"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Sunday, 5 July 2020

•► ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) (Air Quality Index - AQI)

•► ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)
(Air Quality Index - AQI)

━━━━━━━━━━━━━━━━━━━━
★ ಪರಿಸರ & ಪರಿಸರ ವಿಜ್ಞಾನ
(Environment & Ecology)

★  ಹವಾಮಾನ ಬದಲಾವಣೆ
(Climate Change)


ಭಾರತದಲ್ಲೂ ವಾಯು ಮಾಲಿನ್ಯ ಅಪಾಯಕಾರಿ ಮಟ್ಟ ತಲುಪುತ್ತಿದ್ದು, ಗ್ರಾಮೀಣ ಮತ್ತು ಸಮುದ್ರ ಪ್ರದೇಶಗಳಲ್ಲಿ ಮಾಲಿನ್ಯದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಸರಕಾರ 2016ರಿಂದೀಚೆಗೆ ವಾಯು ಗುಣಮಟ್ಟ ಸೂಚ್ಯಂಕಕ್ಕೆ (ಎಕ್ಯೂಐ) ಚಾಲನೆ ನೀಡಿದೆ. ದಿಲ್ಲಿ ಸೇರಿದಂತೆ 11 ಮಹಾನಗರಗಳ ದೈನಂದಿನ ವಾಯು ಗುಣಮಟ್ಟದ ಬುಲೆಟಿನ್ ಬಿಡುಗಡೆ ಮಾಡುತ್ತಿದೆ.


• ಎಕ್ಯೂಐ ಎಂದರೇನು ?
━━━━━━━━━━━
- ಎಕ್ಯೂಐ ಎಂದರೆ ವಾಯು ಗುಣಮಟ್ಟವನ್ನು ಅಳೆಯುವ ಸೂಚಕ. ಇದು ಮಾನವನ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವಾಯು ಮಾಲಿನ್ಯಗಳ ಬಗ್ಗೆ ಮಾನಿಟರ್ ಮಾಡುತ್ತದೆ.

- ಗಾಳಿಯಲ್ಲಿರುವ ಓಝೋನ್, ಸಣ್ಣ ಕಣಗಳಿಂದಾದ ವಸ್ತುಗಳು, ಸಾರಜನಕ ಡೈ ಆಕ್ಸೈಡ್, ಕಾರ್ಬನ್ ಮಾನಾಕ್ಸೈಡ್, ಸಲ್ಫರ್ ಡೈ ಆಕ್ಸೈಡ್ ಮತ್ತು ಸಲ್ಫರ್ ಸಂಯುಕ್ತಗಳಂತ ಮಾಲಿನ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.


• ಹೇಗೆ ಕಾರ‌್ಯನಿರ್ವಹಿಸುತ್ತದೆ ?
━━━━━━━━━━━━━━
ಎಕ್ಯೂ ಅನ್ನು ಆರು ವಿಭಾಗಗಳಾಗಿ ವಿಂಗಡಣೆ ಮಾಡಲಾಗಿದೆ. ಅವುಗಳೆಂದರೆ ಉತ್ತಮ, ತೃಪ್ತಿದಾಯಕ, ಮಧ್ಯಮ, ಕಲುಷಿತ, ಕಳಪೆ, ತೀವ್ರ ಕಳಪೆ ಮತ್ತು ತೀವ್ರಕ್ಕಿಂತ ಹೆಚ್ಚಿನ ಕಳಪೆ ಎಂದು ವಿಂಗಡಿಸಲಾಗಿದೆ. ಈ ವಿಭಾಗಗಳಿಗೆ ವಿವಿಧ ಬಣ್ಣಗಳ ಕೋಡ್‌ಗಳನ್ನು ಜೋಡಿಸಲಾಗಿದೆ. ಹಸಿರು ಬಣ್ಣ ಉತ್ತಮ ಗಾಳಿಯ ಗುಣಮಟ್ಟವನ್ನು , ಕಂದು ಬಣ್ಣ ತೀವ್ರ ಮಾಲಿನ್ಯವನ್ನು ಸೂಚಿಸುತ್ತದೆ. ಹಳದಿ, ಕೇಸರಿ, ಕೆಂಪು ಮತ್ತು ನೇರಳೆ ಬಣ್ಣವು ಮಧ್ಯಮದಿಂದ ಹಿಡಿದು ಅನಾರೋಗ್ಯಕರ ಮಾಲಿನ್ಯವನ್ನು ಸೂಚಿಸುತ್ತದೆ.

• ಭಾರತ ಮತ್ತು ಎಕ್ಯೂಐ :
━━━━━━━━━━━
ಭಾರತದ ಎಕ್ಯೂಐ ಅನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಭಿವೃದ್ಧಿಪಡಿಸಿದೆ. ಐಐಟಿ-ಕಾನ್ಪುರ ಹಾಗೂ ವೈದ್ಯಕೀಯ, ವಾಯು ಗುಣಮಟ್ಟ ಕ್ಷೇತ್ರದಲ್ಲಿನ ವೃತ್ತಿಪರರು ಮತ್ತು ಇತರ ಗಣ್ಯರನ್ನು ಒಳಗೊಂಡ ತಜ್ಞರ ಗುಂಪಿನ ಸಲಹೆ ಸೂಚನೆ ಪಡೆದು ಎಕ್ಯೂಐ ಅನ್ನು ಅಭಿವೃದ್ಧಿಪಡಿಸಲಾಗಿದೆ.

— ನಗರ, ಗ್ರಾಮೀಣ ಮತ್ತು ಸಮುದ್ರ ಪ್ರದೇಶಗಳಲ್ಲಿ ಮಾಲಿನ್ಯದಿಂದ ಆರೋಗ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವ ಸಲುವಾಗಿ ಎಕ್ಯೂಐ ಅಭಿವೃದ್ಧಿಪಡಿಸಲಾಗಿದೆ. ಆರಂಭದಲ್ಲಿ ಇದು ದಿಲ್ಲಿ, ಆಗ್ರಾ, ಕಾನ್ಪುರ, ಲಖನೌ, ವಾರಾಣಸಿ, ಫರೀದಾಬಾದ್, ಅಹಮದಾಬಾದ್, ಚೆನ್ನೈ , ಬೆಂಗಳೂರು ಮತ್ತು ಹೈದರಾಬಾದ್‌ನಂತಹ 10 ನಗರಗಳಲ್ಲಿ ವಾಯು ಗುಣಮಟ್ಟವನ್ನು ಮಾನಿಟರ್ ಮಾಡಲಿದೆ. ಕ್ರಮೇಣ ದೇಶಾದ್ಯಂತ 66 ನಗರಗಳಲ್ಲಿ ತನ್ನ ಕೆಲಸವನ್ನು ವಿಸ್ತರಿಸಲಿದೆ.

— ವಾಯು ಗುಣಮಟ್ಟಕ್ಕೆ ಸಂಬಂಧಿಸಿದ ಪರಿಸರ ಆದ್ಯತೆ ಸೂಚ್ಯಂಕ ಪಟ್ಟಿಯಲ್ಲಿ ಭಾರತವು ಕಳೆದ ವರ್ಷ 178 ದೇಶಗಳ ಪೈಕಿ 174ನೇ ಸ್ಥಾನ ಪಡೆದಿತ್ತು.

— ಭಾರತದ ರಸ್ತೆಗಳಲ್ಲಿ ಹೆಚ್ಚುತ್ತಿರುವ ವಾಹನ ಅದರಲ್ಲೂ ಡೀಸೆಲ್ ಕಾರುಗಳಿಂದ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಇದು ಅನಾರೋಗ್ಯಕ್ಕೆ ಕಾರಣವಾಗಿದೆ.

— ಮಾಲಿನ್ಯಕಾರಿ ಕೈಗಾರಿಕೆಗಳು, ತ್ಯಾಜ್ಯ ವಸ್ತುಗಳು ಮತ್ತು ಎಲೆಗಳನ್ನು ಮುಕ್ತ ಪ್ರದೇಶದಲ್ಲಿ ಸುಡುತ್ತಿರುವುದು, ಹೆಚ್ಚುತ್ತಿರುವ ಕಟ್ಟಡಗಳ ನಿರ್ಮಾಣ ತ್ಯಾಜ್ಯ, ಅರಣ್ಯಗಳ ನಾಶ-ಇವೆಲ್ಲವೂ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ.

— ‘ಜಗತ್ತಿನ ಅತಿ ಮಲಿನ 20 ನಗರಗಳ ಪಟ್ಟಿಯಲ್ಲಿ ಭಾರತದ 15 ನಗರಗಳು ಸ್ಥಾನ ಪಡೆದಿವೆ’ ಎಂದು ವರದಿಯೊಂದು ಹೇಳಿದೆ. ‘ಗ್ರೀನ್‌ಪೀಸ್‌ ಆಗ್ನೇಯ ಏಷ್ಯಾ’ ಸಂಸ್ಥೆ ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ‘ಐಕ್ಯುಏರ್‌ ಏರ್‌ ವಿಷುವಲ್‌ ಕ್ವಾಲಿಟಿ ರಿಪೋರ್ಟ್‌-2018’ ಹೆಸರಿನ ವಾಯು ಗುಣಮಟ್ಟವರದಿಯಲ್ಲಿ, ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡ ರಾಷ್ಟ್ರ ರಾಜಧಾನಿ ವಲಯವು ಕಳೆದ ಸಾಲಿನಲ್ಲಿ ವಿಶ್ವದಲ್ಲೇ ಅತಿ ಮಲಿನ ಪ್ರದೇಶ ಎಂಬ ಅಪಖ್ಯಾತಿಗೆ ಪಾತ್ರವಾಗಿದ್ದರೆ, ‘ಮಲಿನ ರಾಜಧಾನಿಗಳು’ ಪಟ್ಟಿಯಲ್ಲಿ ದಿಲ್ಲಿ ಮೊದಲ ಸ್ಥಾನ ಗಳಿಸಿ ಇರುಸು-ಮುರುಸಿಗೆ ಕಾರಣವಾಗಿದೆ.

— ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ಯ ಸಮೀಕ್ಷೆ ಪ್ರಕಾರ ವಿಶ್ವದ ಅತ್ಯಂತ ಸ್ವಚ್ಛ  ಮಾಲಿನ್ಯಮುಕ್ತ ಗಾಳಿಯನ್ನು ಫಿನ್‌ಲ್ಯಾಂಡ್‌ ದೇಶ ಹೊಂದಿದೆ.

No comments:

Post a Comment