"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday 28 July 2020

•► ️"ಅಲಿಪ್ತ ರಾಷ್ಟ್ರಗಳ ಚಳವಳಿ (NAM) 2020ರ ಶೃಂಗಸಭೆ" : (Non-Aligned Movement (NAM) Conference

•► ️"ಅಲಿಪ್ತ ರಾಷ್ಟ್ರಗಳ ಚಳವಳಿ (NAM) 2020ರ ಶೃಂಗಸಭೆ" :
(Non-Aligned Movement (NAM) Conference
━━━━━━━━━━━━━━━━━━━━━━━
★ ಐಎಎಸ್ / ಕೆಎಎಸ್ ಪರೀಕ್ಷೆ ನೋಟ್ಸ್
(IAS/KAS Exam Preparation Short Notes)


ವಿಶ್ವಸಂಸ್ಥೆಯನ್ನು ಬಿಟ್ಟರೆ ಎರಡನೇ ಅತಿದೊಡ್ಡ ಒಕ್ಕೂಟ ಎನಿಸಿಕೊಂಡಿರುವ ಅಲಿಪ್ತ ರಾಷ್ಟ್ರಗಳ ಚಳುವಳಿ ಅಥವಾ ನಾನ್ ಅಲೈನಡ್ ಮೂವ್‌ಮೆಂಟ್‌ನಲ್ಲಿ (ನಾಮ್) 120ರಷ್ಟು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸದಸ್ಯತ್ವ + ಅಜರ್‌‍ಬೈಜಾನ್ ಗಣರಾಜ್ಯದಲ್ಲಿ  ಆಯೋಜನೆ + ‘ಕೋವಿಡ್ -19 ವಿರುದ್ಧ ಒಂದಾಗಿ’ ಎಂಬ ಧ್ಯೆಯವಾಕ್ಯದೊಂದಿಗೆ ನಡೆದ ನಾಮ್ ಸಂಪರ್ಕ ಗುಂಪಿನ ಆನ್ ಲೈನ್ ಶೃಂಗಸಭೆಯನ್ನು ನಾಮ್ ಅಧ್ಯಕ್ಷ, ಅಜರ್ಬೈಜಾನ್ ಗಣರಾಜ್ಯದ ಅಧ್ಯಕ್ಷ ಇಲ್ಹಾಮ್ ಅಲಿಯೇವ್ ಆಯೋಜನೆ. + ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಮತ್ತು ಕೆರಿಬಿಯನ್ ಮತ್ತು ಯುರೋಪಿನ ಸದಸ್ಯ ರಾಷ್ಟ್ರಗಳು ಸೇರಿದಂತೆ ಇತರ 30 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಮತ್ತು ನಾಯಕರೊಂದಿಗೆ ಇದರಲ್ಲಿ ಭಾಗಿ + ವಿಶ್ವಸಂಸ್ಥೆಯ ಮಹಾಧಿವೇಶನದ ಅಧ್ಯಕ್ಷ ಪ್ರೊ. ತಿಜ್ಜಾನಿ ಮುಹಮದ್ ಬಂಡೆ, ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಆಂಟೋನಿಯೋ ಗುತೇರಸ್, ಆಫ್ರಿಕಾ ಒಕ್ಕೂಟದ ಅಧ್ಯಕ್ಷ ಮೂಸ ಫಕಿ ಮಹಾಮತ್, ಐರೋಪ್ಯ ಒಕ್ಕೂಟದ ಉನ್ನತ ಪ್ರತಿನಿಧಿ ಜೋಸೆಫ್ ಬೋರೆಲ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ. ಟೆಡ್ರೊಸ್ ಗೆಬ್ರೆಯೆಸಸ್ ಭಾಗಿ + ಕೋವಿಡ್-19 ವಿರುದ್ಧದ ಹೋರಾಟದಲ್ಲಿ ತಮ್ಮ ಮೂಲ ವೈದ್ಯಕೀಯ, ಸಾಮಾಜಿಕ ಮತ್ತು ಮಾನವೀಯ ಅಗತ್ಯಗಳನ್ನು ಪ್ರತಿಬಿಂಬಿಸುವ ಸಾಮಾನ್ಯ ಡಾಟಾ ಬೇಸ್ ಸ್ಥಾಪಿಸುವ ಮೂಲಕ ಸದಸ್ಯ ರಾಷ್ಟ್ರಗಳ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ಗುರುತಿಸಲು ನಾಯಕರು ‘ಕಾರ್ಯಪಡೆ’ ರಚಿಸುವುದಾಗಿ ಘೋಷಣೆ. + ಭಾರತವು ಇದರ ಸ್ಥಾಪಕ ಸದಸ್ಯ ರಾಷ್ಟ್ರ + ಅಜರ್‌‍ಬೈಜಾನ್ ಗಣರಾಜ್ಯದ ರಾಜಧಾನಿ ಬಾಕು ನಗರ.

No comments:

Post a Comment