"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್
Showing posts with label Karnataka geography. Show all posts
Showing posts with label Karnataka geography. Show all posts

Tuesday, 31 March 2015

☀Unit 2.—ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು: (Karnataka state physical, geographical Features) 

☀Unit 2.—ಕರ್ನಾಟಕ ರಾಜ್ಯದ ಭೂ ಭೌತ ಲಕ್ಷಣಗಳು:
(Karnataka state physical, geographical Features)

━━━━━━━━━━━━━━━━━━━━━━━━━━━━━━━━━━━━━━━━━━━━━

(ಕರ್ನಾಟಕ ಪ್ರಾಕೃತಿಕ ಭೂಗೋಳ)
(Karnataka physical Geography)


●.ಭಾರತ ಒಕ್ಕೂಟದ ಎರಡು ಬೃಹತ್ ಪ್ರಾಂತ್ಯಗಳ ಭಾಗವಾಗಿ ಕರ್ನಾಟಕ ರಾಜ್ಯದ ಭೂಭೌತಲಕ್ಷಣಗಳು ಕಂಡುಬರುತ್ತವೆ. ಆ ಎರಡು ಲಕ್ಷಣಗಳೆಂದರ ದಕ್ಷಿಣ ಪ್ರಸ್ಥಭೂಮಿ ಮತ್ತು ಕಡಲತೀರದ ಬಯಲು ಹಾಗೂ ದ್ವೀಪಗಳು.

●.ರಾಜ್ಯದಲ್ಲಿ ಪ್ರಮುಖವಾದ ನಾಲ್ಕು ಭೂಭೌತಲಕ್ಷಣಗಳನ್ನು ಕಾಣಬಹುದು.
1. ಉತ್ತರ ಕರ್ನಾಟಕ ಪ್ರಸ್ಥಭೂಮಿ.(North Karnataka plateau)
2. ಮಧ್ಯಕರ್ನಾಟಕ ಪ್ರಸ್ಥಭೂಮಿ.(Midst karnataka plateau)
3. ದಕ್ಷಿಣ ಕರ್ನಾಟಕ ಪ್ರಸ್ಥಭೂಮಿ.(Southern Karnataka Plateau)
4. ಕರ್ನಾಟಕದ ಕರಾವಳಿ ಪ್ರದೇಶ. (Karnataka coastal region)


1. ಉತ್ತರ ಕರ್ನಾಟಕ ಪ್ರಸ್ಥಭೂಮಿ:
(North Karnataka plateau)

✧.ಉತ್ತರ ಕರ್ನಾಟಕ ಪ್ರಸ್ಥಭೂಮಿಯು ಬೆಳಗಾವಿ, ಬೀದರ್, ಬಿಜಾಪುರ, ಬಾಗಲಕೋಟೆ ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿದೆ.
✧.ಇದು ಬಹುತೇಕ ದಖನ್ ಪ್ರಸ್ಥಭೂಮಿಯಿಂದಾಗಿದೆ.
✧.ಈ ಪ್ರಸ್ಥಭೂಮಿಯಲ್ಲಿ ಏಕತಾನತೆ ತರುವ ವೃಕ್ಷರಹಿತ ದೃಶ್ಯಾವಳಿ ಎದ್ದುಕಾಣುತ್ತದೆ.
✧.ಸರಾಸರಿ ಸಮುದ್ರ ಮಟ್ಟದಿಂದ ಸಾಮಾನ್ಯವಾಗಿ 300 ರಿಂದ 600 ಮೀಟರ್ ಎತ್ತರವಿದೆ. ಆದಾಗ್ಯೂ ಕೃಷ್ಣಾ, ಭೀಮಾ, ಘಟಪ್ರಭಾ, ಮಲಪ್ರಭಾ ನದಿಗಳ ಬಯಲು, ಅವುಗಳ ಮಧ್ಯೆ ಅಲ್ಲಲ್ಲೇ ಕಾಣಿಸುವ ಜಲಾನಯನ ಪ್ರದೇಶಗಳು, ಮೆಟ್ಟಿಲಿನಾಕಾರದ ದೃಶ್ಯಾವಳಿ, ಲ್ಯಾಟರೈಟ್‍ನಿಂದಾದ ಕಡಿದಾದ ಭಾಗಗಳು, ಶೇಷ ಗುಡ್ಡಗಳು ಮತ್ತು ಏಣುಗಳಿಂದಾಗಿ ವಿಶಾಲವಾದ ಪ್ರಸ್ಥಾಭೂಮಿಯ ಏಕತಾನತೆ ಭಂಗವಾಗುತ್ತದೆ.
✧.ಪೂರ್ವದೆಡೆಗೆ ಪ್ರಸ್ಥಭೂಮಿಯ ಸಾಮಾನ್ಯ ಇಳಿಜಾರಿದೆ. ಈ ಪ್ರಾಂತ್ಯದ ಬಲುಪಾಲು ಕಪ್ಪು ಹತ್ತಿ ಮಣ್ಣಿನಿಂದ ಆವೃತವಾಗಿವೆ.

(ಕೃಪೆ: ಕರ್ನಾಟಕ ಕೈಪಿಡಿ)

...ಮುಂದುವರೆಯುವುದು.

Sunday, 15 February 2015

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅵ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅵ

 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')


♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅵ.


Ⅶ.ಕಾವೇರಿ ನದಿ ಏರ್ಪಾಟು:

✧.ಕಾವೇರಿ ನದಿಯು ದಕ್ಷಿಣ ಭಾರತದ ಅಂತರಾಜ್ಯಗಳ ನದಿಯಾಗಿದೆ. ಮುನ್ನೀರು ಭಾರತದ ಪೂರ್ವದ ಕಡೆಗೆ ಹರಿಯುವ ಈ ನದಿಯು ಬಂಗಾಳ ಕೊಲ್ಲಿ (ಕಡಲನ್ನು) ಸೇರುತ್ತದೆ.

✧.ಕೊಡಗಿನ ಕಾವೇರಿ ಎಂದೇ ಹೆಸರಾಗಿರುವ ಈ ನದಿಯು ಕೊಡಗಿನ ಬ್ರಹ್ಮಗಿರಿ ಬೆಟ್ಟದ ತಲಕಾವೇರಿಯಲ್ಲಿ ಸುಮಾರು 1341 ಮೀ. ಕಡಲ ಮಟ್ಟದಲ್ಲಿ ಹುಟ್ಟುತ್ತದೆ.

✧.ಕಾವೇರಿ ನದಿಯ ಒಟ್ಟು ಆಯಕಟ್ಟು 81,155 ಚದರ ಕಿ. ಮೀ.

✧.ಕಾವೇರಿ ನದಿ ಏರ್ಪಾಟಿನ ಇತರ ರಾಜ್ಯಗಳಲ್ಲಿ ಹರಡಿರುವ ಜಲಾನಯನ ಪ್ರದೇಶ ಮತ್ತು ಅದರ ಕಾಲುವೆ ವ್ಯವಸ್ತೆಯನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


★.ಜಲಾನಯನ (basin)ಇರುವ ರಾಜ್ಯ & ಆಯಕಟ್ಟು (catchment area ):

1ಕರ್ನಾಟಕ —  34,273 ಚದರ ಕಿ. ಮೀ

2ಕೇರಳ —   2,866 ಚದರ ಕಿ. ಮೀ

3ತಮಿಳು ನಾಡು—   43,868 ಚದರ ಕಿ. ಮೀ

4ಪಾಂಡಿಚರಿಯ ಕಾರೈಕಲ್ —   148 ಚದರ ಕಿ. ಮೀ

✧.ಒಟ್ಟು 81,155 ಚದರ ಕಿ. ಮೀ


✧.ಹಾರಂಗಿ, ಲಕ್ಶ್ಮಣ ತೀರ್ಥ, ಕಬಿನಿ, ಶಿಮ್ಶ, ಅರ್ಕಾವತಿ ಮತ್ತು ಸುವರ್ಣವತಿ ಇವೆಲ್ಲ ಕಾವೇರಿ ನದಿಯ ಬಹು ಮುಖ್ಯವಾದ ಉಪನದಿಗಳು.

✧.ಇವುಗಳಲ್ಲಿ ಕಬನಿ, ಅರ್ಕಾವತಿ ಮತ್ತು ಸುವರ್ಣವತಿ ನದಿಗಳು ಹೊರತಾಗಿ ಮಿಕ್ಕೆಲ್ಲ ನದಿಗಳು ನಮ್ಮ ಕರ್ನಾಟಕದಲ್ಲೆ ಹುಟ್ಟಿ, ಕರ್ನಾಟಕದಲ್ಲೆ ಹರಿಯುತ್ತವೆ.

—ಈ ನದಿಗಳ ಅಡಕವನ್ನು ಕೆಳಗಿನ ಪಟ್ಟಿಯಲ್ಲಿ ಕಾಣಬಹುದು.


✧.ಕಾವೇರಿ ನದಿಯ ಉಪನದಿಗಳು (tributary)

1ಹಾರಂಗಿ

●.ಆಯಕಟ್ಟು (catchment area):— 717 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟದ ಪುಶ್ಪಗಿರಿ ಬೆಟ್ಟ

●.ಮೂಲದ ಎತ್ತರ:—1067 ಮೀ,

●.ನದಿಯ ಉದ್ದ:—50 ಕಿ. ಮೀ.

●.ರಾಜ್ಯ :— ಕರ್ನಾಟಕ


2.ಹೇಮಾವತಿ

●.ಆಯಕಟ್ಟು (catchment area):— 5410 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟದ ಬಳ್ಳರಾಯನ ದುರ್ಗ,

●.ಮೂಲದ ಎತ್ತರ:—1219 ಮೀ,

●.ನದಿಯ ಉದ್ದ:— 245 ಕಿ. ಮೀ

●.ರಾಜ್ಯ :— ಕರ್ನಾಟಕ


3.ಕಬಿನಿ

●.ಆಯಕಟ್ಟು (catchment area):— 7040 ಚದರ ಕಿ.ಮೀ.

●.ನದಿಯ ಮೂಲ:—ಕೇರಳದ ಪಶ್ಚಿಮ ಘಟ್ಟ್ಟ,

●.ಮೂಲದ ಎತ್ತರ:—2,140 ಮೀ,

●.ನದಿಯ ಉದ್ದ:— 230 ಕಿ. ಮೀ.

●.ಒಳ –ಉಪನದಿಗಳು (sub-tributary):— ತರಕ, ಹೆಬ್ಬಳ್ಳ , ನುಗು, ಗುಂಡಲ್

●.ರಾಜ್ಯಗಳು :— ಕರ್ನಾಟಕ, ಕೇರಳ ಮತ್ತು ತಮಿಳು ನಾಡು


4.ಸುವರ್ಣವತಿ

●.ಆಯಕಟ್ಟು (catchment area):— 1787 ಚದರ ಕಿ.ಮೀ.

●.ನದಿಯ ಮೂಲ:—ನಸ್ರೂರ್ ಘಟ್ಟ್ಟದ ಸಾಲು,

●.ನದಿಯ ಉದ್ದ:— 88 ಕಿ. ಮೀ.

●.ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು


5.ಲಕ್ಶ್ಮಣ ತೀರ್ಥ

●.ಆಯಕಟ್ಟು (catchment area):— 1690 ಚದರ ಕಿ.ಮೀ.

●.ನದಿಯ ಮೂಲ:— ಪಶ್ಚಿಮ ಘಟ್ಟ್ಟ,

●.ಮೂಲದ ಎತ್ತರ:—1,950 ಮೀ,

●.ನದಿಯ ಉದ್ದ:— 131 ಕಿ. ಮೀ.

●.ಒಳ –ಉಪನದಿಗಳು (sub-tributary):— ರಾಮತೀರ್ಥ,

●.ರಾಜ್ಯಗಳು :— ಕರ್ನಾಟಕ.


6.ಶಿಂಷಾ

●.ಆಯಕಟ್ಟು (catchment area):— 8469 ಚದರ ಕಿ.ಮೀ.

●.ನದಿಯ ಮೂಲ:— ತುಮುಕೂರು ಜಿಲ್ಲೆ,

●.ಮೂಲದ ಎತ್ತರ:—914 ಮೀ,

●.ನದಿಯ ಉದ್ದ:— 221 ಕಿ. ಮೀ.

●.ಒಳ –ಉಪನದಿಗಳು (sub-tributary):— ವೀರ ವೈಶ್ನವಿ, ಕಣಿಹಳ್ಳ, ಚಿಕ್ಕೊಳೆ, ಹೆಬ್ಬಹಳ್ಳ, ಮುಲ್ಲಹಳ್ಳ ಮತ್ತು ಕಣ್ವ

●.ರಾಜ್ಯಗಳು :— ಕರ್ನಾಟಕ.


7.ಅರ್ಕಾವತಿ

●.ಆಯಕಟ್ಟು (catchment area):— 4351ಚದರ ಕಿ.ಮೀ.

●.ನದಿಯ ಮೂಲ:— ನಂದಿದುರ್ಗ,

●.ಮೂಲದ ಎತ್ತರ:—1,480 ಮೀ,

●.ನದಿಯ ಉದ್ದ:— 161 ಕಿ. ಮೀ

●.ಒಳ –ಉಪನದಿಗಳು (sub-tributary):— ಕುಮುದಾವತಿ , ಮಣಿಹಳ್ಳ,ಕುಟ್ಟೆಹೊಳೆ, ವೃಷಭಾವತಿ

●.ರಾಜ್ಯಗಳು :— ಕರ್ನಾಟಕ ಮತ್ತು ತಮಿಳು ನಾಡು.


☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅲ  'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು' ('The River System of the Karnataka, The Major Rivers Flowing In Karnataka')

☀.' ಕರ್ನಾಟಕದ ನದಿ ವ್ಯವಸ್ಥೆ',—ಭಾಗ: Ⅲ

 'ಕರ್ನಾಟಕದಲ್ಲಿ ಹರಿಯುವ ಪ್ರಮುಖ ನದಿಗಳು'
('The River System of the Karnataka, The Major Rivers Flowing In Karnataka')

♦. ಕರ್ನಾಟಕದ ಭೂಗೋಳ

━━━━━━━━━━━━━━━━━━━━━━━━━━━━━━━━━━━━━━━━━━━━━

...ಮುಂದುವರೆದ ಭಾಗ Ⅲ.



Ⅵ.ಕೃಷ್ಣಾ ನದಿ ಏರ್ಪಾಟು :

✧.ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ 1337 ಮೀ. ಎತ್ತರದ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಈ ನದಿಯ ಪ್ರಸ್ಥಭೂಮಿಯು (peninsula) ಭಾರತದ ಎರಡನೆ ದೊಡ್ಡ ನದಿಯಾಗಿದೆ.

✧.ಪಶ್ಚಿಮದಿಂದ ದಕ್ಷಿಣಕ್ಕೆ ಹರಿಯುವ ಕೃಷ್ಣಾ ನದಿಯು 1400 ಕಿ. ಮೀ ಉದ್ದ (length) ಮಹಾರಾಷ್ಟ್ರ, ಕರ್ನಾಟಕ, ಆಂದ್ರಪ್ರದೇಶವನ್ನು ಹಾದು ಹೊಗುತ್ತದೆ.

✧.ಬೇರೆ ರಾಜ್ಯಗಳು ಕೂಡಿ ಈ ನದಿಯ ಒಟ್ಟು ಆಯಕಟ್ಟು ( catchment area) 2,58,948 ಚದರ ಕಿ. ಮೀ.


★.ಜಲಾನಯನ (basin)ಇರುವ ರಾಜ್ಯ & ಆಯಕಟ್ಟು (catchment area )

1ಮಹಾರಾಷ್ಟ್ರ—  69,425 ಚದರ ಕಿ. ಮೀ

2ಕರ್ನಾಟಕ—  113,271 ಚದರ ಕಿ. ಮೀ

3ಆಂದ್ರಪ್ರದೇಶ—  76,252 ಚದರ ಕಿ. ಮೀ

ಒಟ್ಟು—  2,58,948 ಚದರ ಕಿ. ಮೀ


✧.ಕರ್ನಾಟಕದಲ್ಲಿ ಕೃಷ್ಣಾ ನದಿಯ ಬಹು ಮುಖ್ಯ ಸೀಳುನದಿಗಳೆಂದರೆ ಘಟಪ್ರಭಾ, ಮಲಪ್ರಭಾ, ಭೀಮಾ ಮತ್ತು ತುಂಗಭದ್ರಾ.
ಇವುಗಳಲ್ಲಿ ಮಲಪ್ರಭಾ ನದಿಯು ಮಾತ್ರ ಮಹಾರಾಷ್ಟ್ರ ಮತ್ತು ಕರ್ನಾಟಕ ಎರಡು ರಾಜ್ಯಗಳಲ್ಲೂ ತನ್ನ ಆಯಕಟ್ಟನ್ನು ಹೊಂದಿದೆ.


✧.ಉಪನದಿಗಳು ಅಥವಾ ಸೀಳುನದಿಗಳ ಒಂದು ಇಣುಕುನೋಟ ಕೆಳಗಿನ ಪಟ್ಟಿಯಲ್ಲಿದೆ.


1.ಘಟಪ್ರಭಾ

●.ಆಯಕಟ್ಟು (catchment area):— 8829 ಚದರ ಕಿ.ಮೀ.

●.ನದಿಯ ಮೂಲ;—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—884 ಮೀ,

●.ನದಿಯ ಉದ್ದ:—283 ಕಿ.ಮೀ

●.ಒಳ –ಉಪನದಿಗಳು (sub-tributary):— ಹಿರಣ್ಯಕೇಶಿ, ಮಾರ‍ಖಂಡೇಯ

●.ರಾಜ್ಯ:—ಮಹಾರಾಷ್ಟ್ರ, ಕರ್ನಾಟಕ


2.ಮಲಪ್ರಭಾ

●.ಆಯಕಟ್ಟು (catchment area):— 11549 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—792.48 ಮೀ,

●.ನದಿಯ ಉದ್ದ:—306 ಕಿ.ಮೀ

●.ಒಳ –ಉಪನದಿಗಳು (sub-tributary):— ಬೆಣ್ಣಿಹಳ್ಳ, ಹಿರೇಹಳ್ಳ, ಟಸ್ ನದಿ

●.ರಾಜ್ಯ:—ಕರ್ನಾಟಕ.


3.ಭೀಮಾ

●.ಆಯಕಟ್ಟು (catchment area):— 70,614 ಚದರ ಕಿ.ಮೀ.

●.ನದಿಯ ಮೂಲ:—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—945 ಮೀ,

●.ನದಿಯ ಉದ್ದ:—861 ಕಿ.ಮೀ.

●.ಒಳ –ಉಪನದಿಗಳು (sub-tributary):— ಮುತ ಗೊಡ್, ನಿರ, ಸಿನ ನದಿಗಳ ಕೂಡುಹೊಳೆ ನೀರು

●.ರಾಜ್ಯಗಳು :—ಮಹಾರಾಷ್ಟ್ರ ಕರ್ನಾಟಕ


4.ತುಂಗಭದ್ರಾ

●.ಆಯಕಟ್ಟು (catchment area):— 47,866 ಚ.ಕಿ.ಮಿ

●.ನದಿಯ ಮೂಲ:—ಗಂಗ ಮೂಲದ ತುಂಗ & ಭದ್ರ, ವರದಾ, ಹಗರಿ (ವೇದಾವತಿ) ನದಿಗಳ ಕೂಡುಹೊಳೆ ನೀರು.

●.ಮೂಲ:—ಪಶ್ಚಿಮ ಘಟ್ಟ,

●.ಮೂಲದ ಎತ್ತರ:—1198 ಮೀ,

●.ನದಿಯ ಉದ್ದ:—531 ಕಿ.ಮೀ

●.ರಾಜ್ಯಗಳು :— ಕರ್ನಾಟಕ & ಆಂದ್ರಪ್ರದೇಶ.


...ಮುಂದುವರೆಯುವುದು