"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday 11 July 2020

► ️ಜುಲೈ 10 & 11 ರ (10 & 11 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 10 & 11 July 2020)

•► ️ಜುಲೈ 10 & 11 ರ (10 & 11 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  10 & 11 July 2020)

━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)


• ಭಾರತ ಮತ್ತು ಯುರೋಪ್‌ ಒಕ್ಕೂಟದ ನಡುವೆ 15ನೇ ಶೃಂಗಸಭೆಯು ವಿಡಿಯೊ ಕಾನ್ಫರೆನ್ಸ್‌ ಮೂಲಕ ಜುಲೈ 15ರಂದು ಪ್ರಾರಂಭ.
- ಪ್ರಸ್ತುತ ಯುರೋಪಿಯನ್‌ ಕೌನ್ಸಿಲ್‌ ಅಧ್ಯಕ್ಷ : ಚಾರ್ಲ್ಸ್‌ ಮಿಷೆಲ್‌
- ಪ್ರಸ್ತುತ ಯುರೋಪಿಯನ್‌ ಆಯೋಗದ ಅಧ್ಯಕ್: ಷ ಉರ್ಸುಲಾ ವಾನ್‌ ಡೆರ್‌ ಲೇಯೆನ್

• ಪ್ರಸ್ತುತ ಗಡಿ ರಸ್ತೆ ಸಂಘಟನೆಯ (ಬಿಆರ್‌ಒ) ಮಹಾ ನಿರ್ದೇಶಕರು :  ಲೆ. ಜ. ಹರಪಾಲ್‌ ಸಿಂಗ್‌

• ಕೇರಳ ಸರ್ಕಾರವು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ‘ಚಿರಿ’ (ನಗು) ಅನ್ನುವ ಯೋಜನೆಗೆ ಚಾಲನೆ ನೀಡಿದೆ.
- ವಿದ್ಯಾರ್ಥಿ ಪೊಲೀಸ್ ಕೆಡೆಟ್ ಈ ಯೋಜನೆಯ ಭಾಗವಾಗಿದ್ದು, ಶಾಲಾ ಮಕ್ಕಳು, ಇಲ್ಲಿ ಇತರ ಮಕ್ಕಳೊಂದಿಗೆ ಸಂವಹನ ನಡೆಸಲಿದ್ದಾರೆ.
- ಪ್ರಸ್ತುತ ಕೇರಳದ ಮುಖ್ಯಮಂತ್ರಿ : ಪಿಣರಾಯಿ ವಿಜಯನ್

• ಪ್ರಸ್ತುತ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾರ್ಯನಿರ್ವಾಹಕರು : ವೈ.ಸಿ. ಮೋದಿ

• ಇತ್ತೀಚೆಗೆ ಸಲಿಂಗಿಗಳು ಒಟ್ಟಿಗೆ ಬಾಳಲು ಅವಕಾಶ ನೀಡುವಂಥ ಮಸೂದೆಗೆ ಅನುಮೋದನೆ ನೀಡಿದ ದೇಶ :  ಥಾಯ್ಲೆಂಡ್‌

• ಪ್ರಸ್ತುತ ಸಿಂಗಪುರದ ಪ್ರಧಾನಿ : ಲೀ ಸೆನ್ ಲೂಂಗ್‌.

• ಕಜಕಸ್ತಾನ ದೇಶದ ರಾಜಧಾನಿ : ಅಸ್ಥಾನ್.
- ಇದು ಒಂದು ಖಂಡಾಂತರ ದೇಶವಾಗಿದ್ದು, ಹೆಚ್ಚಾಗಿ ಮಧ್ಯ ಏಷ್ಯಾದಲ್ಲಿದೆ, ಅದರ ಹೆಚ್ಚಿನ ಪಶ್ಚಿಮ ಭಾಗಗಳು ಪೂರ್ವ ಯುರೋಪಿನಲ್ಲಿದೆ. ಇದು ವಿಶ್ವದ ಅತಿದೊಡ್ಡ ಭೂ ಬಂದು (landlocked) ದೇಶವಾಗಿದೆ
- ಇದರ ಪ್ರಸ್ತುತ ಅಧ್ಯಕ್ಷ : ಕಸ್ಯಮ್ ಜೋಮಾರ್ಟ್ ಟೊಕಯೇವ್

• ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ : ಟೆಡ್ರೊಸ್ ಅದನೊಮ್ ಗೆಬ್ರೆಯೆಸಸ್

• ಪರಿಣತ ಉದ್ಯೋಗಿಗಳ ಬೇಡಿಕೆ, ಪೂರೈಕೆ ಅಂತರ ತಗ್ಗಿಸಲು ಮತ್ತು ಉದ್ಯೋಗ ಮಾರುಕಟ್ಟೆಯ ಮಾಹಿತಿ ಸುಧಾರಿಸುವ ಉದ್ದೇಶಕ್ಕೆ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ (ಎಂಎಸ್‌ಡಿಇ) ಸಚಿವಾಲಯವು ಆತ್ಮನಿರ್ಭರ ಸ್ಕಿಲ್ಡ್‌ ಎಂಪ್ಲಾಯಿ ಎಂಪ್ಲಾಯರ್‌ ಮ್ಯಾಪಿಂಗ್‌ (ಅಸೀಮ್‌–ASEEM)  ಹೆಸರಿನ ಪ್ರತ್ಯೇಕ ಅಂತರ್ಜಾಲ ತಾಣ ಆರಂಭಿಸಿದೆ.
- ಅಂತರ್ಜಾಲ ತಾಣ : (https://smis.nsdcindia.org/)


• ವಿಶ್ವದ ಆಗ್ರ ಹತ್ತರ ಪಟ್ಟಿಯಲ್ಲಿ ಕಾಣಿಸಿಕೊಂಡ ಏಷ್ಯಾದ ಏಕೈಕ ಸಿರಿವಂತ ಎಂಬ ಖ್ಯಾತಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ನ ಒಡೆಯ ಮುಕೇಶ್‌ ಅಂಬಾನಿ ಪಾತ್ರರಾಗಿದ್ದಾರೆ.
- ವಿಶ್ವ ಸಿರಿವಂತರ ಪಟ್ಟಿಯಲ್ಲಿ ವಾರನ್‌ ಬಫೆಟ್‌ ಅವರನ್ನು ಹಿಂದಿಟ್ಟಿರುವ ಅವರು 8ನೇ ಸ್ಥಾನಕ್ಕೆ ಏರಿ ಹೊಸ ದಾಖಲೆ ಬರೆದಿದ್ದಾರೆ.
- ‘ಬ್ಲೂಮ್ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕ’ದ ಪ್ರಕಾರ, 68.3 ಬಿಲಿಯನ್ ಡಾಲರ್‌ ಆಸ್ತಿ ಹೊಂದಿರುವ ಮುಕೇಶ್‌ ಅಂಬಾನಿ, ಗುರುವಾರದ 67.9 ಬಿಲಿಯನ್ ಡಾಲರ್‌ಗಳ ಸಿರಿವಂತ ವಾರನ್‌ ಬಫೆಟ್‌ ಅವರನ್ನು ಹಿಂದೆ ಸರಿಸಿದ್ದಾರೆ.

• ಬೋಯಿಂಗ್ ಎಲ್ಲಾ ಹೊಸ ಮಾದರಿಯ AH-64E ಅಪಾಚೆ ಮತ್ತು CH-47F(I)ಚಿನೂಕ್ ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ  ಪೂರೈಕೆ ಮಾಡುವ ಕಾರ್ಯ ಪೂರ್ಣಗೊಳಿಸಿದೆ ಎಂದು ಬೋಯಿಂಗ್ ಡಿಫೆನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಅಹುಜಾ ತಿಳಿಸಿದ್ದಾರೆ.

• ಪ್ರಸ್ತುತ ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ : ಕೆ. ವಿಜಯ್ ರಾಘವನ್.

• ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ 750 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಯನ್ನು ಮಧ್ಯ ಪ್ರದೇಶದ ರೇವಾದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆ.
— ಮೂರು ಸೌರ ವಿದ್ಯುತ್ ಉತ್ಪಾದನೆ ಘಟಕಗಳನ್ನು ಈ ಯೋಜನೆ ಹೊಂದಿದ್ದು ಪ್ರತಿ ಘಟಕ 250 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಘಟಕಗಳು ಸೌರ ಪಾರ್ಕ್ ಒಳಗಡೆ 500 ಹೆಕ್ಟೇರ್ ವಿಸ್ತಾರವಾದ ಪ್ರದೇಶದಲ್ಲಿದೆ.

- ರೇವಾವನ್ನು ನರ್ಮದಾ ನದಿ ಮತ್ತು ಬಿಳಿ ಹುಲಿಯ ಕಾರಣದಿಂದ ಗುರುತಿಸಲಾಗುತ್ತದೆ.

- ಸರ್ಕಾರಿ ಸ್ವಾಮ್ಯದ ಭಾರತೀಯ ಸೌರ ವಿದ್ಯುತ್ ನಿಗಮ ಮತ್ತು ಮಧ್ಯಪ್ರದೇಶ ಊರ್ಜಾ ವಿಕಾಸ ನಿಗಮ ನಿಯಮಿತದ ಜಂಟಿ ಸಹಭಾಗಿತ್ವದ ಯೋಜನೆ ಇದಾಗಿದೆ. ಇದು ತಲಾ 250 ಮೆಗಾವ್ಯಾಟ್ ಉತ್ಪಾದಿಸುವ ಮೂರು ಘಟಕಗಳನ್ನು ಹೊಂದಿದೆ.

- ರಾಜ್ಯದ ಹೊರಗಿನ ಸಾಂಸ್ಥಿಕ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವ ಮೊಟ್ಟಮೊದಲ ಸೌರವಿದ್ಯುತ್ ಘಟಕ ಇದಾಗಿದೆ. ದೆಹಲಿ ಮೆಟ್ರೊ ರೈಲು ನಿಗಮ ಈ ಯೋಜನೆಯಿಂದ ಶೇಕಡ 24ರಷ್ಟು ವಿದ್ಯುತ್ ಪಡೆಯಲಿದೆ. ಉಳಿದ ಶೇಕಡ 25ರಷ್ಟು ವಿದ್ಯುತ್ತನ್ನು ಮಧ್ಯಪ್ರದೇಶ ಡಿಸ್ಕಾಂಗಳಿಗೆ ಪೂರೈಸಲಿದೆ.

• ಪ್ರಸ್ತುತ ರಿಸರ್ವ್ ಬ್ಯಾಂಕ್ ನ ಗವರ್ನರ್ : ಶಕ್ತಿಕಾಂತ್ ದಾಸ್
- ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ : ರಜನೀಶ್ ಕುಮಾರ್

• ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ  ಪಾವಗಡದಲ್ಲಿ 2 ಸಾವಿರ ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಪಾರ್ಕ್ ಮಾಡಿದ್ದು, ಈಗಾಗಲೇ  ವಿದ್ಯುತ್ ಉತ್ಪಾದನೆ ಆರಂಭವಾಗಿದೆ. ಸುಮಾರು 13 ಸಾವಿರ ಎಕರೆ ಪ್ರದೇಶದಲ್ಲಿ ಈ ಪಾರ್ಕ್ ಮಾಡಲಾಗಿದ್ದು, ಒದು ಏಷ್ಯಾದ ದೊಡ್ಡ ಸೋಲಾರ್ ಪಾರ್ಕ್ ಎಂಬ ಖ್ಯಾತಿ ಪಡೆದಿದೆ.

• ಹಾಕಿ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ್ ಮುಷ್ತಾಕ್ ಅಹಮದ್ ಅವರು ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಹಿರಿಯ ಉಪಾಧ್ಯಕ್ಷ, ಮಣಿಪುರದ ಗ್ಯಾನೆಂದ್ರೊ ನಿಂಗೊಂಬಮ್ ಅವರನ್ನು ನೇಮಕ ಮಾಡಲಾಗಿದೆ.

- ಪ್ರಸ್ತುತ ಮಧ್ಯ ಪ್ರದೇಶದ ಮುಖ್ಯಮಂತ್ರಿ : ಶಿವರಾಜ್ ಸಿಂಗ್ ಚೌಹಾಣ್.
- ರಾಜ್ಯಪಾಲರು : ಆನಂದಿಬೆನ್ ಪಟೇಲ್.

• ಇತ್ತೀಚೆಗೆ ತಾಯಿಗೆ ಕೋವಿಡ್-19 ಸೋಂಕು ಪರೀಕ್ಷೆ ನೆಗೆಟೀವ್ ಬಂದಿದ್ದರೂ ನವಜಾತ ಶಿಶುವಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಘಟನೆ ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ವರದಿಯಾಗಿದ್ದು, ಭ್ರೂಣದಲ್ಲಿ ಕೋವಿಡ್-19 ಸೋಂಕು ತಗುಲಿರುವ ವಿಶ್ವದ ಮೊದಲ ಪ್ರಕರಣ ಇದು ಎಂದು ಹೇಳಿದ್ದಾರೆ

• ಪ್ರಸ್ತುತ ರಾಜಸ್ತಾನದ ಮುಖ್ಯಮಂತ್ರಿ : ಅಶೋಕ್ ಗೆಹ್ಲೊಟ್.

No comments:

Post a Comment