"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Wednesday, 8 July 2020

•► ️ಜುಲೈ 07 & 08 ರ (07 & 08 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು : (Important facts from the current events of 07 & 08 July 2020)

•► ️ಜುಲೈ 07 & 08 ರ (07 & 08 July 2020) ಪ್ರಚಲಿತ ಘಟನೆಗಳಿಂದ ಆಯ್ದ ಪ್ರಮುಖ ಮಾಹಿತಿಗಳು :
(Important facts from the current events of  07 & 08 July 2020)

━━━━━━━━━━━━━━━━━━━━━

★ ಪ್ರಚಲಿತ ಘಟನೆಗಳು
(current affairs notes)



• ಇತ್ತೀಚೆಗೆ ಚಳಿಗಾಲದಲ್ಲಿ ಭಾರತದ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಅನುಕೂಲವಾಗಲೆಂದು 'ವಿಂಟರ್‌–ಗ್ರೇಡ್‌ ಡೀಸೆಲ್‌' ಎಂಬ ವಿಶೇಷ ತೈಲವನ್ನು  ಬಿಡುಗಡೆ ಮಾಡಿದವರು : ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ)
— ಮೈನಸ್‌ (–) 33 ಡಿಗ್ರಿ ಸೆಲ್ಸಿಯಸ್‌ನಷ್ಟು ಶೀತಮಯ ವಾತಾವರಣದಲ್ಲೂ ಬಳಕೆಗೆ ಅನುವಾಗುತ್ತದೆ.
— ಪ್ರಸ್ತುತ IOC ಯ ಅಧ್ಯಕ್ಷರು: ಸಂಜೀವ್ ಸಿಂಗ್
— ಪ್ರಧಾನ ಕಚೇರಿ: ನವದೆಹಲಿ

• ಪ್ರಸ್ತುತ ಕೇಂದ್ರ ವಿಜ್ಞಾನ ಕೈಗಾರಿಕೆಗಳ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕರು : ಡಾ.ಶೇಖರ್ ಮಂಡೆ

• ''ನೆಟ್‌ ಜೀರೊ' ಯೋಜನೆ' —ಸಾರ್ವಜನಿಕ ಸಾರಿಗೆ ನೆಟ್‌ವರ್ಕ್ ಅನ್ನು ಇಂಗಾಲ ಮುಕ್ತಗೊಳಿಸಲು ನಿರ್ಧರಿಸಿ ರೂಪಿಸಿರುವ ಕೇಂದ್ರ ಸರ್ಕಾರದ ಯೋಜನೆ.

• ಪ್ರಸ್ತುತ ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್ಐ) ಅಧ್ಯಕ್ಷ : ಅದಿಲ್ಲೆ ಸುಮಾರಿವಲ್ಲಾ.

• 25 ವರ್ಷಗಳ ಸುಧೀರ್ಘ ಸೇವೆಯ ನಂತರ ರಾಷ್ಟ್ರೀಯ ಅಥ್ಲೆಟಿಕ್ಸ್ ಮುಖ್ಯ ಕೋಚ್ ಹುದ್ದೆಗೆ  ರಾಜೀನಾಮೆ ಸಲ್ಲಿಸಿದ ಬಹದ್ದೂರ್ ಸಿಂಗ್.

• ಕೊಬ್ಬರಿ ಎಣ್ಣೆಯನ್ನು ಸುಮಾರು 4,000 ವರ್ಷಗಳ ಹಿಂದಿನಿಂದಲೂ ಆಯುರ್ವೇದ ಔಷಧವಾಗಿ ಗುರುತಿಸಲಾಗಿದೆ. ಕೊಬ್ಬರಿ ಎಣ್ಣೆಯನ್ನು ಸೇವಿಸಿದಾಗ ಅಥವಾ ಮೈಗೆ ಹಚ್ಚಿದಾದ ಅದು 'ಲಾರಿಕ್‌ ಆಸಿಡ್‌' ಅನ್ನು ಬಿಡುಗಡೆ ಮಾಡುತ್ತದೆ. ವೈರಸ್‌, ಬ್ಯಾಕ್ಟೀರಿಯಾ, ಅಥವಾ ಫಂಗಸ್‌ನತಂಹ ಕ್ರಿಮಿಗಳನ್ನು ಲಾರಿಕ್‌ ಆಸಿಡ್‌ ಕೊಲ್ಲಬಲ್ಲದು.
- ಲಾರಿಕ್‌ ಆಸಿಡ್‌ — ಸ್ಯಾಚುರೇಟೆಡ್‌ ಕೊಬ್ಬಿನಾಂಶದ ರೂಪ.

• ರೈಲ್ವೆ ಓವರ್‌ಹೆಡ್‌ ಲೈನ್‌ಗಳಿಗೆ ನೇರವಾಗಿ ವಿದ್ಯುತ್ ಸರಬರಾಜು ಮಾಡಲು ಭಾರತೀಯ ರೈಲ್ವೆಯು ಮಧ್ಯಪ್ರದೇಶದ ಬೈನಾದಲ್ಲಿ ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸಿದ್ದು, ವಿಶ್ವದಲ್ಲಿ ಈ ರೀತಿಯ ಯೋಜನೆ ಕೈಗೊಂಡಿರುವ ದೇಶಗಳಲ್ಲಿ ಭಾರತ ಪ್ರಥಮವಾಗಿದೆ.
- ವಿದ್ಯುತ್ ಲೋಕೊಮೋಟಿವ್ ವ್ಯವಸ್ಥೆಯ ಮೂಲಕ ಸಂಚರಿಸುವ ರೈಲುಗಳಿಗೆ ಸೌರಶಕ್ತಿಯ ಮೂಲಕ ನೇರವಾಗಿ ಓವರ್‌ಹೆಡ್ ಲೈನ್‌ಗಳಿಗೆ ವಿದ್ಯುತ್ ಸರಬರಾಜು ಮಾಡುವ ಯೋಜನೆ.
- ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (ಬಿಎಚ್‌ಇಎಲ್‌) ಸಹಯೋಗದಲ್ಲಿ ಭಾರತೀಯ ರೈಲ್ವೆಯು ಮಧ್ಯಪ್ರದೇಶದ ಬೈನಾ ಟ್ರ್ಯಾಕ್ಷನ್ ಉಪ ಕೇಂದ್ರದಲ್ಲಿ 1.7 ಮೆಗಾ ವಾಟ್ ಸೌರಶಕ್ತಿ ಸ್ಥಾವರವನ್ನು ಸ್ಥಾಪಿಸಿದೆ. ಈ ಸ್ಥಾವರವು ವಾರ್ಷಿಕವಾಗಿ 25 ಲಕ್ಷ ಯೂನಿಟ್ ವಿದ್ಯುತ್‌ ಉತ್ಪಾದಿಸುತ್ತದೆ.

• ಪ್ರಸ್ತುತ ಕೇರಳ ರಾಜ್ಯದ ಮುಖ್ಯಮಂತ್ರಿ : ಪಿಣರಾಯಿ ವಿಜಯನ್

• ಬ್ರಿಟನ್ ನ ಪ್ರಮುಖ ವಿಜ್ಞಾನಿ ಮತ್ತು ಪ್ರಸ್ತುತ ಬ್ರಿಟನ್ ನ  ರಾಯಲ್ ಸೊಸೈಟಿಯ ಅಧ್ಯಕ್ಷರೂ ಕೂಡ ಆಗಿರುವವರು, ಭಾರತ ಮೂಲದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ :  ವೆಂಕಟರಮಣನ್ ರಾಮಕೃಷ್ಣನ್

• ಇತ್ತೀಚೆಗೆ ಭೂತಾನ್ ಗಡಿಯಲ್ಲಿರುವ 'ಸಕ್ತೆಂಗ್ (Sakteng)‌ ಅಭಯಾರಣ್ಯ'ಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭೂತಾನ್ ದೇಶಗಳ ನಡುವೆ ಭೂಗಡಿ ವಿವಾದ ಹುಟ್ಟಿಕೊಂಡಿದೆ.
- ಈ ಅಭಯಾರಣ್ಯವು ಅರುಣಾಚಲ ಪ್ರದೇಶದೊಂದಿಗೆ ಗಡಿ ಹಂಚಿಕೊಳ್ಳುತ್ತದೆ.‌

• ಇತ್ತೀಚೆಗೆ ಅಮೆಚೂರ್ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ—The International Boxing Association) ನೂತನವಾಗಿ ಬಿಡುಗಡೆ ಮಾಡಿದ ವಿಶ್ವ Ranking ನ 52 ಕೆ. ಜಿ ವಿಭಾಗದಲ್ಲಿ ಭಾರತದ  ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಮತ್ತು ವಿಶ್ವ ಚಾಂಪಿಯನ್ ಷಿಪ್ ಬೆಳ್ಳಿ ಪದಕ ವಿಜೇತ ಅಮಿತ್ ಪಂಘಾಲ್ ಅಗ್ರಸ್ಥಾನ ಅಲಂಕರಿಸಿದ್ದಾರೆ.
• ಎಐಬಿಎ ಯ ಕೇಂದ್ರ ಕಚೇರಿ — ಲೌಸನ್ನೆ, ಸ್ವಿಟ್ಜರ್ಲೆಂಡ್
• ಪ್ರಸ್ತುತ ಎಐಬಿಎ ಯ ಅಧ್ಯಕ್ಷರು : ಗಫರ್ ರಾಖಿಮೋವ್

• ಇಂದು ಕನ್ನಡ ನಾಡು-ನುಡಿಗಳಿಗಾಗಿ ಹೋರಾಡಿದ ಅಗ್ರಗಣ್ಯ ಸಾಹಿತಿ, ಪತ್ರಕರ್ತ, ಕನ್ನಡ ಸಾಹಿತ್ಯಲೋಕದ ಕಾದಂಬರಿ ಸಾರ್ವಭೌಮ, ಕಥೆಗಾರ, ನಾಟಕಕಾರ ಮತ್ತು ಸಂಪಾದಕರಾಗಿಯೂ ಪ್ರಸಿದ್ಧರಾಗಿದ್ದ ಅರಕಲಗೂಡು ನರಸಿಂಹರಾಯ ಕೃಷ್ಣರಾಯ (ಅ.ನ.ಕೃ) ರವರ ಪುಣ್ಯಸ್ಮರಣೆ


• ಅಂಡಮಾನ್ ನಿಕೋಬಾರ್ ಬಂಗಾಳ ಕೊಲ್ಲಿಯಲ್ಲಿದೆ.
-ಇದು ಭಾರತದ ದಕ್ಷಿಣದ ತುತ್ತತುದಿಯಾಗಿದ್ದು ಸುಮಾರು 8000 ಚದರ ಕಿಲೋಮೀಟರ್ ಹರಡಿದೆ.
- ದ್ವೀಪಸಮೂಹದ ರಾಜಧಾನಿ : ಪೋರ್ಟ್ ಬ್ಲೇರ್‌.
- ಅಂಡಮಾನ ಮತ್ತು ನಿಕೋಬಾರ್ ಗಳು ಎರಡು ಪ್ರತ್ಯೇಕ ದ್ವೀಪ ಸಮೂಹಗಳಾಗಿದ್ದು 10 ಡಿಗ್ರಿ ಉತ್ತರ ಅಕ್ಷಾಂಶದಿಂದ ಬೇರ್ಪಟ್ಟಿವೆ.
- ಪ್ರಪಂಚದ ಅತ್ಯಂತ ಪುರಾತನ ಜನಾಂಗಗಳಿಗೆ ಸೇರಿದ ಜಾರಾವಾಸ್, ಒಂಗೇಸ್ ಮತ್ತು ಸೆಂಟಿನಲೀಸ್ ಪಂಗಡದವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಕಂಡುಬರುತ್ತಾರೆ.
- ಏಷ್ಯಾದಲ್ಲಿ ಅತ್ಯುತ್ತಮ ಬೀಚ್‌ ಎಂದು ಹೆಸರಾಗಿರುವ ಹ್ಯಾವ್ಲಾಕ್‌ ದ್ವೀಪ ಇಲ್ಲಿದೆ.

• ಅಂಡಮಾನ್‌ ಮತ್ತು ನಿಕೋಬಾರ್‌ನ ಮೂರು ದ್ವೀಪಗಳಿಗೆ 2018ರಲ್ಲಿ ಮರು ನಾಮಕರಣ ಮಾಡಿದ್ದಾರೆ. - ರೋಸ್‌ ಐಲ್ಯಾಂಡ್‌ ದ್ವೀಪವನ್ನು ನೇತಾಜಿ ಸುಭಾಶ್ಚಂದ್ರ ಬೋಸ್‌ ದ್ವೀಪ,
- ನೀಲ್‌ ಐಲ್ಯಾಂಡ್‌ ಅನ್ನು ಶಹೀದ್‌ ದ್ವೀಪ, ಮತ್ತು ಹ್ಯಾವ್ಲಾಕ್‌ ದ್ವೀಪವನ್ನು ಸ್ವರಾಜ್‌ ದ್ವೀಪ ಎಂದು ಹೊಸ ಹೆಸರಿನಿಂದ ಕರೆದಿದ್ದಾರೆ.


• ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಆರೋಗ್ಯ ಸೇವೆಗಳ ಮುಖ್ಯಸ್ಥ : ಮೈಕ್‌ ರೇಯಾನ್‌

• ಪ್ರಸ್ತುತ ಬ್ರೆಜಿಲ್ ದೇಶದ ಅಧ್ಯಕ್ಷ : ಜೈರ್ ಬೋಲ್ಸನಾರೊ

• ಇತ್ತೀಚೆಗೆ ಕುವೈತ್‌ನಲ್ಲಿ ಕೆಲಸ ಮಾಡುವ ವಿದೇಶಿಯರ ಪ್ರಮಾಣಕ್ಕೆ ಕೋಟ ನಿಗದಿಮಾಡುವ ಕರಡು ಮಸೂದೆಗೆ ಅಲ್ಲಿನ ಸಂಸತ್‌ ಸಮಿತಿಯು ಒಪ್ಪಿಗೆ ಸೂಚಿಸಿದೆ.
- ಮಸೂದೆಯ ಪ್ರಕಾರ ಕುವೈತ್‌ನಲ್ಲಿ ಭಾರತೀಯರ ಸಂಖ್ಯೆಯು ಅಲ್ಲಿನ ಒಟ್ಟು ಜನಸಂಖ್ಯೆಯ ಶೇ 15ನ್ನು ಮೀರುವಂತಿಲ್ಲ. ಪ್ರಸಕ್ತ ಅಲ್ಲಿ ಭಾರತೀಯ ಮೂಲದವರ ಸಂಖ್ಯೆ 14.5 ಲಕ್ಷ ಇದೆ. ಈ ಕಾನೂನು ಜಾರಿಯಾದರೆ ಸುಮಾರು 8 ಲಕ್ಷ ಭಾರತೀಯರು ಅಲ್ಲಿಂದ ಹೊರಹೋಗಬೇಕಾಗುತ್ತದೆ.
- ಕುವೈತ್‌ನ ಪ್ರಸಕ್ತ ಜನಸಂಖ್ಯೆಯು 43 ಲಕ್ಷ. ಅದರಲ್ಲಿ 13 ಲಕ್ಷ ಸ್ಥಳೀಯರಾಗಿದ್ದು, 30 ಲಕ್ಷ ಮಂದಿ  ವಲಸಿಗರಾಗಿದ್ದಾರೆ.

- ಕುವೈತ್ ಏಷ್ಯಾ ಖಂಡದ ಪರ್ಷಿಯನ್ ಕೊಲ್ಲಿಯ ಕರಾವಳಿಯಲ್ಲಿರುವ ಒಂದು ಸ್ವತಂತ್ರ ಅರಬ್ ದೇಶ.
- ಕುವೈತ್ ಎಂದರೆ ಅರಬಿಕ್ ಭಾಷೆಯಲ್ಲಿ ನೀರಿನ ಹತ್ತಿರ ಕಟ್ಟಿರುವ ಕೋಟೆ ಎಂದು ಅರ್ಥ.
- ತೈಲ ಉತ್ಪಾದನೆಯಲ್ಲಿ ಕುವೈತಿನದು ವಿಶ್ವದಲ್ಲಿ ನಾಲ್ಕನೆಯ ಸ್ಥಾನ. ರಫ್ತಿನಲ್ಲಿ ಎರಡನೆಯ ಸ್ಥಾನ.
- ಕುವೈತ್‍ನಲ್ಲಿ ವಿಶ್ವದಲ್ಲಿಯೇ ದೊಡ್ಡದಾದ ಸಮದ್ರಜಲಬಟ್ಟಿ ಇದೆ.

• ಕ್ರಿಕೆಟ್ ಜನಕರ ನಾಡು : ಇಂಗ್ಲೆಂಡ್

• ಪ್ರಸ್ತುತ ನೀತಿ ಆಯೋಗದ ಸಿಇಒ : ಅಮಿತಾಬ್ ಕಾಂತ್

• ಕೊರೋನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಚೀನಾ ಬೆಂಬಲಕ್ಕೆ ನಿಂತಿದೆ ಎಂದು ಆರೋಪಿಸಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಅಧಿಕೃತವಾಗಿ ಡಬ್ಲ್ಯೂಹೆಚ್ಒ ಸಂಸ್ಥೆಯಿಂದ ಔಪಚಾರಿಕವಾಗಿ ಹೊರಗೆ ಬಂದಿದೆ.
- ಈ ಕುರಿತು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರಿಗೆ ಅಮೆರಿಕಾ ಮಾಹಿತಿ ರವಾನಿಸಿದ್ದು, ಜು.8 2021ರಿಂದ ಅಮೆರಿಕಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಗುಳಿಯಲಿದೆ ಎಂದು ತಿಳಿಸಿದೆ

• ಪ್ರಸ್ತುತ ಭಾರ್ತಿ ಏರ್ಟೆಲ್ ನ ಸಿಎಂಒ : ಶಾಶ್ವತ್ ಶರ್ಮಾ

• ಮಂಗಳ ಗ್ರಹವನ್ನು ಸುತ್ತುವ ಎರಡು ಚಂದ್ರರು :  ಫೋಬೊಸ್ ಮತ್ತು ಡೀಮೋಸ್

No comments:

Post a Comment