•► ️ಜಾಗತಿಕ ಶಾಂತಿ ಸೂಚ್ಯಂಕ 2019 :
(Global Peace Index 2019)
━━━━━━━━━━━━━━━━━━━━━
★ ಪ್ರಚಲಿತ ಉಪಯುಕ್ತ ಸಮೀಕ್ಷೆಗಳು ಮತ್ತು ವಿಶೇಷ ವರದಿಗಳು (ಅಂಕಿ-ಅಂಶಗಳು)
(Current useful surveys and special reports-figures)
★ ಪ್ರಚಲಿತ ಘಟನೆಗಳು.
(Current Affairs)
ಆರ್ಥಿಕ ಮತ್ತು ಶಾಂತಿಗಾಗಿ ಇರುವ ಆಸ್ಟ್ರೇಲಿಯನ್ ಚಿಂತಕರ ಚಾವಡಿ ಸಂಸ್ಥೆ (‘ಇನ್‌ಸ್ಟಿಟ್ಯೂಟ್ ಫಾರ್ ಇಕನಾಮಿಕ್ಸ್ ಆ್ಯಂಡ್ ಪೀಸ್’) ಜಾಗತಿಕ ಶಾಂತಿ ಸೂಚ್ಯಂಕವನ್ನು ಸಿದ್ಧಪಡಿಸಿದೆ. ಆಸ್ಟ್ರೇಲಿಯಾದ ತಂತ್ರಜ್ಞ ಸ್ಟೀವ್ ಕಿಲ್ಲೆಲಿಯಾ ಈ ಸಂಸ್ಥೆಯನ್ನು ಸ್ಥಾಪಿಸಿದರು.
• ಸಮೀಕ್ಷೆಯ ಮಾನದಂಡಗಳು :
━━━━━━━━━━━━━
ಸಾಮಾಜಿಕ ಸುರಕ್ಷೆ ಮತ್ತು ಭದ್ರತೆ, ಮಿಲಿಟರೀಕರಣದ ಮಟ್ಟ ಹಾಗೂ ದೇಶೀಯ ಮತ್ತು ಅಂತರಾಷ್ಟ್ರೀಯ ಸಂಘರ್ಷದ ಸ್ಥಿತಿ- ಈ ಮೂರನ್ನು ಮಾನದಂಡವಾಗಿರಿಸಿಕೊಂಡು ಸಮೀಕ್ಷೆ ನಡೆಸಲಾಗಿದೆ.
ಈ ಬಾರಿಯ ವರದಿಯು ಶಾಂತಿ ಪರಿಸ್ಥಿತಿ ಮೇಲೆ ಹವಾಮಾನ ಬದಲಾವಣೆಯ ಪರಿಣಾಮದ ಅಂಶಗಳನ್ನು ಸಹ ಪ್ರಮುಖವಾಗಿ ಪರಿಗಣಿಸಲಾಗಿತ್ತು. 2008ರಿಂದ ಜಾಗತಿಕ ಶಾಂತಿ ಶೇಕಡ 3.8ರಷ್ಟು ಹದಗೆಟ್ಟಿರುವುದರಿಂದ ಈ ಅಂಶವನ್ನು ಸಹ ಗಮನಿಸಲಾಯಿತು ಎಂದು ವರದಿ ತಿಳಿಸಿದೆ.
ಜಗತ್ತಿನ ಶೇಕಡ 99.7ರಷ್ಟು ಜನಸಂಖ್ಯೆಯನ್ನು ಪರಿಗಣಿಸಿ ಈ ವರದಿ ಸಿದ್ಧಪಡಿಸಲಾಗಿದೆ. 86 ರಾಷ್ಟ್ರಗಳಲ್ಲಿ ಶಾಂತಿಯ ವಾತಾವರಣ ಸುಧಾರಿಸಿದ್ದರೆ, 76 ರಾಷ್ಟ್ರಗಳಲ್ಲಿ ಹದಗೆಟ್ಟಿದೆ ಎಂದು ವರದಿ ತಿಳಿಸಿದೆ.
• ಅಂಕಗಳನ್ನು ನೀಡುವಿಕೆ :
━━━━━━━━━━━
ಪಟ್ಟಿಯಲ್ಲಿರುವ ಪ್ರತೀ ರಾಷ್ಟ್ರಗಳ ಆಂತರಿಕ ಮತ್ತು ಬಾಹ್ಯ ಸಂಘರ್ಷ, ಮಿಲಿಟರಿ ಸಾಮರ್ಥ್ಯ, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಅಂಶಗಳ ಆಧಾರದ ಮೇಲೆ ಆಯಾ ರಾಷ್ಟ್ರಗಳಿಗೆ 1 ರಿಂದ ಐದು ಅಂಕ ನೀಡಲಾಗುತ್ತದೆ. ಈ ಪೈಕಿ 1 ಅತ್ಯುತ್ತಮ ಎಂದೂ 5 ಅತ್ಯಂತ ಕಳಪೆ ಎಂದು ಪರಿಗಣಿಸಲಾಗುತ್ತದೆ.
ಇನ್ನು ಈ ಬಾರಿ ಐಸ್ ಲೆಂಡ್ ದೇಶ ಅಗ್ರ ಸ್ಥಾನದಲ್ಲಿದ್ದು, 1.72 ಅಂಕಗಳನ್ನು ಹೊಂದಿದೆ. ಅಂತೆಯೇ ನ್ಯೂಜಿಲೆಂಡ್ 2ನೇ ಸ್ಥಾನದಲ್ಲಿದ್ದು, 1.221 ಅಂಕಗಳನ್ನು ಹೊಂದಿದೆ. 1.27 ಅಂಕಗಳೊಂದಿಗೆ ಪೋರ್ಚುಗಲ್ 3ನೇ ಸ್ಥಾನದಲ್ಲಿದೆ.
ಈ ಪಟ್ಟಿಯಲ್ಲಿ ಭಾರತ 2.605 ಅಂಕಗಳೊಂದಿಗೆ 141ನೇ ಸ್ಥಾನದಲ್ಲಿದೆ. 3.095 ಅಂಕಗಳೊಂದಿಗೆ ರಷ್ಯಾ 154ನೇ ಸ್ಥಾನದಲ್ಲಿದೆ. ಇನ್ನು 3.574 ಅಂಕಗಳೊಂದಿಗೆ ಆಫ್ಘಾನಿಸ್ತಾನ ಕೊನೆಯ ಸ್ಥಾನದಲ್ಲಿದೆ.
ಪ್ರಸಕ್ತ ವರ್ಷದ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತದ ಸ್ಥಾನ ಮತ್ತಷ್ಟು ಕುಸಿದಿದೆ. 163 ದೇಶಗಳಲ್ಲಿ ಭಾರತ 141ನೇ ಸ್ಥಾನ ಪಡೆದಿದೆ. ಕಳೆದ ವರ್ಷ 136ನೇ ಸ್ಥಾನವನ್ನು ಭಾರತ ಪಡೆದಿತ್ತು.
ಜಗತ್ತಿನಲ್ಲೇ ಅತ್ಯಂತ ಶಾಂತಿಯುತ ರಾಷ್ಟ್ರ ಎನ್ನುವ ಅಗ್ರಸ್ಥಾನವನ್ನು ಐಸ್‌ಲ್ಯಾಂಡ್ ಮತ್ತೊಮ್ಮೆ ಉಳಿಸಿಕೊಂಡಿದೆ. 2008ರಿಂದಲೂ ಐಸ್‌ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ಆಸ್ಟ್ರಿಯಾ, ಪೋರ್ಚುಗಲ್ ಮತ್ತು ಡೆನ್ಮಾರ್ಕ್ ನಂತರದ ಸ್ಥಾನದಲ್ಲಿವೆ.
ಅಫ್ಗಾನಿಸ್ತಾನ ಶಾಂತಿ ಸೂಚ್ಯಂಕದಲ್ಲಿ ಕೊನೆಯ ಸ್ಥಾನ ಪಡೆದಿದೆ. ಈ ಮೊದಲು ಹಿಂಸಾಚಾರದಿಂದ ತತ್ತರಿಸಿದ್ದ ಸಿರಿಯಾ ಕೊನೆಯ ಸ್ಥಾನದಲ್ಲಿತ್ತು. ನೆರೆಯ ರಾಷ್ಟ್ರ ಪಾಕಿಸ್ತಾನ 153ನೇ ಸ್ಥಾನದಲ್ಲಿದೆ.
ಭಾರತ, ಫಿಲಿಪ್ಪಿನ್ಸ್, ಜಪಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ, ಇಂಡೋನೇಷ್ಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನ ಅತಿ ಹೆಚ್ಚಿನ ಅಪಾಯಕಾರಿ ವಾತಾವರಣ ಎದುರಿಸುತ್ತಿವೆ ಎಂದು ಶಾಂತಿ ಸೂಚ್ಯಂಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಚೀನಾ, ಬಾಂಗ್ಲಾದೇಶ ಮತ್ತು ಭಾರತದ 39.3 ಕೋಟಿ ಜನ ಅಪಾಯಕಾರಿ ವಾತಾವರಣದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿಸಿದೆ.
• ವರದಿಯ ವಿಸ್ತೃತ ನೋಟ :
━━━━━━━━━━━━━
ಈ ಮೊದಲು ಹಿಂಸಾಚಾರದಿಂದ ತತ್ತರಿಸಿದ್ದ ಸಿರಿಯಾ ಕೊನೆಯ ಸ್ಥಾನದಲ್ಲಿತ್ತು. ಇದುವರೆಗೆ ಈ ಸ್ಥಾನದಲ್ಲಿದ್ದ ಸಿರಿಯಾ ಒಂದು ಸ್ಥಾನ ಮೇಲೇರಿದೆ. ದಕ್ಷಿಣ ಸುಡಾನ್, ಯೆಮನ್ ಮತ್ತು ಇರಾಕ್ ಕ್ರಮವಾಗಿ 161, 160 ಮತ್ತು 159ನೇ ಸ್ಥಾನದಲ್ಲಿದೆ. 2008ರಿಂದಲೂ ಐಸ್‌ಲ್ಯಾಂಡ್ ಅಗ್ರಸ್ಥಾನದಲ್ಲೇ ಸ್ಥಿರವಾಗಿದೆ.
ದಕ್ಷಿಣ ಏಶ್ಯಾ ರಾಷ್ಟ್ರಗಳಲ್ಲಿ ಭೂತಾನ್ 15ನೇ ಸ್ಥಾನ, ಶ್ರೀಲಂಕಾ 72, ನೇಪಾಳ 76 ಮತ್ತು ಬಾಂಗ್ಲಾದೇಶ 101ನೇ ಸ್ಥಾನದಲ್ಲಿದೆ. ಪಾಕಿಸ್ತಾನ 153ನೇ ಸ್ಥಾನದಲ್ಲಿದೆ. ಬಹು ವಿಧದ ತೀವ್ರ ಹವಾಮಾನ ಅಪಾಯ ಎದುರಿಸುತ್ತಿರುವ 9 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಫಿಲಿಪೀನ್ಸ್, ಜಪಾನ್, ಬಾಂಗ್ಲಾದೇಶ, ಮ್ಯಾನ್ಮಾರ್, ಚೀನಾ, ಇಂಡೋನೇಶಿಯಾ, ವಿಯೆಟ್ನಾಂ ಮತ್ತು ಪಾಕಿಸ್ತಾನ ಸ್ಥಾನ ಪಡೆದಿವೆ.

Sir I want complete notes
ReplyDeleteYa sure, I'll try my best to update complete notes soon.
Delete