"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label Suez Canal. Show all posts
Showing posts with label Suez Canal. Show all posts

Monday, 23 March 2015

☀ಸೂಯೆಜ್ ಕಾಲುವೆಯ ಇತಿಹಾಸ:  (History of Suez Canal)

☀ಸೂಯೆಜ್ ಕಾಲುವೆಯ ಇತಿಹಾಸ:
(History of Suez Canal)

━━━━━━━━━━━━━━━━━━━━━━━━━━━━━━━━━━━━━━━━━━━━━

★ ಪ್ರಪಂಚದ ಇತಿಹಾಸ
(World History)


●.ಕಳೆದ ಶತಮಾನದಲ್ಲಿ ಯುರೋಪಿನ ಮೆಡಿಟರೇನಿಯನ್ ಸಾಗರ ತೀರದ ದೇಶಗಳಿಂದ ಪೂರ್ವದ ಹಿಂದೂ ಮಹಾಸಾಗರ ತೀರದ ದೇಶಗಳಿಗೆ ಸಿದ್ದ ಸರಕುಗಳನ್ನು ಒಯ್ಯುತ್ತಿದ್ದ, ಅಲ್ಲಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಡಗುಗಳು ಆಫ್ರಿಕಾದ ತುದಿಯಲ್ಲಿರುವ ಗುಡ್ಹೋಪ್ ಭೂಶಿರವನ್ನು ಬಳಸಿಕೊಂಡು ಹೋಗಬೇಕಾಗುತ್ತಿತ್ತು.

●.ಹಾಗಾಗಿ ಸಾರಿಗೆ, ಸರಕು ಸಾಗಾಟ ತಿಂಗಳುಗಟ್ಟಲೆ ವಿಳಂಬವಾಗುತ್ತಿತ್ತು.ಈ ವಿಳಂಬವನ್ನು ಸಾಕಷ್ಟು ಕಡಿಮೆ ಮಾಡುವ ಉದ್ದೇಶದಿಂದ ಹುಟ್ಟಿಕೊಂಡದ್ದು, ಸಾಗರದ ಡೊಂಕು ತಿದ್ದುವ ಸೂಯೆಜ್ ಕಾಲುವೆಯೋಜನೆ.

●.ಆಗಿನ ಈಜಿಪ್ಟ್ ಇಂಥ ಬೃಹತ್ ಯೋಜನೆಯನ್ನು ನೆರವೇರಿಸುವಷ್ಟು ಬಲವಾಗಿರಲಿಲ್ಲ. ಅದಕ್ಕೆಂದೇ ’ಆಗ್ಲೋ-ಫೆಂಚ್ ಮಾರಿ ಟೈಮ್ ಕೆನಾಲ್ ಕಂಪೆನಿ’ಹುಟ್ಟಿಕೊಂಡಿತು.

●.ಉತ್ತರದಲ್ಲಿ ಮೆಡಿಟರೇನಿಯನ್ ಇಂದ ದಕ್ಷಿಣದಲ್ಲಿ ಕೆಂಪು ಸಮುದ್ರದೊಂದಿಗೆ ಸಂಪರ್ಕ ಕಲ್ಪಿಸುವ ಈ ಕಾಲುವೆ 173 ಕಿ.ಮೀ. ಅಷ್ಟು ಉದ್ದವಾಗಿದೆ.

●.ಈಜಿಪ್ಟಿನ ಉಗ್ರ ಬಿಸಿಲಿನ, ಮರಳುಗಾಡಿನ, ಅಲ್ಲಲ್ಲಿ ಗಸಿಮಣ್ಣಿನ, ನೊರಜುಗಲ್ಲಿನ ಪ್ರದೇಶಗಳ ಮೇಲೆ, ಮಾರ್ಗದಲ್ಲಿ ಹಲವು ಸರೋವರಗಳ ಮೂಲಕ ಕಾಲುವೆ ಹಾದುಹೋಗುತ್ತದೆ.

●.ಉತ್ತರದ ತುದಿಯಲ್ಲಿ ಸೈಯದ್ ಬಂದರು, ದಕ್ಷಿಣದ ತುದಿಯಲ್ಲಿ ಸೂಯೆಜ್ ಬಂದರುಗಳಿವೆ. ಕಾಲುವೆ ನಿರ್ಮಾಣದ ನಂತರ ಹಲವು ಹೊಸ ಊರುಗಳು ಹುಟ್ಟಿಕೊಂಡಿವೆ.

●.ಫ್ರೆಂಚ್ ಎಂಜಿನಿಯರ್ ಫರ್ಡಿನ್ಯಾಂಡ್ ಡಿ ಲೆಸೆಪ್ಸ್ ನೇತೃತ್ವದಲ್ಲಿ ಕಾಲುವೆ ನಿರ್ಮಾಣಗೊಂಡಿತು. ಬಲಾತ್ಕಾರದ ದುಡಿಮೆಗೆ ನೂಕಲ್ಪಟ್ಟ ಸಾವಿರಾರು ಬಡ ಕೂಲಿಯಾಳುಗಳು, ಕೈದಿಗಳು, ಬ್ರಿಟನಿನ ಹಾಗೂ ಫ್ರಾನ್ಸಿನ ತಂತ್ರಜ್ಞರು ನಿರ್ಮಾಣದಲ್ಲಿ ಭಾಗವಹಿಸಿದ್ದರು.

●.ಕೆಂಪು ಸಮುದ್ರದ ಮಟ್ಟ ಮೆಡಿಟರೇನಿಯನ್ ಸಾಗರದ ಮಟ್ಟಕ್ಕಿಂತ 30 ಅಡಿಗಳಷ್ಟು ಎತ್ತರದಲ್ಲಿರುವುದು ಎಂದು ತಿಳಿದಾಗ, ನೀರಿನ ಮಟ್ಟ ಬದಲಾವಣೆಯ ಕಟ್ಟೆಗಳನ್ನು ನಿರ್ಮಿಸಲಾಯಿತು.

●.ಪ್ರಾರಂಭದಲ್ಲಿ ಕಾಲುವೆ 8 ಮೀ. ಆಳ, 22 ಮೀ. ಅಗಲವಾಗಿತ್ತು. ಮುಂದೆ ಕಾಲುವೆಯಲ್ಲಿ ಭಾರಿ ಟ್ಯಾಂಕರ್ ಹಡಗುಗಳೂ ಸಂಚರಿಸುವಂತೆ ಆಳ, ಅಗಲಗಳನ್ನು ಹೆಚ್ಚಿಸಲಾಯಿತು.

●.1869ರಲ್ಲಿ ಕಾಲುವೆಯ ಉದ್ಘಾಟನೆಗಾಗಿ ಹಡಗು ಸಂಚಾರಕ್ಕೆ ತೆರೆಯಲಾಯಿತು. ಸೂಯೆಜ್ ಕಾಲುವೆಯ ನಿರ್ಮಾಣದಿಂದಾಗಿ ಹಡಗುಗಳ ಸಂಚಾರ ಮಾರ್ಗದಲ್ಲಿ ಸುಮಾರು 11,000 ಕಿ.ಮೀ., ಅಷ್ಟು ಕಡಿತವಾಯಿತು.

●.ಕಳೆದ ಶತಮಾನದ ಈ ಮನುಷ್ಯ ಪ್ರಯತ್ನ ಸಾಧಾರಣವಾದುದೇನಲ್ಲ. ಇದರಿಂದ ಭಾರತದಂಥ ದೊಡ್ಡ ದೇಶವನ್ನು ವಸಾಹತಾಗಿ ಮಾಡಿಕೊಂಡಿದ್ದ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಹೆಚ್ಚು ಪ್ರಯೋಜನವಾಯಿತು.

●.1950ರ ದಶಕದಲ್ಲಿ ಅಧ್ಯಕ್ಷ ಗಮಾಲ್ ಅಬ್ದುಲ್ ನಾಸೆರ್ ಸೂಯೆಜ್ ಕಾಲುವೆಯನ್ನು ರಾಷ್ಟ್ರೀಕರಣಗೊಳಿಸಿದಾಗ ಭಾರಿ ಕೋಲಾಹಲವುಂಟಾಯಿತು. ಆದರೆ ಸ್ವಲ್ಪ ಸಮಯದಲ್ಲಿಯೇ ಪರಿಸ್ಥಿತಿ ಹತೋಟಿಗೆ ಬಂದಿತು.

(ಕೃಪೆ: ಅನವರತ)

☀`ಸೂಯೆಜ್' ಕಾಲುವೆ ಮತ್ತು ಅದರ ಮಹತ್ವ (Suez Canal and it's Importance) 

☀`ಸೂಯೆಜ್' ಕಾಲುವೆ ಮತ್ತು ಅದರ ಮಹತ್ವ
(Suez Canal and it's Importance)

━━━━━━━━━━━━━━━━━━━━━━━━━━━━━━━━━━━━━━━━━━━━━
★ ಪ್ರಪಂಚದ ಭೂಗೋಳ
(World Geography)


●.ಸೂಯೆಜ್ ಕಾಲುವೆ ಎಂದರೇನು?
••>> ಈಜಿಪ್ಟ್‌ನ ಪೋರ್ಟ್ ಸೆಡ್ ಹಾಗೂ ಸೂಯೆಜ್ ನಗರಗಳ ನಡುವಿನ ಭಾಗವೇ ಸೂಯೆಜ್ ಕಾಲುವೆ.

●.ಅದರ ಉದ್ದವೆಷ್ಟು?
••>> 160 ಕಿ.ಮೀ.ನಷ್ಟು ಉದ್ದವಿರುವ ಸೂಯೆಜ್ ಕಾಲುವೆಯು ಮೆಡಿಟರೇನಿಯನ್ ಸಮುದ್ರ ಹಾಗೂ ಕೆಂಪು ಸಮುದ್ರವನ್ನು ಸೇರಿಸುತ್ತದೆ.

●.ಕಾಲುವೆಯನ್ನು ನಿರ್ಮಿಸಿದ್ದು ಯಾವಾಗ?
••>> ಫ್ರೆಂಚ್ ಎಂಜಿನಿಯರ್ ಫರ್ಡಿನಾಂಡ್ ಡಿಲೆಸೆಪ್ಸ್ ನೇತೃತ್ವದಲ್ಲಿ ಯೋಜಿತಗೊಂಡ ಕಾಲುವೆಯ ಕಾಮಗಾರಿಯು ಆಗಸ್ಟ್ 16, 1869ರಂದು ಮುಗಿಯಿತು.

●.ಈ ಕಾಲುವೆಯ ಪ್ರಾಮುಖ್ಯವೇನು?
••>> ಯೂರೋಪ್ ಹಾಗೂ ಏಷ್ಯಾ ನಡುವೆ ಇದು ಸಂಪರ್ಕ ಕಲ್ಪಿಸಿತು. ಎರಡೂ ಖಂಡಗಳ ನಡುವಿನ ಪ್ರಯಾಣದ ದೂರ ಸಾಕಷ್ಟು ಕಡಿಮೆಯಾದಂತಾಯಿತು.
ಈ ಕಾಲುವೆ ನಿರ್ಮಾಣಕ್ಕೆ ಮೊದಲು ಯೂರೋಪ್‌ನಿಂದ ಹಡಗುಗಳು ಆಫ್ರಿಕಾ ಬಳಸಿಕೊಂಡು ಏಷ್ಯಾ ತಲುಪಬೇಕಿತ್ತು.

●.1967ರ ನಂತರ ಕೆಲವು ವರ್ಷ ಸೂಯೆಜ್ ಕಾಲುವೆಯಲ್ಲಿ ಪ್ರಯಾಣ ನಿಷೇಧಿಸಿದ್ದು ಯಾಕೆ?
••>> 1967ರಲ್ಲಿ ಅರಬ್-ಇಸ್ರೇಲ್ ಯುದ್ಧದ ನಂತರ ಅಲ್ಲಿ ಹಡಗುಗಳ ಪ್ರಯಾಣವನ್ನು ನಿಷೇಧಿಸಲಾಯಿತು.
ಯುದ್ಧದ ಸಂದರ್ಭದಲ್ಲಿ ಅದರಲ್ಲಿ ಹಡಗುಗಳು ಮುಳುಗಿದ್ದವು. ಅಲ್ಲದೆ ಅಲ್ಲಿ ಅಪಾರ ಪ್ರಮಾಣದ ಅದಿರು ಇತ್ತು.
1975ರಲ್ಲಿ ಈಜಿಪ್ಟ್ ಸೂಯೆಜ್ ಕಾಲುವೆಯನ್ನು ಪ್ರಯಾಣಕ್ಕೆ ಮತ್ತೆ ಮುಕ್ತಗೊಳಿಸಿತು.

(ಕೃಪೆ: ಪ್ರಜಾವಾಣಿ)