚಲಿತ ವಿದ್ಯಮಾನಗಳು ☀
(Important Current Affairs of November 2014)


★ ನವೆಂಬರ್ 2014
(November 2014)

━━━━━━━━━━━━━━━━━━━━━━━━━━━━━━━━━━━━━━━━━━━━━


♦.* ನ.1: 1984 ರಲ್ಲಿ ಭೋಪಾಲ್‌ (ಮಧ್ಯಪ್ರದೇಶದ ರಾಜಧಾನಿ) ಅನಿಲ ದುರಂತಕ್ಕೆ ಕಾರಣವಾಗಿದ್ದ ಯೂನಿಯನ್‌ ಕಾರ್ಬೈಡ್‌ ಕಂಪೆನಿಯ ಮುಖ್ಯಸ್ಥರಾಗಿದ್ದ ವಾರನ್‌ ಆ್ಯಂಡರ್‌ಸನ್‌ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು. ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಅವರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದವು. ಭಾರತೀಯ ನ್ಯಾಯಾಲಯದಲ್ಲಿ ಆ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ.


♦.* ನ. 2: ವಿಶ್ವದ ಖ್ಯಾತ ಕ್ಲಾರಿಯೋನೆಟ್ ವಾದಕ ಅಕರ್‌ ಬಿಕ್‌ ಲಂಡನ್‌ನಲ್ಲಿ ನಿಧನರಾದರು. ಅವರ ‘ಜಾಜ್‌’ ಆಲ್ಬಂ ಭಾರೀ ಜನಪ್ರಿಯ ಪಡೆದಿತ್ತು.


♦.* ನ.3: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಜಪಾನ್‌ ದೇಶದ ಪ್ರತಿಷ್ಠಿತ ಗೌರವ ಪ್ರಶಸ್ತಿ ‘ದಿ ಗ್ರ್ಯಾಂಡ್‌ ಕಾರ್ಡನ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಪೌಲೊವಿನಾ ಫ್ಲವರ್‌–2014’(The Grand Cordon of the Order of the Paulownia Flowers 2014)ಗೆ ಆಯ್ಕೆಯಾಗಿದ್ದಾರೆ.


♦.* ನ. 4: ಭಾರತ ಮತ್ತು ಶ್ರೀಲಂಕಾ ದೇಶಗಳ ವಿಶೇಷ ಸೇನಾ ಪಡೆಗಳ ಜಂಟಿ ಸಮರ ಅಭ್ಯಾಸಕ್ಕೆ ಚಾಲನೆ ನೀಡಲಾಯಿತು. ಇದಕ್ಕೆ ‘ಮಿತ್ರ ಶಕ್ತಿ’ ಎಂದು ಹೆಸರಿಡಲಾಗಿದೆ. ಇದು ಮೂರು ವಾರ ನಡೆಯಲಿದೆ.


♦.* ನ 5: ರಾಜ್ಯದ ಹಂಪಿ ಸಮೀಪದಲ್ಲಿ ಹರಪ್ಪ ಕಾಲದ (ಸಿಂಧೂ ನಾಗರಿಕತೆ) ಚಿತ್ರಗಳು ಮತ್ತು ಲಿಪಿಗಳು (ಕಲ್ಲಿನ ಮೇಲೆ ಕೆತ್ತನೆ ಮಾಡಿರುವ) ಪತ್ತೆಯಾಗಿವೆ ಎಂದು ಇತಿಹಾಸ ಮತ್ತು ಪ್ರಾಕ್ತಾನಶಾಸ್ತ್ರ ಇಲಾಖೆಯ ಅಧಿಕಾರಿಗಳು ಪ್ರಕಟಿಸಿದರು.


♦.* ನ 6: ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರ ಆತ್ಮಕಥೆ ‘ಪ್ಲೇಯಿಂಗ್‌ ಇಟ್‌ ಮೈ ವೇ’ ಪುಸ್ತಕ ಅನಾವರಣಗೊಂಡಿತು. ಈ ಸಂದರ್ಭದಲ್ಲಿ ಸಚಿನ್‌ ಕುಟುಂಬದವರು ಮತ್ತು ಗೆಳೆಯರು ಉಪಸ್ಥಿತರಿದ್ದರು.


♦.* ನ, 07 : ಯೂರೋಪ್‌ ಮತ್ತು ಅಮೆರಿಕದ ಔಷಧಿ ವಿಜ್ಞಾನಿಗಳ ತಂಡ ಆ್ಯಂಟಿಬಯೊಟಿಕ್‌ ಔಷಧಿಗೆ ಪರ್ಯಾಯವಾಗಿ‘ ಸ್ಟಪೆಫ್‌’ ಎಂಬ ಔಷಧಿಯನ್ನು ಸಿದ್ಧಪಡಿಸಿರುವುದಾಗಿ ಪ್ರಕಟಿಸಿತು.


♦.* ನ 8: ಗೋವಾ ಮುಖ್ಯಮಂತ್ರಿ ಮನೋಹರ್‌ ಗೋಪಾಲಕೃಷ್ಣ ಪ್ರಭು ಪರಿಕ್ಕರ್‌ ರಾಜಿನಾಮೆ ನೀಡಿದರು. ಕೇಂದ್ರ ಸಚಿವ ಸಂಪುಟಕ್ಕೆ ಸೆರ್ಪಡೆಯಾಗಲಿರುವ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದರು.


♦.* ನ 9: ಕ್ರಿಕೆಟಿಗ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ ಆರು ಸಾವಿರ ರನ್‌ ಪೂರೈಸುವ ಮೂಲಕ ಹೊಸ ಇತಿಹಾಸ ಬರೆದರು. ವೆಸ್ಟ್‌ಇಂಡಿಸ್‌ನ ವಿವಿಯನ್‌ ರಿಚರ್ಡ್ಸ್‌ ದಾಖಲೆಯನ್ನು ಕೊಹ್ಲಿ ಮುರಿದರು.


♦.* ನ, 10: ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಮಾಡಿದರು. ಈ ಸಂದರ್ಭದಲ್ಲಿ 21 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.


♦.* ನ, 11: ಹಿಂದಿ ಕವಿ ಕೇದಾರನಾಥ್‌ ಸಿಂಗ್‌ ಅವರಿಗೆ 2013ನೇ ಸಾಲಿನ ‘ಜ್ಞಾನಪೀಠ ಪ್ರಶಸ್ತಿಯನ್ನು ಘೋಷಿಸಲಾಯಿತು. ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.


♦.* ನ, 12: ಕೇರಳ ರಾಜ್ಯ ಶೇ.100% ರಷ್ಟು ಬ್ಯಾಂಕ್‌ ಖಾತೆ ಹೊಂದಿರುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.


♦.* ನ, 13: ಕ್ರಿಕೆಟಿಗ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 264 ರನ್‌ ಗಳಿಸುವ ಮೂಲಕ ನೂತನ ದಾಖಲೆ ಬರೆದರು. ರೋಹಿತ್‌ ಶರ್ಮಾ ಎರಡು ಸಲ ದ್ವಿಶತಕ ಬಾರಿಸಿದ್ದಾರೆ.


♦.* ನ, 14: 2014ನೇ ಸಾಲಿನ ಗಾಂಧಿ ಫಿಲಾಸಫಿ ಮತ್ತು ಪಬ್ಲಿಕ್‌ ಸರ್ವಿಸ್‌ ಬ್ರಾಡ್‌ಕಾಸ್ಟಿಂಗ್‌ ಪ್ರಶಸ್ತಿಯನ್ನು ಜಮ್ಮು ಕಾಶ್ಮೀರ ರೇಡಿಯೋ ಪಡೆಯಿತು.


♦.* ನ, 15: ಅಲ್ಪಸಂಖ್ಯಾತ ಯುವಕರಿಗೆ ಕೌಶಲ ತರಬೇತಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮೌಲಾನಾ ಆಜಾದ್‌ ರಾಷ್ಟ್ರೀಯ ಕೌಶಲಾಭಿವೃದ್ಧಿ ಅಕಾಡೆಮಿಯನ್ನು ಪ್ರಾರಂಭಿಸುವುದಾಗಿ ಪ್ರಕಟಿಸಿತು.


♦.* ನ, 16: ಸೈನಾ ನೆಹ್ವಾಲ್‌ ಮತ್ತು ಕೆ. ಶ್ರೀಕಾಂತ್‌ ಅವರು ಕ್ರಮವಾಗಿ ಮಹಿಳೆ ಮತ್ತು ಪುರುಷರ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡರು.


♦.* ನ, 17: 2014ನೇ ಸಾಲಿನ ಜಿ–20 ಶೃಂಗಸಭೆಯು ಬ್ರಿಸ್‌ಬೇನ್‌ನಲ್ಲಿ ನಡೆಯಿತು. ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಸಂಸತ್‌ನಲ್ಲಿ ಮೋದಿ ಹಿಂದಿಯಲ್ಲಿ ಭಾಷಣ ಮಾಡಿದರು.


♦.* ನ, 18: ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಚರ್ಚ್‌ ಆಫ್‌ ಇಂಗ್ಲೆಂಡ್‌ ಸಂಪ್ರದಾಯವನ್ನು ಮುರಿದು ಮಹಿಳಾ ಬಿಷಪ್‌ ನೇಮಕ ಮಾಡಿತು. ಇದನ್ನು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನೂತನ ಕ್ರಾಂತಿ ಎಂದು ಬಣ್ಣಿಸಲಾಗಿದೆ.


♦.* ನ, 19: ಭಾರತೀಯ ಮೂಲದ ನೇಹಾ ಗುಪ್ತ ಅವರು 2014ನೇ ಸಾಲಿನ ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಗೆ ಆಯ್ಕೆಯಾದರು.


♦.* ನ, 20: ಭಾರತೀಯ ಮೂಲದ ಹೊಟೇಲ್‌ ಕಾವಲುಗಾರ ಕೊಟ್ಟರಪಟ್ಟು ಚಟ್ಟು ಅವರು ಶ್ರೀಲಂಕಾದಲ್ಲಿ ನಿಧನರಾದರು. ಅವರು ಗಾಂಧೀಜಿ, ಮೌಂಟ್‌ಬ್ಯಾಟನ್‌ ಅವರು ತಂಗಿದ್ದ ಕೋಣೆಗಳಿಗೆ ಕಾವಲುಗಾರನಾಗಿ ಕೆಲಸ ಮಾಡಿದ್ದರು.


♦.* ನ, 21: ಅಂತರರಾಷ್ಟ್ರೀಯ ಖ್ಯಾತಿಯ ಗಣಿತ ತಜ್ಞ ಅಲೆಕ್ಸಾಂಡರ್‌ ಗ್ರೋಂಥೆಡಿಕ್‌ ಅವರು ಫ್ರಾನ್ಸ್‌ನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.


♦.* ನ, 22: ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರು ಜನವರಿ 26ರಂದು ಗಣರಾಜ್ಯೋತ್ಸವ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ಅಧಿಕೃತವಾಗಿ ಪ್ರಕಟಿಸಿತು.


♦.* ನ, 23: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮುರುಳಿ ದೇವ್ರಾ ಮುಂಬೈನಲ್ಲಿ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.


♦.* ನ, 24: ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ದೀಪಕ್‌ ಗುಪ್ತ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.


♦.* ನ, 25: ಹಿರಿಯ ಕಥಕ್‌ ನೃತ್ಯಗಾರ್ತಿ ಸಿತಾರ ದೇವಿ ಮುಂಬೈನಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಪದ್ಮಭೂಷಣ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.


♦.* ನ, 28: ಲೋಕಸಭೆಯ ನೂತನ ಪ್ರಧಾನ ಕಾರ್ಯದರ್ಶಿಯನ್ನಾಗಿ ಅನೂಪ್‌ ಮಿಶ್ರಾಅವರನ್ನು ನೇಮಕ ಮಾಡಲಾಯಿತು. ಅವರು ಈ ಹಿಂದೆ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿದ್ದರು.


♦.* ನ, 30: ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರು ಚೀನಾ ಸರ್ಕಾರದ ಜೊತೆ ‘ಪಾಕ್‌–ಚೀನಾ ಆರ್ಥಿಕ ಕಾರಿಡಾರ್‌’ ಯೋಜನೆಗೆ ಸಹಿ ಹಾಕಿದರು. ಈ ಯೋಜನೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಒಳಗೊಂಡಿದೆ ಎಂದು ಷರೀಫ್‌ ಪ್ರಕಟಿಸಿದರು.

(ಕೃಪೆ: ಪ್ರಜಾವಾಣಿ)