"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Thursday 23 July 2020

•► ಭಾರತದ ಅರಣ್ಯಗಳ ಸ್ಥಿತಿಗತಿ ವರದಿ’ (ಇಂಡಿಯಾ ಸ್ಟೇಟ್‌ ಆಫ್ ಫಾರೆಸ್ಟ್‌ ರಿಪೋರ್ಟ್‌) - 2019

•► ಭಾರತದ ಅರಣ್ಯಗಳ ಸ್ಥಿತಿಗತಿ ವರದಿ’ (ಇಂಡಿಯಾ ಸ್ಟೇಟ್‌ ಆಫ್ ಫಾರೆಸ್ಟ್‌ ರಿಪೋರ್ಟ್‌) - 2019━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)

★ ಪ್ರಚಲಿತ ಘಟನೆಗಳು.
(Current Affairs)


ದೇಶದ ಅರಣ್ಯ ಸಂಪನ್ಮೂಲಗಳ ಮೌಲ್ಯಮಾಪನವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಸುವ ಭಾರತ ಅರಣ್ಯ ಸಮೀಕ್ಷೆಯ ಈ ವರದಿಯಲ್ಲಿ, 3,976 ಚದರ ಕಿ.ಮೀ (ಶೇಕಡಾ 0.56 ) ಅರಣ್ಯ ವ್ಯಾಪ್ತಿ, 1,212 ಚದರ ಕಿ.ಮೀ (ಶೇಕಡಾ1.29 ) ಮರದ ಹೊದಿಕೆ ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ದೇಶದ ಕೆಲವು ಭಾಗಗಳಲ್ಲಿ ಅರಣ್ಯ ವೃದ್ಧಿಯಾಗಿದೆ..

ವರದಿಯ ಪ್ರಕಾರ, 2017ಕ್ಕೆ ಹೋಲಿಸಿದರೆ ಬಿದಿರು ಬೆಳೆಯುವ ಪ್ರದೇಶದಲ್ಲಿ 3,229 ಚದರ ಕಿ.ಮೀ ಹೆಚ್ಚಳವಾಗಿದೆ. ದೇಶದ ಒಟ್ಟು ಬಿದಿರು ಬೆಳೆಯುವ ಪ್ರದೇಶವು 1,60,037 ಚದರ ಕಿ.ಮೀ ಎಂದು ಅಂದಾಜಿಸಲಾಗಿದೆ.

ದೇಶದ ಒಟ್ಟು ಅರಣ್ಯ ಪ್ರದೇಶವು 7,12,249 ಚದರ ಕಿ.ಮೀ ಆಗಿದ್ದು, ಇದು ದೇಶದ ಭೌಗೋಳಿಕ ಪ್ರದೇಶದ ಶೇಕಡಾ 21.67 ರಷ್ಟಿದ್ದರೆ, ದೇಶದ ಅರಣ್ಯ ವ್ಯಾಪ್ತಿ ಶೇಕಡಾ 2.89 ರಷ್ಟಾಗಿದೆ ಅಂದರೆ, 95,027 ಚದರ ಕಿ.ಮೀ ಎಂದು ಅಂದಾಜಿಸಲಾಗಿದೆ.

ಅರಣ್ಯ ವ್ಯಾಪ್ತಿಯ ವೃದ್ಧಿಗೆ ಸಂಬಂಧಿಸಿದಂತೆ ಮೊದಲ ಐದು ಸ್ಥಾನಗಳನ್ನು ಕ್ರಮವಾಗಿ ಕರ್ನಾಟಕ (1,025 ಚದರ ಕಿ.ಮೀ), ಆಂಧ್ರಪ್ರದೇಶ (990 ಚದರ ಕಿ.ಮೀ), ಕೇರಳ (823 ಚದರ ಕಿ.ಮೀ), ಜಮ್ಮು ಮತ್ತು ಕಾಶ್ಮೀರ (371 ಚದರ ಕಿ.ಮೀ) ಮತ್ತು ಹಿಮಾಚಲ ಪ್ರದೇಶ (334 ಚದರ ಕಿ.ಮೀ) ಪಡೆದುಕೊಂಡಿದೆ ಎಂದು ವರದಿ ಹೇಳಿದೆ.
ದೇಶದ ಬೆಟ್ಟ ಗುಡ್ಡ ಜಿಲ್ಲೆಗಳಲ್ಲಿ 544 ಚದರ ಕಿ.ಮೀ ಅರಣ್ಯ ಪ್ರದೇಶ ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

• ಬುಡಕಟ್ಟು ಜಿಲ್ಲೆಗಳ ರೆಕಾರ್ಡ್ಡ್ ಫಾರೆಸ್ಟ್ ಏರಿಯಾ (ಆರ್‌ಎಫ್‌ಎ) :
━━━━━━━━━━━━━━━━━━━━
ಬುಡಕಟ್ಟು ಜಿಲ್ಲೆಗಳ ರೆಕಾರ್ಡ್ಡ್ ಫಾರೆಸ್ಟ್ ಏರಿಯಾ (ಆರ್‌ಎಫ್‌ಎ) ವ್ಯಾಪ್ತಿಯಲ್ಲಿ 741 ಚದರ ಕಿ.ಮೀ ಅರಣ್ಯ ವ್ಯಾಪ್ತಿಯು ಇಳಿಕೆ ಮತ್ತು ಹೊರಗಡೆ 1,922 ಚದರ ಕಿ.ಮೀ ಹೆಚ್ಚಳ ಕಂಡಿದೆ ಎಂದು ವರದಿ ತಿಳಿಸಿದೆ.

ಬುಡಕಟ್ಟು ಜಿಲ್ಲೆಗಳಲ್ಲಿ ಒಟ್ಟು ಅರಣ್ಯ ಪ್ರದೇಶ 4,22,351 ಚದರ ಕಿ.ಮೀ ಆಗಿದೆ, ಇದು ಈ ಜಿಲ್ಲೆಗಳ ಭೌಗೋಳಿಕ ಪ್ರದೇಶದ ಶೇಕಡಾ 37.54ರಷ್ಟು ಆಗಿದೆ.

ಅದೇ ರೀತಿ, 765 ಚದರ ಕಿ.ಮೀ (ಈಶಾನ್ಯ ಪ್ರದೇಶದಲ್ಲಿ ಶೇಕಡಾ 0.45) ವಿಸ್ತರಣೆಗೆ ಅರಣ್ಯ ವ್ಯಾಪ್ತಿಯು ಕಡಿಮೆಯಾಗಿದ್ದು, ಅದರ ಭೌಗೋಳಿಕ ಪ್ರದೇಶದ 1,70,541 ಚದರ ಕಿ.ಮೀ (ಶೇಕಡಾ 65.05) ಅರಣ್ಯ ಪ್ರದೇಶವನ್ನು ಹೊಂದಿದೆ.
"ಅಸ್ಸಾಂ ಮತ್ತು ತ್ರಿಪುರವನ್ನು ಹೊರತುಪಡಿಸಿ, ಈ ಪ್ರದೇಶದ ಎಲ್ಲಾ ರಾಜ್ಯಗಳು ಅರಣ್ಯ ವ್ಯಾಪ್ತಿಯಲ್ಲಿ ಇಳಿಕೆ ತೋರಿಸುತ್ತವೆ" ಎಂದು ವರದಿ ತಿಳಿಸಿದೆ.

ಹಿಂದಿನ ಮೌಲ್ಯಮಾಪನಕ್ಕೆ ಹೋಲಿಸಿದರೆ ದೇಶದಲ್ಲಿ ಉಷ್ಣ ವಲಯ (ಮ್ಯಾಂಗ್ರೋವ್) ವ್ಯಾಪ್ತಿಯು 54 ಚದರ ಕಿ.ಮೀ (ಶೇಕಡಾ 1.10) ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

No comments:

Post a Comment