"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday 8 July 2020

•► ️KAS, IAS ಮುಖ್ಯ ಪರೀಕ್ಷೆಗಳಲ್ಲಿ ಕೈ ಬರವಣಿಗೆಯ ಮಹತ್ವ : (importance of handwriting for KAS, IAS Mains Exams)

•► ️KAS, IAS ಮುಖ್ಯ ಪರೀಕ್ಷೆಗಳಲ್ಲಿ ಕೈ ಬರವಣಿಗೆಯ ಮಹತ್ವ :
(importance of handwriting for KAS, IAS Mains Exams)

━━━━━━━━━━━━━━━━━━━━━

★ ಕೆಎಎಸ್ & ಐಎಎಸ್ ಮುಖ್ಯ ಪರೀಕ್ಷೆ ತಯಾರಿ
(IAS & KAS Main Exam Preparation)

★ ಸಾಮಾನ್ಯ ಅಧ್ಯಯನ
(General Studies)


ಬರವಣಿಗೆಯು ಕಲಿಕೆಯ ಮುಖ್ಯವಾದ ಭಾಗ. ಓದುವುದರ ಜೊತೆಜೊತೆಗೆ ಜ್ಞಾನಾಭಿವೃದ್ಧಿಗೆ ಬರವಣಿಗೆ ಕೂಡ ಬಹಳ ಮಹತ್ವವನ್ನು ಹೊಂದುತ್ತದೆ. ಕೇವಲ ಓದುವುದರಿಂದ ಜ್ಞಾನ ಹೆಚ್ಚಾಗುವುದಿಲ್ಲ. ಬದಲಿಗೆ, ಓದಿದ್ದನ್ನು ನಮ್ಮ ಸ್ವಂತ ಪದಗಳಲ್ಲಿಅಭಿವ್ಯಕ್ತಗೊಳಿಸುವುದರಿಂದ ಮಾತ್ರ ಆಳವಾಗಿ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗಗಳು ನಡೆಸುವ ನಾಗರಿಕ ಸೇವಾ ಪರೀಕ್ಷೆ, ಗ್ಯಾಜೆಟೆಡ್‌ ಪೊ›ಬೇಷನರಿ ಪರೀಕ್ಷೆ, ಫಾರೆಸ್ಟ್‌ ಸರ್ವಿಸ್‌ ಇತ್ಯಾದಿ ಪರೀಕ್ಷೆಗಳ ಮುಖ್ಯ ಪತ್ರಿಕೆಗಳಲ್ಲಿ ವಿಸ್ತೃತ ರೂಪದ ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಮಾರು 1750 ಅಂಕಗಳಿಗೆ ಏಳು ಪತ್ರಿಕೆಗಳನ್ನು ಹಾಗು 600 ಅಂಕಗಳಿಗೆ ಎರಡು ಕಡ್ಡಾಯ ಭಾಷಾ ಪತ್ರಿಕೆಗಳನ್ನು ವಿಸ್ತೃತ ರೂಪದ ಮಾದರಿಯಲ್ಲಿ ಕೇಳಲಾಗಿರುತ್ತದೆ. ಈ ಪತ್ರಿಕೆಗಳಲ್ಲಿ ಪ್ರಶ್ನೆಗಳನ್ನು 50 ಪದಗಳಿಂದ ಹಿಡಿದು 250 ಪದಗಳಿಗೆ ಮೀರದಂತೆ ಬರೆಯಲು ಕೇಳಲಾಗುತ್ತದೆ. ಪ್ರಬಂಧದ ಪತ್ರಿಕೆಯನ್ನು ಸುಮಾರು 2500-3000 ಪದಗಳಿಗೆ ಮೀರದಂತೆ ಬರೆಯಲು ಕೇಳುವುದು ಸಹಜ.

ಈ ಎಲ್ಲಅಂಶಗಳನ್ನು ಗಮನಿಸಿದಾಗ ನಮಗೆ ತಿಳಿಯುವುದೇನೆಂದರೆ, ಬರವಣಿಗೆ ಕೌಶಲ ಸ್ಪರ್ಧಾತ್ಮಕ ಪರೀಕ್ಷೆಗಳ ಸಫಲತೆಯಲ್ಲಿನಿರ್ಣಾಯಕ ಪಾತ್ರವನ್ನು ಹೊಂದುತ್ತದೆ ಎಂಬುದು. ಹಾಗಾಗಿ ಅಭ್ಯರ್ಥಿಗಳು ಇದರ ಬಗ್ಗೆ ವಿಶೇಷವಾದ ಗಮನವನ್ನು ನೀಡುವುದು ಒಳಿತು.

ಎಷ್ಟೋ ಬಾರಿ ಪರೀಕ್ಷೆ ಬರೆದ ಅಭ್ಯರ್ಥಿಗಳು, ನಾನು ಎಲ್ಲಪ್ರಶ್ನೆಗಳಿಗೆ ಉತ್ತರಿಸಿದ್ದೆ. ಆದರೆ ಅಂಕಗಳೇ ಸಿಕ್ಕಿಲ್ಲಅಥವಾ ನಾನು ಬಹಳ ಕಷ್ಟಪಟ್ಟು ಬರೆದಿದ್ದೆ. ಕೇಳಿದ್ದಕ್ಕಿಂತ ಹೆಚ್ಚಾಗಿಯೇ ಉತ್ತರಗಳನ್ನು ಬರೆದಿದ್ದೆ. ಆದರೂ ಉತ್ತೀರ್ಣನಾಗಲು ಸಾಧ್ಯವಾಗಲಿಲ್ಲ. ಪರೀಕ್ಷಾ ವ್ಯವಸ್ಥೆಯೇ ಸರಿಯಿಲ್ಲವೆಂದು ಕೊರಗುವುದನ್ನು ನಾವು ಸಾಮಾನ್ಯವಾಗಿ ಕಂಡಿರುತ್ತೇವೆ. ಆದರೆ, ಅಭ್ಯರ್ಥಿಗಳು ಬೇರೆಯವರನ್ನು ಅಥವಾ ಪರೀಕ್ಷಾ ವ್ಯವಸ್ಥೆಯನ್ನು ದೂಷಿಸುವುದಕ್ಕೂ ಮುಂಚಿತವಾಗಿ, ತಮಗೆ ತಾವೇ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಜವಾಗಿಯೂ ತಾನು ಪ್ರಶ್ನೆಯ ನಿರೀಕ್ಷೆಯಂತೆ ಉತ್ತರಗಳನ್ನು ಬರೆದಿದ್ದೇನೆಯೇ ಇಲ್ಲವೆ ಎಂಬುದನ್ನು ಕಂಡುಕೊಂಡು, ಮುಂದಿನ ಪರೀಕ್ಷೆಯಲ್ಲಿತಪ್ಪುಗಳು ಮರುಕಳಿಸದಂತೆ, ಯೋಚನೆ ಮಾಡಿ ಉತ್ತರಗಳನ್ನು ಬರೆಯಬೇಕು.

• ಉತ್ತರಿಸುವುದಕ್ಕೂ ಮುಂಚೆ ಗಮನಿಸಬೇಕಾದ ಮುಖ್ಯ ಅಂಶಗಳು.
━━━━━━━━━━━━━━━━━━━━━
 ಪರೀಕ್ಷೆಯಲ್ಲಿಉತ್ತಮ ಬರವಣಿಗೆಯನ್ನು ಅಭ್ಯಾಸ ಮಾಡಿಕೊಳ್ಳಲು ಮುಖ್ಯವಾಗಿ ಎರಡು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದು, ಪ್ರಶ್ನೆಯನ್ನು ಸರಿಯಾಗಿ ಓದಿಕೊಂಡು ಅರ್ಥಮಾಡಿಕೊಳ್ಳುವುದು ಹಾಗೂ ಎರಡನೆಯದು, ಕೇಳಿರುವ ಪದಗಳ ಮಿತಿಯನ್ನು ಮೀರದಂತೆ ಉತ್ತರಗಳನ್ನು ಬರೆಯುವುದು.

ಪ್ರಶ್ನೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಉತ್ತರಗಳನ್ನು ಬರೆದರೆ ಪ್ರಯೋಜನವಿಲ್ಲ. ಪ್ರತಿಯೊಂದು ಪ್ರಶ್ನೆಯು ಒಂದು ನಿರ್ದಿಷ್ಟವಾದ ಕೀ-ಪದವನ್ನು ಹೊಂದಿರುತ್ತದೆ. ಉದಾಹರಣೆಗೆ: ವಿಮರ್ಶಿಸಿ, ಟಿಪ್ಪಣಿ ಬರೆಯಿರಿ, ವಿಶ್ಲೇಷಿಸಿ, ಚರ್ಚಿಸಿ, ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಇತ್ಯಾದಿ. ಈ ಕೀ-ಪದಗಳು ಬಹಳ ಮುಖ್ಯವಾದವುಗಳು. ಇವುಗಳ ಅರ್ಥವನ್ನು ಅಭ್ಯರ್ಥಿಗಳು ಚೆನ್ನಾಗಿ ತಿಳಿದುಕೊಂಡಿರಬೇಕು. ಏಕೆಂದರೆ, ಪ್ರತಿಯೊಂದು ಕೀ-ಪದವು ಕೂಡ ಒಂದು ನಿರ್ದಿಷ್ಟವಾದ ಉತ್ತರವನ್ನು ಅಪೇಕ್ಷಿಸುತ್ತದೆ.

• ಕೆಳಗಿನ ಪ್ರಶ್ನೆಯನ್ನು ಗಮನಿಸಿ;
━━━━━━━━━━━━━
ಜಾಗತೀಕರಣದಿಂದ ಭಾರತದ ಕೃಷಿ ಚಟುವಟಿಕೆಯಲ್ಲಿನ ಆದಾಯವು ಕಳೆದ ದಶಕದಲ್ಲಿಗಣನೀಯವಾಗಿ ಕುಂಠಿತವಾಗಿದೆ. ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ. ಈ ಮೇಲಿನ ಪ್ರಶ್ನೆಯನ್ನು ಉತ್ತರಿಸುವಾಗ, ಅಭ್ಯರ್ಥಿಗಳು, ಕಳೆದ ದಶಕದಲ್ಲಿಜಾಗತೀಕರಣದ ಪ್ರಭಾವದಿಂದ ಕೃಷಿ ಆದಾಯ ಕುಂಠಿತವಾಗಿದೆಯೇ ಎಂಬುದನ್ನು ಅಂಕಿ-ಅಂಶಗಳೊಂದಿಗೆ ವಿಶ್ಲೇಷಿಸಬೇಕು. ಅದರ ಬದಲಾಗಿ ಕೇವಲ ಜಾಗತೀಕರಣದ ಬಗೆಗೆ ಅಥವಾ ಭಾರತದ ಕೃಷಿ ಚಟುವಟಿಕೆಯಲ್ಲಿನ ಏರಿಳಿತಗಳ ಬಗೆಗೆ ವಿವರಿಸಿದರೆ ಸಾಲದು.

ಈ ರೀತಿಯ ಪ್ರಶ್ನೆಗಳನ್ನು ಉತ್ತರಿಸಬೇಕಾದರೆ ಅಭ್ಯರ್ಥಿಗಳು ಸಾಕಷ್ಟು ತಯಾರಿಯನ್ನು ನಡೆಸಿರಬೇಕು. ಪರೀಕ್ಷೆಗೂ ಮುಂಚಿತವಾಗಿ ಬೇರೆ ಬೇರೆ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ತಜ್ಞರಿಂದ ಸಲಹೆಯನ್ನು ಪಡೆಯಬೇಕು. ತಮ್ಮದೇ ಒಂದು ಸ್ಟಡಿ ಗ್ರೂಪ್‌ಗಳನ್ನು ನಿರ್ಮಿಸಿಕೊಂಡು ಅಲ್ಲಿಬೇರೆ ಆಕಾಂಕ್ಷಿಗಳ ಜೊತೆಗೆ ಚರ್ಚಿಸಬೇಕು. ಹೀಗೆ ಮಾಡುವುದರಿಂದ ಮಾತ್ರ ತಮ್ಮ ಬರವಣಿಗೆಯನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ಪರ್ಧೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸತತ ಪರಿಶ್ರಮ ಹಾಗು ಪ್ರಯತ್ನದಿಂದ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ.


• ಬರೆಯುವಾಗ ಗಮನಿಸಿ
━━━━━━━━━━━━━
*ಕೈಬರಹ ನಿಮ್ಮ ವ್ಯಕ್ತಿವನ್ನು ಬಿಂಬಿಸುತ್ತಿರುತ್ತದೆ. ಹೀಗಾಗಿ ಅಂದವಾದ ಬರವಣಿಗೆಗೆ ಆದ್ಯತೆ ನೀಡಿ.

* ಡಿಜಿಟಲ್‌ನ ಈ ಯುಗದಲ್ಲಿಕೈ ಬರಹಕ್ಕೆ ಮಹತ್ವವಿಲ್ಲಎಂದು ನೀವು ಅತ್ತ ಗಮನ ನೀಡದಿದ್ದರೆ ಇದು ನಿಮ್ಮ ಅಧ್ಯಯನದ ಮೇಲೆ ಪರಿಣಾಮ ಬೀರುತ್ತಿರುತ್ತದೆ.

* ಬರೆದು ಕಲಿತಿದ್ದು ಹೆಚ್ಚು ದಿನ ನಿಮ್ಮ ನೆನಪಿನಲ್ಲಿರುತ್ತದೆ. ಬರವಣಿಗೆಯು ಶಬ್ದ ಸಂಪತ್ತನ್ನು ಹೆಚ್ಚಿಸುತ್ತದೆ. ದೋಷಗಳಿಲ್ಲದೆ ಬರೆಯುವುದು ಬರೆದು ಕಲಿಯುವುದರಿಂದ ಸಾಧ್ಯವಾಗುತ್ತದೆ.

* ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಮತ್ತು ಆ ವಿಷಯದ ಬಗ್ಗೆ ಆಸಕ್ತಿ ಹೊಂದಲು ಬರವಣಿಗೆ ನೆರವಾಗುತ್ತದೆ.

* ಬರೆಯುವುದರಿಂದ ಮೆದುಳಿನ ಗ್ರಹಣ ಶಕ್ತಿ ಹೆಚ್ಚುತ್ತದೆ. ಏಕಾಗ್ರತೆ ಮೂಡುತ್ತದೆ.

* ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಬರೆದು ಕಲಿತಿದ್ದು,ಮುಂದೆ ಉದ್ಯೋಗ ಜೀವನದ ಒಂದಲ್ಲಾಒಂದು ಸಂದರ್ಭದಲ್ಲಿಉಪಯೋಗಕ್ಕೆ ಬಂದೇ ಬರುತ್ತದೆ.

* ಬರೆಯುವುದು ಎಂದರೆ ಗೀಚುವುದಲ್ಲ, ಮುತ್ತಿನ ಸಾಲುಗಳಂತೆ ಅಕ್ಷರವನ್ನು ಪೋಣಿಸುವುದು. ನಿಮ್ಮ ಬರವಣಿಗೆ ಅಂದವಾಗಿದ್ದರೆ, ಓದುವವರ ಖುಷಿ ಹೆಚ್ಚುತ್ತದೆ.

* ಸರಳ ಶಬ್ದಗಳಲ್ಲಿನಿಮ್ಮ ಅಭಿಪ್ರಾಯವನ್ನು ಹೇಳುವುದನ್ನು ಕಲಿಯಿರಿ. ಇದರಿಂದ ಪರೀಕ್ಷೆಯಲ್ಲಿಯಶಸ್ಸು ಗ್ಯಾರಂಟಿ.

(Courtesy : ವಿಜಯ ಕರ್ನಾಟಕ)

No comments:

Post a Comment