"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 4 July 2020

•► 'ರೆಮ್‌ಡೆಸಿವಿರ್‌’ : (remdesivir)

•► 'ರೆಮ್‌ಡೆಸಿವಿರ್‌’ :
(remdesivir)

━━━━━━━━━
★ ಸಾಮಾನ್ಯ ವಿಜ್ಞಾನ
(General Science)


- ಕೋವಿಡ್‌–19 ರೋಗಿಗಳಿಗೆ ವೈರಾಣು ನಿರೋಧಕವಾಗಿ ‘ರೆಮ್‌ಡೆಸಿವಿರ್‌‘ ಔಷಧವನ್ನು ‘ತುರ್ತು ಪರಿಸ್ಥಿತಿ’ ಸಂದರ್ಭದಲ್ಲಿ ಮಾತ್ರ ಬಳಸಲು ಡ್ರಗ್‌ ಮತ್ತು ಕ್ಲಿನಿಕಲ್‌ ಪ್ರಯೋಗಗಳ ನಿಯಮ–2019ರ ಅನ್ವಯ ಈ ಔಷಧಕ್ಕೆ ಅನುಮೋದನೆ.

- ಇಂಜೆಕ್ಷನ್‌ ರೂಪದಲ್ಲಿ ಈ ಔಷಧವನ್ನು ನೀಡಲಾಗುತ್ತಿದೆ. ಮೊದಲ ದಿನ 200 ಮಿಲಿ ಗ್ರಾಂ ನೀಡಬೇಕು. ನಂತರ ನಾಲ್ಕು ದಿನಗಳ ಕಾಲ ಪ್ರತಿ ದಿನವೂ 100 ಮಿಲಿ ಗ್ರಾಂ ನೀಡಬೇಕು ಎಂದು ತಿಳಿಸಲಾಗಿದೆ.

-ಕೋವಿಡ್‌–19 ರೋಗಿಗಳಿಗೆ 'ರೆಮ್‌ಡೆಸಿವಿರ್‌’ ಔಷಧ ಬಳಸುವ ನಿಟ್ಟಿನಲ್ಲಿ ಅಧಿಕೃತವಾಗಿ ಪೂರೈಕೆ ಮಾಡಲು ಅಮೆರಿಕದ ಫಾರ್ಮಾ ಕಂಪನಿ ಗಿಲಿಯಾಡ್‌ ಸೈನ್ಸಸ್‌ಗೆ ಒಪ್ಪಿಗೆ ನೀಡಲಾಗಿದೆ.

ಗಿಲಿಯಾಡ್‌ ಸೈನ್ಸಸ್ ಈ ಔಷಧದ ಪೆಟೆಂಟ್‌ ಪಡೆದಿದ್ದು, ಕ್ಲಿನಿಕಲ್‌ ಪೂರ್ವ ಮತ್ತು ಕ್ಲಿನಿಕಲ್‌ ಅಧ್ಯಯನಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿದೆ. ಈ ಔಷಧವನ್ನು ಮುಂಬೈ ಮೂಲದ ಕ್ಲಿನೆರಾ ಗ್ಲೋಬಲ್‌ ಸರ್ವಿಸಸ್‌ ಕಂಪನಿ ಆಮದು ಮಾಡಿಕೊಳ್ಳಲಿದೆ.

‘ರೆಮ್‌ಡೆಸಿವಿರ್‌’ ಉತ್ಪಾದನೆ ಮತ್ತು ವಿತರಣೆಗೆ ಸಿಪ್ಲಾ, ಜುಬಿಲಿಯಂಟ್‌ ಲೈಫ್‌ ಸೈನ್ಸಸ್‌, ಹೆಟೆರೊ ಕಂಪನಿಗಳ ಜತೆ ಗಿಲಿಯಾಡ್‌ ಸೈನ್ಸ್‌ಸ್‌ ಕಂಪನಿ ಒಪ್ಪಂದ ಮಾಡಿಕೊಂಡಿದೆ.

ಕೇಂದ್ರ ಆರೋಗ್ಯ ಸಚಿವಾಲಯದಿಂದ  ಔಷಧ ಬಳಕೆ ಕುರಿತು ಪರಿಷ್ಕೃತ ಮಾರ್ಗಸೂಚಿ :

ಕೋವಿಡ್‌–19 ಶಂಕಿತ ಅಥವಾ ದೃಢಪಟ್ಟ ಪ್ರಕರಣಗಳಲ್ಲಿ ಆಸ್ಪತ್ರೆಗೆ ದಾಖಲಾದ ವಯಸ್ಕರು ಮತ್ತು ಮಕ್ಕಳಿಗೆ ಗರಿಷ್ಠ ಐದು ದಿನಗಳವರೆಗೆ ಮಾತ್ರ ಈ ಔಷಧವನ್ನು ಬಳಸಲು ಅವಕಾಶ ನೀಡಲಾಗಿದೆ. ಈ ಮೊದಲು ಆರು ದಿನಗಳ ಕಾಲ ಔಷಧವನ್ನು ನೀಡಲಾಗುತ್ತಿತ್ತು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ  ‘ರೆಮ್‌ಡೆಸಿವಿರ್‌’ ಬಳಸುವುದನ್ನು ಪರಿಗಣಿಸಬಹುದು. ಆದರೆ, ಗರ್ಭಿಣಿಯರಿಗೆ ಮತ್ತು ಎದೆ ಹಾಲುಣಿಸುವವರಿಗೆ ಹಾಗೂ 12 ವರ್ಷದ ಒಳಗಿನವರಿಗೆ ಈ ಔಷಧ ಬಳಸಲು ಶಿಫಾರಸು ಮಾಡಬಾರದು ಎಂದು ಸಚಿವಾಲಯ ಸೂಚಿಸಿದೆ.

No comments:

Post a Comment