"ಮನುಷ್ಯ ದೀಪವಾದರೂ ಆಗಬೇಕು, ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ಕೊಡುತ್ತದೆ ಮತ್ತೊಂದು ಅದನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಬ್ಬರೂ ದೀಪ ಆಗದೇ ಹೋಗಬಹುದು ಆದರೆ ಕನ್ನಡಿ ಆಗಬಲ್ಲರು. ತಿಳಿದಿರುವ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವುದೇ ಜೀವನ.."—ಅರಿಸ್ಟಾಟಲ್

Saturday, 18 July 2020

☀ "ಭಾಗ 2 - ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020 (ಪ್ರಚಲಿತ ಘಟನೆಗಳಾಧಾರಿತ)" ( Multiple choice question paper - 2020 based on daily current events )

☀ "ಭಾಗ 2 - ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ-2020 (ಪ್ರಚಲಿತ ಘಟನೆಗಳಾಧಾರಿತ)"  
( Multiple choice question paper - 2020 based on daily current events )
━━━━━━━━━━━━━━━━━━━━━━━━━━━━━━━━━━━━━━━━
★ ಪ್ರಚಲಿತ ಘಟನೆಗಳ ಬಹುಆಯ್ಕೆಯ ಮಾದರಿ ಪ್ರಶ್ನೆ ಪತ್ರಿಕೆ
(Multiple choice question paper on current affairs)


…ಮುಂದುವರೆದ ಭಾಗ.

•• ಸೂಚನೆಗಳು :-
★ ಇಲ್ಲಿ ತಯಾರಿಸಲಾದ ಸಾಮಾನ್ಯ ಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ 2ಯು 2019-20 ರ  ಪ್ರಚಲಿತ ಹಾಗೂ ಮಹತ್ವದ ಘಟನೆಗಳನ್ನಾಧರಿಸಿ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ದೃಷ್ಟಿಯಿಂದ ತಯಾರಿಸಲಾಗಿದೆ. 
★ ಸ್ಪರ್ಧಾಲೋಕ ಟೆಲೆಗ್ರಾಮ್ ಚಾನೆಲ್‌ (@spardhaloka) ನಲ್ಲಿ ದಿನಂಪ್ರತಿ ಕೇಳಲಾಗುವ ಕ್ವಿಝ್ ಎಲ್ಲವನ್ನೂ  ಇಲ್ಲಿ ಒಂದೆಡೆ ಕ್ರೋಢೀಕರಿಸಿರುವುದು.
★ ಹಿಂದೆ ನಡೆಸಲ್ಪಟ್ಟ ಪ್ರಶ್ನೆ ಪತ್ರಿಕೆಗಳನ್ನು ಗಮನದಲ್ಲಿಡ್ಟುಕೊಂಡು ನನ್ನ ಜ್ಞಾನ ಪರಿಮಿತಿಯಲ್ಲಿ ಈ ಮಾದರಿ ಪ್ರಶ್ನೆ ಪತ್ರಿಕೆ ಭಾಗ 2ನ್ನು ತಯಾರಿಸಲಾಗಿದ್ದು, ಏನಾದರೂ ಪ್ರಮಾದ ಕಂಡುಬಂದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತರಬೇಕೆಂದು ವಿನಂತಿಸಿಕೊಳ್ಳುವೆ.
Gmail. yaseen7ash@Gmail.com


— ನಿಮ್ಮ ಸಲಹೆಗಳು ನನಗೆ ಅತ್ಯಮೂಲ್ಯವಾದವುಗಳು.



•┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈┈•



101. ಇತ್ತೀಚೆಗೆ ಸುದ್ದಿಯಲ್ಲಿದ್ದ "ಬಿಗ್ ಮ್ಯಾಕ್ ಇಂಡೆಕ್ಸ್‌" (Big Mac Index) ಇದನ್ನು ಸೂಚಿಸುತ್ತದೆ.
A) : ಉತ್ಪಾದನೆ ವೆಚ್ಚಕ್ಕೆ ಅನುಗುಣವಾಗಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಹೊಸ ಸೂಚಿ
B) ಅಸಾಮಾನ್ಯ ರೀತಿಯಲ್ಲಿ, ಜಗತ್ತಿನ ಕರೆನ್ಸಿಗಳ " ಕೊಂಡುಕೊಳ್ಳುವ ಶಕ್ತಿಯ ಮೌಲ್ಯ".√
C) ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡುವ ವಿನೂತನ ಯೋಜನೆ.
D) ದೇಶವೊಂದರ ರಫ್ತುವಿನ ಪೈಪೋಟಿ.


102.ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (AePS) ಕುರಿತ ಕೆಳಕಂಡ ಸರಿಯಾದ ಹೇಳಿಕೆಯನ್ನು ಗುರುತಿಸಿ.
1. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿಪಡಿಸಿದೆ.
2. ಇದು ಬ್ಯಾಂಕ್‌ ಅಕೌಂಟ್ ಸಂಖ್ಯೆ ಒದಗಿಸದೇ  ಹಣಕಾಸಿನ ವಹಿವಾಟಿಗೆ ಅನುಕೂಲ ಮಾಡಿಕೊಡುತ್ತದೆ.
A) 1 ಮಾತ್ರ.
B) 2 ಮಾತ್ರ.
C) 1 & 2 ಮಾತ್ರ. √
D) ಯಾವುದೂ ಸರಿಯಿಲ್ಲ.


103.ಇತ್ತೀಚೆಗೆ ಸುದ್ದಿಯಲ್ಲಿದ್ದ 'ದರ್ಬಾರ್ ಮೂವ್' ಎಂಬುವುದು ಇದಕ್ಕೆ ಸಂಬಂಧಿಸಿದೆ,
A) ರಾಜರ ಸ್ವಂತ ವೆಚ್ಚಕ್ಕೆ ಸರಕಾರದ ಬೊಕ್ಕಸದಿಂದ ಕೊಡುವ ಹಣವನ್ನು ಸ್ಥಗಿತಗೊಳಿಸುವುದು.
B) ಜಮ್ಮು ಮತ್ತು ಶ್ರೀನಗರದ ಮಧ್ಯೆ ರಾಜಧಾನಿ ಸ್ಥಳಾಂತರ ಕಾರ್ಯಕ್ರಮ.√
C) ಪಾರ್ಲಿಮೆಂಟಿನ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಪ್ರಧಾನಮಂತ್ರಿ ಕಚೇರಿಗೆ ವರ್ಗಾಯಿಸುವುದು.
D) ಚೆಸ್ ಆಟದಲ್ಲಿ ಚೆಕ್‌ಮೇಟ್‌ನೊಂದಿಗೆ 5 ಚಲನೆಗಳಲ್ಲಿ ಚಲಿಸುವುದು .


104. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವರಿಂದ ಬಿಡುಗಡೆ ಮಾಡಲಾದ “ಟ್ಯಾಕ್ಸಾಲಾಗ್”ಎಂಬುವುದು ಒಂದು…
A. ಮೊಬೈಲ್ ಆ್ಯಪ್.
B. ಸಾಪ್ಟವೇರ್.
C.ಇ-ಜರ್ನಲ್.√‌
D. ಮಾರ್ಕೆಟ್ ಟೂಲ್.


105. ಇತ್ತೀಚೆಗೆ ಸುದ್ದಿಯಲ್ಲಿದ್ದ ಸಿ-ಟ್ಯಾಪ್ (C-TAP) (COVID-19 Technology Access Pool) ಎಂಬ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದವರು...
A) ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) .
B) ವಿಶ್ವ ಆರೋಗ್ಯ ಸಂಸ್ಥೆ (WHO).√
C) ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (CDC).
D) ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ.


106. ಈ ಕೆಳಗಿನ ವಿವಧ ಬಗೆಯ ಪಾವತಿಗಳ ಮೇಲೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.
1- ವೇತನಗಳು
2- ಬ್ಯಾಂಕುಗಳ ಬಡ್ಡಿ ಪಾವತಿ
3- ಕಮಿಷನ್ ಪೇಮೆಂಟ್
4- ಬಾಡಿಗೆ ಪಾವತಿ
5- ಸಮಾಲೋಚನೆ ಶುಲ್ಕಗಳು (Consultation fees)
A) 1 & 2 ಮಾತ್ರ.
B) 1, 2 & 5 ಮಾತ್ರ.
C) 1, 2, 3 & 4 ಮಾತ್ರ.
D) 1, 2, 3, 4 & 5 ಮಾತ್ರ.√


107. ಅನಿವಾಸಿ ಭಾರತೀಯ ಎಂದು ಕರೆಸಿಕೊಳ್ಳಬೇಕಾದರೆ ಭಾರತೀಯರು ಒಂದು ವರ್ಷದಲ್ಲಿ...
1. 182 ಮತ್ತು ಅದಕ್ಕಿಂತ ಹೆಚ್ಚು ದಿನ ವಿದೇಶದಲ್ಲಿ ಇರಬೇಕು.
2. 120 ದಿನ ಮತ್ತು ಅದಕ್ಕಿಂತ ಹೆಚ್ಚು ಅವಧಿಗೆ ಭಾರತದಲ್ಲಿ ಇದ್ದಲ್ಲಿ ಅನಿವಾಸಿ ಎಂದು ಗುರುತಿಸಿಕೊಳ್ಳಲು ಸಾಧ್ಯವಿಲ್ಲ.
A) 1 ಮಾತ್ರ.
B) 2 ಮಾತ್ರ.√
C) 1 & 2 ಮಾತ್ರ.
D) ಯಾವುದೂ ಸರಿಯಿಲ್ಲ.

(240 ಮತ್ತು ಅದಕ್ಕಿಂತ ಹೆಚ್ಚು ದಿನ ವಿದೇಶದಲ್ಲಿ ಇರಬೇಕು. ಈ ಹಿಂದೆ 182 ದಿನಗಳು ಇದ್ದಲ್ಲಿ ಅನಿವಾಸಿ ಎನ್ನಲಾಗುತ್ತಿತ್ತು.)


108.ಜೀವಕೋಶದ ಕಣದಂಗಗಳಲ್ಲೊಂದಾದ ಪ್ಲಾಸ್ಟಿಡ್‍ಗಳ ಕುರಿತಾದ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಪ್ಲಾಸ್ಟಿಡ್‍ಗಳು (Plastids) ಸಸ್ಯಜೀವಕೋಶದಲ್ಲಿ ಮಾತ್ರ ಕಂಡುಬರುತ್ತವೆ
2.ಮೈಟೋಕಾಂಡ್ರಿಯಾದಂತೇ ಪ್ಲಾಸ್ಟಿಡ್‍ಗಳೂ ಕೂಡಾ ತಮ್ಮದೇ ಆದ DNA ಮತ್ತು ರೈಬೋಸೋಮ್‍ಗಳನ್ನು ಹೊಂದಿವೆ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.


109.ಇತ್ತೀಚೆಗೆ ಸುದ್ದಿಯಲ್ಲಿದ್ದ 'ಪೈಕಾ ದಂಗೆ' ಇವರ ವಿರುದ್ಧ ನಡೆಸಿದ ಹೋರಾಟವಾಗಿತ್ತು.
A) ಫ್ರೆಂಚರು.
B) ಪೋರ್ಚುಗೀಸರು.
C) ಬ್ರಿಟಿಷರು √
D) ಮಂಗೋಲರು.


110. 'ಒಂದು ರಾಷ್ಟ್ರ, ಎರಡು ವ್ಯವಸ್ಥೆ' ಎಂಬ ಪಾಲಿಸಿ ಇತ್ತೀಚೆಗೆ ಸುದ್ದಿಯಲ್ಲಿದ್ದು, ಈ ದೇಶಕ್ಕೆ ಸಂಬಂಧಿಸಿದೆ.
A) ಜಪಾನ್.
B) ಇಸ್ರೇಲ್.
C) ಚೀನಾ.√
D) ರಷ್ಯಾ.


111. ಇತ್ತೀಚೆಗೆ ಕೇಂದ್ರ ಸರ್ಕಾರದಿಂದ ಸ್ಥಾಪಿಸಲು ಉದ್ದೇಶಿಸಲಾದ 'KABIL' ಎಂಬ ಜಂಟಿ ಸಹಭಾಗಿತ್ವದ (joint venture) ಕಂಪನಿಯ ಉದ್ದೇಶವೇನೆಂದರೆ,
A) MSME ಗಳ ಬಲ ಸಂವರ್ಧನೆ.
B) ಯುವಜನತೆಯಲ್ಲಿ ಕೌಶಲ್ಯಾಭಿವೃದ್ಧಿ.
C) ಖನಿಜಗಳ ಸ್ಥಿರ ಪೂರೈಕೆ & ಸುರಕ್ಷತೆ.√
D) ಮಹಿಳಾ ಸಬಲೀಕರಣ.

112.ಹಂಗಾಮಿ ಸ್ಪೀಕರ್ ಕಾರ್ಯ-ಅಧಿಕಾರಗಳ ಕುರಿತ ಸರಿಯಾದ ಹೇಳಿಕೆಯನ್ನು ಗುರುತಿಸಿ.
1.ಹಂಗಾಮಿ ಸ್ಪೀಕರ್ ಅವರು ಲೋಕಸಭೆ/ವಿಧಾನಸಭೆಯ ಸ್ಪೀಕರ್ ಆಯ್ಕೆ ಪ್ರಕ್ರಿಯೆಯ ಅಧ್ಯಕ್ಷತೆಯನ್ನು ವಹಿಸುತ್ತಾರೆ.
2.ಯಾರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯಪಾಲರಿಗೆ ಸೂಚಿಸಲು ಸಾಧ್ಯವಿಲ್ಲ. ಅದು ರಾಜ್ಯಪಾಲರ ವಿವೇಚನೆಗೆ ಬಿಟ್ಟ ವಿಚಾರ.
A) 1 ಮಾತ್ರ ಸರಿ.
B) 2 ಮಾತ್ರ ಸರಿ.
C) ಎರಡೂ ಸರಿ. √
D) ಎರಡೂ ತಪ್ಪು.

113.ಏಷ್ಯಾದಲ್ಲಿಯೇ ಅತ್ಯುತ್ತಮ ಬೀಚ್‌ ಎಂದು ಹೆಸರಾಗಿರುವ ಹ್ಯಾವ್ಲಾಕ್‌ ದ್ವೀಪ ಬೀಚ್ ಇರುವುದು
A) ಮಡಗಾಸ್ಕರ್.
B) ಮ್ಯಾನ್ಮಾರ್.
C) ಅಂಡಮಾನ್ ನಿಕೋಬಾರ್.√
D) ಮಾಲ್ಡವೀಸ್.

114. 'ತಿವಾ-ಲಲುಂಗ್ ಬುಡಕಟ್ಟು ಜನಾಂಗ' ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A) ಪ.ಬಂಗಾಳ.
B) ಜಾರ್ಖಂಡ್.
C) ಆಸ್ಸಾಂ.√
D) ಸಿಕ್ಕಿಂ.


115. ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಸಂಬಂಧಿಸಿದಂತೆ, ಪದ 'ಪಂಚಾಯತನ್' (Panchayatan ) ಎಂಬುದು ಏನನ್ನು ಸೂಚಿಸುತ್ತದೆ?
A. ಗ್ರಾಮದ ಹಿರಿಯರ ಸಭೆಯನ್ನು
B. ಒಂದು ಧಾರ್ಮಿಕ ಪಂಥವನ್ನು
C. ದೇವಾಲಯದ ನಿರ್ಮಾಣ ಶೈಲಿಯನ್ನು √
D. ಆಡಳಿತಾತ್ಮಕ ಕಾರ್ಯನಿರ್ವಾಹಕತೆಯನ್ನು


116.ಕೆಳಗಿನ ಹೇಳಿಕೆಗಳಲ್ಲಿ ಸರಿಯಾದವುಗಳನ್ನು ಗುರುತಿಸಿ.
1. ತಾಬೊ ಆಶ್ರಮ / ದೇವಾಲಯ ಸಂಕೀರ್ಣ —— ಸ್ಪಿತಿ ಕಣಿವೆ
2. ಲೊತ್ಸಾಬಾ ಲಾ-ಖಾಂಗ್ ದೇವಸ್ಥಾನ —— ಜಂಸ್ಕಾರ್ ಕಣಿವೆ
3. ಅಲ್ಚಿ ಗೊಂಪಾ ದೇವಾಲಯ —— ಲಡಾಖ್ ಕಣಿವೆ.
A. 1 ಮಾತ್ರ
B. 2 ಮತ್ತು 3
C. 1 ಮತ್ತು 3√
D. 1, 2 ಮತ್ತು 3

(ದಂಕರ್‌ ಆಶ್ರಮ ದೇವಸ್ಥಾನ ಸಂಕೀರ್ಣ — ಸ್ಪಿತಿ ವ್ಯಾಲಿ)
ಲೊತ್ಸಾಬಾ ಲಾ-ಖಾಂಗ್ ದೇವಸ್ಥಾನ - ಲಡಾಖ್ ವ್ಯಾಲಿ)!


117.ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ
1. ದಂಪಾ (Dampa) ಹುಲಿ ಮೀಸಲು ಧಾಮ--ಮಿಜೋರಾಂ
2. ಗುಮ್ತಿ (Gumti) ವನ್ಯಜೀವಿ ಅಭಯಾರಣ್ಯ:---- ಸಿಕ್ಕಿಂ
3. ಸರಮತಿ (Saramati ) ಶಿಖರ ----ನಾಗಾಲ್ಯಾಂಡ್
ಮೇಲಿನ ಯಾವ ಜೋಡಿ ಸರಿಯಾಗಿವೆ ?
A. 1 ಮಾತ್ರ
B. 2 ಮತ್ತು 3
C. 1 ಮತ್ತು 3√
D. 1 , 2 ಮತ್ತು 3


118.1905 ರಲ್ಲಿ ಲಾರ್ಡ್ ಕರ್ಜನ್ ಮಾಡಿದ ಬಂಗಾಳದ ವಿಭಜನೆ ಕೊನೆಗೊಂಡಿದ್ದು,
A. ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಬ್ರಿಟೀಷರಿಗೆ ಭಾರತೀಯ ಪಡೆಗಳ ಅವಶ್ಯಕವಿದೆ
ಎಂದಾಗ ಕೊನೆಗೊಂಡಿತು
B. ಕಿಂಗ್ ಜಾರ್ಜ್ V ದೆಹಲಿಯ ರಾಯಲ್ ದರ್ಬಾರ್‌ನಲ್ಲಿ ಕರ್ಜನ್ ನ ಆಕ್ಟ್ ವಜಾ ಮಾಡುವವರೆಗೆ √
C. ಗಾಂಧೀಜಿ ಅವರ ನಾಗರಿಕ ಅಸಹಕಾರ ಚಳುವಳಿಯನ್ನು ಆರಂಭಿಸುವ ವರೆಗೆ
D. ಭಾರತದ ವಿಭಜನೆಯಾಗಿ ಬೆಂಗಾಲ್ ಪೂರ್ವ ಪಾಕಿಸ್ತಾನ ಎಂದು ಕರೆಸಿಕೊಳ್ಳುವವರೆಗೆ


119.ದ್ಯುತಿಸಂಶ್ಲೇಷಣೆಯ ಪ್ರಕ್ರಿಯೆಗೆ ಅಗತ್ಯವಾದ ಸೂರ್ಯನ ಶಕ್ತಿಯನ್ನು ಸೆರೆಹಿಡಿಯಲು ಕ್ಲೋರೊಫಿಲ್‌ಗೆ  ಈ ಕೆಳಗಿನ ಯಾವ ಅಂಶಗಳು ಅತ್ಯವಶ್ಯಕ?
ಎ. ಕಾರ್ಬನ್
ಬಿ. ಮೆಗ್ನೀಸಿಯಮ್ √
ಸಿ. ಸಾರಜನಕ
ಡಿ. ಜಲಜನಕ


120. 'ಖುದೈ ಖಿದ್ಮತ್‌ಗಾರ್ ಚಳವಳಿ' (Khudai  Khidmatgar  Movement) ಯ ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ:
1. ಇದು ಆರಂಭದಲ್ಲಿ ಸಾಮಾಜಿಕ ಸುಧಾರಣಾ ಸಂಘಟನೆಯಾಗಿದ್ದು, ಅದು 'ಕೆಂಪಂಗಿ ಚಳವಳಿ'ಯಾಗಿ ರೂಪಾಂತರಗೊಳ್ಳುವ ಮೊದಲು ಶಿಕ್ಷಣ ಸುಧಾರಣೆ  ಮತ್ತು ದ್ವೇಷ ರಕ್ತದಾಹವನ್ನು ಕೊನೆಗೊಳಿಸುವಲ್ಲಿ ನಿರತವಾಗಿತ್ತು.
2.ಈ ಚಳುವಳಿಯು ಭಾರತದ ವಿಭಜನೆಯನ್ನು ಬೆಂಬಲಿಸಿತು ಮತ್ತು ಸ್ವತಂತ್ರ ಪಾಕಿಸ್ತಾನ ರಾಷ್ಟ್ರ  ರಚನೆಯ ಪರವಾಗಿತ್ತು.
— ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ. 1 ಮಾತ್ರ √
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಇವೆರಡೂ ಸರಿಯಾಗಿಲ್ಲ.
(ಈ ಚಳುವಳಿಯು ಸ್ವತಂತ್ರ ರಾಷ್ಟ್ರವಾದ ಪಾಕಿಸ್ತಾನದ ರಚನೆಯ ವಿರುದ್ಧವಾಗಿತ್ತು ಕಾರಣ 1947 ರಲ್ಲಿ ಭಾರತದ ವಿಭಜನೆಯನ್ನು ವಿರೋಧಿಸಿದರು.)

No comments:

Post a Comment