"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Tuesday, 7 July 2020

•► ️ ವಿಂಟರ್–ಗ್ರೇಡ್‌ ಡೀಸೆಲ್‌ : (Winter Diesel)

-•► ️ ವಿಂಟರ್–ಗ್ರೇಡ್‌ ಡೀಸೆಲ್‌ :
(Winter Diesel)
━━━━━━━━━━━━━━━━


★ ವಿಜ್ಞಾನ ಮತ್ತು ತಂತ್ರಜ್ಞಾನ
(Science & Technology)

★ ಪ್ರಚಲಿತ ಘಟನೆಗಳು.
(Current Affairs)


- ಲಡಾಖ್ ರೀತಿಯ ಎತ್ತರ ಪ್ರದೇಶಗಳು ಹಾಗೂ ಕಡಿಮೆ ಉಷ್ಣಾಂಶದ ಹೆಪ್ಪುಗಟ್ಟುವ ವಾತಾವರಣವಿರುವ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಸಾಮಾನ್ಯ ಡೀಸೆಲ್‌ ಬಳಕೆ ಅಸಾಧ್ಯವಾಗುತ್ತದೆ. ಅಂಥ ಸ್ಥಳಗಳಲ್ಲಿ ವಾಹನಗಳ ಸಂಚಾರಕ್ಕೆ ಅನುವಾಗುವ ನಿಟ್ಟಿನಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ‌) 2019ರಲ್ಲಿ ವಿಂಟರ್‌ ಡೀಸೆಲ್‌ ಪರಿಚಯಿಸಿತು.

- ಉಷ್ಣಾಂಶ ಕಡಿಮೆಯಾಗುತ್ತಿದ್ದಂತೆ ಡೀಸೆಲ್‌ ಸಹ ಹೆಪ್ಪುಗಟ್ಟುತ್ತದೆ. ವಿಂಟರ್‌ ಡೀಸೆಲ್‌ನಿಂದಾಗಿ ಲಡಾಖ್, ಕಾರ್ಗಿಲ್‌, ಕಾಜಾ ಹಾಗೂ ಕಿಲಾಂಗ್‌ ಪ್ರದೇಶಗಳಲ್ಲಿ ಚಳಿಗಾಲದಲ್ಲಿಯೂ ವಾಹನಗಳು ನಿಲ್ಲದೆ ಸಂಚರಿಸುತ್ತಿವೆ.

- ಚಳಿಗಾಲದಲ್ಲಿನ ಬಳಕೆಗಾಗಿಯೇ ತಯಾರಿಸಲಾಗಿರುವ ವಿಶೇಷ ತೈಲ ಮೈನಸ್‌ (–) 33 ಡಿಗ್ರಿ ಸೆಲ್ಸಿಯಸ್‌ನಷ್ಟು ಶೀತಮಯ ವಾತಾವರಣದಲ್ಲೂ ಬಳಕೆಗೆ ಅನುವಾಗುತ್ತದೆ.

- ವಿಂಟರ್‌ ಡೀಸೆಲ್‌ನಲ್ಲಿ ಅಡಿಟಿವ್ಸ್‌ (ಸಂಯೋಜಕಗಳು) ಕಡಿಮೆ ಜಿಗುಟುತನ ಮಟ್ಟವನ್ನು ಉಳಿಸಿಕೊಳ್ಳುತ್ತವೆ. ಇಂಧನ ದಹನ ಕ್ರಿಯೆಯ ವೇಗ ಅಧಿಕವಾಗಿರುತ್ತದೆ (ಸೀಟೇನ್‌ ರೇಟಿಂಗ್‌)  ಹಾಗೂ ಸಲ್ಫರ್‌ (ಗಂಧಕ) ಅಂಶ ಕಡಿಮೆ ಇರುವುದರಿಂದ ಇಂಧನ ಕ್ಷಮತೆ ಹೆಚ್ಚುತ್ತದೆ.

- ವಿಂಟರ್‌ ಡೀಸೆಲ್‌ ಬಳಕೆಗೂ ಮುನ್ನ ಕಡಿಮೆ ಉಷ್ಣಾಂಶವಿರುವ ಪ್ರದೇಶಗಳಲ್ಲಿ ಡೀಸೆಲ್‌ ಜೊತೆಗೆ ಸೀಮೆಎಣ್ಣೆ (ಕೆರೊಸಿನ್‌) ಬೆರೆಸುವ ತಂತ್ರದ ಮೂಲಕ ಡೀಸೆಲ್‌ ಗಡ್ಡೆ ಕಟ್ಟದಂತೆ ಎಚ್ಚರ ವಹಿಸಲಾಗುತ್ತಿತ್ತು. ಇದರಿಂದಾಗಿ ವಾಯುಮಾಲಿನ್ಯ ಅತಿಯಾಗುತ್ತದೆ.

- ಭಾರತದ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಇದು ಪ್ರಮುಖ ಚಾಲನಾಶಕ್ತಿಯಾಗಿ ಬಳಕೆಯಾಗುತ್ತಿದೆ.
 ಗುಣಮಟ್ಟ ಆಶ್ವಾಸನೆ ನೀಡುವ ಭದ್ರತಾ ಪಡೆಗಳ ಮಹಾನಿರ್ದೇಶಾಲಯ (ಡಿಜಿಕ್ಯೂಎ) ಅನುಮತಿಯ ಮೇರೆಗೆ ಸೇನಾ ವಾಹನಗಳಿಗೆ ವಿಂಟರ್‌ ಬಳಕೆ ಮಾಡಲಾಗುತ್ತದೆ.


• ಪ್ರಸ್ತುತ ಸಶಸ್ತ್ರ ಪಡೆಗಳು ಬಳಸುತ್ತಿರುವ ತೈಲ :
━━━━━━━━━━━━━━━━━━━

ಐಒಸಿಎಲ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌, ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಕಂಪನಿಗಳು ದೇಶದ ಸಶಸ್ತ್ರ ಪಡೆಗಳಿಗೆ ಡೀಸೆಲ್‌ ಹೈ ಸಲ್ಫರ್‌ ಪೌರ್‌ ಪಾಯಿಂಟ್‌ (DHPP-W) ತೈಲ ಪೂರೈಸುತ್ತಿವೆ. ಈ ಗುಣಮಟ್ಟದ ಡೀಸೆಲ್‌ ಸಹ ಮೈನಸ್‌ (–) 30 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಉಷ್ಣಾಂಶದಲ್ಲಿಯೂ ವಾಹನ ಚಾಲನೆಗೆ ಸಹಕಾರಿಯಾಗಿರುತ್ತದೆ.

No comments:

Post a Comment