"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 4 July 2020

•► ️ಜುಲೈ 04 ರ (04 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 04 July 2020)

•► ️ಜುಲೈ 04 ರ (04 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  04 July 2020)
━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)



• ಫ್ರಾನ್ಸ್‌ನ ನೂತನ ಪ್ರಧಾನ ಮಂತ್ರಿಯಾಗಿ ಜೀನ್ ಕ್ಯಾಸ್ಟೆಕ್ಸ್ ಆಯ್ಕೆ.
— ಈ ಮೊದಲು ಎಡ್ವರ್ಡ್ ಫಿಲಿಪ್ ಪ್ರಧಾನಿಯಾಗಿದ್ದರು.
— ಪ್ರಸ್ತುತ ಫ್ರಾನ್ಸ್ ಅಧ್ಯಕ್ಷ : ಇಮ್ಯಾನ್ಯುಯಲ್ ಮ್ಯಾಕ್ರೊನ್.

• ಕೋವಿಡ್‌–19 ರೋಗಿಗಳಿಗೆ ವೈರಾಣು ನಿರೋಧಕವಾಗಿ ‘ರೆಮ್‌ಡೆಸಿವಿರ್‌‘ ಔಷಧವನ್ನು ‘ತುರ್ತು ಪರಿಸ್ಥಿತಿ’ ಸಂದರ್ಭದಲ್ಲಿ ಮಾತ್ರ ಬಳಸಲು ಡ್ರಗ್‌ ಮತ್ತು ಕ್ಲಿನಿಕಲ್‌ ಪ್ರಯೋಗಗಳ ನಿಯಮ–2019ರ ಅನ್ವಯ ಈ ಔಷಧಕ್ಕೆ ಅನುಮೋದನೆ.

• ಅಂತರರಾಷ್ಟ್ರೀಯ ವ್ಯಾಜ್ಯಗಳ ಕಾಯಂ ನ್ಯಾಯಾಲಯ (Permanent Court of Arbitration) (ಪಿಸಿಎ) ಇರುವುದು : ಹೇಗ್‌ನ ನೆದರ್‌ಲ್ಯಾಂಡ್ ನಲ್ಲಿ.
- ಸ್ಥಾಪನೆ : 1899ರಲ್ಲಿ.
- ಇದರ ಪ್ರಸ್ತುತ ಪ್ರಧಾನ ಕಾರ್ಯದರ್ಶಿ : ಹ್ಯೂಗೋ ಎಚ್. ಸಿಬ್ಲೆಜ್
- ಇದರ ಪ್ರಸ್ತುತ ಉಪ ಪ್ರಧಾನ ಕಾರ್ಯದರ್ಶಿ : ಬ್ರೂಕ್ಸ್ ಡಬ್ಲ್ಯೂ. ಡಾಲಿ

— ಪಿಸಿಎ ಮುಂದಿರುವ ಇಟಲಿಯ ಇಬ್ಬರು ನಾವಿಕರ ಪ್ರಕರಣವೇನು?:
 2012 ಫೆಬ್ರುವರಿಯಲ್ಲಿ ಕೇರಳ ಕರಾವಳಿಯ ಭಾರತದ ಜಲಪ್ರದೇಶದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು
ತೈಲ ಹಡಗು ಎಂ.ವಿ ಎನ್‌ರಿಕಾ ಲೆಕ್ಸಿಯಲ್ಲಿದ್ದ ಇಟಲಿಯ ನಾವಿಕರಾದ ಸಲ್ವಟೋರ್‌ ಗಿರೋನ್‌ ಮತ್ತು ಮ್ಯಾಸಿಮಿಲಿಯಾನೊ ಲಟೋರೆ ಹತ್ಯೆ ಮಾಡಿದ್ದಾರೆ ಎಂದು ಭಾರತ ಆರೋಪಿಸಿತ್ತು.

- ಹೇಗ್‌ನಲ್ಲಿರುವ ವ್ಯಾಜ್ಯಗಳ ಕಾಯಂ ನ್ಯಾಯಾಲಯವು(ಪಿಸಿಎ) ನೀಡಿರುವ ತೀರ್ಪಿನ ಬೆನ್ನಲ್ಲೇ ಕೇಂದ್ರ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ. ಭಾರತದ ಪರವಾಗಿ ತೀರ್ಪು ನೀಡಿದ್ದ ಪಿಸಿಎ, ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ಒದಗಿಸಲು ಆದೇಶಿಸಿತ್ತು. ಆದರೆ, ನಾವಿಕರ ವಿರುದ್ಧ ಭಾರತದಲ್ಲಿ ‌ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿಲ್ಲ ಎಂದು ಸೂಚಿಸಿತ್ತು.

- ಕೇರಳದ ಕರಾವಳಿಯಲ್ಲಿ ಭಾರತದ ಇಬ್ಬರು ಮೀನುಗಾರರನ್ನು ಹತ್ಯೆ ಮಾಡಿದ ಆರೋಪದಲ್ಲಿ ಇಟಲಿಯ ಇಬ್ಬರು ನಾವಿಕರ ವಿರುದ್ಧ ನಡೆಯುತ್ತಿರುವ ನ್ಯಾಯಾಂಗ ಪ್ರಕರಣವನ್ನು ಮುಕ್ತಾಯಗೊಳಿಸಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.


• ಪ್ರಸ್ತುತ ಐಸಿಎಂಆರ್‌ (Indian Council of Medical Research) ನ ಪ್ರಧಾನ ನಿರ್ದೇಶಕರು : ಬಲರಾಂ ಭಾರ್ಗವ.

• ಪ್ರಸ್ತುತ ಕೇಂದ್ರ ಆರೋಗ್ಯ ಸಚಿವ : ಡಾ| ಹರ್ಷವರ್ಧನ್.

• ಪ್ರಸ್ತುತ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ : ಡಾ.ವಿವಿಜಿ ಸೊಮಾನಿ.

• ಪ್ರಸ್ತುತ ಭಾರತದ ವಿದೇಶಾಂಗ ಕಾರ್ಯದರ್ಶಿ : ಹರ್ಷ ಶೃಂಗ್ಲಾ

• ಆರ್ಥಿಕ ವರ್ಷ 2019-20ರ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆಯ ಕೊನೆಯ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಿಸಿ ಆದಾಯ ತೆರಿಗೆ ಇಲಾಖೆ ಘೋಷಣೆ.

• ವಾರ್ಷಿಕ ಸ್ವಚ್ಛತಾ ಸಮೀಕ್ಷೆಯ ಆರನೇ ಆವೃತ್ತಿಯಾಗಿರುವ ‘ಸ್ವಚ್ಛ ಸರ್ವೇಕ್ಷಣೆ 2021’ಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಯಿಂದ ಚಾಲನೆ
— ಸ್ಥಳೀಯಾಡಳಿತ ಸಂಸ್ಥೆಗಳಿಗೆ ನೀಡುವ ಬೆಂಬಲ, ಅನುದಾನಗಳ ಬಳಕೆ ಮೊದಲಾದವುಗಳನ್ನು ಪರಿಶೀಲಿಸಿ ಸಮೀಕ್ಷೆಯು ರಾಜ್ಯಗಳಿಗೂ ಶ್ರೇಯಾಂಕ ಘೋಷಣೆ.

• ಪ್ರಸ್ತುತ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಧ್ಯಕ್ಷ : ಅರವಿಂದ ಸಿಂಗ್.


• ಐದು ವರ್ಷಗಳ ಚುನಾಯಿತ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳುವಂತೆ  ಹೈಕೋರ್ಟ ಆದೇಶ.
— ಐದು ವರ್ಷದ ನಂತರ ಚುನಾಯಿತ ಪ್ರತಿನಿಧಿ ಮುಂದುವರಿಯುವುದನ್ನು ಸಂವಿಧಾನದ 243-ಇ ವಿಧಿ ಪ್ರತಿಬಂಧಿಸುತ್ತದೆ.
— ಪಂಚಾಯತ್ ರಾಜ್ ಕಾಯ್ದೆ ಕಲಂ 9ರ ಅನುಸಾರ ಪಂಚಾಯಿತಿಗೆ ಚುನಾಯಿತರಾದವರ ಅವಧಿ 5 ವರ್ಷ ಮಾತ್ರ.
- ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 41 ಮತ್ತು 42ರಂತೆ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾ‌ನ ಕಾರ್ಯದರ್ಶಿ ಸೂಚನೆ. ಈ ಸೂಚನೆ ಅನುಸಾರವೇ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ನೇಮಕಕ್ಕೆ ಕ್ರಮ.


• ಕರ್ನಾಟಕದಲ್ಲಿ ವಾಸಿಸುತ್ತಿರುವ ಆರು ಕುಲ ಸೋಲಿಗರು ಬಳಸುವ ಪದಗಳನ್ನು ಸಂಗ್ರಹಿಸಿ,ಮ್ಯಾನ್ಮಾರ್‌ನ ಸಂಶೋಧಕ ಡಾ.ಆಂಗ್‌ ಸಿ ಎಂಬುವವರು ‘ಸೋಲಿಗ– ಇಂಗ್ಲಿಷ್‌’ ನಿಘಂಟು ಶಬ್ದಕೋಶವನ್ನು ಸಿದ್ಧಪಡಿಸಿದ್ದಾರೆ.
— 455 ಪುಟಗಳ ಈ ನಿಘಂಟಿನಲ್ಲಿ 1,500ಕ್ಕೂ ಹೆಚ್ಚು ಸೋಲಿಗ ಪದಗಳಿವೆ. ಆ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದ್ದು, ಅದಕ್ಕೆ ಇಂಗ್ಲಿಷ್‌ನಲ್ಲಿ ವಿವರಣೆ ನೀಡಲಾಗಿದೆ. ಅಪರೂಪದ ಗಿಡ–ಮರಗಳು, ಪ್ರಾಣಿಗಳ ಚಿತ್ರಗಳೂ ಇದರಲ್ಲಿವೆ.
— 148 ಪೋಡುಗಳ ಪೈಕಿ, 55 ಪೋಡುಗಳ ಆರು ಕುಲ ಸೋಲಿಗರು ಮಾತ್ರ ಈ ಭಾಷೆ ಮಾತನಾಡುತ್ತಾರೆ. ಈ ನಿಘಂಟು ಸೋಲಿಗ ಭಾಷೆ, ಸಂಸ್ಕೃತಿ ರಕ್ಷಣೆ ನಿಟ್ಟಿನಲ್ಲಿ ಹೊಸ ಪೀಳಿಗೆಗೆ ಅನುಕೂಲ.


• ರಾಜ್ಯದಲ್ಲಿ ಕೃಷಿ ಭೂಮಿ :
— ಬೇಸಾಯಕ್ಕೆ ಯೋಗ್ಯ ಭೂಮಿ- 1,40,598 ಚ.ಕಿ.ಮೀ,
— ಬೇಸಾಯವಾಗುತ್ತಿರುವ ಭೂಮಿ- 1,07,000 ಚ.ಕಿ.ಮೀ,
— ನೀರಾವರಿ ಪ್ರದೇಶದಲ್ಲಿ ಕೃಷಿ ಸಾಮರ್ಥ್ಯ- 61 ಲಕ್ಷ ಹೆಕ್ಟೇರ್‌,
— ಬೃಹತ್‌ ಮತ್ತು ಮಧ್ಯಮ ನೀರಾವರಿ ಯೋಜನೆಯಡಿ ಕೃಷಿ- 40.66 ಲಕ್ಷ ಹೆಕ್ಟೇರ್‌,
— ಅಚ್ಚುಕಟ್ಟು ಪ್ರದೇಶದಲ್ಲಿ ವ್ಯವಸಾಯ- 29.19 ಲಕ್ಷ ಹೆಕ್ಟೇರ್‌.
  ‌

• ದೇಶದ ಮೊದಲ ಕಾರ್ಪೊರೇಟ್‌ ಬಾಂಡ್‌ ಆಗಿರುವ ಭಾರತ್‌ ಬಾಂಡ್‌ ಷೇರು ವಿನಿಮಯ ನಿಧಿಯ (ಇಟಿಎಫ್‌) ಎರಡನೇ ಕಂತಿನ ನೀಡಿಕೆಯು ಇದೇ 14ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.

• ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ : ಡಾ.ಟೆಡ್ರೋಸ್ ಅಧನೋಮ್.

• ಚೀನಾದ ಎರಡು ಬಾರಿಯ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ಸೂಪರ್‌ಸ್ಟಾರ್ ಲಿನ್ ಡಾನ್ ನಿವೃತ್ತಿ ಘೋಷಣೆ.

- ಇತ್ತೀಚೆಗಷ್ಟೇ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್‌ ಲಸಿಕೆ 'ಕೋವಾಕ್ಸಿನ್‌' ಕ್ಲಿನಿಕಲ್‌ ಟ್ರಯಲ್‌ಗೆ ಅನುಮತಿ ನೀಡಲಾಗಿದೆ. ಕೋವಾಕ್ಸಿನ್‌ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಮೊದಲ ಕೋವಿಡ್–19 ಲಸಿಕೆಯಾಗಿದೆ.

• ವಂದೇ ಭಾರತ್ ಮಿಷನ್ :
- ಕೊರೊನಾ ಸೋಂಕು ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ತವರಿಗೆ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮೇ 7 ರಂದು ವಂದೇ ಭಾರತ್ ಮಿಷನ್ ಆರಂಭಿಸಿತ್ತು.
- ಈ ಮಿಷನ್ ಅಡಿಯಲ್ಲಿ ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ತಾಯ್ನಾಡಿಗೆ ಕರೆತಂದಿರುವ ಮೊದಲ ವಿಮಾನವಾಗಿದೆ.
- ವಂದೇ ಭಾರತ್ ಮಿಷನ್ ಅಡಿಯಲ್ಲಿ ಈವರೆಗೆ 4.75 ಲಕ್ಷಕ್ಕೂ ಅಧಿಕ ಭಾರತೀಯರು ಬೇರೆ ದೇಶಗಳಿಂದ ತವರಿಗೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ  ತಿಳಿಸಿದೆ.
ನಾಲ್ಕನೇ ಹಂತದ ವಂದೇ ಭಾರತ್ ಮಿಷನ್‌ಗೆ ಗುರುವಾರ ಚಾಲನೆ ದೊರೆತಿದೆ.

No comments:

Post a Comment