•► ಕೋವಾಕ್ಸಿನ್ :
( Covaxin)
━━━━━━━━━
★ ಸಾಮಾನ್ಯ ವಿಜ್ಞಾನ
(General Science)
- ಇಡೀ ಜಗತ್ತನ್ನು ಆವರಿಸಿರುವ, ಕೊರೊನಾ ವೈರಸ್‌ಗೆ ನೀಡಲಾಗುವ ಲಸಿಕೆ - ಕೋವಾಕ್ಸಿನ್.
ಇದು ಭಾರತದ ಮೊದಲ ದೇಶಿಯ, ಇನ್ನಷ್ಟೇ ಪ್ರಯೋಗವಾಗಬೇಕಾದ ಸಂಭಾವ್ಯ ಲಸಿಕೆಯಾಗಿದೆ. ವಿಸ್‌ಕಾನ್ಸಿನ್ ವಿಶ್ವವಿದ್ಯಾಲಯ, ಐಸಿಎಂಆರ್ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಇದರ ಪ್ರಯೋಗಕ್ಕೆ ಡಿಸಿಜಿಐನ ಅನುಮೋದನೆ ದೊರಕಿದೆ.
— ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಇದರ ತಯಾರಕ ಸಂಸ್ಥೆ.
- ಇತ್ತೀಚೆಗಷ್ಟೇ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆ 'ಕೋವಾಕ್ಸಿನ್' ಕ್ಲಿನಿಕಲ್ ಟ್ರಯಲ್‌ಗೆ ಅನುಮತಿ ನೀಡಲಾಗಿದೆ. ಕೋವಾಕ್ಸಿನ್ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಮೊದಲ ಕೋವಿಡ್–19 ಲಸಿಕೆಯಾಗಿದೆ.
• ಅಭಿವೃದ್ಧಿಪಡಿಸಿದ್ದು ಎಲ್ಲಿ?
━━━━━━━━━━━━
ದೇಶಿಯ ಮತ್ತು ಇನ್ನಷ್ಟೇ ಪ್ರಯೋಗಗೊಳ್ಳಬೇಕಾದ ಕೋವಾಕ್ಸಿನ್ ಅನ್ನು ಹೈದರಾಬಾದ್‌ನ ಭಾರತ್ ಬಯೋಟೆಕ್ಸ್ ಬಿಎಸ್ಎಲ್ -3 (ಬಯೋ-ಸೇಫ್ಟಿ ಲೆವೆಲ್ 3)ನ ‘ಜಿನೋಮ್ ವ್ಯಾಲಿ’ಯಲ್ಲಿ ಅಭಿವೃದ್ಧಪಡಿಸಲಾಗಿದೆ. ಬಿಎಸ್‌ಎಲ್–3 ಎಂದರೆ, ವೈರಸ್‌ಗಳನ್ನು ನಿಗ್ರಹಿಸಲಾದ ಮೂರನೇ ಹಂತದ ಜೈವಿಕ ಸುರಕ್ಷತಾ ತಾಣ. ಪುಣೆಯ ಎನ್‌ಐವಿಯಲ್ಲಿ SARSCoV2 ತಳಿಯನ್ನು ಪ್ರತ್ಯೇಕಿಸಿ ಭಾರತ್ ಬಯೋಟೆಕ್‌ಗೆ ವರ್ಗಾಯಿಸಲಾಗಿದೆ.
ಈ ಲಸಿಕೆಯ ವೈದ್ಯಕೀಯ ಅಧ್ಯಯನ ಪೂರ್ವ ಫಲಿತಾಂಶಗಳು ಮತ್ತು ಸುರಕ್ಷತೆ–ರೋಗ ಪ್ರತಿರೋಧಕ ಪ್ರತಿಕ್ರಿಯೆಗಳ ವರದಿಯನ್ನು ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಡಿಸಿಜಿಐಗೆ ಸಲ್ಲಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಹ್ಯೂಮನ್ ಕ್ಲಿನಿಕಲ್ ಟ್ರಯಲ್‌ಗೆ ಡಿಸಿಜಿಐ ಅನುಮೋದನೆ ನೀಡಿದೆ.
• ಲಸಿಕೆ ಪ್ರಯೋಗ ಯಾವಾಗ?
━━━━━━━━━━━━━
ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಪ್ರಯೋಗವು ಜುಲೈನಿಂದ ಪ್ರಾರಂಭವಾಗಲಿದೆ, ಆದ್ದರಿಂದ, ಲಸಿಕೆ ಮಾರುಕಟ್ಟೆಯಲ್ಲಿ ಯಾವಾಗ ಲಭ್ಯವಾಗುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ‘ಕೊರೊನಾ ವೈರಸ್ ಲಸಿಕೆ ಮೇಲೆ ಭಾರತದ ಪ್ರಯೋಗಾಲಯಗಳಲ್ಲಿ ನಡೆಯುತ್ತಿರುವ ಅಧ್ಯಯನಗಳನ್ನು ಪ್ರಪಂಚವು ಗಮನವಿಟ್ಟು ನೋಡುತ್ತಿದೆ. ಈ ವಿಚಾರದಲ್ಲಿ ದೇಶವೂ ಆಶಾಭಾವದಿಂದ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ 'ಮನ್ ಕಿ ಬಾತ್' ನಲ್ಲಿ ಹೇಳಿದ್ದಾರೆ.

No comments:
Post a Comment